Tag: Couples

  • ಕಂಕಣ ಭಾಗ್ಯ- ಸಂತಾನ ಭಾಗ್ಯ ಇದು ಪೆರ್ಡೂರಿನ ಅನಂತ ಪದ್ಮನಾಭ ದೇವರ ಮಹಿಮೆ

    ಕಂಕಣ ಭಾಗ್ಯ- ಸಂತಾನ ಭಾಗ್ಯ ಇದು ಪೆರ್ಡೂರಿನ ಅನಂತ ಪದ್ಮನಾಭ ದೇವರ ಮಹಿಮೆ

    ಉಡುಪಿ: ಕಂಕಣಬಲ ಕೂಡಿ ಬರದಿದ್ದರೆ ಈ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಬೇಕು. ಮದುವೆಯಾಗಿ ಬಹಳ ಸಮಯ ಸಂತಾನ ಆಗದಿದ್ದರೆ ದೇವರಿಗೆ ಬಾಳೆಹಣ್ಣು ಗೊನೆಯ ಹರಕೆ ಹೇಳಬೇಕು. ವರ್ಷ ಕಳೆಯೋದರ ಒಳಗೆ ಅನಂತ ಪದ್ಮನಾಭ ಆಶೀರ್ವದಿಸಿ ಇಷ್ಟಾರ್ಥ ನೆರವೇರಿಸುತ್ತಾನೆ. ಈ ಪವಾಡಕ್ಕೆ ಸಿಂಹ ಸಂಕ್ರಮಣ ಸಾಕ್ಷಿಯಾಗಿದೆ.

    ಉಡುಪಿಯ ಪೆರ್ಡೂರಿನ ಅನಂತ ಪದ್ಮನಾಭ ದೇವಸ್ಥಾನದ ಮುಂದೆ ಇಂದು ಜನಜಾತ್ರೆ. ಬೀದಿ ತುಂಬೆಲ್ಲಾ ಹೊಸದಾಗಿ ಮದುವೆಯಾದ ನವ ಜೋಡಿಗಳು ಕಾಣಿಸುತ್ತಾರೆ. ನೂತನ ವಧುವರರು ಅನಂತಪದ್ಮನಾಭನಿಗೆ ಹರಕೆ ತೀರಿಸಲು ವರ್ಷಕ್ಕೊಮ್ಮೆ ಇಲ್ಲಿಗೆ ಬರುತ್ತಾರೆ. ಪೆರ್ಡೂರಿನಲ್ಲಿ ಸಿಂಹ ಸಂಕ್ರಮಣದಂದು ಭೇಟಿಕೊಟ್ಟರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಮದುವೆಯಾದ ಹೊಸ ಜೋಡಿ, ಮದುವೆ ನಂತರದ ಮಕ್ಕಳ ಜೊತೆ ಮತ್ತೆ ಆ ಜೋಡಿ ದೇವಸ್ಥಾನಕ್ಕೆ ಬರುತ್ತಾರೆ.

    ನವ ವಧು ವರರಾದ ದಿವ್ಯಾ ಮತ್ತು ರಾಜೇಶ್ ಮಾತನಾಡಿ, ಎರಡು ತಿಂಗಳ ಹಿಂದೆ ಮದುವೆಯಾಗಿದೆ. ಕ್ಷೇತ್ರಕ್ಕೆ ಬಂದರೆ ದೇವರ ಆಶೀರ್ವಾದ ಸಿಗುತ್ತದೆ ಎನ್ನುವ ವಿಚಾರ ತಿಳಿಯಿತು. ಸುಖ ಸಂಸಾರದ ಪ್ರಾರ್ಥನೆಯನ್ನು ಮಾಡಿದ್ದೇವೆ. ತಂದೆ ತಾಯಿ ಇಲ್ಲಿಗೆ ಬರುತ್ತಿದ್ದರು. ಈಗ ನಾವು ಬಂದಿದ್ದೇವೆ ಎಂದು ಹೇಳಿದರು. ಸಂಗೀತಾ ಮಾತನಾಡಿ, ಮೂರು ವರ್ಷಗಳಿಂದ ಪೆರ್ಡೂರಿನ ದೇವಸ್ಥಾನಕ್ಕೆ ಬರುತ್ತಿದ್ದೇವೆ. ಮೊದಲ ವರ್ಷ ಇಬ್ಬರು ಬಂದಿದ್ದೆವು. ಈ ಬಾರಿ ಮಗುವಾಗಿದೆ. ಮೂರೂ ಜನ ಬಂದು ಹಣ್ಣು ಕಾಯಿ ಹರಕೆ ಕೊಟ್ಟಿದ್ದೇವೆ ಎಂದು ಹೇಳಿದರು.

