Tag: Corrruption

  • ಐಪಿಎಲ್‌ನಲ್ಲಿ ಫಿಕ್ಸಿಂಗ್‌ ಕರಿನೆರಳು | ಹೈದರಾಬಾದ್‌ ಉದ್ಯಮಿ ಸಂರ್ಪಕಿಸಿದ್ರೆ ಕೂಡ್ಲೇ ತಿಳಿಸಿ – ಆಟಗಾರರಿಗೆ ವಾರ್ನಿಂಗ್‌

    ಐಪಿಎಲ್‌ನಲ್ಲಿ ಫಿಕ್ಸಿಂಗ್‌ ಕರಿನೆರಳು | ಹೈದರಾಬಾದ್‌ ಉದ್ಯಮಿ ಸಂರ್ಪಕಿಸಿದ್ರೆ ಕೂಡ್ಲೇ ತಿಳಿಸಿ – ಆಟಗಾರರಿಗೆ ವಾರ್ನಿಂಗ್‌

    ಮುಂಬೈ: ಐಪಿಎಲ್‌ನಲ್ಲಿ (IPL) ಮತ್ತೆ ಫಿಕ್ಸಿಂಗ್‌ (Fixing) ಭೂತ ಆವರಿಸಿದೆ. ಹೈದರಾಬಾದ್‌ (Hyderabad) ಮೂಲದ ಉದ್ಯಮಿ ಫಿಕ್ಸಿಂಗ್‌ ಮಾಡಲು ಮುಂದಾಗುತ್ತಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ವರದಿ ಪ್ರಕಟವಾದ ಬೆನ್ನಲ್ಲೇ ಬಿಸಿಸಿಐನ (BCCI) ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಲೀಗ್‌ನ ಎಲ್ಲಾ 10 ತಂಡಗಳಿಗೆ ಎಚ್ಚರಿಕೆ ನೀಡಿದೆ. ಆ ಉದ್ಯಮಿ ಯಾವುದೇ ರೀತಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೆ ಕೂಡಲೇ ತಿಳಿಸಿ ಎಂದು ತಂಡಗಳಿಗೆ ಸೂಚಿಸಿದೆ.  ಇದನ್ನೂ ಓದಿ: ಲಕ್ನೋ ಸೂಪರ್‌ ಜೈಂಟ್ಸ್‌ಗೆ ಬಿಗ್‌ ಬೂಸ್ಟ್‌ – ರಾಕೆಟ್‌ ವೇಗಿ ಮಯಾಂಕ್‌ ಯಾದವ್‌ ಕಂಬ್ಯಾಕ್‌

    ಉದ್ಯಮಿ ಯಾರು ಎನ್ನುವುದು ಬಹಿರಂಗವಾಗಿಲ್ಲ. ಆದರೆ ಈ ಉದ್ಯಮಿ ಬುಕ್ಕಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ. ಈ ಹಿಂದೆಯೂ ಬುಕ್ಕಿಗಳ ಜೊತೆ ಆ ಉದ್ಯಮಿಗೆ ಸಂಪರ್ಕ ಇತ್ತು ಎಂದು ವರದಿಯಾಗಿದೆ.

     

    ಅಭಿಮಾನಿಯಂತೆ ನಟಿಸುವ ಮೂಲಕ ಮತ್ತು ದುಬಾರಿ ಆಭರಣಗಳಂತಹ ಉಡುಗೊರೆಗಳನ್ನು ನೀಡುವ ಮೂಲಕ ಆಟಗಾರರು, ತರಬೇತುದಾರರು, ತಂಡದ ಮಾಲೀಕರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸಲಾಗುತ್ತದೆ. ಇದು ವ್ಯಕ್ತಿಗಳನ್ನು ಭ್ರಷ್ಟಾಚಾರದ ಸೆಳೆಯುವ ಸಂಭಾವ್ಯ ಪ್ರಯತ್ನವೆಂದು ಪರಿಗಣಿಸಲಾಗಿದೆ. ಹೀಗಾಗಿ ತಂಡಗಳು ಜಾಗರೂಕವಾಗಿರಬೇಕು ಎಂದು ಸೂಚಿಸಿದೆ.

    ತಂಡ ಉಳಿಯುವ ಹೋಟೆಲ್ ಮತ್ತು ಪಂದ್ಯಗಳ ವೇಳೆಯೂ ಉದ್ಯಮಿ ಕಾಣಿಸಿಕೊಂಡಿದ್ದಾನೆ.ಆಟಗಾರರನ್ನು ಅಥವಾ ಆಟಗಾರರಿಗೆ ಆಪ್ತರಾಗಿರುವವರನ್ನು ತನ್ನ ಖಾಸಗಿ ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದಾನೆ. ತಂಡದ ಸದಸ್ಯರಿಗೆ ಮಾತ್ರವಲ್ಲದೆ ಅವರ ಕುಟುಂಬಗಳಿಗೂ ಉಡುಗೊರೆಗಳನ್ನು ನೀಡುವ ಮೂಲಕ ಅವರನ್ನು ಸೆಳೆಯುತ್ತಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮುಂಬೈ ಬಳಿ 9.85 ಕೋಟಿಗೆ ಭೂಮಿ ಖರೀದಿಸಿದ ಅಳಿಯ ಕೆಎಲ್‌ ರಾಹುಲ್‌, ಮಾವ ಸುನೀಲ್‌ ಶೆಟ್ಟಿ

    ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​ಈಗಾಗಲೇ ಭಾರತದ ಅತ್ಯಂತ ಭ್ರಷ್ಟ ಕ್ರಿಕೆಟ್ ಮಂಡಳಿ ಎಂಬ ಆರೋಪಗಳನ್ನು ಎದುರಿಸುತ್ತಿದೆ. ಈ ಆರೋಪದ ಮಧ್ಯೆ ಹೈದರಾಬಾದ್ ಉದ್ಯಮಿಯ ವಿರುದ್ಧದ ಬಂದಿರುವ ಆರೋಪಗಳು ಮತ್ತಷ್ಟು ಚರ್ಚೆಗಳಿಗೆ ಕಾರಣವಾಗುತ್ತಿವೆ.

    ಈ ಹಿಂದೆ 2013ರ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 2016 ಮತ್ತು 2017 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSSSK) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳನ್ನು ಐಪಿಎಲ್​ನಿಂದಲೇ ಬ್ಯಾನ್ (Ban) ಮಾಡಲಾಗಿತ್ತು.