ಶಿವಮೊಗ್ಗ: ಸ್ನೇಹಿತನ ಮೇಲಿನ ದ್ವೇಷಕ್ಕೆ ಆತನ ಮಗನನ್ನು ಅಪಹರಿಸಿ, ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ವ್ಯಕ್ತಿಗೆ ಶಿವಮೊಗ್ಗ (Shivamogga) ನ್ಯಾಯಾಲಯ (Court) ಜೀವಾವಧಿ ಶಿಕ್ಷೆ (Life Imprisonment) ಮತ್ತು 3.25 ಲಕ್ಷ ರೂ. ದಂಡ (Penalty) ವಿಧಿಸಿದೆ.
ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಚುರ್ಚಿಗುಂಡಿ ಗ್ರಾಮದ ಎನ್‌ಎಂ ಬಸವರಾಜಪ್ಪ (40) ಶಿಕ್ಷೆಗೆ ಒಳಗಾದ ಅಪರಾಧಿ. ಶಿವಮೊಗ್ಗದ ಆಲ್ಕೊಳ ನಿವಾಸಿ ನಿಂಗರಾಜು ಮತ್ತು ಬಸವರಾಜಪ್ಪ ಮೊದಲಿನಿಂದ ಪರಿಚಿತರು. ನಿಂಗರಾಜು ಮೇಲಿನ ಹಳೇ ದ್ವೇಷಕ್ಕೆ (Feud) ಆತನ ಮಗ ಪ್ರೇಮ್ ಕುಮಾರ್‌ನನ್ನು (8) ಬಸವರಾಜಪ್ಪ ಅಪಹರಣ (Kidnap) ಮಾಡಿದ್ದ. 2017ರ ಮಾರ್ಚ್ 2 ರಂದು ಆಳ್ಕೊಳ ಸರ್ಕಲ್‌ನಿಂದ ಅಪಹರಣ ಮಾಡಿ, ಚುರ್ಚಿಗುಂಡಿ ಹತ್ತಿರ ಕುಮದ್ವತಿ ನದಿ ಬಳಿ ಕರೆದೊಯ್ದು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ನ್ಯಾಯಾಂಗ ಬಂಧನ
ತಿರುವನಂತನಪುರಂ: ಕೇರಳದ (Kerala) ಜನಪ್ರಿಯ ಲುಲು ಮಾಲ್‍ನಲ್ಲಿ ಮಹಿಳೆಯಂತೆ ಬುರ್ಖಾ ಧರಿಸಿ ಮಹಿಳೆಯರ ವಾಶ್‍ರೂಮ್‍ಗೆ ತೆರಳಿ ಕ್ಯಾಮೆರಾ ಇರಿಸಿದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಆರೋಪಿ ತನ್ನ ಫೋನ್‍ನ್ನು ಸಣ್ಣ ರಟ್ಟಿನ ಬಾಕ್ಸ್‌ನಲ್ಲಿ ಇರಿಸಿದ್ದ. ದೃಶ್ಯಗಳನ್ನು ರೆಕಾರ್ಡ್ ಮಾಡಲು ಕ್ಯಾಮೆರಾ ಬಳಿ ರಂಧ್ರ ಮಾಡಿ ಅದನ್ನು ವಾಶ್ ರೂಂನ ಬಾಗಿಲಿಗೆ ಅಂಟಿಸಿದ್ದ. ಬಳಿಕ ಆತ ಬಾಗಿಲಿನ ಮುಂದೆ ನಿಂತಿದ್ದ. ಆತನ ಅನುಮಾನಾಸ್ಪದ ವರ್ತನೆಯ ಮೇಲೆ ಮಾಲ್‍ನ ಭದ್ರತಾ ಸಿಬ್ಬಂದಿ ವಿಚಾರಿಸಿದ್ದಾರೆ. ಬಳಿಕ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಯಾಕ್ರಮೆಂಟೊ: ನ್ಯಾಯಾಧೀಶರೊಬ್ಬರು (Judge )ತನ್ನ ಹೆಂಡತಿಯನ್ನು ಗುಂಡು ಹಾರಿಸಿ ಕೊಂದ ಘಟನೆ ಕ್ಯಾಲಿಫೋರ್ನಿಯಾದಲ್ಲಿ (California) ನಡೆದಿದೆ. ಕೊಂದ ಬಳಿಕ ತನ್ನ ಸಹದ್ಯೋಗಿಯೊಬ್ಬರಿಗೆ `ನಾನು ನಾಳೆ ಕೋರ್ಟ್‍ಗೆ ಬರುವುದಿಲ್ಲ, ಕಸ್ಟಡಿಯಲ್ಲಿರುತ್ತೇನೆ’ ಎಂದು ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಧೀಶ ಜೆಫ್ರಿ ಫರ್ಗುಸನ್ (72) ಎಂಬಾತ ಪತ್ನಿಯನ್ನು ಕೊಲೆಗೈದ ಆರೋಪಿ. ಆತನ ಮನೆಯಲ್ಲಿ ಪರವಾನಿಗೆ ಹೊಂದಿದ್ದ ಸುಮಾರು 47 ಬಂದೂಕುಗಳು ಮತ್ತು 26,000 ಸಜೀವ ಮದ್ದುಗುಂಡುಗಳು ಪತ್ತೆಯಾಗಿವೆ. ಪೊಲೀಸರು ತೆರಳಿದ್ದಾಗ ಎದೆಗೆ ಗುಂಡೇಟು ಬಿದ್ದು ಆತನ ಪತ್ನಿ ಮೃತಪಟ್ಟಿದ್ದಳು. ಈ ವೇಳೆ ಆತ ವಿಪರೀತವಾಗಿ ಕುಡಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ
ಆ.3 ರಂದು ಫರ್ಗುಸನ್ ಮತ್ತು ಅವರ ಪತ್ನಿ ಶೆರಿಲ್ ಅನಾಹೈಮ್ ನಗರದ ರೆಸ್ಟೋರೆಂಟ್‍ನಲ್ಲಿ ಜಗಳ ಪ್ರಾರಂಭಿಸಿದ್ದರು. ಬಳಿಕ ಮನೆಗೆ ತೆರಳಿದ್ದ ಅವರು ಗುಂಡು ಹಾರಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿ ತನ್ನ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಅಂತ ಹೇಳಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಲಾಸ್ ಏಂಜಲೀಸ್‍ನ (Los Angeles) ನ್ಯಾಯಾಲಯವು (Court) ವಿಚಾರಣೆ ನಡೆಸಿದ್ದು, ಆರೋಪಿ ಕೊಲೆ ಮಾಡಿರುವುದನ್ನು ನಿರಾಕರಿಸಿದ್ದಾನೆ. ಆತನ ವಕೀಲ ಇದು ಆಕಸ್ಮಿಕ ಘಟನೆ. ಉದ್ದೇಶಿತ ಕೊಲೆ ಅಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಿಚ್ಚ ಸುದೀಪ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ನಿರ್ಮಾಪಕರಾದ ಎನ್.ಎಂ. ಸುರೇಶ್ (N.M. Suresh) ಮತ್ತು ಎಂ.ಎನ್. ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಮೊನ್ನೆಯಷ್ಟೇ ನಟ ಸುದೀಪ್ ಖುದ್ದು ಕೋರ್ಟಿಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.
ಸುದೀಪ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ 13ನೇ ಎಸಿಎಂಎಂ ಕೋರ್ಟ್ ಆರೋಪಿಗಳ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವುದರ ಜೊತೆಗೆ ಆಗಸ್ಟ್ 26ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ (Summons) ಜಾರಿ ಮಾಡಿದೆ.
ಈವರೆಗೂ ಆಗಿದ್ದೇನು?
ನಿರ್ಮಾಪಕ ಕುಮಾರ್ ಮತ್ತು ನಟ ಸುದೀಪ್ ನಡುವೆ ಜಟಾಪಟಿ ಮತ್ತೊಂದು ಹಂತ ತಲುಪಿದೆ. ಮೊನ್ನೆಯಷ್ಟೇ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು. ಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ 13ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ತೀರ್ಪು ಕಾಯ್ದಿರಿಸಿದ್ದರು. ನಿನ್ನೆಯಷ್ಟೇ ತೀರ್ಪು ಪ್ರಕಟವಾಗಿದ್ದು, ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರವಾಗಿದೆ. ಜೊತೆಗೆ ನಿರ್ಮಾಪಕರಾದ ಎಂ.ಎನ್.ಕುಮಾರ್ ಹಾಗೂ ಸುರೇಶ್‌ಗೆ ಸಮನ್ಸ್ ಜಾರಿಯಾಗಿದೆ.
ನಿರ್ಮಾಪಕ ಎಂ.ಎನ್. ಕುಮಾರ್ (M.n Kumar) ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ನಟ ಸುದೀಪ್ (Sudeep) ತಮ್ಮ ಹೇಳಿಕೆಯನ್ನು ನಿನ್ನೆ ದಾಖಲಿಸಿದ್ದರು. ಹಲವು ಫೋಟೋಗಳೊಂದಿಗೆ ಕೋರ್ಟ್ ಮುಂದೆ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.
