Tag: corps

  • ಪತ್ನಿಯ ಕಾಮದಾಟ ಕಣ್ಣಾರೆ ಕಂಡು ಕೊಲೆಯಾದವನ ಶವ ಪತ್ತೆ

    ಪತ್ನಿಯ ಕಾಮದಾಟ ಕಣ್ಣಾರೆ ಕಂಡು ಕೊಲೆಯಾದವನ ಶವ ಪತ್ತೆ

    ಬೆಂಗಳೂರು: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದಿದ್ದು, ಇದೀಗ ನಾಲ್ಕು ದಿನಗಳ ನಂತರ ಪೊಲೀಸರಿಗೆ ಪತಿಯ ಶವ ಪತ್ತೆಯಾಗಿದೆ.

    ಶ್ರೀನಿವಾಸ್(30) ಕೊಲೆಯಾದ ವ್ಯಕ್ತಿ. ಪತ್ನಿ ಪ್ರತಿಭಾ ತನ್ನ ಪ್ರಿಯಕರನ ಬಾಲಕೃಷ್ಣನ ಜೊತೆ ಸೇರಿಕೊಂಡು ಕೊಲೆ ಮಾಡಿ ಕಲ್ಲು ಕಟ್ಟಿ  ಶವವನ್ನು ಕೆರೆಗೆ ಎಸೆದಿದ್ದರು. ನಾಲ್ಕು ದಿನಗಳ ಹಿಂದೆ ಈ ಕೃತ್ಯ ನಡೆದಿದ್ದು, ಮಂಗಳವಾರ ಕೆರೆಯಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಪತ್ನಿಯ ಕಾಮದಾಟ ಕಣ್ಣಾರೆ ಕಂಡು ಕೊಲೆಯಾದ

    ಪ್ರತಿಭಾ ಮತ್ತು ಪ್ರಿಯಕರ ಬಾಲಕೃಷ್ಣ ಶನಿವಾರ ಚಾಕುವಿನಿಂದ ಇರಿದು ಕೊಲೆ ಮಾಡಿ ಶವಕ್ಕೆ ಕಲ್ಲುಕಟ್ಟಿ ಬೊಮ್ಮಸಂದ್ರ ಕೆರೆಗೆ ಎಸೆದಿದ್ದರು. ಈ ಸಂಬಂಧ ಶ್ರೀನಿವಾಸ್ ಕಡೆಯವರು ದೂರು ನೀಡಿದ್ದು, ದೂರು ನೀಡಿದ ಕೇವಲ 8 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದರು. ರಾತ್ರಿ ಆರೋಪಿಗಳೊಂದಿಗೆ ಶವ ಹುಡುಕಲು ಪೊಲೀಸರು ತೆರಳಿದ್ದರು.

    ಕತ್ತಲಾದ್ದರಿಂದ ಹುಡುಕಾಟ ನಿಲ್ಲಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಶವ ನೀರಿನಲ್ಲಿ ತೇಲಿ ಬಂದಿದೆ. ವಿಷಯ ತಿಳಿದ ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ತೆರಳಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

  • ಹೂತಿಟ್ಟ ಶವದ ತಲೆಯನ್ನೇ ಹೊತ್ತೊಯ್ದ ದುಷ್ಕರ್ಮಿಗಳು

    ಹೂತಿಟ್ಟ ಶವದ ತಲೆಯನ್ನೇ ಹೊತ್ತೊಯ್ದ ದುಷ್ಕರ್ಮಿಗಳು

    ಬೆಂಗಳೂರು: ಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿಯ ಹೂತಿಟ್ಟ ಶವದ ತಲೆಯನ್ನ ಮಾಟ ಮಂತ್ರ ಮಾಡುವ ಮಾಂತ್ರಿಕರು ಹೊರತೆಗೆದಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ಕೆರೆಯ ಸ್ಮಶಾನದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಅರಸಯ್ಯ ಎಂಬವರ ದೇಹದ ತಲೆ ಭಾಗವನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ವೇಳೆ ಪೂಜೆಯ ನೆಪದಲ್ಲಿ ಮಾಟಮಂತ್ರವನ್ನ ಮಾಡಿ ಹೊರ ತೆಗೆದಿದ್ದಾರೆ.

    ಕೆಲ ದಿನಗಳ ಹಿಂದೆ ಒಂದು ತಿಂಗಳ ತಿಥಿ ಕಾರ್ಯವನ್ನು ಕುಟುಂಬದವರು ಕೈಗೊಂಡ, ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ ಎಂದು ಅರಸಯ್ಯನವರ ಕುಟುಂಬದವರು ಹೇಳುತ್ತಿದ್ದಾರೆ. ಶತಮಾನದ ಹಳೆಯದಾದ ಸ್ಮಶಾನದಲ್ಲಿ ಈ ರೀತಿಯ ಘಟನೆ ಈ ಹಿಂದೆ ಎಂದೂ ಕೂಡ ನಡೆದಿರಲಿಲ್ಲ, ಇದೀಗ ಈ ಘಟನೆ ನಡೆದಿರುವುದು ಗ್ರಾಮಸ್ಥರಲ್ಲೂ ಭಯದ ಜೊತೆಗೆ ಆತಂಕವನ್ನು ಸೃಷ್ಟಿಸಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

    ಈ ಘಟನೆ ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಪತ್ತೆಯಾಗಿದ್ದ ತುಮಕೂರು ವಿವಿ ಪ್ರಾಧ್ಯಾಪಕ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ ತುಮಕೂರು ವಿವಿ ಪ್ರಾಧ್ಯಾಪಕ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

    ತುಮಕೂರು: ಡಿಸೆಂಬರ್ 9 ರಂದು ನಾಪತ್ತೆಯಾಗಿದ್ದ ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರೋಫೆಸರ್ ಈಶ್ವರ್ ಶವವಾಗಿ ಪತ್ತೆಯಾಗಿದ್ದಾರೆ.

    ಕೊಳೆತ ಸ್ಥಿತಿಯಲ್ಲಿ ತುಮಕೂರು ನಗರದ ಹೆಚ್.ಎಮ್.ಟಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾದ್ದಾರೆ. ಕಳೆದ ಡಿಸೆಂಬರ್ 9 ರಂದು ವಾಯುವಿಹಾರಕ್ಕೆ ಹೋಗಿ ಬರುತ್ತೀನಿ ಎಂದು ಹೋಗಿದ್ದು, ಮತ್ತೆ ವಾಪಸ್ ಬಂದಿರಲಿಲ್ಲ. ಇವರು ವಿವಿಯಲ್ಲಿ ವಿಜ್ಞಾನ ವಿಭಾಗದ ಪ್ರಾಣಿಶಾಸ್ತ್ರ ಪ್ರೋಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಶ್ವರ್ ನಾಪತ್ತೆ ಪ್ರಕರಣದಲ್ಲಿ ಹಲವು ಅನುಮಾನಗಳಿವೆ.

    ಈಶ್ವರ್ ಈ ಹಿಂದೆ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು. ಆಗ ಇನ್ನೂ ಇವರಿಗೆ ಮಾನ್ಯತೆ ಸಿಕ್ಕಿಲ್ಲ ಎಂದು ಹುದ್ದೆಯಿಂದ ಕೆಳಗಿಳಿಸಿದ್ದರು. ಬಳಿಕ ಅಲ್ಲಿಂದ ಸಹೋದ್ಯೋಗಿಗಳು ಸುಖಾಸುಮ್ಮನೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈಶ್ವರ್ಗೆ 57 ವರ್ಷ ವಯಸ್ಸಾದ ಕಾರಣ ಕಣ್ಣಿನ ಸಮಸ್ಯೆ ಇತ್ತು. ಈ ಬಗ್ಗೆ ಆಸ್ಪತ್ರೆಗೂ ತೋರಿಸಿಕೊಂಡಿದ್ದರು. ಇಷ್ಟಾದರೂ ನೀವು ಕಾಲೇಜಿಗೆ ಬರಬೇಡಿ ನಿಮ್ಮಿಂದ ತೊಂದರೆ ಆಗುತ್ತಿದೆ ಅಂತ ಸಹೋದ್ಯೋಗಿಗಳು ಕಿರುಕುಳ ನೀಡುತ್ತಿದ್ದರಂತೆ ಈ ಬಗ್ಗೆ ಸ್ವತಃ ಈಶ್ವರ್ ಅವರೇ ತಮ್ಮ ಮನೆಯಲ್ಲಿ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.

    ಈಶ್ವರ್ ಸಾವಿಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಮನೆಯವರು ಕಳೆದ ಒಂದು ತಿಂಗಳಿನಿಂದ ಹುಡುಕಲು ಸಾಕಷ್ಟು ಪ್ರಯತ್ನಿಸಿದ್ದರೂ ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಈ ಬಗ್ಗೆ ಮಗ ಪವನ್, ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ನಮಗೆ ಅಪ್ಪನ ಸಾವಿನ ಬಗ್ಗೆ ಹಲವು ಅನುಮಾನಗಳಿವೆ. ಅವರು ಸದಾ ನಮಗೆ ಧೈರ್ಯ ತುಂಬುತ್ತಿದ್ದರು. ಆದರೆ ಇಂದು ಅವರೇ ಈ ರೀತಿ ಮಾಡಿಕೊಂಡಿದ್ದಾರೆ ಅಂದರೆ ನಂಬಲು ಸಾಧ್ಯವಿಲ್ಲ ಅಂತ ಹೇಳಿದ್ದಾನೆ.

    ಈ ಕುರಿತು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಪತ್ತೆಯಾಗಿದ್ದ ಬೆಂಗ್ಳೂರು ವಿದ್ಯಾರ್ಥಿ ಮಂಗ್ಳೂರಿನ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ ಬೆಂಗ್ಳೂರು ವಿದ್ಯಾರ್ಥಿ ಮಂಗ್ಳೂರಿನ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆ

    ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯೊಬ್ಬ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ವಿದ್ಯಾರ್ಥಿಯ ಶಾಲಾ ಬ್ಯಾಗ್, ಶಾಲಾ ಐಡಿ ಕಾರ್ಡ್, ಆಧಾರ್ ಕಾರ್ಡ್ ಬುಧವಾರ ಸಂಜೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಗ್ರಾಮದ ಕೆರೆ ಬಳಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದರಿಂದ, ಬಾಲಕನ ಶವ ಪತ್ತೆಯಾಗಿದೆ.

    ಘಟನೆ ವಿವರ?:
    ಬೆಂಗಳೂರಿನ ಐಟಿಐ ವಿದ್ಯಾಮಂದಿರದ 9ನೇ ತರಗತಿ ವಿದ್ಯಾರ್ಥಿ ಯಶವಂತ್ ಸಾಯಿ ಮಂಗಳವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದನು. ಬೆಂಗಳೂರಿನ ಹೂಡಿ ಮುನಿಸ್ವಾಮಿ ಶೆಟ್ಟಿ ಬಡಾವಣೆ ನಿವಾಸಿ ಎನ್.ವಿ. ಪ್ರೇಮಕುಮಾರ್ ಅವರ ಪುತ್ರನಾಗಿದ್ದು, ಮಂಗಳವಾರ ಯಶವಂತ್ ಅಜ್ಜ ಶಾಲೆಗೆ ಕಳುಹಿಸಲು ಕರೆ ತಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಮರಳಿದ್ದರು. ಆ ಬಳಿಕ ವಿದ್ಯಾರ್ಥಿ, ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಯಶವಂತ್ ಸಾಯಿ ನಾಪತ್ತೆಯಾಗಿರುವುದು ಗೊತ್ತಾಗುತ್ತಿದ್ದಂತೆ ಆತನ ಕುಟುಂಬದವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಇತ್ತ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಗ್ರಾಮದ ಬಳಿ ಬುಧವಾರ ಸಂಜೆ ಶಾಲಾ ಬ್ಯಾಗ್, ಶಾಲಾ ಐಡಿ ಕಾರ್ಡ್, ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಇದನ್ನು ಕಂಡ ಸ್ಥಳೀಯರು ಈ ಬಗ್ಗೆ ಬೆಳ್ತಂಗಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿದಾಗ ಬಾಲಕನ ಶವ ಪತ್ತೆಯಾಗಿದೆ.

    ಬೆಂಗಳೂರಿನಿಂದ ಮಂಗಳೂರಿಗೆ ಮಾಡಿರುವ 372 ರೂಪಾಯಿಯ ಟಿಕೆಟ್ ಮತ್ತು ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಮಾಡಿರುವ 53 ರೂಪಾಯಿಯ ಟಿಕೆಟ್ ಕೂಡಾ ಬ್ಯಾಗಿನಲ್ಲಿ ಪತ್ತೆಯಾಗಿದೆ.

  • ರಾತ್ರಿ ಹನುಮ ಜಯಂತಿ ಮೆರವಣಿಗೆ ನೋಡಲು ಹೋದ ಬಾಲಕ ಮಧ್ಯಾಹ್ನ ಶವವಾಗಿ ಪತ್ತೆ!

    ರಾತ್ರಿ ಹನುಮ ಜಯಂತಿ ಮೆರವಣಿಗೆ ನೋಡಲು ಹೋದ ಬಾಲಕ ಮಧ್ಯಾಹ್ನ ಶವವಾಗಿ ಪತ್ತೆ!

    ಮುಂಬೈ: ಭಾನುವಾರ ಕಾಣೆಯಾಗಿದ್ದ 11 ವರ್ಷದ ಬಾಲಕ ನಗರದ ಮನ್ಖುರ್ದ್ ಮಂಡಲಾ ಎಂಬ ಪ್ರದೇಶದ ಒಂದು ಕುಸಿದ ಮನೆಯ ಬಳಿ ಶವವಾಗಿ ಪತ್ತೆಯಾಗಿರುವುದು ಕಂಡು ಬಂದಿದೆ.

    ಜೆಟ್ಮೋಹನ್ ಶರ್ಮಾ ಮೃತ ದುರ್ದೈವಿ. ಈತ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಭಾನುವಾರ ಸಂಜೆ ಹನುಮ ಜಯಂತಿ ಮೆರವಣಿಗೆಯನ್ನು ವೀಕ್ಷಿಸಲು ಮನೆಯಿಂದ ತೆರಳಿದ್ದನು. ಆದರೆ ಸೋಮವಾರ ಶವವಾಗಿ ಪತ್ತೆಯಾಗಿದ್ದಾನೆ.

    ಹನುಮ ಜಯಂತಿ ನೋಡಲು ಹೋದ ಮಗ ಮಧ್ಯರಾತ್ರಿಯ ಆದರೂ ಮನೆಗೆ ಹಿಂದಿರುಗಲಿಲ್ಲ ಎಂದು ಕುಟುಂಬದವರು ಅವನಿಗಾಗಿ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಬಳಿಕ ಗಾಬರಿಗೊಂಡು ಕುಟುಂಬದವರು ಮನ್ಖುರ್ದ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ.

    ಸೋಮವಾರ ಮಧ್ಯಾಹ್ನ ಬಾಲಕನ ದೇಹ ಆತನ ಮನೆಯಿಂದ ಕೇವಲ 50 ಅಡಿಗಳಷ್ಟು ದೂರವಿರುವ ಪ್ರತ್ಯೇಕ ಕಟ್ಟಡವೊಂದರಲ್ಲಿ ಪತ್ತೆಯಾಗಿದೆ. ಇದನ್ನು ನೋಡಿ  ಬಾಲಕನ ಕುಟುಂಬ ಆಘಾತಗೊಂಡಿದೆ.

    ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಇದು ಕೊಲೆ ಎನ್ನುವ ಶಂಕೆ ವ್ಯಕ್ತವಾಗಿದೆ. ನಾವು ಬಾಲಕನ ದೇಹವನ್ನು ನೋಡಿದಾಗ ಇಲಿಗಳು ಆ ದೇಹವನ್ನು ತಿನ್ನುತ್ತಿದ್ದವು. ಈ ಸಾವಿನ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ನಂತರ ಸಾವಿಗೆ ನಿಖರ ಕಾರಣ ತಿಳಿಯಬಹುದು ಎಂದು ಪೊಲೀಸ್ ಅಧಿಕಾರಿ ಶಹಾಜಿ ಉಮಾಪ್ ಹೇಳಿದ್ದಾರೆ.

  • ಫ್ರೀಜರ್ ಬೇಡ, 2 ಸಾವಿರ ರೂ. ಖರ್ಚು ಮಾಡಿದ್ರೆ ಬಹುದಿನಗಳ ಕಾಲ ಶವ ರಕ್ಷಿಸಬಹುದು!

    ಫ್ರೀಜರ್ ಬೇಡ, 2 ಸಾವಿರ ರೂ. ಖರ್ಚು ಮಾಡಿದ್ರೆ ಬಹುದಿನಗಳ ಕಾಲ ಶವ ರಕ್ಷಿಸಬಹುದು!

    ಬೆಂಗಳೂರು: ವ್ಯಕ್ತಿ ಮೃತಪಟ್ಟರೆ ಸಂಬಂಧಿಕರು ಬರುವವರೆಗೂ ಶವ ಕೆಡದಂತೆ ಕಾಪಾಡುವುದು ದೊಡ್ಡ ಖರ್ಚಿನ ಕೆಲಸ. ಆದರೆ ಇಲ್ಲೊಬ್ಬರು ಕೇವಲ 2 ಸಾವಿರ ರೂಪಾಯಿಯಲ್ಲಿ ಶವ ಕೆಡದಂತೆ ಯಾವ ಫ್ರಿಜರ್ ನಲ್ಲೂ ಇಡದೇ ಕಾಪಾಡುವ ವಿಧಾನವನ್ನು ಕಂಡುಹಿಡಿದಿದ್ದರೆ.

    ಡಾ.ದಿನೇಶ್ ಇವರು ಕಡಿಮೆ ಖರ್ಚಿನಲ್ಲಿ ಮೃತದೇಹವನ್ನು 10 ರಿಂದ 15 ವರ್ಷಗಳು ಕೆಡದಂತೆ ಹಾಗೂ ವಾಸನೆ ಬಾರದಂತೆ ಸಂರಕ್ಷಿಸಿಡುವ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. ಡಾ.ದಿನೇಶ್ ಈ ಸಂಶೋಧನೆಯನ್ನು ಹಾವಿನ ಮೇಲೆ ವಿಶೇಷ ರಾಸಾಯನಿಕವನ್ನು 10 ವರ್ಷದ ಹಿಂದೆಯೇ ಪ್ರಯೋಗಿಸಿದ್ದು, ಇಂದಿಗೂ ಹಾವು ಚೂರೂ ಸುಕ್ಕಾಗದೇ ಜೀವಂತವಿರುವಂತೆ ಭಾಸವಾಗುತ್ತಿದೆ.

    ಈಗ ತನ್ನ ಸಂಶೋಧನೆಯ ಪ್ರಾತ್ಯಕ್ಷಿಕೆಯನ್ನು ನಾನಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವೈದ್ಯರಿಗೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಖಾಸಗಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ದಿನೇಶ್ ಅವರು ನಡೆಸಿಕೊಟ್ಟಿದ್ದಾರೆ. 10 ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಶವವನ್ನು ಮುಂದಿಟ್ಟುಕೊಂಡು ದಿನೇಶ್ ಅವರು ಈಗ ಸಂಶೋಧನೆಯನ್ನು ವಿವರಿಸಿದ್ದಾರೆ.

    ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ದಾನ ಕೊಟ್ಟ ಶವಗಳನ್ನು ಕೆಮಿಕಲ್ಸ್ ನಲ್ಲಿ ಮುಳುಗಿಸಿಟ್ಟು ಕೆಡದಂತೆ ಕಾಪಾಡಲು ಹೆಚ್ಚಿನ ಹಣ ಖರ್ಚಾಗುತ್ತಿತ್ತು. ಆದರೆ ಡಾ. ದಿನೇಶ್ ಶವ ಸಂರಕ್ಷಣೆಗೆ ಕೇವಲ 2 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಹೀಗಾಗಿ ಈ ಸಂಶೋಧನೆಯಿಂದ ವೈದ್ಯಕೀಯ ಕಾಲೇಜು ಮತ್ತು ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಸಂಶೋಧನಾ ವಿದ್ಯಾರ್ಥಿನಿ ಪವಿತ್ರ ಹೇಳಿದ್ದಾರೆ.

    https://www.youtube.com/watch?v=yGCm67SXFx8