Tag: costume

  • ಸಮಂತಾ ಇಷ್ಟ ಪಡ್ತೀರಾ, ನನಗೇನಾಗಿದೆ ಉರ್ಫಿ ಪ್ರಶ್ನೆ

    ಸಮಂತಾ ಇಷ್ಟ ಪಡ್ತೀರಾ, ನನಗೇನಾಗಿದೆ ಉರ್ಫಿ ಪ್ರಶ್ನೆ

    ಹಾಟ್ ಫೋಟೋಗಳಿಂದಾಗಿಯೇ ಸಖತ್ ಫೇಮಸ್ ಆಗಿರುವ ಉರ್ಫಿ ಜಾವೇದ್, ಕೊಂಚ ಗರಂ ಆಗಿದ್ದಾರೆ. ತಮ್ಮ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರನ್ನು ತುಸು ಹೆಚ್ಚೆ ತರಾಟೆಗೆ ತಗೆದುಕೊಂಡಿದ್ದಾರೆ. ಟ್ರಾನ್ಸಪರೆಂಟ್ ಬಟ್ಟೆ ಧರಿಸಿದಾಗಿ ಕೆಲವರು ‘ಸೊಳ್ಳೆ ಪರದೆ ಧರಿಸಿದ್ದಾಳೆ’ ಎಂದು ಕಾಮೆಂಟ್ ಮಾಡಿ, ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಾರಂತೆ. ಅಂಥವರಿಗಾಗಿಯೇ ಉರ್ಫಿ ಮರುತ್ತರ ನೀಡಿದ್ದಾರೆ. ಜತೆಗೆ ಕೆಲವರಿಗೆ ಪ್ರಶ್ನೆಯನ್ನೂ ಮಾಡಿದ್ದಾರೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ಬಟ್ಟೆ ಧರಿಸುವುದು ನನ್ನ ಆಕೆ. ನನ್ನ ದೇಹಕ್ಕೆ ಯಾವ ರೀತಿಯ ಉಡುಪುಗಳು ಒಪ್ಪುತ್ತವೆಯೇ ಅಂತಹ ಡ್ರೆಸ್ ಅನ್ನು ನಾನು ಹಾಕಿಕೊಳ್ಳುತ್ತೇನೆ. ನನ್ನ ಬಟ್ಟೆ ನನ್ನ ಇಷ್ಟ ನೀವೇಕೆ ಹೀಗೆ ಉರಿದುಕೊಳ್ಳುತ್ತೀರಿ ಎಂದು ನೇರವಾಗಿಯೇ ಉರ್ಫಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ನಟಿ ಸಮಂತ ಅವರು ಟ್ರಾನ್ಸಪರೆಂಟ್ ಬಟ್ಟೆ ಹಾಕಿದಾಗ ‘ವ್ಹಾ.. ಸೂಪರ್.. ಸುಂದರಿ’ ಅಂತೆಲ್ಲ ಕಾಮೆಂಟ್ ಮಾಡುತ್ತಿರಿ. ನನಗಾದರೆ ಯಾಕೆ ಹೀಗೆ ಹೀಯಾಳಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಉರ್ಫಿ ಇತ್ತೀಚಿಗೆ ತುಸು ಹೆಚ್ಚೆ ಅನ್ನುವಂತೆ ಗ್ಲಾಮರೆಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಅರೆಬರೆ ಕಾಸ್ಟ್ಯೂಮ್ ನಿಂದಾಗಿಯೇ ಫೇಮಸ್ ಆಗುತ್ತಿದ್ದಾರೆ. ಉರ್ಫಿ ತೊಡುವ ಬಟ್ಟೆಗಳು ಕೂಡ ಟ್ರೋಲ್ ಆಗುತ್ತಿವೆ. ಹೀಗಾಗಿ ಉರ್ಫಿ ಗರಂ ಆಗಿದ್ದಾರೆ. ಸ್ಟಾರ್ ನಟಿಯರಿಗೆ ಕೊಡುವ ಗೌರವವನ್ನು ನನಗೂ ಕೊಡಿ ಎಂದು ಅವರು ಕೇಳಿಕೊಂಡಿದ್ದಾರೆ. ಯಾರೇ ಟ್ರೋಲ್ ಮಾಡಿದರೂ, ಡೋಂಟ್ ಕೇರ್ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್

