Tag: Corona Warrior

  • ಡಿಸಿಗೆ ರಾಖಿ ಕಟ್ಟಿದ ಉಡುಪಿಯ ಕೊರೊನಾ ವಾರಿಯರ್ ರಾಜೀವಿ

    ಡಿಸಿಗೆ ರಾಖಿ ಕಟ್ಟಿದ ಉಡುಪಿಯ ಕೊರೊನಾ ವಾರಿಯರ್ ರಾಜೀವಿ

    ಉಡುಪಿ: ರಿಯಲ್ ಕೊರೊನಾ ವಾರಿಯರ್ ಉಡುಪಿಯ ರಾಜೀವಿ ಡಿಸಿ ಜಿ. ಜಗದೀಶ್ ಅವರಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದ್ದಾರೆ.

    ಹಿರಿಯಡ್ಕ ಸಮೀಪದ ಪೆರ್ಣಂಕಿಲದಿಂದ ತುಂಬು ಗರ್ಭಿಣಿಯನ್ನು ರಾತ್ರಿ ಮೂರು ಗಂಟೆಗೆ ರಾಜೀವಿ ಉಡುಪಿ ನಗರದ ಆಸ್ಪತ್ರೆಗೆ ಸೇರಿಸಿ ಕರ್ತವ್ಯ ಪಾಲಿಸಿದ್ದರು. ತಾನೇ ಆಟೋ ಚಲಾಯಿಸಿಕೊಂಡು ಹೋದ ಮಹಿಳೆಯ ದಿಟ್ಟತನ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿತ್ತು.

    ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಜನಪ್ರತಿನಿಧಿಗಳು ರಾಜೀವಿ ಕಾರ್ಯ ಶ್ಲಾಘಿಸಿ ಮಾದರಿ ಮಹಿಳೆ ಎಂದು ಬೆನ್ನು ತಟ್ಟಿದ್ದರು. ರಾಖಿ ಕಟ್ಟಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜೀವಿ, ನನ್ನ ಕೆಲಸವನ್ನು ಡಿ.ಸಿ ಗುರುತಿಸಿ ಪ್ರೋತ್ಸಾಹದ ಮಾತುಗಳನ್ನಾಡಿದ್ದರು. ಆಶಾ ಕಾರ್ಯಕರ್ತೆಯರಿಗೆ ಆರಂಭದಿಂದಲೂ ಜಿಲ್ಲಾಧಿಕಾರಿ ಬೆನ್ನೆಲುಬಾಗಿ ನಿಂತಿದ್ದಾರೆ, ಅವರಿಗೆ ರಾಖಿ ಕಟ್ಟಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ ಎಂದರು.

    ರಾಜೀವಿ ಗರ್ಭಿಣಿಯನ್ನು ರಾತ್ರಿ ಆಟೋ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ದಿಟ್ಟ ಆಶಾ ಕಾರ್ಯಕರ್ತೆ. ಅವರು ರಾಖಿ ಕಟ್ಟಿದ ಕ್ಷಣ ನಾನು ಭಾವುಕನಾದೆ. ನಿಜಕ್ಕೂ ಸಹ ಕೊರೊನಾ ಎದುರಿಸಲು ಇನ್ನಷ್ಟು ಧೈರ್ಯ ಬಂದಿದೆ ಎಂದು ಡಿಸಿ ತಮ್ಮ ಫೇಸ್ ಬುಕ್ ಪೇಜಲ್ಲಿ ಬರೆದುಕೊಂಡಿದ್ದಾರೆ.

    ಇಂದೂ ಕೂಡ ರಾಜೀವಿ ಬೆಳಗ್ಗೆ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿ ಕೆಲಸದ ಅವಧಿ ಮುಗಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ರಕ್ಷೆ ಕಟ್ಟಿ ವಾಪಾಸ್ ಬಾಡಿಗೆ ಮಾಡಲು ತೆರಳಿದ್ದಾರೆ.

