Tag: court

  • ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ 6 ಮಂದಿಯನ್ನು ಗುಂಡಿಕ್ಕಿ ಹತ್ಯೆ!

    ಭೋಪಾಲ್: ಜಮೀನು ವಿವಾದದ ಗಲಾಟೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರನ್ನು ಗುಂಡಿಕ್ಕಿ (shoot) ಹತ್ಯೆ ಮಾಡಿದ ಘಟನೆ ಶುಕ್ರವಾರ ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ (Morena) ನಡೆದಿದೆ.

    ಘಟನೆಯ ಆಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವೀಡಿಯೋದಲ್ಲಿ ಇಬ್ಬರು ರೈಫಲ್‍ಗಳನ್ನು (Rifles) ಹಿಡಿದು ಇನ್ನೊಂದು ಗುಂಪಿನ ಕಡೆ ಗುಂಡು ಹಾರಿಸುವುದು ದಾಖಲಾಗಿದೆ. ನಂತರ ಕೆಲವರು ಅವರನ್ನು ಕೋಲುಗಳಿಂದ ಥಳಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್

    ಘಟನೆಯ ಹಿನ್ನೆಲೆ:
    ಧೀರ್ ಸಿಂಗ್ ತೋಮರ್ ಮತ್ತು ಗಜೇಂದ್ರ ಸಿಂಗ್ ತೋಮರ್ ಕುಟುಂಬಗಳ ನಡುವೆ 2013ರಲ್ಲಿ ತ್ಯಾಜ್ಯ ಸುರಿಯುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಆಗ ಧೀರ್ ಸಿಂಗ್ ತೋಮರ್ ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಗಜೇಂದ್ರ ಸಿಂಗ್ ತೋಮರ್ ಕುಟುಂಬವು ಗ್ರಾಮದಿಂದ ಪಲಾಯನ ಮಾಡಿತ್ತು.

    ನಂತರ ಎರಡು ಕುಟುಂಬಗಳು ನ್ಯಾಯಾಲಯದ (Court) ಹೊರಗೆ ರಾಜಿ ಮಾಡಿಕೊಂಡಿದ್ದವು. ಶುಕ್ರವಾರ ಗಜೇಂದ್ರ ಸಿಂಗ್ ತೋಮರ್ ಕುಟುಂಬ ಗ್ರಾಮಕ್ಕೆ ಮರಳಿದೆ. ಈ ವೇಳೆ ಧೀರ್ ಸಿಂಗ್ ತೋಮರ್ ಕುಟುಂಬ ಅವರ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.

    ಹತ್ಯೆಯಲ್ಲಿ ಭಾಗಿಯಾಗಿರುವ ಎಂಟು ಮಂದಿಯನ್ನು ಗುರುತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ ಪ್ರಕರಣ – ಉಗ್ರರನ್ನು ಸುತ್ತುವರಿದ ಸೇನೆ, ಇಬ್ಬರು ಯೋಧರು ಸಾವು

  • ವಕೀಲನಂತೆ ವೇಷ ಧರಿಸಿದ್ದ ವ್ಯಕ್ತಿಯಿಂದ ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ – ಮಹಿಳೆಯ ಸ್ಥಿತಿ ಗಂಭೀರ

    ವಕೀಲನಂತೆ ವೇಷ ಧರಿಸಿದ್ದ ವ್ಯಕ್ತಿಯಿಂದ ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ – ಮಹಿಳೆಯ ಸ್ಥಿತಿ ಗಂಭೀರ

    ನವದೆಹಲಿ: ದೆಹಲಿಯ (Dehli) ನ್ಯಾಯಾಲಯದ (Court) ಆವರಣದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬಳು (Woman) ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

    ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ (Saket Court) ಈ ಘಟನೆ ನಡೆದಿದೆ. ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಗೆ ನ್ಯಾಯಾಲಯಕ್ಕೆ ಮಹಿಳೆ ಹಾಜರಾಗಿದ್ದಳು. ಈ ವೇಳೆ ವಕೀಲರ ವೇಷದಲ್ಲಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ.

    ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಅಲ್ಲಿದ್ದ ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆಗೆ ಸಂಬಂಧಿಸಿ 4 ಸುತ್ತಿನ ಗುಂಡು ಹಾರಿಸಲಾಗಿದೆ. ಗುಂಡಿನ ದಾಳಿಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸೆರಗೊಡ್ಡಿ ಮತಯಾಚನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್‌ ಪತ್ನಿ ಅಮರೇಶ್ವರಿ

    ಇತ್ತೀಚೆಗಷ್ಟೇ ದೆಹಲಿಯ ದ್ವಾರಕದಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಕೀಲರೊಬ್ಬರ ಗುಂಡಿಕ್ಕಿ ಹತ್ಯೆಗೈದಿದ್ದರು. ಇದಾದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಇದನ್ನೂ ಓದಿ: ಕಲಾ ವಿಭಾಗದಲ್ಲಿ ಬೆಂಗಳೂರಿನ ತಬ್ಸುಮ್ ಶೇಖ್ ಫಸ್ಟ್‌ – ಟಾಪ್‌ ವಿದ್ಯಾರ್ಥಿಗಳ ಲಿಸ್ಟ್‌ ಇಲ್ಲಿದೆ

