Tag: court

  • ನಾನು ತಪ್ಪು ಮಾಡಿದ್ದರೆ ಕಾನೂನಿಗೆ ತಲೆ ಬಾಗುವೆ : ಫಿಲ್ಮ್ ಚೇಂಬರ್ ಗೆ ಕಿಚ್ಚನ ಪತ್ರ

    ನಾನು ತಪ್ಪು ಮಾಡಿದ್ದರೆ ಕಾನೂನಿಗೆ ತಲೆ ಬಾಗುವೆ : ಫಿಲ್ಮ್ ಚೇಂಬರ್ ಗೆ ಕಿಚ್ಚನ ಪತ್ರ

    ಕಿಚ್ಚ ಸುದೀಪ್ ಮೇಲೆ ನಿರ್ಮಾಪಕ ಎನ್.ಎಮ್. ಕುಮಾರ್  (NM Kumar) ಗುರುತರ ಆರೋಪ ಮಾಡಿದ್ದರು. ತಮ್ಮಿಂದ ಸಿನಿಮಾ ಮಾಡಲು ಮುಂಗಡ ಹಣ ತೆಗೆದುಕೊಂಡು ಕಾಲ್ ಶೀಟ್ ನೀಡುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ನೋವು ಹೊರಹಾಕಿದ್ದರು. ಹಲವು ವರ್ಷಗಳಿಂದ ತಾವು ಸುದೀಪ್ ಅವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದರೂ, ಅವರು ಪರಭಾಷಾ ನಿರ್ಮಾಪಕರಿಗೆ ಕಾಲ್ ಶೀಟ್ ನೀಡಿ ತಮಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಈ ಆರೋಪಕ್ಕೆ ಸುದೀಪ್ (Sudeep) ಕಾನೂನು ಮೂಲಕವೇ ಉತ್ತರಿಸಿದ್ದರು. ತಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡಿ, ತಮ್ಮ ವ್ಯಕ್ತಿತ್ವಕ್ಕೆ ಕುಮಾರ್ ಧಕ್ಕೆ ತರುತ್ತಿದ್ದಾರೆ ಎಂದು ಮಾನನಷ್ಟ ನೋಟಿಸ್ ಕಳುಹಿಸಿದ್ದರು. ಬರೋಬ್ಬರಿ 10 ಕೋಟಿ ರೂಪಾಯಿ ಮಾನನಷ್ಟ ಕಟ್ಟಿಕೊಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದ್ದರು. ನೋಟಿಸ್ ಕಳುಹಿಸುತ್ತಿದ್ದಂತೆಯೇ ಕುಮಾರ್ ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಸುದೀಪ್ ತಮಗೆ ಮೋಸ ಮಾಡಿದ್ದು ನಿಜ ಎಂದು ಮತ್ತೆ ನುಡಿದಿದ್ದರು. ಇದನ್ನೂ ಓದಿ:ವಿಶೇಷ ಆಮ್ಲಜನಕ ಚಿಕಿತ್ಸೆಯ ಮೊರೆ ಹೋದ ಸಮಂತಾ

    ಈ ಎಲ್ಲ ಆರೋಪ ಪ್ರತ್ಯಾರೋಪಕ್ಕೆ ಉತ್ತರ ಎನ್ನುವಂತೆ ಸುದೀಪ್, ಚಲನಚಿತ್ರ ವಾಣಿಜ್ಯ ಮಂಡಳಿ (Film Chamber), ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಕ್ಕೆ ಪತ್ರ (Letter) ಬರೆದಿದ್ದಾರೆ. ಮೂರು ಸಂಸ್ಥೆಗಳು ನಿರ್ಮಾಪಕರ ಪರ ನಿಲ್ಲಬೇಕೋ ಅಥವಾ ಕಲಾವಿದರ ಪರ ನಿಲ್ಲಬೇಕೋ ಎನ್ನುವ ಸಂದಿಗ್ಧತೆಗೆ ಒಳಗಾಗದೇ ನನ್ನ ಮೇಲೆ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದ್ದರೆ, ನ್ಯಾಯಾಯಲದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ‘ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿಯಷ್ಟೇ. ಸ್ಪಂದಿಸಬೇಕಾದದ್ದು ನಿಮ್ಮ ಕರ್ತವ್ಯ. ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೇ ತಕರಾರು ಇರುವುದಿಲ್ಲ. ಯಾವುದೇ ನಿರ್ಮಾಪಕರು, ಯಾರೇ ಕಲಾವಿದರು, ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತೃ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆಯಿಂದ ಮನವಿ ಮಾಡುತ್ತೇನೆ ಎಂದು ಮಾತೃ ಸಂಸ್ಥೆಗಳಿಗೂ ಕಿಚ್ಚ ಪಾಠ ಮಾಡಿದ್ದಾರೆ.

    27 ವರ್ಷಗಳ ಕಾಲ ನಾನೂ ಎಂದಾದರೂ ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೇಯೆ. ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ, 45 ಸಿನಿಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈವರೆಗೂ ಈ ನಿಮ್ಮ ಪ್ರೀತಿಯ ಸುದೀಪ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟತನಕ್ಕಲ್ಲ ಎಂದು ಹೇಳುವ ಮೂಲಕ ತಮಗೂ ನಿರ್ಮಾಪಕರಿಂದ ಬಾಕಿ ಬರಬೇಕಾಗಿದ್ದನ್ನೂ ನೆನಪಿಸಿದ್ದಾರೆ.

