Tag: Corona Virus

  • ಪ್ರತಿ 44 ಸೆಕೆಂಡ್‍ಗೆ ಒಬ್ಬರಂತೆ ಕೊರೊನಾಗೆ ಬಲಿಯಾಗುತ್ತಿದ್ದಾರೆ – WHO

    ಪ್ರತಿ 44 ಸೆಕೆಂಡ್‍ಗೆ ಒಬ್ಬರಂತೆ ಕೊರೊನಾಗೆ ಬಲಿಯಾಗುತ್ತಿದ್ದಾರೆ – WHO

    ಜಿನೇವಾ: ವಿಶ್ವದಲ್ಲಿ ಕೊರೊನಾ (Corona) ಸೋಂಕಿತರ ಸಂಖ್ಯೆ ಇಳಿಕೆ ಕಂಡರೂ, ಪ್ರತಿ 44 ಸೆಕೆಂಡ್‍ಗೆ ಒಬ್ಬರಂತೆ ಈಗಲೂ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಕಳವಳ ವ್ಯಕ್ತಪಡಿಸಿದೆ.

    ಕೊರೊನಾ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ (Director General WHO) ಟೆಡ್ರೊಸ್ ಅಧಾನೊಮ್ ಫೆಬ್ರೆಯೆಸಸ್ (Tedros Adhanom Ghebreyesus), ವಿಶ್ವದಾದ್ಯಂತ ಕೊರೊನಾ ಕೇಸ್‍ಗಳ ಸಂಖ್ಯೆ ಇಳಿಕೆ ಕಂಡಿದೆ. ಸೋಂಕಿನ ಜೊತೆಗೆ ಮರಣ ಪ್ರಮಾಣ ಕೂಡ ಗಣನೀಯ ಇಳಿಕೆ ಕಂಡಿದೆ. ಕಳೆದ ಒಂದು ವಾರದ ಅಂಕಿ ಅಂಶಗಳನ್ನು ಗಮನಿಸಿದ ಬಳಿಕ ಕೊರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಶೇ.80ರಷ್ಟು ಇಳಿಕೆ ಕಂಡಿದೆ. ಆದರೂ ಪ್ರತಿ 44 ಸೆಕೆಂಡ್‍ಗೆ ಒಬ್ಬರಂತೆ ಈಗಲೂ ಸಾವನ್ನಪ್ಪುತ್ತಿದ್ದಾರೆ ಎಂದರು. ಇದನ್ನೂ ಓದಿ: ಪಾಕ್‌ನಲ್ಲಿ ಭೀಕರ ಪ್ರವಾಹ – ಸಂತ್ರಸ್ತರಿಗೆ ದೇವಾಲಯದಲ್ಲಿ ಆಶ್ರಯ ನೀಡಿದ ಹಿಂದೂ ಸಮುದಾಯ

    ಕೊರೊನಾ ವಿರುದ್ಧದ ಹೋರಾಟ ಮುಗಿದಿಲ್ಲ. ಸೋಂಕಿನ ಪ್ರಭಾವ ದುರ್ಬಲಗೊಂಡಿದೆ ಅಷ್ಟೇ. ಸಾವಿನ ಪ್ರಕರಣಗಳನ್ನು ತಡೆಗಟ್ಟಲು ಪ್ರಯತ್ನಿಸಿ. ಜನಸಾಮಾನ್ಯರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ ಎಂದು ಎಚ್ಚರಿಕೆ ನೀಡಿದರು.

    ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 5,076 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 47,945 ಸಕ್ರಿಯ ಪ್ರಕರಣ ದೇಶದಲ್ಲಿದೆ. ಇದನ್ನೂ ಓದಿ: ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ: ಬೊಮ್ಮಾಯಿ ವಿರುದ್ಧ ಸಿದ್ದು ಕಿಡಿ

    ಕೊರೊನಾದೊಂದಿಗೆ ಕಾಡುತ್ತಿರುವ ಮಂಕಿಪಾಕ್ಸ್ (Monkeypox) ಪ್ರಕರಣದಲ್ಲೂ ಇಳಿಕೆ ಕಂಡಿದ್ದು, ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಈವರೆಗೆ ವಿಶ್ವದಲ್ಲಿ ಒಟ್ಟು 52,997 ಮಂದಿ ಮಂಕಿಪಾಕ್ಸ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ಡಬ್ಲ್ಯೂಎಚ್‍ಒ ಮಾಹಿತಿ ಹಂಚಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಒಟ್ಟು 670 ಕೇಸ್ – ಬೆಂಗ್ಳೂರಲ್ಲಿ 337 ಪ್ರಕರಣ ದಾಖಲು

    ಒಟ್ಟು 670 ಕೇಸ್ – ಬೆಂಗ್ಳೂರಲ್ಲಿ 337 ಪ್ರಕರಣ ದಾಖಲು

    ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಳಿತ ಕಂಡು ಬರುತ್ತಿದೆ. ಅದು ಇಂದು ಕೂಡ ಮುಂದುವರಿದಿದೆ. ಇಂದು ರಾಜ್ಯದಲ್ಲಿ ಒಟ್ಟು 670 ಪಾಸಿಟಿವ್ ಕೇಸ್ ಮತ್ತು ಏಕೈಕ ಮರಣ ಪ್ರಕರಣ ದಾಖಲಾಗಿದೆ.

