Tag: Couples

  • ಕೊಲೆ ಆರೋಪಿಗಳ ಸುಳಿವು ನೀಡಿದ ಎಟಿಎಂ ಕಾರ್ಡ್

    ಕೊಲೆ ಆರೋಪಿಗಳ ಸುಳಿವು ನೀಡಿದ ಎಟಿಎಂ ಕಾರ್ಡ್

    – ಡಬಲ್ ಮರ್ಡರ್ ಮಾಡಿದ್ದ 6 ಆರೋಪಿಗಳು ಅಂದರ್

    ಹಾಸನ: ತೋಟದ ಮನೆಯಲ್ಲಿ ವೃದ್ಧ ದಂಪತಿಯ ಜೋಡಿ ಕೊಲೆ ಪ್ರಕರಣರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದು, ಮಂಜಶೆಟ್ಟಿ(23), ಪ್ರಸಾದ್(25), ನಂದನ್ ಕುಮಾರ್(33), ಯೋಗಾನಂದ(29), ಭರತ್(24), ಮಧು(25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಮಾರು 15 ಲಕ್ಷ ಮೌಲ್ಯದ 316 ಗ್ರಾಂ ಚಿನ್ನ, ಎರಡು ಕೆಜಿ 250 ಗ್ರಾಂ ಬೆಳ್ಳಿ, ಸುಮಾರು 25 ಸಾವಿರ ನಗದು, ಮೂರು ಮೊಬೈಲ್ ಫೋನ್, ಒಂದು ಕಾರು, ಮೂರು ಬೈಕ್ ವಶಕ್ಕೆ ಪಡೆಯಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರ ಮಾಹಿತಿ ಮೇರೆಗೆ ಉಳಿದ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ದಂಪತಿಯ ಎಟಿಎಂ ಕಾರ್ಡ್‍ನಿಂದ ಹಣ ಪಡೆಯಲು ಹೋಗಿದ್ದರಿಂದ ಆರೋಪಿಗಳ ಹುಡುಕಾಟದಲ್ಲಿದ್ದ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಎಟಿಎಂ ಮೂಲಕ ಎಲ್ಲರನ್ನೂ ಬಂಧಿಸಲು ಸಾಧ್ಯವಾಗಿದೆ.

    ಈ ಕುರಿತು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳೆಲ್ಲ ಪೊಲೀಸರ ವಶವಾಗಿದ್ದು, ತನಿಖಾ ತಂಡಕ್ಕೆ ಎಸ್‍ಪಿ ಶ್ರೀನಿವಾಸ್‍ಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಆಗಸ್ಟ್ 29 ರಂದು ಚನ್ನರಾಯಪಟ್ಟಣ ತಾಲೂಕಿನ, ಆಲಗೊಂಡನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಮುರಳೀಧರ್ ಮತ್ತು ಉಮಾದೇವಿ ದಂಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು.

  • ಜೊತೆಗಿರದ ಜೋಡಿಗಳು ಲಾಕ್‍ಡೌನ್ ಹೇಗೆ ಕಳೆಯುತ್ತಿದ್ದಾರೆ ಊಹಿಸಲು ಆಗುತ್ತಿಲ್ಲ: ಕೃತಿ

    ಜೊತೆಗಿರದ ಜೋಡಿಗಳು ಲಾಕ್‍ಡೌನ್ ಹೇಗೆ ಕಳೆಯುತ್ತಿದ್ದಾರೆ ಊಹಿಸಲು ಆಗುತ್ತಿಲ್ಲ: ಕೃತಿ

    – ಅವನು ನನ್ನ ಜೊತೆ ಇರುವುದಕ್ಕೆ ಖುಷಿಯಿದೆ

    ಮುಂಬೈ: ಲಾಕ್‍ಡೌನ್ ಸಮಯದಲ್ಲಿ ಬೇರೆ ಬೇರೆ ಇರುವ ಜೋಡಿಗಳು ಹೇಗೆ ಕಾಲ ಕಳೆಯುತ್ತಿದ್ದಾರೆ ನನಗೆ ಗೊತ್ತಿಲ್ಲ ಎಂದು ಗೂಗ್ಲಿ ಬೆಡಗಿ ಕೃತಿ ಕರಬಂಧ ಹೇಳಿದ್ದಾರೆ.

    ಕೊರೊನಾ ವೈರಸ್ ಭಯದಿಂದ ದೇಶವೇ ಲಾಕ್‍ಡೌನ್ ಆಗಿದೆ. ಯಾರೂ ಕೂಡ ತಮ್ಮ ಮನೆಬಿಟ್ಟು ಆಚೆಗೆ ಬರುತ್ತಿಲ್ಲ. ನಟಿ-ನಟಿಯರು ಕೂಡ ಸಿನಿಮಾ ಕೆಲಸವನ್ನು ಬಿಟ್ಟು ಗೂಡ ಸೇರಿದ್ದಾರೆ. ಈ ವೇಳೆ ಬಾಲಿವುಡ್‍ನ ಕ್ಯೂಟ್ ಕಪಲ್ಸ್ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಲಾಕ್‍ಡೌನ್ ಸಮಯವನ್ನು ಒಂದೇ ಮನೆಯಲ್ಲಿ ಉಳಿದು ಎಂಜಾಯ್ ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಕೃತಿ, ನಾವು ಮೊದಲೇ ಟ್ರಾಫಿಕ್ಸ್ ಸಮಸ್ಯೆಯಿಂದ ಒಂದೇ ಮನೆಯಲ್ಲಿ ಇರಲು ತೀರ್ಮಾನಿಸಿದ್ದೆವು. ಈಗ ಲಾಕ್‍ಡೌನ್ ಸಮಯದಲ್ಲೂ ಒಂದೇ ಮನೆಯಲ್ಲಿ ಇರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಆದರೆ ಈ ಲಾಕ್‍ಡೌನ್ ಸಮಯದಲ್ಲಿ ಬೇರೆ ಬೇರೆ ಇರುವ ಜೋಡಿಗಳು ಹೇಗೆ ಕಾಲ ಕಳೆಯುತ್ತಿದ್ದಾರೆ ಎಂದೂ ನನಗೆ ಊಹಿಸಲು ಆಗುತ್ತಿಲ್ಲ ಎಂದು ಕೃತಿ ಹೇಳಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಒಟ್ಟಿಗೆ ಇರುವ ಕೃತಿ ಮತ್ತು ಪುಲ್ಕಿತ್ ಬಹಳ ಎಂಜಾಯ್ ಮಾಡುತ್ತಿದ್ದಾರೆ. ಮನೆಯಲ್ಲೇ ಕುಳಿತು ವಿಡಿಯೋ ಗೇಮ್ ಆಡುತ್ತಿದ್ದಾರೆ. ಗುರುವಾರ ಪುಲ್ಕಿತ್ ಸಾಮ್ರಾಟ್ ಇಬ್ಬರು ಜೊತೆಗೆ ಪಿಯಾನೋ ನುಡಿಸುತ್ತಿರುವ ಮತ್ತು ಜೊತೆಗೆ ಹಳೆಯ ಸಾಂಗ್ ಗಳಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ನಡುವೆ ಕೃತಿ ಇನ್‍ಸ್ಟಾಗ್ರಾಮ್ ಮೂಲಕ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಿರುತ್ತಾರೆ.

    https://www.instagram.com/p/B-u3YMUhYoO/

    ಈ ಹಿಂದೆ ಮಾಧ್ಯಮವೊಂದಕ್ಕೆ ಕೃತಿ ಇನ್‍ಸ್ಟಾ ಲೈವ್‍ನಲ್ಲಿ ಸಂದರ್ಶನ ನೀಡಿದ್ದರು. ಈ ವೇಳೆ ನಟ ಪುಲ್ಕಿತ್ ಸಾಮ್ರಾಟ್ ಅವರಿಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನಾನು ಕೂಡ ಮದುವೆಗೆ ರೆಡಿಯಾಗಿಲ್ಲ. ಆತ ಇನ್ನೂ ಬಚ್ಚಾ. ಹಾಗಾಗಿ ಮದುವೆಯಾಗಲು ನಾವು ಈಗಲೇ ರೆಡಿ ಇಲ್ಲ. ಪುಲ್ಕಿತ್ ನನ್ನನ್ನು ಕೇರ್ ಮಾಡುವಂತೆ ಇದುವರೆಗೂ ಯಾರು ಮಾಡಿಲ್ಲ. ಲಾಕ್‍ಡೌನ್ ಆಗಿದ್ದು, ನಾವಿಬ್ಬರು ಒಟ್ಟಿಗೆ ಇದ್ದೇವೆ. ಈ ವೇಳೆ ಪುಲ್ಕಿತ್ ನನಗೆ ಮನೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದಿದ್ದರು.

    ಕ್ಯೂಟ್ ಬೆಡಗಿ ಕೃತಿ `ಚಿರು’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿ ಗೂಗ್ಲಿ ಚಿತ್ರದ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. `ಮಾಸ್ತಿಗುಡಿ’ ಚಿತ್ರದ ನಂತರ ಕೃತಿ ಬೇರೆ ಯಾವ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ. ಸದ್ಯ ಕೃತಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಬಾಲಿವುಡ್‍ನಲ್ಲಿ 2019ರಿಂದ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

  • ದಾಂಪತ್ಯಕ್ಕೂ ತಟ್ಟಿದ ಕೊರೊನಾ ಬಿಸಿ – ಮನೆಯಲ್ಲೇ ಇರುವ ಪತಿ, ಪತ್ನಿ ಕಿತ್ತಾಟಕ್ಕೆ ಹೆಚ್ಚಾಗ್ತಿದೆ ವಿಚ್ಛೇದನ

    ದಾಂಪತ್ಯಕ್ಕೂ ತಟ್ಟಿದ ಕೊರೊನಾ ಬಿಸಿ – ಮನೆಯಲ್ಲೇ ಇರುವ ಪತಿ, ಪತ್ನಿ ಕಿತ್ತಾಟಕ್ಕೆ ಹೆಚ್ಚಾಗ್ತಿದೆ ವಿಚ್ಛೇದನ

    ಬೀಜಿಂಗ್: ಇಷ್ಟು ದಿನ ಮಹಾಮಾರಿ ಕೊರೊನಾ ಕಾಟಕ್ಕೆ ಸಾವಿರಾರು ಜೀವಗಳು ಬಲಿಯಾಗಿದೆ. ಆದರೆ ಈಗ ಚೀನಾದಲ್ಲಿ ಕೊರೊನಾ ವೈರಸ್ ದಾಂಪತ್ಯ ಜೀವನಕ್ಕೂ ಮಾರಕವಾಗಿದ್ದು, ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮನೆಯಲ್ಲೇ ಇರುತ್ತಿದ್ದ ಪತಿ, ಪತ್ನಿಯರ ಕಿತ್ತಾಟ ಹೆಚ್ಚಾಗಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

    ಕೊರೊನಾ ಸೋಂಕು ಹರಡುವಿಕೆ ತಡೆಗೆ ಚೀನಾ ಸರ್ಕಾರ, ಯಾರೂ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಈ ಹಿಂದೆ ಆದೇಶ ಹೊರಡಿಸಿತ್ತು. ಈ ಪ್ರಕಾರ ಜನರು ಮನೆಗಳಿಂದ ಹಲವು ದಿನಗಳ ಕಾಲ ಹೊರಬರುತ್ತಿಲ್ಲ. ಆದರೆ ಸರ್ಕಾರ ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಮನೆಯಲ್ಲಿರಿ ಎಂದಿದ್ದೇ ಈಗ ಚೀನಾದಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ.

