Tag: Coronavirus symptoms

  • ಕೊರೊನಾ ವೈರಸ್ ಹೊಸ ಗುಣಲಕ್ಷಣ

    ಕೊರೊನಾ ವೈರಸ್ ಹೊಸ ಗುಣಲಕ್ಷಣ

    – ಬಿಕ್ಕಳಿಕೆಯಿಂದಲೂ ವಕ್ಕರಿಸುತ್ತಂತೆ ಹೆಮ್ಮಾರಿ

    ಬೆಂಗಳೂರು: ಕೊರೊನಾ ವೈರಸ್ ಸೋಂಕಿತರದಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಹೊಸ ಲಕ್ಷಣವನ್ನು ಗುರುತಿಸಲಾಗಿದೆ. ಬಿಕ್ಕಳಿಕೆಯೂ ಸೋಂಕಿನ ಹೊಸ ಲಕ್ಷಣ ಎಂದು ತಜ್ಞರು ತಿಳಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಜಯದೇವ ಆಸ್ಪತ್ರೆ ನಿದೇರ್ಶಕ ಡಾ.ಸಿಎನ್ ಮಂಜುನಾಥ್ ಅವರು, ವ್ಯಕ್ತಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದರೂ ಈ ಸಂದರ್ಭದಲ್ಲಿ ಸೋಂಕು ಪತ್ತೆ ಮಾಡಲು ಟೆಸ್ಟ್ ಮಾಡುವುದು ಮುಖ್ಯವಾಗುತ್ತದೆ. ಕೊರೊನಾದಿಂದ ಬಳಲುತ್ತಿರುವ ರೋಗಿಗಳ ಅಧ್ಯಯನದ ವೇಳೆ ಶೇ.20 ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಉಳಿದಂತೆ ಶೀತ, ಕೆಮ್ಮು, ಗಂಟಲು ನೋವು, ಮೈಕೈ ನೋವು ಲಕ್ಷಣಗಳಿದ್ದು, ಬಿಕ್ಕಳಿಕೆಯೂ ಹೊಸ ಲಕ್ಷಣವಾಗಿದೆ ಎಂದು ತಿಳಿಸಿದ್ದಾರೆ.

    ಸದ್ಯ ಮಳೆಗಾಲ ಆಗಿರುವುದರಿಂದ ಮಳೆಯಿಂದ ಕೆಮ್ಮು, ಜ್ವರ ಬಂದಿದೆ ಎಂದು ನಿರ್ಲಕ್ಷ್ಯ ವಹಿಸುವುದು ಸೂಕ್ತವಲ್ಲ. ವೈರಲ್ ಇನ್ಫೆಕ್ಷನ್ ಆದ ಸಂದರ್ಭದಲ್ಲಿ ಬಿಕ್ಕಳಿಕೆ ಕೂಡ ರೋಗಿಗಳನ್ನು ಕಾಡುತ್ತದೆ. ಬಿಕ್ಕಳಿಸೋದು ಸೋಂಕಿನ ಇತ್ತೀಚಿನ ಹೊಸ ಗುಣಲಕ್ಷಣವಾಗಿದೆ. ಪದೇ ಪದೇ ಬಿಕ್ಕಳಿಕೆ ಬರುತ್ತಿದ್ದರೆ ಕೊರೊನಾ ಸೋಂಕಿನ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ.