Tag: Coronavirus

  • ಇಂದು 22 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆ

    ಇಂದು 22 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆ

    – ಬೆಳಗಾವಿಯ 14 ಜನರಿಗೆ ಸೋಂಕು
    – ದಾವಣಗೆರೆಯಲ್ಲಿ ಮತ್ತೊಬ್ಬರಿಗೆ ಕೊರೊನಾ

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಅದೇ. ಇಂದು 22 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆ ಕಂಡಿದೆ.

    ಬೆಳಗಾವಿಯಲ್ಲಿ ಇಂದು ಒಟ್ಟು 14 ಜನರಿಗೆ ಕೊರೊನಾ ಪತ್ತೆಯಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಹಾಟ್‍ಸ್ಪಾಟ್ ತಾಲೂಕು ಹಿರೇಬಾಗೇವಾಡಿಯಲ್ಲೇ 12 ಮಂದಿಗೆ ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಉಳಿದಂತೆ ಬೆಂಗಳೂರಿನಲ್ಲಿ ಮೂವರಿಗೆ, ವಿಜಯಪುರದಲ್ಲಿ ಇಬ್ಬರಿಗೆ, ತುಮಕೂರು, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ತಗುಲಿದೆ.

    ದಾವಣಗೆರೆಯಲ್ಲಿ ನಿನ್ನೆಯಷ್ಟೇ ಸ್ಟಾಪ್ ನರ್ಸ್‌ಗೆ ಸೋಂಕು ಪತ್ತೆಯಾಗಿತ್ತು. ಇಂದು ದಾವಣಗೆರೆಯ ಜಾಲಿನಗರದ ನಿವಾಸಿ 68 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ವೃದ್ಧ ಅನಾರೋಗ್ಯದಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಏಪ್ರಿಲ್ 27ರಂದು ದಾಖಲಾಗಿದ್ದರು. ಮುಂಜಾಗ್ರತ ಕ್ರಮ ಕೈಗೊಂಡಿದ್ದ ವೈದ್ಯರು ಅವರನ್ನು ಪ್ರತ್ಯೇಕವಾಗಿರಿಸಿದ ಚಿಕಿತ್ಸೆ ಕೊಡುತ್ತಿದ್ದರು. ಕೊರೊನಾ ಶಂಕೆ ವ್ಯಕ್ತವಾಗಿದ್ದರಿಂದ ಥ್ರೋಟ್ ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ರಿಪೋರ್ಟ್ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ನಿನ್ನೆ ದಾವಣಗೆರೆಯಲ್ಲಿ ಸೋಂಕು ಪತ್ತೆಯಾದ ಸ್ಟಾಪ್ ನರ್ಸ್‍ಗೂ ಈಗ ಪತ್ತೆಯಾದ ವೃದ್ಧನಿಗೂ ಯಾವುದೇ ಸಂಬಂಧವಿಲ್ಲ.

    ವೃದ್ಧನ ಕುಟುಂಬದ ಒಂದೂವರೆ ವರ್ಷದ ಮಗು, 3 ವರ್ಷದ ಮಗು ಸೇರಿ ಒಟ್ಟು ಒಂಬತ್ತು ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಎಲ್ಲರ ರಕ್ತ ಹಾಗೂ ಥ್ರೋಟ್ ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್‍ಗೆ ಕಳುಹಿಸಲಾಗಿದೆ. ಜೊತೆಗೆ ಜಾಲಿನಗರ ಸೀಲ್‍ಡೌನ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

    ಸೋಂಕಿತರ ವಿವರ:
    1. ರೋಗಿ-536: ದಕ್ಷಿಣ ಕನ್ನಡ ಜಿಲ್ಲೆಯ 58 ವರ್ಷದ ಮಹಿಳೆ. ರೋಗಿ-501ರ ಸಂಪರ್ಕದಲ್ಲಿದ್ದರು.
    2. ರೋಗಿ-537: ವಿಜಯಪುರದ 62 ವರ್ಷದ ವೃದ್ಧ. ರೋಗಿ-221ರ ಸಂಪರ್ಕ ಹೊಂದಿದ್ದರು.
    3. ರೋಗಿ-538: ವಿಜಯಪುರದ 33 ವರ್ಷದ ಮಹಿಳೆ. ರೋಗಿ-221ರ ಸಂಪರ್ಕದಲ್ಲಿದ್ದರು.


    4. ರೋಗಿ-539: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 24 ವರ್ಷದ ಮಹಿಳೆ. ರೋಗಿ-469, 483 ಮತ್ತು 484ರ ದ್ವಿತೀಯ ಸಂಪರ್ಕದಲ್ಲಿದ್ದರು.
    5. ರೋಗಿ-540: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 27 ವರ್ಷದ ಪುರುಷ. ರೋಗಿ-483 ದ್ವಿತೀಯ ಸಂಪರ್ಕ ಹೊಂದಿದ್ದರು.
    6. ರೋಗಿ-541: ಬೆಳಗಾವಿ ಜಿಲ್ಲೆ ಹುಕ್ಕೇರಿಯ 09 ವರ್ಷದ ಬಾಲಕ. ರೋಗಿ-293ರ ಸಂಪರ್ಕದಲ್ಲಿ ಇದ್ದರು.
    7. ರೋಗಿ-542: ಬೆಳಗಾವಿ ಜಿಲ್ಲೆ ಹುಕ್ಕೇರಿಯ 75 ವೃದ್ಧೆ. ರೋಗಿ-293ರ ಸಂಪರ್ಕದಲ್ಲಿ ಇದ್ದರು.
    8. ರೋಗಿ-543: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 24 ವರ್ಷದ ಮಹಿಳೆ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು.

    9. ರೋಗಿ-543: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 18 ವರ್ಷದ ಯುವಕ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು.
    10. ರೋಗಿ-545: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 48 ವರ್ಷದ ಮಹಿಳೆ. ರೋಗಿ-494ರ ದ್ವಿತೀಯ ಸಂಪರ್ಕದಲ್ಲಿದ್ದರು.
    11. ರೋಗಿ-546: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 50 ವರ್ಷದ ಪುರುಷ. ರೋಗಿ-483ರ ದ್ವಿತೀಯ ಸಂಪರ್ಕ ಹೊಂದಿದ್ದರು.
    12. ರೋಗಿ-547: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 27 ವರ್ಷದ ಮಹಿಳೆ. ರೋಗಿ-496 ಮತ್ತು 494ರ ದ್ವಿತೀಯ ಸಂಪರ್ಕದಲ್ಲಿದ್ದರು.
    13. ರೋಗಿ-548: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 43 ವರ್ಷದ ಪುರುಷ. ರೋಗಿ-484ರ ದ್ವಿತೀಯ ಸಂಪರ್ಕ ಹೊಂದಿದ್ದರು.
    14. ರೋಗಿ-549: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 16 ವರ್ಷದ ಯುವಕ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು.

    15. ರೋಗಿ-550: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 36 ವರ್ಷದ ಮಹಿಳೆ. ರೋಗಿ-496ರ ದ್ವಿತೀಯ ಸಂಪರ್ಕದಲ್ಲಿದ್ದರು.
    16. ರೋಗಿ-551: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 08 ವರ್ಷದ ಬಾಲಕಿ. ರೋಗಿ-293ರ ಸಂಪರ್ಕದಲ್ಲಿದ್ದರು.
    17. ರೋಗಿ-552: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 36 ವರ್ಷದ ಪುರುಷ. ರೋಗಿ-496ರ ಸಂಪರ್ಕದಲ್ಲಿದ್ದರು.
    18. ರೋಗಿ-553: ತುಮಕೂರಿನ 65 ವರ್ಷದ ವೃದ್ಧೆ. ರೋಗಿ-535ರ ಸಂಪರ್ಕದಲ್ಲಿದ್ದರು.
    19. ರೋಗಿ-554: ಬೆಂಗಳೂರಿನ 20 ವರ್ಷದ ಯುವಕ. ಕಂಟೈನ್‍ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು.
    20. ರೋಗಿ-555: ಬೆಂಗಳೂರಿನ 28 ವರ್ಷದ ಪುರುಷ. ಕಂಟೈನ್‍ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು.
    21. ರೋಗಿ-556: ದಾವಣಗೆರೆಯ 69 ವರ್ಷದ ವೃದ್ಧ. ಸಂಪರ್ಕ ಪತ್ತೆಯಾಗಿಲ್ಲ.
    22. ರೋಗಿ-557: ಬೆಂಗಳೂರಿನ 63 ವರ್ಷಸ ವೃದ್ಧ. ಸಂಪರ್ಕ ಪತ್ತೆಯಾಗಿಲ್ಲ.

  • ಬೆಂಗ್ಳೂರಿನಲ್ಲಿ ಕಡಿಮೆಯಾಗ್ತಿದೆ ಡಬಲ್ ಟ್ರಬಲ್

    ಬೆಂಗ್ಳೂರಿನಲ್ಲಿ ಕಡಿಮೆಯಾಗ್ತಿದೆ ಡಬಲ್ ಟ್ರಬಲ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೊರೊನಾ ಹಾರ್ಟ್‍ಸ್ಪಾಟ್ ಈಗ ಸುಧಾರಿಸುತ್ತಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ. ಪಾದರಾಯನಪುರ ಹಾಗೂ ಹೊಂಗಸಂದ್ರ ಫುಲ್ ಕ್ಲೀನ್ ಆಗುತ್ತಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ಈಗ 131ಕ್ಕೆ ಏರಿದೆ. ಸೋಂಕಿತರಲ್ಲಿ ಹೊಂಗಸಂದ್ರ, ಪಾದರಾಯನಪುರದ ನಿವಾಸಿಗಳೇ ಹೆಚ್ಚಾಗಿದ್ದಾರೆ. ಹೊಂಗಸಂದ್ರ 29 ಮತ್ತು ಪಾದರಾಯನಪುರದಲ್ಲಿ ಸುಮಾರು 32 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪಾದರಾಯನಪುರ ಮತ್ತು ಹೊಂಗಸಂದ್ರಗಳನ್ನು ರೆಡ್‍ಝೋನ್, ಹಾಟ್‍ಸ್ಪಾಟ್, ಕಂಟೈನ್‍ಮೆಂಟ್ ಎಂದು ಹೆಸರಿಸಲಾಗಿತ್ತು.

    ದಿನಕ್ಕೆ ಹತ್ತಾರು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರದ ವಿಶೇಷ ಕಾಳಜಿ, ಬಿಬಿಎಂಪಿ ಹಾಗೂ ಹೆಲ್ತ್ ವಾರಿಯರ್ಸ್ ಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಹೊಂಗಸಂದ್ರ ಮತ್ತು ಪಾದರಾಯನಪುರದಲ್ಲಿ ಕೊರೊನಾ ಕಂಟ್ರೋಲ್‍ಗೆ ಬರುತ್ತಿದೆ. ಕೊರೊನಾ ಕಂಟ್ರೋಲ್‍ಗೆ ಬಂದಿದೆ ಅನ್ನೋದಕ್ಕೆ ಈ ಎರಡೂ ಏರಿಯಾಗಳಲ್ಲಿ ಇತ್ತೀಚಿನ ವರದಿ ನೋಡಿದರೆ ತಿಳಿದು ಬರುತ್ತಿದೆ.

    ಪಾದರಾಯನಪುರ ಈಗ ಸೇಫ್ ಆಗುತ್ತಿದೆ. ಬುಧವಾರ 48 ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಎಲ್ಲಾ ಸ್ಯಾಂಪಲ್‍ಗಳ ರಿಪೋರ್ಟ್ ನೆಗೆಟಿವ್ ಬಂದಿದೆ. ಮತ್ತೆ 19 ಜನರ ಪರೀಕ್ಷೆ ಮಾಡಲಾಗಿದ್ದು, ರಿಪೋರ್ಟ್ ಬರಬೇಕಿದೆ.

    ಇನ್ನೂ ಹೊಂಗಸಂದ್ರ ನಿವಾಸಿಗಳು ನಿಟ್ಟುಸಿರು ಬಿಡುತ್ತಿದ್ದಾರೆ. 78 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲಾ ರಿಪೋರ್ಟ್ ನೆಗೆಟಿವ್ ಬಂದಿದೆ. ಭಾನುವಾರ 49, ಸೋಮವಾರ 73, ಬುಧವಾರ 72 ಒಟ್ಟು ಮೂರು ದಿನಗಳಲ್ಲಿ 194 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲಾ ರಿಪೋರ್ಟ್ ನೆಗೆಟಿವ್ ಬಂದಿದೆ.

    ಬಿಹಾರಿ ಕಾರ್ಮಿಕರನ್ನು ಬಿಟ್ಟು ಸ್ಥಳೀಯ ನಿವಾಸಿಗಳಲ್ಲಿ ಯಾರಿಗೂ ಸೋಂಕು ಪತ್ತೆಯಾಗಿಲ್ಲ. ಹೊಂಗಸಂದ್ರ ವಿದ್ಯಾಜ್ಯೋತಿ ನಗರದ ಯಾವುದೇ ರಿಪೋರ್ಟ್ ಬಾಕಿ ಇಲ್ಲ. ಹೀಗಾಗಿ ಬೆಂಗಳೂರಿಗೆ ತಲೆನೋವಾಗಿದ್ದ ಹೊಂಗಸಂದ್ರ, ಪಾದರಾಯನಪುರ ಏರಿಯಾಗಳು ಕೊರೊನಾ ಮುಕ್ತವಾಗುತ್ತಿದ್ದು, ಶೀಘ್ರದಲ್ಲೇ ಗ್ರೀನ್ ಝೋನ್‍ ಆಗುವ ಸಾಧ್ಯತೆ ಇದೆ.

  • ಅನಧಿಕೃತ ಪಾಸ್ ಬಳಸಿ ಪ್ರಯಾಣಿಸಲು ಯತ್ನಿಸಿ ಸಿಕ್ಕಿಬಿದ್ದ

    ಅನಧಿಕೃತ ಪಾಸ್ ಬಳಸಿ ಪ್ರಯಾಣಿಸಲು ಯತ್ನಿಸಿ ಸಿಕ್ಕಿಬಿದ್ದ

    – ಕಾರು, ಮೊಬೈಲ್ ವಶಕ್ಕೆ ಪಡೆದ ಪೊಲೀಸ್

    ಮೈಸೂರು: ಅನಧಿಕೃತ ವೈದ್ಯಕೀಯ ಪಾಸ್ ಬಳಸಿ ತಮಿಳುನಾಡಿಗೆ ಪ್ರಯಾಣಿಸಲು ಯತ್ನಿಸಿ ಚಾಲಕನೊಬ್ಬ ಮೈಸೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ನಿರ್ಮಲ್ ಕುಮಾರ್ ಪೊಲೀಸರ ಕೈಗೆ ಸಿಕ್ಕಿಬಿದ್ದ ಚಾಲಕ. ನಿರ್ಮಲ್ ಕುಮಾರ್ ಅನಧಿಕೃತ ಪಾಸ್ ಅಂಟಿಸಿಕೊಂಡು ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ. ಈ ವೇಳೆ ನಗರದ ಎನ್.ಆರ್ ಠಾಣೆಯ ಪೊಲೀಸರು ಆತನನ್ನು ತಡೆದು ವಿಚಾರಣೆ ಮಾಡಿದ್ದಾರೆ. ನನ್ನ ಸ್ನೇಹಿತ ನನಗೆ ವ್ಯಾಟ್ಸಪ್‍ನಲ್ಲಿ ಕಳುಹಿಸಿದ್ದ ಪಾಸ್ ಅಂಟಿಸಿಕೊಂಡಿದ್ದೇನೆ ಎಂದು ಚಾಲಕ ಹೇಳಿದ್ದ.

    ಪಾಸ್ ಪರಿಶೀಲನೆ ಮಾಡಿದಾಗ ಅನಧಿಕೃತ ಪಾಸ್ ಎಂಬುದು ಬೆಳಕಿಗೆ ಬಂದಿದೆ. ಪಾಸ್ ಅಂಟಿಸಿದ್ದ ಟೊಯೋಟಾ ಇಟಿಯೋಸ್ ಕಾರು ಹಾಗೂ ಪಾಸ್ ಡೌನ್‍ಲೋಡ್ ಮಾಡಿದ್ದ ವಿವೋ ಮೊಬೈಲ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ಯ ಪ್ರಿಯರಿಗೆ ಗುಡ್‍ನ್ಯೂಸ್!

    ಮದ್ಯ ಪ್ರಿಯರಿಗೆ ಗುಡ್‍ನ್ಯೂಸ್!

    ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ತಿಂಗಳಿನಿಂದ ಎಣ್ಣೆ ಸಿಗದೆ ಮದ್ಯ ಪ್ರಿಯರು ಕಂಗಾಲಾಗಿದ್ದಾರೆ. ಅವರಿಗೆ ಈಗ ಸರ್ಕಾರ ಗುಡ್‍ನ್ಯೂಸ್ ಕೊಡಲು ಮುಂದಾಗಿದೆ ಎಂಬ ಮಾಹಿತಿ ಲಭಿಸಿದೆ.

    ಒಂದುಕಡೆ ಮದ್ಯ ವ್ಯಾಪಾರಿಗಳು, ಇನ್ನೊಂದುಕಡೆ ಎಣ್ಣೆ ಪ್ರಿಯರ ಒತ್ತಾಯವು ಫಲ ನೀಡುತ್ತಾ? ಮತ್ತೆ ಮದ್ಯ ಮಾರಾಟ ಆರಂಭವಾಗುತ್ತಾ? ಇಷ್ಟು ದಿನ ಲಾಕ್‍ಡೌನ್ ಮುಗಿಯುವವರೆಗೆ ಓಪನ್ ಮಾಡುವ ಪ್ರಶ್ನೆಯೇ ಇಲ್ಲಾ ಎನ್ನುತ್ತಿದ್ದ ಸರ್ಕಾರ ಈಗ ಮದ್ಯದಂಗಡಿ ತೆರೆಯಲು ಮುಂದಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ಸಂಪೂರ್ಣ ಲಾಕ್‍ಡೌನ್ ಸಡಲಿಕೆಗೆ ಮುನ್ನವೇ ಮದ್ಯದ ವ್ಯಾಪಾರ ಶುರು ಮಾಡಬೇಕಾ, ಬೇಡವಾ ಎಂಬ ತೀರ್ಮಾನ ಇಂದಿನ ಸಚಿವ ಸಂಪುಟದಲ್ಲಿ ಆಗಲಿದೆ. ಇಡೀ ರಾಜ್ಯದ ಲಾಕ್‍ಡೌನ್ ಸಡಲಿಕೆ ಆಗದಿದ್ದರೂ ಗ್ರೀನ್ ಹಾಗೂ ಯೆಲ್ಲೋ ಝೋನ್‍ಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಜೊತೆಗೆ ಮದ್ಯ ಮಾರಾಟ ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಪರ-ವಿರೋಧ ವಾದ ಏನೇ ಇದ್ದರೂ ಆರ್ಥಿಕ ಲೆಕ್ಕಾಚಾರದಿಂದ ಮದ್ಯ ವ್ಯಾಪಾರಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ಇದೆ. ತಾಲೂಕು ಆಧಾರದ ಮೇಲೆ ಝೋನ್‍ಗಳನ್ನು ವಿಭಾಗಿಸಲು ಮುಂದಾದ ರಾಜ್ಯ ಸರ್ಕಾರ ಗ್ರೀನ್ ಹಾಗೂ ಯೆಲ್ಲೋ ಝೋನ್‍ಗಳಲ್ಲಿ ಮದ್ಯ ವ್ಯಾಪಾರಕ್ಕೆ ಅವಕಾಶ ಕೊಡುವ ಬಗ್ಗೆಯು ಚಿಂತನೆ  ಮಾಡಿದೆ ಎನ್ನಲಾಗುತ್ತದೆ.

    ಲಾಕ್‍ಡೌನ್‍ನಿಂದಾಗಿ ಅಬಕಾರಿ ಇಲಾಖೆ ಒಂದರಿಂದಲೇ ಸರ್ಕಾರ 2 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ. ನಷ್ಟದ ಪ್ರಮಾಣ ತಗ್ಗಿಸಲು ಗ್ರೀನ್ ಹಾಗೂ ಯೆಲ್ಲೋ ಝೋನ್‍ನಲ್ಲಿ ಮದ್ಯ ವ್ಯಾಪಾರ ಆರಂಭಿಸುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ಹೇಳಲಾಗುತ್ತಿದೆ.

    ಒಂದು ವೇಳೆ ರೆಡ್ ಝೋನ್‍ನ ಜನರು ಮದ್ಯಕ್ಕಾಗಿ ಗ್ರೀನ್ ಹಾಗೂ ಯೆಲ್ಲೋ ಝೋನ್‍ಗಳಿಗೆ ಬಂದರೆ ಅಪಾಯ ಎಂಬ ಆತಂಕವು ಸರ್ಕಾರಕ್ಕಿದೆ. ಅದರ ಬಗ್ಗೆ ಯೋಚಿಸಿ ಮದ್ಯ ಮಾರಾಟಕ್ಕೆ ಅವಕಾಶ ಕೊಡದಿದ್ದರೆ ಸರ್ಕಾರದ ಆದಾಯದ ಮೂಲ ಕಡಿಮೆ ಆಗಲಿದೆ. ನಷ್ಟದ ಪ್ರಮಾಣವು ಹೆಚ್ಚಲಿದೆ. ಆದ್ದರಿಂದ ರೆಡ್ ಝೋನ್ ಹೊರತುಪಡಿಸಿ ಕೇವಲ ಗ್ರೀನ್ ಹಾಗೂ ಯೆಲ್ಲೋ ಝೋನ್‍ನಲ್ಲಿ ಅಷ್ಟೇ ಮದ್ಯದಂಗಡಿಗೆ ಅನುಮತಿ ಕೊಡುವುದು ಹೇಗೆ ಎಂಬ ಗೊಂದಲದಲ್ಲಿ ಸರ್ಕಾರವು ಇದೆ ಎನ್ನಲಾಗುತ್ತಿದೆ.

    ಇದೆಲ್ಲಾ ಆಗಬೇಕಾದರೆ ಮೊದಲು ಕೇಂದ್ರ ಸರ್ಕಾರ ಒಪ್ಪಬೇಕು. ಲಾಕ್‍ಡೌನ್‍ಗೆ ದೇಶಾದ್ಯಂತ ಒಂದೇ ನಿಯಮದ ಬದಲು ರಾಜ್ಯವಾರು ನಿರ್ಧಾರಕ್ಕೆ ಸಮ್ಮತಿಸಬೇಕು. ಕೇಂದ್ರದ ನಿರ್ಧಾರದ ಮೇಲೆ ರಾಜ್ಯದ ನಿರ್ಧಾರ ತೀರ್ಮಾನವಾಗಲಿದೆ. ಆದರೆ ಹಣಕಾಸಿನ ದೃಷ್ಟಿಯಿಂದ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರೆ ಒಳಿತು ಎಂಬ ಲೆಕ್ಕಾಚಾರವಂತು ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿದೆ.

  • ರೆಡ್‍ಝೋನ್ ಪಟ್ಟಿಯಲ್ಲಿ 14 ಜಿಲ್ಲೆಗಳ 29 ತಾಲೂಕುಗಳು

    ರೆಡ್‍ಝೋನ್ ಪಟ್ಟಿಯಲ್ಲಿ 14 ಜಿಲ್ಲೆಗಳ 29 ತಾಲೂಕುಗಳು

    ಬೆಂಗಳೂರು: ಕೊರೊನಾ ಪೀಡಿತ ಭಾಗಗಳಿಗೆ ಹೊಸ ಮಾನದಂಡವನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ವಲಯಗಳ ವಿಂಗಡಣೆ ಮಾಡಲಾಗಿದೆ. ಹೊಸ ಪಟ್ಟಿಯಲ್ಲಿ ರೆಡ್ ಝೋನ್‍ಗಳ ಸಂಖ್ಯೆ 8 ರಿಂದ 14ಕ್ಕೆ ಏರಿಕೆಯಾಗಿದೆ.

    ರಾಜ್ಯದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳು ರಾಜ್ಯದ ರೆಡ್ ಝೋನ್‍ಗಳಾಗಿವೆ. ಒಟ್ಟಾರೆ ರಾಜ್ಯದ 14 ಜಿಲ್ಲೆಗಳ 29 ತಾಲೂಕುಗಳು ರೆಡ್‍ಝೋನ್‍ನಲ್ಲಿದೆ.

    ಕೊರೊನಾ ಸೋಂಕಿನ ತೀವ್ರತೆ ಆಧಾರದ ಮೇಲೆ ರಾಜ್ಯದಲ್ಲಿ ಕೆಂಪು ವಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕೊರೊನಾ ವಲಯಗಳ ವಿಂಗಡಣೆಗೆ ರಾಜ್ಯ ಸರ್ಕಾರ ಹೊಸ ಮಾನದಂಡ ಬಳಸಿದೆ. ನಾಲ್ಕು ವಲಯಗಳ ಬದಲು ಮತ್ತೆ ಮೂರು ವಲಯಗಳ ಸೂತ್ರಕ್ಕೆ ಜೋತುಬಿದ್ದಿದೆ. ಹಳದಿ ವಲಯವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. 28 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕು ಕಾಣಿಸದಿದ್ದರೆ ಆ ತಾಲೂಕನ್ನು ಗ್ರೀನ್ ಝೋನ್ ಎಂದು ಪರಿಗಣಿಸಲಾಗುತ್ತದೆ. 14 ದಿನದಲ್ಲಿ ಒಂದೇ ಒಂದು ಹೊಸ ಕೇಸ್ ಕಂಡು ಬರದೇ ಇದ್ದರೆ ಅದನ್ನು ಆರೆಂಜ್ ಝೋನ್ ಎಂದು ಪರಿಗಣಿಸಲಾಗುತ್ತದೆ. 14 ದಿನಗಳ ಅವಧಿಯಲ್ಲಿ ಒಂದು ಕೇಸ್ ಕಂಡು ಬಂದರೂ ಅದನ್ನು ರೆಡ್ ಝೋನ್ ಎಂದು ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಅನ್ವಯ ಇದೀಗ 14 ಜಿಲ್ಲೆಗಳ 29 ತಾಲೂಕುಗಳು ರೆಡ್‍ಝೋನ್ ವ್ಯಾಪ್ತಿಗೆ ಬರುತ್ತವೆ. ಈ ಪಟ್ಟಿಯಲ್ಲಿ ನಿನ್ನೆ ತಾಲೂಕುಗಳ ಸಂಖ್ಯೆ 14 ಇತ್ತು.

    ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ, ಗದಗ ತಾಲೂಕು, ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಿರಗುಪ್ಪ, ಬಳ್ಳಾರಿ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ ತಾಲೂಕು, ತುಮಕೂರು ತಾಲೂಕು, ಮೈಸೂರು ತಾಲೂಕು, ನಂಜನಗೂಡು, ಮಂಡ್ಯ ಜಿಲ್ಲೆಯ ಮಳವಳ್ಳಿ, ನಾಗಮಂಗಲ, ಮಂಡ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ ತಾಲೂಕುಗಳು, ಬೀದರ್ ತಾಲೂಕು, ಕಲಬುರಗಿ ತಾಲೂಕು, ಶಹಾಬಾದ್ ತಾಲೂಕು, ವಿಜಯಪುರ ತಾಲೂಕು, ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ಬಾಗಲಕೋಟೆ ತಾಲೂಕು, ಬೆಳಗಾವಿ ಜಿಲ್ಲೆಯ ರಾಯಭಾಗ, ಹುಕ್ಕೇರಿ, ಬೆಳಗಾವಿ ತಾಲೂಕು, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಪ್ರದೇಶಗಳು ಪಟ್ಟಿಯಲ್ಲಿದೆ.

    ಉಳಿದಂತೆ ಕೊರೊನಾ ಸೋಂಕಿಲ್ಲದ 14 ಜಿಲ್ಲೆಗಳ ಪೈಕಿ ರಾಮನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಇಂದಿನಿಂದ ಲಾಕ್‍ಡೌನ್ ಸಡಿಲಿಕೆ ಆಗಿದೆ. ಬೆಳಗ್ಗೆಯಿಂದ್ಲೇ ವ್ಯಾಪಾರ ವಹಿವಾಟು, ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳು ಆರಂಭವಾಗಿವೆ. ರಾಯಚೂರು, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ಶಿವಮೊಗ್ಗ, ಯಾದಗಿರಿಯಲ್ಲಿ ಅಂಗಡಿ ಮುಂಗಟ್ಟು ಓಪನ್ ಆಗಿವೆ. ಪೊಲೀಸರು ಸಾಮಾಜಿಕ ಅಂತರ ಪಾಲಿಸುವಂತೆ, ಮಾಸ್ಕ್ ಧರಿಸುವಂತೆ ಎಲ್ಲಾ ಕಡೆ ಮೈಕ್‍ಗಳ ಮೂಲಕ ಜಾಗೃತಿ ಮೂಡಿವ ಕಾರ್ಯ ಮಾಡಿದರು.

  • ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

    ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

    ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸರ್ಕಾರಿ ನೌಕರರ ಸಂಬಳ ಕಡಿತ ಮಾಡುವುದು, ತಡೆ ಹಿಡಿಯುವ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಇದೆಲ್ಲದಕ್ಕೂ ಇದೀಗ ತೆರೆ ಬಿದ್ದಿದ್ದು, ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೌಕರರ ಪರ ಯಡಿಯೂರಪ್ಪ ಸರ್ಕಾರ ನಿಂತಿದೆ.

    ಯಾವುದೇ ಕಡಿತ ಮಾಡದೇ ಏಪ್ರಿಲ್ ತಿಂಗಳ ಸಂಬಳ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಆರ್ಥಿಕ ಹೊರೆ ಆದರೂ ಪರವಾಗಿಲ್ಲ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ ಏಪ್ರಿಲ್ ಸಂಬಳ ಹಾಕುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಪ್ರಕ್ರಿಯೆ ಪ್ರಾರಂಭಿಸಿದೆ. ಸಂಬಳ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

    ಕೆಲ ದಿನಗಳ ಹಿಂದೆ ಸ್ವತಃ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರು ಈ ತಿಂಗಳು ಸರ್ಕಾರಿ ನೌಕರರಿಗೆ ಸಂಬಳ ನೀಡುವುದೇ ಕಷ್ಟಕರವಾಗಿದೆ. ನೌಕರರು ಯಾವುದಕ್ಕೂ ಸಿದ್ಧರಾಗಿರಬೇಕು ಎಂಬ ಹೇಳಿಕೆ ನೀಡಿದ್ದರು. ಆದರೆ ಇದೀಗ ಸರ್ಕಾರ ಏಪ್ರಿಲ್ ತಿಂಗಳ ಸಂಬಳಕ್ಕೆ ಅನುಮತಿ ನೀಡಿದ್ದು, ಈ ಮೂಲಕ ಸರ್ಕಾರಿ ನೌಕರರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಲಾಕ್‍ಡೌನ್ ಮೀರಿ ಸಾಮೂಹಿಕ ಪ್ರಾರ್ಥನೆ- 15 ಜನರ ಬಂಧನ

    ಲಾಕ್‍ಡೌನ್ ಮೀರಿ ಸಾಮೂಹಿಕ ಪ್ರಾರ್ಥನೆ- 15 ಜನರ ಬಂಧನ

    ಕಲಬುರಗಿ: ಲಾಕ್‍ಡೌನ್ ನಿಯಮ ಮೀರಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದವರಿಗೆ ಕಲಬುರಗಿಯ ಪೊಲೀಸರು ಬಿಸಿಮುಟ್ಟಿಸಿದ್ದಾರೆ.

    ಸೇಡಂ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮಸೀದಿಯಲ್ಲಿ ಸುಮಾರು 15 ಜನರು ನಮಾಜ್ ಮಾಡುತ್ತಿದ್ದರು. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಲಾಠಿ ರುಚಿ ತೋರಿಸಿ, ಎಲ್ಲ 15 ಮಂದಿಯನ್ನೂ ಬಂಧಿಸಿದ್ದಾರೆ.

    ಈ ಸಂಬಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮಂಗಳವಾರದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 44 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 7 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 32 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೂ ಐವರು ಕೊರೊನಾಗೆ ಬಲಿಯಾಗಿದ್ದಾರೆ. ಹೀಗಿದ್ದರೂ ಜಿಲ್ಲೆಯ ಜನರು ಎಚ್ಚೆತ್ತುಕೊಳ್ಳದೇ ಇರುವುದು ಬೇಸರದ ಸಂಗತಿಯಾಗಿದೆ.

    ಕಲಬುರಗಿಯ ಕಮರ್ ಕಾಲೋನಿ ನಿವಾಸಿ ರೋಗಿ-425 ಮಹಿಳೆಯ ನಾಲ್ಕು ತಿಂಗಳ ಹೆಣ್ಣು ಮಗುವಿಗೆ ಈ ಮೊದಲು ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಮಗುವಿನಿಂದ ತಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೂ ಕೊರೊನಾ ಪಾಸಿಟಿವ್ ಬಂದಿತ್ತು. ಮಹಿಳೆಯಿಂದ ಕಲಬುರಗಿಯ ಆರು ಜನರಿಗೆ ಸೋಂಕು ಹರಡಿರುವುದು ಮಂಗಳವಾರ ದೃಢಪಟ್ಟಿದ್ದು, ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

  • ಕೋವಿಡ್ ಯೋಧರ ಓಡಾಟಕ್ಕೆ ‘ಬೌನ್ಸ್’ ಬೈಕ್

    ಕೋವಿಡ್ ಯೋಧರ ಓಡಾಟಕ್ಕೆ ‘ಬೌನ್ಸ್’ ಬೈಕ್

    – ಯಾರುಬೇಕಾದರೂ ಸಹಾಯಕ್ಕೆ ನಿಲ್ಲಬಹುದು

    ಬೆಂಗಳೂರು: ಕೋವಿಡ್-19 ಯೋಧರ ಓಡಾಟಕ್ಕೆ ನೆರವಾಗಲು ‘ಬೌನ್ಸ್’ ಬಾಡಿಗೆ ಬೈಕ್‍ಗಳ ಸಂಸ್ಥೆ ಮುಂದಾಗಿದ್ದು, ಸ್ಕೂಟರ್ ಹೀರೋ ಸೇವೆಯನ್ನು ಆರಂಭಿಸಿದೆ.

    ಕೊರೊನಾ ವಾರಿಯರ್ಸ್‌ಗಳಿಗೆ ಸಹಾಯ ಮಾಡಲು ಇಚ್ಛಿಸುವವರು ಮುಂದೆ ಬರಬಹುದು ಎಂದು ಬೌನ್ಸ್ ಸಂಸ್ಥೆ ಕೇಳಿಕೊಂಡಿದೆ. ಈ ನಿಟ್ಟಿನಲ್ಲಿ ಯಾರು ಬೇಕಾದರೂ scooterhero.bounceshare.com ನಲ್ಲಿ ಸೈನ್ ಅಪ್ ಆಗಿ ತಮ್ಮ ದ್ವಿಚಕ್ರ ವಾಹನಗಳನ್ನು ಕೋವಿಡ್-19   ಬಳಕೆಗೆ ಒದಗಿಸಬಹುದು.

    ಜನ ತಮ್ಮ ಬೈಕ್, ಸ್ಕೂಟರ್‌ಗಳನ್ನು ‘ಸ್ಕೂಟರ್ ಹೀರೋ’ ಪಟ್ಟಿಗೆ ಸೇರಿಸಿ, ಹಂಚಿಕೊಳ್ಳುವ ಅವಕಾಶವನ್ನು ಬೌನ್ಸ್ ಒದಗಿಸಿದೆ. ಈ ಪಟ್ಟಿಗೆ ಸೇರಿಸುವ ಪ್ರತಿಯೊಬ್ಬರು ತಮ್ಮ ಬೈಕನ್ನು ಉಚಿತವಾಗಿ ಬಳಕೆಗೆ ಕೊಡಬಹುದು. ಇಲ್ಲವೆ ದಿನಕ್ಕೆ 80 ರೂ. ಶುಲ್ಕ ವಿಧಿಸುವ ಆಯ್ಕೆಯನ್ನು ಹೊಂದಬಹುದಾಗಿದೆ. ಇದರಿಂದ ಆರ್ಥಿಕವಾಗಿ ಕುಗ್ಗಿರುವ ಸಾವಿರಾರು ಮಂದಿಗೆ, ಸುಮ್ಮನೆ ನಿಂತಿರುವ ತಮ್ಮ ವಾಹನದಿಂದ ಸ್ವಲ್ಪ ಹಣಗಳಿಸಲು ಸಹಾಯವಾಗಲಿದೆ.

    ಈ ಮೂಲಕ ಕೋವಿಡ್-19 ಯೋಧರಿಗೂ ಓಡಾಡಲು ಸಹಾಯವಾಗಬಹುದು ಎಂದು ಕಂಪನಿ ಕಂಪನಿ ಅಭಿಪ್ರಾಯ ವ್ಯಕ್ತಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 99724 17454 ನಂಬರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದೆ.

  • 55 ವರ್ಷ ಮೇಲ್ಪಟ್ಟ ಪೊಲೀಸ್ರನ್ನ ಕೋವಿಡ್ ಡ್ಯೂಟಿಗೆ ಹಾಕುವಂತಿಲ್ಲ

    55 ವರ್ಷ ಮೇಲ್ಪಟ್ಟ ಪೊಲೀಸ್ರನ್ನ ಕೋವಿಡ್ ಡ್ಯೂಟಿಗೆ ಹಾಕುವಂತಿಲ್ಲ

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಹರಡದಂತೆ ತಡೆಯಲು ಪೊಲೀಸರು ಶ್ರಮಿಸುತ್ತಿದ್ದಾರೆ. ಇದೀಗ ಡಿಜಿ ಅಂಡ್ ಐಜಿಪಿ ಪ್ರವೀಣ್ ಸೂದ್ ಅವರು, 55 ವರ್ಷ ಮೇಲ್ಪಟ್ಟ ಪೊಲೀಸರನ್ನ ಕೋವಿಡ್ ಡ್ಯೂಟಿಗೆ ಹಾಕುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

    ಮಧುಮೇಹ, ಬಿಪಿ, ಅಸ್ತಮಾ, ಕಿಡ್ನಿ ಹಾಗೂ ಯಕೃತ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರೊ ಸಿಬ್ಬಂದಿಗೆ ರೋಡ್ ಮೇಲೆ ಡ್ಯೂಟಿ ಹಾಕುವಂತಿಲ್ಲ. ಠಾಣೆಯ ಒಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಡ್ಯೂಟಿ ಹಾಕಬೇಕು ಎಂದು ಪ್ರವೀಣ್ ಸೂದ್ ಆದೇಶದಲ್ಲಿ ತಿಳಿಸಿದ್ದಾರೆ.

    ವಯಸ್ಸಾದವರನ್ನು ಹಾಗೂ ಕಾಯಿಲೆ ಇರುವವರನ್ನ ಕೋವಿಡ್ ಬಾಧಿಸುತ್ತದೆ. ಸಿಬ್ಬಂದಿಯ ಆರೋಗ್ಯ ಕಾಪಾಡುವುದು ನಮ್ಮ ಕೆಲಸವಾಗಿದೆ. ಹೀಗಾಗಿ 55 ವರ್ಷ ಮೇಲ್ಪಟ್ಟವರನ್ನ ರಸ್ತೆ, ಚೆಕ್ ಪೋಸ್ಟ್ ಗಳಲ್ಲಿ ಕೋವಿಡ್ ಡ್ಯೂಟಿಗೆ ಹಾಕಬಾರದು. ಸ್ಟೇಷನ್ ಒಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಡ್ಯೂಟಿ ಒದಗಿಸಬೇಕು ಎಂದು ರಾಜ್ಯದ ಎಲ್ಲಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ಇಂದು 8 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆ

    ಇಂದು 8 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆ

    – ಕಲಬುರಗಿಯ ಮಹಿಳೆಯಿಂದ 6 ಮಂದಿಗೆ ಸೋಂಕು

    ಬೆಂಗಳೂರು: ರಾಜ್ಯದಲ್ಲಿ ಇಂದು 8 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆಯಾಗಿದೆ. ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮವು ಕಲಬುರಗಿಯ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮ ಬೀರುತ್ತಿದೆ.

    ಕಲಬುರಗಿಯಲ್ಲಿ ರೋಗಿ-425 (26 ವರ್ಷದ ಮಹಿಳೆ)ಯಿಂದ 6 ಮಂದಿಗೆ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಮತ್ತೆ ಆತಂಕ ಶುರುವಾಗಿದೆ. ಉಳಿದಂತೆ ಬೆಂಗಳೂರು ಹಾಗೂ ಗದಗ ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ.

    ಕಲಬುರಗಿಯ ಕಮರ್ ಕಾಲೋನಿ ನಿವಾಸಿ ರೋಗಿ-425 ಮಹಿಳೆಯ ನಾಲ್ಕು ತಿಂಗಳ ಹೆಣ್ಣು ಮಗುವಿಗೆ ಈ ಮೊದಲು ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಮಗುವಿನಿಂದ ತಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೂ ಕೊರೊನಾ ಪಾಸಿಟಿವ್ ಬಂದಿತ್ತು. ಸದ್ಯ ಮಹಿಳೆಯಿಂದ ಕಲಬುರಗಿಯ ಆರು ಜನರಿಗೆ ಸೋಂಕು ಹರಡಿದೆ.

    ಸೋಂಕಿತರ ವಿವರ:
    1. ರೋಗಿ-513: ಬೆಂಗಳೂರಿನ 48 ವರ್ಷ ಪುರುಷ. ಬಿಬಿಎಂಪಿ ವಾರ್ಡ್-135ರ ಕಂಟೈನ್ಮೆಂಟ್ ಝೋನ್ ಸಂಪರ್ಕ ಹೊಂದಿದ್ದರು.
    2. ರೋಗಿ-514: ಗದಗಿನ 75 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ ಸೋಂಕು.
    3. ರೋಗಿ-515: ಕಲಬುರಗಿಯ 55 ವರ್ಷದ ಪುರುಷ. ರೋಗಿ-425ರ ಸಂಪರ್ಕದಲ್ಲಿದ್ದರು.
    4. ರೋಗಿ-516: ಕಲಬುರಗಿಯ 40 ವರ್ಷದ ಮಹಿಳೆ. ರೋಗಿ-425ರ ಸಂಪರ್ಕದಲ್ಲಿ ಇದ್ದರು.
    5. ರೋಗಿ-517: ಕಲಬುರಗಿಯ 43 ವರ್ಷದ ಪುರುಷ. ರೋಗಿ-425ರ ಸಂಪರ್ಕ ಹೊಂದಿದ್ದರು.
    6. ರೋಗಿ-518: ಕಲಬುರಗಿಯ 28 ವರ್ಷದ ಮಹಿಳೆ. ರೋಗಿ-425ರ ಸಂಪರ್ಕದಲ್ಲಿದ್ದರು.
    7. ರೋಗಿ-519: ಕಲಬುರಗಿಯ 45 ವರ್ಷದ ಮಹಿಳೆ. ರೋಗಿ-425ರ ಸಂಪರ್ಕದಲ್ಲಿದ್ದರು.
    8. ರೋಗಿ-520: ಕಲಬುರಗಿಯ 22 ವರ್ಷದ ಮಹಿಳೆ. ರೋಗಿ-425ರ ಸಂಪರ್ಕ ಹೊಂದಿದ್ದರು.

    ರಾಜ್ಯದಲ್ಲಿ ಈವರೆಗೂ 520 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಈ ಪೈಕಿ 20 ಮಂದಿ ಮೃತಪಟ್ಟಿದ್ದು, 198 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.