Tag: counting

  • 2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು- 3 ಪಕ್ಷಗಳ ಭವಿಷ್ಯ ನಿರ್ಧಾರ

    2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು- 3 ಪಕ್ಷಗಳ ಭವಿಷ್ಯ ನಿರ್ಧಾರ

    ಬೆಂಗಳೂರು: 2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು ಪ್ರಕಟವಾಗಲಿದೆ. ಮೂರು ಪಕ್ಷಗಳಿಂದ ಒಟ್ಟು 49 ಅಭ್ಯರ್ಥಿಗಳ ಭವಿಷ್ಯ ಇಂದು ಗೊತ್ತಾಗಲಿದೆ.

    ದಕ್ಷಿಣ ಪದವೀಧರ ಕ್ಷೇತ್ರವಾದ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ವಾಯವ್ಯ ಪದವೀಧರ ಕ್ಷೇತ್ರವಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರವಾದ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡದಲ್ಲಿ ಚುನಾವಣೆ ನಡೆದಿತ್ತು.

    ದಕ್ಷಿಣ ಪದವೀಧರ ಕ್ಷೇತದ ಮೊದಲ ಬಾರಿಗೆ ಕಾಂಗ್ರೆಸ್ ಗೆಲುವಿಗಾಗಿ ಕಾಯುತ್ತಿದ್ದರೆ, ಜೆಡಿಎಸ್ ಸ್ಥಾನ ಉಳಿಸಿಕೊಳ್ಳಲು, ಬಿಜೆಪಿ ಮರಳಿ ಕ್ಷೇತ್ರ ಪಡೆಯಲು ಹವಣಿಸುತ್ತಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಭವಿಷ್ಯವೂ ನಿರ್ಧಾರವಾಗಲಿದೆ.

    ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಪರ ಹಣ ಹಂಚಿಕೆಯೂ ಜೋರಾಗಿತ್ತು. ಬೆಳಗ್ಗೆ 8ಕ್ಕೆ ಮತ ಎಣಿಕೆ ಶುರುವಾಗಲಿದ್ದು, ಎಣಿಕೆ ಕೇಂದ್ರಗಳ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ ಎಣಿಕೆಗಾಗಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿ ಆಗಿದೆ.

    ಬೆಳಗ್ಗೆ ಮೊದಲು ಸಿಂಧು- ಅಸಿಂಧು ಮತಗಳ ಬೇರ್ಪಡಿಕೆ ಕಾರ್ಯ ನಡೆಯಲಿದ್ದು, ಬಳಿಕ ಸಿಬ್ಬಂದಿ ಮತಗಳ ಕ್ರೂಢೀಕರಣ ಮಾಡಲಿದ್ದಾರೆ. ಇದಾದ ಬಳಿಕ 25 ಮತಗಳ ತಲಾ ಒಂದು ಬಂಡಲ್ ಕಟ್ಟಿ ಮತ ಎಣಿಕೆ ನಡೆಯಲಿದೆ.

    ಪ್ರಾಶಸ್ತ್ಯದ ಆಧಾರದ ಮೇಲೆ ಮತದಾನ ನಡೆದಿರುವ ಹಿನ್ನೆಲೆಯಿರುವುದರಿಂದ ಫಲಿತಾಂಶ ಹೊರಬೀಳಲು ಹೆಚ್ಚಿನ ಸಮಯ ಪಡೆಯುವ ಸಾಧ್ಯತೆಯಿದೆ. ವಾಯುವ್ಯ ಪದವೀಧರ ಕ್ಷೇತ್ರದಲ್ಲಿ 99,598 ಮತದಾರರ ಪೈಕಿ 65,914 ಮತ ಚಲಾವಣೆ ಆಗಿದ್ದರೆ, ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇಕಡ 66.18ರಷ್ಟು ಮತದಾನವಾಗಿತ್ತು.

    ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಮಧ್ಯೆ ಪೈಪೋಟಿಯಿದ್ದು, ಕಳೆದ ಬಾರಿಗಿಂತ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 25,386 ಮತದಾರರ ಪೈಕಿ 21,401 ಮತ ಚಲಾವಣೆ ಆಗಿದ್ದು, 84.30%ರಷ್ಟು ಮತದಾನವಾಗಿತ್ತು. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 17,973 ಮತದಾರರ ಪೈಕಿ 15,577 ಮತ ಚಲಾವಣೆ ಆಗಿದ್ದು, 86.67%ರಷ್ಟು ಮತದಾನವಾಗಿತ್ತು.

    ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ವಾಯುವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ಮಧ್ಯೆ ನೇರಾನೇರ ಹಣಾಹಣಿಯಿದೆ. ಉಭಯ ರಾಷ್ಟ್ರೀಯ ಪಕ್ಷಗಳಿಗೂ ಮತ ವಿಭಜನೆಯ ಆತಂಕ ಎದುರಾಗಿದೆ. ಕಾಂಗ್ರೆಸ್‍ನಿಂದ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಎನ್.ಬಿ.ಬನ್ನೂರು ಸ್ಪರ್ಧಿಸಿದ್ದರು. ಅಷ್ಟೇ ಅಲ್ಲದೇ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ ಲೋಣಿಯಿಂದ ಮತ ವಿಭಜನೆ ಆತಂಕ ಎದುರಾಗಿದ್ದು, ಮತಗಳ ವಿಭಜನೆಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಇದನ್ನೂ ಓದಿ: ಇಡಿ ಇಕ್ಕಳದಲ್ಲಿ ಕಾಂಗ್ರೆಸ್ ನಾಯಕ- 3ನೇ ದಿನವೂ ವಿಚಾರಣೆ ಎದುರಿಸಲಿರುವ ರಾಹುಲ್ ಗಾಂಧಿ

    ಚುನಾವಣಾ ವರ್ಷ ಹಿನ್ನೆಲೆ ಉಭಯ ರಾಷ್ಟ್ರೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಇದ್ದರೇ, ಗೆಲ್ಲುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಇದ್ದಾರೆ. ಇದನ್ನೂ ಓದಿ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಎಂಎಲ್‍ಸಿ ಹನುಮಂತ ನಿರಾಣಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕ್ ಮಧ್ಯೆ ಪೈಪೋಟಿ ಇದ್ದು, ಇದೇ ಮೊದಲ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕ್ ಚುನಾವಣಾ ಕಣಕ್ಕಿಳಿದಿದ್ದಾರೆ. ವಾಯುವ್ಯ ಪದವೀಧರ ಕ್ಷೇತ್ರದಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ಮತದಾನವಾಗಿದೆ.

  • ಮಸ್ಕಿ ಉಪಚುನಾವಣೆ ಮತ ಎಣಿಕೆ – ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

    ಮಸ್ಕಿ ಉಪಚುನಾವಣೆ ಮತ ಎಣಿಕೆ – ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

    – ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ

    ರಾಯಚೂರು: ನಾಳೆ ನಡೆಯಲಿರುವ ಮಸ್ಕಿ ಉಪಚುನಾವಣೆ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರದ ಎಸ್‍ಆರ್‍ಪಿಎಸ್ ಪಿಯು ಕಾಲೇಜಿನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ ನಿಯಮ ಪಾಲನೆ ಮಾಡಿ ಮತ ಎಣಿಕೆಗೆ ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಚುನಾವಣಾಧಿಕಾರಿ ಹಾಗೂ ರಾಯಚೂರು ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್ ಹೇಳಿದ್ದಾರೆ.

    ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತದೆ. 3 ಕೊಠಡಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ಕೊಠಡಿಗೆ 4 ರಂತೆ ಒಟ್ಟು 12 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ 3 ಜನ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಕೌಂಟಿಂಗ್ ಸೂಪರ್ ವೈಸರ್, ಕೌಂಟಿಂಗ್ ಅಸಿಸ್ಟೆಂಟ್, ಮೈಕ್ರೋ ಅಬ್ಸರ್ವರ್ ಕಾರ್ಯನಿರ್ವಹಿಸುತ್ತಾರೆ. ಪ್ರತಿ ಟೇಬಲ್‍ಗೆ ಒಬ್ಬ ಮತ ಎಣಿಕೆ ಏಜೆಂಟ್‍ಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳಿಗೂ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಮಸ್ಕಿ ಕಣದಲ್ಲಿ 8 ಜನ ಅಭ್ಯರ್ಥಿಗಳು ಇದ್ದು, ಕೋವಿಡ್ ನಿಯಮದಂತೆ ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಬಳಕೆ ಕಡ್ಡಾಯ ಹಾಗೂ ಮತ ಎಣಿಕೆ ವೇಳೆ ಇಬ್ಬರ ಮಧ್ಯೆ ಒಬ್ಬ ಏಜೆಂಟ್ ಪಿಪಿಇ ಕಿಟ್ ಧರಿಸಬೇಕು.

