Tag: court

  • ಮುರುಘಾ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಮುರುಘಾ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಬೆಂಗಳೂರು: ಮುರಘಾ ಮಠದ ಶ್ರೀಗಳಿಗೆ ಚಿಕಿತ್ಸೆ ನಿಡಿದ್ದ ವೈದ್ಯಾಧಿಕಾರಿ ಸೇರಿ ಮೂವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

    ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಂಗನಾಥ್, ಆಸ್ಪತ್ರೆಯ ಸರ್ಜನ್ ಡಾ.ಎಸ್.ಕೆ ಬಸವರಾಜ್, ಕಾರಾಗೃಹ ಅಧಿಕಾರಿ ಎಂ.ಎಂ ಮರಕಟ್ಟಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ ಮೂವರು ಜಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಕರ್ತವ್ಯಲೋಪ ಎಸಗಿದ್ದಾರೆ, ಪ್ರಭಾವಿ ಆರೋಪಿಯ ರಕ್ಷಣೆ ಮಾಡುವ ಹುನ್ನಾರವನ್ನೂ ನಡೆಸಿದ್ದಾರೆ. ಹಾಗಾಗಿ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅರ್ಶ್‌ದೀಪ್‌ ಟೀಕಿಸುವ ಬದಲು ಧೈರ್ಯ ತುಂಬಿ – ಮುಂದಿನ ಭಾನುವಾರಕ್ಕೆ ಸಜ್ಜಾಗಿ: ಮಾಜಿ ಆಟಗಾರರ ಸಲಹೆ

    ದೂರಿನಲ್ಲಿ ಏನಿದೆ?
    ಚಿತ್ರದುರ್ಗ ಜಿಲ್ಲೆಯ ಮುರಘಾ ಮಠದಲ್ಲಿನ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೊದಲನೇ ಆರೋಪಿ ನ್ಯಾಯಾಂಗ ಬಂಧನಲ್ಲಿದ್ದರು. ಈ ವೇಳೆ ತುಂಬಾ ಎದೆ ನೋವಿದೆ ಎಂದ ತಕ್ಷಣ ನ್ಯಾಯಾಲಯದ ಗಮನಕ್ಕೂ ತರದೆ ಚಿತ್ರದುರ್ಗ ಜಿಲ್ಲಾಸತ್ರೆಗೆ ಮುಂಜಾನೆ ದಾಖಲಿಸಿ ಚಿಕಿತ್ಸೆ ನಿಡಲು ಮುಂದಾಗಿದ್ದರು. ಚಿಕಿತ್ಸೆ ನೀಡುವ ಹಂತದಲ್ಲಿ ಅಲ್ಲಿನ ವೈದ್ಯಾಧಿಕಾರಿ ಇವರಿಗೆ ತೀವ್ರ ತರವಾದ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಸುಳ್ಳು ಹೇಳಿ, ದಾಖಲೆಗಳನ್ನೂ ಸೃಷ್ಟಿಸಿ ದಾವಣಗೆರೆಯ ಖಾಸಗಿ ಹೃದಯ ತಜ್ಞರನ್ನು ಕರೆಸಿ ಆರೋಪಿಗೆ ತೀವ್ರತರವಾದ ಎದೆ ನೋವಿದೆ, ಹೃದಯಕ್ಕೆ ಘಾಸಿಯಾಗಿದೆ. ಈ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲು ಹೆಚ್ಚಿನ ವೈದ್ಯಕೀಯ ಸೌಲಭ್ಯವಿಲ್ಲ, ಇವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ವಿಶೇಷ ಚಿಕಿತ್ಸೆ ನೀಡಬೇಕೆಂದು ಹೇಳಿದ್ದಾರೆ. ತಕ್ಷಣ ಆರೋಪಿಯನ್ನು ಐಸಿಯುನಲ್ಲಿ ದಾಖಲಿಸಿ, ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹುನ್ನಾರವನ್ನೂ ನಡೆಸಿದ್ದರು.

    ಪ್ರಭಾವಿ ಸ್ಥಾನದಲ್ಲಿರುವ ಆರೋಪಿಯ ರಕ್ಷಣೆಗೆ ನಿಂತ ಈ ಸರ್ಕಾರದ ಅಧಿಕಾರಿಗಳಾದ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ.ಎಂ ಮರಕಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಂಗನಾಥ್, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಎಸ್.ಕೆ ಬಸವರಾಜ್ ಕರ್ತವ್ಯ ಲೋಪವೆಸಗಿ ಆರೋಪಿಯ ಜೊತೆ ಶಾಮೀಲಾಗಿ ಬೃಹತ್ ನಾಟಕ ಆಡಿರುತ್ತಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಯಾರನ್ನೂ ವಿಚಾರಣೆ ಮಾಡ್ಬೇಡಿ: ಮಡಿವಾಳೇಶ್ವರ ಸ್ವಾಮೀಜಿ ಡೆತ್‍ನೋಟ್

