Tag: court

  • ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ – 12 ವರ್ಷಗಳ ಬಳಿಕ 40 ಆರೋಪಿಗಳು ದೋಷಮುಕ್ತ

    ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ – 12 ವರ್ಷಗಳ ಬಳಿಕ 40 ಆರೋಪಿಗಳು ದೋಷಮುಕ್ತ

    ಮಂಗಳೂರು: ಪಡೀಲ್‍ನಲ್ಲಿ ನಡೆದಿದ್ದ ಹೋಂ ಸ್ಟೇ ಮೇಲಿನ ದಾಳಿ ಪ್ರಕರಣದ  (Homestay Attack Case) ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಕರಣವನ್ನು 12 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಪ್ರಕರಣದ ಎಲ್ಲಾ 40 ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

    ಯುವಕ ಯುವತಿಯರು ಹೋಂ ಸ್ಟೇನಲ್ಲಿ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿ ಹಿಂದೂಪರ ಸಂಘಟನೆಯ ನೂರಾರು ಕಾರ್ಯಕರ್ತರಿಂದ ದಾಳಿ ನಡೆದಿತ್ತು ಎಂದು ಆರೊಪಿಸಲಾಗಿತ್ತು. ಇದೀಗ ಪ್ರಕರಣದ ಸಾಕ್ಷಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾ.ಕಾಂತರಾಜು ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

    ಪ್ರಕರಣದದಲ್ಲಿ ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದರು. ಓರ್ವ ಪತ್ರಕರ್ತ ನವೀನ್ ಸೂರಿಂಜೆ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿತ್ತು. ಉಳಿದ 40 ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಮಂಗಳವಾರ (ಆ.8) ಕೋರ್ಟ್ ಆದೇಶಿಸಿದೆ.

    ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿತ್ತು.

    2012ರ ಜುಲೈ 28 ರಂದು ಮಂಗಳೂರಿನ ಹೋಂ ಸ್ಟೇ ಮೇಲೆ ದಾಳಿ ನಡೆದಿತ್ತು. ಹೋಂ ಸ್ಟೇನಲ್ಲಿ ಯುವಕರು ಹಾಗೂ ಯುವತಿಯರು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ದಾಳಿ ನಡೆದಿತ್ತು.

  • ದರ್ಶನ್‌ಗೆ ಇಲ್ಲ ಬಿರಿಯಾನಿ ಭಾಗ್ಯ – ಜೈಲೂಟ ಫಿಕ್ಸ್‌

    ದರ್ಶನ್‌ಗೆ ಇಲ್ಲ ಬಿರಿಯಾನಿ ಭಾಗ್ಯ – ಜೈಲೂಟ ಫಿಕ್ಸ್‌

    ಬೆಂಗಳೂರು: ಮನೆಯೂಟದ ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ (Darshan) ಕೋರ್ಟ್‌ ಶಾಕ್‌ ನೀಡಿದೆ. ಮನೆಯೂಟದ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ದರ್ಶನ್‌ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಜಾಗೊಳಿಸಿದೆ.

    ಮನೆಯಿಂದ ಊಟ (Home Cooked Food) ಹಾಗೂ ಹಾಸಿಗೆ ಸೌಲಭ್ಯ ಪಡೆಯುವುದಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಜುಲೈ 25ಕ್ಕೆ ಆದೇಶ ಕಾಯ್ದಿರಿಸಿತ್ತು.  ಇಂದು ದರ್ಶನ್‌ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದ್ದು, ದರ್ಶನ್‌ ಪರ ವಕೀಲರು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ರಾಯಧನ ವಿಚಾರದಲ್ಲಿ ರಾಜ್ಯಗಳಿಗೆ ಬಹುದೊಡ್ಡ ಜಯ – ಸುಪ್ರೀಂ ಕೋರ್ಟ್ ಹೇಳಿದ್ದೇನು?

    ದರ್ಶನ್‌ ಅರ್ಜಿ ವಜಾಗೊಂಡಿದ್ದು ಯಾಕೆ?
    Karnataka Prisons and Correctional Services Manual 2021 ರ ಸೆಕ್ಷನ್‌ 728 ರ ಪ್ರಕಾರ ಕೊಲೆ ಆರೋಪಿಗೆ ಮನೆ ಊಟಕ್ಕೆ ಅವಕಾಶ ಇಲ್ಲ. ಜೈಲು ಅಧಿಕಾರಿಗಳು ನೀಡಿರುವ ವರದಿಯಲ್ಲಿ ಮನೆಯೂಟದ ಅವಶ್ಯಕತೆ ಕಾಣಿಸುತ್ತಿಲ್ಲ. ಮನೆ ಊಟದ ಅವಶ್ಯಕತೆ ಸಂಬಂಧ ಪೂರಕವಾದ ವೈದ್ಯಕೀಯ ಪ್ರಮಾಣಪತ್ರಗಳು ಇಲ್ಲ.