  • ಕೋರ್ಟ್ ಮೆಟ್ಟಿಲು ಏರಿದ್ದ ಅಮಿತಾಭ್ ಮೊಮ್ಮಗಳಿಗೆ ಗೆಲುವು

    ಕೋರ್ಟ್ ಮೆಟ್ಟಿಲು ಏರಿದ್ದ ಅಮಿತಾಭ್ ಮೊಮ್ಮಗಳಿಗೆ ಗೆಲುವು

    ಮ್ಮ ಆರೋಗ್ಯದ ಕುರಿತಾಗಿ ಹಲವಾರು ಯೂಟ್ಯೂಬ್ ಚಾನೆಲ್ ಗಳು ತಪ್ಪಾದ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಆರಾಧ್ಯ ಅಸ್ವಸ್ಥ, ಆರಾಧ್ಯ (Aaradhya Bachchan) ಇನ್ನಿಲ್ಲ ರೀತಿಯ ವರದಿಗಳನ್ನು ಪ್ರಸಾರ ಮಾಡುವ ಮೂಲಕ ತಪ್ಪಾದ ಮಾಹಿತಿಯನ್ನು ನೀಡುತ್ತಿವೆ. ಇಂತಹ ಯೂಟ್ಯೂಬ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೆಹಲಿ (Delhi) ಹೈಕೋರ್ಟಿಗೆ (Court) ಆರಾಧ್ಯ ಬಚ್ಚನ್ ಮೊರೆ ಹೋಗಿದ್ದರು. ಈ ಪ್ರಕರಣವನ್ನು ಕೋರ್ಟ್ ಗಂಭೀರವಾಗಿ ತಗೆದುಕೊಂಡಿದೆ.

    ಅಮಿತಾಭ್ (Amitabh) ಮೊಮ್ಮಗಳು ನೀಡಿದ್ದ ದೂರಿನನ್ವಯ ದೆಹಲಿ ಹೈಕೋರ್ಟ್ ಹಲವಾರು ಯೂಟ್ಯೂಬ್ ಚಾಲನೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಆರಾಧ್ಯ ಕುರಿತಾಗಿ ತಪ್ಪಾದ ಮಾಹಿತಿ ಹಂಚಿಕೊಂಡ ಯೂಟ್ಯೂಬ್ ವರದಿಗಳನ್ನು ಗೂಗಲ್ ನಿಂದ ತೆಗೆದು ಹಾಕಬೇಕು ಎಂದು ಗೂಗಲ್ ಗೆ ನಿರ್ದೇಶಿಸಿದೆ. ಪ್ರತಿಯೊಂದು ಮಗುವಿನ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ನಟ ಅಭಿಷೇಕ್- ಐಶ್ವರ್ಯ ರೈ (Aishwarya Rai) ಪುತ್ರಿ ಆರಾಧ್ಯಗೆ (Aradhya) ಈಗಿನ್ನೂ 11 ವರ್ಷ. ಬಚ್ಚನ್ ಕುಟುಂಬದ ಕುಡಿ ಎನ್ನುವ ಕಾರಣಕ್ಕೆ ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಆರಾಧ್ಯ ಹೆಸರಲ್ಲಿ ಅನೇಕ ಫ್ಯಾನ್‌ಪೇಜ್‌ಗಳು ಸಿದ್ಧಗೊಂಡಿವೆ. ಇದರ ಜೊತೆ ಕೆಲವು ಯೂಟ್ಯೂಬ್ ಚಾನೆಲ್‌ಗಳು ವೀವ್ಸ್ ಗಿಟ್ಟಿಸಿಕೊಳ್ಳಲು ಆರಾಧ್ಯ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದವು. ಅವುಗಳ ವಿರುದ್ಧ ಆರಾಧ್ಯ ಕ್ರಮಕ್ಕೆ ಮುಂದಾಗಿದ್ದರು.

    ದೆಹಲಿ ಹೈಕೋರ್ಟ್‌ನಲ್ಲಿ ತಮ್ಮ ಬಗ್ಗೆ ಈ ರೀತಿ ಸುದ್ದಿ ಪ್ರಕಟ ಆಗದಂತೆ ತಡೆ ನೀಡಬೇಕು ಎಂದು ಆರಾಧ್ಯ ಮನವಿ ಮಾಡಿದ್ದಳು. ಈ ಪ್ರಕರಣದ ವಿಚಾರಣೆ ಇಂದು  ನಡೆಯಿತು. ಸೆಲೆಬ್ರಿಟಿಗಳ ಬಗ್ಗೆ ಅನೇಕ ವದಂತಿಗಳ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ, ಅವರ ಮಕ್ಕಳ ಬಗ್ಗೆ ಈ ರೀತಿ ಸುಳ್ಳು ಸುದ್ದಿ ಹುಟ್ಟಿಕೊಂಡಾಗ ಅದನ್ನು ಒಪ್ಪಿಕೊಳ್ಳೋಕೆ ಬಚ್ಚನ್ ಕುಟುಂಬಕ್ಕೆ ಹಾಗೂ ಆರಾಧ್ಯಗೆ ಸಾಧ್ಯವಾಗಿಲ್ಲ. ಇಲ್ಲಸಲ್ಲದ ಸುಳ್ಳು ಸುದ್ದಿ ಬಿತ್ತರಿಸುವ ಖಾಸಗಿ ಯೂಟ್ಯೂಬರ್‌ಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಲಿ ಎನ್ನುವ ಕಾರಣಕ್ಕೆ ಕೋರ್ಟ್ ಮೆಟ್ಟಿಲು ಏರಿದ್ದರು.

