Tag: Corona Virus

  • ಕೋವಿಡ್‌ ವೇಳೆ ಅಬ್ಬರಿಸಿ ಬೊಬ್ಬಿರಿದ ಸರ್ಕಾರದ ಆಕ್ಸಿಜನ್ ಘಟಕ, ವೆಂಟಿಲೇಟರ್ ಧೂಳು ತಿನ್ನುತ್ತಿದೆ: ಎಚ್‍ಡಿಕೆ

    ಕೋವಿಡ್‌ ವೇಳೆ ಅಬ್ಬರಿಸಿ ಬೊಬ್ಬಿರಿದ ಸರ್ಕಾರದ ಆಕ್ಸಿಜನ್ ಘಟಕ, ವೆಂಟಿಲೇಟರ್ ಧೂಳು ತಿನ್ನುತ್ತಿದೆ: ಎಚ್‍ಡಿಕೆ

    ಬೆಂಗಳೂರು: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಪರಿಪೂರ್ಣ ಬೆಂಬಲವಿದೆ ಮತ್ತು ಹೋರಾಟದಲ್ಲಿ ನಮ್ಮ ಪಕ್ಷವೂ ನಿಲ್ಲುತ್ತದೆ. ವರ್ಷಗಳ ಕಾಲದ ನ್ಯಾಯಯುತವಾದ ಈ ಬೇಡಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸಬೇಕು ಎಂದು ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಅಭಿಯಾನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಬೆಂಬಲ ವ್ಯಕ್ತ ಪಡಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಕೋವಿಡ್ ವೇಳೆ ಎಲ್ಲ ಸಮುದಾಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುತ್ತೇವೆ ಎಂದು ಅಬ್ಬರಿಸಿ ಬೊಬ್ಬಿರಿದ ಸರ್ಕಾರ, ಕೋವಿಡ್ ಇಳಿದ ಮೇಲೆ ತಣ್ಣಗಾಗಿದೆ. ಆಕ್ಸಿಜನ್ ಘಟಕ, ವೆಂಟಿಲೇಟರ್ ಸೇರಿ ಖರೀದಿ ಮಾಡಿದ ವೈದ್ಯ ಪರಿಕರಗಳೆಲ್ಲ ಅನೇಕ ಕಡೆ ಧೂಳು ತಿನ್ನುತ್ತಿವೆ. ಕೆಲವೆಡೆ ಮಾತ್ರ ಸುಸಜ್ಜಿತ ಆಸ್ಪತ್ರೆಗಳಿವೆ. ಬಹುತೇಕ ಜಿಲ್ಲೆಗಳಲ್ಲಿ ಇಲ್ಲ. ತುರ್ತು ಚಿಕಿತ್ಸೆ ಬೇಕೆಂದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿಯಂಥ ಕೆಲವಷ್ಟೇ ನಗರಗಳಲ್ಲಿ ಮಾತ್ರ ಲಭ್ಯವಿದೆ. ಜನ ಹೋಗುವುದು ಹೇಗೆ? ಆರೋಗ್ಯ ಸೌಲಭ್ಯದಲ್ಲಿ ಅಸಮಾನತೆ ರಾಜ್ಯಕ್ಕೆ ಭೂಷಣವಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಸುಧಾಕರ್ ಅವರೇ ಖುದ್ದು ಕ್ರಮ ವಹಿಸಬೇಕು ಎಂಬುದು ನನ್ನ ಆಗ್ರಹ. ಇದನ್ನೂ ಓದಿ: ಜಮೀರ್ ಅಹ್ಮದ್‍ಖಾನ್ ಸಿಎಂ ಆಗ್ತಾರೆ – ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳಿಂದ ಭವಿಷ್ಯ

