Tag: court

  • ದಿನಕ್ಕೆ 5 ಬಾರಿ ನಮಾಜ್, 2 ಸಸಿ ನೆಡಬೇಕು – ಅಪರಾಧಿಗೆ ವಿಭಿನ್ನ ಶಿಕ್ಷೆ ನೀಡಿದ ಕೋರ್ಟ್

    ದಿನಕ್ಕೆ 5 ಬಾರಿ ನಮಾಜ್, 2 ಸಸಿ ನೆಡಬೇಕು – ಅಪರಾಧಿಗೆ ವಿಭಿನ್ನ ಶಿಕ್ಷೆ ನೀಡಿದ ಕೋರ್ಟ್

    ಮುಂಬೈ: ರಸ್ತೆ ಅಪಘಾತದ ಗಲಾಟೆ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಅಪರಾಧಿ (Criminal) ಎಂದು ಘೋಷಿಸಿದ ಮಹಾರಾಷ್ಟ್ರದ (Maharashtra) ಮಾಲೆಗಾಂವ್‌ನ (Malegaon) ಮ್ಯಾಜಿಸ್ಟ್ರೇಟ್ ಕೋರ್ಟ್ (Court) ಜೈಲು ಶಿಕ್ಷೆಗೆ ಬದಲಾಗಿ 21 ದಿನಗಳ ಕಾಲ ದಿನಕ್ಕೆ 5 ಬಾರಿ ನಮಾಜ್ (Namaz) ಮಾಡುವಂತೆ ಮತ್ತು ನಿತ್ಯ 2 ಸಸಿಗಳನ್ನು ನೆಟ್ಟು (Planting) ಪೊಷಿಸುವಂತೆ ಸೂಚಿಸಿ ವಿಭಿನ್ನ ಆದೇಶ ಹೊರಡಿಸಿದೆ.

    1958ರ ಅಪರಾಧಿಗಳ ಪ್ರೊಬೇಶನ್ ಆಕ್ಟ್‌ನ ಸೆಕ್ಷನ್ 3 ಅಪರಾಧವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿ ಅಪರಾಧಿಯನ್ನು ಬಿಡುಗಡೆ ಮಾಡಲು ಮ್ಯಾಜಿಸ್ಟ್ರೇಟ್‌ಗೆ ಅಧಿಕಾರವನ್ನು ನೀಡುತ್ತದೆ ಇದರ ಅಡಿಯಲ್ಲಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ತೇಜ್ವಂತ್ ಸಿಂಗ್ ಸಂಧು ಆದೇಶದಲ್ಲಿ ಹೇಳಿದ್ದಾರೆ.

    ಕೇವಲ ಎಚ್ಚರಿಕೆ ಸಾಕಾಗುವುದಿಲ್ಲ ಮತ್ತು ಅಪರಾಧಿಯು ತನ್ನ ಕೃತ್ಯಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆಯನ್ನು ಮತ್ತು ಅವನ ಅಪರಾಧವನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆ ಮುಸ್ಲಿಂ ಧರ್ಮ ಆಚರಿಸುವ ವ್ಯಕ್ತಿಗೆ ನಮಾಜ್ ಮಾಡುವ ಹಾಗೂ ಸಸಿ ನಡುವೆ ಜವಬ್ದಾರಿ ನೀಡಿದೆ. ಇದರಿಂದ ಪ್ರತಿ ದಿನವೂ ಆತನಿಗೆ ತನ್ನ ತಪ್ಪಿನ ಅರಿವಾಗಲಿದೆ ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಪರ್ ಆಗಲು ಕದ್ದ- ತನಿಖೆ ವೇಳೆ ರಾಪ್ ಸಾಂಗ್ ಹಾಡಿದ!

    ವಿಚಾರಣೆ ವೇಳೆ ಅಪರಾಧಿಯೂ ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸುವ ವ್ಯಕ್ತಿಯಾಗಿದ್ದರೂ, ಧಾರ್ಮಿಕ ಗ್ರಂಥಗಳಲ್ಲಿ ಸೂಚಿಸಿದಂತೆ ತಾನು ನಿಯಮಿತವಾಗಿ ನಮಾಜ್ ಮಾಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಇದೇ ಕಾರಣಕ್ಕೆ ಮುಂದಿನ 21 ದಿನಗಳ ಕಾಲ 5 ಹೊತ್ತಿನ ನಮಾಜ್ ಮಾಡಲು ಹಾಗೂ ಅಪರಾಧ ಎಸಗಿದ ಸೋನಾಪುರ ಮಸೀದಿಯ ಆವರಣದಲ್ಲಿ 2 ಮರಗಳನ್ನು ನೆಡಲು ಆದೇಶಿಸಿದೆ.

