ಚಿಕ್ಕಮಗಳೂರು: ಬಿಜೆಪಿ ಸರ್ಕಾರದ ಜನ್ಮವೇ ಭ್ರಷ್ಟಾಚಾರದ್ದು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಮತ್ತು ಯೋಗೀಶ್ವರ್ ನಮ್ಮ ಮನೆಗೆ ಹಣ ತಂದು ಕೊಟ್ರು ಎಂದು ಶಾಸಕರೇ ಅಸೆಂಬ್ಲಿಯಲ್ಲಿ ಹೇಳಿದ್ದಾರೆ. ಭ್ರಷ್ಟಾಚಾರದ ಈ ಸರ್ಕಾರದ ಜನ್ಮ ದಿನ ನಡೆಯುತ್ತಿದೆ. ಕಮಿಷನರ್ ಆಗಿದ್ದವರು ಆಪ್ ಪಾರ್ಟಿ ಸೇರಿದ್ದಾರೆ. ಒಂದು ಕೆಲಸಕ್ಕೆ ಇಷ್ಟು ಹಣ ಫಿಕ್ಸ್ ಅಂತ ಕಮಿಷನರ್ ಹೇಳಿದ್ದಾರೆ. ಸರ್ಕಾರ ಕ್ರಮ ಕೈಗೊಳ್ಳಬೇಕು ಇಲ್ಲ ಒಪ್ಪಿಕೊಳ್ಳಬೇಕು. ದೇಶದಲ್ಲಿ ಯುವಕರಿಗೆ, ರೈತರಿಗೆ, ವ್ಯಾಪಾರಸ್ಥರಿಗೆ ಅನ್ಯಾಯ ಆಗಿದೆ ಅಂದ್ರೆ ಅದು ಕರ್ನಾಟಕದಲ್ಲಿ ಹೆಚ್ಚು. ರಾಜ್ಯದ ಬಿಜೆಪಿ ಸರ್ಕಾರದಿಂದಾಗಿ ನಮಗೆ ತಲೆ ತಗ್ಗಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್- ಬಿಜೆಪಿ ಎರಡೇ ಆಯ್ಕೆ, ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ಪ್ರೀತಂಗೌಡ
ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ಕುರಿತಾಗಿ ಮಾತನಾಡಿ, ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಕಾಂಗ್ರೆಸ್ಸಿಗೂ ಇದಕ್ಕೂ ಏನ್ ಸಂಬಂಧ? ಈ ಹಗರಣವನ್ನು ಹೊರಗಡೆ ತಂದಿದ್ದೇ ಕಾಂಗ್ರೆಸ್. ಕಾನೂನಲ್ಲಿ ಯಾರು ಏನು ತಪ್ಪು ಮಾಡಿದ್ದಾರೆ ತನಿಖೆ ಆಗಬೇಕು. ಗನ್ ಮ್ಯಾನ್ ಇದ್ದ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇದ್ದ, ಮತ್ತೊಬ್ಬ ಇದ್ದ ಅದೆಲ್ಲಾ ಅಲ್ಲ. ನಿಮ್ಮ ಸರ್ಕಾರದ ಆಡಳಿತದ ವೈಫಲ್ಯಗಳು ಹೊರಬರ್ತಿದೆ. ಕಾನ್ಸಟೇಬಲ್ ಇರ್ಲಿ, ಯಾರೇ ಇರ್ಲಿ, ಕಾಂಗ್ರೆಸ್ ಅಧಿಕಾರದಲ್ಲಿದ್ಯಾ? ಅಧಿಕಾರ ನಡೆಸುತ್ತಿರುವುದು ನೀವು, ನಿಮ್ಮ ಆಫೀಸರ್‌ಗಳು ನೂರಾರು ಯುವಕರಿಗೆ ಈ ರೀತಿ ಮೋಸ ಮಾಡಿದ್ದೀರಿ ಎಂದು ಕೆಂಡಕಾರಿದ್ದಾರೆ. ಇದನ್ನೂ ಓದಿ: ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ
40% ಕಮಿಷನ್ ಅದು ಜಗಜ್ಜಾಹೀರಾಗಿದೆ. ಉದ್ಯೋಗ ಕೊಡುವುದರಲ್ಲೂ ಇಂತಹ ಕೆಲಸಕ್ಕೆ ಹೊರಟಿದ್ದಾರೆ. ಹಿಂದೆಯೂ ಇತ್ತು, ಈಗಲೂ ಇದೆ. ಅಸೆಂಬ್ಲಿಯಲ್ಲಿ ಹೋಂ ಮಿನಿಸ್ಟರ್ ನಾನೇನು ಮಾಡಿಲ್ಲ ಅಂತ ಯಾಕೆ ಹೇಳಿದ್ರು ಮತ್ತೆ ಏಕೆ ಸಿಓಡಿ ತನಿಖೆಗೆ ಮುಂದಾದರು. ಇದಕ್ಕೆ ಹೋಂ ಮಿನಿಸ್ಟರ್ ಅವರೇ ಜವಾಬ್ದಾರಿ ಎಂದಿದ್ದಾರೆ.
– ರಾಮನಿಗೆ ಅವಮಾನ ಮಾಡೋ ಪದ ನಾನು ಮಾತಾಡಿಲ್ಲ – ಧರ್ಮದ ಹೆಸರಲ್ಲಿ ಹೀನಾಯವಾಗಿ ರಾಜಕೀಯ
ಬೆಂಗಳೂರು: ಧರ್ಮ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಯಾರೋ ಹಣ ಸಂಗ್ರಹಣೆ ಮಾಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಣೆ ಮಾಡಲು ಸಂಘಟನೆಗಳಿಗೆ ಅಧಿಕಾರ ಕೊಟ್ಟವರು ಯಾರು ಎಂದು ಎಚ್‍ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮನ ಹೆಸರಲ್ಲಿ ಪಾರದರ್ಶಕತೆ ಇಲ್ಲದೆ ಹಣ ಲೂಟಿ ಮಾಡುತ್ತಿದ್ದಾರೆ. ರಾಮ ಮಂದಿರ ಕಟ್ಟುತ್ತೇನೆ ಅಂತ ಹಣ ದುರುಪಯೋಗ ಮಾಡ್ತಿದ್ದಾರೆ. ಇದಕ್ಕೆ ನನ್ನ ವಿರೋಧ ಇದೆ. ರಾಮನಿಗೆ ಅವಮಾನ ಮಾಡುವ ಪದ ನಾನು ಮಾತಾಡಿಲ್ಲ ಎಂದು ತನ್ನ ಹೇಳಿಕೆ ಸಂಬಂಧ ಎದ್ದಿರುವ ವಿವಾದಕ್ಕೆ ಸ್ಪಷ್ಟನೆ ನೀಡಿದರು.
ರಾಮನ ಹೆಸರು ಹೇಳಿ ಅವಮಾನ ಮಾಡ್ತಿರೋರು ನೀವು, ರಾಮ ಮಂದಿರ ಕಟ್ಟಲು ನನ್ನ ವಿರೋಧ ಇಲ್ಲ. ನನ್ನ ಪಕ್ಷದ ಶಾಸಕರು ಹಣ ಕೊಟ್ಟಿದ್ದಾರೆ. ಗ್ರಾಮಗಳಲ್ಲಿ ದೇವಸ್ಥಾನ ಕಟ್ಟಲು ನಾವು ಹಣ ಸಹಾಯ ಮಾಡಿದ್ದೇವೆ ಎಂದರು.
3 ಜನ ಅಮಾಯಕರು ಬಂದಿದ್ದರು. ಒಂದು ಹೆಣ್ಣು ಮಗಳು ಬಂದಿದ್ದಳು. ಅವ್ರು ಹೇಳೋದನ್ನ ನಾನು ಲೈಟ್ ಆಗಿ ತೆಗೆದುಕೊಂಡೆ. ದೇಶದ ಪ್ರತೀಕ ಅಂತ ಹೇಳಿ ನನ್ನ ಮೈ ಮೇಲೆ ಬಿದ್ದಳು. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಆನ್ ಲೈನ್ ನಲ್ಲಿ ಹಣ ಕೊಡಿ ಅಂತ ಹೇಳಬೇಕು. ಬೀದಿ ಬೀದಿಯಲ್ಲಿ ಯಾಕೆ ಹಣ ಸಂಗ್ರಹ ಮಾಡ್ತೀರಿ. ಆನ್ ಲೈನ್ ನಲ್ಲಿ ಹಣ ಕೊಡಿ ಅಂತ ಪ್ರಚಾರ ಮಾಡಿ. ನಾನು ಹಣ ಕೊಡುತ್ತೇನೆ. ಸಂಬಂಧ ಪಟ್ಟವರು, ಅಧಿಕೃತವಾಗಿ ಇರೋರು ಬಂದು ಕೇಳಲಿ. ಒಂದಲ್ಲ ಎರಡು ಸಾರಿ ಬೇಕಿದ್ರೆ ಕೊಡೋಣ ನನ್ನದು ತಾಯಿ ಹೃದಯ ಎಂದರು.
ಮೊನ್ನೆ ನಾನು ಕೆಲವರು ರಾಮನ ಹೆಸರಲ್ಲಿ ಹಣ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಇದಕ್ಕೆ ಲೆಕ್ಕ ಕೊಡೋರು ಯಾರು? ಮಾರ್ಕ್ ಹಾಕಿದ್ದಾರೆ ಅಂತ ಹೇಳಿದ್ದೇನೆ. ಈ ಹೇಳಿಕೆಗೆ ಅನೇಕ ಸಂಘಟನೆ ಪ್ರತಿನಿಧಿಗಳು ಹೇಳಿಕೆ ಕೊಟ್ಟಿದ್ದಾರೆ. ಕೆಲ ಮಂತ್ರಿಗಳು, ಕೆಲ ಮಾಜಿ ವಿಧಾನ ಪರಿಷತ್ ಸದಸ್ಯರು ಮಾತಾಡಿದ್ದಾರೆ. ಪ್ರಚಾರ ಗಿಟ್ಟಿಸಲು ಇಂತಹ ಹೇಳಿಕೆ ಕೊಟ್ಟಿದ್ದಾರೆ. ದೇವೇಗೌಡ ಕುಟುಂಬಕ್ಕೆ ಯಾಕೆ ನಾಚಿಕೆ ಆಗಬೇಕು ಎಂದು ಹೇಳಿದ್ದಾರೆ. ರಾಮನ ಹೆಸರಲ್ಲಿ ರಾಜಕೀಯ ನಾವು ಮಾಡಿಲ್ಲ. ಧರ್ಮದ ಹೆಸರಲ್ಲಿ ಹೀನಾಯವಾಗಿ ರಾಜಕೀಯ ಮಾಡುತ್ತಿಲ್ಲ. ಧರ್ಮ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನಾವು ಇದನ್ನ ಮಾಡುತ್ತಿಲ್ಲ ಎಂದು ಹೇಳಿದರು.
ಕೆಲ ವರ್ಷಗಳ ಹಿಂದೆ ಒಂದು ಪಕ್ಷ ಹಣ ಸಂಗ್ರಹ ಮಾಡಿ, ಏರ್ ಟಿಕೆಟ್‍ಗೆ ಬಳಕೆ ಮಾಡಿದ್ದು ತಿಳಿದಿದೆ. ಮಾರ್ಕಿಂಗ್ ಯಾಕೆ ಮಾಡಬೇಕು. ಚಿಲ್ಲರೆ ರಾಜಕೀಯವನ್ನು ನಾವು ಮಾಡಿಕೊಂಡು ಬಂದಿಲ್ಲ. ಬೀದಿ ಬೀದಿಯಲ್ಲಿ ಹಣ ಸಂಗ್ರಹ ಮಾಡೋದು ಸರಿಯಲ್ಲ. ಹಿಂದೂ ಸಂಘಟನೆಗಳಿಗೆ ಹಣ ಸಂಘಟನೆ ಮಾಡಲು ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ನಾವು ಸ್ಟಿಕರ್ ಅಂಟಿಸೋದಾಗಿ ಅವರೇ ಹೇಳಿದ್ದಾರೆ. ಮನೆ ಮೇಲೆ ಯಾಕೆ ಸ್ಟಿಕರ್ ಹಾಕುತ್ತಿದ್ದೀರಿ. ಮೊಳೆ ಹೊಡೆಯೋ ಕೆಲಸ ಮಾಡ್ತಿರೋರು ದೇಶ ರಕ್ಷಣೆ ಮಾಡ್ತೀನಿ ಅಂತ ಹೊರಟವರು ನೀವು. ನಾವು ಮೊಳೆ ಹೊಡೆಯೋ ಕೆಲಸ ಮಾಡುತ್ತಿಲ್ಲ. ನಾನು ಬಿಜೆಪಿ, ಸರ್ಕಾರ, ಅಂಗ ಸಂಸ್ಥೆಗಳು ಬಗ್ಗೆ ಮಾತಾಡಿಲ್ಲ. ಕೆಲ ವ್ಯಕ್ತಿಗಳು ಅಂತ ನಾನು ಹೇಳಿದ್ದೇನೆ. ಪಾರದರ್ಶಕತೆಯಿಂದ ಹಣ ಸಂಗ್ರಹ ಮಾಡಿ ಅಂತ ಹೇಳಿದ್ದೇನೆ ಎಂದರು.
ಜನರ ಧ್ವನಿಯಾಗಿ ದೇವೇಗೌಡ ಕುಟುಂಬ ರಾಜಕೀಯ ಮಾಡಿದೆ. ಅಭಿಮಾನಿದಿಂದ ಬದುಕಿದವರು ನಾವು. ಡಿಸಿಎಂ ಅಶ್ವಥ್ ನಾರಾಯಣ ಕೋಟ್ಯಂತರ ಹಣ ಮಲ್ಲೇಶ್ವರಂನಲ್ಲಿ ಲೂಟಿ ಮಾಡಿದ್ದಾರೆ. ಇವರೆಲ್ಲ ಹೇಗೆ ಬಂದ್ರು ಅಂತ ಗೊತ್ತು. ಮಲ್ಲೇಶ್ವರಂ ನಲ್ಲಿ ಕೆಲಸ ಕೊಡಿಸುವ ಹೆಸರಲ್ಲಿ ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಹಾಸನದಲ್ಲಿ ಯಾರೋ ಮಾತಾಡಿದ್ದಾರೆ. ಬೆಂಕಿ ಹಚ್ಚಿದ ಮನೆಗೆ ಮನೆ ಕಟ್ಟಿಕೊಟ್ಟವರು ನಾವು. ಬೆಂಕಿ ಆರಿಸೋ ಸಂಸ್ಕೃತಿ ಇರೋರಾಗಿದ್ದೇವೆ. ಯಾವ ಸಂಘದ ಬಗ್ಗೆ ನಾನು ಮಾತಾಡಿಲ್ಲ. ನಾಜಿ ಸಂಸ್ಕೃತಿ ಬಗ್ಗೆ ನಾನು ಹೇಳಿದೆ. ಆರ್‍ಎಸ್‍ಎಸ್ ಬಗ್ಗೆ ಇತಿಹಾಸಕಾರರು ಹೇಳಿದ್ದನ್ನು ನಾನು ಹೇಳಿದ್ದೇನೆ. ಇವರೇನು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಪೆಟ್ರೋಲ್, ಗ್ಯಾಸ್, ಡಿಸೇಲ್ ಹೆಚ್ಚಳ ಮಾಡೋದು ಬಿಜೆಪಿ ಕೊಡುಗೆ. ಉಜ್ವಲ ಉಜ್ವಲ ಅಂದ್ರಿ ಈಗ ಗ್ಯಾಸ್ ರೇಟ್ ಏನಾಗಿದೆ? ಇದೇ ನಿಮ್ಮ ಕೊಡುಗೆಯಾಗಿದೆ. ಮಾಹಿತಿ ಇಲ್ಲದೆ ನಾನು ಮಾತಾಡಿಲ್ಲ. ಬಂದ ಮಾಹಿತಿ ನಾನು ಇಟ್ಟಿದ್ದೇನೆ. ಇದೇ ದೊಡ್ಡ ಅಪರಾಧನಾ? ನಮ್ಮ ಬಗ್ಗೆ ಟೀಕೆ ಮಾಡೋವಾಗ ಎಚ್ಚರವಾಗಿರಿ ಎಂದು ವಿರೋದ ಪಕ್ಷದವರನ್ನು ಎಚ್ಚರಿಸಿದ್ದಾರೆ
ನನ್ನ ಹೇಳಕೆ ಬಗ್ಗೆ ಎಲ್ಲಿ ಬೇಕಾದ್ರು ಚರ್ಚೆ ಮಾಡಲು ನಾನು ಸಿದ್ದವಾಗಿದ್ದೇನೆ. ಚುನಾವಣೆ ಗಿಮಿಕ್ ಇದು ಅಲ್ಲ. ಭಾವನಾತ್ಮಕ ವಿಷಯ ಇಟ್ಟು ಪಕ್ಷ ಸಂಘಟನೆ ನಾವು ಮಾಡಿಲ್ಲ, ಮಾಡೋದು ಇಲ್ಲ. ವಿಷಯಾಧಾರಿತ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಯಾರನ್ನು ಅವಹೇಳನ ಮಾಡಲು ನಾನು ಅಂದು ಮಾತಾಡಿಲ್ಲ. ಪಾರದರ್ಶಕ ಕೊರತೆ ಇದೆ ಎಂದು ಹೇಳಿದ್ದಾರೆ.
ಅನಧಿಕೃತವಾಗಿ ಹಣ ಸಂಗ್ರಹ ಮಾಡ್ತಿದ್ದಾರೆ. ಯಾರ್ ಯಾರೋ ರಸೀದಿ ಇಲ್ಲದೆ ಹಣ ಪಡೆಯುತ್ತಿದ್ದಾರೆ. ಅನೇಕ ಜನ ನನ್ನ ಬಳಿ ಅನಧಿಕೃತವಾಗಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಈ ಕಾರಣಕ್ಕೆ ನಾನು ಮಾತನಾಡಿದ್ದೇನೆ ಎಂದರು.