    ಮುರುಘಾ ಶ್ರೀ ಜೈಲಿಗೆ:
    ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಶ್ರೀ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭಾನುವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಶ್ರೀಗಳನ್ನು ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾ ಕೋಮಲಾ ವಿಚಾರಣೆ ಮುಗಿತಾ ಎಂದು ಪ್ರಶ್ನಿಸಿದರು. ಈ ವೇಳೆ ಪೊಲೀಸರು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳದ ಕಾರಣ ನ್ಯಾಯಾಧೀಶರು ಸೆ.14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀಗಳ ಕೇಸ್ – 3ನೇ ಆರೋಪಿ ಮಠದ ಮರಿಸ್ವಾಮಿ ಪೊಲೀಸರ ವಶಕ್ಕೆ

    ಮುರುಘಾ ಶ್ರೀಗಳ ಕೇಸ್ – 3ನೇ ಆರೋಪಿ ಮಠದ ಮರಿಸ್ವಾಮಿ ಪೊಲೀಸರ ವಶಕ್ಕೆ

    ಚಿತ್ರದುರ್ಗ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 3ನೇ ಆರೋಪಿ ಮಠದ ಮರಿಸ್ವಾಮಿ ಬಸವಾದಿತ್ಯರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೂರುಘಾ ಮಠದ ಮರಿಸ್ವಾಮಿ ಬಸವಾದಿತ್ಯರನ್ನ ಪೊಲೀಸರು ಹೊಸಪೇಟೆಯಲ್ಲಿ ವಶಕ್ಕೆ ಪಡೆದಿದ್ದು, ಹೊಸಪೇಟೆಯಿಂದ ಚಿತ್ರದುರ್ಗಕ್ಕೆ ಕರೆತರಲಾಗುತ್ತಿದೆ. ಚಿತ್ರದುರ್ಗ ಗ್ರಾಮೀಣ ಠಾಣೆಗೆ ಕರೆತಂದ ನಂತರ ಬಂಧನದ ಪ್ರಕ್ರಿಯೆಯನ್ನು ಪೊಲೀಸರು ಪೂರ್ಣಗೊಳಿಸಲಿದ್ದಾರೆ. ಇದನ್ನೂ ಓದಿ: ತನಿಖೆಗೆ ಸಹಕರಿಸದೇ ಮುರುಘಾ ಶ್ರೀ ಮತ್ತೆ ಆಸ್ಪತ್ರೆ ಸುತ್ತಾಟ

    ಪೋಕ್ಸೋ ಕೇಸ್‌ನಲ್ಲಿ ಶುಕ್ರವಾರದಿಂದ ಪೊಲೀಸ್ ಕಸ್ಟಡಿಯಲ್ಲಿರುವ ಮುರುಘಾ ಶ್ರೀಗಳನ್ನು ಇಂದು ತನಿಖಾ ತಂಡ ವಿಚಾರಣೆಗೆ ಒಳಪಡಿಸಿತ್ತು. ಆದರೆ ಶ್ರೀಗಳು ತನಿಖೆಗೆ ಸಹಕರಿಸದೇ ಮತ್ತೆ ಆಸ್ಪತ್ರೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಸೋಮವಾರ ಜೈಲಾ? ಬೇಲಾ?

    ತಮ್ಮ ಮೇಲಿನ ಎಲ್ಲಾ ರೀತಿಯ ಆರೋಪಗಳನ್ನು ಸ್ವಾಮೀಜಿ ತಳ್ಳಿ ಹಾಕಿದ್ದು, ನನ್ನ ವಿರುದ್ಧ ಷಡ್ಯಂತ್ರ‍್ಯ ನಡೆದಿರುವುದಾಗಿ ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀ ಮೆಡಿಕಲ್ ಟೆಸ್ಟ್ ಮುಕ್ತಾಯ – ಪುರುಷತ್ವ ಪರೀಕ್ಷೆಯಲ್ಲಿ ಶ್ರೀಗಳು ಫಿಟ್

    ಮುರುಘಾ ಶ್ರೀ ಮೆಡಿಕಲ್ ಟೆಸ್ಟ್ ಮುಕ್ತಾಯ – ಪುರುಷತ್ವ ಪರೀಕ್ಷೆಯಲ್ಲಿ ಶ್ರೀಗಳು ಫಿಟ್

    ಚಿತ್ರದುರ್ಗ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳು ಪುರುಷತ್ವ ಪರೀಕ್ಷೆಯಲ್ಲಿ ಫಿಟ್ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಶ್ರೀಗಳ ವೈದ್ಯಕೀಯ ವರದಿ ಬಹಿರಂಗವಾಗಿದ್ದು, ಪುರುಷತ್ವ ಪರೀಕ್ಷೆಯಲ್ಲಿ ಶ್ರೀಗಳು ಫಿಟ್ ಆಗಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಪ್ರಶ್ನೆಗೆ ಉತ್ತರಿಸಲು ತಡಪಡಿಸಿದ ಜಿಲ್ಲಾಧಿಕಾರಿಗೆ ಸೀತಾರಾಮನ್ ಕ್ಲಾಸ್ – ಕೆಟಿಆರ್ ಆಘಾತ

    ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಫಿಜಿಷಿಯನ್ ಡಾ.ಸತೀಶ್, ಮಾನಸಿಕ ತಜ್ಞೆ ಶೋಭಾ ಹಾಗೂ ವೇಣುಗೋಪಾಲ್ ಸಮ್ಮುಖದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಕೊಠಡಿ ಸಂಖ್ಯೆ 15ರಲ್ಲಿ ತಪಾಸಣೆ ನಡೆಸಲಾಗಿದ್ದು, ಶ್ರೀಗಳ ಉಗುರು, ಒಳ ಉಡುಪಿನ ತುಂಡು ಬಟ್ಟೆ, ಮರ್ಮಾಂಗದ ಬಳಿಯ ಕೂದಲನ್ನು ಪರೀಕ್ಷೆ ಮಾಡಲಾಗಿದೆ.

    ಶ್ರೀಗಳಿಗೆ ಹೃದಯ ಸಂಬಂಧಿ ತೊಂದರೆಯಿರುವುದರಿಂದ ಮತ್ತೊಮ್ಮೆ ಇಸಿಜಿ ಪರೀಕ್ಷೆ ಮಾಡಲಾಗಿದೆ. ಜಿಲ್ಲಾ ಸರ್ಜನ್ ಬಸವರಾಜ್ ನೇತೃತ್ವದಲ್ಲಿ ಶ್ರೀಗಳಿಗೆ ತಪಾಸಣೆ ಮಾಡಲಾಗಿದೆ ಇಂದು ಅಧಿಕೃತ ವರದಿ ಹೊರಬೀಳಲಿದೆ. ಸದ್ಯ ಈಗಾಗಲೇ ಶ್ರೀಗಳ ವರದಿ ಪಾಸಿಟಿವ್ ಆಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ನಾಳೆ ಸೂಪರ್ ಸಂಡೇ – ಕದನ ಕುತೂಹಲ ಮೂಡಿಸಿದ ಇಂಡೋ-ಪಾಕ್ ಹೋರಾಟ

    ವೈದ್ಯಕೀಯ ತಪಾಸಣೆ ಬಳಿಕ ಜಿಲ್ಲಾಸ್ಪತ್ರೆಯಿಂದ ಡಿವೈಎಸ್‌ಪಿ ಕಚೇರಿ ಶಿಫ್ಟ್ ಮಾಡಲಾಗಿದ್ದು, ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ಮುಂದುವರಿದಿದೆ. ಚಾರ್ಜ್ ಶೀಟ್ ಜೊತೆಯಲ್ಲೇ ವೈದ್ಯರ ರಿಪೋರ್ಟ್ ಸಹ ಸಲ್ಲಿಸಲಿರುವ ಪೊಲೀಸಲಿದ್ದಾರೆ. ಮುರುಘಾ ಮಠದ ಸ್ಥಳ ಮಹಜರು ಮಾಡಿಸುವ ಸಾಧ್ಯತೆ ಇದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀ 4 ದಿನ ಪೊಲೀಸ್ ಕಸ್ಟಡಿಗೆ

    ಮುರುಘಾ ಶ್ರೀ 4 ದಿನ ಪೊಲೀಸ್ ಕಸ್ಟಡಿಗೆ

    ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿದ್ದ ಮುರುಘಾ ಮಠದ ಶ್ರೀಗಳನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಬಿ.ಕೆ ಕೋಮಲಾ ಆದೇಶಿಸಿದ್ದಾರೆ.

    ಆರೋಪಿಯನ್ನು ಐದು ದಿನಗಳ ಕಾಲ ತನಿಖೆ ನಡೆಸುವ ಸಲುವಾಗಿ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸಿದ್ದರು. ಆದರೆ ಕೋರ್ಟ್ ವಿಚಾರಣೆ ನಡೆಸಿ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇಂದಿನಿಂದ ಸೆಪ್ಟೆಂಬರ್ 6ರ ವರೆಗೆ ಶ್ರೀಗಳು ಪೊಲೀಸ್ ಕಸ್ಟಡಿಯಲ್ಲಿರಲಿದ್ದಾರೆ. ಜೊತೆಗೆ ಅಗತ್ಯವಿದ್ದರೆ ಪೊಲೀಸ್ ಕಸ್ಟಡಿಯಲ್ಲೇ ವೈದ್ಯಕೀಯ ನೆರವು ನೀಡುವಂತೆ ಚಿತ್ರದುರ್ಗದ ಜೆಎಂಎಫ್ ಕೋರ್ಟ್ ಆದೇಶಿಸಿದೆ. ಇದನ್ನೂ ಓದಿ: ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಮಧ್ಯಂತರ ಜಾಮೀನು ಮಂಜೂರು

    ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲು ನ್ಯಾಯಾಧೀಶರು ಸೂಚಿಸಿದ್ದರು. ಬಳಿಕ 4 ಗಂಟೆಗೆ ಶ್ರೀಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದನ್ನೂ ಓದಿ: ಆಸ್ಪತ್ರೆ ದಾಖಲಾಗಿದ್ದ ಪದ್ಮಶ್ರೀ ಪುರಸ್ಕೃತೆಗೆ ಬಲವಂತವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀಗಳನ್ನು ಮೊದಲು ಕೋರ್ಟ್‍ಗೆ ಹಾಜರು ಪಡಿಸಿ: ನ್ಯಾಯಾಧೀಶರ ಸೂಚನೆ

    ಮುರುಘಾ ಶ್ರೀಗಳನ್ನು ಮೊದಲು ಕೋರ್ಟ್‍ಗೆ ಹಾಜರು ಪಡಿಸಿ: ನ್ಯಾಯಾಧೀಶರ ಸೂಚನೆ

    ಚಿತ್ರದುರ್ಗ: ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಹಾಜರಾಗುವಂತೆ ಮುರುಘಾ ಮಠದ ಶ್ರೀಗೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಬಿ.ಕೆ ಕೋಮಲ ಆದೇಶಿಸಿದ್ದಾರೆ.

    ಆರೋಪಿಯನ್ನು ಐದು ದಿನಗಳ ಕಾಲ ತನಿಖೆ ನಡೆಸುವ ಸಲುವಾಗಿ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರ್ಟ್‍ಗೆ ಮನವಿ ಸಲ್ಲಿಸಿದರು, ಈ ವೇಳೆ ಆರೋಪಿ ಎಲ್ಲಿ ಎಂದು ಕೋರ್ಟ್ ಪ್ರಶ್ನೆ ಮಾಡಿದೆ. ಆರೋಪಿ ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಕೋರ್ಟ್‍ಗೆ ಮಾಹಿತಿ ನೀಡದೆ ಹೇಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಕ್ಷಣವೇ ಆರೋಪಿ ಹಾಜರಾಗಬೇಕು, ಇಲ್ಲ ಮೆಡಿಕಲ್ ರಿಪೋರ್ಟ್ ತರುವಂತೆ ಕೋರ್ಟ್ ಸೂಚನೆ ನೀಡಿತು.

    ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲು ನ್ಯಾಯಾಧೀಶರು ಸೂಚಿಸಿದ್ದ ಹಿನ್ನೆಲೆ ಸಂಜೆ 4 ಗಂಟೆಗೆ ಶ್ರೀಗಳು ಕೋರ್ಟ್‌ಗೆ ಹಾಜರಾಗಿದ್ದಾರೆ. ವಿಚಾರ ಸಾಕಷ್ಟು ಸೂಕ್ಷ್ಮವಾಗಿರೋದರಿಂದ ವೀಡಿಯೋ ಕಾನ್ಫರೆನ್ಸ್ ಮುಖಾಂತರ ಹಾಜರುಪಡಿಸುತ್ತೇವೆಂದು ಜೈಲಾಧಿಕಾರಿಗಳು ಮನವಿ ಸಲ್ಲಿಸಿದ್ದರು.

    41 ಡಿಸಿಆರ್‌ಪಿಸಿ ಅರ್ಜಿ ಸಲ್ಲಿಸಿದ್ದ ಶ್ರೀ ಪರ ವಕೀಲರು. ಯಾವುದೇ ವಿಚಾರಣೆಯನ್ನು ವಕೀಲರ ಸಮ್ಮುಖದಲ್ಲಿ ನಡೆಸುವಂತೆ ಅರ್ಜಿ ಸಲ್ಲಿಸಿದರು. ಪೊಲೀಸರ ಕಸ್ಟಡಿಗೆ ಪ್ರತಿಯಾಗಿ ವಕೀಲರು 41 ಡಿಸಿಆರ್‌ಪಿ ಅಡಿ ಅರ್ಜಿ ಸಲ್ಲಿಸಿದ್ದರು. ಮೊದಲು ಆರೋಪಿಯನ್ನು ಹಾಜರುಪಡಿಸಿ ಆ ಬಳಿಕ ಅರ್ಜಿಗಳ ಬಗ್ಗೆ ಆದೇಶ ನೀಡಲಾಗುವುದು ಎಂದು ಜೈಲಾಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದರು.

    Live Tv
    [brid partner=56869869 player=32851 video=960834 autoplay=true]

  • ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

    ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

    ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

    ಮುರುಘಾ ಶ್ರೀಗಳನ್ನು ನಸುಕಿನಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದರು. ನಂತರ ಅವರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಕೊಡಿಸಲಾಯಿತು. ನಸುಕಿನ 2.25ಕ್ಕೆ ಆಸ್ಪತ್ರೆಯಿಂದ ಹೊರಟ ಪೊಲೀಸರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿ, ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದನ್ನೂ ಓದಿ: ಮಠದಲ್ಲೇ ಮುರುಘಾಶ್ರೀ ಬಂಧನ

    ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗದ ಎಸ್‍ಪಿ ಕೆ.ಪರಶುರಾಮ್, ದಸ್ತಗಿರಿ ಮಾಡಿ ವೈದ್ಯಕೀಯ ಪರೀಕ್ಷೆ ನಡೆಸಿ ಶ್ರೀಗಳನ್ನು ನ್ಯಾಯಧೀಶರ ಮುಂದೆ ಹಾಜರು ಪಡಿಸಲಾಗಿತ್ತು. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಒಬ್ಬ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಉಳಿದವರನ್ನು ಕೂಡ ವಿಚಾರಣೆ ನಡೆಸುತ್ತೇವೆ. ಸಾಕ್ಷ್ಯಾಧಾರ ಕಲೆ ಹಾಕಲು ವಿಳಂಬ ಆಯಿತು. ಆದ್ದರಿಂದ ಬಂಧನವೂ ವಿಳಂಬವಾಯಿತು. ಮುರುಘಾ ಶ್ರೀಗಳು ಸದ್ಯಕ್ಕೆ ಇಲ್ಲೇ ಇರುತ್ತಾರೆ. ಶ್ರೀಗಳ ಆರೋಗ್ಯ ಕುರಿತ ವರದಿಯನ್ನು ವೈದ್ಯರು ನ್ಯಾಯಲಯದ ಮುಂದೆ ನೀಡುತ್ತಾರೆ. ಅದನ್ನು ನೋಡಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.

    ಇಂದು ಶ್ರೀಗಳ ಪರ 10 ಗಂಟೆ ನಂತರ ಕೋರ್ಟ್‍ಗೆ ವಕೀಲರು ಜಾಮೀನಿ ಕೋರಿ ಅರ್ಜಿ ಸಲ್ಲಿಸಲಿದ್ದಾರೆ. ಅರೆಸ್ಟ್ ಆದ್ದರಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಈ ನಿಟ್ಟಿನಲ್ಲಿ ರೆಗ್ಯುಲರ್ ಬೇಲ್‍ಗಾಗಿ ಅರ್ಜಿ ಸಲ್ಲಿಸಲಿದ್ದಾರೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವತ್ತು ತನಿಖಾಧಿಕಾರಿಯಿಂದ ಪೊಲೀಸ್ ಕಸ್ಟಡಿಗೆ ಕೇಳಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಶ್ರೀಗಳ ಡೀಟೈಲ್ ವಿಚಾರಣೆ ಅವಶ್ಯಕತೆಯಿದೆ. ಇದನ್ನೂ ಓದಿ: ಮುರುಘಾಶ್ರೀ ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ಎಂಟ್ರಿ ಕೊಡಲ್ಲ: ಆರ್.ಅಶೋಕ್

    ಸ್ಥಳ ಮಹಜರ್ ಮಾಡಬೇಕು, ಅಲ್ಲದೆ ಆರೋಪಿಯ ಹೇಳಿಕೆ ದಾಖಲಿಸಬೇಕು. ಪೋಕ್ಸೊ ಕೇಸ್‍ನಡಿ ಆರೋಪಿಯ ಕೃತ್ಯದ ಸ್ಥಳ ಸೇರಿದಂತೆ ಕೆಲವು ಸ್ಥಳಗಳ ಮಹಜರು ಅವಶ್ಯಕತೆ ಇದೆ. ಸಾಕ್ಷಿಗಳನ್ನ ಸಂಗ್ರಹಿಸಬೇಕಿದೆ. ಹೀಗಾಗಿ ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಅಂತಾ ಪೊಲೀಸರು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಮುರುಘಾ ಶ್ರೀ ಬಂಧನ

