Tag: Couples

  • ಫೇಸ್‌ಬುಕ್‌ನಲ್ಲಿ ವಿದಾಯದ ಪೋಸ್ಟ್ ಹಾಕಿ ಅಂತರ್ಜಾತಿ ವಿವಾಹವಾಗಿದ್ದ ಜೋಡಿ ಆತ್ಮಹತ್ಯೆ

    ಫೇಸ್‌ಬುಕ್‌ನಲ್ಲಿ ವಿದಾಯದ ಪೋಸ್ಟ್ ಹಾಕಿ ಅಂತರ್ಜಾತಿ ವಿವಾಹವಾಗಿದ್ದ ಜೋಡಿ ಆತ್ಮಹತ್ಯೆ

    ಪಾಟ್ನಾ: ಮದುವೆಯಾದ 8 ತಿಂಗಳಿಗೆ ಅಂತರ್ಜಾತಿ ಮದುವೆಯಾಗಿದ್ದ ಜೋಡಿ ಫೇಸ್‌ಬುಕ್‌ನಲ್ಲಿ (Facebook) ವಿದಾಯದ ಪೋಸ್ಟ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ (Bihar)  ಬೇಗುಸರಾಯ್‌ನಲ್ಲಿ ನಡೆದಿದೆ.

    ಬಹದ್ದೂರ್‌ಪುರ ಗ್ರಾಮದ ಶುಭಂ ಕುಮಾರ್ (19) ಹಾಗೂ ಆತನ ಪತ್ನಿ ಮುನ್ನಿ ಕುಮಾರಿ (18) ಮೃತರೆಂದು ಗುರುತಿಸಲಾಗಿದೆ. ಕೆಲ ವರ್ಷದ ಹಿಂದೆ ಇನ್ಸ್ಟಾಗ್ರಾಂ ಮೂಲಕ ಇವರಿಬ್ಬರ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿ, 2024ರ ಅಕ್ಟೋಬರ್‌ನಲ್ಲಿ ಮನೆಯವರ ವಿರೋಧದ ನಡುವೆಯೇ ಇಬ್ಬರು ಓಡಿಹೋಗಿ ವಿವಾಹವಾಗಿದ್ದರು. ಇದನ್ನೂ ಓದಿ: Tumakuru | ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

    ಮದುವೆಯ ನಂತರ, ಮುನ್ನಿ ಮನೆಯವರು ಇದನ್ನು ವಿರೋಧಿಸಿದ್ದರು. ಅಲ್ಲದೇ ರಾಜಿ ಪಂಚಾಯಿತಿ ನಡೆಸಿ, ಯುವತಿಯ ಸಿಂಧೂರವನ್ನು ಅಳಿಸಿ, ಆಕೆಯನ್ನು ಮನೆಯವರು ಕರೆದುಕೊಂಡು ಹೋಗಿದ್ದರು. ಬಳಿಕ ಡಿಸೆಂಬರ್‌ನಲ್ಲಿ ಮತ್ತೆ ಒಂದಾಗಿ, ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ

    ದಂಪತಿಯ ಸಂಬಂಧಿಕರೊಬ್ಬರು ಮಗುವಿನ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿ, ಶುಭಂ ಮನೆಗೆ ಬಂದಿದ್ದರು. ಈ ವೇಳೆ ಅವರು ಎಷ್ಟೇ ಬಾಗಿಲು ಬಡಿದರೂ, ತೆರೆಯದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದಾಗ ಶುಭಂ ನೇಣು ಬಿಗಿದುಕೊಂಡಿದ್ದ. ಆತನ ಪತ್ನಿ ಮುನ್ನಿ ಹಾಸಿಗೆಯ ಮೇಲೆ ನಿರ್ಜೀವವಾಗಿ ಬಿದ್ದಿದ್ದದನ್ನು ಗಮನಿಸಿದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ನಟ ಪ್ರಥಮ್‌ಗೆ ಜೀವಬೆದರಿಕೆ ಕೇಸ್‌ – ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಇಬ್ಬರ ವಿರುದ್ಧ FIR

    ಈ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ಶುಭಂ, ಇಬ್ಬರ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ `ಅಲ್ವಿದಾ’ ಅಂದರೆ ಗುಡ್‌ಬೈ ಎಂದು ಬರೆದುಕೊಂಡಿದ್ದ ಎನ್ನಲಾಗಿದೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಬಹದ್ದೂರ್‌ಪುರ ಗ್ರಾಮದಲ್ಲಿ ವಿವಾಹಿತ ದಂಪತಿಗಳಾದ ಶುಭಂ ಕುಮಾರ್ ಮತ್ತು ಮುನ್ನಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಘಟನೆ ಸಂಬಂಧ ತನಿಖೆ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

  • ಮದುವೆಯಾಗಲು ಗೋವಾಕ್ಕೆ ತೆರಳಿದ್ದ ಜೋಡಿ – ಗಂಟಲು ಸೀಳಿ ಪ್ರೇಯಸಿಯ ಕೊಲೆ

    ಮದುವೆಯಾಗಲು ಗೋವಾಕ್ಕೆ ತೆರಳಿದ್ದ ಜೋಡಿ – ಗಂಟಲು ಸೀಳಿ ಪ್ರೇಯಸಿಯ ಕೊಲೆ

    ಪಣಜಿ: ಗೆಳತಿಯನ್ನು ಮದುವೆಯಾಗಲೆಂದು ಬೆಂಗಳೂರಿನಿಂದ (Bengaluru) ಗೋವಾಕ್ಕೆ ಕರೆದುಕೊಂಡು ಹೋಗಿ ಪ್ರಿಯಕರ ಆಕೆಯ ಗಂಟಲು ಸೀಳಿ ಕೊಲೆ ಮಾಡಿರುವ ಘಟನೆ ಗೋವಾದ (Goa) ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಬೆಂಗಳೂರಿನ ರೋಶ್ನಿ ಮೋಸೆಸ್ (22) ಮೃತ ದುರ್ದೈವಿ. ಪ್ರಿಯಕರ ಸಂಜಯ್ ಕೆವಿನ್ (22) ಹತ್ಯೆಗೈದ ಆರೋಪಿ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಆಂಧ್ರ ಮಾಜಿ ಸಚಿವ ಚೆವಿ ರೆಡ್ಡಿ ಅರೆಸ್ಟ್

    ಬೆಂಗಳೂರಿನ ನಿವಾಸಿಗಳಾಗಿರುವ ಇವರಿಬ್ಬರು 5 ವರ್ಷಗಳಿಂದ ಸಂಬಂಧ ಹೊಂದಿದ್ದರು. ಭಾನುವಾರ (ಜೂ. 25)ರಂದು ಮದುವೆಯಾಗಲೆಂದು ಗೋವಾಗೆ ಬಸ್‌ನಲ್ಲಿ ತೆರಳಿದ್ದರು. ಈ ವೇಳೆ ಇವರಿಬ್ಬರ ನಡುವೆ ಇದ್ದಕ್ಕಿದ್ದಂತೆ ಜಗಳ ನಡೆದಿತ್ತು. ಬಳಿಕ ಗೋವಾದ ಪಿಲಿಯೆಮ್-ಧರ್ಬಂದೋರಾದಲ್ಲಿ ಇಬ್ಬರು ಬಸ್‌ನಿಂದ ಇಳಿದಿದ್ದರು. ಸಂಜಯ್, ರೋಶ್ನಿಯನ್ನು ಕಾಡಿಗೆ ಕರೆದುಕೊಂಡು ಹೋಗಿ, ಚಾಕುವಿನಿಂದ ಆಕೆಯ ಗಂಟಲು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?

    ಸೋಮವಾರ ಬೆಳಗ್ಗೆ ಗೋವಾದ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿತ್ತು. ಶವ ಪರಿಶೀಲನೆ ನಡೆಸುವ ವೇಳೆ ಮಹಿಳೆಯ ಪರ್ಸ್ನಲ್ಲಿ ಹುಬ್ಬಳ್ಳಿಯಿಂದ ಬಸ್ ಹತ್ತಿದ ಟಿಕೆಟ್ ಲಭ್ಯವಾಗಿತ್ತು. ಬಳಿಕ ಪೊಲೀಸರಿಗೆ ಸಿಕ್ಕ ಫೋಟೋ ಹಾಗೂ ದಾಖಲೆಗಳಿಂದ ಮೃತಪಟ್ಟಿರುವ ಯುವತಿ ಬೆಂಗಳೂರಿನ ರೋಶ್ನಿ ಎಂದು ಪತ್ತೆಯಾಗಿದೆ. ಅಲ್ಲದೇ ರೋಶ್ನಿ, ಸಂಜಯ್‌ನನ್ನು ಪ್ರೀತಿಸುತ್ತಿದ್ದ ವಿಚಾರವು ತನಿಖೆ ವೇಳೆ ಪೊಲೀಸರಿಗೆ ತಿಳಿದಿತ್ತು. ಇದನ್ನೂ ಓದಿ: Uttar Pradesh | ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಬೆಂಕಿ – ಐವರು ಸಜೀವ ದಹನ

    ಸಂಜಯ್ ಪತ್ತೆಗಾಗಿ ಬಲೆಬೀಸಿದ ಪೊಲೀಸರು ಹುಬ್ಬಳ್ಳಿಯಲ್ಲಿ ಆತನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

  • ಸ್ಲೀಪ್‌ ಡಿವೋರ್ಸ್‌ನಲ್ಲಿ ಭಾರತಕ್ಕೆ ಅಗ್ರ ಸ್ಥಾನ – ಏನಿದು ನಿದ್ರಾ ವಿಚ್ಛೇದನ?

    ಸ್ಲೀಪ್‌ ಡಿವೋರ್ಸ್‌ನಲ್ಲಿ ಭಾರತಕ್ಕೆ ಅಗ್ರ ಸ್ಥಾನ – ಏನಿದು ನಿದ್ರಾ ವಿಚ್ಛೇದನ?

    ಇಂದಿನ ಬಿಡುವಿಲ್ಲದ ಜೀವನ ಶೈಲಿ, ಒತ್ತಡ, ಹೊಂದಾಣಿಕೆ ಕೊರತೆ, ಆರ್ಥಿಕ ಸ್ವಾತಂತ್ರ್ಯ ಹೀಗೆ ಹಲವು ಕಾರಣಗಳಿಂದ ದಿನಬೆಳಗಾದರೆ ವಿಚ್ಛೇದನ ಪ್ರಕರಣಗಳನ್ನು ನೋಡುತ್ತೇವೆ. ಈ ಮಧ್ಯೆಯೇ ʼಸ್ಲೀಪಿಂಗ್ ಡಿವೋರ್ಸ್ʼ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇದರಲ್ಲಿ ದಂಪತಿಗಳು ತಮ್ಮ ಅಗತ್ಯಗಳು ಮತ್ತು ಆರಾಮಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿ ಮಲಗಲು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ ʼಸ್ಲೀಪಿಂಗ್ ಡಿವೋರ್ಸ್ʼ ಪಡೆಯುವವರಲ್ಲಿ ಭಾರತೀಯರು ಮುಂದಿದ್ದಾರೆ. ಹಾಗಾದ್ರೆ ಸ್ಲೀಪಿಂಗ್ ವಿಚ್ಛೇದನಕ್ಕೆ ಕಾರಣಗಳೇನು? ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

    ಏನಿದು ಸ್ಲೀಪ್‌ ಡಿವೋರ್ಸ್?
    ನಿದ್ರಾ ವಿಚ್ಛೇದನವು, ದಂಪತಿಗಳು ತಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಪ್ರತ್ಯೇಕವಾಗಿ ಮಲಗುವುದನ್ನು ಆಯ್ಕೆ ಮಾಡುವ ಪರ್ಯಾಯ ವಿಧಾನವಾಗಿದೆ. ಇದು ಬೇರೆ ಬೇರೆ ಹಾಸಿಗೆಗಳಲ್ಲಿ ಮಲಗುವುದು, ಬೇರೆ ಕೋಣೆಯಲ್ಲಿ ಮಲಗುವುದು ಅಥವಾ ವಿಭಿನ್ನ ವೇಳಾಪಟ್ಟಿಗಳಲ್ಲಿ ಮಲಗುವುದಾಗಿದೆ. ಇದರರ್ಥ ಗಂಡ ಹೆಂಡತಿ ಮಧ್ಯೆ ಸಮಸ್ಯೆ ಇದೆ ಎಂಬುದಲ್ಲ. ಗೊರಕೆ ಸಮಸ್ಯೆ, ವಿಭಿನ್ನ ನಿದ್ರೆಯ ಆದ್ಯತೆಗಳಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಅನೇಕ ದಂಪತಿಗಳು ಈ ವಿಧಾನವನ್ನು ಪಾಲಿಸುತ್ತಿದ್ದಾರೆ. ಪ್ರತ್ಯೇಕವಾಗಿ ಮಲಗುವುದು ಪತಿ ಪತ್ನಿಯರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ ಎನ್ನುವುದನ್ನು ಅಧ್ಯಯನವು ಹೇಳುತ್ತದೆ.

    ಸ್ಲೀಪ್ ಡಿವೋರ್ಸ್ ನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
    ರೆಸ್‌ಮೆಡ್‌ನ 2025 ರ ಜಾಗತಿಕ ನಿದ್ರೆಯ ಸಮೀಕ್ಷೆಯ ಪ್ರಕಾರ, ನಿದ್ರೆ ವಿಚ್ಛೇದನದಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ  78% ರಷ್ಟು ದಂಪತಿಗಳು ಸ್ಲೀಪ್ ಡಿವೋರ್ಸ್ ಪ್ರವೃತ್ತಿಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇನ್ನು ಉಳಿದಂತೆ ಚೀನಾದಲ್ಲಿ  67% ಮತ್ತು ದಕ್ಷಿಣ ಕೊರಿಯಾ 65% ರಷ್ಟು ದಂಪತಿಗಳು ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಈ ಸಮೀಕ್ಷೆಗೆ 13 ದೇಶಗಳಲ್ಲಿ 30,000 ಕ್ಕೂ ಹೆಚ್ಚು ಜನರನ್ನು ಒಳಪಡಿಸಲಾಗಿದ್ದು, ಈ ಸಮೀಕ್ಷೆಯು ಜಾಗತಿಕ ನಿದ್ರೆಯ ಬಿಕ್ಕಟ್ಟನ್ನು ಬಹಿರಂಗಪಡಿಸಿದೆ. ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ 50% ರಷ್ಟು ದಂಪತಿಗಳು ಒಟ್ಟಿಗೆ ಮಲಗಲು ಇಷ್ಟ ಪಟ್ಟರೆ, ಇನ್ನು 50% ರಷ್ಟು ಪ್ರತ್ಯೇಕವಾಗಿ ಮಲಗಲು ಇಷ್ಟಪಡುತ್ತಾರೆ ಎನ್ನಲಾಗಿದೆ.

    2023ರಲ್ಲಿ ಎಎಎಸ್ಎಂ ಸಂಸ್ಥೆಯು ನಿದ್ರೆಯ ಆದ್ಯತೆ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, 42% ಅಮೆರಿಕನ್ನರು ತಮ್ಮ ಸಂಗಾತಿಗಾಗಿ ತಮ್ಮ ನಿದ್ರೆಯ ದಿನಚರಿಯನ್ನು ಅಡ್ಜಸ್ಟ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಪುರುಷರು (25%) ಮಹಿಳೆಯರಿಗಿಂತ (8%) ಸೈಲೆಂಟ್ ಅಲಾರಂ ಬಳಸುವ ಸಾಧ್ಯತೆ ಮೂರು ಪಟ್ಟು ಹೆಚ್ಚು. 33% ವಯಸ್ಕರು ತಮ್ಮ ಸಂಗಾತಿಯ ವೇಳಾಪಟ್ಟಿಗೆ ಹೊಂದಿಕೆಯಾಗುವಂತೆ ತಮ್ಮ ನಿದ್ರೆಯ ಸಮಯವನ್ನು ಬದಲಾಯಿಸುತ್ತಾರೆ ಎನ್ನಲಾಗಿದೆ. 60% ವಯಸ್ಕರು (55-64) ತಮ್ಮ ಸಂಗಾತಿಗಾಗಿ ತಮ್ಮ ನಿದ್ರೆಯ ದಿನಚರಿಯನ್ನು ಬದಲಾಯಿಸುವುದಿಲ್ಲ. 40% ಯುವಕರು (27-42) ಬಯಸಿದ್ದಕ್ಕಿಂತ ಮುಂಚಿತವಾಗಿ ಅಥವಾ ನಂತರ ಮಲಗುತ್ತಾರೆ. 24% ಜನರು ಸಾಂದರ್ಭಿಕವಾಗಿ ಮತ್ತೊಂದು ಕೋಣೆಯಲ್ಲಿ ಮಲಗುತ್ತಾರೆ.

