Tag: Court Bail

  • ಬೇಲ್‌ ನೀಡುವಾಗ ಹೈಕೋರ್ಟ್ ತನ್ನ ವಿವೇಚನೆ ಬಳಸಿಲ್ಲ – ನ್ಯಾ.ಪರ್ದಿವಾಲಾ ಅಭಿಪ್ರಾಯ

    ಬೇಲ್‌ ನೀಡುವಾಗ ಹೈಕೋರ್ಟ್ ತನ್ನ ವಿವೇಚನೆ ಬಳಸಿಲ್ಲ – ನ್ಯಾ.ಪರ್ದಿವಾಲಾ ಅಭಿಪ್ರಾಯ

    – ಜು.22ಕ್ಕೆ ದರ್ಶನ್‌ ಜಾಮೀನು ಭವಿಷ್ಯ ನಿರ್ಧಾರ

    ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜಾಮೀನು ಪಡೆದು ಶೂಟಿಂಗ್, ವಿದೇಶ ಪ್ರವಾಸ ಅಂತಾ ಜಾಲಿ ಮೂಡ್‌ನಲ್ಲಿದ್ದ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿದೆ. ಹೈಕೋರ್ಟ್ ತೀರ್ಪಿನ ಬಗ್ಗೆ ಪರಿಶೀಲಿಸಿರುವ ಸುಪ್ರೀಂ ಕೋರ್ಟ್ (Supreme Court) ಬದಲಾವಣೆಯ ಬಗ್ಗೆ ಪರೋಕ್ಷವಾಗಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಮಂಗಳವಾರ (ಜು.22) ಅಂತಿಮ ವಿಚಾರಣೆ ನಡೆಸಿ ಅಂದೇ ಆದೇಶ ನೀಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದ್ದು ಅಂದು ದರ್ಶನ ಪವಿತ್ರಾಗೌಡ (Pavithra Gowda) ಸೇರಿ ಏಳು ಮಂದಿಯ ಭವಿಷ್ಯ ನಿರ್ಧಾರವಾಗಲಿದೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ, ಜಾಮೀನು ಪಡೆದು ಸದ್ಯ ಶೂಟಿಂಗ್‌ಗಾಗಿ ವಿದೇಶಿ ಪ್ರವಾಸ ಅಂತಾ ಬ್ಯುಸಿಯಾಗಿರುವ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್ ಕೊಡುವ ಸಾಧ್ಯತೆ ಇದೆ. ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು (Bengaluru Police) ಸಲ್ಲಿಕೆ ಮಾಡಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ.ಪರ್ದಿವಾಲಾ ನೇತೃತ್ವದ ದ್ವಿ-ಸದಸ್ಯ ಪೀಠ ಹೈಕೋರ್ಟ್ ಆದೇಶದ ಬಗ್ಗೆ ಭಿನ್ನಾಭಿಪ್ರಾಯಗಳನ್ನ ವ್ಯಕ್ತಪಡಿಸಿದೆ.

    ಜಾಮೀನು ನೀಡುವಾಗ ಹೈಕೋರ್ಟ್ ತನ್ನ ವಿವೇಚನೆಯನ್ನ ಸೂಕ್ತವಾಗಿ ಬಳಸಿಲ್ಲ ಎಂದ ನ್ಯಾ. ಪರ್ದಿವಾಲಾ. ಈ ಬಗ್ಗೆ ಏನು ಹೇಳಬಯಸುತ್ತೀರಿ ಎಂದು ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್‌ಗೆ ಪ್ರಶ್ನಿಸಿದರು. ಹೈಕೋರ್ಟ್ ಆದೇಶವನ್ನ ಹೇಗೆ ನೀಡಿದೆ ಅನ್ನೋದನ್ನ ನೀವು ಗಮನಿಸಿರಬಹುದು ಎಂದು ಸಿಬಲ್ ಅವರಿಗೆ ಹೇಳಿದ ನ್ಯಾಯಾಲಯ ಕೇಳಿತು. ಇದನ್ನೂ ಓದಿ: ಮಂಗಳೂರು| ಕಿರಿಯ ವಯಸ್ಸಿನಲ್ಲೇ ರೋಲ್ಸ್‌ ರಾಯ್ಸ್‌ನಲ್ಲಿ ಉದ್ಯೋಗ; ವರ್ಷಕ್ಕೆ 72 ಲಕ್ಷ ಸಂಬಳ- ಯುವತಿಗೆ ಸನ್ಮಾನ

    22ಕ್ಕೆ ಜಾಮೀನು ಭವಿಷ್ಯ ನಿರ್ಧಾರ
    ಇದಕ್ಕೆ ಪ್ರತಿಯಾಗಿ ದರ್ಶನ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲು ಮುಂದಾಗಿದ್ದರು. ಈ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾ. ಪರ್ದಿವಾಲಾ ಮಂಗಳವಾರ ಅಂತಿಮವಾದ ಮಂಡಿಸಿ, ಅಂದೇ ಈ ಬಗ್ಗೆ ತೀರ್ಪು ನೀಡಲಾಗುವುದು ಎಂದು ಹೇಳಿದರು. ಹೀಗಾಗೀ ಅಂದು ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ: ಮಣ್ಣಗುಂಡಿ ಬಳಿ ಗುಡ್ಡಕುಸಿತ, ಬೆಂ-ಮಂ ರಾ.ಹೆದ್ದಾರಿ ಬಂದ್

    ಮಂಗಳವಾರವೇ ಪವಿತ್ರಾ ಗೌಡ ಸೇರಿ ಇತರ ಐವರ ಭವಿಷ್ಯ 
    ಇನ್ನೂ ಮಂಗಳವಾರ ನಟ ದರ್ಶನ ಮಾತ್ರವಲ್ಲ, ಆಪ್ತೆ ಪವಿತ್ರಾ ಗೌಡ ಸೇರಿ ಇತರೆ ಐವರು ಆರೋಪಿಗಳ ಭವಿಷ್ಯವೂ ನಿರ್ಧಾರವಾಗಲಿದೆ. ದರ್ಶನ ಪರ ವಾದ ಆಲಿಸಿದ ಬಳಿಕ ಉಳಿದ ಆರೋಪಿಗಳ ಪರ ವಾದವನ್ನೂ ಕೋರ್ಟ್ ಆಲಿಸಲಿದೆ. ಇದಾದ ಬಳಿಕ ಕೋರ್ಟ್ ತನ್ನ ಅಂತಿಮ ಆದೇಶ ನೀಡಲಿದೆ. ಇದನ್ನೂ ಓದಿ: 40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ಮಂದಿಗೆ ನೋಟಿಸ್‌: ವಾಣಿಜ್ಯ ತೆರಿಗೆ ಇಲಾಖೆ