    ರಾಜ್ಯದಲ್ಲಿ ಇನ್ನೆಷ್ಟು ಅಂಬುಲೆನ್ಸ್ ದುರಂತಗಳು ಆಗಬೇಕು? ಇನ್ನೆಷ್ಟು ಜನರು ರಸ್ತೆಗಳ ಮೇಲೆಯೇ ಜೀವ ಕಳೆದುಕೊಳ್ಳಬೇಕು? ಶಿರೂರು ಟೋಲ್ ಬಳಿ ಸಂಭವಿಸಿದ ಭೀಕರ ಅಪಘಾತದಿಂದ ರಾಜ್ಯ ಬಿಜೆಪಿ ಸರ್ಕಾರ ಕಣ್ತೆರೆಯಲೇಬೇಕು. ಆರೋಗ್ಯ ಸೌಲಭ್ಯ ಕಲ್ಪಿಸುವುದರ ಜೊತೆಗೆ ಇರುವ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಸರ್ಕಾರದ ಹೊಣೆ. ಆರೋಗ್ಯ ಎಲ್ಲರ ಹಕ್ಕು. ನಾನು ರೂಪಿಸಿರುವ ಪಂಚರತ್ನ ಕಾರ್ಯಕ್ರಮದಲ್ಲಿ ಆರೋಗ್ಯವೂ ಪ್ರಮುಖ ಕಾರ್ಯಕ್ರಮ. ಜನತೆಗೆ ಅತ್ಯುತ್ತಮ ಆರೋಗ್ಯ ಸೌಲಭ್ಯ ಕೊಡುವುದು ನನ್ನ ಗುರಿ ಎಂದು ಟ್ವೀಟ್ ಮಾಡಿ ಯಾವ ಜಿಲ್ಲೆಯಲ್ಲಿ ಆಸ್ಪತ್ರೆ ಇಲ್ಲವೋ ಕೂಡಲೇ ಅಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಎಚ್‍ಡಿಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಡ್ಯಾಂಗೆ ತಮಿಳುನಾಡು ವಿರೋಧ – ಸುಪ್ರೀಂಕೋರ್ಟ್‍ನಲ್ಲಿ ಇಂದು ವಿಚಾರಣೆ

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಇಂದು 1,456 ಮಂದಿಗೆ ಕೊರೊನಾ- ಸಾವಿನ ಸಂಖ್ಯೆ ಶೂನ್ಯ

    ರಾಜ್ಯದಲ್ಲಿ ಇಂದು 1,456 ಮಂದಿಗೆ ಕೊರೊನಾ- ಸಾವಿನ ಸಂಖ್ಯೆ ಶೂನ್ಯ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತಗಳು ಆಗುತ್ತಿದ್ದು, ಇಂದು 1,456 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಇಂದು ಯಾವುದೇ ಸಾವಿನ ಪ್ರಕರಣ ದಾಖಲಾಗಿಲ್ಲ.

    ಇಂದು ರಾಜ್ಯದಲ್ಲಿ 1096 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,45,647 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 31183 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,75,78,114 ಮಂದಿಯನ್ನು ಟೆಸ್ಟ್ ಮಾಡಲಾಗಿದೆ.

    ಇಂದು ರಾಜ್ಯದಲ್ಲಿ ಕೊರೊನಾದಿಂದ ಯಾರೂ ಮೃತಪಟ್ಟಿಲ್ಲ. ಆದರೆ ಇದುವರೆಗೆ 40090 ಮಂದಿ ಮಹಾಮಾರಿಯಿಂದ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.4.66 ಇದೆ. 8,848 ಸಕ್ರಿಯ ಪ್ರಕರಣಗಳಿವೆ. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರಕ್ಕೆ ಬಂದ್ರೆ ಸೋಲಿನ ವಿದಾಯ ಖಚಿತ: ಎಂಎಲ್‍ಸಿ ಗೋವಿಂದರಾಜು

    ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ, ಬಾಗಲಕೋಟೆ 13, ಬಳ್ಳಾರಿ 22, ಬೆಳಗಾವಿ 30, ಬೆಂಗಳೂರು ಗ್ರಾಮಾಂತರ 18, ಬೆಂಗಳೂರು ನಗರ 1,154, ಬೀದರ್ 7, ಚಾಮರಾಜನಗರ 4, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 6, ಚಿತ್ರದುರ್ಗ 2, ದಕ್ಷಿಣ ಕನ್ನಡ 16, ದಾವಣಗೆರೆ 3, ಧಾರವಾಡ 29, ಗದಗ 4, ಹಾಸನ 13, ಹಾವೇರಿ 1, ಕಲಬುರಗಿ 14, ಕೊಡಗು 6, ಕೋಲಾರ 16, ಕೊಪ್ಪಳ 3, ಮಂಡ್ಯ 10, ಮೈಸೂರು 37, ರಾಯಚೂರು 1, ರಾಮನಗರ 0, ಶಿವಮೊಗ್ಗ 5, ತುಮಕೂರು 11, ಉಡುಪಿ 11, ವಿಜಯಪುರ 4 ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲಿ 4 ಕೋಟಿಗೂ ಅಧಿಕ ಜನ ಮೊದಲ ಡೋಸ್ ಲಸಿಕೆ ಪಡೆದಿಲ್ಲ!

    ದೇಶದಲ್ಲಿ 4 ಕೋಟಿಗೂ ಅಧಿಕ ಜನ ಮೊದಲ ಡೋಸ್ ಲಸಿಕೆ ಪಡೆದಿಲ್ಲ!

    ನವದೆಹಲಿ: ದೇಶದಲ್ಲಿ ದಿನ ಕಳೆದಂತೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ನಡುವೆ ಸುಮಾರು 4 ಕೋಟಿಗೂ ಅಧಿಕ ಜನ ಕೋವಿಡ್ ಲಸಿಕೆಯ ಮೊದಲ ಡೋಸ್ ಕೂಡ ಪಡೆದುಕೊಂಡಿಲ್ಲ ಎಂಬ ಕಳವಳಕಾರಿ ವಿಚಾರ ಹೊರಬಿದ್ದಿದೆ.

    ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವರ್, ಜುಲೈ 18ರ ವರೆಗೆ 178 ಕೋಟಿ (ಶೇ.97.34) ಡೋಸ್ ಲಸಿಕೆಯನ್ನು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ನೀಡಲಾಗಿದೆ. ಇದರೊಂದಿಗೆ ಜುಲೈ 18ರ ವರೆಗೆ 4 ಕೋಟಿ ಅರ್ಹ ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡ ಮಂಕಿಪಾಕ್ಸ್ – ಈವರೆಗೆ 2,500ಕ್ಕೂ ಹೆಚ್ಚು ಕೇಸ್ ದಾಖಲು

    ಈಗಾಗಲೇ ದೇಶದಲ್ಲಿ ಸರ್ಕಾರದಿಂದ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. 18 ರಿಂದ 59 ವರ್ಷದವರೆಗಿನವರು ಖಾಸಗಿ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ವರದಕ್ಷಿಣೆ ಕೊಡಲಿಲ್ಲವೆಂದು ಮದುವೆಯಾದ ಮರುದಿನವೇ ವಾಟ್ಸಾಪ್‌ನಲ್ಲೇ ತಲಾಖ್ ನೀಡಿ ಪರಾರಿಯಾದ

    vaccine

    ದೇಶದಲ್ಲಿ ಆಚರಿಸುತ್ತಿರುವ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 75 ದಿನಗಳ ಕಾಲ ಎಲ್ಲಾ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.

    ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯ ಶೇ. 98 ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದು, ಉಳಿದಂತೆ ಶೇ.90 ಜನರು ಸಂಪೂರ್ಣ ಲಸಿಕೆ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಏರಿಕೆ ಕಂಡ ಪಾಸಿಟಿವ್ ಪ್ರಕರಣ – ರಾಜ್ಯದಲ್ಲಿ 1,478, ಬೆಂಗ್ಳೂರಲ್ಲಿ 1,251 ಕೇಸ್

    ಏರಿಕೆ ಕಂಡ ಪಾಸಿಟಿವ್ ಪ್ರಕರಣ – ರಾಜ್ಯದಲ್ಲಿ 1,478, ಬೆಂಗ್ಳೂರಲ್ಲಿ 1,251 ಕೇಸ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ. ಪಾಸಿಟಿವ್ ಕೇಸ್‍ಗಳ ಸಂಖ್ಯೆ 1,400ರ ಗಡಿದಾಟಿದ್ದು, ಇಂದು ಒಟ್ಟು 1,478 ಪಾಸಿಟಿವ್ ಪ್ರಕರಣ ವರದಿಯಾಗಿದೆ.