    ಅನಂತ ಪದ್ಮನಾಭ ದೇವರಿಗೆ ಬಾಳೆ ಹಣ್ಣು ಅಚ್ಚುಮೆಚ್ಚು. ನವ ಮತ್ತು ಹಿರಿಯ ದಂಪತಿಗಳು ಹಣ್ಣು ಮತ್ತು ಹೂವನ್ನು ಹರಕೆಯಾಗಿ ಅರ್ಪಿಸುತ್ತಾರೆ. ಸಂಕ್ರಾಂತಿಯಂದು ಸಾವಿರಾರು ಸಂಖ್ಯೆಯಲ್ಲಿ ನವ ವಿವಾಹಿತರು, ಅವರ ಕುಟುಂಬಸ್ಥರು ಕಿಕ್ಕಿರಿದು ತುಂಬಿಕೊಳ್ಳುತ್ತಾರೆ. ಹೂವು ಬಾಳೆಹಣ್ಣು ಹೊತ್ತು ದೇವಸ್ಥಾನಕ್ಕೆ ಬಂದು ಪೂಜಿಸುತ್ತಾರೆ. ಇಂದು ತಿರುಪತಿ ವೆಂಕಟರಮಣ ಸ್ವಾಮಿಯೇ ಏಳು ಬೆಟ್ಟ ಇಳಿದು ಪೆರ್ಡೂರಿಗೆ ಬಂದು ನೆಲೆಸುತ್ತಾನೆ ಎಂಬ ನಂಬಿಕೆಯಿದೆ.

    ಅರ್ಚಕ ಗಣೇಶ್ ಅಡಿಗ ಅವರು ಮಾತನಾಡಿ, ಅನಂತ ಪದ್ಮನಾಭ ದೇವರು ಬಾಳೆಹಣ್ಣಿಗೆ ಒಲಿಯುವ ದೇವರು ಅಂತ ಪ್ರತೀತಿ ಇದೆ. ದೂರದ ಊರುಗಳಿಂದಲೂ ಭಕ್ತರು ಬಂದು ಹರಕೆ ತೀರಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ತಿಳಿಸಿದರು.

    ಸಂತಾನ ಪ್ರಾಪ್ತಿಯಾಗಬೇಕಾದರೂ ಪೆರ್ಡೂರು ಅನಂತ ಪದ್ಮನಾಭನ ಮೊರೆ ಹೋಗುತ್ತಾರೆ. ಪುಷ್ಕರಣೆಯಲ್ಲಿ ತೀರ್ಥಸ್ನಾನ ಮಾಡುವುದು ಇಲ್ಲಿನ ಮತ್ತೊಂದು ವಿಶೇಷತೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ದೇವಸ್ಥಾನ ದಂಪತಿಗಳಿಂದ ತುಂಬಿಕೊಂಡಿರುವುದು ವಿಶೇಷ ಎಂದು ಹೇಳಿದರು.

  • ಜಾನುವಾರು ಬಿಟ್ಟು ಬರಲ್ಲ- ಪ್ರವಾಹದ ಮಧ್ಯೆ ಸಿಲುಕಿದ ಮೂವರು ಪಟ್ಟು

    ಜಾನುವಾರು ಬಿಟ್ಟು ಬರಲ್ಲ- ಪ್ರವಾಹದ ಮಧ್ಯೆ ಸಿಲುಕಿದ ಮೂವರು ಪಟ್ಟು

    ಬಾಗಲಕೋಟೆ: ಪ್ರವಾಹದಲ್ಲಿ ಸಿಲುಕಿದಾಗ ರಕ್ಷಣೆ ಮಾಡಿದರೆ ಸಾಕು ಎಂದು ಕೆಲವರು ಕಾಯುತ್ತಿರುತ್ತಾರೆ. ಆದರೆ ಇಲ್ಲೊಂದು ಕುಟುಂಬದ ಮೂವರು, ರಕ್ಷಣಾ ತಂಡ ಮನೆಯ ಬಳಿ ತೆರಳಿ ರಕ್ಷಣೆಗೆ ಮುಂದಾದರೂ ನಾವು ಜಾನುವಾರುಗಳನ್ನು ಬಿಟ್ಟು ಬರುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆದಿದೆ.

    ದಿನೇ ದಿನೇ ಪ್ರವಾಹ ಹೆಚ್ಚುತ್ತಿದ್ದು, ರಕ್ಷಣಾ ಕಾರ್ಯವೂ ಅಷ್ಟೇ ಸವಾಲಾಗಿ ಪರಿಣಮಿಸಿದೆ. ಅದರಂತೆ ಗ್ರಾಮದ ಮನೆಗಳಲ್ಲಿ ಸಿಲುಕಿರುವ ಜನರನ್ನು ಹುಡುಕಿ ಎನ್‍ಡಿಆರ್‍ಎಫ್ ಹಾಗೂ ನೇವಿ ತಂಡ ರಕ್ಷಣಾ ಕಾರ್ಯ ಮಾಡುತ್ತಿದೆ. ಹಾಗೆಯೇ ರಕ್ಷಣೆ ಮಾಡಲು ತೆರಳಿದಾಗ ರಾಸುಗಳನ್ನು ಬಿಟ್ಟು ಬರುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದ್ದಾರೆ.

    ಅಥಣಿ ತಾಲೂಕಿನ ಜನವಾಡ ಗ್ರಾಮ ಸಂಪೂರ್ಣ ಮುಳುಗಿದ ಪರಿಣಾಮ ಇಂದು ಎನ್‍ಡಿಆರ್‍ಎಪ್ ತಂಡ 50 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತಂದಿದೆ. ಆದರೆ, ಇಡೀ ಗ್ರಾಮ ಪ್ರವಾಹದಲ್ಲಿ ಮುಳುಗಿದರೂ ಜನವಾಡ ಗ್ರಾಮದ ಮೂವರು ಮಾತ್ರ ಗ್ರಾಮ ಬಿಟ್ಟು ಬರಲು ನಿರಾಕರಿಸಿದ್ದಾರೆ.

