ನವದೆಹಲಿ: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಲಾಗಿದ್ದು, ಅನೇಕರು ಹಸಿವಿನಿಂದ ಬಳತ್ತಿದ್ದಾರೆ. ಇದರಿಂದಾಗಿ ನಿತ್ಯವೂ 10 ಸಾವಿರ ಜನರಿಗೆ ಆಹಾರ ಒದಗಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಾಗಿದ್ದಾರೆ.
ಸೌರವ್ ಗಂಗೂಲಿ ಶನಿವಾರ ಇಸ್ಕಾನ್‍ನ ಕೋಲ್ಕತ್ತಾ ಕೇಂದ್ರಕ್ಕೆ ಸಹಾಯ ಹಸ್ತ ಚಾಚಿದ್ದು, ಪ್ರತಿದಿನ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ 20,000 ಜನರಿಗೆ ಆಹಾರವನ್ನು ನೀಡುವುದಾಗಿ ಹೇಳಿದ್ದಾರೆ. ಈವರೆಗೂ ಕೋಲ್ಕತಾ ಇಸ್ಕಾನ್ ಪ್ರತಿದಿನ 10,000 ಜನರಿಗೆ ಆಹಾರವನ್ನು ನೀಡುತ್ತಿತ್ತು. ಆದರೆ ಇನ್ನುಮುಂದೆ 20,000 ಜನರಿಗೆ ಆಹಾರ ಒದಗಿಲುವ ಕೆಲಸ ಮಾಡಲಿದೆ.
These r difficult times.A small contribution to the society from SGF to serve people..Thank you to state and central government and all social workers who are endlessly trying to help the people of our country..we will get thru this @MamataOfficial@narendramodi@bccipic.twitter.com/cy1nIovcXb
ಮಾಸ್ಕ್ ಹಾಗೂ ಗ್ಲೌಸ್‍ಗಳನ್ನು ಧರಿಸಿ ಭಾರತದ ಮಾಜಿ ನಾಯಕ ಕೋಲ್ಕತ್ತಾದ ಇಸ್ಕಾನ್ ಕೇಂದ್ರಕ್ಕೆ ಭೇಟಿ ನೀಡಿ ಬೆಂಬಲ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕೋಲ್ಕತ್ತಾ ಇಸ್ಕಾನ್ ಕೇಂದ್ರದ ವಕ್ತಾರ, ಉಪಾಧ್ಯಕ್ಷ ರಾಧರಮನ್ ದಾಸ್, ‘ನಾವು ಪ್ರತಿದಿನ 10,000 ಜನರಿಗೆ ಆಹಾರವನ್ನು ಅಡುಗೆ ಮಾಡುತ್ತಿದ್ದೆವು. ನಮ್ಮ ಪ್ರೀತಿಯ ಸೌರವ್ ದಾದಾ ಮುಂದೆ ಬಂದು ಅವರ ಎಲ್ಲಾ ಬೆಂಬಲವನ್ನು ನೀಡಿದ್ದಾರೆ ಮತ್ತು ದೇಣಿಗೆ ನೀಡಿದ್ದಾರೆ. ಇದು ಪ್ರತಿದಿನ 20,000 ಜನರಿಗೆ ನಮ್ಮ ಸಾಮಥ್ರ್ಯವನ್ನು ದ್ವಿಗುಣಗೊಳಿಸಲು ಅನುವು ಮಾಡಿಕೊಟ್ಟಿದೆ’ ಎಂದು ತಿಳಿಸಿದ್ದಾರೆ.
‘ಕೊರೊನಾ ಬಿಕ್ಕಟ್ಟು ಮಾನವೀಯತೆಯ ಮುಂದೆ ಅಭೂತಪೂರ್ವ ಸವಾಲುಗಳನ್ನು ಸೃಷ್ಟಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಾನು ದಾದಾ ಅವರ ದೊಡ್ಡ ಅಭಿಮಾನಿ. ಮೈದಾನದಲ್ಲಿ ಅವರ ಅನೇಕ ಇನ್ನಿಂಗ್ಸ್ ಗಳನ್ನು ನೋಡಿದ್ದೇನೆ. ಆದರೆ ಪ್ರತಿದಿನ 10,000 ಜನರಿಗೆ ಆಹಾರವನ್ನು ನೀಡುವ ಅವರ ಇನ್ನಿಂಗ್ಸ್ ಅತ್ಯುತ್ತಮವಾದುದು. ಇಸ್ಕಾನ್ ಗಂಗೂಲಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ’ ಎಂದು ದಾಸ್ ಹೇಳಿದ್ದಾರೆ.
ಗಂಗೂಲಿ ಅವರು ಈ ಹಿಂದೆ ರಾಮಕೃಷ್ಣ ಮಿಷನ್‍ನ ಪ್ರಧಾನ ಕಚೇರಿಯಾದ ಬೇಲೂರು ಮಠದಲ್ಲಿ 20,000 ಕೆಜಿಗಳಷ್ಟು ಅಕ್ಕಿಯನ್ನು ದಾನ ಮಾಡಿದ್ದರು.
ಚಿಕ್ಕಮಗಳೂರು: ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದ್ದವರಿಂದ ದೇಶಾದ್ಯಂತ ಕೊರೊನಾ ವೈರಸ್ ಹಬ್ಬಿಸುವ ದುಷ್ಕೃತ್ಯ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರಿನ ನಗರಸಭೆಯಲ್ಲಿ ಮಾತನಾಡಿದ ಅವರು, ಜಮಾತ್ ಸಭೆಗೆ ಹೋದ ಹಲವರು ನಾಪತ್ತೆಯಾಗಿದ್ದಾರೆ. ಇದರ ಹಿಂದೆ ಕೊರೊನಾ ಜಿಹಾದಿಯ ವಾಸನೆ ಕೂಡ ಬಡಿಯುತ್ತಿದೆ. ದೇಶವನ್ನು ಕೊರೊನಾ ಮುಕ್ತ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೋರಾಡುತ್ತಿವೆ. ಯಾರು ದೆಹಲಿಗೆ ಹೋಗಿದ್ದರೋ ಅವರನ್ನ ಪತ್ತೆ ಹಚ್ಚುವ ಕೆಲಸವನ್ನ ಪೊಲೀಸರು ಮಾಡುತ್ತಿದ್ದಾರೆ. ಆದರೆ ತಬ್ಲಿಘಿಗಳು ಅದಕ್ಕೆ ಸಹಕಾರ ಕೊಡುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿನ ಸಿದ್ದಿಕ್ ಲೇಔಟ್‍ನಲ್ಲಿ ನಡೆದ ಘಟನೆ ಎಂದು ದೂರಿದರು.
ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲಾಯಿತು. ಸಿದ್ದಿಕ್ ಲೇಔಟ್‍ನಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಅವರು ಆಸ್ಪತ್ರೆ ಸೇರಿದ್ದರು. ಸೋಂಕಿತ ಮಹಿಳೆ ಬೇರೆ-ಬೇರೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಯಾರ-ಯಾರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನುವುದನ್ನು ಪತ್ತೆ ಹಚ್ಚಲು ಆಶಾ ಕಾರ್ಯಕರ್ತೆಯರು ಅಲ್ಲಿಗೆ ಹೋಗಿದ್ದರು. ಆದರೆ ಅಲ್ಲಿನ ಜನರು ಸೇರಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು.
ಸರ್ಕಾರದ ಕೆಲಸಕ್ಕೆ ಒಂದು ಸಮುದಾಯದ ಜನ ಸಹಕಾರ ಕೊಡುತ್ತಿಲ್ಲ ಎನ್ನುವುದು ಸಾಬೀತಾಗಿದೆ. ಯಾರು ದೆಹಲಿ ಸಭೆಗೆ ಹೋಗಿದ್ದರೋ ಅವರು ಸ್ವಯಂ ಪ್ರೇರಿತರಾಗಿ ಬಂದು ಪೊಲೀಸರಿಗೆ ಮಾಹಿತಿ ನೀಡಿ, ಪರೀಕ್ಷೆಗೊಳಪಟ್ಟು, ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕು. ಇಲ್ಲವಾದರೆ ಅವರಿಗೆ ಕಠಿಣ ಶಿಕ್ಷೆ, ಜೀವಾವಧಿಯಂತಹಾ ಶಿಕ್ಷೆ ಕೊಡುವಂತಾಗಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
– ಮೈಸೂರಿನಲ್ಲಿ ಒಂದೇ ದಿನ 7 ಮಂದಿಗೆ ಕೊರೊನಾ
– ದೆಹಲಿಗೆ ತೆರಳಿದ್ದ ಒಟ್ಟು 16 ಮಂದಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 16 ಪ್ರಕರಣಗಳು ಬೆಳಕಿಗೆ ಬಂದಿದ್ದು ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾಟ್‍ಸ್ಪಾಟ್‍ಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ ಇಂದು ಒಂದೇ ದಿನಕ್ಕೆ 7 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರಲ್ಲಿ 5 ಮಂದಿ ದೆಹಲಿಗೆ ಹೋಗಿ ಬಂದವರಾಗಿದ್ದಾರೆ. ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಟ್ಟು 16 ಮಂದಿ ಕೊರೊನಾಗೆ ತುತ್ತಾಗಿದ್ದು, ಈ ಮೂಲಕ ಮೈಸೂರಿನಲ್ಲಿ ಸೊಂಕಿತರ ಸಂಖ್ಯೆ 28ಕ್ಕೆ ಏರಿದೆ.
ದೆಹಲಿಯಲ್ಲಿ ಭಾಗವಹಿಸಿದ್ದವರ ತಪಾಸಣೆ ಮಾಡಲಾಗಿದ್ದು, 214 ಮಂದಿಯ ವರದಿ ಬಂದಿದೆ. ಇದರಲ್ಲಿ 16 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನುಳಿದ 198 ಪ್ರಕರಣ ನೆಗೆಟಿವ್ ಬಂದಿದೆ. 10 ಮಂದಿ ಇಂಡೋನೇಷ್ಯಾ ಹಾಗೂ 9 ಮಂದಿ ಕರ್ಗೀಸ್ತಾನ್‍ನಿಂದ ಜಮಾತ್ ಧಾರ್ಮಿಕ ಸಂಘಟನೆಯಲ್ಲಿ ಭಾಗವಹಿಸಿ ಕರ್ನಾಟಕಕ್ಕೆ ಬಂದಿದ್ದರು. ಈ 19 ಮಂದಿಯ ವರದಿ ನೆಗೆಟಿವ್ ಇದೆ ಎಂದು ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ರೋಗಿ 129 – 21 ವರ್ಷದ ಬೆಂಗಳೂರಿನ ವ್ಯಕ್ತಿಯಾಗಿದ್ದು ರೋಗಿ 58ರ ಮನೆ ಕೆಲಸದವರು.
ರೋಗಿ 130 – 57 ವರ್ಷದ ವ್ಯಕ್ತಿ ಬೆಂಗಳೂರಿನವರಾಗಿದ್ದು, ರೋಗಿ 58ರ ತಂದೆಯಾಗಿದ್ದಾರೆ.
ರೋಗಿ 131 – 43 ವರ್ಷದ ವ್ಯಕ್ತಿ ಬೆಂಗಳೂರಿನ ವ್ಯಕ್ತಿಯಾಗಿದ್ದು, ರೋಗಿ 101ರ ಮಗನಾಗಿದ್ದಾನೆ.
ರೋಗಿ 132 – 78 ವರ್ಷದ ಬೆಂಗಳೂರು ನಗರದ ನಿವಾಸಿ ದುಬೈಯಿಂದ ಮಾರ್ಚ್ 17 ರಂದು ಮರಳಿದ್ದರು.
ರೋಗಿ 133 – 60 ವರ್ಷ ಕೇರಳದ ಕೊಚ್ಚಿನ್ ಮೂಲದ ವ್ಯಕ್ತಿ ಜರ್ಮನಿ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ.
ರೋಗಿ 134 – 38 ವರ್ಷದ ಮೈಸೂರಿನ ವ್ಯಕ್ತಿ ದೆಹಲಿ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ರೋಗಿ 135 – 19 ವರ್ಷ ಮೈಸೂರಿನ ವ್ಯಕ್ತಿ ದೆಹಲಿಗೆ ತೆರಳಿದ್ದರು.
ರೋಗಿ 136 – 39 ವರ್ಷದ ಮೈಸೂರಿನ ವ್ಯಕ್ತಿ ದೆಹಲಿ ಪ್ರಯಾಣ ಮಾಡಿದ್ದಾರೆ.
ರೋಗಿ 137 – 39 ವರ್ಷದ ಮೈಸೂರಿನ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.
ರೋಗಿ 138 – 54 ವರ್ಷದ ಮೈಸೂರಿನ ವ್ಯಕ್ತಿ ದೆಹಲಿಗೆ ಪ್ರಯಾಣ ಮಾಡಿದ್ದಾರೆ.
ರೋಗಿ 139 – 40 ವರ್ಷದ ಮೈಸೂರಿನ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.
ರೋಗಿ 140 – 34 ವರ್ಷದ ಮೈಸೂರಿನ ವ್ಯಕ್ತಿ ರೋಗಿ 109ರ ಸಂಪರ್ಕಕ್ಕೆ ಬಂದಿದ್ದರಿಂದ ಕೊರೊನಾ ಬಂದಿದೆ.
ರೋಗಿ 141 – 47 ವರ್ಷದ ಮಹಿಳೆ ಬಳ್ಳಾರಿಯವರಾಗಿದ್ದು ತನಿಖೆ ನಡೆಯುತ್ತಿದೆ.
ರೋಗಿ 142 – 63 ವರ್ಷದ ಉಡುಪಿಯ ಮಹಿಳೆ ದುಬೈಯಿಂದ ಮಾರ್ಚ್ 22 ರಂದು ಮರಳಿದ್ದರು.
ರೋಗಿ 143 – 43 ವರ್ಷದ ದಕ್ಷಿಣ ಕನ್ನಡದ ವ್ಯಕ್ತಿ ದೆಹಲಿಯಲ್ಲಿ ನಡೆದ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರೋಗಿ 144 – 52 ವರ್ಷದ ದಕ್ಷಿಣ ಕನ್ನಡದ ವ್ಯಕ್ತಿ ದೆಹಲಿಯಲ್ಲಿ ನಡೆದ ಜಮಾತ್ ಕರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎಲ್ಲೆಲ್ಲಿ ಎಷ್ಟು ಮಂದಿ?
ಬೆಂಗಳೂರು ನಗರದಲ್ಲಿ 55, ಮೈಸೂರಿನಲ್ಲಿ 28, ದಕ್ಷಿಣ ಕನ್ನಡದಲ್ಲಿ 12, ಉತ್ತರ ಕನ್ನಡದಲ್ಲಿ 8, ಚಿಕ್ಕಬಳ್ಳಾಪುರದಲ್ಲಿ 7, ಕಲಬುರಗಿಯಲ್ಲಿ 5, ಬಳ್ಳಾರಿಯಲ್ಲಿ 5, ದಾವಣಗೆರೆಯಲ್ಲಿ 3, ಉಡುಪಿಯಲ್ಲಿ 3, ಧಾರವಾಡದಲ್ಲಿ 1, ಕೊಡಗಿನಲ್ಲಿ 1, ತುಮಕೂರಿನಲ್ಲಿ 1, ಬೀದರ್ ನಲ್ಲಿ 10, ಬಾಗಲಕೋಟೆಯಲ್ಲಿ 1, ಬೆಳಗಾವಿಯಲ್ಲಿ 3, ಬೆಂಗಳೂರು ಗ್ರಾಮೀಣದಲ್ಲಿ 1 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ.
ಬೆಂಗಳೂರು ನಗರದಲ್ಲಿ 55 ಮಂದಿ ಸೋಂಕಿತರಲ್ಲಿ 9 ಮಂದಿ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಇತ್ತ ಕಲಬುಗಿಯಲ್ಲಿ ಐವರಲ್ಲಿ ಇಬ್ಬರು ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ ತುಮಕೂರಿನಲ್ಲಿ ಒಬ್ಬರು, ಬಾಗಲಕೋಟೆಯಲ್ಲಿ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.
ಆರೋಗ್ಯ ಸಹಾಯವಾಣಿ:
104 ಆರೋಗ್ಯ ಸಹಾಯವಾಣಿ (ಶುಲ್ಕರಹಿತ ಕಾಲ್ ಸೆಂಟರ್) ಕೋವಿಡ್-19 ಕುರಿತ ಕರೆಗಳಿಗಾಗಿ 210 ಆಸನಗಳನ್ನು ಮೀಸಲಿರಿಸಿದೆ. ದಿನಾಂಕ 03.04.2020ರಂದು 15,061ಕರೆಗಳನ್ನು ಸ್ವೀಕರಿಸಲಾಗಿದೆ ಮತ್ತು 20 ಅಗತ್ಯ ಮಾರ್ಗದರ್ಶನದ ನೀಡುವ ಕರೆಗಳನ್ನು ಸೇರಿ ಒಟ್ಟು 13,927ಹೊರ ಕರೆಗಳನ್ನು ಮಾಡಲಾಗಿದೆ.
ಸಾರ್ವಜನಿಕರಲ್ಲಿ ಮನವಿ:
ಕೋವಿಡ್-19 ಪೀಡಿತ ದೇಶಗಳಿಂದ ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರೂ ಭಾರತಕ್ಕೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ, ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರುವುದು ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳುವುದು ಅಥವಾ 104 ಸಹಾಯವಾಣಿಗೆ ಕರೆ ಮಾಡಿ. ವೈಯಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ಟಿಶ್ಯೂ ಪೇಪರನ್ನು ಬಳಸಿ, ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಿ ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬೇಡಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.
ರಾಯಚೂರು: ಈಗ ಕೃಷಿ ಚಟುವಟಿಕೆಗಳು ಗರಿಗೆದರುವ ಸಮಯವಾಗಿರುವುದರಿಂದ ರಾಯಚೂರು ಜಿಲ್ಲಾಡಳಿತ ಲಾಕ್‍ಡೌನ್‍ನಲ್ಲಿ ಸ್ವಲ್ಪ ಸಡಲಿಕೆ ನೀಡಿದೆ. ಸರ್ಕಾರದ ಸೂಚನೆಯಂತೆ ಕೃಷಿ ಮಾರುಕಟ್ಟೆಗಳು ಸಹ ವ್ಯಾಪಾರ ಆರಂಭಿಸಿವೆ. ಆದರೆ ಎಪಿಎಂಸಿಗಳಲ್ಲಿ ಜನ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುತ್ತಿಲ್ಲ. ಇಡೀ ಕೃಷಿ ಉತ್ಪನ್ನ ಮಾರುಕಟ್ಟೆ ಜಾತ್ರೆಯಂತಾಗಿದೆ.
ರೈತರ ಸಂಖ್ಯೆ ಹೆಚ್ಚಾಗಿದ್ದರಿಂದ ತುಂಬಾ ಜನ ವ್ಯಾಪಾರಿಗಳು, ದಲ್ಲಾಳಿಗಳು ತಮ್ಮ ಅಂಗಡಿಗಳನ್ನೇ ತೆರೆಯುತ್ತಿಲ್ಲ. ರೈತರು, ಹಮಾಲಿಗಳು ಗುಂಪುಗುಂಪಾಗಿ ಬರುತ್ತಿರುವುದರಿಂದ ಸಾಮಾಜಿಕ ಅಂತರ ಎನ್ನುವುದೇ ಕಾಣುತ್ತಿಲ್ಲ. ಭತ್ತ, ಈರುಳ್ಳಿ, ಶೇಂಗಾ ಬೆಳೆದ ರೈತರು ವ್ಯಾಪಾರಕ್ಕಾಗಿ ಗುಂಪುಗುಂಪಾಗೆ ಓಡಾಡುತ್ತಿದ್ದಾರೆ.
ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಕೇಂದ್ರ ಸರ್ಕಾರವೇ ಅನುಮತಿ ನೀಡಿರುವುದರಿಂದ ಅಂತರರಾಜ್ಯದಿಂದ ಭತ್ತ, ಈರುಳ್ಳಿ ಬರುತ್ತಿದೆ. ಆಂಧ್ರ ಪ್ರದೇಶದಿಂದಲೇ ಶೇ.70ರಷ್ಟು ಭತ್ತ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದೆ. ಹೊರ ರಾಜ್ಯದಿಂದ ಬರುವ ರೈತರು ಸಹ ಯಾವುದೇ ಸುರಕ್ಷತೆ ಕಾಪಾಡಿಕೊಳ್ಳುತ್ತಿಲ್ಲ, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡುತ್ತಿಲ್ಲ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಆತಂಕವಾಗಿದೆ.
ಜಿಲ್ಲೆಯ ರೈತರು ಈರುಳ್ಳಿ, ಶೇಂಗಾ ಹೆಚ್ಚು ಪ್ರಮಾಣದಲ್ಲಿ ಮಾರುಕಟ್ಟೆಗೆ ತರುತ್ತಿದ್ದಾರೆ. ರೈತರಿಗೂ ಯಾವುದೇ ಸುರಕ್ಷತೆ ಇಲ್ಲಾ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೆ ವ್ಯಾಪಾರ ಆರಂಭಿಸಲಾಗಿದೆ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಸುರಕ್ಷಿತ ಕ್ರಮಗಳೊಂದಿಗೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನ ಮಾರಾಟ ಮಾಡಲು ಅನುವುಮಾಡಿಕೊಡಬೇಕಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಇಸ್ಲಾಮಾಬಾದ್: ಲಾಕ್‍ಡೌನ್ ನಡುವೆಯೂ ಸಾಮೂಹಿಕ ಪ್ರಾರ್ಥನೆ ನಡೆಸಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರನ್ನೇ ಹೊಡೆದ ಘಟನೆ ಪಾಕಿಸ್ತಾನದ ಕರಾಚಿಯ ಲಿಯಾಕ್ವಾಟಾಬಾದ್ ಪ್ರದೇಶದಲ್ಲಿ ನಡೆದಿದೆ.
ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಪಾಕಿಸ್ತಾನದಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ. ಆದರೂ ಲಿಯಾಕ್ವಾಟಾಬಾದ್ ಪ್ರದೇಶದಲ್ಲಿ ಜನರು ಶುಕ್ರವಾರ ಸಾಮೂಹಿಕ ಪ್ರಾರ್ಥನೆ ನಡೆಸಿದ್ದರು. ಈ ವೇಳೆ ಪೊಲೀಸರು ಜನರನ್ನು ಚದುರಿಸಲು ಯತ್ನಿಸಿದಾಗ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆಯೇ ಕಲ್ಲು ತೂರಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿಂದ ಪರಾರಿಯಾಗುತ್ತಿದ್ದ ಪೊಲೀಸರ ಜೀಪ್ ಬೆನ್ನಟ್ಟಿ ದಾಳಿಗೆ ಮುಂದಾಗಿದ್ದರು.
ಲಾಕ್‍ಡೌನ್ ಉಲ್ಲಂಘಿಸಿದ್ದಕ್ಕೆ ಮತ್ತು ಪೊಲೀಸರ ಮೇಲೆ ಹಲ್ಲೆಗೈದ 7 ಜನ ಮುಖಂಡರನ್ನು ಬಂಧಿಸಲಾಗಿದೆ. ಪಾಕಿಸ್ತಾನದಲ್ಲಿ 2,600ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
Clashes broke out in Pak's Karachi after locals attacked police personnel deployed to enforce new curbs on gatherings incl Friday prayers. 7 people incl a prayer leader were arrested for violation of lockdown&manhandling policemen. Coronavirus cases in Pak is 2637 with 40 deaths. https://t.co/HoGU9qIDC2
ಉಡುಪಿ: ಲಾಕ್‍ಡೌನ್ ಎಫೆಕ್ಟ್ ಜನಗಳಿಗೆ ಮಾತ್ರ ಅಲ್ಲ ಮೂಕ ಪ್ರಾಣಿಗಳ ಮೇಲೂ ತಟ್ಟಿದೆ. ಅಗತ್ಯ ವಸ್ತುಗಳನ್ನು ತರಲು ಜನಗಳನ್ನು ಕೆಲಹೊತ್ತು ಹೊರಗೆ ಕಳುಹಿಸಲಾಗುತ್ತಿದೆ. ಆದರೆ ಕೃಷ್ಣ ಮಠದ ಗೋವುಗಳಿಗೆ ಕಳೆದ ಹದಿನಾಲ್ಕು ದಿನಗಳಿಂದ ದಿಗ್ಬಂಧನ ಹಾಕಲಾಗಿದೆ.
ಉಡುಪಿ ಕೃಷ್ಣ ಮಠದ ಗೋಶಾಲೆಯ ಗೋವುಗಳನ್ನು ಹಟ್ಟಿಯಿಂದ ಹೊರಬಿಟ್ಟು ಹದಿನಾಲ್ಕು ದಿನಗ ಕಳೆದಿದೆ. ಬೆಳಗ್ಗೆ ಸ್ನಾನ ಮುಗಿಸಿ ಒಂದು ರೌಂಡ್ ವಾಕಿಂಗ್ ಮಾಡಿ ಮೇವು ಮೇಯುತ್ತಿದ್ದ ದನಗಳು ಕೊಟ್ಟಿಗೆಯಲ್ಲೇ ಒಣ ಹುಲ್ಲು ಹಿಂಡಿ ತಿಂದು ವ್ಯಥೆಪಡ್ತಾ ಇವೆ. ಕೊರೊನಾ ವೈರಸ್ ತಡೆಗಟ್ಟಲು ಮನೆಯಲ್ಲೇ ಇರಿ ಎಂದು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಪ್ರಾಣಿಗಳಿಗೆ ಸಮಸ್ಯೆಯಾಗಬಾರದು ಎಂದು ಮಠ ಕೊಟ್ಟಿಗೆ ಕ್ವಾರಂಟೈನ್ ನಿರ್ಧಾರ ತೆಗೆದುಕೊಂಡಿದೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಪರ್ಯಾಯ ಈಶಪ್ರಿಯತೀರ್ಥ ಸ್ವಾಮೀಜಿ ಸುಮಾರು ಎಂಬತ್ತು ಹಸುಗಳನ್ನು ಮಠದಲ್ಲಿ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್‍ನ ಹಾವಳಿ ಶುರುವಾದ ಕೂಡಲೇ ಮಠದ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ. ಹಸುಗಳನ್ನು ಮೇವಿಗೆ ಬಿಟ್ಟರೆ ವೈರಸ್ ಬಾಧಿಸಬಹುದು. ಮೂಕ ಪ್ರಾಣಿಗಳಿಗೆ ಕಷ್ಟವಾಗಬಹುದು ಎಂಬ ಉದ್ದೇಶದಿಂದ ಮಠದ ಒಳಗೆ ಗೋಶಾಲೆಯಲ್ಲೇ ಕಟ್ಟಿಹಾಕಲು ನಿರ್ಧಾರ ಮಾಡಿದ್ದಾರೆ.
ಪ್ರತಿದಿನ ಬೆಳಗ್ಗೆ ಏಳು ಮೂವತ್ತರ ಸುಮಾರಿಗೆ ಬಯಲಿಗೆ ಬಿಡುತ್ತಿದ್ದೆವು. ಹನ್ನೆರಡು ಗಂಟೆಗೆ ಹಸುಗಳು ವಾಪಸ್ ಗೋಶಾಲೆಗೆ ಬರುತ್ತಿತ್ತು. ಇದೀಗ ದಿನಪೂರ್ತಿ ಹಟ್ಟಿಯ ಒಳಗೆ ಇರುವುದರಿಂದ ಅವುಗಳಿಗೆ ಬೇಸರವಾಗಿರಬೇಕು. ಈ ಸಮಸ್ಯೆ ಬೇಗ ಪರಿಹಾರವಾದರೆ ಹಸುಗಳನ್ನು ಬಯಲಿಗೆ ಬಿಡಬಹುದಿತ್ತು ಎಂದು ಗೋಶಾಲೆ ಸಿಬ್ಬಂದಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತ ಮಾಹಿತಿ ನೀಡಿದರು.
ಉಡುಪಿ ಶ್ರೀಕೃಷ್ಣ ಮಠ ಮತ್ತು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ಮಾತನಾಡಿ, ಹಸುಗಳು ಬಯಲಿಗೆ ಹೋದರೆ ಅಲ್ಲಿ ಆಹಾರ ಅವುಗಳಿಗೆ ಸಿಗುತ್ತಿರಲಿಲ್ಲ. ಪರ್ಯಾಯ ಅದಮಾರು ಮಠ ಹಸುಗಳಿಗೆ ಪೌಷ್ಟಿಕಾಂಶದ ಆಹಾರಗಳನ್ನು ಕೊಡುತ್ತಿದೆ. ದಿನಕ್ಕೆ ಎಂಟು ಹತ್ತು ಹಸುಗಳನ್ನು ಮಠದ ಒಳಗೆ ಬಿಡುವ ವ್ಯವಸ್ಥೆಯನ್ನು ಮಾಡಲಾಗುವುದು. ಪರ್ಯಾಯ ಸ್ವಾಮೀಜಿಗಳು ಮಠದ ಸಂಪೂರ್ಣ ಒಳಗೆ ಹಸುಗಳನ್ನು ಬಿಡುವ ಬಗ್ಗೆ ಆದೇಶ ಹೊರಡಿಸಿದ್ದಾರೆ. ಶಿಫ್ಟ್ ಆಧಾರದಲ್ಲಿ ಹಸುಗಳಿಗೆ ವಾಕಿಂಗ್ ವ್ಯವಸ್ಥೆ ಮಾಡುತ್ತೇವೆ ಎಂದರು.
ಕೃಷ್ಣಮಠದ ಗೋಶಾಲೆಯಲ್ಲಿ 80 ಹಸುಗಳಿವೆ. ಮೂರು ಹೊತ್ತು ಒಣ ಮೇವು, ಹಿಂಡಿ, ಬೂಸಾ ಕೊಡಲಾಗುತ್ತಿದೆ. ಕರುಗಳನ್ನು ಗೋಶಾಲೆಯ ಒಳಗಡೆ ಅಡ್ಡಾಡಲು ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮತ್ತೊಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.
ಈ ಮೊದಲು ಹೊಸಪೇಟೆ ಮೂಲದ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ಧೃಡವಾಗಿತ್ತು. ಇದೇ ಕುಟುಂಬದ ಸದಸ್ಯರಲ್ಲಿ ಒಬ್ಬರು 7 ಜನರ ಜೊತೆ ನೇರ ಸಂಪರ್ಕ ಹೊಂದಿದ್ದರು. ಹೀಗಾಗಿ ಆ ಏಳು ಜನರನ್ನು ಈಗಾಗಲೇ ಐಸೋಲೇಷನ್ ಮಾಡಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನೂ ಓದಿ: ನಂಜನಗೂಡಿನಿಂದ ಬಂದ ಬಳ್ಳಾರಿಯ ಬಾಲಕನಿಗೆ ಸೋಂಕು – ರಾಜ್ಯದಲ್ಲಿ 124ಕ್ಕೆ ಏರಿಕೆ
ಇಂದು ಏಳು ಜನರ ರಕ್ತ ಪರೀಕ್ಷೆ ವರದಿ ಬಂದಿದ್ದು, ಏಳರಲ್ಲಿ ಒಬ್ಬರಿಗೆ ಸೋಂಕು ಧೃಡವಾಗಿದೆ. ಅಲ್ಲದೇ ಏಳು ಜನರು 21 ಜನರ ಜೊತೆಯಲ್ಲಿ ಸಂಪರ್ಕ ಹೊಂದಿದ್ದು, ಆ 21 ಜನರನ್ನು ಸಹ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಅವರ ರಕ್ತದ ಮಾದರಿಯನ್ನು ಸಹ ಜಿಲ್ಲಾಡಳಿತ ಪರೀಕ್ಷೆಗೆ ಕಳಿಸಿದ್ದು, ರಕ್ತದ ಪರೀಕ್ಷೆಯ ವರದಿ ಬರಬೇಕಿದೆ.
ಆಘಾತಕಾರಿ ಅಂಶ ಅಂದರೆ ಸೋಂಕಿತ ವ್ಯಕ್ತಿಯ ಹಿರಿಯ ಮಗ ಬಳ್ಳಾರಿಯ ಹೆಸರಾಂತ ಖಾಸಗಿ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದು ದಿನ ಖಾಸಗಿ ಕಂಪನಿಗೆ ಹೋಗಿ ಕೆಲಸ ಮಾಡಿದ್ದಾನೆ. ಹೀಗಾಗಿ ಖಾಸಗಿ ಕಂಪನಿಯಲ್ಲಿ ಸೊಂಕು ಹರಡಿರುವ ಅನುಮಾನ ಹೆಚ್ಚಾಗಿದೆ.
ಮಂಡ್ಯ: ದೇಶದಲ್ಲಿ ತಲ್ಲಣವನ್ನೇ ಸೃಷ್ಟಿಸಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಪ್ರಕರಣ ಈಗ ಮಂಡ್ಯ ಜಿಲ್ಲೆಯ ಮಳವಳ್ಳಿಯ ಜನರಲ್ಲೂ ಆತಂಕ ಉಂಟುಮಾಡಿದೆ.
ದೆಹಲಿಯ ನಿಜಾಮುದ್ದೀನ್ ಧರ್ಮಸಭೆಗೂ ಮುನ್ನ ಮಳವಳ್ಳಿಗೆ ಧರ್ಮಗುರು ಭೇಟಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಧರ್ಮಗುರುವಿನ ಜೊತೆ ಸಂಪರ್ಕದಲ್ಲಿದ್ದವರ ಹುಡುಕಾಟವನ್ನು ಮಾಡಲಾಗುತ್ತಿದೆ. ಧರ್ಮಗುರು ಮಳವಳ್ಳಿಯಲ್ಲಿ ಕೆಲವು ದಿನಗಳ ಕಾಲ ವಾಸವಿದ್ದ ಬಗ್ಗೆ ಮಾಹಿತಿ ಇದೆ. ಮಾಹಿತಿ ಆಧರಿಸಿ ವಾಸವಿದ್ದ ಆ ಕುಟುಂಬದ ಸದಸ್ಯರಿಗಾಗಿ ಹುಡುಕಾಟ ನಡೆಯುತ್ತಿದೆ.
ಧರ್ಮಗುರು ಮೈಸೂರಿನಲ್ಲಿ ನೆಲೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರ ಸಂಪರ್ಕದಲ್ಲಿದ್ದವರನ್ನ ಹುಡುಕಾಟ ಮಾಡುತ್ತಿದ್ದೀವಿ. ಸದ್ಯಕ್ಕೆ ಅಧಿಕಾರಿಗಳು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲಿರುವ ಮುಸ್ಲಿಂ ಬ್ಲಾಕ್‍ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಇತ್ತ ಮಂಡ್ಯದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಂತ ಹಂತವಾಗಿ ಲಾಕ್‍ಡೌನ್ ಸಡಿಲಗೊಳಿಸುತ್ತಿದೆ. ಇಂದಿನಿಂದ ಸೆಲೂನ್, ಬೇಕರಿ ತೆರೆಯಲು ಡಿಸಿ ಡಾ.ಎಂ.ವಿ.ವೆಂಕಟೇಶ್ ಅನುಮತಿ ನೀಡಿದ್ದಾರೆ. ಆದರೆ ಕೆಲವು ಷರತ್ತು ವಿಧಿಸಿ ಅನುಮತಿ ನೀಡಿದ್ದಾರೆ. ಸೆಲೂನ್, ಬೇಕರಿ ಮಾಲೀಕರ ಮನವಿಗೆ ಸ್ಪಂದಿಸಿ ಅನುಮತಿ ನೀಡಿದ್ದೇನೆ. ಆದರೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಬಳಸುವಂತೆ ಸೂಚನೆ ನೀಡಿದ್ದೇನೆ. ಯಾಕೆಂದರೆ ಮುಂಜಾಗೃತೆ ವಹಿಸದಿದ್ದರೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಡಿಸಿ ತಿಳಿಸಿದ್ದಾರೆ.
ಇತ್ತ ಮೈಸೂರು ಜಿಲ್ಲೆಯಲ್ಲಿ ಸೋಂಕಿತರು ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆಯಲ್ಲಿ ಸೆಲೂನ್, ಬೇಕರಿ ತೆರೆಯಲು ಅನುಮತಿ ಕೊಟ್ಟಿದ್ದಕ್ಕೆ ಕೆಲವು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೋಳಿ, ಕುರಿ, ಮೇಕೆ, ಮೀನು ಮಾಂಸ ಮಾರಾಟಕ್ಕೂ ಅವಕಾಶ ಮಾಡಿಕೊಡಲಾಗಿದೆ.
ಮೈಸೂರು: ಜಿಲ್ಲೆಯ ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರ ಪೇಶೆಂಟ್ ನಂಬರ್ 52 ಮಾಡಿರುವ ಅವಾಂತರದಿಂದ ಇಡೀ ಮೈಸೂರು ಕೊರೊನಾ ಡೇಂಜರ್ ಝೋನ್‍ಗೆ ತಲುಪುವಂತೆ ಮಾಡುತ್ತಿದೆ.
ಇವರೆಗೆ ಈತನಿಂದ ಸೋಂಕು ಅಂಟಿಸಿಕೊಂಡವರ ಸಂಖ್ಯೆ ಬರೋಬ್ಬರಿ 18 ಆಗಿದೆ. ಈತನೂ ಸೇರಿ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ ಆಗಿದೆ. ಇದರಲ್ಲಿ ಆತನ ಪತ್ನಿ ಮತ್ತು ಮಾವ ಕೂಡ ಇದ್ದಾರೆ. ಇನ್ನುಳಿದಂತೆ ಇಬ್ಬರು ವಿದೇಶದಿಂದ ಬಂದವರು. ಅಲ್ಲಿಗೆ ಮೈಸೂರಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 21 ಆಗಿದೆ. ಈ ಸಂಖ್ಯೆ ಇಲ್ಲಿಗೆ ನಿಲ್ಲುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ.
ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಕೊರೊನಾ ಪಾಸಿಟಿವ್ ಸಂಖ್ಯೆ ದುಪ್ಪಟಾಗುವ ಸೂಚನೆ ನೀಡಿದ್ದಾರೆ. ಸೋಂಕಿತರ ಸಂಪರ್ಕ ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆ ಮಾಡಲೇಬೇಕು. ಸದ್ಯ ಪ್ರೈಮರಿ ಸಂಪರ್ಕ ಹೊಂದಿದ್ದ 223 ಜನರ ಸ್ಯಾಂಪಲ್ ಪರೀಕ್ಷೆ ನಡೆಯಬೇಕಿದೆ. ನಂಜನಗೂಡಿನ 19 ಕೇಸ್ ಪ್ರೈಮರಿ ಸಂಪರ್ಕದ ಹುಡುಕಾಟವು ಮುಂದುವರಿದಿದೆ. ಸಂಪರ್ಕಿತರ ಸಂಖ್ಯೆ ನೂರು ಆಗಬಹುದು. ಸಾವಿರವೂ ಆಗಬಹುದು ಎಂದು ಹೇಳುವ ಮೂಲಕ ಮೈಸೂರಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುವ ಸೂಚನೆ ರವಾನಿಸಿದ್ದಾರೆ.
ಪೇಶೆಂಟ್ ನಂಬರ್ 52ಗೆ ಸೋಂಕು ಹೇಗೆ ತಗುಲಿತು ಎಂಬುದು ಇನ್ನೂ ಸ್ಪಷ್ಟವಾಗುತ್ತಿಲ್ಲ. ಈ ನಡುವೆ ಮಾಜಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಯವರನ್ನ ಭೇಟಿ ಮಾಡಿದ್ದರು. ಬಳಿಕ ಮಾತನಾಡಿ ಜ್ಯೂಬಿಲಿಯೆಂಟ್ ಕಾರ್ಖಾನೆ ಕಾರ್ಮಿಕನಿಗೆ ಸೋಂಕು ತಗುಲೋಕೆ ಚೈನಾ ಕಂಟೈನರ್ ಕಾರಣವಿರಬಹುದು. ಜಿಲ್ಲಾಧಿಕಾರಿಗಳು ನನಗೆ ಮಾಹಿತಿ ನೀಡಿದ್ದು, ಚೈನಾದಿಂದ ಬಂದ ಒಂದು ಕಂಟೈನರ್ ರಿಂದ ಸೋಂಕು ತಗುಲಿರಬಹುದು ಎಂದಿದ್ದಾರೆ.
ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರನಿಂದ ಸೃಷ್ಟಿಯಾದ ಕೊರೊನಾ ಸೋಂಕಿನ ಚೈನ್ ಲಿಂಕ್ ಬಹು ದೊಡ್ಡದಾಗುತ್ತಿದೆ. ಇದರ ಜೊತೆಗೆ ನಿಜಾಮುದ್ದಿನ್ ಮಸೀದಿ ಸಭೆಗೆ ಹೋದವರು ಈ ಚೈನ್ ಲಿಂಕ್‍ಗೆ ಸೇರುವ ಲಕ್ಷಣಗಳಿವೆ. ಇದು ಬಹು ದೊಡ್ಡ ಆತಂಕದ ವಿಚಾರ.
ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಿಂದ ಸ್ವಗ್ರಾಮಕ್ಕೆ ಆಗಮಿಸಿದ್ದ ಎಂಜಿನಿಯರ್ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿ ಮೃತ ದುರ್ದೈವಿ. ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವ ಅನುಮಾನ ವ್ಯಕ್ತವಾಗಿದೆ.
ಟೆಕ್ಕಿ ಜ್ವರ, ನೆಗಡಿ, ಕೆಮ್ಮ, ನ್ಯೂಮೋನಿಯಾ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕಿಮ್ಸ್ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಕ್ತ ಮಾದರಿ ಹಾಗೂ ಥ್ರೋಟ್ ಸ್ವ್ಯಾಬ್ ಅನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಮೃತಪಟ್ಟಿದ್ದಾರೆ.
ಕಿಮ್ಸ್‌ನಲ್ಲಿ ರಕ್ತದ ಮಾದರಿ ಪರೀಕ್ಷೆ ವೇಳೆ ಕಾಮಣಿ ರೋಗ ಪತ್ತೆಯಾಗಿದೆ. ಹೀಗಾಗಿ ಕಾಮಾಲೆ ರೋಗದಿಂದ ಮೃತ್ತಪಟ್ಟಿರುವುದಾಗಿ ಕಿಮ್ಸ್ ವೈದ್ಯರ ಸ್ಪಷ್ಟನೆ ನೀಡಿದ್ದಾರೆ. ಆದರೆ ಶಿವಮೊಗ್ಗದಿಂದ ರಿಪೋರ್ಟ್ ಬರುವುದನ್ನು ವೈದ್ಯರು ಕಾಯುತ್ತಿದ್ದಾರೆ.