Tag: courier

  • ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಬ್ಲಾಸ್ಟ್ – ಮೃತ ಯೋಧನ ಪತ್ನಿಯ ಎರಡೂ ಕೈಗಳು ಕಟ್

    ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಬ್ಲಾಸ್ಟ್ – ಮೃತ ಯೋಧನ ಪತ್ನಿಯ ಎರಡೂ ಕೈಗಳು ಕಟ್

    ಬಾಗಲಕೋಟೆ: ಹೇರ್ ಡ್ರೈಯರ್ ಬ್ಲಾಸ್ಟ್ (Hair Dryer Blast) ಆಗಿ ಮೃತ ಯೋಧನ ಪತ್ನಿಯ ಎರಡು ಕೈಗಳು ತುಂಡಾಗಿರುವ ಘಟನೆ ಜಿಲ್ಲೆಯ ಇಳಕಲ್ (Ilkal) ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮಾಜಿ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಅವರ ಎರಡೂ ಕೈಗಳು ತುಂಡಾಗಿವೆ. 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಪಾಪಣ್ಣ ಮೃತಪಟ್ಟಿದ್ದರು.ಇದನ್ನೂ ಓದಿ: ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್

    ಶಶಿಕಲಾ ಎಂಬುವರ ಹೆಸರು, ನಂಬರ್ ಹೊಂದಿದ್ದ ಪಾರ್ಸಲ್ ಕೊರಿಯರ್‌ಯೊಂದು ಬಂದಿತ್ತು. ಶಶಿಕಲಾ ಅವರು ಕೂಡ ಮೃತ ಯೋಧನ ಪತ್ನಿಯಾಗಿದ್ದರು. ಕೊರಿಯರ್‌ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಆದರೆ ಅವರು ಊರಲ್ಲಿ ಇರದ ಕಾರಣ ಬಸಮ್ಮನಿಗೆ ಕೊರಿಯರ್ ಅನ್ನು ಪಡೆದು ತೆಗೆದು ನೋಡಲು ತಿಳಿಸಿದ್ದರು. ತೆಗೆದು ನೋಡಿದಾಗ ಹೇರ್ ಡ್ರೈಯರ್ ಇತ್ತು. ಈ ವೇಳೆ ಪಕ್ಕದ ಮನೆಯವರು ಹೇರ್ ಡ್ರೈಯರ್ ಆನ್ ಮಾಡಲು ತಿಳಿಸಿದ್ದಾರೆ. ಸ್ವಿಚ್ ಹಾಕಿ ಆನ್ ಮಾಡಿದ್ದೇ ತಡ ಬ್ಲಾಸ್ಟ್ ಆಗಿ ಜೋರಾಗಿ ಸದ್ದಾಯಿತು.

    ಬ್ಲಾಸ್ಟ್ ಆದ ಹಿನ್ನೆಲೆ ಎರಡೂ ಕೈಗಳು ತುಂಡಾಗಿದ್ದು, ಬೆರಳುಗಳು ಛಿದ್ರ ಛಿದ್ರವಾಗಿ ತುಂಡಾಗಿದೆ. ಮನೆಯಲ್ಲಿ ರಕ್ತ ಚಿಮ್ಮಿದ್ದು, ಬಸಮ್ಮನನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶಶಿಕಲಾ ಅವರನ್ನು ವಿಚಾರಿಸಿದಾಗ ನಾನು ಹೇರ್ ಡ್ರೈಯರ್ ಆರ್ಡರ್ ಮಾಡೇ ಇಲ್ಲ. ಆದರೆ ನನ್ನ ಹೆಸರಲ್ಲಿ ಹೇರ್ ಡ್ರೈಯರ್ ಬಂದಿದೆ. ಆರ್ಡರ್ ಮಾಡಿದವರು ಯಾರು? ಎಲ್ಲಿಂದ ಹೇರ್ ಡ್ರೈಯರ್ ಬಂತು ಎಂದು ಪೊಲೀಸರಿಂದ ತನಿಖೆ ನಡೆದಿದೆ. ಸದ್ಯ ಹೇರ್ ಡ್ರೈಯರ್ ವಿಶಾಖಪಟ್ಟಣದಲ್ಲಿ ಉತ್ಪಾದನೆಯಾಗಿದ್ದು, ಕೊರಿಯರ್ ಬಾಗಲಕೋಟೆಯಿಂದ ಬಂದಿದೆ ಎಂದು ತಿಳಿದು ಬಂದಿದೆ. ಸದ್ಯ ಇಳಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

  • ದೆಹಲಿಯಲ್ಲಿ 900 ಕೋಟಿ ಮೌಲ್ಯದ ಕೊಕೇನ್‌ ವಶ – ಇಬ್ಬರು ಅರೆಸ್ಟ್‌

    ದೆಹಲಿಯಲ್ಲಿ 900 ಕೋಟಿ ಮೌಲ್ಯದ ಕೊಕೇನ್‌ ವಶ – ಇಬ್ಬರು ಅರೆಸ್ಟ್‌

    ನವದೆಹಲಿ: ಕೊರಿಯರ್ (Courier) ಒಂದರಲ್ಲಿ ಸುಮಾರು 900 ಕೋಟಿ ರೂ. ಮೌಲ್ಯದ 82.53 ಕೆಜಿ ಹೈಗ್ರೇಡ್ ಕೊಕೇನ್‌ನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದೆಹಲಿಯಲ್ಲಿ (Delhi) ಅಧಿಕಾರಿಗಳು ನಡೆಸಿದ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ 900 ಕೋಟಿ ರೂ. ಮೌಲ್ಯದ ಉನ್ನತ ದರ್ಜೆಯ ಕೊಕೇನ್‌ನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಗುಜರಾತ್‌ನಲ್ಲೂ ಅಧಿಕಾರಿಗಳು 700 ಕೆಜಿ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

    ಒಂದೇ ದಿನ ಡ್ರಗ್ಸ್ ವಿರುದ್ಧದ ಪ್ರಮುಖ ಕಾರ್ಯಾಚರಣೆ ನಡೆದಿದೆ. ಇದು ಮಾದಕ ದ್ರವ್ಯ ಮುಕ್ತ ಭಾರತವನ್ನು ನಿರ್ಮಿಸುವ ಮೋದಿ ಸರ್ಕಾರದ ಅಚಲ ಸಂಕಲ್ಪವನ್ನು ತೋರಿಸುತ್ತದೆ ಎಂದು ಅವರು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

    ಡ್ರಗ್ ಸಿಂಡಿಕೇಟ್‌ನ್ನು ವಿದೇಶಗಳಲ್ಲಿನ ಗುಂಪು ನಡೆಸುತ್ತಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ವಶಪಡಿಸಿಕೊಂಡ ಕೊಕೇನ್‌ನ ಒಂದು ಭಾಗವನ್ನು ಕೊರಿಯರ್ ಕಾರ್ಗೋ ಮೂಲಕ ಆಸ್ಟ್ರೇಲಿಯಾಕ್ಕೆ ಕಳುಹಿಸಲು ತಯಾರಿ ನಡೆದಿತ್ತು. ಇನ್ನೂ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಗುಪ್ತ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಕಳಿಸಿದ ಲೊಕೇಷನ್‍ಗೆ ಬರಲಿಲ್ಲ ಎಂದು ಕೊರಿಯರ್ ಬಾಯ್‍ಗೆ ಚಾಕು ಇರಿದ ದುಷ್ಕರ್ಮಿ!

    ಕಳಿಸಿದ ಲೊಕೇಷನ್‍ಗೆ ಬರಲಿಲ್ಲ ಎಂದು ಕೊರಿಯರ್ ಬಾಯ್‍ಗೆ ಚಾಕು ಇರಿದ ದುಷ್ಕರ್ಮಿ!

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕೊರಿಯರ್ ಬಾಯ್‍ಗೆ (Courier boy) ಚಾಕು ಇರಿದ ಪ್ರಕರಣ ಅಶೋಕನಗರದಲ್ಲಿ ನಡೆದಿದೆ.

    ಚಾಕು ಇರಿತಕ್ಕೊಳಗಾದ ಯುವಕನನ್ನು ಮಹಮ್ಮದ್ ಶಫಿ ಎಂದು ಗುರುತಿಸಲಾಗಿದೆ. ಕೊರಿಯರ್ ಮಾಡಲು ಕಳಿಸಿದ ಲೊಕೇಷನ್‍ಗೆ ಬರದೇ, ಲ್ಯಾಂಡ್ ಮಾರ್ಕ್ ಕೇಳಿದ್ದಕ್ಕೆ ದುಷ್ಕರ್ಮಿ ಚಾಕು ಇರಿದಿದ್ದಾನೆ ಎಂದು ತಿಳಿದು ಬಂದಿದೆ. ಕೊರಿಯರ್ ಬಾಯ್‍ಗೆ ದುಷ್ಕರ್ಮಿ ಚಾಕು ಇರಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸಿಸಿ ಕ್ಯಾಮೆರಾದಲ್ಲಿ ದುಷ್ಕರ್ಮಿ ನಡುರಸ್ತೆಯಲ್ಲಿ ಯುವಕನನ್ನು ಅಟ್ಟಾಡಿಸಿ ಕುತ್ತಿಗೆಗೆ ಚಾಕು ಇರಿದಿರುವುದು ದಾಖಲಾಗಿದೆ.

    ಅಶೋಕನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಕೊರಿಯರ್‌ಗಳು ಅಂಚೆ ಕಚೇರಿ ಕಾಯ್ದೆ ವ್ಯಾಪ್ತಿಗೆ – ಇನ್ಮುಂದೆ ಸರ್ಕಾರವೂ ನಿಮ್ಮ ಪತ್ರಗಳನ್ನು ತೆರೆದು ನೋಡ್ಬೋದು

    ಕೊರಿಯರ್‌ಗಳು ಅಂಚೆ ಕಚೇರಿ ಕಾಯ್ದೆ ವ್ಯಾಪ್ತಿಗೆ – ಇನ್ಮುಂದೆ ಸರ್ಕಾರವೂ ನಿಮ್ಮ ಪತ್ರಗಳನ್ನು ತೆರೆದು ನೋಡ್ಬೋದು

    ನವದೆಹಲಿ: ದೇಶದ ಭದ್ರತೆಯ ದೃಷ್ಟಿಯಿಂದ ಅಂಚೆ ಕಚೇರಿಗೆ (Post Office) ಬರುವ ಪತ್ರಗಳನ್ನು (Letters) ಯಾವುದೇ ಸರ್ಕಾರಿ ಅಧಿಕಾರಿಗಳು ತೆರೆದು ನೋಡುವ ಹಾಗೂ ಮುಟ್ಟುಗೋಲು ಹಾಕುವ ಅಧಿಕಾರ ನೀಡುವ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ.

    ಪತ್ರಗಳು ಮಾತ್ರವಲ್ಲದೇ ಖಾಸಗಿ ಕೊರಿಯರ್‌ಗಳನ್ನೂ (Courier) ಇದೇ ಮೊದಲ ಬಾರಿಗೆ ಮಸೂದೆ ವ್ಯಾಪ್ತಿಗೆ ತರಲಾಗಿದೆ. ಇದರ ಪ್ರಕಾರ ಕೊರಿಯರ್ ಅಂಗಡಿಗೆ ಬರುವ ಶಾಂಕಾಸ್ಪದ ಪತ್ರಗಳನ್ನು ಅಥವಾ ಯಾವುದೇ ವಸ್ತುಗಳನ್ನು ತೆರೆದು ನೋಡಿ ಮುಟ್ಟುಗೋಲು ಹಾಕುವ ಅಧಿಕಾರ ಇದೀಗ ಸರ್ಕಾರಕ್ಕೆ ಲಭಿಸಿದೆ.

    ಈ ಮಸೂದೆಗೆ ರಾಜ್ಯಸಭೆಯಲ್ಲಿ ಡಿಸೆಂಬರ್ 4 ರಂದೇ ಅಂಗೀಕಾರ ದೊರೆತಿದೆ. ಸಂಸತ್‌ನಲ್ಲಿ ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಉತ್ತರ ನೀಡಬೇಕು ಎಂದು ವಿಪಕ್ಷಗಳು ಗದ್ದಲ ನಡೆಸಿದ ಸಂದರ್ಭದಲ್ಲಿಯೇ ಈ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ಹೊಸ ಕಾಯ್ದೆ 125 ವರ್ಷಗಳಷ್ಟು ಹಳೆಯ ಪೋಸ್ಟಾಫೀಸ್ ಕಾಯ್ದೆಯನ್ನು (1898) ಬದಲಿಸಿದೆ. ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

    ಈ ಮಸೂದೆಯಿಂದಾಗಿ ಸರ್ಕಾರಿ ಅಧಿಕಾರಿಗಳಿಗೆ ಅಂಚೆ ಕಚೇರಿ ಹಾಗೂ ಖಾಸಗಿ ಕೊರಿಯರ್ ಕಚೇರಿಗೆ ಬರುವ ಪತ್ರಗಳನ್ನು ತೆರೆದು ನೋಡುವ ಹಾಗೂ ಮುಟ್ಟುಗೋಲು ಹಾಕುವ ಅಧಿಕಾರವನ್ನು ನೀಡುತ್ತದೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು

  • ಅಮೆರಿಕಗೆ ಹೋಗಬೇಕಿದ್ದ ಕೊರಿಯರ್‌ನಲ್ಲಿತ್ತು 4 ಮಾನವನ ತಲೆಬುರುಡೆ

    ಅಮೆರಿಕಗೆ ಹೋಗಬೇಕಿದ್ದ ಕೊರಿಯರ್‌ನಲ್ಲಿತ್ತು 4 ಮಾನವನ ತಲೆಬುರುಡೆ

    ಮೆಕ್ಸಿಕೋ ಸಿಟಿ: ಅಮೆರಿಕಕ್ಕೆ (America) ಕೊರಿಯರ್ (Courier) ಮೂಲಕ ಕಳುಹಿಸಬೇಕಿದ್ದ ಪ್ಯಾಕೇಜ್ ಒಂದರಲ್ಲಿ 4 ಮಾನವನ ತಲೆಬುರುಡೆ (Skull) ಪತ್ತೆಯಾಗಿರುವ ಘಟನೆ ಮೆಕ್ಸಿಕೋವಿನ (Mexico) ವಿಮಾನ ನಿಲ್ದಾಣದಲ್ಲಿ (Airport) ನಡೆದಿದೆ. ತಲೆಬುರುಡೆಗಳನ್ನು ಕಂಡ ವಿಮಾನ ನಿಲ್ದಾಣ ಸಿಬ್ಬಂದಿ ದಂಗಾಗಿದ್ದಾರೆ.

    ವರದಿಗಳ ಪ್ರಕಾರ ಮಧ್ಯ ಮೆಕ್ಸಿಕೋವಿನ ಕ್ವೆರೆಟಾರೊ ಇಂಟರ್‌ಕಾಂಟಿನೆಂಟಲ್ ಏರ್‌ಪೋರ್ಟ್‌ನಲ್ಲಿ ಕೊರಿಯರ್ ಪ್ಯಾಕೇಜ್ ಒಂದರಲ್ಲಿ ತಲೆಬುರುಡೆಗಳು ಪತ್ತೆಯಾಗಿವೆ. ರಟ್ಟಿನ ಪೆಟ್ಟಿಗೆಯೊಳಗೆ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ತಲೆಬುರುಡೆಗಳನ್ನು ಸುತ್ತಿಡಲಾಗಿತ್ತು ಎಂದು ವರದಿಗಳು ತಿಳಿಸಿವೆ.

    ಈ ಪ್ಯಾಕೇಜ್ ಅನ್ನು ಮೈಕೋವಾಕ್‌ನಿಂದ ಕಳುಹಿಸಲಾಗಿದೆ ಎನ್ನಲಾಗಿದೆ. ಈ ಪ್ರದೇಶ ಮೆಕ್ಸಿಕೋದಲ್ಲಿ ಅತಿ ಹೆಚ್ಚು ಹಿಂಸಾತ್ಮಕ ಘಟನೆಗಳು ನಡೆಯುವ ಸ್ಥಳವಾಗಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಜಿಮ್ ಮಾಲೀಕನ ಗುಂಡಿಕ್ಕಿ ಹತ್ಯೆ – ಸಿಸಿಟಿವಿ ರೆಕಾರ್ಡ್ ಕಳ್ಳತನ

    ಪತ್ತೆಯಾಗಿರುವ ಮಾನವನ ತಲೆಬುರುಡೆಗಳು ಯಾರಿಗೆ ಸೇರಿರುವುದು, ಅದರ ವಯಸ್ಸು ಅಥವಾ ಇತರ ಮಾಹಿತಿಗಳನ್ನು ಹಂಚಿಕೊಳ್ಳಲಾಗಿಲ್ಲ. ಇಂತಹ ಮಾನವನ ಅವಶೇಷಗಳ ವಾರ್ಗಾವಣೆಗೆ ಸಮರ್ಥ ಆರೋಗ್ಯ ಪ್ರಾಧಿಕಾರದಿಂದ ವಿಶೇಷ ಅನುಮತಿಯ ಅಗತ್ಯವಿರುತ್ತದೆ. ಆದರೆ ಈ ಸಂದರ್ಭದಲ್ಲಿ ಪಡೆಯಲಾಗಿಲ್ಲ ಎನ್ನಲಾಗಿದೆ.