  • ತಾಯಿಯ ಶಿರಚ್ಛೇದ ಮಾಡಿದ್ದ ಮಗನಿಗೆ ಮರಣದಂಡನೆ ವಿಧಿಸಿದ ಕೋರ್ಟ್

    ತಾಯಿಯ ಶಿರಚ್ಛೇದ ಮಾಡಿದ್ದ ಮಗನಿಗೆ ಮರಣದಂಡನೆ ವಿಧಿಸಿದ ಕೋರ್ಟ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಧಮ್‍ಪುರ (Udhampur) ಜಿಲ್ಲೆಯಲ್ಲಿ 2014 ರಲ್ಲಿ ತನ್ನ ತಾಯಿಯ ಶಿರಚ್ಛೇದ ಮಾಡಿದ್ದ 45 ವರ್ಷದ ಅಪರಾಧಿಗೆ ಸ್ಥಳೀಯ ನ್ಯಾಯಾಲಯ (Court) ಮರಣದಂಡನೆ (Death penalty) ವಿಧಿಸಿ ಶನಿವಾರ ತೀರ್ಪು (Judgement) ಪ್ರಕಟಿಸಿದೆ.

    ಅಪರಾಧಿಯು ವೃದ್ಧ ತಾಯಿಯ ಕುತ್ತಿಗೆಯ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದ. ನಂತರ ಅತ್ಯಂತ ಅಮಾನವೀಯ ಮತ್ತು ಬರ್ಬರವಾಗಿ ಆಕೆಯ ತಲೆಯನ್ನು ಕೊಡಲಿಯಿಂದ ಕಡಿದು ಕೊಲೆ (Murder) ಮಾಡಿದ್ದ. ಈ ಕೃತ್ಯವನ್ನು ಅಪರಾಧಿ ಸಂಚು ರೂಪಿಸಿ ಎಸಗಿದ್ದ ಎಂದು ಉಧಮ್‍ಪುರದ ಪ್ರಧಾನ ಸೆಷನ್ಸ್ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಹಳೆ ದ್ವೇಷ – ಮಡಿಕೇರಿಯಲ್ಲಿ ಗುಂಡೇಟಿಗೆ ವ್ಯಕ್ತಿ ಬಲಿ

    ರಾಮನಗರದ ನಿವಾಸಿ ಜೀತ್ ಸಿಂಗ್ ಅಪರಾಧಿಯಾಗಿದ್ದು, ತಾಯಿಯೊಂದಿಗೆ ಜಮೀನು ನೀಡುವಂತೆ ಆಗಾಗ ಗಲಾಟೆ ಮಾಡುತ್ತಿದ್ದ. ಇನ್ನೊಬ್ಬ ಮಗ ಮುಲಾಖ್ ರಾಜ್‍ನೊಂದಿಗೆ ವಾಸಿಸುವಂತೆ ಒತ್ತಾಯಿಸುತ್ತಿದ್ದ. 2014ರ ಡಿಸೆಂಬರ್ 7ರಂದು ತಾಯಿ ವೈಷ್ಣೋದೇವಿಯನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದ. ಪತ್ನಿ ಸಂತೋಷ್ ದೇವಿ ಅತ್ತೆಯನ್ನು ರಕ್ಷಿಸಲು ಮುಂದಾದಾಗ ಅವರನ್ನೂ ಕೊಲೆ ಮಾಡಲು ಯತ್ನಿಸಿದ್ದ.

    ಆ ವೇಳೆ ಪತ್ನಿ ತಪ್ಪಿಸಿಕೊಳ್ಳದೆ ಅಲ್ಲೇ ಉಳಿದುಕೊಂಡಿದ್ದರೆ ಅವನು ಖಂಡಿತವಾಗಿಯೂ ತನ್ನ ಹೆಂಡತಿಯನ್ನೂ ಕೊಲ್ಲುತ್ತಿದ್ದ ಎಂದು ನ್ಯಾಯಾಧೀಶ ಹಕ್ ನವಾಜ್ ಜರ್ಗರ್ ತೀರ್ಪಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

  • ಸಮನ್ಸ್ ಹಿಡಿದು ಠಾಣೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಸಮನ್ಸ್ ಹಿಡಿದು ಠಾಣೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಚಿಕ್ಕಮಗಳೂರು: ಮಹಿಳೆಯೊಬ್ಬರು ಸಮನ್ಸ್ (Summons) ಹಿಡಿದು ಪೊಲೀಸ್ ಠಾಣೆಯ ಮಹಡಿ ಮೇಲೇರಿ ಆತ್ಮಹತ್ಯೆಗೆ (Suicide) ಯತ್ನಿಸಿದ ಘಟನೆ ಮೂಡಿಗೆರೆಯಲ್ಲಿ (Mudigere) ನಡೆದಿದೆ.

    ಹಳೇ ಮೂಡಿಗೆರೆಯ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಮಹಿಳೆಯನ್ನು ರಕ್ಷಿಸಿ ಸಮಾಧಾನ ಮಾಡಿದ್ದಾರೆ. ಮಹಿಳೆಗೆ ಪ್ರಕರಣವೊಂದರಲ್ಲಿ ಕೋರ್ಟ್ (Court) ಸಮನ್ಸ್ ಜಾರಿಗೊಳಿಸಿತ್ತು. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವರನಿಗೆ ಅಶ್ಲೀಲ ಫೋಟೋ ಕಳಿಸಿ ಮದುವೆ ನಿಲ್ಲಿಸಿದ ವಧುವಿನ ಮಾಜಿ ಪ್ರಿಯತಮ!

