Tag: court

  • ಆರೋಪಿ ಪ್ರವೀಣ್ ಚೌಗಲೆಗೆ 14 ದಿನ ಪೊಲೀಸ್ ಕಸ್ಟಡಿ

    ಆರೋಪಿ ಪ್ರವೀಣ್ ಚೌಗಲೆಗೆ 14 ದಿನ ಪೊಲೀಸ್ ಕಸ್ಟಡಿ

    ಉಡುಪಿ: ಜಿಲ್ಲೆಯ ನೇಜಾರು (Nejaru) ಸಮೀಪದ ತೃಪ್ತಿ ಲೇಔಟ್‌ನಲ್ಲಿ ಒಂದೇ ಕುಟುಂಬದ (Family) ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಪೊಲೀಸರು ಕೋರ್ಟ್‌ಗೆ (Court) ಹಾಜರುಪಡಿಸಿದ್ದಾರೆ. ಕೋರ್ಟ್ ಆರೋಪಿಯನ್ನು (Accused) 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ (Police Custody) ನೀಡಿದೆ.

    ಉಡುಪಿಯಲ್ಲಿ (Udupi) ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಯ ಒಂದು ಹಂತದ ವಿಚಾರಣೆ ಮುಗಿಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಉಡುಪಿಯ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಸಂಜೆ 5:15ಕ್ಕೆ ಸರಿಯಾಗಿ ಹಾಜರುಪಡಿಸಿದರು. ಕೋರ್ಟ್ ಆರೋಪಿಯ ಬಳಿ ಕೆಲ ಮಾಹಿತಿಗಳನ್ನ ಪಡೆದುಕೊಂಡಿದೆ. ಇದನ್ನೂ ಓದಿ:‌ ಕೆಇಎ ಪರೀಕ್ಷೆಯಲ್ಲಿ ಹಿಜಬ್ ಧರಿಸಲು ಅವಕಾಶ – ಸರ್ಕಾರದ ನಡೆಗೆ ಭಾರೀ ಆಕ್ರೋಶ

    ತನಿಖಾಧಿಕಾರಿಯಾಗಿರುವ ಮಲ್ಪೆ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಆರೋಪಿಯನ್ನು 14 ದಿನಗಳ ಕಾಲ ವಿಚಾರಣೆಯ ಉದ್ದೇಶದಿಂದ ಪೊಲೀಸ್ ಕಸ್ಟಡಿಗೆ ಕೇಳಿದ್ದಾರೆ. ಪೊಲೀಸ್ ಕಸ್ಟಡಿ ಮಂಜೂರು ಮಾಡಿದ್ದು, ನವೆಂಬರ್ 28ಕ್ಕೆ ಕೋರ್ಟಿಗೆ ಆರೋಪಿಯನ್ನು ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಗೌಪ್ಯ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು, ವಿಚಾರಣೆ ಮುಂದುವರೆಸಲಿದ್ದಾರೆ. ಇದನ್ನೂ ಓದಿ: ಸೋಮಶೇಖರ್ ನಮಗೆ ಬಹಳ ವಿಶೇಷ, ನಾವಿಬ್ರು ಸ್ನೇಹಿತರು: ಜಿ ಪರಮೇಶ್ವರ್

  • ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ – ಕಾಮಿಗೆ 20 ವರ್ಷ ಕಠಿಣ ಶಿಕ್ಷೆ, 1.25 ಲಕ್ಷ ರೂ. ದಂಡ

    ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ – ಕಾಮಿಗೆ 20 ವರ್ಷ ಕಠಿಣ ಶಿಕ್ಷೆ, 1.25 ಲಕ್ಷ ರೂ. ದಂಡ

    -ಮೃತ ಕುಟುಂಬಕ್ಕೆ ಸರ್ಕಾರದಿಂದ 17 ಲಕ್ಷ ಪರಿಹಾರ ನೀಡುವಂತೆ ಆದೇಶ

    ಶಿವಮೊಗ್ಗ: ಅಪ್ರಾಪ್ತ ಬಾಲಕಿ (Minor Girl) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 23 ವರ್ಷದ ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ, 1.25 ಲಕ್ಷ ರೂ. ದಂಡ (Penalty) ವಿಧಿಸಿ ಶಿವಮೊಗ್ಗ (Shivamogga) ನ್ಯಾಯಾಲಯ ತೀರ್ಪು ನೀಡಿದೆ. ದಂಡ ಕಟ್ಟಲು ವಿಫಲವಾದರೆ 6 ತಿಂಗಳು ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸುವಂತೆ ಹಾಗೂ ಮೃತ ಬಾಲಕಿ ಕುಟುಂಬಕ್ಕೆ ಸರ್ಕಾರದಿಂದ 17 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ (Court) ಆದೇಶಿಸಿದೆ.

