Tag: court

  • ನಕಲಿ ನೋಟು ಚಲಾವಣೆ – ಬಿಜೆಪಿ ಮಾಜಿ ಶಾಸಕನ 2ನೇ ಪತ್ನಿಗೆ 4 ವರ್ಷ ಜೈಲು ಶಿಕ್ಷೆ

    ನಕಲಿ ನೋಟು ಚಲಾವಣೆ – ಬಿಜೆಪಿ ಮಾಜಿ ಶಾಸಕನ 2ನೇ ಪತ್ನಿಗೆ 4 ವರ್ಷ ಜೈಲು ಶಿಕ್ಷೆ

    ರಾಂಚಿ: ನಕಲಿ ನೋಟು ಚಲಾವಣೆ ಮಾಡಿದ್ದಕ್ಕೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಬಿಜೆಪಿ ಮಾಜಿ ಶಾಸಕ ಪುಟ್ಕರ್ ಹೆಂಬ್ರೋಮ್ ಅವರ ಪತ್ನಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

    ಬಿಜೆಪಿ ಮಾಜಿ ಶಾಸಕನ ಪತ್ನಿ ಮಲಯಾ ಹೆಂಬ್ರೋಮ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸೂರ್ಯಭೂಷಣ್ ಓಜಾ ಅವರು ಬುಧವಾರ ಮಲಯಾ ಹೆಂಬ್ರೋಮ್‌ಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ

    ನ್ಯಾಯಾಲಯ ಆಕೆಗೆ 5,000 ದಂಡವನ್ನೂ ವಿಧಿಸಿದೆ. ಜೈಲು ಶಿಕ್ಷೆಗೆ ಒಳಗಾಗಿರುವ ಮಲಯಾ ಅವರು ಚೈಬಾಸಾ ಕ್ಷೇತ್ರದ ಮಾಜಿ ಶಾಸಕನ ಎರಡನೇ ಪತ್ನಿ. ಮಟ್ಕಮ್ಹತು ಗ್ರಾಮದ ನಿವಾಸಿ ಜಯಂತಿ ದೇವಗಂ ಎಂಬವರು 2020ರ ಸೆಪ್ಟೆಂಬರ್‌ನಲ್ಲಿ ಮಲಯಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಮಲಯಾ ನಮ್ಮ ಅಂಗಡಿಯಿಂದ 1,600 ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿ 2,000 ರೂ. ಮುಖಬೆಲೆಯ ನೋಟು ನೀಡಿದ್ದರು. ಆ ನೋಟಿನೊಂದಿಗೆ ಠೇವಣಿ ಇಡಲು ಎಸ್‌ಬಿಐಗೆ ಹೋಗಿದ್ದೆ. ಆದರೆ ಬ್ಯಾಂಕ್‌ನಲ್ಲಿ ಆ ನೋಟನ್ನು ಸ್ವೀಕರಿಸಲಿಲ್ಲ ಎಂದು ಜಯಂತಿ ತಮ್ಮ ದೂರಿನಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ಮಧ್ಯರಾತ್ರಿ, ಮದ್ಯ ಸೇವಿಸಿದ ಅಮಲಿನಲ್ಲಿ ಕಾಂಗ್ರೆಸ್ ಐಟಿ ಸೆಲ್ ಟ್ವೀಟ್ ಮಾಡಿದೆ: ರೇಣುಕಾಚಾರ್ಯ

    ಮರುದಿನ ಅದೇ ನೋಟನ್ನು ಸ್ಥಳೀಯ ಅಂಗಡಿಗೆ ನೀಡಿದಾಗ ಅಲ್ಲಿಯೂ ಸ್ವೀಕರಿಸಲಿಲ್ಲ. ನೋಟು ಸಮೇತ ಮಲಯಾ ಅವರ ಬಳಿ ಹೋದಾಗ ನನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಘಟನೆ ನಡೆದಾಗ ಆ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಪೊಲೀಸ್ ತಂಡವು ನಕಲಿ ನೋಟು ಸಹಿತ ಮಲಯಾ ಅವರನ್ನು ಬಂಧಿಸಿದೆ. ದೆಹಲಿಯಿಂದ 500 ರೂ.ಗೆ ನಕಲಿ ನೋಟು ಖರೀದಿಸಿ ಇಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದೆ ಎಂದು ಮಲಯಾ, ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಗೆ ರಾಖಿ ಕಟ್ಟಿದ ಮಕ್ಕಳು

    Live Tv
    [brid partner=56869869 player=32851 video=960834 autoplay=true]

  • ಕಿಟಕಿಯಿಲ್ಲದ, ಉಸಿರಾಡಲು ಕಷ್ಟಕರವಾದ ಕೋಣೆಯಲ್ಲಿ ಇರಿಸಿದ್ದಾರೆ: ED ವಿರುದ್ಧ ಕೋರ್ಟ್‌ಗೆ ರಾವತ್‌ ದೂರು

    ಕಿಟಕಿಯಿಲ್ಲದ, ಉಸಿರಾಡಲು ಕಷ್ಟಕರವಾದ ಕೋಣೆಯಲ್ಲಿ ಇರಿಸಿದ್ದಾರೆ: ED ವಿರುದ್ಧ ಕೋರ್ಟ್‌ಗೆ ರಾವತ್‌ ದೂರು

    ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನನ್ನನ್ನು ಕಿಟಕಿಯಿಲ್ಲದ, ಉಸಿರಾಡಲು ಕಷ್ಟಕರವಾದ ಕೋಣೆಯೊಳಗೆ ಇರಿಸಿದೆ ಎಂದು ಶಿವಸೇನಾ ನಾಯಕ ಹಾಗೂ ಸಂಸದ ಸಂಜಯ್‌ ರಾವತ್‌, ನ್ಯಾಯಾಲಯದ ಮುಂದೆ ದೂರು ನೀಡಿದ್ದಾರೆ.