    ಈವರೆಗೂ ಸಾವಿರಕ್ಕೂ ಹೆಚ್ಚು ಕಾಸ್ಟ್ಯೂಮ್ ಧರಿಸಿದ ಕೀರ್ತಿ ಉರ್ಫಿ ಅವರಿಗೆ ಸಲ್ಲಬೇಕಂತೆ. ಒಂದೊಂದು ಕಾಸ್ಟ್ಯೂಮ್ ರೆಡಿ ಮಾಡುವಾಗಲೂ ಅವರು ಸಖತ್ ತಲೆ ಕೆಡಿಸಿಕೊಳ್ಳುತ್ತಾರಂತೆ. ಅದರ ಹಿಂದೆ ದೊಡ್ಡದೊಂದು ಅಧ್ಯಯನವೇ ಇರುತ್ತದಂತೆ. ಹೆಸರಾಂತ ಕಾಸ್ಟ್ಯೂಮ್ ಡಿಸೈನರ್ ಸಲಹೆಯನ್ನೂ ಅವರು ಪಡೆಯುತ್ತಾರಂತೆ.

  • ಕಂಗನಾ ರಣಾವತ್ ಏನಿದು ಅವತಾರ ಎಂದ ನೆಟ್ಟಿಗರು

    ಕಂಗನಾ ರಣಾವತ್ ಏನಿದು ಅವತಾರ ಎಂದ ನೆಟ್ಟಿಗರು

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಬೇಸಿಗೆಯ ಉರಿಬಿಸಿಲಿನಲ್ಲೂ ಅವರ ಅಭಿಮಾನಿಗಳಿಗೆ ಅಭಿಮಾನಿಗಳನ್ನು ಮತ್ತಷ್ಟು ಹಾಟ್ ಹಾಟ್ ಆಗಿ ಇಟ್ಟಿದ್ದಾರೆ. ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಹಾಟ್ ಹಾಟ್ ಆಗಿರುವ ಹೊಸ ಫೋಟೋ ಶೂಟ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಈ ನಡೆಗೆ ಇಡೀ ಅಭಿಮಾನಿ ಪಡೆ ದಂಗಾಗಿದೆ. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

    ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿದ್ದ ಕಂಗನಾ ರಣಾವತ್ ಈ ಬಾರಿ ಹಾಟ್ ಹಾಟ್ ಫೋಟೋ ಕಾರಣದಿಂದಾಗಿ ಪ್ರಚಾರದ ತುತ್ತತುದಿ ಏರಿ ಕೂತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಬಿಟೌನ್ ಕೂಡ ಶಾಕ್ ಆಗಿ ಕೂತಿದೆ. ಕಂಗನಾ ಅವತಾರ ಕಂಡು ಬೆಚ್ಚಿ ಬಿದ್ದಿದೆ.

     

    View this post on Instagram

     

    A post shared by Kangana Dhaakad (@kanganaranaut)

