Tag: court

  • ಸೋನು ಗೌಡಗೆ ನಾಲ್ಕು ದಿನ ಪೊಲೀಸ್ ಕಸ್ಟಡಿ: ಕೋರ್ಟ್ ಆದೇಶ

    ಸೋನು ಗೌಡಗೆ ನಾಲ್ಕು ದಿನ ಪೊಲೀಸ್ ಕಸ್ಟಡಿ: ಕೋರ್ಟ್ ಆದೇಶ

    ಗುವನ್ನು ಅಕ್ರಮವಾಗಿ ಮನೆಯಲ್ಲಿ ಇಟ್ಟುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಟಿಕ್ ಟಾಕ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ (Police Custody) ಒಪ್ಪಿಸಿ ಆದೇಶ ನೀಡಿದೆ ಬೆಂಗಳೂರಿನ ಸಿಜೆಎಂ ಕೋರ್ಟ್. ಮಗು ಪೋಷಕರನ್ನು ರಾಯಚೂರಿಗೆ ಕರ್ಕೊಂಡು ಹೋಗಿ ಮಹಜರು ಮತ್ತು ಹೇಳಿಕೆ ಪಡೆಯಬೇಕಿದೆ. ಅಪಾರ್ಟ್ ಮೆಂಟ್ ನ ಅಕ್ಕಪಕ್ಕದ ಸ್ಥಳೀಯರ ಹೇಳಿಕೆ ಪಡೆಯಬೇಕಿದೆ. ಈ ಉದ್ದೇಶ ದಿಂದ ನಾಲ್ಕು ದಿನಗಳ ಕಾಲ ಕಸ್ಟಡಿ ಗೆ ಕೇಳಿದ್ದರು ಬ್ಯಾಡರಹಳ್ಳಿ ಪೊಲೀಸರು. ಸದ್ಯ ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೋನುವನ್ನು ಪೊಲೀಸರು ಕಳುಹಿಸಲಿದ್ದಾರೆ.

    ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಸೋನು ಅನ್ನು ಇಂದು ಬೆಳಗಿನ ಜಾವ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಜಂಟಿ ಕಾರ್ಯಚರಣೆ ವೇಳೆ ಬಂಧನವಾಗಿತ್ತು.

    ಈ ಹಿಂದೆಯಷ್ಟೇ ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್  ಆಗಿದ್ದರು. ಸ್ವತಃ ಸೋನು ಗೌಡ ಅವರೇ ಆ ಮಗುವನ್ನು ಇಟ್ಟುಕೊಂಡು ವಿಡಿಯೋ ಕೂಡ ಮಾಡಿದ್ದರು. ಈ ಮಗುವಿನ ಪರಿಚಯವನ್ನು ಸೋನು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದರು.

    ದತ್ತು ಪಡೆಯುವ ಯಾವುದೇ ನಿಯಮವನ್ನು ದತ್ತು ಪಾಲಿಸದೇ ಇರುವ ಕಾರಣಕ್ಕಾಗಿ ಮಕ್ಕಳ ಹಕ್ಕು ಕಸಿದಿರುವ ಆರೋಪ ಸೋನು ಮೇಲಿದೆ. ಉತ್ತರ ಕರ್ನಾಟಕದ 8 ವರ್ಷದ ಮಗು ಅದಾಗಿದ್ದು, ಸಿಂಪತಿ ಗಿಟ್ಟಿಸಿಕೊಂಡು ಸೆಲೆಬ್ರಿಟಿ ಆಗಲು ಸೋನು ಮುಂದಾಗಿದ್ದರು ಎನ್ನುವ ಆರೋಪ ಕೂಡ ಇದೆ.

     

    ಮಗುವನ್ನ ದತ್ತು ಪಡೆದ ಮೇಲೆ ಸುಳ್ಳು  ಪ್ರಚಾರ ಗಿಟ್ಟಿಸಿಕೊಳ್ಳಲು ಸೋನು ತಂತ್ರ ರೂಪಿಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಮಕ್ಕಳ ರಕ್ಷಣಾಧಿಕಾರಿಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸ್ರಿಂದ ಸೋನು ಶ್ರೀನಿವಾಸ್ ಗೌಡ ಬಂಧನವಾಗಿತ್ತು.

  • ಉಡುಪಿ ಕೋರ್ಟ್‍ಗೆ CID ದೋಷಾರೋಪ ಪಟ್ಟಿ- ಕಾಲೇಜಿನಲ್ಲಿ ಕ್ಯಾಮೆರಾ ಇಟ್ಟವ್ರಿಗೆ ಆಗುತ್ತಾ ಶಿಕ್ಷೆ?

    ಉಡುಪಿ ಕೋರ್ಟ್‍ಗೆ CID ದೋಷಾರೋಪ ಪಟ್ಟಿ- ಕಾಲೇಜಿನಲ್ಲಿ ಕ್ಯಾಮೆರಾ ಇಟ್ಟವ್ರಿಗೆ ಆಗುತ್ತಾ ಶಿಕ್ಷೆ?

    ಬೆಂಗಳೂರು: ರಾಜ್ಯದಲ್ಲಿ ಭಾರೀ ವಿವಾದ ಸೃಷ್ಟಿ ಮಾಡಿದ್ದ ಉಡುಪಿಯ ನೇತ್ರಜ್ಯೋತಿ ಕಾಲೇಜಿನ (Udupi College) ಪ್ರಕರಣ ಸಂಬಂಧ ಉಡುಪಿ ಕೋರ್ಟ್‍ಗೆ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

    ಉಡುಪಿಯ ನೇತ್ರಜ್ಯೋತಿ ಕಾಲೇಜಿನ ಟಾಯ್ಲೆಟ್‍ನಲ್ಲಿ ಮೂವರು ವಿದ್ಯಾರ್ಥಿನಿಯರು ತನ್ನ ಸಹಪಾಠಿಯ ಫೋಟೋ ತೆಗೆದಿದ್ರು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರದಲ್ಲಿ ಬಿಜೆಪಿ ದೊಡ್ಡಮಟ್ಟದ ಹೋರಾಟ ನಡೆಸಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು.

    ಇದೀಗ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಇಂದು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ (Charge Sheet) ಸಲ್ಲಿಸಿದೆ. 1,100 ಪುಟಗಳ ದೋಷಾರೋಪ ಪಟ್ಟಿ, ವಿದ್ಯಾರ್ಥಿನಿಯರ ಹೇಳಿಕೆ, ಎಫ್‍ಎಸ್‍ಎಲ್‍ನ ವರದಿ ಈ ಎಲ್ಲಾ ಮಾಹಿತಿಯನ್ನು ಒಳಗೊಂಡಿದೆ. ಇದನ್ನೂ ಓದಿ: ಕೊಡಗು ಗಡಿಭಾಗಕ್ಕೆ ನಕ್ಸಲ್ ನಾಯಕ ವಿಕ್ರಂ ಗೌಡ, ತಂಡ ಬಂದಿರುವುದು ದೃಢ: ಎಸ್‌ಪಿ ರಾಮರಾಜನ್

  • ಸಂದೇಶ್‍ಖಾಲಿ ಹಿಂಸಾಚಾರ ಪ್ರಕರಣ – ಶೇಖ್ ಷಹಜಹಾನ್‍ಗೆ ಸಿಬಿಐ ಕಸ್ಟಡಿ ವಿಸ್ತರಣೆ

    ಸಂದೇಶ್‍ಖಾಲಿ ಹಿಂಸಾಚಾರ ಪ್ರಕರಣ – ಶೇಖ್ ಷಹಜಹಾನ್‍ಗೆ ಸಿಬಿಐ ಕಸ್ಟಡಿ ವಿಸ್ತರಣೆ

    ಕೋಲ್ಕತ್ತಾ: ಸಂದೇಶ್‍ಖಾಲಿಯಲ್ಲಿ (Sandeshkhali) ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ತೃಣಮೂಲ ಕಾಂಗ್ರೆಸ್‍ನಿಂದ (TMC) ಅಮಾನತಾಗಿರುವ ಆರೋಪಿ ಶೇಖ್ ಷಹಜಹಾನ್‍ನ (Sheikh Shahjahan) ಕೇಂದ್ರೀಯ ತನಿಖಾ ದಳದ (CBI) ಕಸ್ಟಡಿಯನ್ನು ಮತ್ತೆ ನಾಲ್ಕು ದಿನಗಳವರೆಗೆ ನ್ಯಾಯಾಲಯ (Court) ವಿಸ್ತರಿಸಿದೆ.

    ಪಶ್ಚಿಮ ಬಂಗಾಳದ (West Bengal) ಬಸಿರ್‍ಹತ್‍ನ ನ್ಯಾಯಾಲಯ ಕೇಂದ್ರೀಯ ಸಂಸ್ಥೆಯ ಅರ್ಜಿಯ ಆಧಾರದ ಮೇಲೆ ಈ ಆದೇಶ ನೀಡಿದೆ. ಕೋಲ್ಕತ್ತಾ ಹೈಕೋರ್ಟ್‍ನ ಆದೇಶದ ಮೇರೆಗೆ ತನಿಖೆಯ ವರ್ಗಾವಣೆಯೊಂದಿಗೆ ಮಾರ್ಚ್ 6 ರಂದು ಸಿಬಿಐ ಶೇಖ್ ಷಹಜಹಾನ್‍ನನ್ನು ಕಸ್ಟಡಿಗೆ ಪಡೆದುಕೊಂಡಿತ್ತು. ಇದೀಗ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿ ನಾಲ್ಕು ದಿನಗಳ ಕಾಲ ಕಸ್ಟಡಿಯನ್ನು ವಿಸ್ತರಿಸಿದೆ. ಅಲ್ಲದೇ ಮಾ.14 ರಂದು ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ. ಇದನ್ನೂ ಓದಿ: ಮಸೀದಿ, ಮದರಸಾಗಳಲ್ಲಿ ಎನ್‍ಐಎ ದಾಳಿ ನಡೆಸಿದ್ರೆ ರಾಮೇಶ್ವರಂ ಕೆಫೆ ಸ್ಫೋಟ ಆರೋಪಿ ಪತ್ತೆಯಾಗಬಹುದು: ಶರಣ್ ಪಂಪ್‍ವೆಲ್

