Tag: court

  • ವಿಧಾನಸೌಧದಲ್ಲಿ 10 ಲಕ್ಷ ಹಣ ಸಿಕ್ಕಿದ ಕೇಸ್ – ಆರೋಪಿ ಜಗದೀಶ್‌ಗೆ ಷರತ್ತುಬದ್ಧ ಜಾಮೀನು

    ವಿಧಾನಸೌಧದಲ್ಲಿ 10 ಲಕ್ಷ ಹಣ ಸಿಕ್ಕಿದ ಕೇಸ್ – ಆರೋಪಿ ಜಗದೀಶ್‌ಗೆ ಷರತ್ತುಬದ್ಧ ಜಾಮೀನು

    ಬೆಂಗಳೂರು: ವಿಧಾನಸೌಧದಲ್ಲಿ (Vidhana Soudha) 10 ಲಕ್ಷ ಹಣ ಸಿಕ್ಕ ಪ್ರಕರಣದಲ್ಲಿ ಬಂಧಿತನಾಗಿದ್ದ ಮಂಡ್ಯ ಮೂಲದ ಪಿಡಬ್ಲ್ಯೂಡಿ  (PWD) ಕಿರಿಯ ಎಂಜಿನಿಯರ್ ಜಗದೀಶ್‌ಗೆ ಕೋರ್ಟ್ (Court) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

    ವಿಧಾನಸೌಧದ  ಮುಖ್ಯದ್ವಾರ ಬಳಿ 10.5 ಲಕ್ಷ ಹಣ ಸಿಕ್ಕ ಪ್ರಕರಣದಲ್ಲಿ ಜಗದೀಶ್‌ನನ್ನು ಬಂಧಿಸಿದ್ದ ವಿಧಾನಸೌಧ ಪೊಲೀಸರು (Vidhana Soudha Police) ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಅವರು ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದರು. ಆದರೂ ಜಗದೀಶ್ ಯಾರಿಗೆ ಹಣ ಕೊಡೋಕೆ ಬಂದಿದ್ದ ಅನ್ನೋ ಮಾಹಿತಿಯನ್ನ ಬಾಯಿಬಿಟ್ಟಿರಲಿಲ್ಲ. ಆದ್ದರಿಂದ ಲಂಚದ ರೂಪದಲ್ಲಿ ಹಣ ಕೊಡಲು ಬಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ಮುಂದುವರಿರಿಸಲಾಗಿತ್ತು. ಇದನ್ನೂ ಓದಿ: ವಿಧಾನಸೌಧದಲ್ಲಿ ಅನಧಿಕೃತ ಹಣ ಸಾಗಾಟ – 10.50 ಲಕ್ಷ ಪೊಲೀಸರ ವಶಕ್ಕೆ

    ಜಗದೀಶ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಕೊನೆಯ ದೂರವಾಣಿ ಕರೆ ಹಾಗೂ ಕೆಲ ವಾಟ್ಸಪ್ ಚಾಟ್‌ಗಳನ್ನು ಡಿಲೀಟ್ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಬಳಿಕ ಜಗದೀಶ್ ಯಾರ ಕೈಕೆಳಗೆ ಕೆಲಸ ಮಾಡ್ತಿದ್ದ ಅನ್ನೋ ಕುರಿತಾಗಿ ಮಾಹಿತಿ ಸಂಗ್ರಹ ಮಾಡಿದ್ದರು. ಆರೋಪಿ ಬಾಯಿಬಿಡಲಿಲ್ಲ ಅಂದ್ರೆ ಸಿನೀಯರ್ ಎಂಜನಿಯರ್‌ಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಮುಂದಾಗಿದ್ದರು. ಇಂದು ಆರೋಪಿ ಜಗದೀಶ್‌ನನ್ನ ಕೋರ್ಟ್‌ಗೆ ಹಾಜರುಪಡಿಸಿದ್ದು, ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದ್ರೆ ನ್ಯಾಯಾಲಯ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಇದನ್ನೂ ಓದಿ: ಬಿಎಂಟಿಸಿ ವಜ್ರ ಬಸ್ ಪ್ರಯಾಣಿಕರಿಗೆ ಶಾಕ್ – ದರ ಹೆಚ್ಚಳ

    ಏನಿದು ಕೇಸ್?
    ವಿಧಾನಸೌಧದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 10.50 ಲಕ್ಷ ರೂ. ಅನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದ್ದರು. ಬುಧವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಒಬ್ಬ ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದ. ಗೇಟ್‌ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಮಂಡ್ಯ ಮೂಲದ ಈ ವ್ಯಕ್ತಿಯಿಂದ ಬ್ಯಾಗ್‌ನಲ್ಲಿ ದೊಡ್ಡ ಮೊತ್ತದ ಹಣ ಇರುವುದು ಪತ್ತೆಯಾಗಿತ್ತು.