    ನಿದ್ರಾಭಂಗಕ್ಕೆ ಪ್ರಮುಖ ಕಾರಣಗಳೇನು?
    ನಿದ್ರಾಭಂಗಕ್ಕೆ ಸಾಮಾನ್ಯ ಕಾರಣಗಳಲ್ಲಿ ಸಂಗಾತಿಯ ಗೊರಕೆ, 32% ರಷ್ಟು ಜೋರಾಗಿ ಉಸಿರಾಡುವುದು, 12% ರಷ್ಟು ಚಡಪಡಿಕೆ, 12% ರಷ್ಟು ಹೊಂದಿಕೆಯಾಗದ ನಿದ್ರೆಯ ವೇಳಾಪಟ್ಟಿಗಳು ಹಾಗೂ 8% ರಷ್ಟು ರಾತ್ರಿ ಹಾಸಿಗೆಯ ಮೇಲೆ ತಮ್ಮ ಹೆಚ್ಚು ಸಮಯ ಪರದೆಯಲ್ಲೇ ಕಳೆಯುವುದು ಸೇರಿವೆ. ಈ ಕಾರಣಗಳಿಂದಲೇ ಹೆಚ್ಚಿನವರು ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ನಿದ್ರೆ ಸರಿಯಾಗಿ ಆಗದಿರಲು 69% ರಷ್ಟು ಭಾರತೀಯರಿಗೆ ಒತ್ತಡವು ಪ್ರಮುಖ ಕಾರಣವಾಗಿದೆ. ಇನ್ನು ಉಳಿದಂತೆ ದಕ್ಷಿಣ ಕೊರಿಯಾ, ಥೈಲ್ಯಾಂಡ್, ಸಿಂಗಾಪುರ ಮತ್ತು ಜರ್ಮನಿ ಪ್ರಮುಖ ದೇಶಗಳಲ್ಲಿ ಒತ್ತಡವು ನಿದ್ರಾಭಂಗಕ್ಕೆ ಪ್ರಮುಖ ಕಾರಣವೆಂದು ವರದಿಗಳು ತಿಳಿಸಿವೆ.

    ಸ್ಲೀಪ್‌ ಡಿವೋರ್ಸ್‌ನಿಂದಾಗುವ ಪ್ರಯೋಜನಗಳೇನು?
    ನಿದ್ರಾ ವಿಚ್ಛೇದನದಿಂದ ಹಲವಾರು ಪ್ರಯೋಜನಗಳಿವೆ. ಒಬ್ಬರಿಂದ ಇನ್ನೊಬ್ಬರ ನಿದ್ರೆಗೆ ಸಮಸ್ಯೆಯಾಗುವಲ್ಲಿ ಈ ನಿದ್ರಾ ವಿಚ್ಛೇದನವು ಅವರಿಗೆ ಒಳ್ಳೆಯ ನಿದ್ರೆಯನ್ನು ಮಾಡಲು ಸಹಾಯ ಮಾಡುತ್ತದೆ ಎನ್ನುವುದು ಇದನ್ನು ಪ್ರಯತ್ನಿಸಿದವರ ಅಭಿಪ್ರಾಯ. ಹಾಗಾದರೆ ಇದರಿಂದಾಗುವ ಪ್ರಯೋಜನಗಳು ಯಾವುವು?

    ಉತ್ತಮ ನಿದ್ರೆಯ ಗುಣಮಟ್ಟ:
    ಗೊರಕೆ, ಉರುಳಾಡುವುದು, ತಿರುಗುವುದು ಅಥವಾ ವಿಭಿನ್ನ ನಿದ್ರೆಯ ವೇಳಾಪಟ್ಟಿಗಳಿದ್ದಾಗ ಈ ನಿದ್ರಾ ವಿಚ್ಛೇದನವು ಚೆನ್ನಾಗಿ ನಿದ್ರಿಸಲು ಮತ್ತು ಗುಣಮಟ್ಟದ ನಿದ್ರೆಯನ್ನು ಹೊಂದಲು ಪತಿ ಪತ್ನಿಯರಿಗೆ ಸಹಾಯ ಮಾಡುತ್ತದೆ.

    ಸುಧಾರಿತ ಆರೋಗ್ಯ:
    ಕಡಿಮೆ ನಿದ್ರೆಯು ಒತ್ತಡ, ತೂಕ ಹೆಚ್ಚಳ, ಹೃದ್ರೋಗ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಾಕಷ್ಟು ವಿಶ್ರಾಂತಿ ಪಡೆಯುವುದು, ಗುಣಮಟ್ಟದ ನಿದ್ರೆಯನ್ನು ಮಾಡುವುದು ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ.

    ಸಂಬಂಧ ಸುಧಾರಣೆ:
    ಚೆನ್ನಾಗಿ ವಿಶ್ರಾಂತಿ ಪಡೆದ ದಂಪತಿಗಳು ಕಡಿಮೆ ಕಿರಿಕಿರಿಗೆ ಒಳಗಾಗುತ್ತಾರೆ ಮತ್ತು ಪರಸ್ಪರ ಹೆಚ್ಚು ತಾಳ್ಮೆಯಿಂದಿರುತ್ತಾರೆ. ದೈಹಿಕವಾಗಿ ಹಾಸಿಗೆಯನ್ನು ಹಂಚಿಕೊಳ್ಳುವುದಕ್ಕಿಂತ, ಯಾವುದೇ ಕಿರಿಕಿರಿಯಿಲ್ಲದೆ ಗುಣಮಟ್ಟದ ಸಮಯವನ್ನು ಕಳೆಯುವುದು ಕೂಡ ಮುಖ್ಯ.

    ವೈಯಕ್ತೀಕರಿಸಿದ ನಿದ್ರೆಯ ವಾತಾವರಣ:
    ಕೋಣೆಯ ತಾಪಮಾನ, ಬೆಳಕಿನ ವಿಷಯದಲ್ಲಿ ಕಿತ್ತಾಟ ಇರುವುದಿಲ್ಲ. ಮಲಗುವ ಸಮಯದ ಅಭ್ಯಾಸಗಳಲ್ಲಿ (ಓದುವುದು, ಟಿವಿ ನೋಡುವುದು, ಮೊಬೈಲ್ ಬಳಸುವುದು ಇತ್ಯಾದಿ) ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ.

    ಶಿಫ್ಟ್ ಕೆಲಸಕ್ಕೆ ಸಹಾಯ:
    ಒಬ್ಬ ಸಂಗಾತಿಯು ತಡರಾತ್ರಿ ಅಥವಾ ಮುಂಜಾನೆ ಕೆಲಸ ಮಾಡಿದರೆ, ಪ್ರತ್ಯೇಕ ಮಲಗುವ ಆಯ್ಕೆಗಳು ಒಬ್ಬರಿಂದ ಇನ್ನೊಬ್ಬರ ನಿದ್ರೆಗಾಗುವ ತೊಂದರೆಯನ್ನು ತಡೆಯುತ್ತವೆ.

    ಯಾರೆಲ್ಲಾ ಸ್ಲೀಪ್ ಡಿವೋರ್ಸ್‌ ಪಡೆಯಬಹುದು?
    ಸಂಗಾತಿಗಳಲ್ಲಿ ಒಬ್ಬರು ಇಲ್ಲವೇ ಇಬ್ಬರೂ ಕೂಡ ಸರಿಯಾಗಿ ನಿದ್ರಿಸಲಾಗದಿದ್ದರೆ, ನಿರಂತರವಾಗಿ ಕಿರಿಕಿರಿ ಅನುಭವಿಸುತ್ತಿದ್ದರೆ ಇಲ್ಲವೇ ತೀವ್ರ ಆಯಾಸದ ಅನುಭವಕ್ಕೊಳಪಟ್ಟಿದ್ದರೆ ಸ್ಲೀಪ್ ಡಿವೋರ್ಸ್ ಬಗ್ಗೆ ಯೋಚಿಸಬಹುದು. ನಿದ್ರೆಯ ಸಮಸ್ಯೆಗಳು ಬಿಟ್ಟೂ ಬಿಡದೆ ಕಾಡುತ್ತಿದೆ ಎಂದಾದಲ್ಲಿ ಪ್ರತ್ಯೇಕವಾಗಿ ಮಲಗುವ ಬಗ್ಗೆ ಯೋಚಿಸಬಹುದು. ಒಟ್ಟಾರೆ ಈ ಟ್ರೆಂಡ್‌ನ ಮೂಲ ಉದ್ದೇಶ ಗುಣಮಟ್ಟದ ನಿದ್ರೆಯನ್ನು ಹೊಂದುವುದಾಗಿದೆ. ತಾವು ಸುಖವಾಗಿ, ಶಾಂತವಾಗಿ ಯಾವುದೇ ಅಡೆತಡೆಗಳಿಲ್ಲದೆ ನಿದ್ರಿಸಬೇಕು ಎಂಬುದೇ ಈ ಟ್ರೆಂಡ್‌ನ ಮೂಲ ಉದ್ದೇಶ.

  • ಹೃದಯದ ಮೌನ.. ಹೃದಯಕೆ ಸೀದಾ.. ತಲುಪುವ ಹಾಗೆ ಮಾತಾಡು ನೀ…….

    ಹೃದಯದ ಮೌನ.. ಹೃದಯಕೆ ಸೀದಾ.. ತಲುಪುವ ಹಾಗೆ ಮಾತಾಡು ನೀ…….

    ಕ್ಷಾಂತರ ಹೃದಯಗಳ ನಡುವೆಯೂ ಜೀವದ ಗೆಳತಿಯನ್ನೇ ಅರಸುವ ಹೃದಯ, ಎಂದೂ ತುಟಿಗೆ ತಾಕಿಸದೇ ಇರುವ ಟೀ ಯನ್ನೇ ಬೈಟು ಮಾಡಿಕೊಂಡು ಕುಡಿಯಬೇಕೆನ್ನಿಸುತ್ತದೆ. ಮುಂಜಾನೆ ತಿಳಿಬಿಸಿಲಿನ ಕಿರಣ ಮೈತಾಕುತ್ತಿದ್ದಂತೆ ಉಂಟಾಗುವ ಬೆಚ್ಚನೆಯ ಅನುಭವಕ್ಕೆ ಗೆಳತಿಯ ಗಟ್ಟಿ ಅಪ್ಪುಗೆ ಬೇಕು ಎಂದು ಮನ ಬಯಸುತ್ತದೆ. ಪ್ರೀತಿಯ ಕಾಲದಲ್ಲಿ ಕಳೆದ ತುಂಟತನಗಳನ್ನು ನೆನಪಿಸಿಕೊಂಡರೆ, ಮತ್ತೆ ಸಂಗಾತಿಯ ತೋಳಿನಲ್ಲಿ ಕಳೆದುಹೋಗಬೇಕೆನ್ನಿಸುತ್ತದೆ ಇಂತಹ ಸಂದರ್ಭಗಳನ್ನು ಕೂಡಿಡಲೇಬೇಕಾಗುತ್ತದೆ. ಅದಕ್ಕೆಂದೇ ಒಂದು ದಿನವೂ ಬಂದಿದೆ. ಫೆ.14ರ ಪ್ರೇಮಿಗಳ ದಿನ – ಪ್ರೀತಿ ಹಂಚಿದ ವ್ಯಾಲಂಟೈನ್ಸ್ ದಿನ.

    ಉಸಿರಾಗುವೆ ಹಸಿರಾಗುವೆ
    ಆ ಸೂರ್ಯ ಚಂದ್ರ ಇರುವವರೆಗೂ
    ಆಕಾಶ ಭೂಮಿ ಇರುವವರೆಗೂ
    ನನ್ನಾಣೆಗೂ ನಿನ್ನಾಣೆಗೂ
    ಜೊತೆ ಇರುವೆ ನಾ ಎಂದೆಂದಿಗೂ…

    ಎಂಬ ಶ್ರೀನಿವಾಸ್‌, ಶ್ರೇಯಾಗೋಷಲ್‌ ಅವರ ಧನಿಯಲ್ಲಿ ಮೂಡಿದ ಗುರುಕಿರಣ ಸಂಗೀತದಲ್ಲಿ ಮೂಡಿಬಂದ ʻಮೌರ್ಯʼ ಸಿನಿಮಾದ ಈ ಗೀತೆಯನ್ನು ಪ್ರೇಮಿಗಳು ಯಾರೂ ಮರೆಯುವಂತಿಲ್ಲ. ಏಕೆಂದರೆ ಈ ಗೀತೆಯ ಪ್ರತಿ ಸಾಲುಗಳೂ ಪ್ರೇಮಿಗಳ ಮನಸ್ಸು ಮತ್ತು ಹೃದಯದ ಸಂಬಂಧವನ್ನು ನೆನಪಿಸುತ್ತದೆ. ಪ್ರೇಮಿಗಳ ದಿನಾಚರಣೆಯಲ್ಲಿಯಂತೂ ಎಷ್ಟೋ ಜೀವ ಜೋಡಿಗಳ ಕಾಲರ್ ಟ್ಯೂನ್ ಸಹ ಇದೇ ಆಗಿರುತ್ತದೆ. ಅಷ್ಟೇ ಅಲ್ಲ, ಇತ್ತೀಚೆಗೆ ರಿಲೀಸ್‌ ಆಗಿರುವ ʻಜಗವೇ ನೀನು ಗೆಳತಿಯೇ, ನನ್ನಾ ಜೀವದ ಒಡತಿಯೇʼ, ʻಸುಮ್ಮನೆ, ಹೀಗೆ ನಿನ್ನನೇ ನೋಡುತಾ, ಪ್ರೇಮಿಯಾದೆನೆʼ, ʻಹೇ ಹೃದಯ, ಅವಳ ಮನಸಿನ ಜೊತೆ ಮಾತಾಡಿದೆಯಾ…..ʼ, ʻಕನಸಲೂ ನೂರು ಬಾರಿ, ಕರೆಯುವೆ ನಿನ್ನ ನಾನು, ಅಭ್ಯಾಸವಾಗಿ ಹೋಗಿದೆ, ಜೀವಕೆʼ ಇಂತಹ ಗೀತೆಗಳು ಪ್ರೇಮಿಗಳ ಮನಸ್ಸನ್ನು ಆಹ್ಲಾದಗೊಳಿಸುತ್ತವೆ.

    ಹೌದು….. ಯುವ ಸಮುದಾಯಕ್ಕೆ ಫೆ.14ರ ಪ್ರೇಮಿಗಳ ದಿನ ಎಂಬುದೇ ವಿಶೇಷ ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ರೇಮಿಗಳ ಅಡ್ಡಗಳಿಗೇನು ಕಮ್ಮಿಯಿಲ್ಲ. ಚಿತ್ತಾಕರ್ಷಕ ಉದ್ಯಾನ, ಲಾಲ್‌ಬಾಗ್‌ ಬಟಾನಿಕಲ್‌ ಗಾರ್ಡನ್‌, ಕಬ್ಬನ್‌ ಪಾರ್ಕ್‌, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಲುಂಬಿನಿ ಗಾರ್ಡನ್ಸ್‌, ಬೆಂಗಳೂರು ಅರಮನೆ, ನಂದಿ ಬೆಟ್ಟ, ಹಲಸೂರು ಕೆರೆ, ತಟ್ಟೆಕೆರೆ, ಹೆಬ್ಬಾಳ ಕೆರೆ, ಸ್ಯಾಂಕಿ ಟ್ಯಾಂಕ್‌ ಸೇರಿದಂತೆ ಪ್ರತಿಷ್ಟಿತ ಹೋಟೆಲ್‌ಗಳೂ ಪ್ರೇಮಿಗಳ ಪ್ರಮುಖ ಅಡ್ಡಗಳೇ ಆಗಿರುತ್ತವೆ. ಪ್ರೇಮಿಗಳ ದಿನ ಬಂತೆಂದರೆ ಸಾಕು ಇವಿಷ್ಟೂ ತಾಣಗಳಲ್ಲಿ ಯುವ ಪ್ರೇಮಿಗಳ ಕಲರವ ಶುರುವಾಗುತ್ತದೆ. ಕಾಫಿ-ಡೇ ಶಾಪ್‌ಗಳು ಹಾಗೂ ಡಾಲ್ಛಿನ್ ಸೆಂಟರ್‌ಗಳಲ್ಲಿ ಚಳಿ ಬಿಡಿಸುವ ಬೆಚ್ಚನೆಯ ಕಾಫಿಯೊಂದಿಗೆ ಮನದ ಮಾತನ್ನೂ ಹಂಚಿಕೊಳ್ಳುತ್ತಾರೆ.

