Tag: court

  • ವಂಚನೆ ಪ್ರಕರಣ: ಕೊನೆಗೂ ನ್ಯಾಯಾಲಯಕ್ಕೆ ಶರಣಾದ ಬಿಗ್ ಬಾಸ್ ಸ್ಪರ್ಧಿ

    ವಂಚನೆ ಪ್ರಕರಣ: ಕೊನೆಗೂ ನ್ಯಾಯಾಲಯಕ್ಕೆ ಶರಣಾದ ಬಿಗ್ ಬಾಸ್ ಸ್ಪರ್ಧಿ

    ಮಾಜಿ ಬಿಗ್ ಬಾಸ್ ಸ್ಪರ್ಧಿ, ಗಾಯಕಿ ಹಾಗೂ ನಟಿಯೂ ಆಗಿರುವ ಸಪ್ನಾ ಚೌಧರಿ (Sapna Chaudhary) ಕೊನೆಗೂ ಲಖನೌ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ (Surrender). ವಂಚನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಸಪ್ನಾಗೆ ನ್ಯಾಯಾಲಯವು ಬಂಧನ ವಾರೆಂಟ್ (Warrant) ಜಾರಿ ಮಾಡಿತ್ತು. ಹಾಗಾಗಿ ಸಪ್ನಾಗಾಗಿ ಪೊಲೀಸರು ಬಲೆ ಬೀಸಿದ್ದರು. ಹುಡುಕಾಟ ಕೂಡ ನಡೆದಿತ್ತು.

    2018ರಲ್ಲಿ ಇವೆಂಟ್ ಮಾಡಿಕೊಡಲು ಒಪ್ಪಿಕೊಂಡಿದ್ದ ಸಪ್ನಾ, ಗಾಯನ ಮತ್ತು ನೃತ್ಯಕ್ಕಾಗಿ ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. ಆದರೆ, ಆ ಕಾರ್ಯಕ್ರಮವನ್ನು ಅವರಿಂದ ಮಾಡಿಕೊಡಲು ಸಾಧ್ಯವಾಗಲಿಲ್ಲ. ಅಲ್ಲದೇ, ಪಡೆದಿದ್ದ ಸಂಭಾವನೆಯನ್ನೂ ಅವರು ಹಿಂದಿರುಗಿಸಲಿಲ್ಲ. ಕೊನೆ ಕ್ಷಣದಲ್ಲಿ ಕಾರ್ಯಕ್ರಮವನ್ನು ಮಾಡದೇ ಇರುವ ಕಾರಣಕ್ಕಾಗಿ ಆಯೋಜಕರಿಗೆ ಸಾಕಷ್ಟು ನಷ್ಟವಾಗಿತ್ತು. ಹಾಗಾಗಿ ತಮಗೆ ವಂಚನೆ (Cheating) ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದನ್ನೂ  ಓದಿ:ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್

    ಈ ಹಿಂದಿನ ವಿಚಾರಣೆಗಳಿಗೆ ಸಪ್ನ ಹಾಜರಾಗದೇ ಇರುವ ಕಾರಣಕ್ಕಾಗಿ ಲಖನೌನ (Lucknow) ಮ್ಯಾಜಿಸ್ಟ್ರೇಟ್ ಕೋರ್ಟ್ (Court) ಬಂಧನ (Arrest) ವಾರೆಂಟ್ ಜಾರಿ ಮಾಡಿತ್ತು. ನಿನ್ನೆ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಿ, ತಮ್ಮಿಂದ ಯಾವುದೇ ತಪ್ಪು ಆಗಿಲ್ಲ, ತಾವು ವಂಚನೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ಜಾರಿ ಆಗಿರುವ ಬಂಧನ ವಾರೆಂಟ್ ಅನ್ನು ರದ್ದು ಮಾಡುವಂತೆ ಅವರು ಮನವಿಯನ್ನೂ ಮಾಡಿಕೊಂಡಿದ್ದಾರೆ.

    ಸಪ್ನಾ ಹೇಳಿಕೆಯನ್ನು ಆಲಿಸಿದ ಕೋರ್ಟ್ ಸದ್ಯ ಅರೆಸ್ಟ್ ವಾರೆಂಟ್ ರದ್ದು ಮಾಡಿದ್ದು ಮತ್ತೆ ಸೆಪ್ಟೆಂಬರ್ 30ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 14 ಅಕ್ಟೋಬರ್ 2018ರಂದು ಸಪ್ನಾ ವಿರುದ್ಧ ದೂರು ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸಪ್ನಾ ಕೋರ್ಟಿಗೆ ಹಾಜರಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂ ದೇವರ ಅಪಹಾಸ್ಯ: ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

    ಹಿಂದೂ ದೇವರ ಅಪಹಾಸ್ಯ: ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

    ಬಾಲಿವುಡ್ ನಟ ಅಜಯ ದೇವಗನ್ (Ajay devgan)ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾವನ್ನು ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ. ಈ ಸಿನಿಮಾದಲ್ಲಿ ಹಿಂದೂ ದೇವರನ್ನು ಅಪಹಾಸ್ಯ ಮಾಡಲಾಗಿದ್ದು, ಇಂತಹ ಚಿತ್ರಗಳನ್ನು ಸೆನ್ಸಾರ್ ಮಂಡಳಿಯವರು ಬಿಡುಗಡೆ ಮಾಡಲು ಹೇಗೆ ಅನುಮತಿ ನೀಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಟ್ರೈಲರ್ ಗೂ ಕೂಡ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಸಿನಿಮಾದ ದೃಶ್ಯವನ್ನು ನೋಡುವಾಗ ಸೆನ್ಸಾರ್ ಮಂಡಳಿ ನಿದ್ದೆ ಮಾಡುತ್ತಿತ್ತೆ? ಎಂದಿದ್ದಾರೆ ಹಿಂದೂ ಜನ ಜಾಗತಿ ಸದಸ್ಯರು.

    ಬಿಡುಗಡೆಯಾದ ಟ್ರೇಲರ್ ನಲ್ಲಿ ಹಿಂದೂ ಧರ್ಮದಲ್ಲಿ ಮೃತ್ಯುವಿನ ನಂತರ ಪ್ರತಿಯೊಬ್ಬರ ಪಾಪ-ಪುಣ್ಯಗಳನ್ನು ಲೆಕ್ಕ ಹಾಕುವ ‘ಚಿತ್ರಗುಪ್ತ’ ದೇವರು ಮತ್ತು ಮೃತ್ಯುವಿನ ನಂತರ ಆತ್ಮವನ್ನು ತೆಗೆದುಕೊಂಡು ಹೋಗುವ ಯಮದೇವನನ್ನು ಆಧುನಿಕ ರೂಪದಲ್ಲಿ ತೋರಿಸಲಾಗಿದೆ. ಅವರನ್ನು ನಿಷ್ಪ್ರಯೋಜಕ ಹಾಸ್ಯದ ಮಾತುಗಳನ್ನಾಡುವಂತೆ ಚಿತ್ರಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಚಿತ್ರಗುಪ್ತ ಮತ್ತು ಯಮ ದೇವರ ಅಪಹಾಸ್ಯವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ ಹಿಂದೂ ಜನ ಜಾಗೃತಿಯ ಸದಸ್ಯರು. ಇದನ್ನೂ ಓದಿ:ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್

    ನಿನ್ನೆಯಷ್ಟೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟ ಅಜಯ್ ದೇವಗನ್ ಸೇರಿದಂತೆ ಮೂವರು ಮೇಲೆ ದೂರು (Complaint) ದಾಖಲಾಗಿದೆ. ಇನ್ನೆಷ್ಟೇ ರಿಲೀಸ್ ಆಗಬೇಕಿರುವ ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ (Thank god) ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸನ್ನಿವೇಶವಿದೆ ಎಂದು ಹಿಮಾಂಶು ಶ್ರೀವಾಸ್ತವ್ ಎನ್ನುವವರು ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಮೋನಿಕಾ ಮಿಶ್ರಾ ಅವರ ನ್ಯಾಯಾಲದಲ್ಲಿ (Court) ಪ್ರಕರಣ ದಾಖಲಾಗಿದೆ.

    ಥ್ಯಾಂಕ್ ಗಾಡ್ ಸಿನಿಮಾದಲ್ಲಿ ಚಿತ್ರಗುಪ್ತ ದೇವರನ್ನು ಪೂಜಿಸುವ ಕಾಯಸ್ಥ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಮಾಂಶು 9Himanshu Srivastav) ಆರೋಪ ಮಾಡಿದ್ದು, ಚಿತ್ರದ ನಟ ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಇಂದ್ರ ಕುಮಾರ್ ಮೇಲೆ ದೂರು ನೀಡಿದ್ದರು. ಹಿಮಾಂಶು ಅವರ ಹೇಳಿಕೆಯನ್ನು ದಾಖಲಿಸಲು ನ್ಯಾಯಾಧೀಶರು ನವೆಂಬರ್ 18 ದಿನಾಂಕ ನಿಗದಿ ಮಾಡಿದ್ದಾರೆ.

    ಅಜಯ್ ದೇವಗನ್ ಮುಖ್ಯ ಭೂಮಿಕೆಯ ಥ್ಯಾಂಕ್ ಗಾಡ್ ಸಿನಿಮಾ ತನ್ನದೇ ಆದ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ನೀಡುವಂತಹ ಸಿನಿಮಾ ಇದಾಗಿದೆ. ಅಜಯ್ ದೇವಗನ್ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅಕ್ಟೋಬರ್ 25ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಟ್ರೈಲರ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

    ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

    ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ಸೇರಿದಂತೆ ಮೂವರು ಮೇಲೆ ದೂರು ದಾಖಲಾಗಿದೆ. ಇನ್ನೆಷ್ಟೇ ರಿಲೀಸ್ ಆಗಬೇಕಿರುವ ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸನ್ನಿವೇಶವಿದೆ ಎಂದು ಹಿಮಾಂಶು ಶ್ರೀವಾಸ್ತವ್ ಎನ್ನುವವರು ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಮೋನಿಕಾ ಮಿಶ್ರಾ ಅವರ ನ್ಯಾಯಾಲದಲ್ಲಿ ಪ್ರಕರಣ (Complaint)  ದಾಖಲಾಗಿದೆ.