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ತನಿಖೆ ಮಾಡಿ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ. ಹೀಗಾಗಿ ಜಾಮೀನು ಸಿಗಬಹುದು ಮುಂದುವರಿಸಬಹುದು ಎನ್ನುವುದು ದರ್ಶನ ಮತ್ತು ಇತರೆ ಆರೋಪಿಗಳ ಪರ ವಕೀಲರ ಲೆಕ್ಕಾಚಾರ. ಆದ್ರೆ ಹೈಕೋರ್ಟ್ ಆದೇಶದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವ ಸುಪ್ರೀಂ ಕೋರ್ಟ್ ದರ್ಶನ್ ಗೆ ಜಾಮೀನು ನೀಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದೆ. ಹೀಗಾಗೀ ಜಾಮೀನು ರದ್ದಾಗುವ ಸಾಧ್ಯತೆ ಇದೆ ಅಂತಾರೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಚಂದ್ರಕಾಂತ್ ಅಂಗಡಿ.

  • Renukaswamy Case | ಕೋರ್ಟ್‌ ವಿಚಾರಣೆಗೆ ದರ್ಶನ್‌ ಗೈರಾಗಿದ್ದೇಕೆ?

    Renukaswamy Case | ಕೋರ್ಟ್‌ ವಿಚಾರಣೆಗೆ ದರ್ಶನ್‌ ಗೈರಾಗಿದ್ದೇಕೆ?

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ (Renukaswamy Murder Case) ಪ್ರಕರಣದ ಆರೋಪಿ ನಟ ದರ್ಶನ್‌ (Darshan) ಅವರಿಂದು ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗದಿದ್ದಕ್ಕೆ ಬೆನ್ನುನೋವು ಕಾರಣ ಅನ್ನೋದು ತಿಳಿದುಬಂದಿದೆ.

    ಇಂದು ನಟ ದರ್ಶನ್‌ ಸೇರಿದಂತೆ ಪ್ರಕರಣದ 17 ಆರೋಪಿಗಳು 57ನೇ ಸಿಸಿಹೆಚ್ ಕೋರ್ಟ್‌ಗೆ (CCH Court) ಹಾಜರಾಗದ ಹಿನ್ನೆಲೆ ಕೋರ್ಟ್‌ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತಯ. ಆದ್ರೆ ವಿಚಾರಣೆ ಸಂದರ್ಭದಲ್ಲಿ ವಕೀಲರು, ದರ್ಶನ್‌ ಅವರಿಗೆ ಬೆನ್ನು ನೋವಿದೆ. ಹೀಗಾಗಿ ವಿಚಾರಣೆಗೆ ಬರಲು ವಿನಾಯಿತಿ ಕೋರಿದರು. ಜೊತೆಗೆ ಷರತ್ತು ಸಡಿಲಿಕೆ ಮಾಡಿದ್ದ ಹೈಕೋರ್ಟ್ ಆದೇಶವನ್ನೂ ಕೂಡ ಕೋರ್ಟ್‌ಗೆ ಸಲ್ಲಿಸಿದರು. ಈ ನ್ಯಾಯಾಧೀಶರು ವಿಚಾರಣೆಗೆ ಆರೋಪಿಗಳು ಗೈರಾಗುವುದು ಸರಿಯಲ್ಲ. ವಿಚಾರಣೆಗೆ ಇದ್ದಾಗ ಆರೋಪಿಗಳು ಹಾಜರಾಗಲೇಬೇಕು. ವಿನಾಯಿತಿಗೆ ಮನವಿ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವಿಚಾರಣೆಗೆ ಗೈರಾಗಿದ್ದು ಏಕೆ?
    ಈ ಬೆನ್ನಲ್ಲೇ ದರ್ಶನ್‌ ವಿಚಾರಣೆಗೆ ಹಾಜರಾಗದಿರಲು ಬೆನ್ನುನೋವೇ ಕಾರಣ ಎಂದು ಆಪ್ತ ಮೂಲಗಳಿಂದಲೂ ತಿಳಿದುಬಂದಿದೆ.  ಇದನ್ನೂ ಓದಿ: 64 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ – ಹಲವು ಮಹತ್ವದ ನಿರ್ಣಯ ಸಾಧ್ಯತೆ

    ಡೆವಿಲ್‌ ಸಿನಿಮಾಗಾಗಿ (Devil Cinema)ದರ್ಶನ್‌ ಬಿಡುವಿಲ್ಲದೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಕಳೆದ ವಾರ ಮೂರು ದಿನ ರಾಜಸ್ಥಾನದಲ್ಲಿ 28 ಗಂಟೆ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಆದ್ರೆ ರಾಜಸ್ಥಾನದಲ್ಲಿ ಶೂಟಿಂಗ್ ವೇಳೆ ಬೇರೆ ಇಂಡಸ್ಟ್ರಿಯ ಆರ್ಟಿಸ್ಟ್ ಒಬ್ಬರ ಕಾಲ್ ಶೀಟ್ ಮುಗಿದು ಹೋಗ್ತಿತ್ತು. ಆದ್ದರಿಂದ ದರ್ಶನ್‌ ನಿರಂತರ ಕೆಲಸ ಮಾಡಬೇಕಾದ ಸನ್ನಿವೇಶ ಎದುರಾಗಿತ್ತು. ಹೆಚ್ಚು ಕೆಲಸ ಮಾಡಿದ್ದರಿಂದ ದರ್ಶನ್‌ ಮತ್ತೆ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಕಳೆದ ಶನಿವಾರದಿಂದ ಬೆನ್ನು ನೋವು ಕಾಣಿಸಿಕೊಂಡಿದ್ದು, ಸೋಮವಾರ (ಏ.7) ಮೈಸೂರಿಗೆ ತೆರಳಿ ವೈದ್ಯರನ್ನ ಸಂಪರ್ಕಿಸಿದ್ದರು ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.  ಇದನ್ನೂ ಓದಿ: ಮಧ್ಯರಾತ್ರಿ ಎದೆ ಮುಟ್ಟಿ ಯುವಕನ ಅಸಭ್ಯ ವರ್ತನೆ ಕೇಸ್‌ – ಯುವತಿಯನ್ನು ಪತ್ತೆ ಹಚ್ಚೋದೆ ದೊಡ್ಡ ಸವಾಲು

    75 ಲಕ್ಷ ರೂ. ಬಿಡುಗಡೆಗೆ ಮನವಿ
    ಇನ್ನೂ ಕೋರ್ಟ್‌ ವಿಚಾರಣೆ ವೇಳೆ ದರ್ಶನ್‌ ಪರ ವಕೀಲರು, ದರ್ಶನ್‌ ಮನೆಯಿಂದ ಜಪ್ತಿ ಮಾಡಿಕೊಂಡಿದ್ದ 75 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಕೋರ್ಟ್‌, ಆದಾಯ ತೆರಿಗೆ ಇಲಾಖೆ ವಾದ ಮಂಡಿಸಿದ ಬಳಿಕ ಆದೇಶ ನೀಡುವುದಾಗಿ ಹೇಳಿ ಮೇ 20ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿತು. ಈ ವೇಳೆ ತನಿಖೆ ವೇಳೆ ಜಪ್ತಿ ಮಾಡಿದ್ದ ಮೊಬೈಲ್‌ಗಳ ಹಿಂತಿರುಗಿಸಲು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದರು.

    ಇಂದಿನ ವಿಚಾರಣೆಗೆ ಪವಿತ್ರಾ ಗೌಡ (Pavithra gowda) ಮತ್ತು ಉಳಿದ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು. ಸಹೋದರನ ಜೊತೆ ಪವಿತ್ರಾ ಗೌಡ ಆರ್.ಆರ್ ನಗರದ ಮನೆಯಿಂದ ಕೋರ್ಟ್‌ಗೆ ಆಗಮಿಸಿದ್ದರು. ಇದನ್ನೂ ಓದಿ: ಶಿವಮೊಗ್ಗ ಡಿಸಿಸಿ ಬ್ಯಾಂಕ್‌, ಅಧ್ಯಕ್ಷ ಮಂಜುನಾಥ ಗೌಡ ನಿವಾಸದ ಮೇಲೆ ಇಡಿ ದಾಳಿ

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು (Bail) ಸಿಕ್ಕಿದೆ. ಜಾಮೀನು ಪಡೆದರೂ ಪ್ರತಿ ತಿಂಗಳು ನ್ಯಾಯಾಲಯಕ್ಕೆ (Court) ಹಾಜರಾಗಬೇಕು ಎಂಬ ಷರತ್ತು ಹಿನ್ನೆಲೆಯಲ್ಲಿ ಇಂದು ಆರೋಪಿಗಳು ಕೋರ್ಟ್​ಗೆ ಹಾಜರಾಗಿದ್ದರು.  ಇದನ್ನೂ ಓದಿ: ವಿಚಾರಣೆಗೆ ದರ್ಶನ್‌ ಗೈರು – ಬೆಂಗಳೂರು ಕೋರ್ಟ್‌ ಅಸಮಾಧಾನ

  • ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ – ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

    ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ – ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

    ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ (Munirathna) ಅವರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿರಿಯ ಐಪಿಎಸ್‌ ಅಧಿಕಾರಿ ಬಿ.ಕೆ ಸಿಂಗ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಇಡೀ ರಾಜ್ಯಕ್ಕೆ ಬೆಳಕು ನೀಡುವ ರಾಯಚೂರಿನಲ್ಲೇ ಬೆಳಕಿಲ್ಲ – ಸಾರ್ವಜನಿಕರಿಂದ ತೀವ್ರ ಆಕ್ರೋಶ

    ಶುಕ್ರವಾರವಷ್ಟೇ ಬಂಧಿಸಿದ್ದ ಪೊಲೀಸರು:
    ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದರು. ಜಾತಿನಿಂದನೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಒಂದು ಪ್ರಕರಣದಲ್ಲಿ ಜಾಮೀನು ಪಡೆದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ – 4 ದಿನಗಳಲ್ಲಿ 4 ಸಾವು

    ಮಾಗಡಿ ಡಿವೈಎಸ್ಪಿ ಪ್ರವೀಣ್ ಹಾಗೂ ರಾಮನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ 7 ಜೀಪುಗಳು, ಒಂದು ಮೀಸಲು ಪಡೆಯ ವಾಹನ ಭದ್ರತೆಯಲ್ಲಿ ಶಾಸಕ ಮುನಿರತ್ನ ಅವರನ್ನ ಬಂಧಿಸಲಾಗಿತ್ತು. ಇದನ್ನೂ ಓದಿ: Mysuru Dasara | ಮೊದಲಿಂದಲೂ ಧನಂಜಯ – ಕಂಜನ್ ನಡುವೆ ಜಗಳವಿದೆ, ಮೊದಲೂ ಅಲ್ಲ ಕೊನೆಯೂ ಅಲ್ಲ: ಡಿಸಿಎಫ್

    ಏನಿದು ಪ್ರಕರಣ?
    ಶಾಸಕ ಮುನಿರತ್ನ ಸೇರಿದಂತೆ ಒಟ್ಟು 7 ಆರೋಪಿಗಳ ವಿರುದ್ಧ ಬುಧವಾರ ಸಂಜೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ಕಗ್ಗಲೀಪುರದ ಖಾಸಗಿ ರೆಸಾರ್ಟ್ನಲ್ಲಿ ಅತ್ಯಾಚಾರ ನಡೆದಿರುವುದಾಗಿ 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು ಐಟಿ ಆಕ್ಟ್‌ 2000, ಐಪಿಸಿ ಸೆಕ್ಷನ್ 354ಎ, 354ಸಿ, 376, 506, 504, 120(ಬಿ), 149, 384, 406, 308 ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಮುನಿರತ್ನ ನಾಯ್ಡು (ಎ1), ವಿಜಯ್ ಕುಮಾರ್ (ಎ2), ಸುಧಾಕರ (ಎ3), ಕಿರಣ್ ಕುಮಾರ್ (ಎ4), ಲೋಹಿತ್ ಗೌಡ (ಎ5), ಮಂಜುನಾಥ (ಎ6), ಲೋಕಿ (ಎ7) ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

    <iframe width=”560″ height=”315″ src=”https://www.youtube.com/embed/YCyGPc4hol0?si=bWm8KsOw-pBHO2Ad” title=”YouTube video player” frameborder=”0″ allow=”accelerometer; autoplay; clipboard-write; encrypted-media; gyroscope; picture-in-picture; web-share” referrerpolicy=”strict-origin-when-cross-origin” allowfullscreen></iframe>

  • ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್

    ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್

    ಬೆಂಗಳೂರು: ಜಾತಿನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದ ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ (Munirathna) ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು (kaggalipura Police) ಶುಕ್ರವಾರ ಬಂಧಿಸಿದ್ದಾರೆ.

    ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕಗ್ಗಲಿಪುರ ಪೊಲೀಸರು ಬಂಧಿಸಿ ಕರೆದೊಯ್ದಿದ್ದು, ಇಂದಿನಿಂದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಿದ್ದಾರೆ. ಜಾತಿನಿಂದನೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಅದರಂತೆ ಇಂದು (ಶುಕ್ರವಾರ) ಮುನಿರತ್ನ ಅವರು ಜೈಲಿನಿಂದ ಹೊರಬಂದ ತಕ್ಷಣವೇ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ – ಹೆಚ್.ಡಿ ರೇವಣ್ಣ ಸವಾಲ್

    ಮಾಗಡಿ ಡಿವೈಎಸ್ಪಿ ಪ್ರವೀಣ್ ಹಾಗೂ ರಾಮನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ ಬಿಗಿ ಭದ್ರತೆಯಲ್ಲಿ ಶಾಸಕ ಮುನಿರತ್ನ ಅವರನ್ನ ಬಂಧಿಸಿದೆ. 7 ಜೀಪುಗಳು, ಒಂದು ಮೀಸಲು ಪಡೆಯ ವಾಹನ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರದಲ್ಲಿ ಬಂಧಿಸಲಾಯಿತು. ಮಾರ್ಗಮಧ್ಯದಲ್ಲೇ ವೈದ್ಯಕೀಯ ತಪಾಸಣೆ ಮುಗಿದ ಬಳಿಕ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಿದ್ದಾರೆ. ವಿಚಾರಣೆ ನಂತರ ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಒಂದು ಇಂದಿರಾ ಕ್ಯಾಂಟೀನ್ ಬಂದ್ – ಅಕ್ರಮ ಚಟುವಟಿಕೆಗಳ ತಾಣವಾದ ಕ್ಯಾಂಟೀನ್

    ಏನಿದು ಪ್ರಕರಣ?
    ಶಾಸಕ ಮುನಿರತ್ನ ಸೇರಿದಂತೆ ಒಟ್ಟು 7 ಆರೋಪಿಗಳ ವಿರುದ್ಧ ಬುಧವಾರ ಸಂಜೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಕೇಸ್‌ ದಾಖಲಾಗಿತ್ತು. ಕಗ್ಗಲೀಪುರದ ಖಾಸಗಿ ರೆಸಾರ್ಟ್‌ನಲ್ಲಿ (Private Resort) ಅತ್ಯಾಚಾರ ನಡೆದಿರುವುದಾಗಿ 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು Information Technology Act 2000, ಐಪಿಸಿ ಸೆಕ್ಷನ್ 354ಎ, 354ಸಿ, 376, 506, 504, 120(ಬಿ), 149, 384, 406, 308 ಅಡಿಯಲ್ಲಿ ಕೇಸ್‌ ದಾಖಲಿಸಿದ್ದರು. ಮುನಿರತ್ನ ನಾಯ್ಡು (ಎ1), ವಿಜಯ್‌ ಕುಮಾರ್‌ (ಎ2), ಸುಧಾಕರ (ಎ3), ಕಿರಣ್‌ ಕುಮಾರ್‌ (ಎ4), ಲೋಹಿತ್‌ ಗೌಡ (ಎ5), ಮಂಜುನಾಥ (ಎ6), ಲೋಕಿ (ಎ7) ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ – 41 ದಿನಗಳ ಬಳಿಕ ವೈದ್ಯರ ಮುಷ್ಕರ ವಾಪಸ್

  • Bengaluru | ಪವಿತ್ರಾಗೌಡ ಜಾಮೀನು ಅರ್ಜಿ ವಜಾ – A1 ಆರೋಪಿಗೆ ಜೈಲು ಫಿಕ್ಸ್‌!

    Bengaluru | ಪವಿತ್ರಾಗೌಡ ಜಾಮೀನು ಅರ್ಜಿ ವಜಾ – A1 ಆರೋಪಿಗೆ ಜೈಲು ಫಿಕ್ಸ್‌!

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಹಾಗೂ ಎ7 ಆರೋಪಿ ಅನುಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.

    ಪವಿತ್ರಾಗೌಡ ಪರ ಟಾಮಿ ಸೆಬಾಸ್ಟಿಯನ್, ಅನುಕುಮಾರ್ ಪರವಾಗಿ ಹಿರಿಯ ವಕೀಲ ರಾಮಸಿಂಗ್ ವಾದ ಮಂಡಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ಕೋರ್ಟ್‌ ಸಂಜೆ 4:30ರ ವೇಳೆಗೆ ಇಬ್ಬರ ಅರ್ಜಿಯನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿತು. ಇದನ್ನೂ ಓದಿ: MUDA Scam | ಸಿಎಂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್‌ – ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ!

    ಇದೇ ಆಗಸ್ಟ್‌ 19ರಂದು ಪವಿತ್ರಾಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಆ.28 ರಂದು ವಿಚಾರಣೆ ನಡೆಸಿದ್ದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಅರ್ಜಿ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿತ್ತು. ಶನಿವಾರ ಮತ್ತೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಜಾಮೀನು ನಿರಾಕರಿಸಿತು. ಇದನ್ನೂ ಓದಿ: ಕೈಕೊಟ್ಟ ಎಂಜಿನ್‌ – ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ ಕೋಲ್ಕತ್ತಾದಲ್ಲಿ ತುರ್ತು ಭೂಸ್ಪರ್ಶ

    ಎಸ್‌ಪಿಪಿ ವಾದ ಏನಿತ್ತು?
    ಪವಿತ್ರಾಗೌಡ ಅರ್ಜಿ ವಿಚಾರಣೆ ವೇಳೆ ಪ್ರಬಲ ವಾದ ಮಂಡನೆ ಮಾಡಿದ ಎಸ್‌ಪಿಪಿ ಪ್ರಸನ್ನಕುಮಾರ್ (SPP Prasannakumar), ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಆಕ್ಷೇಪಿಸಿದರು. ಮಹಿಳೆಯಾದರೂ ಜಾಮೀನು ಕೊಡಬಾರದು ಅಂತ ಕೇರಳ ಹಾಗೂ ಕೋಲ್ಕತ್ತಾ ಹೈಕೋರ್ಟ್ (Kolkata Highcoutt) ಆದೇಶಗಳನ್ನು ಉಲ್ಲೇಖಿಸಿದರು. ಮಹಿಳೆಯರಿಗೆ ವಿಶೇಷ ಅವಕಾಶ ಯಾಕೆ ಕೊಡಬೇಕು? ಕೇರಳದ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಹಾಕಿದ ಬಳಿಕವೂ ಜಾಮೀನು ನೀಡಿಲ್ಲ, ಆದ್ರೆ ಈ ಪ್ರಕರಣದಲ್ಲಿ ಇನ್ನೂ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿಲ್ಲ. ಆದ್ದರಿಂದ ಮಹಿಳೆ ಎಂಬ ಕಾರಣಕ್ಕೆ ಪವಿತ್ರಾಗೌಡಗೆ ಜಾಮೀನು ನೀಡಬಾರದು. ಏಕೆಂದರೆ `ಕೋಲ್ಡ್ ಬ್ಲಡೆಡ್ ಮರ್ಡರ್’ ಕೇಸ್‌ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ ಎಂದು ವಾದಿಸಿದರು.