    ಸದ್ಯ ಕಂಗನಾ ರಣಾವತ್ ಲಾಕ್ ಅಪ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಅತೀ ಹೆಚ್ಚು ಸ್ಪರ್ಧಿಗಳಾಗಿದ್ದು ವಿವಾದಿತ ತಾರೆಯರು. ದಿನವೂ ಒಂದಿಲ್ಲೊಂದು ವಿವಾದ ಮಾಡುವ ಮೂಲಕ ಶೋ ಅನ್ನು ಟಾಪ್ ನಲ್ಲಿ ಇಟ್ಟಿದ್ದಾರೆ. ಅವರು ಮಾತ್ರವಲ್ಲ, ಅವರ ಮಾತಿಗೆ ಪ್ರತ್ಯುತ್ತರವಾಗಿ ಮಾತನಾಡುವ ಕಂಗನಾ ಕೂಡ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹೇಳುವ ಮೂಲಕ ಅಚ್ಚರಿ ಮೂಡಿಸುತ್ತಲೇ ಇರುತ್ತಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ಇಂದು ಕಂಗನಾ ರಣಾವತ್ ನಟನೆಯ ‘ಧಾಕಡ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇಂದು ರಿಲಿಸ್ ಆದ ಟ್ರೇಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ರಂಗನಾ ಈ ರೀತಿಯ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೆಲವರು ಈ ಫೋಸ್ಟ್ ಗೆ ಮೆಚ್ಚುಗೆ ಸೂಚಿಸಿದ್ದರೆ, ಇನ್ನೂ ಕೆಲವರು ಇದೆಂಥ ಸಂಸ್ಕೃತಿ ಎಂದು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ.

  • ಪ್ಲಾಸ್ಟಿಕ್ ಸುತ್ತಿಕೊಂಡು ಬಂದ ಉರ್ಫಿ ಜಾವೇದ್ : ಕಾಸ್ಟ್ಯೂಮ್ ಡಿಸೈನರ್ ಹುಡುಕುತ್ತಿದ್ದಾರೆ ನೆಟ್ಟಿಗರು

    ಪ್ಲಾಸ್ಟಿಕ್ ಸುತ್ತಿಕೊಂಡು ಬಂದ ಉರ್ಫಿ ಜಾವೇದ್ : ಕಾಸ್ಟ್ಯೂಮ್ ಡಿಸೈನರ್ ಹುಡುಕುತ್ತಿದ್ದಾರೆ ನೆಟ್ಟಿಗರು

    ದಿನಕ್ಕೊಂದು ವೇಷ ಬದಲಿಸಿಕೊಂಡು ನೆಟ್ಟಿಗರ ಟ್ರೋಲ್ ಗೆ ಗುರಿಯಾಗುವ ಬಾಲಿವುಡ್ ನ ತಾರೆ ಉರ್ಫಿ ಜಾವೇದ್, ಈವರೆಗೂ ತುಂಡುಡುಗೆಯಾದರೂ ತೊಡುತ್ತಿದ್ದರು. ಈಗ ಇನ್ನೂ ಅದ್ವಾನ್ ಡ್ರೆಸ್ ಮಾಡಿಕೊಂಡಿದ್ದಾರೆ. ಒಳ ಉಡುಪುಗಳು ಕಾಣುವಂತೆ ಪ್ಲಾಸ್ಟಿಕ್ ಕವರ್ ನಿಂದ ಡಿಸೈನ್ ಮಾಡಿದ ಕಾಸ್ಟ್ಯೂಮ್ ಹಾಕಿಕೊಂಡಿದ್ದಾರೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ಪ್ರತಿಷ್ಠಿತ ಹೋಟೆಲ್ ವೊಂದರ ಸಮಾರಂಭಕ್ಕೆ ಹೋಗಿರುವ ಉರ್ಫಿ ಕೇವಲ ಪ್ಲಾಸ್ಟಿಕ್ ಕವರ್ ನಿಂದ ತಯಾರಿಸಿದ ಕಾಸ್ಟ್ಯೂಮ್ ಧರಿಸಿ ಬಂದಿದ್ದಾರೆ. ಹೀಗಾಗಿ ನೆಟ್ಟಿಗರು ಉರ್ಫಿಗೆ ಡಿಸೈನ್ ಮಾಡುವ ಕಾಸ್ಟ್ಯೂಮ್ ಡಿಸೈನರ್ ಅನ್ನು ಹುಡುಕುತ್ತಿದ್ದಾರೆ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

     

    View this post on Instagram

     

    A post shared by Urrfii (@urf7i)

