Tag: Corona Virus

  • ನಾವೇ ಚೀನಾದ ವುಹಾನ್‌ಗೆ ಹೋಗಿ ವೈರಸ್ ಬಿಟ್ಟಿದ್ವಾ – ಕಾಂಗ್ರೆಸ್‌ಗೆ ಸುಧಾಕರ್ ಪ್ರಶ್ನೆ

    ನಾವೇ ಚೀನಾದ ವುಹಾನ್‌ಗೆ ಹೋಗಿ ವೈರಸ್ ಬಿಟ್ಟಿದ್ವಾ – ಕಾಂಗ್ರೆಸ್‌ಗೆ ಸುಧಾಕರ್ ಪ್ರಶ್ನೆ

    ಚಿಕ್ಕಬಳ್ಳಾಪುರ: ಇಡೀ ವಿಶ್ವದಲ್ಲೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ರೆ ಕಾಂಗ್ರೆಸ್‌ನವರು ನಾವೇ ಚೀನಾದ (China) ವುಹಾನ್‌ಗೆ ಹೋಗಿ ಕೊರೊನಾ ವೈರಸ್ (Corona Virus) ಬಿಟ್ಟಂತೆ ಮಾತನಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ (K Sudhakar) ಕಿಡಿಕಾರಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ವಿಶ್ವದಲ್ಲೇ ಕೋವಿಡ್‌ನಿಂದ ಏನಾಗ್ತಿದೆ ಅಂತ ಜನಸಾಮಾನ್ಯರಿಗೆ ಗೊತ್ತಾಗುತ್ತಿದೆ. ಆದ್ರೆ ಕಾಂಗ್ರೆಸ್ (Congress) ನಾಯಕರಿಗೆ ಏಕೆ ಗೊತ್ತಾಗುತ್ತಿಲ್ಲ? ಯಾವುದೇ ಸರ್ಕಾರ ಇರಲಿ, ಜನರ ರಕ್ಷಣೆಗೆ ಅದ್ಯತೆ ನೀಡಬೇಕು. ಸಹಕಾರ ಕೊಡದಿದ್ರೂ ಪರವಾಗಿಲ್ಲ ಸುಮ್ಮನಾದರೂ ಇರಿ. ಆದರೆ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇನ್ನೂ ಭಾರತ್ ಬಯೋಟೆಕ್‌ನ ನಸೆಲ್ ಸ್ಪೈ (Incovacc) ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ನೆಜಲ್ ಸ್ಪೈ ವ್ಯಾಕ್ಸಿನೇಷನ್ ನಿಂದಾಗಿ ಮೂಗಿನ ಮೂಲಕ ಡ್ರಾಪ್ಸ್ ಹಾಕಿಕೊಳ್ಳಲು ಅವಕಾಶ ಆಗಲಿದೆ. ಇದು ಲಸಿಕೆ (Vaccine) ನೀಡುವ ವೇಗವನ್ನು ಹೆಚ್ಚಿಸುತ್ತದೆ. ಇದು ಕೂಡ ಬಹಳ ಪ್ರಭಾವಿತವಾಗಿ ಕೆಲಸ ಮಾಡಲಿದೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಸ್, ಸಿನಿಮಾ ಥಿಯೇಟರ್, ಪಬ್ ಬಾರ್‌ಗಳಲ್ಲೂ ಮಾಸ್ಕ್ ಅಗತ್ಯ – ರಾಜ್ಯ ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ಏನೇನಿದೆ?

    ರಾಜ್ಯದಲ್ಲಿ ಕೋವಿಡ್ ಲಸಿಕೆಗಳಿಗೆ ಯಾವುದೇ ಕೊರತೆಯಿಲ್ಲ. ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಸ್ಟಾಕ್ ಇದೆ. ಇನ್ನೂ ನಸೆಲ್ ಸ್ಪೈ ಕೋವ್ಯಾಕ್ಸಿನ್, ಕೋವಿಶೀಲ್ಡ್, ಕಾರ್ಬೆವ್ಯಾಕ್ಸ್‌ಗೆ ಕೇಂದ್ರಕ್ಕೆ ಮನವಿ ಮಾಡಲಿದ್ದೇನೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಪರೀಕ್ಷೆ ಹೆಚ್ಚಿಸಿ.. ಎಲ್ಲರೂ ಮಾಸ್ಕ್ ಧರಿಸಿ – ಮೋದಿ ಸಲಹೆ

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಲ್ಲಿ ಕೊರೊನಾ ‘ಸಂಜೀವಿನಿ’ ಕೊರತೆ – ಬೂಸ್ಟರ್‌ ಡೋಸ್‌ ಬಳಕೆಗೆ ಜಾಗೃತಿ

    ಬೆಂಗಳೂರಲ್ಲಿ ಕೊರೊನಾ ‘ಸಂಜೀವಿನಿ’ ಕೊರತೆ – ಬೂಸ್ಟರ್‌ ಡೋಸ್‌ ಬಳಕೆಗೆ ಜಾಗೃತಿ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೆ ಕೊರೊನಾ (Corona) ವ್ಯಾಕ್ಸಿನೇಷನ್‍ಗೆ (Vaccination) ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆದ್ರೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಕೊರತೆ ಕಾಡುತ್ತಿದೆ.

