Tag: Corporation Circle

  • ಶುಚಿತ್ವ ಕಾಪಾಡದ ಹಾಪ್‌ಕಾಮ್ಸ್ – ಗಲೀಜು ಕ್ಯಾನ್‌ಗಳಲ್ಲಿ ಜ್ಯೂಸ್ ಸರಬರಾಜು

    ಶುಚಿತ್ವ ಕಾಪಾಡದ ಹಾಪ್‌ಕಾಮ್ಸ್ – ಗಲೀಜು ಕ್ಯಾನ್‌ಗಳಲ್ಲಿ ಜ್ಯೂಸ್ ಸರಬರಾಜು

    ಬೆಂಗಳೂರು: ನಗರದ ಕೆಲವು ಹಾಪ್‌ಕಾಮ್‌ಗಳಲ್ಲಿ (Hopcoms) ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತಮ್ಮಲ್ಲೇ ತಯಾರಾಗುವ ಜ್ಯೂಸ್‌ನ್ನು ಸರಬರಾಜು ಮಾಡುತ್ತಿದ್ದು, ಜನರ ಸ್ಪಂದನೆಯೂ ಉತ್ತಮವಾಗಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಶುಚಿತ್ವ ಮರೆತು ಜ್ಯೂಸ್ ಮಾರಾಟ ಮಾಡುತ್ತಿದ್ದಾರೆ.

    ಹೌದು, ಸಾಮಾನ್ಯವಾಗಿ ಬಣ್ಣ ಅಥವಾ ಇನ್ನಿತರ ಕೆಮಿಕಲ್ ಬಳಸಿ ತಯಾರು ಮಾಡುವ ಜ್ಯೂಸ್‌ಗಿಂತ ಮನೆಯಲ್ಲಿ ತಯಾರು ಮಾಡುವ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು. ಹೀಗಿರುವಾಗ ಮನೆಯಲ್ಲಿ ತಯಾರಿಸುವ ಹಾಗೆಯೇ ಹಾಪ್‌ಕಾಮ್‌ಗಳು ಜ್ಯೂಸ್ ತಯಾರಿಸಲು ಮುಂದಾಗಿದ್ದವು. ಇದಕ್ಕೆ ಮಾರುಹೋದ ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿತ್ತು. ಆದರೆ ಇದೀಗ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ಮಂಗಳಕರ ದಿನ ಯುಗಾದಿ!

    ಬೆಂಗಳೂರಿನ ಲಾಲ್‌ಬಾಗ್, ಕಬ್ಬನ್‌ಪಾರ್ಕ್, ಹಾರ್ಡಿಂಗ್ ಸರ್ಕಲ್ ಸೇರಿದಂತೆ ಕೆಲ ಕಡೆ ಹಾಪ್‌ಕಾಮ್‌ನಲ್ಲೇ ತಯಾರಾಗುವ ಜ್ಯೂಸ್‌ನ್ನು ಆಯಾ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲವು ಕಡೆ ಬಾಟಲ್‌ಗಳಿಗೆ ಫಿಲ್ ಮಾಡಿ ಹಾಪ್‌ಕಾಮ್‌ನವರು ಮಾರಾಟ ಮಾಡಿದರೆ, ಕೆಲವು ಕಡೆ ಗ್ಲಾಸ್ ಲೆಕ್ಕದಲ್ಲೂ ಮಾರಾಟ ಮಾಡಲಾಗುತ್ತಿದೆ. ಆದರೆ ಗ್ಲಾಸ್ ಲೆಕ್ಕದಲ್ಲಿ ಮಾರಾಟ ಮಾಡುವ ಪ್ರಕ್ರಿಯೆ ನೋಡಿದ್ರೆ, ನಾವು ಇಷ್ಟು ದಿನ ಬಾಯಿ ಚಪ್ಪರಿಸಿ ಕುಡಿಯುತ್ತಿದ್ದ ಜ್ಯೂಸ್ ಇದೇನಾ ಎನ್ನುಬಹುದು.

    ನಗರದ ಕಾರ್ಪೋರೇಷನ್ ಸರ್ಕಲ್‌ನಲ್ಲಿರುವ ಹಾಪ್‌ಕಾಮ್ ಮಳಿಗೆಯೊಂದರಲ್ಲಿ ಜೂಸ್ ಮಾರಾಟ ಮಾಡುತ್ತಾರೆ. ನಿತ್ಯ ಇಲ್ಲಿಗೆ ಬರುವ ನೂರಾರು ಜನ, ಇಲ್ಲಿ ತಯಾರಾಗುವ ಮಾವಿನ ಹಣ್ಣು ಹಾಗೂ ದ್ರಾಕ್ಷಿ ಜ್ಯೂಸ್ ಅನ್ನು ಬಾಯಿ ಚಪ್ಪರಿಸಿ ಕುಡಿಯುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಹಾಪ್‌ಕಾಮ್‌ನವರು ಜ್ಯೂಸ್ ಸರಬರಾಜು ವೇಳೆ ಸ್ವಚ್ಛತೆ ಮರೆತು ಕೊಳೆ ತುಂಬಿರುವ ಡ್ರಮ್‌ಗಳಲ್ಲೇ ಜ್ಯೂಸ್ ಸರಬರಾಜು ಮಾಡುತ್ತಿದ್ದಾರೆ. ನಿತ್ಯ ಐದಾರು ಕ್ಯಾನ್‌ಗಳಲ್ಲಿ ಎರಡು ಬಗೆಯ ಜ್ಯೂಸ್‌ಗಳನ್ನು ತರಲಾಗುತ್ತದೆ. ಇದನ್ನ ಮಾರುವ ವ್ಯಕ್ತಿ ಕೂಡ, ಕೊಳೆಯ ಕೈಯಲ್ಲಿ ಕ್ಯಾನ್ ಒಳಭಾಗಕ್ಕೆ ಕೈ ಹಾಕಿ ತೊಳೆದು ನೇರವಾಗಿ, ಅದೇ ಕ್ಯಾನ್‌ನಲ್ಲಿ ಉಳಿದ ಜ್ಯೂಸ್ ಅನ್ನು ಮತ್ತೆ ಡಿಸ್ಪೆನ್ಸರ್ಸ್‌ಗೆ ತುಂಬಿ, ಬಂದ ಗ್ರಾಹಕರಿಗೆ ಮಾರಾಟ ಮಾಡ್ತಿದ್ದಾರೆ

    ಈ ಸಂಬಂಧ ಹಾಪ್‌ಕಾಮ್ ಆಗಿರುವ ತಪ್ಪನ್ನು ಒಪ್ಪಿಕೊಂಡಿದೆ. ಪ್ರತಿಬಾರಿ ಕೂಡ ನಾವು ಇದನ್ನ ಸ್ವಚ್ಚ ಮಾಡುತ್ತೇವೆ. ಆದರೆ ಈ ಪ್ರಮಾಣದ ಕೊಳೆಯಾಗಿರುವುದು, ಅಶುಚಿತ್ವ ಆಗಿರುವ ಬಗ್ಗೆ ಗೊತ್ತಿರಲಿಲ್ಲ. ಸದ್ಯ ಈಗ ನಮ್ಮ ಗಮನಕ್ಕೆ ಬಂದಿದೆ. ಈ ಕ್ಷಣದಿಂದಲೇ ಈ ರೀತಿಯ ಸರಬರಾಜು ನಿಲ್ಲಿಸಿ ತಕ್ಷಣ ತಪ್ಪನ್ನ ಸರಿಮಾಡುವುದಾಗಿ ತಿಳಿಸಿದ್ದಾರೆ.ಇದನ್ನೂ ಓದಿ:ಚಾರ್ಮಾಡಿ ಘಾಟಿಯಲ್ಲಿ 100 ಅಡಿ ಕಂದಕಕ್ಕೆ ಬಿದ್ದ ಕಾರು, ಐವರು ಪವಾಡ ಸದೃಶ್ಯ ಪಾರು!

  • ಸಣ್ಣ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆ

    ಸಣ್ಣ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಿದ್ದು, ಬಿದ್ದ ಸ್ವಲ್ಪ ಮಳೆಗೆ ರಾಜಧಾನಿ ಸ್ಥಿತಿ ಅಸ್ತವ್ಯಸ್ತವಾಗಿದೆ.

    ಕಾರ್ಪೋರೇಷನ್ ಸರ್ಕಲ್‍ನ ರಸ್ತೆಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ. ಬೆಂಗಳೂರು ರಸ್ತೆಗಳು ಈ ಸಣ್ಣ ಮಳೆಗೆ ನದಿಯಂತಾಗಿದೆ. ವಸಂತನಗರದ ಕಡೆ ರಸ್ತೆಗಳು ಹೊಳೆಯಂತಾಗಿದೆ. ಇದರಿಂದ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಇದನ್ನೂ ಓದಿ:  ವಿಸರ್ಜನೆ ಸಂಬಂಧ ಜಿಲ್ಲಾಡಳಿತ, ಗಣಪತಿ ಮಂಡಳಿ ನಡುವೆ ಜಟಾಪಟಿ

    ಮಳೆರಾಯನ ಆರ್ಭಟದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಈ ಪರಿಣಾಮ ರಸ್ತೆಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ. ಹವಾಮಾನ ಇಲಾಖೆ ನಾಳೆಯವರೆಗೂ ಮಳೆ ಮುಂದುವರೆಯುವ ಎಚ್ಚರಿಕೆಯನ್ನು ನೀಡಿದೆ. ಇದನ್ನೂ ಓದಿ:  ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಆರೋಗ್ಯ ನಿರೀಕ್ಷಕ