    ದರ್ಶನ್‌ ಪರ ವಕೀಲರ ವಾದ ಏನಿತ್ತು?
    ಆರೋಪಿಗೆ ಜೈಲಿನಲ್ಲಿ ಇರುವಾಗ ಮನೆಯ ಊಟ ಪಡೆಯಬಹುದು. ಇದು ವಿಚಾರಣಾಧೀನ ಕೈದಿಯ ಹಕ್ಕು. ಜೈಲಿನ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ಆರೋಪಿಗೆ ಕೆಲವೊಂದು ನಿಬಂಧನೆಗಳನ್ನು ಹೇಳಿ ಅವಕಾಶ ಕೊಡಿಸಬಹುದು. ತಮ್ಮದೇ ವೆಚ್ಚದಲ್ಲಿ ಇದನ್ನು ಪಡೆಯಲು ಅವಕಾಶವನ್ನು ಹೊಂದಿಸಲಾಗಿದೆ. ಕೊಲೆಯ ಆರೋಪಿಗಳಿಗೆ ವಿನಾಯಿತಿ ನೀಡಲಾಗಿದೆ.

    ಸೆಕ್ಷನ್ 30 ರ ಪ್ರಕಾರ ಜೈಲಿನಲ್ಲಿ ಇರುವ ಆರೋಪಿ ಮನೆಯ ಊಟ ಪಡೆಯಬಹುದು. ಅಲ್ಲದೇ ಮನೆಯಿಂದ ಹಾಸಿಗೆ ವ್ಯವಸ್ಥೆ ಮತ್ತು ಪುಸ್ತಕಗಳನ್ನು ಹೊಂದುವ ಅವಕಾಶ ಇದೆ . ಈ ಎಲ್ಲಾ ಅವಕಾಶಗಳನ್ನು ಆರೋಪಿಗಳಿಗೆ ಒದಗಿಸಿಕೊಡಬಹುದು.

    ಮರಣ ದಂಡನೆ ಹೊಂದಿದ ಅಪರಾಧಿಗೂ ಕೆಲ ಅವಕಾಶ ಇದೆ. ಅಲ್ಲದೇ ದರ್ಶನ್ ಅವರು ಸಿನಿಮಾದ ನಟರಾಗಿರುವ ಕಾರಣ ಅತಿ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಹೀಗಾಗಿ ಜೈಲಿನ ಅಧಿಕಾರಿಗಳು ಮನೆಯ ಊಟವನ್ನು ನೀಡುವುದಕ್ಕೆ ನಿರಾಕರಣೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಇದರಿಂದ ಹಿಂದೆ ಸರಿಯುತ್ತಿದ್ದಾರೆ.

    ಈ ಹಿಂದೆ ಕುಖ್ಯಾತ ಆರೋಪಿ ಚಾರ್ಲ್ಸ್ ಶೋಭರಾಜ್‌ಗೆ ಕೂಡ ಮನೆಯ ಊಟ ಕಲ್ಪಿಸಲಾಗಿತ್ತು. ಯಾವಾಗ ಆರೋಪಿ, ಅಪರಾಧಿ ಎಂದು ಕೋರ್ಟ್‌ ಶಿಕ್ಷೆ ನೀಡುತ್ತದೋ ಅಲ್ಲಿಯವರೆಗೆ ಈ ಎಲ್ಲಾ ಅವಕಾಶವನ್ನು ಬಳಸಿಕೊಳ್ಳಬಹುದು.

    ಪೊಲೀಸರ ಪರ ವಾದ ಏನಿತ್ತು?
    ಆಹಾರ ಅಜೀರ್ಣವಾಗುತ್ತಿದೆ. ಪುಡ್ ಪಾಯಿಸನ್ ಆಗಿದೆ, ಭೇದಿ ಆಗುತ್ತಿದೆ ಎಂದು ಮೆಡಿಕಲ್ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಆದರೆ ಒಂದು ಒಂದು ಬಾರಿಯೂ ಭೇದಿ ಆಗಿದೆ ಎಂದು ಆಸ್ಪತ್ರೆಯಲ್ಲಿ ದರ್ಶನ್‌ ಚಿಕಿತ್ಸೆ ಪಡೆದಿಲ್ಲ.

    ದರ್ಶನ್ ಅವರು ಮುರಿದಿರುವ ಕೈ ಬಗ್ಗೆ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್‌ ಅವರಿಗೆ ಈಗ ವೈರಲ್‌ ಫೀವರ್‌ ಇದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನಲ್ಲಿ ದರ್ಶನ್ ಅವರಿಗೆ ಮೂರು ತಿಂಗಳ ಹಿಂದೆ ಆರ್ಥೋ ಅಪರೇಷನ್ ಆಗಿತ್ತು. ಜೈಲಿನಲ್ಲಿ ಬಂದಾಗ ಅದರ ನೋವು ಪ್ರಾರಂಭವಾಗಿದ್ದು ಇದಕ್ಕೆ ಎಕ್ಸ್ ರೇ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ಜೈಲಿನ ನಿಯಮಗಳ ಪ್ರಕಾರ ಮನೆಯ ಊಟ ಎನ್ನುವುದರ ಬಗ್ಗೆ ಉಲ್ಲೇಖ ಇಲ್ಲ. ಅನಾರೋಗ್ಯದ ಸಮಯದಲ್ಲಿ ಮಾತ್ರ ವಿಶೇಷ ಊಟ ನೀಡಬಹುದು ಹೊರತು ಮನೆಯ ಊಟವನ್ನೇ ನೀಡಬೇಕು ಎಲ್ಲೂ ಉಲ್ಲೇಖ ಮಾಡಿಲ್ಲ. ಅನಾರೋಗ್ಯದ ವೇಳೆ ವಿಶೇಷ ಕಾಳಜಿ ಆಹಾರ ನೀಡಬೇಕು. ವಾರದಲ್ಲಿ ಒಮ್ಮೆ ಮಾತ್ರ ಮಾಂಸಾಹಾರದ ಊಟ ಕೊಡಬಹುದು. ಅದನ್ನು ಬಿಟ್ಟು ಪ್ರತಿ ದಿನ ಬಿರಿಯಾನಿ ತಿನ್ನಬೇಕು ಎಂದರೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನೆಯ ಊಟವನ್ನು ನೀಡುವಂತೆ ಇಲ್ಲ.