    ಮುಂದುವರಿದು, ಪವಿತ್ರಾಗೌಡ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಇತರೆ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯ ಮಾಹಿತಿಯನ್ನ ಕೋರ್ಟ್ ಕೊಟ್ಟಿದ್ದೇವೆ. ಕೊಲೆ ಮಾಡುವ ಉದ್ದೇಶದಿಂದ ರೇಣುಕಾಸ್ವಾಮಿಯನ್ನ ಅಪಹರಣ ಮಾಡಲಾಗಿದೆ. ನಂತರ ಆರೋಪಿಗಳು ತೀವ್ರ ಹಲ್ಲೆ ಮಾಡಿ ಕೊಲೆಮಾಡಿದ್ದಾರೆ. ಆರೋಪಿ ಕೇಶವಮೂರ್ತಿ ಕೂಡ ಕೇವಲ ಸಾಕ್ಷಿ ನಾಶ ಮಾಡಿಲ್ಲ, ಈ ಪ್ರಕರಣದಲ್ಲಿ ಆತನದ್ದು ಬಹುಮುಖ್ಯವಾದ ಪಾತ್ರ ಇದೆ. ತನಿಖೆ ಸಹ ಇನ್ನು ಮುಕ್ತಾಯ ಆಗಿಲ್ಲ. ಹೀಗಾಗಿ ಯಾವ ಆರೋಪಿಗಳಿಗೂ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ಇದನ್ನೂ ಓದಿ: ವಿಪಕ್ಷಗಳ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯ – ‘ಕೈ’ ನಾಯಕರಿಂದ ‘ರಾಜಭವನ ಚಲೋ’

    ಎಸ್‌ಪಿಪಿ ವಾದದ ಪ್ರಮುಖ ಅಂಶಗಳು?
    * ಪವಿತ್ರಗೌಡ ಶೆಡ್‌ಗೆ ಹೋಗಿಯೇ ಇಲ್ಲ ಅಂತಾರೆ,
    * ಆದರೆ, ಪವಿತ್ರಗೌಡರನ್ನು ದರ್ಶನ್ ಕರೆದೊಯ್ಯುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
    * ಆಕೆಯ ಚಪ್ಪಲಿಯಲ್ಲಿ ರಕ್ತದ ಕಲೆ ಪತ್ತೆಯಾಗಿದೆ, ಎಫ್‌ಎಸ್‌ಎಲ್ ವರದಿಯಲ್ಲೂ ದೃಢಪಟ್ಟಿದೆ.
    * ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್ ನೀಡಲಾಗಿದೆ, ಇದರಿಂದ 39 ಕಡೆ ಗಾಯ ಆಗಿದೆ.
    * ರೇಣುಕಾಸ್ವಾಮಿಯ ಎದೆ ಪಕ್ಕೆಲುಬು ಮುರಿದಿದೆ, ಶ್ವಾಸಕೋಶ ಡ್ಯಾಮೇಜ್ ಆಗಿದೆ.
    * ಘಟನಾ ಸ್ಥಳದಲ್ಲಿ ಆರೋಪಿಗಳ ಇರುವಿಕೆ ಬಗ್ಗೆ ಸಾಕ್ಷ್ಯ ಇದೆ.
    * ಕೋಲ್ಡ್ ಬ್ಲಡೆಡ್ ಮರ್ಡರ್‌ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ.
    * ತನಿಖೆ ಇನ್ನೂ ಮುಕ್ತಾಯ ಆಗಿಲ್ಲ, ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದೆಂದು ಆಕ್ಷೇಪ.

    ಪವಿತ್ರಾಗೌಡ ಪರ ವಕೀಲರ ವಾದ ಏನು?
    * ಪವಿತ್ರಾಗೌಡ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಅನ್ನೋದು ಕಪೋಲಕಲ್ಪಿತ
    * ದರ್ಶನ್ ಪವಿತ್ರಾಗೌಡ ಮನೆಗೆ ಹೋಗಿ ಕರೆದೊಯ್ದಿದ್ರು ಅಷ್ಟೇ
    * ಹೀಗಿರುವಾಗ ಇದರಲ್ಲಿ ಪವಿತ್ರಾಗೌಡ ಅವರ ಸಂಚು ಏನಿದೆ..?
    * ಎದೆಗೆ ಪೆಟ್ಟುಬಿದ್ದ ಕಾರಣ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ
    * ಹೀಗಾಗಿ ಪವಿತ್ರಾಗೌಡ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿಲ್ಲ
    * ಪವಿತ್ರಾಗೌಡ ವಿರುದ್ಧ ಗಂಭೀರ ಆರೋಪ ಇಲ್ಲ.. ಆದ್ದರಿಂದ ಬೇಲ್ ಕೊಡಬೇಕು ಅಂತ ಮನವಿ ಮಾಡಿದರು.

     

  • ಕೋಲ್ಡ್ ಬ್ಲಡೆಡ್ ಕೊಲೆ ಕೇಸ್‌ನಲ್ಲಿ ಪವಿತ್ರಾ ಭಾಗಿ – ಮಹಿಳೆಯರಿಗೇಕೆ ವಿಶೇಷ ಅವಕಾಶ ಕೊಡಬೇಕು?; ಎಸ್‌ಪಿಪಿ ವಾದ

    ಕೋಲ್ಡ್ ಬ್ಲಡೆಡ್ ಕೊಲೆ ಕೇಸ್‌ನಲ್ಲಿ ಪವಿತ್ರಾ ಭಾಗಿ – ಮಹಿಳೆಯರಿಗೇಕೆ ವಿಶೇಷ ಅವಕಾಶ ಕೊಡಬೇಕು?; ಎಸ್‌ಪಿಪಿ ವಾದ

    – ಪವಿತ್ರಾ ಹಲ್ಲೆಯಿಂದ ರೇಣುಕಾಸ್ವಾಮಿ ಸತ್ತಿಲ್ಲ; ವಕೀಲರ ಪ್ರತಿವಾದ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ (Pavithra Gowda), ಅನುಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಕೋರ್ಟ್‌ ಮುಂದೂಡಿದೆ. ಆರೋಪಿಗಳಾದ ವಿನಯ್, ಕೇಶವಮೂರ್ತಿ ಬೇಲ್ ಭವಿಷ್ಯ ಸೆಪ್ಟೆಂಬರ್ 2ಕ್ಕೆ ಗೊತ್ತಾಗಲಿದೆ. ಬುಧವಾರದ ವಿಚಾರಣೆ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಹೊಸ ವಿಚಾರಗಳು ಅನಾವರಣಗೊಂಡಿವೆ. ಪವಿತ್ರಾಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ (Tami Sebastian) ವಾದ ಮಂಡಿಸಿದ್ರೆ, ಜಾಮೀನು ಕೊಡಬಾರದೆಂದು ಆಕ್ಷೇಪಿಸಿ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರಬಲ ವಾದ ಮಂಡನೆ ಮಾಡಿದರು.

    ಪವಿತ್ರಾಗೌಡ ಅರ್ಜಿ ವಿಚಾರಣೆ ವೇಳೆ ಪ್ರಬಲ ವಾದ ಮಂಡನೆ ಮಾಡಿದ ಎಸ್‌ಪಿಪಿ ಪ್ರಸನ್ನಕುಮಾರ್ (SPP Prasannakumar), ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಆಕ್ಷೇಪಿಸಿದರು. ಮಹಿಳೆಯಾದರೂ ಜಾಮೀನು ಕೊಡಬಾರದು ಅಂತ ಕೇರಳ ಹಾಗೂ ಕೋಲ್ಕತ್ತಾ ಹೈಕೋರ್ಟ್ (Kolkata Highcoutt) ಆದೇಶಗಳನ್ನು ಉಲ್ಲೇಖಿಸಿದರು. ಮಹಿಳೆಯರಿಗೆ ವಿಶೇಷ ಅವಕಾಶ ಯಾಕೆ ಕೊಡಬೇಕು? ಕೇರಳದ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಹಾಕಿದ ಬಳಿಕವೂ ಜಾಮೀನು ನೀಡಿಲ್ಲ, ಆದ್ರೆ ಈ ಪ್ರಕರಣದಲ್ಲಿ ಇನ್ನೂ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿಲ್ಲ. ಆದ್ದರಿಂದ ಮಹಿಳೆ ಎಂಬ ಕಾರಣಕ್ಕೆ ಪವಿತ್ರಾಗೌಡಗೆ ಜಾಮೀನು ನೀಡಬಾರದು. ಏಕೆಂದರೆ `ಕೋಲ್ಡ್ ಬ್ಲಡೆಡ್ ಮರ್ಡರ್’ ಕೇಸ್‌ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: ಹೆಂಡತಿ ಕೊಂದು ದೃಶ್ಯ ಸಿನಿಮಾ ಮಾದರಿಯಲ್ಲಿ ಹೂತಿಟ್ಟ; ಸ್ನೇಹಿತನ ಹೆಂಡತಿ ಕೊಲೆಯಲ್ಲಿ ಭಾಗಿಯಾಗಿ ಹಳೇ ಕೇಸಲ್ಲೂ ತಗ್ಲಾಕೊಂಡ ಖತರ್ನಾಕ್

    ಮುಂದುವರಿದು, ಪವಿತ್ರಾಗೌಡ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಇತರೆ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯ ಮಾಹಿತಿಯನ್ನ ಕೋರ್ಟ್ ಕೊಟ್ಟಿದ್ದೇವೆ. ಕೊಲೆ ಮಾಡುವ ಉದ್ದೇಶದಿಂದ ರೇಣುಕಾಸ್ವಾಮಿಯನ್ನ ಅಪಹರಣ ಮಾಡಲಾಗಿದೆ. ನಂತರ ಆರೋಪಿಗಳು ತೀವ್ರ ಹಲ್ಲೆ ಮಾಡಿ ಕೊಲೆಮಾಡಿದ್ದಾರೆ. ಆರೋಪಿ ಕೇಶವಮೂರ್ತಿ ಕೂಡ ಕೇವಲ ಸಾಕ್ಷಿ ನಾಶ ಮಾಡಿಲ್ಲ, ಈ ಪ್ರಕರಣದಲ್ಲಿ ಆತನದ್ದು ಬಹುಮುಖ್ಯವಾದ ಪಾತ್ರ ಇದೆ. ತನಿಖೆ ಸಹ ಇನ್ನು ಮುಕ್ತಾಯ ಆಗಿಲ್ಲ. ಹೀಗಾಗಿ ಯಾವ ಆರೋಪಿಗಳಿಗೂ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ದೇಶ ವಿರೋಧಿ ಪೋಸ್ಟ್ ಹಾಕಿದರೆ ಜೀವಾವಧಿ ಶಿಕ್ಷೆ – ಯುಪಿಯಲ್ಲಿ ಹೊಸ ಸಾಮಾಜಿಕ ಜಾಲತಾಣ ನೀತಿ ಜಾರಿ

    ಎಸ್‌ಪಿಪಿ ವಾದದ ಪ್ರಮುಖ ಅಂಶಗಳು?
    * ಪವಿತ್ರಗೌಡ ಶೆಡ್‌ಗೆ ಹೋಗಿಯೇ ಇಲ್ಲ ಅಂತಾರೆ,
    * ಆದರೆ, ಪವಿತ್ರಗೌಡರನ್ನು ದರ್ಶನ್ ಕರೆದೊಯ್ಯುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
    * ಆಕೆಯ ಚಪ್ಪಲಿಯಲ್ಲಿ ರಕ್ತದ ಕಲೆ ಪತ್ತೆಯಾಗಿದೆ, ಎಫ್‌ಎಸ್‌ಎಲ್ ವರದಿಯಲ್ಲೂ ದೃಢಪಟ್ಟಿದೆ.
    * ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್ ನೀಡಲಾಗಿದೆ, ಇದರಿಂದ 39 ಕಡೆ ಗಾಯ ಆಗಿದೆ.
    * ರೇಣುಕಾಸ್ವಾಮಿಯ ಎದೆ ಪಕ್ಕೆಲುಬು ಮುರಿದಿದೆ, ಶ್ವಾಸಕೋಶ ಡ್ಯಾಮೇಜ್ ಆಗಿದೆ.
    * ಘಟನಾ ಸ್ಥಳದಲ್ಲಿ ಆರೋಪಿಗಳ ಇರುವಿಕೆ ಬಗ್ಗೆ ಸಾಕ್ಷ್ಯ ಇದೆ.
    * ಕೋಲ್ಡ್ ಬ್ಲಡೆಡ್ ಮರ್ಡರ್‌ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ.
    * ತನಿಖೆ ಇನ್ನೂ ಮುಕ್ತಾಯ ಆಗಿಲ್ಲ, ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದೆಂದು ಆಕ್ಷೇಪ.

    ಪವಿತ್ರಾಗೌಡ ಪರ ವಕೀಲರ ವಾದ ಏನು?
    * ಪವಿತ್ರಾಗೌಡ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಅನ್ನೋದು ಕಪೋಲಕಲ್ಪಿತ
    * ದರ್ಶನ್ ಪವಿತ್ರಾಗೌಡ ಮನೆಗೆ ಹೋಗಿ ಕರೆದೊಯ್ದಿದ್ರು ಅಷ್ಟೇ
    * ಹೀಗಿರುವಾಗ ಇದರಲ್ಲಿ ಪವಿತ್ರಾಗೌಡ ಅವರ ಸಂಚು ಏನಿದೆ..?
    * ಎದೆಗೆ ಪೆಟ್ಟುಬಿದ್ದ ಕಾರಣ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ
    * ಹೀಗಾಗಿ ಪವಿತ್ರಾಗೌಡ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿಲ್ಲ
    * ಪವಿತ್ರಾಗೌಡ ವಿರುದ್ಧ ಗಂಭೀರ ಆರೋಪ ಇಲ್ಲ.. ಆದ್ದರಿಂದ ಬೇಲ್ ಕೊಡಬೇಕು ಅಂತ ಮನವಿ ಮಾಡಿದರು. ಇದನ್ನೂ ಓದಿ: ಪೂರ್ಣಚಂದ್ರ ತೇಜಸ್ವಿ ತಂದೆಯ ನೆರಳಿನಿಂದ ಹೊರಬಂದು ಸ್ವಂತ ಆಲೋಚನೆ ಬೆಳೆಸಿಕೊಂಡರು: ಸಿದ್ದರಾಮಯ್ಯ 

  • Video | ಆ.31ಕ್ಕೆ ಪವಿತ್ರಾಗೌಡ ಬೇಲ್‌ ಭವಿಷ್ಯ – ಅಲ್ಲಿವರೆಗೂ ಜೈಲೇ ಗತಿ

    Video | ಆ.31ಕ್ಕೆ ಪವಿತ್ರಾಗೌಡ ಬೇಲ್‌ ಭವಿಷ್ಯ – ಅಲ್ಲಿವರೆಗೂ ಜೈಲೇ ಗತಿ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಅವರ ಜಾಮೀನು ಅರ್ಜಿ (Bail Application) ವಿಚಾರಣೆಯನ್ನು ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಆಗಸ್ಟ್‌ 31ಕ್ಕೆ ಮುಂದೂಡಿದೆ.

    ಇದೇ ಆಗಸ್ಟ್‌ 19ರಂದು ಪವಿತ್ರಾಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು (ಆ.28) ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಅರ್ಜಿ ವಿಚಾರಣೆ ನಡೆಸಿತು. ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿದ ನಂತರ ಎಸ್‌ಪಿಪಿ ವಾದ ಮಂಡಿಸಿದರು. ಪವಿತ್ರಾಗೌಡ ಪರ ಟಾಮಿ ಸೆಬಾಸ್ಟಿಯನ್ ವಾದಿಸಿದರು. ಸುದೀರ್ಘ ವಿಚಾರಣೆ ಬಳಿಕ ಕೋರ್ಟ್‌ ಆಗಸ್ಟ್‌ 31ಕ್ಕೆ ಆದೇಶ ಕಾಯ್ದಿರಿಸಿತು. ಇದಕ್ಕೆ ಸಂಬಂಧಿಸಿದ ವೀಡಿಯೋ ಇಲ್ಲಿದೆ….

  • ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಆಗಸ್ಟ್‌ 27ಕ್ಕೆ ಮತ್ತೆ ವಿಚಾರಣೆ‌

    ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಆಗಸ್ಟ್‌ 27ಕ್ಕೆ ಮತ್ತೆ ವಿಚಾರಣೆ‌

    ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್‍ ನಲ್ಲಿ ಜೈಲು ಪಾಲಾಗಿರೋ ಮಾಜಿ ನಟಿ ಪವಿತ್ರಾ ಗೌಡ (Pavithra Gowda) ಮೊನ್ನೆಯಷ್ಟೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ಜಾಮೀನು ನೀಡದಂತೆ ಪೊಲೀಸರ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು. ನ್ಯಾಯಾಧೀಶ ಜೈಶಂಕರ್ ಜಾಮೀನು ಅರ್ಜಿಯನ್ನು ಆ.27ಕ್ಕೆ ಮುಂದೂಡಿದರು.

    ಚಾರ್ಜ್ ಶೀಟ್ ಸಲ್ಲಿಸೋಕೆ ಇನ್ನೂ ಕೆಲವು ದಿನಗಳು ಬಾಕಿ ಇರೋ ಬೆನ್ನಲ್ಲೇ ಪವಿತ್ರಾ ಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ದರ್ಶನ್ ದೂರಾದ ಬೆನ್ನಲ್ಲೇ ಏಕಾಂಗಿಯಾಗಿ ಹೋರಾಟ ಮಾಡ್ತಿರೋ ಪವಿತ್ರಾ ಗೌಡಗೆ ಆದಷ್ಟು ಬೇಗ ಜಾಮೀನು ಸಿಗಲಿದೆ ಎನ್ನುತ್ತಿದ್ದಾರೆ ಕಾನೂನು ಪಂಡಿತರು.

    ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತನ್ನದೇನೂ ಪಾತ್ರವಿಲ್ಲ. ನನಗೆ ಮಸೇಜ್ ಬಂದಿದ್ದನ್ನು ದರ್ಶನ್ ಗೆ ತಿಳಿಸಿದ್ದೆ. ಆನಂತರ ಏನಾಯ್ತು ಅನ್ನೋದು ನನ್ನ ಗಮನಕ್ಕೆ ಬಂದಿಲ್ಲ ಅಂತ ಪವಿತ್ರಾ ಗೌಡಪರ ವಕೀಲರ ವಾದ ಮಾಡಲಿದ್ದಾರೆ ಅಂತಿವೆ ಮೂಲಗಳು. ಜೊತೆಗೆ ಮಹಿಳೆ ಅನ್ನೋ ಕಾರಣದಿಂದಾಗಿ ದರ್ಶನ್ ಗಿಂತ ಮೊದಲೇ ಪವಿತ್ರಾ ಗೌಡಗೆ ಜಾಮೀನು ಸಿಗಲಿದೆಯಂತೆ. ಆ.27ಕ್ಕೆ ಏನಾಗತ್ತೋ ಕಾದು ನೋಡಬೇಕು.

