Tag: Corona Virus

  • ರಾಜ್ಯದಲ್ಲಿಂದು 1,121 ಮಂದಿಗೆ ಕೊರೊನಾ – ಸೋಂಕಿಗೆ ಐದು ಮಂದಿ ಬಲಿ

    ರಾಜ್ಯದಲ್ಲಿಂದು 1,121 ಮಂದಿಗೆ ಕೊರೊನಾ – ಸೋಂಕಿಗೆ ಐದು ಮಂದಿ ಬಲಿ

    ಬೆಂಗಳೂರು: ಕಳೆದ ಒಂದು ವಾರದಿಂದಲೂ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ನಿನ್ನೆ 1,200 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 1,121ಕ್ಕೆ ಇಳಿದಿದೆ. ರಾಜ್ಯದಲ್ಲಿಂದು 1,121 ಪ್ರಕರಣಗಳು ದಾಖಲಾಗಿದ್ದು, ಐವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 1,711 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,83,536 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 14,766 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,82,49,341 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಕೊಟ್ಟರಷ್ಟೇ ಹಿಂದೂಗಳು ಸೇಫ್: ಸಿದ್ದಲಿಂಗ ಸ್ವಾಮೀಜಿ

    ಕೋವಿಡ್‌ನಿಂದ ಇಂದು 5 ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,152 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.7.59 ಇದೆ. 9,880 ಸಕ್ರಿಯ ಪ್ರಕರಣಗಳಿವೆ. ಇಂದು 14,766 ಮಂದಿಯನ್ನು (3,177, ರ‍್ಯಾಪಿಡ್ ಆಂಟಿಜನ್, 11,589 RTPCR) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 45,950 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಶ್ಮೀರವನ್ನು ಬಿಟ್ಟು ಬನ್ನಿ: ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಒತ್ತಾಯ

    ಬೆಂಗಳೂರು ನಗರದಲ್ಲೇ 812 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 23 , ಬಾಗಲಕೋಟೆ 9, ಬಳ್ಳಾರಿ 33, ಬೆಳಗಾವಿ 23, ಬೀದರ್ 0, ಚಾಮರಾಜನಗರ 7, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 10, ಚಿತ್ರದುರ್ಗ 4, ದಕ್ಷಿಣ ಕನ್ನಡ 6, ದಾವಣಗೆರೆ 13, ಧಾರವಾಡ 16, ಗದಗ 1, ಹಾಸನ 21, ಹಾವೇರಿ 13, ಕಲಬುರಗಿ 4, ಕೊಡಗು 22, ಕೋಲಾರ 3, ಕೊಪ್ಪಳ 2, ಮಂಡ್ಯ 6, ಮೈಸೂರು 33, ರಾಯಚೂರು 7, ರಾಮನಗರ 13, ಶಿವಮೊಗ್ಗ 16, ತುಮಕೂರು 4, ಉಡುಪಿ 5, ಉತ್ತರ ಕನ್ನಡ 6, ವಿಜಯಪುರ 6 ಹಾಗೂ ಯಾದಗಿರಿಯಲ್ಲಿ 2 ಪ್ರಕರಣ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಸಿಟಿವಿಟಿ ರೇಟ್ ಶೇ.10ರ ಸನಿಹಕ್ಕೆ – ಇಂದು 1,206 ಕೇಸ್

    ಪಾಸಿಟಿವಿಟಿ ರೇಟ್ ಶೇ.10ರ ಸನಿಹಕ್ಕೆ – ಇಂದು 1,206 ಕೇಸ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಏರಿಳಿತ ಮುಂದುವರಿದಿದೆ. ಇಂದು ಒಟ್ಟು 1,206 ಪಾಸಿಟಿವ್ ಕೇಸ್ ದಾಖಲಾಗಿದೆ. ಈ ನಡುವೆ ಪಾಸಿಟಿವಿಟಿ ರೇಟ್ ಶೇ.10ರ ಸನಿಹದಲ್ಲಿದೆ.

    ಇಂದು ಪಾಸಿಟಿವಿಟಿ ರೇಟ್ ಶೇ. 9.62ಕ್ಕೆ ಏರಿಕೆ ಕಂಡಿದೆ. ನಿನ್ನೆ ಶೇ. 6.32ರಷ್ಟು ದಾಖಲಾಗಿತ್ತು. ಪಾಸಿಟಿವಿಟಿ ರೇಟ್ ನಿಧಾನವಾಗಿ ಏರಿಕೆ ಕಾಣುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 10,475ಕ್ಕೆ ತಲುಪಿದೆ. ಬೆಂಗಳೂರು ನಗರದಲ್ಲಿ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಅಲ್ಪ ಇಳಿಕೆ ಕಂಡಿದ್ದು, ಇಂದು 870 ಪ್ರಕರಣ ದಾಖಲಾಗಿದೆ. ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ ದಾಖಲಾದ 60 ಕೇಸ್ ಹೆಚ್ಚಿನ ಕೇಸ್ ಆಗಿದೆ. ಇಂದು ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಈವರೆಗೆ ಒಟ್ಟು 40,147 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,653 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಯೋಗ್ಯತೆ ಇಲ್ಲದವರು ಈಗ ಸಾವರ್ಕರ್ ಬಗ್ಗೆ ಮಾತನಾಡುತ್ತಾರೆ – ಗುಡುಗಿದ ಬಿ.ಎಲ್ ಸಂತೋಷ್