    ಜ.5 ರಂದು ಪಡಿತರ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಂದೇಶ್‍ಖಾಲಿಯಲ್ಲಿರುವ ಶೇಖ್ ಷಹಜಹಾನ್‍ನ ಮನೆಗೆ ಇಡಿ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಜನರ ಗುಂಪು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿತ್ತು. ಇದಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಬಳಿಕ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದ ಮೇಲೆ, ತಲೆಮರೆಸಿಕೊಂಡ 55 ದಿನಗಳ ಬಳಿಕ ಫೆ.29 ರಂದು ಆತನನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಡೀಪ್‍ಫೇಕ್ ವೀಡಿಯೋ ವೈರಲ್

  • ಅಮಿತ್ ಶಾ ವಿರುದ್ಧ ಮಾನನಷ್ಟ ಹೇಳಿಕೆ – ಯುಪಿ ಕೋರ್ಟ್‍ನಿಂದ ರಾಹುಲ್ ಗಾಂಧಿಗೆ ಜಾಮೀನು

    ಅಮಿತ್ ಶಾ ವಿರುದ್ಧ ಮಾನನಷ್ಟ ಹೇಳಿಕೆ – ಯುಪಿ ಕೋರ್ಟ್‍ನಿಂದ ರಾಹುಲ್ ಗಾಂಧಿಗೆ ಜಾಮೀನು

    ಲಕ್ನೋ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧ 2018 ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ್ದ ಹೇಳಿಕೆಗಳ ವಿರುದ್ಧ ಬಿಜೆಪಿ ನಾಯಕರೊಬ್ಬರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ (Defamation Case) ಉತ್ತರ ಪ್ರದೇಶದ (Uttar Pradesh) ಸುಲ್ತಾನ್‍ಪುರದ ಸ್ಥಳೀಯ ನ್ಯಾಯಾಲಯ (Court) ಅವರಿಗೆ ಜಾಮೀನು ನೀಡಿದೆ.

    ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಬಿಜೆಪಿ (BJP) ತನ್ನ ರಾಜಕೀಯ ಶುದ್ಧವಾಗಿದೆ ಎಂದು ಹೇಳಿಕೊಂಡಿದ್ದರೂ, ಕೊಲೆ ಪ್ರಕರಣದ ಆರೋಪಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಹೊಂದಿದೆ ಎಂದಿದ್ದರು. ಆಗ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದರು. ಈ ವಿಚಾರವಾಗಿ ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಮಾರ್ಚ್‌ ತಿಂಗಳಲ್ಲಿ ತಮಿಳುನಾಡು ಸರ್ಕಾರಕ್ಕೆ ಜಯಲಲಿತಾ ಒಡವೆ ಹಸ್ತಾಂತರ: ಕೋರ್ಟ್‌ನಿಂದ ದಿನಾಂಕ ನಿಗದಿ

    2014 ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯದಿಂದ ಅಮಿತ್ ಶಾ ಅವರನ್ನು ಬಿಡುಗಡೆ ಮಾಡಿದ ಸೊಹ್ರಾಬುದ್ದೀನ್ ಎನ್‍ಕೌಂಟರ್ ಪ್ರಕರಣವನ್ನು ರಾಹುಲ್ ಉಲ್ಲೇಖಿಸಿದ್ದರು.

    ಇಂತಹ ಆಕ್ಷೇಪಾರ್ಹ ಹೇಳಿಕೆಗಳು ಅಮಿತ್ ಶಾ ಅವರ ವರ್ಚಸ್ಸಿಗೆ ಕಳಂಕ ತಂದಿದೆ ಎಂದು ಮಿಶ್ರಾ ದೂರಿದ್ದರು.

    ಈ ಪ್ರಕರಣದ ವಿಚಾರಣೆ ನಡೆಸಿದ ಸುಲ್ತಾನ್‍ಪುರದ ಸ್ಥಳೀಯ ನ್ಯಾಯಾಲಯ ರಾಹುಲ್ ಗಾಂಧಿಯವರಿಗೆ ಜಾಮೀನು ನೀಡಿದೆ. ಇದನ್ನೂ ಓದಿ: ರಾಕ್‌ಲೈನ್‌ ಮಾಲ್‌ಗೆ ಹಾಕಿರುವ ಸೀಲ್‌ ಕೂಡಲೇ ತೆಗೆಯಿರಿ: ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ

  • ಆಂಧ್ರ ಸಿಎಂ ವಿಲನ್ ಎನ್ನುವಂತೆ ಬಿಂಬಿಸಿದ್ದ ಚಿತ್ರಕ್ಕೆ ಬಿಡುಗಡೆ ಭಾಗ್ಯ

    ಆಂಧ್ರ ಸಿಎಂ ವಿಲನ್ ಎನ್ನುವಂತೆ ಬಿಂಬಿಸಿದ್ದ ಚಿತ್ರಕ್ಕೆ ಬಿಡುಗಡೆ ಭಾಗ್ಯ

    ರಾಜಧಾನಿ ಫೈಲ್ಸ್ ಚಿತ್ರ ತಂಡಕ್ಕೆ ನಿಟ್ಟುಸಿರಿಡುವಂತಹ ಸುದ್ದಿ ಸಿಕ್ಕಿದೆ. ಅಂದುಕೊಂಡಂತೆ ಆಗಿದ್ದರೆ ಇಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್ ಮೆಟ್ಟಿಲು ಏರಿದ್ದರಿಂದ ಬಿಡುಗಡೆಗೆ ಹಿನ್ನೆಡೆ ಆಗಿತ್ತು. ಇದೀಗ ಸಿನಿಮಾ ರಿಲೀಸ್ ಮಾಡುವಂತಹ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ ಈ ವಾರ ರಾಜಧಾನಿ ಫೈಲ್ಸ್ ಸಿನಿಮಾ ರಿಲೀಸ್ ಆಗುತ್ತಿದೆ.

    ರಾಜ್ಯ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಆಂಧ್ರ ಪ್ರದೇಶದಲ್ಲಿ ಸಿನಿಮಾ ರಾಜಕಾರಣ ಕೂಡ ಅಷ್ಟೇ ವೇಗವನ್ನು ಪಡೆದುಕೊಳ್ಳುತ್ತಿದೆ. ಅಲ್ಲಿನ ರಾಜಕೀಯ ಮುಖಂಡರನ್ನು ಹೀರೋ, ವಿಲನ್ ರೀತಿಯಲ್ಲಿ ತೋರಿಸುವ ಮೂಲಕ ಸಿನಿ ರಾಜಕಾರಣಕ್ಕೆ ಮುಂದಾಗುತ್ತಿದ್ದಾರೆ ನಿರ್ದೇಶಕರು. ಈ ನಡೆಯನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದಾರೆ.

    ಇತ್ತೀಚೆಗಷ್ಟೇ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರನ್ನು ಹೀರೋ ಆಗಿ ತೋರಿಸಿದ್ದ ಯಾತ್ರ 2 ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಜಗನ್ ವಿರೋಧಿಗಳನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗಿದೆ. ಚಂದ್ರ ಬಾಬು ನಾಯ್ಡು ವಿರುದ್ಧ ವ್ಯೂಹಂ ಚಿತ್ರ ರೆಡಿಯಾಗಿದೆ. ಅದು ಇನ್ನಷ್ಟೇ ಬಿಡುಗಡೆ ಆಗಬೇಕು. ಈ ನಡುವೆ ರಾಜಧಾನಿ ಫೈಲ್ಸ್ (Rajdhani Files) ಚಿತ್ರ ಸದ್ದು ಮಾಡಿತ್ತು.

    ರಾಜಧಾನಿ ಫೈಲ್ಸ್ ಸಿನಿಮಾದಲ್ಲಿ ನೇರವಾಗಿ ಜಗನ್ ಬಗ್ಗೆಯೇ ಮಾತನಾಡದೇ, ಜಗನ್ ಪಾತ್ರದ ಹೆಸರನ್ನು ಕೊಡಲಿ ನಾನಿ ಪಾತ್ರವಾಗಿಸಿದ್ದಾರೆ. ಸಚಿವೆ ರೋಜಾ ಪಾತ್ರವನ್ನೂ ಈ ಸಿನಿಮಾದಲ್ಲಿ ತರಲಾಗಿದೆ. ನಾನಿ ಮತ್ತು ಸಚಿವೆ ಕ್ಲಬ್ ಡಾನ್ಸ್ ಮಾಡುವಂತಹ ದೃಶ್ಯಗಳು ಇದರಲ್ಲಿ ಇವೆ ಎನ್ನುವುದು ಜಗನ್ ಪಕ್ಷದ ಆರೋಪ. ಹಾಗಾಗಿ ಈ ಸಿನಿಮಾವನ್ನು ರಿಲೀಸ್ ಮಾಡದಂತೆ ಜಗನ್ ಪಕ್ಷ ಕೋರ್ಟ್ ಮೆಟ್ಟಿಲು ಏರಿತ್ತು.

     

    ಜಗನ್, ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ರಾಜಕೀಯ ನಾಯಕರನ್ನು ಗುರಿಯಾಗಿರಿಸಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಇದರ ಉದ್ದೇಶ ರಾಜಕಾರಣ ಎನ್ನುವುದು ಸ್ಪಷ್ಟವಾಗಿದ್ದರೂ, ಸಿನಿಮಾ ಮೂಲಕ ರಾಜಕೀಯ ಕೆಸರೆರಿಚಾಟಕ್ಕೆ ತೊಡಗಿದ್ದು ದುರಂತ ಎನ್ನುತ್ತಾರೆ ಸಿನಿಮಾ ಮೇಕರ್ಸ್.