    ಅಪರಾಧಿ 2010 ರಲ್ಲಿ ಅಪಘಾತ ಪ್ರಕರಣವೊಂದರಲ್ಲಿ ಗಲಾಟೆ ಮಾಡಿದ್ದ. ವ್ಯಕ್ತಿಯೊರ್ವನ ಮೇಲೆ ಹಲ್ಲೆ ಮಾಡಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 325 (ಸ್ವಯಂಪ್ರೇರಿತವಾಗಿ ಘೋರವಾದ ಗಾಯವನ್ನು ಉಂಟುಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸೆಕ್ಷನ್ 323 ರ ಅಡಿಯಲ್ಲಿ ಆರೋಪಿ ತಪ್ಪಿತಸ್ಥ ಎಂದು ಮ್ಯಾಜಿಸ್ಟ್ರೇಟ್ ಪರಿಗಣಿಸಿದ ಹಿನ್ನೆಲೆ ಉಳಿದ ಅಪರಾಧಗಳಿಂದ ಆತನನನ್ನು ಖುಲಾಸೆಗೊಳಿಸಲಾಯಿತು. ಇದನ್ನೂ ಓದಿ: ಐಷಾರಾಮಿ ಕಾರಲ್ಲಿ ಬಂದು ಜಿ20 ಕಾರ್ಯಕ್ರಮಕ್ಕಾಗಿ ಇಟ್ಟಿದ್ದ ಹೂಕುಂಡ ಕದ್ದೊಯ್ದ ಕಳ್ಳ ಅರೆಸ್ಟ್‌

  • ರೋಹಿಣಿ ವಿರುದ್ಧ ನಿಲ್ಲದ ಸಮರ – ಮತ್ತೆ ಪೋಸ್ಟ್‌ ಹಂಚಿಕೊಂಡ ರೂಪಾ

    ರೋಹಿಣಿ ವಿರುದ್ಧ ನಿಲ್ಲದ ಸಮರ – ಮತ್ತೆ ಪೋಸ್ಟ್‌ ಹಂಚಿಕೊಂಡ ರೂಪಾ

    ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಮಾತನಾಡಬಾರದು, ಸಾಮಾಜಿಕ ಜಾಲತಾಣದಲ್ಲಿ (Social Media) ವೈಯಕ್ತಿಕ ಮಾನಹಾನಿ ಮಾಡಬಾರದು ಎಂದು ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ರೂಪಾ (IPS Roopa) ಮತ್ತೆ ಪೋಸ್ಟ್‌ ಹಾಕುವುದನ್ನು ಮುಂದುವರಿಸಿದ್ದಾರೆ.

    ರೋಹಿಣಿ ಸಿಂಧೂರಿ ವಿರುದ್ದ ಸರ್ಕಾರದ ಕೆಲವು ಕ್ರಮಗಳ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.  ಈ ಮಾಧ್ಯಮ ವರದಿಯ ಕೆಲವು ಪೋಸ್ಟ್‌ಗಳನ್ನು ತಮ್ಮ ಫೇಸ್ ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ದಯವಿಟ್ಟು ನನ್ನನ್ನು ಜೈಲಿಂದ ಹೊರಗೆ ಕಳಿಸ್ಬೇಡಿ – ಎನ್‌ಕೌಂಟರ್ ಭೀತಿಗೆ ನ್ಯಾಯಾಲಯ ಮೊರೆ ಹೋದ UP ಗ್ಯಾಂಗ್‌ಸ್ಟರ್

    ರೋಹಿಣಿ ಸಿಂಧೂರಿ ಅವರು ಡಿ. ರೂಪಾ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮಂಗಳವಾರ ಪತಿ ಸುಧೀರ್ ರೆಡ್ಡಿ (Sudhir Reddy) ಜೊತೆ ಖುದ್ದು 24ನೇ ಎಸಿಎಂಎಂ ಕೋರ್ಟ್‌ಗೆ (ACMM Court) ಹಾಜರಾಗಿದ್ದ ರೋಹಿಣಿ ಸಿಂಧೂರಿ, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು.

    ತಡೆಯಾಜ್ಞೆ ಇದ್ದರೂ, ರೂಪಾ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಹಾಕುತ್ತಲೇ ಇದ್ದಾರೆ. ಅವಹೇಳನ ಬರವಣಿಗೆ ಪೋಸ್ಟ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಮಾತನಾಡಿದರೆ ಪರವಾಗಿಲ್ಲ, ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

    ರೋಹಿಣಿ ಹೇಳಿಕೆ ಆಧರಿಸಿ ಡಿ.ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೋರ್ಟ್ ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿದೆ.

  • ಆಸ್ತಿ ಮುಟ್ಟುಗೋಲು ಹಾಕಲು ಬಂದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

    ಆಸ್ತಿ ಮುಟ್ಟುಗೋಲು ಹಾಕಲು ಬಂದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

    ನವದೆಹಲಿ: ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ (Court) ನೋಟಿಸ್ (Notice) ಕಳುಹಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಬೆಂಕಿ (Fire) ಹಚ್ಚಿಕೊಂಡು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.

    ದೆಹಲಿಯ ಗೋಕಲ್‍ಪುರಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ವಂಶಿಕಾ ಕಲೆಕ್ಷನ್ಸ್ ಮಾಲೀಕ ಕಪಿಲ್ ಕುಮಾರ್ (33) ಎಂದು ಗುರುತಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಕೆಲವು ಅಧಿಕಾರಿಗಳು ಗೋಕಲ್ ಪುರಿ ಪೊಲೀಸ್ ಠಾಣೆಗೆ ಆಗಮಿಸಿ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಪೊಲೀಸರ ಸಹಾಯವನ್ನು ಕೋರಿದ್ದರು. ಅದರಂತೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸ್ ಠಾಣೆಯ ಸಿಬ್ಬಂದಿ ಹೋಗಿದ್ದಾರೆ.

    CRIME 2

    ಈ ವಿಷಯ ತಿಳಿಯುತ್ತಿದ್ದಂತೆ ಕಪಿಲ್ ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳದಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಅಲ್ಲಿದ್ದ ಜನರು ಆತನನ್ನು ರಕ್ಷಿಸಲು ಹಾಗೂ ಬೆಂಕಿ ನಂದಿಸಲು ಪ್ರಯತ್ನಿಸಿದನು. ಇದನ್ನೂ ಓದಿ: ಸಿಲಿಂಡರ್ ಬ್ಲಾಸ್ಟ್- ಗುಡಿಸಲು ಬೆಂಕಿಗಾಹುತಿ, ಮಗಳ ಚಿಕಿತ್ಸೆಗೆ ತೆಗೆದಿಟ್ಟ ಹಣವೂ ಭಸ್ಮ

    crime

    ತಕ್ಷಣ ಅವರನ್ನು ಪೊಲೀಸ್ ಸಿಬ್ಬಂದಿ ಜಿಟಿಬಿ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಗೋಕಲ್ ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ದುರ್ಮರಣ 

  • ಮೈಸೂರಿನ ಆದಿಲ್ ಮನೆ ಮುಂದೆ ನಟಿ ರಾಖಿ ಸಾವಂತ್ ಹೈಡ್ರಾಮಾ

    ಮೈಸೂರಿನ ಆದಿಲ್ ಮನೆ ಮುಂದೆ ನಟಿ ರಾಖಿ ಸಾವಂತ್ ಹೈಡ್ರಾಮಾ

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮೈಸೂರಿನಲ್ಲಿ (Mysore) ಬೀಡು ಬಿಟ್ಟಿದ್ದಾರೆ. ತನಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಪತಿ ಆದಿಲ್ (Adil) ಮನೆಯ ಮುಂದೆ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ನನ್ನ ಗಂಡನ ಮನೆಯಲ್ಲಿ ಇರುವುದಕ್ಕೆ ನನಗೆ ಅವಕಾಶ ಬೇಕು ಎಂದು ಆದಿಲ್ ಮನೆಗೆ ಬಂದ ರಾಖಿಯನ್ನು ಆದಿಲ್ ಕುಟುಂಬ ಒಳಗೆ ಬಿಟ್ಟುಕೊಂಡಿಲ್ಲ. ಬಾಗಿಲು ತಗೆಯದೇ ಇರುವ ಕಾರಣಕ್ಕಾಗಿ ಮತ್ತೆ ಕಣ್ಣೀರು ಸುರಿಸಿದ್ದಾರೆ ರಾಖಿ.

    ಕೌಟುಂಬಿಕ ಕಲಹ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ರಾಖಿ ಸಾವಂತ್ ಮೈಸೂರು ಕೋರ್ಟ್ ಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ‘ನನ್ನ ಪತಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ‌. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದು’ ಎಂದಿದ್ದರು.

    ಮುಂದುವರೆದು ಮಾತನಾಡಿದ ರಾಖಿ, ‘ಆತ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆ. ನಾನು ಇಂದು ಬೆಳಿಗ್ಗೆ ಆದಿಲ್ ಖಾನ್ ತಂದೆ ಜೊತೆ ಮಾತನಾಡಿದೆ‌. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ಹಾಗಾದ್ರೆ ನಾನು ಏನು ಮಾಡಲಿ. ನನ್ನ ಬಳಿ 1.65 ಕೋಟಿ ಹಣ ಪಡೆದಿದ್ದಾನೆ‌. ಆದರೆ ನನಗೆ ಒಂದು ಪೈಸೆ ಕೊಟ್ಟಿಲ್ಲ‌’ ಎಂದು ಆರೋಪ ಮಾಡಿದ್ದರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ‘ಆದಿಲ್ ಮೈಸೂರು ಜನ ಸರಿ ಇಲ್ಲ ಎಂದು ನನ್ನ ಬಳಿ ಹೇಳಿದ. ಇದಕ್ಕಾಗಿಯೇ ಮುಂಬೈಗೆ ಬರುತ್ತೇನೆ ಎಂದು ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮೈಸೂರು ಕೋರ್ಟ್ ಮೇಲೆ ವಿಶ್ವಾಸ ಇದೆ. ನನಗೆ ನ್ಯಾಯ ಕೊಡಿಸಿ’ ಎಂದು ಮಾಧ್ಯಮಗಳ ಮುಂದೆ ರಾಖಿ ಗಳಗಳನೆ ಅತ್ತರು.  ಇದೀಗ ನ್ಯಾಯಕ್ಕಾಗಿ ಆದಿಲ್ ಮನೆಯ ಮುಂದೆಯೇ ಪ್ರತಿಭಟಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿ.ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ

    ಡಿ.ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ

    ಬೆಂಗಳೂರು: ರಾಜ್ಯದ ಉನ್ನತ ಮಹಿಳಾ ಅಧಿಕಾರಿಗಳ ಕಚ್ಚಾಟ ಇದೀಗ ಕೋರ್ಟ್ (Court) ವರೆಗೆ ತಲುಪಿದೆ. ಐಪಿಎಸ್ (IPS) ಅಧಿಕಾರಿ ಡಿ ರೂಪಾ (D Roopa) ವಿರುದ್ಧ ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಕೋರ್ಟ್ ಮೆಟ್ಟಿಲೇರಿದ್ದಾರೆ.

    ರೋಹಿಣಿ ಮಾಧ್ಯಮಗಳು ಹಾಗೂ ರೂಪಾ ವಿರುದ್ಧ ನಿರ್ಬಂಧಕಾಜ್ಞೆ ಅರ್ಜಿ ಸಲ್ಲಿಸಿದ್ದಾರೆ. ರೂಪಾ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಿಎಸ್‌ಗೆ ದೂರು ನೀಡಿದರೂ ಚೌಕಟ್ಟು ಮೀರಿ ಮಾತನಾಡುತ್ತಿದ್ದಾರೆ. ಹೀಗಾಗಿ ಅವರು ತಮ್ಮ ವಿರುದ್ಧ ಮಾತನಾಡದಂತೆ ನಿರ್ಬಂಧ ಹೇರಬೇಕು ಎಂದು ರೋಹಿಣಿ ವಾದ ಮಂಡಿಸಿದ್ದಾರೆ.

    ಡಿ.ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ

    ಈಗಾಗಲೇ ಐಎಎಸ್ ಅಧಿಕಾರಿ ರೋಹಿಣಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ಜಗಳಕ್ಕೆ ಸರ್ಕಾರ ಅಂತ್ಯ ಹಾಡಿದೆ. ರೋಹಿಣಿ ಸಿಂಧೂರಿ, ರೂಪಾ, ಹಾಗೂ ರೂಪಾ ಪತಿ ಮುನೀಷ್ ಮೌದ್ಗಿಲ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇದರ ಬೆನ್ನಲ್ಲೇ ಆರ್‌ಟಿಐ ಕಾರ್ಯಕರ್ತ ಗಂಗರಾಜು ಜೊತೆಗೆ ರೂಪಾ ಮಾತನಾಡಿರುವ ಆಡಿಯೋವೊಂದು ಲೀಕ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

    ಜನವರಿ 30ರಂದು ಬೆಂಗಳೂರಿನಲ್ಲಿ ಐಪಿಎಸ್ ಅಧಿಕಾರಿ ಮುನೀಶ್ ಮೌದ್ಗಿಲ್‌ರನ್ನು ಆರ್‌ಟಿಐ ಕಾರ್ಯಕರ್ತ ಗಂಗರಾಜು ಭೇಟಿ ಮಾಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಅಧಿಕಾರಿ ರೂಪಾ, ಗಂಗರಾಜುಗೆ ಕರೆ ಮಾಡಿ ಹೀನಾಮಾನವಾಗಿ ಬೈಯ್ದಿದ್ದಾರೆ. ಗಂಗರಾಜು, ರೋಹಿಣಿ ಸಿಂಧೂರಿ ಪರವಾಗಿ ಮೌದ್ಗಿಲ್‌ರನ್ನು ಭೇಟಿ ಮಾಡಲು ಬಂದಿದ್ದಾರೆ ಎಂದು ಕೆಟ್ಟ ಭಾಷೆಗಳಲ್ಲಿ ನಿಂದಿಸಿದ್ದಾರೆ. ರೋಹಿಣಿ ಸಿಂಧೂರಿ ಬಗ್ಗೆಯೂ ಕೆಟ್ಟ ಶಬ್ದಗಳನ್ನು ಬಳಸಿದ್ದಾರೆ.

    ಡಿ.ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ   - 2

    ಮತ್ತೊಂದು ಆಡಿಯೋದಲ್ಲಿ ಕಂದಾಯ ಇಲಾಖೆಯಲ್ಲೇ ಮೌದ್ಗಿಲ್ ಇದ್ದರೆ ಆಕೆ ಪದೇ ಪದೇ ಬಂದು ಇವರ ಸಹಾಯ ಪಡೆಯುತ್ತಾರೆ ಎಂದು ಹೇಳುವ ಮೂಲಕ ರೋಹಿಣಿ ಸಿಂಧೂರಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದಾರಾ ಎಂಬ ಅನುಮಾನ ದಟ್ಟವಾಗುವಂತೆ ಮಾಡಿದ್ದಾರೆ. ಜೊತೆಗೆ ರೋಹಿಣಿ ಕುರಿತು ಹಲವು ವಿಚಾರ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಅಕ್ರಮ ಆಸ್ತಿ ಆರೋಪ- IAS ಅಧಿಕಾರಿ ಆಸ್ತಿಯ Exclusive ಡೀಟೆಲ್ಸ್ ಇಲ್ಲಿದೆ

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗಂಗರಾಜು, ತಾವು ರೋಹಿಣಿ ಸಿಂಧೂರಿ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭೂ ಅಕ್ರಮದ ದೂರು ನೀಡಲು ಮೌದ್ಗಿಲ್ ಕಚೇರಿಗೆ ಹೋಗಿದ್ದೆ. ಇಷ್ಟಕ್ಕೆ ನನಗೆ ರೂಪಾ ನಿಂದಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತೇನೆ ಎಂದಿದ್ದಾರೆ. ಈ ವಿಚಾರ ಪರಿಷತ್‌ನಲ್ಲಿಯೂ ಸದ್ದು ಮಾಡಿದೆ.