    ಒಂದೆಡೆ ಮನೆಯಲ್ಲಿಯೇ ಇದ್ದು ಇದ್ದು ಹಲವರು ಬೇಸತ್ತು ಹೋಗಿದ್ದರೆ, ಇನ್ನೊಂದೆಡೆ ಅಷ್ಟಕ್ಕಷ್ಟೇ ಸಂಬಂಧ ಹೊಂದಿದ್ದ ಪತಿ-ಪತ್ನಿಯರ ನಡುವೆ ಜಗಳ, ಕಿತ್ತಾಟ ಹೆಚ್ಚಾಗಿದೆ. ಮನೆಯೊಳಗಿನ ಈ ಜಗಳ ಈಗ ಕೋರ್ಟ್ ಮೆಟ್ಟಿಲು ಏರುತ್ತಿದ್ದು, ವಿಚ್ಛೇದನದ ಘಟ್ಟವನ್ನು ತಲುಪುತ್ತಿದೆ. ಇದರಿಂದ ದೇಶದಲ್ಲಿ ವಿಚ್ಛೇದನಗಳ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸರ್ಕಾರದ ವಿವಾಹ ನೋಂದಣಿ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿವೆ.

    ಈ ಮೊದಲಿಗಿಂತ ಕೊರೊನಾ ವೈರಸ್ ಸೋಂಕು ಬಂದ ಮೇಲೆಯೇ ಹೆಚ್ಚಿನ ವಿಚ್ಛೇದನಗಳು ಆಗುತ್ತಿವೆ ಎಂದು ಸಿಚುವಾನ್ ಪ್ರಾಂತ್ಯದ ಡಾಝೌ ಮದುವೆ ನೋಂದಣಾಧಿಕಾರಿ ಲು ಶಿಜುನ್ ತಿಳಿಸಿದ್ದಾರೆ.

    ಚೀನಾದಲ್ಲಿ ಈವರೆಗೆ ಕೊರೊನಾ ಸೋಂಕಿಗೆ 80,928 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 70,420 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,245 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 7,263 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.

    ಒಟ್ಟು 173 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 2,18,455 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ವಿಶ್ವದೆಲ್ಲೆಡೆ ಒಟ್ಟು 8,938 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 85,664 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,23,853 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

  • ಕೊಡಗಿನ ವರನಿಗೆ ರಷ್ಯಾದ ‘ಮಿಲನ’

    ಕೊಡಗಿನ ವರನಿಗೆ ರಷ್ಯಾದ ‘ಮಿಲನ’

    ಮಡಿಕೇರಿ: ಕೊಡಗಿನ ಯುವಕ ಹಾಗೂ ರಷ್ಯಾದ ಯುವತಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಸತಿ-ಪತಿಯಾದ ವಿಶೇಷ ಪ್ರಸಂಗ ನಡೆದಿದೆ.

    ಸೋಮವಾರಪೇಟೆಯ ಜಾನಕಿ ಕನ್‍ವೆನ್ಷನ್ ಹಾಲ್ ಈ ಅಪರೂಪದ ಮಂಗಳ ಕಾರ್ಯಕ್ಕೆ ಸಾಕ್ಷಿಯಾಗಿದೆ. ಸೊಮವಾರಪೇಟೆ ಸಮೀಪದ ನಂದಿಗುಂದ ಗ್ರಾಮದ ಚಿನ್ನಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಜಯಚಂದನ್ ರಷ್ಯಾದ ಮಾಸ್ಕೊ ವಿಶ್ವವಿದ್ಯಾನಿಲಯದಲ್ಲಿ ಯೋಗ ತರಬೇತುದಾರರಾಗಿದ್ದಾರೆ. ಇವರೊಂದಿಗೆ ಮಾಸ್ಕೊ ರಾಜ್ಯದ ಯುವತಿ ಮಿಲನಾ ಅವರು ಯೋಗ ತರಬೇತಿ ನೀಡುತ್ತಿದ್ದು, ಪರಸ್ಪರ ಪ್ರೀತಿಸಿ ಹಸೆಮಣೆಯೇರುವ ತೀರ್ಮಾನಕ್ಕೆ ಬಂದಿದ್ದರು.

    ಗುರು, ಹಿರಿಯರು, ನೆಂಟರಿಷ್ಟರು ಮತ್ತು ಆಪ್ತರ ಸಮ್ಮುಖದಲ್ಲಿ ಭಾನುವಾರ ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಷ್ಯಾದ ಯುವತಿಗೆ ಭಾರತೀಯ ಸಂಸ್ಕೃತಿಯ ಅಚಾರ ವಿಚಾರದ ಬಗ್ಗೆ ಹೆಚ್ಚಿನ ಒಲವು ಇದ್ದು, ಭಾರತದ ಹುಡುಗನನ್ನು ಮದುವೆ ಮಾಡಿಕೊಳ್ಳುವ ಆಸೆ ಇತ್ತು. ಈ ಕುರಿತು ಹುಡುಗನ ಮನೆಯವರೊಂದಿಗೆ ಹೇಳಿಕೊಂಡಿದ್ದರು. ನಂತರ ಇಬ್ಬರ ಮನೆಯಲ್ಲೂ ಒಪ್ಪಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  • ಅಕ್ರಮ ಸಂಬಂಧ – ಬೆಂಕಿ ಹಚ್ಚಿಕೊಂಡು ಮಗಳ ಸಹಿತ ದಂಪತಿ ಆತ್ಮಹತ್ಯೆಗೆ ಶರಣು

    ಅಕ್ರಮ ಸಂಬಂಧ – ಬೆಂಕಿ ಹಚ್ಚಿಕೊಂಡು ಮಗಳ ಸಹಿತ ದಂಪತಿ ಆತ್ಮಹತ್ಯೆಗೆ ಶರಣು

    ಚಿತ್ರದುರ್ಗ: ಗಂಡನ ಅಕ್ರಮ ಸಂಬಂಧದಿಂದಾಗಿ ನಿತ್ಯ ಮನೆಯಲ್ಲಿ ನಡೆಯುತಿದ್ದ ಕೌಟುಂಬಿಕ ಕಲಹದಿಂದ ಬೇಸತ್ತು ಮಗಳ ಸಹಿತ ದಂಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

    ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಅರುಣ್(40), ಲತಾ(35) ಹಾಗೂ ಅಮೃತ(13) ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ತಾಳವಟ್ಟಿ ಗ್ರಾಮದ ಮೃತ ಅರುಣ್, ಖಾಸಗಿ ಬಸ್ ಏಜೆಂಟ್ ಆಗಿದ್ದು, ಪತ್ನಿ ಲತಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಅರುಣ್ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನಲೆ ಮನೆಯಲ್ಲಿ ನಿತ್ಯ ಜಗಳವಾಗುತಿತ್ತು ಎನ್ನುವ ವಿಚಾರ ಸ್ಥಳೀಯರಿಂದ ತಿಳಿದು ಬಂದಿದೆ.

    ಬೆಳಗಿನ ಜಾವ 7:20ಕ್ಕೆ ಗಂಡ ಹೆಂಡತಿ ನಡುವೆ ಜಗಳ ನಡೆದಿದ್ದು, ಈ ವೇಳೆ ದಂಪತಿ ತಮ್ಮ ಮಗಳಿಗೂ ಬೆಂಕಿ ಹಚ್ಚಿ ತಾವೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಏನೂ ತಪ್ಪು ಮಾಡದ ದಂಪತಿಯ ಪುತ್ರಿ ಅಮೃತ ಸಹ ಬಲಿಯಾಗಿದ್ದಾಳೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಮನೆಯ ಕಿಟಕಿ ಹಾಗೂ ಬಾಗಿಲಿನ ಕಿಂಡಿಗಳಿಂದ ಹೊಗೆ ಜೋರಾಗಿ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳಿಯರು, ಕಬ್ಬಿಣದ ರಾಡ್ ಹಾಗು ಸುತ್ತಿಗೆಯಿಂದ ಮುಚ್ಚಿದ್ದ ಬಾಗಿಲನ್ನು ಒಡೆದು, ಮನೆಯೊಳಗೆ ತೆರಳಿದ್ದಾರೆ. ಈ ವೇಳೆ ಸಾವಿನಿಂದ ಪಾರಾಗಲು, ಅರುಣ್ ಹಾಗೂ ಬಾಲಕಿ ಅಮೃತ ಯತ್ನಿಸಿದ್ದು, ಪ್ರಯತ್ನ ವಿಫಲವಾಗಿ ಬಾಗಿಲ ಬಳಿಯೇ ಸುಟ್ಟು ಕರಕಲಾಗಿದ್ದಾರೆ.

    ಸ್ಥಳಕ್ಕೆ ಅಗ್ನಿ ಶಾಮಕ ದಳದ ಅಧಿಕಾರಿಗಳಾದ ಜಯರಾಂ ಹಾಗು ಶಶಿಧರ್ ಒಳಗೊಂಡ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಕೃತ್ಯದಲ್ಲಿ ಯಾರು ಮೊದಲು ಆತ್ಮಹತ್ಯೆಗೆ ಯತ್ನಸಿದರು, ಹೇಗೆ ಕೃತ್ಯ ನಡೆಯಿತು ಎಂಬುದರ ಕುರಿತ ಮಾಹಿತಿ ನಿಗೂಢವಾಗಿದೆ. ಈ ಸಂಬಂಧ, ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಪ್ರೀ-ವೆಡ್ಡಿಂಗ್ ಫೋಟೋಶೂಟ್‍ನಲ್ಲೂ ಪೌರತ್ವದ ಕಿಚ್ಚು- ಕೇರಳ ದಂಪತಿ ಫೋಟೋ ವೈರಲ್

    ಪ್ರೀ-ವೆಡ್ಡಿಂಗ್ ಫೋಟೋಶೂಟ್‍ನಲ್ಲೂ ಪೌರತ್ವದ ಕಿಚ್ಚು- ಕೇರಳ ದಂಪತಿ ಫೋಟೋ ವೈರಲ್

    ತಿರುವನಂತಪುರಂ: ಪೌರತ್ವ ಕಾಯ್ದೆ(ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ಆರ್‌ಸಿ) ವಿರೋಧಿಸಿ ಕೇರಳದ ದಂಪತಿ ಮಾಡಿಸಿರುವ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಸಖತ್ ವೈರಲ್ ಆಗಿದೆ.

    ಇತ್ತೀಚೆಗೆ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿಬಿಟ್ಟಿದೆ. ಸುಂದರ ಲೊಕೆಷನ್‍ನಲ್ಲಿ ದಂಪತಿ ಫೋಟೋಗಳಿಗೆ ಪೋಸ್‍ಕೊಟ್ಟು ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಆದರೆ ಕೇರಳದ ಅರುಣ್ ಗೋಪಿ ಹಾಗೂ ಆಶಾ ಶೇಖರ್ ದಂಪತಿ ಸಿಎಎ ಮತ್ತು ಎನ್ಆರ್‌ಸಿ ವಿರೋಧಿಸಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿರುವುದು ವಿಶೇಷವಾಗಿದೆ. ಸುಂದರವಾದ ಪೊನ್ಮುಡಿ ಬೆಟ್ಟದ ಮುಂಭಾಗ ‘ಸಿಎಎ ಬೇಡ’, ‘ಎನ್ಆರ್‌ಸಿ ಬೇಡ’ ಎಂಬ ಫಲಕಗಳನ್ನು ಹಿಡಿದು ಕೇರಳ ದಂಪತಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಫೇಸ್‍ಬುಕ್‍ನಲ್ಲಿ ದಂಪತಿ ಹಂಚಿಕೊಂಡಿದ್ದು, ಸಿಎಎ, ಎನ್ಆರ್‌ಸಿ ವಿರೋಧಿಸಿದ ಪ್ರೀ-ವೆಡ್ಡಿಂಗ್ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