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಗೆ ಸಂಬಂಧಿಸಿದ ವಿಷಯಗಳ ವಿಚಾರಣೆಗೆ ನಿಯೋಜಿತವಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ ಅವರಿಗೆ ರಾವತ್ ಗುರುವಾರ ಇ.ಡಿ ಬಗ್ಗೆ ಆರೋಪ ಮಾಡಿದರು. ನ್ಯಾಯಾಲಯವು ರಾವತ್ ಅವರ ಇ.ಡಿ ಕಸ್ಟಡಿಯನ್ನು ಆಗಸ್ಟ್ 8 ರವರೆಗೆ ವಿಸ್ತರಿಸಿದೆ. ಇದನ್ನೂ ಓದಿ: ಭೂ ಹಗರಣ ಪ್ರಕರಣ – ಸಂಜಯ್ ರಾವತ್ ಪತ್ನಿಗೆ ಇಡಿ ಸಮನ್ಸ್

    ವಿಚಾರಣೆಯ ಸಂದರ್ಭದಲ್ಲಿ, ಇಡಿ ವಿರುದ್ಧ ಯಾವುದೇ ದೂರು ಇದೆಯೇ ಎಂದು ನ್ಯಾಯಾಲಯವು ರಾವತ್ ಅವರನ್ನು ಕೇಳಿತು. ನಿರ್ದಿಷ್ಟವಾಗಿ ಏನೂ ಇಲ್ಲ ಎಂದು ಅವರು ಹೇಳಿದರು. ಆದರೆ ಕಿಟಕಿಯಿಲ್ಲದ, ಸರಿಯಾಗಿ ಗಾಳಿಯಾಡದ ಕೋಣೆಯಲ್ಲಿ ಇರಿಸಿದ್ದಾರೆ ಎಂದು ದೂರಿದ್ದಾರೆ. ನಂತರ ಈ ದೂರಿನ ಬಗ್ಗೆ ನ್ಯಾಯಾಲಯವು ತನಿಖಾ ಸಂಸ್ಥೆಯಿಂದ ವಿವರಣೆ ಕೇಳಿತು.

    ಇಡಿ ಪರವಾಗಿ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆನೆಗಾವ್ಕರ್, ರಾವತ್ ಅವರನ್ನು ಎಸಿ ಕೋಣೆಯಲ್ಲಿ ಇರಿಸಲಾಗಿತ್ತು. ಅದರಲ್ಲಿ ಕಿಟಕಿ ಇರಲಿಲ್ಲ. ಅಲ್ಲಿ ಎಸಿ ವ್ಯವಸ್ಥೆ ಇದ್ದರೂ, ರಾವತ್‌ ಅವರ ಆರೋಗ್ಯದ ದೃಷ್ಟಿಯಿಂದ ಅದನ್ನು ಬಳಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಸೂಕ್ತ ಗಾಳಿ ವ್ಯವಸ್ಥೆ ಇರುವ ಕೊಠಡಿಯಲ್ಲೇ ಅವರನ್ನು ಇರಿಸಲಾಗುವುದು ಎಂದು ಇ.ಡಿ ನ್ಯಾಯಾಲಯಕ್ಕೆ ಭರವಸೆ ನೀಡಿತು. ಇದನ್ನೂ ಓದಿ: ನರೇಂದ್ರ ಮೋದಿ ಏನು ಮಾಡಿದರೂ ನಾವು ಹೆದರುವುದಿಲ್ಲ: ರಾಹುಲ್ ಗಾಂಧಿ

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್‌ ರಾವತ್‌ ಅವರನ್ನು ಭಾನುವಾರ ಇ.ಡಿ ಬಂಧಿಸಿತ್ತು. ಸೋಮವಾರ ನ್ಯಾಯಾಲಯವು ರಾವತ್‌ ಅವರನ್ನು ಆಗಸ್ಟ್ 4 ರವರೆಗೆ ಇ.ಡಿ ಕಸ್ಟಡಿಗೆ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಪತ್ರಕರ್ತ ಸಿದ್ದಿಕ್ ಕಪ್ಪನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

    ಪತ್ರಕರ್ತ ಸಿದ್ದಿಕ್ ಕಪ್ಪನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

    ಅಲಹಾಬಾದ್: ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ. ಮೆರಿಟ್ ಗಳ ಆಧಾರದ ಮೇಲೆ ಜಾಮೀನು ತಿರಸ್ಕರಿಸಲಾಗಿದೆ ಎಂದು ಅಲಹಾಬಾದ್ ಕೋರ್ಟ್ ಹೇಳಿದೆ.

    ಜಾಮೀನು ತಿರಸ್ಕರಿಸಿದ ಕೆಳ ಹಂತದ ನ್ಯಾಯಾಲಯದ ಆದೇಶ ವಿರುದ್ಧ ಸಿದ್ದಿಕ್ ಕಪ್ಪನ್ ಹೈಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಕ್ರಿಶನ್ ಪಹಲ್ ಜಾಮೀನು ಅರ್ಜಿ ವಜಾ ಮಾಡಿದ್ದಾರೆ.