    ಚಿತ್ರರಂಗದ ಮುಂದಿನ ಭವಿತವ್ಯಕ್ಕೆ ಕೆಟ್ಟ ಉದಾಹರಣೆ ದಕ್ಕಬಾರದು ಎಂದು ಇಷ್ಟು ಕಠಿಣವಾದ ಹೋರಾಟ ಮಾಡುತ್ತಿರುವುದಾಗಿ ಕಿಚ್ಚ ಪತ್ರದಲ್ಲಿ ಬರೆದಿದ್ದಾರೆ. ಯಾರದ್ದೋ ಆಗಲಿ ಜೀವನ-ಜೀವ ಉಳಿಸಲು ಪ್ರಯತ್ನಿಸಿದ್ದೇನೇ ಹೊರತು, ಯಾರ ಜೀವ ಹೋಗಲೂ ನಾನು ಬದುಕಿನುದ್ದಕ್ಕೂ ಸಾಕ್ಷಿಯಾಗಲಾರೆ ಎಂದು ಹೇಳುವ ಮೂಲಕ ಎನ್.ಎಂ. ಸುರೇಶ್ ಅವರಿಗೂ ಇದೇ ಪತ್ರದಲ್ಲಿ ಉತ್ತರ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ

    ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ

    – ನನ್ನ ಪತಿ ಹಿಂದೂ, ನಾನೂ ಹಿಂದೂ; ನಾನೀಗ ಭಾರತೀಯಳೆಂದು ಭಾವಿಸ್ತೇನೆ: ಸೀಮಾ
    – ಪತ್ನಿಯನ್ನ ಒಂದುಗೂಡಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ ಸೀಮಾ ಪತಿ

    ನವದೆಹಲಿ: ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ (30) ಮತ್ತು ಗ್ರೇಟರ್ ನೋಯ್ಡಾ ನಿವಾಸಿಗಳಾದ ಸಚಿನ್ ಮೀನಾ (25) ಜಾಮೀನು ಪಡೆದು ದೆಹಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಬೆನ್ನಲ್ಲೇ ಪಾಕ್ ಮಹಿಳೆ (Pak Women) ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಪ್ರಾರಂಭಿಸಲು ಮುಂದಾಗಿದ್ದಾಳೆ.

    ಭಾರತಕ್ಕೆ ಅಕ್ರಮವಾಗಿ ತನ್ನ 4 ಮಕ್ಕಳೊಂದಿಗೆ ಪ್ರವೇಶಿಸಿದ್ದ ಮಹಿಳೆ ಮತ್ತು ಆತನ ಪ್ರಿಯಕರ ಹಾಗೂ ಅವರಿಬ್ಬರಿಗೆ ಆಶ್ರಯ ನೀಡಿದ್ದ ಪ್ರಿಯಕರನ ತಂದೆಯನ್ನ ಗ್ರೇಟರ್ ನೋಯ್ಡಾ ಪೊಲೀಸರು (Noida Police) ಜುಲೈ ಬಂಧಿಸಿದ್ದರು. ಶುಕ್ರವಾರ ಸ್ಥಳೀಯ ನ್ಯಾಯಾಲಯ (Local Court) ಈ ಮೂವರಿಗೂ ಜಾಮೀನು ನೀಡಿತು. ಕಾಗದ ಪತ್ರಗಳ ಪರಿಶೀಲನೆ ಕೆಲಸ ಮುಗಿದ ಬಳಿಕ ಶನಿವಾರ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಇದನ್ನೂ ಓದಿ: ಪ್ರಿಯಕರನಿಗೋಸ್ಕರ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆಗೆ ಜಾಮೀನು

    ಜೈಲಿನಿಂದ ಬಿಡುಗಡೆಗೊಂಡ ನಂತರ ಹೊಸದಾಗಿ ದಾಂಪತ್ಯ ಜೀವನ ಶುರು ಮಾಡಲು ಈ ಜೋಡಿ ಮುಂದಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡ ಸೀಮಾ, ನನ್ನ ಪತಿ ಹಿಂದೂ, ಹಾಗಾಗಿ ನಾನೂ ಹಿಂದೂ. ನಾನೀಗ ಭಾರತೀಯಳು ಎಂದು ಭಾವಿಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