    ಡಿಸೆಂಬರ್ 18ರಂದು ‘ಫಸ್ಟ್ ಲುಕ್ ಫೋಟೋಗ್ರಾಫಿ’ ಹೆಸರಿನ ಫೇಸ್‍ಬುಕ್ ಖಾತೆಯಿಂದ ಅರುಣ್ ಗೋಪಿ ಹಾಗೂ ಆಶಾ ಶೇಖರ್ ಅವರ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ನಂತರ ಈ ಫೋಟೋಗಳನ್ನು ಇತರ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶೇರ್ ಮಾಡಿಕೊಂಡಿದ್ದು, ಈ ಫೋಟೋಶೂಟ್ ಪರ ಹಾಗೂ ವಿರೋಧ ಕಮೆಂಟ್‍ಗಳು ವ್ಯಕ್ತವಾಗಿದೆ. ಆದರೆ ಎಲ್ಲೆಡೆ ಪ್ರತಿಭಟನೆ, ಗಲಾಟೆಗಳು ಮಾಡುವ ಮೂಲಕ ಸಿಎಎ, ಎನ್ಆರ್‌ಸಿ ವಿರೋಧಿಸುತ್ತಿರುವ ಜನರ ನಡುವೆ ಈರೀತಿ ವಿನೂತನವಾಗಿ ತಮ್ಮ ವಿರೋಧ ವ್ಯಕ್ತಪಡಿಸಿದ ದಂಪತಿ ಫೋಟೋಗಳು ಎಲ್ಲರ ಗಮನ ಸೆಲೆದಿದೆ.  ಇದನ್ನೂ ಓದಿ: ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ತಿರುವನಂತಪುರಂ ಜಿಲ್ಲಾ ಮಕ್ಕಳ ಕಲ್ಯಾಣ ಮಂಡಳಿಯ ಖಜಾಂಚಿಯಾಗಿರುವ ಅರುಣ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾಕ್ರ್ಸ್‍ವಾದಿ) ಅಧೀನದಲ್ಲಿರುವ ಮಕ್ಕಳ ಸಂಸ್ಥೆ ಬಾಲಸಂಘಂನ ರಾಜ್ಯಾಧ್ಯಕ್ಷರಾಗಿದ್ದಾರೆ. ಫಸ್ಟ್ ಲುಕ್ ಫೋಟೋಗ್ರಾಫಿಯ ಪಾರ್ಟ್‍ನರ್ ಆಗಿರುವ ಅರ್ಜುನ್ ಎಪಿ ಅವರು ಈ ಫೋಟೋಶೂಟ್ ಬಗ್ಗೆ ಪ್ರತಿಕ್ರಿಯಿಸಿ, ದಂಪತಿಯ ಈ ವಿಶೇಷ ಫೋಟೋಶೂಟ್‍ಗೆ ನಾವು ಐಡಿಯಾ ಕೊಟ್ಟಿದ್ದು, ಆದರೆ ದಂಪತಿ ಖುಷಿಯಿಂದ ಈ ಐಡಿಯಾವನ್ನು ಒಪ್ಪಿಕೊಂಡು ಸಹಕರಿಸಿದರು. ನಾವು ಫೇಸ್‍ಬುಕ್ ಪೋಸ್ಟ್ ಟ್ಯಾಗ್‍ಲೈನ್ ಹಾಕಿದಂತೆ ಇವರು ಜವಾಬ್ದಾರಿ ಇರುವ ದಂಪತಿ ಎಂದು ತಿಳಿಸಿದರು.

  • ಟವರ್ ನಿರ್ಮಾಣದ ಸೋಗಿನಲ್ಲಿ ದಂಪತಿಗೆ ಲಕ್ಷ ಲಕ್ಷ ದೋಖಾ

    ಟವರ್ ನಿರ್ಮಾಣದ ಸೋಗಿನಲ್ಲಿ ದಂಪತಿಗೆ ಲಕ್ಷ ಲಕ್ಷ ದೋಖಾ

    ಚಿಕ್ಕಬಳ್ಳಾಪುರ: ನಿಮ್ಮ ಜಮೀನು ಬಾಡಿಗೆಗೆ ಕೊಡಿ ಟವರ್ ನಿರ್ಮಾಣ ಮಾಡುತ್ತೇವೆ. ಅಡ್ವಾನ್ಸ್ ಅಂತ ಲಕ್ಷ ಲಕ್ಷ ಕೊಡ್ತೀವಿ, ತಿಂಗಳಿಗೆ ಸಾವಿರಾರು ರೂಪಾಯಿ ಬಾಡಿಗೆ ಸಮೇತ ನಿಮ್ಮ ಮನೆಯಲ್ಲಿ ಒಬ್ಬರಿಗೆ ಕೆಲಸ ಸಹ ಕೊಡುತ್ತೇವೆ ಎಂದು ದಂಪತಿಯನ್ನು ಪುಸಲಾಯಿಸಿ, ಲಕ್ಷಾಂತರ ರೂಪಾಯಿ ಪೀಕಿದ್ದಾರೆ.

    ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬೆಳಚಿಕ್ಕನಹಳ್ಳಿ ಗ್ರಾಮದ ವೆಂಕಟೇಶ್ ರೆಡ್ಡಿ ಹಾಗೂ ಜ್ಯೋತಿ ರೆಡ್ಡಿ ದಂಪತಿ ಮನೆಗೆ ಬಂದ ಖದೀಮರು ನಿಮ್ಮ ಮನೆ ಬಳಿಯ ಜಮೀನು ಕೊಡಿ. ನಾವು ಟೆಲಿನರ್ ಕಂಪನಿ ಟವರ್ ನಿರ್ಮಾಣ ಮಾಡಬೇಕಿದೆ. 22.50 ಲಕ್ಷ ರೂ. ಮುಂಗಡ ಹಣ ಪಾವತಿಸುತ್ತೇವೆ. ಅಲ್ಲದೆ ತಿಂಗಳಿಗೆ 28 ಸಾವಿರ ರೂ. ಬಾಡಿಗೆ ಜೊತೆಗೆ ಟವರ್ ನೋಡಿಕೊಳ್ಳಲು ನಿಮ್ಮ ಮನೆಯವರನ್ನೇ ನೇಮಿಸಿ, ಪ್ರತಿ ತಿಂಗಳು 16,000 ರೂ. ಸಂಬಳ ಕೊಡುತ್ತೇವೆ ಎಂದು ಆಸೆ ತೋರಿಸಿದ್ದಾರೆ.