    ವ್ಯಕ್ತಿಯ ಬಳಿ ಹಣದ ಮೂಲದ ಕುರಿತು ಪೊಲೀಸರು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟ ಮಾಹಿತಿ ಆತ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನೂ ಬಂಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನ್ನ ಗಂಡ ಮೇಕಪ್‌ಗೆ ಹಣ ಕೊಡ್ತಿಲ್ಲ – ಡಿವೋರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ

    ನನ್ನ ಗಂಡ ಮೇಕಪ್‌ಗೆ ಹಣ ಕೊಡ್ತಿಲ್ಲ – ಡಿವೋರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು (Women) ಆಕರ್ಷಕವಾಗಿ ಕಾಣಬೇಕು ಅಂತಾ ಬ್ಯೂಟಿ ಬಗ್ಗೆ ಕೇರ್ (Beauty Care) ಮಾಡೋದು ಜಾಸ್ತಿ. ಊಟ ಇಲ್ಲದಿದ್ರೂ ಸರಿ, ಟೈಂ ಟು ಟೈಂ ಮೇಕಪ್ ಮಾತ್ರ ಪಕ್ಕಾ ಆಗ್ಬೇಕು. ಕೆಲವರಂತೂ ವಿತೌಟ್ ಮೇಕಪ್ (Makeup) ಮನೆಯಿಂದ ಕಾಲಿಡೋ ಹಾಗೇ ಇಲ್ಲ. ಪ್ರಪಂಚವೇ ಮುಳುಗಿ ಹೋಯ್ತೇನೊ ಅನ್ನೂ ಹಾಗೇ ಕೂತಿರ್ತಾರೆ. ಇದೆಲ್ಲವೂ ಇಂದು ಸಹಜವಾಗಿಬಿಟ್ಟಿದೆ.

    ಆದ್ರೆ ಇಲ್ಲಿ ಓರ್ವ ಮಹಿಳೆ ತನ್ನ ಗಂಡನಿಗೆ ವಿಚ್ಛೇದನ (Divorce) ನೀಡಲು ಕೋರ್ಟ್ (Court) ಮೆಟ್ಟಿಲೇರಿದ್ದಾಳೆ. ಆಕೆ ನೀಡಿದ ಕಾರಣ ಕೇಳಿದ್ರೆ ಜನರು ಬೆಚ್ಚಿ ಬೀಳ್ತಾರೆ. ಹೌದು. ತನ್ನ ಪತಿ ಬ್ಯೂಟಿಪಾರ್ಲರ್‌ಗೆ (Beauty Parlor) ಹೋಗಲು ಎಷ್ಟು ಕೇಳಿದ್ರೂ ಹಣ ಕೊಡ್ತಾ ಇಲ್ಲ ಅಂತಾ ಡಿವೋರ್ಸ್‌ಗೆ ಅಪ್ಲೇ ಮಾಡಿದ್ದಾರೆ. ಇದನ್ನೂ ಓದಿ: ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ

    ಸಿವಿಲ್ ಲೈನ್ ಪ್ರದೇಶದಲ್ಲಿ ವಾಸವಿರುವ 25 ವರ್ಷದ ಗೃಹಿಣಿ ದೆಹಲಿ ನಿವಾಸಿ ಅಮಿತ್ ಎಂಬಾತನನ್ನು 2015ರಲ್ಲಿ ವಿವಾಹವಾಗಿದ್ದರು. ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಲವಲವಿಕೆಯಿಂದ, ಖುಷಿಖುಷಿಯಾಗಿ ಇದ್ದರು. ಆದರೆ 3 ವರ್ಷಗಳ ಹಿಂದೆ ಇವರಿಬ್ಬರ ನಡುವೆ ಕಲಹ ಶುರುವಾಯಿತು. ನಂತರದಲ್ಲಿ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು. ದಂಪತಿಗೆ ಇನ್ನೂ ಮಕ್ಕಳು ಆಗಿಲ್ಲ.

    ಇದೀಗ ಮೇಕಪ್ ವಿಷಯಕ್ಕಾಗಿ ವಿಚ್ಛೇದನಕ್ಕೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇವರನ್ನು ನ್ಯಾಯಾಲಯದಲ್ಲಿ ಕೌನ್ಸೆಲಿಂಗ್‌ಗೆ ಕರೆಯಲಾಗಿದೆ ಎಂದು ನ್ಯಾಯಾಲಯದ ಸಲಹೆಗಾರ ಪ್ರದೀಪ್ ಸಾರಸ್ವತ್ ಹೇಳಿದ್ದಾರೆ. ಇದನ್ನೂ ಓದಿ: ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಿರಾತಕರ ಗ್ಯಾಂಗ್‌

    Live Tv
    [brid partner=56869869 player=32851 video=960834 autoplay=true]

  • ಬಂಡೆಮಠದ ಸ್ವಾಮೀಜಿ ಕೇಸ್‌ಗೆ ಟ್ವಿಸ್ಟ್ – ಪ್ರತೀಕಾರ ತೀರಿಸಿಕೊಂಡ ನೀಲಾಂಬಿಕೆ

    ಬಂಡೆಮಠದ ಸ್ವಾಮೀಜಿ ಕೇಸ್‌ಗೆ ಟ್ವಿಸ್ಟ್ – ಪ್ರತೀಕಾರ ತೀರಿಸಿಕೊಂಡ ನೀಲಾಂಬಿಕೆ

    ರಾಮನಗರ: ಬಂಡೆಮಠದ ಸ್ವಾಮೀಜಿ (Basavalinga Shree) ಸಾವಿಗೆ ಸಂಬಂಧಿಸಿದಂತೆ ತನಿಖೆ ಮುಗಿಸಿರುವ ಪೊಲೀಸರು ದೋಷಾರೋಪ ಪಟ್ಟಿಯನ್ನು ಕೋರ್ಟಿಗೆ (Court) ಸಲ್ಲಿಸುತ್ತಿದ್ದಾರೆ. ನೂರಾರು ಪುಟಗಳ ದೋಷಾರೋಪ ಪಟ್ಟಿಯಲ್ಲಿ (Police Charge Sheet) ಇಂಚಿಂಚೂ ಮಾಹಿತಿ ಬಹಿರಂಗವಾಗಿದೆ.