    ಪಬ್‌ಜೀ ಪ್ರೇಮಕಥೆ ಶುರುವಾಗಿದ್ದು ಥ್ರಿಲ್ಲಿಂಗ್:
    ಸೀಮಾ ಹಾಗೂ ಸಚಿನ್ ಲವ್‌ಸ್ಟೋರಿ ಬಾಲಿವುಡ್ ಸಿನಿಮಾದಷ್ಟೇ ಕುತೂಹಲವಾಗಿದೆ. ಸಚಿನ್ ಮೀನಾ ಮೂಲತಃ ಉತ್ತರಪ್ರದೇಶದವನಾಗಿದ್ದು, ದೇಶದಲ್ಲಿ ಕೋವಿಡ್ ವ್ಯಾಪಿಸಿದ ಸಂದರ್ಭದಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ ಆಡುತ್ತಿದ್ದ. ಈ ವೇಳೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಸೀಮಾ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಇದನ್ನೂ ಓದಿ: ರೈಲ್ವೇ ಬ್ರಿಡ್ಜ್ ನಟ್ ಕಳಚಿದ ಕಿಡಿಗೇಡಿಗಳು – ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಸೀಮಾ ಬಂದಿದ್ದು ಹೇಗೆ?
    ನನ್ನದು ತುಂಬಾ ದೀರ್ಘ ಪ್ರಯಾಣವಾಗಿತ್ತು. ಮೊದಲ ಮದುವೆಯಾದ ನಂತರ ಕರಾಚಿಯಿಂದ ದುಬೈಗೆ ಹೋಗಿದ್ದೆ. ಅಲ್ಲಿಂದ ನೇಪಾಳಕ್ಕೆ ಹೋದ್ವಿ. ಕೊನೆಗೆ ಪೋಖ್ರಾ ದಾರಿ ಹಿಡಿಯುವ ಮುನ್ನ ಸಚಿನ್‌ನನ್ನ ಭೇಟಿಯಾಗಿದ್ದೆ. ನಂತರ ನಾನು ಪಾಕಿಸ್ತಾನಕ್ಕೆ, ಸಚಿನ್ ಭಾರತಕ್ಕೆ ಮರಳಿದ್ದರು. ಅದಾದ ಮೇಲೆ ಸೀಮಾ ಹಾಗೂ ಪತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿ ಪಾಕಿಸ್ತಾನ ತೊರೆಯಲು ಮುಂದಾದಳು. ಸೀಮಾ ತನಗಿದ್ದ ಒಂದು ಫ್ಲಾಟ್ ಅನ್ನು 12 ಲಕ್ಷ ರೂ.ಗೆ (ಪಾಕಿಸ್ತಾನ ರೂಪಾಯಿಗಳಲ್ಲಿ) ಮಾರಾಟ ಮಾಡಿ, ತನಗೆ ಮತ್ತು ತನ್ನ ನಾಲ್ಕು ಮಕ್ಕಳಿಗೆ ನೇಪಾಳಕ್ಕೆ ವಿಮಾನ ಟಿಕೆಟ್ ಮತ್ತು ವೀಸಾ ವ್ಯವಸ್ಥೆ ಮಾಡಿಕೊಂಡಳು. ಕಳೆದ ಮೇ ತಿಂಗಳಲ್ಲಿ ದುಬೈ ಮೂಲಕ ನೇಪಾಳಕ್ಕೆ ಬಂದ ಸೀಮಾ, ಅಲ್ಲಿಂದ ಮೇ 13ರಂದು ಗ್ರೇಟರ್ ನೋಯ್ದಾಗೆ ಬಂದಿಳಿದಿದ್ದಳು. ಸಚಿನ್ ತನ್ನ ಪ್ರಿಯತಮೆಯ ಗುಟ್ಟು ಬಿಟ್ಟುಕೊಡದೇ ನೋಯ್ಡಾದಲ್ಲೇ ಬಾಡಿಗೆ ಮನೆ ಮಾಡಿ ಇರಿಸಿದ್ದ. ಈ ವಿಷಯ ಬೆಳಕಿಗೆ ಬಂದ ನಂತರ ಜುಲೈ 4ರಂದು ನೋಯ್ಡಾ ಪೊಲೀಸರು ಬಂಧಿಸಿದ್ದರು.

    ಈ ನಡುವೆ ಸೌದಿ ಅರೇಬಿಯಾದಿಂದ ವೀಡಿಯೊ ಸಂದೇಶ ಕಳುಹಿಸಿರುವ ಸೀಮಾಳ ಪತಿ ಗುಲಾಮ್ ಹೈದರ್ ಅವರು ತನ್ನ ಪತ್ನಿಯೊಂದಿಗೆ ಒಂದಾಗಿ ಬಾಳೋದಕ್ಕೆ ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೆ ಸೀಮಾ, ಗುಲಾಮ್ ಹೈದರ್ ಬಳಿಗೆ ಹಿಂತಿರುಗಲು ಬಯಸಲ್ಲ, ಪಾಕಿಸ್ತಾನಕ್ಕೆ ಹಿಂತಿರುಗಿದ್ರೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿವೋರ್ಸ್‍ಗಾಗಿ ಕೋರ್ಟ್ ಮೆಟ್ಟಿಲೇರಿದ್ದ 15 ಜೋಡಿ ಒಂದಾಗಿಸಿದ ನ್ಯಾಯಾಧೀಶರು

    ಡಿವೋರ್ಸ್‍ಗಾಗಿ ಕೋರ್ಟ್ ಮೆಟ್ಟಿಲೇರಿದ್ದ 15 ಜೋಡಿ ಒಂದಾಗಿಸಿದ ನ್ಯಾಯಾಧೀಶರು

    ರಾಯಚೂರು: ವಿಚ್ಛೇದನಕ್ಕೆ ಅರ್ಜಿ ಹಾಕಿ ನ್ಯಾಯಾಲಯ ಮೆಟ್ಟಿಲೇರಿದ್ದ ರಾಯಚೂರಿನ 15 ಜೋಡಿಗಳನ್ನು ನ್ಯಾಯಾಧೀಶರು ಸಂಧಾನ ಮಾಡಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ.

    ರಾಷ್ಟ್ರೀಯ ಲೋಕಾ ಅದಾಲತ್ ಹಿನ್ನೆಲೆಯಲ್ಲಿ ದಂಪತಿಗಳ ನಡುವೆ ಇರುವ ವ್ಯಾಜ್ಯಗಳನ್ನ ರಾಜಿಸಂಧಾನ ಮೂಲಕ ಇತ್ಯರ್ಥ ಪಡಿಸಲು 90 ಪ್ರಕರಣ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ಡಿವೋರ್ಸ್ ಹಾಗೂ ಜೀವನಾಂಶ ಕೋರಿ ಅರ್ಜಿ ಹಾಕಿದ ಪ್ರಕರಣಗಳು ಹೆಚ್ಚಾಗಿ ಇದ್ದವು. ಇದರಲ್ಲಿ ಸಂಧಾನ ಮೂಲಕ 15 ಜೋಡಿಗಳು ಮತ್ತೆ ಒಂದಾಗಲು ಒಪ್ಪಿದ್ದಾರೆ. ಇದನ್ನೂ ಓದಿ: West Bengal Violence: ಭುಗಿಲೆದ್ದ ಹಿಂಸಾಚಾರಕ್ಕೆ 11 ಮಂದಿ ಬಲಿ

    ಮತ್ತೆ ಹೊಸ ಬದುಕನ್ನು ಆರಂಭಿಸುವಂತೆ ಹಾರ ಬದಲಾಯಿಸಿ, ಸಿಹಿ ತಿನಿಸಿ ದಂಪತಿಗಳನ್ನ ಕಳುಹಿಸಿಕೊಡಲಾಗಿದೆ. ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಅವರ ಪ್ರಕರಣಗಳನ್ನು ಮುಕ್ತಾಯ ಮಾಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