    ಮಹಿಳೆ ಹಾಗೂ ಅವರ ಅಕ್ಕನ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಳು. ಇದೇ ವಿಚಾರಕ್ಕೆ 2022 ರಲ್ಲಿ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಮಹಿಳೆ ನ್ಯಾಯಾಲಯಕ್ಕೆ ಹಾಜರಾಗಿರದ ಕಾರಣ ಸಮನ್ಸ್ ಜಾರಿಗೊಳಿಸಲಾಗಿತ್ತು.

    ಇದೀಗ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ಹರಿದಾಡುತ್ತಿದೆ. ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ವೇಳೆ ನಿಯಮ ಉಲ್ಲಂಘನೆ – AAP ಅಭ್ಯರ್ಥಿ ವಿರುದ್ಧ ಮೊಕದ್ದಮೆ ದಾಖಲು

  • ಟೈಟಲ್ ವಿವಾದ : ನಟಿ ರಮ್ಯಾ ಪರವಾಗಿ ಕೋರ್ಟ್ ತೀರ್ಪು

    ಟೈಟಲ್ ವಿವಾದ : ನಟಿ ರಮ್ಯಾ ಪರವಾಗಿ ಕೋರ್ಟ್ ತೀರ್ಪು

    ಸ್ವಾತಿ ಮುತ್ತಿನ ಮಳೆ ಹನಿಯೇ (Swati Muthina Male Haniye) ಸಿನಿಮಾದ ಟೈಟಲ್ (Title) ತಮ್ಮದೆಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ (Rajendra Singh Babu) ಬಾಬು ಸಿಟಿ ಸಿವಿಲ್ ಕೋರ್ಟ್ (Cour) ಗೆ ಅರ್ಜಿ ಸಲ್ಲಿಸಿದ್ದರು. ತಾವು ಇದೇ ಹೆಸರಿನ ಟೈಟಲ್ ನಲ್ಲಿ ಸಿನಿಮಾ ಮಾಡುತ್ತಿರುವ ಮತ್ತು ಈ ಶೀರ್ಷಿಕೆಯನ್ನು ಬೇರೆಯೊಬ್ಬರು ಬಳಸುತ್ತಿದ್ದು, ಅದನ್ನು ತಡೆಯಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದ್ದು, ರಾಜೇಂದ್ರ ಸಿಂಗ್ ಬಾಬು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

    ಏನಿದು ವಿವಾದ?
    ನಟಿ ರಮ್ಯಾ (Ramya) ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಟೈಟಲ್ ವಿವಾದಕ್ಕೆ ಗುರಿಯಾಗಿತ್ತು. ಈ ಟೈಟಲ್ ತಮ್ಮದೆಂದು, ಅದನ್ನು ಯಾರಿಗೂ ಕೊಡಬಾರದು ಎಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತಮ್ಮ ಲಾಯರ್ ಮೂಲಕ ಪತ್ರವೊಂದನ್ನು ಕಳುಹಿಸಿದ್ದರು. ಅಲ್ಲದೇ, ತಾವು ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿರುವುದಾಗಿ, ಅದು ಅರ್ಧಕ್ಕೆ ನಿಂತಿದೆ ಎಂದು ತಿಳಿಸಿದ್ದರು. ನಂತರ ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು.

     

    ವಾಣಿಜ್ಯ ಮಂಡಳಿಗೆ ಪತ್ರ ಬರೆದ ಬೆನ್ನಲ್ಲೇ ಆ ಟೈಟಲ್ ಬಗ್ಗೆ ಪರಿಶೀಲಿಸಿದಾಗ ಅಸಲಿಯಾಗಿ ಅದು ರಾಜೇಂದ್ರ ಸಿಂಗ್ ಬಾಬು ಅವರ ಹೆಸರಿನಲ್ಲಿ ಇರಲಿಲ್ಲ ಎನ್ನುವುದು ಗೊತ್ತಾಗಿತ್ತು. ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಮಾಡುತ್ತಿರುವ ಬಿ.ಕೆ.ಗಂಗಾಧರ್ ಅವರು ಈ ಟೈಟಲ್ ಅನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ. ಅಲ್ಲದೇ, ರಮ್ಯಾ ಸಿನಿಮಾ ಮಾಡುತ್ತೇನೆ ಎಂದಾಗ, ಅವರಿಗೆ ಆ ಟೈಟಲ್ ಅನ್ನು ವರ್ಗಾಯಿಸಿದ್ದಾರೆ ಎಂದು ಸ್ವತಃ ವಾಣಿಜ್ಯ ಮಂಡಳಿಯ  ಅಧ್ಯಕ್ಷರೇ ತಿಳಿಸಿದ್ದರು.