    ಆರೋಪಿ ಯುವತಿ ನೀಲಾಂಬಿಕೆ (Neelambike), ತಾನು ಸೇಡು ತೀರಿಸಿಕೊಳ್ಳೋದಕ್ಕಾಗಿಯೇ ಈ ಕೃತ್ಯವನ್ನು ಮಾಡಿದ್ದಳು ಅನ್ನೋ ಸತ್ಯ ಬಯಲಾಗಿದೆ. ಸ್ವಾಮೀಜಿ ಮಾಡಿದ್ದ ಒಂದು ಅವಮಾನವನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಅನ್ನೊ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ (Police Charge Sheet) ಉಲ್ಲೇಖವಾಗಿದೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿಗೆ ಮಹಿಳೆಯಿಂದ ಬರುತ್ತಿತ್ತು ದೂರವಾಣಿ ಕರೆ- ಡೆತ್‍ನೋಟ್‍ನಲ್ಲಿ ರಹಸ್ಯ ಬಯಲು

    ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ನೀಲಾಂಬಿಕೆಗೆ ಬಂಡೆಮಠದ ಸ್ವಾಮಿಯ ಮೇಲೆ ಸೇಡು ಇತ್ತು. ಸ್ವಾಮೀಜಿ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಕೆ ಕಾಯುತ್ತಿದ್ದಳು. ಅದಕ್ಕಾಗಿ ಈ ಹಿಂದೆ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಳು. ಸ್ವಾಮೀಜಿ ಒಬ್ಬ ಹೆಣ್ಣುಬಾಕ, ಹೆಣ್ಣಿನ ಮೋಹ ಇದೆ ಅಂತಾ ಹೇಳಿದ್ದಳು. ಈ ವಿಚಾರ ಗೊತ್ತಾಗಿ ಬಂಡೆಮಠದ ಸ್ವಾಮಿ ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದಂತೆ. ಆ ಆಡಿಯೋದ ಮೂಲಕ ನೀಲಾಂಬಿಕೆಗೆ ಸ್ವಾಮೀಜಿ ಅವಮಾನ ಮಾಡಿದ್ದರು. ಇದನ್ನೂ ಓದಿ: ಬಂಡೆಮಠದ ಶ್ರೀ ಆತ್ಮಹತ್ಯೆ ಕೇಸ್ – ನಗ್ನವಾಗಿರುವ ಮೂರನೇ ವೀಡಿಯೋ ಬಹಿರಂಗ

    ಅವಮಾನದಿಂದ ಕುಪಿತಗೊಂಡಿದ್ದ ನೀಲಾಂಬಿಕೆ ಸೇಡು ತೀರಿಸಿಕೊಳ್ಳೋ ಪ್ಲಾನ್ ಮಾಡಿದ್ದಳು. ಈ ವಿಚಾರ ತಿಳಿದು ಕಣ್ಣೂರು ಮಠದ ಸ್ವಾಮೀಜಿ ನೀಲಾಂಬಿಕೆಯನ್ನು ಬಳಸಿಕೊಂಡಿದ್ದಾರೆ. ನೀಲಾಂಬಿಕೆಗೆ ಹಣದ ಸಹಾಯ ಮಾಡಿ ವೀಡಿಯೋ ಕಾಲ್‌ಗೆ ಪ್ರೇರಣೆ ನೀಡಿದ್ದಾರೆ ಅನ್ನೋ ಸತ್ಯ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮುಲ್ಲಾಗಳಿಗೆ ಬಿಜೆಪಿಯಿಂದ ಅವಮಾನ- ಸಿದ್ದರಾಮಯ್ಯ ಬೆಂಬಲಿಸಿದ ಮುಸ್ಲಿಂ ಸಂಘಟನೆ

    ಮುಲ್ಲಾಗಳಿಗೆ ಬಿಜೆಪಿಯಿಂದ ಅವಮಾನ- ಸಿದ್ದರಾಮಯ್ಯ ಬೆಂಬಲಿಸಿದ ಮುಸ್ಲಿಂ ಸಂಘಟನೆ

    ಬೆಂಗಳೂರು: ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹಾಗೂ ಅಶ್ವಥ್ ನಾರಾಯಣ್ (Ashwath Narayan) ಅವರು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನ ಸಿದ್ರಾಮುಲ್ಲಾ ಖಾನ್ ಎಂದು ವ್ಯಂಗ್ಯವಾಡಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

    ಸಿದ್ರಾಮುಲ್ಲಾ ಖಾನ್ (Siddramulla Khan) ಹೇಳಿಕೆಯಿಂದ ಕುರುಬ ಸಮುದಾಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಆದರೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಸಿ.ಟಿ ರವಿ ಅವರು, ಸಿದ್ರಾಮುಲ್ಲಾ ಖಾನ್ ಜನರೇ ನೀಡಿರುವ ಬಿರುದು, ಈ ಹೇಳಿಕೆ ಕಾಂಗ್ರೆಸ್ಸಿಗರಿಗೆ ಇಷ್ಟು ಉರಿಯುತ್ತೆ ಅಂದಿದ್ರೆ 10 ವರ್ಷದ ಮೊದಲೇ ಹೇಳ್ತಿದ್ದೆ ಎಂದು ಲೇವಡಿ ಮಾಡಿದ್ದಾರೆ.

