Tag: Counterfeit note

  • ನಕಲಿ ನೋಟು ದಂಧೆ – ಜನರಿಗೆ ಪಂಗನಾಮ ಹಾಕುತ್ತಿದ್ದ ವಂಚಕರ ಬಂಧನ

    ನಕಲಿ ನೋಟು ದಂಧೆ – ಜನರಿಗೆ ಪಂಗನಾಮ ಹಾಕುತ್ತಿದ್ದ ವಂಚಕರ ಬಂಧನ

    ಚಿಕ್ಕೋಡಿ: ನಕಲಿ ನೋಟು ಮುದ್ರಣ ಇಟ್ಟುಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹಣ ಡಬಲ್, ತ್ರಿಬಲ್ ಮಾಡುವುದಾಗಿ ಜನರಿಗೆ ವಂಚನೆ ಮಾಡುತ್ತಿದ್ದ, ಖದೀಮರನ್ನು ಬಂಧಿಸಿದ್ದಾರೆ. ಗೋಕಾಕ ತಾಲೂಕಿನ ಘಟಪ್ರಭಾ ಮೂಲದ ಆಸೀಫ್ ಬಳೆಗಾರ್(26), ಗಜಾನನ ನಾಯಕ(31), ಸಲೀಲ್ ಸೈಯದ್(25) ಬಂಧಿತರು. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ರಮೇಶ್ ಘೋರ್ಪಡೆ ಎಂಬವರಿಗೆ ಈ ಖದೀಮರು ಲಕ್ಷಾಂತರ ರೂ. ಹಣ ಪಂಗನಾಮ ಹಾಕಿದ್ದರು. ವಂಚನೆಗೆ ಒಳಗಾದ ರಮೇಶ್ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳಿಂದ ನೋಟು ಮುದ್ರಣ ಯಂತ್ರ ಸೇರಿ ಕಟ್ಟಿಂಗ್ ಬಾಕ್ಸ್, ವಿದ್ಯುತ್ ಸಂಬಂಧಿತ ವಸ್ತುಗಳು, ಬಿಳಿ ಕಾಗದ ಪತ್ರಗಳು, 59,000 ಸಾವಿರ ನಗದು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ

  • ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಜಾಲ ಬೇಧಿಸಿದ ಪೊಲೀಸರು

    ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಜಾಲ ಬೇಧಿಸಿದ ಪೊಲೀಸರು

    ಬೆಂಗಳೂರು: ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಜಾಲವನ್ನು ಸೂರ್ಯಸಿಟಿ ಪೊಲೀಸರು ಬೇಧಿಸಿದ್ದಾರೆ.

    ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಸುರೇಶ್ ಅಲಿಯಾಸ್ ನಂಜಪ್ಪ ಹಾಗೂ ನರೇಶ್ ಅಲಿಯಾಸ್ ಜೋಗರಾಂನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ ಮಷೀನ್ ಹಾಗೂ 6 ಸಾವಿರ ರೂ. ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 100, 200 ಹಾಗೂ 500 ಮುಖಬೆಲೆಯ ನಕಲಿ ನೋಟುಗಳು ಇವೆ.

    ವಂಚಕರು ಕಲರ್ ಪ್ರಿಂಟಿಂಗ್ ಮಷೀನ್ ಮೂಲಕ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದರು. ಸಂತೆ ಸೇರಿದಂತೆ ಗದ್ದಲ ಇರುತ್ತಿದ್ದ ಅಂಗಡಿಗಳಿಗೆ ನೋಟನ್ನು ನೀಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೂರ್ಯನಗರ ಠಾಣೆಯ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

