ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ (Pune) ಅಪ್ರಾಪ್ತನ ನಿರ್ಲಕ್ಷ್ಯಕ್ಕೆ ಇಬ್ಬರ ಜೀವ ಬಲಿ ಪಡೆದಿದೆ. ಈ ಪ್ರಕರಣದಲ್ಲಿ ಅಪ್ರಾಪ್ತನಿಗೆ ಜಾಮೀನು (Bail) ನೀಡುವ ಸಮಯದಲ್ಲಿ ಕೋರ್ಟ್ (Court) ವಿಧಿಸಿದ ಷರತ್ತು ಚರ್ಚೆಗೆ ಗ್ರಾಸವಾಗಿದೆ.
ಭಾನುವಾರ ರಾತ್ರಿ ಪ್ರತಿಷ್ಠಿತ ಬಿಲ್ಡರ್‌ನ 17 ವರ್ಷದ ಪುತ್ರನೊಬ್ಬ ಮದ್ಯದ ಅಮಲಿನಲ್ಲಿ ಐಷಾರಾಮಿ ಪೋರ್ಶೆ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಇಬ್ಬರ ಟೆಕ್ಕಿಗಳನ್ನ ಬಲಿ ಪಡೆದಿದ್ದ.
#Pune Porsche Accident: CCTV footage captures a speeding Porsche just before the accident in Kalyani Nagar. pic.twitter.com/q3N2yk4uyM
ಆರೋಪಿಯನ್ನು ಬಂಧಿಸಿದ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಸಂದರ್ಭದಲ್ಲಿ ಅಪಘಾತದ ಬಗ್ಗೆ ಪ್ರಬಂಧ ಬರೆಯಬೇಕು. 15 ದಿನ ಟ್ರಾಫಿಕ್ ಪೊಲೀಸರ ಜೊತೆ ಕೆಲಸ ಮಾಡಬೇಕು. ಮಾನಸಿಕ ತಜ್ಞರಿಂದ ಕೌನ್ಸಿಲಿಂಗ್ ತೆಗೆದುಕೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಿದೆ. ಇದನ್ನೂ ಓದಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಗೌರವಾರ್ಥ ಮಂಗಳವಾರ ಭಾರತದಲ್ಲಿ ಶೋಕಾಚರಣೆ
ಇದು ಭಾರೀ ಚರ್ಚೆಗೆ ಗುರಿಯಾಗಿದೆ. ಇಬ್ಬರ ಸಾವಿಗೆ ಇದೇನಾ ನ್ಯಾಯ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರಿಗೆ ಅವರಿಗೆ ರಿಲೀಫ್ ಸಿಕ್ಕಿದ್ದು ಕೋರ್ಟ್ ಜಾಮೀನು (Bail) ಮಂಜೂರು ಮಾಡಿದೆ.
ಕಿಡ್ನಾಪ್ ಕೇಸ್‍ನಲ್ಲಿ ಈಗಾಗಲೇ ಮಧ್ಯಂತರ ಜಾಮೀನು ಮಂಜೂರು ಆಗಿತ್ತು. ಈಗ 42 ಎಸಿಎಎಂ ಕೋರ್ಟ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ನೀಡಿದೆ.
5 ಲಕ್ಷ ರೂ. ಬಾಂಡ್, ಇಬ್ಬರು ಶ್ಯೂರಿಟಿ, ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ.
ಏನಿದು ಪ್ರಕರಣ?
ರೇವಣ್ಣ ಮತ್ತು ಅವರ ಪುತ್ರ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 28 ರಂದು 47 ವರ್ಷದ ಮನೆಯ ಸಹಾಯಕಿಯು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು
ಶಾಸಕರ ನಿವಾಸದಲ್ಲಿ ತಂದೆ ಮತ್ತು ಮಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಈ ಪ್ರಕರಣದಲ್ಲಿ ರೇವಣ್ಣ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿದ್ದರು.
ಬೆಂಗಳೂರು: ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (Kidnap Case) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣಗೆ (HD Revanna) ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೋರ್ಟ್ ಜಾಮೀನು ಮಂಜೂರು (Bail) ಮಾಡುವ ನಿರ್ಧಾರಕ್ಕೆ ಬಂದಿದ್ದು ಯಾಕೆ ಎನ್ನುವುದನ್ನು ಕೋರ್ಟ್ ತನ್ನ ಆದೇಶದಲ್ಲಿ ಹಲವು ಕಾರಣಗಳನ್ನು ನೀಡಿದೆ.
ಕೋರ್ಟ್ ಆದೇಶದಲ್ಲಿ ಏನಿದೆ?
ಮಹಿಳೆಗೆ ಆರೋಪಿಯಿಂದ ತೊಂದರೆಯಿದೆ, ಜೀವ ಭಯ ಇದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಗಳು ಇಲ್ಲ. ಪ್ರಕರಣ ದಾಖಲಾಗುವ ಮೊದಲೇ ಎ2 ಆರೋಪಿ ಸತೀಶ್ ಬಾಬುವನ್ನು ವಶಕ್ಕೆ ಪಡೆದಿದ್ದು ಅನುಮಾನಸ್ಪದವಾಗಿದೆ. ಐಪಿಸಿ ಸೆಕ್ಷನ್ 364 ಎ (ಬೆದರಿಸಿ ಅಪಹರಣ) ಅನ್ವಯವಾಗುವ ಪೂರಕವಾದ ಯಾವುದೇ ಸಾಕ್ಷಿಗಳು ಇಲ್ಲ.