    ವಂಚಕರ ಮಾತನ್ನು ದಂಪತಿ ನಂಬಿದ್ದಾರೆ. ಆಗ ಖದೀಮರು ರಿಜಿಸ್ಟ್ರೇಷನ್ ಫೀ ಅಂತ ಅವರಿಂದ 6,100 ರೂ. ಪಡೆದುಕೊಂಡಿದ್ದಾರೆ. ನಂತರ ಹೀಗೆ ಮುಂದುವರಿದು ಆಫೀಸು ನಿರ್ಮಾಣ ಹಾಗೆ ಹೀಗೆ ಕಥೆ ಹೇಳಿ ನಂಬಿಸಿ 2,96,485 ರೂ.ಗಳನ್ನು ವಂಚಕರು ತಮ್ಮ ಖಾತೆಗಳಿಗೆ ಹಾಕಿಸಿಕೊಂಡಿದ್ದಾರೆ. ನಂತರ ವಂಚಕರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಕರೆ ಸ್ವೀಕರಿಸದ್ದರಿಂದ ದಂಪತಿಗೆ ವಂಚನೆಗೊಳಗಾಗಿರುವುದು ಅರಿವಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರದ ಡಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

  • ಮದ್ಯಕ್ಕೆ ದಾಸರಾದ ದಂಪತಿ – ಅಧಿಕಾರಿಗಳಿಂದ ಪಾಲಕರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ 5 ಮಕ್ಕಳ ರಕ್ಷಣೆ

    ಮದ್ಯಕ್ಕೆ ದಾಸರಾದ ದಂಪತಿ – ಅಧಿಕಾರಿಗಳಿಂದ ಪಾಲಕರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ 5 ಮಕ್ಕಳ ರಕ್ಷಣೆ

    ರಾಮನಗರ: ಮದ್ಯಕ್ಕೆ ದಾಸರಾಗಿ ಮಕ್ಕಳನ್ನ ನಿರ್ಲಕ್ಷ್ಯದಿಂದ ಕಾಣುತ್ತಿದ್ದ ಪೋಷಕರಿಂದ ಹಿಂಸೆಗೆ ಒಳಗಾಗಿದ್ದ ಐವರು ಚಿಕ್ಕ ಚಿಕ್ಕ ಮಕ್ಕಳನ್ನು ರಾಮನಗರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಿಸಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.

    ಆಂಧ್ರ ಮೂಲದ ದಂಪತಿಗಳ ಮಕ್ಕಳಾದ ಹನುಮಂತ (8), ವಿನೋದ್(6), ಕಾರ್ತಿ(4), ಮೂರ್ತಿ (2) ಮತ್ತು ಪ್ರಿಯಾಂಕ (7 ತಿಂಗಳ ಮಗು) ರಕ್ಷಣೆಗೆ ಒಳಗಾದ ಮಕ್ಕಳಾಗಿದ್ದಾರೆ. ಅಂದಹಾಗೇ ಕಳೆದ ಅಕ್ಟೋಬರ್ ನಲ್ಲಿ ಆಂಧ್ರ ಮೂಲದ ದಂಪತಿ ಮಕ್ಕಳೊಡನೆ ಉದ್ಯೋಗ ಅರಿಸಿ ಮಾಗಡಿ ತಾಲೂಕಿಗೆ ಆಗಮಿಸಿದ್ದಾರೆ. ಟೌನಿನ ವಿದ್ಯಾನಗರದಲ್ಲಿ ಸ್ಥಳೀಯ ಶಿಕ್ಷಕರೊಬ್ಬರಿಗೆ ಸೇರಿದ್ದ ನಿರ್ಮಾಣ ಹಂತದಲ್ಲಿ ಮನೆಯಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದಾರೆ. ಸಣ್ಣ ಮಕ್ಕಳು ಹಾಗೂ ದಂಪತಿಗಳಿದ್ದ ಇರುವ ಕಾರಣ, ಮಾಲೀಕರು ಕಟ್ಟಡ ನಿರ್ಮಾಣವಾಗುವವರೆಗೂ, ಮನೆಯಲ್ಲಿ ಆಶ್ರಯ ಪಡೆಯುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

    ಮದ್ಯಕ್ಕೆ ದಾಸರಾಗಿದ್ದ ದಂಪತಿ, ಮಕ್ಕಳನ್ನು ಸರಿಯಾಗಿ ಪಾಲನೆ ಮಾಡದೇ, ನಿತ್ಯ ಹಿಂಸೆ ನೀಡುತ್ತಿದ್ದರು. ಅಲ್ಲದೇ ಕಳೆದ ಮೂರು ದಿನಗಳ ಹಿಂದೆ ತಾಯಿ ಕೂಡ ಮಕ್ಕಳನ್ನು ಬಿಟ್ಟು ಹೊರಟು ಹೋಗಿದ್ದಾಳೆ. ಇನ್ನು ತಂದೆಯೂ ಸರಿಯಾಗಿ ಪೋಷಣೆ ಮಾಡುತ್ತಿರಲಿಲ್ಲ. ರಾತ್ರಿ ಕುಡಿದು ಬಂದ ತಂದೆ ವಿಪರೀತವಾಗಿ ಮಕ್ಕಳಿಗೆ ಹೊಡೆದಿದ್ದಾನೆ. ಇದನ್ನು ನೋಡಲಾಗದ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳೀಯರ ದೂರು ಸ್ವೀಕರಿಸಿದ ಸಹಾಯವಾಣಿಯ ಸಿಬ್ಬಂದಿ, ಮಾಹಿತಿ ಪಡೆದು ದಾಳಿ ಮಾಡಿ ಐದು ಮಂದಿ ಮಕ್ಕಳನ್ನು ರಕ್ಷಿಸಿದ್ದಾರೆ.