13ನೇ ಎಸಿಎಂಎಂ ಕೋರ್ಟ್ ಮುಂದೆ ಗುರುವಾರ ಹಾಜರಾದ ನಟ ಸುದೀಪ್, ತಾವು ಹೂಡಿದ್ದ ಮಾನನಷ್ಟ ಮೊಕದ್ದಮೆ ಬಗ್ಗೆ ಹೇಳಿಕೆ ದಾಖಲಿಸಿದ್ದರು. ನ್ಯಾ. ವೆಂಕಣ್ಣ ಬಸಪ್ಪ ಹೊಸಮನಿ ಎದುರು ಹೇಳಿಕೆ ದಾಖಲಿಸಿದ ನಟ, ಪ್ರಕರಣ ಸಂಬಂಧ ರಾಜೀ ಆಗುವ ಪ್ರಮೇಯ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಸುದೀಪ್ (Sudeep) ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನ್ಯಾಯಾಧೀಶರು, ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಕ್ಷಮಿಸುತ್ತೀರಾ? ರಾಜೀ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್‌ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ ಎನ್ನುವ ಮೂಲಕ ತಾವು ರಾಜೀ ಸಂಧಾನಕ್ಕೆ ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.
ಎಂ.ಎನ್.ಕುಮಾರ್ (M.n Kumar) ಹೇಳಿಕೆಯನ್ನು ಎಂ.ಎನ್.ಸುರೇಶ್ ಬೆಂಬಲಿಸಿದ್ದಾರೆ. ಇವರ ಸುದ್ದಿಗೋಷ್ಠಿಯಿಂದ ಮಾನಹಾನಿಯಾಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂ.ಎನ್.ಕುಮಾರ್ ಮಾಡಿದ ಆರೋಪಗಳೆಲ್ಲ ಸುಳ್ಳು. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವಿನ ಆರೋಪವೂ ಸುಳ್ಳು. ಮನೆ ದುರಸ್ತಿಗೆ ಹಣ ನೀಡಿದ್ದಾಗಿ ಮಾಡಿದ ಆರೋಪ ಸುಳ್ಳು ಎಂದು ಪ್ರಾಮಾಣಿಕ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಸುದೀಪ್ ದಾಖಲಿಸಿದ್ದರು.
ವಕೀಲ ಅಜಯ್ ಕಡಕೋಳ್ ಅವರೊಡನೆ ನಟ ಸುದೀಪ್ ಕೋರ್ಟ್‌ಗೆ ಹಾಜರಾಗಿದ್ದರು. ಸುದೀಪ್‌ಗೆ ಆಪ್ತ ಚಂದ್ರಚೂಡ್, ನಿರ್ಮಾಪಕ ಜಾಕ್ ಮಂಜು (Jack Manju) ಸಾಥ್ ನೀಡಿದರು. ಸುದೀಪ್ ಪರ ವಕೀಲ ಅಜಯ್ ಮಾತನಾಡಿ, ಸೆಕ್ಷನ್ 300 ಅಡಿಯಲ್ಲಿ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ವಿರುದ್ಧ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ಮಾತನಾಡಿರೋ ದಾಖಲೆಗಳು ಹಾಗೂ ಪೋಟೋಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ವಶದಲ್ಲಿದ್ದ ತಮಿಳುನಾಡು (Tamil Nadu) ಸಚಿವ ವಿ ಸೆಂಥಿಲ್ ಬಾಲಾಜಿ (V.Senthil Balaji) ಅವರನ್ನು ಆ.25 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ (Court) ಆದೇಶ ಹೊರಡಿಸಿದೆ.
ಸೆಂಥಿಲ್ ಬಾಲಾಜಿ ಅವರ ಕಸ್ಟಡಿ ಅವಧಿ ಮುಗಿದ ಬಳಿಕ ಜಾರಿ ನಿರ್ದೇಶನಾಲಯ (Enforcement Directorate) ಇಲ್ಲಿನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್, ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶ ನೀಡಿದೆ. ಇದನ್ನೂ ಓದಿ: ಎಷ್ಟೇ ಕಷ್ಟವಾದರೂ ಸಂವಿಧಾನ ಉಳಿಸಿಕೊಳ್ಳುವ ಅಗತ್ಯವಿದೆ: ಸಿದ್ದರಾಮಯ್ಯ
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸೆಂಥಿಲ್ ಬಾಲಾಜಿಯನ್ನು 5 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಳ್ಳಲು ನ್ಯಾಯಾಧೀಶರು ಆಗಸ್ಟ್ 7 ರಂದು ಇ.ಡಿಗೆ ಅನುಮತಿ ನೀಡಿದ್ದರು. ಕಸ್ಟಡಿ ಅವಧಿ ಶನಿವಾರ ಅಂತ್ಯಗೊಂಡಿದ್ದರಿಂದ ಇ.ಡಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು.