    ಈ ಬೆನ್ನಲ್ಲೇ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿರುವ ಮುಸ್ಲಿಂ ಸಂಘಟನೆ ಸಿ.ಟಿ ರವಿ ಹಾಗೂ ಅಶ್ವಥ್ ನಾರಾಯಣ್ ಅವರನ್ನ ಕ್ಷಮೆ ಕೋರುವಂತೆ ಒತ್ತಾಯಿಸಿದೆ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್‌ ಬಿರುದು ನಾವಲ್ಲ, ಜನರೇ ನೀಡಿದ್ದಾರೆ – ಸಿದ್ದುಗೆ ಬಿಜೆಪಿ ಟಾಂಗ್‌

    ಮುಸ್ಲಿಂ ಸಂಘಟನೆಯ ಪ್ರಮುಖ ಸಾಧಿಕ್ ಪಾಷಾ ಮಾತನಾಡಿದ್ದು, ಬಿಜೆಪಿ ನಾಯಕರ ಮಾತುಗಳು ಮುಸ್ಲಿಂ ಮುಖಂಡರನ್ನು (Muslim Leaders) ಕೆರಳಿಸಿದೆ. ಈ ಹೇಳಿಕೆಗಳು ನಮಾಜ್ ಓದಿಸುವ ಮುಲ್ಲಾಗಳಿಗೆ ಮಾಡಿರುವ ಅವಮಾನ ಎಂದು ಕಿಡಿಕಾರಿದ್ದಾರೆ. ದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಹೇಳಿಕೆಯಿಂದ ಇಷ್ಟು ಉರಿಯುತ್ತೆ ಅಂದಿದ್ರೆ 10 ವರ್ಷದ ಮೊದಲೇ ಹೇಳ್ತಿದ್ದೆ – CT ರವಿ

    ಸಿ.ಟಿ ರವಿ ಅಶ್ವಥ್ ನಾರಾಯಣ್ ಬಹಿರಂಗವಾಗಿ ಕ್ಷಮೆ ಕೇಳದೇ ಇದ್ರೆ ಕೋರ್ಟ್ (Court) ಮೆಟ್ಟಿಲೇರೋದಾಗಿ ಮುಸ್ಲಿಂ ಸಂಘಟನೆ ಎಚ್ಚರಿಕೆ ನೀಡಿದೆ. ಮುಸ್ಲಿಂ ಧರ್ಮದ ಹೆಸರನ್ನು ಇವರ ರಾಜಕೀಯಕ್ಕೆ ಎಳೆದು ತರೋದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಮಿತಾಭ್ ಹೆಸರಿನಲ್ಲಿ ನಕಲಿ ಲಾಟರಿ: ಕಾನೂನು ಹೋರಾಟದಲ್ಲಿ ಬಚ್ಚನ್ ಗೆಲುವು

    ಅಮಿತಾಭ್ ಹೆಸರಿನಲ್ಲಿ ನಕಲಿ ಲಾಟರಿ: ಕಾನೂನು ಹೋರಾಟದಲ್ಲಿ ಬಚ್ಚನ್ ಗೆಲುವು

    ಬಾಲಿವುಡ್ ಖ್ಯಾತನಟ ಅಮಿತಾಭ್ ಬಚ್ಚನ್ ಹೆಸರಿನಲ್ಲಿ ಖಾಸಗಿ ಸಂಸ್ಥೆಯೊಂದು ನಕಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಸಂಬಂಧ, ತಮ್ಮ ಹೆಸರು ದುರ್ಬಳಕೆ ವಿರುದ್ಧ ದೆಹಲಿಯ ಹೈಕೋರ್ಟ್‍ ಗೆ ಮೊರೆ ಹೋಗಿದ್ದರು ಅಮಿತಾಭ್. ಈ ಹೋರಾಟದಲ್ಲಿ ಅವರಿಗೆ ಜಯ ದೊರೆತಿದ್ದು, ಅನಧಿಕೃತ ವೆಬ್ ಸೈಟ್, ವಾಟ್ಸಪ್ ಗ್ರೂಪ್ ಸೇರಿದಂತೆ ಎಲ್ಲವನ್ನೂ ಬಂದ್ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.

    ಸಂಸ್ಥೆಯೊಂದು ಅಮಿತಾಭ್ ಅವರ ಧ್ವನಿ ದುರ್ಬಳಕೆ ಮಾಡಿಕೊಂಡು ವಾಟ್ಸಪ್ ಮೂಲಕ ಬಂಪರ್ ಪ್ರೈಸ್ ಆಮಿಷ ಒಡ್ಡುತ್ತಿತ್ತು. ಅಲ್ಲದೇ, ಅಮಿತಾಭ್ ಅವರ ಪೊಟೊಗಳನ್ನು ಬಳಸಿಕೊಂಡು ನಕಲಿ ವೆಬ್ಸೈಟ್ ಕೂಡ ಮಾಡಿಕೊಂಡಿತ್ತು. ತಮ್ಮ ಹೆಸರು, ಪೊಟೊ ಹಾಗೂ ಧ್ವನಿಯ ದುರ್ಬಳಕೆ ತಡೆಯುವಂತೆ ದೆಹಲಿ ಹೈಕೋರ್ಟಿಗೆ ಅಮಿತಾಭ್ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    ಅಮಿತಾಭ್ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ನವೀನ್ ಚಾವ್ಲಾ ಇಂದು ಅಮಿತಾಭ್ ಪರ ತೀರ್ಪು ನೀಡಿದ್ದಾರೆ. ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವ ಅನಧಿಕೃತ ವೆಬ್‌ಸೈಟ್ ತೆರವು ಮಾಡುವಂತೆ ಹಾಗೂ ಧ್ವನಿ, ಚಿತ್ರ ದುರ್ಬಳಕೆ ಮಾಡಿಕೊಂಡು ವಾಟ್ಸಪ್ ಸೇರಿದಂತೆ ಇತರೆಡೆ ಜನರಿಗೆ ಮೋಸ ಮಾಡುವ ನಂಬರ್ ಗಳನ್ನು ಬ್ಲಾಕ್ ಮಾಡುವಂತೆ ಸೂಚನೆ ನೀಡಲಾಗಿದೆ. ಟೆಲಿಕಾಂ ಸಂಸ್ಥೆಗಳು ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಸಮಂತಾ ಸಿನಿಮಾಗೆ ಸಂಕಷ್ಟ: ಕೋರ್ಟ್ ನಿಂದ ತಡೆಯಾಜ್ಞೆ