    ಗದಗ, ಕೊಪ್ಪಳ ಮತ್ತು ಯಾದಗಿರಿಯಲ್ಲಿ ಇಂದು ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಉಳಿದ 27 ಜಿಲ್ಲೆಗಳಲ್ಲೂ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ 730 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,269ಕ್ಕೆ ಇಳಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಇಂದು 337 ಕೇಸ್ ದಾಖಲಾಗಿದೆ. ಮೈಸೂರಿನಲ್ಲಿ ದಾಖಲಾದ 79 ಕೇಸ್ ಜಿಲ್ಲೆಗಳ ಪೈಕಿ ದಾಖಲಾದ ಹೆಚ್ಚಿನ ಪ್ರಕರಣವಾಗಿದೆ. ಇಂದು ಚಿತ್ರದುರ್ಗದಲ್ಲಿ ದಾಖಲಾದ ಏಕೈಕ ಮರಣ ಪ್ರಕರಣ ಸೇರಿ ಈವರೆಗೆ ಒಟ್ಟು 40,215 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ACB ರದ್ದು ತೀರ್ಪಿನ ಅನುಷ್ಠಾನ‌ ಮಾಡಿ ಸರ್ಕಾರದಿಂದ ಆದೇಶ

    ಈವರೆಗೆ ರಾಜ್ಯದಲ್ಲಿ ಒಟ್ಟು 40,57,589 ಮಂದಿಗೆ ಕೊರೊನಾ ಬಂದಿದೆ. ಒಟ್ಟು 40,13,063 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 38,353 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 27,429 ಸ್ಯಾಂಪಲ್ (ಆರ್​ಟಿಪಿಸಿಆರ್ 20,073 + 7,356 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ರೇವಣ್ಣನನ್ನು ಹಿಟ್ಲರ್‌ಗೆ ಹೋಲಿಸಿದ ಶಾಸಕ ಪ್ರೀತಂ ಗೌಡ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 2, ಬಳ್ಳಾರಿ 14, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 337, ಬೀದರ್ 1, ಚಾಮರಾಜನಗರ 4, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 22, ಚಿತ್ರದುರ್ಗ 1, ದಕ್ಷಿಣ ಕನ್ನಡ 14, ದಾವಣಗೆರೆ 0, ಧಾರವಾಡ 11, ಗದಗ 1, ಹಾಸನ 17, ಹಾವೇರಿ 2, ಕಲಬುರಗಿ 9, ಕೊಡಗು 48, ಕೋಲಾರ 10, ಕೊಪ್ಪಳ 0, ಮಂಡ್ಯ 8, ಮೈಸೂರು 79, ರಾಯಚೂರು 3, ರಾಮನಗರ 34, ಶಿವಮೊಗ್ಗ 13, ತುಮಕೂರು 7, ಉಡುಪಿ 5, ಉತ್ತರ ಕನ್ನಡ 10, ವಿಜಯಪುರ 1 ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇಂದು 606 ಕೇಸ್ – 6 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಇಂದು 606 ಕೇಸ್ – 6 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Corona) ಪ್ರಕರಣಗಳ ಏರಿಳಿತ ಮುಂದುವರಿದಿದೆ. ಇಂದು ಒಟ್ಟು 606 ಪಾಸಿಟಿವ್ ಕೇಸ್ ಮತ್ತು 2 ಮರಣ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ 6 ಜಿಲ್ಲೆಗಳಾದ ಬೆಂಗಳೂರು ನಗರ, ಬೀದರ್, ಗದಗ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇಂದು ರಾಜ್ಯದಲ್ಲಿ 451 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,726ಕ್ಕೆ ಇಳಿಕೆ ಕಂಡಿದೆ. ಜೊತೆಗೆ ಬೆಂಗಳೂರು ನಗರದಲ್ಲೂ ಪ್ರಕರಣಗಳ ಸಂಖ್ಯೆ ಭಾರಿ ಇಳಿಕೆ ಕಂಡಿದೆ. ಇಂದು 289 ಕೇಸ್ ದಾಖಲಾಗಿದೆ. ಹಾಸನದಲ್ಲಿ ದಾಖಲಾದ 48 ಕೇಸ್ ಜಿಲ್ಲೆಗಳ ಪೈಕಿ ದಾಖಲಾದ ಹೆಚ್ಚಿನ ಪ್ರಕರಣವಾಗಿದೆ. ಇಂದು ಶಿವಮೊಗ್ಗ ಮತ್ತು ತುಮಕೂರಿನಲ್ಲಿ ತಲಾ ಒಂದೊಂದು ಮರಣ ಪ್ರಕರಣ ದಾಖಲಾಗಿದೆ. ಈ ಮೂಲಕ ಈವರೆಗೆ ಒಟ್ಟು 40,211 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಹಾವಳಿ – ಕಾಣೆಯಾಗಿದ್ದಾರೆಂದು ಸಚಿವರು, ಸಂಸದರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌

    ಈವರೆಗೆ ರಾಜ್ಯದಲ್ಲಿ ಒಟ್ಟು 40,56,428 ಮಂದಿಗೆ ಕೊರೊನಾ ಬಂದಿದೆ. ಒಟ್ಟು 40,11,449 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 1,30,105 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 23,647 ಸ್ಯಾಂಪಲ್ (ಆರ್‌ಟಿಪಿಸಿಆರ್ 17,893 + 5,754 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಹಿಜಬ್ ಪ್ರಕರಣ: ಶಾಲಾ ವಿದ್ಯಾರ್ಥಿಗಳನ್ನು ಹೈಕೋರ್ಟ್ ಕೈದಿಗಳಿಗೆ ಹೋಲಿಸಿದೆ – ಸುಪ್ರೀಂಕೋರ್ಟ್‌ನಲ್ಲಿ 2 ಗಂಟೆ ಮಹತ್ವದ ವಿಚಾರಣೆ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 3, ಬಳ್ಳಾರಿ 14, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 289, ಬೀದರ್ 0, ಚಾಮರಾಜನಗರ 10, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 11, ಚಿತ್ರದುರ್ಗ 1, ದಕ್ಷಿಣ ಕನ್ನಡ 15, ದಾವಣಗೆರೆ 3, ಧಾರವಾಡ 15, ಗದಗ 0, ಹಾಸನ 48, ಹಾವೇರಿ 2, ಕಲಬುರಗಿ 5, ಕೊಡಗು 35, ಕೋಲಾರ 16, ಕೊಪ್ಪಳ 0, ಮಂಡ್ಯ 7, ಮೈಸೂರು 34, ರಾಯಚೂರು 8, ರಾಮನಗರ 28, ಶಿವಮೊಗ್ಗ 16, ತುಮಕೂರು 10, ಉಡುಪಿ 8, ಉತ್ತರ ಕನ್ನಡ 12, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇಂದು 484 ಕೇಸ್ – 822 ಮಂದಿ ಆಸ್ಪತ್ರೆಯಿಂದ ಬಿಡುಗಡೆ

    ಇಂದು 484 ಕೇಸ್ – 822 ಮಂದಿ ಆಸ್ಪತ್ರೆಯಿಂದ ಬಿಡುಗಡೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದೆ. ಇಂದು ಒಟ್ಟು 484 ಪಾಸಿಟಿವ್ ಕೇಸ್ ಮತ್ತು 2 ಮರಣ ಪ್ರಕರಣ ದಾಖಲಾಗಿದೆ.

    ಇಂದು ರಾಜ್ಯದಲ್ಲಿ 822 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,872ಕ್ಕೆ ಇಳಿಕೆ ಕಂಡಿದೆ. ಜೊತೆಗೆ ಬೆಂಗಳೂರು ನಗರದಲ್ಲೂ ಪ್ರಕರಣಗಳ ಸಂಖ್ಯೆ ಭಾರಿ ಇಳಿಕೆ ಕಂಡಿದೆ. ಇಂದು 276 ಕೇಸ್ ದಾಖಲಾಗಿದೆ. ಮೈಸೂರಿನಲ್ಲಿ ದಾಖಲಾದ 30 ಕೇಸ್ ಜಿಲ್ಲೆಗಳ ಪೈಕಿ ದಾಖಲಾದ ಹೆಚ್ಚಿನ ಪ್ರಕರಣವಾಗಿದೆ. ಇಂದು ಬಳ್ಳಾರಿ ಮತ್ತು ಧಾರವಾಡದಲ್ಲಿ ತಲಾ ಒಂದೊಂದು ಮರಣ ಪ್ರಕರಣ ದಾಖಲಾಗಿದೆ. ಈ ಮೂಲಕ ಈವರೆಗೆ ಒಟ್ಟು 40,207 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಿಇಟಿ ರ್‍ಯಾಂಕ್ ರದ್ದು- ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