    ಸಿದ್ದಿಕ್ ಕಪ್ಪನ್, ಮಲಯಾಳಂ ಸುದ್ದಿ ಪೊರ್ಟಲ್‍ನ ವರದಿಗಾರರಾಗಿದ್ದರು. 2020 ಅಕ್ಟೋಬರ್ ನಲ್ಲಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ಅವರು ಹತ್ರಾಸ್ ಗೆ ತೆರಳುತ್ತಿದ್ದರು. ಸಿದ್ದಿಕ್ ಸೇರಿದಂತೆ ಮೂವರನ್ನು ಹಾದಿ ಮಧ್ಯದಲ್ಲೆ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    ಬಂಧಿತ ಪತ್ರಕರ್ತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಸೆಕ್ಷನ್ 124 ಎ (ದೇಶದ್ರೋಹ), ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಸೆಕ್ಷನ್ 17 ಮತ್ತು 18 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಯಿತು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 65, 72 ಮತ್ತು 75 ರ ಧಾರ್ಮಿಕ ಭಾವನೆಗಳ ಕದಡುವ ಹುನ್ನಾರವನ್ನು ಸೇರಿಸಲಾಗಿದೆ.

    ಕಪ್ಪನ್ ಮತ್ತು ಇತರ ಸಹ-ಆರೋಪಿಗಳು ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ವರದಿ ಮಾಡಲು ಹೊರಟಾಗ ಕಾನೂನನ್ನು ಮತ್ತು ಇತರ ಪರಿಸ್ಥಿತಿಯನ್ನು ಭಂಗಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಮಥುರಾ ನ್ಯಾಯಾಲಯವು ಜುಲೈ 2021 ರಲ್ಲಿ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • `ವಿಕ್ರಾಂತ್ ರೋಣ’ ಸಿನಿಮಾ ವೇಳೆ ಮಚ್ಚಿನಿಂದ ಕೊಚ್ಚಿ ಹೋಗಿದ್ದವರ ಬಂಧನ

    `ವಿಕ್ರಾಂತ್ ರೋಣ’ ಸಿನಿಮಾ ವೇಳೆ ಮಚ್ಚಿನಿಂದ ಕೊಚ್ಚಿ ಹೋಗಿದ್ದವರ ಬಂಧನ

    ಚಿಕ್ಕಮಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆ ವೇಳೆ ನಗರದ ಮಿಲನ ಚಿತ್ರಮಂದಿರದಲ್ಲಿ ಹಾಡಹಗಲೇ ಲಾಂಗು, ಮಚ್ಚುಗಳಿಂದ ನಡೆದಿದ್ದ ಯುವಕರ ಹೊಡೆದಾಟ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಘಟನೆಗೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ನಾಲ್ಕೇ ದಿನಗಳಲ್ಲಿ 6 ಆರೋಪಿಗಳನ್ನ ಬಂಧಿಸಿರೋ ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನ 11 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಬರ್ತ್ ಡೇ ಆಚರಣೆ – ಸರಿಯಾಗಿ 12 ಗಂಟೆಗೆ ಕೇಕ್ ಕಟ್

    ಜುಲೈ 28 ರಂದು ನಗರದ ಮಿಲನ ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆ ವೇಳೆ 2 ಗುಂಪುಗಳ ನಡುವೆ ಮಾರಾಮಾರಿ ನಡೆದು ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಘಟನೆ?
    ಸಿನಿಮಾ ವೀಕ್ಷಣೆ ವೇಳೆ ಯುವಕನೋರ್ವ ಪದೇ-ಪದೇ ಹೊರಗೆ ಹೋಗಿ ಬರುತ್ತಿದ್ದನು. ಇದೇ ವಿಷಯವಾಗಿ ಚಿತ್ರ ಮಂದಿರದ ಒಳಗೆ ಎರಡು ಗುಂಪುಗಳ ಮಧ್ಯೆ ಸಣ್ಣ ಗಲಾಟೆಯಾಗಿತ್ತು. ಹೊರಗೆ ಬಂದವರು ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಕಾರಿನಲ್ಲಿಟ್ಟಿದ್ದ ಮಚ್ಚು, ಲಾಂಗು, ಡ್ರಾಗರ್‌ಗಳಿಂದ ಹೊಡೆದಾಡಿದ್ದರು. ಗಲಾಟೆಯಲ್ಲಿ ಭರತ್ ಹಾಗೂ ಜೀವನ್ ಎಂಬ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಇಬ್ಬರಿಗೂ ಹಾಸನದಲ್ಲಿ ಚಿಕಿತ್ಸೆ ಮುಂದುವರಿದಿದೆ. ಬಂಧಿತ ಆರೋಪಿಗಳು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ತಲೆಮರೆಸಿಕೊಂಡಿದ್ದರು. ಇದನ್ನೂ ಓದಿ: ತಿರುಪತಿಗೆ ಒಂದೇ ತಿಂಗಳಲ್ಲಿ 140 ಕೋಟಿ ದಾಖಲೆ ಕಾಣಿಕೆ ಸಂಗ್ರಹ