    ದಂಪತಿ ಸೇರಿದಂತೆ ಮತ್ತೊಬ್ಬ ವ್ಯಕ್ತಿ ಗ್ರಾಮ ಬಿಟ್ಟು ಬರಲು ನಿರಾಕರಿಸಿದ್ದಾರೆ. ಪ್ರವಾಹದ ಮಧ್ಯೆಯೇ ನಾಗಪ್ಪ ಗುರವ್, ಮಾಲವ್ವ ಗುರವ್ ದಂಪತಿ ಮನೆಬಿಟ್ಟು ಬರಲು ನಿರಾಕರಿಸಿದ್ದಾರೆ. ಅಲ್ಲದೇ ಮತ್ತೊಬ್ಬ ವ್ಯಕ್ತಿ ಗೋಪಾಲ ಎನ್ನುವವರು ಸಹ ಪ್ರವಾಹದ ಮಧ್ಯೆಯೇ ಉಳಿದುಕೊಂಡಿದ್ದಾರೆ. ದಂಪತಿ ಸೇರಿದಂತೆ ಮೂವರಿಗೂ ಎನ್‍ಡಿಆರ್‍ಎಫ್ ತಂಡ ಹಾಗೂ ಪೊಲೀಸರು ಎಷ್ಟೇ ಮನವಿ ಮಾಡಿದರೂ ಮನೆ ಬಿಟ್ಟು ಬರಲು ನಿರಾಕರಿಸಿದ್ದಾರೆ. ಮನೆಯಲ್ಲಿನ ಜಾನುವಾರುಗಳನ್ನು ರಕ್ಷಣೆ ಮಾಡಿದರೆ ಮಾತ್ರ ನಾವು ಬರುತ್ತೇವೆ ಎಂದು ಪಟ್ಟು ಹಿಡಿದು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ, ದಂಪತಿಯ ಇಬ್ಬರು ಪುತ್ರರು ಪ್ರವಾಹದಿಂದ ಸುರಕ್ಷಿತ ಸ್ಥಳಕ್ಕೆ ಆಗಮಿಸಿದ್ದಾರೆ.

  • ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ದೆಹಲಿ: ಒಂದೇ ಕುಟುಂಬದ ಮೂವರು ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿ ಐಐಟಿ ಕ್ಯಾಂಪಸ್‍ನಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ನಡೆದಿದ್ದು, ಐಐಟಿ ಕ್ಯಾಂಪಸ್‍ನಲ್ಲಿರುವ ತಮ್ಮ ಫ್ಲಾಟ್‍ನಲ್ಲಿ ಗುಲ್ಶನ್ ದಾಸ್, ಪತ್ನಿ ಸುನಿತಾ ಮತ್ತು ತಾಯಿ ಕಮ್ತಾ ದೇಹಗಳು ಫ್ಲಾಟ್‍ನ ಸೀಲಿಂಗ್ ಫ್ಯಾನ್‍ಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ರಾತ್ರಿ ಸುಮಾರು 9.40ಕ್ಕೆ ಮನೆಯೊಳಗೆ ತುಂಬಾ ಗಲಾಟೆ ನಡೆಯುತ್ತಿತ್ತು ಎಂದು ಸ್ಥಳೀಯರು ನಮಗೆ ಮಾಹಿತಿ ನೀಡಿದರು. ಮಾಹಿತಿ ಪಡೆದು ಫ್ಲಾಟ್ ಬಳಿ ಬಂದು ನೋಡಿದಾಗ, ಫ್ಲಾಟ್ ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ನಂತರ ಬಾಗಿಲನ್ನು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಮೂವರು ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

    ಗುಲ್ಶನ್ ಮತ್ತು ಸುನಿತಾ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ಈ ಮಧ್ಯೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ಬಗ್ಗೆ ತಿಳಿದ ನಂತರ ಸುನಿತಾ ಅವರ ತಾಯಿ ಕೃಷ್ಣ ದೇವಿ ಕೂಡ ಮಗಳ ಮನೆಗೆ ಬಂದು ಹೋಗಿದ್ದರು ಎಂದು ಹೇಳಲಾಗಿದೆ. ಆದರೆ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

  • ವಿಮಾನದಲ್ಲಿ ಪ್ರಯಾಣಿಕರ ಕಣ್ಣೇದುರೆ ಸೆಕ್ಸ್-ದಂಪತಿ ಅಂದರ್

    ವಿಮಾನದಲ್ಲಿ ಪ್ರಯಾಣಿಕರ ಕಣ್ಣೇದುರೆ ಸೆಕ್ಸ್-ದಂಪತಿ ಅಂದರ್

    ಟೆಕ್ಸಾಸ್: ಯುನೈಟೆಡ್ ಏರ್‌‍ಲೈನ್ಸ್ ನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಎಲ್ಲರ ಮುಂದೆಯೇ ಸೆಕ್ಸ್ ಮಾಡಿ ಈಗ ಜೈಲಿನಲ್ಲಿ ಕಂಬಿ ಎನಿಸುತ್ತಿದ್ದಾರೆ.