    ಕೆಲವರಿಗಂತೂ ದಿನಪೂರ್ತಿ ಕಳೆದರೂ ಬಾಯಿಂದ ಒಂದು ಮಾತು ಹೊರಳಲ್ಲ, ಮಾತು ಆಡಿದರೆ ಹೋಯ್ತು, ಮುತ್ತು ಹೊಡೆದರೆ ಹೋಯ್ತು ಅನ್ನೋದನ್ನು ಇವರನ್ನ ನೋಡಿಯೇ ಬರೆದಿರಬೇಕು. ಅದಕ್ಕಾಗಿ ಕಣ್ಸನ್ನೆಯಲ್ಲೇ ಮಾತನಾಡಿಕೊಳ್ತಾರೆ. ಇನ್ನೂ ಕೆಲವರು ಕಿ.ಲೋ ಮೀಟರ್‌ಗಳವರೆಗೆ ಜಾಲಿರೈಡ್ ಮಾಡಿ ಪ್ರಕೃತಿ ಸೌಂದರ್ಯದಲ್ಲೇ ಲೀನವಾಗಿಬಿಡ್ತಾರೆ. ಇದನ್ನ ಪ್ರಶ್ನೆ ಮಾಡಿದ್ರೆ ಪ್ರೀತಿಯನ್ನೂ ಹೀಗು ಸವಿಯಬಹುದು ಅಂತಾ ಉದ್ದುದ್ದ ಡೈಲಾಗ್‌ ಬೇರೆ.. ಕೆಲ ಬಿಸಿ ರಕ್ತದ ಯುವಕರಂತೂ ತೀರಾ ಅತಿರೇಖಕ್ಕೆ ಹೋಗಿ ರಕ್ತದಲ್ಲೇ ತಮ್ಮ ಪ್ರೇಯಸಿಗೆ ಕವಿತೆ ಬರೆದುಕೊಡುತ್ತಾರೆ. ಈ ಹುಚ್ಚಾಟಗಳಿಂದ ಕೆಲವರು ಆಸ್ಪತ್ರೆ ಸೇರಿದ್ದೂ ಉಂಟೂ..

    ಈ ಹಿಂದೆ ಕೆಲವು ರಾಜ ಮಹಾರಾಜರು ತಮ್ಮ ಪತ್ನಿ ಅಥವಾ ಪ್ರೇಯಸಿಗಾಗಿ ಪ್ರೇಮ ಸೌಧಗಳನ್ನೇ ನಿರ್ಮಿಸಿ ಮಾದರಿಯಾಗಿರುವುದನ್ನು ನಾವು ನೋಡಬಹುದು. ಆದರೀಗ ಕಾಲ ಬದಲಾಗಿದೆ, ಪ್ರೀತಿ ಪ್ರೇಮದ ಅರ್ಥವೇ ಬದಲಾಗಿದೆ. ಕೆಲವರು ಮೋಸದ ಪ್ರೀತಿಯಲ್ಲಿ ಬಿದ್ದು ಯಡವಟ್ಟು ಮಾಡಿಕೊಳ್ತಾರೆ. ಅದರಲ್ಲಿ ಕೆಲವರು ಮದುವೆಗೆ ಮುನ್ನ ಒಂದಿಷ್ಟು ಪ್ರೇಮಕಾಲದಲ್ಲಿ ಕಳೆದು, ಹುಡುಗ/ಹುಡಗಿ ಸಿಗದಿದ್ದಾಗ, ಬಿಡು ಗುರು ನನ್ನ ಹಣೆಯಲ್ಲಿ ಬರೆದಿರೋದು ಇಷ್ಟೇ ಅಂತ ಸುಮನ್ನಾಗಿ ಕೊನೆಗೆ ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನ ಮದುವೆಯಾಗ್ತಾರೆ. ಮುಂದಿನ ಒಂದಿಷ್ಟು ಕಾಲ ಪತಿ-ಪತ್ನಿಯಾಗಿ ಪ್ರತಿದಿನ ಪ್ರೀತಿಸುತ್ತಾ ಬದುಕು ಕಳೆಯುತ್ತಾರೆ.

    -ಮೋಹನ ಬನ್ನಿಕುಪ್ಪೆ

  • ಸಾಮೂಹಿಕ ವಿವಾಹ ಸಮಾರಂಭದಲ್ಲಿ ನವಜೋಡಿಗಳಿಗೆ ಮೋದಿ ಆಶೀರ್ವಾದ

    ಸಾಮೂಹಿಕ ವಿವಾಹ ಸಮಾರಂಭದಲ್ಲಿ ನವಜೋಡಿಗಳಿಗೆ ಮೋದಿ ಆಶೀರ್ವಾದ

    ಗಾಂಧೀನಗರ: ಗುಜರಾತ್‍ನ (Gujarat) ಭಾವನಗರ ನಗರದಲ್ಲಿ (Bhavnagar city) ನಡೆದ ಸಾಮೂಹಿಕ ವಿವಾಹ (Mass Wedding) ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನವಜೋಡಿಗಳಿಗೆ ಆಶೀರ್ವಾದಿಸಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಹೇಳಿದ್ದಾರೆ.

    ಪ್ರತಿಷ್ಠಾನದ ವತಿಯಿಂದ ಜವಾಹರ್ ಮೈದಾನದಲ್ಲಿ (Jawahar Maidan) ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೆಗಾ ಈವೆಂಟ್‍ನಲ್ಲಿ ತಂದೆ ಇಲ್ಲದ 551 ಹುಡುಗಿಯರಿಗೆ ವಿವಾಹ ಮಾಡಿಸಲಾಗಿತ್ತು. ಇದೇ ವೇಳೆ ಸಂಬಂಧಿಕರ ಒತ್ತಡಕ್ಕೆ ಮಣಿದು ಪ್ರತ್ಯೇಕವಾಗಿ ವಿವಾಹವಾಗುವುದಕ್ಕೆ ಹಣ ಪೋಲು ಮಾಡಬೇಡಿ. ದಯವಿಟ್ಟು ನಿಮ್ಮ ಬಳಿ ಹೆಚ್ಚು ಹಣವಿದ್ದರೆ, ಅದನ್ನು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಳಿಸಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ, ಥಾಣೆ ನಡುವೆ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಪ್ಲಾನ್: ಏಕನಾಥ್ ಶಿಂಧೆ

    ಗುಜರಾತ್‍ನಲ್ಲಿ ಆಗಾಗ ಸಾಮೂಹಿಕ ವಿವಾಹಗಳು ನಡೆಯುತ್ತಿರುತ್ತದೆ. ಮೊದಲೆಲ್ಲಾ ಅದ್ಧೂರಿ ತನವನ್ನು ಪ್ರದರ್ಶಿಸುವ ಸಲುವಾಗಿ ಸಾಲ ಮಾಡಿ ಜೋರಾಗಿ ಮದುವೆ ಮಾಡುತ್ತಿದ್ದರು. ಆದರೆ ಈಗ ಜನ ಜಾಗೃತರಾಗಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳತ್ತ ಮುಖ ಮಾಡಿದ್ದಾರೆ. ಈ ಉದಾತ್ತ ಉದ್ದೇಶವನ್ನು ಬೆಂಬಲಿಸಲು ಮತ್ತು ಇತರರನ್ನು ಪ್ರೇರೇಪಿಸಲು ನಾನು ಹಾಗೂ ಗುಜರಾತ್‍ನ ಮುಖ್ಯಮಂತ್ರಿ ಇಂತಹ ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಮದುವೆ ಸಂದರ್ಭದಲ್ಲಿ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದಿದ್ದಾರೆ.