    ಮಾನವನ ತಲೆಬುರುಡೆಗಳ ಸಾಗಾಟದ ಹಿಂದೆ ಅಪರಾಧ ಕೃತ್ಯ ಇದೆಯೇ ಎಂಬ ಬಗ್ಗೆ ಹಾಗೂ ಅದನ್ನು ಅಮೆರಿಕಗೆ ಕಳುಹಿಸುವ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್

    Live Tv
    [brid partner=56869869 player=32851 video=960834 autoplay=true]

  • ಪಾರ್ಸೆಲ್ ಜೊತೆ ಪರಾರಿಯಾಗಿದ್ದ ಕೊರಿಯರ್ ಬಾಯ್ ಅರೆಸ್ಟ್

    ಪಾರ್ಸೆಲ್ ಜೊತೆ ಪರಾರಿಯಾಗಿದ್ದ ಕೊರಿಯರ್ ಬಾಯ್ ಅರೆಸ್ಟ್

    – ಚಿನ್ನಾಭರಣ ಎಂದು ಎಗರಿಸಿದ

    ಮುಂಬೈ: ಕೊರಿಯರ್ ತಲುಪಿಸಲು ಬಂದು, ಬೆಲೆ ಬಾಳುವ ಆಭರಣದೊಂದಿಗೆ ಪರಾರಿಯಾಗಿದ್ದ ಕೊರಿಯರ್ ಹುಡುಗನನ್ನು ಕ್ರೈಂ ವಿಭಾಗದ ಪೊಲೀಸರು ಬಂಧಿಸಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.

    ಬಂಧಿತನನ್ನು ಇಮ್ರಾನ್ ರಫೀಕ್ ಸಯಾ (36) ಎಂದು ಗುರುತಿಸಲಾಗಿದೆ. ಆನ್‍ಲೈನ್‍ನಲ್ಲಿ ಪರಾಸ್ ಭನ್ಸಾಲಿ (53) ಒಡವೆಗಳು ಕೊರಿಯರ್ ಕಳುಹಿಸಿದ್ದರು. ಆದರೆ ಒಡವೆಗಳನ್ನು ಡೆಲಿವರಿ ಕೊಡಲು ಬಂದಿರುವ ರಫೀಕ್ ಬೆಲೆಬಾಳುವ ಆಭರಣಗಳನ್ನು ಹೊತ್ತು ಪಾರರಿಯಾಗಿದ್ದನು.

    ಭನ್ಸಾಲಿ ಆನ್‍ಲೈನ್ ಡೆಲಿವರಿ ಆ್ಯಪ್ ಕೊರಿಯರ್ ಮೂಲಕ ಬೆಳ್ಳಿ ಆಭರಣಗಳು ಬಂದಿದ್ದವು ಆದರೆ ಆರ್ಡರ್ ತಲುಪಿಸಲು ಬಂದಿರುವ ಕೊರಿಯರ್ ಹುಡುಗನಿಗೆ ಇದು ದುಬಾರಿ ಆಭರಣ ಎಂದು ಗೊತ್ತಾಗಿದೆ. ಕೊರಿಯರ್ ಹುಡುಗ ಆಭರಣಗಳೊಂದಿಗೆ ಪರಾರಿಯಾಗಿದ್ದಾನೆ. ಕೊರಿಯರ್ ಮಾಡಿರುವ ಆಭರಗಳು ಬರದೆ ಇರುವುದನ್ನು ಗಮನಿಸಿದ ಭನ್ಸಾಲಿ, ಮಲಸಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ಆಭರಣ ಕದ್ದಿರುವ ಆರೋಪದ ಮೇಲೆ ಅಪರಾಧ ವಿಭಾಗ ಘಟಕ 2 ಇಮ್ರಾನ್ ರಫೀಕ್ ಸಯಾ (36) ಎಂಬಾತನನ್ನು ಬಂಧಿಸಿದೆ.