    ಆಸ್ತಿ, ಹಣಕಾಸಿನ ವ್ಯಾಜ್ಯಗಳಿಗಿಂತ ಕುಟುಂಬ ವ್ಯಾಜ್ಯಗಳೇ ಹೆಚ್ಚು ಬರುತ್ತಿವೆ. ಹೀಗಾಗಿ ರಾಜಿಸಂಧಾನ ಮೂಲಕ ಬಗೆಹರಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ. ಇದನ್ನೂ ಓದಿ: ರಾಜ್ಯದ ಕರಾವಳಿಯಲ್ಲಿ ಮಳೆಯಬ್ಬರ- ಮೈದುಂಬಿದ ನದಿಗಳು, ಜಮೀನು ಜಲಾವೃತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಿಯಕರನಿಗೋಸ್ಕರ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆಗೆ ಜಾಮೀನು

    ಪ್ರಿಯಕರನಿಗೋಸ್ಕರ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆಗೆ ಜಾಮೀನು

    -ಪ್ರಿಯಕರ ಹಾಗೂ ಆತನ ತಂದೆಗೂ ಜಾಮೀನು ಮಂಜೂರು

    ಲಕ್ನೋ: ವೀಸಾ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ (Pakistani Woman) ಸೀಮಾ ಗುಲಾಮ್ ಹೈದರ್ (27) ಮತ್ತು ಗ್ರೇಟರ್ ನೋಯ್ಡಾ ನಿವಾಸಿಗಳಾದ ಸಚಿನ್ ಮೀನಾ (22) ಮತ್ತು ಇಬ್ಬರಿಗೆ ಆಶ್ರಯ ನೀಡಿದ ನೇತ್ರಪಾಲ್ ಮೀನಾ (50) ಅವರಿಗೆ ನೋಯ್ಡಾ ನ್ಯಾಯಾಲಯ ಶುಕ್ರವಾರ ಜಾಮೀನು (Bail) ನೀಡಿದೆ.

    ಜುಲೈ 4ರಂದು ಗ್ರೇಟರ್ ನೋಯ್ಡಾ (Noida) ಪೊಲೀಸರು ವೀಸಾ (Visa) ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಮಹಿಳೆ ಮತ್ತು ಆತನ ಪ್ರಿಯಕರ ಹಾಗೂ ಅವರಿಬ್ಬರಿಗೆ ಆಶ್ರಯ ನೀಡಿದ್ದ ಪ್ರಿಯಕರನ ತಂದೆಯನ್ನು ಬಂಧಿಸಿದ್ದರು. ಇದೀಗ ಸ್ಥಳೀಯ ನ್ಯಾಯಾಲಯ (Court) ಈ ಮೂವರಿಗೂ ಜಾಮೀನು ನೀಡಿದ್ದು, ಕಾಗದ ಪತ್ರಗಳ ಪರಿಶೀಲನೆ ಕೆಲಸ ಮುಗಿದ ಬಳಿಕ ಶನಿವಾರ ಜೈಲಿನಿಂದ ಬಿಡುಗಡೆ ಮಾಡಲಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಇದನ್ನೂ ಓದಿ: ಕುಸ್ತಿಪಟುಗಳಿಗೆ ಕಿರುಕುಳ ಆರೋಪ – ಬ್ರಿಜ್ ಭೂಷಣ್‍ಗೆ ಸಮನ್ಸ್ ಜಾರಿಗೊಳಿಸಿದ ಕೋರ್ಟ್

    ಸಚಿನ್‌ ಮೀನಾ ಮೂಲತಃ ಉತ್ತರಪ್ರದೇಶದವನಾಗಿದ್ದು, 2019ರಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ (PUBG) ಆಡಬೇಕಾದರೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದೆ. ಬಳಿಕ ಸೀಮಾ ಗುಲಾಮ್ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಹಿನ್ನಡೆ- ಮಾನನಷ್ಟ ಪ್ರಕರಣದಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ

    ಆರೋಪಿಗಳ ಪರ ವಕೀಲ ಹೇಮಂತ್ ಕೃಷ್ಣ ಪರಾಶರ್ (Hemant Krishna Parashar) ವಾದ ಮಂಡಿಸಿದ್ದು, ಜೇವರ್ ಸಿವಿಲ್ ಕೋರ್ಟ್ ಜೂನಿಯರ್ ವಿಭಾಗದ ನ್ಯಾಯಮೂರ್ತಿ ನಾಜಿಮ್ ಅಕ್ಬರ್ (Justice Nazim Akbar) ಜಾಮೀನು ಮಂಜೂರು ಮಾಡಿದ್ದಾರೆ. ಪ್ರಕರಣ ಸಂಪೂರ್ಣವಾಗಿ ಕೊನೆಗೊಳ್ಳುವವರೆಗೂ ಸೀಮಾ ಗುಲಾಮ್ ಹೈದರ್ ದಂಪತಿ ವಾಸಸ್ಥಾನ ಬದಲಿಸದಂತೆ ಮತ್ತು ಪ್ರತಿದಿನ ತಪ್ಪದೇ ಕೋರ್ಟಿಗೆ ಹಾಜರಾಗುವಂತೆ ನ್ಯಾಯಾಲಯವು ಷರತ್ತನ್ನು ವಿಧಿಸಿದೆ ಎಂದು ಆರೋಪಿಗಳ ಪರ ವಾದ ಮಂಡಿಸಿದ್ದ ವಕೀಲ ಪರಾಶರ್ ಹೇಳಿದ್ದಾರೆ. ಇದನ್ನೂ ಓದಿ: ತಬ್ರೇಜ್ ಅನ್ಸಾರಿ ಹತ್ಯೆ ಕೇಸ್ – 10 ಅಪರಾಧಿಗಳಿಗೆ 10 ವರ್ಷ ಶಿಕ್ಷೆ