    ಈವರೆಗೆ ರಾಜ್ಯದಲ್ಲಿ ಒಟ್ಟು 40,32,489 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,81,825 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 9,492 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 12,533 ಸ್ಯಾಂಪಲ್ (ಆರ್‌ಟಿಪಿಸಿಆರ್ 9,127 + 3,406 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ನೃತ್ಯದಲ್ಲಿ ಸಾವರ್ಕರ್‌ ಫೋಟೋ – ಮುಖ್ಯೋಪಾಧ್ಯಾಯರನ್ನು ಕರೆಸಿ ಕ್ಷಮೆ ಹೇಳಿಸಿದ ಪಂಚಾಯತ್‌

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 3, ಬಳ್ಳಾರಿ 38, ಬೆಳಗಾವಿ 33, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 870, ಬೀದರ್ 1, ಚಾಮರಾಜನಗರ 10, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 42, ಚಿತ್ರದುರ್ಗ 4, ದಕ್ಷಿಣ ಕನ್ನಡ 10, ದಾವಣಗೆರೆ 3, ಧಾರವಾಡ 8, ಗದಗ 4, ಹಾಸನ 3, ಹಾವೇರಿ 0, ಕಲಬುರಗಿ 17, ಕೊಡಗು 12, ಕೋಲಾರ 18, ಕೊಪ್ಪಳ 2, ಮಂಡ್ಯ 20, ಮೈಸೂರು 60, ರಾಯಚೂರು 19, ರಾಮನಗರ 11, ಶಿವಮೊಗ್ಗ 5, ತುಮಕೂರು 1, ಉಡುಪಿ 8, ಉತ್ತರ ಕನ್ನಡ 3, ವಿಜಯಪುರ 0 ಮತ್ತು ಯಾದಗಿರಿಯಲ್ಲಿ 1 ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 1,800 ಗಡಿದಾಟಿದ ಕೊರೊನಾ – ಪಾಸಿಟಿವಿಟಿ ರೇಟ್ ಶೇ. 6.32 ದಾಖಲು

    1,800 ಗಡಿದಾಟಿದ ಕೊರೊನಾ – ಪಾಸಿಟಿವಿಟಿ ರೇಟ್ ಶೇ. 6.32 ದಾಖಲು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇಂದು ಕೊರೊನಾ ಪಾಸಿಟಿವ್ ಕೇಸ್‍ಗಳ ಸಂಖ್ಯೆ 1,800ರ ಗಡಿದಾಟಿದೆ. ಇಂದು ಒಟ್ಟು 1,837 ಪಾಸಿಟಿವ್ ಕೇಸ್ ಮತ್ತು 3 ಮರಣ ಪ್ರಕರಣ ದಾಖಲಾಗಿದೆ.

    ಇಂದು ಪಾಸಿಟಿವಿಟಿ ರೇಟ್ ಶೇ. 6.32ಕ್ಕೆ ಏರಿಕೆ ಕಂಡಿದೆ. ಇದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 10,922ಕ್ಕೆ ತಲುಪಿದೆ. ಬೆಂಗಳೂರು ನಗರದಲ್ಲೇ ಪ್ರಕರಣಗಳ ಸಂಖ್ಯೆ ಸಾವಿರ ಗಡಿದಾಟಿದೆ. ಇಂದು ಒಟ್ಟು 1,108 ಪ್ರಕರಣ ಪತ್ತೆಯಾಗಿದೆ. ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ ಕೇಸ್‍ಗಳ ಸಂಖ್ಯೆ ನೂರರ ಗಡಿದಾಟಿದೆ. ಇಂದು ಬಳ್ಳಾರಿ, ಧಾರವಾಡ ಮತ್ತು ಕೊಪ್ಪಳದಲ್ಲಿ ಇಂದು ತಲಾ ಒಂದೊಂದು ಮರಣ ಪ್ರಕರಣ ಸೇರಿ ಈವರೆಗೆ ಒಟ್ಟು 40,147 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,017 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಚೊಚ್ಚಲ ಭಾಷಣದಲ್ಲಿ ಕುವೆಂಪು ಕವನ ಉಲ್ಲೇಖಿಸಿದ ರಾಷ್ಟ್ರಪತಿ ಮುರ್ಮು

    ಈವರೆಗೆ ರಾಜ್ಯದಲ್ಲಿ ಒಟ್ಟು 40,31,283 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,80,172 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 7,929 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 29,027 ಸ್ಯಾಂಪಲ್ (ಆರ್‌ಟಿಪಿಸಿಆರ್ 23,513 + 5,514 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಕಸದ ಗಾಡಿಯಲ್ಲಿ ರಾಷ್ಟ್ರಧ್ವಜ ವಿತರಣೆ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 12, ಬಳ್ಳಾರಿ 47, ಬೆಳಗಾವಿ 39, ಬೆಂಗಳೂರು ಗ್ರಾಮಾಂತರ 24, ಬೆಂಗಳೂರು ನಗರ 1,108, ಬೀದರ್ 2, ಚಾಮರಾಜನಗರ 24, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 16, ಚಿತ್ರದುರ್ಗ 2, ದಕ್ಷಿಣ ಕನ್ನಡ 20, ದಾವಣಗೆರೆ 17, ಧಾರವಾಡ 62, ಗದಗ 0, ಹಾಸನ 31, ಹಾವೇರಿ 25, ಕಲಬುರಗಿ 16, ಕೊಡಗು 17, ಕೋಲಾರ 16, ಕೊಪ್ಪಳ 10, ಮಂಡ್ಯ 10, ಮೈಸೂರು 141, ರಾಯಚೂರು 39, ರಾಮನಗರ 70, ಶಿವಮೊಗ್ಗ 23, ತುಮಕೂರು 24, ಉಡುಪಿ 8, ಉತ್ತರ ಕನ್ನಡ 21, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 3 ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್‌ ಹೆಚ್ಚಳ; ಸ್ವಾತಂತ್ರ್ಯೋತ್ಸವದಲ್ಲಿ ಜನಸಂದಣಿಗೆ ಅವಕಾಶ ನೀಡಬೇಡಿ – ರಾಜ್ಯಗಳಿಗೆ ಕೇಂದ್ರ ಸೂಚನೆ

    ಕೋವಿಡ್‌ ಹೆಚ್ಚಳ; ಸ್ವಾತಂತ್ರ್ಯೋತ್ಸವದಲ್ಲಿ ಜನಸಂದಣಿಗೆ ಅವಕಾಶ ನೀಡಬೇಡಿ – ರಾಜ್ಯಗಳಿಗೆ ಕೇಂದ್ರ ಸೂಚನೆ

    ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಹೀಗಾಗಿ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ವೇಳೆ ಬೃಹತ್‌ ಸಭೆ-ಸಮಾರಂಭ ಆಯೋಜಿಸದಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

    ಸ್ವಾತಂತ್ರ್ಯ ದಿನಾಚರಣೆ ಸಭೆ-ಸಮಾರಂಭಗಳಲ್ಲಿ ಹೆಚ್ಚಿನ ಜನಸಂದಣಿಗೆ ಅವಕಾಶ ನೀಡಬೇಡಿ. ಕಾರ್ಯಕ್ರಮಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೇಂದ್ರ ಸಲಹೆ ನೀಡಿದೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ

    covid

    ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿ ಜಿಲ್ಲೆಯ ಪ್ರಮುಖ ಸ್ಥಳದಲ್ಲಿ ‘ಸ್ವಚ್ಛ ಭಾರತ್’ ಅಭಿಯಾನ ಕೈಗೊಳ್ಳಿ. ತಿಂಗಳ ಅವಧಿಯ ಅಭಿಯಾನ ಕೈಗೊಂಡು, ನಾಗರಿಕರು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.

    ಭಾರತದಲ್ಲಿ 16,561 ಹೊಸ ಕೊರೊನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,42,23,557 ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳು 1,23,535 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದನ್ನೂ ಓದಿ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 286, ಕರ್ನಾಟಕದಲ್ಲಿ ಬಿಜೆಪಿಗೆ 13 ಸ್ಥಾನ

    ಸ್ವಾತಂತ್ರ್ಯ ದಿನಾಚರಣೆಯಂದು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಗಿಡ ನೆಡುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಿ ಇಲಾಖೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಗೃಹ ಸಚಿವಾಲಯವು ಸಲಹೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ದೆಹಲಿಯಲ್ಲಿ ಇನ್ಮುಂದೆ ಮಾಸ್ಕ್ ಧರಿಸದಿದ್ದರೆ 500ರೂ. ದಂಡ

    ದೆಹಲಿಯಲ್ಲಿ ಇನ್ಮುಂದೆ ಮಾಸ್ಕ್ ಧರಿಸದಿದ್ದರೆ 500ರೂ. ದಂಡ

    ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಮತ್ತೆ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಮಾಸ್ಕ್ ಧರಿಸದೇ ಇದ್ದರೆ 500 ರೂ. ದಂಡವನ್ನು ವಿಧಿಸಲಾಗುತ್ತದೆ. ಈ ನಿಯಮವು ಕಾರಿನಲ್ಲಿ ಪ್ರಯಾಣಿಸುವವರಿಗೆ ಅನ್ವಯಿಸುವುದಿಲ್ಲ.

    ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿಯ ಲೋಕನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ನಡೆಸಿದ ಅಧ್ಯಯನದಲ್ಲಿ ಕೊರೊನಾ ವೈರಸ್‍ನ ಓಮಿಕ್ರಾನ್ ರೂಪಾಂತರದ ಹೊಸ ಉಪ-ವೇರಿಯಂಟ್ ಅನ್ನು ಕಂಡುಬಂದಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಎಲ್‍ಎನ್‍ಜೆಪಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ಅವರು, ಓಮಿಕ್ರಾನ್‍ನ ಹೊಸ ಉಪ-ವೇರಿಯಂಟ್ – ಬಿಎ 2.75 – ಪ್ರಕರಣದ ದರ ಹೆಚ್ಚು ವರದಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಐಟಿ ಭರ್ಜರಿ ಬೇಟೆ – 56 ಕೋಟಿ ಹಣ, 32 ಕೆಜಿ ಚಿನ್ನ, 13 ಕೋಟಿಯ ವಜ್ರ ವಶಕ್ಕೆ

    ದೆಹಲಿಯಲ್ಲಿ ಮಂಗಳವಾರದಂದು 2,495 ಕೊರೊನಾ ಪ್ರಕರಣಗಳು ವರದಿ ಆಗಿದ್ದರೆ, ಬುಧವಾರ 2,146 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವಿಟಿ ದರವು 17.83ಕ್ಕೆ ಏರಿಕೆಯಾಗಿದೆ ಮತ್ತು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    ಸೋಮವಾರ 1,372 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಪಾಸಿಟಿವಿಟಿ ದರವು ಶೇಕಡಾ 17.85 ಕ್ಕೆ ಏರಿಕೆಯಾಗಿದ್ದು, ಜನವರಿ 21 ರಿಂದ ಕೊರೊನಾ ಪ್ರಕರಣಗಳು ಅತ್ಯಧಿಕವಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಧಾರ್ಮಿಕ ಆಚರಣೆ ಸುಳಿವು ಕೊಟ್ಟ ಅಶೋಕ್- ವಾರ್ಡ್‍ಗೊಂದೇ ಗಣೇಶ ರೂಲ್ಸ್ ವಾಪಸ್

    ಧಾರ್ಮಿಕ ಆಚರಣೆ ಸುಳಿವು ಕೊಟ್ಟ ಅಶೋಕ್- ವಾರ್ಡ್‍ಗೊಂದೇ ಗಣೇಶ ರೂಲ್ಸ್ ವಾಪಸ್

    ಬೆಂಗಳೂರು: ಕಳೆದ ಎರಡು ವರ್ಷದಿಂದ ಕೊರೊನಾದಿಂದಾಗಿ ಅದ್ಧೂರಿ ಗಣೇಶೋತ್ಸವಕ್ಕೆ ಅಡ್ಡಿಯಾಗಿತ್ತು. ಕೊನೆಗೂ ವಿಘ್ನೇಷನಿಗಿದ್ದ ವಾರ್ಡ್‍ಗೊಂದೇ ಗಣೇಶ ಎಂಬ ವಿಘ್ನ ಮುಕ್ತಾಯವಾಗಿದೆ.

    ಹೌದು, ವಾರ್ಡ್‍ಗೊಂದೇ ಗಣೇಶ ಎಂಬ ನಿಯಮ ತೆಗೆದು ಅದ್ಧೂರಿ ಗಣೇಶೋತ್ಸವ ಆಚರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ವಾರ್ಡ್‍ಗೆ ಒಂದು ಗಣೇಶ ಕೂರಿಸುವ ರೂಲ್ಸ್ ಇಲ್ಲ. ಎರಡು ವರ್ಷದ ಹಿಂದೆ ಹೇಗೆ ನಡೀತಾ ಇತ್ತು. ಹಾಗೆ ಗಣೇಶೋತ್ಸವ ನಡೆಯುತ್ತೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್‍ಗೂ ಸೂಚಿಸುತ್ತೇವೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಕಾಂಗ್ರೆಸ್ ಬದುಕಿದ್ದರೆ ರಾಷ್ಟ್ರಧ್ವಜವನ್ನು ಉಚಿತವಾಗಿ ನೀಡಲಿ: ಈಶ್ವರಪ್ಪ

    ಈ ಹಿಂದೆ ವಾರ್ಡ್‍ಗೊಂದೇ ಗಣೇಶ ಎಂದು ನಿಯಮ ಮುಂದುವರಿಸಲು ಚಿಂತನೆ ನಡೆಸುತ್ತಿದ್ದೇವೆ ಅಂತ ಬಿಬಿಎಂಪಿ ಕಮೀಷನರ್ ಹೇಳಿದ್ರು. ಈ ಬೆನ್ನಲ್ಲೇ ಸಾರ್ವಜನಿಕವಾಗಿ ಹಾಗೂ, ಗಣೇಶೋತ್ಸವ ಸಮಿತಿ ಮತ್ತು ಶ್ರೀರಾಮಸೇನೆ ಬೇಸರ ವ್ಯಕ್ತಪಡಿಸಿತ್ತು. ಇದೀಗ ಸಚಿವ ಅಶೋಕ್ ವಾರ್ಡ್‍ಗೆ ಒಂದು ಗಣೇಶ ಕೂರಿಸುವ ರೂಲ್ಸ್ ಇಲ್ಲ ಎಂದಿದ್ದಾರೆ.