    ತಂದೆ ತಾಯಿಗಳಿಬ್ಬರು ಕೆಲಸಕ್ಕೆ ತೆರಳದೇ, ಮದ್ಯಕ್ಕೆ ದಾಸರಾಗಿದ್ದರು. ಹಿರಿಯ ಮಗ ಹನುಮಂತನೇ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಅಕ್ಕ ಪಕ್ಕದ ಮನೆಯವರಿಂದ ದಂಪತಿಗಳು ಅನ್ನ ಮತ್ತಿತ್ತರ ಆಹಾರ ಪದಾರ್ಥಗಳನ್ನು ಪಡೆದು ಜೀವನ ಸಾಗಿಸುತ್ತಿದ್ರು. ಪ್ರತಿ ನಿತ್ಯ ದಂಪತಿ ನಡುವೆ ಜಗಳವಾಗುತ್ತಿತ್ತು. ಜೊತೆಗೆ ಕಳೆದ ಮೂರು ದಿನಗಳ ಹಿಂದೆ ಮಕ್ಕಳನ್ನು ಬಿಟ್ಟು ಹೋಗಿರುವ ತಾಯಿಯ ಸುಳಿವು ಕೂಡ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯಕ್ಕೆ ರಕ್ಷಣೆಗೆ ಒಳಗಾಗಿರುವ ಮಕ್ಕಳಲ್ಲಿ ತೊಟ್ಟಿಲು ಕೇಂದ್ರದಲ್ಲಿ ಸಣ್ಣ ಮಗುವನ್ನು ಹಾಗೂ ಉಳಿದ ನಾಲ್ವರನ್ನು ಬಾಲಮಂದಿರದಲ್ಲಿ ಬಿಡಲಾಗಿದೆ. ಮಕ್ಕಳನ್ನು ತೊರೆದು ಹೋಗಿರುವ ತಾಯಿಯನ್ನ ಕರೆತಂದು ಪತಿ-ಪತ್ನಿಯನ್ನು ಅಧಿಕಾರಿಗಳು ಶುಕ್ರವಾರ ಮಕ್ಕಳ ಸಮಿತಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಅಲ್ಲದೇ ಮಕ್ಕಳ ಸಮಿತಿ ತೀರ್ಮಾನದಂತೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಈರುಳ್ಳಿ ಹಾರ ಬದಲಿಸಿದ ವಧು, ವರರು

    ಈರುಳ್ಳಿ ಹಾರ ಬದಲಿಸಿದ ವಧು, ವರರು

    – ವಿಶೇಷ ಮದುವೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯದ್ದೇ ಕಾರುಬಾರು

    ಲಕ್ನೋ: ದೇಶಾದ್ಯಂತ ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಲೇ ಇದೆ. ಸಾರ್ವಜನಿಕರು ಸಹ ಈರುಳ್ಳಿ ಬಂಗಾರಕ್ಕಿಂತಲೂ ಬೆಲೆ ಬಾಳುವಂತಹದ್ದು ಎಂದು ಭಾವಿಸಿ ಸಮಾರಂಭಗಳಲ್ಲಿ ಇದರದ್ದೇ ಹಾರ, ಆಭರಣಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

    ಈರುಳ್ಳಿ ಬಂಗಾರದಷ್ಟೇ ಅಮೂಲ್ಯವಾದದ್ದು ಎಂದು ಭಾವಿಸಿ, ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮದುವೆ ವೇಳೆ ದಂಪತಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾರಗಳನ್ನೇ ಬದಲಾಯಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಉಡುಗೊರೆ ನೀಡುವವರೂ ಸಹ ಹೂವಿನ ಬೊಕ್ಕೆಗಳನ್ನು ನೀಡುವ ಬದಲು ಈರುಳ್ಳಿ ಬುಟ್ಟಿಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಅಕ್ಷಯ್‍ರಿಂದ ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್

    ಈರುಳ್ಳಿ ಹಾಗೂ ತರಕಾರಿ ಬೆಲೆ ಹೆಚ್ಚಿರುವುದನ್ನು ಎತ್ತಿ ತೋರಿಸಲು ದಂಪತಿ ಈ ರೀತಿ ಮಾಡಿದ್ದು, ವಿಶೇಷವೆಂದರೆ ಮದುವೆಗೆ ಆಗಮಿಸಿದ ಸಂಬಂಧಿಕರು, ಕುಟುಂಬಸ್ಥರು ಸ್ನೇಹಿತರೂ ಈರುಳ್ಳಿ ಬುಟ್ಟಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕಳೆದ 15 ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೆ ತಲುಪಿದ್ದು, ಹೀಗಾಗಿ ಜನತೆ ಈರುಳ್ಳಿಯನ್ನು ಚಿನ್ನದಷ್ಟೇ ಅಮೂಲ್ಯ ಎಂದು ಪರಿಗಣಿಸಿದ್ದಾರೆ. ಅದೇ ರೀತಿ ಮದುವೆ ಮನೆಗಳಲ್ಲಿ ಸಹ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಆಭರಣಗಳನ್ನೇ ಧರಿಸಿ ಗಮನ ಸೆಳೆಯುತ್ತಿದ್ದಾರೆ. ಈ ದಂಪತಿ ಸಹ ಇದೇ ರೀತಿ ಮಾಡಿದ್ದು, ಹಾರ, ಗಿಫ್ಟ್ ಎಲ್ಲವನ್ನೂ ಈರುಳ್ಳಿ ಮಯವಾಗಿಸಿದ್ದಾರೆ.