    ಥ್ಯಾಂಕ್ ಗಾಡ್ (Thank God) ಸಿನಿಮಾದಲ್ಲಿ ಚಿತ್ರಗುಪ್ತ ದೇವರನ್ನು ಪೂಜಿಸುವ ಕಾಯಸ್ಥ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಮಾಂಶು ಆರೋಪ ಮಾಡಿದ್ದು, ಚಿತ್ರದ ನಟ ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಇಂದ್ರ ಕುಮಾರ್ ಮೇಲೆ ದೂರು ನೀಡಿದ್ದರು. ಹಿಮಾಂಶು (Himanshu Srivastav) ಅವರ ಹೇಳಿಕೆಯನ್ನು ದಾಖಲಿಸಲು ನ್ಯಾಯಾಧೀಶರು ನವೆಂಬರ್ 18 ದಿನಾಂಕ ನಿಗದಿ ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್‌ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್‌

    ಅಜಯ್ ದೇವಗನ್ ಮುಖ್ಯ ಭೂಮಿಕೆಯ ಥ್ಯಾಂಕ್ ಗಾಡ್ ಸಿನಿಮಾ ತನ್ನದೇ ಆದ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ನೀಡುವಂತಹ ಸಿನಿಮಾ ಇದಾಗಿದೆ. ಅಜಯ್ ದೇವಗನ್ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅಕ್ಟೋಬರ್ 25ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಟ್ರೈಲರ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಗರ್ಭಿಣಿ ಪತ್ನಿ ಹತ್ಯೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

    ಗರ್ಭಿಣಿ ಪತ್ನಿ ಹತ್ಯೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

    ಚಾಮರಾಜನಗರ: ಗರ್ಭಿಣಿ ಪತ್ನಿಗೆ(Pregnant Wife) ಜ್ಯೂಸ್‍ನೊಂದಿಗೆ ಮದ್ಯ ಕುಡಿಸಿ ಬಳಿಕ ಕತ್ತು ಹಿಸುಕಿ ಕೊಂದಿದ್ದ ಪತಿಗೆ ಚಾಮರಾಜನಗರ(Chamarajanagara) ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ(Life imprisonment) ವಿಧಿಸಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ರಾಚಪ್ಪಾಜಿನಗರದ ಮುತ್ತುರಾಜ್ ಶಿಕ್ಷೆಗೊಳಗಾಗಿರುವ ಅಪರಾಧಿ. ಕಳೆದ 2013ರಲ್ಲಿ ಗರ್ಭಿಣಿ ಪತ್ನಿ ಕೊಂದ ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ(B.S.Bharathi) ಅವರು ಮುತ್ತುರಾಜ್‍ಗೆ(Mutturaj) ಜೀವಾವಧಿ ಶಿಕ್ಷೆ ಮತ್ತು 2.10 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ಮುತ್ತುರಾಜ್ ಟ್ರಾಕ್ಟರ್ ಚಾಲಕನಾಗಿದ್ದು, ಅದೇ ಗ್ರಾಮದ ಜ್ಯೋತಿ(Jyothi) ಎಂಬ ಅನ್ಯಜಾತಿಯ ಯುವತಿಯನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದ. ಬಳಿಕ, ತಗಾದೆ ತೆಗೆದು ಪತ್ನಿ ಜೊತೆ ನಿತ್ಯ ರಂಪಾಟ ಮಾಡುತ್ತಿದ್ದ. ಈ ಮಧ್ಯೆ ಜ್ಯೋತಿ 3 ತಿಂಗಳ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾಗಿರುವುದರಿಂದ ತವರು ಮನೆಗೆ ಹೋಗಿ ಬಾರೋಣಾ ಎಂದು ಪುಸಲಾಯಿಸಿ ಬೈಕಿನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಜ್ಯೂಸ್(Juice) ನೊಟ್ಟಿಗೆ ಮದ್ಯ(Liquor) ಸೇರಿಸಿ ಕುಡಿಸಿ ಬಳಿಕ ಆಕೆಯ ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದನು.

