Tag: court

  • ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ: ದರ್ಶನ್ ಪರ ವಕೀಲ ಸುನೀಲ್

    ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ: ದರ್ಶನ್ ಪರ ವಕೀಲ ಸುನೀಲ್

    ಬೆಂಗಳೂರು: ನಟ ದರ್ಶನ್‌ಗೆ (Darshan) ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಿಲ್ಲ ಅಂತಾ ಆರೋಪಿಸಿ ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ರು. ಕಳೆದ ಎರಡೂವರೆ ತಿಂಗಳಿನಿಂದ ವಾದ ಪ್ರತಿವಾದ ಅಲಿಸಿದ್ದ ಕೋರ್ಟ್, ದರ್ಶನ್ ಗೆ ಜೈಲಿನ ಮ್ಯಾನ್ಯುಯಲ್ (Jail Manual) ಪ್ರಕಾರ ಕನಿಷ್ಠ ಸೌಲಭ್ಯ ನೀಡುವಂತೆ ಸೂಚಿಸಿತ್ತು. ಇಂದು ಈ ಸಂಬಂಧ ಅದೇಶ ನೀಡಿದ್ದು, ದರ್ಶನ್‌ಗೆ ಮ್ಯಾನ್ಯುಯಲ್ ಪ್ರಕಾರ ಸೌಲಭ್ಯ ನೀಡಿಕೆಗೆ ಸೂಚನೆ ನೀಡಿದೆ.

    ತಿಂಗಳಿಗೆ ಒಂದು ಸಾರಿ ಹೊಸ ಕಂಬಳಿ ನೀಡುವಂತೆ ಸೂಚಿಸಿ ಇದೇ 31 ರಂದು ಚಾರ್ಜಸ್‌ಫ್ರೇಮ್‌ ಮಾಡೋದಾಗಿ ಸೂಚಿಸಿದೆ. ಇದೇ ವೇಳೆ ಮಾತಾಡಿದ ದರ್ಶನ್ ಪರ ವಕೀಲ ಸುನೀಲ್, ಇದು ಬರೇ ಹಾಸಿಗೆ ತಲೆ ದಿಂಬು ವಿಚಾರ ಅಲ್ಲ. ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಬೇಕು ಅಂತಾ ಕೋರ್ಟ್ ಅದೇಶ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಅದೇಶ ಉಲ್ಲಂಘನೆ ಮಾಡಿದ್ರು. ಹಾಗಾಗಿ ಕೋರ್ಟ್ ಇವತ್ತು ಜೈಲು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ ಅಂತ ತಿಳಿಸಿದ್ರು. ಇದನ್ನೂ ಓದಿ: ಏರ್‌ ಇಂಡಿಯಾ 4,000 ಕೋಟಿ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ – ಸಿಇಒ ಸ್ಪೋಟಕ ಮಾಹಿತಿ

    ಜೈಲು ಮ್ಯಾನ್ಯುಯಲ್ ಫಾಲೋ ಮಾಡಿ, ಕನಿಷ್ಠ ಸೌಲಭ್ಯ ನೀಡಿ ಅಂತಾ ಆದೇಶ ನೀಡಿದೆ. ದರ್ಶನ್‌ಗೆ ಹಳೇ ಚಾದರ್ ನೀಡಲಾಗಿದೆ. ತಿಂಗಳಿಗೆ ಒಮ್ಮೆ ಅದನ್ನು ಬದಲಾವಣೆ ಮಾಡಿ ಅಂತಾ ಹೇಳಿದೆ ಎಂದರು.

    ಇನ್ನೂ ಸರ್ಕಾರಿ ಪರ ವಕೀಲರು, ಟ್ರಯಲ್ ತಡ ಮಾಡ್ತಿದ್ದಾರೆ ಅಂತಾ ಆರೋಪ ಮಾಡಿದ್ರು. ಇದು ಸತ್ಯಕ್ಕೆ ದೂರವಾದ ವಿಚಾರ, ಸುಪ್ರೀಂ ಕೋರ್ಟ್ ಅದಷ್ಟು ಬೇಗ ಟ್ರಯಲ್ ಶುರು ಮಾಡಿ ಅಂತಾ ಹೇಳಿದೆ. ಹೊರತುಪಡಿಸಿ, ಇಷ್ಟೇ ದಿನದಲ್ಲಿ ಟ್ರಯಲ್ ಮಾಡಿ ಅಂತಾ ಹೇಳಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 3 ಸಾವಿರ ಕೋಟಿ ದೇಣಿಗೆ; 1500 ಕೋಟಿ ರೂ. ಖರ್ಚು

  • ಹಾಸಿಗೆ ದಿಂಬು ಕೇಳಿದ್ದ ದರ್ಶನ್‌ಗೆ ಡಬಲ್ ಶಾಕ್

    ಹಾಸಿಗೆ ದಿಂಬು ಕೇಳಿದ್ದ ದರ್ಶನ್‌ಗೆ ಡಬಲ್ ಶಾಕ್

    ಬೆಂಗಳೂರು: ಹಾಸಿಗೆ, ದಿಂಬು ಕೇಳಿದ್ದ ದರ್ಶನ್‌ಗೆ (Darshan) ಕೋರ್ಟ್‌ ಡಬಲ್‌ ಶಾಕ್‌ ನೀಡಿದೆ. ತಿಂಗಳಿಗೊಮ್ಮೆ ಬಟ್ಟೆ, ಹೊದಿಕೆ ಒದಗಿಸಲು ಮಾತ್ರ 57ನೇ ಸಿಸಿಹೆಚ್ ಕೋರ್ಟ್ ಆದೇಶಿಸಿದೆ.

    ಪರಪ್ಪನ ಅಗ್ರಹಾರದಲ್ಲಿರುವ ಕ್ವಾರಂಟೈನ್ ಸೆಲ್‌ನಿಂದ ಮುಖ್ಯ ಸೆಲ್‌ಗೆ ವರ್ಗಾವಣೆ ಕೋರಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಾಧಿಕಾರಿಗಳಿಗೆ ಕೋರ್ಟ್‌ ಅವಕಾಶ ನೀಡಿದೆ.

    ರೇಣುಕಾಸ್ವಾಮಿ ಪ್ರಕರಣದ (Renukaswamy Murder Case) ಶೀಘ್ರ ವಿಚಾರಣೆ ಕೋರಿದ ಎಸ್‌ಪಿಪಿ ಅರ್ಜಿಯನ್ನು ಕೋರ್ಟ್‌ ಮಾನ್ಯ  ಮಾಡಿದೆ. ಅ.31 ರಂದು ದೋಷಾರೋಪ ನಿಗದಿಗೆ ಕೋರ್ಟ್ ಸೂಚನೆ ನೀಡುವ ಮೂಲಕ ದರ್ಶನ್‌ಗೆ  ಡಬಲ್‌ ಶಾಕ್‌ ಕೊಟ್ಟಿದೆ.  ಇದನ್ನೂ ಓದಿ:  ನಾಲ್ಕೇ ವಾರದಲ್ಲಿ ಒಟಿಟಿಯಲ್ಲಿ ಕಾಂತಾರ ರಿಲೀಸ್ ಯಾಕೆ? – ಒಪ್ಪಂದದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಪ್ರತಿಕ್ರಿಯೆ

    ದರ್ಶನ್ ಮತ್ತು ಪವಿತ್ರ ಗೌಡ (Pavithra Gowda) ಸೇರಿದಂತೆ 6 ಜನ ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಾಜರಾಗಿದ್ದರೆ ಉಳಿದ ಆರೋಪಿಗಳು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿದ್ದರು.

     

    ದರ್ಶನ್‌ ಅರ್ಜಿಯಲ್ಲಿ ಏನಿತ್ತು?
    ನನ್ನನ್ನು ಕ್ವಾರಂಟೈನ್‌ ಸೆಲ್‌ನಲ್ಲೇ ಇರಿಸಲಾಗಿದೆ. ಬಿಸಿಲು ಬೀಳದ ಜಾಗದಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ನನ್ನ ಆರೋಗ್ಯದಲ್ಲಿ ಮತ್ತಷ್ಟು ವ್ಯತ್ಯಾಸವಾಗಿದೆ. ಈ ಹಿಂದೆ ನ್ಯಾಯಾಲಯವು ನೀಡಿದ್ದ ಆದೇಶಕ್ಕೂ ಜೈಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ

    ಜೈಲಿನಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್‌ ಕಾಣಿಸಿಕೊಂಡಿದೆ. ನಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಹೀಗಾಗಿ ತಲೆ ದಿಂಬು, ಬೆಡ್ ಶೀಟ್, ಹಾಸಿಗೆ ನೀಡುವಂತೆ ದರ್ಶನ್‌ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

  • ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

    ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

    ಮಂಗಳೂರು: ಪ್ರಚೋದನಕಾರಿ ಭಾಷಣ ಆರೋಪದಡಿ ಎಫ್‌ಐಆರ್ ದಾಖಲಾಗಿದ್ದ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ ನೀಡಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯದ ಮುಂದಿನ ವಿಚಾರಣೆಯವರೆಗೆ ಬಂಧನ ಸಹಿತ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿ, ಅಕ್ಟೋಬರ್ 29ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    ಏನಿದು ಪ್ರಕರಣ?
    ಪ್ರಚೋದನಕಾರಿ ಭಾಷಣ ಆರೋಪದಡಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅ.20ರಂದು ಪುತ್ತೂರು ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿದ್ದರು. ಭಾಷಣದ ವೇಳೆ ಧಾರ್ಮಿಕ ದ್ವೇಷ ಹಾಗೂ ಮಹಿಳೆಯರ ಘನತೆಗೆ ಧಕ್ಕೆ ಮಾಡಿದ್ದಾರೆ ಎಂದು ಈಶ್ವರಿ ಪದ್ಮುಂಜ ಎಂಬವವರು ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆ 2023ರ 79, 196, 299, 302 ಹಾಗೂ 3(5) ಕಲಂಗಳ ಅಡಿಯಲ್ಲಿ ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸರು ಅ.30ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು.

    ಹೀಗಾಗಿ ಕಲ್ಲಡ್ಕ ಪ್ರಭಾಕರ ಭಟ್ ಪೊಲೀಸರ ಎಫ್‌ಐಆರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ವಿಚಾರಣೆವರೆಗೆ ಬಂಧನ ಸಹಿತ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

  • ಕೊಲೆ ಆರೋಪಿ ದರ್ಶನ್‌ಗೆ ಮಾಸ್ಟರ್ ಸ್ಟ್ರೋಕ್‌; ಫಂಗಸ್ ನಾಟಕಕ್ಕೂ ಕಾನೂನು ಪ್ರಾಧಿಕಾರ ವರದಿಯಲ್ಲಿ ಉತ್ತರ

    ಕೊಲೆ ಆರೋಪಿ ದರ್ಶನ್‌ಗೆ ಮಾಸ್ಟರ್ ಸ್ಟ್ರೋಕ್‌; ಫಂಗಸ್ ನಾಟಕಕ್ಕೂ ಕಾನೂನು ಪ್ರಾಧಿಕಾರ ವರದಿಯಲ್ಲಿ ಉತ್ತರ

    – ದರ್ಶನ್‌ಗೆ ಕಾಲಿನಲ್ಲಿ ಫಂಗಸ್ ಆಗಿಲ್ಲ, ಚರ್ಮ ಒಡೆದಿದೆ ಅಷ್ಟೇ
    – ಎಲ್ಲಾ ಖೈದಿಗಳಿಗೆ ಟಿವಿ ಕೊಡೋಕಾಗಲ್ಲ; ಸೊಳ್ಳೆಬತ್ತಿ, ಬಾಚಣಿಗೆಯೂ ಕೊಡುವಂತಿಲ್ಲ

    ಬೆಂಗಳೂರು: ಹಾಸಿಗೆ, ದಿಂಬು ಸೇರಿದಂತೆ ಜೈಲಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕೇಳಿಕೊಂಡಿದ್ದ ಕೊಲೆ ಆರೋಪಿ, ನಟ ದರ್ಶನ್‌ಗೆ ಕಾನೂನು ಸೇವಾ ಪ್ರಾಧಿಕಾರದ (Legal Services Authority) ವರದಿ ಮಾಸ್ಟರ್‌ ಸ್ಟ್ರೋಕ್‌ ಕೊಟ್ಟಿದೆ. ದರ್ಶನ್‌ಗೆ ಬಿಸಿಲು ಹೊರತುಪಡಿಸಿದ್ರೆ ಜೈಲು ಮ್ಯಾನ್ಯುವಲ್‌ ಪ್ರಕಾರ, ಉಳಿದೆಲ್ಲ ಸೌಲಭ್ಯಗಳು ಸಿಗುತ್ತಿವೆ ಎಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ದರ್ಶನ್‌ (Darshan) ಫಂಗಸ್‌ ನಾಟಕಕ್ಕೂ ವರದಿಯಲ್ಲಿ ಉತ್ತರ ಕೊಡಲಾಗಿದೆ.

    ಪ್ರಾಧಿಕಾರದ ವರದಿಯಲ್ಲಿ ಏನಿದೆ…? ದರ್ಶನ್‌ಗೆ ಏನು ಸೌಲಭ್ಯ ಸಿಕ್ಕಿದೆ…?
    ದರ್ಶನ್ ಇರುವ ಬ್ಯಾರಕ್‌ನಲ್ಲಿ 1 ಇಂಡಿಯನ್‌ ಟಾಯ್ಲೆಟ್‌, 2 ವೆಸ್ಟ್ರನ್ ಟಾಯ್ಲೆಟ್ ಇದೆ. ದರ್ಶನ್ 2 ಬಾತ್ ರೂಂಗಳು (ಸ್ನಾನಗೃಹ) ಇವೆ. ದರ್ಶನ್ ಬ್ಯಾರಕ್‌ನಲ್ಲಿ ಸಿಬ್ಬಂದಿಯ ಬಾಡಿ ಓರ್ನ್ ಕ್ಯಾಮೆರಾ ಕೂಡ ಪರಿಶೀಲಿಸಲಾಗಿದೆ. ದರ್ಶನ್ ಇರುವ ಬ್ಯಾರಕ್‌ನಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ ಇದೆ ಎಂದು ಹೇಳಿದೆ.

    ಇನ್ನೂ ಇಡೀ ರಾತ್ರಿ ಲೈಟ್ ಇರೋದ್ರಿಂದ ನಿದ್ರೆಗೆ ಸಮಸ್ಯೆಯಾಗ್ತಿದೆ. ಸಂಜೆ 6 ಗಂಟೆಗೆ ಲೈಟ್ ಹಾಕೋದ್ರಿಂದ ನಿದ್ರೆ ಮಾಡೋದಕ್ಕೆ ಆಗ್ತಿಲ್ಲ ಅನ್ನೋದು ದರ್ಶನ್‌ ಆರೋಪ. ಆದ್ರೆ ಕೈದಿಗಳ (Prisoners) ಭದ್ರತೆಯ ಕಾರಣಕ್ಕೆ ಇಡೀ ರಾತ್ರಿ ಲೈಟ್ ಹಾಕಲಾಗುತ್ತೆ.

