Tag: court

  • Valmiki Scam | ನಾಗೇಂದ್ರಗೆ ಬಿಗ್‌ ರಿಲೀಫ್‌ – ಜಾಮೀನು ಮಂಜೂರು

    Valmiki Scam | ನಾಗೇಂದ್ರಗೆ ಬಿಗ್‌ ರಿಲೀಫ್‌ – ಜಾಮೀನು ಮಂಜೂರು

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಬಹುಕೋಟಿ ಹಗರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮಾಜಿ ಸಚಿವ ನಾಗೇಂದ್ರಗೆ (Nagendra) ಜಾಮೀನು ಸಿಕ್ಕಿದೆ.

    ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special MP/MLA Court) ನಿರೀಕ್ಷಣಾ ಜಾಮೀನು (Bail) ಮಂಜೂರು ಮಾಡಿದೆ. ಈ ಪ್ರಕಣಕ್ಕೆ ಸಂಬಂಧಿಸಿದಂತೆ ಜುಲೈ 12 ರಂದು ಜಾರಿ ನಿರ್ದೇಶನಾಲಯ (ED) ಸತತ 7 ಗಂಟೆ ವಿಚಾರಣೆ ನಡೆಸಿದ ಬಳಿಕ ನಾಗೇಂದ್ರ ಅವರನ್ನು ಬಂಧಿಸಿತ್ತು.

    2 ಲಕ್ಷ ರೂ. ಬಾಂಡ್, ಎರಡು ಶ್ಯೂರಿಟಿ, ತನಿಖಾ ಸಂಸ್ಥೆಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಕೋರ್ಟ್‌ ಷರತ್ತು ವಿಧಿಸಿದೆ. ಇದನ್ನೂ ಓದಿ: Valmiki Scam | ಬಳ್ಳಾರಿ ಚುನಾವಣೆಗೆ ಹಣ ಬಳಕೆ – ಹಗರಣದ ಮಾಸ್ಟರ್‌ಮೈಂಡ್‌ ನಾಗೇಂದ್ರ

    ಸದ್ಯ ಪರಪ್ಪನ ಅಗ್ರಹಾರದಲ್ಲಿ ನಾಗೇಂದ್ರ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಇಂದು ಸಂಜೆ ಕೋರ್ಟ್‌ ಆದೇಶ ಪ್ರಕಟವಾದ ಹಿನ್ನೆಲೆಯಲ್ಲಿ ನಾಳೆ ನಾಗೇಂದ್ರ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

    ವಾಲ್ಮೀಕಿ ನಿಗಮದ ಹಣವನ್ನು 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಸ್ಪರ್ಧಿಸಿದ ಬಳ್ಳಾರಿ ಅಭ್ಯರ್ಥಿಯ ಖರ್ಚು ಮತ್ತು ಹಾಗೂ ಬಿ.ನಾಗೇಂದ್ರ (B Nagendra) ಅವರ ವೈಯಕ್ತಿಕ ವೆಚ್ಚಕ್ಕೆ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು.

    ನಾಗೇಂದ್ರ ಅವರ ಸೂಚನೆ ಮೇರೆಗೆ ನಗದನ್ನು ನಿರ್ವಹಿಸುತ್ತಿದ್ದ ವಿಜಯ್ ಕುಮಾರ್ ಗೌಡ ಅವರ ಮೊಬೈಲ್ ಫೋನ್‌ನಿಂದ ಚುನಾವಣಾ ವೆಚ್ಚದ ವಿವರಗಳನ್ನು ಪಡೆಯಲಾಗಿದೆ. ಹಗರಣ ಬೆಳಕಿಗೆ ಬಂದ ನಂತರ ರಾಜೀನಾಮೆ ನೀಡಿದ ಬಿ.ನಾಗೇಂದ್ರ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದ್ದಾರೆ. ಅಷ್ಟೇ ಅಲ್ಲದೇ ಉಳಿದವರಿಗೆ ಈ ಪ್ರಕರಣದಲ್ಲಿ ಮೌನವಾಗಿರುವಂತೆ ಸೂಚನೆ ನೀಡಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ಹೇಳಿತ್ತು.

  • ದರ್ಶನ್‌, ಪವಿತ್ರಾಗೆ ಜೈಲೇಗತಿ – ಜಾಮೀನು ಅರ್ಜಿ ವಜಾ

    ದರ್ಶನ್‌, ಪವಿತ್ರಾಗೆ ಜೈಲೇಗತಿ – ಜಾಮೀನು ಅರ್ಜಿ ವಜಾ

    ಬೆಂಗಳೂರು: ನಟ ದರ್ಶನ್‌ (Darshn) ಮತ್ತು ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು (Bail) ಅರ್ಜಿಯನ್ನು 57ನೇ ಸಿಸಿಎಚ್‌ ನ್ಯಾಯಾಲಯ ವಜಾಗೊಳಿಸಿದೆ. ಆದರೆ ಪ್ರಕರಣದ A13 ಆರೋಪಿ ದೀಪಕ್‌ಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

    ಎರಡೂ ಕಡೆಯವರ ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶ ಜೈಶಂಕರ್ ಅವರು ಅ.10 ರಂದು ವಿಚಾರಣೆ ಪೂರ್ಣಗೊಳಿಸಿ ಅ. 14ಕ್ಕೆ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದರು.

