Tag: Costume designer

  • ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ನಿಧನ

    ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ನಿಧನ

    ಚಿತ್ರರಂಗದಲ್ಲಿ ಪೋಷಕ ನಟನಾಗಿ, ವಸ್ತ್ರಾಲಂಕಾರ ಕಲಾವಿದನಾಗಿ ಗುರುತಿಸಿಕೊಂಡಿದ್ದ ಗಂಡಸಿ ನಾಗರಾಜ್ (Gandasi Nagaraj) ಇಹಲೋಕ ತ್ಯಜಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಗಂಡಸಿ ನಾಗರಾಜ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ದೇವೇಗೌಡ ಆಸ್ಪತ್ರೆಯಲ್ಲಿ (Devegowda Hospital) ನಟ ನಿಧನರಾಗಿದ್ದಾರೆ. ಇದನ್ನೂ ಓದಿ: ರವಿಚಂದ್ರನ್ ಪುತ್ರ ವಿಕ್ರಮ್ ನಟನೆಯ ಎರಡನೇ ಸಿನಿಮಾಗೆ ಮುಹೂರ್ತ

    ವಸ್ತ್ರಾಲಂಕಾರ ಕಲಾವಿದನಾಗಿ ಹಾಗೂ ನಟನಾಗಿ ಕೆಲಸ ಮಾಡಿದ್ದ ಗಂಡಸಿ ನಾಗರಾಜ್ ಅವರು ನಿಧನರಾಗಿದ್ದಾರೆ. ಭಾನುವಾರ (ಡಿ.11) ರಾತ್ರಿ 10:30ಕ್ಕೆ ಅವರು ಕೊನೆಯುಸಿರು ಎಳೆದರು. ಚಿತ್ರರಂಗದ ಆರಂಭದಲ್ಲಿ ಅವಕಾಶ ಸಿಗದೇ ಇದ್ದಾಗ ಟೈಲರಿಂಗ್ ಮಾಡಿಕೊಂಡಿದ್ದರು. ನಂತರ ಅವರಿಗೆ ಕಾಸ್ಟ್ಯೂಮರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಬಳಿಕ 40 ವರ್ಷಗಳ ಕಾಲ ಗಂಡಸಿ ನಾಗರಾಜ್ ಅವರು ಕಾಸ್ಟ್ಯೂಮರ್ ಆಗಿ ಸೈ ಎನಿಸಿಕೊಂಡಿದ್ದರು. ನವರಸ ನಾಯಕ ಜಗ್ಗೇಶ್ (Actor Jaggesh) ಅವರ ಆಪ್ತ ವಸ್ತ್ರಾಲಂಕಾರ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು. ಜಗ್ಗೇಶ್ ನಟನೆಯ ಅಧಿಕ ಸಿನಿಮಾಗಳಿಗೆ ಗಂಡಸಿ ನಾಗರಾಜ್ ಕೆಲಸ ಮಾಡಿದ್ದರು.

    ಇನ್ನೂ ಗಂಡಸಿ ನಾಗರಾಜ್ ಅವರಿಗೆ 57 ವರ್ಷ ವಯಸ್ಸಾಗಿತ್ತು. ಕಳೆದ 5 ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿ ಆಗದೇ ಪದ್ಮನಾಭ ನಗರದ ದೇವೇಗೌಡ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು (ಡಿ.12) ಮಧ್ಯಾಹ್ನ 3:30ರ ಸುಮಾರಿಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

    ಇನ್ನೂ ಗಂಡಸಿ ನಾಗರಾಜ್ ರವರು ನಟಿಸಿ ಕೆಲಸ ಮಾಡಿದ ಚಿತ್ರಗಳು ಸರ್ವರ್ ಸೋಮಣ್ಣ ,ಸೂಪರ್ ನನ್ನ ಮಗ,ಬಂಡ ನನ್ನ ಗಂಡ, ಗುಂಡನ ಮದುವೆ, ರಾಯರ ಮಗ, ಹಬ್ಬ ,ಶ್ರೀ ಮಂಜುನಾಥ ,ಮದುವೆ,ಮಾತಾಡು ಮಾತಾಡು ಮಲ್ಲಿಗೆ, ಪರ್ವ,ರಾಜಹುಲಿ, ಶಿಕಾರಿ ಹೀಗೆ 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. `ಕೋಟಿಗೊಬ್ಬ 3′ ಇವರ ಕೊನೆಯ ಚಿತ್ರವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ಖ್ಯಾತ ಗಾಯಕನ ಮೇಲೆ ಮತ್ತೆ ರೇಪ್ ಆರೋಪ: ಎಫ್.ಐ.ಆರ್ ದಾಖಲು

