Tag: court

  • ಐಸಿಸ್‌ಗೆ ಭಾರೀ ಆರ್ಥಿಕ ಸಹಾಯ – ಕೋರ್ಟ್‌ ಮುಂದೆ ಫ್ರಾನ್ಸ್‌ ಸಿಮೆಂಟ್‌ ಕಂಪನಿಯಿಂದ ತಪ್ಪೊಪ್ಪಿಗೆ

    ಐಸಿಸ್‌ಗೆ ಭಾರೀ ಆರ್ಥಿಕ ಸಹಾಯ – ಕೋರ್ಟ್‌ ಮುಂದೆ ಫ್ರಾನ್ಸ್‌ ಸಿಮೆಂಟ್‌ ಕಂಪನಿಯಿಂದ ತಪ್ಪೊಪ್ಪಿಗೆ

    ನ್ಯೂಯಾರ್ಕ್: ಐಸಿಸ್‌(ISIS) ಸೇರಿದಂತೆ ಅಮೆರಿಕದಿಂದ ನಿಷೇಧಕ್ಕೆ ಒಳಗಾಗಿರುವ ಉಗ್ರ ಸಂಘಟನೆಗಳಿಗೆ ಫ್ರಾನ್ಸ್‌ನಲ್ಲಿರುವ ದೊಡ್ಡ ಸಿಮೆಂಟ್‌ ಕಂಪನಿ(French Cement Company) ಆರ್ಥಿಕ ಸಹಾಯ ಮಾಡಿದ್ದನ್ನು ಒಪ್ಪಿಕೊಂಡಿದೆ.

    ಫ್ರಾನ್ಸ್‌ನ ದೊಡ್ಡ ಸಿಮೆಂಟ್ ತಯಾರಕ ಕಂಪನಿ ಲಫಾರ್ಗೆ(Lafarge) ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ್ದಾಗಿ ಅಮೆರಿಕ ಕೋರ್ಟ್(US Court) ಮುಂದೆ ತಪ್ಪೊಪ್ಪಿಕೊಂಡಿದೆ. ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯದಲ್ಲಿ ಕಂಪನಿ ಈ ಹೇಳಿಕೆ ನೀಡಿದೆ. ಕಂಪನಿಯೊಂದು ಉಗ್ರರಿಗೆ ನೆರವು ನೀಡಿದ್ದನ್ನು ಅಮೆರಿಕದಲ್ಲಿ ಒಪ್ಪಿಕೊಂಡಿದ್ದು ಇದೇ ಮೊದಲು ಎಂದು ವರದಿಯಾಗಿದೆ.  ಇದನ್ನೂ ಓದಿ: ಸಿದ್ದು ಸೋಲಿಸಲು BJP ರಣತಂತ್ರ – ವರುಣಾದಲ್ಲಿ ವಿಜಯೇಂದ್ರ ಕಣಕ್ಕಿಳಿಸಲು ಪ್ಲ್ಯಾನ್‌

    ಪ್ರತಿ ತಿಂಗಳು 816,000 ಡಾಲರ್‌ ದೇಣಿಗೆ ನೀಡಲಾಗಿದೆ ಮತ್ತು ಐಸಿಸ್‌ ನಿಯಂತ್ರಣಕ್ಕೆ ಒಳಗಾಗಿದ್ದ ಪೂರೈಕೆದಾರರಿಂದ ಕಚ್ಚಾ ವಸ್ತುಗಳನ್ನು ಖರೀದಿಸಲು 3,447,528 ಡಾಲರ್‌ ಪಾವತಿಸಲಾಗಿದೆ ಎಂದು ಹೇಳಿದೆ. ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ 778 ದಶಲಕ್ಷ ಡಾಲರ್‌(ಅಂದಾಜು 6,400 ಕೋಟಿ ರೂ). ಹಣವನ್ನು ಪಾವತಿಸಲು ಕಂಪನಿ ಸಮ್ಮತಿ ನೀಡಿದೆ.

    ಸಿರಿಯಾದಲ್ಲಿ ಲಘಾರ್ಗೆ ಸಿಮೆಂಟ್‌ ಉತ್ಪಾದನೆ ಮಾಡುತ್ತಿತ್ತು. ಅಂತ ಕಲಹದ ಸಮಯದಲ್ಲಿ ಉತ್ಪಾದನಾ ಘಟಕ ಮತ್ತು ಉದ್ಯೋಗಿಗಳನ್ನು ರಕ್ಷಿಸಲು ಆರ್ಥಿಕ ಸಹಾಯ ಮಾಡಲಾಗಿದೆ. 2013ರ ಆಗಸ್ಟ್‌ನಿಂದ 2014ರ ನವೆಂಬರ್ ವರೆಗೆ ಅಂದಿನ ಅಧಿಕಾರಿಗಳು ಸಿರಿಯಾದಲ್ಲಿನ ಸಂಘಟನೆಗಳಿಗೆ ಹಣ ನೀಡಿದ್ದರು. ಆದರೆ 2017ರಲ್ಲೇ ಇವರೆಲ್ಲ ಕಂಪನಿಯನ್ನು ತೊರೆದಿದ್ದಾರೆ ಎಂದು ಲಫಾರ್ಗೆ ಹೇಳಿದೆ.

    2015 ರಲ್ಲಿ ಲಫಾರ್ಗೆ ಕಂಪನಿಯನ್ನು ಖರೀದಿಸಿದ ಸ್ವಿಜರ್‌ಲ್ಯಾಂಡ್‌ ಹೋಲ್ಸಿಮ್‌ ಗ್ರೂಪ್‌ ಪ್ರತಿಕ್ರಿಯಿಸಿ, ಈ ಹಣದ ವ್ಯವಹಾರದಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಗಮನಕ್ಕೆ ಬಾರದೇ ಲಫಾರ್ಗೆ ಈ ವ್ಯವಹಾರ ನಡೆಸಿದೆ. ಈ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • 10ರ ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ

    10ರ ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ

    ಜೈಪುರ: 10 ವರ್ಷದ ಬಾಲಕಿಯ (Girl) ಮೇಲೆ ಅತ್ಯಾಚಾರವೆಸಗಿ ಅಮಾನುಷವಾಗಿ ಕೊಲೆ ಮಾಡಿದ್ದ ವ್ಯಕ್ತಿಗೆ ರಾಜಸ್ಥಾನದ (Rajasthan) ಪಾಲಿ ಜಿಲ್ಲೆಯ ನ್ಯಾಯಾಲಯ (Court) ಮರಣದಂಡನೆ ವಿಧಿಸಿದೆ.

    ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಉಮಾರ್ ಈ ತೀರ್ಪನ್ನು ನೀಡಿದ್ದಾರೆ. ಅತ್ಯಾಚಾರಿ ನರ್ಪತ್ ಸಿಂಗ್(22)ಗೆ ಮರಣದಂಡನೆ ಜೊತೆಗೆ 1 ಲಕ್ಷ ರೂ. ದಂಡವನ್ನು ನ್ಯಾಯಾಲಯ ವಿಧಿಸಿದೆ.

    ಜನವರಿಯಲ್ಲಿ ನರ್ಪತ್ ಸಿಂಗ್ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಕತ್ತು ಹಿಸುಕಿ, ಕೋಲಿನಿಂದ ಹೊಡೆದು ಕೊಂದಿದ್ದ. ಇದಾದ ಬಳಿಕ ಆಕೆಯ ಮೃತ ದೇಹವು ಬಾವಿಯಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು

    ಈ ಸಂಬಂಧ ಫೆಬ್ರವರಿಯಲ್ಲಿ ಆತನ ವಿರುದ್ಧ ಚಾರ್ಜ್‍ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಇದೀಗ ಪೋಕ್ಸೋ ಕಾಯ್ದೆಯಡಿಯಲ್ಲಿ ನ್ಯಾಯಾಲಯವು ನರ್ಪತ್ ಸಿಂಗ್‍ನನ್ನು ಅಪರಾಧಿ ಎಂದು ಘೋಷಿಸಿ, ಆತನಿಗೆ ಮರಣದಂಡನೆಯನ್ನು ವಿಧಿಸಿದೆ. ಇದನ್ನೂ ಓದಿ: ಆಂಧ್ರ ಸಚಿವೆ ರೋಜಾ ಕಾರಿನ ಮೇಲೆ ಪವನ್ ಕಲ್ಯಾಣ್ ಬೆಂಬಲಿಗರಿಂದ ದಾಳಿ

    Live Tv
    [brid partner=56869869 player=32851 video=960834 autoplay=true]

  • ಏಕ್ತಾ ಕಪೂರ್‌ಗೆ XXX ಸಂಕಷ್ಟ: ಯೂತ್ಸ್ ಹಾಳು ಮಾಡುತ್ತಿದ್ದೀರಿ ಎಂದ ಸುಪ್ರೀಂ ಕೋರ್ಟ್

    ಏಕ್ತಾ ಕಪೂರ್‌ಗೆ XXX ಸಂಕಷ್ಟ: ಯೂತ್ಸ್ ಹಾಳು ಮಾಡುತ್ತಿದ್ದೀರಿ ಎಂದ ಸುಪ್ರೀಂ ಕೋರ್ಟ್

    ಬಾಲಿವುಡ್ ಖ್ಯಾತ ನಿರ್ಮಾಪಕಿ, ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ನಿರ್ಮಾಣದ ವೆಬ್ ಸರಣಿ ಬಗ್ಗೆ ಸುಪ್ರೀಂ ಕೋರ್ಟ್ (Court) ಅಸಮಾಧಾನ ವ್ಯಕ್ತಪಡಿಸಿದೆ. XXX ನಂತಹ ಚಿತ್ರಗಳಿಂದ ನೀವು ಯುವಕರನ್ನು ಹಾಳು ಮಾಡುತ್ತಿದ್ದೀರಿ ಎಂದು ತರಾಟೆಗೆ ತಗೆದುಕೊಂಡಿದೆ. ಏಕ್ತಾ ಕಪೂರ್ ನಿರ್ಮಾಣದಲ್ಲಿ ಈ ವೆಬ್ ಸರಣಿ ಮೂಡಿ ಬರುತ್ತಿದ್ದು, ಯುವ ಜನತೆಯ ಮನಸ್ಸನ್ನು ಹಾಳು ಮಾಡುವಂತಹ ವಿಷಯವನ್ನು ಅದು ಒಳಗೊಂಡಿದೆ ಎನ್ನಲಾಗುತ್ತಿದೆ.