    ಗುರುತು ಪತ್ತೆಯಾಗದಿರಲೆಂದು ಎಡಕೆನ್ನೆಯನ್ನೇ ಸುಟ್ಟು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುತ್ತುರಾಜ್‍ನನ್ನು ಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನಿರಂತರ ವಿಚಾರಣೆ ನಡೆದು ಮುತ್ತುರಾಜ್‍ನ(Mutturajan) ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು(Judge) ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಟಿ.ಹೆಚ್.ಲೋಲಾಕ್ಷಿ ವಾದ ಮಂಡಿಸಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಇಬ್ಬರು ಉಗ್ರರು ಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಕಲಬುರಗಿ ಪಾಲಿಕೆ ವಿಜೇತನ ಸದಸ್ಯತ್ವ ಅಸಿಂಧು

    ಕಲಬುರಗಿ ಪಾಲಿಕೆ ವಿಜೇತನ ಸದಸ್ಯತ್ವ ಅಸಿಂಧು

    ಕಲಬುರಗಿ: ಜಿಲ್ಲೆಯ ಮಹಾನಗರ ಪಾಲಿಕೆಯ(Municipal Corporation) ವಾರ್ಡ್‌ ನಂ. 36ರ ವಿಜೇತ ಅಭ್ಯರ್ಥಿ ಆಯ್ಕೆ ಅಸಿಂಧುವಾಗಿದೆ ಎಂದು ಕಲಬುರಗಿ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

    ಪಾಲಿಕೆ ವಿಜೇತ ಅಭ್ಯರ್ಥಿ ಶಂಭುಲಿಂಗ ಬಳಬಟ್ಟಿ ಆಯ್ಕೆ ಅಸಿಂಧುಗೊಂಡಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ, ಶಂಭುಲಿಂಗ ಬಳಬಟ್ಟಿ ಜಯಗಳಿಸಿದ್ದರು. ಸುಳ್ಳು ಅಫಿಡವಿಟ್ ಸಲ್ಲಿಸಿದ್ದರಿಂದ ಆಯ್ಕೆ ಅಸಿಂಧುವಾಗಿದೆ. ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಆಸ್ತಿ, ವಿದ್ಯಾರ್ಹತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಬಿಜೆಪಿಯ(BJP) ಅಭ್ಯರ್ಥಿ ಸೂರಜ್ ತಿವಾರಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಇದನ್ನೂ ಓದಿ:  ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಕೇಸ್ – ಮಗಳ ಮದ್ವೆಗೆ ನನ್ನ ಸಂಪೂರ್ಣ ಒಪ್ಪಿಗೆಯಿದೆ ಎಂದ ತಾಯಿ

    ಇದೀಗ ನ್ಯಾಯಾಲಯ(Court) ತೀರ್ಪನ್ನು ನೀಡಿದ್ದು, ಶಂಭುಲಿಂಗ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿದೆ. ಚುನಾವಣೆ ನಡೆದು ಹಲವು ತಿಂಗಳು ಕಳೆದರೂ ಈವರೆಗೂ ಮೇಯರ್‌ ಆಯ್ಕೆ ಆಗಿಲ್ಲ. ಇದನ್ನೂ ಓದಿ: ಕೋಳಿವಾಡ ಸಮಿತಿಯಿಂದ್ಲೇ ಬಾಗ್ಮನೆ ಒತ್ತುವರಿ ಬಯಲು

    Live Tv
    [brid partner=56869869 player=32851 video=960834 autoplay=true]

  • ದಯವಿಟ್ಟು ನನ್ನನ್ನು ಬದುಕಲು ಬಿಡಿ: ವಿಚಾರಣೆ ವೇಳೆ ಕಣ್ಣೀರು ಹಾಕಿದ ಪಾರ್ಥ ಚಟರ್ಜಿ

    ದಯವಿಟ್ಟು ನನ್ನನ್ನು ಬದುಕಲು ಬಿಡಿ: ವಿಚಾರಣೆ ವೇಳೆ ಕಣ್ಣೀರು ಹಾಕಿದ ಪಾರ್ಥ ಚಟರ್ಜಿ

    ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣದ(Teacher Recruitment Scam) ವಿಚಾರಣೆ ಸಂದರ್ಭ ಪಶ್ಚಿಮ ಬಂಗಾಳದ(West Bengal) ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ(Partha Chatterjee) ಅವರು, ನನಗೆ ಜಾಮೀನು ಕೊಡಿ, ನನ್ನನ್ನು ಬದುಕಲು ಬಿಡಿ ಎಂದು ನ್ಯಾಯಾಲಯದ(Court) ಮುಂದೆ ಕಣ್ಣಿರು ಹಾಕಿದ್ದಾರೆ.

    ಬುಧವಾರ ಪಾರ್ಥ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ(Arpita Mukherjee) ನ್ಯಾಯಾಲಯಕ್ಕೆ ಹಾಜರಾಗಿದ್ದರೆ, ಪಾರ್ಥ ಚಟರ್ಜಿ 14 ದಿನಗಳ ಬಂಧನದ ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.

    ಪಾರ್ಥ ಅವರ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದ್ದ ಸಂದರ್ಭ ಚಟರ್ಜಿ ತಮ್ಮ ಅಳಲು ತೋಡಿಕೊಂಡು ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.

    ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದ ಆರೋಪದ ಮೇಲೆ ಪಾರ್ಥ ಚಟರ್ಜಿ ಅವರನ್ನು ಜುಲೈ 23 ರಂದು ಬಂಧಿಸಲಾಗಿತ್ತು. 3 ಸುತ್ತಿನ ಇಡಿ ವಿಚಾರಣೆಯ ಬಳಿಕ ಪ್ರಸ್ತುತ ಅವರನ್ನು ಪ್ರೆಸಿಡೆನ್ಸಿ ಜೈಲಿನಲ್ಲಿ ಇರಿಸಲಾಗಿದೆ. ವರ್ಚುವಲ್ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶ ಬಿದ್ಯುತ್ ಕುಮಾರ್ ರಾಯ್, ಪಾರ್ಥ ಅವರು ಬಯಸಿದರೆ ಏನು ಬೇಕಾದರೂ ಹೇಳಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಂಗೂಲಿ, ಜಯ್‌ ಶಾಗೆ ಸುಪ್ರೀಂನಿಂದ ಬಿಗ್‌ ರಿಲೀಫ್‌ – ಐಸಿಸಿಯ ಬಾಸ್‌ ಆಗ್ತಾರಾ ದಾದಾ?

    ಪಾರ್ಥ ವಕೀಲರು, ದಿನಕ್ಕೆ 3 ಬಾರಿ ಔಷಧಿ ತೆಗೆದುಕೊಳ್ಳಬೇಕು. ಅವರಿಗೆ ನಿಯಮಿತ ಚಿಕಿತ್ಸೆಯ ಅಗತ್ಯವಿದೆ. ತನಿಖಾಧಿಕಾರಿಗಳು ಅವರ ಮನೆಯಲ್ಲಿ 30 ಗಂಟೆಗಳ ಕಾಲ ಹುಡುಕಾಡಿದರೂ ಏನೂ ಪತ್ತೆಯಾಗಿರಲಿಲ್ಲ. ಆದರೂ ಅವರಿಗೆ ಜಾಮೀನು ಸಿಕ್ಕಿಲ್ಲ ಯಾಕೆ ಎಂದು ಪ್ರಶ್ನಿಸಿದರು.

    ಮೂಲಗಳ ಪ್ರಕಾರ ಹಲವು ಅಕ್ರಮ ವಹಿವಾಟುಗಳು ಪತ್ತೆಯಾಗಿವೆ. ಹಲವಾರು ಆಸ್ತಿಗಳು ಮತ್ತು ದಾಖಲೆಗಳ ಸ್ಥಳಗಳು ಸಹ ಪತ್ತೆಯಾಗಿವೆ. ಇವರ ಮೂಲಕ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳಲಾಗಿದೆ ಎಂದು ಇಡಿ ನ್ಯಾಯಾಲಯದಲ್ಲಿ ವಾದಿಸಿದೆ. ಇದುವರೆಗೆ ಪತ್ತೆಯಾಗಿರುವ ನೂರಾರು ಬ್ಯಾಂಕ್ ಖಾತೆಗಳನ್ನು ಉಲ್ಲೇಖಿಸಿದ ಇಡಿ ವಕೀಲರು, ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಪಾರ್ಥ ಮತ್ತು ಅರ್ಪಿತಾರನ್ನು ಬಿಡುಗಡೆ ಮಾಡಬಾರದು. ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯಿದೆ ಎಂದು ವಾದಿಸಿದರು. ಇದನ್ನೂ ಓದಿ: 6 ವಾರದೊಳಗೆ ಸರ್ಕಾರಿ ಬಂಗಲೆಯನ್ನು ತೊರೆಯಿರಿ – ಸುಬ್ರಮಣಿಯನ್ ಸ್ವಾಮಿಗೆ ಕೋರ್ಟ್ ಗಡುವು

    Live Tv
    [brid partner=56869869 player=32851 video=960834 autoplay=true]

  • ರಾಜಕಾಲುವೆ ಅತಿಕ್ರಮ ತೆರವು ಕಾರ್ಯಾಚರಣೆ – ಭೇದಭಾವದ ಪ್ರಶ್ನೆಯೇ ಇಲ್ಲವೆಂದ ಸಿಎಂ

    ರಾಜಕಾಲುವೆ ಅತಿಕ್ರಮ ತೆರವು ಕಾರ್ಯಾಚರಣೆ – ಭೇದಭಾವದ ಪ್ರಶ್ನೆಯೇ ಇಲ್ಲವೆಂದ ಸಿಎಂ

    ಬೆಂಗಳೂರು: ರಾಜಕಾಲುವೆ (Rajkaluve) ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಭೇದಭಾವ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾಲುವೆ ಮೇಲೆ ಕಟ್ಟಡ, ಮನೆ ಕಟ್ಟಿರುವವರು, ಜೊತೆಗೆ ಯಾರು ಕಾಲುವೆ ನೀರನ್ನು ಹರಿಸಲು ತೊಂದರೆ ಮಾಡಿದ್ದಾರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೆಲವರು ರಾಜಕಾಲುವೆಯನ್ನು (Rajkaluve) ಮುಚ್ಚಿದ್ದಾರೆ. ಮಳೆ ನೀರು ಚರಂಡಿಗೆ ಅಡ್ಡಿಯಾಗಿದ್ದರೆ, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ತೆರವಿಗೆ ನೋಟಿಸ್ ಕೊಡುವ ಅಗತ್ಯವಿಲ್ಲ: ಅಶೋಕ್