    ಸಮಂತಾ ಸಿನಿಮಾಗೆ ಸಂಕಷ್ಟ: ಕೋರ್ಟ್ ನಿಂದ ತಡೆಯಾಜ್ಞೆ

    ಸಮಂತಾ ನಟನೆಯ ಯಶೋದಾ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಉತ್ತಮ ರೀತಿಯಲ್ಲೇ ಜನರು ಕೂಡ ಸಿನಿಮಾವನ್ನು ಸ್ವೀಕರಿಸಿದ್ದಾರೆ. ಮೊದಲ ಬಾರಿಗೆ ಸಮಂತಾ ಕೂಡ ಆ ರೀತಿಯ ಪಾತ್ರ ಮಾಡಿದ್ದರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅನಾರೋಗ್ಯದ ನಡುವೆಯೂ ಸಮಂತಾ ಈ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇದೆಲ್ಲದರ ಪರಿಣಾಮ ಬಾಕ್ಸ್ ಆಫೀಸಿನಲ್ಲೂ ಚಿತ್ರ ಸದ್ದು ಮಾಡುತ್ತಿದೆ.

    ಸಿನಿಮಾ ರಿಲೀಸ್ ಆದ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಈ ನಡುವೆ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರವನ್ನು ಒಟಿಟಿಗೆ ರಿಲೀಸ್ ಮಾಡಬಾರದು ಎಂದು ಇವಾ ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಕೋರ್ಟ್ ಮೆಟ್ಟಿಲು ಏರಿದೆ. ಇವಾ ಮಾತುಗಳನ್ನು ಆಲಿಸಿರುವ ಕೋರ್ಟ್ ಕೂಡ ಆಸ್ಪತ್ರೆಯ ಪರವಾಗಿಯೇ ಆದೇಶ ನೀಡಿದೆ. ಒಟಿಟಿಯಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ: ರಿಷಬ್‌ ನಟನೆಯ ʻಕಾಂತಾರʼ ಚಿತ್ರಕ್ಕೆ ಗೋವಾ ಸಿಎಂ ಮೆಚ್ಚುಗೆ

    ಈ ಸಿನಿಮಾದಲ್ಲಿ ಸಮಂತಾ ಬಾಡಿಗೆ ತಾಯಿ ಪಾತ್ರ ಮಾಡಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಇವಾ ಆಸ್ಪತ್ರೆಯನ್ನು ತೋರಿಸಲಾಗಿದೆ. ಅದು ಆಸ್ಪತ್ರೆಯ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಆಸ್ಪತ್ರೆಯನ್ನು ತೋರಿಸಲಾಗಿದೆ ಎನ್ನುವುದು ಮ್ಯಾನೇಜ್ ಮೆಂಟ್ ಆರೋಪ. ಆಸ್ಪತ್ರೆಯನ್ನು ಕೆಟ್ಟ ರೀತಿಯಲ್ಲಿ ತೋರಿಸಿದ್ದರಿಂದ ತಮ್ಮ ಆಸ್ಪತ್ರೆಯ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಮೆಟ್ಟಿಲು ಏರಿತ್ತು ಮ್ಯಾನೇಜ್ ಮೆಂಟ್.

    ಯಶೋದಾ ಯಶಸ್ಸಿನ ಬೆನ್ನಲ್ಲೇ ಸಮಂತಾ ಖುಷಿಯಲ್ಲಿದ್ದರು. ಪಾತ್ರವನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳು ಧನ್ಯವಾದಗಳನ್ನೂ ಅವರು ತಿಳಿಸಿದ್ದರು. ಈ ಸಿನಿಮಾದ ಗೆಲುವು ಚಿತ್ರೋದ್ಯಮಕ್ಕೂ ಚೈತನ್ಯ ತುಂಬಿತ್ತು. ಅಷ್ಟರಲ್ಲಿ ಇಂಥದ್ದೊಂದು ಕಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ಚಿತ್ರಮಂದಿರದಲ್ಲಿ ಸಿನಿಮಾ ಓಡುತ್ತಿದ್ದರೂ, ಒಟಿಟಿಯಲ್ಲಿ ಮಾತ್ರ ಅದು ತಡವಾಗಿ ಬರಬಹುದು.