  • ಕರೆ ಮಾಡಿದ್ರೂ ಬಾರದ ಅಂಬುಲೆನ್ಸ್ – ರಾತ್ರಿಯೆಲ್ಲ ಆಟೋದಲ್ಲಿ ಆಸ್ಪತ್ರೆಗೆ ಅಲೆದು ಶಿಕ್ಷಕಿ ಸಾವು

    – ಕೊರೊನಾ ವಾರಿಯರ್ ಆಗಿದ್ದ ಶಿಕ್ಷಕಿ

    ಬೆಂಗಳೂರು: ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಕೊರೊನಾ ವಾರಿಯರ್ ಶಿಕ್ಷಕಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ.

    ಬೆಂಗಳೂರಿನ ಡಿಜೆ ಹಳ್ಳಿಯಲ್ಲಿರುವ ಸರ್ಕಾರಿ ಉರ್ದು ಮಾದರಿ ಶಾಲೆಯಲ್ಲಿ ಕೋವಿಡ್-19 ಸರ್ವೇ ಕಾರ್ಯ ಮಾಡುತ್ತಿದ್ದ ಶಿಕ್ಷಕಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಶಿಕ್ಷಕಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರಾತ್ರಿ ಪೂರ್ತಿ ಆಕ್ಸಿಜನ್ ಸಿಲಿಂಡರ್ ಜೊತೆ ಆಟೋದಲ್ಲಿ ಆಸ್ಪತ್ರೆಗೆ ಅಲೆದು ಕೊನೆಗೆ ಸಾವನ್ನಪ್ಪಿದ್ದಾರೆ.

    ಕೊರೊನಾ ಸರ್ವೇ ಮಾಡುತ್ತಿದ್ದ ಶಿಕ್ಷಕಿಗೆ ಮೂರು ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ನಂತರ ಅವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಆದರೆ ಕಳೆದ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಗ ಅಂಬುಲೆನ್ಸ್ ಗೆ ಎಷ್ಟೇ ಕರೆ ಮಾಡಿದರೂ ಬಂದಿಲ್ಲ. ಈ ವೇಳೆ ಅವರೇ ಆಟೋದಲ್ಲಿ ಐದಾರು ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅವರಿಗೆ ಎಲ್ಲೂ ಬೆಡ್ ಸಿಕ್ಕಿಲ್ಲ. ಕೊನೆಗೆ ಅವರನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಶಿಕ್ಷಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

  • ಸೋಂಕಿತರ ಸೇವೆ ಮಾಡಿದ ವೈದ್ಯ ಕೊರೊನಾಗೆ ಬಲಿ- ಸರ್ಕಾರದಿಂದ ಸಿಗಲಿಲ್ಲ ನೆರವು

    ಸೋಂಕಿತರ ಸೇವೆ ಮಾಡಿದ ವೈದ್ಯ ಕೊರೊನಾಗೆ ಬಲಿ- ಸರ್ಕಾರದಿಂದ ಸಿಗಲಿಲ್ಲ ನೆರವು

    -ರಜೆ ಪಡೆಯದೇ 3 ತಿಂಗಳು ಸೇವೆ ನೀಡಿದ್ದ ವೈದ್ಯ
    -ರಂಜಾನ್ ದಿನವೂ ಮನೆಗೆ ಬಾರದ ವೈದ್ಯ

    ನವದೆಹಲಿ: ನನ್ನ ಪತಿ ಕೊರೊನಾ ಸೋಂಕಿತರಿಗಾಗಿ ಮೂರು ತಿಂಗಳು ರಜೆ ಪಡೆಯದೇ ಕೆಲಸ ಮಾಡಿದ್ದರಿಂದ ಅವರಿಗೂ ಸೋಂಕು ತಗುಲಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪತಿ ನಿಧನರಾದರು. ಆದರೆ ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಮೃತ ವೈದ್ಯನ ಪತ್ನಿ ಡಾ.ಹೀನಾ ಅಲಿ ಬೇಸರ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಪತ್ರಿಕೆ ಜೊತೆ ಮಾತನಾಡಿರುವ ಹೀನಾ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪತಿ ಡಾ.ಜಾವೇದ್ ಅಲಿ ಮಾರ್ಚ್ ನಿಂದ ಜೂನ್ ವರೆಗೆ ನಿರಂತರವಾಗಿ ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಕೊಂಡಿದ್ರು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದ್ರು. ಡಾ. ಅಲಿ ದೆಹಲಿ ಸರ್ಕಾರದ ನ್ಯಾಷನಲ್ ಹೆಲ್ತ್ ಮಿಶನ್ ನ ವೈದ್ಯರಾಗಿದ್ದರು, ಸದ್ಯ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