    ಕೊನೆಗೂ ವಿಘ್ನೇಷನಿಗಿದ್ದ ವಾರ್ಡ್‍ಗೊಂದೇ ಗಣೇಶ ಎಂಬ ವಿಘ್ನ ಮುಕ್ತಾಯವಾಗಿದೆ. ಇನ್ನೇನಿದ್ರು ಡಿಜೆ.. ಲೈಟಿಂಗ್.. ಉತ್ಸವ.. ಅರ್ಕೆಸ್ಟ್ರಾ.. ಬೀದಿ ಬೀದಿಯಲ್ಲೂ ನಾನಾ ಅವತಾರಗಳ ಗಣೇಶನ ಮೂರ್ತಿ ನೋಡೋದಷ್ಟೆ ಬಾಕಿ.

    Live Tv
    [brid partner=56869869 player=32851 video=960834 autoplay=true]

  • ಸತತ ಮಳೆಗೆ ಸಾಂಕ್ರಾಮಿಕ ಕಾಯಿಲೆ ಹೆಚ್ಚಳ- ಕೊರೊನಾ, ಡೆಂಘಿ, ಮಲೇರಿಯಾಗೆ ಜನ ತತ್ತರ

    ಸತತ ಮಳೆಗೆ ಸಾಂಕ್ರಾಮಿಕ ಕಾಯಿಲೆ ಹೆಚ್ಚಳ- ಕೊರೊನಾ, ಡೆಂಘಿ, ಮಲೇರಿಯಾಗೆ ಜನ ತತ್ತರ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ವಾರದಿಂದ ಬಿಟ್ಟು ಬಿಡದೇ ಜಡಿಮಳೆ ಅಬ್ಬರಿಸುತ್ತಿದ್ದಾನೆ. ಭಾರೀ ಮಳೆಯಿಂದ ಬಾನಿಂದ ಸೂರ್ಯ ಮರೆಯಾಗಿದ್ದಾನೆ. ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಲ್ಲಿ ಈಗ ಸಾಂಕ್ರಾಮಿಕ ಕಾಯಿಲೆ ಹಬ್ ಆಗಿ ಮಾರ್ಪಾಡಾಗಿದೆ. ಸಿಲಿಕಾನ್ ಸಿಟಿ ಪೋಷಕರೇ ಹುಷಾರ್ ಪೋಷಕರೇ ನಿಚ್ಚ ಮಕ್ಕಳನ್ನು ಆದಷ್ಟು ಬೆಚ್ಚಗಿಟ್ಟುಕೊಂಡು ಆರೋಗ್ಯ ಕಾಪಾಡಿ.

    ಕಳೆದೊಂದು ವಾರದಿಂದ ಆಶ್ಲೇಷ ಜಡಿ ಮಳೆಯ ಅಬ್ಬರ ಬೆಂಗಳೂರನ್ನು ನಡುಗಿಸಿದೆ. ಸೂರ್ಯ ದರ್ಶನ ನೀಡ್ತಲೇ ಇಲ್ಲ. ನಿತ್ಯವೂ ಮುಸಲಧಾರೆಯದ್ದೇ ಕಾರುಬಾರು. ಇದರ ಎಫೆಕ್ಟ್ ನಿಂದ ಬೆಂಗಳೂರಿನ ಆಸ್ಪತ್ರೆಗಳಂತೂ ಹೌಸ್ ಫುಲ್ ಆಗಿದೆ. ಜ್ವರ, ಶೀತ, ಸೇರಿದಂತೆ ಹವಮಾನ ವೈಪರೀತ್ಯದಿಂದ ಸಾಂಕ್ರಾಮಿಕ ಕಾಯಿಲೆ ಹೆಚ್ಚಾಗಿದ್ದು, ಕೆ.ಸಿ. ಜನರಲ್, ಬೌರಿಂಗ್ ಆಸ್ಪತ್ರೆಯ ಒಪಿಡಿಗಳು ತುಂಬಿ ತುಳುಕುತ್ತಿದೆ.

    ಕೊರೊನಾ ಕೇಸ್ ಒಂದ್ಕಡೆ ಹೆಚ್ಚಳ ಆಗ್ತಿದ್ದು, ಕೇಂದ್ರ್ರವೂ ಅಲರ್ಟ್ ಮೆಸೇಜ್ ಕೊಟ್ಟಿದೆ. ಜೊತೆಗೆ ಡೆಂಘಿ, ಮಲೇರಿಯಾ, ಇಲಿ ಜ್ವರದ ಕಾಟವೂ ರಾಜ್ಯದಲ್ಲಿ ಕಾಡುತ್ತಿದೆ ಅಂತಾ ಸ್ವತಃ ಆರೋಗ್ಯ ಸಚಿವರೇ ಹೇಳಿದ್ದು, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅಂತ ಎಚ್ಚರಿಕೆ ನೀಡಿದ್ದಾರೆ.