    ದರ್ಶನ್‌ ದಿಂಬು ಹಾಸಿಗೆ ಕೇಳಿದ್ದಾರೆ. ಶಿಕ್ಷಿತ ಅಪರಾಧಿಗಳಿಗೆ (ಸಜಾ ಖೈದಿ) ಮಾತ್ರ ಹಾಸಿಗೆ, ದಿಂಬು ಹೊದಿಕೆ ನೀಡಲು ಅವಕಾಶ ಇದೆ. ವಿಚಾರಾಣಾಧೀನ ಕೈದಿಗೆ ಹಾಸಿಗೆ, ದಿಂಬು ನೀಡಲು ಜೈಲ್‌ ಮ್ಯಾನುವಲ್‌ನಲ್ಲಿ ಅವಕಾಶ ಇಲ್ಲ. ಅಲ್ಲದೇ ದರ್ಶನ್ ಸೆಲೆಬ್ರಿಟಿ ಆಗಿರೋದ್ರಿಂದ ಕಾರಿಡಾರ್‌ನಲ್ಲಿ ವಾಕಿಂಗ್ ಮಾಡುವಾಗ ಇತರೆ ಕೈದಿಗಳು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಿಂದ ದರ್ಶನ್ ಫೋಟೋ ತೆಗೆಯುವ ಸಾಧ್ಯತೆ ಇದೆ. ಆದ್ದರಿಂದ ಜೈಲು ಮ್ಯಾನುವಲ್ ಪ್ರಕಾರ 1 ಗಂಟೆಗೆ ವಾಕಿಂಗ್‌ಗೆ, ಆಟಕ್ಕೆ ಅವಕಾಶ ಕೊಡಲಾಗಿದೆ. ಎಲ್ಲ ಸೌಲಭ್ಯಗಳನ್ನ ನೀಡಲಾಗಿದೆ. ಅಗತ್ಯಬಿದ್ದರೆ ಜೈಲಿನಲ್ಲಿ ಶಿಸ್ತುಪಾಲನೆ, ನಿರ್ವಹಣೆಗಾಗಿ ವಾಕಿಂಗ್/ಆಟಕ್ಕೂ ನಿರ್ಬಂಧ ಏರಬಹುದು ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಟಿವಿ, ಕನ್ನಡಿ, ಬಾಚಣಿಗೆ ಕೊಡೋಕಾಗಲ್ಲ
    ದರ್ಶನ್ ಟಿವಿ ಕೇಳಿದ್ದಾನೆ, ಆದ್ರೆ ಎಲ್ಲಾ ಖೈದಿಗಳಿಗೂ ಟಿವಿ ನೀಡಲು ಅವಕಾಶ ಇಲ್ಲ. ಎಲ್ಲಾ ಬ್ಯಾರಕ್ ಅಲ್ಲಿ ಕೂಡ ಟಿವಿ ಸೌಲಭ್ಯ ಮಾಡಲು ಸಾಧ್ಯವಿಲ್ಲ. ಫೋನ್‌ನಲ್ಲಿ ಮಾತಾಡುವಾಗ ಸ್ಪೀಕರ್ ಆನ್ ಮಾಡ್ತಾರೆ ಎಂಬ ಆರೋಪವನ್ನು ದರ್ಶನ್‌ ಮಾಡಿದ್ದಾರೆ. ಆರೋಪಿಗಳ ಸುರಕ್ಷತೆ ದೃಷ್ಟಿಯಿಂದ ಸ್ಪೀಕರ್ ಆನ್ ಮಾಡುವುದು ನಿಯಮ. ಏಕೆಂದ್ರೆ ಖೈದಿಗಳಿಗೆ ಹೇಳಿ ಫೋನ್‌ಕಾಲ್‌ ರೆಕಾರ್ಡ್ ಮಾಡುವ ಅವಕಾಶ ಇದೆ.

    ಫಂಗಸ್‌ ನಾಟಕಕ್ಕೂ ಉತ್ತರ
    ಇನ್ನೂ ದರ್ಶನ್‌ ಕಾಲಿನಲ್ಲಿ ಫಂಗಸ್‌ ಬಂದಿದೆ ಅಂತ ದರ್ಶನ್‌ ಆರೋಪ ಮಾಡಿದ್ದಾರೆ. ಆದ್ರೆ ಅದು ಫಂಗಸ್ ಅಲ್ಲ, ಚರ್ಮ ಒಡೆದಿರೋದು (ಕಾಲಿನಲ್ಲಿ ಆಗಿರೋ ಬಿರುಕು) ಅಷ್ಟೇ. ಚರ್ಮರೋಗ ತಜ್ಞೆ ಡಾ.ಜ್ಯೋತಿ ಬಾಯ್ ಅವರಿಂದ ದರ್ಶನ್‌ಗೆ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ಜೈಲಿನ ವೈದ್ಯರಿಂದ ಫಿಸಿಯೋ ತೆರಪಿ ಕೂಡ ಮಾಡಿಸಲಾಗಿದೆ. ಸೊಳ್ಳೆಬತ್ತಿ, ಕನ್ನಡಿ ಮತ್ತು ಬಾಚಣಿಗೆ ನೀಡಿಲ್ಲ ಎಂಬುದು ದರ್ಶನ್‌ ಆರೋಪ, ಶಿಕ್ಷಿತ ಅಪರಾಧಿಗೆ ಮಾತ್ರ ಇದೆಲ್ಲ ನೀಡಲು ಅವಕಾಶ ಇದೆ. ವಿಚಾರಾಣಾಧೀನ ಖೈದಿಗಳಿಗೆ ನೀಡಲು ಅವಕಾಶ ಇಲ್ಲ. ಅಲ್ಲದೇ ಕನ್ನಡಿ ಬಾಚಣಿಗೆ ನೀಡಿದ್ರೆ ಅನಾಹುತ ಆಗುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚುವರಿ ಸೌಲಭ್ಯ ನೀಡೋಕಾಗೋದಿಲ್ಲ ಎಂದು ಕಾನೂನು ಸೇವಾ ಪ್ರಾಧಿಕಾರ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ಕಾರವಾರ | ಮೆಡಿಕಲ್‌ ಟೆಸ್ಟ್‌ಗೆ ಕರೆತಂದಿದ್ದ ಆರೋಪಿ ಪರಾರಿ