    ಒಟ್ಟು 26 ಸುತ್ತಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ವಿಜಯೋತ್ಸವ ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ ಹೊರಗಡೆ ಜನ ಸೇರುವುದು ಸಹ ಚುನಾವಣೆ ಆಯೋಗ ನಿಷೇಧಿಸಿದೆ ಅಂತ ರಾಯಚೂರು ಡಿಸಿ ಆರ್. ವೆಂಕಟೇಶ್ ಕುಮಾರ್ ಹೇಳಿದ್ದಾರೆ.

    ಚುನಾವಣೆಯಲ್ಲಿ ಒಟ್ಟು 1,45,458 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 70.48 ರಷ್ಟು ಮತದಾನವಾಗಿತ್ತು. 175 ಅಂಚೆ ಮತ ಪತ್ರಗಳಿವೆ. ಕಾಂಗ್ರೆಸ್‍ನ ಬಸನಗೌಡ ತುರ್ವಿಹಾಳ ಹಾಗೂ ಬಿಜೆಪಿಯ ಪ್ರತಾಪಗೌಡ ಪಾಟೀಲ್ ಮಧ್ಯೆ ತೀವ್ರ ಪೈಪೋಟಿಯಿದೆ. ಒಟ್ಟು 8 ಜನ ಅಭ್ಯರ್ಥಿಗಳು ಕಣದಲ್ಲಿದ್ದು ಭವಿಷ್ಯ ನಾಳೆ ಪ್ರಕಟವಾಗಲಿದೆ.

  • ಹಾವೇರಿಯಲ್ಲಿ 2 ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ

    ಹಾವೇರಿಯಲ್ಲಿ 2 ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ

    ಹಾವೇರಿ: ಜಿಲ್ಲೆಯ ಹಿರೇಕೆರೂರು ಮತ್ತು ರಾಣೆಬೆನ್ನೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ನಾಳೆ(ಸೋಮವಾರ) ಪ್ರಕಟಗೊಳ್ಳಲಿದೆ.

    ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿರೋ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಗೆ ಈಗಾಗಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ಬೆಳಗ್ಗೆ ಅಭ್ಯರ್ಥಿಗಳು ಅಥವಾ ಅವರ ಏಜೆಂಟ್ ರ ಸಮ್ಮುಖದಲ್ಲಿ ಕೊಠಡಿ ಓಪನ್ ಮಾಡಿ ಮತ ಎಣಿಕೆ ಕಾರ್ಯ ನಡೆಯಲಿದೆ. ಆರಂಭದಲ್ಲಿ ಅಂಚೆ ಮತಗಳನ್ನ ಎಣಿಕೆ ಮಾಡಲಿದ್ದು, ನಂತರದಲ್ಲಿ ಇವಿಎಂಗಳಲ್ಲಿನ ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಮತ ಎಣಿಕೆಗೆ ಸಕಲ ಸಿದ್ಧತೆ – ಕೆಆರ್‌ಪೇಟೆಯಲ್ಲಿ 144 ಸೆಕ್ಷನ್ ಜಾರಿ

    ಹಿರೇಕೆರೂರು ಕ್ಷೇತ್ರದ ಮತ ಎಣಿಕೆ 17 ರೌಂಡ್ಸ್ ಗಳಲ್ಲಿ ಮತ್ತು ರಾಣೆಬೆನ್ನೂರು ಕ್ಷೇತ್ರದ ಮತ ಎಣಿಕೆ 19 ರೌಂಡ್ಸ್ ಗಳಲ್ಲಿ ನಡೆಯಲಿದೆ. ಮತ ಎಣಿಕೆಗೆ ಪ್ರತಿ ಕೊಠಡಿಯಲ್ಲಿ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಯಾರಿಗೆ ಗೆಲುವು ಅನ್ನೋದು ಸ್ಪಷ್ಟವಾಗಲಿದೆ.