ಸಂತ್ರಸ್ತೆಯ 164 ಹೇಳಿಕೆಯನ್ನು (ನ್ಯಾಯಾಧೀಶರ ಮುಂದೆ ನೀಡುವ ಹೇಳಿಕೆ) ಪಡೆಯಬೇಕಿದೆ ಎಂದು ಆರೋಪಿಯ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ 161 ಹೇಳಿಕೆಯನ್ನು (ತನಿಖಾಧಿಕಾರಿ ಮುಂದೆ ಹೇಳಿಕೆ) ಯಾವಾಗ ದಾಖಲು ಮಾಡಿದ್ದಾರೆ ಎಂದು ಉಲ್ಲೇಖ ಮಾಡಿಲ್ಲ
ಸಂತ್ರಸ್ತೆಯ 164 ಹೇಳಿಕೆ ದಾಖಲು ಮಾಡಲು ತಡವಾಗಿದ್ದು ಯಾಕೆ ಎಂಬುದನ್ನು ತಿಳಿಸಲು ಎಸ್‌ಐಟಿ (SIT) ಸಫಲವಾಗಿಲ್ಲ. ಸಂತ್ರಸ್ತ ಮಹಿಳೆಗೆ ಜೀವ ಬೆದರಿಕೆ ಅಥವಾ ಯಾವುದೇ ಬೇಡಿಕೆ ಕೇಳಿರುವುದಕ್ಕೆ ಪೂರಕ ಸಾಕ್ಷ್ಯಗಳು ಇಲ್ಲ
ಇಡೀ ಪ್ರಕರಣದಲ್ಲಿ 364 ಎ ಅಳವಡಿಕೆಗೆ ಪೂರಕವಾದ ಸಾಕ್ಷ್ಯಗಳು ಇಲ್ಲ. ಮಗನನ್ನು ರಕ್ಷಣೆ ಮಾಡಿದ್ದಾರೆ. ಅದಕ್ಕೆ ಈ ಕೃತ್ಯವನ್ನು ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳನ್ನು ಎಸ್‌ಐಟಿ ಒದಗಿಸಿಲ್ಲ.
2019 ರ ಚುನಾವಣಾ ಅಕ್ರಮದ ಬಗ್ಗೆ ಇಲ್ಲಿ ಉಲ್ಲೇಖಸಿದ್ದಾರೆ. ಆದರೆ ಆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ಇದೆ ಹೀಗಾಗಿ ಆ ವಿಚಾರ ಮಾನ್ಯ ಮಾಡಲು ಸಾಧ್ಯವಿಲ್ಲ. ಇಲ್ಲಿ ಗಂಭೀರವಾದ ಆರೋಪ ಇರುವುದು ಪ್ರಜ್ವಲ್ ರೇವಣ್ಣ ಮೇಲೆ ಹೊರತು ರೇವಣ್ಣ ಮೇಲೆ ಅಲ್ಲ.
ಹಾಸನ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ್ ಗೌಡ ಹಾಗೂ ಚೇತನ್ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು(Bail Application) ನ್ಯಾಯಾಲಯ ವಜಾಗೊಳಿಸಿದೆ.
ಹಾಸನದ ಒಂದನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯ (Court) ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ. ಮೇ 12ರಂದು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ (Prndrive Case) ಸಂಬಂಧಿಸಿ ಲಿಖಿತ್ ಹಾಗೂ ಚೇತನ್‌ರನ್ನು ಎಸ್‌ಐಟಿ (SIT) ಪೊಲೀಸರು ವಶಕ್ಕೆ ಪಡೆದಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೆನ್‌ಡ್ರೈವ್ ಇಟ್ಟುಕೊಂಡಿದ್ದ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಜೈಲುವಾಸದಿಂದ ಮುಕ್ತಿ- ಪರಪ್ಪನ ಅಗ್ರಹಾರದಿಂದ ಹೊರಬಂದ ರೇವಣ್ಣ
ಬೆಂಗಳೂರು: ಮ್ಯಾರಥಾನ್ ವಿಚಾರಣೆಯ ಬಳಿಕ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (Kidnap Case) ಮಾಜಿ ಸಚಿವ ಹೆಚ್‌ಡಿ ರೇವಣ್ಣಗೆ (HD Revanna) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿದ್ದ ಪೀಠ 5 ಲಕ್ಷ ಬಾಂಡ್, ಇಬ್ಬರು ಶ್ಯೂರಿಟಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಎಸ್‌ಐಟಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತು.
ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಕೋರ್ಟ್ ಸುಧೀರ್ಘ ವಿಚಾರಣೆ ನಡೆಸಿತು. ವಿಶೇಷ ತನಿಖಾ ತಂಡ (SIT) ಪರ ವಕೀಲರು ರೇವಣ್ಣ ಪ್ರಭಾವಿಯಾಗಿದ್ದು ಸಾಕ್ಷ್ಯ ನಾಶ ಮಾಡುವ ಆತಂಕವಿದೆ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದರು.
ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಇದ್ದರೆ ಜಾಮೀನು ತಿರಸ್ಕರಿಸಬಹುದು. ಆದರೆ ನನ್ನ ಕಕ್ಷಿದಾರ ರೇವಣ್ಣ ಪ್ರಕರಣದಲ್ಲಿ ಇಲ್ಲಿ ಯಾವುದೇ ಸತ್ಯ ಮತ್ತು ಸಾಂದರ್ಭಿಕ ಸಾಕ್ಷಿಗಳಿಲ್ಲ. ರೇವಣ್ಣ ಮನೆಯಲ್ಲಿ ಮಹಿಳೆ 10 ವರ್ಷ ಕೆಲಸ ಮಾಡಿದ್ದಾರೆ. ಹೀಗಾಗಿ ಯಾವುದೇ ಅಪಹರಣ ಮಾಡಿಲ್ಲ. ಜಾಮೀನು ನೀಡಬಹುದು ಎಂದು ವಕೀಲ ನಾಗೇಶ್ ವಾದಿಸಿದರು.