    ಪ್ರಯಾಣಿಕ ಎನ್‍ರಿಕ್ ಗೊನ್ಜಲೇಜ್(48) ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಾಸ್ ಎಂಜಲೀಸ್ ಹಾಗೂ ಸಾನ್ ಆಂಟೊನಿಯೋ ಮಾರ್ಗ ಮಧ್ಯೆ ದಂಪತಿ ಪ್ರಯಾಣಿಕರಿಂದ ತುಂಬಿದ್ದ ವಿಮಾನದಲ್ಲಿ ಈ ಕೃತ್ಯವೆಸೆಗಿದ್ದಾರೆ. ಇದನ್ನು ಕಂಡ ವಿಮಾನ ಸಿಬ್ಬಂದಿ ವಿಮಾನ ಸನ್ ಆಂಟೊನಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ಮೇಲೆ ಅಲ್ಲಿನ ಪೊಲೀಸರಿಗೆ ಆರೋಪಗಳನ್ನು ಒಪ್ಪಿಸಿದ್ದಾರೆ.

    ವಿಮಾನದಲ್ಲಿ ಲೈಟ್ಸ್ ಡಿಮ್ ಮಾಡಲಾಗಿತ್ತು. ಈ ವೇಳೆ ದಂಪತಿ ಸೆಕ್ಸ್ ಮಾಡಿದ್ದಲ್ಲದೆ, ಅಕ್ಕಪಕ್ಕದ ಜನ ನೋಡುತ್ತಿದ್ದರು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಅಲ್ಲದೆ ಆರೋಪಿ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಜೊತೆ ಕೂಡ ಅಸಭ್ಯವಾಗಿ ವರ್ತಿಸಿದ್ದ ಎಂದು ಪ್ರಯಾಣಿಕರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

    ಈ ಆರೋಪಗಳ ಆಧಾರದ ಮೇಲೆ ಪತಿಯನ್ನು ಬಂಧಿಸಿದ್ದರು. ಶುಕ್ರವಾರದಂದು ಆರೋಪಿಗೆ 400 ಯುಎಸ್ ಟಾಲರ್(ಸರಿಸುಮಾರು 35 ಸಾವಿರ ರೂ.) ದಂಡ ವಿಧಿಸಿ, 90 ದಿನಗಳ ಕಾಲ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದ್ದು, ಆರೋಪಿ ಟೆಕ್ಸಾಸ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಮಹಿಳೆಯನ್ನು ಸಹ ಪೊಲೀಸರು ಬಂಧಿಸಿದ್ದು, ಆಕೆಯ ಕುರಿತ ಹೆಚ್ಚಿನ ಮಾಹಿತಿಗಳು ವರದಿಯಾಗಿಲ್ಲ.

    ಈ ಬಗ್ಗೆ ಏರ್‌‍ಲೈನ್ಸ್ ನ ವಕ್ತಾರರು ಮಾತನಾಡಿ, ನಮಗೆ ಪ್ರಯಾಣಿಕರ ಸುರಕ್ಷತೆ ಮುಖ್ಯ. ಹೀಗಾಗಿ ಇನ್ನು ಮುಂದೆ ಆರೋಪಿ ಗೊನ್ಜಲೇಜ್ ಯುನೈಟೆಡ್ ಏರ್‌‍ಲೈನ್ಸ್ ನ ವಿಮಾನಗಳಲ್ಲಿ ಪ್ರಯಾಣಿಸುವಂತಿಲ್ಲ. ಆರೋಪಿಗೆ ನಮ್ಮ ವಿಮಾನಗಳಲ್ಲಿ ಪ್ರಯಾಣಿಸದಂತೆ ನಿಷೇಧ ಹೇರಿದ್ದೇವೆ ಎಂದಿದ್ದಾರೆ.

  • ಪತಿ-ಪತ್ನಿ ಜಗಳ ನೋಡಿ ನಕ್ಕಿದಕ್ಕೆ ಕೆನ್ನೆಯನ್ನೇ ಕತ್ತರಿಸಿದ!

    ಪತಿ-ಪತ್ನಿ ಜಗಳ ನೋಡಿ ನಕ್ಕಿದಕ್ಕೆ ಕೆನ್ನೆಯನ್ನೇ ಕತ್ತರಿಸಿದ!

    ನವದೆಹಲಿ: ಪತಿ-ಪತ್ನಿ ಜಗಳ ಮಾಡುತ್ತಿದ್ದಾಗ ನೋಡಿ ನಕ್ಕಿದ ಯುವಕನೋರ್ವನ ಎರಡು ಕನ್ನೆಯನ್ನೇ ಪತಿರಾಯ ಕತ್ತರಿಸಿದ ಭಯಾನಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ದೆಹಲಿಯ ಕಲ್ಯಾಣನಗರದ ನಿವಾಸಿ ಕುಮಾಲ್(17) ಗಾಯಗೊಂಡ ಯುವಕ. ಕಲ್ಯಾಣನಗರದಲ್ಲಿ ಗುರುವಾರದಂದು ದಂಪತಿ ಜಗಳವಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಯುವಕ ಅವರಿಬ್ಬರ ಜಗಳ ನೋಡಿ ನಕ್ಕಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಪತಿರಾಯ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ.