    ಈವರೆಗೆ ರಾಜ್ಯದಲ್ಲಿ ಒಟ್ಟು 40,55,230 ಮಂದಿಗೆ ಕೊರೊನಾ ಬಂದಿದೆ. ಒಟ್ಟು 40,10,109 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 36,164 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 12,873 ಸ್ಯಾಂಪಲ್ (ಆರ್‌ಟಿಪಿಸಿಆರ್ 10,194 + 2,679 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ಕೇಸ್‍ಗೆ ಟ್ವಿಸ್ಟ್ – ಲಂಚ ಪಡೆದ ಬಿಜೆಪಿ ಶಾಸಕರ ಆಡಿಯೋ ವೈರಲ್

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 0, ಬಳ್ಳಾರಿ 8, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 276, ಬೀದರ್ 1, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 3, ಚಿತ್ರದುರ್ಗ 2, ದಕ್ಷಿಣ ಕನ್ನಡ 10, ದಾವಣಗೆರೆ 1, ಧಾರವಾಡ 4, ಗದಗ 0, ಹಾಸನ 2, ಹಾವೇರಿ 2, ಕಲಬುರಗಿ 7, ಕೊಡಗು 29, ಕೋಲಾರ 18, ಕೊಪ್ಪಳ 1, ಮಂಡ್ಯ 16, ಮೈಸೂರು 30, ರಾಯಚೂರು 2, ರಾಮನಗರ 20, ಶಿವಮೊಗ್ಗ 0, ತುಮಕೂರು 21, ಉಡುಪಿ 15, ಉತ್ತರ ಕನ್ನಡ 6, ವಿಜಯಪುರ 0 ಮತ್ತು ಯಾದಗಿರಿಯಲ್ಲಿ 1 ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,286 ಮಂದಿಗೆ ಕೊರೊನಾ – ಮೂವರು ಸಾವು

    ರಾಜ್ಯದಲ್ಲಿಂದು 1,286 ಮಂದಿಗೆ ಕೊರೊನಾ – ಮೂವರು ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಖ್ಯೆ ಇಳಿಕೆಯಾದಂತೆ ಕಾಣುತ್ತಿದೆ. ಇಂದು 1,286ಕ್ಕೆ ಇಳಿಕೆಯಾಗಿದೆ. ಮೂವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 2,358 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,97,181 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 27,668 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,84,91,097 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನು ಓದಿ: ಉರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ 

    ಕೋವಿಡ್‌ನಿಂದ ಇಂದು ಎರಡು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,182 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.4.64 ಇದೆ. 8,700 ಸಕ್ರಿಯ ಪ್ರಕರಣಗಳಿವೆ. ಇಂದು 27,668 ಮಂದಿಯನ್ನು (7,387 ರ‍್ಯಾಪಿಡ್ ಆಂಟಿಜನ್, 20,281 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 30,173 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ರಾಕೆಟ್ರಿ’ ಸಿನಿಮಾದಲ್ಲಿ ಇಸ್ರೊಗೆ ಕಳಂಕ ತರುವಂತಹ ಸುಳ್ಳುಗಳನ್ನು ಹೇಳಲಾಗಿದೆ: ಮಾಜಿ ವಿಜ್ಞಾನಿಗಳ ಆರೋಪ

    ಬೆಂಗಳೂರು ನಗರದಲ್ಲೇ 796 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 6, ಬಾಗಲಕೋಟೆ 3, ಬಳ್ಳಾರಿ 33, ಬೆಳಗಾವಿ 16, ಬೀದರ್ 3, ಚಾಮರಾಜನಗರ 17, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 20, ಚಿತ್ರದುರ್ಗ 4, ದಕ್ಷಿಣ ಕನ್ನಡ 18, ದಾವಣಗೆರೆ 5, ಧಾರವಾಡ 23, ಗದಗ 0, ಹಾಸನ 40, ಹಾವೇರಿ 6, ಕಲಬುರಗಿ 17, ಕೊಡಗು 46, ಕೋಲಾರ 43, ಕೊಪ್ಪಳ 3, ಮಂಡ್ಯ 20, ಮೈಸೂರು 64, ರಾಯಚೂರು 16, ರಾಮನಗರ 24, ಶಿವಮೊಗ್ಗ 19, ತುಮಕೂರು 12, ಉಡುಪಿ 7, ಉತ್ತರ ಕನ್ನಡ 17, ವಿಜಯಪುರದಲ್ಲಿ 2 ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಇಂದು 1,713 ಕೇಸ್ – ಈವರೆಗೆ ರಾಜ್ಯದಲ್ಲಿ ಒಟ್ಟು 40,40,111 ಪ್ರಕರಣ

    ಇಂದು 1,713 ಕೇಸ್ – ಈವರೆಗೆ ರಾಜ್ಯದಲ್ಲಿ ಒಟ್ಟು 40,40,111 ಪ್ರಕರಣ

    ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 1,713 ಪಾಸಿಟಿವ್ ಪ್ರಕರಣ ಮತ್ತು 4 ಮರಣ ಪ್ರಕರಣ ದಾಖಲಾಗಿದೆ. ಈ ಮೂಲಕ ನಿನ್ನೆಗಿಂತ ಇಂದು ಪಾಸಿಟಿವ್ ಕೇಸ್‍ಗಳ ಸಂಖ್ಯೆ ಏರಿಕೆ ಕಂಡಿದೆ.