ಎರಡು ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಸಂಜೆ 4 ಗಂಟೆಗೆ ವಿಚಾರಣೆ ಪೂರ್ಣಗೊಳಿಸಿ ಸಂಜೆ 6:30ಕ್ಕೆ ಆದೇಶ ಪ್ರಕಟಿಸಿದರು.
ಮೇ 8 ರಂದು ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ 7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಈ ಆದೇಶದ ಅನ್ವಯ ರೇವಣ್ಣ ಪರಪ್ಪನ ಅಗ್ರಹಾರಕ್ಕೆ ವಿಚಾರಣಾಧೀನ ಕೈದಿಯಾಗಿ ಹೋಗಿದ್ದರು. ಮಂಗಳವಾರ ಸಂಜೆ ರೇವಣ್ಣ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಬೆಂಗಳೂರು: ಜಾಮೀನು ಸಿಗುವ ನಿರೀಕ್ಷೆಯಲ್ಲಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna) ಅವರು ಸದ್ಯ ಟೆನ್ಶನ್ ಆಗಿದ್ದಾರೆ
ಕಿಡ್ನಾಪ್ ಕೇಸ್‍ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Parappana Agrahara Jail) ರೇವಣ್ಣ ಅವರು ಇಂದು ಮುಂಜಾನೆ 4.30ಕ್ಕೆ ನಿದ್ರೆಯಿಂದ ಎದ್ದು ಜೈಲಿನ ಬ್ಯಾರಕ್ ನಲ್ಲಿ ಕೆಲ ಹೊತ್ತು ವಾಕಿಂಗ್ ಮಾಡಿದ್ದಾರೆ. ಬಳಿಕ ಜೈಲ್ ಸಿಬ್ಬಂದಿ ಕಾಫಿ ನೀಡಿದ್ದಾರೆ. ಕಾಫಿ ಕುಡಿದ ಬಳಿಕ ದಿನಪತ್ರಿಕೆಯಲ್ಲಿನ ವಿದ್ಯಮಾನಗಳ ಕಡೆ ಕಣ್ಣಾಡಿಸಿದ್ದಾರೆ. ಜೈಲಿನ ಮೇನು ಪ್ರಕಾರ ಸಿಬ್ಬಂದಿ ಇಂದು ಉಪ್ಪಿಟ್ಟು ನೀಡಿದ್ದಾರೆ.
ಕಳೆದ ಐದು ದಿನಗಳಿಂದ ರೇವಣ್ಣ (HD Revanna) ಜೈಲಿನಲ್ಲಿದ್ದಾರೆ. ಒಬ್ಬ ಸಾಮಾನ್ಯ ವಿಚಾರಣಾಧೀನ ಬಂಧಿಯಂತೆ ದಿನ ಕಳೆಯುತ್ತಿದ್ದು, ಇಂದು ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಬೇಲ್ ಸಿಕ್ರೆ ಬಿಡುಗಡೆ ಭಾಗ್ಯ, ಇಲ್ಲ ಅಂದ್ರೆ ಜೈಲಿನಲ್ಲಿ ಸೆರೆವಾಸ ಮುಂದುವರಿಕೆಯಾಗಲಿದೆ. ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾಯಿಸಿ: ಮೋದಿ ಕರೆ
ಸಂತ್ರಸ್ತೆ ಕಿಡ್ನಾಪ್ ಸಂಬಂಧ ಹೆಚ್.ಡಿ ರೇವಣ್ಣ ಹಾಗೂ ಸತೀಶ್ ಬಾಬಣ್ಣ ವಿರುದ್ಧ ಕೆ.ಆರ್ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ರೇವಣ್ಣ ಮೊದಲನೇ ಆರೋಪಿಯಾಗಿದ್ದಾರೆ. ಕಿಡ್ನಾಪ್ ಪ್ರಕರಣದ ತನಿಖೆ ನಡೆಸುತ್ತಿರೋ ಎಸ್‍ಐಟಿ, ರೇವಣ್ಣರನ್ನ ನಾಲ್ಕು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ. ವಿಚಾರಣೆ ಬಳಿಕ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಎಸ್ ಪಿಪಿ ಜೈನಾ ಕೊಥಾರಿ ಹಾಗೂ ಆಶೋಕ್ ನಾಯಕ್ ಅವರು ಎಸ್‍ಐಟಿ ಪರ ವಾದ ಮಂಡಿಸಲಿದ್ದು, ಇತ್ತ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ರೇವಣ್ಣ ಪರ ವಾದ ಮಂಡಿಸಲಿದ್ದಾರೆ. ಈಗಾಗಲೇ ಜಾಮೀನಿಗೆ ಎಸ್‍ಐಟಿ ಆಕ್ಷೇಪಣೆ ಸಲ್ಲಿಸಿದೆ. ಮಾಜಿ ಸಚಿವರು ಕಳೆದ ಬುಧವಾರ ಪರಪ್ಪನ ಆಗ್ರಹಾರ ಜೈಲು ಸೇರಿದ್ದರು. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ರೇವಣ್ಣಗೆ ಜೈಲಿನಿಂದ ಮುಕ್ತಿ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು: ಕಿಡ್ನಾಪ್ ಪ್ರಕರಣದಲ್ಲಿ (Kidnap Case) ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಹೆಚ್. ಡಿ ರೇವಣ್ಣ (HD Revanna) ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.
