Tag: Coronavirus

  • ಸಮುದ್ರದಲ್ಲಿ ಅಡುಗೆ ಮಾಡಿ ಜನತಾ ಕರ್ಫ್ಯೂಗೆ ಬೆಂಬಲಿಸಿದ ಮಲ್ಪೆ ಮೀನುಗಾರರು

    ಉಡುಪಿ: ಭೂಮಿಯ ಮೇಲೆ ವಾಸಿಸುವವರು ಜನತಾ ಕರ್ಫ್ಯೂಗೆ ಫುಲ್ ಸಪೋರ್ಟ್ ಮಾಡಿದ್ದಾರೆ. ಸಮುದ್ರವನ್ನೇ ಮನೆ ಮಾಡಿಕೊಂಡವರು ಕೂಡ ತಮ್ಮ ಕಸುಬು ಬಂದ್ ಮಾಡಿ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.

    ಉಡುಪಿ ಸಂಪೂರ್ಣ ಬಂದ್ ಆಗಿರುವುದರಿಂದ ಸಾರ್ವಜನಿಕರು ಹೋಟೆಲ್ ಅಂಗಡಿಗಳು ಇಲ್ಲದೆ ಬೆರಳೆಣಿಕೆಯ ಜನ ಸಮಸ್ಯೆಗಳನ್ನು ಎದುರಿಸಿದರು. ಹೇಗೋ ಮಾಡಿ ಬೆಳಗಿನ ತಿಂಡಿ ಮಧ್ಯಾಹ್ನದ ಊಟವನ್ನು ಪೂರೈಸಿದ್ದಾರೆ. ಆದರೆ ಹೋಟೆಲ್ ಅಂಗಡಿಗಳು ಇಲ್ಲದೆ ಸಮುದ್ರದಲ್ಲಿ ಕಸುಬು ಮಾಡುವವರು ಏನು ಮಾಡಬೇಕು. ಮೀನುಗಾರಿಕೆ ಮಾಡುವವರು ಭಾನುವಾರವನ್ನು ಸಂಪೂರ್ಣವಾಗಿ ಸಮುದ್ರದಲ್ಲಿ ದೋಣಿ ಒಳಗೆ ಕಳೆದಿದ್ದಾರೆ.

    ಬೆಳಗ್ಗೆಯಿಂದಲೇ ತಮ್ಮ ತಿಂಡಿ ಊಟ, ನಿದ್ದೆ, ಬಲೆಯನ್ನು ಹೆಣೆಯುವುದೂ ಎಲ್ಲವನ್ನು ದೋಣಿಯಲ್ಲೇ ಪೂರೈಸಿದ್ದಾರೆ. ಅರಬ್ಬಿ ಸಮುದ್ರದ ನೀರಿನಲ್ಲೇ ಭಾನುವರ ಕಳೆದ ಕಡಲ ಮಕ್ಕಳು ಪ್ರಧಾನಿ ಮೋದಿ ಕರೆಗೆ ಬೆಂಬಲ ಕೊಟ್ಟಿದ್ದಾರೆ.

    ದೋಣಿಯೊಳಗೆ ಅಡುಗೆ ಮಾಡುತ್ತಿದ್ದ ದಿವಾಕರ್ ಕಾರ್ವಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಇವತ್ತು ಬಂದ್ ಇರುತ್ತದೆ ಎಂದು ನಮಗೆ ಮೊದಲೇ ಮಾಹಿತಿ ಇತ್ತು. ಹಾಗಾಗಿ ನಾವು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೆವು. ನಾವು ಮೀನುಗಾರಿಕೆಗೆ ಪಶ್ಚಿಮಕ್ಕೆ ಹೋಗುವಾಗ ಹತ್ತು ಹದಿನೈದು ದಿವಸದ ಎಲ್ಲ ತಯಾರಿಗಳನ್ನು ಮಾಡಿಕೊಂಡೆ ಹೋಗುತ್ತೇವೆ. ಸಮುದ್ರದ ನಡುವೆ ಅಡುಗೆ ಮಾಡಿ ಜೊತೆಗೆ ಕಸುವು ಮಾಡುತ್ತೇವೆ. ಆದರೆ ಈ ಭಾನುವಾರ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ ಬೋಟಿನ ಒಳಗೆ ಅಡುಗೆ ಮಾಡಿ ದಿನವನ್ನು ಕಳೆದೆವು ಎಂದು ಹೇಳಿದರು.

    ಸದಾ ಗಿಜಿಗುಡುತ್ತಿರುವ ನೂರಾರು ಸಂಖ್ಯೆಯಲ್ಲಿ ಜನರು ಓಡಾಡುತ್ತಿರುವ ಮಲ್ಪೆ ಬಂದರು ಇವತ್ತು ಬಿಕೋ ಅನ್ನುತ್ತಿತ್ತು. ಮೀನುಗಳನ್ನು ಹೊರ ತಾಲೂಕು ಹೊರರಾಜ್ಯ ಜಿಲ್ಲೆಗಳಿಗೆ ಸಾಗಿಸುವ ಲಾರಿಗಳು ಬಂದರಿನಲ್ಲೇ ನಿಂತಿದ್ದವು. ಬಂದರಿನ ಒಳಗಿನ ಅಂಗಡಿಗಳು ಮಲ್ಪೆ ವ್ಯಾಪ್ತಿಯ ಎಲ್ಲ ವ್ಯಾಪಾರ ವಹಿವಾಟುಗಳು ಎಂದು ನಡೆಯಲಿಲ್ಲ.

  • ವಿಶ್ವಾದ್ಯಂತ 3.07 ಲಕ್ಷಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ – 13 ಸಾವಿರಕ್ಕೂ ಹೆಚ್ಚು ಮಂದಿ ಬಲಿ

    ವಿಶ್ವಾದ್ಯಂತ 3.07 ಲಕ್ಷಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ – 13 ಸಾವಿರಕ್ಕೂ ಹೆಚ್ಚು ಮಂದಿ ಬಲಿ

    – ಭಾರತದಲ್ಲಿ 332 ಕೊರೊನಾ ಪ್ರಕರಣ ವರದಿ
    – ಇಟಲಿಯಲ್ಲಿ ಕಳೆದ 24 ಗಂಟೆಯಲ್ಲಿ 793 ಮಂದಿ ಸಾವು

    ನವದೆಹಲಿ: ವಿಶ್ವದಾದ್ಯಂತ ರಣಕೇಕೆ ಹಾಕುತ್ತಿರುವ ಡೆಡ್ಲಿ ಕೊರೊನಾ ವೈರಸ್‍ಗೆ 188 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಈವರೆಗೆ ಸೋಂಕಿಗೆ 13,051 ಮಂದಿ ಬಲಿಯಾಗಿದ್ದಾರೆ. ಇತ್ತ ಭಾರತದಲ್ಲಿ ಸೋಂಕಿತರ ಸಂಖ್ಯೆ 332ಕ್ಕೆ ಏರಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ 21 ಮಂದಿಗೆ ಕೊರೊನಾ ತಗುಲಿರುವುದು ವರದಿಯಾಗಿದೆ.

    ಒಟ್ಟು 188 ರಾಷ್ಟ್ರ ಹಾಗೂ ಪ್ರಾಂತ್ಯಗಳ ಮೇಲೆ ತನ್ನ ಕರಿನೆರಳು ಬೀರುತ್ತಿರುವ ಕೊರೊನಾ ವೈರಸ್ ಸೋಂಕು ಈವರೆಗೆ ಸುಮಾರು 3,07,652 ಮಂದಿಗೆ ತಗುಲಿದೆ. ಅಲ್ಲದೇ ವಿಶ್ವದೆಲ್ಲೆಡೆ ಒಟ್ಟು 13,051 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 95,797 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,89,804 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

    ಡೆಡ್ಲಿ ಕೊರೊನಾಗೆ ಭಾರತದಲ್ಲಿ ಈವರೆಗೆ 332 ಮಂದಿ ತುತ್ತಾಗಿದ್ದು, 23 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 304 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಈಗಾಗಲೇ ಕೊರೊನಾಗೆ 5 ಮಂದಿ ಸಾವನ್ನಪ್ಪಿದ್ದಾರೆ.

    24 ಗಂಟೆಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳು:
    ಭಾರತದಲ್ಲಿ 83 ಹೊಸ ಪ್ರಕರಣ ದಾಖಲಾಗಿದೆ. ಇತ್ತ ಇಟಲಿಯಲ್ಲಿ 6,557, ಸ್ಪೇನ್‍ನಲ್ಲಿ 3,925, ಜರ್ಮನಿಯಲ್ಲಿ 2,516, ಅಮೆರಿಕದಕಲ್ಲಿ 7,328, ಇರಾನ್‍ನಲ್ಲಿ 966, ಫ್ರಾನ್ಸ್ ನಲ್ಲಿ 1,847 ಕೊರೊನಾ ಸೋಂಕಿತ ಹೊಸ ಪ್ರಕರಣಗಳು ವರದಿಯಾಗಿದೆ.

    ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಮರಣ ಮೃದಂಗ ಭಾರಿಸುತ್ತಿತ್ತು. ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಯ ಸತತ ಪರಿಶ್ರಮ, ಸರ್ಕಾರದ ಕ್ರಮಗಳಿಂದ ಚೀನಾದಲ್ಲಿ ಸದ್ಯ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ಇಟಲಿಯಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದ್ದು, ಶನಿವಾರ ಒಂದೇ ದಿನಕ್ಕೆ 793 ಮಂದಿ ಕೋರೊನಾಗೆ ಬಲಿಯಾಗಿದ್ದಾರೆ.

    1. ಚೀನಾ – ಈವರೆಗೆ ಕೊರೊನಾ ಸೋಂಕಿಗೆ 81,054 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 72,440 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,261 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 5,353 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.

    2. ಇಟಲಿ – ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 53,578 ಮಂದಿ ತುತ್ತಾಗಿದ್ದು, ಅವರಲ್ಲಿ 6,072 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 42,681 ಮಂದಿ ಕೊರೊನಾದಿಂದ ಬಳಲುತ್ತಿದ್ದು, 4,825 ಮಂದಿ ಮೃತಪಟ್ಟಿದ್ದಾರೆ.

    3. ಇರಾನ್ – 20,610 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 7,635 ಮಂದಿ ಸೊಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 11,419 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದು, 1,556 ಸೋಂಕಿತರು ಸಾವನ್ನಪ್ಪಿದ್ದಾರೆ.

    4. ಸ್ಪೇನ್ – 25,496 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ 2,125 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 21,993 ರೋಗಿಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 1,378 ಮಂದಿ ಬಲಿಯಾಗಿದ್ದಾರೆ.

    5. ದಕ್ಷಿಣ ಕೊರಿಯಾ – 8,897 ಮಂದಿಗೆ ಸೋಂಕು ತಗುಲಿತ್ತು. ಆದರೆ ಅವರಲ್ಲಿ 2,909 ರೋಗಿಗಳು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. 104 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಪ್ರಸ್ತುತ 5,884 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

    6. ಜರ್ಮನಿ – 22,364 ಮಂದಿಯಲ್ಲಿ ಕಾಣಿಕೊಂಡ ಕೊರೊನಾ ಸೋಂಕಿನಿಂದ 209 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸದ್ಯ 84 ಮಂದಿ ಬಲಿಯಾಗಿದ್ದು, ಪ್ರಸ್ತುತ 22,071 ರೋಗಿಗಳು ಕೊರೊನಾದಿಂದ ನರಳುತ್ತಿದ್ದಾರೆ.

    7. ಫ್ರಾನ್ಸ್ – 14,459 ಮಂದಿ ಕೊರೊನಾಗೆ ತುತ್ತಾಗಿದ್ದರು. ಅವರಲ್ಲಿ 1,587 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 12,310 ಮಂದಿ ಸೋಂಕಿನಿಂದ ಬಳಲುತ್ತಿದ್ದು, 562 ಮಂದಿ ಜೀವ ಕಳೆದುಕೊಂಡಿದ್ದಾರೆ.

    8. ಅಮೆರಿಕ – ಯುಎಸ್‍ಎನಲ್ಲಿ ಕೊರೊನಾಗೆ 341 ಮಂದಿ ಬಲಿಯಾಗಿದ್ದಾರೆ. 26,711 ಮಂದಿಯಲ್ಲಿ ಕಾಣಿಸಿಕೊಂಡ ಸೋಂಕಿನಿಂದ 176 ಮಂದಿ ಗುಣಮುಖರಾಗಿದ್ದಾರೆ. ಸದ್ಯ 26,194 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದಾರೆ.

    9. ಪಾಕಿಸ್ತಾನ – ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ಹರಡಿರುವ ಕೊರೊನಾ ವೈರಸ್‍ಗೆ ಈವರೆಗೆ 645 ಮಂದಿ ತುತ್ತಾಗಿದ್ದು, 13 ಮಂದಿ ಚೇತರಿಸಿಕೊಂಡಿದ್ದಾರೆ. ಮೂವರು ಸೋಂಕಿತರು ಸಾವನ್ನಪ್ಪಿದ್ದು, ಪ್ರಸ್ತುತ 629 ಮಂದಿ ಸೋಂಕಿನಿಂದ ನರಳುತ್ತಿದ್ದಾರೆ.

  • ಮೂರು ದಿನ ಬಟ್ಟೆ ಅಂಗಡಿಗಳು ಕ್ಲೋಸ್

    ಮೂರು ದಿನ ಬಟ್ಟೆ ಅಂಗಡಿಗಳು ಕ್ಲೋಸ್

    – ಕಷ್ಟದಲ್ಲಿ ದಿನಗೂಲಿ ನೌಕರರು

    ಬೆಂಗಳೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಹಂತ ಹಂತವಾಗಿ ಎಲ್ಲ ಉದ್ಯಮಗಳು ಬಂದ್ ಆಗುತ್ತಿದೆ. ಇದೀಗ ಬಟ್ಟೆ ಅಂಗಡಿಗಳು ಬಂದ್ ಆಗಿವೆ.

    ಭಾನುವಾರದಿಂದ ಮೂರು ದಿನಗಳ ಕಾಲ ಬಟ್ಟೆ ವ್ಯಾಪಾರಿಗಳು ಸಂಪೂರ್ಣ ಬಂದ್ ಮಾಡಲು ನಿರ್ಧಾರ ಮಾಡಿದ್ದು, ಅದರ ಎಫೆಕ್ಟ್ ಇಂದಿನಿಂದಲೇ ಶುರುವಾಗಿದೆ. ಬಟ್ಟೆ ವ್ಯಾಪಾರಕ್ಕೆ ಫೇಮಸ್ ಆಗಿದ್ದ ನಗರದ ಚಿಕ್ಕಪೇಟೆಯಲ್ಲಿ ಇಂದಿನಿಂದಲೇ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಚಿಕ್ಕಪೇಟೆ ಸೇರಿದಂತೆ ಬಹುತೇಕ ದೊಡ್ಡ ದೊಡ್ಡ ಬಟ್ಟೆ ಮಳಿಗೆಗಳು ಈಗಾಗಲೇ ಬಾಗಿಲು ಮುಚ್ಚಿವೆ.

    ಭಾನುವಾರ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದು, ಬಹುತೇಕ ಜನರು ಜನತಾ ಕರ್ಫ್ಯೂ ವನ್ನು ಸ್ವಾಗತಿಸಿದ್ದಾರೆ. ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳು ಸಂಪೂರ್ಣ ಕ್ಲೋಸ್ ಆಗಿದೆ. ಈ ಅಂಗಡಿಗಳಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ಜನರಿಗೆ ಮೂರು ದಿನಗಳ ಬಟ್ಟೆ ವ್ಯವಹಾರ ಬಂದ್ ಆಗಿರುವುದು ತುಂಬಾ ತೊಂದರೆಯಾಗಿದೆ.

    ದಿನ ಕೆಲಸ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೂರು ದಿನ ರಜೆ ನೀಡಿದರೆ ನಮ್ಮ ಕುಟುಂಬ ನಿರ್ವವಣೆ ಕಷ್ಟವಾಗಲಿದೆ ಎಂದು ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡೋ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡರು. ಸದ್ಯ ಮೂರು ದಿನಗಳ ಮಟ್ಟಿಗೆ ಮಾತ್ರ ಬಟ್ಟೆ ವ್ಯಾಪಾರ ಬಂದ್ ಆಗಿದ್ದು, ಕೊರೊನಾ ವೈರಸ್ ಮುಂದಿನ ಹಂತ ನೋಡಿಕೊಂಡು ಬಟ್ಟೆ ವ್ಯಾಪಾರ ನಿರ್ಧಾರವಾಗಲಿದೆ.

  • ಕಫ, ಕೆಮ್ಮು ಆಯ್ತು ಈಗ ಕೊರೊನಾ ಸೋಂಕಿತರಿಗೆ ವಾಸನೆ, ರುಚಿ ಗ್ರಹಿಸುವ ಶಕ್ತಿ ಇರಲ್ಲ

    ಕಫ, ಕೆಮ್ಮು ಆಯ್ತು ಈಗ ಕೊರೊನಾ ಸೋಂಕಿತರಿಗೆ ವಾಸನೆ, ರುಚಿ ಗ್ರಹಿಸುವ ಶಕ್ತಿ ಇರಲ್ಲ

    ರೋಮ್: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿದ ಕೆಲವರಿಗೆ ವಾಸನೆ ಗ್ರಹಿಸುವ ಹಾಗೂ ರುಚಿ ತಿಳಿಯುವ ಶಕ್ತಿ ಇರುವುದಿಲ್ಲ ಎನ್ನುವ ವಿಚಾರ ಸಂಶೋಧನೆಯಿಂದ ತಿಳಿದು ಬಂದಿದೆ.

    ಇಟಲಿಯಲ್ಲಿ ಸೋಂಕಿಗೆ ತುತ್ತಾದ ರೋಗಿಯೊಬ್ಬರು ಈ ಬಗ್ಗೆ ತಿಳಿಸಿದ್ದಾರೆ. ನಾನು 2-3 ವಾರದ ಹಿಂದೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದೆ. ಆದರೆ ಈಗ ನಾನು ಸಂಪೂರ್ಣ ಗುಣವಾಗಿದ್ದೇನೆ. ನನಗೆ ಸೋಂಕು ತಗುಲಿದ್ದಾಗ ಯಾವುದೇ ವಾಸನೆ ಹಾಗೂ ರುಚಿಯನ್ನು ಗ್ರಹಿಸುವ ಶಕ್ತಿ ನನಗಿರಲಿಲ್ಲ. ನಗರದಲ್ಲಿ ಕೊರೊನಾ ವೈರಸ್ ಹರಡುತ್ತಿದೆ ಎಂದು ತಿಳಿದಾಗ ನಾನು ಮನೆಯನ್ನು ಫಿನಾಯಿಲ್ ಹಾಕಿ ಸ್ವಚ್ಛಗೊಳಿಸಿದ್ದೆ. ಆಗ ನನಗೆ ಫಿನಾಯಿಲ್ ವಾಸನೆ ಗ್ರಹಿಸುವ ಸಾಧ್ಯವಾಗಿರಲಿಲ್ಲ. ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಬಳಸುವಾಗಲೂ ಅದರ ವಾಸನೆ ನನಗೆ ಬರುತ್ತಿರಲಿಲ್ಲ. ಯಾವುದೇ ಅಡುಗೆಯ ರುಚಿ ಕೂಡ ತಿಳಿಯುತ್ತಿರಲಿಲ್ಲ. ಬಳಿಕ ನಾನು ಪರೀಕ್ಷೆ ಮಾಡಿಸಿದಾಗ ಕೊರೊನಾ ತಗುಲಿರುವುದು ದೃಢಪಟ್ಟಿತ್ತು ಎಂದು ಸೋಂಕಿನಿಂದ ಗುಣಪಟ್ಟ ಮಹಿಳೆ ತಿಳಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.

    ಇಟಲಿಯಲ್ಲಿ ಕೊರೊನಾ ಸೋಂಕು ಮೊದಲು ಕಾಣಿಸಿಕೊಂಡಾಗ ನಿರ್ಲಕ್ಷಿಸಲಾಯ್ತು. ಈ ಸೋಂಕಿನ ಲಕ್ಷಣಗಳೇನು? ರೋಗಿಗಳಿಗೆ ಸೋಂಕು ತಗುಲಿದಾಗ ಅವರ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು ಎಂದು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ತೋರಲಿಲ್ಲ. ಹೀಗಾಗಿ ಇಟಲಿಯಲ್ಲಿ ಕೊರೊನಾ ವ್ಯಾಪಾಕವಾಗಿ ಹರಡುತ್ತಿದೆ.

    ಇತ್ತ ಜರ್ಮನಿ ಮೂಲದ ವೈರಾಲಸ್ಟಿಲ್ ಹೆಂಡ್ರಿಕ್ ಸ್ಟ್ರೀಕ್ ಕೊರೊನಾ ಬಗ್ಗೆ ಸಂಶೋಧನೆ ಮಾಡುತ್ತಿದ್ದು, ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ರೋಗ ಲಕ್ಷಣಗಳ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದರು. ಜರ್ಮನಿಯಲ್ಲಿ ಸೋಂಕು ಹರಡಿದಾಗ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದ್ದ ಸೋಂಕಿತ ರೋಗಿಗಳು ರಕ್ತದ ಸ್ಯಾಂಪಲ್‍ಗಳನ್ನು ಪ್ರತಿ ದಿನ ಸಂಗ್ರಹಿಸಿ, ಸಂಶೋಧನಗೆ ಬಳಸಿಕೊಳ್ಳುವ ಅವಕಾಶ ಸ್ಟ್ರೀಕ್ ತಂಡಕ್ಕೆ ಸಿಕ್ಕಿತು.

    ಈ ಬಗ್ಗೆ ಸ್ಟ್ರೀಕ್ ಸಂದರ್ಶನವೊಂದರಲ್ಲಿ ತಿಳಿಸಿದ್ದು, ಹಾನ್ಸ್‌ಬರ್ಗ್ ನಲ್ಲಿ ಸೋಂಕು ತಗುಲಿದ್ದ ಪ್ರತಿಯೊಬ್ಬ ರೋಗಿಯ ಮನೆಗೆ ನಮ್ಮ ತಂಡವರು ಭೇಟಿ ಕೊಟ್ಟು ಮಾಹಿತಿ ಕಲೆಹಾಕಿದರು. ಸೋಂಕನಿಂದ ಬಳಲಿ ಗುಣಮುಖರಾದವರ ಬಳಿ ಕೂಡ ಸೋಂಕಿನ ರೋಗ ಲಕ್ಷಣಗಳೇನು? ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡೆವು. ನಾವು ಮಾಹಿತಿ ಕಲೆಹಾಕಿದ ಶೇ. 75ರಷ್ಟು ಪ್ರಕರಣಗಳಲ್ಲಿ ರೋಗಿಗಳು ವಾಸನೆ ಗ್ರಹಿಸುವ ಹಾಗೂ ರುಚಿ ಗುರುತಿಸುವ ಶಕ್ತಿಯನ್ನು ಕಳೆದುಕೊಂಡಿದ್ದರು ಎಂಬುದು ತಿಳಿದು ಬಂದಿದೆ. ಆದರೆ ಈ ರೋಗ ಲಕ್ಷಣ ಯಾವಾಗ ಕಾಣಿಸಿಕೊಳ್ಳುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸೋಂಕು ತಗುಲಿದ ಕೆಲ ಸಮಯದ ಬಳಿಕ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಮಿಲನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಪಕ ಮಿಸ್ಸಿಮೊ ಗಲ್ಲಿ ಅವರು ಕೂಡ ಕೊರೊನಾ ರೋಗ ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ. ಕೊರೊನಾ ಸೋಂಕಿತ ಬಹುತೇಕ ರೋಗಿಗಳಲ್ಲಿ ವಾಸನೆಯನ್ನು ಹಾಗೂ ರುಚಿಯನ್ನು ಗುರುತಿಸುವ ಶಕ್ತಿ ಇರುವುದಿಲ್ಲ. ಸೋಂಕು ತಗುಲಿದ ಆರಂಭಿಕ ಹಂತದಲ್ಲಿ ಈ ಲಕ್ಷಣದ ಬಗ್ಗೆ ನಿಖರವಾಗಿ ತಿಳಿಯುವುದಿಲ್ಲ. ಇದೊಂದು ಕೊರೊನಾ ಸೊಂಕಿನ ಅಸಾಮಾನ್ಯ ಲಕ್ಷಣ ಎಂದು ತಿಳಿಸಿದ್ದಾರೆ.

    ಸದ್ಯ ಈ ಲಕ್ಷಣಗಳು ಕೊರೊನಾ ಸೋಂಕಿನ ಲಕ್ಷಣವೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೆಲ ವೈರಸ್‍ಗಳು ದೇಹಕ್ಕೆ ಸೇರಿದರೆ ಸೋಂಕಿತ ವ್ಯಕ್ತಿಯ ಮೂಗಿನಲ್ಲಿರುವ ಕೋಶಗಳು ಹಾಗೂ ಕೋಶ ಗ್ರಾಹಕಗಳನ್ನು ನಾಶಮಾಡುತ್ತದೆ. ಕೆಲ ವೈರಸ್‍ಗಳು ಸಂವೇದನಾ ನರಗಳ ಮೂಲಕ ಮೆದುಳನ್ನು ಪ್ರವೇಶಿಸಿ ಹಾನಿ ಮಾಡುತ್ತದೆ. ಇನ್ನೂ ಕೆಲ ವೈರಸ್‍ಗಳು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಇರಾನ್‍ನಲ್ಲಿ ವರದಿಯಾದ ಒಂದು ಕೊರೊನಾ ಸೋಂಕಿತ ಪ್ರಕರಣದಲ್ಲಿ ರೋಗಿ ವಾಸನೆ ಗೃಹಿಸುವ ಶಕ್ತಿ ಜೊತೆಗೆ ದೃಷ್ಟಿ ಕಳೆದುಕೊಂಡಿದ್ದಾರೆ ಎಂಬುದು ವರದಿಯಾಗಿದೆ.

  • ವಿಶ್ವಾದ್ಯಂತ 2.75 ಲಕ್ಷ ಮಂದಿಗೆ ತಗುಲಿದ ಕೊರೊನಾ – ಭಾರತದಲ್ಲಿ ಸೋಂಕಿತರ ಸಂಖ್ಯೆ 249ಕ್ಕೆ ಏರಿಕೆ

    ವಿಶ್ವಾದ್ಯಂತ 2.75 ಲಕ್ಷ ಮಂದಿಗೆ ತಗುಲಿದ ಕೊರೊನಾ – ಭಾರತದಲ್ಲಿ ಸೋಂಕಿತರ ಸಂಖ್ಯೆ 249ಕ್ಕೆ ಏರಿಕೆ

    – ಇಟಲಿಯಲ್ಲಿ ಕಳೆದ 24 ಗಂಟೆಯಲ್ಲಿ 627 ಮಂದಿ ಬಲಿ

    ನವದೆಹಲಿ: ವಿಶ್ವದಾದ್ಯಂತ ರಣಕೇಕೆ ಹಾಕುತ್ತಿರುವ ಡೆಡ್ಲಿ ಕೊರೊನಾ ವೈರಸ್‍ಗೆ 185 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಈವರೆಗೆ ಸೋಂಕಿಗೆ 11,399 ಮಂದಿ ಬಲಿಯಾಗಿದ್ದಾರೆ. ಇತ್ತ ಭಾರತದಲ್ಲಿ ಸೋಂಕಿತರ ಸಂಖ್ಯೆ 249ಕ್ಕೆ ಏರಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ 15 ಮಂದಿಗೆ ಕೊರೊನಾ ತಗುಲಿರುವುದು ವರದಿಯಾಗಿದೆ. ಇತ್ತ ಕೇರಳದ ಕಾಸರಗೋಡಿನಲ್ಲಿ 5 ಹೊಸ ಸೋಂಕು ಶಂಕಿತ ಪ್ರಕರಣ ವರದಿಯಾಗಿದ್ದರೆ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಸೋಂಕಿತರ ಸಂಖ್ಯೆ 5 ಪಟ್ಟು ಹೆಚ್ಚಳವಾಗಿದೆ.

    ಒಟ್ಟು 185 ರಾಷ್ಟ್ರ ಹಾಗೂ ಪ್ರಾಂತ್ಯಗಳ ಮೇಲೆ ತನ್ನ ಕರಿನೆರಳು ಬೀರುತ್ತಿರುವ ಕೊರೊನಾ ವೈರಸ್‍ಗೆ ಈವರೆಗೆ ಸುಮಾರು 2,75,953 ಮಂದಿಗೆ ಸೋಂಕು ತಗುಲಿದೆ. ಅಲ್ಲದೇ ವಿಶ್ವದೆಲ್ಲೆಡೆ ಒಟ್ಟು 11,399 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 91,912 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,72,642 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

    ಡೆಡ್ಲಿ ಕೊರೊನಾಗೆ ಭಾರತದಲ್ಲಿ ಈವರೆಗೆ 249 ಮಂದಿ ತುತ್ತಾಗಿದ್ದು, 23 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 221 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಈಗಾಗಲೇ ಕೊರೊನಾಗೆ 5 ಮಂದಿ ಸಾವನ್ನಪ್ಪಿದ್ದಾರೆ.

    ಭಾರತದಲ್ಲಿ ಕೊರೊನಾ ಹಬ್ಬಿದ್ದು ಹೇಗೆ?
    ಭಾರತದಲ್ಲಿ ಇದುವರೆಗೆ ಸೋಂಕಿತ ಪ್ರಕರಣ 246 (ಅಧಿಕೃತ ಪಟ್ಟಿ, ನಿನ್ನೆ ರಾತ್ರಿ 12 ಗಂಟೆಯವರೆಗೆ) ವರದಿಯಾಗಿದೆ. ಇದರಲ್ಲಿ ವಿದೇಶದಿಂದ ಬಂದ 136 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿದೇಶದಿಂದ ಬಂದವರ ಜೊತೆ ಸಂಪರ್ಕದಿಂದ 105 ಮಂದಿಗೆ ಸೋಂಕು ತಗುಲಿದೆ.

    ಜನವರಿ 30ರಂದು ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತ ಮೊದಲ ಕೇಸ್ ವರದಿಯಾಗಿತ್ತು. ಆದರೆ ಮಾರ್ಚ್ 10ರಂದು ದೇಶದಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಮುಟ್ಟಿತ್ತು. ಸದ್ಯ ಮಾರ್ಚ್ 20ರವರೆಗೆ ಸೋಂಕಿತರ ಸಂಖ್ಯೆ 249ಕ್ಕೆ ತಲುಪಿದೆ.

    24 ಗಂಟೆಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳು:
    ಭಾರತದಲ್ಲಿ 55 ಹೊಸ ಪ್ರಕರಣ ದಾಖಲಾಗಿದೆ. ಇತ್ತ ಇಟಲಿಯಲ್ಲಿ 5,986, ಸ್ಪೇನ್‍ನಲ್ಲಿ 3,494, ಜರ್ಮನಿಯಲ್ಲಿ 4,528, ಅಮೆರಿಕದಕಲ್ಲಿ 5,861, ಇರಾನ್‍ನಲ್ಲಿ 1,237, ಫ್ರಾನ್ಸ್ ನಲ್ಲಿ 1,617 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.

    ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಮರಣ ಮೃದಂಗ ಭಾರಿಸುತ್ತಿತ್ತು. ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಯ ಸತತ ಪರಿಶ್ರಮ, ಸರ್ಕಾರದ ಕ್ರಮಗಳಿಂದ ಚೀನಾದಲ್ಲಿ ಸದ್ಯ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ಇಟಲಿಯಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದ್ದು, ಶುಕ್ರವಾರ ಒಂದೇ ದಿನಕ್ಕೆ 627 ಮಂದಿ ಕೋರೊನಾಗೆ ಬಲಿಯಾಗಿದ್ದಾರೆ.

    1. ಚೀನಾ – ಈವರೆಗೆ ಕೊರೊನಾ ಸೋಂಕಿಗೆ 81,008 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 71,740 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,255 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 6,013 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.

    2. ಇಟಲಿ – ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 47,021 ಮಂದಿ ತುತ್ತಾಗಿದ್ದು, ಅವರಲ್ಲಿ 5,129 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 37,860 ಮಂದಿ ಕೊರೊನಾದಿಂದ ಬಳಲುತ್ತಿದ್ದು, 4,032 ಮಂದಿ ಮೃತಪಟ್ಟಿದ್ದಾರೆ.

    3. ಇರಾನ್ – 19,644 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 6,745 ಮಂದಿ ಸೊಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 11,466 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದು, 1,433 ಸೋಂಕಿತರು ಸಾವನ್ನಪ್ಪಿದ್ದಾರೆ.

    4. ಸ್ಪೇನ್ – 21,571 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ 1,588 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 18,890 ರೋಗಿಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 1,093 ಮಂದಿ ಬಲಿಯಾಗಿದ್ದಾರೆ.

    5. ದಕ್ಷಿಣ ಕೊರಿಯಾ – 8,799 ಮಂದಿಗೆ ಸೋಂಕು ತಗುಲಿತ್ತು. ಆದರೆ ಅವರಲ್ಲಿ 2,612 ರೋಗಿಗಳು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. 102 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಪ್ರಸ್ತುತ 6,085 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

    6. ಜರ್ಮನಿ – 19,648 ಮಂದಿಯಲ್ಲಿ ಕಾಣಿಕೊಂಡ ಕೊರೊನಾ ಸೋಂಕಿನಿಂದ 180 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸದ್ಯ 68 ಮಂದಿ ಬಲಿಯಾಗಿದ್ದು, ಪ್ರಸ್ತುತ 19,600 ರೋಗಿಗಳು ಕೊರೊನಾದಿಂದ ನರಳುತ್ತಿದ್ದಾರೆ.

    7. ಫ್ರಾನ್ಸ್ – 12,612 ಮಂದಿ ಕೊರೊನಾಗೆ ತುತ್ತಾಗಿದ್ದರು. ಅವರಲ್ಲಿ 1,587 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 10,575 ಮಂದಿ ಸೋಂಕಿನಿಂದ ಬಳಲುತ್ತಿದ್ದು, 450 ಮಂದಿ ಜೀವ ಕಳೆದುಕೊಂಡಿದ್ದಾರೆ.

    8. ಅಮೆರಿಕ – ಯುಎಸ್‍ಎನಲ್ಲಿ ಕೊರೊನಾಗೆ 263 ಮಂದಿ ಬಲಿಯಾಗಿದ್ದಾರೆ. 19,650 ಮಂದಿಯಲ್ಲಿ ಕಾಣಿಸಿಕೊಂಡ ಸೋಂಕಿನಿಂದ 147 ಮಂದಿ ಗುಣಮುಖರಾಗಿದ್ದಾರೆ. ಸದ್ಯ 19,240 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದಾರೆ.

    9. ಪಾಕಿಸ್ತಾನ – ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ಹರಡಿರುವ ಕೊರೊನಾ ವೈರಸ್‍ಗೆ ಈವರೆಗೆ 501 ಮಂದಿ ತುತ್ತಾಗಿದ್ದು, 13 ಮಂದಿ ಚೇತರಿಸಿಕೊಂಡಿದ್ದಾರೆ. ಮೂವರು ಸೋಂಕಿತರು ಸಾವನ್ನಪ್ಪಿದ್ದು, ಪ್ರಸ್ತುತ 485 ಮಂದಿ ಸೋಂಕಿನಿಂದ ನರಳುತ್ತಿದ್ದಾರೆ.

  • ಉಡುಪಿಯಲ್ಲಿ 4 ಹೊಸ ಶಂಕಿತ ಕೊರೊನಾ ಕೇಸ್ – ನಾಳೆ 12 ಜನರ ವೈದ್ಯಕೀಯ ವರದಿ ನಿರೀಕ್ಷೆ

    ಉಡುಪಿಯಲ್ಲಿ 4 ಹೊಸ ಶಂಕಿತ ಕೊರೊನಾ ಕೇಸ್ – ನಾಳೆ 12 ಜನರ ವೈದ್ಯಕೀಯ ವರದಿ ನಿರೀಕ್ಷೆ

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ವೈರಸ್‍ಗೆ ಸಂಬಂಧಪಟ್ಟಂತೆ ಇವತ್ತು ನಾಲ್ಕು ಹೊಸ ಶಂಕಿತ ಪ್ರಕರಣಗಳು ದಾಖಲಾಗಿದೆ. ಮಣಿಪಾಲ ಕೆಎಂಸಿಗೆ ಇಬ್ಬರು ಕೊರೊನಾ ಲಕ್ಷಣವಿರುವ ರೋಗಿಗಳು ದಾಖಲಾಗಿದ್ದಾರೆ.

    ಉಡುಪಿ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಲಾ ಒಬ್ಬೊಬ್ಬ ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ದಾಖಲಾದ ನಾಲ್ವರಲ್ಲಿ ಶೀತ, ಕೆಮ್ಮು, ಕಫದ ಲಕ್ಷಣಗಳು ಕಂಡುಬಂದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ಕೊಟ್ಟಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಪ್ರಯೋಗಾಲಯದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ನಾಲ್ವರ ಗಂಟಲ ಸ್ರಾವವನ್ನು ಹಾಸನಕ್ಕೆ ಕಳುಹಿಸಲಾಗಿದೆ. ನಾಲ್ವರು ಬಹರೇನ್ ಸೌದಿ ಮತ್ತು ಆಸ್ಟ್ರೇಲಿಯಾದಿಂದ ಬಂದಿದ್ದಾರೆ. ಅವರಲ್ಲಿ ಕೊರೊನಾ ಲಕ್ಷಣಗಳಿದ್ದು, ಸ್ವಯಂಪ್ರೇರಿತವಾಗಿ ಅವರೇ ಆಸ್ಪತ್ರೆಗಳನ್ನು ಸಂಪರ್ಕ ಮಾಡಿದ್ದಾರೆ.

    ಉಡುಪಿ ಜಿಲ್ಲೆಗೆ ಫೆಬ್ರವರಿ 29 ರಿಂದ ಈವರೆಗೆ 364 ಜನ ವಿದೇಶದಿಂದ ಬಂದಿದ್ದರು. ಎಲ್ಲರ ಮೇಲೆ ಈ ವಾರದಿಂದ ನಿಗಾ ವಹಿಸಲಾಗಿದೆ. ವಿದೇಶದಿಂದ ವಾಪಸ್ಸಾದವರು ಆರೋಗ್ಯ ನಿರ್ಲಕ್ಷ್ಯ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ಕೊರೊನಾ ತಡೆಗೆ ಭಾನುವಾರ ಜನತಾ ಕರ್ಫ್ಯೂ – ಏನಿರುತ್ತೆ? ಏನಿರಲ್ಲ?

    ಕೊರೊನಾ ತಡೆಗೆ ಭಾನುವಾರ ಜನತಾ ಕರ್ಫ್ಯೂ – ಏನಿರುತ್ತೆ? ಏನಿರಲ್ಲ?

    ಬೆಂಗಳೂರು: ಮನೆಯಂಗಳಕ್ಕೆ ಬಂದು ಬಾಗಿಲು ಬಡಿಯುತ್ತಿರುವ ಕೊರೊನಾ ಮಾರಿ ಹೊಡೆದೊಡಿಸಲು ಪ್ರಧಾನಿ ಮೋದಿ, ಜನರಿಂದ ಜನರಿಗಾಗಿ, ಜನರಿಗೋಸ್ಕರ ಪ್ರಯೋಗಿಸಿರುವ ಭಾನುವಾರದ ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಇಡೀ ಕರುನಾಡು ಕಂಕಣ ತೊಟ್ಟಿದೆ.

    ಬೆಂಗಳೂರಿಗರನ್ನು ಸೇರಿದಂತೆ ಇಡೀ ರಾಜ್ಯದ ಜನರನ್ನು ಮಾತನಾಡಿಸಿದಾಗ, ನಾವು ಜನತಾ ಕರ್ಫ್ಯೂನಲ್ಲಿ ಪಾಲ್ಗೊಳ್ಳುತ್ತೇವೆ. ಮನೆಯಲ್ಲಿ ಇದ್ದು ಜನತಾ ಕರ್ಫ್ಯೂಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ. ಭಾನುವಾರದ ಜನತಾ ಕರ್ಫ್ಯೂಗೆ ರಾಜ್ಯದ ಸಾವಿರಾರು ಸಂಘಟನೆಗಳು, ಬೆಂಬಲ ಘೋಷಿಸಿವೆ.

    ಒಂದು ದಿನದ ಮಟ್ಟಿಗೆ ತಮ್ಮೆಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುತ್ತೇವೆ. ಪ್ರಧಾನಿ ಮೋದಿ ಹೇಳುತ್ತಿರುವುದು ನಮ್ಮ ಒಳ್ಳೆಯದಕ್ಕೆ ಎಂದು ಸಂಘ ಸಂಸ್ಥೆಗಳ ಮುಖಂಡರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಭಾನುವಾರದ ಜನತಾ ಕರ್ಫ್ಯೂ ಯಶಸ್ವಿ ಆಗೋದು ಬಹುತೇಕ ಖಚಿತವಾಗಿದೆ.

    ಭಾನುವಾರ ಏನೇನು ಇರಲ್ಲ:
    * ದರ್ಶಿನಿ, ಕೆಫೆ, ಹೋಟೆಲ್, ಸ್ಟಾರ್ ಹೋಟೆಲ್
    * ನಗರ ಪೊಲೀಸ್ ಕಮೀಷನರ್ ಕಚೇರಿ (ಕಂಟ್ರೋಲ್ ರೂಮ್ ಹೊರತುಪಡಿಸಿ ಬೇರೆಲ್ಲಾ ಕಚೇರಿ ಬಂದ್)
    * ಬಿಎಂಟಿಸಿ (ಶೇ.20ರಷ್ಟು ಮಾತ್ರ ಸೇವೆ), ಕೆಎಸ್ಆರ್‌ಟಿಸಿ, ಲಾರಿ
    * ನಮ್ಮ ಮೆಟ್ರೋ
    * ರೈಲು ಸೇವೆ (ನಾಳೆ ಮಧ್ಯರಾತ್ರಿಯಿಂದ ಭಾನುವಾರ ರಾತ್ರಿ 10 ಗಂಟೆಯವರೆಗೆ)
    * ಆಟೋ, ಓಲಾ, ಊಬರ್


    * ಎಪಿಎಂಸಿ, ತರಕಾರಿ ಮಾರ್ಕೆಟ್ (ತರಕಾರಿ, ಹೂವು, ಹಣ್ಣು)
    * ಕೆ.ಆರ್ ಮಾರ್ಕೆಟ್
    * ಆಭರಣ ಮಳಿಗೆ
    * ಬಟ್ಟೆ ಅಂಗಡಿ
    * ಬಾರ್, ವೈನ್ ಶಾಪ್
    * ಪೀಣ್ಯಾ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು
    * ದೇವಸ್ಥಾನ
    * ಚಿತ್ರೋದ್ಯಮದ ಶೂಟಿಂಗ್, ಚಟುವಟಿಕೆ
    * ಇಂದಿರಾ ಕ್ಯಾಂಟೀನ್

    ಜನತಾ ಕರ್ಫ್ಯೂ- ಏನೇನು ಇರುತ್ತೆ?
    * ಅಂಬುಲೆನ್ಸ್ ಸೇವೆ
    * ಆಸ್ಪತ್ರೆ, ಮೆಡಿಕಲ್ ಶಾಪ್
    * ಪೆಟ್ರೋಲ್ ಬಂಕ್ ( ಶಿವಮೊಗ್ಗ, ಮೈಸೂರಿನಲ್ಲಿ ಮಾತ್ರ ಬಂದ್)
    * ಹಾಲು, ಪೇಪರ್

     

  • ದಿನಕ್ಕೊಂದು ದಿನಾಂಕ ಹೇಳುತ್ತಿರೋ ಕೊರೊನಾ ಸೋಂಕಿತ – ಜಿಲ್ಲಾಡಳಿತಕ್ಕೆ ಮತ್ತೆ ತಲೆನೋವು

    ದಿನಕ್ಕೊಂದು ದಿನಾಂಕ ಹೇಳುತ್ತಿರೋ ಕೊರೊನಾ ಸೋಂಕಿತ – ಜಿಲ್ಲಾಡಳಿತಕ್ಕೆ ಮತ್ತೆ ತಲೆನೋವು

    ಮಡಿಕೇರಿ: ಕೊಡಗಿನ ಕೊರೊನಾ ಸೋಂಕಿತ ತಾನು ಪ್ರಯಾಣ ಬೆಳೆಸಿದ್ದ ಬಗ್ಗೆ ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದು, ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.

    ಸೋಂಕಿತ ಸುತ್ತಾಡಿದ್ದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿರುವ ಜಿಲ್ಲಾಡಳಿತ ಆತ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಕೆ.ಎ 57 ಎಫ್ 0908 ಸಂಖ್ಯೆಯ ವಾಯು ವಜ್ರ ಬಸ್‍ನಲ್ಲಿ ಮಾರ್ಚ್ 15ರ ಸಂಜೆ 5.30ಕ್ಕೆ ಹೊರಟ್ಟಿದ್ದಾನೆ. ಅಲ್ಲಿಂದ ಸಂಜೆ 6.45ಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣ ತಲುಪಿದ್ದನು. ಇದನ್ನೂ ಓದಿ: ಕೊರೊನಾ ಸೋಂಕಿತ 300 ಜನರ ಸಂಪರ್ಕಿಸಿದ್ದ: ಮಡಿಕೇರಿ ಜಿಲ್ಲಾಧಿಕಾರಿ

    ಸ್ಯಾಟಲೈಟ್ ಬಸ್ ನಿಲ್ದಾಣದಿಂದ KA57 ಈ 0908 ಸಂಖ್ಯೆಯ ರಾಜಹಂಸ ಬಸ್ಸಿನಲ್ಲಿ ಮಾರ್ಚ್ 16ರ ರಾತ್ರಿ 12.05 ನಿಮಿಷಕ್ಕೆ ಹೊರಟು ಮಂಡ್ಯ ಮೈಸೂರು ವಿರಾಜಪೇಟೆ ಮಾರ್ಗವಾಗಿ ಮುಂಜಾನೆ ಮಡಿಕೇರಿಗೆ ಬಂದಿದ್ದ. ಸಹ ಪ್ರಯಾಣಿಕರು ಈ ಬಸ್‍ನಲ್ಲಿ ಯಾರದರೂ ಸಂಚರಿಸಿದ್ದರೆ ಕೂಡಲೇ ಆರೋಗ್ಯ ತಪಾಸಣೆಗೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಮನವಿ ಮಾಡಿದ್ದಾರೆ.

    ಮಾರ್ಚ್ 15ರಂದು ದುಬೈನಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದು ಬಳಿಕ ಕೊಡಗಿಗೆ ಬಂದಿದ್ದ ವ್ಯಕ್ತಿಗೆ ಗುರುವಾರ ಸೋಂಕು ಇರುವುದು ಖಚಿತವಾಗಿತ್ತು. ಬಳಿಕ ಈ ವ್ಯಕ್ತಿಯ ಪ್ರಯಾಣದ ಜಾಡು ಹಿಡಿದು ತನಿಖೆ ನಡೆಸಿದ ಜಿಲ್ಲಾಡಳಿತಕ್ಕೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ಈ ವ್ಯಕ್ತಿಯೂ 300ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿದ್ದಾನೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಮಾಹಿತಿ ನೀಡಿದ್ದಾರೆ.

  • ಬ್ಯಾರಿಕೇಡ್ ಕಲ್ಯಾಣ – ಜನಸಂದಣಿ ಇಲ್ಲದೇ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಎಂಜಿನಿಯರ್ ವಿವಾಹ

    ಬ್ಯಾರಿಕೇಡ್ ಕಲ್ಯಾಣ – ಜನಸಂದಣಿ ಇಲ್ಲದೇ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಎಂಜಿನಿಯರ್ ವಿವಾಹ

    ಚಿತ್ರದುರ್ಗ: ವಿಶ್ವದೆಲ್ಲೆಡೆ ತಾಂಡವವಾಡುತ್ತಿರುವ ಕೊರೊನಾ ಭೀತಿಯಿಂದಾಗಿ ಎಂಜಿನಿಯರಿಂಗ್ ವರನೊಬ್ಬ ಬ್ಯಾರಿಕೇಡ್ ನಡುವೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

    ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ನಿವಾಸಿ ಅಮರೇಶ್, ಸಂಬಂಧಿಗಳ ಸಮ್ಮುಖವಿಲ್ಲದೇ ಸ್ವಾತಿ ಜೊತೆ ಬ್ಯಾರಿಕೇಡ್ ನಡುವೆ ಮದುವೆಯಾಗಿದ್ದಾರೆ. ವರ ಅಮರೇಶ್ ಕೆನಡಾದಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ವಾರದ ಹಿಂದೆಯೇ ಕೆನಡಾದಿಂದ ಆಗಮಿಸಿದ್ದು, ಅದ್ಧೂರಿಯಾಗಿ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದರು.

    ಆದರೆ ರಾಂಪುರದಲ್ಲಿ ಇಂದು ವಿವಾಹ ಇರುವ ಮಾಹಿತಿ ತಿಳಿದ ಜಿಲ್ಲಾಡಳಿತ ಜಾಗೃತಿ ವಹಿಸಿದ್ದು, ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಹೆಚ್ಚು ಜನರನ್ನು ಸೇರಿಸದಂತೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿರುವ ಅಮರೇಶ್ ಸರಳವಾಗಿ ವಿವಾಹವಾಗುವ ಮೂಲಕ ಕೊರೊನಾ ಜಾಗೃತಿಗೆ ಸಹಕರಿಸಿದ್ದಾರೆ.

    ಮದುವೆಯಲ್ಲಿ ಜನಸಂದಣಿ ಸೇರದಂತೆ ಅಧಿಕಾರಿಗಳ ಸೂಚನೆ ನೀಡಿದ್ದರು. ಹೀಗಾಗಿ ಜನರಿಂದ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಬ್ಯಾರಿಕೇಡ್ ಕೂಡ ಹಾಕಲಾಗಿತ್ತು. ಮೊದಲೇ ಆರೋಗ್ಯ ಅಧಿಕಾರಿಗಳ ಹೇಳಿದ್ದ ಪರಿಣಾಮ ಅಧಿಕಾರಿಗಳ ಸೂಚನೆಯನ್ನು ನೂತನ ವಧು-ವರರು ಪಾಲಿಸಿದ್ದಾರೆ. ಹೆಚ್ಚು ಸಂಬಂಧಕರನ್ನು ಸೇರಿಸದೆ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಮದುವೆಯಾಗಿದ್ದಾರೆ.

    ವರನಾದ ಅಮರೇಶ್ ಒಂದು ವಾರದ ಹಿಂದೆಯೇ ಕೆನಡಾದಿಂದ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಯಾವುದೇ ಪರೀಕ್ಷೆಗೂ ಈ ಮೊದಲು ಒಳಪಡಿಸಿರಲಿಲ್ಲ. ಆದರೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಅಮರೇಶ್‍ಗೆ ಕೊರೊನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಿಹೆಚ್‍ಓ ಡಾಕ್ಟರ್ ಪಾಲಾಕ್ಷ ಸ್ಪಷ್ಟಪಡಿಸಿದ್ದಾರೆ.

  • ಬಾಲಿವುಡ್‍ನ ಖ್ಯಾತ ಗಾಯಕಿಗೆ ಕೊರೊನಾ ಪಾಸಿಟಿವ್

    ಬಾಲಿವುಡ್‍ನ ಖ್ಯಾತ ಗಾಯಕಿಗೆ ಕೊರೊನಾ ಪಾಸಿಟಿವ್

    ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಶುಕ್ರವಾರ ನಾಲ್ಕು ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬಾಲಿವುಡ್‍ನ ಪ್ರಸಿದ್ಧ ಗಾಯಕಿ ಕನ್ನಿಕಾ ಕಪೂರ್ ಕೂಡ ಇದ್ದಾರೆ.

    ಗಾಯಕಿ ಕನ್ನಿಕಾ ಅವರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ (ಕೆಜಿಎಂಯು)ನ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಕನ್ನಿಕಾ ಮಾರ್ಚ್ 15ರಂದು ಲಂಡನ್‍ನಿಂದ ಲಕ್ನೋಗೆ ಮರಳಿದ್ದರು. ಬಳಿಕ ಅವರು ಅಪಾರ್ಟ್ ಮೆಂಟ್‍ನಲ್ಲಿ ಉಳಿದುಕೊಂಡು, ಹೋಟೆಲ್‍ವೊಂದರಲ್ಲಿ ಪಾರ್ಟಿ ನೀಡಿದ್ದರು. ಈ ಪಾರ್ಟಿಯಲ್ಲಿ ಸುಮಾರು 500 ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

    ಕನ್ನಿಕಾ ಅವರೊಂದಿಗೆ ನೇರ ಸಂಭಾಷಣೆ ನಡೆಸಿದ, ಪಾರ್ಟಿಯಲ್ಲಿ ಭಾಗವಹಿಸಿದ್ದ ಜನರಿಗಾಗಿ ಈಗ ಆರೋಗ್ಯ ಇಲಾಖೆ ಹುಡುಕಾಟ ನಡೆಸಿದೆ. ಈ ಮೂಲಕ ಅವರನ್ನು ತಪಾಸಣೆ ನಡೆಸು ಸಿದ್ಧತೆ ನಡೆದಿದೆ. ಒಂದು ವೇಳೆ ಅವರಲ್ಲಿ ಕೊರೊನಾದ ಲಕ್ಷಣಗಳು ಕಂಡು ಬಂದರೆ ವೀಕ್ಷಣೆಗೆ ಇರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

    ಶುಕ್ರವಾರ ಮಧ್ಯಾಹ್ನ 2 ಗಂಟೆಯವರೆಗಿನ ಮಾಹಿತಿ ಪ್ರಕಾರ ಭಾರತದಲ್ಲಿ 194 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 20 ಜನರು ಗುಣಮುಖರಾಗಿದ್ದು, 170 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ನಾಲ್ವರು ಮೃತಪಟ್ಟಿದ್ದಾರೆ.