    ಆರೋಪಿಗಳ ಪತ್ತೆಗಾಗಿ ಚಿಕ್ಕಮಗಳೂರು ಡಿವೈಎಸ್‌ಪಿ ಪುರುಷೋತ್ತಮ್ ನೇತೃತ್ವದಲ್ಲಿ 4 ತನಿಖಾ ತಂಡಗಳನ್ನು ರಚಿಸಿದ್ದರು. 8 ಜನರಲ್ಲಿ 6 ಮಂದಿ ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದರು. ಇನ್ನಿಬ್ಬರು ಪರೋಕ್ಷವಾಗಿ ಸಹಕಾರ ನೀಡಿದ ಆರೋಪಿಗಳಾಗಿದ್ದಾರೆ. ಪ್ರಕರಣ ಸಂಬಂಧ ಇನ್ನೂ ಮೂರ್ನಾಲ್ಕು ಜನ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಅವರನ್ನೂ ಬಂಧಿಸುವುದಾಗಿ ಎಸ್‌ಪಿ ಅಕ್ಷಯ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಪಿಐಗಳಾದ ಗುರುಪ್ರಸಾದ್, ಜಯರಾಮ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಸಹಕಾರ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ED ವಿಚಾರಣೆ – ಆಗಸ್ಟ್ 2ಕ್ಕೆ ಡಿಕೆಶಿ ಜಾಮೀನು ಭವಿಷ್ಯ

    ED ವಿಚಾರಣೆ – ಆಗಸ್ಟ್ 2ಕ್ಕೆ ಡಿಕೆಶಿ ಜಾಮೀನು ಭವಿಷ್ಯ

    ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಇತರೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ಇಡಿ ವಿಶೇಷ ನ್ಯಾಯಾಲಯ ಆಗಸ್ಟ್ 2ಕ್ಕೆ ಆದೇಶವನ್ನು ಕಾಯ್ದಿರಿಸಿದೆ.

    ಪ್ರಕರಣದ ತನಿಖೆ ನಡೆಸಿದ್ದ ಇ.ಡಿ ನ್ಯಾಯಾಲಯಕ್ಕೆ ಜಾರ್ಜ್‌ಶೀಟ್‌ ಸಲ್ಲಿಸಿತ್ತು. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್ ತಮ್ಮ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿಗಣಿಸಲು ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ವಿಕಾಸ್ ದುಲ್ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಜಾಮೀನು ನೀಡದಂತೆ ಇಡಿ ಪರ ವಕೀಲರು ಮನವಿ ಮಾಡಿದ್ದರು. ಇದಕ್ಕೆ ಪ್ರತಿವಾದ ಮಂಡಿಸಿದ ಡಿ.ಕೆ.ಶಿವಕುಮಾರ್ ಪರ ವಕೀಲರು, ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿಗಣಿಸುವಂತೆ ಎಂದು ಕೋರಿದ್ದರು. ಇದನ್ನೂ ಓದಿ: ಧರ್ಮ, ಸಿದ್ಧಾಂತದ ಹೆಸರಿನಲ್ಲಿ ಕೆಲವರು ಸಂಘರ್ಷ ಸೃಷ್ಟಿಸುತ್ತಿದ್ದಾರೆ: ಅಜಿತ್ ದೋವಲ್ 

    ಇತರೆ ನಾಲ್ಕು ಆರೋಪಿಗಳ ಪರ ವಾದ ಮಂಡಿಸಿದ ವಕೀಲರು ಇ.ಡಿ ಜಾಮೀನು ನೀಡಲು ವಿರೋಧಿಸುವುದಕ್ಕೆ ಅರ್ಥವಿಲ್ಲ. ಯಾವ ಆಧಾರದಲ್ಲಿ ಇಡಿ ಜಾಮೀನು ವಿರೋಧಿಸುತ್ತಿದೆಯೋ ಗೊತ್ತಿಲ್ಲ. ಎಲ್ಲ ಅಂಶಗಳು ಮೇಲ್ಮಟ್ಟದ ನ್ಯಾಯಾಲಯಗಳಲ್ಲಿ ಚರ್ಚೆಯಾಗಿದೆ. ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದ ಉದಾಹರಣೆಗಳು ಇವೆ. ಇ.ಡಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಇನ್ನು ಆರೋಪಿಗಳನ್ನ ಬಂಧಿಸುವ ಅಗತ್ಯವೇ ಬರುವುದಿಲ್ಲ. ಇ.ಡಿ ತನಿಖೆಯ ವೇಳೆ ಆರೋಪಿಗಳನ್ನು ಬಂಧಿಸಿಲ್ಲ. ಹೀಗಾಗಿ ಜಾರ್ಜ್ಶೀಟ್ ಸಲ್ಲಿಕೆ ಬಳಿಕ ಜಾಮೀನು ಪಡೆಯಲು ವಿರೋಧಿಸುವಂತಿಲ್ಲ ಎಂದು ಹೇಳಿದ್ದರು. ವಾದ-ಪ್ರತಿವಾದ ಆಲಿಸಿದ ಬಳಿಕ ಅಗಸ್ಟ್ 2, ಮಧ್ಯಾಹ್ನ ಮೂರು ಗಂಟೆಗೆ ಆದೇಶ ಕಾಯ್ದಿರಿಸಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸದಿದ್ದರೆ ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತದೆ – CJI

    ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸದಿದ್ದರೆ ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತದೆ – CJI

    ನವದೆಹಲಿ: ನ್ಯಾಯಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ನ್ಯಾಯಾಧೀಶರು ಚರ್ಚಿಸಿ ಪರಿಹರಿಸದಿದ್ದರೆ, ನ್ಯಾಯಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಎಚ್ಚರಿಸಿದ್ದಾರೆ.

