Tag: Coronavirus

  • ಸೋಂಕಿತ ಮೃತನ ಬಳಿ ಪಡಿತರ ಪಡೆದ 100ಕ್ಕೂ ಹೆಚ್ಚು ಮಂದಿ- ಕೊರೊನಾ ಪರೀಕ್ಷೆ ಜೊತೆಗೆ ಕ್ವಾರಂಟೈನ್

    ಸೋಂಕಿತ ಮೃತನ ಬಳಿ ಪಡಿತರ ಪಡೆದ 100ಕ್ಕೂ ಹೆಚ್ಚು ಮಂದಿ- ಕೊರೊನಾ ಪರೀಕ್ಷೆ ಜೊತೆಗೆ ಕ್ವಾರಂಟೈನ್

    ಚಿಕ್ಕಬಳ್ಳಾಪುರ: ಕೊರೊನಾಗೆ ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಬಲಿಯಾಗಿದ್ದು, ಅವರ ಬಳಿ ಪಡಿತರ ಪಡೆದಿದ್ದ 100ಕ್ಕೂ ಹೆಚ್ಚು ಮಂದಿಗೆ ಈಗ ಕೊರೊನಾ ಭೀತಿ ಎದುರಾಗಿದೆ.

    ಕಳೆದ ಎರಡು ದಿನಗಳ ಹಿಂದ ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕೊರೊನಾಗೆ ಮೃತಪಟ್ಟಿದ್ದು, ಈಗ ಅವರ ಕೊನೆಯ ಮಗ(26), ಎದುರುಗಡೆ ಮನೆಯ ನಿವಾಸಿ 20 ಹಾಗೂ 19 ವರ್ಷದ ಯುವಕರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

    ಈ ಮಧ್ಯೆ ಮೃತ ವೃದ್ಧ ಉಸಿರಾಟದ ಸಮಸ್ಯೆಗೆ ಓಳಗಾಗಿ ಆಸ್ಪತ್ರೆಗೆ ಹೋಗುವ ದಿನ ತನ್ನ ಏರಿಯಾದ ಜನರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಿದ್ದರು. ಹೀಗಾಗಿ ಏರಿಯಾದ 100ಕ್ಕೂ ಹೆಚ್ಚು ಮಂದಿ ವೃದ್ಧನ ಮನೆಗೆ ಬಂದು ಪಡಿತರ ಪಡೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಆದ್ದರಿಂದ ಪಡೆತರ ಪಡೆದ ಮಂದಿಯನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ.

    ಮತ್ತೊಂದೆಡೆ ಪಡಿತರ ಪಡೆದವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇರುವ ಕಾರಣ ಇಡೀ ಏರಿಯಾದಲ್ಲಿ ರ‌್ಯಾಂಡಮ್ ತಪಾಸಣೆ ಮಾಡೋದರ ಜೊತೆಗೆ ಅನುಮಾನಿತರ ಸ್ವಾಬ್ ಟೆಸ್ಟ್ ಮಾಡೋಕೆ ತೀರ್ಮಾನಿಸಲಾಗಿದೆ. ಸದ್ಯ ಕೊರೊನಾ ಕಂಟಕ ಚಿಕ್ಕಬಳ್ಳಾಪುರ ನಗರಕ್ಕೆ ಆವರಿಸಿದ್ದು, ನಗರವನ್ನ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

  • ಮೈಸೂರಿನಲ್ಲಿ ಒಬ್ಬನಿಂದ 11 ಮಂದಿಗೆ ಸೋಂಕು – ರಾಜ್ಯದಲ್ಲಿ ಒಂದೇ ದಿನ 38 ಮಂದಿಗೆ ಕೊರೊನಾ

    ಮೈಸೂರಿನಲ್ಲಿ ಒಬ್ಬನಿಂದ 11 ಮಂದಿಗೆ ಸೋಂಕು – ರಾಜ್ಯದಲ್ಲಿ ಒಂದೇ ದಿನ 38 ಮಂದಿಗೆ ಕೊರೊನಾ

    – ಬಳ್ಳಾರಿಯಲ್ಲಿ ಒಬ್ಬನಿಂದ 7 ಮಂದಿಗೆ ಕೊರೊನಾ

    ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವತ್ತು ಒಂದೇ ದಿನ 38 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 353ಕ್ಕೆ ಏರಿಕೆ ಕಂಡಿದೆ.

    ಬೆಳಗ್ಗೆ ಒಟ್ಟು 38 ಜನರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಮೈಸೂರಿನಲ್ಲೇ ಇಂದು 12 ಮಂದಿಗೆ ಕೊರೊನಾ ದೃಢವಾಗಿದೆ. ಇನ್ನೂ ಬಳ್ಳಾರಿಯಲ್ಲಿ ಒಬ್ಬ ಸೋಂಕಿತನಿಂದ ಏಳು ಮಂದಿಗೆ ಕೊರೊನಾ ಬಂದಿದೆ. ಬೆಂಗಳೂರಿನಲ್ಲಿ 9 ಮಂದಿಗೆ, ಮಂಡ್ಯದಲ್ಲಿ ಮೂವರಿಗೆ ಕೊರೊನಾ ದೃಢವಾಗಿದೆ. ಇಂದು ಐದು ಮಕ್ಕಳಲ್ಲಿಯೂ ಕೊರೊನಾ ಕಂಡು ಬಂದಿದೆ.

    ಕೊರೊನಾ ರೋಗಿಗಳು ವಿವರ:
    1. ರೋಗಿ ನಂಬರ್ 316 – 55 ವರ್ಷದ ಪುರುಷ, ಬೆಂಗಳೂರು ನಿವಾಸಿ, ಸಂಪರ್ಕ ಮಾಹಿತಿ ಪತ್ತೆಹಚ್ಚಲಾಗುತ್ತಿದೆ.
    2. ರೋಗಿ ನಂಬರ್ 317 – 11 ವರ್ಷದ ಬಾಲಕಿಯಾಗಿದ್ದು, ಬೆಂಗಳೂರು ನಿವಾಸಿ. ಸಂಪರ್ಕ ಮಾಹಿತಿ ಪತ್ತೆಹಚ್ಚಲಾಗುತ್ತಿದೆ.
    3. ರೋಗಿ ನಂಬರ್ 318 – 50 ವರ್ಷದ ಪುರುಷ, ನಂಜನಗೂಡು ನಿವಾಸಿ. ರೋಗಿ 52ರ ಸಂಪರ್ಕ
    4. ರೋಗಿ ನಂಬರ್ 319 – 33 ವರ್ಷದ ಪುರುಷ, ನಂಜನಗೂಡು ನಿವಾಸಿ. ರೋಗಿ 52ರ ಸಂಪರ್ಕ
    5. ರೋಗಿ ನಂಬರ್ 320 – 33 ವರ್ಷದ ಪುರುಷ, ನಂಜನಗೂಡು ನಿವಾಸಿ. ರೋಗಿ 52ರ ಸಂಪರ್ಕ
    6. ರೋಗಿ ನಂಬರ್ 321 – 41 ವರ್ಷದ ಮಹಿಳೆ, ಮೈಸೂರು ನಿವಾಸಿ. ರೋಗಿ 273ರ ಸಂಪರ್ಕ