  • ಮಗನನ್ನು ಉಲ್ಟಾ ನೇತುಹಾಕಿ, ಚಪ್ಪಲಿ-ಬೆಲ್ಟ್ ನಿಂದ ರಕ್ತ ಬರುವಂತೆ ಥಳಿಸಿದ ನಿರ್ದಯಿ ತಂದೆ

    ಮಗನನ್ನು ಉಲ್ಟಾ ನೇತುಹಾಕಿ, ಚಪ್ಪಲಿ-ಬೆಲ್ಟ್ ನಿಂದ ರಕ್ತ ಬರುವಂತೆ ಥಳಿಸಿದ ನಿರ್ದಯಿ ತಂದೆ

    ಭೋಪಾಲ್: ನಿರ್ದಯಿ ಮಲತಂದೆಯೊಬ್ಬ 3 ವರ್ಷದ ಮಗನನ್ನು ತಲೆಕೆಳಗಾಗಿ ನೇತು ಹಾಕಿ ರಕ್ತ ಬರುವಂತೆ ಹೊಡೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಶಾಜಾಪುರ್‍ನಲ್ಲಿ ನಡೆದಿದೆ.

    ನೆರೆಹೊರೆಯವರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ. ಬಾಲಕ ಮಾಡಿದ ತಪ್ಪಾದರೂ ಏನು ಅಂದ್ರಾ? ಆತನಿಗೆ 10ವರೆಗೆ ಸಂಖ್ಯೆ ಎಣಿಸಲು ಬರುತ್ತಿರಲಿಲ್ಲ. ಇಷ್ಟಕ್ಕೇ ಪಾಪಿ ತಂದೆ ಮೃಗದ ರೀತಿ ವರ್ತಿಸಿದ್ದಾನೆ. ಬಾಲಕನ ತಾಯಿ ಮಧ್ಯಪ್ರವೇಶಿಸಲು ಯತ್ನಿಸಿದರಾದ್ರೂ ಆಕೆಗೂ ಹೊಡೆತ ಬಿದ್ದಿದೆ. ನೆರೆಹೊರೆಯವರು ಕೂಡ ಬಾಲಕನನ್ನು ರಕ್ಷಿಸಲು ಯತ್ನಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ.

    ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಅವರು ಸ್ಥಳಕ್ಕೆ ಬಂದ ಕೂಡಲೇ ರಾಕ್ಷಸ ತಂದೆ ಪರಾರಿಯಾಗಿದ್ದಾನೆ. ತಂದೆಯ ಹೊಡೆತದಿಂದ ಗಾಯಗಳಾಗಿ ರಕ್ತಸ್ರಾವವಾಗುತ್ತಿದ್ದ ಬಾಲಕನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಬಾಲಕನ ಮೈಮೇಲಿನ ಗಾಯಗಳನ್ನ ನೋಡಿದ್ರೆ ಆತನಿಗೆ ನೀಡಲಾದ ಕಿರುಕುಳದ ಬಗ್ಗೆ ಗೊತ್ತಾಗುತ್ತದೆ. ಬಾಲಕನ ಪರಿಸ್ಥಿತಿ ಮನಕಲಕುವಂತಿದೆ.

    ನಡೆದಿದ್ದೇನು?: ಬಾಲಕ ರಾಜ್‍ಗೆ 10 ವರೆಗೆ ಎಣಿಸುವಂತೆ ತಂದೆ ಧರ್ಮೇಂದ್ರ ಹೇಳಿದ್ದಾನೆ. ಆದ್ರೆ ಬಾಲಕನಿಗೆ ಎಣಿಸಲು ಬಂದಿಲ್ಲ. ಇಷ್ಟಕ್ಕೇ ರೌದ್ರಾವತಾರ ತಾಳಿದ ಧರ್ಮೇಂದ್ರ 3 ವರ್ಷದ ಬಾಲಕನನ್ನ ತಲೆಕೆಳಗಾಗಿ ನೇತು ಹಾಕಿ ಮನಬಂದಂತೆ ಹೊಡೆದಿದ್ದಾನೆ. ತಾಯಿ ಬುಲ್‍ಬುಲ್ ಮಧ್ಯಪ್ರವೇಶಿಸಿದಾಗ ಆಕೆಗೂ ಥಳಿಸಿದ್ದಾನೆ. ಬುಲ್‍ಬುಲ್ ಕಿರುಚಾಟವನ್ನು ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದು, ಧರ್ಮೇಂದ್ರ ಅವರನ್ನೂ ಹೊರಕಳಿಸಿದ್ದಾನೆ.