ನಿರ್ಮಾಪಕ ಕುಮಾರ್ ಮತ್ತು ನಟ ಸುದೀಪ್ ನಡುವೆ ಜಟಾಪಟಿ ಮತ್ತೊಂದು ಹಂತ ತಲುಪಿದೆ. ನಿನ್ನೆಯಷ್ಟೇ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು. ಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ 13ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ಇವತ್ತಿಗೆ ತೀರ್ಪು ಕಾಯ್ದಿರಿಸಿದ್ದರು. ಇದೀಗ ತೀರ್ಪು ಪ್ರಕಟವಾಗಿದ್ದು, ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರವಾಗಿದೆ. ಜೊತೆಗೆ ನಿರ್ಮಾಪಕರಾದ ಎಂ.ಎನ್.ಕುಮಾರ್ ಹಾಗೂ ಸುರೇಶ್‌ಗೆ ಸಮನ್ಸ್ ಜಾರಿಯಾಗಿದೆ.
ನಿರ್ಮಾಪಕ ಎಂ.ಎನ್. ಕುಮಾರ್ (M.n Kumar) ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ನಟ ಸುದೀಪ್ (Sudeep) ತಮ್ಮ ಹೇಳಿಕೆಯನ್ನು ನಿನ್ನೆ ದಾಖಲಿಸಿದ್ದರು. ಹಲವು ಫೋಟೋಗಳೊಂದಿಗೆ ಕೋರ್ಟ್ ಮುಂದೆ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.
13ನೇ ಎಸಿಎಂಎಂ ಕೋರ್ಟ್ ಮುಂದೆ ಗುರುವಾರ ಹಾಜರಾದ ನಟ ಸುದೀಪ್, ತಾವು ಹೂಡಿದ್ದ ಮಾನನಷ್ಟ ಮೊಕದ್ದಮೆ ಬಗ್ಗೆ ಹೇಳಿಕೆ ದಾಖಲಿಸಿದ್ದರು. ನ್ಯಾ. ವೆಂಕಣ್ಣ ಬಸಪ್ಪ ಹೊಸಮನಿ ಎದುರು ಹೇಳಿಕೆ ದಾಖಲಿಸಿದ ನಟ, ಪ್ರಕರಣ ಸಂಬಂಧ ರಾಜೀ ಆಗುವ ಪ್ರಮೇಯ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಸುದೀಪ್ (Sudeep) ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನ್ಯಾಯಾಧೀಶರು, ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಕ್ಷಮಿಸುತ್ತೀರಾ? ರಾಜೀ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್‌ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ ಎನ್ನುವ ಮೂಲಕ ತಾವು ರಾಜೀ ಸಂಧಾನಕ್ಕೆ ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.
ಎಂ.ಎನ್.ಕುಮಾರ್ (M.n Kumar) ಹೇಳಿಕೆಯನ್ನು ಎಂ.ಎನ್.ಸುರೇಶ್ ಬೆಂಬಲಿಸಿದ್ದಾರೆ. ಇವರ ಸುದ್ದಿಗೋಷ್ಠಿಯಿಂದ ಮಾನಹಾನಿಯಾಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂ.ಎನ್.ಕುಮಾರ್ ಮಾಡಿದ ಆರೋಪಗಳೆಲ್ಲ ಸುಳ್ಳು. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವಿನ ಆರೋಪವೂ ಸುಳ್ಳು. ಮನೆ ದುರಸ್ತಿಗೆ ಹಣ ನೀಡಿದ್ದಾಗಿ ಮಾಡಿದ ಆರೋಪ ಸುಳ್ಳು ಎಂದು ಪ್ರಾಮಾಣಿಕ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಸುದೀಪ್ ದಾಖಲಿಸಿದ್ದರು.