    ಪ್ರವಾಹ ಬಂದಾಗ ಐಟಿಬಿಟಿಯವರು (ITBT) ಸೇರಿದಂತೆ ಎಲ್ಲರಿಗೂ ತೊಂದರೆಯಾಗಿದೆ. ಜನಸಾಮಾನ್ಯರು, ಕೆಳಹಂತದ ಮನೆಗಳಿಗೂ ತೊಂದರೆಯಾಗಿದೆ. ಇವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯ ರಸ್ತೆ ಬದಿ ಮಣ್ಣು ಕುಸಿತ – ಘನ ವಾಹನ ಸಂಚಾರ ನಿಷೇಧ ಹೇರಲು ಆಗ್ರಹ

    ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿ (Court) ದಾಖಲಾಗಿ ನಿರ್ದೇಶನ ಪಡೆಯಲಾಗಿದೆ. ನ್ಯಾಯಾಲಯದಲ್ಲಿಯೂ ಗಂಭೀರವಾಗಿ ಇವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ನ್ಯಾಯಾಲಯವೂ ಪ್ರವಾಹದ ಪ್ರಕರಣದಲ್ಲಿ ನಿರ್ದೇಶನಗಳನ್ನು ನೀಡಿದೆ. ಈ ಬಾರಿ ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣ ತೆರೆವುಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

    ಪಿಎಸ್‌ಐ ನೇಮಕಾತಿ: ಪಿಎಸ್‌ಐ (PSI) ಅಕ್ರಮ ನೇಮಕಾತಿ ಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಮಾತನಾಡಿರುವ ವೀಡಿಯೊ (Video) ಬಿಡುಗಡೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಆಡಿಯೋನೋ, ವೀಡಿಯೋನೋ ಗೊತ್ತಿಲ್ಲ. ಅದನ್ನು ಪರಿಶೀಲಿಸಲಾಗುವುದು. ಹಾಗೇನಾದರೂ ತಪ್ಪು ಕಂಡುಬಂದಲ್ಲಿ ತನಿಖೆಗೆ ಆದೇಶಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೂಡಿಕೆದಾರರಿಂದ ಹಣ ಪಡೆದು ವಂಚನೆ – ಮಂತ್ರಿ ಡೆವಲಪರ್ಸ್‌ MD ಸುಶೀಲ್, ಮಗ ಅರೆಸ್ಟ್

    ಹೂಡಿಕೆದಾರರಿಂದ ಹಣ ಪಡೆದು ವಂಚನೆ – ಮಂತ್ರಿ ಡೆವಲಪರ್ಸ್‌ MD ಸುಶೀಲ್, ಮಗ ಅರೆಸ್ಟ್

    ಬೆಂಗಳೂರು: ಮಂತ್ರಿ ಡೆವಲಪರ್ಸ್‌ ಎಂ.ಡಿ ಸುಶೀಲ್ ಮಂತ್ರಿ ಮತ್ತು ಪುತ್ರ ಪ್ರತೀಕ್ ಮಂತ್ರಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

    ಸೈಟ್, ಫ್ಲ್ಯಾಟ್ ನೀಡುವುದಾಗಿ ಹೂಡಿಕೆದಾರರಿಂದ ಹಣ ಪಡೆದು ವಂಚನೆ ಮಾಡಿರುವ ಆರೋಪದ ಅಡಿಯಲ್ಲಿ ತನಿಖೆ ನಡೆಸುತ್ತಿದ್ದ ಸಿಐಡಿ ನಿನ್ನೆ ರಾತ್ರಿ ಸುಶೀಲ್ ಮಂತ್ರಿಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿತ್ತು. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ನಿಧನ – ನಾಳೆ ಕರ್ನಾಟಕದಲ್ಲೂ ಶೋಕಾಚರಣೆ

    ಇಂದು ಮತ್ತು ನಾಳೆ ಕೋರ್ಟ್ ರಜೆ ಇರುವ ಕಾರಣ ಸೆ.12ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಸುಶೀಲ್ ಮಂತ್ರಿ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿದ್ದವು.

    Live Tv
    [brid partner=56869869 player=32851 video=960834 autoplay=true]

  • ಒಂದು ವರ್ಷವಿದ್ದಾಗ ಮದುವೆ – 21 ವರ್ಷದ ಬಳಿಕ ಯುವತಿಯ ಮದುವೆ ರದ್ದು

    ಒಂದು ವರ್ಷವಿದ್ದಾಗ ಮದುವೆ – 21 ವರ್ಷದ ಬಳಿಕ ಯುವತಿಯ ಮದುವೆ ರದ್ದು

    ಜೈಪುರ: 1 ವರ್ಷದ ಮಗುವಾಗಿದ್ದಾಗ ನಡೆದ ಮದುವೆ ರದ್ದಾಗಿದ್ದು 21 ವರ್ಷದ ಯುವತಿಗೆ ಹುಟ್ಟುಹಬ್ಬದ ದಿನವೇ ನ್ಯಾಯಾಲಯದಿಂದ(Court) ನ್ಯಾಯ ಸಿಕ್ಕಿದೆ.