    2020ರಲ್ಲಿ ತೀರ್ಥಹಳ್ಳಿ ತಾಲೂಕಿನ 23 ವರ್ಷದ ಯುವಕ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Sexual Assault) ಎಸಗಿದ್ದ. ಇದರಿಂದ ಮನನೊಂದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಳು. ಘಟನೆಯ ಬಳಿಕ ಬಾಲಕಿ ತಂದೆ ರಿಪ್ಪನ್ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ‘ಮೈ ಲಾರ್ಡ್’ ಹೇಳೋದು ಬಿಟ್ರೆ ನನ್ನ ಸಂಬಳದಲ್ಲಿ ಅರ್ಧ ಕೊಡ್ತೀನಿ: ಸುಪ್ರೀಂ ಜಡ್ಜ್

    ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, 1.25 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೇ ಮೃತ ಬಾಲಕಿ ಕುಟುಂಬಕ್ಕೆ ಸರ್ಕಾರದಿಂದ 17 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದೆ. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಕೊಡುಗೆ ಆಡಳಿತ ಪಕ್ಷಕ್ಕೆ ಹೆಚ್ಚು – ಸುಪ್ರೀಂಗೆ ಕೇಂದ್ರ ಹೇಳಿಕೆ

  • ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿ ಕೋರ್ಟ್‌ಗೆ ಶರಣು

    ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿ ಕೋರ್ಟ್‌ಗೆ ಶರಣು

    ಬೆಂಗಳೂರು: ಪ್ರತಿಷ್ಠಿತ ಮಾಲ್‌ವೊಂದರಲ್ಲಿ (Mall) ವ್ಯಕ್ತಿಯೋರ್ವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ವತ: ಕೋರ್ಟ್ (Court) ಮುಂದೆ ಸರೆಂಡರ್ (Surrender) ಆಗಿದ್ದಾನೆ.

    ಅಶ್ವಥ್ ನಾರಾಯಣ್ (60) ನ್ಯಾಯಾಲಯದ ಮುಂದೆ ಶರಣಾದ ಆರೋಪಿ. ಈತ ಬೆಂಗಳೂರಿನ (Bengaluru) ಮಾಲ್‌ವೊಂದರಲ್ಲಿ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದು, ಯಶವಂತ್ ಎಂಬವರು ಅದನ್ನು ವಿಡಿಯೋ ಮಾಡಿದ್ದರು. ವಿಡಿಯೋ ಆಧಾರದ ಮೇಲೆ ಪೊಲೀಸರು ಆರೋಪಿಯ ಗುರುತನ್ನು ಪತ್ತೆಹಚ್ಚಿದ್ದರು. ಐಪಿಸಿ ಸೆಕ್ಷನ್ 354 ಎ, 294, 509 ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದನ್ನೂ ಓದಿ: ಹಾಸನ ಕಾಲೇಜಿನ 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

    ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇಂದು ಆರೋಪಿ ಅಶ್ವಥ್ ನಾರಾಯಣ್ ಎಸಿಎಂಎಂ 2ರ ನ್ಯಾಯಾಧೀಶರ ಮುಂದೆ ಸರೆಂಡರ್ ಆಗಿದ್ದು, ನ್ಯಾಯಾಧೀಶರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ಹಿರಿಯ ವಕೀಲ ಕೆಎನ್ ಶಶಿಧರ್ ವಾದ ಮಂಡಿಸಿದರು. ಇದನ್ನೂ ಓದಿ: ನಡೆದುಕೊಂಡು ಹೋಗ್ತಿದ್ದ ಇಬ್ಬರ ಮೇಲೆ ಹರಿದ ಬೈಕ್- ಸವಾರ, ಪಾದಾಚಾರಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೃದ್ಧೆಯ ಮೇಲೆ ಅತ್ಯಾಚಾರ – ಅಪರಾಧಿಗೆ 10 ವರ್ಷ ಜೈಲು, 10 ಸಾವಿರ ದಂಡ

    ವೃದ್ಧೆಯ ಮೇಲೆ ಅತ್ಯಾಚಾರ – ಅಪರಾಧಿಗೆ 10 ವರ್ಷ ಜೈಲು, 10 ಸಾವಿರ ದಂಡ

    ಹಾಸನ: ವೃದ್ಧೆಯ (Old Woman) ಮೇಲೆ ಅತ್ಯಾಚಾರ (Rape) ಎಸಗಿದ್ದ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ (Rigorous Imprisonment) ಹಾಗೂ 10 ಸಾವಿರ ರೂ. ದಂಡ (Penalty) ವಿಧಿಸಿ ಹಾಸನದ (Hassan) ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ತೀರ್ಪು ನೀಡಿದೆ.

    ಹಾಸನ ತಾಲೂಕು ಕಟ್ಟಾಯ ಹೋಬಳಿ ಬನವಾಸೆ ಗ್ರಾಮದ ರಮೇಶ್ ಶಿಕ್ಷೆಗೆ ಒಳಗಾದ ಅಪರಾಧಿ. 2020ರ ಜುಲೈ 29ರಂದು ರಾತ್ರಿ ಅಪರಾಧಿ ರಮೇಶ್ 69 ವರ್ಷದ ವೃದ್ಧೆಯ ಮನೆಯ ಛಾವಣಿಯ ಕಿಟಕಿಯನ್ನು ಕಲ್ಲಿನಿಂದ ಒಡೆದು ಹಾಕಿ ಮನೆಯೊಳಗೆ ನುಗ್ಗಿ, ವೃದ್ಧೆಯ ಕುತ್ತಿಗೆಯನ್ನು ಹಿಸುಕಿ, ದೇಹದ ನಾನಾ ಭಾಗಗಳಿಗೆ ಕಚ್ಚಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಬಗ್ಗೆ ಹಾಸನ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: 25 ವರ್ಷಗಳ ಹಿಂದೆ ವ್ಯಕ್ತಿ ಸಾವು- ನಕಲಿ ವ್ಯಕ್ತಿ, ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ

    ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ಐಪಿಸಿ ಕಲಂ 448, 323, 341, 376, 506 ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹಾಸನದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎ.ಹಿದಾಯತ್ ಉಲ್ಲಾ ಷರೀಫ್ ಅವರು ಪ್ರಕರಣದ ಎಲ್ಲಾ ಸಾಕ್ಷಿದಾರರು ಪೂರಕವಾಗಿ ಸಾಕ್ಷ್ಯ ನುಡಿದಿರುವ ಕಾರಣ ಆರೋಪಿಯ ಮೇಲಿರುವ ದೋಷಾರೋಪಣೆ ಸಾಬೀತಾಗಿದೆ ಎಂದು ತೀರ್ಮಾನಿಸಿ, ರಮೇಶ್‌ಗೆ ಭಾರತೀಯ ದಂಡ ಸಂಹಿತೆ ಕಲಂ 376, 506, 323ರ ಅಡಿ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ಕೋರಮಂಗಲ ಕೆಫೆಯಲ್ಲಿ ಅಗ್ನಿ ಅವಘಡ – 54 ಪಬ್‌ಗಳಿಗೆ ಬಿಬಿಎಂಪಿಯಿಂದ ಬೀಗ

    ಸಂತ್ರಸ್ತೆಗೆ 4 ಲಕ್ಷ ರೂ. ಮೊತ್ತವನ್ನು ಡಿಎಲ್‌ಎಸ್‌ಎಯಿಂದ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್ ನಾಗೇಂದ್ರ ಅವರು ವಾದ ಮಂಡಿಸಿದ್ದರು. ಇದನ್ನೂ ಓದಿ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ- ಕೊಲೆ ಶಂಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೀನಾದಿಂದ ಅಕ್ರಮ ಹೂಡಿಕೆ – ನ್ಯೂಸ್‌ಕ್ಲಿಕ್ ಸಂಪಾದಕ, HR 7 ದಿನ ಪೊಲೀಸ್ ಕಸ್ಟಡಿಗೆ – ಏನಿದು ಪ್ರಕರಣ?

    ಚೀನಾದಿಂದ ಅಕ್ರಮ ಹೂಡಿಕೆ – ನ್ಯೂಸ್‌ಕ್ಲಿಕ್ ಸಂಪಾದಕ, HR 7 ದಿನ ಪೊಲೀಸ್ ಕಸ್ಟಡಿಗೆ – ಏನಿದು ಪ್ರಕರಣ?

    ನವದೆಹಲಿ : ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಮಾಧ್ಯಮವಾದ ನ್ಯೂಸ್‌ಕ್ಲಿಕ್ (News Click) ಸಂಪಾದಕ ಪ್ರಬೀರ್ ಪುರ್ಯಕಸ್ಥ (Prabir Purkayastha) ಮತ್ತು ಅದರ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ (Amit Chakravarty) ಅವರನ್ನು ದೆಹಲಿ ನ್ಯಾಯಾಲಯವು ಮಂಗಳವಾರ ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

    ಭಾರತದಲ್ಲಿ ಚೀನೀ (China) ಪ್ರಚಾರವನ್ನು ಹೆಚ್ಚಿಸಲು ನ್ಯೂಸ್‌ಕ್ಲಿಕ್‌ಗೆ ಹಣ ಪಾವತಿಸಲಾಗುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ (The New York Times) ಈ ಹಿಂದೆ ವರದಿ ಮಾಡಿತ್ತು. ಆಗಸ್ಟ್‌ನಲ್ಲಿ ನ್ಯೂಯಾರ್ಕ್ ಟೈಮ್ಸ್ ತನಿಖೆಯು ನ್ಯೂಸ್‌ಕ್ಲಿಕ್ ಅನ್ನು ಚೀನೀ ಪ್ರಚಾರವನ್ನು ಉತ್ತೇಜಿಸಲು ಅಮೆರಿಕದ ಶತಕೋಟ್ಯಧಿಪತಿ ನೆವಿಲ್ಲೆ ರಾಯ್ ಸಿಂಘಮ್‌ನೊಂದಿಗೆ (Neville Roy Singham) ಸಂಪರ್ಕ ಹೊಂದಿದ ನೆಟ್‌ವರ್ಕ್‌ನಿಂದ ಹಣ ಪಡೆದಿದೆ ಎಂದು ಆರೋಪಿಸಿತ್ತು.  ಇದನ್ನೂ ಓದಿ: ನಟಿ ಗಾಯತ್ರಿ ಜೋಶಿ ಕಾರು ಅಪಘಾತ: ವೃದ್ಧ ದಂಪತಿ ಸಾವು

    ನೆವಿಲ್ಲೆ ರಾಯ್ ಸಿಂಘಮ್‌
    ನೆವಿಲ್ಲೆ ರಾಯ್ ಸಿಂಘಮ್‌

    ಯುಎಪಿಎ ಪ್ರಕರಣದ ಹೊರತಾಗಿ ನ್ಯೂಸ್‌ಕ್ಲಿಕ್ ವಿರುದ್ಧ ಈ ಹಿಂದೆ ದಾಖಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣವೂ (Money Laundering Case) ಬಾಕಿ ಉಳಿದಿದೆ. ನ್ಯೂಸ್ ಪೋರ್ಟಲ್‌ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ED) ಕಂಪನಿಗೆ ಹೂಡಿಕೆ ಮಾಡಿದವರ ಬಗ್ಗೆ ತನಿಖೆ ಆರಂಭಿಸಿತ್ತು. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಡಿಜಿಟಲ್ ಮೀಡಿಯಾ ವೆಬ್‌ಸೈಟ್ ವಿರುದ್ಧ ಮಾಡಲಾದ ಆರೋಪಗಳಲ್ಲಿ ಷೇರುಗಳ ಅತಿಯಾದ ಮೌಲ್ಯವರ್ಧನೆ, ವಿದೇಶಿ ನೇರ ಹೂಡಿಕೆ ನಿಯಮಗಳ ಉಲ್ಲಂಘನೆಯ ಸೇರಿದೆ.

    ಮನಿ ಲಾಂಡರಿಂಗ್ ಪ್ರಕರಣದಲ್ಲಿ ತಮ್ಮ ವಿರುದ್ಧ ಇಡಿ ಸಲ್ಲಿಸಿದ ಎನ್‌ಫೋರ್ಸ್‌ಮೆಂಟ್ ಕೇಸ್ ಮಾಹಿತಿ ವರದಿಯ (ಇಸಿಐಆರ್) ನಕಲನ್ನು ಕೋರಿ ದೆಹಲಿ ಹೈಕೋರ್ಟ್‌ಗೆ ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಯಕಸ್ಥ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ವೆಬ್‌ಸೈಟ್ ಮತ್ತು ಅದರ ಸಂಸ್ಥಾಪಕರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಇಡಿಗೆ ನಿರ್ದೇಶಿಸಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣ – ಲಾಲು ಕುಟುಂಬಕ್ಕೆ ಜಾಮೀನು

    ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣ – ಲಾಲು ಕುಟುಂಬಕ್ಕೆ ಜಾಮೀನು

    ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ನೀಡುವ ಹರಗಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಾದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ (Lalu Prasad Yadav), ರಾಬ್ರಿ ದೇವಿ, ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಮತ್ತು ಸಂಸದೆ ಮೀಸಾ ಭಾರತಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು (Bail) ನೀಡಿದೆ.

    ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರು ಆದೇಶ ಹೊರಡಿಸಿದ್ದಾರೆ. ಜುಲೈ 3 ರಂದು ಸಿಬಿಐ ಹೊಸ ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ನ್ಯಾಯಾಲಯವು ಸೆಪ್ಟೆಂಬರ್ 22 ರಂದು ತೇಜಸ್ವಿ ಯಾದವ್, ಲಾಲು ಯಾದವ್, ರಾಬ್ರಿ ದೇವಿ ಮತ್ತು ಇತರ 14 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು.

    ಲಾಲು ಪ್ರಸಾದ್ ಅವರು 2004 ರಿಂದ 2009 ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ರೈಲ್ವೆಯಲ್ಲಿ ನೇಮಕಾತಿಗಳನ್ನು ಮಾಡಲು ಬದಲಿಯಾಗಿ ಅವರ ಕುಟುಂಬಕ್ಕೆ ಆಕಾಂಕ್ಷಿಗಳು ಭೂಮಿ ನೀಡಿದ್ದರು ಎಂದು ಆರೋಪಿಸಲಾಗಿದೆ. ಕೇಂದ್ರೀಯ ತನಿಖಾ ದಳ (CBI) ರೈಲ್ವೆಯಲ್ಲಿ ಮಾಡಿದ ನೇಮಕಾತಿಗಳು ಭಾರತೀಯ ರೈಲ್ವೆ ಸ್ಥಾಪಿಸಿದ ಮಾನದಂಡಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಮಹಿಷಾ ದಸರಾ ದಿನವೇ ಚಾಮುಂಡಿ ಬೆಟ್ಟಕ್ಕೆ ಬಿಜೆಪಿಯಿಂದ ಜಾಥಾ – 5 ಸಾವಿರ ಮಂದಿ ಭಾಗಿ

    2022 ರ ಮೇ 18 ರಂದು ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡು, 2022 ರ ಅಕ್ಟೋಬರ್ 7 ರಂದು ಚಾರ್ಜ್ಶೀಟ್ ಸಲ್ಲಿಸಿತ್ತು. 2023 ರ ಫೆಬ್ರವರಿ 27 ರಂದು ನ್ಯಾಯಾಲಯವು ಮೊದಲ ಚಾರ್ಜ್ಶೀಟ್ ಗಮನಹರಿಸಿತು. ನಂತರ ಅದು ಮಾರ್ಚ್ 15 ರೊಳಗೆ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿತು. ಯಾವುದೇ ಬಂಧನವಿಲ್ಲದೆ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಇದನ್ನೂ ಓದಿ: ಸಿಕ್ಕಿಂನಲ್ಲಿ ಮೇಘಸ್ಫೋಟ – ಹಠಾತ್ ಪ್ರವಾಹದಲ್ಲಿ 23 ಸೈನಿಕರು ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ& ಗ್ಯಾಂಗ್‍ನ ಸಿಸಿಬಿ ಕಸ್ಟಡಿ ಅಂತ್ಯ- ಮತ್ತೆ ಕಸ್ಟಡಿಗಾ?, ಪರಪ್ಪನ ಅಗ್ರಹಾರಕ್ಕಾ?

    ಚೈತ್ರಾ& ಗ್ಯಾಂಗ್‍ನ ಸಿಸಿಬಿ ಕಸ್ಟಡಿ ಅಂತ್ಯ- ಮತ್ತೆ ಕಸ್ಟಡಿಗಾ?, ಪರಪ್ಪನ ಅಗ್ರಹಾರಕ್ಕಾ?

    ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) & ಗ್ಯಾಂಗ್‍ನಿಂದ ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿಗೆ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ 7 ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ  (CCB) ಕೋರ್ಟಿಗೆ ಹಾಜರುಪಡಿಸಲಿದ್ದಾರೆ.

    ಚೈತ್ರಾ ಕುಂದಾಪುರ, ಗಗನ್ ಕಡೂರು, ರಮೇಶ್, ಚೆನ್ನನಾಯ್ಕ್, ಧನರಾಜ್ ಹಾಗೂ ಶ್ರೀಕಾಂತ್ ಸೇರಿ 7 ಆರೋಪಿಗಳನ್ನ ಪೊಲೀಸರು ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಅಭಿನವ ಹಾಲಶ್ರೀ ಹೊರತುಪಡಿಸಿ ಎಲ್ಲಾ ಬಂಧಿತ ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. ಇದನ್ನೂ ಓದಿ: ಅಭಿನವ ಹಾಲಶ್ರೀಗೆ ಸೇರಿದ ಎಲ್ಲಾ ಬ್ಯಾಂಕ್ ದಾಖಲೆ ಪರಿಶೀಲನೆ

    ಏಳು ಆರೋಪಿಗಳ ವಿಚಾರಣೆ ಬಹುತೇಕ ಅಂತ್ಯವಾದ ಹಿನ್ನೆಲೆ ಮತ್ತೆ ಕಸ್ಟಡಿಗೆ ಕೇಳದಿರಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳನ್ನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸುವ ಸಾಧ್ಯತೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಕುಂದಾಪುರ 10 ದಿನ ಪೊಲೀಸ್ ಕಸ್ಟಡಿಗೆ

    ಚೈತ್ರಾ ಕುಂದಾಪುರ 10 ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ವಂಚನೆ (Fraud) ಆರೋಪದಡಿ ಚೈತ್ರಾ ಕುಂದಾಪುರ (Chaithra Kundapura) ಮತ್ತು ತಂಡವನ್ನು ಬಂಧಿಸಿ ಸಿಸಿಬಿ (CCB) ಕಚೇರಿಗೆ ಹಾಜರುಪಡಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ (Police Custody) ತೆಗೆದುಕೊಳ್ಳುವಂತೆ 1ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

    ಇವರೊಂದಿಗೆ 6 ಜನ ಆರೋಪಿಗಳನ್ನೂ ಸಹ ಸೆಪ್ಟೆಂಬರ್ 23 ರವರೆಗೆ ಸಿಸಿಬಿ ಪೊಲೀಸ್ ಕಸ್ಟಡಿಯಲ್ಲಿರಿಸಿ ವಿಚಾರಣೆ ನಡೆಸುವಂತೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಈ ವೇಳೆ ಪೊಲೀಸರು ನನಗೆ ತುಂಬಾ ಹೊಡೆದಿದ್ದಾರೆ ಎಂದು ಚೈತ್ರಾ ಕುಂದಾಪುರ ನ್ಯಾಯಾಧೀಶರ ಬಳಿ ಕಣ್ಣೀರಿಟ್ಟಿದ್ದು, ನಾನು ಇವರ ವಿರುದ್ಧ ದೂರು ಕೊಡಬೇಕು. ಯಾರಿಗೆ ಕೊಡಲಿ ಎಂದು ನ್ಯಾಯಾಧೀಶರಿಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕೊಡ್ತಿಲ್ಲ: ಅರವಿಂದ ಬೆಲ್ಲದ್

    ನನಗೆ ಉಡುಪಿ ಪೊಲೀಸರು ತೊಂದರೆ ಕೊಟ್ಟಿದ್ದಾರೆ. ಬೆಂಗಳೂರು ಪೊಲೀಸರು ಯಾವುದೇ ತೊಂದರೆ ಕೊಟ್ಟಿಲ್ಲ. ಬಂಧನದ ಕುರಿತು ನಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿಲ್ಲ. ಫೋನ್ ನಂಬರ್ ಕೊಟ್ಟರೂ ಕಾಲ್ ಮಾಡಿಲ್ಲ. ದೂರು ಯಾರು ಕೊಟ್ಟಿದ್ದಾರೆ? ಏನು ದೂರು ಎಂಬ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಚೈತ್ರಾ ಕುಂದಾಪುರ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ – ಎಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಗುಂಡೂರಾವ್ ಸೂಚನೆ