    ಡಿ.ರೂಪಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೋಹಿಣಿ -3

    ಈ ನಡುವೆಯೇ ರೋಹಿಣಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಾಧ್ಯಮಗಳು ಹಾಗೂ ರೂಪಾ ವಿರುದ್ಧ ನಿರ್ಬಂಧಕಾಜ್ಞೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿದೆ. ಇದನ್ನೂ ಓದಿ: ರೋಹಿಣಿ, ರೂಪಾರನ್ನು ಅಮಾನತು ಮಾಡಿ ತನಿಖೆ ನಡೆಸಿ: ಹೆಚ್.ವಿಶ್ವನಾಥ್ ಆಗ್ರಹ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈಸೂರು ಕೋರ್ಟಿಗೆ ಹಾಜರಾದ ನಟಿ ರಾಖಿ ಸಾವಂತ್

    ಮೈಸೂರು ಕೋರ್ಟಿಗೆ ಹಾಜರಾದ ನಟಿ ರಾಖಿ ಸಾವಂತ್

    ಕೌಟುಂಬಿಕ ಕಲಹ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಇಂದು ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮೈಸೂರು ಕೋರ್ಟ್ ಗೆ (Court) ಹಾಜರಾದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ‘ನನ್ನ ಪತಿಯನ್ನು (Adil) ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ‌. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದು’ ಎಂದರು.

    ಮುಂದುವರೆದು ಮಾತನಾಡಿದ ರಾಖಿ, ‘ಆತ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆ. ನಾನು ಇಂದು ಬೆಳಿಗ್ಗೆ ಆದಿಲ್ ಖಾನ್ ತಂದೆ ಜೊತೆ ಮಾತನಾಡಿದೆ‌. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ಹಾಗಾದ್ರೆ ನಾನು ಏನು ಮಾಡಲಿ. ನನ್ನ ಬಳಿ 1.65 ಕೋಟಿ ಹಣ ಪಡೆದಿದ್ದಾನೆ‌. ಆದರೆ ನನಗೆ ಒಂದು ಪೈಸೆ ಕೊಟ್ಟಿಲ್ಲ‌’ ಎಂದು ಆರೋಪ ಮಾಡಿದರು. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ‘ಆದಿಲ್ ಮೈಸೂರು ಜನ ಸರಿ ಇಲ್ಲ ಎಂದು ನನ್ನ ಬಳಿ ಹೇಳಿದ. ಇದಕ್ಕಾಗಿಯೇ ಮುಂಬೈಗೆ ಬರುತ್ತೇನೆ ಎಂದು ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮೈಸೂರು ಕೋರ್ಟ್ ಮೇಲೆ ವಿಶ್ವಾಸ ಇದೆ. ನನಗೆ ನ್ಯಾಯ ಕೊಡಿಸಿ’ ಎಂದು ಮಾಧ್ಯಮಗಳ ಮುಂದೆ ರಾಖಿ ಗಳಗಳನೆ ಅತ್ತರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆದಿಲ್ ಗೆ ಪಾಠ ಕಲಿಸಲು ಮೈಸೂರಿಗೆ ಬರಲಿದ್ದಾರೆ ನಟಿ ರಾಖಿ ಸಾವಂತ್

    ಆದಿಲ್ ಗೆ ಪಾಠ ಕಲಿಸಲು ಮೈಸೂರಿಗೆ ಬರಲಿದ್ದಾರೆ ನಟಿ ರಾಖಿ ಸಾವಂತ್

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಅತೀ ಶೀಘ್ರದಲ್ಲೇ ಮೈಸೂರಿಗೆ ಬರಲಿದ್ದಾರಂತೆ. ಪತಿ ಆದಿಲ್ (Adil) ಗೆ ಬುದ್ಧಿ ಕಲಿಸುವುದಕ್ಕಾಗಿಯೇ ಅವರು ತಮ್ಮೊಂದಿಗೆ ಸ್ನೇಹಿತೆ ಶೆರ್ಲಿನ್ ಚೋಪ್ರಾ (Sherlyn Chopra) ಅವರನ್ನು ಕರೆತರುತ್ತಿದ್ದಾರೆ. ಮೈಸೂರಿನಲ್ಲಿ (Mysore) ಪತಿ ಆದಿಲ್ ಮೇಲೆ ಎಫ್.ಐ.ಆರ್  ದಾಖಲಾಗಿದೆ. ಇರಾನಿ ಹುಡುಗಿಗೆ ಮೋಸ ಮಾಡಿದ್ದಾನೆ ಎನ್ನುವ ಕಾರಣಕ್ಕಾಗಿ ದೂರು ದಾಖಲಾಗಿದೆ. ಆ ಹುಡುಗಿಗೆ ಬೆಂಬಲವಾಗಿ ಇಬ್ಬರು ನಟಿಯರು ಮೈಸೂರಿಗೆ ಬರಲಿದ್ದಾರೆ.

