Tag: Coronavirus

  • ಗುಡುಗು ಸಹಿತ ಭಾರೀ ಮಳೆ – ಕೊರೊನಾ ಹರಡೋ ಭಯದಲ್ಲಿ ಜನರು

    ಗುಡುಗು ಸಹಿತ ಭಾರೀ ಮಳೆ – ಕೊರೊನಾ ಹರಡೋ ಭಯದಲ್ಲಿ ಜನರು

    ಬೆಂಗಳೂರು: ಕೊರೊನಾ ಕರ್ಫ್ಯೂ ಜೊತೆಗೆ ಗುಡುಗು ಸಹಿತ ಮಳೆಯಾಗಿದ್ದು, ಇದರಿಂದ ಕೊರೊನಾ ರೋಗ ಹರಡುವ ಭಯದಲ್ಲಿ ಜನರು ಕಾಲ ಕಳೆಯುವಂತಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರ ಸೇರಿದಂತೆ ಸುಂಕದಕಟ್ಟೆ, ಬ್ಯಾಡರಹಳ್ಳಿ, ನಾಗರಬಾವಿ, ಬನಶಂಕರಿ ಮತ್ತು ಟೌನ್ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ರಭಸವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುವಂತಾಗಿತ್ತು.

    ನಾಳೆಯಿಂದ 9 ದಿನ ಕರ್ನಾಟಕ ಕರ್ಫ್ಯೂ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಜನರು ಮುಗಿಬಿದ್ದಿದ್ದು, ಅಗತ್ಯ ವಸ್ತುಗಳನ್ನು ಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

    ಮಳೆಯಲ್ಲಿ ಕೊರೊನಾ ವೈರಸ್ ವ್ಯಾಪಕತೆ ಹೆಚ್ಚಾಗುತ್ತಂತೆ. ಅಲ್ಲದೇ ಮಳೆಯಿಂದ ಭೂಮಿಯಲ್ಲಿ ಈ ವೈರಸ್ ನೆಲೆಗೊಳ್ಳಲು ಬಹು ಸುಲಭ. ಹೀಗಾಗಿ ನೀರಿನಲ್ಲಿ ವೈರಸ್ ಸೇರಿಕೊಂಡು ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಳೆಯಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆಯಿದೆ ಎಂದು ಭೂಗರ್ಭ ತಜ್ಞರು ಹೇಳಿದ್ದರು.

    ಮಳೆ ಬಂದರೆ ವಾತಾವರಣ ತಂಪಾಗಿ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತದೆ. ಜೊತೆಗೆ ಈ ವೈರಸ್ ನೀರಿನಲ್ಲಿ ಕೂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಕುಡಿಯುವ ನೀರಿನ ಮೂಲಕವೂ ಈ ವೈರಸ್ ನಮ್ಮ ದೇಹ ಸೇರುವ ಸಾಧ್ಯತೆ ಇದೆ. ಮಳೆಗಾಲದ ಮುಂಚೆಯೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಭೂಗರ್ಭ ಶಾಸ್ತ್ರಜ್ಞ ಪ್ರಕಾಶ್ ಎಚ್ಚರಿಕೆ ನೀಡಿದ್ದರು.

  • ಸರ್ಕಾರದ ಕಾನೂನನ್ನು ಗಾಳಿಗೆ ತೂರಿದ ಜನರು – ಸೆಕ್ಷನ್ ಇದ್ರೂ ಸಾವಿರಾರು ಮಂದಿಯಿಂದ ವ್ಯಾಪಾರ ವಹಿವಾಟು

    ಸರ್ಕಾರದ ಕಾನೂನನ್ನು ಗಾಳಿಗೆ ತೂರಿದ ಜನರು – ಸೆಕ್ಷನ್ ಇದ್ರೂ ಸಾವಿರಾರು ಮಂದಿಯಿಂದ ವ್ಯಾಪಾರ ವಹಿವಾಟು

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಕಟ್ಟೆಚ್ಚರ ವಹಿಸಲಾಗಿದ್ದರೂ ಮಲ್ಪೆ ಬಂದರಿನಲ್ಲಿ ಇಂದು ಬೆಳಗ್ಗೆ ನಿರಂತರ ಜನಸಂದಣಿ ಕಂಡು ಬಂದಿತು. ಮುಂಜಾನೆ ವೇಳೆ ಬಂದರಿನಲ್ಲಿ ಸಾವಿರಾರು ಜನ ಸೇರಿದ್ದರು.

    ಮೀನುಗಾರರು ಮತ್ತು ಮೀನುಗಾರ ಮಹಿಳೆಯರು ಮೀನು ಖರೀದಿ, ಮಾರಾಟದಲ್ಲಿ ತೊಡಗಿದ್ದರು. ಮೂರು ಸಾವಿರಕ್ಕೂ ಅಧಿಕ ಜನ ಮಲ್ಪೆ ಬಂದರಿನಲ್ಲಿ ಕಂಡುಬಂದರು. ಪ್ರತಿದಿನ ಮುಂಜಾನೆ ಕೆಲ ಗಂಟೆಗಳ ಮೀನು ವ್ಯಾಪಾರ ಹೀಗೆ ನಡೆಯುತ್ತದೆ.

    ಜಿಲ್ಲೆಯಾದ್ಯಂತ ನೂರಾರು ಜನ ಸೇರುವ ಎಲ್ಲ ಮಳಿಗೆಗಳನ್ನು, ಮಾರುಕಟ್ಟೆಯನ್ನು ಬಂದ್ ಮಾಡಬೇಕು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜನತಾ ಕರ್ಫ್ಯೂ ಸಂದರ್ಭ ಮಲ್ಪೆ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಆದರೆ ಇಂದು ಬೆಳಗಿನ ಜಾವ ಪ್ರತಿನಿತ್ಯದಂತೆ ವ್ಯಾಪಾರ ವಹಿವಾಟು ಶುರುವಾಗಿತ್ತು. ಮೀನು ಖರೀದಿ ವ್ಯಾಪಾರ ಎಲ್ಲವೂ ಜೋರಾಗಿ ನಡೆದಿತ್ತು. ಮಲ್ಪೆ ಬಂದರಿನಲ್ಲಿ ಬೆಳಗ್ಗೆ 5 ಗಂಟೆಯಿಂದ ಸುಮಾರು 10 ಗಂಟೆಯವರೆಗೂ ವಹಿವಾಟು ನಡೆಯುತ್ತದೆ. ಈ ಸಂದರ್ಭ ಗ್ರಾಹಕರು, ಮೀನು ವ್ಯಾಪಾರಿಗಳು ಇರುತ್ತಾರೆ.

    ಕೊರೊನಾ ವಿರುದ್ಧ ಸೆಕ್ಷನ್ ಇದ್ದರೂ ಪೊಲೀಸರು, ಜಿಲ್ಲಾಡಳಿತ ಮೀನುಗಾರಿಕಾ ಇಲಾಖೆ ಕ್ರಮ ಕೈಗೊಂಡಿಲ್ಲ. ಮಲ್ಪೆ ಬಂದರಿನಲ್ಲಿ ತಮಿಳುನಾಡು ಕೇರಳದ ಕಾರ್ಮಿಕರು ಇದ್ದಾರೆ. ಮೀನು ಖರೀದಿಗಾಗಿ ವಿದೇಶದಿಂದ ಬಂದವರೂ ಇದ್ದಾರೆ. ಕಣ್ಣೆದುರೇ ಸರ್ಕಾರದ ಕಾನೂನು ನಿಯಮ ಮತ್ತು ಎಚ್ಚರಿಕೆಯನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಕೆಲ ಪ್ರಜ್ಞಾವಂತರು ದೂರಿದ್ದಾರೆ. ಅಲ್ಲದೇ ನಾಳೆಯಿಂದ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ಒತ್ತಾಯ ಕೇಳಿ ಬಂದಿದೆ.

  • ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ ಎಂದ ರಚಿತಾ ಸೋದರಿ

    ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ ಎಂದ ರಚಿತಾ ಸೋದರಿ

    – ಮಾಸ್ಕ್ ಧರಿಸಿ ಲಿಪ್‍ಲಾಕ್

    ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಪ್ರಕರಣ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಈಗಾಗಲೇ ಸೀರಿಯಲ್, ಸಿನಿಮಾ ಶೂಟಿಂಗ್‍ಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಕೆಲವು ನಟ-ನಟಿಯರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಈ ಮಧ್ಯೆ ನಟಿ ನಿತ್ಯಾ ರಾಮ್ ಮಾಸ್ಕ್ ಧರಿಸಿ ಪತಿಯೊಂದಿಗೆ ಕಿಸ್ ಮಾಡಿದ್ದಾರೆ.

    ನಟಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಪತಿ ಗೌತಮ್ ಜೊತೆ ಮಾಸ್ಕ್ ಧರಿಸಿ ಕಿಸ್ ಮಾಡಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಮಾಸ್ಕ್ ಧರಿಸಿ ಕಿಸ್ ಮಾಡಿದ್ದು, “ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ” ಎಂದು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

    ಅಷ್ಟೇ ಅಲ್ಲದೇ ಆ ಫೋಟೋಗೆ #CoronaEffect #StaySafe #NeverStopRomance ಎಂಬ ಹ್ಯಾಶ್ ಟ್ಯಾಗ್‍ಗಳನ್ನು ಬಳಸಿದ್ದಾರೆ. ಈ ಫೋಟೋವನ್ನು ಅಪ್ಲೋಡ್ ಮಾಡಿದ ತಕ್ಷಣ ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡಿದ್ದಾರೆ. ‘ಮೊದಲು ಸುರಕ್ಷತೆ ಆಮೇಲೆ ಕಿಸ್’, ‘ಕೊರೊನಾ ಗಂಭೀರವಾದ ಸಮಸ್ಯೆ, ತಮಾಷೆಯಲ್ಲ’ ಅಲ್ಲಿ ಕೊರೊನಾ ಇದ್ರೂ ನೀವು ರೊಮ್ಯಾನ್ಸ್ ಮಾಡುವುದು ಬಿಡುತ್ತಿಲ್ಲ’ ಎಂದು ಅನೇಕ ರೀತಿ ಕಮೆಂಟ್ ಮಾಡಿದ್ದಾರೆ.

    https://www.instagram.com/p/B9-vhgoAFNB/

    2019 ಡಿಸೆಂಬರ್‌ನಲ್ಲಿ ನಿತ್ಯ ರಾಮ್ ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ.

    ನಿತ್ಯ ರಾಮ್ ಹಾಗೂ ಗೌತಮ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದೆ. ನಿತ್ಯಾ ರಾಮ್ ತಾಯಿಯ ಸ್ನೇಹಿತರ ಮಗನೇ ಗೌತಮ್. ಹೀಗಾಗಿ ಕುಟುಂಬದವರ ಮೂಲಕ ಪರಿಚಯರಾದ ಗೌತಮ್ ಅವರನ್ನೇ ನಿತ್ಯಾ ವರಿಸಿದ್ದಾರೆ. ಗೌತಮ್ ಉದ್ಯಮಿಯಾಗಿದ್ದು, ಆಸ್ಟ್ರೇಲಿಯಾದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ಮದುವೆ ನಂತರ ನಟಿ ನಿತ್ಯಾ ಕೂಡ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ.

    ನಿತ್ಯಾ ರಾಮ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು.

  • ದ.ಕನ್ನಡ- ಉಡುಪಿ ಗಡಿಯಲ್ಲಿ ಪೊಲೀಸ್, ಸಾರ್ವಜನಿಕರ ಮಧ್ಯೆ ವಾಕ್ಸಮರ

    ದ.ಕನ್ನಡ- ಉಡುಪಿ ಗಡಿಯಲ್ಲಿ ಪೊಲೀಸ್, ಸಾರ್ವಜನಿಕರ ಮಧ್ಯೆ ವಾಕ್ಸಮರ

    ಉಡುಪಿ: ಮಂಗಳೂರಿನಲ್ಲಿ ಕೊರೊನಾ ವೈರಸ್ ದೃಢಪಟ್ಟಿರುವುದರಿಂದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಗಡಿಭಾಗದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

    ಉಡುಪಿಯಿಂದ ಮಂಗಳೂರಿಗೆ ಹೋಗುವ ಸಾರ್ವಜನಿಕ ಬಸ್ ಸೇವೆ ತಡೆಯಲಾಗಿದೆ. ಉಡುಪಿಯ ಹೆಜಮಾಡಿ ಗಡಿಯಲ್ಲೇ ರಸ್ತೆತಡೆ ಮಾಡಿರುವ ಪೊಲೀಸರು, ಮಂಗಳೂರಿನಿಂದ ಬರುವ ವಾಹನಗಳಿಗೆ ಉಡುಪಿ ಜಿಲ್ಲೆಗೆ ನೋ ಎಂಟ್ರಿ ಎಂದಿದ್ದಾರೆ. ಹೀಗಾಗಿ ಪೊಲೀಸರ ಜೊತೆ ಸಾರ್ವಜನಿಕರ ವಾಗ್ವಾದ ನಡೆದಿದೆ. ದ್ವಿಚಕ್ರ ವಾಹನವೂ ಸೇರಿ ಯಾವುದೇ ವಾಹನಗಳನ್ನು ಗಡಿ ದಾಟಲು ಪೊಲೀಸರು ತಡೆಯೊಡ್ಡಿದರು.

    ಕೆಲಕಾಲ ಗಡಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಸಂಚಾರ ಸ್ಥಗಿತಗೊಂಡಿರುವ ಮಾಹಿತಿ ಇಲ್ಲದೆ ಬಂದಿರುವ ಹೊರಜಿಲ್ಲೆಯ ಪ್ರಯಾಣಿಕರ ಪರದಾಟ ನಡೆಸಿದರು. ಸಂಬಂಧಿಕರನ್ನು ಕರೆತರುವ ಉದ್ದೇಶದಿಂದ ಓಡಾಟ ನಡೆಸುವವರು ಗೊಂದಲಕ್ಕೀಡಾದರು. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಕಾರವಾರ, ಗೋವಾ ಕಡೆ ಹೋಗುವವರು ಹೆದ್ದಾರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

    ಜನರ ಒತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ ವಾಹನ ನಿಷೇಧ ಸಡಿಲಿಕೆ ಮಾಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸ್ಪಷ್ಟ ಆದೇಶವಿಲ್ಲದ ಕಾರಣ ಪೊಲೀಸರಿಗೂ ವಾಹನ ತಡೆ ಸಾಧ್ಯವಾಗುತ್ತಿಲ್ಲ. ಈ ನಡುವೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಂದೂಡಲಾಗಿದೆ. ರಜೆ ನೀಡಲಾಗಿರುವುದರಿಂದ ಹಾಸ್ಟೆಲ್‍ಗಳಲ್ಲಿರುವ ವಿದ್ಯಾರ್ಥಿಗಳನ್ನು ಕರೆತರಲು ಹೊರಟ ಪೋಷಕರಿಗೆ ಸಂಕಷ್ಟ ಎದುರಾಗಿದೆ. ಜಿಲ್ಲಾಧಿಕಾರಿ ಮತ್ತು ಎಸ್‍ಪಿಯವರ ಆದೇಶಕ್ಕೆ ಪೊಲೀಸರು ಕಾಯುತ್ತಿದ್ದಾರೆ.

  • 9 ದಿನಗಳ ಕಾಲ ಕರ್ನಾಟಕ ಕರ್ಫ್ಯೂ- ಇಂದು ಸಂಜೆ ಅಧಿಕೃತ ಘೋಷಣೆ ಸಾಧ್ಯತೆ

    9 ದಿನಗಳ ಕಾಲ ಕರ್ನಾಟಕ ಕರ್ಫ್ಯೂ- ಇಂದು ಸಂಜೆ ಅಧಿಕೃತ ಘೋಷಣೆ ಸಾಧ್ಯತೆ

    – ಮಾರ್ಚ್ 31ರವರೆಗೂ KSRTC-BMTC ಬಸ್ ಸಂಚಾರ ಸಂಪೂರ್ಣ ರದ್ದು

    ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ವಿವಿಧ ದೇಶಗಳಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ಲಾಕ್‍ಡೌನ್ ಕರ್ನಾಟಕದಲ್ಲೂ ಜಾರಿಯಾಗುವ ಸಾಧ್ಯತೆಯಿದೆ.

    ಲಾಕ್‍ಡೌನ್ ಘೋಷಿಸಿದರೂ ಎಂದಿನಂತೆ ಸಂಚಾರ ವ್ಯವಸ್ಥೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಿ ಎಂದು ಆದೇಶ ಕೊಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕರ್ನಾಟಕವನ್ನು ಲಾಕ್‍ಡೌನ್ ಮಾಡಲು ಸಿದ್ಧತೆ ನಡೆಸಿದೆ.

    ನಾಳೆಯಿಂದ ಮಾರ್ಚ್ 31ರವರೆಗೆ ಲಾಕ್‍ಡೌನ್ ಮಾಡಲು ಸರ್ಕಾರ ಮುಂದಾಗಿದ್ದು, ವಾಣಿಜ್ಯ ಅಂಗಡಿಗಳು ಸಂಪೂರ್ಣ ಬಂದ್ ಆಗಲಿದೆ. ಮುಖ್ಯಮಂತ್ರಿಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇವತ್ತು ಸಂಜೆ ವಿಪಕ್ಷ ನಾಯಕರ ಸಭೆ ಬಳಿಕ ಅಧಿಕೃತವಾಗಿ ಸಿಎಂ ನಿರ್ಧಾರ ಪ್ರಕಟಿಸಲಿದ್ದಾರೆ.

    ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಮಾಚ್ 31ರವರೆಗೂ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‍ಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ. ಅಂಗಡಿ ಮುಂಗಟ್ಟುಗಳು ಕ್ಲೋಸ್ ಆಗಿರುತ್ತವೆ. ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಹಾಲು, ತರಕಾರಿ, ಹಣ್ಣು, ಆಸ್ಪತ್ರೆ, ಮೆಡಿಕಲ್ ಶಾಪ್ ಓಪನ್ ಇರುತ್ತದೆ. ಖಾಸಗಿ ವಾಹನಗಳು ಸೇರಿದಂತೆ ಎಲ್ಲವೂ ರಸ್ತೆಯಲ್ಲಿ ಓಡಾಡುವಂತಿಲ್ಲ. ವಾಣಿಜ್ಯ ಅಂಗಡಿಗಳು ಫುಲ್ ಬಂದ್ ಆಗಲಿವೆ ಎಂದು ಹೇಳಿದರು.

    ಖಾಸಗಿ ಆಸ್ಪತ್ರೆ ವೈದ್ಯರ ಜೊತೆ ಸಾಕಷ್ಟು ಚರ್ಚೆ ಆಗಿದೆ. ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಹುಡುಕಿ ಕ್ವಾರಂಟೈನ್ ಮಾಡುವುದೇ ದೊಡ್ಡ ಸವಾಲಾಗಿದೆ. ಗಂಭೀರತೆ ಅರಿತು ಸ್ವಯಂ ಪ್ರೇರಣೆಯಿಂದ ಮನೆಯಲ್ಲಿರಬೇಕು. ನಗರ ಪ್ರದೇಶದ ಜನ ಗ್ರಾಮೀಣ ಪ್ರದೇಶಕ್ಕೆ ಹೋಗಿ ಅಲ್ಲಿ ತೊಂದರೆ ಮಾಡಬೇಡಿ. ಬೆಂಗಳೂರು ನಗರದಲ್ಲಿ 144 ಸೆಕ್ಷನ್ ಮುಂದುವರಿಯುತ್ತದೆ. ಬಡವರಿಗೆ ಮಾತ್ರ ದಿನಪೂರ್ತಿ ಉಚಿತ ಊಟ ಕೊಡಲಾಗುತ್ತದೆ. ಇಂದಿರಾ ಕ್ಯಾಂಟಿನ್‍ನಲ್ಲಿ ಬಡವರಿಗೆ ಉಚಿತ ಊಟವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

  • ಕೊರೊನಾ ಎಫೆಕ್ಟ್ – ಮನೆಯಲ್ಲೇ ಏಕಾಂಗಿಯಾಗಿ ಬೀಚ್ ವಾಲಿಬಾಲ್ ಆಡಿದ ರಾಸ್: ವಿಡಿಯೋ

    ಕೊರೊನಾ ಎಫೆಕ್ಟ್ – ಮನೆಯಲ್ಲೇ ಏಕಾಂಗಿಯಾಗಿ ಬೀಚ್ ವಾಲಿಬಾಲ್ ಆಡಿದ ರಾಸ್: ವಿಡಿಯೋ

    ವಾಷಿಂಗ್ಟನ್: ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಭೀತಿ ಇಡೀ ಜಗತ್ತೆ ತತ್ತರಿಸಿದೆ. ಹೀಗಾಗಿ ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಅನೇಕ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ. ಈಗ ಟೋಕಿಯೊ ಒಲಿಂಪಿಕ್ಸ್ ಕೂಡ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕ್ರೀಡಾಪಟುಗಳು ಬಲವಂತದ ವಿಶ್ರಾಂತಿಗೆ ಜಾರಿದಂತಾಗಿದೆ.

    ಕೊರೊನಾ ಎಫೆಕ್ಟ್ ನಿಂದಾಗಿ ವಿಶ್ರಾಂತಿ ಪಡೆಯುತ್ತಿರುವ ಅಮೆರಿಕದ ಬೀಚ್ ವಾಲಿಬಾಲ್ ಆಟಗಾರ್ತಿ ಏಪ್ರಿಲ್ ಎಲಿಜಬೆತ್ ರಾಸ್ ಮನೆಯಲ್ಲೇ ಒಬ್ಬರೇ ಅಭ್ಯಾಸ ನಡೆಸಿದ್ದಾರೆ. ರಾಸ್ ಅಭ್ಯಾಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    37 ವರ್ಷದ ಏಪ್ರಿಲ್ ಎಲಿಜಬೆತ್ ರಾಸ್ ಅಮೆರಿಕನ್ ವೃತ್ತಿಪರ ಬೀಚ್ ವಾಲಿಬಾಲ್ ಆಟಗಾರ್ತಿಯಾಗಿದ್ದಾರೆ. ಅವರು 2012ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಜೆನ್ನಿಫರ್ ಕೆಸ್ಸಿ ಅವರೊಂದಿಗೆ ಬೆಳ್ಳಿ ಪದಕ ಗೆದ್ದಿದ್ದರು. ಬಳಿಕ 2016ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕೆರ್ರಿ ವಾಲ್ಷ್ ಜೆನ್ನಿಂಗ್ಸ್ ಅವರೊಂದಿಗೆ ಕಂಚಿನ ಪದಕ ಗೆದ್ದರು. ರಾಸ್ ಮತ್ತು ಕೆಸ್ಸಿ 2009ರ ಬೀಚ್ ವಾಲಿಬಾಲ್ ವಿಶ್ವ ಚಾಂಪಿಯನ್ ಆಗಿದ್ದರು.

    2020ರ ಟೋಕಿಯೊ ಒಲಿಂಪಿಕ್ಸ್ ಮುಂದೂಡುವಂತೆ ಒತ್ತಡ ಹೆಚ್ಚಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸ್ಪ್ಯಾನಿಷ್ ಅಥ್ಲೆಟಿಕ್ಸ್ ಫೆಡರೇಶನ್, ನಾವು ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಪರವಾಗಿದ್ದೇವೆ. ಆದರೆ ಇಂದಿನ ಪರಿಸ್ಥಿತಿಗಳಲ್ಲಿ ಕ್ರೀಡಾಪಟುಗಳಿಗೆ ಸುರಕ್ಷತೆಯೊಂದಿಗೆ ಕ್ರೀಡಾ ಸಾಮಾಗ್ರಿ ಖಾತರಿಪಡಿಸುವಂತಹ ಯಾವುದೇ ಪರಿಸ್ಥಿತಿ ಇಲ್ಲ ಎನ್ನುವುದನ್ನ ನಾವು ಅರ್ಥಮಾಡಿಕೊಂಡಿದ್ದೇವೆ. ಕ್ರೀಡಾಪಟುಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾಕೂಟವನ್ನು ಮುಂದೂಡಬೇಕೆಂದು ನಾವು ಸಲಹೆ ನೀಡಿದ್ದೇವೆ ಎಂದು ತಿಳಿಸಿದೆ.

    ಎಲ್ಲ ಗೊಂದಲಗಳಿಂದಾಗಿ ಆಟಗಾರರು ಫಜೀತಿಗೆ ಸಿಲುಕಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆ ಮಾಹಿತಿ ಪ್ರಕಾರ ಅಮೆರಿಕದಲ್ಲಿ 35,418 ಜನರಿಗೆ ಕೊರೊನಾ ವೈರಸ್ ತಗುಲಿದ್ದು, ಈ ಪೈಕಿ 34,770 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ 175 ಜನರು ಗುಣಮುಖರಾಗಿದ್ದು, 473 ಜನ ಸಾವನ್ನಪ್ಪಿದ್ದಾರೆ.

  • ಕೊರೊನಾ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ – ಕಿಚ್ಚನಿಗೆ ಚೇತನ್ ಟ್ವೀಟ್

    ಕೊರೊನಾ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ – ಕಿಚ್ಚನಿಗೆ ಚೇತನ್ ಟ್ವೀಟ್

    ಬೆಂಗಳೂರು: ಕೊರೊನಾ ವೈರಸ್ ತಡೆಯುವ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ ಎಂದು ಆದಿನಗಳು ನಟ ಚೇತನ್ ಕುಮಾರ್ ಕಿಚ್ಚ ಸುದೀಪ್ ಅವರಿಗೆ ಟ್ವೀಟ್ ಮಾಡಿದ್ದಾರೆ.

    ಸುದೀಪ್ ಅವರು ಭಾನುವಾರ ವಿಡಿಯೋ ಒಂದನ್ನು ಟ್ವೀಟ್ ಮಾಡಿ, ಸಂಜೆ 5 ಗಂಟೆಗೆ ಎಲ್ಲರೂ ಚಪ್ಪಾಳೆ ತಟ್ಟಲು ದಯವಿಟ್ಟು ಭಾಗವಹಿಸಿ. ಹೀಗೆ ಮಾಡಿದರೆ ನಾವು ಯಾವುದನ್ನಾದರೂ ಕಳೆದುಕೊಳ್ಳುತ್ತೇವೆಯೇ? ಇಲ್ಲವಲ್ಲ. ನಾವು ಗಳಿಸುತ್ತೇವೆಯೇ? ಬಹುಶಃ ಗಳಿಸಬಹುದು. ಆದರೆ ಕನಿಷ್ಠ ಪ್ರಯತ್ನಿಸೋಣ. ಎಲ್ಲವನ್ನೂ ಆಮೇಲೆ ಯೋಚಿಸೋಣ. ಇದು ನಮ್ಮ ಜೀವನಕ್ಕಾಗಿ ಎಂದು ಬರೆದುಕೊಂಡಿದ್ದರು.

    ವಿಡಿಯೋದಲ್ಲಿ ಏನಿದೆ?
    ಯುವತಿಯೊಬ್ಬರು ಮಾತನಾಡುತ್ತಾ, ‘ಚಪ್ಪಾಳೆ ತಟ್ಟುವುದನ್ನ ತುಂಬಾ ಲಘುವಾಗಿ ಪರಿಗಣಿಸಬೇಡಿ. ದಯವಿಟ್ಟು ಎಲ್ಲರೂ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟಲು ಭಾಗವಹಿಸಿ. ಪ್ರಧಾನಿ ನರೇಂದ್ರ ಮೋದಿ ಅವರ ಈ ಸಂದೇಶದಿಂದ ಎನರ್ಜಿ ಮೆಡಿಸಿನ್ ಸೃಷ್ಟಿಯಾಗುತ್ತದೆ ಎಂದು ಎಲ್ಲರಿಗೂ ತಿಳಿಸೋಣ. ನಿಮ್ಮ ಬಾಲ್ಕನಿ, ಮನೆಯಲ್ಲಿ ಮಾತ್ರ ನೀವು ಸುರಕ್ಷಿತವಾಗಿರಲು ಸಾಧ್ಯ. ನಿಮಗಾಗಿ ಶ್ರಮಿಸುವವರಿಗೆ ಚಪ್ಪಾಳೆ ಮೂಲಕ ಧನ್ಯವಾದ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದರು.

    ಇದಕ್ಕೆ ಪ್ರತಿಕ್ರಿತಿಯೆ ನೀಡಿರುವ ನಟ ಚೇತನ್, ಸುದೀಪ್ ಸರ್. ಸಿನಿಮಾ ಕ್ಷೇತ್ರದಲ್ಲಿ ನಿಮ್ಮ ಕೆಲಸವನ್ನು ನಾನು ಗೌರವಿಸುತ್ತೇನೆ. ವೈದ್ಯ ದಂಪತಿಯ ಮಗನಾಗಿ ನಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಪ್ರಶಂಸಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಮೂಢನಂಬಿಕೆ ಮತ್ತು ತಪ್ಪು ಮಾಹಿತಿಯ ಹಾದಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಇಂತಹ ಅವೈಜ್ಞಾನಿಕ ‘ಎನರ್ಜಿ ಮೆಡಿಸಿನ್’ ಸಿದ್ಧಾಂತಗಳನ್ನು ಹರಡುವುದರ ಮೂಲಕ ವೈದ್ಯರನ್ನು ಪ್ರಶಂಸಿಸುವುದು ಸರಿಯಲ್ಲ. ವಿಜ್ಞಾನದ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಡೋಣ ಎಂದು ಟ್ವೀಟ್ ಮಾಡಿದ್ದಾರೆ.

  • ಇಟಲಿಯಲ್ಲಿ ಕೊರೊನಾ ಅಟ್ಟಹಾಸ – ಒಂದೇ ದಿನ 651 ಸಾವು

    ಇಟಲಿಯಲ್ಲಿ ಕೊರೊನಾ ಅಟ್ಟಹಾಸ – ಒಂದೇ ದಿನ 651 ಸಾವು

    – ಒಂದೇ ದಿನದಲ್ಲಿ 5,560 ಹೊಸ ಪ್ರಕರಣ ಪತ್ತೆ

    ರೋಮ್: ಜಗತ್ತಿನಲ್ಲಿ ಮಹಾಮಾರಿ ಕೊರೊನಾ ತನ್ನ ಪಟ್ಟನ್ನು ಬಿಗಿಗೊಳಿಸುತ್ತಿದೆ. ಒಟ್ಟು 188 ದೇಶಗಳಿಗೆ ವಿಸ್ತರಿಸಿರುವ ಕೊರೊನಾ, 13 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. 3 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದೆ. ಇದೀಗ ಇಟಲಿಯಲ್ಲಿ ಒಂದೇ ದಿನ 651 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಇಟಲಿಯೊಂದರಲ್ಲೇ ನಿನ್ನೆ ಒಂದೇ ದಿನ 800ಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿ ಆಗಿದ್ದರು. ಇಂದು 651 ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. ಅಲ್ಲದೇ ಇಂದು 5560 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ.

    ಇದೀಗ ಇಟಲಿಯೊಂದರಲ್ಲೇ ಮೃತರ ಸಂಖ್ಯೆ 5,500ಕ್ಕೆ ಏರಿಕೆ ಆಗಿದೆ. ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 59,138 ಮಂದಿ ತುತ್ತಾಗಿದ್ದು, ಅವರಲ್ಲಿ 6,072 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 42,681 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.

    ಇರಾನ್‍ನಲ್ಲಿ 1556, ಸ್ಪೇನ್‍ನಲ್ಲಿ 1381, ಫ್ರಾನ್ಸ್‌ನಲ್ಲಿ 562, ಬ್ರಿಟನ್‍ನಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ದೇಶಗಳನ್ನು ನಿರ್ಬಂಧದಲ್ಲಿ ಇಟ್ಟಿದೆ. ಜನರನ್ನು ಮನೆಗೆ ಸೀಮಿತ ಮಾಡಿದೆ. ಆಫ್ರಿಕಾ ಖಂಡಕ್ಕೂ ಕೊರೊನಾ ವಿಸ್ತರಿಸುತ್ತಿದೆ. ಆಫ್ರಿಕಾದ 41 ದೇಶಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.

    ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಮರಣ ಮೃದಂಗ ಭಾರಿಸುತ್ತಿತ್ತು. ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಯ ಸತತ ಪರಿಶ್ರಮ, ಸರ್ಕಾರದ ಕ್ರಮಗಳಿಂದ ಚೀನಾದಲ್ಲಿ ಸದ್ಯ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ಇಟಲಿಯಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದ್ದು, ಶನಿವಾರ ಒಂದೇ ದಿನಕ್ಕೆ 793 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

  • 10 ರಾಜ್ಯಗಳು ಸಂಪೂರ್ಣ ಲಾಕ್‍ಡೌನ್

    10 ರಾಜ್ಯಗಳು ಸಂಪೂರ್ಣ ಲಾಕ್‍ಡೌನ್

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.

    ಕೊರೊನಾ ಸ್ಟೇಜ್ 3ಯತ್ತ ದೇಶ ಹೋಗುತ್ತಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ಇತರೆ ರಾಜ್ಯಗಳ ಸರ್ಕಾರಗಳು ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ 10 ರಾಜ್ಯಗಳು ಲಾಕ್‍ಡೌನ್ ಆಗಿದೆ.

    ದೇಶದ ಅಂತರ್ ರಾಜ್ಯಗಳ ಸಾರಿಗೆ ಸಂಪರ್ಕ ಸಂಪೂರ್ಣ ಬಂದ್ ಆಗಿವೆ. ದೇಶದ ಅತಿದೊಡ್ಡ ಸಾರಿಗೆಯಾದ ರೈಲು ಸೇವೆ ಮೊದಲ ಬಾರಿಗೆ 10 ದಿನದ ಮಟ್ಟಿಗೆ ಸ್ಥಗಿತವಾಗಿದೆ.. ಕೇಂದ್ರ ಸರ್ಕಾರವೇ ಸದ್ಯ 75 ಜಿಲ್ಲೆಗಳನ್ನು ಲಾಕ್‍ಡೌನ್ ಮಾಡಿದ್ದು, ಇದು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಲಾಕ್‍ಡೌನ್‍ನತ್ತ ಭಾರತ
    * ದೇಶಾದ್ಯಂತ ರೈಲು ಸೇವೆ (ಪ್ಯಾಸೆಂಜರ್ ರೈಲು)
    * ದೇಶಾದ್ಯಂತ ಅಂತರ್‌ರಾಜ್ಯ ಬಸ್ ಸೇವೆ
    * ದೇಶದಲ್ಲಿನ ಎಲ್ಲಾ ಮೆಟ್ರೋ ರೈಲು ಸೇವೆ ಬಂದ್
    * ಅಂತಾರಾಷ್ಟ್ರೀಯ ವಾಯು ಗಡಿ ಬಂದ್
    * ದೇಶಿಯ ವಿಮಾನಗಳ ಸೇವೆಯಲ್ಲಿಯೂ ಕಡಿತ
    * ಸೋಂಕು ಕಂಡು ಬಂದ ದೇಶದ 75 ಜಿಲ್ಲೆಗಳು ಲಾಕ್‍ಡೌನ್
    * ಬ್ಯಾಂಕ್‍ಗಳಿಂದ ಅಗತ್ಯ ಸೇವೆ ಮಾತ್ರ

    ಕೊರೊನಾ ಲಾಕ್‍ಡೌನ್
    * ದೆಹಲಿ – (ಸಂಪೂರ್ಣ ಲಾಕ್‍ಡೌನ್)
    * ಮಹಾರಾಷ್ಟ್ರ – (ಸಂಪೂರ್ಣ ಲಾಕ್‍ಡೌನ್)
    * ತೆಲಂಗಾಣ – (ಸಂಪೂರ್ಣ ಲಾಕ್‍ಡೌನ್)
    * ಬಿಹಾರ – (ಸಂಪೂರ್ಣ ಲಾಕ್‍ಡೌನ್)
    * ಪಂಜಾಬ್ (ಸಂಪೂರ್ಣ ಲಾಕ್‍ಡೌನ್)
    * ರಾಜಸ್ತಾನ (ಸಂಪೂರ್ಣ ಲಾಕ್‍ಡೌನ್)
    * ಒಡಿಶಾ (ಸಂಪೂರ್ಣ ಲಾಕ್‍ಡೌನ್)
    * ನಾಗಾಲ್ಯಾಂಡ್ (ಸಂಪೂರ್ಣ ಬಂದ್)
    * ಪಶ್ಚಿಮ ಬಂಗಾಳ (ಸಂಪೂರ್ಣ ಲಾಕ್‍ಡೌನ್)
    * ಉತ್ತರಾಖಂಡ್ (ಮಾ.31ರವರೆಗೂ ಜನತಾ ಕಫ್ರ್ಯೂ)
    * ಗುಜರಾತ್‍ನ ನಾಲ್ಕು ನಗರ ಲಾಕ್‍ಡೌನ್ (ಅಹ್ಮದಾಬಾದ್, ಸೂರತ್, ರಾಜ್‍ಕೋಟ್, ವಡೋದರಾ)
    * ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಲಾಕ್‍ಡೌನ್ (ಮೆಟ್ರೋ, ಬಸ್ ಸೇವೆ ರದ್ದು)
    * ತ್ರಿಪುರ – ಎಲ್ಲಾ ಗಡಿ ಬಂದ್, ಗಡಿಯಲ್ಲಿಯೇ ಸ್ಕ್ರೀನಿಂಗ್
    * ಜಮ್ಮು ಕಾಶ್ಮೀರ – ಮಾರ್ಚ್ 25ರವರೆಗೂ ಸಾರ್ವತ್ರಿಕ ರಜೆ ಘೋಷಣೆ
    * ಪುದುಚ್ಚೇರಿಯಲ್ಲಿ ನಿಷೇಧಾಜ್ಞೆ ಜಾರಿ (ಮಾರ್ಚ್ 31ರವರೆಗೂ)

  • ದೇಶದಲ್ಲಿ ಕೊರೊನಾಗೆ ಇವತ್ತು 3 ಬಲಿ – ದೆಹಲಿಯಲ್ಲಿ 6 ಮಂದಿಗೆ ಸಾಮೂಹಿಕ ಸೋಂಕು?

    ದೇಶದಲ್ಲಿ ಕೊರೊನಾಗೆ ಇವತ್ತು 3 ಬಲಿ – ದೆಹಲಿಯಲ್ಲಿ 6 ಮಂದಿಗೆ ಸಾಮೂಹಿಕ ಸೋಂಕು?

    ನವದೆಹಲಿ: ಕೊರೊನಾಗೆ ಬಲಿಯಾದವರ ಸಂಖ್ಯೆ ದೇಶದಲ್ಲಿ ದಿನೇ ದಿನೇ ಏರಿಕೆ ಆಗುತ್ತಿದೆ. ಇವತ್ತೊಂದೇ ದಿನ ಮೂವರು ಕೊರೊನಾಗೆ ಬಲಿ ಆಗಿದ್ದು, ಮೃತರ ಸಂಖ್ಯೆ ಒಟ್ಟು ಏಳಕ್ಕೆ ಏರಿದೆ.

    ಇವತ್ತು ಗುಜರಾತ್, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿತರ ಪ್ರಮಾಣವೂ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಇವತ್ತು ಒಂದೇ ದಿನದಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.

    ಸೋಂಕಿತರ ಸಂಖ್ಯೆ ಒಟ್ಟು 350 ದಾಟಿದೆ. ಇನ್ನೂ ದೆಹಲಿಯಲ್ಲಿ ಆರು ಮಂದಿಗೆ ಸಾಮೂಹಿಕವಾಗಿ ಸೋಂಕು ಹಬ್ಬಿದೆ ಎಂದು ದೆಹಲಿ ಸಿಎಂ ಕೇಜ್ರಿವಾಲ್ ತಿಳಿಸಿದ್ದು, ಆತಂಕಕ್ಕೆ ಕಾರಣವಾಗಿದೆ.

    ಕೊರೊನಾಗೆ ಇಂದು ಮೂರು ಬಲಿ
    * 38 ವರ್ಷದ ಪಾಟ್ನಾ ನಿವಾಸಿ (ಖತಾರ್ ರಿಟರ್ನ್)
    * 63 ವರ್ಷದ ಮುಂಬೈ ನಿವಾಸಿ
    * 69 ವರ್ಷದ ಸೂರತ್ ನಿವಾಸಿ (ಬಿಪಿ, ಶುಗರ್ ಇತ್ತು)
    * 70 ವರ್ಷದ ವಡೋದರಾ ಮಹಿಳೆ (ಕೊರೊನಾ ಟೆಸ್ಟ್ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.)