ವಕೀಲ ಅಜಯ್ ಕಡಕೋಳ್ ಅವರೊಡನೆ ನಟ ಸುದೀಪ್ ಕೋರ್ಟ್‌ಗೆ ಹಾಜರಾಗಿದ್ದರು. ಸುದೀಪ್‌ಗೆ ಆಪ್ತ ಚಂದ್ರಚೂಡ್, ನಿರ್ಮಾಪಕ ಜಾಕ್ ಮಂಜು (Jack Manju) ಸಾಥ್ ನೀಡಿದರು. ಸುದೀಪ್ ಪರ ವಕೀಲ ಅಜಯ್ ಮಾತನಾಡಿ, ಸೆಕ್ಷನ್ 300 ಅಡಿಯಲ್ಲಿ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ವಿರುದ್ಧ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ಮಾತನಾಡಿರೋ ದಾಖಲೆಗಳು ಹಾಗೂ ಪೋಟೋಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ನಟನೆಯ ‘ಮತ್ತೆ ಮದುವೆ’ ಚಿತ್ರದ ಬಗ್ಗೆ ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲು ಏರಿದ್ದರು. ಆ ಸಿನಿಮಾದಲ್ಲಿ ತಮ್ಮ ಮಾನಹಾನಿ ಮಾಡುವಂತಹ ಅಂಶಗಳು ಇವೆ. ಹಾಗಾಗಿ ಓಟಿಟಿಯಲ್ಲಿರುವ ಚಿತ್ರವನ್ನು ತೆಗೆದು ಹಾಕಬೇಕು ಎಂದು ರಮ್ಯಾ ಅರ್ಜಿ ಸಲ್ಲಿಸಿದ್ದರು. ಈ ವಿಷಯದಲ್ಲಿ ನರೇಶ್ ಪರ ತೀರ್ಪು ಬಂದಿತ್ತು. ಅಲ್ಲದೇ, ರಮ್ಯಾ ಅವರು ನಮ್ಮ ಮನೆಗೆ ಬಂದು ತೊಂದರೆ ನೀಡುತ್ತಿದ್ದಾರೆ. ಅವರು ಮನೆಗೆ ಬಾರದಂತೆ ನಿರ್ದೇಶನ ನೀಡಬೇಕು ಎಂದು ನರೇಶ್ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಇದರಲ್ಲೂ ನರೇಶ್ ಗೆ ಜಯ ಸಿಕ್ಕಿತ್ತು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ನರೇಶ್, ‘ನ್ಯಾಯಕ್ಕೆ ಜಯ ಸಿಕ್ಕಿದೆ. ರಮ್ಯಾ ಜೊತೆಗಿನ ಡಿವೋರ್ಸ್ ಗೆ ಈ ತೀರ್ಪು ಸಹಾಯಕ್ಕೆ ಬರುತ್ತದೆ. ಆದಷ್ಟು ಬೇಗ ಆಕೆಯಿಂದ ದೂರವಾಗಿ ಪವಿತ್ರಾ ಅವರ ಜೊತೆ ನೆಮ್ಮದಿಯಾಗಿ ಬದುಕುವೆ. ರಮ್ಯಾ ಸಾಕಷ್ಟು ಸಾಲ ಮಾಡಿಕೊಂಡಿದ್ದರಿಂದ ಸಾಲಗಾರರು ಮನೆಗೆ ಬರುತ್ತಿದ್ದರು. ಹಾಗಾಗಿ ನಮ್ಮ ಕುಟುಂಬ ಕೋರ್ಟಿಗೆ ಅರ್ಜಿ ಸಲ್ಲಿಸಬೇಕಾಯಿತು ಎಂದಿದ್ದಾರೆ.
ಏನಿದು ಪ್ರಕರಣ?
ತಮ್ಮ ಜೀವನದ ಕಥೆಯನ್ನೇ ಪತಿ ನರೇಶ್ (Naresh) ಮತ್ತು ನಟಿ ಪವಿತ್ರಾ ಲೋಕೇಶ್ (Pavitra Lokesh) ಸಿನಿಮಾ ಮಾಡಿದ್ದಾರೆ. ಅದು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅದನ್ನು ತಡೆಯಬೇಕು ಎಂದು ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲು ಏರಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಈ ಕುರಿತಂತೆ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡಿದೆ. ಅರ್ಜಿಯಲ್ಲಿ ಯಾವುದೇ ಸಕರಾರಣವಿಲ್ಲದ ಕಾರಣದಿಂದಾಗಿ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ಈ ಹಿಂದೆ ಸಿನಿಮಾ (Matte Maduve ) ರಿಲೀಸ್ ವೇಳೆಯೂ ರಮ್ಯಾ ಇದೇ ರೀತಿಯಲ್ಲಿ ತಡೆಯಾಜ್ಞೆ ತರುವ ಪ್ರಯತ್ನ ಮಾಡಿದ್ದರು. ಸಿನಿಮಾದ ಕಥೆಯು ತಮ್ಮ ಜೀವನದ ಅನೇಕ ಘಟನೆಗಳನ್ನು ಹೋಲುತ್ತದೆ. ಹಾಗಾಗಿ ಚಿತ್ರವು ರಿಲೀಸ್ ಆಗಬಾರದು ಎಂದು ಕೋರ್ಟ್ ಮೆಟ್ಟಿಲು ಏರಿದ್ದರು. ಆಗಲೂ ಕೂಡ ರಮ್ಯಾಗೆ (Ramya Raghupathi) ಹಿನ್ನೆಡೆಯಾಗಿತ್ತು. ಸಿನಿಮಾದಲ್ಲಿ ಕಾಲ್ಪನಿಕ ಕಥೆಯಂದು ಹಾಕಲಾಗಿದೆ. ಸೆನ್ಸಾರ್ ಮಂಡಳಿ ಕೂಡ ಅದಕ್ಕೆ ಒಪ್ಪಿ ಪತ್ರ ಕೊಟ್ಟಿದೆ ಎಂದು ಕೋರ್ಟ್ (Court) ಅಭಿಪ್ರಾಯ ಪಟ್ಟಿತ್ತು.