    ಇದೇ ವೆಬ್ ಸರಣಿಯ‍ಲ್ಲಿ ಯೋಧರಿಗೆ ಅವಮಾನ ಮಾಡುವಂತಹ ಸರಣಿಯೊಂದು ಪ್ರಸಾರವಾಗಿದ್ದು, ಅದರಲ್ಲಿ ಯೋಧರಿಗೆ ಮತ್ತು ಅವರ ಪತ್ನಿಗೆ ಅಪಮಾನ ಮಾಡಲಾಗಿದೆ ಎಂದು ಬಿಹಾರದ ಮಾಜಿ ಯೋಧ ಶಂಭು ಕುಮಾರ್ ದೂರು ನೀಡಿದ್ದರು. ಯೋಧರು ಗಡಿ ಕಾಯುತ್ತಿದ್ದರೆ, ಅವರ ಪತ್ನಿ ಬೇರೆಯವರೊಂದಿಗೆ ಸಂಬಂಧ ಬೆಳೆಸಿರುತ್ತಾರೆ ಎಂಬ ಅರ್ಥ ಬರುವಂತಹ ಕಂಟೆಂಟ್ ಅನ್ನು ಅದು ಒಳಗೊಂಡಿತ್ತು ಎನ್ನಲಾಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ಈ ದೂರಿಗೆ ಸಂಬಂಧಪಟ್ಟಂತೆ ಸತತವಾಗಿ ಏಕ್ತಾ ಕಪೂರ್ ಮತ್ತು ಅವರ ತಾಯಿ ಕೋರ್ಟಿಗೆ ಹಾಜರಾಗದ ಕಾರಣ, ಬಂಧನ ವಾರೆಂಟ್ ಜಾರಿ ಮಾಡಲಾಗಿತ್ತು. ಇದನ್ನು ರದ್ದು ಮಾಡುವಂತೆ ಏಕ್ತಾ ಮತ್ತೆ ಕೋರ್ಟಿಗೆ ಮೊರೆ ಹೋಗಿದ್ದರು. ಈ ಸಮಯದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ವೆಸ್ ಸರಣಿ ಬಗ್ಗೆ ಕಿಡಿಕಾರಿದ್ದಾರೆ. ನೀವು ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದೀರಿ ಮತ್ತು ಯಾರು ಅದನ್ನು ನೋಡಬೇಕು ಎಂದು ಬಯಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವೆಬ್ ಸರಣಿಗೆ (Web Series) ಸಂಬಂಧಿಸಿದಂತೆ ಈಗಾಗಲೇ ಹಲವು ದೃಶ್ಯಗಳನ್ನು ತಗೆದುಹಾಕಿರುವುದಾಗಿ ಈ ಹಿಂದೆಯೇ ಏಕ್ತಾ ಹೇಳಿಕೊಂಡಿದ್ದರು. ಯಾವ ದೃಶ್ಯಗಳು ಆಕ್ಷೇಪಾರ್ಹ ಎಂದು ಜನರು ಹೇಳಿದ್ದರೋ, ಅದೆಲ್ಲವನ್ನೂ ಕಿತ್ತು ಹಾಕಲಾಗಿದೆ ಎಂದೂ ತಿಳಿಸಿದ್ದರು. ಹಾಗಾಗಿ ಕೋರ್ಟಿಗೆ ಹಾಜರಾಗುತ್ತಿಲ್ಲ ಎಂದು ಅವರ ಪರ ವಕೀಲರು ತಿಳಿಸಿದ್ದರು. ಆದರೆ, ಈ ಮಾತನ್ನು ಕೋರ್ಟ್ ಒಪ್ಪಲಿಲ್ಲ. ಬಿಹಾರದಲ್ಲಿ ನಡೆಯುತ್ತಿರುವ ಕೇಸ್ ಬಗ್ಗೆಯೂ ಸುಪ್ರೀಂ ಕೋರ್ಟ್ ವರದಿ ಕೇಳಿದೆ.

    Live Tv
    [brid partner=56869869 player=32851 video=960834 autoplay=true]

  • ದಂಡ ಹಾಕಿದ್ದಕ್ಕೆ ಜಡ್ಜ್ ಮೇಲೆ ಚಪ್ಪಲಿ ತೂರಿದ ವ್ಯಕ್ತಿ ಅಂದರ್

    ದಂಡ ಹಾಕಿದ್ದಕ್ಕೆ ಜಡ್ಜ್ ಮೇಲೆ ಚಪ್ಪಲಿ ತೂರಿದ ವ್ಯಕ್ತಿ ಅಂದರ್

    ಚಿಕ್ಕಮಗಳೂರು: ದಂಡ ಹಾಕಿದ್ದಕ್ಕೆ (Fine) ವ್ಯಕ್ತಿಯೊಬ್ಬ ಜಡ್ಜ್ (Judge) ಮೇಲೆ ಚಪ್ಪಲಿ (Slippers) ತೂರಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲಾ ನ್ಯಾಯಾಲಯದ 1ನೇ ಹೆಚ್ಚುವರಿ ಕಿರಿಯ ಶ್ರೇಣಿಯ ವಿಭಾಗದಲ್ಲಿ ನಡೆದಿದೆ. ನ್ಯಾಯಧೀಶರ ಮೇಲೆ ಚಪ್ಪಲಿ ತೂರಿದ ಅರವಿಂದ ನಗರ ನಿವಾಸಿ ಲೋಕೇಶ್‌ನನ್ನು ನಗರ ಪೊಲೀಸರು ಬಂಧಿಸಿದ್ದಾರೆ.

    ಕಳೆದ 1 ತಿಂಗಳ ಹಿಂದೆ ಕುಡಿದು ವಾಹನ ಚಲಾಯಿಸುತ್ತಿದ್ದ ವೇಳೆ ಲೋಕೇಶ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಬಳಿಕ ಪೊಲೀಸರು ಆತನಿಗೆ ಕೋರ್ಟ್‌ನಲ್ಲಿ ದಂಡ ಕಟ್ಟುವಂತೆ ಸೂಚಿಸಿದ್ದರು. ಇದಕ್ಕೆ ಆರೋಪಿ ಲೋಕೇಶ್ ದಂಡ ಕೂಡ ಕಟ್ಟಿದ್ದ. ದಂಡ ಕಟ್ಟಿದ ತಿಂಗಳ ಬಳಿಕ ಲೋಕೇಶ್ ಇಂದು ಕೋರ್ಟ್‌ಗೆ ಕುಡಿದು ಬಂದು, ಜಡ್ಜ್ ಮೇಲೆ ಚಪ್ಪಲಿ ತೂರಿದ್ದಾನೆ. ಇದನ್ನೂ ಓದಿ: ರಟ್ಟೀಹಳ್ಳಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು RSS ಪಥಸಂಚಲನ

    ಕೂಡಲೇ ಅಲ್ಲೇ ಇದ್ದ ನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೋರ್ಟ್‌ನಲ್ಲಿ ಆತ, ನಾನು ಏನು ತಪ್ಪು ಮಾಡಿದ್ದೇನೆ ಅಂತ ದಂಡ ಹಾಕಿದ್ದೀರಾ ಎಂದು ಕೂಗಾಡಿದ್ದಾನೆ. ಲೋಕೇಶ್‌ನ ಈ ವರ್ತನೆ ನೋಡಿದ ಕೂಡಲೇ ಕೋರ್ಟ್‌ನಲ್ಲಿದ್ದ ವಕೀಲರು ಕೂಡಾ ಆತನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಿವೃತ್ತ ಪ್ರೊಫೆಸರ್‌ಗೆ ಯುವತಿ ಕಾಲ್ – ಅಶ್ಲೀಲ ವೀಡಿಯೋ ಮಾಡಿ 21 ಲಕ್ಷ ನಾಮ ಹಾಕಿದ್ಲು

    Live Tv
    [brid partner=56869869 player=32851 video=960834 autoplay=true]

  • ‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ (Adipurush) ಸಿನಿಮಾ ನಾನಾ ಕಾರಣಗಳಿಂದಾಗಿ ಸದ್ದಾಗುತ್ತಿದೆ. ಗ್ರಾಫಿಕ್ಸ್ ಕಾರಣದಿಂದಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರೆ, ಪಾತ್ರಗಳ ಆಯ್ಕೆ ಮತ್ತು ಅದರ ಪೋಷಣೆಯ ಕಾರಣದಿಂದಾಗಿ ಹಿಂದೂಗಳ ಕಣ್ಣು ಕೆಂಪಾಗಿಸಿದೆ. ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಟೀಸರ್ ರಿಲೀಸ್ ಮಾಡುವ ಮೂಲಕ ಹಿಂದೂಗಳನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ಲ್ಯಾನ್ ಉಲ್ಟಾ ಆಗಿದೆ. ಹಾಗಾಗಿ ಸಿನಿಮಾ ವಿವಾದಕ್ಕೆ ಕಾರಣವಾಗಿದೆ.

    ಆದಿಪುರುಷ್ ಸಿನಿಮಾದಲ್ಲಿ ರಾಮ, ಸೀತೆ, ಆಂಜನೇಯ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ಕೆಟ್ಟದ್ದಾಗಿ ಬಿಂಬಿಸಲಾಗಿದೆ ಎನ್ನುವುದು ಚಿತ್ರತಂಡದ ಮೇಲಿನ ಆರೋಪ. ಇದೀಗ ಅದು ಕೇವಲ ಆರೋಪವಾಗಿ ಉಳಿದುಕೊಂಡಿಲ್ಲ. ಕಾನೂನು ಸಮರಕ್ಕೂ ರೆಡಿಯಾಗಿದೆ. ನಟ ಪ್ರಭಾಸ್ , ಸೈಫ್ ಅಲಿಖಾನ್ (Saif Ali Khan) ಹಾಗೂ ನಿರ್ದೇಶಕ ಓಂ ರಾವತ್ (Om Rawat) ಸೇರಿ ಚಿತ್ರತಂಡದ ಐವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಆದಿಪುರುಷ್ ಸಿನಿಮಾದಲ್ಲಿ ರಾಮ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ನೈಜವಾಗಿ ತೋರಿಸಿಲ್ಲ. ಆ ಪಾತ್ರಗಳಿಗೆ ಅವಮಾನ ಮಾಡಲಾಗಿದೆ ಎಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿರುವ ನ್ಯಾಯಾಲಯವು (Court) ಅಕ್ಟೋಬರ್ 27ರಂದು ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಈ ಹಿಂದೆಯೂ ದೆಹಲಿಯಲ್ಲೂ ಮತ್ತೊಂದು ದೂರು ಚಿತ್ರತಂಡದ ವಿರುದ್ಧ ದಾಖಲಾಗಿತ್ತು.

    ಐನೂರು ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಿದ್ದು, 3 ಡಿಯಲ್ಲೂ ಈ ಚಿತ್ರವನ್ನು ನೋಡಬಹುದಾಗಿದೆ. ಗ್ರಾಫಿಕ್ಸ್ ಕಳಪೆಯಾಗಿಲ್ಲ, ಅದು 3 ಡಿ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವುದರಿಂದ ಮಸುಕಾಗಿ ಕಾಣಿಸುತ್ತಿದೆ ಎಂದು ಮೊನ್ನೆಯಷ್ಟೇ ನಿರ್ದೇಶಕರು ಸ್ಪಷ್ಟನೆ ಕೊಟ್ಟಿದ್ದರು. ಆ ಪಾತ್ರಗಳ ಪೋಷಣೆಯನ್ನು ಯಾಕೆ ಆ ರೀತಿಯಲ್ಲಿ ಚಿತ್ರಿಸಿದ್ದಾರೆ ಎನ್ನುವುದನ್ನು ಕೋರ್ಟನಲ್ಲಿ ನಿರ್ದೇಶಕರು ಹೇಳಬೇಕಿದೆ. ಅಲ್ಲದೇ, ಎಲ್ಲವನ್ನೂ ಸರಿ ಮಾಡಿಕೊಂಡೇ ಚಿತ್ರವನ್ನು ರಿಲೀಸ್ ಮಾಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪರೇಶ್ ಮೇಸ್ತಾದು ಕೊಲೆಯೇ, ಸಿದ್ದು ಸರ್ಕಾರದಿಂದ ಸಾಕ್ಷ್ಯ ನಾಶ: ರವಿಕುಮಾರ್‌ ಕಿಡಿ

    ಪರೇಶ್ ಮೇಸ್ತಾದು ಕೊಲೆಯೇ, ಸಿದ್ದು ಸರ್ಕಾರದಿಂದ ಸಾಕ್ಷ್ಯ ನಾಶ: ರವಿಕುಮಾರ್‌ ಕಿಡಿ

    ಬೆಂಗಳೂರು: ಸಿಬಿಐ(CBI) ವರದಿಯನ್ನು ನಾವು ಒಪ್ಪುವುದಿಲ್ಲ. ಪರೇಶ್ ಮೇಸ್ತಾದು(Paresh Mesta) ಕೊಲೆಯೇ. ಇವತ್ತು ಏನಾದ್ರು ಸಾಕ್ಷಿ ಸಿಗದಿದ್ದರೆ ಅದಕ್ಕೆ ಸಿದ್ದರಾಮಯ್ಯ(Siddaramaiah) ಸರ್ಕಾರವೇ ಕಾರಣ ಎಂದು ಬಿಜೆಪಿಯ(BJP) ಪರಿಷತ್‌ ಸದಸ್ಯ, ಪ್ರಧಾನ ಕಾರ್ಯದರ್ಶಿ ರವಿಕುಮಾರ್‌(Ravi Kumar) ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಕ್ಷಿ ನಾಶ ಮಾಡಿದ್ದು ಹಾಗೂ ಪಿಎಫ್‌ಐ ಪೋಷಣೆ ಮಾಡಿದ್ದಕ್ಕೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ವಿಧಾನಸಭೆ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್‌ನವರು ಹೇಳುವುದೆಲ್ಲ ಸತ್ಯ ಅಲ್ಲ ಎಂದು ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದರು. ಇದನ್ನೂ ಓದಿ: ಬಿಜೆಪಿ ಗೆದ್ದಿರೋ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್‍ನಂತಹ ಅಮಾಯಕರ ರಕ್ತ ಇದೆ: ಸಿದ್ದರಾಮಯ್ಯ

    ಮಗನನ್ನು ಕೊಲೆ ಮಾಡಲಾಗಿದೆ ಎಂದು ಪರೇಶ್ ಮೇಸ್ತಾ ತಂದೆಯೇ ಹೇಳಿದ್ದಾರೆ. ಇಡೀ ರಾಜ್ಯದ ಜನ ಇದು ಕೊಲೆ ಅಂತ ಹೇಳುತ್ತಿದ್ದಾರೆ. ನಾವು ಸಿಬಿಐ ವರದಿಯನ್ನು ಒಪ್ಪುವುದಿಲ್ಲ. ಸಂಪೂರ್ಣ ವರದಿ ಬಂದ ಮೇಲೆ ನಾವು ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಪರೇಶ್ ಮೇಸ್ತಾ ಹತ್ಯೆಯಲ್ಲ, ಅದು ಆಕಸ್ಮಿಕ ಸಾವು – ಸಿಬಿಐ ವರದಿ ಸಲ್ಲಿಕೆ

    ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅರೆಸ್ಟ್ ಆಗಿದ್ದರು. ವಿನಯ್ ಕುಲಕರ್ಣಿ ಯಾರು? ರುದ್ರೇಶ್ ಸೇರಿದಂತೆ 30 ಹಿಂದೂ ಕಾರ್ಯಕರ್ತರ ಕೊಲೆ ಆಯ್ತು. ಈ ಕೊಲೆಗಳಿಗೆ ಕಾಂಗ್ರೆಸ್‌ ಕಾರಣ. ಪಿಎಫ್‌ಐ ಸೇರಿದಂತೆ ಅನೇಕ ಸಂಘಟನೆಗಳ ಪರ ಕಾಂಗ್ರೆಸ್ ಸರ್ಕಾರ ಇತ್ತು. ಸಿದ್ದರಾಮಯ್ಯ ಸರ್ಕಾರ ಯಾವ ಆಧಾರದಲ್ಲಿ ಪಿಎಫ್‌ಐ ಕೇಸ್ ವಾಪಸ್‌ ಪಡೆದರು ಎಂದು ಪ್ರಶ್ನೆ ಮಾಡಿದರು.

    ಡಿವೈಎಸ್‌ಪಿ ಗಣಪತಿ ಹತ್ಯೆಗೆ ಕೆಜೆ ಜಾರ್ಜ್ ಕಾರಣ. ಆದರೆ ಅಂದು ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ ಸಾಕ್ಷಿ ನಾಶ ಮಾಡಿದ್ದರಿಂದ ಬಿ ರಿಪೋರ್ಟ್ ಬಂತು. ಡಿಕೆ ರವಿ ಪ್ರಕರಣದಲ್ಲೂ ಸಿದ್ದರಾಮಯ್ಯ ಸರ್ಕಾರ ಸಾಕ್ಷಿ ನಾಶ ಮಾಡಿದೆ. ಈಗ ಪರೇಶ್‌ ಮೇಸ್ತಾ ಪ್ರಕರಣದಲ್ಲೂ ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ. ಈ ಕಾರಣಕ್ಕೆ ಸಿಬಿಐ ವರದಿಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಪರೇಶ್ ಮೇಸ್ತಾ ಹತ್ಯೆಯಲ್ಲ, ಅದು ಆಕಸ್ಮಿಕ ಸಾವು – ಸಿಬಿಐ ವರದಿ ಸಲ್ಲಿಕೆ

    ಪರೇಶ್ ಮೇಸ್ತಾ ಹತ್ಯೆಯಲ್ಲ, ಅದು ಆಕಸ್ಮಿಕ ಸಾವು – ಸಿಬಿಐ ವರದಿ ಸಲ್ಲಿಕೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಪರೇಶ್ ಮೇಸ್ತಾನನ್ನು ಹತ್ಯೆ ಮಾಡಿಲ್ಲ. ಅದು ಆಕಸ್ಮಿಕವಾಗಿ ನಡೆದ ಸಾವು ಎಂದು ಸಿಬಿಐ (CBI) ಹೊನ್ನಾವರ ನ್ಯಾಯಾಲಯಕ್ಕೆ (Court) ವರದಿ ಸಲ್ಲಿಸಿದೆ.

    ಹೊನ್ನಾವರದ ಪರೇಶ್ ಮೇಸ್ತಾ (Paresh Mesta) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಹೊನ್ನಾವರ (Honnavar) ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಹೊನ್ನಾವರ ನ್ಯಾಯಾಲಯ ನವೆಂಬರ್ 16ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8ರಂದು ಹೊನ್ನಾವರ ನಗರದ ಶನಿ ದೇವಸ್ಥಾನದ ಹಿಂಭಾಗದ ಶಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಶವ ಪತ್ತೆಯಾಗಿತ್ತು. ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಈತನನ್ನು ಹಿಂದೂ ಸಂಘಟನೆಗಳು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಔಷಧಿ ನಕಲಿಯೋ? ಅಸಲಿಯೋ? – ಇನ್ಮುಂದೆ ನೀವೇ ಚೆಕ್ ಮಾಡಬಹುದು

    ಹೊನ್ನಾವರ ರಣರಂಗವಾಗುತ್ತಿದ್ದಂತೆ ಎಚ್ಚೆತ್ತ ಅಂದಿನ ಸಿದ್ದರಾಮಯ್ಯ ಸರ್ಕಾರ ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ನಂತರ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಲಾಗಿತ್ತು. ನಾಲ್ಕೂವರೆ ವರ್ಷದ ನಂತರ ಸಿಬಿಐನಿಂದ ವರದಿ ಸಲ್ಲಿಸಿದೆ. ಇದನ್ನೂ ಓದಿ: ಸ್ಕ್ಯಾನ್‌ಮಾಡಿ `ಸಿದ್ರಾಮುಲ್ಲನ ಉಗ್ರಭಾಗ್ಯ’ ಲೀಲೆ ನೋಡಿ – PayCM ಅಭಿಯಾನಕ್ಕೆ ಬಿಜೆಪಿ ಟಕ್ಕರ್

