Tag: Corona Warriors

  • 3 ತಿಂಗಳ ಸಂಬಳವನ್ನು ಆಶಾಕಾರ್ಯಕರ್ತೆಯರಿಗೆ ನೀಡುತ್ತೇನೆ: ಗಣೇಶ್ ಹುಕ್ಕೇರಿ

    3 ತಿಂಗಳ ಸಂಬಳವನ್ನು ಆಶಾಕಾರ್ಯಕರ್ತೆಯರಿಗೆ ನೀಡುತ್ತೇನೆ: ಗಣೇಶ್ ಹುಕ್ಕೇರಿ

    ಬೆಂಗಳೂರು: ಕಾರ್ಮಿಕರ ದಿನಾಚರಣೆಯಂದು ಕೋವಿಡ್ ವಾರಿಯರ್ ಗಳಿಗೆ ಸದಲಗಾ ಕ್ಷೇತ್ರದ ಶಾಸಕ ಗಣೇಶ್ ಹುಕ್ಕೇರಿಯವರಿಂದ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

    ಹೌದು. ಮುಂದಿನ ಮೂರು ತಿಂಗಳ ಸಂಬಳವನ್ನು ತಮ್ಮ ಕ್ಷೇತ್ರದ ಫ್ರಂಟ್ ಲೈನ್ ವಾರಿಯರ್ ಗಳಾದ ಆಶಾ ಕಾರ್ಯಕರ್ತೆಯರಿಗೆ ನೀಡಲು ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳ ಮನವಿಯಂತೆ ಒಂದು ತಿಂಗಳ ಸಂಬಳವನ್ನ ಕೋವಿಡ್ ನಿಧಿಗೆ ನೀಡಿದ್ದಾರೆ. ಜೊತೆಗೆ ಅದರ ಮುಂದಿನ ಮೂರು ತಿಂಗಳ ಸಂಬಳವನ್ನ ಕೋವಿಡ್ ವಾರಿಯರ್ ಗಳಿಗೆ ನೀಡಲು ಶಾಸಕರು ಮುಂದಾಗಿದ್ದಾರೆ.

    ರಾಜ್ಯ ಸರ್ಕಾರ‌ ನನಗೆ ನೀಡುವ ಸಂಬಳದಲ್ಲಿ ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಮನವಿಯಂತೆ ಕೋವಿಡ್ ನಿಧಿಗೆ ನೀಡುತ್ತಿದ್ದೇನೆ.
    ಅದನ್ನು…

    Posted by Ganesh Hukkeri on Friday, April 30, 2021

    ಈ ಬಗ್ಗೆ ಖುದ್ದು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದು ಕೊಂಡಿರುವ ಶಾಸಕ ಗಣೇಶ್ ಹುಕ್ಕೇರಿ, ಈಗಾಗಲೇ ತಮ್ಮ ಸ್ವಂತ ಹಣದಲ್ಲಿ ಉಚಿತ ಅಂಬುಲೆನ್ಸ್ ಹಾಗೂ 120 ಬೆಡ್ ಗಳ ಕೋವಿಡ್ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ರೋಗಿಗಳಿಗೆ ಉಚಿತ ಊಟ, ತಿಂಡಿ, ಹಣ್ಣು ಎಲ್ಲವನ್ನೂ ತಮ್ಮ ಅಣ್ಣಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ನಿಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂಧಿ ಕೊರತೆ ಇರುವ ಹಿನ್ನೆಲೆ, ಅಣ್ಣಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಸಂಬಳ ನೀಡಿ ಭರ್ತಿ ಮಾಡಿಕೊಳ್ಳುತ್ತಿದ್ದಾರೆ.

  • ಎರಡನೇ ಹಂತದಲ್ಲಿ ಪ್ರಧಾನಿ ಮೋದಿ, ಎಲ್ಲ ರಾಜ್ಯಗಳ ಸಿಎಂಗಳಿಗೆ ಲಸಿಕೆ

    ಎರಡನೇ ಹಂತದಲ್ಲಿ ಪ್ರಧಾನಿ ಮೋದಿ, ಎಲ್ಲ ರಾಜ್ಯಗಳ ಸಿಎಂಗಳಿಗೆ ಲಸಿಕೆ

    – 50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್

    ನವದೆಹಲಿ: ಬಹು ದಿನಗಳಿಂದ ಕಾಯುತ್ತಿದ್ದ ಕೊರೊನಾ ಲಸಿಕೆ ಹಂಚಿಕೆ ಕಳೆದ ವಾರ ಆರಂಭವಾಗಿದ್ದು, ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗೆ ನೀಡಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ಹಾಗೂ ಜನಪ್ರತಿನಿಧಿಗಳು ಯಾವಾಗ ವ್ಯಾಕ್ಸಿನ್ ಪಡೆಯುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ.

    ಎರಡನೇ ಹಂತದ ಲಸಿಕೆ ವಿತರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಲಸಿಕೆ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜನವರಿ 16 ರಂದು ಲಸಿಕೆ ಹಂಚಿಕೆಯನ್ನು ಆರಂಭಿಸಲಾಗಿದೆ. ಆದರೆ ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಲಸಿಕೆ ಪಡೆದಿದ್ದಾರೆ. ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಸೇರಿ 50 ವರ್ಷ ಮೇಲ್ಪಟ್ಟ ಎಲ್ಲ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಕೊರೊನಾ ಲಸಿಕೆ ಪಡೆಯಲಿದ್ದಾರೆ.

    ದೇಶದಲ್ಲಿ ಈಗಾಗಲೇ ಸೀರಂ ಸಂಸ್ಥೆಯ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಕೊರೊನಾ ವಾರಿಯರ್ಸ್ ಈಗಾಗಲೇ ಲಸಿಕೆ ಪಡೆಯುತ್ತಿದ್ದಾರೆ. ಆದರೆ ನಿಗದಿತ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಎಲ್ಲ ರಾಜ್ಯಗಳಲ್ಲಿ ನಿಗದಿತ ಗುರಿ ತಲುಪಲು ಹರಸಾಹಸ ಮಾಡುತ್ತಿದ್ದಾರೆ.

    ಇದೀಗ ಎರಡನೇ ಸುತ್ತಿನಲ್ಲಿ 50 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲಿದ್ದಾರೆ. ಲಸಿಕೆ ಹಂಚಿಕೆ ಆರಂಭಕ್ಕೂ ಮುನ್ನ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಯಾರೂ ಹೆದರುವ ಹಾಗೂ ವ್ಯಾಕ್ಸಿನ್ ಪಡೆಯಲು ಹರಸಾಹಸ ಪಡುವ ಅಗತ್ಯವಿಲ್ಲ. ಎರಡನೇ ಸುತ್ತಿನಲ್ಲಿ ನಮ್ಮ ಸರದಿ ಬರಲಿದೆ ಎಂದು ತಿಳಿಸಿದ್ದರು.

    ಸಂಸದರು, ಶಾಸಕರು ಹಾಗೂ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಇತರರನ್ನು ಫ್ರಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಬೇಕು ಎಂದು ಹರಿಯಾಣ, ಬಿಹಾರ ಹಾಗೂ ತೆಲಂಗಾಣ ಸೇರಿದಂತೆ ಇತರೆ ರಾಜ್ಯದ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು. ಯಾವುದೇ ಕಾರಣಕ್ಕೂ ಸರತಿಯನ್ನು ಜಂಪ್ ಮಾಡಬಾರದು ಎಂದು ಪ್ರಧಾನಿ ಮೋದಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹೀಗಾಗಿ ಮೊದಲ ಹಂತದಲ್ಲಿ ಕೇವಲ ಕೊರೊನಾ ವಾರಿಯರ್ಸ್ ಗೆ ಮಾತ್ರ ಲಸಿಕೆ ನೀಡಲಾಗಿದೆ.

  • ಬೆಳಗಾವಿಯಲ್ಲಿ ವ್ಯಾಕ್ಸಿನ್ ಪಡೆದ 18 ಜನರಿಗೆ ಜ್ವರ-  ಹೆದರುವ ಅಗತ್ಯವಿಲ್ಲ ಎಂದ ಆರೋಗ್ಯ ಇಲಾಖೆ

    ಬೆಳಗಾವಿಯಲ್ಲಿ ವ್ಯಾಕ್ಸಿನ್ ಪಡೆದ 18 ಜನರಿಗೆ ಜ್ವರ- ಹೆದರುವ ಅಗತ್ಯವಿಲ್ಲ ಎಂದ ಆರೋಗ್ಯ ಇಲಾಖೆ

    ಬೆಳಗಾವಿ: ಕೊರೊನಾ ಲಸಿಕೆ ಪಡೆದು ಜಿಲ್ಲೆಯಲ್ಲಿ 18 ಜರಿಗೆ ಸಾಧಾರಣ ಜ್ವರ ಮತ್ತು ಮೈಕೈ ನೋವು ಕಂಡುಬಂದಿದೆ. ಆದರೆ ಲಸಿಕೆ ಪಡೆದಾಗ ಇವೆಲ್ಲ ಸಹಜ ಯಾರೂ ಹೆದರುವ ಅಗತ್ಯವಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಈ ವರೆಗೆ ಮೂರು 3,500 ಜನ ಲಸಿಕೆ ಪಡೆದಿದ್ದು, ಒಟ್ಟು 35,960 ಜನರಿಗೆ ಲಸಿಕೆ ನೀಡಬೇಕಾಗಿದೆ. ಲಸಿಕೆ ಪಡೆದ ಕರೊನಾ ವಾರಿಯರ್ಸ್ ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ. ಮುಂದಿನ ದಿನಗಳಲ್ಲಿ ಲಸಿಕೆ ಪಡೆಯುವ ಫಲಾನುಭವಿಗಳ ಪಟ್ಟಿ ದುಪ್ಪಟ್ಟು ಆಗಲಿದೆ ಎಂದು ಜಿಲ್ಲಾ ಲಸಿಕಾಧಿಕಾರಿ ಡಾ.ಗಡಾದ ತಿಳಿಸಿದ್ದಾರೆ.

    ಕೊವಿಶೀಲ್ಡ್ ಲಸಿಕೆಯನ್ನು ಪಡೆದ ಕೆಲವರಿಗೆ ಆರೋಗ್ಯ ತೊಂದರೆಯಾಗುತ್ತಿದೆ ಎಂದು ಗಾಳಿ ಸುದ್ದಿ ಹರಡುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡಬಾರದು. ವ್ಯಾಕ್ಸಿನ್ ಪಡೆದಾಗ ಕೆಲವು ಸಣ್ಣಪುಟ್ಟ ಜ್ವರ ಹಾಗೂ ಮೈಕೈನೋವು ಸಹಜವಾಗಿರುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳ ಅಧಿಕಾರಿಗಳು ಹಾಗೂ ಲಸಿಕಾ ಸಿಬ್ಬಂದಿ ಜೊತೆ ನಿರಂತರ ಸಂಪರ್ಕ ಸಾಧಿಸಲಾಗುತ್ತಿದೆ.

    ಆನ್‍ಲೈನ್ ಮೂಲಕ ಜಿಲ್ಲಾ ಲಸಿಕಾಧಿಕಾರಿಗಳ ಜೊತೆ ವಿಡಿಯೋ ಸಂವಾದ ಆರಂಭವಾಗಿದೆ. ಪ್ರತಿ ತಾಲೂಕಿನಿಂದ ಎಲ್ಲ ಲಸಿಕಾ ಸಿಬ್ಬಂದಿ ಮುಖ್ಯಸ್ಥರ ಜೊತೆ ಜಿಲ್ಲಾ ಲಸಿಕಾಧಿಕಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಲಸಿಕೆ ಪಡೆದವರಿಗೆ ಯಾರಿಗಾದರೂ ರಿಯಾಕ್ಷನ್ ಆರಂಭವಾದರೆ ತಕ್ಷಣ ಚಿಕಿತ್ಸೆ ನೀಡುವ ತಂಡ 24 ಗಂಟೆ ಕಾರ್ಯಗತವಾಗುತ್ತದೆ.

  • ಇಂದು 15,223 ಜನಕ್ಕೆ ಲಸಿಕೆ – ರಾಜ್ಯದಲ್ಲಿ 645 ಹೊಸ ಕೊರೊನಾ ಪ್ರಕರಣ

    ಇಂದು 15,223 ಜನಕ್ಕೆ ಲಸಿಕೆ – ರಾಜ್ಯದಲ್ಲಿ 645 ಹೊಸ ಕೊರೊನಾ ಪ್ರಕರಣ

    – ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಲಸಿಕೆ? ಇಲ್ಲಿದೆ ಮಾಹಿತಿ

    ಬೆಂಗಳೂರು: ಇಂದು ರಾಜ್ಯದಲ್ಲಿ 15,223 ಕೊರೊನಾ ವಾರಿಯರ್ಸ್ ಗಳಿಕೆ ಕೋವಿಡ್ ಲಸಿಕೆ ನೀಡಲಾಗಿದೆ. ಇವತ್ತು 645 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಆರು ಜನ ಸಾವನ್ನಪ್ಪಿದ್ದಾರೆ. ಇವತ್ತು 32,205 ನೋಂದಾಯಿತರಿಗೆ ಲಸಿಕೆ ನೀಡಲು ಸರ್ಕಾರ ಸಿದ್ಧವಾಗಿತ್ತು. ಆದ್ರೆ 15,223 ಮಂದಿ ವ್ಯಾಕ್ಸಿನೇಷನ್ ಪಡೆದಿದ್ದಾರೆ.

    ಆರೋಗ್ಯ ಇಲಾಖೆಯ ಪ್ರಕಾರ, ಬಾಗಲಕೋಟೆ 738, ಬಳ್ಳಾರಿ 161, ಬೆಳಗಾವಿ 438, ಬೆಂಗಳೂರು ಗ್ರಾಮಾಂತರ 916, ಬೆಂಗಳೂರು ನಗರ 4,288, ಬೀದರ್ 198, ಚಾಮರಾಜನಗರ 158, ಚಿಕ್ಕಮಗಳೂರು 552, ಚಿತ್ರದುರ್ಗ 150, ದಕ್ಷಿಣ ಕನ್ನಡ 734 ದಾವಣಗೆರೆ 313, ಧಾರವಾಡ 174, ಗದಗ 30, ಹಾಸನ 73, ಹಾವೇರಿ 138, ಕಲಬುರಗಿ 20, ಕೊಡಗು ,59 ಕೋಲಾರ 0, ಕೊಪ್ಪಳ 439, ಮಂಡ್ಯ 96, ರಾಯಚೂರು 42, ರಾಮನಗರ 604, ಶಿವಮೊಗ್ಗ 357, ತುಮಕೂರು 4,310, ಉಡುಪಿ 235 ಜನಕ್ಕೆ ಲಸಿಕೆ ನೀಡಲಾಗಿದೆ. ಉತ್ತರ ಕನ್ನಡ, ವಿಜಯಪುರ ಮತ್ತು ಯಾದಗಿರಿ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಮೈಸೂರಿನಲ್ಲಿ ಇಂದು ವ್ಯಾಕ್ಸಿನ್ ನೀಡಿಲ್ಲ.

    ರಾಜ್ಯದಲ್ಲಿ 7,865 ಸಕ್ರಿಯ ಪ್ರಕರಣ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,33,077ಕ್ಕೆ ಏರಿಕೆಯಾಗಿದ್ದು, 7,865 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 12,181 ಜನ ಕೊರೊನಾಗೆ ಬಲಿಯಾಗಿದ್ದಾರೆ. ಕೋವಿಡ್ 19 ಸೋಂಕಿನ ಖಚಿತ ಪ್ರಮಾಣ ಶೇ.0.79 ಮತ್ತು ಮರಣ ಪ್ರಮಾಣ ಶೇ.0.93ರಷ್ಟಿದೆ.

    ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?: ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 2, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 18, ಬೆಂಗಳೂರು ನಗರ 357, ಬೀದರ್ 6, ಚಾಮರಾಜನಗರ 2, ಚಿಕ್ಕಬಳ್ಳಾಪುರ 36, ಚಿಕ್ಕಮಗಳೂರು 2, ಚಿತ್ರದುರ್ಗ 16, ದಕ್ಷಿಣ ಕನ್ನಡ 25, ದಾವಣಗೆರೆ 5, ಧಾರವಾಡ 8, ಗದಗ 2, ಹಾಸನ 10, ಹಾವೇರಿ 0, ಕಲಬುರಗಿ 8, ಕೊಡಗು 6, ಕೋಲಾರ 8, ಕೊಪ್ಪಳ 2, ಮಂಡ್ಯ 15, ಮೈಸೂರು 34, ರಾಯಚೂರು 7, ರಾಮನಗರ 2, ಶಿವಮೊಗ್ಗ 17, ತುಮಕೂರು 11, ಉಡುಪಿ 4, ಉತ್ತರ ಕನ್ನಡ 17, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಕೊರೊನಾ ವ್ಯಾಕ್ಸಿನ್ ಪಡೆಯೋಕೆ ವಾರಿಯರ್ಸ್ ಹಿಂದೇಟು