ಜೂನ್ 23 ರಿಂದ ಮತ್ತೆ ಮದುವೆ ಸಿನಿಮಾ ಪ್ರತಿಷ್ಠಿತ ಒಟಿಟಿ (OTT) ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್ ಆಗುತ್ತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು.
ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ
ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.
ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಅಮೇಜಾನ್ ನಲ್ಲಿ ನೋಡಬಹುದು.
ಚಾಮರಾಜನಗರ: ಕೋರ್ಟ್‍ಗೆ (Court) ಕರೆದೊಯ್ಯುವಾಗ ವಿಚಾರಣಾಧೀನ ಕೈದಿಯೊಬ್ಬ ಪೊಲೀಸರಿಂದ (Police) ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ತಮಿಳುನಾಡಿನ ಹಾಸನೂರು ಬಳಿ ನಡೆದಿದೆ.
ಆರೋಪಿಯನ್ನು ಚಾಮರಾಜನಗರ (Chamarajanagar) ಉಪಕಾರಾಗೃಹದಿಂದ ತಮಿಳುನಾಡಿನ (Tamil Nadu) ಸತ್ಯಮಂಗಲಂ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ. ಮೇಗಲಹುಂಡಿಯ ಸುರೇಶ್ (28) ಎಂಬಾತ ಪರಾರಿಯಾದ ವ್ಯಕ್ತಿ. ಹಾಸನೂರು ಬಳಿ ಟೀ ಕುಡಿಯುವ ವೇಳೆ ಆರೋಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಟ್ಟುನಿಟ್ಟಿನ ಕ್ರಮ; ಅಪಘಾತಗಳ ಸಂಖ್ಯೆ ಇಳಿಕೆ
ಕಳ್ಳತನ ಪ್ರಕರಣಗಳಲ್ಲಿ ಬಂಧಿಯಾಗಿದ್ದ ಸುರೇಶ್ ಚಾಮರಾಜನಗರ ಜೈಲಿನಲ್ಲಿದ್ದ. ಆತನನ್ನು ತಮಿಳುನಾಡಿನ ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ಕೋರ್ಟ್‍ಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ವಿಚಾರಣಾಧೀನ ಕೈದಿ ಸುರೇಶ್ ತಪ್ಪಿಸಿಕೊಂಡಿದ್ದಾನೆ. ಇದೀಗ ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಟೊಮೆಟೋ ಬಳಕೆಯನ್ನೇ ನಿಲ್ಲಿಸಿ- ಪಂಜಾಬ್ ರಾಜ್ಯಪಾಲ ಕರೆ
ತಮ್ಮ ಜೀವನದ ಕಥೆಯನ್ನೇ ಪತಿ ನರೇಶ್ (Naresh) ಮತ್ತು ನಟಿ ಪವಿತ್ರಾ ಲೋಕೇಶ್ (Pavitra Lokesh) ಸಿನಿಮಾ ಮಾಡಿದ್ದಾರೆ. ಅದು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅದನ್ನು ತಡೆಯಬೇಕು ಎಂದು ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲು ಏರಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಈ ಕುರಿತಂತೆ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡಿದೆ. ಅರ್ಜಿಯಲ್ಲಿ ಯಾವುದೇ ಸಕರಾರಣವಿಲ್ಲದ ಕಾರಣದಿಂದಾಗಿ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ಈ ಹಿಂದೆ ಸಿನಿಮಾ (Matte Maduve ) ರಿಲೀಸ್ ವೇಳೆಯೂ ರಮ್ಯಾ ಇದೇ ರೀತಿಯಲ್ಲಿ ತಡೆಯಾಜ್ಞೆ ತರುವ ಪ್ರಯತ್ನ ಮಾಡಿದ್ದರು. ಸಿನಿಮಾದ ಕಥೆಯು ತಮ್ಮ ಜೀವನದ ಅನೇಕ ಘಟನೆಗಳನ್ನು ಹೋಲುತ್ತದೆ. ಹಾಗಾಗಿ ಚಿತ್ರವು ರಿಲೀಸ್ ಆಗಬಾರದು ಎಂದು ಕೋರ್ಟ್ ಮೆಟ್ಟಿಲು ಏರಿದ್ದರು. ಆಗಲೂ ಕೂಡ ರಮ್ಯಾಗೆ (Ramya Raghupathi) ಹಿನ್ನೆಡೆಯಾಗಿತ್ತು. ಸಿನಿಮಾದಲ್ಲಿ ಕಾಲ್ಪನಿಕ ಕಥೆಯಂದು ಹಾಕಲಾಗಿದೆ. ಸೆನ್ಸಾರ್ ಮಂಡಳಿ ಕೂಡ ಅದಕ್ಕೆ ಒಪ್ಪಿ ಪತ್ರ ಕೊಟ್ಟಿದೆ ಎಂದು ಕೋರ್ಟ್ (Court) ಅಭಿಪ್ರಾಯ ಪಟ್ಟಿತ್ತು.