    ಯುವಕನನ್ನು ಮರುದಿನ ಪಾರ್ಕಿಗೆ ಕರೆದುಕೊಂಡು ಹೋದ ಆರೋಪಿ, ನಿನ್ನೆ ನೀನು ನಮ್ಮ ಜಗಳ ನೋಡಿ ನಗುತ್ತಿದ್ದೆ. ನನ್ನ ಪತ್ನಿ ಜೊತೆ ಜಗಳವಾಡಿದರೆ ನೀನೇಕೆ ನಕ್ಕಿದ್ದು ಎಂದು ಪ್ರಶ್ನಿಸಿ, ನಮ್ಮನ್ನ ನೋಡಿ ನಕ್ಕಿದ್ದಕ್ಕೆ ನಿನಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಏಕಾಏಕಿ ಯುವಕನ ಮೇಲೆ ಹಲ್ಲೆ ನಡೆಸಿ ಆತನ ಎರಡೂ ಕೆನ್ನೆಯನ್ನು ಬ್ಲೇಡ್ ನಿಂದ ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗೆಯೇ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ.

  • ಜರ್ಮನಿಯಲ್ಲಿ ಉಡುಪಿ ಎಂಜಿನಿಯರ್ ಹತ್ಯೆ – ಕುಂದಾಪುರದಲ್ಲೇ ಅಂತ್ಯ ಸಂಸ್ಕಾರಕ್ಕೆ ಆಗ್ರಹ

    ಜರ್ಮನಿಯಲ್ಲಿ ಉಡುಪಿ ಎಂಜಿನಿಯರ್ ಹತ್ಯೆ – ಕುಂದಾಪುರದಲ್ಲೇ ಅಂತ್ಯ ಸಂಸ್ಕಾರಕ್ಕೆ ಆಗ್ರಹ

    ಉಡುಪಿ: ಜರ್ಮನಿಯಲ್ಲಿ ನಡೆದ ಪ್ರಶಾಂತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ತನಿಖೆಯಾಗಬೇಕು ಹಾಗೆಯೇ ಪ್ರಶಾಂತ್ ಮೃತದೇಹದ ಅಂತ್ಯ ಸಂಸ್ಕಾರ ಕುಂದಾಪುರದಲ್ಲೇ ನಡೆಯಬೇಕು, ಇದಕ್ಕೆ ಸಹಕರಿಸಿ ಎಂದು ಮೃತರ ಕುಟುಂಬಸ್ಥರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಜರ್ಮನಿಯಲ್ಲಿ ಪ್ರಶಾಂತ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಜರ್ಮನಿಯ ಮ್ಯೂನಿಚ್‍ನಲ್ಲಿ ಶುಕ್ರವಾರ ಸಂಜೆ ಪ್ರಶಾಂತ್ ದಂಪತಿ ಅಪಾರ್ಟ್ ಮೆಂಟ್‍ಗೆ ಬರುವ ಸಂದರ್ಭದಲ್ಲಿ ಘಾನಾ ದೇಶದ ಪ್ರಜೆ ಏಕಾಏಕಿ ಚೂರಿಯಿಂದ ಇರಿದಿದ್ದು, ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಹೋದರಿ ಸಾಧನಾ ಮಾಧ್ಯಮಗಳ ಮುಂದೆ ಬಂದು, ಮೃತದೇಹವನ್ನು ತವರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ:ಜರ್ಮನಿಯಲ್ಲಿ ಚಾಕು ಇರಿತಕ್ಕೊಳಗಾದ ಉಡುಪಿ ಮೂಲದ ದಂಪತಿ, ಪತಿ ಸಾವು

    ಸದ್ಯ ಪತ್ನಿ ಸ್ಮಿತಾ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು ಜರ್ಮನಿಯಲ್ಲೇ ನೆಲೆಸಿದ್ದಾರೆ. ಮೃತ ಪ್ರಶಾಂತ್ ತಾಯಿಗೆ ಶವ ನೋಡಲು ಅವಕಾಶ ಕೊಡಬೇಕು. ಮೃತದೇಹವನ್ನು ತವರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಉಡುಪಿಯಲ್ಲಿರುವ ಕುಟುಂಬ ಒತ್ತಾಯಿಸಿದೆ. ತಾಯಿ ವಿನಯಾ ಪಾಸ್‍ಪೋರ್ಟ್ ರಿನೀವಲ್ ಗೆ ಬೆಂಗಳೂರಿಗೆ ತೆರಳಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸಹಕರಿಸಬೇಕು ಎಂದು ನಿವೇದಿಸಿದ್ದಾರೆ.

    ಸಹೋದರನ ಕೊಲೆಗೆ ಕಾರಣವೇನು ತಿಳಿಯಬೇಕು. ಪ್ರಶಾಂತ್ ಬಹಳ ಸೌಮ್ಯ ಸ್ವಭಾವದ ವ್ಯಕ್ತಿ. ಯಾರೊಂದಿಗೂ ಜಗಳ ಮಾಡುವ ವ್ಯಕ್ತಿತ್ವ ಅವನದಲ್ಲ. ಪ್ರಕರಣ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ನಡೆಯಬೇಕು ಎಂದಿದ್ದಾರೆ.

    ಪ್ರಶಾಂತ್ ಸಹೋದರಿ ಸಾಧನಾ ಮಾತನಾಡಿ, ಅಪಘಾತವಾಗಿದೆ ಅಂತ ಮೊದಲು ಸಂದೇಶ ಬಂತು. ನಿನ್ನೆ ಸಾಯಂಕಾಲ ಘಟನೆ ಬಗ್ಗೆ ಮಾಹಿತಿ ಸಿಕ್ಕಿದೆ. ಕೊಲೆಯಾಗಿದ್ದಾನೆ ಅಂದಾಗ ಶಾಕ್ ಆಯ್ತು. ಜರ್ಮನಿಯಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ.