    ದಿನಕ್ಕೊಂದು ಕಾಸ್ಟ್ಯೂಮ್ ಹಾಕಿಕೊಳ್ಳುವುದು ಉರ್ಫಿ ಅವರ ಹವ್ಯಾಸಗಳಲ್ಲಿ ಒಂದು. ಈವರೆಗೂ ಅವರು ಕೇವಲ ಒಳ ಉಡುಪು ಕಾಣುವಂತಹ ಬಟ್ಟೆಗಳನ್ನು ಧರಿಸಿರಲಿಲ್ಲ. ಈ ಬಾರಿ ಅದನ್ನೂ ಮಾಡಿದ್ದಾರೆ. ಹಾಗಾಗಿ ಉರ್ಫಿಯ ಮುಂದಿನ ಕಾಸ್ಟ್ಯೂಮ್ ಯಾವುದರಿಂದ ತಯಾರಾಗುತ್ತದೆ ಎಂಬ ಕುತೂಹಲವನ್ನು ಮೂಡಿಸಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಬಾಲಿವುಡ್ ಅಂಗಳದಲ್ಲಿ ಖಡಕ್ ನಟಿ ಎಂದೇ ಖ್ಯಾತಿಯಾದವರು ಉರ್ಫಿ. ತಮಗೆ ಅನಿಸಿದ್ದನ್ನು ಯಾವುದೇ ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ. ಹಾಗೆಯೇ ಉತ್ತರವನ್ನೂ ಕೊಡುತ್ತಾರೆ. ಕಾಸ್ಟ್ಯೂಮ್ ವಿಷಯದಲ್ಲಂತೂ ಖುಲ್ಲಾಂಖುಲ್ಲ ಹೀಗಾಗಿ ಉರ್ಫಿ ಸದ್ಯ ಬಾಲಿವುಡ್ ನ ಸದ್ಯದ ಹಾಟ್ ಟಾಪಿಕ್.