    ಬಾಲಿವುಡ್ ಖ್ಯಾತ ಗಾಯಕನ ಮೇಲೆ ಮತ್ತೆ ರೇಪ್ ಆರೋಪ: ಎಫ್.ಐ.ಆರ್ ದಾಖಲು

    ರಿಯಾಲಿಟಿ ಶೋ ಮೂಲಕ ಗಾಯನ ಪ್ರಪಂಚಕ್ಕೆ ಪರಿಚಯವಾದ, ಇದೀಗ ಬಾಲಿವುಡ್ ನಲ್ಲಿ ಸಖತ್ ಫೇಮಸ್ಸೂ ಆಗಿರುವ ಸಿಂಗರ್ ರಾಹುಲ್ ಜೈನ್ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಕೆಲಸದ ನೆಪದಲ್ಲಿ ರಾಹುಲ್ ಜೈನ್, ಮಹಿಳೆಯೊಬ್ಬರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಅತ್ಯಾಚಾರ ಎಸೆಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ರಾಹುಲ್ ಮೇಲೆ ಅವರು ದೂರನ್ನೂ ದಾಖಲಿಸಿದ್ದಾರೆ.

    ನಾನು ಅನೇಕ ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತೇನೆ. ಇದೇ ಆಗಸ್ಟ್ 11 ರಂದು ರಾಹುಲ್ ಜೈನ್, ತಮಗೂ ಪರ್ಸನಲ್ ಆಗಿ ಕಾಸ್ಟ್ಯೂಮ್ ಡಿಸೈನ್ ಮಾಡಬೇಕು ಎಂದು ಕೆಲಸದ ನೆಪದಲ್ಲಿ ನನ್ನನ್ನು ತಮ್ಮ ಫ್ಲ್ಯಾಟ್ ಗೆ ಕರೆದರು. ಅವರ ಮಾತನ್ನು ನಿಜವೆಂದು ನಂಬಿಕೊಂಡು ನಾನೂ ಹೋದೆ. ಅವರು ನನ್ನನ್ನು ತಮ್ಮ ಬೆಡ್ ರೂಮ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ ಎಂದು ಮುಂಬೈನಲ್ಲಿ ಮಹಿಳೆ ದೂರು ನೀಡಿದ್ದಾರೆ. ಈ ಕುರಿತಂತೆ ಈಗಾಗಲೇ ಮುಂಬೈ ಪೊಲೀಸ್ ತನಿಖೆಗೆ ಇಳಿದಿದ್ದಾರೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    ಈ ಕುರಿತು ರಾಹುಲ್ ಜೈನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಮಹಿಳೆಯರು ನನ್ನ ಮೇಲೆ ಈ ರೀತಿಯ ದೂರು ನೀಡುವುದು ಹೊಸದಲ್ಲ. ಈ ಹಿಂದೆಯೂ ಒಬ್ಬರು ದೂರು ಕೊಟ್ಟಿದ್ದರು. ಆದರೆ, ನಾನು ಅದರಲ್ಲಿ ಗೆದ್ದೆ. ನನ್ನಿಂದ ತಪ್ಪಾಗಿಲ್ಲ ಅಂತ ನನಗೆ ನ್ಯಾಯ ಸಿಕ್ಕಿತು. ಈಗ ಆರೋಪ ಮಾಡಿರುವ ಹುಡುಗಿ ಯಾರೆಂದು ನನಗೆ ಗೊತ್ತಿಲ್ಲ. ಈ ಹಿಂದೆ ದೂರು ಕೊಟ್ಟಿರುವ ಹುಡುಗಿಗೂ ಈಕೆಗೂ ಏನಾದರೂ ಸಂಬಂಧ ಇದೆಯಾ ತನಿಖೆ ಮಾಡಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಸ್ಟೈಲ್ ನನ್ನ ವ್ಯಕ್ತಿತ್ವದ ಒಂದು ಭಾಗ: ಯಶ್

    ನನ್ನ ಸ್ಟೈಲ್ ನನ್ನ ವ್ಯಕ್ತಿತ್ವದ ಒಂದು ಭಾಗ: ಯಶ್

    ಬೆಂಗಳೂರು: ನನ್ನ ಸ್ಟೈಲ್ ನನ್ನ ವ್ಯಕ್ತಿತ್ವದ ಒಂದು ಭಾಗ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಭಾಷೆ ಅಷ್ಟೇ ಅಲ್ಲದೆ ತೆಲಗು, ತಮಿಳು ಸೇರಿದಂತೆ ವಿವಿಧ ಭಾಷೆಯಲ್ಲಿ ತೆರೆಕಂಡ ಕೆಜಿಎಫ್ ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್ ಕಡ್ಡ ಬಿಟ್ಟು ಸೂಪರ್ ಲುಕ್‍ನಲ್ಲಿ ಕಾಣಿಸುತ್ತಿದ್ದಾರೆ. ಅವರ ಈ ಸ್ಟೈಲ್‍ಗೆ ಅನೇಕ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಅಭಿಮಾನಿಗಳ ಮೆಚ್ಚುಗೆಗೆ ಯಶ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ. ನಾನು ನಿಮ್ಮ ಸಂದೇಶವನ್ನು ಓದುತ್ತೇನೆ. ಅನೇಕರು ನನ್ನ ಸ್ಟೈಲ್ ಬಗ್ಗೆ ಕೇಳಿದ್ದೀರಿ. ನನ್ನ ಸ್ಟೈಲ್ ನನ್ನ ವ್ಯಕ್ತಿತ್ವದ ಒಂದು ಭಾಗ, ನನ್ನ ವರ್ತನೆ. ಅದು ನನ್ನ ಜೀವನದ ಒಂದು ಭಾಗ ಎಂದು ಬರೆದುಕೊಂಡಿದ್ದಾರೆ.

    ನನಗಾಗಿ ಇದನ್ನು ಒಟ್ಟಿಗೆ ಸೇರಿಸಿದ್ದಕ್ಕಾಗಿ ಕೆಜಿಎಫ್ ಕಾಸ್ಟ್ಯೂಮ್ ಡಿಸೈನರ್ ಸಾನಿಯಾ ಸರ್ದಾರಿಯಾ ಅವರಿಗೆ ಧನ್ಯವಾದ ಎಂದು ಯಶ್ ತಿಳಿಸಿದ್ದಾರೆ. ಜೊತೆಗೆ ಯಶ್ ತಮ್ಮ ಕೆಲವು ಫೋಟೋಗಳನ್ನು ಅಭಿಮಾಗಳ ಜೊತೆಗೆ ಹಂಚಿಕೊಂಡಿದ್ದಾರೆ.

    https://www.instagram.com/p/B5VNscQnIA8/

    ರಾಕಿಂಗ್ ಸ್ಟಾರ್ ಯಶ್ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಹಾಗೂ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ರಾಧಿಕಾ ಅವರು ಪ್ರಶಸ್ತಿಗೆ ಕಾರಣರಾದ ಯಶ್ ಅವರ ಕಾಸ್ಟೂಮ್ ಡಿಸೈನರ್ ಬಗ್ಗೆ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು.

    ಸಾನಿಯಾ ಸರ್ದಾರಿಯಾ ಯಶ್ ಅವರ ಕಾಸ್ಟೂಮ್ ಡಿಸೈನರ್ ಆಗಿದ್ದು, ”ಸ್ಟೈಲ್ ಎನ್ನುವುದು ಮಾತನಾಡದೆ ನಾವು ಏನು ಎನ್ನುವುದನ್ನು ಹೇಳುವುದಾಗಿದೆ. ಯಶ್ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಗೆದ್ದಿರುವ ಈ ಸಂದರ್ಭದಲ್ಲಿ ನಮ್ಮ ಪ್ರೀತಿ ಸ್ಟೈಲಿಸ್ಟ್ ಸಾನಿಯಾ ಸರ್ದಾರಿಯ ಅವರ ಬಗ್ಗೆ ಹೇಳಲು ಬಯಸುತ್ತೇನೆ. ಅವರು ಕೇವಲ ನಮ್ಮ ಸ್ಟೈಲಿಸ್ಟ್ ಮಾತ್ರವಲ್ಲ, ಅವರು ನಮ್ಮನ್ನು ತುಂಬಾ ಕೇರ್ ಮಾಡುತ್ತಾರೆ. ಯಾವಾಗಲೂ ಸಂತೋಷದಿಂದ ಇರುತ್ತಾರೆ” ಎಂದು ರಾಧಿಕಾ ಬರೆದುಕೊಂಡಿದ್ದರು.

    https://www.instagram.com/p/B1NutWQg3c7/

    ಯಶ್ ಹಾಗೂ ರಾಧಿಕಾ ಪಂಡಿತ್ ಸಿನಿಮಾಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಸಾನಿಯಾ ಸರ್ದಾರಿಯಾ ಅವರೇ ಕಾಸ್ಟೂಮ್ ಡಿಸೈನ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಯಶ್ ಮತ್ತು ರಾಧಿಕಾ ನಿಶ್ಚಿತಾರ್ಥ ಹಾಗೂ ಮದುವೆಗೆ ಸಹ ಸಾನಿಯಾ ಸರ್ದಾರಿಯಾ ವಸ್ತ್ರ ವಿನ್ಯಾಸ ಮಾಡಿದ್ದರು. ಸಾನಿಯಾ ಸರ್ದಾರಿಯಾ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಪತ್ನಿಯಾಗಿದ್ದು, ಅನೇಕ ವರ್ಷಗಳಿಂದ ಕಾಸ್ಟೂಮ್ ಡಿಸೈನರ್ ಆಗಿ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.