    ಕಾರವಾರ | ಮೆಡಿಕಲ್‌ ಟೆಸ್ಟ್‌ಗೆ ಕರೆತಂದಿದ್ದ ಆರೋಪಿ ಪರಾರಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಕಳ್ಳತನ ಪ್ರಕರಣವೊಂದರ ಆರೋಪಿಯಾಗಿದ್ದ ವ್ಯಕ್ತಿಯು ಕುಮಟಾ ಪೊಲೀಸರು ನ್ಯಾಯಾಲಯಕ್ಕೆ ಹಾಜುರುಪಡಿಸಲು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವೇಳೆ ಪೊಲೀಸರನ್ನು ದೂಡಿ ಪರಾರಿಯಾಗಿದ್ದಾನೆ.

    ಅಂಗಡಿಯೊಂದರ ಎಕ್ಸಿಟ್ ಬ್ಯಾಟರಿ ಕಳ್ಳತನ ಹಾಗೂ ಕಾರುಗಳ ಕಳ್ಳತನದಲ್ಲಿ ಆರೋಪಿಯಾಗಿರುವ ಭಟ್ಕಳದ ಫಾಸಾನ್ ಪರಾರಿಯಾದವನಾಗಿದ್ದು, ಹಲವು ಕಳ್ಳತನ ಪ್ರಕರಣದಲ್ಲಿ ಈತನನ್ನು ಬಂಧಿಸಿ ಕುಮಟಾ ಪೊಲೀಸರು ಭಟ್ಕಳದಿಂದ ಕುಮಟಾಕ್ಕೆ ವಿಚಾರಣೆಗೆ ಕರೆತಂದಿದ್ದರು.

    ನ್ಯಾಯಾಲಯಕ್ಕೆ ಹಾಜುರುಪಡಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸುವ ಸಲವಾಗಿ ಈತನ ವೈದ್ಯಕೀಯ ಪರೀಕ್ಷೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈವೇಳೆ ಇದನ್ನ ಅವಕಾಶ ಮಾಡಿಕೊಂಡ ಫಾಸಾನ್ ಪೂಲೀಸರನ್ನು ದೂಡಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಈತನ ಹುಡುಕಾಟ ನಡೆಸುತಿದ್ದಾರೆ.

    ಇನ್ನು ಈತ ಮಧ್ಯಮ ಗಾತ್ರದ ಗಡ್ಡದಾರಿ ವ್ಯಕ್ತಿಯಾಗಿದ್ದು 5.4 ಅಡಿ ಎತ್ತರವಿದ್ದು ತಪ್ಪಿಸಿಕೊಳ್ಳುವಾಗ ಕಪ್ಪು ಅಂಗಿ ಹಾಕಿಕೊಂಡಿದ್ದನು.ಸದ್ಯ ಈತನ ಹುಡುಕಾಟ ನಡೆಯುತಿದ್ದಾರೆ.

  • ʻಯಾವ ಸೌಲಭ್ಯವೂ ಇಲ್ಲ, ನೀವೇ ಬಂದು ನೋಡಿʼ – ಜಡ್ಜ್‌ಗೆ ದರ್ಶನ್‌ ಮನವಿ ಮಾಡಿದ್ದ ಅರ್ಜಿ ವಿಚಾರಣೆ ಅ.10ಕ್ಕೆ ಮುಂದೂಡಿಕೆ

    ʻಯಾವ ಸೌಲಭ್ಯವೂ ಇಲ್ಲ, ನೀವೇ ಬಂದು ನೋಡಿʼ – ಜಡ್ಜ್‌ಗೆ ದರ್ಶನ್‌ ಮನವಿ ಮಾಡಿದ್ದ ಅರ್ಜಿ ವಿಚಾರಣೆ ಅ.10ಕ್ಕೆ ಮುಂದೂಡಿಕೆ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಜೈಲು ಸೇರಿರೋ ನಟ ದರ್ಶನ್, ಜೈಲಲ್ಲಿ ಯಾವುದೇ ಸೌಕರ್ಯ ನೀಡುತ್ತಿಲ್ಲ. ನ್ಯಾಯಾಧೀಶರೇ ಖುದ್ದು ಪರಿಶೀಲಿಸಬೇಕೆಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅ.10ಕ್ಕೆ ಮುಂದೂಡಲಾಗಿದೆ.