ಜೂನ್ 23 ರಿಂದ ಮತ್ತೆ ಮದುವೆ ಸಿನಿಮಾ ಪ್ರತಿಷ್ಠಿತ ಒಟಿಟಿ (OTT) ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್ ಆಗುತ್ತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು. ಇದನ್ನೂ ಓದಿ:ರಾಜೀವ್ ಅಭಿನಯದ ‘ಉಸಿರೇ ಉಸಿರೇ ಚಿತ್ರದ ಫಸ್ಟ್ ಸಾಂಗ್ ರಿಲೀಸ್
ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.
ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಅಮೇಜಾನ್ ನಲ್ಲಿ ನೋಡಬಹುದು.
ಬಹುಕೋಟಿ ವಂಚನೆ ಆರೋಪದಲ್ಲಿ ಜೈಲುಪಾಲಾಗಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜೊತೆಗಿನ ಸಂಬಂಧವನ್ನು ಮತ್ತೆ ನಿರಾಕರಿಸಿದ್ದಾರೆ ಬಾಲಿವುಡ್ ನಟಿ ನೋರಾ ಫತೇಹಿ. ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಸುಖಾಸುಮ್ಮನೆ ಎಳೆತಂದಿರುವ ಮತ್ತೋರ್ವ ನಟಿ ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಅವರು ಹೂಡಿದ್ದಾರೆ.
ಈ ವಿಚಾರವಾಗಿ ದೆಹಲಿಯ ಪಟಿಯಾಲ ಹೌಸ್ ಕೋರ್ಟಿಗೆ ಬಂದಿದ್ದ ನೋರಾ, ‘ಸುಕೇಶ್ ನನಗೆ ಪರಿಚಯವೇ ಇಲ್ಲ. ಈ ಪ್ರಕರಣವನ್ನು ಬೇರೆ ಕಡೆ ತಿರುಗಿಸುವ ಉದ್ದೇಶದಿಂದ ನನ್ನ ಹೆಸರನ್ನು ತಳುಕು ಹಾಕಿದ್ದಾರೆ. ಇದರಿಂದಾಗಿ ನಾನು ಮಾನಸಿಕವಾಗಿ ನೊಂದಿದ್ದೇನೆ. ಸಿನಿಮಾ ಅವಕಾಶಗಳನ್ನೂ ಕಳೆದುಕೊಂಡಿದ್ದೇನೆ. ನನ್ನ ಗೌರವವನ್ನು ಹಾಳು ಮಾಡಿದ ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ ಎಂದರು.
ಸುಕೇಶ್ ಬರೆದ ಲವ್ ಲೆಟರ್
ಈ ಹಿಂದೆ ತಮ್ಮ ಇಬ್ಬರು ಗರ್ಲ್ ಫ್ರೆಂಡ್ ಬಗ್ಗೆ ಪತ್ರವೊಂದನ್ನು ಬರೆದಿದ್ದ ಸುಕೇಶ್ . ಆ ಪತ್ರವನ್ನು ಮಾಧ್ಯಮ ಪ್ರಕಟಣೆಗೆ ನೀಡಿದ್ದ. ಸುಕೇಶ್ ಬರೆದ ಪತ್ರದಲ್ಲಿ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಮತ್ತು ನೋರಾ (Nora) ಬಗೆಗಿನ ಸಂಬಂಧವನ್ನು ಹೇಳಿಕೊಂಡಿದ್ದ. ಜಾಕ್ವೆಲಿನ್ ಕಂಡರೆ ನೋರಾಗೆ ಹೊಟ್ಟೆಉರಿ. ಹಾಗಾಗಿ ಜಾಕ್ವೆಲಿನ್ ಬಗ್ಗೆ ಸಲ್ಲದ ಆರೋಪಗಳನ್ನು ಆಕೆ ಮಾಡುತ್ತಿದ್ದಾಳೆ ಎಂದು ಹೇಳಿದ್ದ.