    ನಿನ್ನೆ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 1,151 ಇತ್ತು. ಇಂದು 327 ಕೇಸ್ ಹೆಚ್ಚಳಗೊಂಡು 1,478ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಪಾಸಿಟಿವಿಟಿ ರೇಟ್ 4.56ಕ್ಕೆ ಜಿಗಿದಿದೆ. ಇದನ್ನೂ ಓದಿ: ಟೋಲ್‍ಗೇಟ್‍ಗೆ ಡಿಕ್ಕಿಯಾಗಿ ಪಲ್ಟಿಯಾದ ಅಂಬುಲೆನ್ಸ್- ಮೂವರು ಸಾವು, ಓರ್ವ ಗಂಭೀರ

    ಬೆಂಗಳೂರು ನಗರದಲ್ಲೂ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ. ಇಂದು ಒಟ್ಟು 1,251 ಪ್ರಕರಣ ಪತ್ತೆಯಾಗುವ ಮೂಲಕ ನಿನ್ನೆಗಿಂತ 238 ಕೇಸ್ ಏರಿಕೆಯಾಗಿದೆ. ನಗರದಲ್ಲಿ 1,088 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 7,064ಕ್ಕೆ ತಲುಪಿದೆ. ಬೆಂಗಳೂರು ನಗರದ ಬಳಿಕ ಬೆಂಗಳೂರು ನಗರದಲ್ಲಿ ದಾಖಲಾದ 32 ಕೇಸ್ ಜಿಲ್ಲೆಯೊಂದರ ಹೆಚ್ಚಿನ ಕೇಸ್ ಆಗಿದೆ. ಈವರೆಗೆ ಒಟ್ಟು 40,089 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,229 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 7,866ಕ್ಕೆ ತಲುಪಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,90,057 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,42,060 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 3,01,233 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 32,363 ಸ್ಯಾಂಪಲ್ (ಆರ್‌ಟಿಪಿಸಿಆರ್ 24,251 + 8,112 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು: ಪತ್ನಿ, ಪುತ್ರನಿಗೆ ಸಿಹಿ ತಿನ್ನಿಸಿ ಈಶ್ವರಪ್ಪ ಸಂಭ್ರಮ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 15, ಬಳ್ಳಾರಿ 12, ಬೆಳಗಾವಿ 15, ಬೆಂಗಳೂರು ಗ್ರಾಮಾಂತರ 32, ಬೆಂಗಳೂರು ನಗರ 1,251, ಬೀದರ್ 4, ಚಾಮರಾಜನಗರ 7, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 8, ಚಿತ್ರದುರ್ಗ 1, ದಕ್ಷಿಣ ಕನ್ನಡ 8, ದಾವಣಗೆರೆ 2, ಧಾರವಾಡ 18, ಗದಗ 0, ಹಾಸನ 8, ಹಾವೇರಿ 0, ಕಲಬುರಗಿ 8, ಕೊಡಗು 2, ಕೋಲಾರ 13, ಕೊಪ್ಪಳ 2, ಮಂಡ್ಯ 6, ಮೈಸೂರು 24, ರಾಯಚೂರು 1, ರಾಮನಗರ 2, ಶಿವಮೊಗ್ಗ 6, ತುಮಕೂರು 9, ಉಡುಪಿ 8, ಉತ್ತರ ಕನ್ನಡ 10, ವಿಜಯಪುರ 6 ಮತ್ತು ಯಾದಗಿರಿಯಲ್ಲಿ 1 ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಸಾವಿರ ಗಡಿದಾಟಿದ ಕೊರೊನಾ – ಬೆಂಗ್ಳೂರಲ್ಲಿ 1,013 ಕೇಸ್, 1,104 ಮಂದಿ ಡಿಸ್ಚಾರ್ಜ್

    ರಾಜ್ಯದಲ್ಲಿ ಸಾವಿರ ಗಡಿದಾಟಿದ ಕೊರೊನಾ – ಬೆಂಗ್ಳೂರಲ್ಲಿ 1,013 ಕೇಸ್, 1,104 ಮಂದಿ ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಪ್ರಕರಣಗಳು ಮತ್ತೆ ಸಾವಿರ ಗಡಿದಾಟಿದೆ. ಇಂದು ಒಟ್ಟು 1,151 ಪಾಸಿಟಿವ್ ಕೇಸ್ ದಾಖಲಾಗಿದೆ. ಇದರೊಂದಿಗೆ ಪಾಸಿಟಿವಿಟಿ ರೇಟ್ ಶೇ. 4.53ಕ್ಕೆ ಏರಿಕೆ ಕಂಡಿದೆ.

    ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 7,617ಕ್ಕೆ ತಲುಪಿದೆ. ಬೆಂಗಳೂರು ನಗರದಲ್ಲೇ ಪ್ರಕರಣಗಳ ಸಂಖ್ಯೆ ಸಾವಿರ ಗಡಿದಾಟಿದೆ. ಇಂದು ಒಟ್ಟು 1,013 ಪ್ರಕರಣ ಪತ್ತೆಯಾಗಿದ್ದು, 1,104 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 6,901ಕ್ಕೆ ತಲುಪಿದೆ. ಬೆಂಗಳೂರು ನಗರದ ಬಳಿಕ ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ ಒಟ್ಟು 24 ಕೇಸ್ ವರದಿಯಾಗಿದೆ. ಈವರೆಗೆ ಒಟ್ಟು 40,089 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,214 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಗುರುತು ಮುಚ್ಚಿಟ್ಟು ಹಿಂದೂ ಯುವತಿಯನ್ನು ದೇವಾಲಯದಲ್ಲೇ ಮದುವೆಯಾದ- ಕೊನೆಗೆ ತಿಳೀತು ಅಸಲಿ ಸತ್ಯ

    ಈವರೆಗೆ ರಾಜ್ಯದಲ್ಲಿ ಒಟ್ಟು 39,88,579 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,40,831 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 1,41,713 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 25,399 ಸ್ಯಾಂಪಲ್ (ಆರ್‌ಟಿಪಿಸಿಆರ್ 16,821 + 8,578 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ವಿಚ್ಚೇದಿತ ಪತಿಯಿಂದಲೇ ಪತ್ನಿಯ ಕೊಲೆ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 4, ಬಳ್ಳಾರಿ 3, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 1,013, ಬೀದರ್ 2, ಚಾಮರಾಜನಗರ 6, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 8, ಚಿತ್ರದುರ್ಗ 0, ದಕ್ಷಿಣ ಕನ್ನಡ 8, ದಾವಣಗೆರೆ 1, ಧಾರವಾಡ 17, ಗದಗ 2, ಹಾಸನ 13, ಹಾವೇರಿ 1, ಕಲಬುರಗಿ 2, ಕೊಡಗು 4, ಕೋಲಾರ 6, ಕೊಪ್ಪಳ 1, ಮಂಡ್ಯ 3, ಮೈಸೂರು 24, ರಾಯಚೂರು 1, ರಾಮನಗರ 0, ಶಿವಮೊಗ್ಗ 5, ತುಮಕೂರು 10, ಉಡುಪಿ 1, ಉತ್ತರ ಕನ್ನಡ 3, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,108 ಪಾಸಿಟಿವ್ ಕೇಸ್ – 9 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ರಾಜ್ಯದಲ್ಲಿಂದು 1,108 ಪಾಸಿಟಿವ್ ಕೇಸ್ – 9 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಇಂದು ಒಟ್ಟು 1,108 ಪಾಸಿಟಿವ್ ಕೇಸ್ ಪತ್ತೆಯಾಗಿದೆ.

    ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,680ಕ್ಕೆ ತಲುಪಿದೆ. 9 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲೂ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರದಲ್ಲಿ ಇಂದು 993 ಪ್ರಕರಣ ಪತ್ತೆಯಾಗಿದ್ದು, 879 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 6,992ಕ್ಕೆ ತಲುಪಿದೆ.

    ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 4.61ಕ್ಕೆ ತಲುಪಿದೆ. ಈವರೆಗೆ ಒಟ್ಟು 40,089 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 997 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ನೀವು ಬರಬೇಡಿ.. ನಿಮ್ಮ ಮನೆಯ ಪುರುಷರನ್ನು ಕೆಲಸಕ್ಕೆ ಕಳಿಸಿ: ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್‌ ಸೂಚನೆ