    ನವದೆಹಲಿಯ ವಿಜ್ಞಾನ ಭವನದಲ್ಲಿಂದು ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಅಧಿಕಾರಿಗಳ ಸಭೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್: 4 ಚಿನ್ನದ ಪದಕ ಗೆದ್ದ ಅಜಿತ್ ಕುಮಾರ್

    ನ್ಯಾಯಾಂಗ ತನ್ನ ಕಾರ್ಯಚಟುವಟಿಕೆಗೆ ಅಡ್ಡಿಯಾಗುವ ಸಮಸ್ಯೆಗಳನ್ನು ಮರೆಮಾಚದೆ, ಮುಚ್ಚಿಡದೇ ಚರ್ಚಿಸಬೇಕು. ಇದರಿಂದ ಜನರಿಗೆ ಉತ್ತಮ ಸೇವೆ ಒದಗಿಸಬಹುದು ಎಂದು ಸಿಜೆಐ ರಮಣ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಲಂಕಾ ಅಧ್ಯಕ್ಷರ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ

    ಜನರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶ ನಮಗಿದ್ದರೆ, ನಮ್ಮ ಕಾರ್ಯಚಟುವಟಿಕೆಗೆ ಅಡ್ಡಿಯಾಗುವ ಸಮಸ್ಯೆಗಳನ್ನೂ ನಾವು ಎತ್ತಿ ತೋರಿಸಬೇಕು. ಸಮಸ್ಯೆಗಳನ್ನು ಮರೆಮಾಚುವುದರಲ್ಲಿ ಅಥವಾ ಬಚ್ಚಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಈ ಸಮಸ್ಯೆ ಚರ್ಚಿಸದಿದ್ದರೆ, ಬಿಕ್ಕಟ್ಟುಗಳನ್ನು ಪರಿಹರಿಸದಿದ್ದರೆ, ಆಗ ನ್ಯಾಯಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ನಮ್ಮ ಸಾಂವಿಧಾನಿಕ ಆಶಯವಾದ ಸಾಮಾಜಿಕ ನ್ಯಾಯವನ್ನು ಪೂರೈಸಲು ಸಾಧ್ಯವಾಗದಿರಬಹುದು ಎಂದು ನನಗೆ ಭಯವಾಗುತ್ತಿದೆ. ಹಾಗಾಗಿ ನಾನು ಚರ್ಚಿಸಿ(ಡಿಸ್ಕಸ್), ಸಂವಾದಿಸಿ (ಡಿಬೇಟ್) ನಂತರ ನಿರ್ಧರಿಸಿ (ಡಿಸೈಡ್) ಎಂದು ಹೇಳುತ್ತೇನೆ. ನಾನೂ ಇದೇ ತತ್ವವನ್ನು ಅನುಸರಿಸುತ್ತಿದ್ದೇನೆ ಎಂದು ಅವರು ವಿವರಿಸಿದ್ದಾರೆ.

    ಜಿಲ್ಲಾ ನ್ಯಾಯಾಧೀಶರು ಬಹುಮುಖಿ ಪಾತ್ರ ನಿರ್ವಹಿಸಬೇಕು. ಜನರ ಮತ್ತು ಸಾಮಾಜಿಕ ಸಮಸ್ಯೆ ಅರ್ಥ ಮಾಡಿಕೊಳ್ಳುವ ಉತ್ತಮ ಹುದ್ದೆಯಲ್ಲಿ ನೀವು (ಜಿಲ್ಲಾ ನ್ಯಾಯಾಧೀಶರು) ಇದ್ದೀರಿ. ಭಾರತದಲ್ಲಿ ಕಾನೂನು ನೆರವು ಆಂದೋಲನಕ್ಕೆ ಜಿಲ್ಲಾ ನ್ಯಾಯಾಂಗವೇ ಪ್ರೇರಕ ಶಕ್ತಿ. ಜಿಲ್ಲಾ ನ್ಯಾಯಾಂಗವನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಡಿ.ವೈ.ಚಂದ್ರಚೂಡ್ ಹಾಗೂ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಲಂಕಾ ಅಧ್ಯಕ್ಷರ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ

    ಲಂಕಾ ಅಧ್ಯಕ್ಷರ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ

    ಕೊಲಂಬೋ: ಗೊಟಬಯ ರಾಜಪಕ್ಸೆ ಶ್ರೀಲಂಕಾದ ಅಧ್ಯಕ್ಷರಾಗಿದ್ದಾಗ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದ್ದ ಸಂದರ್ಭ ಅವರ ಮನೆಯಲ್ಲಿ ಪತ್ತೆಯಾಗಿದ್ದ ಲಂಕಾದ ಲಕ್ಷಾಂತರ ರೂ. ಹಣವನ್ನು ಶ್ರೀಲಂಕಾ ಪೊಲೀಸರು ನ್ಯಾಯಾಲಯದ ಕೈಗೆ ಒಪ್ಪಿಸಿದ್ದಾರೆ.

    ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದ ಜನರು 3 ವಾರಗಳ ಹಿಂದೆ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಮನೆಗೆ ನುಗ್ಗಿ ಆಕ್ರೋಶ ಹೊರ ಹಾಕಿದ್ದರು. ಸರ್ಕಾರದ ವಿರುದ್ಧದ ದಂಗೆಗೆ ಹೆದರಿ ರಾಜಪಕ್ಸೆ ಪಲಾಯನಗೈದಿದ್ದರು.