    ಬಿ.ಕೆ.ಗಂಗಾಧರ್ ಅವರು ರಮ್ಯಾ ಹೆಸರಿಗೆ ಆ ಟೈಟಲ್ ಅನ್ನು ವರ್ಗಾಯಿಸಿರುವುದರಿಂದ, ರಮ್ಯಾ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆಯಬೇಕಿದೆ. ಗಂಗಾಧರ  ಅವರು ನೀಡಿರುವ ಎನ್.ಓ.ಸಿ ಪತ್ರವನ್ನು ವಾಣಿಜ್ಯ ಮಂಡಳಿಗೆ ನೀಡಿದ ತಕ್ಷಣವೇ ಅದನ್ನು ರಮ್ಯಾ ಅವರ ನಿರ್ಮಾಣ ಸಂಸ್ಥೆಗೆ ವರ್ಗಾಯಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷರು ಮಾಧ್ಯಮಗಳಿಗೆ ತಿಳಿಸಿದ್ದರು.

    ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ‘ನನ್ನ ಕಕ್ಷಿದಾರರು ನಿರ್ಮಿಸುವ ಮೇಲ್ಕಂಡ ಸ್ವಾತಿ ಮುತ್ತಿನ ಮಳೆ ಹನಿಯೆ’ ಹೆಸರಿನ ಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದು. ಶೇಕಡಾ 80ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಮೇಲ್ಕಂಡ ಚಿತ್ರದ ನಾಯಕ ನಟ ಅಂಬರೀಶ್ ನಿಧನ ಹೊಂದಿ ನಂತರ ಚಿತ್ರದ ಚಿತ್ರೀಕರಣವು ಕಾರಣಾಂತರಗಳಿಂದ ನಿಂತಿದೆ. ನನ್ನ ಕಕ್ಷಿದಾರರು ಹೇಳುವ ಹಾಗೆ ಮೇಲ್ಕಂಡ ಚಿತ್ರ ಶೀರ್ಷಿಕೆ ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿರುತ್ತದೆ’ ಎಂದು ಸಿಂಗ್ ಬಾಬು ಪರ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಕೂಡ ಪತ್ರ ಬರೆದಿದ್ದರು.

    ಅಲ್ಲದೇ, ತಾವು ನಿರ್ಮಾಣ ಮಾಡುವ ಚಿತ್ರಕ್ಕೆ ಮೇಲ್ಕಂಡ ಶೀರ್ಷಿಕೆಯನ್ನು ಅಂದರೆ ಸ್ವಾತಿ ಮುತ್ತಿನ ಮಳೆ ಹನಿಯೇ ಶಿರ್ಷಿಕೆಯನ್ನಾಗಲಿ, ಹಾಡನ್ನಾಗಲು ಯಾವುದೇ ರೀತಿ ಉಪಯೋಗಿಸಲು ಅಥವಾ ನೋಂದಾಯಿಸಲು ನನ್ನ ಕಕ್ಷಿದಾರರ ವಿನಃ ಯಾರಿಗೂ ಯಾವುದೇ ವಿಧವಾದ ಹಕ್ಕು ಇರುವುದಿಲ್ಲ. ಒಂದು ವೇಳೆ ನಾನು ನೀಡಿರುವ ಈ ವಕೀಲರ ನೋಟಿಸಿನ ನಂತರವೂ ನೀವು ಬೇರೆ ನಿರ್ಮಾಪಕರಿಗೆ ಈ ಚಿತ್ರದ ಶೀರ್ಷಿಕೆಯನ್ನು ನೋಂದಾವಣೆ ಮಾಡಿಕೊಡಲು ಮತ್ತು ಚಿತ್ರ ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದೆ ಆದರೆ, ನನ್ನ ಕಕ್ಷಿದಾರರು ನೊಂದಾಣಿಕೆ ಮಾಡಿರುವ ಶೀರ್ಷಿಕೆಯ ಕೃತಿ ಚೌರ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದರು.

  • ಏಪ್ರಿಲ್‌ 11ರ ವರೆಗೆ ಮಾಡಾಳ್‌ಗೆ ಜೈಲು – ಜೈಲಿನ ಪ್ರಕಾರವೇ ಊಟ

    ಏಪ್ರಿಲ್‌ 11ರ ವರೆಗೆ ಮಾಡಾಳ್‌ಗೆ ಜೈಲು – ಜೈಲಿನ ಪ್ರಕಾರವೇ ಊಟ

    ಬೆಂಗಳೂರು: ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ (Madal Virupakshappa) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್‌ 11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ಮಾಡಾಳ್‌ ವಿರೂಪಾಕ್ಷಪ್ಪನನ್ನ ಬಂಧಿಸಿದ ನಂತರ ಲೋಕಾಯುಕ್ತ ಪೊಲೀಸರು (Lokayukta Police) 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದಿದ್ದರು. ಪೊಲೀಸ್‌ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದನ್ನೂ ಓದಿ: ಮಾಡಾಳ್‍ನ ಮೈಂಟೇನ್ ಮಾಡೋದೇ ‘ಲೋಕಾ’ಗೆ ಸವಾಲು- ರಾತ್ರಿಪೂರ್ತಿ ಕಣ್ಣೀರಿಡ್ತಿರೋ ಭ್ರಷ್ಟ ಮಾಡಾಳ್

    ಈ ವೇಳೆ ಮಾಡಾಳ್‌ ಪರ ವಕೀಲರು ಅವರಿಗೆ ಮನೆಯ ಊಟವನ್ನೇ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಅನುಮತಿ ನೀಡದ ಕೋರ್ಟ್‌ (Court) ಜೈಲಿನ ಪ್ರಕಾರವೇ ಊಟ ನೀಡುವಂತೆ ಸೂಚಿಸಿದೆ. ಅಲ್ಲದೇ ಏಪ್ರಿಲ್ 6ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ್ದು, ಅಂದು ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಕೋರ್ಟ್‌ ಸೂಚನೆ ನೀಡಿದೆ.

