ನವದೆಹಲಿ: ದೇಶದಲ್ಲಿ ಇಂದು 68 ಸಿಆರ್‌ಪಿಎಫ್ ಯೋಧರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಈವರೆಗೆ 127 ಸಿಆರ್‌ಪಿಎಫ್ ಯೋಧರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಲಾಕ್‍ಡೌನ್ ಹಿನ್ನೆಲೆ ಸಿಆರ್‌ಪಿಎಫ್ ಯೋಧರನ್ನು ರಾಜಧಾನಿ ದೆಹಲಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಕೊರೊನಾ ಪತ್ತೆಯಾದ ಎಲ್ಲ 68 ಸೈನಿಕರು ಪೂರ್ವ ದೆಹಲಿಯಲ್ಲಿರುವ ಬೆಟಾಲಿಯನ್‍ಗೆ ಸೇರಿದವರಾಗಿದ್ದಾರೆ. ಈ ಬೆಟಾಲಿಯನ್‍ನ ಸೈನಿಕರಲ್ಲಿ ಒಬ್ಬರಿಗೆ ಮೊದಲೇ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದನ್ನೂ ಓದಿ: 24 ಗಂಟೆಯಲ್ಲಿ ದೇಶದ 2,293 ಜನರಿಗೆ ಕೊರೊನಾ- 71 ಮಂದಿ ಸಾವು
ಈವರೆಗೂ ಪೂರ್ವ ದೆಹಲಿಯಲ್ಲಿರುವ ಬೆಟಾಲಿಯನ್‍ನ ಒಟ್ಟು 122 ಯೋಧರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ದೇಶದಲ್ಲಿ ಒಟ್ಟು 127 ಸಿಆರ್‌ಪಿಎಫ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಓರ್ವ ಗುಣಮುಖರಾದರೆ, ಮತ್ತೊಬ್ಬರು ಮೃತಪಟ್ಟಿದ್ದಾರೆ.
ಸಿಆರ್‌ಪಿಎಫ್‍ನ 55 ವರ್ಷದ ಸಬ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಸೋಂಕು ತಗುಲಿರುವುದು ಕಳೆದ ವಾರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮಂಗಳವಾರ ಮೃತಪಟ್ಟಿದ್ದರು. ಅವರ ನಿಧನಕ್ಕೆ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಸಂತಾಪ ವ್ಯಕ್ತಪಡಿಸಿದ್ದರು.
ನವದೆಹಲಿ: ಕೇಂದ್ರ ಸರ್ಕಾರ ಲಾಕ್‍ಡೌನ್ 2 ವಾರಗಳ ಕಾಲ ವಿಸ್ತರಿಸಿದೆ. ಮೇ 3ಕ್ಕೆ ಎರಡನೇ ಲಾಕ್‍ಡೌನ್ ಮುಕ್ತಾಯವಾಗಬೇಕಿತ್ತು. ಆದರೆ ಈಗ ಮೇ 17ರವರೆಗೆ ಲಾಕ್‍ಡೌನ್ ವಿಸ್ತರಿಸಿದೆ.
ಕೆಂಪು ವಲಯದಲ್ಲಿ ಕೈಗಾರಿಕೆಗೆ ಷರತ್ತು ಬದ್ಧ ಅನುಮತಿ ನೀಡಿದೆ. ಶೇ.33 ರಷ್ಟು ಉದ್ಯೋಗಿಗಳು ಮಾತ್ರ ಹಾಜರಾಗಬೇಕೆಂದು ಸೂಚಿಸಿದೆ. ಶೇ.33 ರಷ್ಟು ಉದ್ಯೋಗಿಗಳೊಂದಿಗೆ ಸರ್ಕಾರಿ ಕಚೇರಿ ತೆರೆಯಲು ಅನುಮತಿ ಸಿಕ್ಕಿದೆ.
MHA amends Para 11 of the #lockdown extension order, 'in Orange Zones, in addition to activities permitted in Red Zone, taxis & cab aggregators will be permitted with 1 driver & 2 passengers only'. https://t.co/iACNHIxblO
ಕಿತ್ತಾಳೆ ವಲಯದಲ್ಲಿ ಟ್ಯಾಕ್ಸಿ ಓಡಾಟಕ್ಕೆ ಅನುಮತಿ ಸಿಕ್ಕಿದ್ದು ಒಂದು ವಾಹನಲ್ಲಿ ಇಬ್ಬರು ಮಾತ್ರ ಓಡಾಡಬಹುದು. ಅಂತರ್ ಜಿಲ್ಲೆ ಓಡಾಟಕ್ಕೆ ಅನುಮತಿ ಪಡೆಯಬೇಕಾಗುತ್ತದೆ.
ಹಸಿರು ವಲಯದಲ್ಲಿ ಈಗಾಗಲೇ ಘೋಷಣೆಯಾದಂತೆ ಎಲ್ಲ ರಿಯಾಯಿತಿ ಸಿಗಲಿದೆ. ಬಸ್ಸುಗಳ ಓಡಾಟಕ್ಕೆ ಅನುಮತಿ ಸಿಕ್ಕಿದ್ದು ಶೇ.50 ರಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕಾಗುತ್ತದೆ. ಮೂರು ವಲಯದಲ್ಲೂ ಸಲೂನ್ ತೆರೆಯಲು ಅನುಮತಿ ನೀಡಿಲ್ಲ.
A large number of other activities are allowed in the Red Zones. All industrial and construction activities in rural areas, including MNREGA works, food-processing units and brick-kilns are permitted: MHA on the extension of #lockdownpic.twitter.com/vHUU4ndGZZ
– ಮಂಡ್ಯದಲ್ಲೇ 8 ಜನರಿಗೆ ಪಾಸಿಟಿವ್
– ಮಳವಳ್ಳಿಯಲ್ಲಿ ಓರ್ವನಿಂದ ನಾಲ್ವರಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿ ಇಂದು 11 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿರುವ ಕೋವಿಡ್-19 ವಲಯಗಳ ಪರಷ್ಕೃತ ಪಟ್ಟಿಯಲ್ಲಿ ಕಿತ್ತಳೆ ವಲಯದಲ್ಲಿರುವ ಮಂಡ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ. ಇಂದು ಒಂದೇ ದಿನ ಜಿಲ್ಲೆಯ 8 ಜನರಿಗೆ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲದೆ ಮಳವಳ್ಳಿಯಲ್ಲಿ ಓರ್ವನಿಂದ ನಾಲ್ವರಿಗೆ ಕೊರೊನಾ ತಗುಲಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಕೊರೊನಾ ಆತಂಕ ಮತ್ತಷ್ಟು ಹೆಚ್ಚಳ- ಬಿ. ಕೊಡಗಹಳ್ಳಿ ಸೀಲ್‍ಡೌನ್
ಇತ್ತ ಬೆಳಗಾವಿಯಲ್ಲೂ ಓರ್ವ ಸೋಂಕಿತನಿಂದ ಮೂವರಿಗೆ ಕೊರೊನಾ ತಗುಲಿದ್ದು, ಬೆಳಗಾವಿಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈವರೆಗೂ ಹೆಮ್ಮಾರಿ ಕೊರೊನಾ ವೈರಸ್‍ಗೆ ರಾಜ್ಯದ 22 ಜನರು ಬಲಿಯಾಗಿದ್ದು, 235 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸೋಂಕಿತರ ವಿವರ: ರೋಗಿ-566: ಮಂಡ್ಯದ 25 ವರ್ಷದ ಪುರಷ. ಮುಂಬೈ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ. ರೋಗಿ-567: ಮಂಡ್ಯದ 24 ವರ್ಷದ ಮಹಿಳೆ. ಮುಂಬೈ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ. ರೋಗಿ-568: ಮಂಡ್ಯದ 27 ವರ್ಷದ ಪುರುಷ. ಮುಂಬೈ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ. ರೋಗಿ-569: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ 30 ವರ್ಷದ ಮಹಿಳೆ. ರೋಗಿ-566, 567 ಹಾಗೂ 588ರ ಸಂಪರ್ಕದಲ್ಲಿದ್ದರು.
ರೋಗಿ-570: ಮಂಡ್ಯ ಜಿಲ್ಲೆ ಮಳವಳ್ಳಿಯ 19 ವರ್ಷದ ಪುರುಷ. ರೋಗಿ-179ರ ಸಂಪರ್ಕ ಹೊಂದಿದ್ದರು. ರೋಗಿ-571: ಮಂಡ್ಯ ಜಿಲ್ಲೆ ಮಳವಳ್ಳಿಯ 32 ವರ್ಷದ ಮಹಿಳೆ. ರೋಗಿ-179ರ ಸಂಪರ್ಕ ಹೊಂದಿದ್ದರು. ರೋಗಿ-572: ಮಂಡ್ಯ ಜಿಲ್ಲೆ ಮಳವಳ್ಳಿಯ 13 ವರ್ಷದ ಬಾಲಕ. ರೋಗಿ-179ರ ಸಂಪರ್ಕ ಹೊಂದಿದ್ದ. ರೋಗಿ-573: ಮಂಡ್ಯ ಜಿಲ್ಲೆ ಮಳವಳ್ಳಿಯ 12 ವರ್ಷದ ಬಾಲಕ. ರೋಗಿ-179ರ ಸಂಪರ್ಕ ಹೊಂದಿದ್ದ.
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 576 ಮೃತಪಟ್ಟವರು: 22 ಗುಣಮುಖರಾದವರು: 235 ಹೊಸ ಪ್ರಕರಣಗಳು: 11
ರೋಗಿ-574: ಬೆಳಗಾವಿ ಜಿಲ್ಲೆ ರಾಯಬಾಗ್‍ನ 55 ವರ್ಷದ ಪುರುಷ. ರೋಗಿ-301ರ ಸಂಪರ್ಕದಲ್ಲಿದ್ದರು. ರೋಗಿ-575: ಬೆಳಗಾವಿ ಜಿಲ್ಲೆ ರಾಯಬಾಗ್‍ನ 30 ವರ್ಷದ ಮಹಿಳೆ. ರೋಗಿ-301ರ ಸಂಪರ್ಕದಲ್ಲಿದ್ದರು. ರೋಗಿ-576: ಬೆಳಗಾವಿ ಜಿಲ್ಲೆ ರಾಯಬಾಗ್‍ನ 50 ವರ್ಷದ ಪುರುಷ. ರೋಗಿ-301ರ ಸಂಪರ್ಕದಲ್ಲಿದ್ದರು.
ನವದೆಹಲಿ: ಕೋವಿಡ್-19 ಕೆಂಪು, ಕಿತ್ತಳೆ, ಹಸಿರು ವಲಯಗಳ ಪರಷ್ಕೃತ ಪಟ್ಟಿಯನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದ್ದು, ಕರ್ನಾಟಕದ ರೆಡ್ ಝೋನ್ ಜಿಲ್ಲೆಗಳ ಸಂಖ್ಯೆ 6ರಿಂದ 3ಕ್ಕೆ ಇಳಿಕೆ ಕಂಡಿದೆ.
ಕಳೆದ ವಾರದ ಕೊರೊನಾ ಸಂಖ್ಯೆ ಆಧರಿಸಿ ಈ ಪರಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಕೆಂಪು ಪಟ್ಟಿಯಲ್ಲಿದ್ದ ಕಲಬುರಗಿ, ಬೆಳಗಾವಿ, ಚಿಕ್ಕಬಳ್ಳಾಪುರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಹೀಗಾಗಿ ಕೆಂಪು ಪಟ್ಟಿಯಲ್ಲಿರುವ ಜಿಲ್ಲೆಗಳಲ್ಲಿ ಅಷ್ಟೇ ಲಾಕ್‍ಡೌನ್ ಮುಂದುವರಿಯುತ್ತಾ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ದೇಶದ ಮಹಾನಗರಗಳು ಮತ್ತು ಅದರ ಉಪನಗರಗಳನ್ನು ರೆಡ್ ಝೋನ್‍ನಲ್ಲಿ ಮುಂದುವರಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ. ಪರಷ್ಕೃತ ಪಟ್ಟಿಯ ಪ್ರಕಾರ ದೇಶಾದ್ಯಂತ 130 ಜಿಲ್ಲೆಗಳು ರೆಡ್ ಝೋನ್, 284 ಜಿಲ್ಲೆಗಳು ಆರೆಂಜ್ ಹಾಗೂ 319 ಜಿಲ್ಲೆಗಳು ಗ್ರೀನ್ ಝೋನ್‍ಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ 3 ಜಿಲ್ಲೆಗಳು ಕೆಂಪು ವಲಯ, 13 ಕಿತ್ತಳೆ ವಲಯ ಹಾಗೂ 14 ಜಿಲ್ಲೆಗಳು ಹಸಿರು ವಲಯದಲ್ಲಿವೆ.
ಕೆಂಪು ವಲಯ:
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು ಮಾತ್ರ ರೆಡ್ ಝೋನ್‍ನಲ್ಲಿವೆ. ಈ ಹಿಂದೆ ಕೆಂಪು ಪಟ್ಟಿಯಲ್ಲಿದ್ದ ಕಲಬುರಗಿ, ಬೆಳಗಾವಿ, ಚಿಕ್ಕಬಳ್ಳಾಪುರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬರದ ಹಿನ್ನೆಲೆ ಈ ಪಟ್ಟಿಯಿಂದ ಮೂರು ಜಿಲ್ಲೆಗಳನ್ನು ಕೈಬಿಡಲಾಗಿದೆ.
ಕಿತ್ತಳೆ ವಲಯ:
ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ, ಉತ್ತರ ಕನ್ನಡ, ತುಮಕೂರು.
ನಗರ ಪ್ರದೇಶದಲ್ಲಿ ವಸತಿ ಪ್ರದೇಶ, ಪೊಲೀಸ್ ಠಾಣೆ ವ್ಯಾಪ್ತಿ, ಮೊಹಲ್ಲಾಗಳ, ಪಟ್ಟಣಗಳ ಆಧಾರದ ಮೇಲೆ ಝೋನ್‍ಗಳನ್ನು ಗುರುತಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ ಆಧಾರದ ಮೇಲೆ ಗುರುತಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
Union Health Secry Preeti Sudan writes to Chief Secys of all states/UTs, designating dists across all states/UTs as Red, Orange & Green Zones.
Since recovery rates have gone up, distritcs are now being designated across various zones duly broad-basing the criteria: Preeti Sudan pic.twitter.com/WjVZPJXl5q
ದೊಡ್ಡ ಜಿಲ್ಲಾ ಪ್ರದೇಶಗಳಲ್ಲಿ ಹಲವು ವಿಭಾಗಳಾಗಿ ವಿಂಗಡಿಸಿಕೊಳ್ಳಬಹುದು. ಝೋನ್‍ಗಳಿಗೆ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಸೂಚಿಸಬೇಕು. ಅಲ್ಲದೇ ಅವಶ್ಯಕತೆ ವಸ್ತುಗಳ ಪೂರೈಕೆ ಹೊರತುಪಡಿಸಿ ರೆಡ್ ಝೋನ್‍ನಲ್ಲಿ ಪ್ರತಿ ಮನೆಯ ಮೇಲೂ ಸ್ಥಳೀಯ ಆಡಳಿತ ಕಣ್ಣಿಟ್ಟರಬೇಕು. ಈ ಹಿಂದೆ ನಿಗದಿಪಡಿಸಿದ್ದ 28 ದಿನಗಳ ಬದಲು 21 ದಿನಗಳ ಕಾಲ ಸೋಂಕು ಕಾಣಿಸಿಕೊಳ್ಳದಿದ್ದರೇ ಗ್ರೀನ್ ಝೋನ್ ಅಂತ ಘೋಷಿಸಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಕೊರೊನಾ ಸೋಂಕಿತನ ಶವ ಸಂಸ್ಕಾರದಲ್ಲಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಮತ್ತೊಮ್ಮೆ ಲೋಪ ಎಸಗಿದೆ ಎನ್ನುವ ಅನುಮಾನಗಳು ಕಾಡುತ್ತಿವೆ.
ವಿಕ್ಟೋರಿಯಾ ಆಸ್ಪತ್ರೆ ಮೇಲಿಂದ ಸೋಮವಾರ ಜಿಗಿದು ರೋಗಿ-466 ಮೃತಪಟ್ಟಿದ್ದ. ಆತನ ಅಂತ್ಯಸಂಸ್ಕಾರ ಜಯನಗರ ಬಿಟಿಬಿ ಏರಿಯಾದ ಚಿತಾಗಾರದಲ್ಲಿ ನಡೆದಿತ್ತು. ಈ ವೇಳೆ ಬಳಸಲಾಗಿದ್ದ ಪಿಪಿಇ ಕಿಟ್‍ಗಳನ್ನು ಬೈರಸಂದ್ರ ಕೆರೆ ಪ್ರದೇಶದಲ್ಲಿ ಎಸೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪಿಪಿಇ ಕಿಟ್ ನೋಡಿ ಬೈರಸಂದ್ರ ಕೆರೆ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ನಿಯಮದಂತೆ ಅಂತ್ಯಸಂಸ್ಕಾರದ ನಂತರ ಪಿಪಿಇ ಕಿಟ್‍ಗಳನ್ನು ನಿಗದಿತ ಏಜೆನ್ಸಿಗಳಿಗೆ ನೀಡಿ ಅದನ್ನು ಸುಟ್ಟು ವಿಲೇವಾರಿ ಮಾಡಬೇಕು. ಸೋಮವಾರ ಅಂತ್ಯಸಂಸ್ಕಾರವಾದ್ರೂ, ಬುಧವಾರ ಸಂಜೆವರೆಗೆ ಪಿಪಿಇ ಕೆರೆ ಬಳಿಯೇ ಬಿದ್ದಿದ್ದವೆಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬುಧವಾರ ಸಂಜೆ ಬಿಬಿಎಂಪಿ ಸಿಬ್ಬಂದಿ, ಪಿಪಿಇಗಳ ಮೇಲೆ ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ಪಿಪಿಇ ಸುಟ್ಟ ನಂತರ ಆ ಪ್ರದೇಶದಲ್ಲಿ ಔಷಧ ಸಿಂಪಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಬಿಬಿಎಂಪಿ ಪಿಪಿಇ ಕಿಟ್‍ಗಳ ವಿಲೇವಾರಿಗಾಗಿ ವಲಯಕ್ಕೆ ಒಂದರಂತೆ 4 ಏಜೆನ್ಸಿ ನಿಗದಿಪಡಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 130ರ ಗಡಿ ದಾಟಿದೆ. ಆದರೂ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳುತ್ತಿಲ್ಲ. ಇದರಿಂದಾಗಿ ಬಿಬಿಎಂಪಿ ಟೀಂ ಫೀಲ್ಡಿಗೆ ಇಳಿದಿದೆ.
ಬೆಂಗಳೂರಿನಲ್ಲಿ ಮತ್ತಷ್ಟು ಕಠಿಣ ನಿಮಯಗಳನ್ನು ಬಿಬಿಎಂಪಿ ಜಾರಿಗೆ ತಂದಿದೆ. ಮಾಸ್ಕ್ ಧರಿಸದೇ ಓಡಾಡಿದ್ರೆ 1 ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ. 9 ಗಂಟೆವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ 9 ಗಂಟೆ ಬಳಿಕ ಅಗತ್ಯ ವಸ್ತು ಅಂತ ಮಾರುಕಟ್ಟೆ ಸುತ್ತಮುತ್ತ ಬಂದವರಿಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ಟೀಂ ಮುಂದಾಗಿದೆ.
ಟೌನ್‍ಹಾಲ್, ಮಾರುಕಟ್ಟೆ, ಮೈಸೂರ್ ರೋಡ್ ಎಲ್ಲ ಕಡೆ ಕಠಿಣ ನಿಮಯ ಪಾಲನೆಗೆ ಬಿಬಿಎಂಪಿ ಆದ್ಯತೆ ನೀಡುತ್ತಿದೆ. ಹೀಗಾಗಿ 9 ಗಂಟೆ ಬಳಿಕ ರೋಡ್‍ಗೆ ಇಳಿದ್ರೆ ಫುಲ್ ಕ್ಲಾಸ್, ವೆಹಿಕಲ್ ಸೀಜ್ ಮಾಡಲಾಗುತ್ತದೆ. ಈ ಮೂಲಕ ಸವಾರರು, ಚಾಲಕರಿಂದ ಇರೋಬರೋ ದಂಡ ಕಟ್ಟಿಸಿಕೊಂಡು, ವಾಹನ ಬಿಟ್ಟು ಕಳಿಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಲಾಕ್‍ಡೌನ್ ವೇಳೆ ಸೀಜ್ ಮಾಡಲಾದ ವಾಹನಗಳನ್ನು ಇಂದಿನಿಂದ ಬಿಡುಗಡೆ ಮಾಡಲಾಗುತ್ತದೆ. ಹೈಕೋರ್ಟ್ ನೀಡಿರುವ ಆದೇಶದಲ್ಲಿ ಲಾಕ್‍ಡೌನ್ ವೇಳೆ ಸೀಜ್ ಮಾಡಿರುವ ವಾಹನಗಳಿಗೆ ಫೈನ್ ಹಾಕಿ ರಿಲೀಸ್ ಮಾಡಬೇಕು. ಅದರಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಒಂದು ಸಾವಿರ ದಂಡ ಮತ್ತು ದ್ವಿಚಕ್ರ ಮತ್ತು ಆಟೋ ರಿಕ್ಷಾಗಳಿಗೆ 500 ದಂಡ ವಿಧಿಸಬೇಕು. ಜೊತೆಗೆ ಇನ್ಶೂರೆನ್ಸ್ ಸೇರಿದಂತೆ ವಾಹನದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಂತರ ವಾಹನಗಳನ್ನು ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.
ಈ ವಿಚಾರವಾಗಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಭಾಸ್ಕರ್ ರಾವ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತೀರ್ಮಾನದಂತೆ ನಾಳೆಯಿಂದ ಸೀಜ್ ಆಗಿರುವ ವಾಹನಗಳ ಬಿಡುಗಡೆ ಮಾಡಲಾಗುತ್ತದೆ. ಆದರೆ ಏಕಾಏಕಿ ಜನರು ಬರುವ ಸಾಧ್ಯತೆಗಳು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದರು.
ಬೆಂಗಳೂರಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ ವಾಹನಗಳನ್ನು ಮಾರ್ಚ್ 30ರಿಂದ ಸೀಜ್ ಮಾಡಲಾಗಿದೆ. ಈವರೆಗೂ 47 ಸಾವಿರಕ್ಕೂ ಹೆಚ್ಚು ವಾಹನಗಳು ಸೀಜ್ ಆಗಿವೆ. ಈಗ ವಾಹನಗಳನ್ನು ದಾಖಲಾತಿ ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಎಲ್ಲವನ್ನೂ ಒಂದೇ ದಿನ ಕೊಡುವುದಿಲ್ಲ. ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದರು.
ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯ ಸರ್ಕಾರದ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಭರ್ಜರಿ ಪ್ಲಾನ್ ರೂಪಿಸಿದೆ.
ಮೇ 3ರ ನಂತರ ಆರ್ಥಿಕ ಮಿತವ್ಯಯಕ್ಕಾಗಿ ಇಲಾಖೆಗಳಿಗೆ ಮೇಜರ್ ಸರ್ಜರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಇಲಾಖೆಗಳ ವಿಲೀನ, ಮತ್ತೆ ಕೆಲವು ಬರ್ಖಾಸ್ತು ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಸಚಿವ ಸಂಪುಟ ಉಪಸಮಿತಿಯ ವರದಿಯನ್ನು ಸಿಎಂ ಬಿಎಸ್‍ವೈ ತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಬಿಎಸ್‍ವೈ ಮಾಸ್ಟರ್ ಪ್ಲಾನ್?
ಅನಗತ್ಯ ಹುದ್ದೆಗಳ ರದ್ದು, ಬಿಳಿ ಆನೆಗಳಂತೆ ಬೊಕ್ಕಸಕ್ಕೆ ಭಾರವಾಗಿದ್ದ ಹುದ್ದೆಗಳು ರದ್ದುಗೊಳಿಸುವುದು. ಪ್ರಮುಖ ಇಲಾಖೆಗಳ ಜೊತೆ ಕೆಲವು ಇಲಾಖೆಗಳ ವಿಲೀನಗೊಳಿಸುವುದು ಮುಖ್ಯ ಪ್ಲಾನ್‍ಗಳಾಗಿವೆ ಎನ್ನಲಾಗುತ್ತಿದೆ. ಇದರಿಂದ ವಾರ್ಷಿಕ 2ರಿಂದ 3 ಸಾವಿರ ಕೋಟಿ ರೂ. ಹೊರೆ ಕಡಿಮೆಯಾಗುತ್ತದೆ.
ಕೆಲವು ಇಲಾಖೆಯ ಅನಗತ್ಯ ನಿಗಮಗಳ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕ ಹುದ್ದೆ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಹುದ್ದೆಗಳಿಗೆ ತಗಲುತ್ತಿದ್ದ ಖರ್ಚು-ವೆಚ್ಚ ಕಡಿತಕ್ಕೆ ಸರ್ಕಾರದ ಲೆಕ್ಕಾಚಾರ ಹಾಕಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಸರ್ಕಾರದ ಲೆಕ್ಕಾಚಾರದಲ್ಲಿ ತೋಟಗಾರಿಕೆ, ರೇಷ್ಮೆ, ಕೈಗಾರಿಕೆ, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ, ಇಂಧನ ಇಲಾಖೆಗಳಲ್ಲಿ ಕೆಲವು ವಿಲೀನ, ಕೆಲವು ನಿಗಮಗಳು ರದ್ದು ಮಾಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ.
ಯಾವೆಲ್ಲಾ ಇಲಾಖೆಗಳು ವಿಲೀನ ಸಾಧ್ಯತೆ?
ತೋಟಗಾರಿಕೆ ಜೊತೆ ರೇಷ್ಮೆ ಇಲಾಖೆ, ಕೈಗಾರಿಕೆ ಜೊತೆ ಸಾರ್ವಜನಿಕ ಉದ್ಯಮ, ಗ್ರಾಮೀಣಾಭಿವೃದ್ಧಿಯಲ್ಲಿ ಕುಡಿಯುವ ನೀರಿನ ಯೋಜನೆ ನಿಗಮ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಪ್ರಾದೇಶಿಕ ಆಯುಕ್ತರ ಹುದ್ದೆ ರದ್ದಿಗೆ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಜೊತೆಗೆ ಕಂದಾಯ ಇಲಾಖೆಯಲ್ಲಿ ಪ್ರಾಕೃತಿಕ ವಿಕೋಪ ಪ್ರತ್ಯೇಕ ನಿಗಮ, ಕೆಲವು ಇಲಾಖೆಗಳ ವಿಲೀನ, ಮತ್ತೆ ಕೆಲವು ಇಲಾಖೆಗಳ ನಿಗಮಗಳೇ ಬರ್ಖಾಸ್ತು, ಆಯುಕ್ತರು, ಕಾರ್ಯದರ್ಶಿಗಳು, ನಿರ್ದೇಶಕರು, ಪ್ರಾದೇಶಿಕ ಆಯುಕ್ತರು, ಹೆಚ್ಚುವರಿ ಆಯುಕ್ತರ ಹುದ್ದೆಯೆಂಬ ಬಿಳಿಆನೆಗೆ ಗೇಟ್ ಪಾಸ್ ನೀಡಲು ಬಿಎಸ್‍ವೈ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
-ಬೆಂಗಳೂರಿನಲ್ಲಿ ಒಂದೇ ದಿನ 10 ಮಂದಿಗೆ ಕೊರೊನಾ
-ರೋಗಿ ನಂಬರ್ 292ರಿಂದ ಐವರಿಗೆ ಸೋಂಕು
ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಅದೇ. ಇಂದು 8 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆ ಕಂಡಿದೆ. ಬೆಳಗ್ಗೆ ಬಿಡುಗಡೆಯಾದ ವರದಿಯಲ್ಲಿ ಬೆಂಗಳೂರಿನ ಮೂವರಿಗೆ ಸೋಂಕು ತಗುಲಿತ್ತು. ಸಂಜೆ ಬಿಡುಗಡೆಯಾದ ಬುಲೆಟಿನ್ ನಲ್ಲಿ ಒಟ್ಟು ಏಳು ಮಂದಿಗೆ ಸೋಂಕು ತಗುಲಿದೆ.
ಬೆಳಗಾವಿಯಲ್ಲಿ ಇಂದು ಒಟ್ಟು 14 ಜನರಿಗೆ ಕೊರೊನಾ ಪತ್ತೆಯಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಹಾಟ್‍ಸ್ಪಾಟ್ ತಾಲೂಕು ಹಿರೇಬಾಗೇವಾಡಿಯಲ್ಲೇ 12 ಮಂದಿಗೆ ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಉಳಿದಂತೆ ಬೆಂಗಳೂರಿನಲ್ಲಿ ಹತ್ತು, ವಿಜಯಪುರಲ್ಲಿ ಇಬ್ಬರಿಗೆ, ತುಮಕೂರು, ಕಲಬುರಗಿ, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ತಗುಲಿದೆ.
ಸೋಂಕಿತರ ವಿವರ: ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ 1. ರೋಗಿ-536: ದಕ್ಷಿಣ ಕನ್ನಡ ಜಿಲ್ಲೆಯ 58 ವರ್ಷದ ಮಹಿಳೆ. ರೋಗಿ-501ರ ಸಂಪರ್ಕದಲ್ಲಿದ್ದರು. 2. ರೋಗಿ-537: ವಿಜಯಪುರದ 62 ವರ್ಷದ ವೃದ್ಧ. ರೋಗಿ-221ರ ಸಂಪರ್ಕ ಹೊಂದಿದ್ದರು. 3. ರೋಗಿ-538: ವಿಜಯಪುರದ 33 ವರ್ಷದ ಮಹಿಳೆ. ರೋಗಿ-221ರ ಸಂಪರ್ಕದಲ್ಲಿದ್ದರು. 4. ರೋಗಿ-539: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 24 ವರ್ಷದ ಮಹಿಳೆ. ರೋಗಿ-469, 483 ಮತ್ತು 484ರ ದ್ವಿತೀಯ ಸಂಪರ್ಕದಲ್ಲಿದ್ದರು. 5. ರೋಗಿ-540: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 27 ವರ್ಷದ ಪುರುಷ. ರೋಗಿ-483 ದ್ವಿತೀಯ ಸಂಪರ್ಕ ಹೊಂದಿದ್ದರು. 6. ರೋಗಿ-541: ಬೆಳಗಾವಿ ಜಿಲ್ಲೆ ಹುಕ್ಕೇರಿಯ 09 ವರ್ಷದ ಬಾಲಕ. ರೋಗಿ-293ರ ಸಂಪರ್ಕದಲ್ಲಿ ಇದ್ದರು. 7. ರೋಗಿ-542: ಬೆಳಗಾವಿ ಜಿಲ್ಲೆ ಹುಕ್ಕೇರಿಯ 75 ವೃದ್ಧೆ. ರೋಗಿ-293ರ ಸಂಪರ್ಕದಲ್ಲಿ ಇದ್ದರು. 8. ರೋಗಿ-543: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 24 ವರ್ಷದ ಮಹಿಳೆ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು. 9. ರೋಗಿ-543: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 18 ವರ್ಷದ ಯುವಕ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು. 10. ರೋಗಿ-545: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 48 ವರ್ಷದ ಮಹಿಳೆ. ರೋಗಿ-494ರ ದ್ವಿತೀಯ ಸಂಪರ್ಕದಲ್ಲಿದ್ದರು. 11. ರೋಗಿ-546: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 50 ವರ್ಷದ ಪುರುಷ. ರೋಗಿ-483ರ ದ್ವಿತೀಯ ಸಂಪರ್ಕ ಹೊಂದಿದ್ದರು. 12. ರೋಗಿ-547: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 27 ವರ್ಷದ ಮಹಿಳೆ. ರೋಗಿ-496 ಮತ್ತು 494ರ ದ್ವಿತೀಯ ಸಂಪರ್ಕದಲ್ಲಿದ್ದರು. 13. ರೋಗಿ-548: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 43 ವರ್ಷದ ಪುರುಷ. ರೋಗಿ-484ರ ದ್ವಿತೀಯ ಸಂಪರ್ಕ ಹೊಂದಿದ್ದರು. 14. ರೋಗಿ-549: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 16 ವರ್ಷದ ಯುವಕ. ರೋಗಿ-486ರ ದ್ವಿತೀಯ ಸಂಪರ್ಕ ಹೊಂದಿದ್ದರು. 15. ರೋಗಿ-550: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 36 ವರ್ಷದ ಮಹಿಳೆ. ರೋಗಿ-496ರ ದ್ವಿತೀಯ ಸಂಪರ್ಕದಲ್ಲಿದ್ದರು. 16. ರೋಗಿ-551: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 08 ವರ್ಷದ ಬಾಲಕಿ. ರೋಗಿ-293ರ ಸಂಪರ್ಕದಲ್ಲಿದ್ದರು. 17. ರೋಗಿ-552: ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ 36 ವರ್ಷದ ಪುರುಷ. ರೋಗಿ-496ರ ಸಂಪರ್ಕದಲ್ಲಿದ್ದರು. 18. ರೋಗಿ-553: ತುಮಕೂರಿನ 65 ವರ್ಷದ ವೃದ್ಧೆ. ರೋಗಿ-535ರ ಸಂಪರ್ಕದಲ್ಲಿದ್ದರು. 19. ರೋಗಿ-554: ಬೆಂಗಳೂರಿನ 20 ವರ್ಷದ ಯುವಕ. ಕಂಟೈನ್‍ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು. 20. ರೋಗಿ-555: ಬೆಂಗಳೂರಿನ 28 ವರ್ಷದ ಪುರುಷ. ಕಂಟೈನ್‍ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು. 21. ರೋಗಿ-556: ದಾವಣಗೆರೆಯ 69 ವರ್ಷದ ವೃದ್ಧ. ಸಂಪರ್ಕ ಪತ್ತೆಯಾಗಿಲ್ಲ. 22. ರೋಗಿ-557: ಬೆಂಗಳೂರಿನ 63 ವರ್ಷಸ ವೃದ್ಧ. ಸಂಪರ್ಕ ಪತ್ತೆಯಾಗಿಲ್ಲ.
ಸಂಜೆ ಬಿಡುಗಡೆಯಾದ ಬುಲೆಟಿನ್ 23. ರೋಗಿ-558: ಕಲಬುರಗಿಯ 35 ವರ್ಷದ ಮಹಿಳೆ, ರೋಗಿ ನಂಬರ್ 314ರ ಜೊತೆ ಸಂಪರ್ಕ 24. ರೋಗಿ 559: ಬೆಂಗಳೂರಿನ 15 ವರ್ಷದ ಬಾಲಕ. ರೋಗಿ ನಂಬರ್ 292ರ ಜೊತೆ ಸಂಪರ್ಕ 25. ರೋಗಿ 560: ಬೆಂಗಳೂರಿನ 60 ವರ್ಷದ ಮಹಿಳೆ. ರೋಗಿ ನಂಬರ್ 292ರ ಜೊತೆ ಸಂಪರ್ಕ 26. ರೋಗಿ 561: ಬೆಂಗಳೂರಿನ 4 ವರ್ಷದ ಹೆಣ್ಣು ಮಗು. ರೋಗಿ ನಂಬರ್ 292ರ ಜೊತೆ ಸಂಪರ್ಕ 27. ರೋಗಿ 562: ಬೆಂಗಳೂರಿನ 16 ವರ್ಷದ ಬಾಲಕಿ. ರೋಗಿ ನಂಬರ್ 292ರ ಜೊತೆ ಸಂಪರ್ಕ 28. ರೋಗಿ 563: ಬೆಂಗಳೂರಿನ 13 ವರ್ಷದ ಬಾಲಕಿ. ರೋಗಿ ನಂಬರ್ 292ರ ಜೊತೆ ಸಂಪರ್ಕ 29. ರೋಗಿ 564: ಬೆಂಗಳೂರಿನ 35 ವರ್ಷದ ಪುರುಷ. ರೋಗಿ ನಂಬರ್ 281ರ ಜೊತೆ ಸಂಪರ್ಕ 30. ರೋಗಿ 565: ಬೆಂಗಳೂರಿನ 64 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಂಡು ಬಂದಿವೆ.
– ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ವರ್ತಕರ ಮನವಿ
– ರಾಜ್ಯ ಸರ್ಕಾರ ಎಣ್ಣೆ ಮಾರಾಟಕ್ಕೆ ಅನುಮತಿ ನೀಡುತ್ತಾ?
ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಮದ್ಯದಂಗಡಿಗಳು ಬಂದ್ ಆಗಿದ್ದು ಮೇ 3ರ ಬಳಿಕವೂ ಲಾಕ್‍ಡೌನ್ ತೆಗೆಯದೇ ಇದ್ದರೆ ಬಿಯರ್ ಕಥೆ ಏನು ಎಂಬ ಪ್ರಶ್ನೆ ಎದ್ದಿದೆ.
ಬಿಯರ್ ಶೆಲ್ಫ್ ಲೈಫ್ ಇರುವುದು ಕೇವಲ ಮೂರು ತಿಂಗಳ ಅವಧಿಯಷ್ಟೇ. ಹೀಗಾಗಿ ರಾಜ್ಯದಲ್ಲಿ ಮೇ 3ರ ನಂತರ ಮದ್ಯ ಮಾರಟಕ್ಕೆ ಅವಕಾಶ ಕೊಡದೇ ಇದ್ದರೆ ಬಾರ್‌ನಲ್ಲಿ ಸ್ಟಾಕ್ ಇಟ್ಟಿರುವ ಬಿಯರ್ ನಾಶ ಮಾಡಬೇಕಾದ ಆತಂಕ ಎದುರಾಗಿದೆ.
ಕೊರೊನಾದಿಂದಾಗಿ ಮಾರ್ಚ್ 23ರಿಂದ ಬಾರ್ ತೆರೆದಿಲ್ಲ. ಈಗ ಸರ್ಕಾರ ಮೇ 3ರ ನಂತರವೂ ಮದ್ಯ ಮಾರಾಟಕ್ಕೆ ಅವಕಾಶ ಕೊಡದೇ ಇದ್ದರೆ ಬಿಯರ್ ಶೆಲ್ಫ್ ಅವಧಿ ಪೂರ್ಣಗೊಳ್ಳುತ್ತದೆ. ಹೀಗಾಗಿ ಬಿಯರ್ ಬಾಟಲ್ ಗಳನ್ನು ನಾಶ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಬೇಸಿಗೆ ಬಂದರೆ ಬಿಯರ್‍ಗೆ ಬಹಳ ಬೇಡಿಕೆ ಇರುತ್ತದೆ.
ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ ಪ್ರತಿನಿತ್ಯವೂ 60 ಕೋಟಿ ರೂ. ಆದಾಯ ಬರುತ್ತಿತ್ತು. ವಾರ್ಷಿಕವಾಗಿ ಹೇಳುವುದಾದರೆ 22 ಸಾವಿರ ಕೋಟಿ ರೂ. ಆದಾಯ ರಾಜ್ಯದ ಬೊಕ್ಕಸಕ್ಕೆ ಸೇರುತ್ತಿತ್ತು. ಆದರೆ ಈಗ ರಾಜ್ಯದಲ್ಲಿ ಒಟ್ಟು ಒಂದೂವರೆ ಲಕ್ಷ ಕೇಸ್ ಬಿಯರ್ ಸ್ಟಾಕ್‍ನಲ್ಲಿದೆ. ಇದರ ಅಂದಾಜು ಮೌಲ್ಯ 25 ಕೋಟಿ ರೂ. ಎಂದು ಹೇಳಲಾಗುತ್ತಿದೆ.
ಈ ನಷ್ಟವನ್ನು ತಡೆಯಲು ಮದ್ಯದಂಗಡಿ ತೆರೆಯಲು ಅವಕಾಶ ಕೊಡಿ. ಇಲ್ಲವೇ ಸಮಯವನ್ನ ನಿಗದಿ ಮಾಡಿ. ಒಂದು ವೇಳೆ ಮೇ 3ರ ಬಳಿಕ ಮದ್ಯ ಮಾರಾಟಕ್ಕೆ ಅನುಮತಿ ನೀಡದಿದ್ದರೆ ಭಾರೀ ನಷ್ಟಕ್ಕೆ ಸಿಲುಕಿಕೊಳ್ಳುತ್ತೇವೆ ಎಂದು ಮದ್ಯದಂಗಡಿ ಮಾಲೀಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ವೈನ್ ವ್ಯಾಪಾರಿ ಸಂಘದ ಅಧ್ಯಕ್ಷ ಕರುಣಾಕರ ಹೆಗ್ಡೆ, ಕೆಲವು ಅಂಶಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಅನೇಕ ಬಾರ್‍ಗಳಲ್ಲಿ ಬಿಯರ್ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಎಲ್ಲ ಲೈಸನ್ಸ್ ದಾರರಿಗೆ ನಾಲ್ಕೈದು ಗಂಟೆ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಬೇಕು. ಶೆಲ್ಫ್ ಲೈಫ್ ಮೂರು ತಿಂಗಳು ಮಾತ್ರ ಇರುವ ಕಾರಣ ಮಾರಾಟವಾಗದೇ ಇದ್ದರೆ ನಾಶ ಮಾಡಬೇಕಾಗುತ್ತದೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸಲು ಗ್ರಾಹಕರಿಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮದ್ಯ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟರೆ ಸರ್ಕಾರಕ್ಕೆ ಆದಾಯ ಸಿಗುತ್ತದೆ. ನಮ್ಮ ಜೀವನಕ್ಕೂ ಸ್ವಲ್ಪ ಆಧಾರವಾಗುತ್ತದೆ. ಬಾರ್ ಗಳಲ್ಲಿ ಕೆಲಸ ಮಾಡುವವರಿಗೆ ವೇತನ, ಅಂಗಡಿ ಬಾಡಿಗೆ ಕೊಡಬೇಕು. ಹೀಗೆ ನೂರೆಂಟು ಸಮಸ್ಯೆಗಳು ನಮಗೂ ಇವೆ ಎಂದು ಕರುಣಾಕರ್ ಹೆಗ್ಡೆ ಹೇಳಿದರು.
– ಬೆಂಗ್ಳೂರಿಗೆ ಪಾದರಾಯನಪುರ ಕಂಟಕ
– ದೀಪಾಂಜಲಿ ನಗರದ ವೃದ್ಧನಿಗೆ ಕೊರೊನಾ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಪಾದರಾಯನಪುರದ ಕೊರೊನಾ ಸೋಂಕು ಕಂಟಕ ತರುತ್ತಾ ಎನ್ನುವ ಅನುಮಾನ ಶುರುವಾಗಿದೆ.
ಹೌದು. ಸೋಂಕಿತರ ಮನೆಯ ಸುತ್ತಮುತ್ತ ಆರೇಳು ಬಾರಿ ಓಡಾಡಿದ್ದ ಇಬ್ಬರಿಗೆ ಕೊರೊನಾ ತಗುಲಿರುವುದು ಇಂದು ದೃಢಪಟ್ಟಿದೆ. ಪಾದರಾಯನಪುರದಲ್ಲಿ ರ್‍ಯಾಂಡಮ್ ಟೆಸ್ಟ್ ನಡೆಸಲಾಗುತ್ತಿದ್ದು, 29 ಜನರ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಲ್ಯಾಬ್‍ಗೆ ಕಳಿಸಲಾಗಿತ್ತು. ಈ ಪರೀಕ್ಷೆಯಲ್ಲಿ 6ನೇ ಕ್ರಾಸ್ ಮತ್ತು 8ನೇ ಕ್ರಾಸ್‍ನ ಇಬ್ಬರಿಗೆ ಕೊರೊನಾ ಪತ್ತೆಯಾಗಿದೆ.
20 ವರ್ಷದ ಯುವಕ ರೋಗಿ-554 ಹಾಗೂ 28 ವರ್ಷದ ಪುರುಷ ರೋಗಿ-555 ಇಬ್ಬರೂ ಕಂಟೈನ್‍ಮೆಂಟ್ ವಲಯ (ಬಿಬಿಎಂಪಿ ವಾರ್ಡ್ ಸಂಖ್ಯೆ-135)ರ ಸಂಪರ್ಕದಲ್ಲಿದ್ದರು. ಸೋಂಕಿತರ ಮನೆಯ ಸುತ್ತಮುತ್ತ ಓಡಾಡಿದ್ದ ಇಬ್ಬರಿಗೂ ಉಸಿರಾದ ಸಮಸ್ಯೆ, ನೆಗಡಿ, ಕೆಮ್ಮು ಆರಂಭವಾಗಿತ್ತು. ಬಳಿಕ ಇವರನ್ನು ರ್‍ಯಾಂಡಮ್ ಟೆಸ್ಟ್‌ಗೆ ಒಳಪಡಿಸಿದಾಗ ಕೊರೊನಾ ದೃಢಪಟ್ಟಿದೆ.
ಪಾದರಾಯನಪುರವು ಬೆಂಗಳೂರಿಗೆ ಕಂಟಕವಾಗುತ್ತಿದೆ ಎಂಬ ಅನುಮಾನ ಶುರುವಾಗಿದೆ. ಈ ಮೊದಲು ನಿಜಾಮುದ್ದೀನ್‍ನಿಂದ ಬಂದ ವ್ಯಕ್ತಿಯಿಂದ ಕೊರೊನಾ ಸೋಂಕು ಪ್ರಾರಂಭವಾಗಿತ್ತು. ಇಂದು ಸಮುದಾಯದ ಮಟ್ಟಕ್ಕೆ ಬಂದಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಲಾಕ್‍ಡೌನ್, ಸೀಲ್‍ಡೌನ್ ಏನೇ ಮಾಡಿದ್ರೂ ಜನ ಮಾತ್ರ ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗೆ ಮನೆಯಿಂದ ಹೊರ ಬಂದು ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ರೋಗಿ-557: ದೀಪಾಂಜಲಿ ನಗರದ ನಿವಾಸಿ 63 ವರ್ಷದ ವೃದ್ಧನಿಗೆ ಇಂದು ಸೋಂಕು ದೃಢಪಟ್ಟಿದೆ. ಯಾರಿಂದ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮೃತ ಮಹಿಳೆ ರೋಗಿ-465ರಿಂದ ಸೋಂಕು ಬಂದಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆಯು ವೃದ್ಧನ ದೂರದ ಸಂಬಂಧಿ ಎನ್ನಲಾಗುತ್ತಿದೆ.
ಕಳೆದ 10 ದಿನಗಳಿದ ವೃದ್ಧನಿಗೆ (ರೋಗಿ-557) ಉಸಿರಾಟದ ಸಮಸ್ಯೆ ಇತ್ತು. ಟೆಸ್ಟ್ ಮಾಡಿಸಿದಾಗ ಸೋಂಕು ಪತ್ತೆಯಾಗಿದೆ. ಈ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೃತ ಮಹಿಳೆ (ರೋಗಿ-465) ಪ್ರಯಾಣದ ಹಿನ್ನಲೆ ಬೆಂಗಳೂರಿಗರನ್ನು ಬೆಚ್ಚಿಬೀಳಿಸುವಂತಿದೆ. ನೆಗಡಿ, ಕೆಮ್ಮು, ಶೀತ ಜ್ವರದಿಂದ ಬಳಲುತ್ತಿದ್ದ ಮಹಿಳೆಯ ಪತಿ ಏಪ್ರಿಲ್ 2ರಂದು ಮೃತಪಟ್ಟಿದ್ದ. ಹೀಗಾಗಿ ಕುಟುಂಬವು ಟಿ.ಆರ್ ಮಿಲ್‍ನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿತ್ತು. 10 ದಿನದ ಬಳಿಕ ಮಹಿಳೆಗೂ ನೆಗಡಿ, ಕೆಮ್ಮು, ಶೀತ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ರಾಜಾಜಿನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ ಮಹಿಳೆಯು ಹಂಪಿನಗರದಿಂದ ದೀಪಾಂಜಲಿ ನಗರದ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದರು.
ಮಹಿಳೆಯ ಸಂಪರ್ಕದಲ್ಲಿದ್ದ ಆಕೆಯ ಅಕ್ಕ, ಮಗ ಮತ್ತು ಅಳಿಯನಿಗೆ (ರೋಗಿ-498, 499 ಹಾಗೂ 500) ಸೋಂಕು ತಗುಲಿದೆ. ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಮೃತ ಮಹಿಳೆಯು ಹಂಪಿನಗರ, ದೀಪಾಂಜಲಿ ನಗರ ಮತ್ತು ಮೂಡಲ ಪಾಳ್ಯದಲ್ಲಿ ಓಡಾಡಿದ್ದಳು. ಹೀಗಾಗಿ ಈ ಮೂರೂ ಪ್ರದೇಶಗಳಲ್ಲಿ ಹೆಮ್ಮಾರಿ ಕಂಟಕ ಉಂಟು ಮಾಡುವ ಲಕ್ಷಣಗಳು ಕಂಡುಬರುತ್ತಿವೆ.