    Live Tv
    [brid partner=56869869 player=32851 video=960834 autoplay=true]

  • ಬಳ್ಳಾರಿಯಲ್ಲಿ ನಾನು ಬದುಕಿದ್ದರೆ ಸಾಕು: ಜನಾರ್ದನ ರೆಡ್ಡಿ

    ಬಳ್ಳಾರಿಯಲ್ಲಿ ನಾನು ಬದುಕಿದ್ದರೆ ಸಾಕು: ಜನಾರ್ದನ ರೆಡ್ಡಿ

    ಬಳ್ಳಾರಿ: ಕಳೆದ ಹದಿನಾಲ್ಕು ತಿಂಗಳಿಂದ ನಾನು ಕೇವಲ ಮನೆ ಹಾಗೂ ದೇವಸ್ಥಾನಗಳಿಗೆ ಓಡಾಡುತ್ತಿದ್ದೇನೆ. ಆದರೂ ಪದೇ ಪದೇ ಅಧಿಕಾರಿಗಳು ಕಿರುಕುಳ ಕೊಡ್ತಾ ಇದ್ದಾರೆ. ತಾಯಿ ಮತ್ತೆ ಆಶೀರ್ವಾದ ಮಾಡಿದ್ರೆ ಮತ್ತೆ ರಾಜಕೀಯಕ್ಕೆ ಬರುವೆ. ಬಳ್ಳಾರಿಯಲ್ಲಿ ನಾನು ಬದುಕಿದ್ದರೆ ಸಾಕು ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhan Reddy) ಹೇಳಿದರು.

    ಬಳ್ಳಾರಿಗೆ ಆಮಿಸಿ ಕನಕ ದುರ್ಗಮ್ಮ ದೇವಸ್ಥಾನದ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ತಿಂಗಳ ಕಾಲ ಕಾದು ನೋಡಿ. ನಾನೇ ಬಳ್ಳಾರಿಯಲ್ಲಿ ಇರಲು ಕೋರ್ಟ್ (Court) ಗೆ ಅನುಮತಿ ಕೇಳಿರುವೆ. ಕಳೆದ 12 ವರ್ಷಗಳಿಂದ ನನ್ನ ಮೇಲಿನ ಕೇಸ್ ನಡೆಯುತ್ತಿವೆ. ಹೀಗಾಗಿ ಪ್ರತಿದಿನ ಕೇಸ್ ನಡೆಸುವಂತೆ ನಾ ಕೋರ್ಟ್ ಗೆ ಮನವಿ ಮಾಡಿರುವೆ. ಆದರೆ ಕೇಸ್ ನಡೆಯುವಾಗ ನಾನು ಬಳ್ಳಾರಿಯಲ್ಲಿ ಇರಬಾರದು ಎಂದು ಸಿಬಿಐ (CBI) ನವರು ಮನವಿ ಮಾಡಿದ್ದಾರೆ. ಹೀಗಾಗಿ ನಾನು ಮಗಳ ಹೆರಿಗೆ ಆಗಿದೆ ಅದಕ್ಕಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವೆ. ಸಿಬಿಐ ಅರ್ಜಿ ಸಲ್ಲಿಕೆ ಮಾಡಿದ ಕಾರಣ ನಾ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿರುವೆ ಎಂದು ತಿಳಿಸಿದರು. ಇದನ್ನೂ ಓದಿ: ಜಡಿ ಮಳೆಯಲ್ಲೇ ರಾಹುಲ್ ಗಾಂಧಿ ಭಾಷಣ- ಇದು ಸುದ್ದಿಯೇ ಅಲ್ಲ ಅಂದ್ರು ರಮ್ಯಾ!

    ಸಿಬಿಐ ಅಧಿಕಾರಿಗಳ ಮೇಲೆ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ ಅವರು, ಒಂದು ತಪ್ಪು ಕೇಸನ್ನ ನನ್ನ ಮೇಲೆ ಹಾಕಿದ್ದಾರೆ. ಹೀಗಾಗಿ ಕೇಸ್ ನಲ್ಲಿ ಸೋಲುವ ಭಯಕ್ಕೆ ಕೇಸನ್ನ ನಡೆಸೋದಕ್ಕೆ ಹಿಂದೇಟು ಹಾಕಿ ವಿಳಂಬ ಮಾಡ್ತಾ ಇದ್ದಾರೆ. ಸುಪ್ರೀಂ ಕೊರ್ಟ್ ನಲ್ಲಿ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆ ದುರ್ಗಮ್ಮ ತಾಯಿಗೆ ಬೇಡಿಕೊಂಡಿದ್ದೆ. ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಮಾಡಿಸೋದಾಗಿ ಬೇಡಿಕೊಂಡಿದ್ದೆ. ಹೀಗಾಗಿ ಇವತ್ತು ನಾನು ದೇವಸ್ಥಾನಕ್ಕೆ ಬಂದು ಇಡೀ ದೇಶಕ್ಕೆ ಒಳ್ಳೆದಾಗಲಿ ಅಂತಾ ದೇವಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ನಮ್ಮ ಇಲಾಖೆಯಲ್ಲಿರುವ ಕಳ್ಳ ಅಧಿಕಾರಿಗಳಿಗೆ ನಾನೇ ಬಾಸ್‌ ಎಂದಿದ್ದ ಕೃಷಿ ಸಚಿವ ರಾಜೀನಾಮೆ

    ನನ್ನ ಮೇಲೆ ಕೇಸ್ ಆಗಿ ಹನ್ನೆರಡು ವರ್ಷವಾಯ್ತು. ಕಳೆದ ಹನ್ನೆರಡು ವರ್ಷಗಳಿಂದ ಕೇಸ್ ನಡೆಯುತ್ತಿಲ್ಲ. ನಾನು ಬಳ್ಳಾರಿಯಲ್ಲಿ ಇರೋದಕ್ಕೆ ಅಧಿಕಾರಿಗಳು ಪದೇ ಪದೇ ಕೋರ್ಟ್ ನಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಹೀಗಾಗಿ ನಾನು ಪ್ರತಿ ದಿನ ಟ್ರಯಲ್ ನಡೆಸುವಂತೆ ಕೊರ್ಟ್ ಗೆ ಕೇಳಿದ್ದೇನೆ. ಶಿಘ್ರದಲ್ಲೇ ಮೂರ್ನಾಲ್ಕು ತಿಂಗಳಲ್ಲೇ ಕೇಸ್ ಇತ್ಯರ್ಥ ಮಾಡಿ ಎಂದು ಕೇಳಿದ್ದೇನೆ. ನನ್ನ ಕೊನೆ ಉಸಿರು ಇರೋವರೆಗೂ ನಾನು ಬಳ್ಳಾರಿ ಗಾಳಿ ನಾನು ಸೇವಿಸಬೇಕು ಎಂದರು.