    ಬೆಂಗಳೂರು ಸಹಿತ ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಎರಡನೇ ಅಲೆಯಲ್ಲಿ ಲಾಕ್‍ಡೌನ್ ಸೇರಿದಂತೆ ಸಾವು-ನೋವಿನಿಂದ ಜನರನ್ನು ಕಂಗೆಡಿಸಿದ್ದು ಇನ್ನೂ ಕಣ್ಣಿಂದ ಮರೆಯಾಗಿಲ್ಲ. ಈಗ ಪರಿಸ್ಥಿತಿ ತಿಳಿಯಾಗಿದ್ದು, ಮೂರನೇ ಅಲೆಯಲ್ಲಿ ಕೊರೊನಾ ಅಟ್ಟಹಾಸ ಪಸರಿಸದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿತ್ತು. ಈಗ ಮತ್ತೊಮ್ಮೆ ಕೊರೊನಾ ಭಯ ಕಾಡುತ್ತಿದ್ದು, ಮಹಾಮಾರಿ ವಿರುದ್ಧ ಹೋರಾಟ ಮಾಡುವ ಲಸಿಕೆ ಕೊರೊನಾಗೆ ರಾಮಬಾಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಾಗಾಗಿ ಈಗ ಲಸಿಕೆಗೆ ಮತ್ತೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದನ್ನೂ ಓದಿ: ಚೀನಾದಲ್ಲಿ ಪ್ರತಿ ದಿನ 10 ಲಕ್ಷ ಕೇಸ್, 5000 ಸೋಂಕಿತರ ಸಾವು

    ವಿಪರ್ಯಾಸವೆಂದರೆ ಕೊರೊನಾ ಲಸಿಕೆ ಲಭ್ಯತೆ ಕೊರತೆ ಎದ್ದು ಕಾಣುತ್ತಿದೆ. ಕೊರೊನಾ ಕೋವ್ಯಾಕ್ಸಿನ್ ಎಲ್ಲೆಡೆ ಪೂರ್ಣ ಪ್ರಮಾಣದಲ್ಲಿ ಲಭ್ಯವಿದೆ. ಆದ್ರೆ, ಕೋವಿಶೀಲ್ಡ್ (Covishield) ವ್ಯಾಕ್ಸಿನೇಷನ್ ಕೊರತೆ ಎದುರಾಗಿದ್ದು, ಕಳೆದ ಒಂದು ವಾರದಿಂದ ನಗರದ 198 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಲಸಿಕೆ ಲಭ್ಯವಿಲ್ಲ. ಮೂಲಗಳ ಪ್ರಕಾರ ಜನರು ಲಸಿಕೆ ಪಡೆಯುವುದು ಕಡಿಮೆ ಆಗಿತ್ತು. ಯಾಕೆಂದ್ರೆ ಕೊರೊನಾ ತೀವ್ರತೆ ಕಡಿಮೆ ಆಗಿ ಜನ ಲಸಿಕೆ ಪಡೆಯಲು ಹಿಂದೇಟು ಹಾಕಿದ್ರು. ಇದರ ಪರಿಣಾಮ ಎಲ್ಲ ಕೇಂದ್ರದಿಂದಲೂ ಆರೋಗ್ಯ ಇಲಾಖೆಗೆ ಲಸಿಕೆ ವಾಪಸ್ ನೀಡುವಂತೆ ಪತ್ರ ವ್ಯವಹಾರ ಮಾಡಿದ್ದಾರೆ. ಜೊತೆಗೆ ಕೊರೊನಾ ಆರೋಗ್ಯ ಕಾರ್ಯಕರ್ತರನ್ನೂ ಸಹ ಇಲಾಖೆಗಳಿಗೆ ವಾಪಸ್ ಕಳುಹಿಸಲಾಗಿದೆ. ಇದನ್ನೂ ಓದಿ: ಬಸ್, ಸಿನಿಮಾ ಥಿಯೇಟರ್, ಪಬ್ ಬಾರ್‌ಗಳಲ್ಲೂ ಮಾಸ್ಕ್ ಅಗತ್ಯ – ರಾಜ್ಯ ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ಏನೇನಿದೆ?

    ಇದೀಗ ಕೊರೊನಾ ಟೆಸ್ಟಿಂಗ್, ವ್ಯಾಕ್ಸಿನೇಷನ್ ಹಾಗೂ ಜಾಗೃತಿಗಾಗಿ ನಮ್ಮ ಕ್ಲಿನಿಕ್‍ಗಾಗಿ ನೇಮಕ ಮಾಡುವ ಸಿಬ್ಬಂದಿ ಬಳಸಲು ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ಬೂಸ್ಟರ್‌ ಡೋಸ್‌ (Booster Dose) ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್ ಪರೀಕ್ಷೆ ಹೆಚ್ಚಿಸಿ.. ಎಲ್ಲರೂ ಮಾಸ್ಕ್ ಧರಿಸಿ – ಮೋದಿ ಸಲಹೆ

    ಕೋವಿಡ್ ಪರೀಕ್ಷೆ ಹೆಚ್ಚಿಸಿ.. ಎಲ್ಲರೂ ಮಾಸ್ಕ್ ಧರಿಸಿ – ಮೋದಿ ಸಲಹೆ

    ನವದೆಹಲಿ: ಚೀನಾ (China), ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಅಬ್ಬರ ಹೆಚ್ಚಾಗಿದೆ. ಭಾರತಕ್ಕೂ ಈಗಾಗಲೇ ಒಮಿಕ್ರಾನ್ (Omicron) ಉಪತಳಿ ಬಿಎಫ್.7 (BF.7 Variant) ಲಗ್ಗೆಯಿಟ್ಟಿದೆ. ಈ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆಸಲಾಯಿತು.

    ಸಭೆ ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಮಾಸ್ಕ್ (Mask) ಧರಿಸುವುದು ಕಡ್ಡಾಯವಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಜೊತೆಗೆ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯನ್ನು ಹೆಚ್ಚಳ ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ. ಬಳಿಕ ಮಾಸ್ಕ್ ಧರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಕೋವಿಡ್ (Covid) ಉಪತಳಿಯ ಬಗ್ಗೆ ಕಣ್ಗಾವಲು ಇರಿಸುವ ಬಗ್ಗೆ ಪ್ರತಿಪಾದಿಸಲಾಯಿತು.