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೂನ್‌ 11ರಂದು ದರ್ಶನ್ ಅವರನ್ನು ಬಂಧಿಸಲಾಗಿತ್ತು. ಸದ್ಯ ದರ್ಶನ್‌ ಬಳ್ಳಾರಿ (Ballari) ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

    ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ಪ್ರಸನ್ನಕುಮಾರ್‌ ಅವರು ವಾದ ಮಂಡಿಸಿದ್ದಾರೆ. ದರ್ಶನ್‌ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಗೂ ಪವಿತ್ರಾ ಗೌಡ ಪರವಾಗಿ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು.

    ದರ್ಶನ್ ಸೇರಿ ನಾಲ್ವರಿಗೆ ಜಾಮೀನು ಮಂಜೂರು ಮಾಡದಂತೆ ಎಸ್‌ಪಿಪಿ ಆಕ್ಷೇಪಣೆ ಸಲ್ಲಿಸಿದ್ದರು.

  • ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ – ಮೂವರು ಆರೋಪಿಗಳಿಗೆ ಜಾಮೀನು

    ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ – ಮೂವರು ಆರೋಪಿಗಳಿಗೆ ಜಾಮೀನು

    ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಮುನಿರತ್ನ (Munirathna) ವಿರುದ್ಧ ದಾಖಲಾದ ಅತ್ಯಾಚಾರ (Rape) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special MP/MLA Court) ನಿರೀಕ್ಷಣಾ ಜಾಮೀನು (Bail) ಮಂಜೂರು ಮಾಡಿದೆ.

    ಲೋಹಿತ್, ಕಿರಣ್, ಮಂಜುನಾಥ್‌ಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ನ್ಯಾ. ಸಂತೋಷ್ ಗಜಾನನ ಭಟ್ ಅವರು ಮೂವರು ಆರೋಪಿಗಳಿಗೆ ಜಾಮೀನು ನೀಡಿದ್ದಾರೆ. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಡಾಲಿ, ನವೀನ್‌ ಶಂಕರ್

    ಸಮಾಜ ಸೇವಕಿಯಾಗಿ ಗುರುತಿಸಿಕೊಂಡು ಬಿಜೆಪಿಯಲ್ಲೂ ಸಕ್ರಿಯವಾಗಿದ್ದ ರಾಜರಾಜೇಶ್ವರಿ ನಗರದ ಸುಮಾರು 40 ವರ್ಷದ ಮಹಿಳೆಯ ದೂರಿನ ಆಧಾರದ ಮೇಲೆ ಕಗ್ಗಲೀಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

     

  • ನಾಗಮಂಗಲ ‌ಕೋಮುಗಲಭೆ ಕೇಸ್‌- ಎಲ್ಲಾ 55 ಆರೋಪಿಗಳಿಗೆ ಜಾಮೀನು ಮಂಜೂರು

    ನಾಗಮಂಗಲ ‌ಕೋಮುಗಲಭೆ ಕೇಸ್‌- ಎಲ್ಲಾ 55 ಆರೋಪಿಗಳಿಗೆ ಜಾಮೀನು ಮಂಜೂರು

    ಮಂಡ್ಯ: ನಾಗಮಂಗಲ ‌ಕೋಮುಗಲಭೆ ಪ್ರಕರಣಕ್ಕೆ (Nagamangala Communal Violence) ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಎಲ್ಲಾ ಆರೋಪಿಗಳಿಗೆ ಮಂಡ್ಯದ (Mandya) ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು (Bail) ಮಂಜೂರು ಮಾಡಿದೆ.

    ನ್ಯಾಯಾಂಗ ಬಂಧನದಲ್ಲಿದ್ದ (Judicial Custody) ಎರಡೂ ಕೋಮಿನ ಒಟ್ಟು 55 ಆರೋಪಿಗಳಿಗೆ ಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.  ಇದನ್ನೂ ಓದಿ: ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ; 1 ಗಂಟೆ ಲೋಕಾಯುಕ್ತ ವಿಚಾರಣೆ ಎದುರಿಸಿದ ಕೇಂದ್ರ ಸಚಿವ ಹೆಚ್‌ಡಿಕೆ

    ತಲಾ ಒಂದು ಲಕ್ಷ‌ ರೂ. ಮೌಲ್ಯದ ಬಾಂಡ್, ಪ್ರತೀ ಭಾನುವಾರ ಠಾಣೆಗೆ ತೆರಳಿ ಸಹಿ ಹಾಕಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ಅಪರಾಧಿ ‌ಕೃತ್ಯದಲ್ಲಿ ಭಾಗಿಯಾಗದಂತೆ ಕೋರ್ಟ್‌ ಆರೋಪಿಗಳಿಗೆ ಷರತ್ತು ವಿಧಿಸಿದೆ. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ

    ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಸೋಮವಾರ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಸೆ.11ರಂದು ಆರೋಪಿಗಳ ಬಂಧನವಾಗಿತ್ತು. ಸೆ.12 ರಿಂದ ಆರೋಪಿಗಳು ಮಂಡ್ಯ ಕಾರಾಗೃಹದಲ್ಲಿದ್ದಾರೆ.

     

  • ಪವಿತ್ರಾ ಗೌಡಗೆ ತೀವ್ರ ನಿರಾಸೆ: ಸೋಮವಾರವಾದರೂ ಸಿಗತ್ತಾ ಜಾಮೀನು?

    ಪವಿತ್ರಾ ಗೌಡಗೆ ತೀವ್ರ ನಿರಾಸೆ: ಸೋಮವಾರವಾದರೂ ಸಿಗತ್ತಾ ಜಾಮೀನು?

    ರ್ಶನ್ ಜಾಮೀನು ಅರ್ಜಿ ಸೋಮವಾರಕ್ಕೆ ಮುಂದೂಡಿದ ಬೆನ್ನಲ್ಲೇ, ಪವಿತ್ರಾ ಗೌಡ (Pavithra Gowda) ಜಾಮೀನು ಅರ್ಜಿ ವಿಚಾರಣೆ ಕೂಡ ಅದೇ ದಿನಕ್ಕೆ ಮುಂದೂಡಲಾಗಿದೆ. ಪವಿತ್ರಾ ಗೌಡ ಪರ ವಕೀಲರು ಇಂದು ವಾದ ಮಂಡಿಸಿದರು. ಪವಿತ್ರಾ ಗೌಡ ಪಾತ್ರ  ಏನೂ ಇಲ್ಲ ಅಂತ ವಾದಿಸಿದರು. ಸೋಮವಾರ ಪ್ರತಿವಾದ ಮಾಡುವುದಾಗಿ ಸರಕಾರಿ ವಕೀಲರು ಮನವಿ ಮಾಡಿಕೊಂಡರು. ಹಾಗಾಗಿ ಸೆಪ್ಟಂಬರ್ 30ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಸಹಜವಾಗಿಯೇ ಪವಿತ್ರಾ ಗೌಡಗೆ ನಿರಾಸೆಯಾಗಿದೆ.

    ಇವತ್ತು ತಮಗೆ ಜಾಮೀನು ಸಿಕ್ಕೇ ಸಿಗತ್ತೆ ಅಂತ ಕನಸು ಕಾಣುತ್ತಿದ್ದ ದರ್ಶನ್ ಗೆ ಮತ್ತೆ ನಿರಾಸೆಯಾಗಿದೆ. ಜಾಮೀನು ಅರ್ಜಿಗೆ ಇಂದು ಎಸ್.ಪಿ.ಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆ ವಾದವನ್ನು ಸೋಮವಾರ ಮಂಡಿಸುವುದಾಗಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಹಾಗಾಗಿ ಸೆಪ್ಟಂಬರ್ 30‍ಕ್ಕೆ ವಿಚಾರಣೆ ಮುಂದೂಡಲಾಯಿತು.

    ದರ್ಶನ್ ಗೆ ಐಟಿ ಗ್ರಿಲ್

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್‌ಗೆ (Darshan) ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಬಳಿಕ ಶವ ವಿಲೇವಾರಿ, ಸಾಕ್ಷ್ಯ ನಾಶಕ್ಕಾಗಿ ದರ್ಶನ್ ಲಕ್ಷ ಲಕ್ಷ ಕಾಸು ನೀಡುವ ಭರವಸೆ ನೀಡಿದ್ದರು. ಈ ಸಂಬಂಧ ಆದಾಯ ತೆರಿಗೆ (Income Tax) ಅಧಿಕಾರಿಗಳು ಬಳ್ಳಾರಿ ಜೈಲಿನಲ್ಲೇ (Ballari Jail) ಇಂದು ದರ್ಶನ್‌ರನ್ನು 7 ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದರು.