    ಎಲ್ಲಾ ಆರೋಪಿಗಳನ್ನು ಯಾವಾಗ ಅರೆಸ್ಟ್ ಮಾಡಿದ್ದಾರೆ ಎಂದು ನ್ಯಾಯಾಧೀಶರು ಚೈತ್ರಾ ಅವರನ್ನು ಪ್ರಶ್ನೆ ಮಾಡಿದ್ದು, ಮಂಗಳವಾರ ಸಂಜೆ 6 ಗಂಟೆಗೆ ನನ್ನನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ನನ್ನ ತಾಯಿ ಜೊತೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ: ಸರ್ವಪಕ್ಷ ಸಭೆಯಲ್ಲಿ ಒಮ್ಮತದ ನಿರ್ಣಯ

    ಉದ್ಯಮಿಗೆ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ವಂಚಿಸಿ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಮತ್ತು ಸಹಚರರನ್ನು ಉಡುಪಿಯಲ್ಲಿ (Udupi) ಸಿಸಿಬಿ ಪೊಲೀಸರು ಬಂಧಿಸಿ ಬೆಂಗಳೂರಿನ (Bengaluru) 1ನೇ ಎಸಿಎಂಎಂ ಕೋರ್ಟ್‌ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ, ಶ್ರೀಕಾಂತ್, ಗಗನ್, ರಮೇಶ್, ಧನ್ ರಾಜ್, ಪ್ರಜ್ವಲ್ ಸೇರಿ ಆರು ಮಂದಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಇದನ್ನೂ ಓದಿ: ಕುಡಿಯುವ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರಿಗೆ ಅನ್ಯಾಯ: ತ.ನಾಡು ಸಚಿವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬ್ರೇಕ್- 14 ಉಗ್ರರ ಆಸ್ತಿ ಮುಟ್ಟುಗೋಲಿಗೆ ಪೊಲೀಸರ ಕ್ರಮ

    ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬ್ರೇಕ್- 14 ಉಗ್ರರ ಆಸ್ತಿ ಮುಟ್ಟುಗೋಲಿಗೆ ಪೊಲೀಸರ ಕ್ರಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಪಾಕ್ (Pakistan) ಮೂಲದ ಭಯೋತ್ಪಾದಕರ ಆಸ್ತಿಯನ್ನು ಪೊಲೀಸರು (Police) ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ಈಗಾಗಲೇ ಇಬ್ಬರು ಭಯೋತ್ಪಾದಕರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಅಲ್ಲದೇ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಿಂದ (POK) ಕಾರ್ಯನಿರ್ವಹಿಸುತ್ತಿರುವ ಇತರ 14 ಭಯೋತ್ಪಾದಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಎಲ್ಲಾ ಭಯೋತ್ಪಾದಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಾಲಕಿಯನ್ನು ಅಪಹರಿಸಿ, ಒಂದೂವರೆ ತಿಂಗಳು ನಿರಂತರವಾಗಿ ರೇಪ್-‌ ವ್ಯಕ್ತಿ ಅರೆಸ್ಟ್

    ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಘೋಷಿತ ಅಪರಾಧಿಗಳಾದ ಲಾಲ್ ದಿನ್‍ಗೆ ಸೇರಿದ ಕಿಶ್ತ್‍ವಾರ್‍ನ ಮುಗಲ್ ಮೈದಾನದಲ್ಲಿರುವ ಹಾಗೂ ಅಬ್ದುಲ್ ರಶೀದ್‍ಗೆ ಸೇರಿದ ಫಾಗ್ಸೂ ಥಾತ್ರಿ ಗ್ರಾಮದಲ್ಲಿರುವ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 16 ಘೋರ ಭಯೋತ್ಪಾದಕ ಕೃತ್ಯಗಳಲ್ಲಿ ಈ ಇಬ್ಬರೂ ಭಾಗಿಯಾಗಿದ್ದಾರೆ. ಈ ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ದೋಡಾ ಎಸ್‍ಎಸ್‍ಪಿ ಅಬ್ದುಲ್ ಖಯ್ಯೂಮ್ ನ್ಯಾಯಾಲಯದ (Court) ಆದೇಶದಂತೆ ನಾವು 14 ಪ್ರಕರಣಗಳಲ್ಲಿ ಆಸ್ತಿ ವಿವರಗಳನ್ನು ಕಂದಾಯ ಇಲಾಖೆಯಿಂದ ಕೇಳುತ್ತಿದ್ದೇವೆ. ವಿವರ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಾಲಕನಿಗೆ ತಲೆ ಸುತ್ತು ಬಂದು ಡಿವೈಡರ್‌ಗೆ ಡಿಕ್ಕಿಯಾಗಿ BMTC ವೋಲ್ವೋ ಬಸ್ ಪಲ್ಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಗ್ರಾ.ಪಂ. ಅಧಿಕಾರ ಅನುಭವಿಸಿದ ಮಹಿಳೆಗೆ 7 ವರ್ಷ ಜೈಲು

    ಹಾವೇರಿ: ಪರಿಶಿಷ್ಟ ಜಾತಿ ಪ್ರಮಾಣಪತ್ರ (Caste Certificate) ಪಡೆಯಲು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿದ ಶಿಗ್ಗಾಂವಿ (Shiggavi) ತಾಲೂಕು ವನಹಳ್ಳಿ ಗ್ರಾಮದ ಲಕ್ಷ್ಮಿ ಕೋಂ.ಮಾರುತಿ ಕಬ್ಬೇರ ಎಂಬಾಕೆಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 19,000 ರೂ. ದಂಡ (Penalty) ವಿಧಿಸಿ ಹಾವೇರಿಯ (Haveri) ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀ ನಾರಾಯಣ ತೀರ್ಪು ನೀಡಿದ್ದಾರೆ.

    ಶಿಗ್ಗಾಂವಿ ತಾಲೂಕು ವನಹಳ್ಳಿ ಗ್ರಾಮದ ಲಕ್ಷ್ಮಿ ಹಿಂದೂ ಗಂಗಾಮತಕ್ಕೆ (ಪ. ವರ್ಗ-01) ಸೇರಿದ್ದರೂ ಸಹ, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಸುಳ್ಳು ಅಫಿಡವಿಟ್ ಘೋಷಣಾ ಪತ್ರ ಮತ್ತು ಇತರೆ ದಾಖಲಾತಿಗಳನ್ನು ಸೃಷ್ಟಿಸಿ ಜೂನ್ 04, 2015ರಂದು ಶಿಗ್ಗಾಂವಿ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಿದ್ದಾರೆ. ಹಿಂದೂ ಗಂಟಿಚೋರ್ಸ್ ಪರಿಶಿಷ್ಠ ಜಾತಿಯ ಪ್ರಮಾಣಪತ್ರ ಪಡೆದು ಹನುಮರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ನಂತರ ಎಸ್‌ಸಿ ಸ್ಥಾನಕ್ಕೆ ಮೀಸಲಾಗಿದ್ದ ಗ್ರಾ.ಪಂ (Grama Panchayat) ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ಇದನ್ನೂ ಓದಿ: ಇನ್ಮುಂದೆ ನೂತನ ಇಂದಿರಾ ಕ್ಯಾಂಟೀನ್ ಊಟದ ದರ 60 ರೂ.!

    ಸುಳ್ಳು ಜಾತಿಪ್ರಮಾಣಪತ್ರ ಪಡೆದು ಸರ್ಕಾರಕ್ಕೆ ಮತ್ತು ನೈಜ ಪರಿಶಿಷ್ಠ ಜಾತಿಯ ಅಭ್ಯರ್ಥಿಗೆ ಮೋಸಮಾಡಿದ ಕುರಿತಂತೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ದಾವಣಗೆರೆ ಡಿಸಿಆರ್‌ಒ ಪೊಲೀಸ್ ಇನ್ಸ್ಪೆಕ್ಟರ್ ಟಿಜಿ ಶ್ರೀಧರ ಶಾಸ್ತ್ರಿ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಲಕ್ಷ್ಮಿ ಮೇಲೆ ಕಲಂ:198, 420, 465, 468, 471 ಭಾ.ದಂ.ಸಂ. ಮತ್ತು 3(1)ಕ್ಯೂ ಎಸ್‌ಸಿ/ಎಸ್‌ಟಿ (ಪಿಎ) ತಿದ್ದುಪಡಿ ಕಾಯ್ದೆ 2015ರ ಅಡಿಯಲ್ಲಿ ಆಪಾದನೆಗಳು ರುಜುವಾತದ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸರೋಜಾ ಜಿ.ಕೂಲಗಿಮಠ ಅವರು ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ನ್ಯಾಯಾಂಗ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]