    ಅಪರಾಧ ವಿಭಾಗದ ಪ್ರಕಾರ ಭನ್ಸಾಲಿ ಡಿಸೆಂಬರ್ 10 ರಂದು ಆ್ಯಪ್ ಮೂಲಕ ಕೊರಿಯರ್ ಕಳುಹಿಸಿದ್ದಾರೆ ಆದರೆ ಅದನ್ನು ಡಿಸೆಂಬರ್ 18 ರವರೆಗೆ ತಲುಪಿಸಲಾಗಿಲ್ಲ. ಸಯಾ ಪಾರ್ಸೆಲ್ ಡೆಲವರಿ ಮಾಡುವ ಮೊದಲು ರಫೀಕ್ ತೆರೆದು ನೋಡಿದ್ದಾನೆ. ಆಭರಣಗಳಿರುವುದನ್ನು ನೋಡಿ ಆಮಿಷಕ್ಕೊಳಗಾಗಿದ್ದಾನೆ. ಚಿನ್ನದ ಆಭರಣಗಳು ಎಂದು ಅವನು ಭಾವಿಸಿದ್ದನು. ಅದರೆ ಬೆಳ್ಳಿ, ಚಿನ್ನದ ಪದರದಿಂದ ಲೇಪಿತವಾದ ಆಭರಣಗಳಾಗಿದ್ದವು. ಕೊರಿಯರ್ ಬರದೆ ಇದ್ದಾಗ ಆಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ನಡೆಸುತ್ತಿದ್ದ ನಮಗೆ ಅಲ್ಲಿ ಕದ್ದ ಆಭರಣಗಳ ಜೊತೆಗೆ ಇಮ್ರಾನ್ ರಫೀಕ್ ಸಯಾ ಸಿಕ್ಕಿಬಿದ್ದಿದ್ದಾನೆ. ಸಯಾದಿಂದ ವಶಪಡಿಸಿಕೊಂಡ ಆಭರಣಗಳ ಒಟ್ಟು ವೆಚ್ಚ ಸುಮಾರು 1,43,000 ರೂಪಾಯಿ ಬೆಲೆ ಬಾಳುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಲಾದ್‍ನ ಪಠಾಣ್ ವಾಡಿ ಬಳಿಯ ಅಂಬಾ ಪಾದದ ಮನೆಯೊಂದರಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ. ಕದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದೇವೆ. ಆರೋಪಿಯನ್ನು ಮಲಬಾರ್ ಹಿಲ್ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಘಟಕ 2 ರ ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ಸಂಜಯ್ ನಿಕುಂಬೆ ತಿಳಿಸಿದ್ದಾರೆ.

  • ಪಾರ್ಸೆಲ್ ಮೂಲಕ ನಾಗರಹಾವು ಕಳುಹಿಸಿದ ಕೊರಿಯರ್ ಕಂಪನಿ

    ಪಾರ್ಸೆಲ್ ಮೂಲಕ ನಾಗರಹಾವು ಕಳುಹಿಸಿದ ಕೊರಿಯರ್ ಕಂಪನಿ

    ಭುವನೇಶ್ವರ್: ಕೊರಿಯರ್ ಕಂಪನಿಯೊಂದು ಕಳುಹಿಸಿದ್ದ ಪಾರ್ಸೆಲ್ ಬಾಕ್ಸ್ ನಲ್ಲಿ ನಾಗರ ಹಾವು ಕಾಣಿಸಿಕೊಂಡ ಘಟನೆ ಓಡಿಶಾದ ಮಯೂರ್‍ ಭಂಜ್ ಜಿಲ್ಲೆಯ ರಾಯರಂಗ್‍ನಲ್ಲಿ ನಡೆದಿದೆ.

    ಮನೆಗೆ ಸಂಬಂಧಪಟ್ಟ ಲೇಖನಗಳು 15 ದಿನಗಳ ಹಿಂದೆ ಆಂಧ್ರ ಪ್ರದೇಶದ ವಿಜಯ್‍ವಾಡ ಮೂಲದ ಎಸ್ ಮುತ್ತುಕುಮಾರ್ ಖಾಸಗಿ ಕೊರಿಯರ್ ಎಜೆನ್ಸಿ ಮೂಲಕ ಬುಕ್ ಮಾಡಿದ್ದಾರೆ. ಈ ಪಾರ್ಸೆಲ್ ಭಾನುವಾರ ಮುತ್ತುಕುಮಾರ್ ಮನೆಗೆ ಬಂದಿದೆ.