  • ಖೋಟಾನೋಟು ತಯಾರು ಮಾಡ್ತಿದ್ದ ಆರೋಪಿಗಳು ಅಂದರ್- 2 ಕೋಟಿ ನಕಲಿ ನೋಟು ವಶಕ್ಕೆ

    ಖೋಟಾನೋಟು ತಯಾರು ಮಾಡ್ತಿದ್ದ ಆರೋಪಿಗಳು ಅಂದರ್- 2 ಕೋಟಿ ನಕಲಿ ನೋಟು ವಶಕ್ಕೆ

    ಬೆಂಗಳೂರು: ಖೋಟಾನೋಟು ತಯಾರಿಸುತ್ತಿದ್ದ ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಪಾದರಾಯನಪುರ ನಿವಾಸಿ ಗುಂಡು ಇಮ್ರಾನ್ ಹಾಗೂ ಮುಬಾರ್ ಬಂಧಿತ ಆರೋಪಿಗಳಾಗಿದ್ದು, ಬಂಧಿತನಿಂದ ನಕಲಿ ನೋಟು ತಯಾರು ಮಾಡುವ ಯಂತ್ರ ಮತ್ತು ನಕಲಿ ನೋಟು ವಶಪಡಿಸಿಕೊಳ್ಳಲಾಗಿದೆ. ಸುಮಾರು ಎರಡು ಕೋಟಿ ರೂ. ಬೆಲೆ ಬಾಳುವ ನಕಲಿ ನೋಟು ವಶಕ್ಕೆ ಪಡೆಯಲಾಗಿದೆ. 2000 ಮತ್ತು 200 ರೂ. ನ ಪಿಂಕ್ ನಕಲಿ ನೋಟುಗಳನ್ನು ಆರೋಪಿ ತಯಾರಿಸುತ್ತಿದ್ದ. ಬೆಂಗಳೂರಿನಲ್ಲಿ ನಾಲ್ಕು ಕಡೆ ನೋಟು ತಯಾರು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಪಾದರಾಯನಪುರದ ಅರಾಫತ್ ನಗರದಲ್ಲಿನಲ್ಲಿ ಘಟಕದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಖೋಟಾನೋಟು ದಂಧೆ ಬಗ್ಗೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ.

    ಬಿಲ್ ಪೇಪರ್ ಮೂಲಕ ಪ್ರಿಂಟರ್ ಬಳಸಿ ನೋಟ್ ತಯಾರಿಸಲಾಗುತ್ತುತ್ತು. ಅರಾಫತ್ ನಗರದ ಮನೆಯಲ್ಲಿ ಪ್ರಿಂಟರ್ ಬಳಸಿ ನೂರು ರೂ. ಮುಖ ಬೆಲೆಯ ನಕಲಿ ನೋಟ್ ತಯಾರಿಕೆಯಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಅರಾಫತ್ ನಗರದ ದಾಳಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಮುಂದುವರೆಸಿದ್ದಾರೆ. ವಿಲ್ಸನ್ ಗಾರ್ಡನ್ ಇನ್ಸ್ ಪೆಕ್ಟರ್ ಶಂಕರಾಚಾರಿ ನೃತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸದ್ಯ 20 ಶೀಟ್ ಖೋಟಾ ನೋಟುಗಳು ಪತ್ತೆಯಾಗಿವೆ. ಒಂದು ಶೀಟ್ ನಲ್ಲಿ ಎರಡು ಹಾಗೂ ಮೂರು ಖೋಟಾ ನೋಟುಗಳಿವೆ. ಒಟ್ಟಾರೆ ಪತ್ತೆಯಾದ ನೋಟುಗಳನ್ನು ಪೊಲೀಸರು ಲೆಕ್ಕ ಹಾಕುತ್ತಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಖೋಟಾ ನೋಟು ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಜಮಾಲ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಜಮಾಲ್ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಆಟೋ ಶುಲ್ಕ 100 ರೂ. ಮುಖ ಬೆಲೆಯ ಖೋಟಾ ನೋಟನ್ನು ಜಮಾಲ್ ನೀಡಿದ್ದ. ಅನುಮಾನಗೊಂಡ ಆಟೋ ಚಾಲಕ ಠಾಣೆಗೆ ಕರೆತಂದಿದ್ದ. ಪರಿಶೀಲನೆ ವೇಳೆ ಖೋಟಾ ನೋಟು ಎಂಬುದು ಪತ್ತೆಯಾಗಿತ್ತು. ವಿಲ್ಸನ್ ಗಾರ್ಡನ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.