  • ನಟಿ ಜಯಪ್ರದಾರನ್ನು ಕೂಡಲೇ ಬಂಧಿಸಿ: ಆಘಾತದಲ್ಲಿ ನಟಿ

    ನಟಿ ಜಯಪ್ರದಾರನ್ನು ಕೂಡಲೇ ಬಂಧಿಸಿ: ಆಘಾತದಲ್ಲಿ ನಟಿ

    ಅಂದುಕೊಂಡಂತೆ ಆಗಿದ್ದರೆ, ಕೋರ್ಟ್ ಆದೇಶದಂತೆ ನಟಿ ಜಯಪ್ರದಾ ಅವರನ್ನು ಜನವರಿ 10ರೊಳಗೆ ಬಂಧಿಸಿ ಕೋರ್ಟಿಗೆ ಹಾಜರು ಪಡಿಸಬೇಕಿತ್ತು. ಆದರೆ, ಪೊಲೀಸರ ಕೈಗೆ ಸಿಗದಂತೆ ಜಯಪ್ರದಾ ತಪ್ಪಿಸಿಕೊಳ್ಳುತ್ತಿದ್ದಾರಂತೆ. ಹಾಗಾಗಿ ಮಧ್ಯ ಪ್ರದೇಶದ ಹೈಕೋರ್ಟ್ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಫೆಬ್ರವರಿ 27ರಂದು ಬಂಧಿಸಿ ಕೋರ್ಟಿಗೆ ಹಾಜರು ಪಡಿಸುವಂತೆ ಸೂಚಿಸಿದೆ.

    ಏನಿದು ಪ್ರಕರಣ?

    ಥಿಯೇಟರ್ ಕಾಂಪ್ಲೆಕ್ಸ್ ನ ನೌಕರರ ರಾಜ್ಯ ವಿಮೆ (ಇಎಸ್.ಐ) ನಿಧಿಯ ಪಾಲನ್ನು ಪಾವತಿಸದೇ ಇರುವುದಕ್ಕಾಗಿ  ನ್ಯಾಯಾಲಯವು ನಟಿ ಜಯಪ್ರಯಾ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ  (Punishment)ವಿಧಿಸಿತ್ತು. ಈ ಶಿಕ್ಷೆಯನ್ನು ರದ್ದುಗೊಳಿಸುವಂತೆ ನಟಿ ಜಯಪ್ರದಾ ಅವರು ಹೈಕೋರ್ಟ್ (High Court) ಗೆ ಮೊರೆ ಹೋಗಿದ್ದರು. ಮಾನ್ಯ ನ್ಯಾಯಾಲಯವು ಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿದೆ. ಸಹಜವಾಗಿಯೇ ನಟಿಗೆ ಶಾಕ್ ಆಗಿದೆ.

    ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಜಯಪ್ರದಾ (Jayaprada) ಅವರಿಗೆ ಚೆನ್ನೈನ (Chennai) ಎಗ್ಮೋರ್ ನ್ಯಾಯಾಲಯವು ಆರು ತಿಂಗಳ ಕಾಲ ಜೈಲು ಶಿಕ್ಷೆ  ಪ್ರಕಟಿಸಿತ್ತು. ನಟಿಯ ವಿರುದ್ಧ ಸರಕಾರದ ಲೇಬರ್ ಇನ್ಶುರೆನ್ಸ್ ಕಾರ್ಪೋರೇಷನ್ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಈ ಪ್ರಕರಣದಲ್ಲಿ ಜಯಪ್ರದಾಗೆ ಸೋಲಾಗಿತ್ತು.

    ಭಾರತೀಯ ಸಿನಿಮಾ ರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಜಯಪ್ರದಾ, ಸಿನಿಮಾ ಪ್ರದರ್ಶಕಿಯೂ ಹೌದು. ಚೆನ್ನೈನಲ್ಲೇ ಇವರ ಹೆಸರಿನಲ್ಲಿ ಎರಡು ಚಿತ್ರಮಂದಿರಗಳಿವೆ. ಈ ಎರಡು ಚಿತ್ರ ಮಂದಿರಗಳಲ್ಲಿ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಇ.ಎಸ್.ಐ ಹಣವನ್ನು ಕಡಿತ ಮಾಡಿಕೊಂಡು ಕಾರ್ಮಿಕ ಇಲಾಖೆಗೆ ಅದನ್ನು ಪಾವತಿಸಿಲ್ಲ ಎನ್ನುವ ಕಾರಣಕ್ಕಾಗಿ ದೂರು ನೀಡಲಾಗಿತ್ತು.

     

    ಈಗಾಗಲೇ ಅವರು ಮಾಲೀಕರಾಗಿರುವ ಆ ಎರಡೂ ಚಿತ್ರಮಂದಿರಗಳ ಮೇಲೆ ಕೇಸ್ ದಾಖಲಾಗಿದೆ. ಆಸ್ತಿ ತೆರಿಗೆಯನ್ನು ಕಟ್ಟದೇ ಇರುವ ಕಾರಣಕ್ಕಾಗಿ ಜಪ್ತಿ ಕೂಡ ಮಾಡಲಾಗಿದೆ. ಆದರೂ ಇ.ಎಸ್.ಐ ಕಟ್ ಮಾಡಿಯೂ ಕಾರ್ಮಿಕ ಇಲಾಖೆಗೆ ಅವರು ಪಾವತಿ ಮಾಡಿರಲಿಲ್ಲ ಎನ್ನುವುದು ಅಧಿಕಾರಿಗಳ ಆರೋಪವಾಗಿತ್ತು. ಹಾಗಾಗಿ ಶಿಕ್ಷೆ ನೀಡಲಾಗಿತ್ತು. ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

  • ಪಾಕ್ ಚುನಾವಣಾ ಫಲಿತಾಂಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಅಭ್ಯರ್ಥಿಗಳು

    ಪಾಕ್ ಚುನಾವಣಾ ಫಲಿತಾಂಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಅಭ್ಯರ್ಥಿಗಳು

    ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕ್‍ನ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿತ ಅಭ್ಯರ್ಥಿಗಳು ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು (Pakistan Election Result 2024) ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ಪಾಕ್‍ನ ನ್ಯಾಯಾಲಯಗಳು (Court) ಅರ್ಜಿಗಳಿಂದ ತುಂಬಿ ಹೋಗಿವೆ ಎಂದು ವರದಿಯಾಗಿದೆ.

    ಚುನಾವಣೆಯಲ್ಲಿ ಅಕ್ರಮವಾಗಿದೆ, ಮತ ಎಣಿಕೆ ವೇಳೆ ಸರಿಯಾದ ಕ್ರಮ ಅನುಸರಿಸಿಲ್ಲ ಎಂದು ಖಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಹೆಚ್ಚಿನ ಅರ್ಜಿಗಳನ್ನು ಲಾಹೋರ್ ಹೈಕೋರ್ಟ್‍ನಲ್ಲಿ ಸಲ್ಲಿಸಲಾಗಿದೆ. ಇಬ್ಬರು ಅಭ್ಯರ್ಥಿಗಳು ಫಲಿತಾಂಶಗಳ ವಿರುದ್ಧ ಇಸ್ಲಾಮಾಬಾದ್ ಹೈಕೋರ್ಟ್ ಮತ್ತು ಸಿಂಧ್ ಹೈಕೋರ್ಟ್‍ನಲ್ಲಿ ಕನಿಷ್ಠ ಮೂರು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಲಂಡನ್‌ ಪ್ಲಾನ್‌ ವಿಫಲವಾಗಿದೆ- ಫಲಿತಾಂಶ ಘೋಷಣೆಗೂ ಮುನ್ನ ಇಮ್ರಾನ್‌ ವಿಜಯದ ಭಾಷಣ

    ಪಾಕ್ ಚುನಾವಣಾ ಆಯೋಗ, 265 ಕ್ಷೇತ್ರಗಳ ಪೈಕಿ 259 ಸ್ಥಾನಗಳ ಫಲಿತಾಂಶ ಪ್ರಕಟಿಸಿದೆ. ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 102 ಸ್ಥಾನ ಗೆದ್ದು, ಸಿಂಹಪಾಲನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 74, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳಲ್ಲಿ ಗೆದ್ದಿದೆ. ಪಕ್ಷೇತರರು ಕೆಲ ಸ್ಥಾನಗಳನ್ನು ಗೆದ್ದಿದ್ದಾರೆ.

    ಪಾಕಿಸ್ತಾನದ ಪಾರ್ಲಿಮೆಂಟ್ ಚುನಾವಣೆಯ ಫಲಿತಾಂಶವನ್ನು ಅಲ್ಲಿನ ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ. ಮಾಜಿ ಪ್ರಧಾನಿಗಳಾದ ನವಾಜ್ ಷರೀಫ್ ಹಾಗೂ ಇಮ್ರಾನ್ ಖಾನ್ ಇಬ್ಬರೂ ಗೆಲವು ತಮ್ಮದೇ ಎಂದು ಈಗಾಗಲೇ ಘೋಷಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್‌ ಚುನಾವಣೆ; ಪಿಎಂಎಲ್‌-ಎನ್‌ ಅತಿ ದೊಡ್ಡ ಪಕ್ಷ?- ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದ ಮಾಜಿ ಪ್ರಧಾನಿ

  • ಸಿಎಂ ಸಿದ್ದರಾಮಯ್ಯಗೆ 10 ಸಾವಿರ ದಂಡ – ಹೈಕೋರ್ಟ್‌ ಆದೇಶ

    ಸಿಎಂ ಸಿದ್ದರಾಮಯ್ಯಗೆ 10 ಸಾವಿರ ದಂಡ – ಹೈಕೋರ್ಟ್‌ ಆದೇಶ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸೇರಿ ಕಾಂಗ್ರೆಸ್‌ ನಾಯಕರಿಗೆ (Congress Leaders) ಹೈಕೋರ್ಟ್‌ 10 ಸಾವಿರ ರೂ. ದಂಡ ವಿಧಿಸಿದೆ.

    2022ರ ಏಪ್ರಿಲ್ 14ರಂದು ರೇಸ್ ವ್ಯೂ ಹೋಟೆಲ್ ಬಳಿ ಕಾಂಗ್ರೆಸ್ ಪ್ರತಿಭಟನೆ (Protest) ನಡೆಸಿತ್ತು. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವರಾಗಿದ್ದ ಕೆ.ಎಸ್.‌ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ನಾಯಕರು ರೇಸ್‌ಕೋರ್ಸ್‌ ರಸ್ತೆಯಲ್ಲಿ ಪ್ರತಿಭಟಿಸಿದ್ದರು.  ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು – 6 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

    ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಿದ್ದರಾಮಯ್ಯ, ಸುರ್ಜೆವಾಲಾ ಸೇರಿದಂತೆ ಕಾಂಗ್ರೆಸ್‌ ನಾಯಕರಿಗೆ ದಂಡ ವಿಧಿಸಿದೆ. ಸಿದ್ದರಾಮಯ್ಯನವರಿಗೆ ಮಾರ್ಚ್‌ 6 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ.

    ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ ನಡೆಸುವಂತಿಲ್ಲ. ಪೊಲೀಸರಿಂದ ಅನುಮತಿ ಪಡೆದವರಿಗೆ ಮಾತ್ರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟಿಸಲು ಅವಕಾಶ ನೀಡಲಾಗುತ್ತದೆ. ಬೇರೆ ಕಡೆ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾದಲ್ಲಿ ಕೇಸ್‌ ಹಾಕಲಾಗುತ್ತದೆ.

  • ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು – 6 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು – 6 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಸರಣಿ ಬಾಂಬ್‌ ಸ್ಫೋಟ (Serial Bomb Blast) ಮಾಡಲು ಸಂಚು ರೂಪಿಸಿದ್ದ 6 ಜನ ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (NIA) ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.

    ಕಳೆದ ಜುಲೈನಲ್ಲಿ ಆರ್‌ಟಿ ನಗರದ ಮನೆ ಮೇಲೆ ದಾಳಿ ಮಾಡಿದ ಬೆಂಗಳೂರು ಸಿಸಿಬಿ ಪೊಲೀಸರು (CCB Police) ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಜೀವಂತ ಗ್ರೆನೇಡ್‌ ಪತ್ತೆಯಾಗಿತ್ತು. ನಂತರ ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು.

    ಶೋಧ ಕಾರ್ಯದ ವೇಳೆ ಆರೋಪಿಗಳ ಬಳಿ 7 ನಾಡ ಪಿಸ್ತೂಲ್, 45 ಜೀವಂತ ಗುಂಡು, ಗ್ರೆನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಮುಂದಾಗಿದ್ದರು ಎಂಬ ವಿಚಾರ ತನಿಖೆಯಿಂದ ಬಯಲಾಗಿತ್ತು. ಈ ಎಲ್ಲಾ ಅಂಶಗಳನ್ನು ಒಳಗೊಂಡು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: ಉಗ್ರರಿಗೆ ಆಶ್ರಯ ಕೊಟ್ಟಿದ್ದವರಿಗೆ ಶುರುವಾಯ್ತು ಸಂಕಷ್ಟ

    ಉಗ್ರರ ಮನೆಯಲ್ಲಿ ಪತ್ತೆಯಾದ ಗ್ರೆನೇಡ್‌ಗಳು
    ಉಗ್ರರ ಮನೆಯಲ್ಲಿ ಪತ್ತೆಯಾದ ಗ್ರೆನೇಡ್‌ಗಳು

    ಪೌಡರ್ ರೂಪದ ಕೆಮಿಕಲ್ ಬಳಸಿ ಪೆಟ್ಟಿಗೆಯೊಂದರಲ್ಲಿ ಆರೋಪಿಗಳು ಅಡಗಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ಬಾಂಬ್ ನಿಷ್ಟ್ರೀಯ ದಳ (BDDS) ಮತ್ತು FSL ಅಧಿಕಾರಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಸಜೀವ ಗ್ರೇನೆಡ್‌ಗಳನ್ನ ಪತ್ತೆಮಾಡಿ ವಶಪಡಿಸಿಕೊಳ್ಳಲಾಗಿತ್ತು. ಗ್ರೆನೇಡ್ (Grenade) ಮೇಲಿದ್ದ ಮೇಡ್ ಇನ್ ವಿವರವನ್ನೇ ಆರೋಪಿಗಳು ಅಳಿಸಿ ಹಾಕಿದ್ದರು. ಇದನ್ನೂ ಓದಿ: ದೇಶವನ್ನ ಇನ್ನೆಷ್ಟು ಭಾಗವಾಗಿ ಒಡೆಯುತ್ತೀರಿ: ಡಿ.ಕೆ.ಸುರೇಶ್‌ ಹೇಳಿಕೆಗೆ ಮೋದಿ ಕಿಡಿ

    ಸೆರೆ ಸಿಕ್ಕ ಶಂಕಿತರ ಉಗ್ರರ ಹಿಂದೆ ಬ್ಯಾಕ್ ಬೋನ್ ಆಗಿದ್ದ ಮಾಸ್ಟರ್ ಮೈಂಡ್ ಜುನೈದ್ ವಿದೇಶದಲ್ಲಿದ್ದುಕೊಂಡೇ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದವರನ್ನು ಸಾಕುತ್ತಿದ್ದ, ಬೆಂಗಳೂರಿನಲ್ಲಿದ್ದವರಿಗೆ ಲಕ್ಷ ಲಕ್ಷ ರೂ. ಫಂಡಿಂಗ್ ಮಾಡ್ತಿದ್ದ. ಜೊತೆಗೆ ಏನೇನು ಮಾಡಬೇಕು ಅಂತಾ ಟ್ರೈನಿಂಗ್ ಕೊಡ್ತಿದ್ದ. ಅದಕ್ಕಾಗಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೃತ್ಯ ಎಸಬೇಕು ಅನ್ನೋದರ ನೀಲನಕ್ಷೆಯನ್ನೂ (ಬ್ಲೂ ಪ್ರಿಂಟ್) ಸಿದ್ಧ ಮಾಡಿಕೊಂಡಿದ್ದ

    ಜುನೈದ್ ಕೊಡುವ ಮಾರ್ಗದರ್ಶನದಂತೆ ಸಿಲಿಕಾನ್ ಸಿಟಿಯಲ್ಲಿ ಶಂಕಿತರು ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು. ನಗರದಲ್ಲಿ 10ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿಕೊಂಡಿದ್ದರು. ಸಿಸಿಬಿ ಪೊಲೀಸರು ಎರಡು ಮೂರು ದಿನ ತಡ ಮಾಡಿದ್ದರೇ ಬೆಂಗಳೂರಿನ ಕೆಲವು ಕಡೆ ಸ್ಫೋಟಗೊಳಿಸಲು ತಯಾರಿ ಮಾಡಿಕೊಂಡಿದ್ದ ವಿಚಾರ ತನಿಖೆಯಿಂದ ಬಯಲಾಗಿತ್ತು.

  • ಕಾನೂನುಬಾಹಿರ ವಿವಾಹ – ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದಂಪತಿಗೆ 7 ವರ್ಷ ಜೈಲು

    ಕಾನೂನುಬಾಹಿರ ವಿವಾಹ – ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದಂಪತಿಗೆ 7 ವರ್ಷ ಜೈಲು

    ಇಸ್ಲಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತು ಅವರ ಪತ್ನಿ ಬುಶ್ರಾ ಖಾನ್ (Bushra Khan) ಅವರ ವಿವಾಹವು ಕಾನೂನುಬಾಹಿರ ಎಂದು ತೀರ್ಪು ನೀಡಿರುವ ನ್ಯಾಯಾಲಯವು (Court), ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.

    ಅಲ್ಲದೇ ಗುರುವಾರ ರಾಷ್ಟ್ರೀಯ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಈಗಾಗಲೇ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದ ರಹಸ್ಯಗಳನ್ನು ಸೋರಿಕೆ ಮಾಡಿದ್ದಕ್ಕಾಗಿ 10 ವರ್ಷಗಳು ಮತ್ತು ಅಕ್ರಮವಾಗಿ ರಾಜ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅವರ ಪತ್ನಿಯೊಂದಿಗೆ 14 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಇಬ್ಬರಿಗೂ ತಲಾ 5,00,000 ರೂ. (ಪಾಕಿಸ್ತಾನ ರೂಪಾಯಿ) ದಂಡ ವಿಧಿಸಲಾಗಿದೆ. ಇದನ್ನೂ ಓದಿ: 6 ತಿಂಗಳಿಂದ ಪಾಕ್‌ನ ಹಾಕಿ ಆಟಗಾರರಿಗಿಲ್ಲ ಸಂಬಳ – ಮ್ಯಾನೇಜ್‌ಮೆಂಟ್‌ನೊಂದಿಗೆ ಆಟಗಾರರ ಸಂಘರ್ಷ

    ಬುಶ್ರಾ ತನ್ನ ಹಿಂದಿನ ಪತಿಗೆ ವಿಚ್ಛೇದನ ನೀಡಿದ ನಂತರ ಮತ್ತು ಖಾನ್ ಅವರನ್ನು ವಿವಾಹವಾದ ನಂತರ `ಇದ್ದತ್’ ಎಂದು ಕರೆಯಲ್ಪಡುವ ಇಸ್ಲಾಂನಿಂದ ಕಡ್ಡಾಯವಾದ ಕಾಯುವ ಅವಧಿಯನ್ನು ಪೂರ್ಣಗೊಳಿಸಲಿಲ್ಲ ಎಂದು ಆರೋಪಿಸಲಾಗಿತ್ತು. ಈ ಆರೋಪಗಳನ್ನು ಖಾನ್ ದಂಪತಿ ನಿರಾಕರಿಸಿದ್ದರು. ವಿಚಾರಣೆ ವೇಳೆ ಇದೀಗ ಆರೋಪ ಸಾಬೀತಾಗಿದೆ.

    ಇಮ್ರಾನ್ ಖಾನ್ ಅವರು ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯಲ್ಲಿ ಜೈಲಿನಲ್ಲಿದ್ದಾರೆ. ಅವರ ಪತ್ನಿ ಇಸ್ಲಾಮಾಬಾದ್‍ನಲ್ಲಿರುವ ಅವರ ಭವನದಲ್ಲಿ ಶಿಕ್ಷೆಯನ್ನು ಅನುಭವಿಸಲು ಅನುಮತಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತೀಯ ಮೂಲದ ವಿದ್ಯಾರ್ಥಿ ಅಮೆರಿಕಾದಲ್ಲಿ ಸಾವು- ಜನವರಿಯಿಂದ ಇದು ನಾಲ್ಕನೇ ಕೇಸ್