    ಆರೋಪಿಗೆ ಭೇದಿ ಆಗುತ್ತಿದ್ದರೆ ಉಪ್ಪು ಖಾರ ಇಲ್ಲದ ಸಾತ್ವಿಕ ಆಹಾರ ನೀಡಬೇಕು. ಕುಡಿಯಲು ಬಿಸಿ ನೀರು ಬೇಕು ಅಂದರೆ ಜ್ವರ ಇದ್ದಾಗ ಮಾತ್ರ ನೀಡ್ತಾರೆ. ಅದನ್ನ ಬಿಟ್ಟು ಪ್ರತಿ ದಿನ ಸ್ನಾನ ಮಾಡಲು ಬಿಸಿ ನೀರು ಕೊಡಲು ಸಾಧ್ಯವಿಲ್ಲ. ಅನಾರೋಗ್ಯ ಇದ್ದರೆ 15 ದಿನ ಮಾತ್ರ ವಿಶೇಷವಾಗಿ ಅವಕಾಶ ನೀಡಬಹುದು.

  • ದೂರು ಕೊಟ್ಟ ಮಹಿಳೆಗೆ ಕೋರ್ಟ್ ಆವರಣದಲ್ಲೇ ಚಾಕು ಇರಿದ ದುಷ್ಕರ್ಮಿ

    ದೂರು ಕೊಟ್ಟ ಮಹಿಳೆಗೆ ಕೋರ್ಟ್ ಆವರಣದಲ್ಲೇ ಚಾಕು ಇರಿದ ದುಷ್ಕರ್ಮಿ

    ಬೆಂಗಳೂರು: ದೂರು ಕೊಟ್ಟ ಮಹಿಳೆಗೆ ನ್ಯಾಯಾಲಯದ ಆವರಣದಲ್ಲೇ ಚಾಕು ಇರಿದಿರುವುದು ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ  (Court)ನಡೆದಿದೆ.

    ಚಾಕು ಇರಿತಕ್ಕೊಳಗಾದ ಮಹಿಳೆಯನ್ನು ವಿಮಲಾ ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಜಯರಾಮ್ ರೆಡ್ಡಿ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ಮಹಿಳೆ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಮಹಿಳೆಗೆ ಆರೋಪಿ ಕೋರ್ಟ್ ಹಾಲ್ 1 ರಲ್ಲಿ ಚಾಕು ಇರಿದಿದ್ದಾನೆ.

    ಚಾಕು ಇರಿತಕ್ಕೊಳಗಾದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಸೂರಜ್‌ ರೇವಣ್ಣಗೆ ಜಾಮೀನು ಮಂಜೂರು

    ಸೂರಜ್‌ ರೇವಣ್ಣಗೆ ಜಾಮೀನು ಮಂಜೂರು

    ಬೆಂಗಳೂರು: ವಿಧಾನ ಪರಿಷತ್‌ (Vidhan Parishad) ಸದಸ್ಯ ಸೂರಜ್‌ ರೇವಣ್ಣಗೆ (Suraj Revanna) ಎರಡೂ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದೆ.

    ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾತ್ರ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ. ಜೂನ್‌ 23 ರಂದು ಸೂರಜ್‌ ರೇವಣ್ಣ ಅವರನ್ನು ಬಂಧಿಸಲಾಗಿತ್ತು.

    ಹೊಳೆ ನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 377 ಅಡಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಸೂರಜ್‌ ರೇವಣ್ಣ ಅವರನ್ನು ಜೂನ್‌ 23 ರಂದು ಸಿಐಡಿ ಅರೆಸ್ಟ್‌ ಮಾಡಿತ್ತು.

    ಮೊದಲ ಪ್ರಕರಣದ ಹೊತ್ತಲ್ಲೇ ಸೂರಜ್ ರೇವಣ್ಣ ಕಾರ್ ಚಾಲಕ ಎರಡನೇ ದೂರು ದಾಖಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಬಂಧನ ಆಗಿರಲಿಲ್ಲ. ಹಾಗಾಗಿ, ಜನಪ್ರತಿನಿಧಿಗಳ ಕೋರ್ಟ್ 2 ಪ್ರಕರಣಗಳಲ್ಲಿ  ಷರತ್ತು ಬದ್ಧ ಜಾಮೀನು ನೀಡಿದೆ. ಮಂಗಳವಾರ ಷರತ್ತು ಪೂರೈಕೆ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಸೂರಜ್ ಬಿಡುಗಡೆಯಾಗಲಿದ್ದಾರೆ.

  • ಬಂಧನದ ಭೀತಿ: ಕೋರ್ಟ್‌ ಮೊರೆ ಹೋದ ನಟ ರಕ್ಷಿತ್ ಶೆಟ್ಟಿ

    ಬಂಧನದ ಭೀತಿ: ಕೋರ್ಟ್‌ ಮೊರೆ ಹೋದ ನಟ ರಕ್ಷಿತ್ ಶೆಟ್ಟಿ

    ಕಾಪಿ ರೈಟ್ಸ್ (Copyright) ಉಲ್ಲಂಘನೆ ಆರೋಪ ಹೊತ್ತಿರೋ  ನಟ ರಕ್ಷಿತ್ ಶೆಟ್ಟಿ (Rakshit Shetty) ಗೆ ಬಂಧನದ ಭೀತಿ ಎದುರಾಗಿದೆ. ಹಾಗಾಗೇ ಅವರು ನಿರೀಕ್ಷಣಾ ಜಾಮೀನು (Bail) ಕೋರಿ  ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಸಿನಿಮಾಗೆ ಅನುಮತಿ ಇಲ್ಲದೇ ಎರಡು ಹಾಡುಗಳನ್ನು ಬಳಸಿದ್ದರು ರಕ್ಷಿತ್ ಶೆಟ್ಟಿ. ಹಾಗಾಗಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅವರ ನಿರ್ಮಾಣ ಸಂಸ್ಥೆ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.

    ನಿರೀಕ್ಷಣಾ ಜಾಮೀನು ಕೋರಿ ರಕ್ಷಿತ್ ಶೆಟ್ಟಿ ಬೆಂಗಳೂರಿನ ಸೆಷನ್ಸ್ ಕೋರ್ಟ್ (Court) ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನ್ಯಾಯ ಎಲ್ಲಿದೆ ಸಾಂಗ್ ಕಾಪಿ ರೈಟ್ಸ್ ಉಲ್ಲಂಘನೆ ಆರೋಪ ಇವರ ಮೇಲಿದೆ. ಬ್ಯಾಚಲರ್ಸ್ ಪಾರ್ಟಿ ಸಿನಿಮಾಗಾಗಿ ಅನಧಿಕೃತವಾಗಿ ಆ ಹಾಡನ್ನು ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ ಬಳಕೆ ಮಾಡಿಕೊಂಡಿತ್ತು.

     

    ಪರಮವಾ ಸ್ಟೂಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ಮೇಲೆ ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ಕೂಡ ನೀಡಿದ್ದರು. ಇದೀಗ ರಕ್ಷಿತ್ ಶೆಟ್ಟಿ ನ್ಯಾಯಾಲಯ ಮೊರೆ ಹೋಗಿದ್ದಾರೆ. ರಕ್ಷಿತ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಲಾಗಿದ್ದು, ವಿಚಾರಣೆಯನ್ನು ಜುಲೈ 24 ಕ್ಕೆ ಸೆಷನ್ಸ್ ಕೋರ್ಟ್ ಮುಂದೂಡಿದೆ.

  • Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

    Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Corporation Scam) ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ನಾಗೇಂದ್ರ ಅವರನ್ನ ಮತ್ತೆ 5 ದಿನ ಇಡಿ ಕಸ್ಟಡಿಗೆ (ED Custody) ನೀಡಿ 82ನೇ ಜನಪ್ರತಿನಿಧಿಗಳ ನ್ಯಾಯಾಲಯ (Representative Court) ಆದೇಶಿಸಿದೆ.

    6 ದಿನಗಳ ಇ.ಡಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಗುರುವಾರ (ಜು.18) ವೈದ್ಯಕೀಯ ಪರೀಕ್ಷೆ (Medical Test) ಬಳಿಕ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಇಡಿ ಪರ ವಕೀಲ ಪ್ರಸನ್ನಕುಮಾರ್, ಇನ್ನೂ ವಿಚಾರಣೆ ಬಾಕಿ ಇರುವುದರಿಂದ 8 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದ್ರೆ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ 5 ದಿನಗಳ ಕಾಲ ಇ.ಡಿ ಕಸ್ಟಡಿಗೆ ಕೋರ್ಟ್ ಆದೇಶಿಸಿತು. 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾ. ಸಂತೋಷ್ ಗಜಾನನ ಭಟ್ ಇ.ಡಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ `ಸುಪಾರಿ’ ಗಲಾಟೆ: ಬಿಜೆಪಿ ಶಾಸಕರ ಮಾತಿಗೆ ಕಾಂಗ್ರೆಸ್ ಕೆಂಡಾಮಂಡಲ!

