Tag: Corona Warriors

  • ಪೊಲೀಸರ ಸಹಯೋಗದಲ್ಲಿ ವೈಲ್ಡ್ ಕ್ರಾಫ್ಟ್ ಸಂಸ್ಥೆಯಿಂದ ಉಚಿತ ಮಾಸ್ಕ್ ವಿತರಣೆ

    ಪೊಲೀಸರ ಸಹಯೋಗದಲ್ಲಿ ವೈಲ್ಡ್ ಕ್ರಾಫ್ಟ್ ಸಂಸ್ಥೆಯಿಂದ ಉಚಿತ ಮಾಸ್ಕ್ ವಿತರಣೆ

    ಬೆಂಗಳೂರು: ಕೊರೊನಾ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಅವಶ್ಯಕತೆ ಬಹಳ ಇದೆ. ಆದ್ದರಿಂದ ವೈಲ್ಡ್ ಕ್ರಾಫ್ಟ್ ಸಂಸ್ಥೆಯಿಂದ ಸಾವಿರಾರು ಕೊರೊನಾ ವಾರಿಯರ್ಸ್‍ಗೆ ಎನ್-95 ಮಾಸ್ಕ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಸಂಸ್ಥೆಯಿಂದ ಕೊರೊನಾ ವಾರಿಯರ್ಸ್ ಗಳಾದ ಪೊಲೀಸರು ಮತ್ತು ಮಾಧ್ಯಮದವರಿಗೆ ಉನ್ನತ ಗುಣಮಟ್ಟದ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ.

    ಪ್ರತಿದಿನ ಕಂಟೈನ್ಮೆಂಟ್ ಝೋನ್, ರಸ್ತೆಯಲ್ಲಿ ನಿಂತು ಜನರಿಗಾಗಿ ಶ್ರಮಿಸುವ ಪೊಲೀಸರಿಗೆ ಉಚಿತ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಸಮಾಜಕ್ಕಾಗಿ ಹಗಲಿರುಳು ದುಡಿಯುತ್ತಿರುವ ಪೊಲೀಸರಿಗೆ ಸಹಾಯ ಮಾಡುವ ಕೆಲಸ ಮಾಡಲಾಗುತ್ತಿದೆ. ಪೊಲೀಸ್ ಸಹಯೋಗದೊಂದಿಗೆ ಕೇವಲ ಪೊಲೀಸರಿಗೆ ಮಾತ್ರವಲ್ಲದೆ, ಪಬ್ಲಿಕ್ ಟಿವಿ ಸೇರಿದಂತೆ ಹಲವು ಖಾಸಗಿ ಚಾನೆಲ್ ಹಾಗೂ ಮಾಧ್ಯಮ ಸಿಬ್ಬಂದಿಗೆ ಮಾಸ್ಕ್ ಗಳನ್ನು ವಿತರಣೆ ಮಾಡಿದೆ.

    ಪೊಲೀಸರು ಕೂಡ ಲಕ್ಷಾಂತರ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಪೊಲೀಸ್ ಅಧಿಕಾರಿಗಳಾದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹಿರಿಯ ಅಧಿಕಾರಿಗಳಾದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಸೇರಿದಂತೆ ಹಲವಾರು ಅಧಿಕಾರಿಗಳ ಸಹಯೋಗದಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ತಲುಪಿಸುವ ಕೆಲಸ ಮಾಡಲಾಗಿದೆ.

  • ಮಳೆಗಾಲದ ಶೀತ ಜ್ವರ ಅಂತ ನಿರ್ಲಕ್ಷ್ಯ ಬೇಡ: ಡಿಸಿ ಕಿವಿಮಾತು

    ಮಳೆಗಾಲದ ಶೀತ ಜ್ವರ ಅಂತ ನಿರ್ಲಕ್ಷ್ಯ ಬೇಡ: ಡಿಸಿ ಕಿವಿಮಾತು

    – ಕೊರೊನಾ ವಾರಿಯರ್ಸ್‌ಗೆ ಸದ್ಯಕ್ಕೆ ಸನ್ಮಾನ ಬೇಡ

    ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ವಿಪರೀತವಾಗಿ ಸುರಿಯುತ್ತಿದೆ. ಮಳೆಗಾಲದಲ್ಲಿ ಶೀತ, ನೆಗಡಿ, ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯ ಜನತೆ ಯಾರೂ ಮಾಮೂಲಿ ಶೀತ ಜ್ವರ ಎಂದು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಕಿವಿಮಾತು ಹೇಳಿದ್ದಾರೆ.

    ಶೀತ ಜ್ವರದ ಲಕ್ಷಣ ಕಂಡು ಬಂದಾಗ ಹತ್ತಿರದ ಫೀವರ್ ಕ್ಲಿನಿಕ್‌ಗೆ ಭೇಟಿ ಕೊಡಬೇಕು. ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಆರೋಗ್ಯದಲ್ಲಿ ಬದಲಾವಣೆಯಾದರೆ ಎಲ್ಲ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದರು.

    ಕೊರೊನಾ ವಿಚಾರದಲ್ಲಿ ಯಾರಿಗೂ ಆತಂಕ, ಭಯ ಬೇಡ. ಜಿಲ್ಲಾಡಳಿತ ಸೂಕ್ತ ಚಿಕಿತ್ಸೆಯನ್ನು ರೋಗಿಗಳಿಗೆ ಕೊಡಿಸುತ್ತಿದೆ ಎಂದು ಜಿ.ಜಗದೀಶ್ ಜನರಿಗೆ ಭರವಸೆ ನೀಡಿದರು.

    ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮಗಳು ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿದೆ. ಸನ್ಮಾನದ ಹೆಸರಿನಲ್ಲಿ ಆಯೋಜಕರು ಸಾಮಾಜಿಕ ಅಂತರ, ಮತ್ತಿತರ ಸರ್ಕಾರದ ನಿರ್ದೇಶನಗಳನ್ನು ಗಾಳಿಗೆ ತೂರುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಯಾವುದೇ ಕಾರ್ಯಕ್ರಮಗಳು ಬೇಡ. ಕೊರೊನಾ ಹತೋಟಿಗೆ ಬಂದ ನಂತರ ಸಂಭ್ರಮಿಸಲು ಸಾಕಷ್ಟು ಕಾಲಾವಕಾಶ ಇದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

  • ಬೆಂಗಳೂರಲ್ಲಿ ಕೊರೊನಾ ಪ್ರತಿ ದಿನದ ದಾಖಲೆಯೂ ಪುಡಿಪುಡಿ

    ಬೆಂಗಳೂರಲ್ಲಿ ಕೊರೊನಾ ಪ್ರತಿ ದಿನದ ದಾಖಲೆಯೂ ಪುಡಿಪುಡಿ

    -2 ಸಾವಿರದಂಚಿಗೆ ಬಂದು ನಿಂತ ಮಹಾಮಾರಿ
    -25 ಪೊಲೀಸ್ ಸ್ಟೇಷನ್ ಸೀಲ್‍ಡೌನ್

    ಬೆಂಗಳೂರು: ಕೊರೊನಾ ಮಹಾ ಸುನಾಮಿ ರಾಜ್ಯದ ಮೇಲೆ ಕಳೆದೊಂದು ವಾರದಿಂದ ನಿರಂತರವಾಗಿ ದೊಡ್ಡ ದಾಳಿ ಮಾಡುತ್ತಿದೆ. ಡೆಡ್ಲಿ ವೈರಸ್ ಪ್ರತಿ ದಿನವೂ ತನ್ನೆಲ್ಲಾ ಹಿಂದಿನ ದಾಖಲೆಗಳನ್ನು ಪುಡಿಗಟ್ಟಿ ಹೊಸ ಇತಿಹಾಸ ಬರೆಯುತ್ತಿದೆ. ನೋಡ ನೋಡುತ್ತಲೇ ಸೋಂಕಿತರ ಸಂಖ್ಯೆ 23,474ಕ್ಕೆ ಬಂದು ನಿಂತಿದೆ. ಇಂದು ಒಂದೇ ದಿನ 1,925 ಮಂದಿಯನ್ನ ಹೆಮ್ಮಾರಿ ವಕ್ಕರಿಸಿಕೊಂಡಿದೆ. ಬೆಂಗಳೂರಿನ ಅಂಕಿ ಅಂಶಗಳಂತೂ ಮಹಾನಗರವನ್ನ ಬಿಟ್ಟು ಹೋಗುವಂತೆ ಮಾಡಿದೆ.

    ಇಂದು ರಾಜಧಾನಿ ಬೆಂಗಳೂರಲ್ಲಿ ಹೊಸದಾಗಿ 1235 ಜನರ ಮೇಲೆ ಸೋಂಕು ಸವಾರಿ ಮಾಡಿದೆ. ಪರಿಣಾಮ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ 9,580ಕ್ಕೆ ಬಂದು ನಿಂತಿದೆ. ರಾಜ್ಯದ ಒಟ್ಟು ಸೋಂಕಿತರ ಪೈಕಿ ಬೆಂಗಳೂರಿನದ್ದೇ ದೊಡ್ಡ ಪಾಲಿದೆ. ಬೆಂಗಳೂರಿನ ಸ್ಥಿತಿ ಕ್ಷಣಕ್ಷಣಕ್ಕೂ ಭಯ ಬೀಳಿಸುತ್ತಿದೆ. ಕಾರಣ ಸೋಂಕಿತರ ಸಂಖ್ಯೆ ಏರಿದ ವೇಗದಲ್ಲಿ ಬಿಡುಗಡೆ ಹೊಂದುತ್ತಿಲ್ಲ. ಇವತ್ತು ಕೇವಲ 302 ಮಂದಿ ಬಿಡುಗಡೆ ಹೊಂದಿದ್ರೆ, 8167 ಮಂದಿ ಇನ್ನೂ ಬೆಡ್ ಮೇಲೆ ಇದ್ದಾರೆ.