    ದರ್ಶನ್ ಪರ ವಕೀಲ ಸುನಿಲ್ ಕುಮಾರ್ ವಾದ ಮಂಡಿಸಿ, ನಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಹಾಗಾಗಿ ಪದೇ ಪದೇ ಅರ್ಜಿ ಹಾಕುತ್ತಿದ್ದೇವೆ. ಈ ಬಗ್ಗೆ ಜಡ್ಜ್ ಪರಿಶೀಲನೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದಕ್ಕೆ ಎಸ್‍ಪಿಪಿ, ಅರ್ಜಿಯೇ ಊರ್ಜಿತವಲ್ಲ. ಯೋಗ್ಯವಲ್ಲದ ಅರ್ಜಿ ಇದು, ವಜಾ ಮಾಡುವಂತೆ ಮನವಿ ಮಾಡಿದರು. ಇದು ಟ್ರಯಲ್ ತಪ್ಪಿಸಿಕೊಳ್ಳುವ ಪ್ರಯತ್ನ ಎಂದು ಆರೋಪಿಸಿದರು. ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕೇಸ್‌ – ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ರೇಣುಕಾಸ್ವಾಮಿ ಕೊಲೆ ಕೇಸಿನ ವಿಚಾರಣೆ ಸಂಬಂಧ, ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಮೂವರು ಆರೋಪಿಗಳು ಗೈರು ಹಾಜರಾಗಿದ್ದರಿಂದ ಅರ್ಜಿಯ ವಿಚಾರಣೆಯನ್ನು ಅ.18ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇದನ್ನೂ ಓದಿ: ಮುಡಾ ಕೇಸ್ – 2 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕೋರ್ಟ್‌ ಆದೇಶ

  • ಮುಡಾ ಕೇಸ್ – 2 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕೋರ್ಟ್‌ ಆದೇಶ

    ಮುಡಾ ಕೇಸ್ – 2 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕೋರ್ಟ್‌ ಆದೇಶ

    – ಹೆಚ್ಚುವರಿ ಕಾಲಾವಕಾಶ ಕೇಳುವಂತಿಲ್ಲ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಸಿಎಂ ಪತ್ನಿ ವಿರುದ್ಧದ ಮುಡಾ ಪ್ರಕರಣದ (Muda Case) ತನಿಖೆ ಪೂರ್ಣಗೊಳಿಸಲು ತನಿಖಾ ಸಂಸ್ಥೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2 ತಿಂಗಳು ಗಡುವು ನೀಡಿದೆ.

    ಕಳೆದ 6 ತಿಂಗಳಿಂದ ತನಿಖೆಯಲ್ಲಿ ಪ್ರಗತಿ ಆಗದ ಹಿನ್ನೆಲೆ ಅರ್ಜಿದಾರರು ಬಿ ರಿಪೋರ್ಟ್‌ ಸಲ್ಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿ, ಇಂದಿಗೆ ಆದೇಶ ಕಾಯ್ದಿರಿಸಿತ್ತು. ಆದೇಶದಲ್ಲಿ 2 ತಿಂಗಳ ಒಳಗಾಗಿ ತನಿಖೆಯನ್ನು ಸಂಪೂರ್ಣಗೊಳಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಬೇಕು. ಹೆಚ್ಚುವರಿಯಾಗಿ ಕಾಲಾವಕಾಶ ಕೋರುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ. ಇದನ್ನೂ ಓದಿ:ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್; ಅಕ್ರಮವಾಗಿ 14 ನಿವೇಶನ ಬಂದಿಲ್ಲ ಎಂದಾದರೆ, ಅದನ್ನು ಹಿಂತಿರುಗಿಸಿದ್ದೇಕೆ? – ವಿಜಯೇಂದ್ರ

    ಲೋಕಾಯುಕ್ತ ಪೊಲೀಸರು ತನಿಖೆಯ ನೆಪದಲ್ಲಿ ಕಾಲಹರಣ ಮಾಡುತ್ತಾ ಇದ್ದಾರೆ. ಹೀಗಾಗಿ ಬಿ ರಿಪೋರ್ಟ್‌ಗೆ ತೀರ್ಮಾನ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಲಯ ನವೆಂಬರ್ 15ಕ್ಕೆ ವಿಚಾರಣೆ ಮುಂದೂಡಿದೆ. ತನಿಖಾಧಿಕಾರಿ ಬದಲಾವಣೆ ಮಾಡುವಂತೆ ಕೋರಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯ ಇದೇ ವೇಳೆ ವಜಾ ಮಾಡಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ, ಇಂದು ಆದೇಶ ಮಾಡುವ ನಿರೀಕ್ಷೆ ಇತ್ತು. ನ್ಯಾಯಾಲಯ ತನಿಖಾಧಿಕಾರಿ ಬದಲಾವಣೆ ಮಾಡಲು ಕೋರಿದ್ದ ಅರ್ಜಿ ವಜಾ ಮಾಡಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ಅಂತಿಮ ವರದಿ ಸಲ್ಲಿಕೆಗೆ 2 ತಿಂಗಳ ಕಾಲಾವಕಾಶ ನೀಡಿದೆ. ಅಂತಿಮ ವರದಿ ಸಲ್ಲಿಕೆ ಬಳಿಕ ಬಿ- ರಿಪೋರ್ಟ್ ವಿರುದ್ಧ ತೀರ್ಪು ಪ್ರಕಟಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್‌, ಸಿಎಂಗೆ ಕ್ಲೀನ್‌ ಚಿಟ್‌ – 11,200 ಪುಟಗಳ ತನಿಖಾ ವರದಿ ಸಲ್ಲಿಕೆ