    ರಾಜ್ಯದಲ್ಲಿ ಕೊರೊನಾ ಏರಿಳಿತದ ನಡುವೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 10,452ಕ್ಕೆ ತಲುಪಿದೆ. ಬೆಂಗಳೂರು ನಗರದಲ್ಲಿ ಇಂದು 965 ಪ್ರಕರಣ ದಾಖಲಾಗಿದೆ. ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ ದಾಖಲಾದ 97 ಕೇಸ್ ಹೆಚ್ಚಿನ ಕೇಸ್ ಆಗಿದೆ. ಮೈಸೂರು ದಸರಾ ಸಮೀಪಿಸುತ್ತಿದ್ದಂತೆ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಏರಿಕೆ ಕಾಣುತ್ತಿರುವುದು ಆತಂಕ ಮೂಡಿಸಿದೆ. ಇಂದು ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರಿನಲ್ಲಿ ತಲಾ 1 ಮತ್ತು ಧಾರವಾಡದಲ್ಲಿ 2 ಸೇರಿ ಒಟ್ಟು 4 ಮರಣ ಪ್ರಕರಣ ದಾಖಲಾಗಿದೆ. ಈವರೆಗೆ ಒಟ್ಟು 40,166 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,034 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಪಾಸಿಟಿವಿಟಿ ರೇಟ್ ಶೇ.5.33ಕ್ಕೆ ತಲುಪಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಾವರ್ಕರ್ ಪಾರ್ಕ್ ನಿರ್ಮಾಣ – ಸ್ವಾತಂತ್ರ್ಯ ಸೇನಾನಿ ಎಂದು ಒಪ್ಪಿದ್ದ ಕಾಂಗ್ರೆಸ್ಸಿಗರು

     

    ಈವರೆಗೆ ರಾಜ್ಯದಲ್ಲಿ ಒಟ್ಟು 40,40,111 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,89,451 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 62,778 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 32,130 ಸ್ಯಾಂಪಲ್ (ಆರ್​ಟಿಪಿಸಿಆರ್ 24,312 + 7,818 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಡಿಕೆಶಿಯವರೇ ಮೊಟ್ಟೆ ಹೊಡೆಸಿರಬೇಕು: ಕಟೀಲ್

     

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 11, ಬಳ್ಳಾರಿ 48, ಬೆಳಗಾವಿ 48, ಬೆಂಗಳೂರು ಗ್ರಾಮಾಂತರ 28, ಬೆಂಗಳೂರು ನಗರ 965, ಬೀದರ್ 6, ಚಾಮರಾಜನಗರ 15, ಚಿಕ್ಕಬಳ್ಳಾಪುರ 13, ಚಿಕ್ಕಮಗಳೂರು 65, ಚಿತ್ರದುರ್ಗ 5, ದಕ್ಷಿಣ ಕನ್ನಡ 17, ದಾವಣಗೆರೆ 26, ಧಾರವಾಡ 59, ಗದಗ 1, ಹಾಸನ 64, ಹಾವೇರಿ 5, ಕಲಬುರಗಿ 21, ಕೊಡಗು 35, ಕೋಲಾರ 25, ಕೊಪ್ಪಳ 12, ಮಂಡ್ಯ 20, ಮೈಸೂರು 97, ರಾಯಚೂರು 16, ರಾಮನಗರ 42, ಶಿವಮೊಗ್ಗ 30, ತುಮಕೂರು 15, ಉಡುಪಿ 13, ಉತ್ತರ ಕನ್ನಡ 9, ವಿಜಯಪುರ ಮತ್ತು ಯಾದಗಿರಿಯಲ್ಲಿ ತಲಾ ಒಂದೊಂದು ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇಂದು 1,573 ಕೇಸ್, 3 ಸಾವು – ಏಕೈಕ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ

    ಇಂದು 1,573 ಕೇಸ್, 3 ಸಾವು – ಏಕೈಕ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ

    ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 1,573 ಪಾಸಿಟಿವ್ ಕೇಸ್‌ ಮತ್ತು 3 ಮರಣ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಕೊರೊನಾ ಏರಿಳಿತದ ನಡುವೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9,777ಕ್ಕೆ ತಲುಪಿದೆ. ರಾಜ್ಯದಲ್ಲಿ ಇಂದು ಬೀದರ್ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಬೆಂಗಳೂರು ನಗರದಲ್ಲಿ ಇಂದು 935 ಪ್ರಕರಣ ದಾಖಲಾಗಿದೆ. ಜಿಲ್ಲೆಗಳ ಪೈಕಿ ಹಾಸನದಲ್ಲಿ ದಾಖಲಾದ 98 ಕೇಸ್ ಹೆಚ್ಚಿನ ಕೇಸ್ ಆಗಿದೆ. ಇಂದು ಚಾಮರಾಜನಗರ 2 ಮತ್ತು ದಕ್ಷಿಣಕನ್ನಡದಲ್ಲಿ 1 ಸೇರಿ ಒಟ್ಟು 3 ಮರಣ ಪ್ರಕರಣ ದಾಖಲಾಗಿದೆ. ಈವರೆಗೆ ಒಟ್ಟು 40,162 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,100 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಪಾಸಿಟಿವಿಟಿ ರೇಟ್ ಶೇ. 4.91ಕ್ಕೆ ತಲುಪಿದೆ. ಇದನ್ನೂ ಓದಿ: ಧರ್ಮ ಒಡೆಯುವುದು ನನ್ನ ಉದ್ದೇಶವಲ್ಲ, ಕೆಲವರು ನನ್ನನ್ನ ದಾರಿ ತಪ್ಪಿಸಿದ್ರು: ಸಿದ್ದರಾಮಯ್ಯ

     

    ಈವರೆಗೆ ರಾಜ್ಯದಲ್ಲಿ ಒಟ್ಟು 40,38,398 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,88,417 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 48,531 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 31,981 ಸ್ಯಾಂಪಲ್ (ಆರ್​ಟಿಪಿಸಿಆರ್ 23,518 + 8,463 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: 200 ಸಿಬ್ಬಂದಿ ನಿಯೋಜನೆ; ಇನ್ನೂ ಪತ್ತೆಯಾಗಿಲ್ಲ ಚಿರತೆ!

     

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 7, ಬಳ್ಳಾರಿ 50, ಬೆಳಗಾವಿ 33, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 935, ಬೀದರ್ 0, ಚಾಮರಾಜನಗರ 24, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 1, ಚಿತ್ರದುರ್ಗ 5, ದಕ್ಷಿಣ ಕನ್ನಡ 20, ದಾವಣಗೆರೆ 14, ಧಾರವಾಡ 34, ಗದಗ 3, ಹಾಸನ 98, ಹಾವೇರಿ 5, ಕಲಬುರಗಿ 9, ಕೊಡಗು 32, ಕೋಲಾರ 27, ಕೊಪ್ಪಳ 3, ಮಂಡ್ಯ 28, ಮೈಸೂರು 86, ರಾಯಚೂರು 20, ರಾಮನಗರ 26, ಶಿವಮೊಗ್ಗ 27, ತುಮಕೂರು 32, ಉಡುಪಿ 7, ಉತ್ತರ ಕನ್ನಡ 17, ವಿಜಯಪುರ 6 ಮತ್ತು ಯಾದಗಿರಿಯಲ್ಲಿ 2 ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೊರೋನಾ ಬಳಿಕ ಶಾಲೆಗೆ ಬರುತ್ತಿಲ್ಲ 5 ಸಾವಿರ ಮಕ್ಕಳು!

    ಕೊರೋನಾ ಬಳಿಕ ಶಾಲೆಗೆ ಬರುತ್ತಿಲ್ಲ 5 ಸಾವಿರ ಮಕ್ಕಳು!

    ಬೆಂಗಳೂರು: ಎರಡು ವರ್ಷಗಳ ಕೊರೊನಾ ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಹೊಡೆತ ಕೊಟ್ಟಿತ್ತು. ಈಗ ಕೊರೊನಾ ಎಫೆಕ್ಟ್ ಕಡಿಮೆ ಆಗುತ್ತಲೇ ಅದರ ಪರಿಣಾಮಗಳು ಶಿಕ್ಷಣ ಕ್ಷೇತ್ರದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತಿವೆ.

    corona

    ಕೊರೊನಾದಿಂದಾಗಿ ರಾಜ್ಯದಲ್ಲಿ ಸಾವಿರಾರು ಮಕ್ಕಳು ಶಾಲೆಯಿಂದ ದೂರ ಉಳಿದಿರುವ ಆಘಾತಕಾರಿ ಅಂಶ ಈಗ ಬಯಲಾಗಿದೆ. ಶಿಕ್ಷಣ ಇಲಾಖೆಯ ಅಂಕಿ ಅಂಶಗಳಲ್ಲಿ ಕೆಲವೊಂದು ಆಘಾತಕಾರಿ ಅಂಶ ಹೊರಬಿದ್ದಿದೆ. ಹೈಕೋರ್ಟ್ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ಆಪರೇಷನ್ ಡ್ರಾಪ್ ಔಟ್ ಚಿಲ್ಡ್ರನ್ಸ್ ಅಭಿಯಾನ ಪ್ರಾರಂಭ ಮಾಡಿದೆ. ಮಕ್ಕಳನ್ನ ಶಾಲೆಗೆ ವಾಪಸ್ ಕರೆತರಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವಿಶೇಷ ಟಾಸ್ಕ್ ನೀಡಲಾಗಿದೆ.