    ಕೋರ್ಟ್‌ನಲ್ಲಿ ವಾದ-ಪ್ರತಿವಾದ ಹೇಗಿತ್ತು?
    ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ ಇದೇ ಜುಲೈ 12ರಂದು ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಲಾಗಿತ್ತು. 6 ದಿನಗಳ ಕಸ್ಟಡಿ ಅಂತ್ಯಗೊಂಡ ಬೆನ್ನಲ್ಲೇ ನಾಗೇಂದ್ರ ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಬಳಿಕ ಇ.ಡಿ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ಇಡಿ ಪರ ವಕೀಲ ಪ್ರಸನ್ನಕುಮಾರ್ ವಾದಿಸಿ, 8 ದಿನಗಳ ಕಾಲ ಕಸ್ಟಡಿಗೆ ಕೇಳಿದ್ದರು. ಇದಕ್ಕೆ ಆಕ್ಷೇಪಣೆ ಎತ್ತಿದ ಆರೋಪಿ ಪರ ವಕೀಲ ಶ್ಯಾಂ ಸುಂದರ್, ಈಗಾಗಲೇ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಇದೂವರೆಗೂ ಸಂಪೂರ್ಣ ರಿಮ್ಯಾಂಡ್ ಕಾಪಿ ಸಿಕ್ಕಿಲ್ಲ. ಈಗ ಹಾಜರುಪಡಿಸುತ್ತಿದ್ದಾರೆ. ಇಡಿ ಅಧಿಕಾರಿಗಳು ಪೊಲೀಸರ ಅಲ್ಲ. ಅವರು ದಾಖಲು ಮಾಡೋದು ಇಸಿಐಆರ್, ಎಫ್‌ಐಆರ್ ಅಲ್ಲ. ಅವರಿಗೆ ಬಂಧನ ಮಾಡುವ ಅಧಿಕಾರವೇ ಇಲ್ಲ. ಯಾವ ಅಧಿಕಾರದಲ್ಲಿ ಕಸ್ಟಡಿಗೆ ಕೇಳುತ್ತಾ ಇದ್ದಾರೆ? ಯಾವ ವಿಚಾರ ಇಟ್ಟುಕೊಂಡು ಕೇಳಲಾಗ್ತಿದೆ? ಎಂದು ವಾದಿಸಿದರು. ಇದನ್ನೂ ಓದಿ: NEET: ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ ಮಾಡಬಹುದು: ಸುಪ್ರೀಂ ಕೋರ್ಟ್

    ಇದಕ್ಕೆ ಪ್ರತಿವಾದ ಮಂಡಿಸಿದ ಪ್ರಸನ್ನಕುಮಾರ್, ಮತ್ತೆ ರಿಮ್ಯಾಂಡ್ ಕೇಳುತ್ತಾ ಇದ್ದಾರೆ. ನನಗೆ ಕಾಪಿ ಈಗ ಕೊಡ್ತಾ ಇದ್ದಾರೆ ಸರಿ ಅಲ್ಲ. ನೀವು ಹೊಸ ಅಡ್ವಕೇಟ್ ಅಲ್ಲ. ಕಾನೂನಿನ ಪ್ರಕಾರ ಮೊದಲೇ ರಿಮ್ಯಾಂಡ್ ಕಾಪಿ ಕೊಡಬೇಕು ಅಂತ ಇಲ್ಲ. ನಾವು ನ್ಯಾಯಾಲಯಕ್ಕೆ ಕೊಡಬೇಕು. ನ್ಯಾಯಾಲಯದ ಗಮನಕ್ಕೆ ತಂದ ಮೇಲೆಯೇ ಕಸ್ಟಡಿಗೆ ಪಡೆಯೋದು. ಡಿಫೆನ್ಸ್ ಅಡ್ವೊಕೇಟ್‌ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಇದೆಲ್ಲ ಅವರಿಗೆ ಗೊತ್ತಿದೆ ಎಂದು ಕುಟುಕಿದರು. ಇದನ್ನೂ ಓದಿ: ನಟ ದರ್ಶನ್ & ಗ್ಯಾಂಗ್‌ಗೆ ಆ.1ರ ವರೆಗೆ ಜೈಲೇ ಗತಿ – ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ

    ಅಲ್ಲದೇ ತನಿಖೆಗೆ ನಾಗೇಂದ್ರ ಸಹಕರಿಸುತ್ತಿಲ್ಲ. ಹೆಚ್ಚಿನ ವಿಚಾರಣೆ ಮುಂದುವರಿಸುವ ಅಗತ್ಯ ಇದೆ. ಪಿಎಂಎಲ್‌ಎ ಸೆಕ್ಷನ್ 65 ಅಡಿ ಆರೋಪಿ ಹೇಳಿಕೆ ದಾಖಲಿಸಲು ಅಧಿಕಾರ ಇದೆ ಎಂದರು. ಈ ವೇಳೆ ಶ್ಯಾಂ ಸುಂದರ್ ಅವರು, ನಾಗೇಂದ್ರ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿ, ಇಡಿ ಅಧಿಕಾರಿಗಳು ಅಲ್ಲಿಯೇ ವಿಚಾರಣೆ ಮಾಡಬಹುದು. ಇಲ್ಲಿದ್ದರೇ ಅವರ ಮೇಲೆ ಒತ್ತಡ ಹೇರಲಾಗುತ್ತೆ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ, ಈಗಾಗಲೇ ಹೇಳಿಕೆ ದಾಖಲು ಮಾಡಿ ಆಗಿದೆ ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಬಳಿಕ ಕೋರ್ಟ್ ಮತ್ತೆ 5 ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತು. ಇದನ್ನೂ ಓದಿ: ಮುಡಾ, ವಾಲ್ಮೀಕಿ ಹಗರಣ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – ಕಟ್ಟೆಯೊಡೆದ ಆಕ್ರೋಶ!