  • ಮತ್ತೆ ಬೆನ್ನು ನೋವಿನ ಕಥೆ ಹೇಳಿದ ದರ್ಶನ್‌ – ಮಹತ್ವ ಕೊಡದ ಜಡ್ಜ್‌

    ಮತ್ತೆ ಬೆನ್ನು ನೋವಿನ ಕಥೆ ಹೇಳಿದ ದರ್ಶನ್‌ – ಮಹತ್ವ ಕೊಡದ ಜಡ್ಜ್‌

    ಬೆಂಗಳೂರು: ಇಂದು ವಿಚಾರಣೆಗೆ ಹಾಜರಾಗಿದ್ದ ದರ್ಶನ್‌ (Darshan)  ಮತ್ತೆ ಬೆನ್ನುನೋವಿನ ನಾಟಕವಾಡಿದರೂ ನ್ಯಾಯಾಧೀಶರು ಮಹತ್ವ ಕೊಡಲಿಲ್ಲ.

    ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case)  ಸೆಷನ್ ಕೋರ್ಟ್ ಮುಂದೆ ದರ್ಶನ್ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

     

    ಈ ವೇಳೆ, ಮತ್ತೆ ಬೆನ್ನುನೋವಿನ ನಾಟಕವಾಡಿದರಾದರೂ ನ್ಯಾಯಾಧೀಶರು ಮಹತ್ವ ಕೊಡಲಿಲ್ಲ. ಕೋರ್ಟ್ ಆದೇಶದ ಬಳಿಕ ಸೌಲಭ್ಯ ನೀಡುತ್ತಾ ಇದ್ದಾರಾ ಅಂತ ಜಡ್ಜ್ ಪ್ರಶ್ನಿಸಿದರು. ಇದಕ್ಕೆ ಇಲ್ಲ ಸರ್, ಯಾವುದನ್ನೂ ಕೊಟ್ಟಿಲ್ಲ. 12 ಅಡಿ ಜಾಗದಲ್ಲೇ ವಾಕ್ ಮಾಡಿ ಎನ್ನುತ್ತಾರೆ. ಆ ಜಾಗದಲ್ಲೇ ಸುತ್ತಾಡುತ್ತಿದ್ದೇನೆ. ತುಂಬಾ ಕಷ್ಟ ಆಗುತ್ತಿದೆ ಎಂದು ದರ್ಶನ್ ಹೇಳಿದರು.  ಇದನ್ನೂ ಓದಿ:  ಧರ್ಮಸ್ಥಳ ಕೇಸ್‌ | ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್ – ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ

    ದರ್ಶನ್ ವಕೀಲ ಸುನೀಲ್ ವಾದಿಸಿ, ದಿನಕ್ಕೆ 20 ಬಾರಿ ಕೇಳಿದರೂ ಯಾವುದೇ ಸವಲತ್ತು ಕೊಡುತ್ತಿಲ್ಲ ಜೈಲಾಧಿಕಾರಿಗಳಿಗೆ ಕೋರ್ಟ್ ಆರ್ಡರ್ ಕೊಟ್ಟಿದರೂ ಅವಕಾಶ ನೀಡುತ್ತಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು.

    ಆಕ್ಷೇಪಣೆಗೆ ಸೆ.30ಕ್ಕೆ ಅವಕಾಶ ನೀಡಿದ ಕೋರ್ಟ್‌ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಲಾಗಿದೆ. ಈ ಮಧ್ಯೆ ಪೊಲೀಸರು ಕೂಡ ಚಾರ್ಜ್ ಫ್ರೇಮ್ ಮಾಡಿಲ್ಲ.

  • ದಾವಣಗೆರೆ | ಡಿವೋರ್ಸ್ ವಿವಾದ – ಕೋರ್ಟ್‍ನಲ್ಲೇ ಪತ್ನಿಗೆ ಚಾಕು ಇರಿದ ಪತಿ

    ದಾವಣಗೆರೆ | ಡಿವೋರ್ಸ್ ವಿವಾದ – ಕೋರ್ಟ್‍ನಲ್ಲೇ ಪತ್ನಿಗೆ ಚಾಕು ಇರಿದ ಪತಿ

    ದಾವಣಗೆರೆ: ಕೋರ್ಟ್ (Court) ಒಳಗಡೆಯೇ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಾಕು ಇರಿದ ಪ್ರಕರಣ ದಾವಣಗೆರೆಯಲ್ಲಿ (Davanagere) ನಡೆದಿದೆ.