    ದೇಶದ ಬಹುತೇಕ ಭಾಗಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 100-150 ರೂ.ಗೆ ತಲುಪಿದೆ. ಬೆಲೆಯ ಕುರಿತು ತಿಳಿಸಲು ಜನತೆ ವಿವಿಧ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ತಮಿಳುನಾಡಿಲ್ಲಿ ಸಹ ಇದೇ ರೀತಿಯ ಘಟನೆ ನಡೆದಿತ್ತು. ಮದುವೆಗೆ ತೆರಳಿದ್ದ ಸ್ನೇಹಿತರು ಈರಳ್ಳಿ ಬಕೆಟ್ ಉಡುಗೊರೆ ನೀಡುವ ಮೂಲಕ ವಿಭಿನ್ನ ಉಡುಗೊರೆ ನೀಡಿದ್ದರು. 2.5 ಕೆ.ಜಿ.ಈರುಳ್ಳಿ ನೀಡುವ ಮೂಲಕ ಮದುವೆಯಲ್ಲಿ ನೆರೆದಿದ್ದ ಜನರ ಗಮನ ಸೆಳೆದಿದ್ದರು. ಅಲ್ಲದೆ ತಮಿಳು ನಾಡಿನಲ್ಲಿ ಇನ್ನೂ ಕೆಲವೆಡೆ ಹಲವು ವ್ಯಾಪಾರಿಗಳು ಸರಕು ಕೊಂಡರೆ 1 ಕೆ.ಜಿ. ಈರುಳ್ಳಿ ಉಚಿತ ಎಂದು ಆಫರ್ ನೀಡಿದ್ದರು.

  • ಪತ್ನಿ, 3 ಕಂದಮ್ಮಗಳಿಗೆ ವಿಷವಿಕ್ಕಿ ನರಳಾಡುತ್ತಿರುವ ವಿಡಿಯೋ ಮಾಡಿ ಆತ್ಮಹತ್ಯೆ ಮಾಡ್ಕೊಂಡ

    ಪತ್ನಿ, 3 ಕಂದಮ್ಮಗಳಿಗೆ ವಿಷವಿಕ್ಕಿ ನರಳಾಡುತ್ತಿರುವ ವಿಡಿಯೋ ಮಾಡಿ ಆತ್ಮಹತ್ಯೆ ಮಾಡ್ಕೊಂಡ

    ಬೆಂಗಳೂರು: ಒಂದಕ್ಕಿ ನಂಬರ್ ಲಾಟರಿಯಿಂದ ಮೈತುಂಬಾ ಸಾಲ ಮಾಡಿಕೊಂಡು ಸಾಲ ತೀರಿಸಲಾಗದೆ ತನ್ನ ಪತ್ನಿ ಹಾಗೂ 3 ಜನ ಮಕ್ಕಳಿಗೆ ವಿಷ ಉಣಿಸಿ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಬಳಿ ನಡೆದಿದೆ.

    ವಿಲ್ಲುಪುರಂನ ನಿವಾಸಿ ಅರುಲ್, ಪತ್ನಿ ಹಾಗೂ ಮಕ್ಕಳಿಗೆ ವಿಷವುಣಿಸಿದ್ದು, ಮಕ್ಕಳಿಗೆ ವಿಷ ನೀಡಿ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕೇರಳ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಸಿಂಗಲ್ ನಂಬರ್ ಲಾಟರಿಯನ್ನು ಅಕ್ರಮವಾಗಿ ತಮಿಳುನಾಡಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾಹಾಮಾರಿ ಸಿಂಗಲ್ ನಂಬರ್ ಲಾಟರಿ ಆಡುವ ಹುಚ್ಚನ್ನು ಅರುಲ್ ಬೆಳೆಸಿಕೊಂಡಿದ್ದ. ಅಲ್ಲದೇ ಲಾಟರಿ ಆಡಲು ಮೈತುಂಬಾ ಸಾಲ ಮಾಡಿ ಸಿಂಗಲ್ ನಂಬರ್ ಲಾಟರಿ ಆಡುತ್ತಿದ್ದ. ಈ ಹಂತದಲ್ಲಿ ಸಾಲ ಹೆಚ್ಚಾಗಿ ಸಾಲ ಮರುಪಾವತಿಸಲು ಇದ್ದ ಒಂದು ಮನೆಯನ್ನು ಮಾರಿದರೂ ಸಾಲ ತೀರಿಸಲಾಗದಷ್ಟು ಬೆಳೆದಿತ್ತು. ಇದರಿಂದ ಸಾಲ ಮರುಪಾವತಿ ಮಾಡಲಾಗದೆ ಜಿಗುಪ್ಸೆಗೊಂಡ ಅರುಲ್ ತನ್ನ ಪತ್ನಿಯ ಜೊತೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ.

    ಪತ್ನಿ ಜೊತೆ ಸೇರಿ ಮೊದಲು ತನ್ನ ಮೂರು 3 ಹೆಣ್ಣುಮಕ್ಕಳಿಗೆ ಸೈನೈಡ್ ಕೊಟ್ಟು, ಅದನ್ನು ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿ ನಂತರ ಅವರು ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದಲ್ಲಿ ಚಾಲ್ತಿಯಲ್ಲಿರುವ ಒಂದಂಕಿ ಲಾಟರಿ ತಮಿಳುನಾಡಿಗೂ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಬಹುಬೇಗ ಹಣ ಸಂಪಾದನೆ ಮಾಡುವ ಆಸೆಗೆ ಬೀಳುವ ಅದೆಷ್ಟೋ ಮಂದಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಅಕ್ರಮ ದಂಧೆಗೆ ಕಡಿವಾಣ ಹಾಕದೇ ಇದ್ದರೆ ಮತ್ತಷ್ಟು ಕುಟುಂಬಗಳು ಬಲಿಯಾಗುವ ಸಾಧ್ಯತೆಯಿದೆ.