    Live Tv
    [brid partner=56869869 player=32851 video=960834 autoplay=true]

  • 581 ಕೆಜಿ ಗಾಂಜಾ ತಿಂದ ಇಲಿಗಳು – ಮಥುರಾ ಪೊಲೀಸರಿಂದ ಮಾಹಿತಿ

    581 ಕೆಜಿ ಗಾಂಜಾ ತಿಂದ ಇಲಿಗಳು – ಮಥುರಾ ಪೊಲೀಸರಿಂದ ಮಾಹಿತಿ

    ಲಕ್ನೋ: ಮುಟ್ಟುಗೋಲು ಹಾಕಿಕೊಂಡು ಶೇರ್‌ಗಢ್ ಮತ್ತು ಹೈವೇ ಪೊಲೀಸ್ ಠಾಣೆಗಳ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 581 ಕಿಲೋಗ್ರಾಂಗಳಷ್ಟು ಗಾಂಜಾವನ್ನು ಇಲಿಗಳು (Rat) ತಿಂದಿವೆ ಎಂದು ಉತ್ತರ ಪ್ರದೇಶದ (Uttar Pradesh) ಮಥುರಾ ಪೊಲೀಸರು (Mathura Police) ವಿಶೇಷ ನಾರ್ಕೋಟಿಕ್ ಡ್ರಗ್ಸ್ ಮತ್ತಿ ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ ಆಕ್ಟ್ (1985) (Psychotropic Substances Act) ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

    ಪ್ರಕರಣವೊಂದರಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಈ ಆದೇಶಕ್ಕೆ ಪ್ರತಿಯಾಗಿ ಪೊಲೀಸರು ಈ ವರದಿ ಸಲ್ಲಿಸಿದ್ದಾರೆ. ಶೇರ್‌ಗಢ್ (Shergarh) ಪೊಲೀಸ್ ಠಾಣೆಯಲ್ಲಿ ಸುಮಾರು 386 ಕೆಜಿ ಗಾಂಜಾವನ್ನು ಸಂಗ್ರಹಿಸಲಾಗಿತ್ತು, ಹೈವೇ ಪೊಲೀಸ್ ಠಾಣೆಯಲ್ಲಿ (Highway police stations) 195 ಕೆಜಿ ಗಾಂಜಾವನ್ನು ಇಡಲಾಗಿತ್ತು. ಇದೀಗ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ನವೆಂಬರ್ 26 ರೊಳಗೆ ಸಾಕ್ಷ್ಯಗಳನ್ನು ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    court order law

     

    ಈ ಸಂಬಂಧ ಹೈವೇ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಛೋಟೆ ಲಾಲ್ ಪ್ರತಿಕ್ರಿಯಿಸಿ, ಅಕ್ಟೋಬರ್‌ನಲ್ಲಿ ಸುರಿದ ಮಳೆ ವೇಳೆ ಗೋದಾಮಿಗೆ ನೀರು ನುಗ್ಗಿದ್ದು, ಅಲ್ಲಿ ಸಂಗ್ರಹಿಸಲಾಗಿದ್ದ ಗಾಂಜಾ ಹಾಳಾಗಿದೆ ಎಂದು ತಿಳಿಸಿದ್ದಾರೆ. ಇದೇ ರೀತಿ ಶೇರ್‌ಗಢ್ ಠಾಣೆಯ ಇನ್ಸ್‌ಪೆಕ್ಟರ್ ಸೋನು ಕುಮಾರ್ ಅವರು ಕೂಡ ಕಾರಣ ನೀಡಿದ್ದಾರೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ಮಾತ್ರವಲ್ಲ 6 ಸ್ಥಳಗಳು ಟಾರ್ಗೆಟ್‌ – ಮೊಬೈಲ್‌ನಲ್ಲಿ 6 ಜಾಗ ಸರ್ಚ್‌ ಮಾಡಿದ್ದ ಬಾಂಬರ್‌

    ಏತನ್ಮಧ್ಯೆ, ಹೆದ್ದಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಛೋಟೆ ಲಾಲ್ ಮಾತನಾಡಿ, ಅಕ್ಟೋಬರ್‍ನಲ್ಲಿ ಸುರಿದ ಮಳೆಯ ಸಮಯದಲ್ಲಿ ಗೋದಾಮಿಗೆ ನೀರು ನುಗ್ಗಿತ್ತು ಮತ್ತು ಅಲ್ಲಿ ಸಂಗ್ರಹಿಸಲಾಗಿದ್ದ ಗಾಂಜಾ ಹಾಳಾಗಿದೆ. ಇದೇ ರೀತಿಯ ಖಾತೆಯನ್ನು ಶೇರ್‌ಗಢ್ ಠಾಣೆಯ ಇನ್ಸ್‌ಪೆಕ್ಟರ್ ಸೋನು ಕುಮಾರ್ ಅವರು ಗಾಂಜಾ ಹಾಳಾಗಲು ಇದೇ ರೀತಿಯ ಕಾರಣಗಳನ್ನು ನೀಡಿದ್ದಾರೆ. ಇದನ್ನೂ ಓದಿ: ದೆವ್ವವಿಲ್ಲ ಎಂದು ಸಾರಲು ಸ್ಮಶಾನದಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ

    ಸದ್ಯ ಈ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮಥುರಾ ಎಸ್‍ಎಸ್‍ಪಿ ಅಭಿಷೇಕ್ ಅವರಿಗೆ ಇಲಿ ಕಾಟ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, 60 ಲಕ್ಷ ರೂಪಾಯಿ ಮೌಲ್ಯದ 581 ಕೆಜಿ ಗಾಂಜಾವನ್ನು ವಾಸ್ತವವಾಗಿ ಇಲಿಗಳೇ ಸೇವಿಸಿಸುವುದಕ್ಕೆ ಸೂಕ್ತ ಪುರಾವೆ ನೀಡುವಂತೆ ಆದೇಶಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ’ ವಿವಾದಾತ್ಮಕ ಹೇಳಿಕೆ: ಚೇತನ್ ವಿರುದ್ಧದ ಎಫ್.ಐ.ಆರ್ ರದ್ದತಿಗೆ ಹೈಕೋರ್ಟ್ ನಕಾರ

    ‘ಕಾಂತಾರ’ ವಿವಾದಾತ್ಮಕ ಹೇಳಿಕೆ: ಚೇತನ್ ವಿರುದ್ಧದ ಎಫ್.ಐ.ಆರ್ ರದ್ದತಿಗೆ ಹೈಕೋರ್ಟ್ ನಕಾರ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸಿದೆ. ಬಾಕ್ಸ್ ಆಫೀಸಿನಲ್ಲಿ ಎಲ್ಲ ದಾಖಲೆಗಳನ್ನು ಪುಡಿಗಟ್ಟಿ ಮುನ್ನುಗ್ಗುತ್ತಿದೆ. ಕರಾವಳಿ ದೈವಗಳ ಕುರಿತಾದ ಈ ಸಿನಿಮಾ, ಪ್ರಪಂಚದಾದ್ಯಂತ ತೆರೆಕಂಡ ಸಂದರ್ಭದಲ್ಲಿ ನಟ ಚೇತನ್, ಭೂತಕೋಲದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಚೇತನ್ ಹೇಳಿಕೆ ಹಲವರ ಕಣ್ಣುಗಳನ್ನು ಕೆಂಪಾಗಿಸಿತ್ತು. ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

    ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡೇ ಬಂದಿದ್ದರು ಚೇತನ್. ಆನಂತರ ತಮ್ಮ ಮೇಲಿನ ಎಫ್.ಐ.ಆರ್ ಅನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್ ಮೋರೆ ಹೋಗಿದ್ದರು. ಇದೀಗ ಎಫ್.ಐ.ಆರ್ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ. ಈ ಅರ್ಜಿ ವಿಚಾರಣೆಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ ಅರುಣ್ ಅವರಿದ್ದ ಪೀಠ, ಪ್ರಕರಣವಿನ್ನೂ ತನಿಖಾ ಹಂತದಲ್ಲಿ ಇರುವುದರಿಂದ ಈ ಹಂತದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು ಎಂದು ಅರ್ಜಿ ವಜಾಗೊಳಿಸಿದೆ. ಇದನ್ನೂ ಓದಿ:ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

    ಚೇತನ್ ಪರ ವಕೀಲರು ‘ಅರ್ಜಿದಾರರ ಮಾತಿನಿಂದ ಸಮಾಜದಲ್ಲಿ ಅಶಾಂತಿ ಮೂಡಿಲ್ಲ. ಯಾರಿಗೂ ತೊಂದರೆ ಕೊಡುವ ಉದ್ದೇಶವೂ ಅವರದ್ದಲ್ಲ. ತೊಂದರೆಯೂ ಆಗಿಲ್ಲ. ಹಾಗಾಗಿ ಎಫ್.ಐ.ಆರ್ ರದ್ದು ಮಾಡಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸರಕಾರದ ಪರ ವಕೀಲರು ಆಕ್ಷೇಪಿಸಿದರು. ಉದ್ದೇಶಪೂರ್ವಕವಾಗಿಯೇ ಇಂತಹ ಹೇಳಿಕೆ ನೀಡಿದ್ದಾರೆ ಎಂದು ವಾದಿಸಿದರು. ಪ್ರಕರಣ ತನಿಖೆಯ ಹಂತದಲ್ಲಿ ಇರುವುದರಿಂದ ಎಫ್.ಐ.ಆರ್ ರದ್ದು ಮಾಡಬಾರದು ಎಂದು ಮನವಿ ಮಾಡಿದರು. ಇವರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿತು.

    ಭೂತಕೋಲದ ಬಗ್ಗೆ ಚೇತನ್ ಆಡಿದ ಮಾತುಗಳು ಅಂದು ಸಾಕಷ್ಟು ಟೀಕೆಗೆ ಗುರಿಯಾಗಿದ್ದವು. ಕರಾವಳಿಯ ದೈವಗಳ ಬಗ್ಗೆ ಚೇತನ್ ತಿಳಿದುಕೊಂಡು ಮಾತನಾಡಬೇಕು ಎಂದು ಹಲವರು ಸಲಹೆ ನೀಡಿದರು. ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದರು. ನಂತರ ದೂರು ದಾಖಲಾಗಿತ್ತು. ದೂರು ಇದೀಗ ತನಿಖಾ ಹಂತದಲ್ಲಿದ್ದು, ಚೇತನ್ ತನಿಖೆಯನ್ನು ಎದುರಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟಕ್ಕೆ ಕೋರ್ಟ್‌ ತಡೆ

    ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟಕ್ಕೆ ಕೋರ್ಟ್‌ ತಡೆ

    ಬೆಂಗಳೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ(Addanda C Cariappa) ರಚಿಸಿದ ಟಿಪ್ಪು ನಿಜ ಕನಸುಗಳು(Tipu Nija Kanasugalu) ಪುಸ್ತಕ ಮಾರಾಟಕ್ಕೆ ಸಿಟಿ ಸಿವಿಲ್‌ ಕೋರ್ಟ್‌(City Civil Court) ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ.