    ವಿಚಾರಣೆ ವೇಳೆ ಮಾಡಾಳ್‌ ವಿರೂಪಾಕ್ಷಪ್ಪ ಆರೋಗ್ಯ ಸಮಸ್ಯೆ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿಕೊಂಡರು. ನಿನ್ನೆ ಆರೋಗ್ಯ ತಪಾಸಣೆ ನಡೆಸಿದ್ದಾರೆ ಅದರ ವರದಿ ನೋಡುವಂತೆಯೂ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್‌ ಅನಾರೋಗ್ಯ ಸಮಸ್ಯೆ ಬಂದರೆ, ಜೈಲಿನಲ್ಲೇ ಆಸ್ಪತ್ರೆ ಇದೆ ಎಂದು ತಿಳಿಸಿತು. ಇದನ್ನೂ ಓದಿ: ಲೋಕಾಯುಕ್ತ ಕಚೇರಿಯಲ್ಲಿ ಕೋಟಿ ಕುಬೇರ ಮಾಡಾಳ್‍ ವಾಸ್ತವ್ಯ!

    ಕಳೆದ ಐದು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬರುವಾಗ ತುಮಕೂರಿನ ಕ್ಯಾತಸಂದ್ರ ಟೋಲ್‌ ಬಳಿ ಪೊಲೀಸರು ಬಂಧಿಸಿದ್ದರು. ಮರುದಿನ ಕೋರ್ಟ್‌ ವಿಚಾರಣೆಯ ವೇಳೆ ಲೋಕಾಯುಕ್ತ ಪರ ವಕೀಲರು ಜಾಮೀನು ಅರ್ಜಿಗೆ ಪ್ರಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಏಕಸದಸ್ಯ ಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

    ನಂತರ ಲೋಕಾಯುಕ್ತ ಪೊಲೀಸರು 10ದಿನ ಕಸ್ಟಡಿಗೆ ಕೇಳಿದ್ದರು. ಆದರೆ ಮಾಡಾಳ್ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈಗಾಗಲೇ ಸಾಕಷ್ಟು ಬಾರಿ ವಿಚಾರಣೆಗೆ ಬಂದಿದ್ದಾರೆ. ಈಗ ಮತ್ತೆ 10 ದಿನ ಅವಶ್ಯಕತೆ ಇಲ್ಲ ಎಂದು ವಾದ ಮಂಡಿಸಿದ್ದರು. 10 ದಿನ ಕಸ್ಟಡಿ ಅತ್ಯವಶ್ಯಕವಾಗಿದೆ. ಇದುವರೆಗೆ ವಿಚಾರಣೆಗೆ ಸಹಕರಿಸಿಲ್ಲ ಎಂದು ಲೋಕಾಯುಕ್ತ ಮರು ಮನವಿ ಮಾಡಿದ್ದರು. ಇಬ್ಬರ ವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 5 ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು.

  • ಅಕ್ರಮ ಗಾಂಜಾ ಮಾರಾಟ ಯತ್ನ- ಇಬ್ಬರ ಬಂಧನ

    ಅಕ್ರಮ ಗಾಂಜಾ ಮಾರಾಟ ಯತ್ನ- ಇಬ್ಬರ ಬಂಧನ

    ಮಡಿಕೇರಿ: ಅಕ್ರಮವಾಗಿ ಗಾಂಜಾ (Ganja) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿರಾಜಪೇಟೆಯಲ್ಲಿ (Virajpet) ನಡೆದಿದೆ.

    ವಿರಾಜಪೇಟೆ ತಾಲೂಕಿನ ಇಂಜಿಲಗೆರೆ ಗ್ರಾಮದ ಕಲ್ಲುಕೋರೆ ನಿವಾಸಿ ಪ್ರವೀಣ (31) ಹಾಗೂ ಗಾಂಧಿನಗರ ನಿವಾಸಿ ಇಮ್ರಾನ್ ಅಲಿಯಾಸ್ ಸೋನು (22) ಬಂಧಿತ ಆರೋಪಿಗಳು. ಪ್ರಕರಣದ ಎರಡನೇ ಆರೋಪಿಯಾಗಿರುವ ಸೋನು 2020ರಲ್ಲಿ ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿ ಜೈಲುವಾಸ ಅನುಭವಿಸಿ ಹಿಂದಿರುಗಿದ್ದಾನೆ. ಅಲ್ಲದೇ ಜೈಲುವಾಸದ ಸಮಯದಲ್ಲಿ ಅನೇಕ ಮಂದಿಯ ಪರಿಚಯವಾಗಿದ್ದು, ಗಾಂಜಾ ಖರೀದಿ ಮತ್ತು ದೊರಕುವ ಸ್ಥಳದ ಬಗ್ಗೆ ಈತನಿಗೆ ಖಚಿತ ಮಾಹಿತಿ ಇತ್ತು ಎನ್ನಲಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ- ಚೆನೈ ಕಲಾಕ್ಷೇತ್ರದ ಪ್ರೊಫೆಸರ್ ವಿರುದ್ಧ ದೂರು ದಾಖಲು 