    ರಾಜಪಕ್ಸೆ ಲಂಕಾ ತೊರೆದು ಮಾಲ್ಡೀವ್ಸ್ ಹಾಗೂ ಸಿಂಗಾಪುರಕ್ಕೆ ತೆರಳಿ, ಅಲ್ಲಿ ಅವರು ಇ-ಮೇಲ್ ಮೂಲಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ವೇಳೆ ಪ್ರತಿಭಟನಾಕಾರರು ಅವರ ನಿವಾಸದಿಂದ 1.8 ಕೋಟಿ ಶ್ರೀಲಂಕಾ ರೂ. ಪತ್ತೆ ಮಾಡಿದ್ದರು. ಬಳಿಕ ಅದನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ

    ಕೊಲಂಬೋ ಕೇಂದ್ರೀಯ ಅಪರಾಧಗಳ ತನಿಖಾ ವಿಭಾಗದ ಉಸ್ತುವಾರಿ ಪೊಲೀಸ್ ಅಧಿಕಾರಿ ಗುರುವಾರ ನೀಡಿದ ಆದೇಶದ ಮೇರೆಗೆ ಶುಕ್ರವಾರ ಎಲ್ಲಾ ಹಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಈ ಹಣವನ್ನು ಕಳೆದ 3 ವಾರಗಳಿಂದ ನ್ಯಾಯಾಲಯಕ್ಕೆ ಏಕೆ ಸಲ್ಲಿಸಲಿಲ್ಲ ಎಂದು ನ್ಯಾಯಾಧೀಶ ತಿಲಿನಾ ಗಮೇಜ್ ಪ್ರಶ್ನಿಸಿದ್ದಾರೆ.

    ಹಣವನ್ನು ನ್ಯಾಯಾಲಯದ ವಶಕ್ಕೆ ನೀಡುವಲ್ಲಿ ಆಗಿರುವ ವಿಳಂಬದ ಕುರಿತು ತನಿಖೆ ನಡೆಸುವಂತೆ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್‌ಗೆ(ಐಜಿಪಿ) ಆದೇಶಿಸಲಾಗಿದ್ದು, ಇದಕ್ಕಾಗಿ ವಿಶೇಷ ತನಿಖಾ ಘಟಕದ ನಿರ್ದೇಶಕರನ್ನು ನೇಮಕ ಮಾಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ: ಸ್ಪೇನ್‌ ಪ್ರಧಾನಿ

    Live Tv
    [brid partner=56869869 player=32851 video=960834 autoplay=true]

  • ನಕಲಿ ಶಿಶ್ನ ಬಳಸಿ ಲೈಂಗಿಕ ವಂಚನೆ – ತೃತೀಯಲಿಂಗಿಗೆ 10 ವರ್ಷ ಜೈಲು ಶಿಕ್ಷೆ

    ನಕಲಿ ಶಿಶ್ನ ಬಳಸಿ ಲೈಂಗಿಕ ವಂಚನೆ – ತೃತೀಯಲಿಂಗಿಗೆ 10 ವರ್ಷ ಜೈಲು ಶಿಕ್ಷೆ

    ಲಂಡನ್: ನಕಲಿ ಶಿಶ್ನ ಬಳಸಿ ಇಬ್ಬರು ಮಹಿಳೆಯರು ಹಾಗೂ ಹದಿಹರೆಯದ ಬಾಲಕಿಯನ್ನು ಲೈಂಗಿಕ ಸಂಬಂಧಕ್ಕೆ ಪ್ರಚೋದಿಸಿದ ಹಾಗೂ ಲೈಂಗಿಕ ಸಂಪರ್ಕ ನಡೆಸಿದ ತೃತೀಯಲಿಂಗಿಗೆ ಲಂಡನ್‌ನಲ್ಲಿರುವ ಸ್ನಾರೆಸ್ ಬ್ರೂಕ್ ಕ್ರೌನ್ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

    ಹನ್ನಾ ವಾಲ್ಟರ್ಸ್ ಎಂಬ ವ್ಯಕ್ತಿ ಹೆಣ್ಣಾಗಿ ಹುಟ್ಟಿ ತಾನು ತರ್ಜಿತ್ ಸಿಂಗ್ (32) ಪುರುಷ ಎಂದು ಗುರುತಿಸಿಕೊಂಡಿದ್ದ. ಈತ ಸಂಭೋಗದ ಸಮಯದಲ್ಲಿ ಬಟ್ಟೆ ಧರಿಸುತ್ತಿದ್ದ. ಕತ್ತಲಿನ ಸಮಯದಲ್ಲಿ ನಕಲಿ ಶಿಶ್ನ ಬಳಸಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ವಿಚಾರಣೆಯ ನಂತರ ತರ್ಜಿತ್ ಸಿಂಗ್‌ಗೆ ದೈಹಿಕ ಹಾನಿ ಮತ್ತು ಕೊಲೆ ಬೆದರಿಕೆ ಆರೋಪದ ಮೇಲೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ದಕ್ಷಿಣಕನ್ನಡದಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಅಂಗಡಿ ಮುಂಗಟ್ಟು ಬಂದ್- ನಾಳೆ ಶಾಂತಿ ಸಭೆ