ಪ್ರಕರಣ ಸಂಬಂಧ ಮಾಜಿ ಸಚಿವರು ಏಳು ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ಕೋರ್ಟ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ. ಎಸ್ ಪಿಪಿ ಜೈನಾ ಕೊಥಾರಿ ಹಾಗೂ ಆಶೋಕ್ ನಾಯಕ್ ಅವರು ವಿಶೇಷ ತನಿಖಾ ತಂಡ (SIT) ಪರ ವಾದ ಮಂಡಿಸಲಿದ್ದು, ಇತ್ತ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ರೇವಣ್ಣ ಪರ ವಾದ ಮಂಡಿಸಲಿದ್ದಾರೆ. ಈಗಾಗಲೇ ಜಾಮೀನಿಗೆ ಎಸ್‍ಐಟಿ ಆಕ್ಷೇಪಣೆ ಸಲ್ಲಿಸಿದೆ.
ಸಂತ್ರಸ್ತೆ ಕಿಡ್ನಾಪ್ ಸಂಬಂಧ ಹೆಚ್.ಡಿ ರೇವಣ್ಣ ಹಾಗೂ ಸತೀಶ್ ಬಾಬಣ್ಣ ವಿರುದ್ಧ ಕೆ.ಆರ್ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ರೇವಣ್ಣ ಮೊದಲನೇ ಆರೋಪಿಯಾಗಿದ್ದಾರೆ. ಕಿಡ್ನಾಪ್ ಪ್ರಕರಣದ ತನಿಖೆ ನಡೆಸುತ್ತಿರೋ ಎಸ್‍ಐಟಿ, ರೇವಣ್ಣರನ್ನ ನಾಲ್ಕು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ. ವಿಚಾರಣೆ ಬಳಿಕ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಮನೆಮುಂದೆ ಗುಂಡಿನ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡು ಅವರನ್ನು ವಿಚಾರಣೆ ಮಾಡಲಾಗುತ್ತಿತ್ತು. ಈ ವೇಳೆ ಅನುಜ್ ಥಾಪಸ್ (Anuj Thapas) ಎಂಬ ವ್ಯಕ್ತಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಜ್ ಕುಟುಂಬ ಮುಂಬೈ ಹೈಕೋರ್ಟ್ (Court) ಮೆಟ್ಟಿಲು ಏರಿದ್ದರು. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಮಗನು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಅವರು ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಠಾಣೆಯಲ್ಲಿನ ಸಿಸಿಟಿವಿ ವಿಡಿಯೋವನ್ನು ಒಪ್ಪಿಸುವಂತೆ ಮತ್ತು ಹೊಸದಾಗಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಥಾಪನ್ ಠಾಣೆಯ ಪೊಲೀಸರ ಹಿಂಸೆಯಿಂದಾಗಿ ತಾವು ಮಗನನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ ಪೋಷಕರು.
ಏನಿದು ಪ್ರಕರಣ
ಸಲ್ಮಾನ್ ಮನೆ ಮುಂದಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಗುಂಡಿನ ದಾಳಿ ಮಾಡಿದವರನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಗನ್ ಅನ್ನು ನದಿಯಲ್ಲಿ ಬೀಸಾಕಿದ್ದನ್ನು ಪತ್ತೆ ಹಚ್ಚಿ, ಗನ್ ಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆಮೇಲೆ ಗನ್ ಸಪ್ಲೈ ಮಾಡಿದವರನ್ನೂ ಪೊಲೀಸರು ಬಂಧಿಸಿದ್ದರು.
ಗುಂಡಿನ ದಾಳಿ ನಡೆಸಿದ ಆರೋಪಿಗಳಿಗೆ ಗನ್ ಸರಬರಾಜು ಮಾಡಿದ್ದು ಸುಭಾಷ್ ಚಂದರ್ ಮತ್ತು ಅನುಜ್ ಥಾಪಸ್ ಎಂದು ಗೊತ್ತಾಗಿತ್ತು. ಈ ಇಬ್ಬರನ್ನೂ ಪಂಜಾಬ್ (Punjab) ನಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. ಮಾರ್ಚ್ 15ರಂದು ಆರೋಪಿಗಳಿಗೆ ಇವರು ಪಿಸ್ತೂಲ್ ಮತ್ತು ಕಾಟ್ರಿಜ್ ಗಳನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದರು. ಈ ಇಬ್ಬರು ವ್ಯಕ್ತಿಗಳಲ್ಲಿ ಅನುಜ್ ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ನಡುವೆ ಮುಂಬೈ ಪೊಲೀಸರಿಂದ ಮತ್ತೊಂದು ಆತಂಕಕಾರಿ ವಿಷಯ ಬಹಿರಂಗವಾಗಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮನೆಯಿಂದ ಕ್ಯಾಬ್ ಬುಕ್ ಮಾಡಿದ್ದಕ್ಕಾಗಿ ಯುವಕನನ್ನು ಬಂಧಿಸಲಾಗಿದೆ. ಆರೋಪಿ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನ 20 ವಯಸ್ಸಿನ ರೋಹಿತ್ ತ್ಯಾಗಿ. ಆರೋಪಿಯು, ನಟ ಸಲ್ಮಾನ್ ಖಾನ್ ಮನೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಿಂದ ಬಾಂದ್ರಾ ಪೊಲೀಸ್ ಠಾಣೆಗೆ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣ ಸಂಬಂಧ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಸುಮಾರು 2 ಗಂಟೆಗಳ ವಿಚಾರಣೆ ನಡೆಸಿದ ಕೋರ್ಟ್ ಕೆಲ ಕಾಲ ತೀರ್ಪು ಕಾಯ್ದಿರಿಸಿತು. ಬಳಿಕ ಸಂಜೆ 6.25ರ ಸುಮಾರಿಗೆ ಆದೇಶ ಪ್ರಕಟಿಸಿತು. ಜೊತೆಗೆ ಮೇ 6 ಕ್ಕೆ ವಿಚಾರಣೆ ಮುಂದೂಡಿದೆ. ಈ ಮೂಲಕ ರೇವಣ್ಣ ಅವರಿಗೆ ರಿಲೀಫ್ ಸಿಕ್ಕಿಲ್ಲ.