    CRIME 2

    ಸೋನು ತನ್ನ ಸ್ನೇಹಿತನಾದ ಪ್ರವೀಣ್‌ಗೂ ಮಾಹಿತಿ ತಿಳಿಸಿ ಹಣ ಹೊಂದಿಸಿಕೊಂಡು ಮೈಸೂರಿಗೆ ತೆರಳಿದ್ದಾನೆ. ಮಾರ್ಚ್ 30ರ ರಾತ್ರಿ ವೇಳೆಯಲ್ಲಿ ಮೈಸೂರಿನ (Mysuru) ಹೊರವಲಯದಲ್ಲಿ ಗಾಂಜಾ ಖರೀದಿಸಿ ವಿರಾಜಪೇಟೆ ನಗರಕ್ಕೆ ಆಗಮಿಸಿದ್ದಾನೆ. ಮಾರ್ಚ್ 31ರಂದು ಬೆಳಗ್ಗೆ 11 ಗಂಟೆಯ ವೇಳೆಗೆ ಆರೋಪಿಗಳು ತಮ್ಮ ಬಳಿಯಿದ್ದ ಗಾಂಜಾವನ್ನು ಮಾರಾಟ ಮಾಡಲು ವಿರಾಜಪೇಟೆಯ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದ ಮುಂಭಾಗದಲ್ಲಿ ಗಿರಾಕಿಗಳಿಗೆ ಹೊಂಚು ಹಾಕುತ್ತಿದ್ದರು. ಇದನ್ನೂ ಓದಿ: ಸಾಕುನಾಯಿಯ ಮೇಲೆ 2 ವರ್ಷ ಅತ್ಯಾಚಾರವೆಸಗಿದ 60ರ ವ್ಯಕ್ತಿ

    ನಿಖರ ಮಾಹಿತಿಯ ಅನ್ವಯ ಪೊಲೀಸರು ಆರೋಪಿಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರ ಕೈಯಲ್ಲಿ ಮಾರಾಟಕ್ಕೆ ಸಿದ್ಧಗೊಂಡಿದ್ದ 1.222 ಕೆಜಿ ಗಾಂಜಾ ಮತ್ತು 770 ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಗಾಂಜಾ ಸುಮಾರು 30 ಸಾವಿರ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ 

    ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ 20/ಬಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನ – ಭಾರತೀಯರು ಸೇರಿ 8 ಮಂದಿ ಸಾವು

  • ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ 5 ದಿನ ಪೊಲೀಸ್ ಕಸ್ಟಡಿಗೆ

    ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ 5 ದಿನ ಪೊಲೀಸ್ ಕಸ್ಟಡಿಗೆ

    – ಕೋರ್ಟ್ ಹಾಲ್‌ನಲ್ಲಿ ತಲೆ ಸುತ್ತು ಎಂದ ಮಾಡಾಳ್

    ಬೆಂಗಳೂರು: ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಅವರನ್ನು 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ (Police Custody) ಒಪ್ಪಿಸಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಮಾಡಿದೆ.

    ಲೋಕಾಯುಕ್ತ ಟ್ರ್ಯಾಪ್ ಹಾಗೂ ರೇಡ್ ವೇಳೆ ಕಚೇರಿ ಹಾಗೂ ಮನೆಯಲ್ಲಿ ಸಿಕ್ಕ 8 ಕೋಟಿ ಹಣದ ಸಂಬಂಧ ಬಿಜೆಪಿಯ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅರೆಸ್ಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ (Court) ಕೆಎಸ್‌ಡಿಎಲ್ ಟೆಂಡರ್ (KSDL) ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ A1 ಆರೋಪಿಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ ಏಪ್ರಿಲ್ 1ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

    ಲೋಕಾಯುಕ್ತ 10ದಿನ ಕಸ್ಟಡಿಗೆ ಕೇಳಿತ್ತು. ಆದರೆ ಮಾಡಾಳ್ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈಗಾಗಲೇ ಸಾಕಷ್ಟು ಬಾರಿ ವಿಚಾರಣೆಗೆ ಬಂದಿದ್ದಾರೆ. ಈಗ ಮತ್ತೆ 10 ದಿನ ಅವಶ್ಯಕತೆ ಇಲ್ಲ ಎಂದು ವಾದ ಮಂಡನೆ ಮಾಡಿದ್ದಾರೆ. 10 ದಿನ ಕಸ್ಟಡಿ ಅತ್ಯವಶ್ಯಕವಾಗಿದೆ. ಇದುವರೆಗೆ ವಿಚಾರಣೆಗೆ ಸಹಕರಿಸಿಲ್ಲ ಎಂದು ಲೋಕಾಯುಕ್ತ ಮನವಿ ಮಾಡಿದ್ದಾರೆ. ಇಬ್ಬರ ವಾದವನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರದವರೆಗೆ ಅಂದರೆ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ನನ್ನ ತಂದೆ ಯಾವತ್ತೂ ರಾಜಕೀಯ ಪಾಠ ಹೇಳಿಕೊಡಲಿಲ್ಲ – ಸಾರ್ವಜನಿಕ ವೇದಿಕೆಯಲ್ಲಿ ದರ್ಶನ್ ಧ್ರುವನಾರಾಯಣ ಮೊದಲ ಭಾಷಣ

    ಈ ವೇಳೆ ಕೋರ್ಟ್ ಹಾಲ್‌ನಲ್ಲಿ ನನಗೆ ತಲೆ ಸುತ್ತು ಎಂದು ಮಾಡಾಳ್ ಹೇಳಿದ್ದರು. ಕುಳಿತುಕೊಳ್ಳಲು ಮಾಡಾಳ್ ಮನವಿ ಮಾಡಿದ್ದಾರೆ. ಈ ವೇಳೆ ನ್ಯಾಯಾಧೀಶರ ಅನುಮತಿ ಮೇರೆಗೆ ಮಾಡಾಳ್ ಕುಳಿತುಕೊಂಡರು. ಇದನ್ನೂ ಓದಿ: ಕಾರ್ಮಿಕರನ್ನು ಸತಾಯಿಸಿ ಮನಬಂದಂತೆ ಕಿಟ್‌ಗಳನ್ನು ಎಸೆದ ಸಿಬ್ಬಂದಿ

  • ಸಿಎಂ ಮೀಸಲಾತಿ ಗಿಮಿಕ್ ಕೋರ್ಟ್‍ನಲ್ಲಿ ನಿಲ್ಲುವುದಿಲ್ಲ: ಮುಖ್ಯಮಂತ್ರಿ ಚಂದ್ರು

    ಸಿಎಂ ಮೀಸಲಾತಿ ಗಿಮಿಕ್ ಕೋರ್ಟ್‍ನಲ್ಲಿ ನಿಲ್ಲುವುದಿಲ್ಲ: ಮುಖ್ಯಮಂತ್ರಿ ಚಂದ್ರು

    ರಾಯಚೂರು: ಮೀಸಲಾತಿ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಚುನಾವಣೆಗೆ ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಇದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿ ಮಾಡಿದ್ದಾರೆ ಅಂತ ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು (Mukhyamantri Chandru) ಆರೋಪಿಸಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಮೈನಾರಿಟಿಯವರ ಶೇ.4 ಮೀಸಲಾತಿಯನ್ನ ತೆಗೆದಿದ್ದಾರೆ, ಅದೆಲ್ಲಿ ಅವರಿಗೆ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. 2 ಡಿ, 2 ಸಿ ಅಂತ ಮಾಡಿದ್ದಾರೆ. ಇವೆಲ್ಲಾ ಕೇವಲ ಚುನಾವಣಾ ಗಿಮಿಕ್ಸ್. ಬಿಜೆಪಿ ಪಕ್ಷಕ್ಕೆ ಭವಿಷ್ಯ ಇಲ್ಲಾ ಬರೀ ಸುಳ್ಳು, ಭರವಸೆಗಳನ್ನು ನೀಡುತ್ತಲೇ ಬಂದಿದೆ. ಈ ಸರ್ಕಾರ ಬರೀ ಜಾಹಿರಾತಿಗೆ ಹಣ ಖರ್ಚು ಮಾಡುತ್ತಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಶೋಕ್ ಖೇಣಿಗೆ ಟಿಕೆಟ್ ಮಾರಿಕೊಂಡಿದೆ – ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರಾಸಿಂಗ್ ಕಿಡಿ

    ಸಿಎಂ ಬೊಮ್ಮಾಯಿ ಬುದ್ಧಿವಂತರಿದ್ದಾರೆ. ಆದರೆ ಅವರಿಗೆ ಶಕ್ತಿಯಿಲ್ಲ. ಸಿಎಂ ರಿಮೋಟ್ ಕಂಟ್ರೋಲ್ ನಿಂದ ಕೆಲಸ ಮಾಡುತ್ತಿದ್ದಾರೆ. ನಾಲ್ಕು ಭಾಗದಿಂದ ಸಿಎಂಗೆ ಒತ್ತಡ ತರುತ್ತಿದ್ದಾರೆ. ಯಡಿಯೂರಪ್ಪ ಅವರ ಕುಟುಂಬದವರು, ಆರ್ ಎಸ್‍ಎಸ್ (RSS), ಮೋದಿ (Modi) ಮತ್ತು ಅಮಿತ್ ಶಾ (AmitShah) ರಿಂದ ಒತ್ತಡವಿದೆ. ಅವರುಗಳ ಒತ್ತಾಯದ ಮೇರೆಗೆ ಸಿಎಂ ಮಾತನಾಡಬೇಕಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ನಿಮ್ಮ ಬುದ್ಧಿಯನ್ನ ನೀವು ಉಪಯೋಗಿಸಲು ಆಗುತ್ತಿಲ್ಲ ಎಂದು ಹೇಳಿದರು.

    ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೀನಾಯ ಸ್ಥಿತಿ ಬಂದಿದೆ. ಇನ್ನೂ ಕಾಂಗ್ರೆಸ್‍ (Congress) ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆಮ್ ಆದ್ಮಿ ಕೊಟ್ಟ ಯೋಜನೆಗಳನ್ನು ನಂದು ಅಂತ ಹೇಳಿದರೆ ಗೆಲ್ಲಿಸಬೇಕು ಭ್ರಷ್ಟರಿಗೆ ಟಿಕೆಟ್ ಕೊಟ್ಟಿದ್ದಿರಿ, ಭ್ರಷ್ಟಾಚಾರದ ಪರವಾಗಿರುವಾಗ ನಿಮ್ಮನ್ನ ಜನ ಯಾಕೆ ಗೆಲ್ಲಿಸಬೇಕು ಅಂತ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.