Tag: Coronavirus

  • ನಾಳೆ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

    ನಾಳೆ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

    ಮಂಡ್ಯ: 2021ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಳೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿದ್ಯುಕ್ತ ಚಾಲನೆ ನೀಡಲಿದ್ದು, ನಾಳೆಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಕರಿ ನೆರಳ ನಡುವೆ ನವರಾತ್ರಿ ಸಂಭ್ರಮ ಕಳೆಗಟ್ಟಲಿದೆ.

    ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವನ್ನೇ ಕೊರೊನಾ ಎಂಬ ಮಹಾ ಮಾರಿ ಕಾಡುತ್ತಿದೆ. ಇದರಿಂದ ಹಲವರು ಐತಿಹಾಸಿಕ ಕಾರ್ಯಕ್ರಮಗಳು ಕಳೆಗುಂದಿವೆ. ಅದೇ ರೀತಿ ಮೈಸೂರಿನ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ವೈಭವ ಕಳೆದ ವರ್ಷದಿಂದ ಕಳೆಗುಂದಿದೆ. ಕೊರೊನಾ ನಡುವೆಯೂ ಸಹ ಐತಿಹಾಸಿಕ ಆಚರಣೆ ನಿಲ್ಲಬಾರದು ಎಂಬ ಉದ್ದೇಶದಿಂದ ಈ ಬಾರಿಯ ದಸರಾವನ್ನು ಸರಳವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ನಾಳೆ ಈ ಸರಳ ದಸರಾ ಮಹೋತ್ಸವಕ್ಕೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ರಾಷ್ಟ್ರಪತಿಗೆ ಸ್ವಾಗತ ಕೋರಿದ ಸಿಎಂ ಬೊಮ್ಮಾಯಿ

    ನಾಳೆ ಬೆಳಗ್ಗೆ 8.15 ರಿಂದ 8.45ರ ಶುಭ ಮುಹೂರ್ತದಲ್ಲಿ ಎಸ್.ಎಂ.ಕೃಷ್ಣ ಅವರು ಚಾಮುಂಡಿ ಬೆಟ್ಟದಲ್ಲಿ ಬೆಳ್ಳಿ ರಥದಲ್ಲಿನ ಚಾಮುಂಡೇಶ್ವರಿ ತಾಯಿ ಉತ್ಸವ ಮೂರ್ತಿಗೆ ಪುಷ್ಪಾರ್ಚಾನೆ ಮಾಡುವ ಮೂಲಕ 2021 ರ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಭಾಗವಹಿಸಲಿದ್ದು, ಕೊರೊನಾ ಕಾರಣ ಈ ಕಾರ್ಯಕ್ರಮಕ್ಕೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವರ್ಚುವಲ್ ಮುಖಾಂತರ ಜನ ಸಾಮಾನ್ಯರು ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆ- ಎಸ್.ಎಂ.ಕೃಷ್ಣಾರನ್ನು ಅಧಿಕೃತವಾಗಿ ಆಹ್ವಾನಿಸಿದ ಸರ್ಕಾರ

    ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತ ಬಳಿಕ ಸಂಜೆ 6 ಗಂಟೆಗೆ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಜೊತೆಗೆ ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಲಿದ್ದಾರೆ. ನಾಳೆಯಿಂದ ಏಳು ದಿನಗಳ ಕಾಲ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಕ್ಟೋಬರ್ 15 ರಂದು ಜಂಬೂ ಸವಾರಿ ಮೆರವಣಿಗೆ ಮೂಲಕ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

  • ಕೋವಿಡ್‍ಗೆ ಬಲಿಯಾದ ಕುಟುಂಬಗಳಿಗೆ ಪರಿಹಾರ – ಖಡಕ್ ಆದೇಶ ನೀಡಿದ ಸುಪ್ರೀಂಕೋರ್ಟ್

    ಕೋವಿಡ್‍ಗೆ ಬಲಿಯಾದ ಕುಟುಂಬಗಳಿಗೆ ಪರಿಹಾರ – ಖಡಕ್ ಆದೇಶ ನೀಡಿದ ಸುಪ್ರೀಂಕೋರ್ಟ್

    ನವದೆಹಲಿ: ಕೋವಿಡ್‍ಗೆ ಬಲಿಯಾದವರ ಎಲ್ಲರ ಕುಟುಂಬಗಳಿಗೆ 50 ಸಾವಿರ ಪರಿಹಾರ ನೀಡಲೇಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ದೃಢೀಕರಣ ಪತ್ರ ಇಲ್ಲದಿದ್ರೂ ಪರಿಹಾರ ಕೊಡಲೇ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

    ಕೊರೊನಾದಿಂದಾಗಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರು ಅರ್ಜಿ ಹಾಕಿಕೊಂಡ 30 ದಿನಗಳ ಒಳಗಾಗಿ ಪರಿಹಾರ ತಲುಪಿಸಬೇಕು. ಯಾವ ರಾಜ್ಯವೂ ಕೂಡ ನಿರಾಕರಿಸುವಂತಿಲ್ಲ. ಯಾವುದೇ ನೆಪ ಹೇಳುವಂತೆ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಖಡಕ್ ಆದೇಶ ನೀಡಿದೆ. ಇದೇ ವೇಳೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ರೂಪಿಸಿದ ಪರಿಹಾರ ಮಾರ್ಗಸೂಚಿಗಳಿಗೆ ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ.

    ರಾಜ್ಯದಲ್ಲಿ ಕೋವಿಡ್-19ನಿಂದ ಮೃತಪಟ್ಟವರ ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವ ಸಂಬಂಧ ನಾಳೆಯ ಕ್ಯಾಬಿನೆಟ್‍ನಲ್ಲಿ ಅಧಿಕೃತ ತೀರ್ಮಾನ ಹೊರಬೀಳುವ ಸಂಭವ ಇದೆ. ಇದನ್ನೂ ಓದಿ: ಕೇರಳದಿಂದ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ – ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ

    ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ರಿಪೋರ್ಟ್‌ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ವಕೀಲ ಆರ್‌ಎಸ್ ಜೇನಾ ಎನ್ನುವವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿದ್ದ ಕಾರಣ, ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 7 ರವರೆಗೆ ಆರ್ಯನ್ ಖಾನ್ ಎನ್‍ಸಿಬಿ ವಶಕ್ಕೆ- ಕೋರ್ಟ್‍ನಲ್ಲಿ ವಾದ- ಪ್ರತಿವಾದ ಹೇಗಿತ್ತು?

  • ರಾಜ್ಯದಲ್ಲಿ ಇಂದು 397 ಕೇಸ್- ಮರಣ ಪ್ರಮಾಣ 3.27%ಕ್ಕೆ ಏರಿಕೆ

    ರಾಜ್ಯದಲ್ಲಿ ಇಂದು 397 ಕೇಸ್- ಮರಣ ಪ್ರಮಾಣ 3.27%ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಇಂದು ನಿನ್ನೆಗಿಂತ ಕಡಿಮೆ ಪ್ರಕರಣ ದಾಖಲಾಗಿದ್ದು, 397 ಹೊಸ ಕೊರೊನಾ ಕೇಸ್ ದಾಖಲಾಗಿದೆ. 13 ಮಂದಿ ಸಾವನ್ನಪ್ಪಿದರೆ. ಈ ಮೂಲಕ ಕೋವಿಡ್-19 ಮರಣ ಪ್ರಮಾಣ ಶೇ.3.27ಕ್ಕೆ ಏರಿಕೆ ಕಂಡಿದೆ.

    ರಾಜ್ಯದಲ್ಲಿ 693 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 11,992 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,78,286 ಮಂದಿಗೆ ಕೊರೊನಾ ಬಂದಿದೆ. 29,28,433 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.50ರಷ್ಟಿದೆ. ಇದನ್ನೂ ಓದಿ: ಮತಾಂತರ ಮಾಡುತ್ತಿರುವವರನ್ನು ಒದ್ದು ಓಡಿಸಬೇಕು: ಪ್ರಮೋದ್ ಮುತಾಲಿಕ್

    ಇಂದು ರಾಜ್ಯದಲ್ಲಿ ಒಟ್ಟು 1,85,051 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 78,958 ಸ್ಯಾಂಪಲ್ (ಆರ್‍ಟಿ ಪಿಸಿಆರ್ 65,239 + 13,719 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಸೋಂಕಿನ ಸಂಖ್ಯೆ ನೂರಕ್ಕಿಂತ ಕಡಿಮೆ ದಾಖಲಾಗಿದೆ. ಬೆಂಗಳೂರಿನಲ್ಲಿ ಇಂದು 166 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 5 ಜನ ಮರಣ ಹೊಂದಿದ್ದಾರೆ. 121 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಬ್ರಹ್ಮ ರಸಾಯಣ, ಅಶ್ವ ಗಂಧಿ ಲೇಹಂ – ದೇವರ ಪ್ರಸಾದದ ಹೆಸರಲ್ಲಿ ಡ್ರಗ್ಸ್ ದಂಧೆ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 2, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 166, ಬೀದರ್ 0, ಚಾಮರಾಜನಗರ 1, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 16, ಚಿತ್ರದುರ್ಗ 2, ದಕ್ಷಿಣ ಕನ್ನಡ 45, ದಾವಣಗೆರೆ 0, ಧಾರವಾಡ 0, ಗದಗ 0, ಹಾಸನ 33, ಹಾವೇರಿ 1,ಕಲಬುರಗಿ 1, ಕೊಡಗು 25, ಕೋಲಾರ 11, ಕೊಪ್ಪಳ 0, ಮಂಡ್ಯ 11, ಮೈಸೂರು 40, ಶಿವಮೊಗ್ಗ 12, ತುಮಕೂರು 7, ಉಡುಪಿ 6, ಉತ್ತರ ಕನ್ನಡ 12 ವಿಜಯನಗರ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿ ಇಂದು 664 ಪಾಸಿಟಿವ್ ಕೇಸ್, 8 ಸಾವು

    ರಾಜ್ಯದಲ್ಲಿ ಇಂದು 664 ಪಾಸಿಟಿವ್ ಕೇಸ್, 8 ಸಾವು

    ಬೆಂಗಳೂರು: ರಾಜ್ಯದಲ್ಲಿ ಇಂದು 664 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 8 ಮಂದಿ ಸಾವನ್ನಪ್ಪಿದರೆ, 711 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ರಾಜ್ಯದಲ್ಲಿ ಒಟ್ಟು 12,301 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,77,889 ಮಂದಿಗೆ ಕೊರೊನಾ ಬಂದಿದೆ. 29,27,740 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.52ರಷ್ಟಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.20ರಷ್ಟಿದೆ.  ಇದನ್ನೂ ಓದಿ: ನವೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ಸಾಧ್ಯತೆ: ಸುಧಾಕರ್

    ಇಂದು ರಾಜ್ಯದಲ್ಲಿ ಒಟ್ಟು 21,971 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,26,386 ಸ್ಯಾಂಪಲ್ (ಆರ್‍ಟಿ ಪಿಸಿಆರ್ 1,05,380 + 21,006 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 196 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 3 ಜನ ಮರಣ ಹೊಂದಿದ್ದಾರೆ. 258 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ, ಬೀದರ್, ಗದಗ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾದರೆ, ಹಾವೇರಿ, ರಾಮನಗರ ಮತ್ತು ವಿಜಯಪುರದಲ್ಲಿ ಕೇವಲ 1 ಪ್ರಕರಣಗಳು ದಾಖಲಾಗಿದೆ. ಉಳಿದಂತೆ, ಬಳ್ಳಾರಿ 3, ಬೆಳಗಾವಿ 8, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 196, ಚಾಮರಾಜನಗರ 5, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 13, ಚಿತ್ರದುರ್ಗ 12, ದಕ್ಷಿಣ ಕನ್ನಡ 76, ದಾವಣಗೆರೆ 4, ಧಾರವಾಡ 9, ಹಾಸನ 45, ಕೊಡಗು 52, ಕೋಲಾರ 13, ಕೊಪ್ಪಳ 2, ಮಂಡ್ಯ 8, ಮೈಸೂರು 101, ಶಿವಮೊಗ್ಗ 11, ತುಮಕೂರು 18, ಉಡುಪಿ 33, ಉತ್ತರ ಕನ್ನಡ 43 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಬ್ರಿಟನ್‍ನಿಂದ ಭಾರತಕ್ಕೆ ಆಗಮಿಸುವ ಪ್ರಜೆಗಳಿಗೆ ಕಠಿಣ ನಿಯಮ ಜಾರಿ

    ಬ್ರಿಟನ್‍ನಿಂದ ಭಾರತಕ್ಕೆ ಆಗಮಿಸುವ ಪ್ರಜೆಗಳಿಗೆ ಕಠಿಣ ನಿಯಮ ಜಾರಿ

    ನವದೆಹಲಿ: ಬ್ರಿಟನ್ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಪ್ರತಿಯಾಗಿ ಭಾರತ ಇಲ್ಲಿಗೆ ಆಗಮಿಸುವ ಬ್ರಿಟನ್ ಪ್ರಜೆಗಳಿಗೆ ಕಠಿಣ ನಿಯಮ ಜಾರಿ ಮಾಡಿ ಆದೇಶ ಹೊರಡಿಸಿದೆ.

    ಬ್ರಿಟನ್ ಸರ್ಕಾರ ಕೆಲದಿನಗಳ ಹಿಂದೆ ಹೊರಡಿಸಿದ್ದ ಆದೇಶದಲ್ಲಿ ಭಾರತೀಯ ಪ್ರಯಾಣಿಕರು ಕೋವಿಶೀಲ್ಡ್ ಲಸಿಕೆಯನ್ನು ಪಡೆದು ಬ್ರಿಟನ್‍ಗೆ ತೆರಳಿದ್ದಲ್ಲಿ ಅದನ್ನು ಲಸಿಕೆ ಪಡೆದಿಲ್ಲ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ 10 ದಿನಗಳವರೆಗೆ ಐಸೊಲೇಷನ್‍ನಲ್ಲಿರಬೇಕೆಂಬ ನಿಯಮ ಜಾರಿಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಅ.04 ರಿಂದ ಭಾರತಕ್ಕೆ ಆಗಮಿಸುವ ಎಲ್ಲಾ ಬ್ರಿಟನ್ ಪ್ರಜೆಗಳಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಹಾಗೂ 10 ದಿನಗಳ ಕಡ್ಡಾಯ ಕ್ವಾರಂಟೈನ್‍ನಲ್ಲಿರಬೇಕೆಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನವಜೋತ್ ಸಿಂಗ್ ಸಿಧುನಂತೆ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸನ್ನು ನಾಶ ಮಾಡುತ್ತಾರೆ: ಆರ್​​ಜೆಡಿ

    ಕೇಂದ್ರ ಸರ್ಕಾರ ಹೊರಡಿಸಿರುವ ಹೊದ ನಿಯಮದ ಪ್ರಕಾರ ಬ್ರಿಟನ್‍ನಿಂದ ಭಾರತಕ್ಕೆ ಆಗಮಿಸುವ ಬ್ರಿಟನ್ ಪ್ರಜೆಗಳು ಲಸಿಕೆ ಪಡೆದಿದ್ದರು, ಪಡೆಯದೆ ಇದ್ದರು ಕೂಡ ಕೋವಿಡ್-19 ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಹೊರಡುವುದಕ್ಕೂ ಮುನ್ನವೇ ಮಾಡಿಸಿಕೊಂಡಿರಬೇಕಾಗುತ್ತದೆ. ನಂತರ ಭಾರತಕ್ಕೆ ಬಂದ ನಂತರ 8 ದಿನಗಳಾದ ಮೇಲೂ ಪರೀಕ್ಷೆಯನ್ನು ಮಾಡಬೇಕಾಗುತ್ತದೆ. ಅಲ್ಲದೆ ವಾಸವಾಗಿರುವ ಸ್ಥಳದಲ್ಲಿ 10 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‍ನಲ್ಲಿರಬೇಕೆಂದು ತಿಳಿಸಿದೆ. ಇದನ್ನೂ ಓದಿ: ಅಬ್ದುಲ್ ನಾಸಿರ್ ಮದನಿ ಕೇರಳಕ್ಕೆ ತೆರಳಲು ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್

    ಬ್ರಿಟನ್ ಸರ್ಕಾರ ಭಾರತದ ಪ್ರಯಾಣಿಕರಿಗೆ ಕಠಿಣ ನಿಯಮವನ್ನು ಜಾರಿಗೊಳಿಸುತ್ತಿದ್ದಂತೆ, ಈ ನಿರ್ಧಾರಗಳನ್ನು ಬದಲಾಯಿಸದೆ ಇದ್ದಲ್ಲಿ ಬ್ರಿಟನ್ ಸರ್ಕಾರದ ನಿರ್ಧಾರಗಳಿಗೆ ಪ್ರತಿಯಾಗಿ ಭಾರತವೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿತ್ತು. ಬ್ರಿಟನ್‍ನ ಈ ನಡೆಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ತೀವ್ರ ಕಿಡಿಕಾರಿದ್ದರು.

  • ರಾಜ್ಯದಲ್ಲಿ ಕೊರೊನಾ ಪ್ರಕರಣ ಏರಿಕೆ, ಸಾವಿನ ಸಂಖ್ಯೆ ಇಳಿಕೆ – ಇಂದು 933 ಕೇಸ್, 14 ಸಾವು

    ರಾಜ್ಯದಲ್ಲಿ ಕೊರೊನಾ ಪ್ರಕರಣ ಏರಿಕೆ, ಸಾವಿನ ಸಂಖ್ಯೆ ಇಳಿಕೆ – ಇಂದು 933 ಕೇಸ್, 14 ಸಾವು

    ಬೆಂಗಳೂರು: ರಾಜ್ಯದಲ್ಲಿ ಇಂದು 933 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡು ಸಾವಿನ ಸಂಖ್ಯೆ ನಿನ್ನೆಗಿಂತ ಕಡಿಮೆ ದಾಖಲಾಗಿದೆ. ಇಂದು 704 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ರಾಜ್ಯದಲ್ಲಿ ಒಟ್ಟು 12,780 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,76,000 ಮಂದಿಗೆ ಕೊರೊನಾ ಬಂದಿದೆ. 29,25,397 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.81ರಷ್ಟಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.50ರಷ್ಟಿದೆ. ಇದನ್ನೂ ಓದಿ: ಆರೋಗ್ಯ ಕರ್ನಾಟಕ ಬೊಮ್ಮಾಯಿ ಸರ್ಕಾರದ ಗುರಿ: ಸುಧಾಕರ್

    ಇಂದು ರಾಜ್ಯದಲ್ಲಿ ಒಟ್ಟು 1,47,346 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,14,529 ಸ್ಯಾಂಪಲ್ (ಆರ್‍ಟಿ ಪಿಸಿಆರ್ 87,623 + 26,906 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 291 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 5 ಜನ ಮರಣ ಹೊಂದಿದ್ದಾರೆ. 172 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ನಿಖಿಲ್-ಪ್ರಜ್ವಲ್ – ಪಕ್ಷ ಕಟ್ಟಲು ಪಣತೊಟ್ಟ ಸಹೋದರರು

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಮೂರು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಾಗಲಕೋಟೆ 0, ಬಳ್ಳಾರಿ 6, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 291, ಬೀದರ್ 0, ಚಾಮರಾಜನಗರ 4, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 63, ಚಿತ್ರದುರ್ಗ 4, ದಕ್ಷಿಣ ಕನ್ನಡ 94, ದಾವಣಗೆರೆ 5, ಧಾರವಾಡ 7, ಹಾಸನ 57, ಹಾವೇರಿ 1, ಕಲಬುರಗಿ 2, ಕೊಡಗು 48, ಕೋಲಾರ 7, ಕೊಪ್ಪಳ 2, ಮಂಡ್ಯ 42, ಮೈಸೂರು 76, ರಾಯಚೂರು 0, ರಾಮನಗರ 1, ಶಿವಮೊಗ್ಗ 25, ತುಮಕೂರು 54, ಉಡುಪಿ 77 ಉತ್ತರ ಕನ್ನಡದಲ್ಲಿ 40, ವಿಜಯಪುರ 1 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿ ಮತ್ತಷ್ಟು ಇಳಿಕೆ ಕಂಡ ಕೊರೊನಾ ಪ್ರಕರಣ – ಇಂದು 539 ಕೇಸ್, 17 ಸಾವು

    ರಾಜ್ಯದಲ್ಲಿ ಮತ್ತಷ್ಟು ಇಳಿಕೆ ಕಂಡ ಕೊರೊನಾ ಪ್ರಕರಣ – ಇಂದು 539 ಕೇಸ್, 17 ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದೆ. ಇಂದು 539 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 17 ಮಂದಿ ಸಾವನ್ನಪ್ಪಿದ್ದು, 591 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ರಾಜ್ಯದಲ್ಲಿ ಒಟ್ಟು 12,365 ಸಕ್ರಿಯ ಪ್ರಕರಣಗಳು ಇದ್ದು, ಸಕ್ರಿಯ ಪ್ರಕರಣದಲ್ಲೂ ಕೂಡ ಇಳಿಕೆ ಕಂಡು ಬಂದಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 29,75,067 ಮಂದಿಗೆ ಕೊರೊನಾ ಬಂದಿದೆ. 29,24,693 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.48ರಷ್ಟಿದೆ. ಕೋವಿಡ್-19 ಮರಣ ಪ್ರಮಾಣ ಶೇ.3.15ರಷ್ಟಿದೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ ಒಬ್ಬ ದೊಡ್ಡ ಭಯೋತ್ಪಾದಕ: ಕಟೀಲ್

    ಇಂದು ರಾಜ್ಯದಲ್ಲಿ ಒಟ್ಟು 7,89,853 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,11,538 ಸ್ಯಾಂಪಲ್ (ಆರ್‍ಟಿ ಪಿಸಿಆರ್ 86,507 + 25,031 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 239 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 7 ಜನ ಮರಣ ಹೊಂದಿದ್ದಾರೆ. 141 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಟಿಪ್ಪುವಿನ ವಂಶಸ್ಥರಾ?: ಕೆ.ಜಿ ಬೋಪಯ್ಯ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಚಿಕ್ಕಬಳ್ಳಾಪುರ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಾಗಲಕೋಟೆ 1, ಬಳ್ಳಾರಿ 1, ಬೆಳಗಾವಿ 8, ಬೆಂಗಳೂರು ಗ್ರಾಮಾಂತರ 10, ಬೆಂಗಳೂರು ನಗರ 239, ಬೀದರ್ 3, ಚಾಮರಾಜನಗರ 2, ಚಿಕ್ಕಮಗಳೂರು 4, ಚಿತ್ರದುರ್ಗ 8, ದಕ್ಷಿಣ ಕನ್ನಡ 75, ದಾವಣಗೆರೆ 2, ಧಾರವಾಡ 5, ಹಾಸನ 21, ಹಾವೇರಿ 1, ಕಲಬುರಗಿ 2, ಕೊಡಗು 36, ಕೋಲಾರ 13, ಕೊಪ್ಪಳ 1, ಮಂಡ್ಯ 10, ಮೈಸೂರು 31, ರಾಮನಗರ 3, ಶಿವಮೊಗ್ಗ 14, ತುಮಕೂರು 22, ಉಡುಪಿ 6 ಮತ್ತು ಉತ್ತರ ಕನ್ನಡದಲ್ಲಿ 19, ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಭಾರತದ ಲಸಿಕಾಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್

    ಭಾರತದ ಲಸಿಕಾಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್

    ವಾಷಿಂಗ್ಟನ್: 4 ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿಯಾಗಿದ್ದರು. ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ, ಭಾರತ-ಅಮೆರಿಕದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದ್ದು, ಭಾರತದ ಲಸಿಕಾಕರಣ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕಮಲಾ ಹ್ಯಾರಿಸ್ ಮೆಚ್ಚುಗೆ ವ್ಯಕ್ತಪಡಿಸಿದರು.

    ಮೊದಲ ಮುಖಾಮುಖಿ ಭೇಟಿಗಾಗಿ ಉಭಯ ನಾಯಕರು ಸಂತಸ ವ್ಯಕ್ತಪಡಿಸಿದರು. ಅವರು 2021ರ ಜೂನ್ ತಿಂಗಳಲ್ಲಿ ನಡೆಸಿದ ದೂರವಾಣಿ ಸಮಾಲೋಚನೆಯನ್ನು ನೆನೆಪಿಸಿಕೊಂಡರು. ಆಫ್ಘಾನಿಸ್ತಾನ ಸೇರಿದಂತೆ ಇತ್ತೀಚಿನ ಜಾಗತಿಕ ಬೆಳವಣಿಗೆಗಳ ಕುರಿತು ಉಭಯ ನಾಯಕರು ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಮುಕ್ತ, ಸಮಗ್ರ ಮತ್ತು ಎಲ್ಲವನ್ನೂ ಒಳಗೊಂಡ ಇಂಡೋ-ಪೆಸಿಫಿಕ್ ಪ್ರದೇಶ ಸ್ಥಾಪನೆಯತ್ತ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅಲ್ಲದೆ, ಇಬ್ಬರೂ ನಾಯಕರು ತಮ್ಮ ತಮ್ಮ ರಾಷ್ಟ್ರಗಳಲ್ಲಿನ ಕೋವಿಡ್-19 ಸ್ಥಿತಿಗತಿ, ಲಸಿಕೆ ನೀಡಿಕೆಯನ್ನು ತೀವ್ರಗೊಳಿಸುವ ಮೂಲಕ ಸಾಂಕ್ರಾಮಿಕವನ್ನು ನಿಯಂತ್ರಿಸಲು ಕೈಗೊಂಡಿರುವ ಪ್ರಯತ್ನಗಳು ಮತ್ತು ಗಂಭೀರ ವೈದ್ಯಕೀಯ ಸಾಧನಗಳು, ಚಿಕಿತ್ಸೆ ಮತ್ತು ಆರೋಗ್ಯ ರಕ್ಷಣಾ ಸಾಧನಗಳ ಪೂರೈಕೆ ಖಾತ್ರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

    ಭಾರತದ ಲಸಿಕಾಕರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್, ನಿತ್ಯ 1 ಕೋಟಿ ಲಸಿಕೆ ನೀಡೋದು ದೊಡ್ಡ ಸಾಧನೆ. ಕೊರೊನಾ ವಿರುದ್ಧ ನಾವು ಒಟ್ಟಾಗಿ ಹೋರಾಡುತ್ತೇವೆ. ಭಾರತದೊಂದಿಗಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಲು ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು. ಹವಾಮಾನ ವೈಪರೀತ್ಯ ತಡೆಗೆ ಸಹಭಾಗಿತ್ವದ ಕ್ರಮದ ಪ್ರಾಮುಖ್ಯವನ್ನು ಉಭಯ ದೇಶಗಳು ಒಪ್ಪಿಕೊಂಡವು. ಪ್ರಧಾನಮಂತ್ರಿ ಅವರು ಭಾರತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಮತ್ತು ಇತ್ತೀಚೆಗೆ ಆರಂಭಿಸಿರುವ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಕುರಿತು ಮಾತನಾಡಿದರು. ಅಲ್ಲದೆ, ಅವರು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸಲು ಜೀವನಶೈಲಿ ಬದಲಾವಣೆಗೆ ಒತ್ತು ನೀಡುವ ಅಗತ್ಯತೆಯನ್ನು ಪ್ರತಿಪಾದಿಸಿದರು. ಇದನ್ನೂ ಓದಿ: ಭಾರತ ಕೋವಿಡ್ 19 ನಿರ್ವಹಣೆ ಮಾಡಿದಂತೆ ಬೇರೆ ಯಾವ ದೇಶ ಮಾಡಿಲ್ಲ – ಸುಪ್ರೀಂ ಮೆಚ್ಚುಗೆ

    ಬಾಹ್ಯಾಕಾಶ ಸಹಕಾರ, ಮಾಹಿತಿ ತಂತ್ರಜ್ಞಾನ ವಿಶೇಷವಾಗಿ ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನಗಳು, ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಭವಿಷ್ಯದ ಸಹಭಾಗಿತ್ವದ ಕ್ಷೇತ್ರಗಳ ಕುರಿತು ಅವರು ಚರ್ಚೆ ನಡೆಸಿದರು. ಉತ್ಸಾಹ ಭರಿತ ಜನರಿಂದ ಜನರು ನಡುವಿನ ಸಂಪರ್ಕ ಪರಸ್ಪರ ಶಿಕ್ಷಣ ಸಂಬಂಧಗಳಿಗೆ ಪ್ರಯೋಜನಕಾರಿ ಮತ್ತು ಎರಡೂ ದೇಶಗಳ ನಡುವೆ ಜ್ಞಾನ, ಹೊಸತನದ ಶೋಧ ಮತ್ತು ಪ್ರತಿಭೆಯ ಹರಿವಿಗೆ ಸಹಕಾರಿ ಎಂಬುದನ್ನು ಉಭಯ ನಾಯಕರು ಒಪ್ಪಿಕೊಂಡರು. ಕೊರೊನಾ 2ನೇ ಅಲೆ ಸಂಕಷ್ಟದಲ್ಲಿ ಸಹಾಯ ನೀಡಿದ ಅಮೆರಿಕಕ್ಕೆ ಮೋದಿ ಧನ್ಯವಾದ ಅರ್ಪಿಸಿದರು. ಇದೇ ವೇಳೆ ಭಾರತಕ್ಕೆ ಆಗಮಿಸುವಂತೆ ಕಮಲಾ ಹ್ಯಾರಿಸ್‍ಗೆ, ಮೋದಿ ಆಮಂತ್ರಣ ನೀಡಿದರು.

    ಈ ಮೊದಲು ಮೋದಿ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕದ ಉನ್ನತ ತಂತ್ರಜ್ಞಾನ ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಭಾರತವನ್ನು ಜಾಗತಿಕ ಇನ್ನೋವೇಷನ್ ಹಬ್ ಮಾಡುವ ಗುರಿ ಇದೆ ಎಂದು ಅಭಿಪ್ರಾಯವ್ಯಕ್ತಪಡಿಸದರು. ಸೆಮಿಕಂಡಕ್ಟರ್ ಮತ್ತು ವೈರ್‍ಲೆಸ್ ಟೆಕ್ನಾಲಜಿ ತಯಾರಕ ಕ್ವಾಲ್‍ಕಾಮ್ ಸಂಸ್ಥೆ ಭಾರತದಲ್ಲಿ 5ಜಿ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರಿದ್ದು, ಸಾಫ್ಟ್ ವೇರ್ ಕಂಪನಿ ಅಡೋಬ್, ಇಂಧನ ಕಂಪನಿ ಫಸ್ಟ್ ಸೋಲಾರ್, ಶಸ್ತ್ರಾಸ್ತ್ರ ತಯಾರಕ ಜನರಲ್ ಅಟೊಮಿಕ್ಸ್ ಮತ್ತು ಹೂಡಿಕೆ ನಿರ್ವಹಣಾ ಕಂಪನಿ ಬ್ಲ್ಯಾಕ್‍ಸ್ಟೋನ್ ಸಿಇಒಗಳೊಂದಿಗೆ ಮೋದಿ ಪರಸ್ಪರ ಮಾತುಕತೆ ನಡೆಸಿದರು.

    ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಬಳಿಕ ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಜೊತೆಗಿನ ಮಹತ್ವದ ಕ್ವಾಡ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಇಂದಿನಿಂದ ಪ್ರಧಾನಿ ಮೋದಿ ನಾಲ್ಕು ದಿನ ಅಮೆರಿಕ ಪ್ರವಾಸ

  • ಕೊರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೂ ಪರಿಹಾರ -ಕೇಂದ್ರ ಸರ್ಕಾರ

    ಕೊರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೂ ಪರಿಹಾರ -ಕೇಂದ್ರ ಸರ್ಕಾರ

    ನವದೆಹಲಿ: ಕೋವಿಡ್-19 ಪಾಸಿಟಿವ್ ಎಂದು ಗುರುತಿಸಿ 30 ದಿನಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬದ ಸದಸ್ಯರು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ನೀಡುವ ಎಕ್ಸ್-ಗ್ರೇಷಿಯಾ ಪರಿಹಾರಕ್ಕೆ ಅರ್ಹರು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.

    ಈ ಬಗ್ಗೆ ಅಫಿಡೆವಿಟ್ ಸಲ್ಲಿಸಿರುವ ಕೇಂದ್ರ ಗೃಹ ಇಲಾಖೆ, ಡಿಎಂಎ ಸೆಕ್ಷನ್ 12(111) ಅಡಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(NDMA) ನೀಡಿದ ಮಾರ್ಗಸೂಚಿಗಳಿಗೆ ಅನುಸಾರವಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‍ಡಿಆರ್‍ಎಫ್) ಅಡಿಯಲ್ಲಿ ನೀಡಲಾದ ಹಣಕಾಸಿನ ಸಹಾಯವನ್ನು ಪಡೆಯಲು ಕುಟುಂಬ ಸದಸ್ಯರು ಅರ್ಹರು ಎಂದು ಉಲ್ಲೇಖಿಸಿದೆ. ಮತ್ತು ಈ ಬಗ್ಗೆ ಕೋರ್ಟ್ ನಡುವೆ ನಿರ್ದೇಶನಗಳನ್ನು ನೀಡಬಹುದು ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

    ಪರಿಹಾರದ ವ್ಯಾಪ್ತಿಯನ್ನು ವಿಶಾಲವಾಗಿಸಲು ಮತ್ತು ಅರ್ಹರಿಗೆ ಪರಿಹಾರ ದಕ್ಕಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿರುವ ಸರ್ಕಾರ, ಪರೀಕ್ಷೆಯ ದಿನಾಂಕದಿಂದ ಅಥವಾ ಕೊವೀಡ್-19 ಪ್ರಕರಣ ವೈದ್ಯಕೀಯವಾಗಿ ನಿರ್ಧರಿಸಿದ ದಿನಾಂಕದಿಂದ 30 ದಿನಗಳಲ್ಲಿ ಸಂಭವಿಸುವ ಸಾವುಗಳನ್ನು ಕೊರೊನಾ ಸಾವುಗಳು ಎಂದು ಪರಿಗಣಿಸಲಾಗುತ್ತದೆ.ಕೊರೊನಾಂದಾಗಿ, ಸಾವು ಆಸ್ಪತ್ರೆಯ ಒಳಗೆ ಅಥಾವ ಹೊರಗೆ ಎಲ್ಲೆ ಆದರೂ ಅದನ್ನು ಪರಿಗಣಿಸಲು ನಿರ್ಧರಿಸಿದೆ.

    ರೋಗಿ ಆಸ್ಪತ್ರೆ ಸೇರಿ 30 ದಿನಗಳ ಸುಧೀರ್ಘ ಚಿಕಿತ್ಸೆಯ ಬಳಿಕ ಸಾವನ್ನಪ್ಪಿದರೂ ಅದನ್ನು ಕೊರೊನಾ ಸಾವು ಎಂದು ಭಾವಿಸಲಾಗುವುದು ಎಂದು ಅಫಿಡೆವಿಟ್ ನಲ್ಲಿ ಹೇಳಿದೆ. ಕೋವಿಡ್-19 ಗೆ ಬಲಿಯಾದ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬ ಸದಸ್ಯರಿಗೆ 50,000 ಪರಿಹಾರವನ್ನು ಶಿಫಾರಸು ಮಾಡಿರುವುದಾಗಿ ಕೇಂದ್ರ ಸರ್ಕಾರವು ಈ ಹಿಂದೆ ಸುಪ್ರೀಂ ಕೋರ್ಟ್‍ಗೆ ತಿಳಿಸಿತ್ತು.  ಇದನ್ನೂ ಓದಿ: ಕೋವಿಡ್‍ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ವಿಳಂಬ- ಕೇಂದ್ರಕ್ಕೆ ಸುಪ್ರೀಂ ತರಾಟೆ

  • ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

    ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

    ನವದೆಹಲಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ರೂಪಾಯಿ ಪರಿಹಾರ ನೀಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(NDMA) ಶಿಫಾರಸು ಮಾಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಉತ್ತರ ನೀಡಿದೆ.

    ಕೋವಿಡ್-19ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್‍ಗೆ ಉತ್ತರಿಸಿರುವ ಕೇಂದ್ರ ಸರ್ಕಾರ, ಕೊರೊನಾದಿಂದಾಗಿ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಐಸಿಎಂಆರ್ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಕೋವಿಡ್-19ನಿಂದ ಮೃತಪಟ್ಟಿದ್ದಾರೆ ಎಂದು ಪ್ರಮಾಣೀಕರಿಸಿದರೆ ಪರಿಹಾರ ನೀಡಲು ಸರ್ಕಾರ ಸಿದ್ಧಗೊಂಡಿದೆ. ಅದಲ್ಲದೆ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ(ಎಸ್‍ಡಿಆರ್‍ಎಫ್)ನಿಂದ ರಾಜ್ಯ ಸರ್ಕಾರಗಳು ಪರಿಹಾರ ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕೋವಿಡ್‍ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ವಿಳಂಬ- ಕೇಂದ್ರಕ್ಕೆ ಸುಪ್ರೀಂ ತರಾಟೆ

    ಪರಿಹಾರ ನೀಡುವ ಬಗ್ಗೆ ಸೆಪ್ಟೆಂಬರ್ 11ರೊಳಗೆ ಅಫಿಡವಿಟ್ ಸಲ್ಲಿಸಬೇಕೆಂದು ಕೇಂದ್ರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಅದಲ್ಲದೆ ನೀವು ಮಾರ್ಗಸೂಚಿ ರೂಪಿಸುವುದರೊಳಗೆ ಮೂರನೇ ಅಲೆ ಕೂಡ ಬಂದು ಹೋಗಬಹುದೇನೋ ಎಂಬ ಅನುಮಾನವನ್ನೂ ನ್ಯಾಯಪೀಠ ವ್ಯಕ್ತಪಡಿಸಿತ್ತು. ಇದೀಗ ಈ ಬಗ್ಗೆ ಕೇಂದ್ರ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದೆ. ಭಾರತದಲ್ಲಿ ಈಗಾಗಲೇ 3 ಕೋಟಿಗೂ ಅಧಿಕ ಮಂದಿಗೆ ಕೊರೊನಾ ಬಂದಿದ್ದು, 4 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಡಿಕೆಶಿಗಾಗಿ ಒಕ್ಕಲಿಗ ಕಾಂಗ್ರೆಸ್ ನಾಯಕರ ಸಭೆ – ಶಿವಕುಮಾರ್ ಟ್ರೆಂಡ್ ಕ್ರಿಯೇಟ್‍ಗೆ ರಣತಂತ್ರ