    ನಿರಂತರ ಮಳೆ, ತಂಪು ಗಾಳಿಯಿಂದಾಗಿ ಜನ್ರ ಆರೋಗ್ಯ ಟ್ರ್ಯಾಕ್ ತಪ್ಪುತ್ತಿದೆ. ಅದ್ರಲ್ಲೂ ಮಕ್ಕಳು ಹಾಗೂ ವಯಸ್ಸಾದವರ ಬಗ್ಗೆ ಕೊಂಚ ಹೆಚ್ಚು ಕೇರ್ ತೆಗೆದುಕೊಳ್ಳಬೇಕು. ಎನಿಹೌ ಥಂಡಿ ಥಂಡಿ ವೆದರ್ ನ್ನು ಎಂಜಾಯ್ ಮಾಡಿ ಹಾಗೆ ಆರೋಗ್ಯದ ಬಗ್ಗೆಯೂ ಎಚ್ಚರಿಕೆ ಇರಲಿ.

    Live Tv
    [brid partner=56869869 player=32851 video=960834 autoplay=true]

  • ಇಂದು 1,694 ಕೇಸ್ – ಪಾಸಿಟಿವಿಟಿ ರೇಟ್ ಶೇ.6.02 ದಾಖಲು

    ಇಂದು 1,694 ಕೇಸ್ – ಪಾಸಿಟಿವಿಟಿ ರೇಟ್ ಶೇ.6.02 ದಾಖಲು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಳಿತ ಮುಂದುವರಿದಿದೆ. ನಿನ್ನೆ ಎರಡು ಸಾವಿರ ಗಡಿದಾಟಿದ್ದ ಕೇಸ್‍ಗಳ ಪೈಕಿ ಇಂದು ಇಳಿಕೆ ಕಂಡಿದೆ. ಒಟ್ಟು 1,694 ಪಾಸಿಟಿವ್ ಕೇಸ್ ಮತ್ತು 1 ಮರಣ ಪ್ರಕರಣ ದಾಖಲಾಗಿದೆ.

    ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ನಿನ್ನೆ 11,403 ದಾಖಲಾಗಿತ್ತು. ಇಂದು 11,355ಕ್ಕೆ ಇಳಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಇಂದು ಕೂಡ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಸಾವಿರ ಗಡಿದಾಟಿದೆ. ಇಂದು ಒಟ್ಟು 1,105 ಪ್ರಕರಣ ಪತ್ತೆಯಾಗಿದ್ದು, ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 8,096ಕ್ಕೆ ತಲುಪಿದೆ. ನಗರದ ಜೊತೆಗೆ ಜಿಲ್ಲೆಗಳಲ್ಲೂ ಪಾಸಿಟಿವ್ ಪ್ರಕರಣಗಳ ಏರಿಳಿತ ಮುಂದುವರಿದಿದೆ. ಇಂದು ರಾಯಚೂರಿನಲ್ಲಿ ದಾಖಲಾದ ಏಕೈಕ ಮರಣ ಪ್ರಕರಣ ಸೇರಿ ಈವರೆಗೆ ಒಟ್ಟು 40,114 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,741 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ರೇಟ್ ಶೇ. 6.02ಕ್ಕೆ ತಲುಪಿದೆ. ಇದನ್ನೂ ಓದಿ: ಅಗ್ಗದ ಬೆಲೆಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುವಾಗ ಇರಲಿ ಎಚ್ಚರ- ಟ್ಯಾಟೂ ಹಾಕಿಸಿಕೊಂಡ ಇಬ್ಬರಿಗೆ HIV

    ಈವರೆಗೆ ರಾಜ್ಯದಲ್ಲಿ ಒಟ್ಟು 40,18,250 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,66,739 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 63,999 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 28,118 ಸ್ಯಾಂಪಲ್ (ಆರ್‌ಟಿಪಿಸಿಆರ್ 21,329 + 6,789 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ- ವರ್ಕ್ಫ್ ಬೋರ್ಡ್ ಅರ್ಜಿ ವಜಾಗೊಳಿಸಿದ ಬಿಬಿಎಂಪಿ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 15, ಬಳ್ಳಾರಿ 48, ಬೆಳಗಾವಿ 80, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 1,105, ಬೀದರ್ 6, ಚಾಮರಾಜನಗರ 10, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 8, ಚಿತ್ರದುರ್ಗ 0, ದಕ್ಷಿಣ ಕನ್ನಡ 15, ದಾವಣಗೆರೆ 32, ಧಾರವಾಡ 98, ಗದಗ 5, ಹಾಸನ 8, ಹಾವೇರಿ 14, ಕಲಬುರಗಿ 20, ಕೊಡಗು 22, ಕೋಲಾರ 15, ಕೊಪ್ಪಳ 11, ಮಂಡ್ಯ 12, ಮೈಸೂರು 48, ರಾಯಚೂರು 16, ರಾಮನಗರ 1, ಶಿವಮೊಗ್ಗ 34, ತುಮಕೂರು 5, ಉಡುಪಿ 7, ಉತ್ತರ ಕನ್ನಡ 34, ವಿಜಯಪುರ 7 ಮತ್ತು ಯಾದಗಿರಿಯಲ್ಲಿ 3 ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಎರಡು ಸಾವಿರ ಗಡಿದಾಟಿದ ಕೊರೊನಾ – ಸಕ್ರಿಯ ಪ್ರಕರಣಗಳ ಸಂಖ್ಯೆ 11,403ಕ್ಕೆ ಏರಿಕೆ