    ಭವಿಷ್ಯದಲ್ಲಿ ಸಿಂಗ್‌ನಿಂದ ಸಾರ್ವಜನಿಕರಿಗೆ ಗಂಭೀರವಾಗಿ ಹಾನಿಯಾಗುವ ಅಪಾಯವಿದೆ. ಮೂವರು ಸಂತ್ರಸ್ತೆಯರ ವಿರುದ್ಧ ಪದೇ-ಪದೇ ಹಿಂಸಾಚಾರ ಮತ್ತು ಹಲ್ಲೆ ಮಾಡಿದ್ದಾನೆ. ಈತ ಅಪಾಯಕಾರಿ ಅಪರಾಧಿ ಹಾಗೂ ಸುಳ್ಳುಗಾರ. ಪ್ರಾಮಾಣಿಕವಾಗಿ ಸಂಭಾಷಣೆ ನಡೆಸುವ ಬದಲು ಮೋಸದ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾನೆ ಹಾಗಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶ ಆಸ್ಕರ್ ಡೆಲ್ ಫ್ಯಾಬ್ರೊ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಕುರಿತು ಅಳಲು ತೋಡಿಕೊಂಡ ಸಂತ್ರಸ್ತೆ, “ಈ ಘಟನೆ ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ನಾನು ತೀವ್ರ ಆತಂಕ ಮತ್ತು ಖಿನ್ನತೆಗೊಳಗಾಗಿದ್ದಾನೆ. ನಾನು ಇದರಿಂದ ಹೊರಬರಲು ಖಿನ್ನತೆಯ ಔಷಧಿ ತೆಗೆದುಕೊಳ್ಳಬೇಕಾಯಿತು” ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಸ್ಕಾಂನಿಂದ ಗ್ರಾಹಕ ಸ್ನೇಹಿ ಡಿಜಿಟಲ್ ಮೀಟರ್ ಅಳವಡಿಕೆ

    ಮತ್ತೊಬ್ಬರು ಸಂತ್ರಸ್ತೆ ತನ್ನ ದೂರಿನಲ್ಲಿ, “ಆ ಸಮಯದಲ್ಲಿ ನನಗೆ ಕೇವಲ 16 ವರ್ಷ ವಯಸ್ಸಾಗಿತ್ತು. ನನ್ನ ಜೀವನದ ಅತ್ಯಂತ ದುರ್ಬಲ ಪರಿಸ್ಥಿತಿ ಎದುರಿಸಬೇಕಾಯಿತು. ಆರೋಪಿ ಕುತಂತ್ರದಾಟಕ್ಕೆ ನನ್ನನ್ನು ಬಳಸಿಕೊಂಡ” ಎಂದು ಆರೋಪಿಸಿದ್ದಾರೆ.

    ಈ ಘಟನೆಯಿಂದ ನನ್ನ ಜೀವನದ ಅಮೂಲ್ಯ ಸಮಯವನ್ನು ನಾನು ಕಳೆದುಕೊಂಡಿದ್ದೇನೆ. ಅಧ್ಯಯನ ಮತ್ತು ಕಾಲೇಜು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ದೀರ್ಘಕಾಲದವರೆಗೆ ನಾನು ಮನೆಯಿಂದ ಹೊರ ಹೋಗಲು ಹೆದರುತ್ತಿದ್ದೆ ಎಂದು 3ನೇ ಸಂತ್ರಸ್ತೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಒಂದೇ ವರ್ಷದೊಳಗಡೆ ಜಡ್ಜ್‌  ಉತ್ತಮ್ ಆನಂದ್ ಕೊಲೆ ಕೇಸ್‌ ತೀರ್ಪು ಪ್ರಕಟ – ಆಟೋರಿಕ್ಷಾ ಚಾಲಕ, ಸಹಚರ ದೋಷಿ

    ಒಂದೇ ವರ್ಷದೊಳಗಡೆ ಜಡ್ಜ್‌ ಉತ್ತಮ್ ಆನಂದ್ ಕೊಲೆ ಕೇಸ್‌ ತೀರ್ಪು ಪ್ರಕಟ – ಆಟೋರಿಕ್ಷಾ ಚಾಲಕ, ಸಹಚರ ದೋಷಿ

    ರಾಂಚಿ: ಕಳೆದ ವರ್ಷ ಜಾರ್ಖಂಡ್‍ನ ಧನಬಾದ್‍ನಲ್ಲಿ ನಡೆದಿದ್ದ ನ್ಯಾಯಾಧೀಶ ಉತ್ತಮ್ ಆನಂದ್ (49) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‍ನ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

     

    ಉತ್ತಮ್ ಆನಂದ್ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಆಟೋ ರಿಕ್ಷಾ ಚಾಲಕ ಮತ್ತು ಆತನ ಸಹಚರನನ್ನು ದೋಷಿ ಎಂದು ಸಿಬಿಐ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿದ್ದ ಆನಂದ್ ಹತ್ಯೆ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕ ಲಖನ್ ವರ್ಮಾ ಮತ್ತು ಆತನ ಸಹಚರ ರಾಹುಲ್ ವರ್ಮಾ ತಪ್ಪಿತಸ್ಥರೆಂದು ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ರಜನಿಕಾಂತ್ ಪಾಠಕ್ ತೀರ್ಪು ನೀಡಿದರು. ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 6 ರಂದು ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ. ಇದನ್ನೂ ಓದಿ: ಚಿಕ್ಕ ವಯಸ್ಸಿನಿಂದಲೂ ಧರ್ಮದ ಬಗ್ಗೆ ಅಭಿಮಾನ – ಹಿಜಬ್ ಹೋರಾಟದಿಂದ ಸಿಟ್ಟಾಗಿದ್ದೆ