    ರೇಣುಕಾಸ್ವಾಮಿ ಕೊಲೆ ಆದ ಬಳಿಕ ಮನೆಯಲ್ಲಿ ಅಷ್ಟೊಂದು ಹಣ (Money) ಹೇಗೆ ಬಂತು? ಆ ಹಣ ಯಾರಿಗೆ ಸೇರಿದ್ದು? ಆ ಹಣವನ್ನು ನಿಮಗೆ ತಂದುಕೊಟ್ಟಿದ್ಯಾರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ದರ್ಶನ್‌ಗೆ ಕೇಳಿದ್ದಾರೆ. ಐಟಿ ಅಧಿಕಾರಿಗಳು ದರ್ಶನ್‌ ಅವರನ್ನು ವಿಚಾರಣೆ ಒಳಪಡಿಸುತ್ತಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಪರ ಅಡಿಟರ್ ಎಂ ಎಸ್ ರಾವ್ ಮತ್ತು ಅಸಿಸ್ಟೆಂಟ್ ಅರುಣ್ ಇಬ್ಬರು ಬೆಳಿಗ್ಗೆ 10:50 ಕ್ಕೆ ಜೈಲಿಗೆ ಬಂದಿದ್ದರು. ಎರಡು ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಮಧ್ಯಾಹ್ನ 12:20ಕ್ಕೆ ಜೈಲು ಪ್ರವೇಶಿಸಿ ಜೈಲು ಅಧೀಕ್ಷಕರ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ವಿಚಾರಣೆ ನಡೆಸಿದರು.

    ಕೊಲೆ ಪ್ರಕರಣದಲ್ಲಿ ಬಳಿಕೆಯಾದ ಒಟ್ಟು ಹಣದ ಬಗ್ಗೆ ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು, ಹಣದ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಯಾವ ಅಕೌಂಟ್‌ಗಳ ಮೂಲಕ ಹಣ ವ್ಯವಹಾರ ನಡೆದಿದೆ ಎನ್ನುವದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

     

    ಒಂದು ಮಾಹಿತಿ ಪ್ರಕಾರ ಶವದ ವಿಲೇವಾರಿ ವಿಚಾರವಾಗಿ 30 ಲಕ್ಷ ರೂ., ದರ್ಶನ್ ಮನೆಯಲ್ಲಿ ಸೀಜ್ ಆಗಿದ್ದ 40 ಲಕ್ಷ ರೂ., ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಸೀಜ್ ಆಗಿದ್ದ 3 ಲಕ್ಷ ರೂ., ಮೈಸೂರು ಹೊಟೇಲ್‌ನಲ್ಲಿ ಸೀಜ್ ಆಗಿದ್ದ 1 ಲಕ್ಷ ರೂ. ಸೇರಿ ಒಟ್ಟು 84 ಲಕ್ಷ ರೂ. ಹಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ 12:30 ರಿಂದ ಸಂಜೆ 7:30ರವರೆಗೆ ನಿರಂತರವಾಗಿ 7 ತಾಸುಗಳ ಕಾಲ ಐಟಿ ಅಧಿಕಾರಿಗಳು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಹಣದ ಮೂಲದ ಬಗ್ಗೆ ದರ್ಶನ್ ವಿವರಣೆ ನೀಡಿದ್ದು ಅದಕ್ಕೆ ಸೂಕ್ತ ದಾಖಲೆಗಳನ್ನು ಆಡಿಟರ್ ಸಲ್ಲಿಸಿದ್ದಾರೆ ಎನ್ನಲಾಗಿದೆ.

  • ಇಂದು ಸಿಗಲಿಲ್ಲ ದರ್ಶನ್ ಗೆ ಜಾಮೀನು: ಸೆ.30ಕ್ಕೆ ಬೇಲ್ ಭವಿಷ್ಯ

    ಇಂದು ಸಿಗಲಿಲ್ಲ ದರ್ಶನ್ ಗೆ ಜಾಮೀನು: ಸೆ.30ಕ್ಕೆ ಬೇಲ್ ಭವಿಷ್ಯ

    ವತ್ತು ತಮಗೆ ಜಾಮೀನು (Bail) ಸಿಕ್ಕೇ ಸಿಗತ್ತೆ ಅಂತ ಕನಸು ಕಾಣುತ್ತಿದ್ದ ದರ್ಶನ್ ಗೆ ಮತ್ತೆ ನಿರಾಸೆಯಾಗಿದೆ. ಜಾಮೀನು ಅರ್ಜಿಗೆ ಇಂದು ಎಸ್.ಪಿ.ಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆ ವಾದವನ್ನು ಸೋಮವಾರ ಮಂಡಿಸುವುದಾಗಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಹಾಗಾಗಿ ಸೆಪ್ಟಂಬರ್ 30‍ಕ್ಕೆ ವಿಚಾರಣೆ ಮುಂದೂಡಲಾಯಿತು.

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್ಗೆ (Darshan) ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಬಳಿಕ ಶವ ವಿಲೇವಾರಿ, ಸಾಕ್ಷ್ಯ ನಾಶಕ್ಕಾಗಿ ದರ್ಶನ್ ಲಕ್ಷ ಲಕ್ಷ ಕಾಸು ನೀಡುವ ಭರವಸೆ ನೀಡಿದ್ದರು. ಸಂಬಂಧ ಆದಾಯ ತೆರಿಗೆ (Income Tax) ಅಧಿಕಾರಿಗಳು ಬಳ್ಳಾರಿ ಜೈಲಿನಲ್ಲೇ (Ballari Jail) ಗುರುವಾರ  ದರ್ಶನ್ರನ್ನು 7 ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದ್ದರು.