    ಡಿಸೆಂಬರ್‍ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್‍ನಲ್ಲಿ ಪ್ರವಾಸದಲ್ಲಿದ್ದಾರೆ. ಇದಕ್ಕೂ ಮುನ್ನ ವಲ್ಸಾದ್ ಜಿಲ್ಲೆಯ ರ್‍ಯಾಲಿವೊಂದರಲ್ಲಿ ಮಾತನಾಡಿದ್ದರು. ಇದನ್ನೂ ಓದಿ: ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಅಳಿವು-ಉಳಿವು- ಇಂದು ಸುಪ್ರೀಂನಲ್ಲಿ ನಿರ್ಧಾರ

    Live Tv
    [brid partner=56869869 player=32851 video=960834 autoplay=true]

  • ಓಯೋ ರೂಮ್‍ಗೆ ಬರೋ ಜೋಡಿಗಳ ಖಾಸಗಿ ವೀಡಿಯೋ ರೆಕಾರ್ಡ್ – ನಾಲ್ವರು ಅರೆಸ್ಟ್

    ಓಯೋ ರೂಮ್‍ಗೆ ಬರೋ ಜೋಡಿಗಳ ಖಾಸಗಿ ವೀಡಿಯೋ ರೆಕಾರ್ಡ್ – ನಾಲ್ವರು ಅರೆಸ್ಟ್

    ಲಕ್ನೋ: ಓಯೋ (OYO) ಹೋಟೆಲ್ ರೂಮ್‍ಗಳಲ್ಲಿ ಸಿಕ್ರೇಟ್ ಕ್ಯಾಮೆರಾ ಅಳವಡಿಸುವ ಮೂಲಕ ರೂಮ್‍ಗೆ ಬರುವ ಜೋಡಿಗಳ ಖಾಸಗಿ ವೀಡಿಯೋವನ್ನು ರೆಕಾರ್ಡ್ ಮಾಡಿದ ಆರೋಪದಡಿ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ  (Noida)ನಡೆದಿದೆ.

    ಓಯೋ ರೂಮ್‍ಗೆ ಬರುವ ಜೋಡಿಗಳ ಖಾಸಗಿ ವೀಡಿಯೋವನ್ನು ರೆಕಾರ್ಡ್ ಮಾಡಿ, ಕೇಳಿದಷ್ಟು ಹಣ ನೀಡದಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಪೋಸ್ಟ್ ಮಾಡುವುದಾಗಿ ಖದೀಮರ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಆದರೆ ಈ ದಂಧೆಯಲ್ಲಿ ಹೋಟೆಲ್ ಸಿಬ್ಬಂದಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವೇದಿಕೆ ಮೇಲೆಯೇ ನೃತ್ಯಗಾರ್ತಿಯೊಂದಿಗೆ ರೊಮ್ಯಾನ್ಸ್ – ಪುರಸಭೆ ಕಾರ್ಯಕರ್ತ ಅಮಾನತು

    ಕಿಡಿಗೇಡಿಗಳ ಗ್ಯಾಂಗ್ ಮೊದಲಿಗೆ ಓಯೋ ರೂಮ್ ಅನ್ನು ತಮಗೆಂದು ಬುಕ್ ಮಾಡಿಕೊಂಡು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಕೆಲವು ದಿನಗಳ ನಂತರ ಅಳವಡಿಸಿದ್ದ ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸುತ್ತಾರೆ. ನಂತರ ಜೋಡಿಗಳನ್ನು ಸಂಪರ್ಕಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇದನ್ನೂ ಓದಿ: ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಫೋಟೋಗ್ರಾಫರ್‌ಗಳಿಬ್ಬರ ದುರ್ಮರಣ

    ಆರೋಪಿಗಳನ್ನು ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್ ಮತ್ತು ಅನುರಾಗ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ನೋಯ್ಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ವಿಭಿನ್ನ ಗ್ಯಾಂಗ್‍ನ ಸದಸ್ಯರಾಗಿದ್ದಾರೆ. ಈ ಗ್ಯಾಂಗ್ ಅನಧಿಕೃತ ಕಾಲ್ ಸೆಂಟರ್‌ಗಳು, ಅಕ್ರಮ ಚಟುವಟಿಕೆಗಳಿಗೆ ನಕಲಿ ಸಿಮ್ ಕಾರ್ಡ್ ಒದಗಿಸುವುದು ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೋಡಿಗಳ ಖಾಸಗಿ ವೀಡಿಯೋವನ್ನು ಅವರ ಫೋನ್‍ಗೆ ಕಳುಹಿಸಿ ವಿಷ್ಣು ಮತ್ತು ಅಬ್ದುಲ್ ವಹಾವ್ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಆದರೆ ಹಣ ನೀಡಲು ನಿರಾಕರಿಸದರೆ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಅನುರಾಗ್ ಕುಮಾರ್ ಸಿಂಗ್ ಹಾಗೂ ಪಂಕಜ್ ಹಣ ಸುಲಿಗೆ ಮಾಡಲು ನೋಂದಾಯಿತ ಸಿಮ್ ಮತ್ತು ಇತರ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾದ ಖಾತೆಯನ್ನು ಒದಗಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಸಾದ್ ಮಿಯಾನ್ ಖಾನ್ ಹೇಳಿದ್ದಾರೆ.

    ಇದೀಗ ಆರೋಪಿಗಳಿಂದ ಪೊಲೀಸರು 11 ಲ್ಯಾಪ್‍ಟಾಪ್‍ಗಳು, 7 ಸಿಪಿಯುಗಳು, 21 ಮೊಬೈಲ್‍ಗಳು ಮತ್ತು ವಿವಿಧ ಬ್ಯಾಂಕ್‍ಗಳ 22 ಎಟಿಎಂ ಕಾರ್ಡ್‍ಗಳು, ಒಂದು ಪ್ಯಾನ್ ಕಾರ್ಡ್, ಒಂದು ಆಧಾರ್ ಕಾರ್ಡ್, 14 ನಕಲಿ ಐ ಫಾರ್ಮಾ ಮತ್ತು ಐ ಕಾರ್ಡ್, ಸಿಮ್ ಕಾರ್ಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಲ್ಲಿ ಕಿಸ್ ಮಾಡುವಂತಿಲ್ಲ – ಜೋಡಿಗಳ ಚುಂಬನದಿಂದ ಬೇಸತ್ತ ಸೊಸೈಟಿ

    ಇಲ್ಲಿ ಕಿಸ್ ಮಾಡುವಂತಿಲ್ಲ – ಜೋಡಿಗಳ ಚುಂಬನದಿಂದ ಬೇಸತ್ತ ಸೊಸೈಟಿ

    – ಗೇಟ್ ಮುಂಭಾಗವೇ ಜೋಡಿಗಳ ತುಂಟಾಟ

    ಮುಂಬೈ: ನಗರದ ಹೌಸಿಂಗ್ ಸೊಸೈಟಿ ಗೇಟ್ ಮುಂಭಾಗದ ರಸ್ತೆಯ ಮೇಲೆ ನೋ ಕಿಸ್ಸಿಂಗ್ ಜೋನ್ ಎಂದು ಬರೆಸಿದೆ. ಸದ್ಯ ಈ ಬರಹದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಮುಂಬೈನ ಬೋರಿವಲಿಯ ಸತ್ಯಂ ಶಿವಂ ಸೊಸೈಟಿ ಈ ರೀತಿ ರಸ್ತೆ ಮೇಲೆ ಬರೆಸಿದೆ. ಸಾರ್ವಜನಿಕ ಪ್ರದೇಶದಲ್ಲಿ ಚುಂಬನ ಮಾಡೋದು ಸರಿಯಲ್ಲ. ಆದ್ರೆ ಸೊಸೈಟಿ ಮುಂಭಾಗದಲ್ಲಿ ಹಲವು ಜೋಡಿಗಳು ಕಿಸ್ ಮಾಡುತ್ತಿದ್ದವು. ಸೊಸೈಟಿಯಲ್ಲಿದ್ದ ಜನರು ಅಶ್ಲೀಲ ದೃಶ್ಯಗಳನ್ನ ನೋಡಿಕೊಂಡೇ ಮನೆಗೆ ಬರುವಂತಾಗಿತ್ತು. ಜೋಡಿಗಳ ಚುಂಬನದ ಹಾವಳಿಯಿಂದಾಗಿ ಬೇಸತ್ತ ಸೊಸೈಟಿ ಗೇಟ್ ಮುಂಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ಇಲ್ಲಿ ಕಿಸ್ ಮಾಡುವಂತಿಲ್ಲ ಎಂದು ಬರೆಸಿದೆ.