ಸುಕೇಶ್ ವಿರುದ್ಧ ಕೋರ್ಟ್ (Court) ಮೆಟ್ಟಿಲು ಏರಿದ್ದ ಜಾಕ್ವೆಲಿನ್, ಬಾಯ್ ಫ್ರೆಂಡ್ ಸುಕೇಶ್ ಬಗ್ಗೆ ಒಂದಷ್ಟು ಆರೋಪ ಮಾಡಿದ್ದಳು. ತನ್ನ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಹಾಳಾಗಿದ್ದು ಸುಕೇಶ್ ನಿಂದ. ಅವನು ಮಹಾ ಮೋಸಗಾರ ಎಂದೂ ಮಾತನಾಡಿದ್ದರು. ಈತನ ಬಗ್ಗೆ ಎಲ್ಲವೂ ಗೊತ್ತಿದ್ದರೂ, ನೂರಾ ಅದೆಲ್ಲವನ್ನೂ ಬಚ್ಚಿಟ್ಟಿದ್ದಳು ಎಂದು ಆಕೆಯ ಮೇಲೂ ಹರಿಹಾಯ್ದಿದ್ದಳು.
ಜಾಕ್ವೆಲಿನ್ ಮಾತನಾಡಿದ ಬೆನ್ನಲ್ಲೇ ಸುಕೇಶ್ ಪತ್ರವೊಂದನ್ನು ತಮ್ಮ ವಕೀಲರ ಮೂಲಕ ಬಿಡುಗಡೆ ಮಾಡಿಸಿದ್ದ. ‘ಜಾಕ್ವೆಲಿನ್ ಜೊತೆ ನನ್ನ ಸ್ನೇಹ ಮುರಿಯಬೇಕು ಎಂದು ಹಲವಾರು ಬಾರಿ ನೋರಾ ಪ್ರಯತ್ನಿಸಿದಳು. ಜಾಕ್ವೆಲಿನ್ ಜೊತೆ ನಾನು ಇರುವುದು ಆಕೆಗೆ ಇಷ್ಟವಿರಲಿಲ್ಲ. ಜಾಕ್ವೆಲಿನ್ ಜೊತೆ ಹೋಗಲು ನೋರಾ ಬಿಡುತ್ತಿರಲಿಲ್ಲ. ನಾನು ಕಾಲ್ ರಿಸೀವ್ ಮಾಡದೇ ಇದ್ದರೆ ಪದೇ ಪದೇ ಕಾಲ್ ಮಾಡುತ್ತಿದ್ದಳು. ಜಾಕ್ವೆಲಿನ್ ಜೊತೆಗಿನ ಸ್ನೇಹವನ್ನು ಮುರಿದುಕೋ ಎಂದು ಹೇಳುತ್ತಿದ್ದಳು’ ಎಂದು ಪತ್ರದಲ್ಲಿ ಸುಕೇಶ್ ಬರೆದಿದ್ದ.
ನೋರಾ ಏನೆಲ್ಲ ಇಷ್ಟ ಪಡುತ್ತಿದ್ದಳೋ ಅದೆಲ್ಲವನ್ನೂ ಕೊಟ್ಟಿರುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಿದ್ದ ಸುಕೇಶ್. ಬ್ಯಾಗ್, ಒಡವೆ ಇತ್ಯಾದಿ ಫೋಟೋಗಳನ್ನು ನೋರಾ ಕಳುಹಿಸುತ್ತಿದ್ದಳು. ಆಕೆ ಏನೆಲ್ಲ ಕೇಳುತ್ತಿದ್ದಳೋ ಅದೆಲ್ಲವನ್ನೂ ನಾನು ಕಳುಹಿಸಿದ್ದೇನೆ. ಎರಡು ಕೋಟಿ ರೂಪಾಯಿಗೂ ಅಧಿಕ ವಸ್ತುಗಳನ್ನು ನೋರಾಗೆ ಕೊಟ್ಟಿದ್ದೇನೆ ಎಂದು ಅವನು ಪತ್ರದಲ್ಲಿ ಬರೆದಿದ್ದ. ಈ ಪತ್ರ ಬರೆಯುವುದರ ಹಿಂದಿನ ಉದ್ದೇಶವನ್ನು ಸ್ಪಷ್ಟ ಪಡಿಸದೇ ಇದ್ದರೂ, ಪತ್ರವಂತೂ ಭಾರೀ ಸದ್ದು ಮಾಡಿತ್ತು.