    ಪತಿ ರೋಗಿಗಳ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಮಾರ್ಚ್ ನಿಂದ ಒಂದು ರಜೆ ಪಡೆದಿರಲಿಲ್ಲ. ರಂಜಾನ್ ಹಬ್ಬದ ದಿನವೂ ಆಸ್ಪತ್ರೆಯಲ್ಲಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ 10 ದಿನ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಕೊನೆಯ ಬಾರಿ ನನಗೆ ಮತ್ತು ನನ್ನ ಇಬ್ಬರು ಮಕ್ಕಳಿಗೂ ಅವರ ಮುಖ ನೋಡಲು ಸಹ ಅವಕಾಶ ನೀಡಲಿಲ್ಲ ಎಂದು ಹೇಳುತ್ತಾ ಹೀನಾ ಕಣ್ಣೀರು ಹಾಕಿದರು.

    ಈ ಕುರಿತು ಪ್ರತಿಕ್ರಿಯಿಸಿರುವ ಎನ್‍ಎಚ್‍ಓ ಸದಸ್ಯ ಡಾ.ಧೀರಜ್, ಜೂನ್ 24ರಂದು ಅವರಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿತ್ತು. ಜೂನ್ 26ರಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಲೋಕನಾಯಕ್ ಮತ್ತು ಏಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಏಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಡಾ.ಅಲಿ ನಿಧನರಾದ್ರು ಎಂದು ಹೇಳಿದರು.

    ಡಾ. ಅಲಿ ಪತ್ನಿ ಹೀನಾ ಅವರಿಗೆ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ದೊರೆತಿಲ್ಲ. ರೋಗಿಗಳ ರಕ್ಷಣೆ ಮಾಡೋದು ನಮ್ಮ ಕರ್ತವ್ಯ. ಆದ್ರೆ ನಮ್ಮನ್ನು ರಕ್ಷಣೆ ಮಾಡೋರು ಯಾರು ಎಂದು ಹೀನಾ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಸರ್ಕಾರ ಫ್ರಂಟ್ ಲೈನ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆರ್ಥಿಕ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

  • ಕೊರೊನಾ ಗೆದ್ದ ವಾರಿಯರನ್ನು 140 ಕಿಮೀ ಕ್ರಮಿಸಿ ಡ್ರಾಪ್ ಕೊಟ್ಟ ಲೇಡಿ ಆಟೋ ಡ್ರೈವರ್

    ಕೊರೊನಾ ಗೆದ್ದ ವಾರಿಯರನ್ನು 140 ಕಿಮೀ ಕ್ರಮಿಸಿ ಡ್ರಾಪ್ ಕೊಟ್ಟ ಲೇಡಿ ಆಟೋ ಡ್ರೈವರ್

    – ಮಹಿಳಾ ಚಾಲಕಿ ಕೆಲಸಕ್ಕೆ ವಿವಿಎಸ್ ಲಕ್ಷ್ಮಣ್ ಸಲಾಂ

    ಹೈದರಾಬಾದ್: ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಕೊರೊನಾ ವಾರಿಯರನ್ನು 140 ಕಿಮೀ ಕ್ರಮಿಸಿ ಮಹಿಳಾ ಆಟೋ ಡ್ರೈವರ್ ಒಬ್ಬರು ಡ್ರಾಪ್ ಮಾಡಿರುವ ಘಟನೆ ಮಣಿಪುರದ ಇಂಪಾಲ್‍ನಲ್ಲಿ ನಡೆದಿದೆ.