    ಈ ವರ್ಷದ ಆರಂಭದಲ್ಲಿ ಸೀಮಾ ಗುಲಾಮ್ ಹೈದರ್ ಮತ್ತು ಸಚಿನ್ ನೇಪಾಳದಲ್ಲಿ ವಿವಾಹವಾಗಿದ್ದು, ಪಾಕಿಸ್ತಾನಕ್ಕೆ ತೆರಳಿದರೆ ಜೀವಬೆದರಿಕೆ ಇದೆ. ಅಲ್ಲದೇ ನೇಪಾಳದ ಕಠ್ಮಂಡುವಿನಲ್ಲಿ ತಾನು ಮತ್ತು ಸಚಿನ್ ಮದುವೆಯಾಗಿರುವುದಾಗಿ ಮಹಿಳೆ ಲಿಖಿತ ರೂಪದಲ್ಲಿ ತಿಳಿಸಿದ್ದು, ಪಾಕಿಸ್ತಾನದಿಂದ ನೇಪಳಕ್ಕೆ ಹೋಗಿ ಬಳಿಕ ಭಾರತಕ್ಕೆ ಬಂದಿರುವುದಾಗಿ ವಕೀಲ ಪರಾಶರ್ ತಮ್ಮ ವಾದವನ್ನು ಮಂಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮಹಿಳೆಯ ನಾಲ್ವರು ಮಕ್ಕಳ ಕಾಳಜಿಯ ಬಗ್ಗೆಯೂ ವಕೀಲರು ವಾದ ಮಂಡಿಸಿದ್ದು, ಇವರ ವಾದದಿಂದ ತೃಪ್ತಗೊಂಡ ನ್ಯಾಯಾಲಯವು ದಂಪತಿಗೆ ಜಾಮೀನು ನೀಡಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ನಿಷೇಧ – ಮಧ್ಯಂತರ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೊಡ್ಡಪ್ಪನ ಮಗಳಿಗೆ ಲೈಂಗಿಕ ದೌರ್ಜನ್ಯ: ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ

    ದೊಡ್ಡಪ್ಪನ ಮಗಳಿಗೆ ಲೈಂಗಿಕ ದೌರ್ಜನ್ಯ: ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ

    ಚಾಮರಾಜನಗರ: ಸಹೋದರ ಸಂಬಂಧಿಯಾದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಹಾಗೂ ಬಲವಂತದ ದೈಹಿಕ ಸಂಪರ್ಕ ನಡೆಸಿದ್ದ ಯುವಕನಿಗೆ 20 ವರ್ಷ ಶಿಕ್ಷೆ ವಿಧಿಸಿ ಚಾಮರಾಜನಗರದ (Chamarajanagar) ಮಕ್ಕಳ ಸ್ನೇಹಿ ನ್ಯಾಯಾಲಯ (Court) ತೀರ್ಪು ನೀಡಿದೆ.

    ಚಾಮರಾಜನಗರ ತಾಲೂಕಿನ ಗ್ರಾಮವೊಂದರ ಯುವಕ ರಂಗಸ್ವಾಮಿ (21) ಶಿಕ್ಷೆಗೊಳಗಾದ ಅಪರಾಧಿ. ದೊಡ್ಡಪ್ಪನ ಮಗಳಾದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಈತ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಬಲವಂತದಿಂದ ದೈಹಿಕ ಸಂಪರ್ಕ ನಡೆಸಿದ್ದನು. ಇದನ್ನೂ ಓದಿ: ವಿದೇಶಿ ಮಹಿಳೆಯರಿಂದ ಪಿಎಸ್‍ಐ ಸೇರಿ ನಾಲ್ವರ ಮೇಲೆ ಹಲ್ಲೆ

    ಈ ಸಂಬಂಧ 2020 ರಲ್ಲಿ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಚಾರ್ಚ್‍ಶೀಟ್ ಸಲ್ಲಿಕೆಯಾಗಿತ್ತು. ಯುವಕ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾ.ನಿಶಾರಾಣಿ ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ 40 ಸಾವಿರ ರೂ. ದಂಡ ವಿಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರವು 4 ಲಕ್ಷ ಪರಿಹಾರ ಕೊಡಬೇಕೆಂದು ನ್ಯಾಯಾಧೀಶರು ನಿರ್ದೇಶನ ಕೊಟ್ಟಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಯೋಗೇಶ್ ವಾದ ಮಂಡಿಸಿದ್ದರು. ಇದನ್ನೂ ಓದಿ: ಬೀದರ್ ಪೊಲೀಸರ ದಾಳಿ – 50 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಮೊಗ್ಗದಲ್ಲಿ ಯುವಕನ ಕೊಲೆ – ನಾಲ್ವರಿಗೆ ಜೀವಾವಧಿ ಶಿಕ್ಷೆ