    ಏನಿದು ಪ್ರಕರಣ?:
    ಆನಂದ್ ಕಳೆದ ವರ್ಷ ಜುಲೈ 28 ರಂದು ವಾಕಿಂಗ್ ಮಾಡುತ್ತಿದ್ದಾಗ ಆಟೋ ರಿಕ್ಷಾದಿಂದ ಗುದ್ದಿ ಹತ್ಯೆ ಮಾಡಲಾಗಿತ್ತು. ಧನ್‍ಬಾದ್‍ನ ರಣಧೀರ್ ವರ್ಮಾ ಚೌಕ್‍ನಲ್ಲಿ ನ್ಯಾಯಾಧೀಶರು ರಸ್ತೆಯ ಬದಿಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಆಟೋ‌ ರಿಕ್ಷಾ ಡಿಕ್ಕಿ ಹೊಡೆದು ಪರಾರಿಯಾಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಂದ ಈ ಪ್ರಕರಣವನ್ನು ಜಾರ್ಖಂಡ್ ಸರ್ಕಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿತ್ತು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣಕ್ಕೆ ತಿರುವು – ಉಗ್ರ ಸಂಘಟನೆಯೊಂದರ ಕೈವಾಡ: ಎನ್‍ಐಎ

    ಹತ್ಯೆಗೆ ಕಾರಣ:
    ಉತ್ತಮ್ ಆನಂದ್ ಹತ್ಯೆಗೂ ಮುನ್ನ ಹೈಪ್ರೊಫೈಲ್ ಕೇಸ್‍ವೊಂದರ ವಿಚಾರಣೆ ನಡೆಸಿದ್ದರು. ಅದರಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಮಾಜಿ ಶಾಸಕರ ಆಪ್ತರಾಗಿದ್ದ ರಂಜಯ್ ಕೊಲೆ ಪ್ರಕರಣ ಸೇರಿದಂತೆ ಹಲವಾರು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲೂ ಆರೋಪಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದರು. ಬಳಿಕ ಹತ್ಯೆ ನಡೆದಿತ್ತು. ಹತ್ಯೆಯ ಬಳಿಕ ಆಟೋ ರಿಕ್ಷಾ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಮೃತ ನ್ಯಾಯಾಧೀಶರ ತಂದೆ ಸದಾನಂದ್ ಪ್ರಸಾದ್ ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ಸಿಬಿಐ ಕೋರ್ಟ್‍ಗೆ ಚಾರ್ಚ್‍ಶೀಟ್ ಸಲ್ಲಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • Sena Vs Sena: ಉದ್ಧವ್ ಶಿಬಿರಕ್ಕೆ ತಕ್ಷಣದ ಪರಿಹಾರವಿಲ್ಲ, ಆಗಸ್ಟ್ 1 ರಂದು ಮುಂದಿನ ವಿಚಾರಣೆ: ಕೋರ್ಟ್

    Sena Vs Sena: ಉದ್ಧವ್ ಶಿಬಿರಕ್ಕೆ ತಕ್ಷಣದ ಪರಿಹಾರವಿಲ್ಲ, ಆಗಸ್ಟ್ 1 ರಂದು ಮುಂದಿನ ವಿಚಾರಣೆ: ಕೋರ್ಟ್

    ಮುಂಬೈ: ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಅವರ ಶಿಬಿರಕ್ಕೆ ತಕ್ಷಣ ಪರಿಹಾರವಿಲ್ಲ. ಈ ಕುರಿತು ವಿಚಾರಣೆಯನ್ನು ಆ.1ಕ್ಕೆ ಮುಂದೂಡಲಾಗಿದೆ ಎಂದು ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ತಿಳಿಸಿದೆ.

    ಶಿವಸೇನೆ ಪಕ್ಷದಲ್ಲಿ ಸ್ವ-ಪಕ್ಷದ ಸದಸ್ಯರ ನಡುವೆ ಭಿನ್ನಭಿಪ್ರಾಯ ಮತ್ತು ಗೊಂದಲಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆ ಶಿವಸೇನೆಯ ಬಂಡಾಯದ ಕುರಿತು ಕಾನೂನು ಹೋರಾಟಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಆಲಿಸಿದೆ. ಅರ್ಜಿಗಳಲ್ಲಿ ಒಳಗೊಂಡಿರುವ ಸಮಸ್ಯೆಗಳ ಬಗ್ಗೆ ದೊಡ್ಡ ಪೀಠಕ್ಕೆ ಉಲ್ಲೇಖಿಸಬೇಕಾಗಿದೆ ಎಂದು ಬುಧವಾರ ಹೇಳಿದೆ. ಇದನ್ನೂ ಓದಿ: 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ 

    ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೆ ಎಂದು ಭರವಸೆ ಕೊಟ್ಟಿದ್ದು, ಆಗಸ್ಟ್ 1 ರಂದು ದಿನಾಂಕ ನಿಗದಿ ಮಾಡಿದೆ. ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ನೇತೃತ್ವದ ಪೀಠ, ಠಾಕ್ರೆ ಮತ್ತು ಶಿಂಧೆ ವಿಚಾರಣೆ ನಡೆಯಲಿದೆ.

    court order law

    ಪ್ರತಿವಾದಿಗಳು ಯಾವುದೇ ಆರೋಪಗಳನ್ನು ನಿರಾಕರಿಸಲು ಬಯಸಿದರೆ ಸಾಮಾನ್ಯ ಅಫಿಡವಿಟ್ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಸ್ಪೀಕರ್ ಆಯ್ಕೆ, ವಿಪ್ ಮಾನ್ಯತೆ ಮತ್ತು ಇತರ ವಿಷಯಗಳ ಬಗ್ಗೆ ಇರುವ ಸಮಸ್ಯೆಗಳನ್ನು ಚರ್ಚೆ ಮಾಡಲಾಗುವುದು ಎಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ: ನಮ್ಮ ಪ್ರಧಾನಿ ತಾಯಿ ಹೃದಯದವರು: ಶೋಭಾ ಕರಂದ್ಲಾಜೆ

    Live Tv
    [brid partner=56869869 player=32851 video=960834 autoplay=true]