Tag: corporation

  • ದೋಸ್ತಿ ಪಕ್ಷಗಳಲ್ಲಿ ಗೆಲ್ಲೋರು ಯಾರು – ಗದ್ದುಗೆ ಕನಸು ಕಾಣ್ತಿರೋ ಕಮಲಕ್ಕೆ ಬರುತ್ತಾ ಶ್ರಾವಣ?

    ದೋಸ್ತಿ ಪಕ್ಷಗಳಲ್ಲಿ ಗೆಲ್ಲೋರು ಯಾರು – ಗದ್ದುಗೆ ಕನಸು ಕಾಣ್ತಿರೋ ಕಮಲಕ್ಕೆ ಬರುತ್ತಾ ಶ್ರಾವಣ?

    ಬೆಂಗಳೂರು: ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಲೋಕಲ್ ರಿಸಲ್ಟ್ ಕ್ಷಣ ಬಂದೇ ಬಿಟ್ಟಿದೆ. ಆಗಸ್ಟ್ 31ರಂದು 102 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.

    ಬೆಳಗ್ಗೆ 8 ಗಂಟೆಯಿಂದ 22 ಜಿಲ್ಲೆಗಳ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಶುರುವಾಗಲಿದೆ. ಇದೇ ಮೊದಲ ಬಾರಿಗೆ ಸ್ಥಳೀಯ ಚುನಾವಣೆಗಳಲ್ಲಿ ಇವಿಎಂ ಬಳಸಿರುವ ಕಾರಣ ಬೆಳಗ್ಗೆ 11 ಗಂಟೆ ಸುಮಾರಿಗೆ ಸ್ಷಷ್ಟ ಚಿತ್ರಣ ಸಿಗುವ ಸಾಧ್ಯತೆಗಳಿವೆ.

    ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಶೇಕಡಾ 67.51ರಷ್ಟು ಮತದಾನವಾಗಿತ್ತು. ಒಟ್ಟು 2634 ವಾರ್ಡ್‍ಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ತಿರೋ 9,121 ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

    ಲೋಕಸಭಾ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ಎದುರಾಗುತ್ತಿರೋ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಈ ಲೋಕಲ್ ಫಲಿತಾಂಶ ತುಂಬಾನೆ ಮುಖ್ಯವಾಗಿದೆ. ಮೊನ್ನೆಯಷ್ಟೇ ಶತಕ ಬಾರಿಸಿದ ಖುಷಿಯಲ್ಲಿರುವ ದೋಸ್ತಿ ಸರ್ಕಾರಕ್ಕೆ ಮತ್ತು ವಿಪಕ್ಷ ಬಿಜೆಪಿಗೆ ಇದು ಲಿಟ್ಮಸ್ ಟೆಸ್ಟ್ ನಂತೆ. ಯಾಕಂದ್ರೆ ವಿಧಾನಸೌಧದಲ್ಲಿ ಮಾತ್ರ ಮೈತ್ರಿ ಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ನೇರ-ನೇರ ಅಧಿಕಾರಕ್ಕಾಗಿ ಯುದ್ಧ ನಡೆಸಿರೋ ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಅಸ್ತಿತ್ವ ಉಳಿಸಿಕೊಳ್ಳುವ ನಿಜವಾದ ಸವಾಲಿದೆ.

    ದೋಸ್ತಿಗಳ ನಡುವಿನ ಕಿತ್ತಾಟದಿಂದ ಅಧಿಕಾರದ ಕನಸು ಕಾಣುತ್ತಿರೋ ಬಿಜೆಪಿಗೆ ಕೂಡ ಸ್ಥಳೀಯ ಸಂಸ್ಥೆ ರೂಪದಲ್ಲಿ ಶ್ರಾವಣದ ಸವಾಲು ಎದುರಾಗಿದೆ. ಇಲ್ಲಿ ಮತ ಪ್ರಭುಗಳು ನೀಡುವ ಫಲಿತಾಂಶದ ಆಧಾರದ ಮೇಲೆ ರಾಜಕೀಯ ಪಕ್ಷಗಳು ತಮ್ಮ ಮುಂದಿನ ಕಾರ್ಯತಂತ್ರಗಳನ್ನ ರೂಪಿಸಿಕೊಳ್ಳಲಿವೆ.

    ನಗರಸಭೆಯ 12, ಪುರಸಭೆಯ 17 ವಾರ್ಡ್ ಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಪ್ರಕೃತಿ ವಿಕೋಪಕ್ಕೆ ತುತ್ತಾದ ಮಡಿಕೇರಿ 3 ಪಟ್ಟಣ ಪಂಚಾಯಿತಿಗಳಲ್ಲಿ ಚುನಾವಣೆ ಮುಂದೂಡಲಾಗಿತ್ತು. ಕಲಬುರಗಿ ಜಿಲ್ಲೆಯ ಅಫಜಲಪುರ ಪುರಸಭೆಯ 19ನೇ ವಾರ್ಡ್‍ನಲ್ಲಿ ಸಲ್ಲಿಕೆಯಾಗಿದ್ದ ಎಲ್ಲಾ ನಾಮಪತ್ರ ತಿರಸ್ಕೃತವಾದ ಕಾರಣ ಅಲ್ಲಿ ಚುನಾವಣೆ ನಡೆದಿರಲಿಲ್ಲ. ಕೊಳ್ಳೆಗಾಲ ನಗರಸಭೆಯ 9ನೇ ವಾರ್ಡ್ ನಲ್ಲಿ ಬಿಎಸ್‍ಪಿ ಅಭ್ಯರ್ಥಿ ನಿಧನರಾದ ಹಿನ್ನೆಲೆಯಲ್ಲಿ ಅಲ್ಲಿಯೂ ಚುನಾವಣೆ ಮುಂದೂಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಿ, ಮತಪತ್ರದಲ್ಲಿ ಗಂಡನ ಫೋಟೋ ಹಾಕಿದ್ರು!

    ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಿ, ಮತಪತ್ರದಲ್ಲಿ ಗಂಡನ ಫೋಟೋ ಹಾಕಿದ್ರು!

    ಮಂಗಳೂರು: ಮಹಿಳೆಯರೂ ರಾಜಕೀಯ ಕ್ಷೇತ್ರಕ್ಕೆ ಬರಬೇಕೆಂದು ಸರ್ಕಾರ ಮೀಸಲಾತಿ ಕಲ್ಪಿಸಿದೆ. ಆದರೆ, ಮೀಸಲಿನ ಲಾಭ ಬೇಕು, ತಮ್ಮ ಮಹಿಳೆಯರನ್ನು ಸಮಾಜ ನೋಡಬಾರದೆಂಬ ಮೂಲಭೂತವಾದ ರಾಜಕೀಯ ಪಕ್ಷಗಳಲ್ಲಿಯೂ ನುಸುಳಿದೆ.

    ಹೌದು. ಎಸ್ ಡಿಪಿಐ ಪಕ್ಷ ಮಂಗಳೂರಿನ ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿದೆ. ಜೊತೆಗೆ ಮಹಿಳೆಯರಿಗೆ ಮೀಸಲಾದ ಸ್ಥಾನಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಾರ್ಡ್ ನಂಬರ್ 1, 2, 11, 12ರಲ್ಲಿ ಕ್ರಮವಾಗಿ ರುಕಿಯಾ ಇಕ್ಬಾಲ್, ಶಹನಾಜ್ ಅಕ್ರಮ್ ಹಸನ್, ಖಮರುನ್ನೀಸಾ ನಜೀಮ್ ಹಾಗೂ ಜಾರೀನಾ ಬಾನು ಎಂಬವರನ್ನು ಕಣಕ್ಕಿಳಿಸಿದ್ದರೂ, ಮತಪತ್ರದಲ್ಲಿ ಮಾತ್ರ ಈ ಮಹಿಳೆಯರ ಗಂಡಂದಿರ ಫೋಟೋಗಳನ್ನು ಹಾಕಲಾಗಿದೆ.

    ಒಂದು ರೀತಿಯಲ್ಲಿ ಮೀಸಲು ಹೆಸರಲ್ಲಿ ರಾಜಕೀಯ ಪಕ್ಷದಿಂದ ಗಂಭೀರ ಪ್ರಮಾದ ಆಗಿದ್ದರೆ, ಮತ್ತೊಂದ್ಕಡೆ ತಮ್ಮ ಮೂಲಭೂತವಾದವನ್ನು ರಾಜಕೀಯ ಕ್ಷೇತ್ರಕ್ಕೂ ಹೇರಿದಂತಾಗಿದೆ. ಮೀಸಲಾತಿ ಲಾಭ ಬೇಕು, ಮಹಿಳೆಯರನ್ನು ಸಮಾಜಕ್ಕೆ ತೋರಿಸುವಂತಿಲ್ಲ ಅನ್ನೋ ಮನೋಭಾವ. ಹೀಗಾದ್ರೆ ಆ ಮಹಿಳೆಯರು ಒಂದ್ವೇಳೆ ಜಯ ಗಳಿಸಿ ಬಂದರೆ ತಮ್ಮ ಮುಖ ತೋರಿಸಬಾರದೆಂದು ಪ್ರತಿನಿಧಿಗಳಾಗಿ ಗಂಡಂದಿರನ್ನೇ ಕಳಿಸುತ್ತಾರೆಯೇ ಅನ್ನೋ ಪ್ರಶ್ನೆಯು ಬರುತ್ತದೆ.

    ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲವೆಂಬ ಆರೋಪವನ್ನು ಸ್ವತಃ ಎಸ್ ಡಿಪಿಐ ಪಕ್ಷ ಸಾಬೀತು ಮಾಡಿದಂತಾಗಿದೆ. ಸದ್ಯ ಈ ಮತಪತ್ರದ ಮಾದರಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೇನಾ ಮಹಿಳಾ ಸ್ವಾತಂತ್ರ್ಯ ಅನ್ನುವ ಟೀಕೆ ಕೇಳಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳ ಘರ್ಜನೆ

    ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳ ಘರ್ಜನೆ

    ದಾವಣಗೆರೆ: ನಗರದ ಜಗಳೂರು ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳಗ್ಗೆಯೇ ಪಾಲಿಕೆ ಜೆಸಿಬಿಗಳು ಘರ್ಜಿಸಿದ್ದು, ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಹಲವು ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.

    ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಅಕ್ರಮ ತೆರವು ಕಾರ್ಯಾಚರಣೆ ನಡೆದಿದ್ದು, ನಿಲ್ದಾಣದಲ್ಲಿದ್ದ ಹೋಟೆಲ್, ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ತೆರವುಗೊಳಿಸಿದ್ದಾರೆ. ಹಲವು ವರ್ಷಗಳಿಂದ ಬಸ್ ನಿಲ್ದಾಣವನ್ನು ನಂಬಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ತೆರವು ಕಾರ್ಯದಿಂದ ಬೀದಿಗೆ ಬಿದ್ದಿದ್ದಾರೆ.

    ತೆರವು ಕಾರ್ಯಾಚರಣೆಗೆ ವ್ಯಾಪಾರಸ್ಥರು ಆಕ್ರೋಶವ್ಯಕ್ತಪಡಿಸಿದ್ದು, ನಮಗೆ ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿ ತೆರವು ಮಾಡುತ್ತಿದ್ದಾರೆ. ನಮ್ಮ ಮುಂದಿನ ಗತಿ ಏನು, ನಾವು ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇವು. ಆದರೆ ಈಗ ನಮ್ಮ ಜೀವನ ಬೀದಿಪಾಲಾಗಿದೆ ಎಂದು ಹೇಳಿದ್ದಾರೆ.

    ನ್ಯಾಯಾಲಯ ಆದೇಶದ ಮೇರೆಗೆ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಸ್ಥಳದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿದೆ. ಜಿಟಿ ಜಿಟಿ ಮಳೆಯ ನಡುವೆಯೂ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಅಕ್ರಮ ಅಂಗಡಿಗಳನ್ನು ತೆರವುಗೊಳಿಸುವಂತೆ ಕೋರ್ಟ್ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ವ್ಯಾಪಾರಸ್ಥರಿಗೆ ಈ ಮೊದಲು ನೋಟಿಸ್ ನೀಡಿದ್ದೆವು. ಆದರೆ ನೋಟಿಸ್ ಗೆ ಕ್ಯಾರೆ ಎನ್ನದೆ ವ್ಯಾಪಾರ ಮುಂದುವರೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಖುದ್ದು ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಪಾಲಿಕೆ ಆಯುಕ್ತರಾದ ಮಂಜುನಾಥ್ ಬಳ್ಳಾರಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಟಿ ಕೋಟಿ ಹಣ ನೀರಲ್ಲಿ ಹೋಮ- ಮತ್ತೆ ಭೀಮೆಯ ಒಡಲು ಸೇರ್ತಿದೆ ಚರಂಡಿ ನೀರು

    ಕೋಟಿ ಕೋಟಿ ಹಣ ನೀರಲ್ಲಿ ಹೋಮ- ಮತ್ತೆ ಭೀಮೆಯ ಒಡಲು ಸೇರ್ತಿದೆ ಚರಂಡಿ ನೀರು

    ಕಲಬುರಗಿ: ಅದು ಬರೋಬ್ಬರಿ 47 ಕೋಟಿ ರೂಪಾಯಿ ವೆಚ್ಚದ ಯೋಜನೆ. ಅಂದುಕೊಂಡಂತೆ ಆದರೆ ಆ ಯೋಜನೆಯಿಂದಾಗಿ ಭೀಮಾ ನದಿಯ ಒಡಲು ಹಸನಾಗಬೇಕಿತ್ತು. ಆದರೆ ಅಂದುಕೊಂಡದ್ದು ಒಂದು, ಆಗಿದ್ದು ಮತ್ತೊಂದು. ಹೀಗಾಗಿ ಪಾಲಿಕೆಯ ಕೋಟಿ ಕೋಟಿ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.

    ಇದು ಕಲಬುರಗಿ ಜನರ ಜೀವನಾಡಿ ಭೀಮೆ. ಇಡೀ ಮಹಾನಗರದ ಚರಂಡಿ ನೀರು ಈ ಭೀಮೆಯ ಒಡಲು ಸೇರುತ್ತಿದೆ. ಹೀಗಾಗಿ ಚರಂಡಿ ನೀರನ್ನು ಶುದ್ಧೀಕರಿಸಿ ನಂತರ ನದಿಗೆ ಬಿಡಲು ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಬರೋಬ್ಬರಿ 47 ಕೋಟಿ ರೂಪಾಯಿಯನ್ನು ಸುರಿದಿದ್ದರು. ಆದರೆ ಈ ಬಹುಕೋಟಿ ವೆಚ್ಚದ ಪ್ಲಾನ್ ವರ್ಕೌಟ್ ಆಗ್ಲಿಲ್ಲ. ಕಾಮಗಾರಿ ಲೋಪದೋಷದಿಂದ ಮತ್ತದೇ ಚರಂಡಿ ನೀರು ನದಿಗೆ ಸೇರ್ತಿದೆ.

    ಅಂದಾಜು 40 ಎಂಎಲ್‍ಡಿ ಸಾಮಥ್ರ್ಯದ ಚರಂಡಿ ನೀರು ಶುದ್ದೀಕರಣ ಘಟಕವನ್ನು ಸರ್ಕಾರ ಏಷಿಯನ್ ಡೆವಲಪ್‍ ಮೆಂಟ್ ಬ್ಯಾಂಕ್ ನೆರವಿನಿಂದ ಶುರು ಮಾಡಿತು. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿದಾಗ ಲೋಪದೋಷ ಕಂಡುಬಂತು. ಹೀಗಾಗಿ ಕರ್ತವ್ಯಲೋಪ ಎಸಗಿದವರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಅತ್ತ ಹಣವೂ ಉಳಿಲಿಲ್ಲ ಇತ್ತ ಕೆಲಸನ್ನು ಸರಿ ಆಗಿಲ್ಲ ಎನ್ನುವ ಹಾಗಾಗಿದೆ ಪಾಲಿಕೆ ಕಾಮಗಾರಿ.

  • ವಾಜಪೇಯಿ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದ ಲಕ್ನೋ ಕಾರ್ಪೋರೇಷನ್

    ವಾಜಪೇಯಿ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದ ಲಕ್ನೋ ಕಾರ್ಪೋರೇಷನ್

    ಲಕ್ನೋ: ಮಾಜಿ ಪ್ರಧಾನಿ ಹಾಗೂ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಮೇರು ನಾಯಕ. ಬಿಜೆಪಿಯ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಯೂ ಕೂಡ ವಾಜಪೇಯಿ ಅವರಿಗೆ ಇದೆ. ಆದರೆ ಲಕ್ನೋದ ಮಹಾನಗರ ಪಾಲಿಕೆ ಮಾತ್ರ ಅವರ ಹೆಸರನ್ನು ಮತದಾನದ ಪಟ್ಟಿಯಿಂದ ತೆಗೆಯಲಾಗಿದೆ.

    ಹೌದು. ಉತ್ತರ ಪ್ರದೇಶದ ಲಕ್ನೋ ಕಾರ್ಪೋರೇಷನ್ ವಾಜಪೇಯಿ ಅವರ ಮತದಾನದ ಪಟ್ಟಿಯಿಂದ ತೆಗೆದಿದೆ. ಈ ಬಗ್ಗೆ ಮಾತನಾಡಿದ ಕ್ಷೇತ್ರ ಚುನಾವಣೆ ಅಧಿಕಾರಿ, ದೇಶ ಕಂಡ ಅತ್ಯಂತ ಮೇರು ನಾಯಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ವಾಜಪೇಯಿ ಅವರು ಕಳೆದ ವಿಧಾನ ಸಭಾ ಹಾಗೂ ಲೋಕಸಭಾ ಸೇರಿದಂತೆ ಕಾರ್ಪೋರೇಷನ್ ಚುನಾವಣೆಗೆ ಮತದಾನ ಮಾಡಿಲ್ಲದ ಕಾರಣ ಮತದಾರರ ಪಟ್ಟಿಯಿಂದ ಅವರ ಹೆಸರು ತೆಗೆಯಲಾಗಿದೆ ಎಂದು ಹೇಳಿದ್ದಾರೆ.

    ಅಲ್ಲದೇ 10 ವರ್ಷಗಳಿಂದ ಲಕ್ನೋದಲ್ಲಿ ಅವರು ವಾಸ ಮಾಡುತ್ತಿಲ್ಲ. ಹೀಗಾಗಿ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಂಡಿದ್ದೇವೆ. 1054 ಮತದಾನದ ಸಂಖ್ಯೆಯು ಲಕ್ನೋದ ಬಾಬು ಬನ್ಸಾರಿ ದಾಸ್ ವಾರ್ಡ್‍ಬಲ್ಲಿ ವಾಸಿಸುತ್ತಿರುವಾಗಲೇ ಮಾಡಿಸಿದ್ದು. ಅವರು ಸದ್ಯ ದೆಹಲಿ 6-ಎ ಲುಟೆನ್ಸ್ ನಲ್ಲಿರುವ ನಿವಾಸದಲ್ಲಿ ವಾಸ ಮಾಡುತ್ತಿದ್ದು, ಕಳೆದ 2000ರಲ್ಲಿ ಮತದಾನ ಮಾಡಿದ್ದರು. ಇದಾದ ಬಳಿಕ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ. 2006ರಲ್ಲಿ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ದಿನೇಶ್ ಶರ್ಮಾ ಅವರ ಪರವಾಗಿ ಪ್ರಚಾರ ನಡೆಸಿದ್ದರು.

    ಸದ್ಯ ಲಕ್ನೋದಲ್ಲಿರುವ ವಾಜಪೇಯಿ 92/98-1 ಬಸ್ಮಂಡಿಯಲ್ಲಿರುವ ನಿವಾಸವು ಕಿಸಾನ್ ಸಂಘ ಕಚೇರಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. 10 ವರ್ಷವಾದರೂ ಲಕ್ನೋದಲ್ಲಿನ ನಿವಾಸಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಅವರ ಹೆಸರು ಮತದಾನದ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಕ್ಷೇತ್ರ ಚುನಾವಣಾ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

  • ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ- ಎಟಿಎಂ ಹಂತಕ ಬಿಚ್ಚಿಟ್ಟ ಭಯಾನಕ ಸತ್ಯ

    ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ- ಎಟಿಎಂ ಹಂತಕ ಬಿಚ್ಚಿಟ್ಟ ಭಯಾನಕ ಸತ್ಯ

    ಬೆಂಗಳೂರು: ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ನಲ್ಲಿ ಹಣಕ್ಕಾಗಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಮಧುಕರ್ ಪೊಲೀಸ್ ವಶದಲ್ಲಿದ್ದು, ಇದೀಗ ಭಯಾನಕ ಮಾಹಿತಿಯೊಂದನ್ನ ಹೊರಹಾಕಿದ್ದಾನೆ.

    `ನನಗೆ ಮಹಿಳೆಯರನ್ನು ಕಂಡ್ರೇ ಆಗಲ್ಲ. ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ’ ಅಂತಾ ಎಟಿಎಂ ಹಂತಕ ಮಧುಕರ್‍ರೆಡ್ಡಿ ಹೊಸ ಸ್ಟೇಟ್‍ಮೆಂಟ್ ಕೊಟ್ಟಿದ್ದಾನೆ. ಅದಕ್ಕೆ ಮಹಿಳಾ ಜೆಡ್ಜ್ ಕಾರಣವಂತೆ..!

    ಆಂಧ್ರದ ಧರ್ಮಾವರಂ, ಪಿಲೆರೋ, ವಿಜಯವಾಡ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಧುಕರ ರೆಡ್ಡಿ ನಡೆಸಿರೋ ಅಟ್ಟಹಾಸ ಒಂದೆರೆಡಲ್ಲ. ಎರಡು ಮರ್ಡರ್ ಕೇಸ್‍ಗಳು, ಒಂದು ಕೊಲೆ ಯತ್ನ ಕೇಸ್‍ಗಳ ವಿಚಾರಣೆ ನಡೆಯುತ್ತಿವೆ. ಈ ಕೇಸ್‍ಗಳಿಗೂ ಮುನ್ನ ತನ್ನ ಹುಟ್ಟೂರಿನಲ್ಲಿ ಜಮೀನು ವಿವಾದವೊಂದಕ್ಕೆ ಸಂಬಂಧಪಟ್ಟಂತೆ, ಚಿಕ್ಕಪ್ಪನ ಮಗನ ಮೇಲೆ ಬಾಂಬ್ ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣದ ತೀರ್ಪಿನ ವೇಳೆ ಮಹಿಳಾ ಜಡ್ಜ್‍ವೊಬ್ಬರು ಮಧುಕರ್ ರೆಡ್ಡಿಗೆ ಕಠಿಣ ಶಿಕ್ಷೆ ವಿಧಿಸಿದ್ದರಂತೆ. ಆಗ ಮಧುಕರ್ ರೆಡ್ಡಿ ಹಲ್ಲು ನೋವಿನ ನೆಪ ಹೇಳಿ ಎಸ್ಕೇಪ್ ಆಗಿದ್ದ. ಅಲ್ಲಿಂದೀಚೆಗೆ ಆಂಧ್ರದ ಮೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಣಕ್ಕಾಗಿ ಇಬ್ಬರು ಮಹಿಳೆಯನ್ನು ಕೊಲೆ ಮಾಡಿದ್ರೆ, ಒಬ್ಬರ ಮೇಲೆ ಕೊಲೆ ಯತ್ನ ಮಾಡಿದ್ದ. ಆಗಿನಿಂದ ನನಗೆ ಮಹಿಳೆಯರನ್ನ ಕಂಡ್ರೆ ಆಗೋದಿಲ್ಲ ಎಂದಿದ್ದಾನೆ.

    ಇದೇ ಮನಸ್ಥಿತಿಯಲ್ಲಿದ್ದ ಈ ಪಾತಕಿ, ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆಯನ್ನು ಹಣಕ್ಕಾಗಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಬೆಂಗಳೂರು ಪೊಲೀಸರ ಕೈಗೆ ಸಿಕ್ಕ ಮೇಲಷ್ಟೇ ಈ ವಿಕೃತ ಮನಸ್ಥಿಯ ಮತ್ತಷ್ಟು ಭಯಾನಕ ವಿಷಯಗಳು ಬಹಿರಂಗವಾಗಬೇಕಿದೆ.

    ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿ ಇನ್ನೇನು ಬೆಂಗಳೂರು ಪೊಲೀಸರ ವಶಕ್ಕೆ ಬಂದೇ ಬಿಟ್ಟ ಅಂತ ಅಂದುಕೊಳ್ಳುವಾಗಲೇ ಸೀಮಾಂದ್ರ ಪೊಲೀಸ್ರು ಕೋರ್ಟಿಗೆ ಮತ್ತೊಂದು ಅರ್ಜಿ ಹಾಕಿದ್ದಾರೆ. ನಮ್ಮ ಕೇಸ್‍ಗಳು ಇವೆ. ಹಾಗಾಗಿ ನಮ್ಮ ಅರ್ಜಿಗೆ ಆದ್ಯತೆ ಕೊಡಿ ಅಂತಾ ಪಟ್ಟು ಹಿಡಿದಿದ್ದಾರೆ. ಆದ್ರೆ ಫೆಬ್ರವರಿ 28ರ ವರೆಗೆ ಮಧುಕರ್ ರೆಡ್ಡಿ ಬೆಂಗಳೂರು ಪೊಲೀಸರಿಗೆ ಸಿಗೋದು ಅನುಮಾನ.

  • ವಿಜಯಪುರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಬೇಕಿದೆ ಬೆಳಕು

    ವಿಜಯಪುರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಬೇಕಿದೆ ಬೆಳಕು

    ವಿಜಯಪುರ: ಕಟ್ಟಡ ಕಾರ್ಮಿಕರಾಗಿದ್ದ ಇಲ್ಲಿನ ಶಿಕಾರಿಖಾನೆ ನಿವಾಸಿಯಾಗಿರೋ ಚಂದ್ರಕಾಂತ ದೊಡ್ಡಮನಿ 2 ವರ್ಷಗಳ ಹಿಂದೆ ಎಂದಿನಂತೆ ಕೂಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಮಹಾನಗರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮುಚ್ಚದೆ ಬಿಟ್ಟಿದ್ದ ಗಟಾರಕ್ಕೆ ಬಿದ್ದಿದ್ದಾರೆ. ಆದರೆ ಈ ಗಟಾರಕ್ಕೆ ಒಳಚರಂಡಿಯ ಸಂಪರ್ಕವು ಇದ್ದು ಸಾಕಷ್ಟು ಹೂಳು ತುಂಬಿದ್ದ ಕಾರಣ ಚಂದ್ರಕಾಂತಗೆ ಮೇಲ್ಗಡೆ ಬರಲಾಗದೆ ಅಲ್ಲೆ ಸಾವನ್ನಪ್ಪಿದ್ದಾರೆ. ಮನೆಯ ಆಧಾರ ಸ್ತಂಭವಾಗಿದ್ದ ಚಂದ್ರಕಾಂತನ ಸಾವಿನಿಂದ ಕುಟುಂಬಸ್ಥರು ಬೀದಿ ಪಾಲಾಗಿದ್ದಾರೆ.

    ಮಹಾನಗರ ಪಾಲಿಕೆಯ ಅಚಾತುರ್ಯಕ್ಕೆ ಇದೀಗ ಅಮಾಯಕ ಕೂಲಿ ಕಾರ್ಮಿಕನ ಕುಟುಂಬ ಬೀದಿಗೆ ಬಂದಿದೆ. ಚಂದ್ರಕಾಂತ್‍ಗೆ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಒರ್ವ ಹೆಣ್ಣು ಮಗಳ ಮದುವೆಯಾಗಿದೆ. ಇನ್ನು ಜೀವನ ನಿರ್ವಹಣೆಗಾಗಿ ಚಂದ್ರಕಾಂತ ಹೆಂಡತಿ ನಿಂಗವ್ವ, ಮಗ ಸಂತೋಷ ಮತ್ತು ಮಗಳು ಬೋರಮ್ಮ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.

    ನಗರದಲ್ಲಿ ಜೀವನ ನಿರ್ವಹಣೆ ಹೆಚ್ಚಾಗಿದ್ದರಿಂದ ಚಂದ್ರಕಾಂತ ಕುಟುಂಬ ಜಿಲ್ಲೆಯ ಇಂಡಿ ತಾಲೂಕಿನ ತದ್ದೆವಾಡ ಗ್ರಾಮದಲ್ಲಿ ನೆಲೆಸಿದ್ದಾರೆ. ಇನ್ನು ಮಗಳು ಬೋರಮ್ಮಗೆ ಮದುವೆ ವಯಸ್ಸಾಗಿದ್ದು, ಮದುವೆ ಮಾಡಲು ನಿಂಗವ್ವ ಪರದಾಡುತ್ತಿದ್ದಾರೆ. ಚಂದ್ರಕಾಂತರ ಹಠಾತ್ ಸಾವಿನಿಂದ ಮಗ ಸಂತೋಷ ಜೀವನ ನಿರ್ವಹಣೆಗಾಗಿ ಅರ್ಧಕ್ಕೆ ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ.

    ಮಹಾನಗರ ಪಾಲಿಕೆಯ ಅಚಾತುರ್ಯಕ್ಕೆ ಚಂದ್ರಕಾಂತ ಕುಟುಂಬ ಬೀದಿಗೆ ಬಿದ್ದಿದ್ದು, ಇವರಿಗೆ ಕಾರ್ಮಿಕ ಇಲಾಖೆಯಿಂದಾಗಲಿ ಅಥವಾ ಮಹಾನಗರ ಪಾಲಿಕೆಯಿಂದಾಗಲಿ ಯಾವುದೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಬೆಳಕು ಕಾರ್ಯಕ್ರಮದಿಂದಾದರು ಈ ಕುಟುಂಬಕ್ಕೆ ಬೆಳಕಾಗಲಿ ಅನ್ನೋದು ನಮ್ಮ ಆಶಯ.

    https://www.youtube.com/watch?v=mhsYqpA34nI