    ಬಳಿಕ ಪ್ರಶಾಂತ್ ಬಾವ ಶ್ರೀನಿವಾಸ್ ಮಾತನಾಡಿ, ಸಣ್ಣ ಪುಟ್ಟ ಗಲಾಟೆಗೂ ಹೋಗದ ಅವರು ಕೊಲೆಯಾಗಲು ಕಾರಣವೇನು ಅಂತ ಗೊತ್ತಾಗುತ್ತಿಲ್ಲ. ನಮಗೆ ಕೇಂದ್ರ ಸರ್ಕಾರ ಬೆಂಬಲ ಕೊಟ್ಟಿದೆ. ಆದ್ರೆ ಘಟನೆ ನಡೆಯಲು ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅಮ್ಮನ ಪಾಸ್ ಪೋರ್ಟ್ ರಿನಿವಲ್ ಮಾಡಿಸಿಲ್ಲ. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸಹಾಯ ಮಾಡುತ್ತಿದ್ದಾರೆ. ಮಾಧ್ಯಮಗಳ ಸಹಾಯ ಇದ್ದರೆ ಮೃತದೇಹ ಊರಿಗೆ ತೆಗೆದುಕೊಂಡು ಬರಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

  • ಮಗ ಗೃಹಿಣಿ ಜೊತೆ ಪರಾರಿ- ವಿಷ ಸೇವಿಸಿದ ಹೆತ್ತವರು..!

    ಮಗ ಗೃಹಿಣಿ ಜೊತೆ ಪರಾರಿ- ವಿಷ ಸೇವಿಸಿದ ಹೆತ್ತವರು..!

    ರಾಮನಗರ: ಮಗ ಗೃಹಿಣಿಯೊಬ್ಬಳನ್ನು ಕರೆದುಕೊಂಡು ಓಡಿ ಹೋದ ಹಿನ್ನೆಲೆಯಲ್ಲಿ ಹೆತ್ತವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಲಿಗೌಡನದೊಡ್ಡಿ ಗ್ರಾಮದಲ್ಲಿ ಬುಧವಾರದಂದು ನಡೆದಿದೆ.

    ಸಿದ್ದರಾಜು(52), ಸಾಕಮ್ಮ(42) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕಲ್ಲಿಗೌಡನದೊಡ್ಡಿ ಗ್ರಾಮದ ನಿವಾಸಿಗಳಾದ ಸಿದ್ದರಾಜು ಹಾಗೂ ಸಾಕಮ್ಮ ದಂಪತಿಗೆ ಮನು ಎಂಬ ಮಗನಿದ್ದನು.

    ಮನು ಅದೇ ಗ್ರಾಮದಲ್ಲಿದ್ದ ಪಲ್ಲವಿಯೆಂಬ ಗೃಹಿಣಿಯನ್ನ ಕರೆದುಕೊಂಡು ಓಡಿಹೋಗಿದ್ದಾನೆ. ಹೀಗಾಗಿ ಗೃಹಿಣಿಯ ಕುಟುಂಬಸ್ಥರಿಂದ ಯುವಕನ ಮನೆ ಮುಂದೆ ಗಲಾಟೆ ಮಾಡಿದ್ದಾರೆ. ಇದರಿಂದ ಮನನೊಂದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಕನಕಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಡಿನ ಒಳಿತಿಗಾಗಿ ಮಂಡ್ಯದಲ್ಲಿ 101 ದಂಪತಿಗಳಿಂದ ವಿಶೇಷ ಪೂಜೆ

    ನಾಡಿನ ಒಳಿತಿಗಾಗಿ ಮಂಡ್ಯದಲ್ಲಿ 101 ದಂಪತಿಗಳಿಂದ ವಿಶೇಷ ಪೂಜೆ

    ಮಂಡ್ಯ: ಇಂದು ರಾತ್ರಿ ಕೇತುಗ್ರಸ್ಥ ಚಂದ್ರಗ್ರಹಣ ಸಂಭವಿಸುವ ಹಿನ್ನೆಲೆಯಲ್ಲಿ ಸರ್ವ ಜನರ ಒಳಿತಿಗಾಗಿ ಮಂಡ್ಯದಲ್ಲಿ 101 ದಂಪತಿಗಳಿಂದ ವಿಶೇಷ ಪೂಜೆ ನೆರವೇರಿದೆ.