  • ಇದೊಂದು ಬಾಕಿ ಇತ್ತು ಉರ್ಫಿಗೆ : ಹಾಟ್ ಹುಡುಗಿ ಬಿಂದಾಸ್ ಉಡುಪು

    ಇದೊಂದು ಬಾಕಿ ಇತ್ತು ಉರ್ಫಿಗೆ : ಹಾಟ್ ಹುಡುಗಿ ಬಿಂದಾಸ್ ಉಡುಪು

    ಮ್ಮ ಔಟ್‍ ಫಿಟ್ ವಿಚಾರದಲ್ಲಿ ಸದಾ ಸುದ್ದಿ ಆಗುವ ನಟಿ ಉರ್ಫಿ ಜಾವೇದ್, ತಮ್ಮ ಡ್ರೆಸ್ ಗಳಿಂದಾಗಿಯೇ ಸಖತ್ ಟ್ರೋಲ್ ಆಗುತ್ತಾರೆ. ಈ ಹಿಂದೆ ‘ಬಟ್ಟೆ ಎಂದರೆ ನನಗೆ ಅಲರ್ಜಿ’ ಎಂದು ಸ್ಟೇಟ್ ಮೆಂಟ್ ಕೊಟ್ಟು ಕೆಲವರ ಕೆಂಗೆಣ್ಣಿಗೆ ಗುರಿಯಾಗಿದ್ದರು. ವಿವಾದ ಏನೇ ಆದರೂ, ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಇಷ್ಟದ ಬಟ್ಟೆ ಹಾಕಿಕೊಂಡು ಎಂಜಾಯ್ ಮಾಡುತ್ತಾರೆ ಈ ನಟಿ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಇದೀಗ ಮತ್ತೆ ತಮ್ಮ ಕಾಸ್ಟ್ಯೂಮ್ ಕಾರಣಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಅವರು, ತಮ್ಮದೇ ಫೋಟೋ ಇರುವ ಉಡುಪು ಧರಿಸಿ, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದಾರೆ. ಜಾವೇದ್ ತಮ್ಮದೇ ಫೋಟೋಗಳ ಪ್ರಿಂಟ್ ಬಳಸಿ, ಈ ಉಡುಪನ್ನು ತಯಾರಿಸಿದ್ದು, ಇದಕ್ಕೆ ಸ್ಫೂರ್ತಿ ಸೋಷಿಯಲ್ ಮೀಡಿಯಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ‘ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಡಿಸೈನ್ ನನಗೆ ಕಂಡಿತು. ತುಂಬಾ ಹಿಡಿಸಿತು. ನಾನೇಕೆ ಪ್ರಯತ್ನಿಸಬಾರದು ಅನಿಸಿ, ನನಗಿಷ್ಟವಾದ ಫೋಟೋವನ್ನು ಪ್ರಿಂಟ್ ಮಾಡಿಸಿ, ಈ ಉಡುಪು ಸಿದ್ಧಪಡಿಸಿದ್ದೇನೆ. ಹೇಗೆ ಫಲಿತಾಂಶ ಎಂದು ಅಭಿಮಾನಿಗಳನ್ನು ಕೇಳಿದ್ದಾರೆ ಉರ್ಫಿ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಸದಾ ಹಾಟ್ ಹಾಟ್ ಆಗಿಯೇ ಕಾಣಿಸಿಕೊಳ್ಳುವ ಉರ್ಫಿಗೆ ಬಟ್ಟೆ ಡಿಸೈನ್ ಮಾಡೋದು ಯಾರು ಎಂಬ ಚರ್ಚೆ ಕೂಡ ನಡೆದಿದೆ. ಕೆಲವರಂತೂ ಇನ್ನೂ ಮುಂದೆ ಹೋಗಿ, ಉರ್ಫಿಗೆ ಖರ್ಚಿಫಿನಷ್ಟು ಬಟ್ಟೆಯಾದರೆ ಸಾಕು, ಅತ್ಯುತ್ತಮ ಕಾಸ್ಟ್ಯೂಮ್ ರೆಡಿ ಮಾಡಬಹುದು ಎಂದು ಕಾಲೆಳೆದವರೂ ಇದ್ದಾರೆ. ಆದರೆ, ಉರ್ಫಿ ಮಾತ್ರ ಹೊಸ ಹೊಸ ಕಾಸ್ಟ್ಯೂಮ್ ಹಾಕಿಕೊಂಡು, ಬಿಂದಾಸ್ ಆಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾ ಬರುವ ಕಾಮೆಂಟ್ ಗಳನ್ನು ಓದಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

  • ಅರವಿಂದ್ ಕಾಸ್ಟೂಮ್‍ಗೆ ಮ್ಯಾಚಿಂಗ್ ಸೀರೆ ಎತ್ತಿಟ್ಟಿದ್ದ ದಿವ್ಯಾ ಉರುಡುಗ

    ಅರವಿಂದ್ ಕಾಸ್ಟೂಮ್‍ಗೆ ಮ್ಯಾಚಿಂಗ್ ಸೀರೆ ಎತ್ತಿಟ್ಟಿದ್ದ ದಿವ್ಯಾ ಉರುಡುಗ

    ಬಿಗ್‍ಬಾಸ್ ಮನೆಯ ಕೊನೆಯ ದಿನದಂದು ದೊಡ್ಮನೆ ಸ್ಪರ್ಧಿಗಳು ತಮಗೆ ಅರಿವಿಲ್ಲದೇ ಗ್ರಾಂಡ್ ಫಿನಾಲೆಗೆ ರೆಡಿಯಾಗುವಂತೆ ಫುಲ್ ಟಿಪ್ ಟಾಪ್ ಆಗಿ ಮಿಂಚುತ್ತಿದ್ದರು. ಈ ವೇಳೆ ಅರವಿಂದ್ ಧರಿಸಿದ್ದ ಉಡುಪಿಗೆ ಮ್ಯಾಚ್ ಆಗುವಂತಹ ಸೀರೆಯನ್ನು ದಿವ್ಯಾ ಉರುಡುಗ ಎತ್ತಿಟ್ಟಿದ್ದ ವಿಚಾರವನ್ನು ಕಣ್ಮಣಿ ರಿವೀಲ್ ಮಾಡಿದ್ದಾಳೆ.