    7. ರೋಗಿ ನಂಬರ್ 322 – 25 ವರ್ಷದ ಯುವಕ, ಮಂಡ್ಯದ ಮಳವಳ್ಳಿ ನಿವಾಸಿ. ರೋಗಿ 171ರ ಸಂಪರ್ಕ
    8. ರೋಗಿ ನಂಬರ್ 323 – 29 ವರ್ಷದ ಯುವಕ, ಮಂಡ್ಯದ ಮಳವಳ್ಳಿ ನಿವಾಸಿ. ರೋಗಿ 171ರ ಸಂಪರ್ಕ
    9. ರೋಗಿ ನಂಬರ್ 324 – 45 ವರ್ಷದ ಪುರುಷ, ಮಂಡ್ಯದ ಮಳವಳ್ಳಿ ನಿವಾಸಿ. ರೋಗಿ 171ರ ಸಂಪರ್ಕ
    10. ರೋಗಿ ನಂಬರ್ 325 – 39 ವರ್ಷದ ಪುರುಷ, ಮಾರ್ಚ್ 28 ರಂದು ದೆಹಲಿಯಿಂದ ಬಂದಿದ್ದರು
    11. ರೋಗಿ ನಂಬರ್ 326 – 6 ವರ್ಷದ ಬಾಲಕ, ಬೆಂಗಳೂರು ನಿವಾಸಿ. ರೋಗಿ 252ರ ಸಂಪರ್ಕ
    12. ರೋಗಿ ನಂಬರ್ 327 – 25 ವರ್ಷದ ಮಹಿಳೆ, ಬೆಂಗಳೂರು ನಿವಾಸಿ. ರೋಗಿ 253ರ ಸಂಪರ್ಕ
    13. ರೋಗಿ ನಂಬರ್ 328 – 18 ವರ್ಷದ ಯುವಕ, ಬೀದರ್ ನಿವಾಸಿ. ದೆಹಲಿಗೆ ಪ್ರಯಾಣ ಮಾಡಿದ್ದ ವ್ಯಕ್ತಿಯ ಜೊತೆ ಸಂಪರ್ಕ


    14. ರೋಗಿ ನಂಬರ್ 329 – 6 ವರ್ಷದ ಬಾಲಕ, ವಿಜಯಪುರ ನಿವಾಸಿ. ರೋಗಿ 221ರ ಸಂಪರ್ಕ
    15. ರೋಗಿ ನಂಬರ್ 330 – 28 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ 221ರ ಸಂಪರ್ಕ
    16. ರೋಗಿ ನಂಬರ್ 331 – 39 ವರ್ಷದ ಪುರುಷ, ಬಳ್ಳಾರಿಯ ಹೊಸಪೇಟೆ ನಿವಾಸಿ. ರೋಗಿ 89, 90, 91, 141ರ ಸಂಪರ್ಕ
    17. ರೋಗಿ ನಂಬರ್ 332 – 68 ವರ್ಷದ ವೃದ್ಧೆ, ಬಳ್ಳಾರಿಯ ಹೊಸಪೇಟೆ ನಿವಾಸಿ. ರೋಗಿ 141ರ ಸಂಪರ್ಕ
    18. ರೋಗಿ ನಂಬರ್ 333 – 21 ವರ್ಷದ ಯುವಕ, ಬಳ್ಳಾರಿಯ ಹೊಸಪೇಟೆ ನಿವಾಸಿ. ರೋಗಿ 141ರ ಸಂಪರ್ಕ
    19. ರೋಗಿ ನಂಬರ್ 334 – 48 ವರ್ಷದ ಪುರುಷ, ಬಳ್ಳಾರಿಯ ಹೊಸಪೇಟೆ ನಿವಾಸಿ. ರೋಗಿ 141ರ ಸಂಪರ್ಕ
    20. ರೋಗಿ ನಂಬರ್ 335 – 10 ವರ್ಷದ ಬಾಲಕಿ, ಬಳ್ಳಾರಿಯ ಹೊಸಪೇಟೆ ನಿವಾಸಿ. ರೋಗಿ 141ರ ಸಂಪರ್ಕ
    21. ರೋಗಿ ನಂಬರ್ 336 – 50 ವರ್ಷದ ಪುರುಷ, ಬಳ್ಳಾರಿಯ ಹೊಸಪೇಟೆ ನಿವಾಸಿ. ರೋಗಿ 141ರ ಸಂಪರ್ಕ
    22. ರೋಗಿ ನಂಬರ್ 337 – 24 ವರ್ಷದ ಯುವಕ, ಬಳ್ಳಾರಿಯ ಹೊಸಪೇಟೆ ನಿವಾಸಿ, ರೋಗಿ 141ರ ಸಂಪರ್ಕ


    23. ರೋಗಿ ನಂಬರ್ 338 – 36 ವರ್ಷದ ಪುರುಷ, ಚಿಕ್ಕಬಳ್ಳಾಪುರ ನಿವಾಸಿ. ರೋಗಿ 250ರ ಸಂಪರ್ಕ
    24. ರೋಗಿ ನಂಬರ್ 339 – 20 ವರ್ಷದ ಯುವಕ, ಚಿಕ್ಕಬಳ್ಳಾಪುರ ನಿವಾಸಿ. ರೋಗಿ 250ರ ಸಂಪರ್ಕ
    25. ರೋಗಿ ನಂಬರ್ 340 – 9 ವರ್ಷದ ಬಾಲಕ, ಚಿಕ್ಕಬಳ್ಳಾಪುರ ನಿವಾಸಿ. ರೋಗಿ 250ರ ಸಂಪರ್ಕ
    26. ರೋಗಿ ನಂಬರ್ 341 – 22 ವರ್ಷದ ಯುವಕ, ಮೈಸೂರಿನ ನಂಜನಗೂಡು ನಿವಾಸಿ, ರೋಗಿ 52ರ ಸಂಪರ್ಕ
    27. ರೋಗಿ ನಂಬರ್ 342 – 38 ವರ್ಷದ ಪುರುಷ, ಮೈಸೂರಿನ ನಂಜನಗೂಡು ನಿವಾಸಿ, ರೋಗಿ 52ರ ಸಂಪರ್ಕ
    28. ರೋಗಿ ನಂಬರ್ 343 – 38 ವರ್ಷದ ಪುರುಷ, ಮೈಸೂರು ನಿವಾಸಿ, ರೋಗಿ 52ರ ಸಂಪರ್ಕ
    29. ರೋಗಿ ನಂಬರ್ 344 – 26 ವರ್ಷದ ಯುವಕ, ಮೈಸೂರಿನ ನಂಜನಗೂಡು ನಿವಾಸಿ, ರೋಗಿ 52ರ ಸಂಪರ್ಕ
    30. ರೋಗಿ ನಂಬರ್ 345 – 28 ವರ್ಷದ ಯುವಕ, ಮೈಸೂರಿನ ನಂಜನಗೂಡು ನಿವಾಸಿ, ರೋಗಿ 52ರ ಸಂಪರ್ಕ
    31. ರೋಗಿ ನಂಬರ್ 346 – 22 ವರ್ಷದ ಯುವಕ, ಮೈಸೂರಿನ ನಂಜನಗೂಡು ನಿವಾಸಿ, ರೋಗಿ 52ರ ಸಂಪರ್ಕ

    32. ರೋಗಿ ನಂಬರ್ 347 – 29 ವರ್ಷದ ಯುವಕ, ಮೈಸೂರಿನ ನಂಜನಗೂಡು ನಿವಾಸಿ, ರೋಗಿ 52ರ ಸಂಪರ್ಕ
    33. ರೋಗಿ ನಂಬರ್ 348 – 26 ವರ್ಷದ ಯುವಕ, ಮೈಸೂರಿನ ನಂಜನಗೂಡು ನಿವಾಸಿ, ರೋಗಿ 52ರ ಸಂಪರ್ಕ
    34. ರೋಗಿ ನಂಬರ್ 349 – 64 ವರ್ಷದ ವೃದ್ಧೆ, ಬೆಂಗಳೂರು ನಿವಾಸಿ, ತೀವ್ರ ಉಸಿರಾಟದಿಂದ ಸೋಂಕು
    35. ರೋಗಿ ನಂಬರ್ 350 – 32 ವರ್ಷದ ಪುರುಷ, ಬೆಂಗಳೂರು ನಿವಾಸಿ, ಸಂಪರ್ಕ ಮಾಹಿತಿ ಪತ್ತೆಹಚ್ಚಲಾಗುತ್ತಿದೆ.
    36. ರೋಗಿ ನಂಬರ್ 351 – 23 ವರ್ಷದ ಯುವಕ, ಬೆಂಗಳೂರು ನಿವಾಸಿ, ಸಂಪರ್ಕ ಮಾಹಿತಿ ಪತ್ತೆಹಚ್ಚಲಾಗುತ್ತಿದೆ.
    37. ರೋಗಿ ನಂಬರ್ 352 – 28 ವರ್ಷದ ಯುವಕ, ಬೆಂಗಳೂರು ನಿವಾಸಿ, ಸಂಪರ್ಕ ಮಾಹಿತಿ ಪತ್ತೆಹಚ್ಚಲಾಗುತ್ತಿದೆ.
    38. ರೋಗಿ ನಂಬರ್ 353 – 21 ವರ್ಷದ ಯುವಕ, ಬೆಂಗಳೂರು ನಿವಾಸಿ, ಸಂಪರ್ಕ ಮಾಹಿತಿ ಪತ್ತೆಹಚ್ಚಲಾಗುತ್ತಿದೆ.

  • ಇಂದು ಒಂದೇ ದಿನದಲ್ಲಿ 941 ಮಂದಿಗೆ ಸೋಂಕು, 37 ಜನರ ಸಾವು

    ಇಂದು ಒಂದೇ ದಿನದಲ್ಲಿ 941 ಮಂದಿಗೆ ಸೋಂಕು, 37 ಜನರ ಸಾವು

    – ಧಾರಾವಿಯಲ್ಲಿ 60 ವೈರಸ್ ಪೀಡಿತರು

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ತೀವ್ರತೆ ಕ್ಷಣ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್‍ನಲ್ಲಿ ಸೋಂಕಿನ ತೀವ್ರತೆ ಅಧಿಕವಾಗಿದೆ.

    ದೇಶದಲ್ಲಿ ಗುರುವಾರ ಒಂದೇ ದಿನದಲ್ಲಿ 941 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 13 ಸಾವಿರ ದಾಟಿದೆ. ಇಂದು 37 ಮಂದಿ ಸಾವನ್ನಪ್ಪಿದ್ದು, ಕೊರೊನಾಗೆ ಬಲಿಯಾದವರ ಸಂಖ್ಯೆ 430 ದಾಟಿದೆ. ಮುಂಬೈನ ಧಾರಾವಿಯಲ್ಲಿ ಸೋಂಕು ಹರಡುತ್ತಿರುವ ವೇಗ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇಂದು 11 ಮಂದಿಗೆ ಇಲ್ಲಿ ವೈರಸ್ ಹಬ್ಬಿದ್ದು, ಸೋಂಕಿತರ ಸಂಖ್ಯೆ 60 ದಾಟಿದೆ. 7 ಮಂದಿ ಕೇವಲ ಈ ಕೊಳಗೇರಿಯಲ್ಲಿಯೇ ಸಾವನ್ನಪ್ಪಿದ್ದಾರೆ.

    ಕೊರೊನಾದ ಮತ್ತೊಂದು ಡೇಂಜರ್ ಹಾಟ್‍ಸ್ಪಾಟ್ ಎಂದ್ರೆ ಮಧ್ಯಪ್ರದೇಶದ ಇಂದೋರ್. ಸೋಂಕು ತಗುಲಿದ 980 ಮಂದಿಯಲ್ಲಿ 550ಕ್ಕೂ ಹೆಚ್ಚು ಮಂದಿ ಇಂದೋರ್‌ಗೆ ಸೇರಿದವರಾಗಿದ್ದಾರೆ. ಇಲ್ಲಿ ಕೇವಲ ಬುಧವಾರ ಒಂದೇ ದಿನ 117 ಮಂದಿಗೆ ಸೋಂಕು ತಗುಲಿದೆ. ಮೃತ 53 ಮಂದಿ ಪೈಕಿ 37 ಮಂದಿ ಇದೇ ನಗರಕ್ಕೆ ಸೇರಿದವರಾಗಿದ್ದಾರೆ.

    ದೇಶದಲ್ಲಿ ಕೊರೊನಾ ಸಾವುಗಳು ಶೇಕಡಾ 3ರಷ್ಟಿದೆ. ಆದರೆ ಇಂದೋರ್ ನಲ್ಲಿ ಮಾತ್ರ ಡಬಲ್ ಇರುವುದು ಆತಂಕ ಮೂಡಿಸಿದೆ. ಕೇರಳದಲ್ಲಿ ಮಾತ್ರ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಕುಸಿದಿದೆ. ಚೀನಾದಿಂದ ಭಾರತಕ್ಕೆ 6.5 ಲಕ್ಷ ಮೆಡಿಕಲ್ ಕಿಟ್, ವೈದ್ಯಕೀಯ ಸಾಮಾಗ್ರಿಯನ್ನು ಹೊತ್ತ ವಿಮಾನ ಬೀಜಿಂಗ್‍ನಿಂದ ದೆಹಲಿಗೆ ಹೊರಟಿದೆ. ಆದರೆ ಕಳೆದ ವಾರ ಭಾರತಕ್ಕೆ ಚೀನಾ ಕಳಿಸಿದ್ದ 1.70 ಲಕ್ಷ ಪಿಪಿಇ ಕಿಟ್‍ಗಳ ಪೈಕಿ ಶೇಕಡಾ 30ರಷ್ಟು ಕೆಲಸವೇ ಮಾಡುತ್ತಿಲ್ಲ. ಕಳಪೆಯಾಗಿವೆ ಎನ್ನಲಾಗಿದೆ. ಈ ಮಧ್ಯೆ, ಏಪ್ರಿಲ್ 20ರಿಂದ ಆನ್‍ಲೈನ್ ಶಾಪಿಂಗ್‍ಗೆ ಅವಕಾಶ ನೀಡಲಾಗಿದೆ.

    ಜಗತ್ತಿನಲ್ಲಿ ಕೊರೊನಾ:
    ವಿಶ್ವಾದ್ಯಂತ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 21 ಲಕ್ಷ ದಾಟಿದೆ. 1.36 ಲಕ್ಷ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಕೊರೊನಾಗೆ ಬುಧವಾರ ಒಂದೇ ದಿನ 2,500ಕ್ಕೂ ಹೆಚ್ಚು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 29 ಸಾವಿರ ದಾಟಿದೆ. ಸ್ಪೇನ್‍ನಲ್ಲಿ ಮೃತರ ಸಂಖ್ಯೆ 20 ಸಾವಿರ ಸಮೀಪಿಸಿದೆ. ಇಟಲಿಯಲ್ಲಿ 22 ಸಾವಿರ ಮಂದಿ, ಫ್ರಾನ್ಸ್ ನಲ್ಲಿ 17 ಸಾವಿರ ಮಂದಿ, ಬ್ರಿಟನ್‍ನಲ್ಲಿ 13 ಸಾವಿರ ಮಂದಿ ಬಲಿಯಾಗಿದ್ದಾರೆ.

    ಇಟಲಿಯಲ್ಲಿ ಸಾವುಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಚೀನಾದಲ್ಲಿ ಕೊರೊನಾಗಾಗಿಯೇ ನಿರ್ಮಿಸಲಾಗಿದ್ದ ಸಾವಿರ ಹಾಸಿಗೆಗಳ ಆಸ್ಪತ್ರೆ ಮುಚ್ಚಲಾಗಿದೆ. ಕೊರೊನಾದಿಂದ ಅತೀ ಹಿರಿಯ ಅಜ್ಜಿಯೊಬ್ಬರು ಚೇತರಿಸಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ 106 ವರ್ಷದ ವೃದ್ಧೆ ಬರ್ಮಿಂಗ್ ಹ್ಯಾಮ್ ಆಸ್ಪತ್ರೆಯಿಂದ 3 ವಾರದ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ.

  • ರಾಜ್ಯಕ್ಕೆ ನಂಜನಗೂಡು, ತಬ್ಲಿಘಿ ಕಂಟಕ- ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು?

    ರಾಜ್ಯಕ್ಕೆ ನಂಜನಗೂಡು, ತಬ್ಲಿಘಿ ಕಂಟಕ- ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು?

    ಬೆಂಗಳೂರು: ದೆಹಲಿ ಹೊರವಲಯದ ನಿಜಾಮುದ್ದೀನ್‍ನ ಮರ್ಕಜ್ ಮಸೀದಿಯಲ್ಲಿ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ನಡೆದ ಜಮಾತ್ ಕಾರ್ಯಕ್ರಮದಿಂದ ಕೇವಲ ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶಕ್ಕೆ ಅಷ್ಟೇ ಅಲ್ಲ, ಕರ್ನಾಟಕಕ್ಕೆ ಗಂಡಾಂತರ ಎದುರಾಗಿದೆ.

    ದಿನ ಕಳೆದಂತೆ ರಾಜ್ಯದಲ್ಲಿಯೂ ತಬ್ಲಿಘಿಗಳಿಂದ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ರಾಜ್ಯದಿಂದ 1,300ಕ್ಕೂ ಹೆಚ್ಚು ಮಂದಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದರು. ಇದರಲ್ಲಿ 800 ಮಂದಿ ಪತ್ತೆ ಆಗಿದ್ದಾರೆ. ಉಳಿದ 580ಕ್ಕೂ ಹೆಚ್ಚು ಮಂದಿ ಪತ್ತೆಯಾಗಿಲ್ಲ. ಪತ್ತೆ ಆದವರಿಂದ, ಪತ್ತೆ ಆಗದವರಿಂದಲೂ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ತಬ್ಲಿಘಿಗಳ ಸಂಪರ್ಕದಲ್ಲಿದ್ದವರಿಗೂ ಸೋಂಕು ಹರಡುತ್ತಿದೆ.

    ಒಟ್ಟು 92 ಮಂದಿ ತಬ್ಲಿಘಿ ಮತ್ತು ಅವರ ಸಂಪರ್ಕದಲ್ಲಿದ್ದವರಿಗೆ ಸೋಂಕು ಹಬ್ಬಿದ್ದು, ಇದು ಇನ್ನೂ ಹೆಚ್ಚಾಗಬಹುದು ಎನ್ನುವ ಆತಂಕ ಎದುರಾಗಿದೆ. ರಂಜಾನ್ ಆಚರಿಸಲು ಮಸೀದಿಗೆ ಹೋಗಬೇಡಿ, ಮನೆಯಲ್ಲಿ ಆಚರಿಸಿ. ಸರ್ಕಾರದ ಆದೇಶಗಳನ್ನು ಪಾಲಿಸಿ ಎಂದು ವಕ್ಫ್ ಬೋಡ್ ಕರೆ ನೀಡಿದೆ. ತಬ್ಲಿಘಿಗಳೇ ಬೇರೆ, ಮುಸ್ಲಿಮರೇ ಬೇರೆ. ಜಮಾತ್‍ಗೂ ವಕ್ಫ್ ಬೋರ್ಡಿಗೂ ಯಾವುದೇ ಸಂಬಂಧ ಇಲ್ಲ ಎಂದಿದೆ.

    ರಾಜ್ಯಕ್ಕೆ ತಬ್ಲಿಘಿ ಕಂಟಕ..!
    ಜಿಲ್ಲೆ                ಒಟ್ಟು ಸೋಂಕಿತರು       ತಬ್ಲಿಘಿ ಸೋಂಕಿತರು
    > ಬೆಳಗಾವಿ              36                                 36
    > ಬೀದರ್                13                                  13
    > ಕಲಬುರಗಿ             20                                13
    > ಮೈಸೂರು            61                                 08
    > ಮಂಡ್ಯ                08                                  07
    > ತುಮಕೂರು          02                                 02
    > ಬಾಗಲಕೋಟೆ       09                                 02
    > ಮಂಗಳೂರು         11                                   02
    > ಬಳ್ಳಾರಿ                06                                  01
    > ಚಿಕ್ಕಬಳ್ಳಾಪುರ       13                                  01
    > ಬೆಂಗಳೂರು          76                                     07

  • ದೇಶಕ್ಕೋಸ್ಕರ ಒಪ್ಪೊತ್ತು ಉಪವಾಸ- ಉಡುಪಿ ಪರ್ಯಾಯ ಅದಮಾರುಶ್ರೀ ಕರೆ

    ದೇಶಕ್ಕೋಸ್ಕರ ಒಪ್ಪೊತ್ತು ಉಪವಾಸ- ಉಡುಪಿ ಪರ್ಯಾಯ ಅದಮಾರುಶ್ರೀ ಕರೆ

    ಉಡುಪಿ: ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಜಾಸ್ತಿಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದಲ್ಲಿ ಆಹಾರ ವಸ್ತುಗಳ ಲಭ್ಯತೆ ಕಷ್ಟವಾಗಲಿದೆ ಎಂದು ಉಡುಪಿ ಅದಮಾರು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

    ದೇಶಕ್ಕೋಸ್ಕರ, ಭಾರತದಲ್ಲಿ ಜೀವಿಸುವ ಮನುಷ್ಯರಿಗೋಸ್ಕರ ನಾವು ತ್ಯಾಗ ಮಾಡಲು ಇದು ಸೂಕ್ತ ಸಮಯ. ಹಾಗಾಗಿ ನಾವು ವಾರದಲ್ಲಿ ಮೂರು ಹೊತ್ತು ಉಪವಾಸ ಮಾಡೋಣ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಸ್ವಾಮೀಜಿ ಕರೆ ನೀಡಿದ್ದಾರೆ. ವಾರಕ್ಕೆ ಮೂರು ಹೊತ್ತು ಆಹಾರವನ್ನು ತ್ಯಾಗ ಮಾಡಿದರೆ ದೇಶದಲ್ಲಿ ಆಹಾರ ವಸ್ತುಗಳನ್ನು ಉಳಿಸಿದಂತಾಗುತ್ತದೆ ಎಂದಿದ್ದಾರೆ.

    ಸಾಧ್ಯವಾದರೆ ವಾರಕ್ಕೊಂದು ಉಪವಾಸ ಮಾಡಲೂಬಹುದು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವು ಕಿಂಚಿತ್ತು ತ್ಯಾಗ ಮಾಡಿದರೆ ದೇಶದ ಭವಿಷ್ಯಕ್ಕೆ ಒಳಿತು ಎಂದು ಪರ್ಯಾಯ ಈಶಪ್ರಿಯ ತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ.

    ಉಪವಾಸದ ಸಂಕಲ್ಪ ಮಾಡಿದರೆ ಸರ್ಕಾರದ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ. ಮುಂದಿನ ಕಷ್ಟದ ದಿನಗಳಿಗೆ ಈಗಿನಿಂದಲೇ ಸಿದ್ಧತೆ ಮಾಡಿದಂತಾಗುತ್ತದೆ ಎಂಬುದು ಪರ್ಯಾಯ ಸ್ವಾಮೀಜಿಗಳ ಅಭಿಪ್ರಾಯವಾಗಿದೆ.

  • ಗುಣಮುಖನಾಗಿದ್ದ ವ್ಯಕ್ತಿಗೆ ಮತ್ತೆ ಜ್ವರ – ವರದಿಯಲ್ಲಿ ಕೊರೊನಾ ನೆಗೆಟಿವ್

    ಗುಣಮುಖನಾಗಿದ್ದ ವ್ಯಕ್ತಿಗೆ ಮತ್ತೆ ಜ್ವರ – ವರದಿಯಲ್ಲಿ ಕೊರೊನಾ ನೆಗೆಟಿವ್

    ಮಡಿಕೇರಿ: ಕೊರೊನಾ ಸೋಂಕಿನಿಂದ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ವ್ಯಕ್ತಿಗೆ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಬುಧವಾರ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಕೊರೊನಾ ನೆಗೆಟಿವ್ ಎಂದು ವರದಿ ಬಂದಿದ್ದು, ಕೊಡಗಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.

    https://twitter.com/DEOKodagu/status/1250762896901988352

    ಕೊಡಗು ಜಿಲ್ಲೆಗೆ ದುಬೈನಿಂದ ಹಿಂದಿರುಗಿದ್ದ 35 ವರ್ಷದ ವ್ಯಕ್ತಿಗೆ ಮಾರ್ಚ್ 19ರಂದು ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಬಳಿಕ ಜಿಲ್ಲಾಸ್ಪತ್ರೆಯ ಕೋವಿಡ್-19 ಕೇರ್ ಸೆಂಟರ್ ಗೆ ದಾಖಲು ಮಾಡಿ 22 ದಿನಗಳ ಕಾಲ ಐಸೋಲೇಷನ್ ವಾರ್ಡಿನಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ವ್ಯಕ್ತಿ ಗುಣಮುಖನಾಗಿದ್ದರಿಂದ ಏಪ್ರಿಲ್ 11ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಬುಧವಾರ ಈ ವ್ಯಕ್ತಿಗೆ ಮತ್ತೆ ಜ್ವರ ಬಂದಿದ್ದು ಆತಂಕಕ್ಕೆ ಕಾರಣವಾಗಿತ್ತು.

    ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ವ್ಯಕ್ತಿಯು ಸ್ವಯಂಪ್ರೇರಿತವಾಗಿ ಕೋವಿಡ್-19 ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಈ ಹಿನ್ನೆಲೆ ಆಸ್ಪತ್ರೆಯ ವೈದ್ಯರು ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಿದ್ದು, ವ್ಯಕ್ತಿಯ ಗಂಟಲ ದ್ರವ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಿ ಮೈಸೂರಿನ ಲ್ಯಾಬ್ ಕಳುಹಿಸಿದ್ದರು. ಇಂದು ಲ್ಯಾಬ್ ವರದಿ ಬಂದಿದ್ದು, ವ್ಯಕ್ತಿ ದೇಹದಲ್ಲಿ ಕೊರೊನಾ ವೈರಸ್‍ನ ಯಾವುದೇ ಅಂಶ ಇಲ್ಲ, ಇದು ಕೊರೊನಾ ನೆಗೆಟಿವ್ ಪ್ರಕರಣ ಎಂದು ವರದಿಯಿಂದ ತಿಳಿದುಬಂದಿದೆ. ಆದರೂ ಮುನ್ನೆಚ್ಚರಿಕ ಕ್ರಮವಾಗಿ ಕೋವಿಡ್-19 ಆಸ್ಪತ್ರೆಯಲ್ಲೇ ವ್ಯಕ್ತಿಯನ್ನು ಇರಿಸಿಕೊಂಡು, ಅವರ ಮೇಲೆ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  • ಇರೋ ಆಹಾರ ಹಂಚಿಕೆಯಾಗದಿರುವುದು ಬೇಸರ ತಂದಿದೆ: ಕೇಂದ್ರದ ವಿರುದ್ಧ ರಾಹುಲ್ ಗರಂ

    ಇರೋ ಆಹಾರ ಹಂಚಿಕೆಯಾಗದಿರುವುದು ಬೇಸರ ತಂದಿದೆ: ಕೇಂದ್ರದ ವಿರುದ್ಧ ರಾಹುಲ್ ಗರಂ

    – ಕೊರೊನಾ ವಿರುದ್ಧ ಈಗಲೇ ಜಯ ಘೋಷಿಸುವುದು ಮೂರ್ಖತನ
    – ಲಾಕ್‍ಡೌನ್ ಒಂದೇ ಅಂತಿಮ ಪರಿಹಾರದ ಮಾರ್ಗವಲ್ಲ
    – ರಾಜ್ಯ ಸರ್ಕಾರಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ
    – ಸ್ವತಂತ್ರ ನಿರ್ಧಾರಕ್ಕೆ ಅವಕಾಶ ಕೊಡಿ

    ನವದೆಹಲಿ: ಕೊರೊನಾ ವೈರಸ್‍ನಿಂದ ದೇಶದಲ್ಲಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಯಲು ಕೇವಲ ಲಾಕ್‍ಡೌನ್ ಒಂದೇ ಅಂತಿಮ ಪರಿಹಾರದ ಮಾರ್ಗವಲ್ಲ. ಲಾಕ್‍ಡೌನ್ ಜೊತೆ ಜೊತೆಗೆ ದೇಶದಲ್ಲಿ ಪರೀಕ್ಷೆಗಳು ಹೆಚ್ಚಾಗಬೇಕು ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

    ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು, ಲಾಕ್‍ಡೌನ್ ಎಂಬುದು ವಿರಾಮದ ಬಟನ್ ಇದ್ದಂತೆ. ಸಮಸ್ಯೆಯನ್ನು ತಾತ್ಕಲಿಕವಾಗಿ ಮಾತ್ರ ಮುಂದೂಡಿಕೆ ಮಾಡಿದೆ. ಲಾಕ್‍ಡೌನ್ ಮುಗಿಯುವ ವೇಳೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

    ಕೊರೊನಾ ವೈರಸ್ ದೇಶದ ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಎರಡು ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಿದೆ. ಆರೋಗ್ಯದ ಜೊತೆಗೆ ಆರ್ಥಿಕತೆ ಮೇಲೆ ಸರ್ಕಾರ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

    ಕೊರೊನಾ ವಿಚಾರದಲ್ಲಿ ಲಾಕ್‍ಡೌನ್ ಒಂದೇ ಮುಖ್ಯವಲ್ಲ. ಇದರೊಂದಿಗೆ ಕೊರೊನಾ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ವಲಯಗಳಲ್ಲಿ ಕ್ಷೀಪ್ರವಾಗಿ ಟೆಸ್ಟಿಂಗ್‍ಗಳು ನಡೆಯಬೇಕು. ವೈರಸ್ ಹರಡುವು ವೇಗದಲ್ಲೇ ನಮ್ಮ ಪರೀಕ್ಷೆಗಳು ನಡೆದಾಗ ಮಾತ್ರ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಅಂದಾಜು 350 ಟೆಸ್ಟ್ ಗಳು ನಡೆದಿದೆ. ಆದರೆ ಕೊರೊನಾ ವೈರಸ್ ಪ್ರಭಾವ ಮುಂದೆ ಇದು ಅತಿ ಕಡಿಮೆ ಟೆಸ್ಟ್ ಗಳಾಗಿದ್ದು, ಸರ್ಕಾರ ಟೆಸ್ಟಿಂಗ್ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.

    ಅನೇಕ ವಿದೇಶಗಳು ರ್ಯಾಪಿಂಡ್ ಟೆಸ್ಟಿಂಗ್ ಕಿಟ್‍ಗಳಿಗೆ ಬೇಡಿಕೆ ಇಟ್ಟಿದ್ದು ಭಾರತಕ್ಕೂ ಹೆಚ್ಚು ಆಮದಾಗಿರಲು ಕಾರಣ ಇದನ್ನು ಹೊರತು ಬದಲಿ ಕ್ರಮಗಳನ್ನು ಸರ್ಕಾರ ಕಂಡುಕೊಳ್ಳಬೇಕು. ಕೊರೊನಾ ವಿರುದ್ಧದ ಹೋರಾಟ ಈಗ ಆರಂಭವಾಗಿದೆ. ಈಗಲೇ ನಾವು ಜಯ ಘೋಷಿಸುವುದು ತಪ್ಪು. ಇದೊಂದು ನಿರಂತರ ಹೋರಾಟವಾಗಿದ್ದು ಜನರು ಒಗ್ಗಾಟಾಗಿ ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

    ವಲಸೆ ಕಾರ್ಮಿಕರ ವಿಚಾರದಲ್ಲಿ ಸರ್ಕಾರ ಹೆಚ್ಚು ಗಮನ ಹರಿಬೇಕು. ಇಲ್ಲದಿದ್ದರೇ ಇದು ದೊಡ್ಡ ಸಮಸ್ಯೆಯಾಗಲಿದೆ. ಸೋಂಕು ಹರಡುವ ಸಾಧ್ಯತೆ ಕೂಡ ಇರಲಿದೆ. ವಲಸೆ ಕಾರ್ಮಿಕರಿಗೆ ರೇಷನ್ ಕಾರ್ಡ್ ಇದ್ದವರು, ಇಲ್ಲದವರಿಗೆ ಅಗತ್ಯ ನೆರವು ನೀಡಬೇಕು. ಹತ್ತು ಕೆಜಿ ಅಕ್ಕಿ ಅಥವಾ ಗೋದಿ, ಒಂದು ಕೆಜಿ ಧಾನ್ಯ ಹಾಗೂ ಸಕ್ಕರೆ ನೀಡಬೇಕು. ಅವರ ಆರೋಗ್ಯ ತಪಾಸಣೆ ನಡೆಸಬೇಕು. ಕಾಂಗ್ರೆಸ್ ನ್ಯಾಯ್ ಪ್ರಾಣಳಿಕೆಯಂತೆ ನಿರುದ್ಯೋಗಿಗಳಿಗೆ ನೇರವಾಗಿ ಖಾತೆಗೆ ಹಣ ಸಂದಾಯ ಆಗಬೇಕು. ದೇಶದ ಗೋದಾಮ್‍ಗಳಲ್ಲಿ ಸಾಕಷ್ಟು ಆಹಾರ ಉತ್ಪನ್ನಗಳಿದೆ. ಅದನ್ನು ಬಡವರಿಗೆ ಹಂಚಿ ಹೊಸ ಆಹಾರ ಉತ್ಪನ್ನ ಗೋದಾಮುಗಳಲ್ಲಿ ಸಂಗ್ರಹಣೆ ಮಾಡಬೇಕು. ಇರುವ ಆಹಾರ ಹಂಚಿಕೆ ಮಾಡದಿರುವುದು ಬೇಸರ ತಂದಿದೆ ಎಂದರು.

    ಕೊರೊನಾ ನಿಯಂತ್ರಣ ವಿಚಾರದಲ್ಲಿ ರಾಜ್ಯಗಳನ್ನು ಆರ್ಥಿಕವಾಗಿ ಸದೃಢ ಮಾಡಬೇಕಿದೆ. ಕೇಂದ್ರವೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ರಾಜ್ಯ ಸರ್ಕಾರಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಬೇಕು. ಜಿಎಸ್‍ಟಿ ಹಣ ಸೇರಿದಂತೆ ಅಗತ್ಯ ಹಣಕಾಸು ಸೌಲಭ್ಯಗಳನ್ನು ರಾಜ್ಯಗಳಿಗೆ ನೀಡಿ ಶಕ್ತಿ ಶಾಲಿ ಮಾಡಬೇಕು. ಕೇಂದ್ರದ ಹಣಕಾಸು ಹಾಗೂ ಆರೋಗ್ಯ ಇಲಾಖೆಯ ಮಹತ್ವದ ವಿಚಾರಗಳನ್ನು ಕೇಂದ್ರ ಸರ್ಕಾರ ನಿಭಾಯಿಸಬೇಕು. ಲಾಕ್‍ಡೌನ್ ವಿಸ್ತರಿಸುವ ಮತ್ತು ರಾಜ್ಯದೊಳಗೆ ಕೊರೊನಾ ನಿಯಂತ್ರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಬೇಕು. ಅಧಿಕಾರ ಕೇಂದ್ರೀಕರಣದ ಬದಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಅಧಿಕಾರಿ ವಿಕೇಂದ್ರಿಕರಣ ಮಾಡಬೇಕು ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಜನರು ಆತಂಕ ಪಡುವ ಅಗತ್ಯ ಇಲ್ಲ. ಮನೆಯಲ್ಲಿ ಉಳಿದುಕೊಂಡಿದ್ದೇವೆ ಎಂದು ಭಯ ಪಡುವುದು ಬೇಡ. ನಿರುದ್ಯೋಗ ಸಮಸ್ಯೆ ಬಗ್ಗೆ ಭೀತಿಯಾವುವ ಅವಶ್ಯಕತೆ ಇಲ್ಲ. ಭಾರತ ಈ ಸಮಸ್ಯೆಯನ್ನು ಎದುರಿಸಲಿದೆ. ಭಯದ ಬದಲು ಜನರು ಆತ್ಮ ವಿಶ್ವಾಸ ದಲ್ಲಿರಬೇಕು. ಎಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಟ ನಡೆಸಬೇಕು. ವಿಪಕ್ಷವಾಗಿ ಕಾಂಗ್ರೆಸ್ ಕೈ ಜೋಡಿಸಿದ್ದೇವೆ. ಸರ್ಕಾರಕ್ಕೆ ನಮ್ಮ ಸಲಹೆಗಳನ್ನು ನೀಡುತ್ತೇವೆ. ಪರಿಗಣಿಸುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ರಾಹುಲ್ ಗಾಂಧಿ ಹೇಳಿದರು.

  • ಯಾವ ಜಿಲ್ಲೆಯಲ್ಲಿ ಎಷ್ಟು ಜನ ಸೋಂಕಿತರು? ಇಲ್ಲಿದೆ ಮಾಹಿತಿ

    ಯಾವ ಜಿಲ್ಲೆಯಲ್ಲಿ ಎಷ್ಟು ಜನ ಸೋಂಕಿತರು? ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಕೊರೊನಾ ಸೋಂಕಿತ 6 ಜನ ರೋಗಿಗಳು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ್ಕೆ ಇಂದು ಕರಾಳ ದಿನವಾಗಿ ಪರಿಣಮಿಸಿದೆ. ಏಕೆಂದರೆ ಬುಧವಾರ ಒಂದೇ ದಿನದಲ್ಲಿ ಇಬ್ಬರು ಕೊರೊನಾದಿಂದ ಮೃತಪಟ್ಟಿದ್ದು ದೃಢಪಟ್ಟಿದೆ. ಜೊತೆಗೆ 19 ಜನರಿಗೆ ಸೋಂಕು ತಗುಲಿದೆ.

    ಹೆಮ್ಮಾರಿ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 80 ವರ್ಷದ ವೃದ್ಧೆ ಹಾಗೂ ಚಿಕ್ಕಬಳ್ಳಾಪುರ ನಿವಾಸಿ 65 ವರ್ಷದ ರೋಗಿ-250 ಏಪ್ರಿಲ್ 13ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಅವರು ಕೊರೊನಾ ವೈರಸ್‍ನಿಂದಲೇ ಮೃತಪಟ್ಟಿದ್ದಾರೆ ಎನ್ನುವುದು ಇಂದು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಹಾಟ್‍ಸ್ಪಾಟ್ ಜಿಲ್ಲೆಗಳ ಪಟ್ಟಿ:
    * ಬೆಂಗಳೂರು ನಗರ – 71 ಜನರಿಗೆ ಸೋಂಕು (ಗುಣಮುಖ- 35, ಸಕ್ರಿಯ- 34, ಸಾವು- 02)
    * ಮೈಸೂರು – 58 ಜನರಿಗೆ ಸೋಂಕು (ಗುಣಮುಖ- 12, ಸಕ್ರಿಯ- 46)
    * ಬೆಳಗಾವಿ – 19 ಜನರಿಗೆ ಸೋಂಕು (ಸಕ್ರಿಯ- 18, ಸಾವು- 01)

    ಹಾಟ್‍ಸ್ಪಾಟ್ ಜಿಲ್ಲೆ ವಿತ್ ಕ್ಲಸ್ಟರ್:
    * ದಕ್ಷಿಣ ಕನ್ನಡ – 11 ಮಂದಿಗೆ ಕೊರೊನಾ (ಗುಣಮುಖ- 08, ಸಕ್ರಿಯ- 03)
    * ಬೀದರ್ – 13 ಮಂದಿಗೆ ಕೊರೊನಾ (ಸಕ್ರಿಯ- 13)
    * ಕಲಬುರಗಿ – 17 ಮಂದಿಗೆ ಕೊರೊನಾ (ಗುಣಮುಖ- 02, ಸಕ್ರಿಯ- 12 ಸಾವು- 03)
    * ಬಾಗಲಕೋಟೆ – 14 ಮಂದಿಗೆ ಕೊರೊನಾ (ಸಕ್ರಿಯ- 13, ಸಾವು- 01)
    * ಧಾರವಾಡ – 6 ಮಂದಿಗೆ ಕೊರೊನಾ (ಗುಣಮುಖ-01, ಸಕ್ರಿಯ- 05)

    ನಾನ್ ಹಾಟ್‍ಸ್ಪಾಟ್‍ಗಳು:
    * ಬಳ್ಳಾರಿ – 6 ಜನರಿಗೆ ಸೋಂಕು (ಸಕ್ರಿಯ- 06)
    * ಮಂಡ್ಯ – 8 ಜನರಿಗೆ ಸೋಂಕು (ಸಕ್ರಿಯ- 08)
    * ಬೆಂಗಳೂರು ಗ್ರಾಮಾಂತರ – 12 ಜನರಿಗೆ ಸೋಂಕು (ಸಕ್ರಿಯ- 12)
    * ದಾವಣಗೆರೆ- 2 ಜನರಿಗೆ ಸೋಂಕು (ಗುಣಮುಖ- 02)
    * ಉಡುಪಿ- 3 ಜನರಿಗೆ ಸೋಂಕು (ಗುಣಮುಖ- 02, ಸಕ್ರಿಯ- 01)
    * ಗದಗ- 01 ಜನರಿಗೆ ಸೋಂಕು (ಸಾವು- 01)

    * ತುಮಕೂರು- 2 ಜನರಿಗೆ ಸೋಂಕು (ಸಾವು- 01, ಸಕ್ರಿಯ- 01)
    * ವಿಜಯಪುರ – 10 ಜನರಿಗೆ ಸೋಂಕು (ಸಕ್ರಿಯ- 09, ಸಾವು- 01)
    * ಕೊಡಗು- 01 ಜನರಿಗೆ ಸೋಂಕು (ಗುಣಮುಖ, ಮತ್ತೆ ದಾಖಲು)
    * ಚಿಕ್ಕಬಳ್ಳಾಪುರ – 13 ಜನರಿಗೆ ಸೋಂಕು (ಗುಣಮುಖ- 8, ಸಕ್ರಿಯ- 03, ಸಾವು- 02)
    * ಉತ್ತರ ಕನ್ನಡ – 11 ಜನರಿಗೆ ಸೋಂಕು (ಗುಣಮುಖ- 08, ಸಕ್ರಿಯ- 03)

    ಸೋಂಕು ಇಲ್ಲದ ಹಸಿರು ವಲಯದ ಜಿಲ್ಲೆಗಳ ವ್ಯಾಪ್ತಿಗೆ ಶಿವಮೊಗ್ಗ, ಯಾದಗಿರಿ, ರಾಮನಗರ, ಕೋಲಾರ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಹಾಸನ, ರಾಯಚೂರು, ಚಾಮರಾಜನಗರ, ಚಿಕ್ಕಮಗಳೂರು ಬರುತ್ತವೆ.

  • ಕರ್ನಾಟಕದ ಕೊರೊನಾ ಹಾಟ್‍ಸ್ಪಾಟ್‍ಗಳ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ

    ಕರ್ನಾಟಕದ ಕೊರೊನಾ ಹಾಟ್‍ಸ್ಪಾಟ್‍ಗಳ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ

    – ಡೇಂಜರ್ ಜೋನ್‍ನಲ್ಲಿ ಬೆಂಗ್ಳೂರು ಸೇರಿದಂತೆ 8 ಜಿಲ್ಲೆಗಳು
    – ಹಸಿರು ವಲಯದಲ್ಲಿ ರಾಜ್ಯದ 11 ಜಿಲ್ಲೆಗಳು

    ನವದೆಹಲಿ: ಕೇಂದ್ರ ಸರ್ಕಾರವು ಜಿಲ್ಲೆಗಳಲ್ಲಿರುವ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಆಧಾರದ ಮೇಲೆ ವಲಯವಾರು ವಿಂಗಡೆ ಮಾಡಿದೆ. ರಾಜ್ಯದ 8 ಜಿಲ್ಲೆಗಳನ್ನು ರೆಡ್ ಜೋನ್‍ನಲ್ಲಿದ್ದರೆ, 11 ಜಿಲ್ಲೆಗಳು ಗ್ರೀನ್ ಜೋನ್‍ನಲ್ಲಿವೆ.

    ಹಾಟ್‍ಸ್ಪಾಟ್: ಈ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ 3 ಜಿಲ್ಲೆಗಳಿವೆ. ಬಿಡುಗಡೆಯಲ್ಲಿ ಬೆಂಗಳೂರು ನಗರ, ಮೈಸೂರು, ಬೆಳಗಾವಿ ಇದ್ದು, ಈ ಮೂರು ಜಿಲ್ಲೆಗಳಲ್ಲಿ ಕೊರೊನಾ ಭಾರೀ ಪ್ರಮಾಣದಲ್ಲಿದೆ. ಈ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರ ಬರುವಂತಿಲ್ಲ.

    ಹಾಟ್‍ಸ್ಪಾಟ್ ವಿಥ್ ಕ್ಲಸ್ಟರ್ (ವಲಯ ಡೆಂಜರ್‌ ಸ್ಪಾಟ್‌): ಈ ಪಟ್ಟಿಯಲ್ಲಿ ಐದು ಜಿಲ್ಲೆಗಳಿವೆ. ಅವುಗಳೆಂದರೆ ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ. ಈಗಾಗಲೇ ಈ ಭಾಗಗಳಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾವುದೇ ಕ್ಷಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

    ಆರೆಂಜ್ ಜೂನ್ (ನಾನ್ ಹಾಟ್‍ಸ್ಪಾಟ್): ಈ ಪಟ್ಟಿಯಲ್ಲಿ ರಾಜ್ಯದ 11 ಜಿಲ್ಲೆಗಳಿವೆ. ಅವುಗಳೆಂದರೆ ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಉಡುಪಿ, ಗದಗ, ತುಮಕೂರು, ಕೊಡಗು, ವಿಜಯಪುರ, ಚಿಕ್ಕಬಳ್ಳಾಪುರ, ಉತ್ತರಕನ್ನಡ ಆಗಿವೆ.

    ಹಸಿರು ವಲಯ: ಈ ಪಟ್ಟಿಯಲ್ಲಿ ರಾಜ್ಯದ 11 ಜಿಲ್ಲೆಗಳಿವೆ. ಅವುಗಳೆಂದರೆ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ಯಾದಗಿರಿ. ಈ ಭಾಗದಲ್ಲಿ ಯಾವುದೇ ಕೊರೊನಾ ಪ್ರಕರಣಗಳ ಕಂಡು ಬಂದಿಲ್ಲ. ಆದ್ರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

    ಸದ್ಯದ ಮಾಹಿತಿಯನ್ನು ಪಡೆದು ಕೇಂದ್ರ ಸರ್ಕಾರ ವಲಯವಾರು ಪಟ್ಟಿ ಬಿಡುಗಡೆ ಮಾಡಿದೆ. ಜೊತೆಗೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಈ ಪಟ್ಟಿ ಪರಿಷ್ಕೃತವಾಗುತ್ತದೆ. ಏಪ್ರಿಲ್ 20ರ ಬಳಿಕ ಕೇಂದ್ರ ಸರ್ಕಾರ ಹೊಸ ಪಟ್ಟಿ ಬಿಡುಗಡೆ ಮಾಡಲಿದೆ. ಈ ನಾಲ್ಕು ದಿನಗಳಲ್ಲಿ ಒಂದು ವೇಳೆ ಕೊರೊನಾ ಸೋಂಕಿತರ ಸಂಖ್ಯೆ ಯಾವುದೇ ಜಿಲ್ಲೆ ಭಾರೀ ಏರಿಕೆ ಕಂಡ್ರೆ ಅದನ್ನು ಹಾಟ್‍ಸ್ಪಾಟ್ ಪಟ್ಟಿಗೆ ಸೇರಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

  • ಕೊರೊನಾ ಉಲ್ಬಣದ ಮಧ್ಯೆ ಕ್ರೀಡಾಕೂಟ ಆರಂಭಿಸುವ ಇಚ್ಛೆ ಬಿಚ್ಚಿಟ್ಟ ಟ್ರಂಪ್

    ಕೊರೊನಾ ಉಲ್ಬಣದ ಮಧ್ಯೆ ಕ್ರೀಡಾಕೂಟ ಆರಂಭಿಸುವ ಇಚ್ಛೆ ಬಿಚ್ಚಿಟ್ಟ ಟ್ರಂಪ್

    ವಾಷಿಂಗ್ಟನ್: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ. ಇಂತಹ ಪತಿಸ್ಥಿತಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕ್ರೀಡಾಕೂಟ ಆರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

    ಟ್ರಂಪ್ ಮಂಗಳವಾರ ಮಾತನಾಡಿ, ನಾವು ನಮ್ಮ ಕ್ರೀಡೆಗಳನ್ನು ಪುನಾರಂಭಿಸಬೇಕಿದೆ. ನಾನು 14 ವರ್ಷ ವಯಸ್ಸಿ ಆಟಗಾರರ ಬೇಸ್‍ಬಾಲ್ ಆಟಗಳನ್ನು ನೋಡುವುದರಿಂದ ಬೇಸತ್ತಿದ್ದೇನೆ ಎಂದು ಹೇಳಿದ್ದಾರೆ.

    ಉತಾಹ್ ಜಾಝ್ ಸೆಂಟರ್‍ನ ರೂಡಿ ಗೊಬರ್ಟ್ ಅವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಅಂದ್ರೆ ಮಾರ್ಚ್ 11ರಂದು ಎನ್‍ಬಿಎ (ನ್ಯಾಷನಲ್ ಬಾಸ್ಕೆಟ್‍ಬಾಲ್ ಅಸೋಸಿಯೇಷನ್) ಸ್ಥಗಿತಗೊಂಡಿತು. ಅಂದಿನಿಂದ ಯುಎಸ್‍ಎ, ಎನ್‍ಬಿಎ, ನ್ಯಾಷನಲ್ ಹಾಕಿ ಲೀಗ್, ಫುಟ್ಬಾಲ್ ಲೀಗ್ ಮತ್ತು ಬೇಸ್ ಬಾಲ್ ಲೀಗ್ ಸೇರಿದಂತೆ ಎಲ್ಲಾ ಟೂರ್ನಿಗಳನ್ನು ಮುಂದೂಡಲಾಗಿದೆ. ಇತ್ತ ಜಪಾನ್‍ನಲ್ಲಿ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್ ಮತ್ತು ಭಾರತದಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ.

    ಫ್ಲೋರಿಡಾದಲ್ಲಿ ಬೇಸ್‍ಬಾಲ್ ಲೀಗ್‍ನಲ್ಲಿ 30 ತಂಡಗಳು ಆಡಲಿವೆ. ಈಗಾಗಲೇ ಪಂದ್ಯ ಆರಂಭವಾಗಿದ್ದರಿಂದ ಈ ಆವೃತ್ತಿಯಲ್ಲಿ ಉಳಿದ ಪಂದ್ಯಗಳನ್ನು ಖಾಲಿ ಕ್ರೀಡಾಂಗಣಗಳಲ್ಲಿ ನಡೆಸಲು ಆಯೋಜಕರು ಮುಂದಾಗಿದ್ದರು. ಈ ವಿಚಾರವಾಗಿ ಮಾತನಾಡಿದ್ದ ಮೇಜರ್ ಲೀಗ್ ಸಾಕರ್ (ಎಂಎಲ್‍ಬಿ) ಕಮಿಷನರ್ ರಾಬ್ ಮೆನ್‍ಫ್ರೆಡ್, ಇಂತಹ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಯಾವುದೇ ಯೋಜನೆಗಳಿಲ್ಲ. ಸಾಕಷ್ಟು ಯೋಜನೆಗಳನ್ನು ಪರಿಗಣಿಸಲಾಗುತ್ತಿದೆ. ಇವುಗಳಲ್ಲಿ ಯಾವುದು ಫಲಿತಾಂಶವಾಗಿ ಬದಲಾಗುತ್ತದೆ ಎಂಬುದನ್ನು ತಿಳಿಯುತ್ತಿಲ್ಲ. ಜನರ ಜೀವನ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದರು.

    ಅಮೆರಿಕಾದಲ್ಲಿ ಬುಧವಾರ ಬೆಳಗ್ಗೆಯವರೆಗೆ ಕೊರೊನಾ ವೈರಸ್‍ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 26 ಸಾವಿರಕ್ಕೂ ಅಧಿಕವಾಗಿದೆ. ಸೋಂಕಿತರ ಸಂಖ್ಯೆ 6.14 ಲಕ್ಷ ಮೀರಿದೆ. ವಿಶ್ವದಾದ್ಯಂತ 19,97, 906 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 1,26,604 ಮಂದಿ ಮೃತಪಟ್ಟಿದ್ದಾರೆ.