    ಶಿವಮೊಗ್ಗದಲ್ಲಿ ಯುವಕನ ಕೊಲೆ – ನಾಲ್ವರಿಗೆ ಜೀವಾವಧಿ ಶಿಕ್ಷೆ

    ಶಿವಮೊಗ್ಗ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಶಿವಮೊಗ್ಗ (Shivamogga)  ಜಿಲ್ಲಾ ನ್ಯಾಯಾಲಯ (Court) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    2017 ಫೆ.8 ರಂದು ಶಿವಮೊಗ್ಗದ ಅಣ್ಣಾನಗರದಲ್ಲಿ ಯುವಕ ಅಯಾತ್ ಹುಮಾಯುನ್ ನನ್ನು ಕ್ಷುಲ್ಲಕ ಕಾರಣಕ್ಕೆ ಅರ್ಬಾಜ್, ಶಾರುಖ್ ಖಾನ್, ಶಾಬಾದ್ ಹಾಗು ಅಲ್ಯಾಜ್ ಎಂಬ ನಾಲ್ವರು ಕೊಲೆ ಮಾಡಿದ್ದರು. ಘಟನೆ ನಂತರ ಹತ್ಯೆಯಾದ ಯುವಕನ ಕುಟುಂಬಸ್ಥರು ದೊಡ್ಡಪೇಟೆ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಕಾಡಾನೆಯೊಂದಿಗೆ ಸೆಲ್ಫಿ – 20 ಸಾವಿರ ರೂ. ದಂಡ

    ಪ್ರಕರಣದ ಬೆನ್ನತ್ತಿದ್ದ ಪೊಲೀಸರು (Police) ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಬಗ್ಗೆ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದೆ. ಒಂದು ವೇಳೆ ದಂಡದ ಹಣ ಕಟ್ಟಲು ವಿಫಲವಾದರೆ 6 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದೆ. ಇದನ್ನೂ ಓದಿ: ಮಕ್ಕಳಾಗದ್ದಕ್ಕೆ ಕತ್ತು ಕುಯ್ದುಕೊಂಡು ಮಹಿಳೆ ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಯತೀರ್ಥರ ಆರಾಧನೆಗೆ ಅವಕಾಶ – ಉತ್ತರಾಧಿ ಮಠದವರಿಂದ ಮೌನ ಪ್ರತಿಭಟನೆ

    ಜಯತೀರ್ಥರ ಆರಾಧನೆಗೆ ಅವಕಾಶ – ಉತ್ತರಾಧಿ ಮಠದವರಿಂದ ಮೌನ ಪ್ರತಿಭಟನೆ

    ಕೊಪ್ಪಳ: ನವಬೃಂದಾವನ (Vrindavan) ಗಡ್ಡೆಯಲ್ಲಿ ರಾಯರ ಮಠದವರಿಗೆ ಜಯತೀರ್ಥರ ಆರಾಧನೆಗೆ ಕೋರ್ಟ್ (Court) ಆದೇಶ ನೀಡಿದ್ದಕ್ಕೆ ಉತ್ತರಾಧಿ ಮಠದವರು ಇಂದು ಮೌನ ಪ್ರತಿಭಟನೆ ನಡೆಸಿದ್ದಾರೆ.

    ಗಂಗಾವತಿಯ ಆನೆಗೊಂದಿ ಸಮೀಪದ ನವಬೃಂದಾವನ ಗಡ್ಡೆಯ ಒಂದೇ ಬೃಂದಾವನಕ್ಕೆ ರಘುವರ್ಯ ತೀರ್ಥರ ಬೃಂದಾವನ ಹಾಗೂ ಜಯತೀರ್ಥರ ಬೃಂದಾವನ ಎಂದು ರಾಯರ ಮಠ ಹಾಗೂ ಉತ್ತರಾಧಿ ಮಠದವರ ನಡುವೆ ಗೊಂದಲ ಉಂಟಾಗಿತ್ತು. ಇದನ್ನೂ ಬಗೆಹರಿಸಲು ಎರಡು ಮಠದವರು ಕೋರ್ಟ್ ಮೊರೆ ಹೋಗಿದ್ದರು. ಪರಿಶೀಲನೆ ನಡೆಸಿ ನ್ಯಾಯಾಲಯವು ಜು. 6 ರಿಂದ 8ರ ವರೆಗೆ ಮೂರು ದಿನಗಳ ಕಾಲ ಉತ್ತರಾಧಿ ಮಠದವರು ರಘುವರ್ಯ ತೀರ್ಥರ ಮಹಿಮೋತ್ಸವವನ್ನು ಆಚರಣೆ ಮಾಡಬೇಕು. ರಾಯರ ಮಠದವರು ಜು.08 ರಿಂದ 10ರ ವರೆಗೆ ಮೂರು ದಿನಗಳ ಕಾಲ ಜಯತೀರ್ಥರ ಆರಾಧನೆ ಮಹೋತ್ಸವವನ್ನು ನಡೆಸಬೇಕು ಎಂದು ಆದೇಶ ಹೊರಡಿಸಿದೆ. ಇದನ್ನೂ ಓದಿ: ದ.ಕನ್ನಡ, ಉಡುಪಿ, ಉತ್ತರ ಕನ್ನಡದ 5 ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    ಮಂತ್ರಾಲಯದ ರಾಯರ ಮಠದವರಿಗೆ (Mantralaya) ಜಯತೀರ್ಥರ ಆರಾಧನೆಯನ್ನು ಮಾಡಲು ಅವಕಾಶ ನೀಡಿರುವುದು ಉತ್ತರಾಧಿ ಮಠದ ಭಕ್ತರು ಬೇಸರಿಸಿಕೊಂಡಿದ್ದಾರೆ. ನ್ಯಾಯಕ್ಕಾಗಿ ಒತ್ತಾಯಿಸಿ, ನ್ಯಾಯಕ್ಕಾಗಿ ಪ್ರಾರ್ಥನೆ ಎಂಬ ಪೋಸ್ಟರ್‌ಗಳನ್ನು ಹಿಡಿದು ಮೌನ ಪ್ರತಿಭಟನೆಯನ್ನು ನಡೆಸಿದ್ದಾರೆ. ಇದನ್ನೂ ಓದಿ: ಕಾಡಾನೆಯೊಂದಿಗೆ ಸೆಲ್ಫಿ – 20 ಸಾವಿರ ರೂ. ದಂಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಬ್ರೇಜ್ ಅನ್ಸಾರಿ ಹತ್ಯೆ ಕೇಸ್ – 10 ಅಪರಾಧಿಗಳಿಗೆ 10 ವರ್ಷ ಶಿಕ್ಷೆ