    ಶಾಲೆ ಬಿಟ್ಟ ಮಕ್ಕಳ ರಿಪೋರ್ಟ್: ಈ ವರ್ಷ 24,308 ವಿದ್ಯಾರ್ಥಿಗಳು ಶಾಲೆಯಿಂದ ಡ್ರಾಪ್ ಔಟ್ ಆಗಿದ್ದಾರೆ. ಈವರೆಗೂ 18,584 ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಪತ್ತೆಹಚ್ಚಿದೆ. ಇನ್ನು 5,724 ವಿದ್ಯಾರ್ಥಿಗಳ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಇಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಕೊರೊನಾ ಏರಿಕೆ – 2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

    14,871 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಮರು ಸೇರ್ಪಡೆ ಆಗಿದ್ದಾರೆ. ಉಳಿದ 3,713 ವಿದ್ಯಾರ್ಥಿಗಳು ಶಾಲೆಯಿಂದ ದೂರವಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 9437 ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದಾರೆ. ಇದೀಗ ಮಕ್ಕಳ ಡ್ರಾಪ್ ಔಟ್ ವಿಚಾರ ಶಿಕ್ಷಣ ಇಲಾಖೆಗೆ ದೊಡ್ಡ ತಲೆ ನೋವು ತಂದಿದ್ದು, ಮಕ್ಕಳ ಪತ್ತೆ ಡಿಡಿಪಿಐಗಳು, ಬಿಇಓಗಳು & ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಮತ್ತೆ ಕೊರೊನಾ ಏರಿಕೆ – 2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

    ರಾಜ್ಯದಲ್ಲಿ ಮತ್ತೆ ಕೊರೊನಾ ಏರಿಕೆ – 2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಂದು ಮತ್ತೆ ದಿಢೀರ್‌ ಏರಿಕೆ ಕಂಡಿದೆ. ನಿನ್ನೆ 886 ಇದ್ದ ಸೋಂಕು ಪ್ರಕರಣಗಳ ಸಂಖ್ಯೆ ಇಂದು 2,329ಕ್ಕೇರಿದೆ.

    ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9,307ಕ್ಕೆ ಏರಿದೆ. ಇಂದು ಬೆಂಗಳೂರು ಗ್ರಾಮಾಂತರ, ಧಾರವಾಡ, ಹಾವೇರಿ ಮತ್ತು ಕೊಪ್ಪಳದಲ್ಲಿ ತಲಾ ಒಂದೊಂದು ಮರಣ ಪ್ರಕರಣ ದಾಖಲಾಗಿದೆ. ಈವರೆಗೆ ಒಟ್ಟು 40,159 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,782 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಪಾಸಿಟಿವಿಟಿ ರೇಟ್ ಶೇ. 7.78ಕ್ಕೆ ತಲುಪಿದೆ. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ಸಿಗರೇಟ್‍ನಿಂದ ಸುಟ್ಟ ವ್ಯಕ್ತಿಯ ಬಂಧನ

    ಈವರೆಗೆ ರಾಜ್ಯದಲ್ಲಿ ಒಟ್ಟು 40,36,825 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,87,317 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 45,881 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 29,904 ಸ್ಯಾಂಪಲ್ (ಆರ್‌ಟಿಪಿಸಿಆರ್ 20,830 + 9,074 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 15, ಬಳ್ಳಾರಿ 44, ಬೆಳಗಾವಿ 22, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 1,606, ಬೀದರ್ 0, ಚಾಮರಾಜನಗರ 30, ಚಿಕ್ಕಬಳ್ಳಾಪುರ 9, ಚಿಕ್ಕಮಗಳೂರು 23, ಚಿತ್ರದುರ್ಗ 9, ದಕ್ಷಿಣ ಕನ್ನಡ 19, ದಾವಣಗೆರೆ 33, ಧಾರವಾಡ 48, ಗದಗ 1, ಹಾಸನ 47, ಹಾವೇರಿ 8, ಕಲಬುರಗಿ 16, ಕೊಡಗು 6, ಕೋಲಾರ 22, ಕೊಪ್ಪಳ 8, ಮಂಡ್ಯ 29, ಮೈಸೂರು 168, ರಾಯಚೂರು 52, ರಾಮನಗರ 48, ಶಿವಮೊಗ್ಗ 20, ತುಮಕೂರು 11, ಉಡುಪಿ 11, ಉತ್ತರ ಕನ್ನಡ 9, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 1 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಫ್ಯಾಮಿಲಿ ಆತ್ಮಹತ್ಯೆಗೆ ಶರಣು