    ಈವರೆಗೆ ರಾಜ್ಯದಲ್ಲಿ ಒಟ್ಟು 39,87,428 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,39,617 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 16,256 ಸ್ಯಾಂಪಲ್ (ಆರ್‍ಟಿ ಪಿಸಿಆರ್ 12653 + 3,603 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 0, ಬಳ್ಳಾರಿ 11, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 993, ಬೀದರ್ 6, ಚಾಮರಾಜನಗರ 4, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 3, ಚಿತ್ರದುರ್ಗ 1, ದಕ್ಷಿಣ ಕನ್ನಡ 15, ದಾವಣಗೆರೆ 0, ಧಾರವಾಡ 3, ಹಾಸನ 3, ಗದಗ 0, ಹಾವೇರಿ 2, ಕಲಬುರಗಿ 7, ಕೋಲಾರ 12, ಕೊಪ್ಪಳ 0, ಕೊಡಗು 0, ಮಂಡ್ಯ 6, ಮೈಸೂರು 25, ರಾಯಚೂರು 0, ರಾಮನಗರ 3, ಶಿವಮೊಗ್ಗ 2, ತುಮಕೂರು 1, ಉಡುಪಿ 0, ಉತ್ತರ ಕನ್ನಡ 2, ವಿಜಯಪುರ 1 ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ 944 ಪಾಸಿಟಿವ್ ಕೇಸ್ – 3 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ರಾಜ್ಯದಲ್ಲಿ 944 ಪಾಸಿಟಿವ್ ಕೇಸ್ – 3 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಳಿತ ಮುಂದುವರಿದಿದೆ. ಇಂದು ಒಟ್ಟು 944 ಪಾಸಿಟಿವ್ ಕೇಸ್ ಮತ್ತು ಏಕೈಕ ಮರಣ ಪ್ರಕರಣ ದಾಖಲಾಗಿದೆ.

    ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 7,569ಕ್ಕೆ ತಲುಪಿದೆ. 3 ಜಿಲ್ಲೆಗಳಾದ ಗದಗ, ಕೊಡಗು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ಹೊರತು ಪಡಿಸಿ ಉಳಿದ 27 ಜಿಲ್ಲೆಗಳಲ್ಲೂ ಕೇಸ್ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಇಂದು 799 ಪ್ರಕರಣ ಪತ್ತೆಯಾಗಿದ್ದು, 625 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 6,878ಕ್ಕೆ ತಲುಪಿದೆ. ಬೆಂಗಳೂರು ನಗರದ ಬಳಿಕ ಜಿಲ್ಲೆಗಳ ಪೈಕಿ ಧಾರವಾಡದಲ್ಲಿ ಒಟ್ಟು 17 ಕೇಸ್ ಮತ್ತು ಏಕೈಕ ಮರಣ ವರದಿಯಾಗಿದೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 3.25ಕ್ಕೆ ತಲುಪಿದೆ. ಈವರೆಗೆ ಒಟ್ಟು 40,089 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 670 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: 10ನೇ ತರಗತಿ ಐಸಿಎಸ್‌ಸಿ ಫಲಿತಾಂಶ ಪ್ರಕಟ: ಬೆಂಗಳೂರು ಬಾಲಕನ ಉತ್ತಮ ಸಾಧನೆ

    ಈವರೆಗೆ ರಾಜ್ಯದಲ್ಲಿ ಒಟ್ಟು 39,86,320 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,38,620 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 24,063 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 29,022 ಸ್ಯಾಂಪಲ್ (ಆರ್‌ಟಿಪಿಸಿಆರ್ 22,160 + 6,862 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 3, ಬಳ್ಳಾರಿ 5, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 799, ಬೀದರ್ 3, ಚಾಮರಾಜನಗರ 1, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 3, ಚಿತ್ರದುರ್ಗ 2, ದಕ್ಷಿಣ ಕನ್ನಡ 16, ದಾವಣಗೆರೆ 3, ಧಾರವಾಡ 17, ಹಾಸನ 6, ಹಾವೇರಿ 1, ಕಲಬುರಗಿ 5, ಕೋಲಾರ 5, ಕೊಪ್ಪಳ 2, ಮಂಡ್ಯ 4, ಮೈಸೂರು 4, ರಾಯಚೂರು 4, ರಾಮನಗರ 4, ಶಿವಮೊಗ್ಗ 2, ತುಮಕೂರು 8, ಉಡುಪಿ 8, ಉತ್ತರ ಕನ್ನಡ 11, ವಿಜಯಪುರ 5, ಗದಗ, ಕೊಡಗು ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇಂದು ಒಟ್ಟು 977 ಕೇಸ್ – ಬೆಂಗ್ಳೂರಲ್ಲಿ 927 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಇಂದು ಒಟ್ಟು 977 ಕೇಸ್ – ಬೆಂಗ್ಳೂರಲ್ಲಿ 927 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 977 ಪಾಸಿಟಿವ್ ಕೇಸ್ ಮತ್ತು ಏಕೈಕ ಮರಣ ಪ್ರಕರಣ ದಾಖಲಾಗಿದೆ.

    ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 6,702ಕ್ಕೆ ತಲುಪಿದೆ. ಇಂದು ರಾಜ್ಯದಲ್ಲಿ 1,013 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರದಲ್ಲಿ ಇಂದು 871 ಪ್ರಕರಣ ಪತ್ತೆಯಾಗಿದೆ. ನಗರದಲ್ಲಿ ಇಂದು ಒಂದೇ ದಿನ 927 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 6,196ಕ್ಕೆ ತಲುಪಿದೆ. ಬೆಂಗಳೂರು ನಗರದ ಬಳಿಕ ಜಿಲ್ಲೆಗಳ ಪೈಕಿ ಧಾರವಾಡದಲ್ಲಿ ಒಟ್ಟು 21 ಕೇಸ್ ಮತ್ತು ಏಕೈಕ ಮರಣ ವರದಿಯಾಗಿದೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 3.73ಕ್ಕೆ ತಲುಪಿದೆ. ಈವರೆಗೆ ಒಟ್ಟು 40,085 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡದ ಸಾರಿಗೆ ಸಂಸ್ಥೆ – ಐರಾವತ ಬಸ್‍ನ್ನು ಜಪ್ತಿ ಮಾಡಿದ ನ್ಯಾಯಾಲಯ

    ಈವರೆಗೆ ರಾಜ್ಯದಲ್ಲಿ ಒಟ್ಟು 39,84,002 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,37,173 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 1,03,426 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 26,150 ಸ್ಯಾಂಪಲ್ (ಆರ್‌ಟಿಪಿಸಿಆರ್ 18,934 + 7,216 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಮುಂದಿನ 5 ದಿನವೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 1, ಬಳ್ಳಾರಿ 10, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 871, ಬೀದರ್ 3, ಚಾಮರಾಜನಗರ 1, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 1, ಚಿತ್ರದುರ್ಗ 2, ದಕ್ಷಿಣ ಕನ್ನಡ 8, ದಾವಣಗೆರೆ 3, ಧಾರವಾಡ 21, ಹಾಸನ 2, ಹಾವೇರಿ 1, ಕೋಲಾರ 11, ಕೊಪ್ಪಳ 4, ಮೈಸೂರು 7, ರಾಮನಗರ 1, ಶಿವಮೊಗ್ಗ 4, ತುಮಕೂರು 3, ಉಡುಪಿ 6, ಗದಗ, ಕಲಬುರಗಿ, ಕೊಡಗು, ಉತ್ತರ ಕನ್ನಡ, ಮಂಡ್ಯ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಒಟ್ಟು 773 – ಬೆಂಗ್ಳೂರಲ್ಲಿ 621 ಕೇಸ್, ಗದಗದಲ್ಲಿ ಏಕೈಕ ಮರಣ ಪ್ರಕರಣ

    ಒಟ್ಟು 773 – ಬೆಂಗ್ಳೂರಲ್ಲಿ 621 ಕೇಸ್, ಗದಗದಲ್ಲಿ ಏಕೈಕ ಮರಣ ಪ್ರಕರಣ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಳಿತ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇಂದು ಒಟ್ಟು 673 ಕೊರೊನಾ ಪ್ರಕರಣ ವರದಿಯಾಗಿದೆ.

    ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 6,718ಕ್ಕೆ ತಲುಪಿದೆ. ಬೆಂಗಳೂರು ನಗರದಲ್ಲಿ ಇಂದು 621 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 6,256ಕ್ಕೆ ತಲುಪಿದೆ. ಇಂದು ರಾಜ್ಯದಲ್ಲಿ ದಾಖಲಾದ ಏಕೈಕ ಮರಣ ಪ್ರಕರಣ ಗದಗದಲ್ಲಿ ವರದಿಯಾಗಿದೆ. ಬೆಂಗಳೂರು ನಗರದ ಬಳಿಕ ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ ದಾಖಲಾದ 10 ಪ್ರಕರಣ ಜಿಲ್ಲೆಗಳ ಪೈಕಿ ದಾಖಲಾದ ಹೆಚ್ಚಿನ ಕೇಸ್ ಆಗಿದೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 4.98ಕ್ಕೆ ತಲುಪಿದೆ. ಈವರೆಗೆ ಒಟ್ಟು 40,082 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ. ಜಯಕರ ಎಸ್.ಎಂ ನೇಮಕ