    ಮೈಸೂರು ಹುಡುಗ ಆದಿಲ್ ಮದುವೆ ವಿಚಾರವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ ಬಾಲಿವುಡ್ ನಟಿ ರಾಖಿ ಸಾವಂತ್. ಕೋರ್ಟ್ ನಲ್ಲಿ ಆದಿಲ್ ಮುಖಾಮುಖಿ ಆಗಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದು, ಕೋರ್ಟ್ ಹಾಲ್ ನಲ್ಲೇ ತಮಗೆ ಆದಿಲ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಜೈಲಿನಲ್ಲಿ ರೌಡಿಗಳನ್ನು ಭೇಟಿ ಮಾಡಿದ್ದೇನೆ. ಅದು ಹೇಗೆ ಬದುಕುತ್ತೀಯಾ ನೋಡುತ್ತೇನೆ ಎಂದಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಆದಿಲ್ ನನ್ನು ಪ್ರೇಮಿಸಿದ ವಿಚಾರವನ್ನೂ ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದು, ‘ನನಗೆ ಈಗ ಅನಿಸುತ್ತಿದೆ. ಆದಿಲ್ ನನ್ನು ನಾನು ಯಾಕೆ ಪ್ರೀತಿಸಿದೆ ಎಂದು. ಅವನ ಉದ್ದೇಶವು ನನ್ನನ್ನು ಫ್ರಿಡ್ಜ್ ನಲ್ಲಿ ಹೆಣವಾಗಿ ತುಂಬುವುದು ಆಗಿತ್ತಾ? ದೇವರು ದೊಡ್ಡವನು ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ. ಹಾಗಾಗಿ ನಾನು ದೇವರಿಗೆ ಥ್ಯಾಂಕ್ಸ್ ಹೇಳುತ್ತೇನೆ’ ಎಂದು ಅವರು ಕಣ್ಣೀರು ಹಾಕಿದ್ದಾರೆ.

    ಆದಿಲ್ ಮತ್ತು ತಮ್ಮ ನಡುವಿನ ಸಂಬಂಧದ ಕುರಿತು ರಾಖಿ ಮಾತನಾಡಿದ್ದಾರೆ. ‘ಮೊದ ಮೊದಲು ನಮ್ಮದು ಪವಿತ್ರ ಪ್ರೇಮ ಎಂದುಕೊಂಡಿದ್ದೆ. ಅವನನ್ನು ತುಂಬಾನೇ ನಂಬಿದ್ದೆ. ಅವನು ಕೂಡ ನನ್ನನ್ನು ಪ್ರೀತಿಸುವಂತೆ ನಾಟಕ ಮಾಡಿದೆ. ಆಮೇಲೆ ಅವನ ಮತ್ತೊಂದು ಮುಖ ಪರಿಚಯ ಆಯಿತು. ಅವನಿಗೆ ಅನೇಕ ಗರ್ಲ್ ಫ್ರೆಂಡ್ಸ್ ಇದ್ದಾರೆ. ಅವನು ಬೇರೆ ಹುಡುಗಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ’ ಎಂದು ಆರೋಪಿಸಿದ್ದಾರೆ.

    ಮೈಸೂರಿನಲ್ಲಿರುವ ಆದಿಲ್ ತಂದೆ ತಾಯಿಯನ್ನೂ ಮಾತನಾಡಿಸುವ ಪ್ರಯತ್ನವನ್ನು ಮಾಡಿದ್ದಾರಂತೆ ರಾಖಿ. ಆದರೆ, ಫೋನ್ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಈಗಲೂ ನಾನು ಅವರ ತಂದೆ ತಾಯಿ ಜೊತೆ ಮಾತನಾಡುವ ಉದ್ದೇಶ ಹೊಂದಿದ್ದೇನೆ. ಮಗನ ಬಗ್ಗೆ ಒಂದಷ್ಟು ವಿಷಯಗಳನ್ನು ಅವರಿಗೆ ತಿಳಿಸಬೇಕಿದೆ ಎಂದಿದ್ದಾರೆ ರಾಖಿ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇವರು ದೊಡ್ಡವನು ಫ್ರಿಡ್ಜ್ ನಲ್ಲಿ ಹೆಣವಾಗಲಿಲ್ಲ : ನಟಿ ರಾಖಿ ಸಾವಂತ್

    ದೇವರು ದೊಡ್ಡವನು ಫ್ರಿಡ್ಜ್ ನಲ್ಲಿ ಹೆಣವಾಗಲಿಲ್ಲ : ನಟಿ ರಾಖಿ ಸಾವಂತ್

    ಮೈಸೂರು ಹುಡುಗ ಆದಿಲ್ ಮದುವೆ ವಿಚಾರವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ ಬಾಲಿವುಡ್ ನಟಿ ರಾಖಿ ಸಾವಂತ್. ಕೋರ್ಟ್ ನಲ್ಲಿ ಆದಿಲ್ ಮುಖಾಮುಖಿ ಆಗಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದು, ಕೋರ್ಟ್ ಹಾಲ್ ನಲ್ಲೇ ತಮಗೆ ಆದಿಲ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಜೈಲಿನಲ್ಲಿ ರೌಡಿಗಳನ್ನು ಭೇಟಿ ಮಾಡಿದ್ದೇನೆ. ಅದು ಹೇಗೆ ಬದುಕುತ್ತೀಯಾ ನೋಡುತ್ತೇನೆ ಎಂದಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