    ಕೊರೊನಾ ಸೋಂಕಿಗೆ ಒಳಗಾಗಿದ್ದ ನರ್ಸ್ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದರು. ಆದರೆ ಅವರನ್ನು ಮನೆಗೆ ಡ್ರಾಪ್ ಮಾಡಲು ಸ್ಥಳೀಯ ವಾಹನ ಚಾಲಕರು ನಿರಾಕರಿಸಿದ್ದರು. ಈ ವೇಳೆ ವಾರಿಯರ್ ಸಹಾಯಕ್ಕೆ ಬಂದ ಮಹಿಳಾ ಆಟೋ ಚಾಲಕಿ ಎಚೆ ಲೈಬಿ ಒನಮ್, ರಾತ್ರಿ ವೇಳೆ ಸುಮಾರು 140 ಕಿಮೀ ಆಟೋ ಚಾಲನೆ ಮಾಡಿಕೊಂಡು ಹೋಗಿ ನರ್ಸ್ ಅವರನ್ನು ಮನೆ ತಲುಪಿಸಿದ್ದಾರೆ.

    ಆಟೋ ಚಾಲಕಿ ಎಚೆ ಲೈಬಿ ಒನಮ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್, ಎಚೆ ಲೈಬಿ ಒನಮ್ ಅವರ ಫೋಟೋವನ್ನು ಟ್ವೀಟ್ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೇ ಅವರ ನಿಸ್ವಾರ್ಥ ಸೇವೆಗೆ ಧನ್ಯವಾದ ತಿಳಿಸಿದ್ದಾರೆ.

  • ಕೊರೊನಾ ವಾರಿಯರ್ ರೀತಿ ಹೋಗಿ ಮಹಿಳೆಯ ಸರಕ್ಕೆ ಕೈ ಹಾಕಿದ ಕಳ್ಳ

    ಕೊರೊನಾ ವಾರಿಯರ್ ರೀತಿ ಹೋಗಿ ಮಹಿಳೆಯ ಸರಕ್ಕೆ ಕೈ ಹಾಕಿದ ಕಳ್ಳ

    – ನೀರು ಕೊಡಿ ಎಂದು ಕೊರಳಿಗೆ ಕೈ ಹಾಕಿದವನಿಗೆ ಗೂಸ

    ಬೆಂಗಳೂರು: ಕೊರೊನಾ ವಾರಿಯರ್ ರೀತಿ ನಕಲಿ ವೈದ್ಯನ ವೇಷ ಧರಿಸಿ ಮಹಿಳೆಯರ ಚಿನ್ನದ ಸರಗಳ್ಳತನ ಮಾಡುತ್ತಿದ್ದವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸಿಕ್ಕಬಿದ್ದ ಕಳ್ಳನನ್ನು ಮೂರ್ತಿ ಎಂದು ಗುರತಿಸಲಾಗಿದೆ. ಈತ ವೈದ್ಯನ ರೀತಿ ಡ್ರೆಸ್ ಹಾಕಿಕೊಂಡು ಮಹಿಳೆಯರೇ ಇರುವ ಮನೆಗ ಹೋಗಿ, ಕೊರೊನಾ ಹೆಲ್ತ್ ಸರ್ವೇ ಎಂದು ಸುಳ್ಳು ಹೇಳುತ್ತಿದ್ದ. ನಂತರ ಅವರು ನಂಬಿದ್ದಾರೆ ಎಂದು ಗೊತ್ತಾದಾಗ ಮಹಿಳೆಯರಿಗೆ ನೀರು ತರಲು ಹೇಳಿ ಹಿಂದೆಯಿಂದ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದ.

    ಇಂದು ವೈದ್ಯನ ಡ್ರೆಸ್ ತೊಟ್ಟು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸುಹಾಸಿನಿ ಮನೆಗೆ ಬಂದ ಮೂರ್ತಿ ನಾನು ಹೆಲ್ತ್ ವರ್ಕರ್, ನಿಮ್ಮ ಮನೆ ಮಾಹಿತಿ ನೀಡಿ ಎಂದು ಹೇಳಿದ್ದಾನೆ. ಇವನ ಕಪಟ ನಾಟಕವನ್ನು ನಂಬಿದ ಮಹಿಳೆ ಸರಿ ಎಂದು ಹೇಳಿದ್ದಾರೆ. ಆಗ ತಕ್ಷಣ ಆಕೆಯ ಬಳಿ ನೀರು ಕುಡಿಯಬೇಕು ನೀರು ಕೊಡಿ ಎಂದು ಕೇಳಿದ್ದಾನೆ. ಆಗ ಮಹಿಳೆ ನೀರು ತರಲು ಹೋದಾಗ ಹಿಂದೆಯಿಂದ ಮನೆಯೊಳಗೆ ಹೋಗಿ ಸರವನ್ನು ಕಿತ್ತುಕೊಂಡು ಓಡಿದ್ದಾನೆ.

    ಆಗ ತಕ್ಷಣ ಮಹಿಳೆ ಕಿರುಚಿಕೊಂಡಿದ್ದಾಳೆ. ಆತ ಸ್ಥಳೀಯರು ಎಚ್ಚೆತ್ತು ಮೂರ್ತಿಯನ್ನು ಹಿಡಿದುಕೊಂಡು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಮೂರ್ತಿಯ ಈ ಎಲ್ಲ ನಾಟಕ ಮಹಿಳೆಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆತನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಮೂರ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊರೊನಾ ವಾರಿಯರ್ ನಿಧನ- ತಾಳಿ ಒತ್ತೆ ಇಟ್ಟು ಅಂತಿಮ ಕಾರ್ಯ ನೆರವೇರಿಸಿದ ಪತ್ನಿ

    ಕೊರೊನಾ ವಾರಿಯರ್ ನಿಧನ- ತಾಳಿ ಒತ್ತೆ ಇಟ್ಟು ಅಂತಿಮ ಕಾರ್ಯ ನೆರವೇರಿಸಿದ ಪತ್ನಿ

    -ಕರ್ತವ್ಯ ವೇಳೆ ಹೃದಯಾಘಾತ

    ಗದಗ: ಹೃದಯಾಘಾತದಿಂದ ಮೃತಪಟ್ಟಿದ್ದ ಕೊರೊನಾ ವಾರಿಯರ್ ತಿಥಿಕಾರ್ಯವನ್ನು ಅವರ ಪತ್ನಿ ತಾಳಿ ಅಡವಿಟ್ಟು ಮಾಡಿದ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

    ಮೇ 27 ರಂದು ಕರ್ತವ್ಯ ನಿರ್ವಹಿಸುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಉಮೇಶ್ ಹಡಗಲಿ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ರು. ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ್ ಸಾವನ್ನಪ್ಪಿ 5 ದಿನ ಕಳೆದರೂ ಮೃತನ ಮನೆಯತ್ತ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಯಾವ ಜನಪ್ರತಿನಿಧಿಯೂ ಭೇಟಿ ನೀಡಿಲ್ಲ. ಸೌಜನ್ಯಕ್ಕೂ ಕುಟುಂಬಕ್ಕೆ ಸಾಂತ್ವಾನ ಹೇಳಿಲ್ಲ.

    ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಆರೋಗ್ಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದು ನಮ್ಮ ವ್ಯಾಪ್ತಿಗೆ ಬರಲ್ಲ. ಜಿವಿಕೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರೋದರಿಂದ ಅವರಿಗೆ ಪತ್ರ ಬರೆದು ಪರಿಹಾರ ಕೊಡಿಸೋದಾಗಿ ಡಿಎಚ್‍ಓ ಹೇಳಿದ್ದಾರೆ ಅಂತ ಕುಟುಂಬಸ್ಥರು ತಿಳಿಸಿದ್ದಾರೆ. ಈ ಮಧ್ಯೆ ತಾಳಿ ಒತ್ತೆ ಇಟ್ಟು ಪತಿಯ ತಿಥಿ ಕಾರ್ಯ ಮಾಡುವ ಅನಿವಾರ್ಯತೆ ಉಮೇಶ್ ಅವರ ಪತ್ನಿ ಜ್ಯೋತಿ ಅವರಿಗೆ ಎದುರಾಗಿದೆ. ಎರಡು ಚಿಕ್ಕ ಮಕ್ಕಳ ಜೊತೆ ಜ್ಯೋತಿ ಕಣ್ಣೀರು ಹಾಕುತ್ತಿದ್ದಾರೆ. ಕೂಡಲೇ ಮೃತನ ಕುಟುಂಬಕ್ಕೆ ಪರಿಹಾರ ನೀಡುಬೇಕು, ಬಡಕುಟುಂಬಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಇನ್ನು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪನವರು ಸ್ಪಂದಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟ ಅಂಬುಲೆನ್ಸ್ ಡ್ರೈವರ್ ಉಮೇಶ್ ಅವರ ಪತ್ನಿ ಜ್ಯೋತಿ ಜೊತೆಗೆ ಸಿಎಂ ಮಾತನಾಡಿ ಸಾಂತ್ವಾನ ಹೇಳಿದ್ದಾರೆ. ಇದರ ಜೊತೆಗೆ ಸರ್ಕಾರದಿಂದ ಸಿಗುವ ಎಲ್ಲಾ ರೀತಿ ನೆರವುಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