    ಇದೇ ವೇಳೆ ಪರೋಕ್ಷವಾಗಿ ರಾಜಕೀಯ (Politics) ಕ್ಕೆ ಬರುವ ಸುಳಿವು ನೀಡಿದ ರೆಡ್ಡಿ, ಈ ತಾಯಿ ಮತ್ತೆ ಆಶೀರ್ವಾದ ಮಾಡಿದ್ರೆ ಮತ್ತೆ ರಾಜಕೀಯಕ್ಕೆ ಬರುವೆ. ಮಗಳ ಮದುವೆ ಆಯ್ತು, ಇಬ್ಬರು ಮೊಮ್ಮಕಳಾದ್ರು, ಮಗ ಡಿಗ್ರಿ ಮುಗಿಸಿಕೊಂಡಿದ್ದಾನೆ. ಅವನಿಗೆ ಚಿತ್ರರಂಗದಲ್ಲಿ ಇಂಟ್ರೆಸ್ಟ್ ಇದೆ, ಅದರಲ್ಲಿ ಬದುಕು ಕಂಡುಕೊಂಡಿದ್ದಾನೆ. ನನ್ನ ವಿಚಾರದಲ್ಲಿ ತಾಯಿ ದುರ್ಗಾಮಾತೆ ಒಳ್ಳೆ ದಾರಿ ತೋರಿಸ್ತಾಳೆ. ದೇವಸ್ಥಾನದಲ್ಲಿ ನನಗೆ ರಾಜಕೀಯ ಮಾತಾಡಲು ಇಷ್ಟ ಇಲ್ಲ. ಆ ತಾಯಿ ಏನು ದಾರಿ ತೋರುಸ್ತಾಳೋ ಹಾಗೆ ಮಾಡುವೆ. ಸಾರ್ವಜನಿಕವಾಗಿ ನಾವು ಬದುಕಬೇಕು ಅಂದ್ರೆ ನಾವು ಎರಡು ಮಾರ್ಗದಲ್ಲಿ ಬದುಕಬಹುದು. ನಾನು ಕೊರ್ಟ್ ನಲ್ಲಿರುವ ಪ್ರಕರಣಗಳನ್ನ ಹೆಚ್ಚು ಮಾತಾಡಲ್ಲ. ನಾನು ಬಳ್ಳಾರಿಲ್ಲೇ ಇದ್ದೇನೆ ನಿಮಿಗೆ ಕಾಣಿಸ್ತಾ ಇಲ್ಲ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • 67 ಪೋರ್ನ್ ವೆಬ್‌ಸೈಟ್‌ಗಳು ಬ್ಲಾಕ್ – ಕೇಂದ್ರ ಆದೇಶ

    67 ಪೋರ್ನ್ ವೆಬ್‌ಸೈಟ್‌ಗಳು ಬ್ಲಾಕ್ – ಕೇಂದ್ರ ಆದೇಶ

    ನವದೆದಲಿ: 2021ರ ಐಟಿ ನಿಯಮ (IT Rules) ಉಲ್ಲಂಘಿಸಿದ್ದಕ್ಕಾಗಿ 67 ಪೋರ್ನ್ ವೆಬ್‌ಸೈಟ್‌ಗಳನ್ನು (Pornographic Websites) ಬ್ಲಾಕ್ ಮಾಡಿವಂತೆ ಕೇಂದ್ರ ಸರ್ಕಾರ (Central Government) ಇಂರ್ಟರ್‌ನೆಟ್ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿದೆ.

    ಭಾರತದಲ್ಲಿ ಅಶ್ಲೀಲ ಅಥವಾ ಪೋರ್ನ್ ವೆಬ್‌ಸೈಟ್‌ಗಳನ್ನು ಪ್ರಕಟಿಸುವುದು ಅಥವಾ ವೀಕ್ಷಿಸುವುದು ಕಾನೂನು ಬಾಹಿರ. ಆದರೂ ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 67 ಪೋರ್ನ್ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ಸೂಕ್ತ ಒಳಉಡುಪು ಧರಿಸಲೇಬೇಕು – ಪಾಕ್ ವಿಮಾನಯಾನ ಸಂಸ್ಥೆ ಆದೇಶ

    ಪುಣೆ ನ್ಯಾಯಾಲಯದ (Pune Court) ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳು ಹಾಗೂ ಉತ್ತರಾಖಂಡ ಹೈಕೋರ್ಟ್ (Uttarakhand High court) ಆದೇಶದ ಆಧಾರದ ಮೇಲೆ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಟೆಲಿಕಾಂ ಸಂಸ್ಥೆ (DOT) ಇಮೇಲ್ ಮೂಲಕ ಇಂಟರ್ನೆಟ್ ಸೇವಾ ಪೂರೈಕೆದಾರ ಕಂಪೆನಿಗಳಿಗೆ ಸೂಚಿಸಿದೆ. ಇದನ್ನೂ ಓದಿ: ದೇಗುಲಕ್ಕೆ 8 ಕೋಟಿ ಮೌಲ್ಯದ ನೋಟುಗಳಿಂದ ಅಲಂಕಾರ – ಗೋಡೆ, ನೆಲದಲ್ಲೆಲ್ಲ ನೋಟಿನ ದರ್ಬಾರ್

    ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ ಮತ್ತು 2021ರಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊಸ ಐಟಿ ನಿಯಮಗಳ ಉಲ್ಲಂಘನೆಗಾಗಿ ಒಟ್ಟು 67 ಪೋರ್ನ್ ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಸರ್ಕಾರ ಆದೇಶಿಸಿದ್ದು, ಈ ಕುರಿತು ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ಗಳಿಗೆ ವೆಬ್‌ಸೈಟ್‌ಗಳ ಮಾಹಿತಿ, ಯೂಆರ್‌ಎಲ್ ನೀಡಿರುವ ಸರ್ಕಾರ, ಈ ವೆಬ್‌ಸೈಟ್‌ನಲ್ಲಿ ಮಹಿಳೆಯರ ಘನತೆಗೆ ಕಳಂಕ ತರುವ ಅಶ್ಲೀಲ ವೀಡಿಯೋಗಳು ಇವೆ. ಈ ವೀಡಿಯೋಗಳು ಮಾರ್ಫ್ ಮಾಡಲಾಗಿರುವ ವೀಡಿಯೋಗಳಾಗಿವೆ ಎಂದು ನೋಟಿಸ್‌ನಲ್ಲಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಎಎಪಿ ಶಾಸಕ ಅಮಾನತುಲ್ಲಾ ಖಾನ್‍ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

    ಎಎಪಿ ಶಾಸಕ ಅಮಾನತುಲ್ಲಾ ಖಾನ್‍ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

    ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (AAP) ಶಾಸಕ ಅಮಾನತುಲ್ಲಾ ಖಾನ್ (Amanatullah Khan) ಅವರನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ (Rouse Avenue court) ಇಂದು 14 ದಿನಗಳ ಕಾಲ ನ್ಯಾಯಾಂಗ ಬಂಧನ ( Judicial Custody) ವಿಧಿಸಿದೆ.

    ದೆಹಲಿ ವಕ್ಫ್ ಬೋರ್ಡ್ (Delhi Waqf Board) ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಅಮಾನತುಲ್ಲಾ ಖಾನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) (Anti-Corruption Bureau) ಸೆಪ್ಟೆಂಬರ್ 16 ರಂದು ಬಂಧಿಸಿತ್ತು. ವಕ್ಫ್ ಮಂಡಳಿಗೆ ಅಕ್ರಮ ನೇಮಕಾತಿ ಆರೋಪದ ಮೇಲೆ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ ಅಮಾನತುಲ್ಲಾ ಖಾನ್ ಮನೆ, ಕಚೇರಿ ಮೇಲೆ ದಾಳಿ ನಡೆಸಿತ್ತು. ಆ ವೇಳೆ ದೋಷಾರೋಪಣೆಯ ವಸ್ತುಗಳು ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿತ್ತು. ಜೊತೆಗೆ ಅಮಾನತುಲ್ಲಾ ಖಾನ್ ಆಪ್ತ ಸಹಾಯಕ ಎಂದು ಹೇಳುವ ವ್ಯಕ್ತಿಯಿಂದ ಎರಡು ಶಸ್ತ್ರಾಸ್ತ್ರಗಳು ಮತ್ತು 24 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿತ್ತು.

    ಬಂಧನಕ್ಕೊಳಗಾದ ಒಂದು ದಿನದ ನಂತರ, ಅಮಾನತುಲ್ಲಾ ಖಾನ್ ಅವರನ್ನು ನಾಲ್ಕು ದಿನಗಳ ಕಾಲ  ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು. ಅಂದೇ ಶಾಸಕರ ಸಹಾಯಕ ಹಮೀದ್ ಅಲಿ ನಿವಾಸದಲ್ಲಿ ಪರವಾನಗಿ ಪಡೆಯದ ಪಿಸ್ತೂಲ್ ಮತ್ತು 12 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಯಿತು. ಈ ವೇಳೆ ಅಮಾನತುಲ್ಲಾ ಖಾನ್ ಅವರು ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ಇಟ್ಟುಕೊಂಡಿದ್ದಾರೆ. ಮತ್ತು ಎಲ್ಲಾ ವ್ಯವಹಾರಗಳನ್ನು ಅವರ ಸೂಚನೆಯ ಮೇರೆಗೆ ಮಾಡಲಾಗುತ್ತದೆ ಎಂದು ಹಮೀದ್ ಅಲಿ ಎಸಿಬಿಗೆ ತಿಳಿಸಿದ್ದರು.

    ನಿಯಮಗಳು, ನಿಬಂಧನೆಗಳು ಮತ್ತು ಕಾನೂನಿನ ಉದ್ದೇಶಪೂರ್ವಕ ಮತ್ತು ಕ್ರಿಮಿನಲ್ ಉಲ್ಲಂಘನೆ, ಸ್ಥಾನದ ದುರುಪಯೋಗ ಮತ್ತು ಆರ್ಥಿಕ ನಷ್ಟವನ್ನು ಉಂಟು ಮಾಡುವುದು ಸೇರಿದಂತೆ ಅಪರಾಧಗಳಿಗಾಗಿ ಆಗಿನ ವಕ್ಫ್ ಬೋರ್ಡ್ ಸಿಇಒ ಮೆಹಬೂಬ್ ಆಲಂ ವಿರುದ್ಧವೂ ಪ್ರಾಸಿಕ್ಯೂಷನ್ ಮಂಜೂರಾತಿ ನೀಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕತಾರ್ ವಿಶ್ವದ ಬೆಸ್ಟ್ ಏರ್‌ಲೈನ್ – ಟಾಪ್ 20 ಸಂಸ್ಥೆಗಳಲ್ಲಿ ಕತಾರ್‌ಗೆ No-1 ಸ್ಥಾನ

    ದಿಲ್ಲಿಯ ಅಬಕಾರಿ ನೀತಿಗೆ (2021-22) ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ವಿರುದ್ಧ ಜಾರಿ ನಿರ್ದೇಶನಾಲಯವು (ಇಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನೂ ಓದಿ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿ, ಸರ್ವ ಸ್ಪರ್ಶಿಯಾಗಿದೆ: ಪ್ರಿಯಾಂಕ್ ಖರ್ಗೆ

    Live Tv
    [brid partner=56869869 player=32851 video=960834 autoplay=true]