  • ರೇಣುಕಾಸ್ವಾಮಿ ಕೊಲೆ ಕೇಸ್‌: ಜಾಮೀನಿಗೆ ಅರ್ಜಿ ಸಲ್ಲಿಸಿದ A1 ಆರೋಪಿ ಪವಿತ್ರಾಗೌಡ

    ರೇಣುಕಾಸ್ವಾಮಿ ಕೊಲೆ ಕೇಸ್‌: ಜಾಮೀನಿಗೆ ಅರ್ಜಿ ಸಲ್ಲಿಸಿದ A1 ಆರೋಪಿ ಪವಿತ್ರಾಗೌಡ

    – ಜೈಲು ಸೇರಿ 72 ದಿನಗಳ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇಕೆ?

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಪರ ವಕೀಲರು ಜಾಮೀನಿಗಾಗಿ (Court Bail) ಸೋಮವಾರ (ಆ.19) ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್‌ 22ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಪರ ಹಿರಿಯ ವಕೀಲ ರೇನಿ ಸೆಬಾಸ್ಟಿಯನ್ ಸಿಸಿಎಚ್ 57ರ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾಗೌಡ ಜೈಲು ಸೇರಿ 72 ದಿನಗಳೇ ಕಳೆದಿವೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಲು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿ ಪವಿತ್ರಾಗೌಡ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಬೆಸ್ಕಾಂ ಎಡವಟ್ಟು; 1 ತಿಂಗಳಿಗೆ ಬರೋಬ್ಬರಿ 5.86 ಲಕ್ಷ ರೂ. ವಿದ್ಯುತ್‌ ಬಿಲ್‌ – ಹೌಹಾರಿದ ಮನೆ ಮಾಲೀಕ

    ಪವಿತ್ರಾಗೆ ಜೈಲು ಏಕೆ?
    ಕಳೆದ ಜೂನ್‌ 11ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಮಂದಿ ಜೈಲುಪಾಲಾಗಿದ್ದಾರೆ. ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ, ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ10 ವಿನಯ್, ಎ11 ನಾಗರಾಜ್, ಎ12 ಲಕ್ಷ್ಮಣ್, ಎ13 ದೀಪಕ್, ಎ14 ಪ್ರದೋಶ್, ಎ16 ನಿಖಿಲ್ ಆರೋಪಿಗಳು ಜೈಲು ಪಾಲಾಗಿದ್ದಾರೆ. ಸದ್ಯ ತನಿಖೆಯಲ್ಲಿ 200ಕ್ಕೂ ಅಧಿಕ ಸಾಕ್ಷ್ಯ ಸಂಗ್ರಹಿಸಿರುವ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸುವ ಹಂತದಲ್ಲಿದ್ದಾರೆ. ಇದನ್ನೂ ಓದಿ: ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು

    ಕೊಲೆ ಕೇಸ್‌ ಭೇದಿಸಿದ್ದು ಹೇಗೆ?
    ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದನೆಂದು ಆರೋಪಿಸಿ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಮತ್ತು ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್‌ ಮಾಡಿತ್ತು. ಬಳಿಕ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್‍ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆಯ ಬಳಿಕ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿ ಮೋರಿ ಬಳಿ ಎಸೆಯಲಾಗಿತ್ತು. ಇದಾದ ನಂತರ ನಾಲ್ವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಈ ವೇಳೆ ಪ್ರಕರಣದಲ್ಲಿ ನಟ ದರ್ಶನ್ ಕೈವಾಡ ಇರುವುದು ಬಯಲಾಗಿತ್ತು.

    ನಂತರ ಪೊಲೀಸರು ಮೈಸೂರಿಗೆ ತೆರಳಿ ದರ್ಶನ್‌ರನ್ನ ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತಂದಿದ್ದರು. ಬಳಿಕ ಒಬ್ಬೊಬ್ಬರಂತೆ 17 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸದ್ಯ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ – ಸಿಆರ್‌ಪಿಎಫ್‌ ಅಧಿಕಾರಿ ಹುತಾತ್ಮ

  • ಪ್ರಜ್ವಲ್ ರೇವಣ್ಣ ಕೇಸ್: 3ನೇ ಪ್ರಕರಣದಲ್ಲೂ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

    ಪ್ರಜ್ವಲ್ ರೇವಣ್ಣ ಕೇಸ್: 3ನೇ ಪ್ರಕರಣದಲ್ಲೂ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

    – ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ಪಡೆದ ಎಸ್‌ಐಟಿ

    ಬೆಂಗಳೂರು: ಕೆ.ಆರ್ ನಗರ ಸಂತ್ರಸ್ತೆ ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special Court of Representatives) ವಜಾಗೊಳಿಸಿದೆ.

    ಈಗಾಗಲೇ ಎರಡು ಪ್ರಕರಣಗಳಲ್ಲಿ ಪ್ರಜ್ವಲ್ ರೇವಣ್ಣರನ್ನ ವಶಕ್ಕೆ ಪಡೆದು ಎಸ್‌ಐಟಿ ವಿಚಾರಣೆ (SIT Enquiry)  ನಡೆಸುತ್ತಿದೆ. ಇದೀಗ 3ನೇ ಪ್ರಕರಣದಲ್ಲೂ ಜಾಮೀನು (Bail) ಅರ್ಜಿ ವಜಾಗೊಂಡಿದೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ; ಮತ್ತೋರ್ವ ಆರೋಪಿ ಬಂಧನ

    ಇತ್ತೀಚೆಗಷ್ಟೇ ಲೈಂಗಿಕ ಕಿರುಕುಳ‌ ಪ್ರಕರಣದಲ್ಲಿ 42ನೇ ಎಸಿಎಂಎಂ ನ್ಯಾಯಾಲಯವು ಪ್ರಜ್ವಲ್‌ ರೇವಣ್ಣ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಬುಧವಾರ ಸೈಬರ್ ಅಪರಾಧ ಠಾಣೆ FIR ಸಂಖ್ಯೆ.2/2024 ರಲ್ಲಿ ವಶಕ್ಕೆ ಪಡೆದಿದ್ದ ಎಸ್‌ಐಟಿ ಕೋರ್ಟ್ ಮುಂದೆ ಹಾಜರುಪಡಿಸಿತ್ತು. ಈ ವೇಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, 6 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇದನ್ನೂ ಓದಿ: ಕುವೈತ್ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರ ದುರ್ಮರಣ – ಮೋದಿ ಸಂತಾಪ