  • ಬೈಕ್‍ನಿಂದ ಬಿದ್ದು ಕೊರೊನಾ ವಾರಿಯರ್ ಸಾವು- ಪರಿಹಾರಕ್ಕಾಗಿ ಗ್ರಾಮಸ್ಥರ ಆಗ್ರಹ

    ಬೈಕ್‍ನಿಂದ ಬಿದ್ದು ಕೊರೊನಾ ವಾರಿಯರ್ ಸಾವು- ಪರಿಹಾರಕ್ಕಾಗಿ ಗ್ರಾಮಸ್ಥರ ಆಗ್ರಹ

    ಬಾಗಲಕೋಟೆ: ಕೋವಿಡ್-19 ಕರ್ತವ್ಯಕ್ಕೆ ಆಗಮಿಸುವ ವೇಳೆ ಬೈಕ್‍ನಿಂದ ಬಿದ್ದ ಅಂಗನವಾಡಿ ಕಾರ್ಯಕರ್ತೆ ಮೃತಟಪಟ್ಟ ಘಟನೆ ಬದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ನಡೆದಿದೆ.

    ನಂದಿಕೇಶ್ವರ ಗ್ರಾಮದ ಪ್ರಭಾವತಿ ಪೂಜಾರಿ (52) ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆ. ಪ್ರಭಾವತಿ ಅವರು ಬಾದಾಮಿ ಪಟ್ಟಣದಲ್ಲಿ ಮನೆ ಮಾಡಿ ಕೊಂಡಿದ್ದರು. ನಿತ್ಯವೂ ಕೆಲಸಕ್ಕಾಗಿ ನಂದಿಕೇಶ್ವರ ಗ್ರಾಮಕ್ಕೆ ಬರುತ್ತಿದ್ದರು. ಮೇ 18ರಂದು ನಂದಿಕೇಶ್ವರ ಗ್ರಾಮಕ್ಕೆ ಬೈಕ್‍ನಲ್ಲಿ ತೆರಳುವ ವೇಳೆ ಮೂರ್ಛೆ ಹೋಗಿ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು.

    ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಮೃತ ಮಹಿಳೆಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಕೋವಿಡ್-19 ಕೆಲಸದ ವೇಳೆ ಮೃತಪಟ್ಟ ಹಿನ್ನೆಲೆ ಪರಿಹಾರ ನೀಡುವಂತೆ ನಂದಿಕೇಶ್ವರ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

  • ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದ ಪುಂಡರು ಅರೆಸ್ಟ್

    ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದ ಪುಂಡರು ಅರೆಸ್ಟ್

    ವಿಜಯಪುರ: ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಯತ್ನಿಸಿದ ಐವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ದೇವರ ಹಿಪ್ಪರಗಿ ಮತ ಕ್ಷೇತ್ರದ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಲಗೋಡ ಎಲ್‍ಟಿ ಗ್ರಾಮದ ಪ್ರಮೋದ ರಾಠೋಡ (ಎ1), ಲಕ್ಷ್ಮಿ ರಾಠೋಡ (ಎ2), ರವಿ ರಾಠೋಡ(ಎ3), ಸಂಜು ರಾಠೋಡ (ಎ4), ರಾಹುಲ್ ರಾಠೋಡ್ (ಎ5) ಮೇಲೆ ಐಪಿಸಿ ಸೆಕ್ಷನ್ 353, 504ಸ ಅನ್ವಯ ಪ್ರಕರಣ ದಾಖಲಾಗಿದೆ.

    ಯಲಗೋಡ ಎಲ್‍ಟಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ರೇಖಾ ಸಂತೋಷ ರಾಠೋಡ ಮೇಲೆ ಸೋಮವಾರ ಸಂಜೆ ಹಲ್ಲೆಗೆ ಯತ್ನ ನಡೆದಿತ್ತು. ಈ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದು, ಐವರನ್ನು ಬಂಧಿಸಿ ಸರ್ಕಾರದ ನಿಯಮದಂತೆ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

    ಜಿಲ್ಲೆಯ ಸಿಂದಗಿ ತಾಲೂಕಿನ ಯಲಗೋಡ ತಾಂಡಾದಲ್ಲಿ ಸೋಮವಾರ ಸಂಜೆ ಘಟನೆ ನಡೆದಿತ್ತು. ಮುಂಬೈನಿಂದ ಆಗಮಿಸಿದ್ದ ಪ್ರಮೋದ್ ರಾಠೋಡ್‍ಗೆ ಮನೆಲ್ಲೇ ಇರಬೇಕು, ಜನರೊಂದಿಗೆ ಬರೆಯಬಾರದು ಎಂದು ಆಶಾ ಕಾರ್ಯಕರ್ತೆ ಬುದ್ಧಿ ಮಾತು ಹೇಳಿದ್ದರು. ಇದರಿಂದ ಕೋಪಗೊಂಡು ಆಶಾ ಕಾರ್ಯಕರ್ತೆ ರೇಖಾ ಮೇಲೆ ಪ್ರಮೋದ್ ಹಲ್ಲೆಗೆ ಯತ್ನಿಸಿದ್ದ. ಈತನಿಗೆ ಸಹೋದರರು ಸಹ ಸಾಥ್ ನೀಡಿದ್ದರು. ಘಟನೆ ಕುರಿತು ರೇಖಾ ಗ್ರಾಮ ಪಂಚಾಯತಿ ಹಾಗೂ ಸಿಂದಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ನರ್ಸ್ ಸೇವೆ- ಸಿಎಂ ಅಭಿನಂದನೆ

    9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ನರ್ಸ್ ಸೇವೆ- ಸಿಎಂ ಅಭಿನಂದನೆ

    – ಪ್ರತಿ ದಿನ ಬಸ್ಸಲ್ಲೇ ಪ್ರಯಾಣಿಸಿ ಸೇವೆಗೆ ಹಾಜರ್
    – ವಿಶ್ರಾಂತಿ ಪಡೆಯುವಂತೆ ಸೂಚಿಸಿದ ಸಿಎಂ

    ಶಿವಮೊಗ್ಗ: ಕುಂಟು ನೆಪವೊಡ್ಡಿ ಕೆಲಸಕ್ಕೆ ರಜೆ ಹಾಕುವವರ ಮಧ್ಯೆ ಇಲ್ಲೊಬ್ಬ ಕೊರೊನಾ ವಾರಿಯರ್ ಇತರರಿಗೆ ಮಾದರಿಯಾಗಿದ್ದು, 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ನರ್ಸ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಕಾರ್ಯಕ್ಕೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನಸೋತಿದ್ದಾರೆ.

    ಒಂಭತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೆ ಜಿಲ್ಲೆಯ ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ಶ್ರೀ ರೂಪ ಅವರು ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವೃತ್ತಿಪರತೆಯನ್ನು ಮನಗಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಭಿನಂದನೆ ಸಲ್ಲಿಸಿದ್ದಾರೆ. ಶ್ರೀ ರೂಪ ಅವರ ಮೊಬೈಲ್‍ಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಸಿಎಂ, ನರ್ಸ್ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಕೂಡಲೇ ರಜೆ ತೆಗೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದರು. ಇದನ್ನೂ ಓದಿ: 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ವಾರಿಯರ್

    ಶ್ರೀ ರೂಪ ಅವರು ಶಿವಮೊಗ್ಗದ ಗಾಜನೂರು ಗ್ರಾಮದಿಂದ 60 ಕಿ.ಮೀ ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್ಸಿನಲ್ಲೇ ಪಯಣಿಸಿ ಸೇವೆ ಮಾಡುತ್ತಿದ್ದಾರೆ. 9 ತಿಂಗಳು ಗರ್ಭಿಣಿಯಾಗಿದ್ದರೂ ಪ್ರತಿದಿನ ಸುಮಾರು 120 ಕಿ.ಮೀ ಪ್ರಯಾಣ ಮಾಡುವ ಇವರು ಕೊರೊನಾ ವಾರಿಯರ್ಸ್ ಶಕ್ತಿ ಏನು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಹುಟ್ಟಿದ ಮಗು ನೋಡದೆ ಕರ್ತವ್ಯ ನಿರ್ವಹಿಸ್ತಿರೋ ಕೊರೊನಾ ವಾರಿಯರ್

    ಹುಟ್ಟಿದ ಮಗು ನೋಡದೆ ಕರ್ತವ್ಯ ನಿರ್ವಹಿಸ್ತಿರೋ ಕೊರೊನಾ ವಾರಿಯರ್

    – ಮಗುವನ್ನು ನೋಡಲಾಗದೆ ಕಣ್ಣೀರಿಟ್ಟಿದ್ದ ವೈದ್ಯ

    ಚಾಮರಾಜನಗರ: ಒಂದೆಡೆ ತಂದೆಯಾದ ಸಂಭ್ರಮ ಇನ್ನೊಂದೆಡೆ ಕರ್ತವ್ಯ ನಿಷ್ಠೆ. ಯಾವುದೇ ವ್ಯಕ್ತಿ ತಂದೆಯಾದಾಗ ಅದೊಂದು ಅವಿಸ್ಮರಣೀಯ ಕ್ಷಣ. ಆ ಕ್ಷಣದಲ್ಲಿ ಪತ್ನಿಯ ಜೊತೆಗಿರಬೇಕು. ತನ್ನ ಮಗುವನ್ನು ನೋಡಬೇಕು ಎಂದು ಆಸೆ, ಆಕಾಂಕ್ಷೆ ಸಹಜ.

    ಆದರೆ ಚಾಮರಾಜನಗರ ಕೋವಿಡ್ 19 ಆಸ್ಪತ್ರೆಯಲ್ಲಿ ಕೊರೊನಾ ವಾರಿಯಾರ್ ಆಗಿ ಸೇವೆ ಮಾಡುತ್ತಿರುವ ವೈದ್ಯರೊಬ್ಬರು ಮಗು ಜನಿಸಿದರೂ ನೋಡಲು ಹೋಗದೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಚಾಮರಾಜನಗರ ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಯದುಕುಲ್ ಅವರ ಪತ್ನಿಗೆ ಕಳೆದ ಏಪ್ರಿಲ್ 15 ರಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.

    ಮಗು ಜನಿಸಿ 17 ದಿನ ಕಳೆದರೂ ನೋಡಲು ಹೋಗದೆ ಡಾ. ಯದುಕುಲ್ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಪತ್ನಿಯ ಜೊತೆಗಿರಬೇಕು. ಮಗುವನ್ನು ಹೇಗೆಲ್ಲಾ ನೋಡಕೊಳ್ಳಬೇಕು ಎಂದು ಕನಸು ಕಂಡಿದ್ದ ಡಾ.ಯದುಕುಲ್‍ಗೆ ಅದು ಸಾಧ್ಯವಾಗಲೇ ಇಲ್ಲ. ಮಗುವಾದಾಗ ಒಂದು ಕಡೆ ಸಂತಸವಾದರೂ ಅದನ್ನು ಆ ಕ್ಷಣದಲ್ಲಿ ನೋಡಲಾಗದೆ ಈ ವೈದ್ಯ ಅತ್ತಿದ್ದರಂತೆ. ಬಿಡುವಾದಾಗ ವಿಡಿಯೋ ಕಾಲ್ ಮೂಲಕವೇ ಮಗು ನೋಡಿ ಬೇಸರ ಮರೆಯುತ್ತಿದ್ದಾರೆ.