    ಕಣ್ಮಣಿ ಉಡುಪಿನ ಬಗ್ಗೆ ಮನೆಯ ಸ್ಪರ್ಧಿಗಳೊಂದಿಗೆ ಮಾತನಾಡುವ ವೇಳೆ ಅರವಿಂದ್ ನಿಮ್ಮ ಬಳಿ ಎಷ್ಟು ಬಟ್ಟೆಗಳಿದೆ ಎಂದು ಕೇಳಿದ್ದಾರೆ. ಅದಕ್ಕೆ ಅರವಿಂದ್ ನನ್ನ ಬಳಿ ಈ ಸೀಸನ್ ಮುಗಿಯುವವರೆಗೂ ಹೊಸ ಬಟ್ಟೆಗಳಿದೆ ಎನ್ನುತ್ತಾರೆ. ನಿಮ್ಮ ಬಳಿ ಇರುವ ಸ್ಟಾಕ್‍ಗೂ ನಿಮ್ಮ ಬಳಿ ಇರುವ ಕಾನ್ಫಿಡೆಂಟ್‍ಗೂ ಏನಾದರು ಸಂಬಂಧ ಇದ್ಯಾ ಎಂದು ಪ್ರಶ್ನಿಸಿದಾಗ ಯಾವುದೇ ಸಂಬಂಧವಿಲ್ಲ. ಬರಬೇಕಾದರೆನೇ ನಾನು ಎಲ್ಲ ಬಟ್ಟೆಗಳನ್ನು ತೆಗೆದುಕೊಂಡು ಬಂದಿದ್ದೇನೆ ನನ್ನ ಹತ್ತಿರ ಬಹಳಷ್ಟು ಬಟ್ಟೆಗಳಿದೆ ಎಂದಿದ್ದಾರೆ.

    ನೀವು ಇವತ್ತು ಹಾಕಿಕೊಂಡಿರುವ ಕಾಸ್ಟೂಮ್‍ಗೆ ಮ್ಯಾಚಿಂಗ್ ಸ್ಯಾರಿ ದಿವ್ಯಾ ಎತ್ತಿಟ್ಟಿದ್ದರು ಅಂದಾಗ ಅರವಿಂದ ನಾಚಿಕೆಯಿಂದ ಹೌದು ಎಂದು ಉತ್ತರಿಸುತ್ತಾರೆ. ದಿವ್ಯಾ ವಾಯ್ಸ್ ಕೇಳಿ ಹೇಗೆ ಅನಿಸಿತು ಎಂದಾಗ ಸಖತ್ ಆಗಿತ್ತು. ಬಹಳ ಖುಷಿಯಾಯ್ತು. ಅವಳಿಗೆ ಸ್ವಲ್ಪ ಎನರ್ಜಿ ಬಂದಿದೆ. ಈಗ ಅವಳ ಹೆಲ್ತ್, ರೈಟ್ ಡೈರೆಕ್ಷನ್‍ನಲ್ಲಿದೆ. ನಾವು ಕೇಳಿಕೊಂಡಿದ್ದನ್ನು ಗಮನದಲ್ಲಿಟ್ಟುಕೊಂಡು ಅವಳ ವಾಯ್ಸ್ ನೋಟ್ಸ್ ಕಳುಹಿಸಿದಕ್ಕೆ ನಿಮಗೆ ತುಂಬಾ ಧನ್ಯವಾದ ಎಂದು ತಿಳಿಸಿದರು.

    ವೀಕೆಂಡ್‍ನಲ್ಲಿ ನಾನು ನಾಮಿನೇಟ್ ಆಗಿದ್ದರೂ ನನ್ನ ಪಕ್ಕದಲ್ಲಿ ಕುಳಿತುಕೊಂಡಿರುತ್ತಿದ್ದಳು. ಅವಳ ವಾಯ್ಸ್ ಕೇಳಿ ಬಹಳ ಖುಷಿಯಾಯಿತು ಎಂದಿದ್ದಾರೆ.