ರೇವಣ್ಣ ಪರ ವಕೀಲರು ಹೇಳಿದ್ದೇನು..?: ಪ್ರಕರಣ ಗಂಭೀರತೆ ವಿಚಾರವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆಗೆ ಎಸ್ ಪಿ ಪಿ ಜಗದೀಶ್ ಮನವಿ ಮಾಡಿದರು. ಇದಕ್ಕೆ ರೇವಣ್ಣ ಪರ ವಕೀಲ ಮೂರ್ತಿ ನಾಯ್ಕ್ ಆಕ್ಷೇಪಣೆ ವ್ಯಕ್ತಪಡಿಸಿದರು. ನಿರ್ದಿಷ್ಟ ಪ್ರಕರಣಗಳಿಗೆ ಮಾತ್ರ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸುವುದಾಗಿದೆ ಆದರೆ ಇಲ್ಲಿ ಅಂತಹ ದೊಡ್ಡ ಪ್ರಕರಣ ಏನಿಲ್ಲ ಎಂದು ತಿಳಿಸಿದರು.
ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಇದ್ದಾರೆ ಎಂದು ಆರೋಪಿಸಿ ವಾದ ಮುಂದುವರಿಸಿದ ರೇವಣ್ಣ ಪರ ವಕೀಲರು, FIR ಅಲ್ಲಿ ಇರುವ ಸಾರಾಂಶದ ಬಗ್ಗೆ ವಿವರಣೆ ನೀಡಿದ್ದಾರೆ. ಪ್ರಕರಣವನ್ನು ಅನಗತ್ಯವಾಗಿ ವಿಜೃಂಭಿಸಲು SIT ಪ್ರಯತ್ನ ಮಾಡುತ್ತಿದೆ. ಈ ಪ್ರಕರಣದಲ್ಲಿ ನಾವು ಏನನ್ನೂ ಮುಚ್ಚಿಡುವ ಅಗತ್ಯವಿಲ್ಲ. ಸತೀಶ್ ಹೇಳಿಕೆ ಮತ್ತು ಎಫ್ ಐ ಆರ್ ಅಲ್ಲಿ ಇರುವ ಅಂಶಗಳಿಗು ವ್ಯತ್ಯಾಸ ಇದೆ. ನಿನ್ನೆ ಎಫ್ ಐ ಆರ್ ಮಾಡ್ತಾರೆ. ಇಂದು ವಿಚಾರಣೆಗೆ ಬನ್ನಿ ಅಂತಾರೆ ಅದರಿಂದಲೇ ಎಸ್ ಐಟಿ ಉದ್ದೇಶ ಏನು ಅಂತ ಗೊತ್ತಾಗ್ತಾ ಇದೆ. ಇವತ್ತು ಶನಿವಾರ ಬೇರೆ ವಿಚಾರಣೆಗೆ ಕರೆಸಿ ಬಲವಂತದ ಕ್ರಮ ಮಾಡಿದ್ರೆ ಎಂಬುದೇ ಆತಂಕವಾಗಿದೆ. ದೂರುದಾರನ ಹೇಳಿಕೆ ಬಿಟ್ಟರೆ ಬೇರೆ ಏನೂ ಇಲ್ಲ. ತಡರಾತ್ರಿ ತರಾತುರಿಯಲ್ಲಿ ಎಫ್ಐಆರ್ ದಾಖಲಾಗಿದೆ. ನಾನ್ ಬೇಲೆಬಲ್ ಸೆಕ್ಷನ್ ಹಾಕಿ ಎಫ್ಐಆರ್ ದಾಖಲು ಮಾಡಿದ್ದಾರೆ. ಅಲ್ಲದೇ ತಕ್ಷಣ ಮತ್ತೆ 41 A ಯಲ್ಲಿ ನೊಟೀಸ್ ನೀಡಿದ್ದಾರೆ. ನಿನ್ನೆ ನಾನ್ ಬೇಲೆಬಲ್ ಸೆಕ್ಷನ್ ಹಾಕಿಲ್ಲ ಅಂದಿದ್ರು. ಆದರೆ ರಾತ್ರಿ ಇನ್ನೊಂದು ನಾನ್ ಬೇಲೆಬಲ್ ಸೆಕ್ಷನ್ FIR ಹಾಕಿದ್ದಾರೆ. ಅಲ್ಲದೇ ಇವತ್ತು ಶನಿವಾರ ಅಂತಾ ನೋಡಿಕೊಂಡು ನೊಟೀಸ್ ನೀಡಿದ್ದಾರೆ ಎಂದು ರೇವಣ್ಣ ಪರ ವಕೀಲ ಕೆಲ ನ್ಯಾಯಾಲಯದ ಆದೇಶಗಳನ್ನು ವಿವರಿಸಿದರು.