    ರೇಣುಕಾಸ್ವಾಮಿ ಕೊಲೆ ಆದ ಬಳಿಕ ಮನೆಯಲ್ಲಿ ಅಷ್ಟೊಂದು ಹಣ (Money) ಹೇಗೆ ಬಂತು? ಹಣ ಯಾರಿಗೆ ಸೇರಿದ್ದು? ಹಣವನ್ನು ನಿಮಗೆ ತಂದುಕೊಟ್ಟಿದ್ಯಾರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ದರ್ಶನ್ಗೆ ಕೇಳಿದ್ದಾರೆ.

    ಐಟಿ ಅಧಿಕಾರಿಗಳು ದರ್ಶನ್ಅವರನ್ನು ವಿಚಾರಣೆ ಒಳಪಡಿಸುತ್ತಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಪರ ಅಡಿಟರ್ ಎಂ ಎಸ್ ರಾವ್ ಮತ್ತು ಅಸಿಸ್ಟೆಂಟ್ ಅರುಣ್ ಇಬ್ಬರು ಬೆಳಿಗ್ಗೆ 10:50 ಕ್ಕೆ ಜೈಲಿಗೆ ಬಂದಿದ್ದರು. ಎರಡು ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಮಧ್ಯಾಹ್ನ 12:20ಕ್ಕೆ ಜೈಲು ಪ್ರವೇಶಿಸಿ ಜೈಲು ಅಧೀಕ್ಷಕರ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ವಿಚಾರಣೆ ನಡೆಸಿದರು. ಕೊಲೆ ಪ್ರಕರಣದಲ್ಲಿ ಬಳಿಕೆಯಾದ ಒಟ್ಟು ಹಣದ ಬಗ್ಗೆ ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು, ಹಣದ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಯಾವ ಅಕೌಂಟ್ಗಳ ಮೂಲಕ ಹಣ ವ್ಯವಹಾರ ನಡೆದಿದೆ ಎನ್ನುವದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

     

    ಒಂದು ಮಾಹಿತಿ ಪ್ರಕಾರ ಶವದ ವಿಲೇವಾರಿ ವಿಚಾರವಾಗಿ 30 ಲಕ್ಷ ರೂ., ದರ್ಶನ್ ಮನೆಯಲ್ಲಿ ಸೀಜ್ ಆಗಿದ್ದ 40 ಲಕ್ಷ ರೂ., ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಸೀಜ್ ಆಗಿದ್ದ 3 ಲಕ್ಷ ರೂ., ಮೈಸೂರು ಹೊಟೇಲ್ನಲ್ಲಿ ಸೀಜ್ ಆಗಿದ್ದ 1 ಲಕ್ಷ ರೂ. ಸೇರಿ ಒಟ್ಟು 84 ಲಕ್ಷ ರೂ. ಹಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ 12:30 ರಿಂದ ಸಂಜೆ 7:30ರವರೆಗೆ ನಿರಂತರವಾಗಿ 7 ತಾಸುಗಳ ಕಾಲ ಐಟಿ ಅಧಿಕಾರಿಗಳು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಹಣದ ಮೂಲದ ಬಗ್ಗೆ ದರ್ಶನ್ ವಿವರಣೆ ನೀಡಿದ್ದು ಅದಕ್ಕೆ ಸೂಕ್ತ ದಾಖಲೆಗಳನ್ನು ಆಡಿಟರ್ ಸಲ್ಲಿಸಿದ್ದಾರೆ ಎನ್ನಲಾಗಿದೆ.

  • ಬಿಜೆಪಿ ನಾಯಕನ ಪತ್ನಿ ವಿರುದ್ಧ ಮಾನಹಾನಿ ಹೇಳಿಕೆ – ಸಂಜಯ್ ರಾವತ್‍ಗೆ 15 ದಿನಗಳ ಜೈಲು!

    ಬಿಜೆಪಿ ನಾಯಕನ ಪತ್ನಿ ವಿರುದ್ಧ ಮಾನಹಾನಿ ಹೇಳಿಕೆ – ಸಂಜಯ್ ರಾವತ್‍ಗೆ 15 ದಿನಗಳ ಜೈಲು!

    ಮುಂಬೈ: ಸಂಸದ ಮತ್ತು ಶಿವಸೇನೆ (UBT) ನಾಯಕ ಸಂಜಯ್ ರಾವತ್ ಅವರನ್ನು ಮಾನನಷ್ಟ ಪ್ರಕರಣದಲ್ಲಿ (Defamation Case) ದೋಷಿ ಎಂದು ಮಜಗಾಂವ್‍ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿ, 25,000 ರೂ.ದಂಡ ಹಾಗೂ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ.