  • ಮಡಿಕೇರಿಯಲ್ಲಿ ಶಿವರಾತ್ರಿ – ವೇಷಭೂಷಣ ತೊಟ್ಟು ಹಾಸ್ಯ ಮಾಡಿದ ಮಕ್ಕಳು

    ಮಡಿಕೇರಿಯಲ್ಲಿ ಶಿವರಾತ್ರಿ – ವೇಷಭೂಷಣ ತೊಟ್ಟು ಹಾಸ್ಯ ಮಾಡಿದ ಮಕ್ಕಳು

    ಮಡಿಕೇರಿ: ಶಿವರಾತ್ರಿ ಎಂದರೆ ಸಾಮಾನ್ಯವಾಗಿ ಮನೆಗಳಲ್ಲಿ ಕುಟುಂಬದ ಸದಸ್ಯರು ಹಬ್ಬದ ಅಂಗವಾಗಿ ಜಾಗರಣೆ ಮಾಡುತ್ತಾರೆ. ದೇವಾಲಯಗಳಲ್ಲಿ ಪೂಜೆ ಭಜನೆ ಮಾಡಿ ಶಿವಾರಾಧನೆಯನ್ನು ಮಾಡುತ್ತಾರೆ. ಅದರೆ ಕೊಡಗಿನ ಪುಟಾಣಿಗಳು ಶಿವರಾತ್ರಿಯ ಜಾಗರಣೆಯನ್ನು ವಿಭಿನ್ನವಾಗಿ ಅಚರಣೆ ಮಾಡಿದ್ದಾರೆ.

    ಮಡಿಕೇರಿಯ ಕಲಾ ನಗರ ಸಾಂಸ್ಕ್ರತಿಕ ಕಲಾ ವೇದಿಕೆಯ ವತಿಯಿಂದ ಕಣ್ಮರೆಯಾಗುತ್ತಿರುವ ನಮ್ಮ ಸಂಸ್ಕøತಿ ಆಚರಣೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿವರಾತ್ರಿಯ ಅಂಗವಾಗಿ ಪುಟಾಣಿ ಮಕ್ಕಳು ಸುಮಾರು ಇಪ್ಪತ್ತು ಜನರ ತಂಡ ಮಾಡಿ ವಿವಿಧ ಬಗೆಯ ವೇಷಭೂಷಣ ಧರಿಸಿ ನಗರದ ರಾಘವೇಂದ್ರ ದೇವಾಲಯದ ಬಳಿಯ ನಿವಾಸಿಗಳ ಮನೆ ಮನೆಗೆ, ತೆರಳಿ ಮನೆಯಲ್ಲಿ ಹಾಸ್ಯ ನಾಟಕಗಳನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

    ಹಾಸ್ಯಮಯ ಸವಿ ನೆನಪನ್ನು ಮರೆಯಲು ಸಾಧ್ಯವೇ ಇಲ್ಲದ ಹಾಗೆ ಸಾರ್ವಜನಿಕರ ಮನದಲ್ಲಿ ಉಲ್ಲಾಸ ಮೂಡಿಸಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಅಂದರೆ ತಾಯಿ ತಮ್ಮ ಮಕ್ಕಳನ್ನು ಕೂಡ ಗುರುತಿಸಲಾದ ರೀತಿಯಲ್ಲಿ ಪುಟಾಣಿಗಳು ವೇಷಭೂಷಣ ಹಾಕಿ ರಂಜಿಸಿದ್ದಾರೆ.

  • ಪುಕ್ಕದ ಕಿರೀಟ ತೊಟ್ಟು ಸ್ಟೇಜ್ ಮೇಲೆ ಬಂದ ರೂಪದರ್ಶಿ- ಕಾಸ್ಟ್ಯೂಮ್‍ ಗೆ ಬೆಂಕಿ ಹೊತ್ತಿಕೊಂಡ್ರೂ ಗೊತ್ತಾಗ್ಲಿಲ್ಲ!