    ಇಂದು 852 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,79,694 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,32,852 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 34,046 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 13,504 ಸ್ಯಾಂಪಲ್ (ಆರ್​ಟಿಪಿಸಿಆರ್ 9,849 + 3,655 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ಮನೆ ಕೆಲಸಕ್ಕೆ ಸೇರಿ ಕಳ್ಳತನ ಮಾಡ್ತಿದ್ದ ಬಾಂಬೆ ಲೇಡಿಸ್ ಗ್ಯಾಂಗ್ ಅರೆಸ್ಟ್

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಳ್ಳಾರಿ 4, ಬೆಳಗಾವಿ 4, ಬೆಂಗಳೂರು ನಗರ 621, ಚಾಮರಾಜನಗರ 1, ಚಿಕ್ಕಮಗಳೂರು 3, ದಕ್ಷಿಣ ಕನ್ನಡ 3, ದಾವಣಗೆರೆ 1, ಧಾರವಾಡ 4, ಗದಗ 1, ಹಾಸನ 1, ಹಾವೇರಿ 1, ಕಲಬುರಗಿ 3, ಕೊಡಗು 2, ಕೋಲಾರ 1, ಮೈಸೂರು 10, ರಾಯಚೂರು 2, ರಾಮನಗರ 6, ಶಿವಮೊಗ್ಗ 2, ತುಮಕೂರು 2, ಉಡುಪಿ 1, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೀದರ್, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೊಪ್ಪಳ, ಮಂಡ್ಯ, ಉತ್ತರ ಕನ್ನಡ, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದ 1,053 ಕೊರೊನಾ ಪ್ರಕರಣ – 1,080 ಮಂದಿ ಡಿಸ್ಚಾರ್ಜ್‌

    ರಾಜ್ಯದಲ್ಲಿಂದ 1,053 ಕೊರೊನಾ ಪ್ರಕರಣ – 1,080 ಮಂದಿ ಡಿಸ್ಚಾರ್ಜ್‌

    ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ.

    ಇಂದು 1,053 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ 966 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ 6,454 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಇಂದು 1080 ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಮತ್ತೊಂದು ಉಪತಳಿ ಪತ್ತೆ- ರೋಗನಿರೋಧಕ ಶಕ್ತಿ ಮೀರಿಸಿ ವೈರಸ್ ಹರಡುತ್ತಾ ಈ ತಳಿ – WHO ಹೇಳಿದ್ದೇನು?

    27,086 ಜನರು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದು, ಇಲ್ಲಿವರೆಗೂ 6,71,61,436 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣ ಶೇ.3.88 ಮತ್ತು ಮರಣ ಪ್ರಮಾಣ ಶೇ.0.00 ದಾಖಲಾಗಿದೆ.

    ಇಂದು 1,080 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 18,574 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 27,086 ಸ್ಯಾಂಪಲ್(ಆರ್‌ಟಿಪಿಸಿಆರ್ 19,468 + 7,618 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ವಿದ್ಯುತ್ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ: ಬೆಸ್ಕಾಂ ಸ್ಪಷ್ಟನೆ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 01, ಬಳ್ಳಾರಿ 04, ಬೆಳಗಾವಿ 01, ಬೆಂಗಳೂರು ಗ್ರಾಮಾಂತರ 04, ಬೆಂಗಳೂರು ನಗರ 966, ಬೀದರ್ 01, ಚಾಮರಾಜನಗರ 01, ಚಿಕ್ಕಮಗಳೂರು 04, ದಕ್ಷಿಣ ಕನ್ನಡ 15, ದಾವಣಗೆರೆ 03, ಧಾರವಾಡ 9, ಹಾಸನ 06, ಹಾವೇರಿ 01, ಕೋಲಾರ 08, ಮಂಡ್ಯ 03, ಮೈಸೂರು 10, ರಾಮನಗರ 03, ಶಿವಮೊಗ್ಗ 03, ತುಮಕೂರು 03, ಉಡುಪಿ 04, ಉತ್ತರ ಕನ್ನಡ 03 ಹಾಗೂ ಉಳಿದ ಜಿಲ್ಲೆಗಳಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿವೆ.

    Live Tv
    [brid partner=56869869 player=32851 video=960834 autoplay=true]