    ಬಿಜೆಪಿ (BJP) ನಾಯಕ ಕಿರಿತ್ ಸೋಮಯ್ಯ ಅವರ ಪತ್ನಿ ಡಾ.ಮೇಧಾ ಕಿರಿತ್ ಸೋಮಯ್ಯ ಅವರ ದೂರಿನ ಮೇರೆಗೆ ರಾವತ್ ವಿರುದ್ಧ ಪ್ರಕರಣ ದಾಖಲಾಗಿತ್ತು.

    ಮೀರಾ ಭಯಂದರ್‌ನಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದ 100 ಕೋಟಿ ರೂ. ಹಗರಣದಲ್ಲಿ ತಾನು ಮತ್ತು ತನ್ನ ಪತಿ ಭಾಗಿಯಾಗಿದ್ದಾರೆ ಎಂದು ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ರಾವತ್ ಮಾಡಿದ್ದಾರೆ ಎಂದು ಆರೋಪಿಸಿ ಮೇಧಾ ಸೋಮಯ್ಯ ಅರ್ಜಿ ಸಲ್ಲಿಸಿದ್ದರು.

    ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಸಂಜಯ್ ರಾವತ್ ಅವರಿಗೆ 15 ದಿನಗಳ ಜೈಲು, 25,000 ರೂ. ದಂಡ ವಿಧಿಸಿಸಿದೆ ಎಂದು ಡಾ.ಮೇಧಾ ಸೋಮಯ್ಯ ಪರ ವಕೀಲ ವಿವೇಕಾನಂದ ಗುಪ್ತಾ ಹೇಳಿದ್ದಾರೆ.

  • ಶೆಡ್‌ಗೆ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – 6 ಮಂದಿಗೆ 20 ವರ್ಷ ಕಠಿಣ ಶಿಕ್ಷೆ

    ಶೆಡ್‌ಗೆ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – 6 ಮಂದಿಗೆ 20 ವರ್ಷ ಕಠಿಣ ಶಿಕ್ಷೆ

    ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುತ್ತೇನೆ ಎಂದು ಪುಸಲಾಯಿಸಿ ಅತ್ಯಾಚಾರ ಎಸಗಿದ ಹಾಗೂ ಪ್ರಚೋದನೆ ನೀಡಿದ 6 ಮಂದಿ ದೋಷಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 10 ಸಾವಿರ ದಂಡ ವಿಧಿಸಿ ಜಿಲ್ಲಾ ಪೋಕ್ಸೊ (POCSO) ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿದೆ.

    ರಾಯಬಾಗ ತಾಲ್ಲೂಕಿನ ನಸಲಾಪುರದ ಸಚಿನ್ ಬಾಬಾಸಾಹೇಬ ರಾಯಮಾನೆ, ರೂಪಾ ಬಾಬಾಸಾಹೇಬ ಮಾನೆ, ರಾಕೇಸ್ ಬಾಬಾಸಾಹೇಬ ರಾಯಮಾನೆ, ಚಿಕ್ಕೋಡಿ ತಾಲ್ಲೂಕಿನ ಗಳತಗಾದ ರೋಹಿಣಿ ಶ್ರೀಮಂತ ದೀಕ್ಷಿತ್, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲ್ಲೂಕಿನ ಕುಪ್ಪವಾಡದ ವಿನೋದ್ ಸುರೇಶ್ ರಾಯಮಾನೆ, ವಿಜಯ ತಾನಾಜಿ ಸಾಳುಂಕೆ ಶಿಕ್ಷೆಗೆ ಗುರಿಯಾದವರು. ಇದನ್ನೂ ಓದಿ: ಬೆಳ್ತಂಗಡಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

    2015 ಜೂ.21ರಂದು ಆರೋಪಿ ಸಚಿನ್ ರಾಯಮಾನೆ ಬಾಲಕಿಯನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ ಮಹಾರಾಷ್ಟ್ರದ (Maharashtra) ಕೊಲ್ಹಾಪುರ ಜಿಲ್ಲೆಯ ಗಗನಬಾವಡಾ ತಾಲ್ಲೂಕಿನ ನಿಗದಿವಾಡಿ ಗ್ರಾಮದ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಕೂಲಿ ಕೆಲಸಕ್ಕೆ ಬಂದಿದ್ದೇವೆ ಎಂದು ಹೇಳಿ ಅಲ್ಲಿ ಮನೆಯೊಂದರ ಶೆಡ್ ಪಡೆದುಕೊಂಡಿರುತ್ತಾರೆ. ಶೆಡ್‌ನಲ್ಲಿ ಬಾಲಕಿ ಮೇಲೆ ಆರೋಪಿ ಸಚಿನ್ ಅತ್ಯಾಚಾರ ಎಸಗಿದ್ದನು. ಇನ್ನುಳಿದವರು ಆತನಿಗೆ ಪ್ರಚೋದನೆ ನೀಡಿದ್ದರು. ಇದನ್ನೂ ಓದಿ: Tirupati Laddu Row | ಟಿಟಿಡಿ ಲಡ್ಡು ತಯಾರಿಕೆಗೆ ಪ್ರಮಾಣಿಕೃತ ತುಪ್ಪವನ್ನೇ ಬಳಸಲಾಗಿದೆ: ಜಗನ್ ಸ್ಪಷ್ಟನೆ