    ತಬ್ರೇಜ್ ಅನ್ಸಾರಿ ಹತ್ಯೆ ಕೇಸ್ – 10 ಅಪರಾಧಿಗಳಿಗೆ 10 ವರ್ಷ ಶಿಕ್ಷೆ

    ರಾಂಚಿ: ಸಾಕಷ್ಟು ಸುದ್ದಿಯಾಗಿದ್ದ ತಬ್ರೇಜ್ ಅನ್ಸಾರಿ ಹತ್ಯೆ ಕೇಸ್ (Tabrez Ansari case) ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳು ದೋಷಿಗಳೆಂದು ಜಾರ್ಖಂಡ್‍ನ (Jharkhand) ಖಾರ್ಸಾವಾನ್ ಜಿಲ್ಲಾ ನ್ಯಾಯಾಲಯ (Kharswan Court) ಬುಧವಾರ ತೀರ್ಪು ನೀಡಿದೆ.

    ಅಪರಾಧಿಗಳಿಗೆ ಐಪಿಸಿ ಸೆಕ್ಷನ್ 304ರ (ಅಪರಾಧಿಕ ಮಾನವ ಹತ್ಯೆ) ಅಡಿಯಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ಎಲ್ಲಾ ಅಪರಾಧಿಗಳಿಗೂ ತಲಾ 15,000 ರೂ. ದಂಡವನ್ನೂ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ. ಇಬ್ಬರೂ ಆರೋಪಿಗಳನ್ನು ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದೆ. ಇದನ್ನೂ ಓದಿ: ಪತ್ನಿಯನ್ನು ನಿಂದನೆ ಮಾಡಿದಕ್ಕೆ ರಾಡ್‍ನಿಂದ ಹಲ್ಲೆ ನಡೆಸಿ ತಮ್ಮನ ಕೊಲೆ

    2019ರ ಜೂ.17 ರಂದು ತಬ್ರೇಜ್ ಅನ್ಸಾರಿ ಎಂಬುವವರನ್ನು ಬೈಕ್ ಕಳ್ಳತನಕ್ಕೆ ಬಂದಿದ್ದಾನೆ ಎಂದು ಆರೋಪಿಸಿ ಅಪರಾಧಿಗಳು ರಾಡ್‍ಗಳಿಂದ ಥಳಿಸಿದ್ದರು. ಅಲ್ಲದೇ ಜೈ ಶ್ರೀರಾಮ್ ಹಾಗೂ ಜೈ ಹನುಮಾನ್ ಘೋಷಣೆ ಕೂಗುವಂತೆ ಒತ್ತಾಯಿಸಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ದಯವಿಟ್ಟು ನೇಮಕಾತಿ ಆದೇಶ ನೀಡಿ – ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಲಸಕ್ಕಾಗಿ ಅಲೆಯುತ್ತಿದ್ದಾರಂತೆ ನಟಿ ಉರ್ಫಿ ಜಾವೇದ್

    ಕೆಲಸಕ್ಕಾಗಿ ಅಲೆಯುತ್ತಿದ್ದಾರಂತೆ ನಟಿ ಉರ್ಫಿ ಜಾವೇದ್

    ವಿಚಿತ್ರ ವಿನ್ಯಾಸದ ಬಟ್ಟೆಗಳ ಮೂಲಕ ಫೇಮಸ್ ಆಗಿರುವ ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಉರ್ಫಿ ಜಾವೇದ್ (Urfi Javed) ಇದೀಗ ಕೆಲಸ ಹುಡುಕುತ್ತಿದ್ದಾರಂತೆ. ಈ ಮಾಹಿತಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ನಾನು ಫೇಮಸ್ ಆಗಿದ್ದೇನೆ, ಜನರು ನನ್ನನ್ನು ಗುರುತಿಸುತ್ತಾರೆ ಎಲ್ಲವೂ ನಿಜ. ಆದರೆ, ನನಗೆ ಕೆಲಸವಿಲ್ಲ (Work). ನನ್ನೊಂದಿಗೆ ಕೆಲಸ ಮಾಡಲು ಯಾರೂ ಒಪ್ಪುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

    ತಾವು ಕೆಲಸ ಮಾಡಲು ರೆಡಿಯಾಗಿದ್ದು, ತಮಗೆ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಉರ್ಫಿ ಹೇಳಿಕೊಂಡಿದ್ದಾರೆ. ನಾನು ಕೆಲಸ ಮಾಡಲು ತಯಾರಿದ್ದರೂ, ನನ್ನೊಂದಿಗೆ ಕೆಲಸ ಮಾಡಲು ಯಾರೂ ಸಿದ್ದರಿಲ್ಲ. ಹಾಗಾಗಿ ನನಗೆ ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ತಮಗಾಗಿ ಯಾರಾದರೂ ಕೆಲಸ ಸೃಷ್ಟಿ ಮಾಡಿದರೆ ಹೋಗುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ

    ಈ ಹಿಂದೆ ಉರ್ಫಿಗಾಗಿ ಕಾಸ್ಟ್ಯೂಮ್ (Costume) ಡಿಸೈನ್ ಮಾಡುವವರು ಯಾರೂ ಇರಲಿಲ್ಲವಂತೆ. ಹಾಗಾಗಿಯೇ ತಮ್ಮ ಕಾಸ್ಟ್ಯೂಮ್ ಅನ್ನು ತಾವೇ ಡಿಸೈನ್ ಮಾಡಲು ಕಲಿತಿದ್ದಾರಂತೆ. ಇತ್ತ ಮನೆಯಲ್ಲೂ ಗೌರವವಿಲ್ಲ, ಬೀದಿಯಲ್ಲೂ ಇಲ್ಲ. ಈ ವಿಚಾರವಾಗಿ ತಮಗೆ ತುಂಬಾ ನೋವಾಗಿದೆ ಎಂದಿದ್ದಾರೆ ಉರ್ಫಿ.