    Live Tv
    [brid partner=56869869 player=32851 video=960834 autoplay=true]

  • ಇಂದು 886 ಕೇಸ್ – 1,999 ಮಂದಿ ಆಸ್ಪತ್ರೆಯಿಂದ ಬಿಡುಗಡೆ

    ಇಂದು 886 ಕೇಸ್ – 1,999 ಮಂದಿ ಆಸ್ಪತ್ರೆಯಿಂದ ಬಿಡುಗಡೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಂದು ಇಳಿಕೆ ಕಂಡಿದೆ. ಕೆಲದಿನಗಳಿಂದ ಸಾವಿರಕ್ಕೂ ಅಧಿಕ ದಾಖಲಾಗುತ್ತಿದ್ದ ಪ್ರಕರಣಗಳ ಸಂಖ್ಯೆ ಇಂದು 886ಕ್ಕೆ ಇಳಿಕೆ ಕಂಡಿದೆ.

    ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 8,764ಕ್ಕೆ ಇಳಿಕೆ ಕಂಡಿದೆ. ಬೆಂಗಳೂರು ನಗರದಲ್ಲೂ ಕೇಸ್‍ಗಳ ಸಂಖ್ಯೆ ಇಳಿಕೆ ಕಂಡಿದ್ದು, ಇಂದು 608 ಪ್ರಕರಣ ದಾಖಲಾಗಿದೆ. ಜಿಲ್ಲೆಗಳ ಪೈಕಿ ಬಳ್ಳಾರಿಯಲ್ಲಿ ದಾಖಲಾದ 36 ಕೇಸ್ ಹೆಚ್ಚಿನ ಕೇಸ್ ಆಗಿದೆ. ಇಂದು ಬೆಂಗಳೂರು, ದಕ್ಷಿಣಕನ್ನಡ ಮತ್ತು ಹಾವೇರಿಯಲ್ಲಿ ತಲಾ ಒಂದೊಂದು ಮರಣ ಪ್ರಕರಣ ದಾಖಲಾಗಿದೆ. ಈವರೆಗೆ ಒಟ್ಟು 40,155 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 1,999 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಪಾಸಿಟಿವಿಟಿ ರೇಟ್ ಶೇ. 4.06ಕ್ಕೆ ಇಳಿಕೆ ಕಂಡಿದೆ. ಇದನ್ನೂ ಓದಿ: ದೇಶದಲ್ಲಿ ಕೊರೊನಾ ಏರಿಕೆ – ವಿಮಾನ ಪ್ರಯಾಣದ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿ: ಡಿಜಿಸಿಎ

    ಈವರೆಗೆ ರಾಜ್ಯದಲ್ಲಿ ಒಟ್ಟು 40,34,496 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,85,535 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 2,12,268 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 21,792 ಸ್ಯಾಂಪಲ್ (ಆರ್‌ಟಿಪಿಸಿಆರ್ 13,106 + 8,686 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಹುತಾತ್ಮ ಯೋಧರ ಶವ ಪೆಟ್ಟಿಗೆಗೆ ಹೆಗಲು ಕೊಟ್ಟ ಲೆಫ್ಟಿನೆಂಟ್ ಗವರ್ನರ್

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 7, ಬಳ್ಳಾರಿ 36, ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 10, ಬೆಂಗಳೂರು ನಗರ 608, ಬೀದರ್ 3, ಚಾಮರಾಜನಗರ 1, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 12, ಚಿತ್ರದುರ್ಗ 4, ದಕ್ಷಿಣ ಕನ್ನಡ 9, ದಾವಣಗೆರೆ 7, ಧಾರವಾಡ 23, ಗದಗ 0, ಹಾಸನ 8, ಹಾವೇರಿ 1, ಕಲಬುರಗಿ 10, ಕೊಡಗು 18, ಕೋಲಾರ 12, ಕೊಪ್ಪಳ 1, ಮಂಡ್ಯ 8, ಮೈಸೂರು 17, ರಾಯಚೂರು 9, ರಾಮನಗರ 6, ಶಿವಮೊಗ್ಗ 13, ತುಮಕೂರು 24, ಉಡುಪಿ 6, ಉತ್ತರ ಕನ್ನಡ 13, ವಿಜಯಪುರ 8 ಮತ್ತು ಯಾದಗಿರಿಯಲ್ಲಿ 2 ಪಾಸಿಟಿವ್ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]