    ಅಪ್ರಾಪ್ತ ಬಾಲಕಿ ಶೆಡ್‌ನಿಂದ ಹೊರಗೆ ಬರದಂತೆ ಕೂಡಿಟ್ಟಿದ್ದರು. ಅಲ್ಲದೇ 3 ಲಕ್ಷ ಹಣ ಕೊಟ್ಟರೆ ಮಾತ್ರ ನಿಮ್ಮ ಮಗಳನ್ನು ಇಲ್ಲಿಂದ ವಾಪಸ್ ಕಳಿಸುವುದಾಗಿ ಬಾಲಕಿ ತಂದೆಗೆ ಬೆದರಿಕೆಯೊಡ್ಡಿದ್ದರು. ಈ ಸಂಬಂಧ ಬಾಲಕಿ ತಂದೆ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಚಿಕ್ಕೋಡಿಯ ತನಿಖಾಧಿಕಾರಿ ಎಂ.ಎಸ್.ನಾಯ್ಕ ಜಿಲ್ಲಾ ಪೋಕ್ಸೋ ನ್ಯಾಯಾಲಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲಿಸಲ್ಲ, ಇದು 7ನೇ ಹಂತದ ಪಂಚಮಸಾಲಿ ಹೋರಾಟ – ಜಯಮೃತ್ಯುಂಜಯ ಸ್ವಾಮೀಜಿ

    ಸುದೀರ್ಘವಾಗಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಅವರು, ಆರೋಪಿತರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಅದೇ ರೀತಿ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಪರಿಹಾರಧನ ಪಡೆಯುವಂತೆ ಸಂತ್ರಸ್ತೆಯ ತಂದೆಗೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು. ಇದನ್ನೂ ಓದಿ: Jammu & Kashmir | 40 ಅಡಿ ಆಳದ ಕಂದಕಕ್ಕೆ ಉರುಳಿದ ಸೇನೆಯ ಬಸ್‌ – ಮೂವರು ಯೋಧರು ದುರ್ಮರಣ

  • ಕಂಗನಾಗೆ ನಿರಾಳ: ಬಾಂಬೆ ಹೈಕೋರ್ಟ್ ಹೇಳಿದ್ದೇನು?

    ಕಂಗನಾಗೆ ನಿರಾಳ: ಬಾಂಬೆ ಹೈಕೋರ್ಟ್ ಹೇಳಿದ್ದೇನು?

    ಕಂಗನಾ ರಣಾವತ್ (Kangana Ranaut) ನಟನೆಯ ಬಹುನಿರೀಕ್ಷಿತ ‘ಎಮರ್ಜೆನ್ಸಿ’ (Emergency Film) ಸಿನಿಮಾಗೆ ಕೇಂದ್ರ ಸೆನ್ಸಾರ್ ಮಂಡಳಿಯು ಸರ್ಟಿಫಿಕೇಟ್ ಕೊಡದೇ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಕಂಗನಾ ಬಾಂಬೆ ಹೈಕೋರ್ಟ್ (Court) ಮೆಟ್ಟಿಲು ಏರಿದ್ದರು. ಈಗ ಹೈರ್ಕೋಟ್ ಸೆನ್ಸಾರ್ ಮಂಡಳಿಗೆ ಸೂಚನೆ ನೀಡಿದ್ದು, ಒಂದು ವಾರದ ಒಳಗೆ ಪ್ರಮಾಣ ಪತ್ರದ ತೀರ್ಮಾನ ತಗೆದುಕೊಳ್ಳಬೇಕು ಎಂದಿದೆ.

    ಮೊನ್ನೆಯಷ್ಟೇ ಸಿನಿಮಾದ ಟ್ರೈಲರ್ ಈಗ ರಿಲೀಸ್ ಆಗಿದೆ. ಇಂದಿರಾ ಗಾಂಧಿ (Indira Gandhi) ಪಾತ್ರದಲ್ಲಿ ಕಂಗನಾ ಪರಕಾಯ ಪ್ರವೇಶ ಮಾಡಿದ್ದಾರೆ. ಇಂಡಿಯಾ ಅಂದರೆ ಇಂದಿರಾ ಎಂದು ಖಡಕ್ ಆಗಿ ನಟಿ ಡೈಲಾಗ್ ಹೊಡೆದಿದ್ದಾರೆ.

    1975ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ ಐತಿಹಾಸಿಕ ಸನ್ನಿವೇಶದ ಚಿತ್ರಣ ಹೊಂದಿರುವ ಸಿನಿಮಾ ಇದಾಗಿದೆ. ರಾಜಕೀಯ ಮತ್ತು ಭಾವನಾತ್ಮಕ ಸನ್ನಿವೇಶಗಳನ್ನು ಇಂದಿರಾ ಗಾಂಧಿ ಅವರು ಎದುರಿಸಿದ ರೀತಿಯನ್ನು ಟ್ರೈಲರ್ ಮೂಲಕ ಝಲಕ್ ತೋರಿಸಲಾಗಿದೆ.

    ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ರಾಷ್ಟ್ರ ವ್ಯಾಪಿ ನಡೆದ ಪ್ರತಿಭಟನೆಗಳು, ಕರ್ಫ್ಯೂ, ರಾಜಕೀಯ ವಿರೋಧ ಹೀಗೆ ಹಲವು ಸನ್ನಿವೇಶಗಳನ್ನು ಟ್ರೈಲರ್‌ನಲ್ಲಿ ಹೈಲೆಟ್ ಮಾಡಲಾಗಿದೆ. ಕಂಗನಾ ‘ಇಂದಿರಾ ಗಾಂಧಿ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ ಎಂದಿದ್ದಾರೆ ಕಂಗನಾ. ದೇಶದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ. ಆದರೆ, ಇತಿಹಾಸದಲ್ಲಿ ಅವರು ಬರೆದ ಕರಾಳ ಅಧ್ಯಾಯ! (ಎಮರ್ಜೆನ್ಸಿ). ಸಾಕ್ಷಿಯ ಮಹತ್ವಾಕಾಂಕ್ಷೆಯು ದಬ್ಬಾಳಿಕೆಯೊಂದಿಗೆ ಘರ್ಷಿಸುತ್ತದೆ ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಈ ಟ್ರೈಲರ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸಿನಿಮಾ ಕುರಿತು ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ.

     

    ಈ ಚಿತ್ರದಲ್ಲಿ ಕಂಗನಾ ಜೊತೆ ಅನುಪಮ್ ಖೇರ್, ಮಹಿಮಾ ಚೌಧರಿ, ಶ್ರೇಯಸ್ ತಲ್ಪಾಡೆ ಸೇರಿದಂತೆ ಅನೇಕರು ನಟಿಸಿದ್ದಾರೆ. ಇದೇ ಸೆ.6ರಂದು ‘ಎಮೆರ್ಜೆನ್ಸಿ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ನಟಿಸುವ ಜೊತೆ ನಿರ್ದೇಶನ ಕೂಡ ಮಾಡಿದ್ದಾರೆ ಕಂಗನಾ. ರಿಂಕು ಪಿಟ್ಟಿ ಜೊತೆ ಸಹ ನಿರ್ಮಾಪಕಿಯಾಗಿ ಕೂಡ ಕಂಗನಾ ಸಾಥ್ ನೀಡಿದ್ದಾರೆ.

  • ನನ್ನ ಆಡಿಯೋ ಅಲ್ಲ, ಮುಡಾ, ನಾಗಮಂಗಲ ಗಲಭೆ ಕೇಸ್ ಡೈವರ್ಟ್‌ ಮಾಡಲು ಅರೆಸ್ಟ್‌: ಮುನಿರತ್ನ

    ನನ್ನ ಆಡಿಯೋ ಅಲ್ಲ, ಮುಡಾ, ನಾಗಮಂಗಲ ಗಲಭೆ ಕೇಸ್ ಡೈವರ್ಟ್‌ ಮಾಡಲು ಅರೆಸ್ಟ್‌: ಮುನಿರತ್ನ

    ಬೆಂಗಳೂರು: ಗುತ್ತಿಗೆದಾರರಿಗೆ ಜೀವಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಬಂಧನಕ್ಕೊಳಪಟ್ಟಿರುವ ಶಾಸಕ ಮುನಿರತ್ನ (Munirathna) ಪೊಲೀಸ್ ಕಸ್ಟಡಿ (Police Custody) ಅಂತ್ಯವಾಗಲಿದ್ದು ಮಂಗಳವಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

    ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ್ ಖುದ್ದು ವಿಚಾರಣೆಯ ನೇತೃತ್ವ ವಹಿಸಿದ್ದಾರೆ. ವಿಚಾರಣೆಯಲ್ಲಿ ಇದು ನನ್ನ ಆಡಿಯೋ ಅಲ್ಲ ಅಂತ ಮುನಿರತ್ನ ಪುನರುಚ್ಛರಿಸಿದ್ದಾರೆ.

     

    ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ಮುಡಾ, ನಾಗಮಂಗಲ ಗಲಭೆ ಕೇಸ್ ಡೈವರ್ಟ್‌ ಮಾಡಲು ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂಬುದಾಗಿ ದೂರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುನಿರತ್ನ ಬೈದಿದ್ದು ಇನ್ನೂ ಸಾಬೀತಾಗಿಲ್ಲ, ಇದು ಸಿಡಿ ಶಿವು ಕೆಲಸ: ರಮೇಶ್ ಜಾರಕಿಹೊಳಿ

    ಇಂದು ಸಂಜೆ ಹೊತ್ತಿಗೆ ಮುನಿರತ್ನ ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಲಾಯಿತು.