Tag: court judge

  • ಮುಸ್ಲಿಮರು ಎಲ್ಲ ಹಿಂದೂಗಳನ್ನ ಕೊಲ್ಲಬಹುದಿತ್ತು – ನಿವೃತ್ತ ಜಡ್ಜ್ ವಸಂತ ಮುಳಸಾವಳಗಿ

    ಮುಸ್ಲಿಮರು ಎಲ್ಲ ಹಿಂದೂಗಳನ್ನ ಕೊಲ್ಲಬಹುದಿತ್ತು – ನಿವೃತ್ತ ಜಡ್ಜ್ ವಸಂತ ಮುಳಸಾವಳಗಿ

    ವಿಜಯಪುರ: 700 ವರ್ಷ ಆಳ್ವಿಕೆ ಮಾಡಿದ ಮುಸ್ಲಿಮರು  (Muslims Community) ಹಿಂದೂಗಳನ್ನ ವಿರೋಧ ಮಾಡಿದ್ರೆ, ಒಬ್ಬ ಹಿಂದೂ ಸಹ ಉಳಿಯುತ್ತಿರಲಿಲ್ಲ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ (Judge) ವಸಂತ ಮುಳಸಾವಳಗಿ (Vasanta Mulasavalagi) ಹೇಳಿಕೆ ನೀಡಿದ್ದಾರೆ.

    ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು, `ಅಶೋಕ್ ಚಕ್ರವರ್ತಿ ನಿಜವಾದ ಇತಿಹಾಸ ಪುರುಷ ಎಂದು ಸಂವಿಧಾನ (Constitution Of India)) ಆಶಯ ಈಡೇರಿದೆಯೇ?’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ಇದನ್ನೂ ಓದಿ: ಲಕ್ಷ ಲಕ್ಷ ಬಹುಮಾನ ಗೆದ್ದುಕೊಟ್ಟ ಮೂಕಾಂಬಿಕಾ ಹೋರಿ ನಿಧನ

    ಅಕ್ಬರ್ ಹೆಂಡತಿ ಹಿಂದೂ ಆಗಿದ್ದರೂ ಆಕೆ ಧರ್ಮಾಂತರ (ಮತಾಂತರ) ಆಗಿರಲಿಲ್ಲ. ಆಕೆ ಹಿಂದೂ ಆಗಿಯೇ ಇದ್ದಳು, ಅವನು ಮುಸ್ಲಿಂ ಆಗಿಯೇ ಇದ್ದ. ಅಕ್ಬರ್ ತನ್ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ. ಬೇಕಿದ್ದರೆ ಹೋಗಿ ನೋಡಬಹುದು. ಮುಸ್ಲಿಮರು ಹಾಗೆ, ಹೀಗೆ ಮಾಡಿದ್ರು ಅಂತೀರಲ್ಲ ಮುಸ್ಲಿಮರು 700 ವರ್ಷ ಆಳ್ವಿಕೆ ಮಾಡಿದವರು ಅಂತಾ ಇತಿಹಾಸ ಹೇಳುತ್ತೆ ಅದಕ್ಕೇನು ಹೇಳ್ತಿರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗಡಿ ಜಿಲ್ಲೆಗಳ 1,800 ಗ್ರಾಪಂ ಅಭಿವೃದ್ಧಿಗೆ ವಿಶೇಷ ಯೋಜನೆ – ಬೊಮ್ಮಾಯಿ ಭರವಸೆ

    ಮುಸ್ಲಿಮರೂ ಆಗ ಹಿಂದೂಗಳನ್ನ ವಿರೋಧ ಮಾಡಿದ್ದರೆ ಒಬ್ಬ ಹಿಂದೂ ಸಹ ಭಾರತದಲ್ಲಿ ಇರುತ್ತಿರಲಿಲ್ಲ. ಎಲ್ಲರನ್ನೂ ಕೊಲ್ಲಬಹುದಿತ್ತು. ಆದರೂ ಮುಸ್ಲಿಮರು ಅಲ್ಪ ಸಂಖ್ಯಾತರು ಯಾಕಾದ್ರು ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ಪುರಾಣಗಳ ಬಗ್ಗೆ ಮಾತನಾಡುತ್ತಾ, ಶ್ರೀರಾಮ, ಕೃಷ್ಣ ಇತಿಹಾಸ ಪುರುಷರಲ್ಲ. ಅವರು ಕೇವಲ ಕಾದಂಬರಿಯಲ್ಲಿ ಬರುವ ಪಾತ್ರಧಾರಿಗಳು ಎಂದು ಅಭಿಪ್ರಾಯಪಟ್ಟರು.

    Live Tv
    [brid partner=56869869 player=32851 video=960834 autoplay=true]

  • ಗೋವಾ ಅಧಿಕಾರಿಗಳಿಂದ ಮತ್ತೆ ಮಹದಾಯಿ ವಿವಾದಿತ ಸ್ಥಳಕ್ಕೆ ಭೇಟಿ!

    ಗೋವಾ ಅಧಿಕಾರಿಗಳಿಂದ ಮತ್ತೆ ಮಹದಾಯಿ ವಿವಾದಿತ ಸ್ಥಳಕ್ಕೆ ಭೇಟಿ!

    ಬೆಳಗಾವಿ: ಈ ತಿಂಗಳಲ್ಲೇ ನ್ಯಾಯಾಧೀಕರಣದ ತೀರ್ಪು ಬರುವ ಮೊದಲೇ ಮಹದಾಯಿ ವಿವಾದಿತ ಸ್ಥಳಕ್ಕೆ ಗೋವಾ ಅಧಿಕಾರಿಗಳು ಮತ್ತೆ ಭೇಟಿ ನೀಡುವ ಉದ್ಧಟತನ ತೋರಿದ್ದಾರೆ.

    ಗೋವಾ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ದಿನೇಶ್ ಮಹಾಲೆ ಸೇರಿ 8 ಜನರ ತಂಡ ಅನುಮತಿಯಿಲ್ಲದೆ ಕಳಸಾ ಬಂಡೂರಿ ಕಾಮಗಾರಿ ಸ್ಥಳಕ್ಕೆ ಬುಧವಾರ ಆಗಮಿಸಿತ್ತು. ಖಾನಾಪೂರದ ಜಾಂಬೋಟಿ ಔಟ್‍ಪೋಸ್ಟ್ ಬಳಿ ಪೊಲೀಸರು ವಿಚಾರಿಸಿದಾಗ ಮೊದಲಿಗೆ ದೇವಸ್ಥಾನಕ್ಕೆ ಹೋಗ್ತಿದ್ದೇವೆ ಅಂತ ಹೇಳಿದ್ದಾರೆ. ಮತ್ತಷ್ಟು ವಿಚಾರಣೆಗೆ ಮುಂದಾದಾಗ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

    ಔಟ್‍ಪೋಸ್ಟ್ ನಲ್ಲಿ ಭೇಟಿ ಬಗ್ಗೆ ಲಿಖಿತ ಹೇಳಿಕೆ ನೀಡುವಾಗ ಗೋವಾ ಸರ್ಕಾರದ ಅಣತಿಯಂತೆ ಬಂದಿರುವುದಾಗಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಅಲ್ಲದೆ, ವಾಪಸ್ ಗೋವಾಗೆ ತೆರಳಿ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಅಂತ ಆರೋಪಿಸಿದ್ದಾರೆ.

    ಇದೇ ಜನವರಿ 13ಕ್ಕೆ ಸಹ ಕಳಸಾ-ಬಂಡೂರಿ ಕಾಮಗಾರಿಯ ಕಣಕುಂಬಿಗೂ ಗೋವಾ ಅಧಿಕಾರಿಗಳು ಭೇಟಿ ನೀಡಿದ್ದರು. ಬಳಿಕ, ಗೋವಾ ಅಧಿಕಾರಿಗಳು, ನೀರಾವರಿ ಸಚಿವರು ಧಿಮಾಕಿನ ಹೇಳಿಕೆಗಳನ್ನ ನೀಡಿದ್ದರು.