    ಸೊಸೈಟಿಯ ಪ್ರವೇಶ ದ್ವಾರದಲ್ಲಿಯೇ ಜೋಡಿಗಳು ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದರು. ಈ ಸಂಬಂಧ ಸೊಸೈಟಿ ನಿವಾಸಿಗಳು ದೂರು ಸಲ್ಲಿಸಿದ್ದರಿಂದ ನೋ ಕಿಸ್ಸಿಂಗ್ ಝೋನ್ ಎಂದು ಬರೆಸಲಾಗಿದೆ. ಈ ರೀತಿ ಬರೆಸಿದ ಮೇಲೆ ಜೋಡಿಗಳು ಇಲ್ಲಿ ನಿಂತು ಮಾತನಾಡೋದು, ಕಿಸ್ ಮಾಡೋದು ಕಡಿಮೆಯಾಗಿದೆ ಎಂದು ಹೌಸಿಂಗ್ ಬೋರ್ಡ್ ಹೇಳಿದೆ.

    ಕ್ರಮ ತೆಗೆದುಕೊಳ್ಳದ ಪೊಲೀಸರು:
    ಪ್ರವೇಶ ದ್ವಾರದಲ್ಲಿಯೇ ಜೋಡಿ ಕಿಸ್ ಮಾಡುವ ವೀಡಿಯೋ ಚಿತ್ರೀಕರಿಸಿ ಸ್ಥಳೀಯ ಪೊಲೀಸರು ಮತ್ತು ಕಾರ್ಪೋರೇಟರ್ ಗೂ ಸೊಸೈಟಿಯ ಸದಸ್ಯರೊಬ್ಬರು ದೂರು ನೀಡಿದ್ದರು. ಆದ್ರೆ ಅಧಿಕಾರಿ ಮತ್ತು ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ನಂತರ ಸೊಸೈಟಿ ಸದಸ್ಯರು ಒಮ್ಮತದಿಂದ ಗೇಟ್ ಮುಂಭಾಗದಲ್ಲಿ ಈ ರೀತಿ ಸಾಲುಗಳನ್ನು ಬರೆಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನಿಗೆ ಖ್ಯಾತಿ ನಟಿ ಕಿಸ್ 

    ನಾವು ಯಾವ ಜೋಡಿ ಮೇಲೆಯೂ ವೈಯಕ್ತಿಯ ದ್ವೇಷ ಇಲ್ಲ. ಆದ್ರೆ ಅವರ ಅಶ್ಲೀಲತೆ ನಡವಳಿಕೆ ಬಗ್ಗೆ ಬೇಸರವಿದೆ. ಇಂತಹ ಘಟನೆಗಳು ಪ್ರತಿನಿತ್ಯ ನಮ್ಮ ಮನೆ ಮುಂದೆಯೇ ನಡೆಯುತ್ತಿದ್ದವು. ಜೋಡಿಗಳ ಚುಂಬನದ ಹಾವಳಿಯಿಂದಾಗಿ ಹಿರಿಯರು ಮತ್ತು ಮಹಿಳೆಯರು ಹೊರಗೆ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕ ಪ್ರದೇಶಗಳಲ್ಲಿ ಅಶ್ಲೀಲವಾಗಿ ನಡೆದುಕೊಳ್ಳುವವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸೊಸೈಟಿಯ ಮುಖ್ಯಸ್ಥ ವಿನಯ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಟಮಟ ಮಧ್ಯಾಹ್ನವೇ ಮಂಡ್ಯದ ಜಿಲ್ಲೆಯ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಪ್ರೇಮಿಗಳ ಕಿಸ್ಸಿಂಗ್

  • 20 ವರ್ಷಗಳ ಸುಂದರ ನೆನಪಿಗಾಗಿ 1,45,428 ರೂ. ಟಿಪ್ಸ್ ಕೊಟ್ಟ ದಂಪತಿ!

    20 ವರ್ಷಗಳ ಸುಂದರ ನೆನಪಿಗಾಗಿ 1,45,428 ರೂ. ಟಿಪ್ಸ್ ಕೊಟ್ಟ ದಂಪತಿ!

    – ಸೋಶಿಯಲ್ ಮೀಡಿಯಾದಲ್ಲಿ ಬಿಲ್ ವೈರಲ್

    ಚಿಕಾಗೋ: ಹಳೆಯ ನೆನಪನ್ನು ಮೆಲುಕು ಹಾಕಿದ ದಂಪತಿ ಈ ದಿನದ ನೆನಪು ಉಳಿಯಬೇಕು ಎಂದು ಹೋಟೆಲ್ ಸಿಬ್ಬಂದಿಗೆ 1,45,428 ರೂಪಾಯಿ ಟಿಪ್ಸ್ ನೀಡುವ ಮೂಲಕವಾಗಿ ಧನ್ಯವಾದ ಹೇಳಿದ್ದಾರೆ.

    ದಂಪತಿ ಟಿಪ್ಸ್ ನೀಡಿರುವ ರಶೀದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ದಂಪತಿ ಟಿಪ್ಸ್ ನೀಡಿರುವ ಹಿಂದೆ ಒಂದು ಪ್ರೇಮ ಕಥೆ ಇದೆ ಎಂಬುದು ತಿಳಿದು ಬಂದಿದೆ.

    20 ವರ್ಷಗಳ ಹಿಂದೆ ಇದೇ ರೆಸ್ಟೋರೆಂಟ್‍ನಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಬಳಿಕ ಇವರಿಬ್ಬರು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಹೀಗೆ ತಮ್ಮ ಹೊಸ ಜೀವನ ಶುರುವಾಗಲು 20 ವರ್ಷಗಳ ಹಿಂದೆ ಕಾರಣವಾಗಿದ್ದ ಇದೇ ರೆಸ್ಟೋರೆಂಟ್‍ಗೆ ಬಂದ ದಂಪತಿ, ಸಿಬ್ಬಂದಿಗೆ ಈ ಕೊಡುಗೆ ಕೊಟ್ಟಿದ್ದಾರೆ. ತಮ್ಮಿಬ್ಬರ ಭೇಟಿಯ 20 ವರ್ಷಗಳ ಖುಷಿಯನ್ನು ಸ್ಮರಣೀಯವನ್ನಾಗಿಸಲು ಈ ಟಿಪ್ಸ್ ಕೊಟ್ಟಿದ್ದಾರೆ. 20 ವರ್ಷಗಳ ಹಿಂದೆ ಫೆಬ್ರವರಿ 12ರಂದು ಇವರು ಇದೇ ರೆಸ್ಟೋರೆಂಟಿಗೆ ಜೊತೆಯಾಗಿ ಬಂದಿದ್ದರು.

    WOW! WOW! WOW! WOW!????????????

    This guest had his first date with his now wife 20 years ago at Club Lucky on February 12. He…

    Posted by Club Lucky on Sunday, 14 February 2021

     

    ಚಿಕಾಗೋ ಮೂಲದ ಕ್ಲಬ್ ಲಕ್ಕಿ ಎಂಬ ರೆಸ್ಟೋರೆಂಟ್‍ಗೆ ಬಂದ ದಂಪತಿ ಇಲ್ಲಿನ ಸಿಬ್ಬಂದಿಗಾಗಿ 2000 ಯುಎಸ್ ಡಾಲರ್ ಎಂದರೆ ಭಾರತದ 1,45,428 ರೂಪಾಯಿಯನ್ನು ನೀಡಿದ್ದಾರೆ. ಈ ಬಿಲ್ ಅನ್ನು ರೆಸ್ಟೋರೆಂಟ್ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. 20 ವರ್ಷಗಳ ಸುಂದರವಾದ ನೆನಪಿಗೆ ಹಾಗೂ ಉತ್ತಮ ಆಹಾರ ಮತ್ತು ಸಾಟಿ ಇಲ್ಲದ ಸೇವೆಗೆ ಧನ್ಯವಾದ ಎಂದು ಬಿಲ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  • ಪತ್ನಿಯ ಓಡಾಟವನ್ನು ಪತ್ತೆ ಹಚ್ಚಲು ಸ್ಕೂಟಿಗೆ ಟ್ರ್ಯಾಕರ್ ಅಳವಡಿಸಿದ ಪತಿ

    ಪತ್ನಿಯ ಓಡಾಟವನ್ನು ಪತ್ತೆ ಹಚ್ಚಲು ಸ್ಕೂಟಿಗೆ ಟ್ರ್ಯಾಕರ್ ಅಳವಡಿಸಿದ ಪತಿ

    ಹೈದರಾಬಾದ್: ಪತ್ನಿಯ ಲೈವ್ ಲೊಕೇಶನ್ ತಿಳಿದುಕೊಳ್ಳಲು ಪತಿ ಸ್ಕೂಟಿಗೆ ಟ್ರ್ಯಾಕರ್ ಅಳವಡಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ವಿವೇಕ್ ವೀರೇಂದ್ರ ಸಿಂಗ್ (45) ಪತ್ನಿಯ ಸ್ಕೊಟಿಗೆ ಟ್ರ್ಯಾಕರ್ ಅಳವಡಿಸಿದ ವ್ಯಕ್ತಿ. ಸದ್ಯ ಪತಿ ಟ್ರ್ಯಾಕರ್ ಅಳವಡಿಸಿದ ವಿಚಾರವನ್ನು ತಿಳಿದ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

    ವಿವೇಕ್ ಹೈದರಾಬಾದ್‍ನ ಶ್ರೀನಗರ ಕಾಲೋನಿಯಲ್ಲಿ ತನ್ನ ಪತ್ನಿಯೊಂದಿಗೆ ವಾಸವಾಗಿದ್ದನು. ಆದರೆ ಈತನಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿತ್ತು. ಪತ್ನಿಗೆ ವಿಚ್ಛೇದನ ನೀಡಿ ಪ್ರಿಯತಮೆಯೊಂದಿಗೆ ಮದುವೆಯಾಗಲು ನಿರ್ಧರಿಸಿದ್ದನು. ಮಡದಿಗೆ ವಿಚ್ಛೇದನ ನೀಡಲು ಕೋರ್ಟಿಗೆ ಅರ್ಜಿಯನ್ನು ಹಾಕಿದ್ದನು. ಆದರೆ ಮಡದಿ ತನಗೆ ವಿಚ್ಛೇದನ ನೀಡಲು ಇಷ್ಟವಿಲ್ಲ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ಪತಿ ಕಿರುಕುಳ ನೀಡಲು ಆರಂಭಿಸಿದ್ದನು. ಈ ಸಂಬಂಧ ಮಹಿಳೆ ದೂರು ದಾಖಲಿಸಿದ್ದಳು.

    ಇತ್ತೀಚಿನ ದಿನಗಳಲ್ಲಿ ಆಕೆಯನ್ನು ಕೆಲವು ಮಂದಿ ಹಿಂಬಾಲಿಸುತ್ತಿರುವ ವಿಚಾರ ಆಕೆಯ ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಆಕೆ ತನ್ನ ಸ್ಕೂಟಿಯನ್ನು ಪರಿಶೀಲನೆ ಮಾಡಿದ್ದಾಳೆ. ಆಗ ಟ್ರ್ಯಾಕಿಂಗ್ ಅಳವಡಿಸಿರುವುದು ಬಯಲಾಗಿದೆ. ನಂತರ ಮಹಿಳೆ ಪತಿ ವಿವೇಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

  • ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟ್ – ಪತ್ನಿಗಾಗಿ ಚಂದ್ರಲೋಕದಲ್ಲಿ ಜಾಗ ಖರೀದಿ

    ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟ್ – ಪತ್ನಿಗಾಗಿ ಚಂದ್ರಲೋಕದಲ್ಲಿ ಜಾಗ ಖರೀದಿ

    ನವದೆಹಲಿ: ಮಡದಿಗೆ ಮದುವೆ ವಾರ್ಷಿಕೋತ್ಸವದ ಅಂಗವಾಗಿ ಚಂದ್ರನ ಮೇಲೆ 3 ಎಕರೆ ಭೂಮಿ ಖರೀದಿಸಿ ಪತ್ನಿಗೆ ಗೀಫ್ಟ್ ಕೊಟ್ಟು ಪತಿ ಸುದ್ದಿಯಾಗಿದ್ದಾರೆ.

    ಚಂದ್ರನ ಮೇಲೆ ಭೂಮಿ ಖರೀದಿಸಿದ ದಂಪತಿಯನ್ನು ಧರ್ಮೇಂದ್ರ ಅನಿಜಾ ಮತ್ತು ಸಪ್ನಾ ಆಗಿದ್ದಾರೆ. ಧರ್ಮೇಂಧ್ರ ವಿಶೇಷವಾದ ಊಡುಗೊರೆಯನ್ನು ಪತ್ನಿಗೆ ನೀಡಿದ್ದಾರೆ.

    ಈ ಡಿಸೆಂಬರ್ 24 ಕ್ಕೆ ನಾವು ಮದುವೆಯಾಗಿ 8 ವರ್ಷವಾಗುತ್ತದೆ. ನಾನು ಈ ಮದುವೆ ವಾರ್ಷಿಕೋತ್ಸವಕ್ಕೆ ನನಗೆ ವಿಶೇಷವಾದ ಉಡುಗೊರೆ ಬೇಕು ಎಂದು ಹೇಳಿದ್ದೇ ಆದರೆ ನನ್ನ ಪತಿ ಕೊಟ್ಟಿರುವ ಊಡುಗೊರೆ ತುಂಬಾ ವಿಶೇಷ ಮತ್ತು ವಿಭಿನ್ನವಾಗಿದೆ. ನನಗೆ ತುಂಬಾ ಸಂತೋಷವಾಗಿದೆ. ಅವರು ನನಗೆ ವಿಶೇಷವಾದದ್ದನ್ನು ಉಡುಗೊರೆಯಾಗಿ ನೀಡುತ್ತಾರೆಂದು ನಾನು ಎಂದೂ ನಿರೀಕ್ಷಿಸಿರಲಿಲ್ಲ ಎಂದು ಧರ್ಮೇಂಧ್ರ ಪತ್ನಿ ಸಪ್ನಾ ಹೇಳಿದ್ದಾರೆ.

    ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ಲೂನಾ ಸೊಸೈಟಿ ಇಂಟನ್ರ್ಯಾಷನಲ್ ಎಂಬ ಸಂಸ್ಥೆಯ ಮೂಲಕ ಈ ಭೂಮಿಯನ್ನು ಖರೀದಿಸಿದ್ದೇನೆ. ಅದನ್ನು ಖರೀದಿಸುವ ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ಸಮಯವನ್ನು ತೆದುಕೊಂಡಿತ್ತು. ಪ್ರತಿಯೊಬ್ಬರೂ ಕಾರುಗಳು ಮತ್ತು ಆಭರಣಗಳಂತಹ ಆಸ್ತಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ, ಆದರೆ ನಾನು ಬೇರೆ ಏನನ್ನಾದರೂ ನನ್ನ ಪತ್ನಿಗೆ ನೀಡಬೇಕು ಎಂದು ಯೋಚಿಸಿದ್ದೇನು. ಆದ್ದರಿಂದ, ನಾನು ಅವಳಿಗೆ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದೆ ಎಂದು ಧರ್ಮೇಂಧ್ರ ಅನಿಜಾ ಹೇಳಿದ್ದಾರೆ.

    2018ರಲ್ಲಿ ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಹ ಚಂದ್ರನಲ್ಲಿ ಭೂಮಿ ಖರೀದಿಸಿದ್ದರು.