    ಈ ವೇಳೆ ಪಾರ್ಸೆಲ್ ಬಂದಿದೆ ಎಂದು ಮುತ್ತುಕುಮಾರ್ ಅವರು ತನ್ನ ಮಯೂರ್‍ ಭಂಜ್‍ನ ರಾಯರಾಂಗ್‍ನಲ್ಲಿ ಇರುವ ಮನೆಯಲ್ಲಿ ಓಪನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಒಂದು ಭಾಗವನ್ನು ತೆರೆದ ಮುತ್ತುಕುಮಾರ್ ಅವರಿಗೆ ಪಾರ್ಸೆಲ್ ಒಳಗೆ ನಾಗರಹಾವು ಕಂಡಿದೆ. ಪಾರ್ಸೆಲ್‍ನಲ್ಲಿ ಹಾವು ಕಂಡ ಮುತ್ತುಕುಮಾರ್ ಆಘಾತಕ್ಕೊಳಗಾಗಿದ್ದಾರೆ. ನಂತರ ತಕ್ಷಣ ಅರಣ್ಯ ಇಲಾಖೆಗೆ ಕೆರೆ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮುತ್ತುಕುಮಾರ್ ನಾನು 15 ದಿನದ ಹಿಂದೆ ಈ ಪಾರ್ಸೆಲ್ ಬುಕ್ ಮಾಡಿದ್ದೆ. ಅದರಂತೆ ಆಗಸ್ಟ್ 9 ರಂದು ಗುಂಟೂರಿನ ಕೊರಿಯರ್ ಸಂಸ್ಥೆಯಿಂದ ಈ ಪಾರ್ಸೆಲ್ ಬಂದಿದೆ. ಆದರೆ ಓಡಿಶಾಗೆ ಬಂದ ನಂತರ ಈ ಹಾವು ಪಾರ್ಸೆಲ್ ಒಳಗೆ ಸೇರಿಕೊಂಡಿರಬಹುದು ಎಂದು ಹೇಳಿದ್ದಾರೆ.

    ಅರಣ್ಯ ಅಧಿಕಾರಿ ಬಿಪಿನ್ ಚಂದ್ರ ಬೆಹೆರಾ ಪ್ರತಿಕ್ರಿಯಿಸಿ, ನಮಗೆ ಭಾನುವಾರ ಪಾರ್ಸೆಲ್ ಒಳಗೆ ನಾಗರಹಾವು ಇದೆ ಎಂದು ಕರೆ ಬಂತು. ನಾನು ತಕ್ಷಣ ನನ್ನ ಸಹೋದ್ಯೋಗಿಯೊಂದಿಗೆ ಸ್ಥಳಕ್ಕೆ ಬಂದು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

  • ಕೊರಿಯರ್ ಆಫೀಸ್‍ನಲ್ಲಿ ಸಿಕ್ತು 200 ಕೋಟಿ ಮೌಲ್ಯದ ಡ್ರಗ್ಸ್!

    ಕೊರಿಯರ್ ಆಫೀಸ್‍ನಲ್ಲಿ ಸಿಕ್ತು 200 ಕೋಟಿ ಮೌಲ್ಯದ ಡ್ರಗ್ಸ್!

    ತಿರುವನಂತಪುರಂ: ಡ್ರಗ್ಸ್ ನಿಗ್ರಹ ದಳ ಹಾಗೂ ಅಬಕಾರಿ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 32 ಕೆ.ಜಿ. ಡ್ರಗ್ಸ್ ಅನ್ನು ಕೊಚ್ಚಿಯ ಕೊರಿಯರ್ ಸೆಂಟರ್ ನಲ್ಲಿ ವಶಪಡಿಸಿಕೊಂಡಿದೆ.

    ಖಚಿತ ಮಾಹಿತಿ ಆಧರಿಸಿ ಕೇರಳದ ಮಾದಕ ದ್ರವ್ಯ ನಿಗ್ರಹ ಪಡೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಶನಿವಾರ ಕೊಚ್ಚಿಯ ಖಾಸಗಿ ಕೊರಿಯರ್ ಸೆಂಟರ್ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 200 ಕೋಟಿ ರೂಪಾಯಿ ಮೌಲ್ಯದ 32 ಕೆಜಿ ಮಾದಕ ದ್ರವ್ಯದ 64 ಪ್ಯಾಕೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಡ್ರಗ್ಸ್ ದಂಧೆಕೋರರು ಪ್ಯಾಕೆಟ್‍ಗಳನ್ನು ಬಟ್ಟೆಯಲ್ಲಿ ಸುತ್ತಿ ಬಾಕ್ಸ್‍ಗಳಲ್ಲಿ ಬಚ್ಚಿಟ್ಟಿದ್ದರು. ಅಲ್ಲದೇ ಸಾಗಾಣಿಕೆಯ ಹಿಂದೆ ಕೊರಿಯರ್ ಸೆಂಟರ್‍ನ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ಎರ್ನಾಕುಲಂನ ವಿಭಾಗೀಯ ಉಪ ಅಬಕಾರಿ ಆಯುಕ್ತ ಎ.ಎಸ್.ರಂಜಿತ್ ಹೇಳಿದ್ದಾರೆ.