    55 ಖಾಕಿಗಳಿಗೆ ಕೊರೊನಾ: ಬೆಂಗಳೂರಿನಲ್ಲಿ 55 ಪೊಲೀಸರಿಗೆ ಕೊರೊನಾ ಸೋಂಕು ಇಂದು ತಗುಲಿರೋದು ದೃಢವಾಗಿದೆ. ಈ ಮೂಲಕ 335 ಪೊಲೀಸರಿಗೆ ಹೆಮ್ಮಾರಿ ಅಂಟಿದೆ. ಐವರು ಸಾವನ್ನಪ್ಪಿದ್ದಾರೆ. 304 ಸಕ್ರಿಯ ಪ್ರಕರಣಗಳಿವೆ. ಇವತ್ತು ಒಂದೇ ದಿನ 25 ಸ್ಟೇಷನ್‍ಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಇಬ್ಬರಿಗೆ ವೈರಸ್ ಅಂಟಿರೋ ಕಾರಣ ಮಲ್ಲೇಶ್ವರಂ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್‍ಡೌನ್ ಮಾಡಲಾಗಿದೆ. ಕೆಜೆ ಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ 5 ಜನರಿಗೆ ಪಾಸಿಟಿವ್ ಆಗಿದೆ. ರಾಜಾಜಿನಗರ ಸಂಚಾರ ಠಾಣೆಗೂ ಕೊರೊನಾ ಎಂಟ್ರಿಯಾಗಿದ್ದು, 70 ಜನ ಸಿಬ್ಬಂದಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

    ತುಮಕೂರಿನ ಕುಣಿಗಲ್ ಠಾಣೆಯ ಹೆಡ್‍ಕಾನ್ಸ್ ಟೇಬಲ್‍ಗೆ ಸೋಂಕು ತಗಲಿದ್ದು, ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಉಡುಪಿಯ ಕುಂದಾಪುರದ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್‍ಗೆ ವೈರಸ್ ಅಂಟಿದ್ದು, ಸೀಲ್‍ಡೌನ್ ಮಾಡಲಾಗಿದೆ. ಈ ಮಧ್ಯೆ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನ ಸೀಲ್‍ಡೌನ್ ಮಾಡಲಾಗಿದೆ. ದೇವಸ್ಥಾನದ ಪಕ್ಕದಲ್ಲೇ ಸೋಂಕಿತ ವ್ಯಕ್ತಿಗೆ ಪಾಸಿಟಿವ್ ಬಂದಿರೋ ಕಾರಣ ಸೀಲ್ ಮಾಡಲಾಗಿದೆ.

  • ಕೊಡಗಿನಲ್ಲಿ ಕೊರೊನಾ ವಾರಿಯರ್ಸ್‍ಗೆ ಮನೆಗೆ ಹೋಗಲು ಆತಂಕ!

    ಕೊಡಗಿನಲ್ಲಿ ಕೊರೊನಾ ವಾರಿಯರ್ಸ್‍ಗೆ ಮನೆಗೆ ಹೋಗಲು ಆತಂಕ!

    ಮಡಿಕೇರಿ: ಕೊರೊನಾ ಮಹಾಮಾರಿಯಿಂದ ಎಷ್ಟೋ ಕುಟುಂಬಗಳು ದುಡಿಮೆಯೂ ಇಲ್ಲದೆ ಕಷ್ಟದಲ್ಲೇ ಜೀವನ ಸಾಗಿಸುತ್ತಿವೆ. ಅಂತಹವರಿಗೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಸಹಾಯವನ್ನು ಮಾಡುತ್ತಿವೆ. ಆದರೆ ಕೊರೊನಾ ವಾರ್ಡ್‍ಗಳಲ್ಲೇ ಕೆಲಸ ಮಾಡುತ್ತಿರುವವರಿಗೆ ಪ್ರತ್ಯೇಕ ವಸತಿ ಸೌಲಭ್ಯವಿಲ್ಲದೆ ಮನೆಯವರೊಂದಿಗೆ ಆತಂಕದಿಂದಲೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಾವೇ ನಮ್ಮ ಮನೆಗಳಿಗೆ ಕೊರೊನಾ ಮಹಾಮಾರಿಯನ್ನು ತಂದುಬಿಡ್ತೇವಾ ಎಂಬ ಆಂತಕ ಕೊರೊನಾ ವಾರಿಯರ್ಸ್‍ಗೆ ಕಾಡುತ್ತಿದೆ.

    ಕೊರೊನಾ ರೋಗದ ವಿರುದ್ಧವೇ ಹೋರಾಡುತ್ತಾ, ರೋಗಿಗಳಿಗೆ ಶ್ರುಶೂಷೆ ಮಾಡುತ್ತಿರುವವರ ಧೈರ್ಯ, ಸ್ಥೈರ್ಯವನ್ನು ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಿರುವವರನ್ನು ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗಬೇಕಾಗಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿರುವ ವಾರಿಯರ್ಸ್, ಕೊರೊನಾ ವಾರ್ಡ್‍ಗಳಲ್ಲಿ ಕೆಲಸ ಮಾಡುವವರಿಗೆ ಪಿಪಿಇ ಕಿಟ್ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರುತ್ತೇವೆ. ಆದರೆ ಮನೆಯಲ್ಲಿ ವಯಸ್ಸಾದ ತಮ್ಮ ತಂದೆ, ತಾಯಿಗಳು, ಪುಟಾಣಿ ಮಕ್ಕಳು ಇರುತ್ತಾರೆ. ಹೀಗಾಗಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಹೋಗುವುದಾದರೆ ಬೀದಿಯಲ್ಲಿರುವ ಮಹಾಮಾರಿಯನ್ನು ನಾವೇ ಮನೆಗೆ ಕರೆದುಕೊಂಡು ಹೋದಂತೆ ಆಗುತ್ತದೆ.

    ಒಂದೊಮ್ಮೆ ಹಾಗೇನಾದರೂ ಆದರೆ ನಮ್ಮ ಸ್ಥಿತಿ ಏನು? ಬಿಪಿ, ಶುಗರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಮನೆಯಲ್ಲಿದ್ದಾರೆ. ಇದರಿಂದ ಗಂಭೀರ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ ಎಂದು ಕೊರೊನಾ ವಾರ್ಡ್‍ಗಳಲ್ಲಿ ಕೆಲಸ ಮಾಡುತ್ತಿರುವ ನಾನ ಕ್ಲಿನಿಕ್ ಸಿಬ್ಬಂದಿಗಳ ಮತ್ತು ಪೋಷಕರ ಆತಂಕವಾಗಿದೆ.

    ಅಧಿಕಾರಗಳ ಗಮನಕ್ಕೆ ತಂದ ಪಬ್ಲಿಕ್: ಕೋವಿಡ್ ವಾರ್ಡ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‍ಗಳ ಈ ಸಮಸ್ಯೆಯನ್ನು ಪಬ್ಲಿಕ್ ಟಿವಿ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಕೂಡಲೇ ಈ ಕುರಿತು ಎಚ್ಚೆತ್ತ ಮೆಡಿಕಲ್ ಕಾಲೇಜಿನ ಅಧಿಕಾರಿಗಳು, ಕೋವಿಡ್ ವಾರ್ಡ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಜಿಲ್ಲಾಡಳಿತದಿಂದಲೇ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಬಯಸಿದರೆ ಹಾಸ್ಟೆಲ್ ಅಥವಾ ಕ್ವಾಟ್ರಸ್‍ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಅಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಅಗತ್ಯವಿರುವವರು ತನ್ನ ಹೆಸರನ್ನು ನೊಂದಾಯಿಸಿಕೊಂಡರೆ ಪ್ರತ್ಯೇಕ ವಸತಿ ಸಮೀಕ್ಷೆ ಮಾಡಲಾಗುವುದು ಎಂದು ಸೂಪರಿಡೆಂಟ್ ಆಫ್ ಮೆಡಿಕಲ್ ಸ್ಟ್ಯಾಫ್ ಲೋಕೇಶ್ ಅವರು ಸಮಸ್ಯೆ ಬಗ್ಗೆ ಹರಿಸುತ್ತೇವೆ ಎಂದಿದ್ದಾರೆ.

  • ಬೀದರ್‌ನಲ್ಲಿ ಮುಖ್ಯಪೇದೆ ಸೇರಿ 7 ಜನರಿಗೆ ಕೊರೊನಾ

    ಬೀದರ್‌ನಲ್ಲಿ ಮುಖ್ಯಪೇದೆ ಸೇರಿ 7 ಜನರಿಗೆ ಕೊರೊನಾ

    ಬೀದರ್: ಗಡಿ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ ಗೂ ಸೋಂಕು ತಗುಲಿದ್ದು, ಮುಖ್ಯ ಪೊಲೀಸ್ ಪೇದೆ ಸೇರಿ 7 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.

    ಬೀದರ್ ಹಾಗೂ ಬಸವಕಲ್ಯಾಣ ತಾಲೂಕಿನ 7 ಜನಕ್ಕೆ ಇಂದು ಪಾಸಿಟಿವ್ ಧೃಡವಾಗಿದೆ. 7 ಜನರಲ್ಲಿ ನಗರದ ಗಾಂಧಿ ಗಂಜ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಪೇದೆಗೂ ಇಂದು ಮಹಾಮಾರಿ ವಕ್ಕರಿಸಿದೆ. ಕಂಟೈನ್ಮೆಟ್ ಝೋನ್ ಸಂಪರ್ಕ ಹಾಗೂ ಮುಂಬೈ ಕಂಟಕದಿಂದ ಸೋಂಕು ಧೃಡವಾಗಿದೆ.

    ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 562ಕ್ಕೆ ಹೆಚ್ಚಳವಾಗಿದ್ದು, ಇದರಲ್ಲಿ 456 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 87 ಪ್ರಕರಣಗಳು ಸಕ್ರಿಯವಾಗಿವೆ. ಇಗಾಗಲೇ ಜಿಲ್ಲೆಯಲ್ಲಿ 19 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಪ್ರತಿ ದಿನ ಮಹಾಮಾರಿಯ ಆರ್ಭಟ ನೋಡಿ ಜಿಲ್ಲೆಯ ಜನ ಆತಂಕಗೊಂಡಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ನರ್ಸ್‍ಗೆ ಸೇರಿ ಮೂವರಿಗೆ ಕೊರೊನಾ

    ಚಿಕ್ಕಬಳ್ಳಾಪುರದಲ್ಲಿ ನರ್ಸ್‍ಗೆ ಸೇರಿ ಮೂವರಿಗೆ ಕೊರೊನಾ

    – ಕಂಟೈನ್ಮೆಂಟ್ ಝೋನ್‍ನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು ಮೂರು ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ವಾರಿಯರ್ ನರ್ಸ್‍ಗೂ ಸೋಂಕು ತಗುಲಿದೆ.

    ದಿಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್‍ಗೆ ಸೋಂಕು ತಗುಲಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಕ್ವಾರಂಟೈನ್ ಕೇಂದ್ರದ ಬಳಿ ನರ್ಸ್ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಇವರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ನರ್ಸ್ ರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.

    ಚಿಕ್ಕಬಳ್ಳಾಪುರ ನಗರದ 19ನೇ ವಾರ್ಡಿನಲ್ಲಿ ಸೀರೆ ನೇಯ್ದು ಮಾರಾಟ ಮಾಡುವ 46 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ ನಗರದ 09ನೇ ವಾರ್ಡಿನಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಮಗ ಕೋಳಿ ಫಾರಂ ಮಾಲೀಕ 28 ವರ್ಷದ ವ್ಯಕ್ತಿಗೂ ಕೊರೊನಾ ದೃಢವಾಗಿದೆ. ಸದ್ಯ ಈ ಮೂವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇವರ ಮನೆಗಳ ಸುತ್ತ ಸೀಲ್‍ಡೌನ್ ಮಾಡಿ ಕುಟುಂಬಸ್ಥರು ಹಾಗೂ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿ ತಪಾಸಣೆಗೆ ಓಳಪಡಿಸಲಾಗುತ್ತಿದೆ.

  • ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಇಲ್ಲ- ಆರೋಗ್ಯ ಇಲಾಖೆ ನಿರ್ಲಕ್ಷ್ಯ, ಕೊರೊನಾ ವಾರಿಯರ್ಸ್‌ಗೆ ಟೆನ್ಶನ್

    ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಇಲ್ಲ- ಆರೋಗ್ಯ ಇಲಾಖೆ ನಿರ್ಲಕ್ಷ್ಯ, ಕೊರೊನಾ ವಾರಿಯರ್ಸ್‌ಗೆ ಟೆನ್ಶನ್

    ಹಾವೇರಿ: ಕೊರೊನಾ ವಾರಿಯರ್ಸ್‍ಗಳಿಗೂ ಸೋಂಕು ತಗುಲಿದೆ. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಷ್ಕಾಳಜಿ ತೋರುತ್ತಿದೆ. ಅದರಲ್ಲೂ ಈ ಜಿಲ್ಲೆಯಲ್ಲಿನ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರ ತಪಾಸಣೆ ಮಾಡೋ ಸಿಬ್ಬಂದಿಯಂತೂ ಕಾಳಜಿಯನ್ನೆ ವಹಿಸ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

    ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಆಗಿರೋ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದೆ. ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿ ದೃಢಪಟ್ಟಿರೋ ಬಹುತೇಕ ಪ್ರಕರಣಗಳು ಸಾಂಸ್ಥಿಕ ಕ್ವಾರಂಟೈನ್ ಆಗಿದ್ದವರು. ಹೀಗಿದ್ದರೂ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರ ತಪಾಸಣೆ ಮಾಡೋ ಸಿಬ್ಬಂದಿ ಬಗ್ಗೆಯಂತೂ ಆರೋಗ್ಯ ಇಲಾಖೆ ಕಾಳಜಿಯನ್ನೆ ವಹಿಸ್ತಿಲ್ಲ. ಇದರಿಂದ ಕೊರೋನಾ ವಾರಿಯರ್ಸ್‍ಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

    ಹಾವೇರಿ ಜಿಲ್ಲೆಯಲ್ಲಿ ಹೊರ ಜಿಲ್ಲೆಯಲ್ಲಿ ಹೊರ ರಾಜ್ಯಗಳಿಂದ ಬಂದವರನ್ನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗ್ತಿದೆ. ಬಹುತೇಕ ಸರ್ಕಾರಿ ಹಾಸ್ಟೇಲ್‍ಗಳನ್ನ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಜಿಲ್ಲೆಯಲ್ಲಿ ದೃಢಪಟ್ಟಿರೋ 44 ಪ್ರಕರಣಗಳ ಪೈಕಿ ಕೆಲ ಪ್ರಕರಣಗಳನ್ನ ಹೊರತುಪಡಿಸಿದರೆ ಬಹುತೇಕ ಸಾಂಸ್ಥಿಕ ಕ್ವಾರಂಟೈನ್ ಆಗಿದ್ದವರಲ್ಲಿ ದೃಢಪಟ್ಟಿರೋ ಪ್ರಕರಣಗಳು. ಹೀಗಿದ್ದರೂ ಕ್ವಾರಂಟೈನ್‍ನಲ್ಲಿರುವ ಸಿಬ್ಬಂದಿ ಹ್ಯಾಂಡ್ ಗ್ಲೌಸ್, ತಲೆಗವಸು ಸೇರಿದಂತೆ ಮುಂಜಾಗೃತಾ ಕ್ರಮಗಳನ್ನ ಕೈಗೊಂಡಿಲ್ಲ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಕೂಡ ಈ ಬಗ್ಗೆ ಕಾಳಜಿ ವಹಿಸಿಲ್ಲ. ಕ್ವಾರಂಟೈನ್‍ನಲ್ಲಿ ಸಿಬ್ಬಂದಿ ಕೂಡ ಸ್ವಯಂ ಸುರಕ್ಷತಾ ಕ್ರಮಗಳನ್ನ ಅನುಸರಿಸುತ್ತಿಲ್ಲ.

    ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಹೋಗೋರು ಹೆಚ್ಚಿನ ರಕ್ಷಣಾ ಕ್ರಮಗಳನ್ನ ಕೈಗೊಳ್ಳಬೇಕು. ಆದರೆ ದಿನಕ್ಕೆ ಎರಡ್ಮೂರು ಬಾರಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಹೋಗಿ ಅಲ್ಲಿನ ಜನರ ತಪಾಸಣೆ ಮಾಡಿ ಬರುತ್ತಿರೋ ಕೆಲವು ವೈದ್ಯರು ಮತ್ತು ಸಿಬ್ಬಂದಿ ಅಷ್ಟಾಗಿ ಸುರಕ್ಷತಾ ಕ್ರಮಗಳನ್ನ ಅನುಸರಿಸ್ತಿಲ್ಲ. ಜಿಲ್ಲಾಡಳಿತದ ನಿರ್ದೇಶನದಂತೆ ಎನ್95 ಮಾಸ್ಕ್ ಧರಿಸೋದರಿಂದ ಪಾಲಿಸಬೇಕಾದ ನಿಯಮಗಳನ್ನ ಪಾಲಿಸ್ತಿಲ್ಲ. ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿರೋ ಜನರಿಗೆ ಕೆಲವು ವೈದ್ಯರು ಮತ್ತು ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದೆ ತಪಾಸಣೆ ಮಾಡ್ತಿದ್ದಾರೆ.

    ಜಿಲ್ಲಾಡಳಿತ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರ ತಪಾಸಣೆಗೆ ಹೋಗೋ ವೈದ್ಯರು ಮತ್ತು ಸಿಬ್ಬಂದಿಗೆ ಸುರಕ್ಷತಾ ಕ್ರಮಗಳನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕಿದೆ. ಇಲ್ಲದಿದ್ರೆ ಕೊರೊನಾ ಸೋಂಕು ಮತ್ತಷ್ಟು ಹರಡೋದ್ರಲ್ಲಿ ಎರಡು ಮಾತಿಲ್ಲ.

  • ಕೊರೊನಾ ಸೋಂಕಿತ ಪೇದೆ ಆತ್ಮಹತ್ಯೆಗೆ ಸಿಎಂ ಬಿಎಸ್‍ವೈ ಸಂತಾಪ

    ಕೊರೊನಾ ಸೋಂಕಿತ ಪೇದೆ ಆತ್ಮಹತ್ಯೆಗೆ ಸಿಎಂ ಬಿಎಸ್‍ವೈ ಸಂತಾಪ

    – ವಾರಿಯರ್‌ಗಳಿಗೆ ಸಿಎಂ ಧೈರ್ಯ

    ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿತ ಪೇದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಮುಖ್ಯಮಂತ್ರಿಯ ಬಿ.ಎಸ್.ಯಡಿಯೂರಪ್ಪ ಅವರು ಪೇದೆ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ, ” ಕರ್ನಾಟಕ ರಾಜ್ಯ ಮೀಸಲು ಪಡೆಯ ಬೆಂಗಳೂರು ನಗರದ 4ನೇ ಬೆಟಾಲಿಯನ್‍ನಲ್ಲಿ ಸಶಸ್ತ್ರ ಪೇದೆಯಾಗಿದ್ದ ಮಂಜೇಶ್ ಅವರು, ಕೋವಿಡ್ ಸೋಂಕು ದೃಢಪಟ್ಟ ಕಾರಣ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖಕರ” ಎಂದು ಟ್ವೀಟ್ ಮಾಡುವ ಮೂಲಕ ಪೇದೆ ಆತ್ಮಹತ್ಯೆ ಪ್ರಕರಣಕ್ಕೆ ಸಂತಾಪ ಸೂಚಿಸಿದ್ದಾರೆ.

    ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರಕಬಹುದಾದ ಎಲ್ಲ ಪರಿಹಾರ ಮತ್ತು ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿರುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

    ಪೊಲೀಸ್ ಸಿಬ್ಬಂದಿ ಕೋವಿಡ್ ಸಂಬಂಧಿತ ಕೆಲಸಗಳಲ್ಲಿ ಮುಂಚೂಣಿಯಲ್ಲಿ ವಾರಿಯರ್‌ಗಳಾಗಿ ಜೀವವನ್ನೇ ಪಣಕ್ಕಿಟ್ಟು ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿಯೇ ಪ್ರತ್ಯೇಕ ಕೋವಿಡ್ ಪರೀಕ್ಷಾ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

    “ರಾಜ್ಯದಲ್ಲಿ ಒಟ್ಟಾರೆ, ಕೋವಿಡ್ ಸೋಂಕಿನಿಂದ ಮರಣ ಹೊಂದಿದವರ ಸಂಖ್ಯೆ ಇತರ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಯಾವುದೇ ಸೋಂಕಿತ ನಾಗರಿಕರು ಹಾಗೂ ಸರ್ಕಾರಿ ಸಿಬ್ಬಂದಿ ಯಾವುದೇ ಕಾರಣಕ್ಕೂ ಧೃತಿಗೆಡುವ ಅಗತ್ಯವಿಲ್ಲ. ಸರ್ಕಾರ ಸದಾ ನಿಮ್ಮ ಜೊತೆಗಿರುತ್ತದೆ” ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ

  • ನಾಲ್ವರಿಂದ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ

    ನಾಲ್ವರಿಂದ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಾಲ್ಕು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರೋದು ಧೃಡವಾಗಿದೆ. ಪರಿಣಾಮ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ ಹೆಚ್ಚಾಗಿದೆ.

    ಈಗಾಗಲೇ ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರು ತಿಂಗಳಿಂದ ಜೈಲಿನಲ್ಲಿದ್ದ ಕೈದಿಗೂ ಕೊರೊನಾ ತಗುಲಿದ್ದು, ಆತನಿಗೆ ಸೋಂಕು ಹೇಗೆ ಬಂತು ಎಂದು ಹುಡುಕಾಡುವಷ್ಟರಲ್ಲಿಯೇ ಜಿಲ್ಲೆಯ ನಾಲ್ವರು ಪೊಲೀಸರಿಗೆ ಕೋವಿಡ್-19 ತಗುಲಿದೆ. ಇದೀಗ ಜಿಲ್ಲಾಡಳಿತತ ಜೊತೆಗೆ ಇತರೆ ಪೊಲೀಸರಿಗೆ ಕೊರೊನಾ ಢವ ಢವ ಶುರುವಾಗಿದೆ.

    ಸೋಂಕಿತ ನಾಲ್ವರು ಪೊಲೀಸರು ಜೂ.17 ರಂದು ತರೀಕೆರೆ ಸರ್ಕಾರಿ ಆಸ್ಪತ್ತೆಯಲ್ಲಿ ಕೊರೊನಾ ಸಾಮುದಾಯಿಕ ಪರೀಕ್ಷೆಗೆ ಒಳಗಾಗಿ ಗಂಟಲ ದ್ರವ ನೀಡಿದ್ದರು. ಬಳಿಕ ಜೂ.17 ಹಾಗೂ 18 ರಂದು ಕೆಲಸಕ್ಕೆ ಹಾಜರಾಗಿ, ಮನೆಗೆ ಹೋಗಿದ್ದರು. ಸ್ನೇಹಿತರ ಜೊತೆ ಸೇರಿದ್ದರು. ಅಷ್ಟೆ ಅಲ್ಲದೆ ಜೂ.19 ರಂದು ತರೀಕೆರೆ ಡಿ.ವೈ.ಎಸ್.ಪಿ. ವ್ಯಾಪ್ತಿಯ ಸುಮಾರು 10ಕ್ಕೂ ಹೆಚ್ವು ಪೊಲೀಸ್ ಠಾಣೆಯ 40ಕ್ಕೂ ಹೆಚ್ವು ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಜೊತೆ ಕ್ರೈಂ ಮೀಟಿಂಗ್ ಮಾಡಿದ್ದರು.

    ಸಭೆಯಲ್ಲಿ ಪಾಸಿಟಿವ್ ಬಂದಿರೋ ಪೊಲೀಸರು ಸಹ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಭಾಗಿಯಾಗದ ಬಳಿಕ ಎಲ್ಲ ಪೊಲೀಸರು ತಮ್ಮ ತಮ್ಮ ಠಾಣೆಗಳಿಗೆ ತೆರಳಿ ಕೆಲಸಕ್ಕೆ ಹಾಜರಾಗಿದ್ದಾರೆ. ಈಗ ಈ ನಾಲ್ಕು ಪೊಲೀಸರ ಪಾಸಿಟಿವ್ ಕೇಸ್ ಸುಮಾರು ಹತ್ತು ಠಾಣೆಯ ನಲವತ್ತಕ್ಕೂ ಹೆಚ್ವು ಪೊಲೀಸರಿಗೆ ಭಯ ಹುಟ್ಟಿಸಿದೆ.

  • ಕೊರೊನಾ ವಾರಿಯರ್ಸ್ ಮೊಬೈಲ್ ಒಡೆದು ದರ್ಪ ತೋರಿದ ರೈತ ಮುಖಂಡೆ

    ಕೊರೊನಾ ವಾರಿಯರ್ಸ್ ಮೊಬೈಲ್ ಒಡೆದು ದರ್ಪ ತೋರಿದ ರೈತ ಮುಖಂಡೆ

    ಹಾವೇರಿ: ಕೊರೊನಾ ವಾರಿಯರ್ಸ್ ಮೇಲೆ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆಯ ದಬ್ಬಾಳಿಕೆ ಮಾಡಿದ ಘಟನೆ ಹಾವೇರಿ ನಗರದ ಫಿವರ್ ಕ್ಲಿನಿಕ್‍ನಲ್ಲಿ ನಡೆದಿದೆ. ರೈತ ಸಂಘದ ಅಧ್ಯಕ್ಷೆ ಮಂಜುಳಾ ಅಕ್ಕಿ, ಕಿವಿ ನೋವು ಅಂತಾ ಔಷಧಿ ಪಡೆಯಲು ಬಂದಿದ್ದ ವೇಳೆ ಘಟನೆ ನಡೆದಿದೆ.

    ಔಷಧಿ ಕೈಯಲ್ಲಿ ಕೊಡದೆ ಕಿಟಕಿಯಲ್ಲಿ ಕೆಳಗೆ ಇಟ್ಟಿದ್ದಕ್ಕೆ ಫಾರ್ಮಾಸಿಸ್ಟ್ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎನ್ನಲಾಗಿದೆ. ರೈತ ಸಂಘದ ಅಧ್ಯಕ್ಷೆಯ ದಬ್ಬಾಳಿಕೆಗೆ ಫಾರ್ಮಾಸಿಸ್ಟ್ ಅಂಜನಾ ಪಾಟೀಲ್ ಕಣ್ಣೀರು ಹಾಕಿದ್ದಾರೆ. ಜಗಳ ಬಿಡಿಸಲು ಬಂದ ಸಿಸ್ಟರ್ ಮೊಬೈಲ್ ಕಿತ್ತುಕೊಂಡು ಒಡೆದು ಹಾಕಿ ದರ್ಪ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

    ನಡೆದ ಘಟನೆ ಹೇಳಲು ಮುಂದಾದ ಆಸ್ಪತ್ರೆಗೆ ಬಂದ ರೋಗಿಯ ಮೇಲೆ ಮಣ್ಣು ತೂರಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಮಹಿಳಾ ಅಧ್ಯಕ್ಷೆಯ ಆವಾಂತರಕ್ಕೆ ಆರೋಗ್ಯ ಸಿಬ್ಬಂದಿ ಕೆಲಕಾಲ ಬೆಚ್ಚಿಬಿದ್ದರು. ಫಾರ್ಮಾಸಿಸ್ಟ್, ಆರೋಗ್ಯ ಇಲಾಖೆ ಹಾಗೂ ಸ್ಥಳೀಯರ ಆರೋಪವನ್ನು ರೈತ ಸಂಘದ ಮಹಿಳಾ ಅಧ್ಯಕ್ಷೆ ಅಲ್ಲಗಳೆದಿದ್ದು, ಸರಿಯಾದ ರೀತಿಯ ಔಷಧಿ ನೀಡಿಲ್ಲ ಎಂದಿದ್ದಾರೆ. ಸ್ಥಳಕ್ಕೆ ಸಿಪಿಐ ಪ್ರಭಾವತಿ ಹಾಗೂ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.