    ಕೊನೆಗೂ ಮುರುಘಾ ಶ್ರೀ ಬಂಧನ

    ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಬ್ಯಾರಿಕೇಡ್‌ ಹಾಕುವ ಜೊತೆಗೆ ಎಲ್ಲ ಕಡೆಯೂ ಬಿಗಿ ಬಂದೋಬಸ್ತ್‌ ಮಾಡಲಾಗುತ್ತಿದೆ. ಹೆಚ್ಚಿನ ಭದ್ರತೆಯಾಗಿ ದಾವಣಗೆರೆಯಿಂದ ಸಿಪಿಐ ಮತ್ತು ಮೇಲಿನ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ರೇಪ್‌ ಕೇಸ್‌ – ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್‌, ಪತ್ನಿಗೆ ಜಾಮೀನು

    ಇಂದು ಎರಡನೇ ಆರೋಪಿ ರಶ್ಮಿ ಅವರ ವಿಚಾರಣೆ ನಡೆದಿದ್ದು,  ಪ್ರಕರಣ ದಾಖಲಾದ 6 ದಿನದ ಬಳಿಕ  ಶ್ರೀಗಳನ್ನು ಬಂಧನ ಮಾಡಲಾಗಿದೆ. ಇದನ್ನೂ ಓದಿ: ಸ್ವಾಮೀಜಿಗಳ ಲೈಂಗಿಕ ದೌರ್ಜನ ಆರೋಪದ ಕೇಸನ್ನು ಸಿಬಿಐಗೆ ಒಪ್ಪಿಸಿ: ಹಿಂದುಸ್ತಾನ್ ಜನತಾ ಪಕ್ಷ ಒತ್ತಾಯ

    ಸದ್ಯ ಲೈಂಗಿಕ ದೌರ್ಜನ್ಯ ಆರೋಪ, ಪೋಕ್ಸೊ ಪ್ರಕರಣ ಎದುರಿಸುತ್ತಿರುವ ಮುರುಘಾ ಶ್ರೀಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ಈಗಾಗಲೇ ಶುಕ್ರವಾರಕ್ಕೆ ಮುಂದೂಡಿದೆ. ನಾಳೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್‌ ಅವಕಾಶ ನೀಡಿದೆ. ಈ ಸಂಬಂಧ ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ಶ್ರೀಗಳನ್ನು ವಶಕ್ಕೆ ಪಡೆಯುವ ಸಿದ್ಧತೆಯೂ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • 200 ಕೋಟಿ ವಂಚನೆ ಕೇಸ್ : ಸುಕೇಶ್ ಬಗ್ಗೆ ಎಲ್ಲವೂ ಗೊತ್ತಿದ್ದೂ ಸ್ನೇಹ ಬೆಳೆಸಿ ಇಕ್ಕಟ್ಟಿಗೆ ಸಿಲುಕಿಕೊಂಡ್ರಾ ನಟಿ ಜಾಕ್ವೆಲಿನ್

    200 ಕೋಟಿ ವಂಚನೆ ಕೇಸ್ : ಸುಕೇಶ್ ಬಗ್ಗೆ ಎಲ್ಲವೂ ಗೊತ್ತಿದ್ದೂ ಸ್ನೇಹ ಬೆಳೆಸಿ ಇಕ್ಕಟ್ಟಿಗೆ ಸಿಲುಕಿಕೊಂಡ್ರಾ ನಟಿ ಜಾಕ್ವೆಲಿನ್

    ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ 200 ಕೋಟಿ ವಂಚನೆ ಪ್ರಕರಣದಲ್ಲಿ ಅತೀ ಹೆಚ್ಚು ಸುದ್ದಿ ಆಗುತ್ತಿರುವುದು ನಟಿ ಜಾಕ್ವೆಲಿನ್ ಫರ್ನಾಂಡಿಸ್.  ದಂಪತಿಯೊಬ್ಬರಿಗೆ ಮೋಸ ಮಾಡಿ ಅವರಿಗೆ 200 ಕೋಟಿ ವಂಚನೆ ಮಾಡಿದ್ದಾರೆ ಅನ್ನುವ ಆರೋಪದಲ್ಲಿ ಜೈಲು ಪಾಲಾಗಿರುವ ಸುಕೇಶ್ ಜೊತೆ ಜಾಕ್ವೆಲಿನ್ ಸಂಬಂಧ ಇಟ್ಟುಕೊಂಡಿದ್ದರು. ಈ ಕಾರಣಕ್ಕಾಗಿಯೇ ಜಾಕ್ವೆಲಿನ್ ಗೆ ದುಬಾರಿ ಗಿಫ್ಟ್ ಗಳನ್ನು ಸುಕೇಶ್ ನೀಡಿದ್ದಾನೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