    ರಾಜ್ಯದಲ್ಲಿ ಎರಡು ಸಾವಿರ ಗಡಿದಾಟಿದ ಕೊರೊನಾ – ಸಕ್ರಿಯ ಪ್ರಕರಣಗಳ ಸಂಖ್ಯೆ 11,403ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆ ಕಾಣುತ್ತಿದೆ. ಇಂದು ಕೊರೊನಾ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಎರಡು ಸಾವಿರ ಗಡಿದಾಟಿದೆ. ಇಂದು ಒಟ್ಟು 2,042 ಪಾಸಿಟಿವ್ ಕೇಸ್ ಮತ್ತು 2 ಮರಣ ಪ್ರಕರಣ ದಾಖಲಾಗಿದೆ.

    ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 11,403ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲೇ ಪ್ರಕರಣಗಳ ಸಂಖ್ಯೆ ಸಾವಿರ ಗಡಿದಾಟಿದೆ. ಇಂದು ಒಟ್ಟು 1,309 ಪ್ರಕರಣ ಪತ್ತೆಯಾಗಿದ್ದು, ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 8,338ಕ್ಕೆ ತಲುಪಿದೆ. ನಗರದ ಜೊತೆಗೆ ಜಿಲ್ಲೆಗಳಲ್ಲೂ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಇಂದು ಬೆಂಗಳೂರು ಮತ್ತು ಕೋಲಾರದಲ್ಲಿ  ತಲಾ ಒಂದೊಂದು ಮರಣ ಪ್ರಕರಣ ಸೇರಿ ರಾಜ್ಯದಲ್ಲಿ ಈವರೆಗೆ ಒಟ್ಟು 40,113 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,704 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದಿನ ಪಾಸಿಟಿವಿಟಿ ರೇಟ್ ಶೇ. 6.32ಕ್ಕೆ ತಲುಪಿದೆ. ಇದನ್ನೂ ಓದಿ: ಹೆಲ್ಮೆಟ್ ಧರಿಸದೇ ಬೈಕ್ ರ‍್ಯಾಲಿ ನಡೆಸಿದ್ದ ಬಿಜೆಪಿಗೆ ಸಂಸದನಿಗೆ ಬಿತ್ತು 20 ಸಾವಿರ ರೂ. ದಂಡ

    ಈವರೆಗೆ ರಾಜ್ಯದಲ್ಲಿ ಒಟ್ಟು 40,16,556 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,64,998 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 48,820 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 32,277 ಸ್ಯಾಂಪಲ್ (ಆರ್‌ಟಿಪಿಸಿಆರ್ 23,920 + 8,357 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಮೋಸಕ್ಕೆ ಮತ್ತೊಂದು ಹೆಸರೇ ಬಿಜೆಪಿ: ಡಿ.ಕೆ ಶಿವಕುಮಾರ್

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 19, ಬಳ್ಳಾರಿ 45, ಬೆಳಗಾವಿ 110, ಬೆಂಗಳೂರು ಗ್ರಾಮಾಂತರ 35, ಬೆಂಗಳೂರು ನಗರ 1,309, ಬೀದರ್ 4, ಚಾಮರಾಜನಗರ 13, ಚಿಕ್ಕಬಳ್ಳಾಪುರ 11, ಚಿಕ್ಕಮಗಳೂರು 0, ಚಿತ್ರದುರ್ಗ 2, ದಕ್ಷಿಣ ಕನ್ನಡ 17, ದಾವಣಗೆರೆ 24, ಧಾರವಾಡ 96, ಗದಗ 9, ಹಾಸನ 61, ಹಾವೇರಿ 13, ಕಲಬುರಗಿ 20, ಕೊಡಗು 22, ಕೋಲಾರ 19, ಕೊಪ್ಪಳ 13, ಮಂಡ್ಯ 31, ಮೈಸೂರು 82, ರಾಯಚೂರು 15, ರಾಮನಗರ 2, ಶಿವಮೊಗ್ಗ 25, ತುಮಕೂರು 33, ಉಡುಪಿ 6, ಉತ್ತರ ಕನ್ನಡ 1, ವಿಜಯಪುರ 5 ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನರೇಂದ್ರ ಮೋದಿಯಿಂದಾಗಿ ನೀವೆಲ್ಲರೂ ಬದುಕಿದ್ದೀರಿ – ಲಸಿಕೆ ಪಡೆದ ಜನತೆಗೆ ಬಿಹಾರ ಸಚಿವ ಮಾತು