    ಜೋಧಪುರದ(Jodhpur) ಹಳ್ಳಿಯೊಂದರ ನಿವಾಸಿ ರೇಖಾಗೆ 1 ವರ್ಷವಾಗಿದ್ದಾಗ ಆಕೆಯ ಕುಟುಂಬಸ್ಥರು ಮದುವೆ ಮಾಡಿಸಿದ್ದರು. ಇತ್ತೀಚೆಗೆ ಆಕೆಯ ಅತ್ತೆಯ ಕುಟುಂಬವು ಗೌನಾ(ಹುಡುಗನ ಮನೆಗೆ ಬರುವ ಸಂಪ್ರದಾಯ) ಆಚರಣೆಗೆ ಬರುವಂತೆ ಒತ್ತಡವನ್ನು ಹೇರಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ರೇಖಾಳಿಗೆ ಈಗ ನ್ಯಾಯ ದೊರೆತಿದೆ.

    ಏನಿದು ಪ್ರಕರಣ?: ರೇಖಾಳ ಅಜ್ಜ 2002ರಲ್ಲಿ ನಿಧನ ಹೊಂದಿದ್ದರು. ಆಗಿನ್ನು ರೇಖಾಳಿಗೆ ಕೇವಲ ಒಂದು ವರ್ಷ ವಯಸ್ಸಾಗಿತ್ತು. ಅದೇ ಸಂದರ್ಭದಲ್ಲಿ ರೇಖಾಳನ್ನು ಅದೇ ಗ್ರಾಮದ ಹುಡುಗನ ಜೊತೆ ಮದುವೆ ಮಾಡಿಸಿದ್ದರು. ಇದಾದ ನಂತರ ಆಕೆಯನ್ನು ಅತ್ತೆಮನೆಗೆ ಕಳಿಸಿರಲಿಲ್ಲ. ಬದಲಾಗಿ ಯಾವುದೇ ತೊಂದರೆಯಿಲ್ಲದೇ ತನ್ನ ಮನೆಯಲ್ಲೇ ಆಟವಾಡಿಕೊಂಡು ಚೆನ್ನಾಗಿ ಓದಿಕೊಂಡಿದ್ದಳು. ಅಷ್ಟೇ ಅಲ್ಲದೇ ಆಕೆಯ ಅತ್ತೆ ಮನೆಯಿಂದ ಯಾವುದೇ ತೊಂದರೆಯೂ ಆಗಿರಲಿಲ್ಲ.

    ಆಕೆಗೆ 18 ವರ್ಷ ತುಂಬಿದಾಗ ಆಕೆಯ ಅತ್ತೆಯ ಮನೆಯವರು ಧಾರ್ಮಿಕ ವಿಧಿ ವಿಧಾನದಂತೆ ಮನೆ ತುಂಬಿಸಿಕೊಳ್ಳಬೇಕು ಒಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ರೇಖಾಗೆ ತಾನು ಚೆನ್ನಾಗಿ ಓದಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸಿಗೆ ಧಕ್ಕೆ ಉಂಟಾಯಿತು. ಇದರಿಂದಾಗಿ ಆಕೆ ಹುಡುಗನ ಮನೆಗೆ ಹೋಗಲು ನಿರಾಕರಿಸಿದ್ದಳು. ಅಷ್ಟೇ ಅಲ್ಲದೇ ತನಗೆ ಒಂದು ವರ್ಷ ಇದ್ದಾಗ ಮದುವೆ ಆಗಿತ್ತು. ಇದರಿಂದಾಗಿ ಈ ಮದುವೆಯನ್ನು ನಾನು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು.

    STOP CHILD MARRIAGE

    ಮದುವೆ ವಿರೋಧಿಸಿದ್ದಕ್ಕೆ ಹುಡುಗನ ಮನೆಯವರು ಜಾತಿ ಪಂಚಾಯಿತಿಯನ್ನು ಕರೆದರು. ಅಷ್ಟೇ ಅಲ್ಲದೇ ಮದುವೆಯನ್ನು ನಿರಾಕರಿಸಿದ್ದಕ್ಕೆ 10 ಲಕ್ಷ ರೂ. ದಂಡವನ್ನು ಹಾಕಿ ಆಕೆಯ ಕುಟುಂಬಕ್ಕೆ ಬೆದರಿಕೆಯನ್ನು ಒಡ್ಡಲಾಗಿತ್ತು. ಇದನ್ನೂ ಓದಿ: ಕ್ಯಾಮೆರಾವನ್ನು ಲೆಕ್ಕಿಸದೇ ಕಿತ್ತಾಡಿದ ಮಹಿಳಾ ಆಯೋಗದ ಅಧ್ಯಕ್ಷೆ – ಪೊಲೀಸ್ ಅಧಿಕಾರಿ