    ಹಣಕ್ಕಾಗಿಯೇ ಸುಕೇಶ್ ಸ್ನೇಹ ಬೆಳೆಸಿದ್ದು, ಇಲ್ಲದೇ ಹೋದರೆ ಈ ಪ್ರಮಾಣದ ದುಬಾರಿ ಗಿಫ್ಟ್ ಗಳನ್ನು ಕೊಡುವುದಕ್ಕೆ ಹೇಗೆ ಸಾಧ್ಯ? ಸುಕೇಶ್ ಬಗ್ಗೆ ಎಲ್ಲವೂ ತಿಳಿದಿದ್ದರೂ, ಗಿಫ್ಟ್ ಗಳನ್ನು ನಿರಾಕರಿಸದೇ ಪಡೆದಿದ್ದಾರೆ ಎಂದು ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಜಾಕ್ವೆಲಿನ್ ಬಗ್ಗೆ ಉಲ್ಲೇಖಿಸಲಾಗಿದೆ. ಇದೊಂದು ದುಡ್ಡಿಗಾಗಿ ನಡೆದಿರುವ ಸ್ನೇಹ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಕೋರ್ಟಿಗೆ ಹಾಜರಾಗುವಂತೆ ಜಾಕ್ವೆಲಿನ್ ಗೆ ಕೋರ್ಟ್ ಸಮನ್ಸ್ ನೀಡಿದ್ದು, ಈ ತಿಂಗಳು ಕೊನೆಯ ವಾರದಲ್ಲಿ ದಿನಾಂಕವನ್ನೂ ನಿಗಧಿ ಮಾಡಲಾಗಿದೆ. ಹಾಗಾಗಿ ಜಾಕ್ವೆಲಿನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುತಿಸಿದ ಅಷ್ಟೂ ವಸ್ತುಗಳನ್ನು ನಾನು ನನ್ನ ಸ್ವಂತ ದುಡಿಮೆಯಿಂದ ತಂದಿದ್ದು ಎಂದು ಜಾಕ್ವೆಲಿನ್ ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಸುಕೇಶ್ ತಮಗೆ ಯಾವುದೇ ಗಿಫ್ಟ್ ನೀಡಿಲ್ಲವೆಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀಗೆ ಸದ್ಯಕ್ಕಿಲ್ಲ ರಿಲೀಫ್‌ – ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ಮುರುಘಾ ಶ್ರೀಗೆ ಸದ್ಯಕ್ಕಿಲ್ಲ ರಿಲೀಫ್‌ – ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪೋಕ್ಸೊ ಪ್ರಕರಣ ಎದುರಿಸುತ್ತಿರುವ ಮುರುಘಾ ಶ್ರೀಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.

    ನಾಳೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್‌ ಅವಕಾಶ ನೀಡಿದೆ. ಈ ಸಂಬಂಧ ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಆ.30ರಂದು ಅರ್ಜಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: ಸ್ವಾಮೀಜಿಗಳ ಲೈಂಗಿಕ ದೌರ್ಜನ ಆರೋಪದ ಕೇಸನ್ನು ಸಿಬಿಐಗೆ ಒಪ್ಪಿಸಿ: ಹಿಂದುಸ್ತಾನ್ ಜನತಾ ಪಕ್ಷ ಒತ್ತಾಯ

    ಕೋರ್ಟ್‌ ವಿಚಾರಣೆ ಕುರಿತು ಮಾತನಾಡಿದ ಬಾಲಕಿಯರ ಪರ ವಕೀಲ ಶ್ರೀನಿವಾಸ್, ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಗಿದೆ. ನಾಳೆ ಸಂತ್ರಸ್ತ ಬಾಲಕಿಯರ ಪರ ತಕರಾರು ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

    ಮುರುಘಾ ಶ್ರೀಗಳು ಯಾವ ಗ್ರೌಂಡ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೋ ಪರಿಶೀಲಿಸಿ ನಾಳೆ ತಕರಾರು ಅರ್ಜಿ ಸಲ್ಲಿಸಲಾಗುವುದು. ನೊಂದ ಬಾಲಕಿಯರ ಪರವಾಗಿ ಕಾನೂನು ಪ್ರಾಧಿಕಾರದ ವಕೀಲರು ವಕಾಲತ್ತು ಹಾಕಿದ್ದರು. ನಾವು ಕೂಡ ವಕಾಲತ್ತು ಹಾಕಿದ್ದೇವೆ. ಬಾಲಕಿಯರು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನ್ಯಾಯಾಧೀಶರ ಮುಂದೆಯೇ ಬಾಲಕಿಯರು ನಮ್ಮನ್ನು ಅವರ ಪರ ವಕೀಲರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಶರಣರ ಜಾಮೀನು ಅರ್ಜಿ ಬಗ್ಗೆ ಸಂತ್ರಸ್ತರಿಗೆ ಮತ್ತು ಪಿಪಿಗೆ ಇಂದು ನೋಟಿಸ್ ಬಂದಿತ್ತು. ಹಾಗಾಗಿ ಇಂದು ತಕರಾರು ಸಲ್ಲಿಸಲು ಅವಕಾಶ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ಗುರುವಾರ ವಿಚಾರಣೆ – ಮಠಕ್ಕೆ ಪೊಲೀಸ್ ಭದ್ರತೆ

    Live Tv
    [brid partner=56869869 player=32851 video=960834 autoplay=true]

  • ‘ವಿಕ್ರಾಂತ ರೋಣ’ ಬೆಡಗಿ ಜಾಕ್ವೆಲಿನ್  ಫರ್ನಾಂಡಿಸ್ ಗೆ ಕೋರ್ಟಿನಿಂದಲೂ ಸಮನ್ಸ್: ತಪ್ಪದ ಸಂಕಷ್ಟ

    ‘ವಿಕ್ರಾಂತ ರೋಣ’ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಕೋರ್ಟಿನಿಂದಲೂ ಸಮನ್ಸ್: ತಪ್ಪದ ಸಂಕಷ್ಟ

    ಬಾಲಿವುಡ್ ಬೆಡಗಿ, ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿರುವ ಜಾಕ್ವೆಲಿನ್ ಫರ್ನಾಂಡಿಸ್ ಗೆ ದೆಹಲಿ ಪಟಿಯಾಲ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಜಾಕ್ವೆಲಿನ್ ಸ್ನೇಹಿತ ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೇಳಿ ಬಂದಿದೆ. ವಂಚನೆ ಹಣದಲ್ಲಿ ಜಾಕ್ವೆಲಿನ್ ಗೆ ಸುಕೇಶ್ ಭಾರೀ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ ಎನ್ನುವ ಕಾರಣಕ್ಕಾ ಇಡಿ ನಟಿಯ ಮೇಲೂ ಚಾರ್ಜ್ ಶೀಟ್ ಸಲ್ಲಿಸಿತ್ತು.

    ತನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಈಗಾಗಲೇ ಹಲವಾರಿ ಬಾರಿ ಜಾಕ್ವೆಲಿನ್ ಹೇಳಿಕೊಂಡಿದ್ದಾರೆ. ಆದರೂ, ಜಾರಿ ನಿರ್ದೇಶನಾಲಯ ಜಾಕ್ವೆಲಿನ್ ಹೆಸರು ಸೇರಿಸಿಯೇ ಚಾರ್ಜ್ ಶೀಟ್ ಸಲ್ಲಿಸಿತ್ತು. ಹಾಗಾಗಿ ಸೆಪ್ಟಂಬರ್ 26ರಂದು ಕೋರ್ಟಿಗೆ ಹಾಜರಾಗುವಂತೆ ದೆಹಲಿಯ ಪಟಿಯಾಲ ಕೋರ್ಟ್ ಜಾಕ್ವೆಲಿನ್ ಗೆ ಸಮನ್ಸ್ ಜಾರಿ ಮಾಡಿದೆ. ಇದನ್ನೂ ಓದಿ:ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

    ವ್ಯಕ್ತಿಯೊಬ್ಬರಿಗೆ ಸುಕೇಶ್ 200 ಕೋಟಿ ವಂಚಿಸಿದ್ದರು. ಈ ಹಣದಲ್ಲಿ ಜಾಕ್ವೆಲಿನ್ ಗೆ ದುಬಾರಿ ಕಾರು, ಕುದುರೆ, ಡೈಮೆಂಡ್ ನಕ್ಲೆಸ್ ಮತ್ತು ದುಬಾರಿ ಬ್ಯಾಗ್ ಗಳನ್ನು ಸುಕೇಶ್ ಉಡುಗೊರೆಯಾಗಿ ನೀಡಿದ್ದರು. ಅದು ವಂಚನೆ ಹಣದಿಂದ ಕೊಟ್ಟಿರುವ ಉಡುಗೊರೆಯಾಗಿದೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಾಗಿ ಜಾಕ್ವೆಲಿನ್ ಗೆ ಸಂಕಷ್ಟ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]