    ಮಂಡ್ಯ ನಗರದಲ್ಲಿರುವ ಖಾಸಗಿ ಸಮುದಾಯ ಭವನದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರೊಂದು ದಂಪತಿಗಳು ಪೂಜೆಯಲ್ಲಿ ಪಾಲ್ಗೊಂಡು ಶತಮಾನಗಳ ದೀರ್ಘಾವಧಿ ಕೇತುಗ್ರಸ್ಥ ಚಂದ್ರ ಗ್ರಹಣದಿಂದ ನಾಡಿಗೆ ಯಾವುದೇ ಕೇಡುಕು ಉಂಟಾಗದಿರಲಿ, ರೈತಾಪಿ ವರ್ಗ ಸಂತಸದಿಂದರಲಿ ಹಾಗೂ ನಾಡಿನ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

    ಮಂಡ್ಯದ ಪ್ರಮುಖ ದೇವಾಲಯಗಳು ಗ್ರಹಣ ಕಾಲದಲ್ಲಿ ಮುಚ್ಚಲ್ಪಡಲಿವೆ. ಮೊದಲನೇಯದಾಗಿ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯವು ಇಂದು ರಾತ್ರಿ 8 ಗಂಟೆಗೆ ಬಂದ್ ಆಗಲಿದೆ. ಇಂದು ಆಷಾಢ ಶುಕ್ರವಾರವಾದ್ದರಿಂದ ದೇವಾಲಯದಲ್ಲಿ ವಿಷೇಷ ಪೂಜೆ ನಡೆಯಲಿದೆ. ಇಂದು ರಾತ್ರಿ 11:54ಕ್ಕೆ ಆರಂಭವಾಗಲಿರುವ ಚಂದ್ರ ಗ್ರಹಣ ಕಾಲದಲ್ಲಿ ದೇವಾಲಯವು ಸಂಪೂರ್ಣ ಬಂದ್ ಆಗಲಿದ್ದು, ಗ್ರಹಣ ಮುಗಿಯುವವರೆಗೂ ನಿಮಿಷಾಂಭ ದೇವಿಯ ಮೂರ್ತಿಗೆ ನೀರಿನ ಅಭಿಷೇಕ ಮಾಡಲಾಗುತ್ತದೆ. ಗ್ರಹಣದ ಬಳಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಶನಿವಾರ ಬೆಳಿಗ್ಗೆ ದೇವಾಲಯ ಶುಚಿಗೊಳಿಸಿ ದೇವಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶವಿರುತ್ತದೆ.

    ಶ್ರೀರಂಗಪಟ್ಟಣದ ಮತ್ತೊಂದು ದೇವಾಲಯವಾದ ಶ್ರೀರಂಗನಾಥಸ್ವಾಮಿ ದೇವಾಲಯವು ಇಂದು ರಾತ್ರಿ 7:30ಕ್ಕೆ ಬಾಗಿಲು ಮುಚ್ಚಲಿದ್ದು, ಗ್ರಹಣ ಕಾಲದಲ್ಲಿ ಬಂದ್ ಆಗಿರಲಿದೆ. ಗ್ರಹಣ ಕಾಲ ಮುಗಿದ ಬಳಿಕ ಶನಿವಾರ ಬೆಳಿಗ್ಗೆ 6:30ಕ್ಕೆ ದೇವಾಲಯದ ಸ್ವಚ್ಛತಾ ಕಾರ್ಯ ಆರಂಭವಾಗಲಿದ್ದು, ದೇವಾಲಯ ಹಾಗೂ ದೇವರ ಮೂರ್ತಿಗೆ ಪ್ರೋಕ್ಷಣೆ ನಡೆಸಿ ಆನಂತರ ಅರ್ಚಕರು ಅಭಿಷೇಕ ನೆರವೇರಿಸಲಿದ್ದಾರೆ.

    ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯವು ಸಂಜೆ 7 ಗಂಟೆಗೆ ಬಾಗಿಲು ಮುಚ್ಚಲಿದ್ದು, ಇಂದು ರಾತ್ರಿ ನಡೆಯಬೇಕಿದ್ದ ಉಯ್ಯಾಲೆ ಉತ್ಸವ ಹಾಗೂ ರಾಜಮುಡಿ ಅಂಕುರಾರ್ಪಣೆಯನ್ನು ಇಂದು ಸಂಜೆಯೇ ನಡೆಸಿ ದೇವಾಲಯವನ್ನು ಸಂಜೆ 7 ಕ್ಕೆ ಬಾಗಿಲು ಹಾಕಲು ದೇವಾಲಯದ ಅರ್ಚಕ ವರ್ಗ ತೀರ್ಮಾನಿಸಿದೆ. ಶನಿವಾರ ಬೆಳಿಗ್ಗೆ ದೇವಾಲಯ ಶುದ್ಧೀಕರಣದ ನಂತರ ಚೆಲುವನಾರಾಯಣ ಸ್ವಾಮಿಗೆ ಅಭಿಷೇಕ ಮಾಡಿ ನಂತರ ಗ್ರಹಣ ಶಾಂತಿ ನಡೆಸಲಿದ್ದಾರೆ.

  • ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ: 145 ಜೋಡಿ ಹಸೆಮಣೆಗೆ

    ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ: 145 ಜೋಡಿ ಹಸೆಮಣೆಗೆ

    ಮೈಸೂರು: ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತಿದ್ದು, ಜಾತ್ರೆಯ ಎರಡನೇ ದಿನವಾದ ಇಂದು ಕಲ್ಯಾಣ ಸಂಭ್ರಮ ಮನೆ ಮಾಡಿತ್ತು.

    ಬರೋಬ್ಬರಿ 145 ಜೋಡಿಯ ಸಾಮೂಹಿಕ ವಿವಾಹ ನೆರವೇರಿತು. ಸುತ್ತೂರು ಶ್ರೀ ಮಠ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಅಂಗವಿಕಲರು, ಅಂತರ್ಜಾತಿ, ವಿಧುರ- ವಿಧವೆ ಜೋಡಿ ಸತಿಪತಿಗಳಾದರು. 12 ಅಂತರ್ಜಾತಿ ಜೋಡಿ, 3 ಅಂಗವಿಕಲ ಜೋಡಿ, 3 ವಿಧುರ- ವಿಧವೆ ಜೋಡಿಗೆ ವಿವಾಹವಾಯಿತು.

    ಜಾತಿ, ಬೇಧವಿಲ್ಲದೆ ಸಾಮೂಹಿಕ ವಿವಾಹ ನಡೆದಿದ್ದು, ಎಲ್ಲಾ ಜಾತಿಯ ಜನರು ಒಂದೆಡೆ ಸೇರಿದ್ದರು. ಎಲ್ಲಾ ಜಾತಿಯ ಜೋಡಿಗಳು ಒಂದು ವೇದಿಕೆಯಲ್ಲಿ ಸತಿ ಪತಿಗಳಾದರು. ಇದುವರೆಗೂ ಸುತ್ತೂರು ಜಾತ್ರೆಯಲ್ಲಿ ಒಟ್ಟು 2,464 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸುತ್ತೂರು ಶ್ರೀ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾರಿಷಸ್ ಗಣರಾಜ್ಯದ ಉಪರಾಷ್ಟ್ರಪತಿ ಪರಮಶಿವ ಪಿಳ್ಳೈ, ಕನಕಪುರದ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸೇರಿದಂತೆ ಪ್ರಮುಖರು ನವ ವಧುವರರಿಗೆ ಆಶೀರ್ವಾದಿಸಿದರು.

  • ಸತ್ತ ಮಗನ ನೆನಪಿನಲ್ಲಿ ಪ್ರತಿನಿತ್ಯ ಉಚಿತವಾಗಿ ಊಟ ದಾನ ಮಾಡುತ್ತಿರುವ ದಂಪತಿ

    ಸತ್ತ ಮಗನ ನೆನಪಿನಲ್ಲಿ ಪ್ರತಿನಿತ್ಯ ಉಚಿತವಾಗಿ ಊಟ ದಾನ ಮಾಡುತ್ತಿರುವ ದಂಪತಿ

    ಮುಂಬೈ: ಮಗನನ್ನು ಕಳೆದುಕೊಂಡ ನಂತರ ಅವನನ್ನು ಪ್ರತಿನಿತ್ಯ ಸ್ಮರಿಸುತ್ತಾ ಆತನ ಹೆಸರಿನಲ್ಲಿ ಹಿರಿಯ ನಾಗರೀಕರಿಗಾಗಿ ಟಿಫಿನ್ ಸೆಂಟರ್ ನಡೆಸುತ್ತಿರೋ ಈ ಮುಂಬೈ ದಂಪತಿ ಪ್ರತಿನಿತ್ಯ ಬಡವರಿಗೆ ಹಾಗೂ ವೃದ್ಧರಿಗೆ ಉಚಿತವಾಗಿ ಆಹಾರವನ್ನು ನೀಡುತ್ತಿದ್ದಾರೆ.

    ಇವರ ಪುತ್ರ ನಿಮೇಶ್ ತನ್ನಾ 2011 ರಲ್ಲಿ ಒಂದು ಸ್ಥಳೀಯ ರೈಲ್ವೇ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮುಂಬೈನಲ್ಲಿ ಮೀಟಿಂಗ್‍ವೊಂದಕ್ಕೆ ತೆರಳುತ್ತಿದ್ದ ವೇಳೆ ಜನಜಂಗುಳಿಯಿದ್ದ ರೈಲನ್ನು ಏರಿ ಸ್ಥಳದಲ್ಲೇ ಸಾವನ್ನಪ್ಪಿದ್ರು.

    ಮಗನ ಸಾವಿನ ನಂತರ ಆತನ ಹೆಸರು ಸದಾ ಕಾಲ ಚಿರಸ್ಮರಣಿಯಾಗಿ ಇರಬೇಕು ಎಂದು ಬಡವರಿಗೆ ಊಟ ಒದಗಿಸುವ ಉದ್ದೇಶದಿಂದ ದಂಪತಿ ಶ್ರೀ ನಿಮೇಶ್ ತನ್ನಾ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದರು.

    ಮೊದಲು ಸಣ್ಣ ಅಡುಗೆ ಮನೆಯಲ್ಲಿ ಊಟವನ್ನು ತಯಾರಿಸಿಕೊಂಡು ಪ್ರತಿನಿತ್ಯ ಸುಮಾರು 30 ಮಂದಿಗೆ ನೀಡುತ್ತಿದ್ದರು. ಈಗ ಟ್ರಸ್ಟ್ ಅಭಿವೃದ್ಧಿಯಾಗಿ ಸುಮಾರು 7 ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯಕರವಾದ ಆಹಾರವನ್ನು ತಯಾರಿಸಿ ಮುಂಬೈನಲ್ಲಿ ಪ್ರತಿದಿನ 100 ಬಡ ಜನರಿಗೆ ಊಟವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳಿಗೆ ಉಚಿತವಾಗಿ ಬಟ್ಟೆ, ಪುಸ್ತಕಗಳು ಹಾಗೂ ವೃದ್ಧರಿಗೆ ಔಷಧವನ್ನು ಕೂಡ ನೀಡುತ್ತಿದ್ದಾರೆ.

    https://www.youtube.com/watch?v=qG0_SPfmp_U