    ವರ್ಚುವಲ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಜನತೆ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಈಗಾಗಲೇ ಭಾರತದಲ್ಲಿ ಪತ್ತೆಯಾಗಿದ್ದ ಎಲ್ಲಾ 4 ಬಿಎಫ್.7 ಸೋಂಕು ಪ್ರಕರಣಗಳಲ್ಲೂ ರೋಗಿಗಳು ಚೇತರಿಕೆ ಕಂಡು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಹೀಗಾಗಿ ಈ ಉಪ ರೂಪಾಂತರಿ ಕುರಿತಾಗಿ ಜನತೆ ಆತಂಕ ಪಡುವ ಅಗತ್ಯತೆ ಸದ್ಯಕ್ಕೆ ಇಲ್ಲ ಎಂದು ಅಭಯ ನೀಡಿದರು.

    ಆದಾಗ್ಯೂ ದೇಶದ ಎಲ್ಲಾ ರಾಜ್ಯ ಸರ್ಕಾರಗಳೂ (State Government) ಕೋವಿಡ್‌ನ ಮತ್ತೊಂದು ಸಂಭಾವ್ಯ ಅಲೆ ಎದುರಿಸಲು ಆಸ್ಪತ್ರೆಗಳು ಸುಸಜ್ಜಿತವಾಗಿರಬೇಕು. ಮೂಲಸೌಕರ್ಯ ಸಂಬಂಧಿ ಸಮಸ್ಯೆಗಳಿದ್ದರೇ ಈಗಲೇ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಸೂಚನೆ ನೀಡಿದರು. ಇದನ್ನೂ ಓದಿ: ಹೊಸ ವರ್ಷ.. ಹಳೇ ವೈರಸ್‌; ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ – ಭಾರತದ ಕಥೆ ಏನು?

    ಇನ್ನೂ ದೇಶಾದ್ಯಂತ ವಯಸ್ಕರಿಗೆ ಆದಷ್ಟು ಶೀಘ್ರವಾಗಿ ಮುನ್ನೆಚ್ಚರಿಕೆ ಡೋಸ್ ನೀಡುವ ಸಂಬಂಧ ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬಳಿಕ ದೇಶಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಔಷಧಗಳ ಸಂಗ್ರಹ, ಲಸಿಕೆ ಇದೆ ಎಂಬ ಮಾಹಿತಿಯನ್ನು ಪ್ರಧಾನಿ ಮೋದಿ ಅವರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿದರು. ಇದನ್ನೂ ಓದಿ: ಎಸಿ ಇರುವ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಸಲಹೆ : ಸುಧಾಕರ್‌

    ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ (Nareddra Modi), ಅಗತ್ಯ ಜೀವರಕ್ಷಕ ಔಷಧಗಳ ಲಭ್ಯತೆ ಮೇಲೆ ಕಣ್ಣಿಡಬೇಕು. ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್ ಹಾಗೂ ಅಗತ್ಯ ಪ್ರಮಾಣದ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸೂಕ್ತ ಭದ್ರತೆ ವಹಿಸಬೇಕು ಹಾಗೂ ವೃದ್ಧರ ಮೇಲೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.

    ಭಾರತದಲ್ಲಿ ನಾಲ್ಕು ಕೇಸ್: ಈಗಾಗಲೇ ಭಾರತದಲ್ಲಿ ಓಮಿಕ್ರಾನ್ ಬಿಎಫ್.7 ಉಪ ರೂಪಾಂತರಿ ಕೊರೊನಾ ವೈರಸ್‌ನ 4 ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್ ಹಾಗೂ ಒಡಿಶಾಗಳಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಪಂಚರತ್ನ ಯಾತ್ರೆಗೆ ಹೆದರಿ ಕೊರೊನಾ ಭೂತ ಬಿಡ್ತಿದ್ದಾರೆ – ಹೆಚ್‌ಡಿಕೆ

    ಪಂಚರತ್ನ ಯಾತ್ರೆಗೆ ಹೆದರಿ ಕೊರೊನಾ ಭೂತ ಬಿಡ್ತಿದ್ದಾರೆ – ಹೆಚ್‌ಡಿಕೆ

    ಮಂಡ್ಯ: ಪಂಚರತ್ನ ರಥಯಾತ್ರೆಯಲ್ಲಿ (Pancharatna Yatra) ಜನತೆಯ ಅಲೆಯನ್ನ ನೋಡಿ, ಕೊರೊನಾ ಭೂತ ಬಿಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸಂಶಯ ವ್ಯಕ್ತಪಡಿಸಿದ್ದಾರೆ.

    ಮಂಡ್ಯದ (Mandya) ಗೆಜ್ಜಲಗೆರೆಯಲ್ಲಿಂದು ಕೊರೊನಾ ರೂಪಾಂತರಿ ತಳಿ ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿದ ಅವರು, ಕೊರೊನಾದಿಂದ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದು ಸೂಕ್ತ. ಕೊರೊನಾ (Corona Virus) ವಿಚಾರವಾಗಿ ನಾನು ಲಘುವಾಗಿ ಮಾತನಾಡುವುದಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಬಂದಾಗ ಸರ್ಕಾರ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು. ಹಾಗೇ ಈಗ ಚೀನಾದಲ್ಲಿ (China) ಕೊರೊನಾ ಹರಡುತ್ತಿರುವ ವಿಚಾರವನ್ನ ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿರುವುದನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ನನ್ನ ಸಹಕಾರ ಇದೆ ಎಂದಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿ

    ಆದರೆ ನನಗೊಂದು ಮಾಹಿತಿ ಇದೆ. ಈ ಭೂತ ಬಿಡುತ್ತಿರುವುದು ಪಂಚರತ್ನ ರಥಯಾತ್ರೆಯಲ್ಲಿ (Pancharatna Yatra) ಜನತೆಯ ಅಲೆಯನ್ನ ನೋಡಿ. ಈ ಬಗ್ಗೆ ಕೇಶವ ಕೃಪದಲ್ಲಿ ಚರ್ಚೆಯಾಗ್ತಿದೆ. ಪ್ರಧಾನಮಂತ್ರಿಗಳ (Prime Minister) ಗಮನಕ್ಕೆ ತಂದು, ಪಂಚರತ್ನ ಯಾತ್ರೆಗೆ ನಿರ್ಬಂಧ ಹೇರಲು ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಇರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

    ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ (Belagavi Session) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮೂರು ದಿನಗಳಿಂದ ಅಧಿವೇಶನದಲ್ಲಿ ಏನಾಗ್ತಿದೆ ಎಂಬುದು ಗೊತ್ತು. ನಾಡಿನ ಸಮಸ್ಯೆ ಬಗ್ಗೆ ಸಕಾರಾತ್ಮಕವಾಗಿ ಚರ್ಚೆಯಾಗಿಲ್ಲ. ನನಗೆ ಅಧಿವೇಶನಕ್ಕಿಂತ ಪಂಚರತ್ನ ಯಾತ್ರೆಯೇ ಮುಖ್ಯ. ನಾಡಿನಲ್ಲಿ ಪಂಚರತ್ನ ಯೋಜನೆ ಜಾರಿಗೆ ತರಲು ಯಾತ್ರೆ ಮಾಡ್ತಿದ್ದೇನೆ. ರಾಜ್ಯ, ದೇಶದಲ್ಲಿ ಆಗುತ್ತಿರುವ ಅನಾಹುತಗಳಿಗೆ ನ್ಯಾಯ ಒದಗಿಸಲು ಈ ಪಂಚರತ್ನ ಯೋಜನೆ ಜಾರಿಗೆ ತರಲು ಹೊರಟಿದ್ದೇನೆ. ವಿಧಾನಸಭೆಯಲ್ಲಿ ಕೂತು ಅರ್ಧಗಂಟೆ ಮಾತಾಡಿದ್ರೆ ಸರ್ಕಾರ ಸಮಸ್ಯೆ ಬಗೆಹರಿಸುತ್ತಾ? ಇಷ್ಟು ವರ್ಷ ಮಾತನಾಡಿರುವುದನ್ನ ಸರ್ಕಾರ ಎಷ್ಟು ಜಾರಿಗೆ ತಂದಿದೆ. ಮಾಧ್ಯಮಗಳ ಮುಂದೆ ಸರ್ಕಾರ ಮಾತನಾಡುವುದು ಬೇರೆ, ಇರುವುದೇ ಬೇರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇನ್ನೂ ಮೀಸಲಾತಿ (Reservation) ವಿಚಾರದಲ್ಲಿ ಸರ್ಕಾರದಿಂದ ಮೂಗಿಗೆ ತುಪ್ಪ ಸವರುವ ಕೆಲಸವಾಗ್ತಿದೆ. ವೈಜ್ಞಾನಿಕವಾಗಿ, ಕಾನೂನಾತ್ಮಕವಾಗಿ ಆಯಾಯ ಸಮಾಜಗಳ ಬೇಡಿಕೆಗಳಿಗೆ ಸ್ಪಂದಿಸುವುದು ಸರ್ಕಾರದ (Government) ಕರ್ತವ್ಯ. ಅದನ್ನು ಬಿಟ್ಟು ಜನರನ್ನ ದಾರಿ ತಪ್ಪಿಸಿ ತಾತ್ಕಲಿಕ ಪರಿಹಾರ ಮಾಡಿದ್ರೆ ಭೂಮಿ ಒಂದಲ್ಲ ಒಂದು ದಿನ ರಣರಂಗವಾಗುತ್ತೆ. ವಾಸ್ತವ ಅಂಶವನ್ನ ಇಟ್ಟುಕೊಂಡು ಆಯಾಯ ಸಮಾಜಗಳಿಗೆ ನ್ಯಾಯವನ್ನ ಒದಗಿಸಬೇಕು. ಪಂಚಮಸಾಲಿ ಸಮಾಜ ಕೃಷಿಯನ್ನ ನಂಬಿಕೊಂಡಿರುವ ಸಮಾಜ. ಆ ಸಮಾಜದಲ್ಲಿಯೂ ಬಡವರು ಇದ್ದಾರೆ. ರೈತರ ಸಮಸ್ಯೆ ಏನಿದೆ ಅಂತ ಎಲ್ಲರಿಗೂ ಗೊತ್ತು. ಪಂಚಮಸಾಲಿ ಜನಾಂಗದ ಬೇಡಿಕೆಯನ್ನ ಯಾರು ತಪ್ಪು ಎನ್ನಲು ಆಗಲ್ಲ. ಹೋರಾಟ ಯಶಸ್ಸು ಕಾಣಬೇಕಾದ್ರೆ ವಾಸ್ತವ ಅಂಶವನ್ನ ಇಟ್ಟುಕೊಂಡು ಸರ್ಕಾರ ಜಾರಿಗೆ ತರಬೇಕು ಎಂದ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೇಗವಾಗಿ ಹರಡುವ ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ – ರಾಜ್ಯಗಳಲ್ಲಿ ಹೈ ಅಲರ್ಟ್

    ವೇಗವಾಗಿ ಹರಡುವ ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ – ರಾಜ್ಯಗಳಲ್ಲಿ ಹೈ ಅಲರ್ಟ್

    ನವದೆಹಲಿ: ಚೀನಾದ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ (Corona Virus) ಓಮಿಕ್ರಾನ್‌ನ ಉಪತಳಿ ಬಿಎಫ್.7 (BF.7 Variant) ಸೋಂಕಿನ 4 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ.

    ಭಾರತದಲ್ಲಿ ಒಟ್ಟು ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಗುಜರಾತ್ (Gujarat) ಹಾಗೂ ಒಡಿಶಾ (Odisha) ರಾಜ್ಯಗಳಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ. ಬಿಎಫ್.7 ಸೋಂಕಿನ ಮೊದಲ ಪ್ರಕರಣ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ಪತ್ತೆಯಾಯಿತು. ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು (Serum Institute of India) ಈ ಪ್ರಕರಣವನ್ನು ಪತ್ತೆ ಮಾಡಿತು. 2ನೇ ಪ್ರಕರಣವೂ ಗುಜರಾತ್‌ನಲ್ಲಿ ಪತ್ತೆಯಾಗಿದ್ದರೆ, ಉಳಿದೆರಡು ಪ್ರಕರಣಗಳು ಒಡಿಶಾದಲ್ಲಿ ವರದಿಯಾಗಿವೆ.

    ಚೀನಾದಲ್ಲಿ ಸದ್ಯ ಅಧಿಕ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ವೈರಸ್‌ನ ಈ ಬಿಎಫ್.7 ಉಪತಳಿಯೇ ಕಾರಣ ಎಂದು ಮೂಲಗಳು ತಿಳಿಸಿವೆ. ಯುಎಸ್, ಯುಕೆ, ಯುರೋಪಿಯನ್ ದೇಶಗಳಾದ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಹಾಗೂ ಡೆನ್ಮಾರ್ಕ್ ದೇಶಗಳಲ್ಲೂ ಬಿಫ್.7 ಉಪತಳಿ ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?

    ಚೀನಾದಲ್ಲಿ (China) ಓಮಿಕ್ರಾನ್‌ನ ಉಪತಳಿ ಬಿಎಫ್.7 ಸೋಂಕು ವೇಗವಾಗಿ ಹರಡುತ್ತಿದೆ. ಚೀನಾ ಪ್ರಜೆಗಳ ದೇಹದಲ್ಲಿ ಈ ಮೊದಲು ಕಾಣಿಸಿಕೊಂಡ ಕೊರೊನಾ ಸೋಂಕಿನಿಂದಾಗಿ ವೃದ್ಧಿಸಿರುವ ರೋಗನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿ ಇರಬಹುದು. ಇಲ್ಲವೇ, ಅವರಿಗೆ ನೀಡಿರುವ ಲಸಿಕೆಯು ಪರಿಣಾಮಕಾರಿಯಾಗಿರದೇ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕೊರೊನಾ ಆರ್ಭಟಕ್ಕೆ ಮತ್ತೆ ನಲುಗಿದ ಚೀನಾ – ಆಸ್ಪತ್ರೆಗಳೆಲ್ಲಾ ಫುಲ್

    ಭಾರತದಲ್ಲಿ ಈಗಾಗಲೇ ಎಲ್ಲ ರಾಜ್ಯಗಳೂ ಅಲರ್ಟ್ ಆಗಿದ್ದು, ಸಾರ್ವಜನಿಕರು ಜಾಗೃತವಾಗಿರುವಂತೆ ಸೂಚಿಸಿವೆ. ಜನರು ಗುಂಪಿನಲ್ಲಿದ್ದಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಉಪತಳಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಜಿನೋಮ್ ಸಿಕ್ವೆನ್ಸಿಂಗ್ ಲ್ಯಾಬ್‌ಗೆ ಮಾದರಿ ಕಳುಹಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೇಳಿದೆ.

    ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 129 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,408ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಒಂದು ಸಾವಿನ ಪ್ರಕರಣ ದಾಖಲಾಗಿದೆ.

    Live Tv

    [brid partner=56869869 player=32851 video=960834 autoplay=true]

  • ಕೊರೊನಾ ಆರ್ಭಟಕ್ಕೆ ಮತ್ತೆ ನಲುಗಿದ ಚೀನಾ – ಆಸ್ಪತ್ರೆಗಳೆಲ್ಲಾ ಫುಲ್

    ಕೊರೊನಾ ಆರ್ಭಟಕ್ಕೆ ಮತ್ತೆ ನಲುಗಿದ ಚೀನಾ – ಆಸ್ಪತ್ರೆಗಳೆಲ್ಲಾ ಫುಲ್

    ನವದೆಹಲಿ/ಬೀಜಿಂಗ್: ಕೋವಿಡ್ ವೈರಸ್ (Corona Virus) ಸೃಷ್ಟಿಕರ್ತ ಚೀನಾ (China) ದೇಶವೀಗ ಮತ್ತೆ ವೈರಸ್ ಅಟ್ಟಹಾಸಕ್ಕೆ ತತ್ತರಿಸಿದೆ. ನಿತ್ಯವೂ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು ವರದಿ ಆಗ್ತಿದ್ದು, ಆಸ್ಪತ್ರೆಗಳೆಲ್ಲಾ (Hospitals) ಹೌಸ್‌ಫುಲ್ ಆಗಿಬಿಟ್ಟಿವೆ.

    ಲಕ್ಷಾಂತರ ಮಂದಿ ಸೋಂಕಿನಿಂದ ನಲುಗ್ತಿದ್ದಾರೆ. ನಿನ್ನೆ ಬೀಜಿಂಗ್‌ನಲ್ಲಿ ಕೋವಿಡ್‌ಗೆ ಇಬ್ಬರು ಬಲಿ ಆಗಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಒಂದು ವಾರದ ಅಂತರದಲ್ಲಿ ಬೀಜಿಂಗ್‌ನಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 2,700ಕ್ಕಿಂತಲೂ ಹೆಚ್ಚಾಗಿದೆ. ಇದನ್ನೂ ಓದಿ: ಬಿಜೆಪಿಯನ್ನು ನಾಯಿ, ಇಲಿ ಎಂದು ಟೀಕಿಸಿದ ಖರ್ಗೆ ಜೊತೆ ಊಟ ಮಾಡಿದ ಮೋದಿ