    ನರೇಂದ್ರ ಮೋದಿಯಿಂದಾಗಿ ನೀವೆಲ್ಲರೂ ಬದುಕಿದ್ದೀರಿ – ಲಸಿಕೆ ಪಡೆದ ಜನತೆಗೆ ಬಿಹಾರ ಸಚಿವ ಮಾತು

    ಪಾಟ್ನಾ: ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಡೆದ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಶ್ಲಾಘಿಸಿರುವ ಬಿಹಾರದ ಸಚಿವ ರಾಮ್ ಸೂರತ್ ರೈ, ಭಾರತೀಯರ ಜೀವ ಉಳಿಸಿದ ಶ್ರೇಯಸ್ಸನ್ನು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದಾರೆ.

    ನೀವಿಂದು ಬದುಕಿದ್ದರೆ ಅದರ ಕ್ರೆಡಿಟ್ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅವರು ಲಸಿಕೆಯನ್ನು ಅಭಿವೃದ್ಧಿಪಡಿಸಿ, ದೇಶದ ಜನರಿಗೆ ಉಚಿತವಾಗಿ ನೀಡಿದರು. ಅದರಿಂದಾಗಿಯೇ ನೀವೆಲ್ಲರೂ ಇಂದು ಬದುಕಿದ್ದೀರಿ ಎಂದು ಈಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,692 ಮಂದಿಗೆ ಕೊರೊನಾ ಸೋಂಕು – ಇಬ್ಬರು ಸಾವು

    ಕೊರೊನಾ ಕಾರಣದಿಂದಾಗಿ ಅನೇಕ ದೇಶಗಳು ಈಗಲೂ ಆರ್ಥಿಕ ಪರಿಸ್ಥಿತಿ ಎದುರು ಹೋರಾಡುತ್ತಿವೆ. ಆದರೆ ಭಾರತದಲ್ಲಿ ಆರ್ಥಿಕತೆ ಬಲಪಡಿಸುವ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ಕೆಲಸಗಳು ಸಾಗುತ್ತಿವೆ.

    ನರೇಂದ್ರ ಮೋದಿ ಅವರು ಲಸಿಕೆಯನ್ನು ತಂದುಕೊಡದೆ ಇದ್ದಿದ್ದರೇ ಮತ್ತು ಅದನ್ನು ಜನರಿಗೆ ಉಚಿತವಾಗಿ ನೀಡದೇ ಇದ್ದಿದ್ದರೆ ಪರಿಸ್ಥಿತಿ ಬಹಳ ಕೆಟ್ಟದಾಗಿರುತ್ತಿತ್ತು. ನಮ್ಮ ಕುಟುಂಬಗಳು ಮತ್ತು ಸ್ನೇಹಿತರ ನಡುವೆಯೂ ಕೋವಿಡ್ ಸಾವುಗಳನ್ನು ನಾವೆಲ್ಲ ಕಂಡಿದ್ದೇವೆ. ನಾನು ನನ್ನ ಬಾಮೈದುನನ್ನೂ ಕಳೆದುಕೊಂಡಿದ್ದೇನೆ ಎಂದು ನೆನೆದಿದ್ದಾರೆ. ಇದನ್ನೂ ಓದಿ: ಎನ್‌ಕೌಂಟರ್‌ ವೇಳೆ ಭಯೋತ್ಪಾದಕರ ಗುಂಡೇಟಿಗೆ ಮಡಿದ ಸೇನಾ ಶ್ವಾನ

    ಈ ವರ್ಷದ ಜುಲೈ 17ರಂದು ಭಾರತ 200 ಕೋಟಿ ಡೋಸ್ ಲಸಿಕೆ ನೀಡಿ ಮೈಲಿಗಲ್ಲಿಗೆ ಹೆಸರಾಗಿದೆ. ಲಸಿಕಾ ಅಭಿಯಾನ ಆರಂಭವಾದ 18 ತಿಂಗಳ ಬಳಿಕ ಈ ಸಾಧನೆ ಮಾಡಲಾಗಿದೆ. ಸ್ವಾತಂತ್ರ‍್ಯ ದಿನಾಚರಣೆಗೂ ಮುನ್ನ ಕೇಂದ್ರ ಸರ್ಕಾರವು `ಕೋವಿಡ್ ಲಸಿಕೆ ಅಮೃತ ಮಹೋತ್ಸವ’ದ ವಿಶೇಷ ಅಭಿಯಾನ ಘೋಷಿಸಿದೆ. ಜುಲೈ 15 ರಿಂದ ಸೆಪ್ಟೆಂಬರ್ 30ರ ವರೆಗೆ 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಉಚಿತ ಮುಂಜಾಗ್ರತಾ ಡೋಸ್ (ಬೂಸ್ಟರ್ ಡೋಸ್) ಸಹ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]