    ಚಾಕು ಇರಿತಕ್ಕೊಳಗಾದ ಮಹಿಳೆಯನ್ನು ಪದ್ಮಾವತಿ (30) ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರು ಡಿವೋರ್ಸ್ (Divorce) ಅರ್ಜಿ ವಿಚಾರಣೆ ಹಿನ್ನೆಲೆ ಕೋರ್ಟ್‍ಗೆ ಆಗಮಿಸಿದ್ದರು. ಈ ವೇಳೆ ಆರೋಪಿ ಏಕಾಏಕಿ ಮಹಿಳೆಗೆ ಚಾಕು ಇರಿದಿದ್ದಾನೆ. ಇದನ್ನೂ ಓದಿ: ಕಲಬುರಗಿ | ಬೆತ್ತಲೆ ಮಾಡಿ ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

    ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಪ್ರವೀಣ್ ಕುಮಾರ್‌ ವಿರುದ್ಧ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಾತು ಬಾರದ ಮಹಿಳೆ ಬಾಯಿಗೆ ಬಟ್ಟೆ ತುರುಕಿ ವಿಕೃತಿ – ಆರೋಪಿ ಅರೆಸ್ಟ್

  • ನಟ ದರ್ಶನ್‌ಗೆ ಹಾಸಿಗೆ, ದಿಂಬು – ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ನಟ ದರ್ಶನ್‌ಗೆ ಹಾಸಿಗೆ, ದಿಂಬು – ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಬೆಂಗಳೂರು: ಕೋರ್ಟ್ ಆದೇಶದ ಬಳಿಕವೂ ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ನೀಡಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಕೋರ್ಟ್ ಸೆ.19ಕ್ಕೆ ಕಾಯ್ದಿರಿಸಿದೆ.

    ಇಂದು (ಸೆ.17) 57ನೇ ಸಿಸಿಹೆಚ್ ಕೋರ್ಟ್ ಕೊಲೆ ಆರೋಪಿ ದರ್ಶನ್ ಪರ ವಕೀಲರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದರು. ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ದರ್ಶನ್‌ಗೆ ನೀಡಿರುವ ಸೌಲಭ್ಯಗಳ ಕುರಿತ ವರದಿಯನ್ನು ಸರ್ಕಾರದ ಪರ ವಕೀಲ ಸಚಿನ್ ಸಲ್ಲಿಕೆ ಮಾಡಿದರು. ಈ ವೇಳೆ ದರ್ಶನ್ ಪರ ವಕೀಲ ಸುನೀಲ್ ವಾದ ಆರಂಭಿಸಿ, ಕೋರ್ಟ್ ಆದೇಶ ಮಾಡಿದರೂ ಕೂಡ ಲಘುವಾಗಿ ಪರಿಗಣಿಸಿದೆ. ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ವಿಡಿಯೋ ಕಾಲ್‌ಗೆ ಅವಕಾಶ ನೀಡಲಾಗಿದೆ. ಫೋನ್ ಮಾಡಲು ಕೂಡ ಅವಕಾಶ ನೀಡಲಾಗಿದೆ. ಕಂಬಳಿ, ಚಾಪೆ, ನೀಡಿದ್ದಾರೆ ಅಂತ ಉಲ್ಲೇಖ ಮಾಡಿದ್ದಾರೆ. ಆದರೆ, ನಾವು ಕೇಳಿದ್ದನ್ನು ಕೊಡುತ್ತಿಲ್ಲ. ಕ್ವಾರಂಟೈನ್ ಸೆಲ್ ಅಲ್ಲಿ ಒಂದು ತಿಂಗಳಿಂದ ಇರಿಸಿದ್ದಾರೆ. ಪಾಕಿಸ್ತಾನದ ಆರೋಪಿಗಳಿಗೂ ಕೇರಂ ಗೇಮ್ ಆಡೋಕೆ ಬಿಟ್ಟಿದ್ದಾರೆ. ನಮ್ಮ ಆರೋಪಿಗೆ ಅದನ್ನ ಕೊಡದೆ ಹಿಂಸೆ ನೀಡುತ್ತಿದ್ದಾರೆ ಎಂದರು.ಇದನ್ನೂ ಓದಿ: ಟ್ರೋಲ್‌ ಮಾಡಿದ ಕಿಡಿಗೇಡಿಗಳಿಗೆ ಮಾರ್ಮಿಕ ಉತ್ತರ ನೀಡಿದ ವಿಜಯಲಕ್ಷ್ಮಿ

    ಸರ್ಕಾರದ ಪರ ವಕೀಲ ಸಚಿನ್ ಪ್ರತಿವಾದ ಮಾಡಿ, ಜೈಲ್ ಮ್ಯಾನುಯಲ್ ಹೊರತುಪಡಿಸಿ ಹೆಚ್ಚಿನ ಸೌಲಭ್ಯ ಕೊಟ್ಟಿಲ್ಲ. ಕಂಬಳಿ, ಬ್ಲಾಂಕೇಟ್, ಲೋಟ, ತಟ್ಟೆ ನೀಡಲಾಗಿದೆ. ಬೆಳಗ್ಗೆ 1 ಗಂಟೆ ಹಾಗೂ ಸಂಜೆ 1 ಗಂಟೆ ವಾಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಮ್ಯಾನ್ಯುಯಲ್ ಪ್ರಕಾರವೇ ಎಲ್ಲವನ್ನೂ ನೀಡಲಾಗ್ತಿದೆ. ಅದನ್ನು ಹೊರತುಪಡಿಸಿ ಹೆಚ್ಚಿನ ಸೌಲಭ್ಯ ಕೊಟ್ಟಿಲ್ಲ. ಕ್ವಾರಂಟೈನ್ ಅನ್ನೋದು ಇಲ್ಲ ಈಗ ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸೆ.19ಕ್ಕೆ ಆದೇಶವನ್ನು ಕಾಯ್ದಿರಿಸಿದೆ.