ಕಿಡ್ನಾಪ್ ಪ್ರಕರಣ ಆಗಬೇಕಾದರೆ ಹಲ್ಲೆ, ಹಣಕ್ಕೆ ಬೇಡಿಕೆ ಇರಬೇಕು. ಈ ಪ್ರಕರಣದಲ್ಲಿ ಈ ರೀತಿಯಲ್ಲಿ ನಡೆದೇ ಇಲ್ಲ. ಹೀಗಾಗಿ ಕಿಡ್ನಾಪ್ ಸೆಕ್ಷನ್ ಅಪ್ಲೈ ಆಗುವುದೇ ಇಲ್ಲ. 365 ಕೂಡ 7 ವರ್ಷ ಶಿಕ್ಷೆ & ದಂಡದ ಬಗ್ಗೆ ಹೇಳತ್ತೆ.. ಇದು ಬೇಲೆಬಲ್. ಆದರೆ ಇಲ್ಲಿ 364A ಹಾಕಲಾಗಿದೆ. ಈ ಸೆಕ್ಷನ್ ಡೆತ್ ಸೆಂಟೆನ್ಸ್ ವರೆಗೂ ಶಿಕ್ಷೆ ಆಗಿರುತ್ತದೆ. ಆದರೆ ಇಲ್ಲಿ ರೇವಣ್ಣ ವಿರುದ್ಧ ಅಂತ ಗಂಭೀರ ಆರೋಪಗಳು ಇಲ್ಲ. ಬೇರೆ ಆರೋಪಿ ಹೇಳಿದ್ದಾರೆ ಅನ್ನೋ ಅಂಶಕ್ಕೆ ಈ ರೀತಿ ಹಾಕಲಾಗಿದೆ. ರೇವಣ್ಣ ವಿರುದ್ಧ ಕಿಡ್ನಾಪ್ ಆರೋಪಕ್ಕೆ ಯಾವುದೆ ಸಾಕ್ಷಿ ಇಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ಪ್ರಜ್ವಲ್ ಅಂತಹ ಸ್ವಭಾವದ ಹುಡುಗ ಅಲ್ಲ: ಜಿ.ಎಸ್ ಬಸವರಾಜ್
ಆರೋಪಿ ಪ್ರಭಾವಿಯಾಗಿದ್ದು, ಯಾವುದೇ ಹಂತಕ್ಕೂ ಹೋಗಿ ತಿರುಚಬಹುದು ಅಂತಾ ಬರೆಯಲಾಗಿದೆ. ಲೀಗಲ್ ಸಿಸ್ಟಮ್ ನೇ ಅವರ ತಿರುಚಬಹುದೆಂದು ಉಲ್ಲೇಖಿಸಿದ್ದಾರೆ. ಮತ್ತೊಬ್ಬ ಆರೋಪಿ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇವರು ರೇವಣ್ಣನ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೋ, ಅವರ ಪುತ್ರನ ಬಗ್ಗೆಯೋ.? ಎಂದು ಎಸ್ಐಟಿ ಆಕ್ಷೇಪಣೆಗೆ ರೇವಣ್ಣ ಪರ ವಕೀಲರು ಪ್ರತಿವಾದ ಮಂಡಿಸಿದರು. ಇವರು ಆಕ್ಷೇಪಣೆ ರೇವಣ್ಣನ ಬಗ್ಗೆ ಸಲ್ಲಿಸಬೇಕಿತ್ತು. ಆದರೆ ಇಲ್ಲಿ ಪ್ರಜ್ವಲ್ ರೇವಣ್ಣ ಬಗ್ಗೆ ಉಲ್ಲೇಖಿಸಿದ್ದಾರೆ. ಅಲ್ಲದೇ ಆ ಪ್ರಕರಣಕ್ಕೂ ಇದಕ್ಕೂ ಲಿಂಕ್ ಇದೆ ಎಂದಿದ್ದಾರೆ. ಇಲ್ಲಿ ಇದು ಹೇಗೆ ಅಪ್ಲೇ ಆಗತ್ತೆ ಎಂದು ರೇವಣ್ಣ ಪರ ವಕೀಲರು ವಾದಿಸಿದರು.
ಪೊಲೀಸ್ರು ಸರ್ಕಾರದ ಏಜೆಂಟ್ ಗಳಲ್ಲ. ಅದನ್ನ ಬಳಸಿ ಆರೋಪಿಗೆ ಕಿರುಕುಳ, ಟಾರ್ಚರ್ ಮಾಡುವಂತಿಲ್ಲ. ಈ ಅಂಶಗಳ ಆಧಾರದ ಮೇಲೆ ಆಗ ನಿರೀಕ್ಷಣಾ ಜಾಮೀನನ್ನ ನೀಡಿತ್ತು. ಸುಪ್ರೀಂ ಕೋರ್ಟ್ ನ ಆದೇಶದ ಅಂಶಗಳ ಉಲ್ಲೇಖ ಮಾಡಿ, ಈ ಪ್ರಕರಣದಲ್ಲಿ ಹೀಗೆ ಆಗುತ್ತಾ ಇಲ್ಲ ಎಂದು ಹೇಳಿದರು. ಇದೇ ವೇಳೆ ಬಂಧನದ ರಕ್ಷಣೆ ಕೋರಿದ ರೇವಣ್ಣ ಪರ ವಕೀಲರು, ಜಾಮೀನು ನೀಡಿದ್ರೆ ಒಂದು ಒಂದು ಕ್ಷಣ ಹೆಚ್‌ಚೂ, ಕಡಿಮೆ ಆಗದಂತೆ 5:30ಕ್ಕೆ ಎಸ್ ಐಟಿ ಮುಂದೆ ಇರ್ತಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಪ್ರಕರಣ ಇದೆ ಸರಿ. ಆದರೆ ಕಿಡ್ನ್ಯಾಫ್ ಪ್ರಕರಣದಲ್ಲಿ ಪ್ರಜ್ವಲ್ ಆರೋಪಿ ಅಲ್ಲ. ಎಲ್ಲರ ಗಮನ ಪ್ರಜ್ವಲ್ ರೇವಣ್ಣ ಮೇಲಿದೆ. ರೇವಣ್ಣಗೆ ಜಾಮೀನು ನೀಡಿ ಎಂದು ಕೋರ್ಟ್‌ಗೆ ರೇವಣ್ಣ ಪರ ವಕೀಲ ಮೂರ್ತಿ ಡಿ ನಾಯ್ಕ್ ಮನವಿ ಮಾಡಿಕೊಂಡರು.