    ಈ ಘಟನೆಯ ಬಳಿಕ ರೇಖಾ ಸಹಾಯಕ್ಕಾಗಿ ಮ್ಯಾನೇಜಿಂಗ್ ಟ್ರಸ್ಟಿಯನ್ನು ಸಂಪರ್ಕಿಸಿದ್ದಾಳೆ. ಆಗ ಟ್ರಸ್ಟ್‌ನವರು ಬಾಲ್ಯವಿವಾಹವನ್ನು(Child Marriage) ರದ್ದುಗೊಳಿಸುವಂತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲಿ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಪ್ರದೀಪ್ ಕುಮಾರ್ ಮೋದಿ ಅವರು ಮದುವೆಯನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದರು. ಇದನ್ನೂ ಓದಿ: ನನಗೆ ಜ್ವರ ಇತ್ತು: ತೆಪ್ಪದಲ್ಲಿ ಪ್ರವಾಹ ವೀಕ್ಷಣೆಗೆ ಮಹೇಶ್‌ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]

  • ಕೋರ್ಟ್ ಮುಂದೆಯೇ ರೌಡಿಶೀಟರ್ ಮೇಲೆ ಅಟ್ಯಾಕ್ – ದುಷ್ಕರ್ಮಿಗಳನ್ನು ಹಿಡಿದು ಠಾಣೆಗೆ ದಬ್ಬಿದ ಪೊಲೀಸ್ರು

    ಕೋರ್ಟ್ ಮುಂದೆಯೇ ರೌಡಿಶೀಟರ್ ಮೇಲೆ ಅಟ್ಯಾಕ್ – ದುಷ್ಕರ್ಮಿಗಳನ್ನು ಹಿಡಿದು ಠಾಣೆಗೆ ದಬ್ಬಿದ ಪೊಲೀಸ್ರು

    ಚೆನ್ನೈ: ನಗರದ ನ್ಯಾಯಾಲಯದ ಹೊರಗೆ ಹೊಂಚು ಹಾಕಿ ಕುಳಿತಿದ್ದ ಐವರು ದುಷ್ಕರ್ಮಿಗಳು ಹಳೆಯ ರೌಡಿ ಶೀಟರ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಹತ್ಯೆಗೈಯ್ಯಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಚೆನ್ನೈ ಪೊಲೀಸರು ತಮ್ಮ ಚಾಣಕ್ಷತನದಿಂದ ನಡೆಯುತ್ತಿದ್ದ ಕೊಲೆಯನ್ನು ತಪ್ಪಿಸಿದ್ದಾರೆ.

    POLICE JEEP

    ಛತ್ತೀಸ್‌ಗಢದ ಹಲವು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರೌಡಿಶೀಟರ್ ಬಾಲನನ್ನು ಪೊಲೀಸರು ಬಂಧಿಸಿದ್ದರು. ಆದರೆ ಇತ್ತೀಚೆಗಷ್ಟೇ ನಗರದ ನ್ಯಾಯಾಲಯದ ಹೊರಗೆ ಹಳೆ ವೈಷಮ್ಯದ ಹಿನ್ನೆಲೆ ದುಷ್ಕರ್ಮಿಗಳು ಮಧುರೈ ಮೂಲದ ರೌಡಿ ಶೀಟರ್ ಬಾಲನ ಅಟ್ಯಾಕ್ ಮಾಡಿದ್ದು, ಈ ವೇಳೆ ಹತ್ಯೆಗೀಡಾಗುತ್ತಿದ್ದ ರೌಡಿಶೀಟರ್ ಅನ್ನು ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೇ ಕೊಲ್ಲಲು ಬಂದ ಐವರಲ್ಲಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಸ್ವಚ್ಛ ಭಾರತ್ ಬೆಂಗಳೂರು ಎಲ್ಲಿಗೆ ಹೋಗಿದೆ? ಬೀದಿಯಲ್ಲಿ ಕಸ ಬಿದ್ದು ಕೊಳೆಯುತ್ತಿದೆ: ಡಿಕೆ ಸುರೇಶ್‌

    ಇದೀಗ ಬಂಧಿತ ಮೂವರು ಆರೋಪಿಗಳನ್ನು ಕೊಟ್ಟೂರುಪುರಂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಇದನ್ನೂ ಓದಿ: ಹಿಂದೂ ಧರ್ಮ ಒಡೆಯುವುದು, ಮತಾಂತರ ಮಾಡುವುದೇ ಒಡನಾಡಿಯ ಉದ್ದೇಶ: ಮಠದ ಸದಸ್ಯ ಕಿಡಿ

    Live Tv
    [brid partner=56869869 player=32851 video=960834 autoplay=true]