    ಆದಿಲ್ ನನ್ನು ಪ್ರೇಮಿಸಿದ ವಿಚಾರವನ್ನೂ ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದು, ‘ನನಗೆ ಈಗ ಅನಿಸುತ್ತಿದೆ. ಆದಿಲ್ ನನ್ನು ನಾನು ಯಾಕೆ ಪ್ರೀತಿಸಿದೆ ಎಂದು. ಅವನ ಉದ್ದೇಶವು ನನ್ನನ್ನು ಫ್ರಿಡ್ಜ್ ನಲ್ಲಿ ಹೆಣವಾಗಿ ತುಂಬುವುದು ಆಗಿತ್ತಾ? ದೇವರು ದೊಡ್ಡವನು ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ. ಹಾಗಾಗಿ ನಾನು ದೇವರಿಗೆ ಥ್ಯಾಂಕ್ಸ್ ಹೇಳುತ್ತೇನೆ’ ಎಂದು ಅವರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್‌ನಲ್ಲಿ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

    ಆದಿಲ್ ಮತ್ತು ತಮ್ಮ ನಡುವಿನ ಸಂಬಂಧದ ಕುರಿತು ರಾಖಿ ಮಾತನಾಡಿದ್ದಾರೆ. ‘ಮೊದ ಮೊದಲು ನಮ್ಮದು ಪವಿತ್ರ ಪ್ರೇಮ ಎಂದುಕೊಂಡಿದ್ದೆ. ಅವನನ್ನು ತುಂಬಾನೇ ನಂಬಿದ್ದೆ. ಅವನು ಕೂಡ ನನ್ನನ್ನು ಪ್ರೀತಿಸುವಂತೆ ನಾಟಕ ಮಾಡಿದೆ. ಆಮೇಲೆ ಅವನ ಮತ್ತೊಂದು ಮುಖ ಪರಿಚಯ ಆಯಿತು. ಅವನಿಗೆ ಅನೇಕ ಗರ್ಲ್ ಫ್ರೆಂಡ್ಸ್ ಇದ್ದಾರೆ. ಅವನು ಬೇರೆ ಹುಡುಗಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ’ ಎಂದು ಆರೋಪಿಸಿದ್ದಾರೆ.

    ಮೈಸೂರಿನಲ್ಲಿರುವ ಆದಿಲ್ ತಂದೆ ತಾಯಿಯನ್ನೂ ಮಾತನಾಡಿಸುವ ಪ್ರಯತ್ನವನ್ನು ಮಾಡಿದ್ದಾರಂತೆ ರಾಖಿ. ಆದರೆ, ಫೋನ್ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಈಗಲೂ ನಾನು ಅವರ ತಂದೆ ತಾಯಿ ಜೊತೆ ಮಾತನಾಡುವ ಉದ್ದೇಶ ಹೊಂದಿದ್ದೇನೆ. ಮಗನ ಬಗ್ಗೆ ಒಂದಷ್ಟು ವಿಷಯಗಳನ್ನು ಅವರಿಗೆ ತಿಳಿಸಬೇಕಿದೆ ಎಂದಿದ್ದಾರೆ ರಾಖಿ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಚಿತ್ರಕ್ಕೆ ಮತ್ತೊಂದು ಜಯ :  ಹಾಡು ನಿರ್ಬಂಧಕ್ಕೆ ಸಲ್ಲಿಸಿದ್ದ ಅರ್ಜಿ ವಜಾ