  • Valmiki Scam | ಮಾಲ್‌, ಪಾರ್ಕ್‌, ಜಂಕ್ಷನ್‌ನಲ್ಲಿ ಕೋಟಿ ಕೋಟಿ ಸಂದಾಯ

    Valmiki Scam | ಮಾಲ್‌, ಪಾರ್ಕ್‌, ಜಂಕ್ಷನ್‌ನಲ್ಲಿ ಕೋಟಿ ಕೋಟಿ ಸಂದಾಯ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಹಗರಣ ಸಂಬಂಧ ಪೊಲೀಸರು ಕೋರ್ಟ್‌ಗೆ (Court) ಸಲ್ಲಿಸಿದ ರಿಮ್ಯಾಂಡ್ ಕಾಪಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪ್ರಕರಣದ ಆರೋಪಿಯಾಗಿರುವ ಸತ್ಯನಾರಾಯಣ (Sathyanarayana) ವಿಚಾರಣೆ ವೇಳೆ ಬಾಯ್ಬಿಟ್ಟ ವಿಚಾರವನ್ನು ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಲಾಗಿದೆ. ಯರ‍್ಯಾರಿಗೆ ಎಲ್ಲೆಲ್ಲಿ ಯಾವ್ಯಾವ ರೀತಿ ಹಣ ಸಂದಾಯವಾಗಿದೆ? ಯಾವ್ಯಾವುದರಲ್ಲಿ ಎಷ್ಟೆಷ್ಟು ಸಿಕ್ತು ಎಂಬ ಮಾಹಿತಿ ಅನಾವರಣಗೊಂಡಿದೆ. ಇದನ್ನೂ ಓದಿ: ಜಪಾನ್, ಕೊರಿಯಾದ ಕಂಪನಿಗಳಿಂದ 6,450 ಕೋಟಿ ಹೂಡಿಕೆ – ಯಾವೆಲ್ಲ ಕಂಪನಿಗಳು ಕರ್ನಾಟಕದಲ್ಲಿ ಎಲ್ಲಿ ಹೂಡಿಕೆ ಮಾಡಲಿವೆ?

     

    ರಿಮ್ಯಾಂಡ್ ಕಾಪಿಯಲ್ಲಿ ಏನಿದೆ?
    ಪದ್ಮನಾಭ್ ಬಳಿಯಿಂದ 3.67 ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಸಿಮೆಂಟ್ ಚೀಲ, ಕೈಚೀಲ, ಸೂಟ್‌ಕೇಸ್, ಕಾರ್‌ನಲ್ಲಿ ಹಣವನ್ನು ಪತ್ತೆ ಮಾಡಲಾಗಿದೆ. ಸತ್ಯನಾರಾಯಣ ಮತ್ತು ಗ್ಯಾಂಗ್‌ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ನಾಗೇಂದ್ರ (Nagendra) ಆಪ್ತ ಸಹಾಯಕ ಹರೀಶ್‌ಗೆ 1.45 ಕೋಟಿ ರೂ. ಹಣವನ್ನು ವ್ಯವಸ್ಥಿತವಾಗಿ ಸಂದಾಯ ಮಾಡಿದೆ.  ಇದನ್ನೂ ಓದಿ: MUDA Scam | ಸರ್ಕಾರದ ವಿರುದ್ಧ ಸಮರ ಸಾರಿದ ವಿಜಯೇಂದ್ರ – ಶುಕ್ರವಾರ ಮೈಸೂರಲ್ಲಿ ಬೃಹತ್‌ ಪ್ರತಿಭಟನೆಗೆ ಕರೆ!

    ವೈಷ್ಣವಿ ಮಾಲ್, ಬಿಬಿಎಂಪಿ ಕಚೇರಿ ಬಳಿ 2 ಹಂತಗಳಲ್ಲಿ ಹಣ ಸಂದಾಯ ಮಾಡಲಾಗಿದೆ. ಪಾರ್ಕ್, ಜಂಕ್ಷನ್‌ನಲ್ಲಿ ನಿಂತು ಪದ್ಮನಾಭ್‌ಗೆ 90 ಲಕ್ಷ ರೂ. ಹಸ್ತಾಂತರ ಮಾಡಲಾಗಿದೆ. ನಿಗಮದ ಅಧ್ಯಕ್ಷ ದದ್ದಲ್ ಪಿಎ ಪಂಪಣ್ಣಗೆ ಎರಡು ಕಂತುಗಳಲ್ಲಿ 55 ಲಕ್ಷ ರೂ. ಹಣ ಸಂದಾಯ ಮಾಡಲಾಗಿದೆ ಎಂದು ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಲಾಗಿದೆ.

     

  • ಸೂರಜ್‌ ರೇವಣ್ಣ ಜಾಮೀನು ಅರ್ಜಿ ವಜಾ

    ಸೂರಜ್‌ ರೇವಣ್ಣ ಜಾಮೀನು ಅರ್ಜಿ ವಜಾ

    ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ (Suraj Revanna) ಸಲ್ಲಿಸಿದ್ದ ಜಮೀನು (Bail) ಅರ್ಜಿ ವಜಾಗೊಂಡಿದೆ.