ಎಸ್‌ಐಟಿ ಪರ ವಕೀಲರ ವಾದವೇನು..?: ಬಳಿಕ ಎಸ್ ಪಿ ಪಿ ಜಗದೀಶ್ ವಾದ ಮಂಡಿಸಿ, ಎಸ್ ಐಟಿ ಯ ಮೊದಲ ಆದ್ಯತೆ ಇರುವುದು ಸಂತ್ರಸ್ತೆಯನ್ನು ಹುಡುಕಾಟ ಮಾಡೋದಾಗಿದೆ. ಸಂತ್ರಸ್ತೆಯ ಸುರಕ್ಷತೆ ಮೊದಲು ಆಗಬೇಕಿದೆ. ಆಕೆ ಎಲ್ಲಿದ್ದಾಳೆ ಅನ್ನೋದು ಗೊತ್ತಾಗ್ತಾ ಇಲ್ಲ. ಸಂತ್ರಸ್ತೆಯ ಮಗ ತುಂಬಾ ಆತಂಕ ವ್ಯಕ್ತಪಡಿಸ್ತಾ ಇದ್ದಾನೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆ ಬಡ ಮಹಿಳೆ ಎಲ್ಲಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ದುರದೃಷ್ಟಕರ ಎಂದರೆ ಈಗ ನಾಪತ್ತೆ ಆಗಿರುವ ಮಹಿಳೆಯ ಫೋಟೋ ವಿಡಿಯೋ ಬಹಿರಂಗ ಆಗಿದೆ. ಆಕೆಗೆ ಏನಾಗಿದೆ ಅನ್ನೋದು ನಮ್ಮ ಆತಂಕವಾಗಿದೆ. 2ಸಾವಿರಕ್ಕೂ ಹೆಚ್ಚು ವೀಡಿಯೋಗಳು ಎಂದು ಹೇಳಲಾಗುತ್ತಿದೆ. ಅವುಗಳಲ್ಲಿ ಒಬ್ಬರು ಈ ಅಪಹರಣಕ್ಕೆ ಒಳಗಾಗಿರುವ ಮಹಿಳೆಯಾಗಿದ್ದಾರೆ ಎಂದು ತಿಳಿಸಿದರು.
ಸಂತ್ರಸ್ತೆಯ ಮಗ ನನ್ನ ತಾಯಿ ರೇವಣ್ಣ ಅವರು ಕಿಡ್ನಾಪ್ ಮಾಡಿಸಿದ್ದಾರೆ ಅಂತ ಹೇಳಿದ್ದಾರೆ. ಪೊಲೀಸರ ಮುಂದೆ ಹೇಳಿಕೆ ನೀಡಬಾರದು, ಯಾವುದೇ ದೂರನ್ನು ಕೊಡಬಾರದು ಅಂತ ಈ ಮೊದಲೇ ಬೆದರಿಕೆ ಹಾಕಿದ್ದಾರೆ. ಪ್ರಕರಣ ದಾಖಲಾಗುವ ಮುನ್ನವೇ ಬೆದರಿಕೆ ಹಾಕಲಾಗಿದೆ. ಆ ಮಹಿಳೆ ಜೀವಂತವಾಗಿ ಇದ್ದಾಳೆ ಎಂದು ನಾವು ನಂಬಿದ್ದೇವೆ. ನಾವು ಹೆಚ್ಚಾಗಿ ಹೇಳಿದ್ರೆ ಆಕೆಗೆ ನಾವು ಮಾಡಿದ ಅವಮಾನ ಆಗುತ್ತೆ. ಹೀಗಾಗಿ ನಾನು ಆಕೆಯ ಬಗ್ಗೆ ನಾನು ಹೆಚ್ಚು ಹೇಳಿ ವಾದಿಸುವುದಿಲ್ಲ ಎಂದು ಹೇಳಿದರು.
ಒಟ್ಟಿನಲ್ಲಿ ಹೆಚ್.ಡಿ.ರೇವಣ್ಣ ಅಥವಾ ಪ್ರಜ್ವಲ್ ವಿರುದ್ಧ ಯಾವುದೇ ಮಹಿಳೆ ದೂರು ಅಥವಾ ಹೇಳಿಕೆ ನೀಡಿದ್ರೆ ಇದೇ ರೀತಿ ಆಗುತ್ತದೆ ಎಂಬ ಸಂದೇಶ ರವಾನಿಸಲು ಈ ಕಿಡ್ನಾಪ್ ಮಾಡಿಸಲಾಗಿದೆ. ಆರೋಪಿ ರಾಜಕೀಯವಾಗಿ ಹಣಕಾಸಿನಲ್ಲಿ ಬಲಾಡ್ಯ ವ್ಯಕ್ತಿ. ಸಾಕ್ಷಿಗಳ ಮೇಲೆ ಅಲ್ಲ, ದೂರುದಾರ ಮೇಲೂ ಪ್ರಭಾವ ಬೀರಲಿದ್ದಾರೆ. ಇನ್ನೂ ಪ್ರಕರಣ ಪ್ರಾಥಮಿಕ ಹಂತದಲ್ಲಿ ಇದೆ ಈ ಸಂದರ್ಭದಲ್ಲಿಯೇ ಜಾಮೀನು ನೀಡೋದು ಸೂಕ್ತ ಅಲ್ಲ. ಯುಪಿ, ಬಿಹಾರದಲ್ಲಿ ನಡೆಯುವ ರೀತಿ ಜನರನ್ನ ಎದರಿಸಲು ಈ ಹಂತಕ್ಕೆ ಆರೋಪಿಗಳು ಹೋಗಿದ್ದಾರೆ. ಜನರನ್ನ/ಸಂತ್ರಸ್ತೆಯರನ್ನ ರಕ್ಷಿಸುವುದು ಸರ್ಕಾರ/ಎಸ್ಐಟಿ ಕರ್ತವ್ಯ. ಈ ಪ್ರಕರಣಲ್ಲಿ ನಿರೀಕ್ಷಣಾ ಜಾಮೀನು ನೀಡಲು ಯೋಗ್ಯವಲ್ಲ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ಕೂಡ ಮಂಜೂರು ಮಾಡಬಾರದು ಎಂದು ತಿಳಿಸಿದರು. ಬಳಿಕ ಮತ್ತೆ ರೇವಣ ಪರ ವಕೀಲರು ವಾದ ಮುಂದುವರಿಸಿದರು. ನಿರಂತರ 1 ಗಂಟೆ 40 ನಿಮಿಷಗಳ ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆದೇಶವನ್ನು ಕೆಲಕಾಲ ಕಾಯ್ದಿರಿಸಿದರು.
ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಮುಂದೆ ಸಿಆರ್ಪಿಸಿ (Code of Criminal Procedure) ಸೆಕ್ಷನ್ 164ರ ಅಡಿ ಸಂತ್ರಸ್ತ ಮಹಿಳೆ ಹೇಳಿಕೆ ನೀಡಿದ್ದಾರೆ.
ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಸಂಬಂಧ CrPC ಸೆಕ್ಷನ್ 164ರ (Section 164) ಅಡಿ ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶರ (Judge) ಮುಂದೆ ಸಂತ್ರಸ್ತೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ. ಹೇಳಿಕೆ ದಾಖಲು ಮಾಡಿದ ನಂತರ ಎಸ್‌ಐಟಿ ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ತಂಪೆರೆದ ವರುಣ – ನಗರದ ಹಲವೆಡೆ ಮಳೆ
ಏನಿದು ಸಿಆರ್ಪಿಸಿ ಸೆಕ್ಷನ್ 164?
ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಮೊದಲು ಸಂತ್ರಸ್ತರ ಹೇಳಿಕೆ ಪಡೆದು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುತ್ತಾರೆ. ನಂತರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಂತ್ರಸ್ತರು ಜಡ್ಜ್ ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡುತ್ತಾರೆ. ಪೊಲೀಸರ ಮುಂದೆ ಆರೋಪಿಗಳ ವಿರುದ್ಧ ಹೇಳಿಕೆ ನೀಡಿದರೂ ಕೆಲವೊಮ್ಮೆ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಕಡೆಯಿದ ಬೆದರಿಕೆ ಅಥವಾ ಇನ್ಯಾವುದೋ ಒತ್ತಡಕ್ಕೆ ಮಣಿದು ಉಲ್ಟಾ ಹೇಳಿಕೆ ನೀಡುತ್ತಾರೆ. ಜಡ್ಜ್ ಮುಂದೆ ಉಲ್ಟಾ ಹೇಳಿಕೆ ನೀಡಿದರೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿ ಆರೋಪಿ ಶಿಕ್ಷೆಯಿಂದ ಪಾರಾಗುವ ಸಾಧ್ಯತೆ ಇರುತ್ತದೆ. ಆದರೆ ಸಿಆರ್ಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಾದರೆ ಅದನ್ನು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸುತ್ತವೆ. ಈ ಹೇಳಿಕೆಗಳನ್ನು ಬದಲಿಸುವುದಾಗಲೀ, ಹಿಂಪಡೆಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ಸಂತ್ರಸ್ತರ ಹೇಳಿಕೆ ಭಾರೀ ಮಹತ್ವ ಪಡೆಯುತ್ತದೆ. ದೂರುದಾರರು ಏನು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದನ್ನು ಗೌಪ್ಯವಾಗಿ ಇಡಲಾಗುತ್ತದೆ. ಸೆಕ್ಷನ್ 164ರ ಅಡಿ ಹೇಳಿಕೆ ನೀಡಿದ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾದ ಉದಾಹರಣೆಯಿದೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಈ ಪ್ರಕ್ರಿಯೆ ಹೇಗೆ ನಡೆಯುತ್ತೆ?
ತನಿಖಾಧಿಕಾರಿಗಳು ಸಂತ್ರಸ್ತರನ್ನು ಜಡ್ಜ್ ಮುಂದೆ ಮೊದಲು ಹಾಜರು ಪಡಿಸುತ್ತಾರೆ. ಸಂತ್ರಸ್ತರಾದವರು ಯಾವುದೇ ಪ್ರಲೋಭನೆ, ಒತ್ತಡ, ಬೆದರಿಕೆಗೆ ಬಗ್ಗದೇ ಹೇಳಿಕೆ ನೀಡುತ್ತೇನೆ ಎಂದು ಪ್ರಮಾಣ ಮಾಡಬೇಕಾಗುತ್ತದೆ. ಈ ರೀತಿ ಹೇಳಿಕೆ ನೀಡುವಾಗ ಕೊಠಡಿಯಲ್ಲಿ ಜಡ್ಜ್, ಸ್ಟೆನೊಗ್ರಾಫರ್ ಬಿಟ್ಟು ಬೇರೆ ಯಾರೂ ಇರುವುದಿಲ್ಲ. ಸಂತ್ರಸ್ತರಾದವರು ಸ್ವ ಇಚ್ಛೆಯಿಂದ ಹೇಳಿಕೆ ನೀಡುತ್ತಾರೆ ಎನ್ನುವುದು ಜಡ್ಜ್‌ಗೆ ಮನವರಿಕೆಯಾದ ನಂತರ ಮುಂದಿನ ಪ್ರಕ್ರಿಯೆಗಳು ಆರಂಭವಾಗುತ್ತದೆ.