    ‘ಪಠಾಣ್’ ಚಿತ್ರಕ್ಕೆ ಮತ್ತೊಂದು ಜಯ : ಹಾಡು ನಿರ್ಬಂಧಕ್ಕೆ ಸಲ್ಲಿಸಿದ್ದ ಅರ್ಜಿ ವಜಾ

    ಸೆನ್ಸಾರ್ ಪ್ರಮಾಣ ಪತ್ರ ಇಲ್ಲದೇ ಪಠಾಣ್ (Pathan) ಚಿತ್ರದ ಬೇಷರಮ್ (Besharam) ಹಾಡು (Song) ಮತ್ತು ಟೀಸರ್ ಅನ್ನು ಯೂಟ್ಯೂಬ್‌‌ನಲ್ಲಿ ಬಿಡುಗಡೆ ಮಾಡಿದ್ದು ಅವುಗಳ ಪ್ರಸಾರ ನಿರ್ಬಂಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಹಾರಾಷ್ಟ್ರ ಸಿಟಿ ಸಿವಿಲ್ ಕೋರ್ಟ್ (Court) ವಜಾ ಮಾಡಿದೆ. ಸುರೇಶ್ ಪಾಟೀಲ್ ಎಂಬುವವರು ಸಲ್ಲಿಸಿದ್ದ ಅರ್ಜಿ (Application) ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಜೆ.ಡಿ.ಪಟೇಲ್, ತಾತ್ಕಾಲಿಕ ಪರಿಹಾರವನ್ನು ನೀಡದಿದ್ದರೆ ಫಿರ್ಯಾದಿದಾರರಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ, ಪ್ರಾಥಮಿಕ ಪ್ರಕರಣ ದಾಖಲಾಗದ ಹಿನ್ನಲೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಪಠಾಣ್ ಚಿತ್ರದ ಹಾಡುಗಳನ್ನು U/A ಸರ್ಟಿಫಿಕೇಟ್ ಇಲ್ಲದೇ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಾಗುತ್ತಿದೆ ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಸಿನಿಮಾಟೋಗ್ರಫಿ ಕಾಯ್ದೆಯ 38ನೇ ನಿಯಮದ ಪ್ರಕಾರ ಅಂತಹ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ ಎಂದು ಅರ್ಜಿದಾರರ ಪರ ವಾದಿಸಲಾಯಿತು. ಇದನ್ನೂ ಓದಿ:`ಬಿಗ್ ಬಾಸ್’ ಖ್ಯಾತಿಯ ಅಕ್ಷತಾ ಕುಕ್ಕಿ ಮದುವೆ ಡೇಟ್ ಫಿಕ್ಸ್

    ಇದಕ್ಕೆ ಚಿತ್ರ ತಂಡದ ಪರ ವಾದ ಮಂಡಿಸಿದ ವಕೀಲರು, ಚಿತ್ರದ ನಿರ್ಮಾಣ ಸಂಸ್ಥೆಯು, ಯೂಟ್ಯೂಬ್ ಅಥವಾ ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರದ ಜಾಹೀರಾತನ್ನು ಪ್ರಕಟಿಸುವಾಗ ಅಂತಹ ಪ್ರಮಾಣಪತ್ರವನ್ನು ತೋರಿಸುವ ಅಗತ್ಯವಿಲ್ಲ, ಸಿನಿಮಾಟೋಗ್ರಫಿ ಆಕ್ಟ್, 1953 ರ ಅಡಿಯಲ್ಲಿ ಪ್ರಮಾಣೀಕರಣದ ಅವಶ್ಯಕತೆಯು ಚಲನಚಿತ್ರದ ಥಿಯೇಟ್ರಿಕಲ್ ವಿವರಣೆಗೆ ಸೀಮಿತವಾಗಿದೆ ಎಂದು ವಾದಿಸಲಾಯಿತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಜಯ್ ರಾವತ್‌ಗೆ ಬೆಳಗಾವಿ ಕೋರ್ಟ್‌ನಿಂದ ಜಾಮೀನು ಮಂಜೂರು

    ಸಂಜಯ್ ರಾವತ್‌ಗೆ ಬೆಳಗಾವಿ ಕೋರ್ಟ್‌ನಿಂದ ಜಾಮೀನು ಮಂಜೂರು

    ಬೆಳಗಾವಿ: ಶಿವಸೇನೆ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ (Sanjay Raut) ಸೇರಿದಂತೆ ಇಬ್ಬರಿಗೆ ಬೆಳಗಾವಿಯ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯದಿಂದ (Belagavi Court) ನಿರೀಕ್ಷಣಾ ಜಾಮೀನು (Bail) ಮಂಜೂರಾಗಿದಾಗಿದೆ.

    50 ಸಾವಿರ ರೂ. ಬಾಂಡ್ ನಿಗದಿತ ಸಮಯದಲ್ಲಿ ಕೋರ್ಟ್‌ಗೆ ಹಾಜರಾಗಬೇಕೆಂದು ಕೋರ್ಟ್ ಷರತ್ತು ವಿಧಿಸಿದೆ.

    ನಗರದಲ್ಲಿ 2018ರ ಮೇ 12 ರಂದು ನಡೆದಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಸಂಜಯ್ ರಾವತ್ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚೋದನಾತ್ಮಕ ಭಾಷಣ ಮಾಡಿರುವ ಆರೋಪ ಇತ್ತು. ಈ ಸಂಬಂಧ ಟಿಳಕವಾಡಿ ಠಾಣೆಯಲ್ಲಿ ಚುನಾವಣೆ ಆಯೋಗದ ಅಧಿಕಾರಿಗಳು ದೂರು ದಾಖಲಿಸಿದ್ದರು. ಇದನ್ನೂ ಓದಿ: ಮತ್ತೆ ರಮೇಶ್ ಜಾರಕಿಹೊಳಿ ದೆಹಲಿಗೆ ದಂಡಯಾತ್ರೆ – ಸಿಬಿಐ ತನಿಖೆಗೆ ತೀವ್ರ ಒತ್ತಾಯ

    2 ತಿಂಗಳ ಹಿಂದಷ್ಟೇ ಸಂಜಯ್ ರಾವತ್‌ಗೆ ಬೆಳಗಾವಿಯ 4ನೇ ಜೆಎಂಎಫ್‌ಸಿ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ಡಿಸೆಂಬರ್ 1ಕ್ಕೆ ಕೋರ್ಟ್‌ಗೆ ಹಾಜರಾಗಿ ಸಂಜಯ್ ರಾವತ್ ಪರ ವಕೀಲರು ಸಮಯ ಕೇಳಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k