    ಪುಕ್ಕದ ಕಿರೀಟ ತೊಟ್ಟು ಸ್ಟೇಜ್ ಮೇಲೆ ಬಂದ ರೂಪದರ್ಶಿ- ಕಾಸ್ಟ್ಯೂಮ್‍ ಗೆ ಬೆಂಕಿ ಹೊತ್ತಿಕೊಂಡ್ರೂ ಗೊತ್ತಾಗ್ಲಿಲ್ಲ!

    ಸ್ಯಾನ್ ಸಾಲ್ವಡೋರ್: ಸೌಂದರ್ಯ ಸ್ಪರ್ಧೆಯೊಂದಲ್ಲಿ ರೂಪದರ್ಶಿಯ ಕಾಸ್ಟ್ಯೂಮ್‍ಗೆ ಬೆಂಕಿ ಹೊತ್ತಿಕೊಂಡ ಘಟನೆ ಮಧ್ಯ ಅಮೆರಿಕದ ಎಲ್ ಸಾಲ್ವಡೋರ್‍ನಲ್ಲಿ ನಡೆದಿದೆ. ಅದೃಷ್ಟವಶಾತ್ ಆಕೆ ಅಗ್ನಿ ಅವಘಡದಿಂದ ಪಾರಾಗಿದ್ದಾರೆ.

    ದೊಡ್ಡದಾದ ಪುಕ್ಕದ ಕಿರೀಟ ತೊಟ್ಟು ವೇದಿಕೆ ಮೇಲೆ ರೂಪದರ್ಶಿ ಬಂದ್ರು. ವೇದಿಕೆಯ ಎರಡೂ ಬದಿಯಲ್ಲಿ ಯುವಕರಿಬ್ಬರು ಪಂಜು ಹಿಡಿದು ನಿಂತಿದ್ರು. ರೂಪದರ್ಶಿ ಹೆಜ್ಜೆ ಹಾಕುವಾಗ ಒಂದು ಪಂಜಿಗೆ ತೀರಾ ಸಮೀಪ ಹೋಗಿದ್ದು, ಪುಕ್ಕಕ್ಕೆ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಕಿರೀಟವನ್ನ ಆವರಿಸಿದೆ.

    ತನ್ನ ಕಾಸ್ಟ್ಯೂಮ್‍ಗೆ ಬಂಕಿ ಹೊತ್ತಿಕೊಂಡಿದ್ದು ಗೊತ್ತಾಗದೆ ರೂಪದರ್ಶಿ ತನ್ನ ನಡಿಗೆ ಮುಂದುವರೆಸಿದ್ದರು. ಅದೃಷ್ಟವಶಾತ್ ಅಲ್ಲಿದ್ದವರು ಇದನ್ನ ನೋಡಿ ಕೂಡಲೇ ರೂಪದರ್ಶಿಯ ನೆರವಿಗೆ ಧಾವಿಸಿದ್ರು. ಇಬ್ಬರು ವ್ಯಕ್ತಿಗಳು ಬರಿಗೈಯಲ್ಲೇ ಬೆಂಕಿಯನ್ನ ಆರಿಸಿದ್ದು, ಇನ್ನಿತರರು ಸ್ಪರ್ಧಿಯ ತಲೆಯಿಂದ ಉಳಿದ ಪುಕ್ಕವನ್ನ ತೆಗೆಸಿದ್ರು.

    ಘಟನೆಯಲ್ಲಿ ರೂಪದರ್ಶಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದು ವಿಡಿಯೋದಲ್ಲಿ ಕಾಣುತ್ತದೆ. ಬಳಿಕ ಆಕೆ ವೇದಿಕೆಯಿಂದ ಹೊರನಡೆದಿದ್ದಾರೆ. ಮಾಧ್ಯಮವೊಂದರ ಪ್ರಕಾರ ಕೆಲ ಸಮಯದ ನಂತರ ಸೌಂದರ್ಯ ಸ್ಪರ್ಧೆಯನ್ನು ಮುಂದುವರೆಸಲಾಗಿದೆ.

    https://www.youtube.com/watch?v=jtJt1lSTbHQ