    ಹೊಳೆನರಸೀಪುರದಲ್ಲಿ (Holenarasipura) ದಾಖಲಾಗಿದ್ದ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್‌ ರೇವಣ್ಣ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು 42 ಎಸಿಎಂಎಂ ಕೋರ್ಟ್‌ನಲ್ಲಿ ನಡೆಯಿತು.  ಇದನ್ನೂ ಓದಿ: ಜೈಲಿನ ಊಟದಿಂದ ಫುಡ್ ಪಾಯಿಸನ್ ಆಗ್ತಿದೆ – ಮನೆ ಊಟ ಬೇಕೆಂದು ಹೈಕೋರ್ಟ್‌ಗೆ ದರ್ಶನ್ ಅರ್ಜಿ

    27 ವರ್ಷದ ಸಂತ್ರಸ್ತನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್‌ ರೇವಣ್ಣ ಅವರನ್ನು ಹೊಳೆನರಸೀಪುರ ಪೊಲೀಸರು ಬಂಧಿಸಿದ್ದರು. ಕೋರ್ಟ್‌ ಸೂರಜ್‌ ರೇವಣ್ಣಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿದ್ದು ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ.

    ಆರೋಪ ಸಾಬೀತಾದ್ರೆ ಶಿಕ್ಷೆ ಏನು?
    ಐಪಿಸಿ 377 (ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ): ಜೀವಾವಧಿ ಅಥವಾ 10 ವರ್ಷಗಳ ಜೈಲು
    ಐಪಿಸಿ 342 (ದುರುದ್ದೇಶದಿಂದ ಕೂಡಿ ಹಾಕುವುದು): 1 ವರ್ಷ ಜೈಲು ಅಥವಾ ದಂಡ
    ಐಪಿಸಿ 506 (ಕ್ರಿಮಿನಲ್‌ ಪಿತೂರಿ, ಜೀವ ಬೆದರಿಕೆ): 2 ವರ್ಷ ಜೈಲು ಅಥವಾ ದಂಡ

     

  • ಬಹುಕೋಟಿ ಹಗರಣಕ್ಕೆ ಟ್ವಿಸ್ಟ್- ಆರೋಪಿ ಸತ್ಯನಾರಾಯಣ್ ವರ್ಮಾ ಗಂಭೀರ ಆರೋಪ

    ಬಹುಕೋಟಿ ಹಗರಣಕ್ಕೆ ಟ್ವಿಸ್ಟ್- ಆರೋಪಿ ಸತ್ಯನಾರಾಯಣ್ ವರ್ಮಾ ಗಂಭೀರ ಆರೋಪ

    ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ (Valmiki Corporation Scam) ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಇದೀಗ 13ನೇ ಆರೋಪಿ ಸತ್ಯನಾರಾಯಣ್ ವರ್ಮಾ ಗಂಭೀರ ಆರೋಪವೊಂದನ್ನು ಮಾಡಿದ್ದಾನೆ.

    3ನೇ ಎಸಿಎಂಎಂ ಕೋರ್ಟ್‍ಗೆ ಮನವಿ ಪತ್ರ ಸಲ್ಲಿಕೆ ಮಾಡುವ ಮೂಲಕ ವರ್ಮಾ ಸಿಐಡಿ ಮೇಲೆ ಆರೋಪ ಮಾಡಿದ್ದಾನೆ. ಮೃತ ಚಂದ್ರಶೇಖರ್ ಆರೋಪ ಮಾಡಿದರೂ ನಿಜವಾದ ಆರೋಪಿಗಳನ್ನ ಸಿಐಡಿ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಸಿಐಡಿ ಅಧಿಕಾರಿಗಳಿಂದಲೂ ನನಗೆ ಜೀವ ಬೆದರಿಕೆ ಇದೆ. ತಾವು ಹೇಳಿದಂತೆ ಕೇಳಲು ಸಿಐಡಿ ಒತ್ತಡ ಹಾಕಿದ್ದಾರೆ ಎಂದು ಕೋರ್ಟ್‍ಗೆ ಸಲ್ಲಿಸಿದ ಮನವಿ ಪತ್ರದಲ್ಲಿ ವರ್ಮಾ ತಿಳಿಸಿದ್ದಾನೆ.

    ಅಲ್ಲದೇ ಖಾಲಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡ ಪೇಪರ್ ಫೋಟೋ ತೆಗೆಯಲು ಅವಕಾಶ ನೀಡಿಲ್ಲ. ನನ್ನ ಅರೆಸ್ಟ್ ಮಾಡಿದ ನಾಲ್ಕು ದಿನಗಳ ಕಾಲ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿಲ್ಲ. ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ನನಗೆ ಅವಕಾಶ ನೀಡಬೇಕು. ಸಿಐಡಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಹೇಳಿಕೆ ನೀಡಲು ಅವಕಾಶ ಕೊಡಿ. ಇನ್ ಕ್ಯಾಮಾರ  ಪ್ರೊಸಿಡಿಂಗ್ಸ್ ನ ಲ್ಲಿ ಹೇಳಿಕೆ ನೀಡಲು ಅವಕಾಶ ನೀಡಿ ಎಂದು ಪೊಲೀಸ್ ಕಸ್ಟಡಿ ಮುಗಿಸಿ ಕೋರ್ಟ್‍ಗೆ ಹಾಜರುಪಡಿಸಿದಾಗ ವಕೀಲರ ಮೂಲಕ ವರ್ಮಾ ಕೋರ್ಟ್‍ಗೆ ಮನವಿ ಪತ್ರ ಸಲ್ಲಿಕೆ ಮಾಡಿದ್ದಾನೆ.

    ಹೊಸದಾಗಿ 4 ಎಫ್‍ಐಆರ್: ವಾಲ್ಮೀಕಿ ನಿಗಮ ಅಭಿವೃದ್ಧಿ ಹಗರಣ ಪ್ರಕರಣ ಸಂಬಂಧ ಇದೀಗ ಹೊಸದಾಗಿ 4 ಎಫ್ ಐ ಆರ್ ಗಳು ದಾಖಲು ಮಾಡಿಕೊಳ್ಳಲಾಗಿದೆ. ಎಸ್ ಐಟಿಯಿಂದ ಸಿಐಡಿಯಲ್ಲಿ ವಂಚನೆ ಪ್ರಕರಣದ ಅಡಿಯಲ್ಲಿ ನೆಕ್ಕುಂಡಿ ನಾಗರಾಜ್, ಸತ್ಯನಾರಾಯಣ ವರ್ಮ, ನಾಗೇಶ್ವರ ರಾವ್ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.

  • ಮಾಜಿ ಮಂತ್ರಿ ನಾಗೇಂದ್ರ ಆಪ್ತರಿಂದ ಬೆದರಿಕೆ – ಜಡ್ಜ್‌ ಮುಂದೆಯೇ ಹೇಳಿಕೆ ನೀಡಿದ ಪ್ರಮುಖ ಆರೋಪಿ

    ಮಾಜಿ ಮಂತ್ರಿ ನಾಗೇಂದ್ರ ಆಪ್ತರಿಂದ ಬೆದರಿಕೆ – ಜಡ್ಜ್‌ ಮುಂದೆಯೇ ಹೇಳಿಕೆ ನೀಡಿದ ಪ್ರಮುಖ ಆರೋಪಿ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಜಿ ಮಂತ್ರಿ ನಾಗೇಂದ್ರ (Nagendra) ಆಪ್ತರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣದ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ (Satyanarayana Varma) ಕೋರ್ಟ್ ಸಾಕ್ಷಿಯಾಗಿ ಆರೋಪ ಮಾಡಿದ್ದಾರೆ.

    ಇಂದು ಸತ್ಯನಾರಾಯಣ ವರ್ಮಾ ಸೇರಿ ಮೂವರು ಆರೋಪಿಗಳನ್ನು ಬೆಂಗಳೂರಿನ ಮೂರನೇ ಎಸಿಎಂಎಂ ಕೋರ್ಟ್ (ACMM Court) ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ತನಗೆ ಜೀವ ಬೆದರಿಕೆ ಇರುವುದಾಗಿ ಆರೋಪಿ ವರ್ಮಾ ಅಳಲು ತೋಡಿಕೊಂಡಿದ್ದಾರೆ.

    ನಾನು ಅರೆಸ್ಟ್ ಆಗುವ ಮುನ್ನ ನಮ್ಮ ಮನೆಗೆ ನಾಗೇಂದ್ರ ಸಹಚರರು ಬಂದು ಇಡೀ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು ಎಂದು ಸತ್ಯನಾರಾಯಣವರ್ಮಾ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಕಸ್ಟಡಿಯಲ್ಲಿದ್ದ ವೇಳೆ ನಾಗೇಂದ್ರ ಪಿಎ ಆಗಿದ್ದ ನೆಕ್ಕಂಟಿ ನಾಗರಾಜ್ ಆಪ್ತರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದರು. ನ್ಯಾಯಾಲಯದಿಂದ ಕರೆದೊಯ್ಯುವ ಸಂದರ್ಭದಲ್ಲೂ ಹಲ್ಲೆಗೆ ಪ್ರಯತ್ನಿಸಿದ್ದರು ಎಂದು ಸತ್ಯನಾರಾಯಣ ವರ್ಮಾ ಆಪಾದಿಸಿದ್ದಾರೆ.

    ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಹಲ್ಲೆ ಯತ್ನದ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದರು. ಇದೇ ವೇಳೆ ನಾಗೇಂದ್ರ ಆಪ್ತಸಹಾಯಕನಾಗಿದ್ದ ನೆಕ್ಕಂಟಿ ನಾಗರಾಜನನ್ನು ಬಾಡಿವಾರೆಂಟ್ ಮೇಲೆ ನಾಲ್ಕು ದಿನ ಎಸ್‌ಐಟಿ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಜನಾಂಗೀಯ ನಿಂದನೆ ಹೇಳಿಕೆ ನೀಡಿದ್ದ ಸ್ಯಾಮ್‌ ಪಿತ್ರೋಡಾ ಈಗ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