    ಟಿಪ್ಪು ನಾಟಕ (Drama) ಪ್ರದರ್ಶನಕ್ಕೆ‌ ಯಾವುದೇ ಅಡ್ಡಿ ಇಲ್ಲ. ನಾಟಕ ಪ್ರದರ್ಶನಕ್ಕೆ ತಡೆ ನೀಡಲಾಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

    court order law

    ಪುಸ್ತಕವು ಕೋಮು, ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ. ಪುಸ್ತಕ ಸುಳ್ಳುಗಳಿಂದ ತುಂಬಿದೆ. ಲೇಖಕರು ಹೇಳಿದ ವಿಷಯಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

    ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಅಪಾಯವಿದೆ. ಹೀಗಾಗಿ ಎಲ್ಲಿಯೂ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ಬೆಂಗಳೂರು ಜಿಲ್ಲಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ರಫೀಉಲ್ಲಾ ಅರ್ಜಿಯಲ್ಲಿ ಮನವಿ ಮಾಡಿದ್ದರು.

    ಈ ಅರ್ಜಿಯನ್ನು ಪುರಸ್ಕರಿಸಿದ 15ನೇ ಹೆಚ್ಚುವರಿ ಸಿಟಿ ಸಿವಿಲ್‌ ನ್ಯಾ. ಜೆ ಆರ್‌ ಮೆಂಡೋನ್ಸಾ ಪುಸ್ತಕ ಮಾರಾಟಕ್ಕೆ ತಡೆ ನೀಡಿದ್ದಾರೆ. ಪುಸ್ತಕ ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ ಮತ್ತು ಪುಸ್ತಕ ಮುದ್ರಿಸಿರುವ ರಾಷ್ಟ್ರೋತ್ಥಾನ ಮುದ್ರಣಾಲಯಕ್ಕೆ ಪುಸ್ತಕ ಹಂಚಿಕೆ ಮತ್ತು ಮಾರಾಟ ಮಾಡದಂತೆ ಆದೇಶ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಹುಕೋಟಿ ವಂಚನೆ ಪ್ರಕರಣ : ನಟಿ ಜಾಕ್ವೇಲಿನ್ ಫರ್ನಾಂಡಿಸ್ ಗೆ ಷರತ್ತುಬದ್ಧ ಜಾಮೀನು

    ಬಹುಕೋಟಿ ವಂಚನೆ ಪ್ರಕರಣ : ನಟಿ ಜಾಕ್ವೇಲಿನ್ ಫರ್ನಾಂಡಿಸ್ ಗೆ ಷರತ್ತುಬದ್ಧ ಜಾಮೀನು

    ನ್ನಡವೂ ಸೇರಿದಂತೆ ಬಾಲಿವುಡ್ ನ ಹಲವು ಸಿನಿಮಾಗಳಲ್ಲಿ ನಟಿಸಿರುವ ಜಾಕ್ವೇಲಿನ್ ಫರ್ನಾಂಡಿಸ್ (Jacqueline Fernandes) ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ.

    2 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ ನಟಿಗೆ ಜಾಮೀನು (Bail) ಮಂಜೂರು ಮಾಡಿದೆ.

    ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಸ್ನೇಹಿತ ಸುಕೇಶ್ ಚಂದ್ರಶೇಖರ್ (Sukesh Chandrasekhar) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿಂಗಳುಗಳಿಂದ ಜಾಕ್ವೆಲಿನ್  ಅವರ  ವಿಚಾರಣೆಯನ್ನು ಇಡಿ ನಡೆಸುತ್ತಿದೆ.  ಈ ಕಾರಣಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದ ಜಾಕ್ವೇಲಿನ್ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಖುದ್ದಾಗಿ ಹಾಜರಾಗಿದ್ದರು.

    ಇದನ್ನೂ ಓದಿ:ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್

    200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ, ಇದರ ಪ್ರಮುಖ ಕಿಂಗ್ ಪಿನ್ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಸ್ನೇಹ ಹೊಂದಿದ್ದರು. ಅಲ್ಲದೇ, ಈ ಹಣದಲ್ಲೇ ನಟಿಗೆ ದುಬಾರಿ ವಸ್ತುಗಳನ್ನು ಸುಕೇಶ್ ನೀಡಿದ್ದಾರೆ ಎನ್ನುವ ಆರೋಪವಿದೆ. ಕುದುರೆ, ಕಾರು, ವಾಚ್, ದುಬಾರಿ ಬ್ಯಾಗ್ ಸೇರಿದಂತೆ ಹಲವು ವಸ್ತುಗಳನ್ನು ಜಾಕ್ವೆಲಿನ್ ಪಡೆದುಕೊಂಡಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

    ಈ ಎಲ್ಲ ಆರೋಪಗಳನ್ನೂ ಜಾಕ್ವೇಲಿನ್ ತಳ್ಳಿ ಹಾಕಿದ್ದಾರೆ. ಸುಕೇಶ್ ಜೊತೆಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಬಹುತೇಕ ವಸ್ತುಗಳನ್ನು ತಾವೇ ತಮ್ಮ ಸ್ವಂತ ಹಣದಲ್ಲೇ ಖರೀದಿಸಿರುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]