    ಅಬಕಾರಿ ಆಯುಕ್ತ ರಿಶಿ ರಾಜ್ ಸಿಂಗ್ ಮಾತನಾಡಿ, ಡ್ರಗ್ಸ್ ದಂಧೆಕೋರರು ಅಕ್ರಮವಾಗಿ ಮಾದಕ ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆಯನ್ನು ಹೊಂದಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಭಾರೀ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದೇವೆ. ಅಲ್ಲದೇ ದಂಧೆಕೋರರು ಯಾವ ರೀತಿ ಇವುಗಳನ್ನು ರಫ್ತು ಮಾಡುತ್ತಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿಯಲಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನಕಲಕುವ ಘಟನೆ: ಹೆಣ್ಣು ಮಗುವನ್ನು ಅನಾಥಾಶ್ರಮಕ್ಕೆ ಕೊರಿಯರ್ ಮಾಡಿದ ಪಾಪಿ ತಾಯಿ!

    ಮನಕಲಕುವ ಘಟನೆ: ಹೆಣ್ಣು ಮಗುವನ್ನು ಅನಾಥಾಶ್ರಮಕ್ಕೆ ಕೊರಿಯರ್ ಮಾಡಿದ ಪಾಪಿ ತಾಯಿ!

    ಬೀಜಿಂಗ್: ಪುಟ್ಟ ಕಂದಮ್ಮಗಳನ್ನು ಅನಾಥಾಶ್ರಮಕ್ಕೆ ಸೇರಿಸೋದು, ಆಗ ತಾನೇ ಹುಟ್ಟಿದ ಮಗುವನ್ನು ಕಸದ ತೊಟ್ಟಿಯಲ್ಲಿ ಬಿಸಾಕುವಂತಹ ಮನಕಲಕುವ ಘಟನೆಗಳನ್ನು ಕೇಳಿರುತ್ತೇವೆ. ಆದ್ರೆ ಚೀನಾದಲ್ಲಿ ಪಾಪಿ ಮಹಿಳೆಯೊಬ್ಬಳು ತನ್ನ ಮಗುವನ್ನು ಪ್ಯಾಕ್ ಮಾಡಿ ಅನಾಥಾಶ್ರಮಕ್ಕೆ ಕೊರಿಯರ್ ಮಾಡಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

    ಹೌದು. ಚೀನಾ ಮೂಲದ 24 ವರ್ಷದ ತಾಯಿಯೊಬ್ಬಳು ಕೆಲ ದಿನಗಳ ಹಿಂದೆ ಹುಟ್ಟಿದ ತನ್ನ ಮಗುವನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಪಾರ್ಸೆಲ್ ಮಾಡಿದ್ದಾಳೆ. ಅಲ್ಲದೇ ಈ ಕೊರಿಯರನ್ನು ಯಾವುದೇ ಕಾರಣಕ್ಕೆ ಓಪನ್ ಮಾಡಬಾರದೆಂದು ಪಾರ್ಸೆಲ್ ಮಾಡುವಾತನಿಗೆ ತಾಕೀತು ಮಾಡಿದ್ದಳು.

    ಅಂತೆಯೇ ಬಂದಂತಹ ಕೊರಿಯರನ್ನು ಪಾರ್ಸೆಲ್ ಮಾಡುವಾತ ಫಿಝೌ ಮಕ್ಕಳ ಕಲ್ಯಾಣ ಸಂಸ್ಥೆಗೆ ತಳುಪಿಸಬೇಕಿತ್ತು. ಹೀಗಾಗಿ ಅದನ್ನು ತೆಗೆದುಕೊಂಡ ವೇಳೆ ಶಬ್ದವೊಂದು ಕೇಳಿತ್ತು. ತನ್ನ ಕೈಯಲಿದ್ದ ಪ್ಲಾಸ್ಟಿಕ್ ಕವರಿನಲ್ಲಿಯೇ ಶಬ್ದ ಬರುತ್ತಿರುವುದನ್ನು ಕಂಡು ಗಾಬರಿಯಾದ ಆತ, ಕೊರಿಯರನ್ನು ತೆರೆದು ನೋಡಿದ್ದಾನೆ. ಈ ವೇಳೆ ಪ್ಲಾಸ್ಟಿಕ್ ಕವರಿನೊಳಗೆ ಮಗು ಇರುವುದು ಪತ್ತೆಯಾಗಿದೆ. ಇದನ್ನು ಕಂಡು ಆತ ದಂಗಾಗಿದ್ದಾನೆ.

    ಕೂಡಲೇ ಆತ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಗು ಆರೋಗ್ಯವಾಗಿದೆ ಎಂಬುವುದಾಗಿ ತಿಳಿದುಬಂದಿದೆ.

    https://www.youtube.com/watch?v=gRagwQODW6Q