     

    ಕಾಸ್ಟ್ಯೂಮ್ ವಿಚಾರವಾಗಿಯೇ ಉರ್ಫಿ ಕೋರ್ಟ್ (ಕೋರ್ಟ್) ಮೆಟ್ಟಿಲು ಕೂಡ ಏರಿದ್ದಾರೆ. ಅರೆಬರೆ ಬಟ್ಟೆ ಹಾಕಿಕೊಂಡು ಬೀದಿಗೆ ಬಂದು ನಮ್ಮ ಸಂಸ್ಕೃತಿಯನ್ನು ಉರ್ಫಿ ಹಾಳು ಮಾಡುತ್ತಿದ್ದಾರೆ ಎಂದು ಹಲವರು ಇವರ ಮೇಲೆ ಪೊಲೀಸರಿಗೆ (Police) ದೂರು ನೀಡಿದ್ದರು. ಅನೇಕರು ತಮಗೆ ಸುಖಾಸುಮ್ಮನೆ ಕಿರುಕುಳು ನೀಡುತ್ತಿದ್ದಾರೆ ಎಂದು ಸ್ವತಃ ಉರ್ಫಿ ಅವರೇ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಇದೆಲ್ಲದರಿಂದ ಆಚೆ ಬರಲು ಉರ್ಫಿ ಕೆಲಸ ಹುಡುಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದವನಿಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

    ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದವನಿಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

    ಗದಗ: ಅಪ್ರಾಪ್ತೆಯೋರ್ವಳನ್ನು (Minor) ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿ, ಜೀವ ಬೆದರಿಕೆ ಹಾಕಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ (Gadag) ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು (Court) ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ಸವದತ್ತಿ (Savadatti) ತಾಲೂಕಿನ ತೆರದಕೊಪ್ಪ ಗ್ರಾಮದ ಮೌಲಾಸಾಬ್ ದೊಡ್ಡಮನಿ ಅತ್ಯಾಚಾರವೆಸಗಿದ ಅಪರಾಧಿ. ಬಾಲಕಿ ನರಗುಂದ (Naragunda) ತಾಲೂಕಿನ ನಿವಾಸಿಯಾಗಿದ್ದು, ಆಕೆ ಅಪ್ರಾಪ್ತೆಯೆಂದು ತಿಳಿದಿತ್ತು. ಹೀಗಿದ್ದರೂ ಮೌಲಾಸಾಬ್ ಅವಳನ್ನು ಒತ್ತಾಯ ಪೂರ್ವಕವಾಗಿ ಬೈಕ್‌ನಲ್ಲಿ ಹತ್ತಿಸಿಕೊಂಡು ಹೋಗಿದ್ದ. ನರಗುಂದ- ಮುನವಳ್ಳಿ ರಸ್ತೆಯ ಸಿಂದೋಗಿ ಕ್ರಾಸ್ ಬಳಿಯ ಮನೆಗೆ ಕರೆದುಕೊಂಡು ಹೋದ ಆತ ಅಲ್ಲಿ ಅವಳ ಪ್ರಜ್ಞೆ ತಪ್ಪಿಸಿ ಅತ್ಯಾಚಾರ (Rape) ನಡೆಸಿದ್ದ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ನಂತರ ಬಾಲಕಿ ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಈ ಕುರಿತು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: 15ರ ರೇಪ್ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಬಾಂಬೆ ಹೈಕೋರ್ಟ್

    ಸದ್ಯ ಈ ಪ್ರಕರಣವನ್ನು ಇನ್ಸ್ಪೆಕ್ಟರ್ ಶ್ರೀನಿವಾಸ್ ಮೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 2018ರ ಜುಲೈ 27 ರಂದು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಸ್ತುತ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಮೌಲಾಸಾಬ್‌ಗೆ ಕಲಂ 366 ರಡಿ 5 ವರ್ಷ ಜೈಲು ಶಿಕ್ಷೆ, 10,000 ರೂ. ದಂಡ ವಿಧಿಸಲಾಗಿದೆ. ಅಲ್ಲದೇ ಕಲಂ 506ರ ಅಡಿ 3 ವರ್ಷ ಜೈಲುಶಿಕ್ಷೆ ಹಾಗೂ 5 ಸಾವಿರ ರೂ. ದಂಡ, ಕಲಂ 376(ಎಬಿ) ರೆ/ವಿ ಕಲಂ 5(ಹೆಚ್)(ಎಂ), ಪೋಕ್ಸೋ ಕಾಯ್ದೆಯಡಿ 25 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ (Penalty) ಕಟ್ಟಲು ಆದೇಶ ನೀಡಲಾಗಿದೆ. ಇದನ್ನೂ ಓದಿ: ಚೆಕ್‌ ಬೌನ್ಸ್‌ ಕೇಸ್‌ – ಮಾಜಿ ಸಚಿವ ಜಾಲಪ್ಪ ಪುತ್ರಗೆ ಜೈಲು ಶಿಕ್ಷೆ

    ಒಂದು ವೇಳೆ ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 2 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಶೆಟ್ಟಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಅಮರೇಶ್ ಹಿರೇಮಠ ವಾದ ಮಂಡಿಸಿದ್ದರು. ಇದನ್ನೂ ಓದಿ: ಹೆಲ್ಮೆಟ್‌ ಧರಿಸದೇ ಅಪ್ರಾಪ್ತ ಬಾಲಕ ಬೈಕ್‌ ಚಲಾಯಿಸಿದ್ದಕ್ಕೆ ಬಿತ್ತು 20 ಸಾವಿರ ರೂ. ದಂಡ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]