    ಕೊರೊನಾ ವ್ಯಾಕ್ಸಿನ್ ಪಡೆಯೋಕೆ ವಾರಿಯರ್ಸ್ ಹಿಂದೇಟು

    ಬೆಂಗಳೂರು: ಆಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿರೋ ‘ಚೀನಿ ವೈರಸ್’ ಕೊರೊನಾಗೆ ಇಷ್ಟು ದಿನ ವ್ಯಾಕ್ಸಿನ್ ಬಂದ್ರೆ ಸಾಕಪ್ಪಾ ಅಂತ ಜನ ಕಾಯುತ್ತಿದ್ದರು. ಆದ್ರೆ ಕೊವಿಶೀಲ್ಡ್ ವ್ಯಾಕ್ಸಿನ್ ವಿತರಣೆಯ ಮಹಾಯಜ್ಞಕ್ಕೆ ಚಾಲನೆ ಸಿಕ್ಕು ನಾಲ್ಕನೇ ದಿನ ಆದರೂ ಟಾರ್ಗೆಟ್ ರೀಚ್ ಆಗೋಕೆ ಒದ್ದಾಡುವಂತಾಗಿದೆ. ಪ್ರಾಣ ಉಳಿಸೋ ಸಂಜೀವಿನಿ, ಜೀವಾಮೃತ ಅಂತೆಲ್ಲಾ ಕರೆಸಿಕೊಳ್ತಿದ್ದ ವ್ಯಾಕ್ಸಿನ್‍ಗೆ ಡಿಮ್ಯಾಂಡೇ ಇಲ್ಲ.

    ರಾಜ್ಯವೂ ಸೇರಿದಂತೆ ದೇಶಾದ್ಯಂತ ಮೊದಲ ಹಂತದ ಕೊರೋನಾ ವಾರಿಯರ್ಸ್ ವ್ಯಾಕ್ಸಿನೇಷನ್‍ಗೆ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗ್ತಿಲ್ಲ. ದೇಶಾದ್ಯಂತ 3 ದಿನದಲ್ಲಿ 4,54,049 ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗಿದೆ. 580 ಜನರಲ್ಲಿ ಅಡ್ಡಪರಿಣಾಮವಾಗಿದ್ದು, 7 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

    ರಾಜ್ಯದಲ್ಲಿ ಇವತ್ತು 32,205 ಗುರಿ ಪೈಕಿ 15,223 ಹೆಲ್ತ್ ವರ್ಕರ್ಸ್ ಗೆ ಲಸಿಕೆ ನೀಡಲಾಗಿದೆ. ಹೀಗಾಗಿ 4 ದಿನದಲ್ಲಿ ಒಟ್ಟು 70,723 ಮಂದಿಗೆ ಲಸಿಕೆ ಚುಚ್ಚುಮದ್ದು ನೀಡಲಾಗಿದೆ. ಆದರೆ 1,08,922 ಲಕ್ಷ ಗುರಿ ರೀಚ್ ಕಷ್ಟವಾಗ್ತಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರೋ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಆರಂಭಿಕ ದಿನಗಳಲ್ಲಿ ಜನರಿಗೆ ಭಯ, ಆತಂಕ ಸಹಜ. ಎಲ್ಲರೂ ಕೋವಿಡ್ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಕರ್ನಾಟಕದಲ್ಲೇ ಅತೀ ಹೆಚ್ಚು ಕೋವಿಡ್ ಲಸಿಕೆ ವಿತರಣೆ ಆಗಿದೆ ಆಗಿದೆ ಅಂತ ಹೇಳಿದ್ದಾರೆ.

    3 ದಿನಗಳಿಂದ ಟಾರ್ಗೆಟ್ ರೀಚ್ ಆಗದ ಕಾರಣ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ. ಟಾರ್ಗೆಟ್ ತಲುಪಲು, ತಜ್ಞರು 2 ತಿಂಗಳ ಡೆಡ್‍ಲೈನ್ ಸಲಹೆ ನೀಡಿದ್ದಾರೆ. 2ನೇ ಅಲೆಯ ಹೆಚ್ಚಾಗೋಕೆ ಮುನ್ನ ದೇಶದ ಅರ್ಧದಷ್ಟು ಜನರಿಗೆ ವ್ಯಾಕ್ಸಿನ್ ಕೊಡೋದು ಕ್ಷೇಮ ಅಂದಿದ್ದಾರೆ.

    ಲಸಿಕೆ ಟಾರ್ಗೆಟ್ ರೀಚ್ ಆಗ್ತಿಲ್ಲ ಯಾಕೆ?: ವ್ಯಾಕ್ಸಿನ್ ಬಗ್ಗೆ ಸರಿಯಾದ ಜಾಗೃತಿ ಮೂಡಿಸಿಲ್ಲ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವ್ಯಾಕ್ಸಿನ್ ಬಗ್ಗೆ ಭಯ ಹುಟ್ಟಿಸೋ ವಿಡಿಯೋ, ಮೆಸೇಜ್‍ಗಳ ಹರಿದಾಡುತ್ತಿವೆ ಎನ್ನಲಾಗಿದೆ. ಲಸಿಕೆಯಿಂದ ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಸಹಜ ಭಯ ಜನರಲ್ಲಿ ಕಾಡುತ್ತಿದೆ. ವ್ಯಾಕ್ಸಿನ್‍ನಿಂದ ಎಡವಟ್ಟಾದ್ರೆ ಲಸಿಕೆ ಕಂಪನಿಗಳೇ ಹೊಣೆ ಅಂತ ಕೇಂದ್ರ ಹೇಳಿರೋದು ಮತ್ತಷ್ಟು ಭಯ ಹುಟ್ಟಿಸಿದೆ. ಕೋವ್ಯಾಕ್ಸಿನ್ 3ನೇ ಕ್ಲಿನಿಕಲ್ ಟ್ರಯಲ್ ಮುಗಿಸದಿದ್ದರೂ ಪ್ರಯೋಗಕ್ಕೆ ಅವಕಾಶ ನೀಡಿರೋದು ಸಹ ಒಂದು ಕಾರಣ.

    ವ್ಯಾಕ್ಸಿನ್ ಇಂಜೆಕ್ಷನ್ ನಂತರ ಧೂಮಪಾನ, ಮದ್ಯಪಾನ ಮಾಡಬಾರದು ಎಂಬ ತಜ್ಞರ ಹೇಳಿಕೆಗಳಿಂದ ಇವರೆಡರ ಚಟಕ್ಕೆ ದಾಸರಾಗಿರುವ ಜನರು ಲಸಿಕೆಗೆ ಮುಂದೆ ಬರುತ್ತಿಲ್ಲ. ನೋಂದಣಿ ಮಾಡಿಸಿಕೊಂಡವರಿಗೆ ವ್ಯಾಕ್ಸಿನೇಷನ್ ಕಡ್ಡಾಯ ಮಾಡದಿರೋದು.

    ಸರ್ಕಾರದ ಮುಂದಿನ ಆಯ್ಕೆ ಏನು?: ಲಸಿಕಾ ಅಭಿಯಾನದ ಬಗ್ಗೆ ವ್ಯಾಪಕವಾಗಿ ಪ್ರಚಾರದ ಅಗತ್ಯವಿದೆ. ವ್ಯಾಕ್ಸಿನ್ ತೆಗೆದುಕೊಂಡು ಖ್ಯಾತ ವೈದ್ಯರನ್ನ ಮುಂದಿಟ್ಟು, ಆರೋಗ್ಯ ಕಾರ್ಯಕರ್ತರಿಗೆ ಹುರಿದುಂಬಿಸಬೇಕು. ಕೆಲ ಸಿಬ್ಬಂದಿ ತಪ್ಪಾಗಿ ಮೊಬೈಲ್ ನಂಬರ್ ನಮೂದಿಸಿದ್ದು, ತುರ್ತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ವ್ಯಾಕ್ಸಿನ್ ಪಡೆಯಲು ಸಿಬ್ಬಂದಿ ಹಿಂದೇಟೇಕೆ ಅಂತ ಪತ್ತೆ ಹಚ್ಚಿ, ಮನವೊಲಿಸಬೇಕು.

  • ಪೊಲೀಸರು ನಿಜವಾದ ಕೊರೊನಾ ವಾರಿಯರ್ಸ್: ಬಸವರಾಜ್ ಬೊಮ್ಮಾಯಿ

    ಪೊಲೀಸರು ನಿಜವಾದ ಕೊರೊನಾ ವಾರಿಯರ್ಸ್: ಬಸವರಾಜ್ ಬೊಮ್ಮಾಯಿ

    – ಎರಡು ಪ್ರಶ್ನೆಗಳ ಪಾಪ ಪ್ರಜ್ಞೆ ಕಾಡುತ್ತಿದೆ

    ಬೆಂಗಳೂರು: ನಿಜವಾದ ಕೊರೊನಾ ವಾರಿಯರ್ಸ್ ಎಂದರೆ ಅದು ಪೊಲೀಸರು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಈಗ ಎರಡು ಪ್ರಶ್ನೆ ಉದ್ಭವ ಆಗುತ್ತೀವೆ. ಏಕೆ ಕೊರೊನಾ ವೇಳೆ ಪೊಲೀಸರು ಪ್ರಾಣ ತೆತ್ತರು? ಗೃಹ ಇಲಾಖೆಯ ಮಂತ್ರಿಯಾಗಿ ಸಾವು ನೋವನ್ನು ತಡೆಯಲಾಗಲಿಲ್ಲವೇಕೆ ಎಂಬ ಎರಡು ಪ್ರಶ್ನೆಗಳ ಪಾಪ ಪ್ರಜ್ಞೆ ಕಾಡುತ್ತಿದೆ. ಪ್ರಾಣಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ನೋವಿದೆ ಎಂದರು.

    ಹಿರಿಯ ಸಚಿವರ ಸಭೆಯಲ್ಲಿ ನಾನು ಈ ಹಿಂದೆ ಹೇಳಿದ್ದೆ, ನಿಜವಾದ ಕೊರೊನಾ ವಾರಿಯರ್ ಇದ್ರೆ ಅದು ಪೊಲೀಸರು ಮಾತ್ರ. ಬೇರೆ ಇಲಾಖೆಗಳಿಗೆ ಸಹಾಯಧನ ಘೋಷಣೆ ಆಯ್ತು. ಅನೇಕ ಇಲಾಖೆ ಪ್ರಸ್ತಾವನೆಗಳನ್ನು ಕಳುಹಿಸಲಾಯ್ತು. ನಮ್ಮ ಇಲಾಖೆಗೆ ಚರ್ಚೆ ಮಾಡುವಾಗಿದ್ದರೆ ಪರಿಹಾರ ಕೊಡಲೇ ಬೇಡಿ. ಪೊಲೀಸರು ನಿಜವಾದ ಕೊರೊನಾ ವಾರಿಯರ್ಸ್, ಯಾವ ಕಾರಣಕ್ಕೂ ಪ್ರಶ್ನೆ ಮಾಡದೆ ಪರಿಹಾರ ಕೊಡಿ ಎಂದಿದ್ದೆ ಎಂದು ಬೊಮ್ಮಾಯಿ ತಿಳಿಸಿದರು.

    ನನ್ನ ಈ ಬೇಡಿಕೆಗೆ ಮುಖ್ಯಮಂತ್ರಿಗಳು 30 ಲಕ್ಷ ಕೊಡಲು ಒಪ್ಪಿದರು. ಪೊಲೀಸರು ದೊಡ್ಡ ಕುಟುಂಬ ಇದ್ದಂತೆ. ಬೇರೆ ಇಲಾಖೆಯಲ್ಲಿ ಯಾರಿಗಾದರು ತೊಂದರೆಯಾದರೆ, ಇಡೀ ಪೊಲೀಸ್ ಇಲಾಖೆ ಸ್ಪಂದಿಸುತ್ತದೆ. ಹೀಗಾಗಿ ನಿಜವಾದ ಕೊರೊನಾ ವಾರಿಯರ್ಸ್ ಪೊಲೀಸರು ಎಂದು ತಮ್ಮ ಇಲಾಖೆಯನ್ನು ಹಾಡಿಹೊಗಳಿದರು.

  • 500ಕ್ಕೂ ಕೊರೊನಾ ವಾರಿಯರ್ ಸಾವು, ಸರ್ಕಾರದಿಂದ ಒಂದೇ ಕುಟುಂಬಕ್ಕೆ ಪರಿಹಾರ: ಹೆಚ್‍ಡಿಕೆ ಕಿಡಿ

    500ಕ್ಕೂ ಕೊರೊನಾ ವಾರಿಯರ್ ಸಾವು, ಸರ್ಕಾರದಿಂದ ಒಂದೇ ಕುಟುಂಬಕ್ಕೆ ಪರಿಹಾರ: ಹೆಚ್‍ಡಿಕೆ ಕಿಡಿ

    – ಹೃದಯ ಹೀನ ಉತ್ತರ ಕೊಡುವ ಶಿಕ್ಷಣ ಸಚಿವರು

    ಬೆಂಗಳೂರು: ರಾಜ್ಯದಲ್ಲಿ 500ಕ್ಕೂ ಹೆಚ್ಚು ಕೊರೊನಾ ವಾರಿಯರ್ ಗಳು ಪ್ರಾಣ ಕಳೆದುಕೊಂಡಿದ್ದು, ರಾಜ್ಯ ಸರ್ಕಾರ ಮಾತ್ರ ಒಂದೇ ಕುಟುಂಬಕ್ಕೆ ಪರಿಹಾರ ನೀಡಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಮ್ಮನ ಉಳಸಿಕೊಡಿ ಎಂದು ಮನವಿ ಮಾಡಿಕೊಂಡ ಪುತ್ರಿಗೆ ಶಿಕ್ಷಣ ಸಚಿವರು ಹೃದಯಹೀನ ಉತ್ತರ ನೀಡಿದ್ದಾರೆ. ಇಂತಹ ಸರ್ಕಾರದಿಂದ ಜನರು ಏನು ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

    ರಾಜ್ಯದಲ್ಲಿ ಕೊರೊನ ಸಂದರ್ಭದಲ್ಲೂ ನಾಗರಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜೀವ ಪಣಕ್ಕಿಟ್ಟು ಕೆಲಸ ಮಾಡಿದ 500ಕ್ಕೂ ಹೆಚ್ಚು ಕೊರೊನ ವಾರಿಯರ್ ಗಳು ಜೀವ ಕಳೆದುಕೊಂಡಿದ್ದು, ಆ ಪೈಕಿ ಕೇವಲ ಒಂದೇ ಒಂದು ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದೆ ಎಂಬ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹುದು. ಕೇವಲ ಬಾಯಿ ಚಪಲ ತೀರಿಸಿಕೊಳ್ಳಲು ಕೊರೊನ ವಾರಿಯರ್‍ಗಳನ್ನು ಭೇಷ್ ಎನ್ನುವ ಸರ್ಕಾರ, ಅವರ ಜೀವದ ಜತೆ ಆಟವಾಡುತ್ತಿದೆ. ಜನರ ಆರೋಗ್ಯ ಕಾಪಾಡುವ ಸಲುವಾಗಿ ತಮ್ಮ ಸರ್ವಸ್ವವನ್ನೇ ಬಲಿಕೊಟ್ಟ ಕೊರೊನ ವಾರಿಯರ್ ಕುಟುಂಬಗಳಿಗೆ ತಾನೇ ಘೋಷಿಸಿದಂತೆ ಪರಿಹಾರ ಕೊಡದಿದ್ದರೆ ಸರ್ಕಾರ ಇದ್ದರೆಷ್ಟು? ಬಿಟ್ಟರೆಷ್ಟು?

    ತನ್ನ ಹೆತ್ತ ತಾಯಿಯನ್ನು ಉಳಿಸಿಕೊಡಿ ಎಂದು ವಿದ್ಯಾಗಮ ಯೋಜನೆಯಡಿ ಕೆಲಸ ಮಾಡಿದ ಶಿಕ್ಷಕಿಯ ಪುತ್ರಿ ಸರ್ಕಾರಕ್ಕೆ ಪತ್ರ ಬರೆದರೆ, ಶಿಕ್ಷಕಿಯ ಚಿಕಿತ್ಸಾ ವೆಚ್ಚದ ಬಿಲ್ ಕೊಡುತ್ತೇನೆ ಎಂಬ ಹೃದಯಹೀನ ಉತ್ತರ ಕೊಡುವ ಶಿಕ್ಷಣ ಮಂತ್ರಿಯಿಂದ ಹಾಗೂ ಇಂತಹ ಮನಸ್ಥಿತಿಯ ಸರ್ಕಾರದಿಂದ ಕೊರೊನ ವಾರಿಯರ್ ಗಳ ಕುಟುಂಬಗಳು ಇನ್ನೇನು ನಿರೀಕ್ಷಿಸಲು ಸಾಧ್ಯ. 60 ವೈದ್ಯರು, 20 ನರ್ಸ್‍ಗಳು, 82 ಪೊಲೀಸರು, 10 ಪೌರ ಕಾರ್ಮಿಕರು, 96 ಚಾಲಕ-ನಿರ್ವಾಹಕರು, 235 ಶಿಕ್ಷಕರು- ಉಪನ್ಯಾಸಕರು, 10 ಆಶಾ ಕಾರ್ಯಕರ್ತೆಯರು ಹೀಗೆ 500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೂಡಬಿದಿರೆ ಶಿಕ್ಷಕಿ ನಿಧನ– ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದ ವಿದ್ಯಾರ್ಥಿನಿ

    ಇನ್ನು ಪತ್ರಕರ್ತರು, ಬ್ಯಾಂಕ್ ಸೇರಿದಂತೆ ವಿವಿಧ ಸೇವಾ ವಲಯದ ನೌಕರರು ಕೂಡ ಜೀವ ತೆತ್ತಿದ್ದಾರೆ. ಇವರ ಕುಟುಂಬಗಳಿಗೆ ಸರ್ಕಾರ ಉತ್ತರದಾಯಿತ್ವ ಪ್ರದರ್ಶಿಸಬೇಕಲ್ಲವೇ? ತಮಟೆ ಬಾರಿಸಿ, ದೀಪ ಹಚ್ಚಿ, ಜನಪ್ರಿಯತೆ ಗಳಿಸಿ, ಪೋಷಾಕು ಕೊಟ್ಟರೆ ಕೊರೊನ ವಾರಿಯರ್ ಗಳು ಹಾಗೂ ಅವರ ಕುಟುಂಬಗಳು ಹೇಗೆ ಸಮಾಧಾನ ಪಟ್ಟುಕೊಳ್ಳಬೇಕು? ಕನಿಷ್ಠ ಪಕ್ಷ ಕೊರೊನ ವಾರಿಯರ್ ಗಳ ಸುರಕ್ಷತೆಗೆ ಸರ್ಕಾರ ಕ್ರಮಕೈಗೊಳ್ಳಬೇಕು, ಅದನ್ನೂ ಮೀರಿ ಜೀವ ಕಳೆದುಕೊಳ್ಳುವ ಕುಟುಂಬಗಳಿಗೆ ಪರಿಹಾರ ಕೊಡದೇ ಹೋದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಟ್ವೀಟ್ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

  • ಸೋಂಕಿತರ ಜೊತೆ ವಾರಿಯರ್ಸ್ ಸಖತ್ ಸ್ಟೆಪ್ – ವಿಡಿಯೋ ವೈರಲ್

    ಸೋಂಕಿತರ ಜೊತೆ ವಾರಿಯರ್ಸ್ ಸಖತ್ ಸ್ಟೆಪ್ – ವಿಡಿಯೋ ವೈರಲ್

    – ರೋಗಿಗಳಿಗೆ ಸ್ಥೈರ್ಯ ತುಂಬಲು ಪಿಪಿಇ ಕಿಟ್ ಧರಿಸಿ ಡ್ಯಾನ್ಸ್

    ಬಳ್ಳಾರಿ: ಕೊರೊನಾ ಹೆಮ್ಮಾರಿ ಬಂದ ತಕ್ಷಣ ಜನರೆಲ್ಲ ಒಂದು ರೀತಿಯಲ್ಲಿ ಜೀವನವೇ ಅಂತ್ಯವಾಯಿತು ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಾರೆ. ಆದರೆ ಕೊರೊನಾ ರೋಗಿಗಳ ಮಾನಸಿಕ ಸ್ಥೈರ್ಯ ತುಂಬುವ ಸಲುವಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಸಖತ್ ಸ್ಟೆಪ್ ಹಾಕಿದ್ದಾರೆ.

    ಕೊರೊನಾ ಪೀಡಿತರು ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಇದ್ದು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಹೀಗಾಗಿ ಅವರಲ್ಲಿ ಮಾನಸಿಕ ಧೈರ್ಯ ತುಂಬುವ ಸಲುವಾಗಿ ಬಳ್ಳಾರಿ ಟ್ರಾಮಾ ಕೇರ್ ಸೆಂಟರ್ ನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ರೋಗಿಗಳ ಜೊತೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಕನ್ನಡ, ತೆಲುಗು ಚಿತ್ರದ ಹಾಡುಗಳಿಗೆ ಸ್ಟೆಪ್ ಹಾಕಿದ್ದು ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ಇದೇ ಟ್ರಾಮ್ ಕೇರ್ ಸೆಂಟರ್ ನಲ್ಲಿ ಮತ್ತೊಂದು ಗುಂಪು ಇಸ್ಪೀಟ್ ಆಟವನ್ನು ಆಡಿದ್ದು, ಈ ಎರಡು ವಿಡಿಯೋಗಳು ವೈರಲ್ ಆಗಿವೆ. ಈ ಎರಡು ವಿಡಿಯೋ ಕುರಿತಾಗಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

  • ನರ್ಸ್ ಮೇಲೆ ಹಲ್ಲೆಗೆ ಯತ್ನಿಸಿ, ಅಸಭ್ಯವಾಗಿ ವರ್ತಿಸಿದ ಪುಂಡ

    ನರ್ಸ್ ಮೇಲೆ ಹಲ್ಲೆಗೆ ಯತ್ನಿಸಿ, ಅಸಭ್ಯವಾಗಿ ವರ್ತಿಸಿದ ಪುಂಡ

    ಯಾದಗಿರಿ: ಕೊರೊನಾ ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದ ಯುವಕನ ಮಾಹಿತಿ ಪಡೆಯಲು ಮನೆಗೆ ಹೋದ ಮಹಿಳಾ ಸಿಬ್ಬಂದಿ ಮೇಲೆ ಪುಂಡ ಯುವಕನೋರ್ವ ಮೃಗಿಯ ವರ್ತನೆ ತೋರಿ ಹಾಡಹಗಲೇ ಅಸಭ್ಯ ನಡೆದುಕೊಂಡಿದ್ದಾನೆ. ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದ ಆನೆಗುಂದಿ ಓಣಿಯಲ್ಲಿ ನಡೆದಿದೆ.

    ಆನೆಗುಂದಿ ಓಣಿಯಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಧೃಡವಾಗಿತ್ತು. ಹೀಗಾಗಿ ಈತನ ಅಕ್ಕಪಕ್ಕದ ಮನೆಗಳಲ್ಲಿ ನರ್ಸ್ ನಾಗೇಶ್ವರಿ ಮಾಹಿತಿಯನ್ನು ಪಡೆಯುತ್ತಿದ್ದರು. ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದ ಯುವಕ ತನ್ನ ಮಾಹಿತಿ ನೀಡದೇ ಕೊರೊನಾ ವಾರಿಯರ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಪುಂಡ ಯುವಕ ಸೋಂಕಿತನ ದ್ವಿತೀಯ ಸಂಪರ್ಕದಲ್ಲಿದ್ದು ಗೊತ್ತಾಗಿದೆ. ಹೀಗಾಗಿ ನರ್ಸ್ ಆತನ ಬಳಿ ಮಾಹಿತಿ ಕೇಳಲು ಮುಂದಾಗಿದ್ದರು.

    ನರ್ಸ್ ಮಾಹಿತಿ ಕೇಳುತ್ತಿರುವಾಗ ಪುಂಡ ಯುವಕ ಅಸಭ್ಯ ವರ್ತನೆ ತೋರಲು ಮುಂದಾಗಿದ್ದಾನೆ. ಯುವಕನ ವರ್ತನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲು ನರ್ಸ್ ಮುಂದಾಗಿದ್ದಾರೆ. ಈ ವೇಳೆ ಮಹಿಳೆಯ ಮೇಲೆ ದಾಳಿ ಮಾಡಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ನರ್ಸ್ ಹತ್ತಿರ ಅಸಭ್ಯವಾಗಿ ನಡೆದುಕೊಂಡಿದ್ದಾನೆ.

    ಮಾಹಿತಿ ಪಡೆದುಕೊಳ್ಳಲು ಮನೆ- ಮನೆಗೆ ತೆರಳುವ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಗೆ ರಾಜ್ಯದಲ್ಲಿ ನಿಜಕ್ಕೂ ರಕ್ಷಣೆ ಇದೆಯಾ ಅಂತ ಅನುಮಾನ ಮೂಡುತ್ತಿದೆ. ಈ ಘಟನೆಯಿಂದ ಸರ್ಕಾರ ಕೊರೊನಾ ವಾರಿಯರ್ಸ್ ರಕ್ಷಣೆಗೆ ಎಷ್ಟೇ ಕಠಿಣ ಕಾನೂನು ತಂದರೂ ಪ್ರಯೋಜನವಾಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

  • ಕೊರೊನಾ ಸಂಗ್ರಾಮದಲ್ಲಿ ಶಸ್ತ್ರಾಸ್ತ್ರ ಇಲ್ಲದೆ ಯುದ್ಧ ಮಾಡೋದು ಹೇಗೆ?: ಡಾ. ಪ್ರಕಾಶ್ ಶೆಟ್ಟಿ

    ಕೊರೊನಾ ಸಂಗ್ರಾಮದಲ್ಲಿ ಶಸ್ತ್ರಾಸ್ತ್ರ ಇಲ್ಲದೆ ಯುದ್ಧ ಮಾಡೋದು ಹೇಗೆ?: ಡಾ. ಪ್ರಕಾಶ್ ಶೆಟ್ಟಿ

    ಉಡುಪಿ: ಕೊರೊನಾ ಎಂಬ ಯುದ್ಧರಂಗದಲ್ಲಿ ಸೈನಿಕರಿಲ್ಲದೆ ಸೈನಿಕರ ಕೈಯಲ್ಲಿ ಶಸ್ತ್ರಾಸ್ತ್ರ ಇಲ್ಲದ ಪರಿಸ್ಥಿತಿ ನಮ್ಮದು ಎಂದು ಉಡುಪಿಯ ಕರ್ನಾಟಕ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಡಾ. ಪ್ರಕಾಶ್ ಕುಮಾರ್ ಶೆಟ್ಟಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಮ್ಮ ಅಳಲು ತೋಡಿಕೊಂಡ ಅವರು, ಸಾಂಕ್ರಾಮಿಕ ಕೊರೊನಾವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಮಾಡಿ ಎಂದು ಟಾರ್ಗೆಟ್ ಕೊಡುತ್ತಿದೆ. ಹಿಂದಿನ ದಿನ ಪಾಸಿಟಿವ್ ಬಂದ 10 ಪಟ್ಟು ಟೆಸ್ಟ್ ಮಾಡಬೇಕು ಎಂದು ಗುರಿ ನೀಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈ ಟಾರ್ಗೆಟ್ ಅನ್ನು ರೀಚ್ ಮಾಡೋದಕ್ಕೆ ಬಹಳ ಕಷ್ಟ ಆಗುತ್ತಿದೆ. ಕಾರಣ ಏನು ಅಂತ ಅಂದ್ರೆ ಉಡುಪಿ ಜಿಲ್ಲೆಯಲ್ಲಿ ಶೇ. 40 ವೈದ್ಯಕೀಯ ಸಿಬ್ಬಂದಿ ಕೊರತೆಯಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

    ಉಡುಪಿಯಲ್ಲಿ ಈಗಾಗಲೇ ಕೊರೊನಾ 10 ಸಾವಿರದ ಗಡಿ ದಾಟಿದೆ. ಸುಮಾರು 3,000 ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳು ಇದೆ. 1,500 ಸಿಬ್ಬಂದಿ ಕೊರತೆಯಿಟ್ಟಕೊಂಡು ಕೆಲಸ ಮಾಡೋದು ಹೇಗೆ? ಹೀಗಿರುವಾಗ ಕೇವಲ ಟಾರ್ಗೆಟ್ ಕೊಟ್ಟರೆ ಸಾಲದು ಕೊರೊನಾ ವಾರಿಯರ್ಸ್ ಅನ್ನು ನೇಮಿಸಿ. ಈಗಿರುವ ಸಿಬ್ಬಂದಿ ಮೇಲಿನ ಒತ್ತಡವನ್ನು ದಯವಿಟ್ಟು ಕಡಿಮೆಮಾಡಿ ಎಂಬ ಕೂಗು ಕೇಳಿಬಂದಿದೆ. ನಾವು ಜೀವಪಣಕ್ಕಿಟ್ಟು ಕೆಲಸ ಮಾಡುತ್ತೇವೆ. ಆದರೆ ವ್ಯವಸ್ಥೆಗಳು ಸರಿಯಾಗಿರಬೇಕು ಎಂದು ಕೊರೊನಾ ವಾರಿಯರ್ಸ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.