    ಧರ್ಮೇಂದ್ರನ ವರ್ತನೆ ಮಿತಿಮೀರಿ ಮುಗ್ಧ ಬಾಲಕನ ಮೇಲೆ ಕಿರುಕುಳ ನೀಡ್ತಿದ್ದನ್ನು ನೋಡಿ ಸ್ಥಳೀಯರು 100ಕ್ಕೆ ಕರೆ ಮಾಡಿದ್ದಾರೆ. ಪೊಲೀಸರು ಬಂದ ಕೂಡಲೇ ಧರ್ಮೇಂದ್ರ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ತಲೆ, ಕಣ್ಣು, ತುಟಿ ಹಾಗೂ ಹೊಟ್ಟೆಯ ಭಾಗದಲ್ಲಿ ಗಾಯಗಳಾಗಿ ರಕ್ತಸ್ರಾವವಾಗ್ತಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸದ್ಯ ಬಾಲಕ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

    ನಿರ್ದಯಿ ತಂದೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತನ್ನ ಗಂಡನಿಗೆ ಮತ್ತೊಬ್ಬ ಹೆಂಡತಿಯಿದ್ದಾಳೆ ಎಂದು ಬುಲ್‍ಬುಲ್ ಹೇಳಿದ್ದಾರೆ. ಗಂಡನ ಕಿರುಕುಳದ ಬಗ್ಗೆ ಈ ಹಿಂದೆಯೂ ಪೊಲೀಸರಿಗೆ ದೂರು ನೀಡಿದ್ದ ಎಂದು ಅವರು ತಿಳಿಸಿದ್ದಾರೆ.

  • ದೆಹಲಿ ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ: ಬಿಜೆಪಿಗೆ ಆರಂಭಿಕ ಮುನ್ನಡೆ, 3ನೇ ಸ್ಥಾನದಲ್ಲಿ ಆಪ್

    ದೆಹಲಿ ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ: ಬಿಜೆಪಿಗೆ ಆರಂಭಿಕ ಮುನ್ನಡೆ, 3ನೇ ಸ್ಥಾನದಲ್ಲಿ ಆಪ್

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮೂರು ಮಹಾನಗರ ಪಾಲಿಕೆಗಳಿಗೆ ಇದೇ 23ಕ್ಕೆ ಚುನಾವಣೆ ನಡೆದಿತ್ತು. ಇವತ್ತು ಅದರ ಫಲಿತಾಂಶ ಹೊರಬರಲಿದೆ.

    ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಬೃಹತ್ ಆಗಿರೋ ಕಾರಣ ಉತ್ತಮ ಆಡಳಿತ ಮತ್ತು ನಿರ್ವಹಣೆ ದೃಷ್ಟಿಯಲ್ಲಿ 2012ರಲ್ಲಿ ಮೂರು ಮಹಾನಗರ ಪಾಲಿಕೆಗಳನ್ನಾಗಿ ವಿಭಜಿಸಲಾಯ್ತು. ಅವುಗಳೆಂದರೆ ಉತ್ತರ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿ ಮಹಾನಗರ ಪಾಲಿಕೆ. ಮೂರು ಕಾರ್ಪೊರೇಷನ್‍ಗಳಲ್ಲಿ ಒಟ್ಟು 272 ಕಾರ್ಪೊರೇಟರ್‍ಗಳಿದ್ದಾರೆ. ಒಟ್ಟು ವಾರ್ಡ್‍ಗಳ ಸಂಖ್ಯೆ 272.

    ಕಳೆದ 14 ವರ್ಷಗಳಿಂದ ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆಡಳಿತರೂಢ ಆಪ್‍ಗೆ ಭಾರೀ ಮುಖಭಂಗವಾಗ್ತಿದೆ. ಮತ ಎಣಿಕೆ ಕಾರ್ಯ 8 ಗಂಟೆಗೆ ಆರಂಭವಾಗಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.

    ಇದನ್ನೂ ಓದಿ: ಅಂಕಿ ಅಂಶಗಳಲ್ಲಿ ದೆಹಲಿ ದರ್ಬಾರ್: ಈ ಬಾರಿ ಗದ್ದುಗೆ ಯಾರಿಗೆ?