    ಸ್ಥಳೀಯ ಮಾಧ್ಯಮಗಳ ಪ್ರಕಾರ, ಬೀಜಿಂಗ್‌ನ ಸ್ಮಶಾನಗಳೆಲ್ಲ ಕೋವಿಡ್ ಶವಗಳಿಂದ ತುಂಬಿಹೋಗಿವೆ. ಪ್ರತಿದಿನ ಏನಿಲ್ಲ ಅಂದ್ರೂ ಒಂದೊಂದು ಸ್ಮಶಾನಕ್ಕೆ ಕನಿಷ್ಠ 200 ಶವ ಬರ್ತಿವೆ. ಇದು ಆರಂಭ ಮಾತ್ರ. ಮುಂದಿನ ಮೂರು ತಿಂಗಳಲ್ಲಿ ಚೀನಾದ ಶೇ.60ರಷ್ಟು ಜನರನ್ನು ಕೋವಿಡ್ ಆವರಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಾಬರ್ ದೊಡ್ಡ ಸೊನ್ನೆ; ಕೊಹ್ಲಿಯೊಂದಿಗೆ ಹೋಲಿಕೆ ಮಾಡೋದು ನಿಲ್ಸಿ – ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

    ಚೀನಾ ಸರ್ಕಾರ ಝೀರೋ ಕೋವಿಡ್ ಪಾಲಿಸಿಯನ್ನು ಕೈಬಿಟ್ಟ ನಂತರ ಚೀನಾಗೆ ಈ ಸ್ಥಿತಿ ಬಂದೊದಗಿದೆ. ಚೀನಾ, ಜಪಾನ್, ಅಮೆರಿಕಾ ಸೇರಿ ಹಲವು ದೇಶಗಳಲ್ಲಿ ಕೋವಿಡ್ ಕೇಕೆ ಹಾಕುತ್ತಿರುವ ಕಾರಣ, ಭಾರತ ಸರ್ಕಾರ (Government Of India) ಅಲರ್ಟ್ ಆಗಿದೆ. ನಿತ್ಯ ವರದಿ ಆಗೋ ಪಾಸಿಟಿವ್ ಪ್ರಕರಣವನ್ನು ಜಿನೋಮ್ (Genome Sequencing) ಟೆಸ್ಟ್‌ ಕಳಿಸಬೇಕೆಂದು ರಾಜ್ಯಗಳಿಗೆ ಆದೇಶ ನೀಡಿದೆ. ಸದ್ಯಕ್ಕೆ ನಮ್ಮ ದೇಶದಲ್ಲಿ ವಾರಕ್ಕೆ 1,200 ಕೇಸ್‌ಗಳು ದಾಖಲಾಗುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆ – ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ

    ಕೊರೊನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆ – ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ

    – ವುಹಾನ್‌ನಲ್ಲಿ ಸಂಶೋಧನೆ ನಡೆಸಿದ್ದ ಆಂಡ್ರ್ಯೂ ಹಫ್
    – ಸಂಶೋಧನೆಗೆ ಅಮೆರಿಕದಿಂದ ಧನ ಸಹಾಯ

    ನ್ಯೂಯಾರ್ಕ್‌: ಕೊರೊನಾ ವೈರಸ್‌(Corona Virus) ಮಾನವ ಸೃಷ್ಟಿ. ಚೀನಾದ ವುಹಾನ್‌ ಲ್ಯಾಬ್‌ನಿಂದಲೇ(China Wuhan Lab) ಸೋರಿಕೆಯಾಗಿದೆ ಎಂದು ಅಲ್ಲಿಯೇ ಸಂಶೋಧನೆ ನಡೆಸಿದ್ದ ವಿಜ್ಞಾನಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

     ವುಹಾನ್‌ ಲ್ಯಾಬ್‌ನಲ್ಲಿ ಚೀನಾ ನಡೆಸುತ್ತಿದ್ದ ವೈರಸ್‌ ಸಂಶೋಧನೆಗೆ ಅಮೆರಿಕ(USA) ಧನ ಸಹಾಯ ನೀಡಿತ್ತು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಡ್ರ್ಯೂ ಹಫ್(Andrew Huff) ಹೇಳಿದ್ದಾರೆ.

    ಕೊರೊನಾ ಸಾಂಕ್ರಾಮಿಕ ಸೃಷ್ಟಿಯಾದ ಬಳಿಕ ಹಲವು ವಿಜ್ಞಾನಿಗಳು, ಮಾಧ್ಯಮಗಳು ಈ ವೈರಸ್‌ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆಯಾಗಿದೆ ಎಂದು ಹೇಳಿದ್ದರೂ ಚೀನಾ ಎಲ್ಲವನ್ನೂ ತಿರಸ್ಕರಿಸಿತ್ತು. ಆದರೆ ಆಂಡ್ರ್ಯೂ ಹಫ್ ಅವರ ದಿ ಟ್ರೂತ್ ಎಬೌಟ್ ವುಹಾನ್‌(The Truth About Wuhan) ಪುಸ್ತಕದಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ನೀಡಿದ್ದು ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ: ಚೀನಾ, ಅಮೆರಿಕ ಸಂಶೋಧನೆಯಿಂದ ವುಹಾನ್ ಮಾರುಕಟ್ಟೆಗೆ ಬಂತು ಕೊರೊನಾ

    ಸಾಂಕ್ರಾಮಿಕ ರೋಗಗಳನ್ನು (Pandemic) ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿರುವ ಆಂಡ್ರ್ಯೂ ಹಫ್ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    “ಚೀನಾ ಲ್ಯಾಬ್‌ ಸರಿಯಾದ ನಿಯಂತ್ರಣ ಕ್ರಮಗಳನ್ನು ಹೊಂದಿರಲಿಲ್ಲ. ಸರಿಯಾದ ಜೈವಿಕ ಸುರಕ್ಷತೆ ಮತ್ತು ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳದ ಕಾರಣ ಅಂತಿಮವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ವೈರಸ್‌ ಸೋರಿಕೆಯಾಯಿತು. ಇದು ದೇಶಿಯವಾಗಿ ರೂಪುಗೊಂಡ ರೋಗದ ತಳಿ ಎನ್ನುವುದು ಚೀನಾಕ್ಕೆ ಮೊದಲ ದಿನದಿಂದಲೇ ತಿಳಿದಿತ್ತು” ಎಂದು ಬರೆದಿದ್ದಾರೆ. ಇದನ್ನೂ ಓದಿ: ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್’

    ಒಂದು ದಶಕಕ್ಕೂ ಹೆಚ್ಚು ಕಾಲ ವುಹಾನ್‌ ಸಂಸ್ಥೆಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಿಂದ(NIH) ಧನಸಹಾಯದೊಂದಿಗೆ ಬಾವಲಿಗಳಲ್ಲಿನ(Bat) ಹಲವಾರು ಕೊರೊನಾ ವೈರಸ್‌ಗಳನ್ನು ಅಧ್ಯಯನ ಮಾಡುತ್ತಿದೆ. ಎನ್‌ಐಹೆಚ್ ವುಹಾನ್ ಲ್ಯಾಬ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಬಯೋಮೆಡಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಯ ಜವಾಬ್ದಾರಿ ಹೊಂದಿರುವ ಈ ಎನ್‌ಐಎಚ್‌ ಅಮೆರಿಕ ಸರ್ಕಾರದ ಪ್ರಾಥಮಿಕ ಸಂಸ್ಥೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ಕೊರೊನಾ ವೈರಸ್ ವೇಗವಾಗಿ ಹರಡಿದ್ದನ್ನು ಗಮನಿಸಿ ಚೀನಾವೇ ಈ ವೈರಸ್ ಸೃಷ್ಟಿ ಮಾಡಿದೆ. ಅಷ್ಟೇ ಅಲ್ಲದೇ ಈ ಸಂಶೋಧನೆಗೆ ಅಮೆರಿಕವೇ ಧನ ಸಹಾಯ ಮಾಡಿತ್ತು ಎಂದು ಈ ಹಿಂದೇಯೇ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಎಲ್ಲ ವರದಿ, ಆರೋಪಗಳನ್ನು ಚೀನಾ ತಿರಸ್ಕರಿಸಿತ್ತು. ಇದನ್ನೂ ಓದಿ: ಕೊರೊನಾ ವೈರಸ್‌ ಸೃಷ್ಟಿಯಾಗಿದ್ದು ಭಾರತದಲ್ಲಿ – ಚೀನಾದ ಮೊಂಡುವಾದ

    ಚೀನಾವೇ ಸೃಷ್ಟಿಸಿದ ವೈರಸ್?
    ವೈರಸ್ ಅಧ್ಯಯನ ಮಾಡಲೆಂದೇ ವುಹಾನ್ ನಗರದಲ್ಲಿ ಚೀನಾ ಸರ್ಕಾರ ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಯಲ್ಲಿ ಸಾರ್ಸ್ ಸೇರಿದಂತೆ ಹಲವು ವೈರಸ್ ಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈಗ ಕೊರೊನಾ ವೈರಸ್ ಸೃಷ್ಟಿಯಾದ ಕೇಂದ್ರ ಸ್ಥಳ ವುಹಾನ್ ಆಗಿದೆ. ವುಹಾನ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪೀಡಿತರಾಗಿದ್ದರು. ಭಾರತದಲ್ಲಿ ಮೊದಲು ಕೇರಳದ ಮೂರು ಮಂದಿ ವಿದ್ಯಾರ್ಥಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಈ ಮೂವರು ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರು ಎನ್ನುವುದು ವಿಶೇಷ.

    ವೈರಾಲಜಿ ಸಂಸ್ಥೆಯಲ್ಲಿ ಏನು ಪ್ರಯೋಗ ಕೈಗೊಳ್ಳಲಾಗುತ್ತದೆ ಎನ್ನುವುದು ಈಗಲೂ ರಹಸ್ಯವಾಗಿದೆ. ಯುದ್ಧದ ಮೂಲಕ ದೇಶಗಳ ಜೊತೆ ಹೋರಾಡುವುದು ಇಂದು ಬಹಳ ಕಷ್ಟ. ಹೀಗಾಗಿ ಚೀನಾ ಜೈವಿಕ ಅಸ್ತ್ರವನ್ನು ತಯಾರು ಮಾಡುತ್ತದೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಸಾರ್ಸ್ ಆರಂಭದಲ್ಲಿ ಕಂಡು ಬಂದಿದ್ದು ಇದೇ ವುಹಾನ್‌ನಲ್ಲಿ. 2002ರಲ್ಲಿ ಕಾಣಿಸಿಕೊಂಡಾಗ ಚೀನಾ ಈ ವಿಚಾರವನ್ನು ಮುಚ್ಚಿಟ್ಟಿತ್ತು. ಆದರೆ ವಿದೇಶಗಳಿಗೆ ಹರಡಿದಾಗ ಕೊನೆಗೆ ಸತ್ಯವನ್ನು ಒಪ್ಪಿಕೊಂಡಿತ್ತು. ಈಗಲೂ ಕೆಲ ವಿಜ್ಞಾನಿಗಳು ಇದು ಯಾವುದೋ ಪ್ರಾಣಿಯಿಂದ, ಪಕ್ಷಿಯಿಂದ ಕೊರೋನಾ ವೈರಸ್ ಸೃಷ್ಟಿಯಾಗಿಲ್ಲ. ಜೈವಿಕ ಅಸ್ತ್ರವನ್ನು ಪರೀಕ್ಷೆ ಮಾಡುತ್ತಿದ್ದಾಗ ಹೇಗೋ ಸೋರಿಕೆಯಾಗಿ ಈಗ ಜಗತ್ತಿಗೆ ಹರಡುತ್ತಿದೆ ಎಂದು ವಾದವನ್ನು ಮುಂದಿಡುತ್ತಿದ್ದಾರೆ. ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ

    ಟ್ವೀಟ್‌ ಡಿಲೀಟ್‌:
    ಈ ಹಿಂದೆ ಚೀನಾ ಡೈಲಿ 2018ರಲ್ಲಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಏಷ್ಯದ ಅತಿ ದೊಡ್ಡ ವೈರಸ್ ಬ್ಯಾಂಕಿನ ಚಿತ್ರವನ್ನು ವೀಕ್ಷಿಸಿ, ಮಧ್ಯ ಚೀನಾ ಹುಬೆ ಪ್ರಾಂತ್ಯದಲ್ಲಿರುವ ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಾಜಿ ಕೇಂದ್ರದಲ್ಲಿ 1,500 ವಿವಿಧ ವೈರಸ್ ಗಳನ್ನು ರಕ್ಷಿಸಲಾಗಿದೆ ಎಂದು ಚೀನಾ ಡೈಲಿ 2018ರ ಮೇ 29 ಬೆಳಗ್ಗೆ 5:45 ಕ್ಕೆ ಟ್ವೀಟ್ ಮಾಡಿತ್ತು. ನಂತರ ಈ ಟ್ವೀಟ್ ಅನ್ನು ಡಿಲೀಟ್ ಮಾಡಿತ್ತು.

    ವುಹಾನ್ ವಿಶೇಷತೆ ಏನು?
    ಮಧ್ಯ ಚೀನಾದ ದೊಡ್ಡ ನಗರ ವುಹಾನ್ ಆಗಿದ್ದು ಇಲ್ಲಿ ಬಂದರು, ವಿಮಾನ ನಿಲ್ದಾಣಗಳಿವೆ. 35 ಶಿಕ್ಷಣ ಸಂಸ್ಥೆಗಳಿದ್ದು ಚೀನಾದ ಶೈಕ್ಷಣಿಕ ಹಬ್ ಎಂದು ವುಹಾನ್ ನಗರವನ್ನು ಕರೆಯಲಾಗುತ್ತದೆ. ಈ ಕಾರಣಕ್ಕೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರವೇ ಇಲ್ಲಿ ಹಲವು ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ಒಟ್ಟು ಇಲ್ಲಿ 350 ಸಂಶೋಧನಾ ಕೇಂದ್ರಗಳಿವೆ.

    Live Tv
    [brid partner=56869869 player=32851 video=960834 autoplay=true]

  • ಚೀನಾದಲ್ಲಿ ಕೋವಿಡ್‌ ಹೆಚ್ಚಳ, ಭುಗಿಲೆದ್ದ ಪ್ರತಿಭಟನೆ – ತೈಲ ದರ ಭಾರೀ ಇಳಿಕೆ

    ಚೀನಾದಲ್ಲಿ ಕೋವಿಡ್‌ ಹೆಚ್ಚಳ, ಭುಗಿಲೆದ್ದ ಪ್ರತಿಭಟನೆ – ತೈಲ ದರ ಭಾರೀ ಇಳಿಕೆ

    ಬೀಜಿಂಗ್‌/ಲಂಡನ್‌: ಚೀನಾದಲ್ಲಿ(China) ಕೋವಿಡ್‌ ಕೇಸ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ(Crude Oil Price) ಭಾರೀ ಇಳಿಕೆಯಾಗಿದೆ.

    ಒಂದು ಬ್ಯಾರೆಲ್‌ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯಟ್‌ ಕಚ್ಚಾ ತೈಲ ದರ 74 ಡಾಲರ್‌ಗೆ (6,040 ರೂ.) ಇಳಿಕೆಯಾಗಿದೆ. ಡಿಸೆಂಬರ್‌ ಬಳಿಕ ರಷ್ಯಾ ಉಕ್ರೇನ್‌ ಯುದ್ಧದಿಂದ 139 ಡಾಲರ್‌ಗೆ ಏರಿಕೆಯಾಗಿದ್ದ ದರ ಮೊದಲ ಬಾರಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

    ಚೀನಾದಲ್ಲಿ ಕೋವಿಡ್‌(Covid 19) ನಿಯಂತ್ರಣ ಮಾಡಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು ಬಿಗಿಯಾದ ಲಾಕ್‌ಡೌನ್‌(Lockdown) ಜಾರಿ ಮಾಡಿದೆ. ಪರಿಣಾಮ ಭಾರೀ ಸಂಖ್ಯೆಯಲ್ಲಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.

    ತೈಲ, ಕಬ್ಬಿಣದ ಅದಿರು ಮತ್ತು ಸೋಯಾಬೀನ್‌ಗಳನ್ನು ಚೀನಾ ಭಾರೀ ಪ್ರಮಾಣದಲ್ಲಿ ಆಮದು ಮಾಡುತ್ತಿದೆ. ಆರ್ಥಿಕತೆಯು ಮುಗ್ಗರಿಸಿದ್ದರಿಂದ ಈ ವರ್ಷ ಈಗಾಗಲೇ ಖರೀದಿಗಳು ನಿಧಾನಗೊಂಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬಿದ್ದಿದೆ. ಇದನ್ನೂ ಓದಿ: ಡೌನ್‌ ಡೌನ್‌ ಕ್ಸಿ ಜಿನ್‌ಪಿಂಗ್‌.. ಲಾಕ್‌ಡೌನ್‌ ತೆಗೆಯಿರಿ – ಚೀನಾದಲ್ಲಿ ಭುಗಿಲೆದ್ದ ಜನಾಕ್ರೋಶ

    ತಾಮ್ರ ಶೇ.1.7, ಕಬ್ಬಿಣದ ಅದಿರು, ಶೇ.2, ತೈಲ ದರ ಶೇ.5.4 ರಷ್ಟು ಕುಸಿದಿದ್ದರೆ ಅಡುಗೆ ತೈಲದ ದರ ಶೇ.3 ರಷ್ಟು ಕುಸಿದಿದೆ. ಚೀನಾದಲ್ಲಿ ಭಾನುವಾರ 39,791 ಕೇಸ್‌ ದಾಖಲಾಗಿದ್ದರೆ ಸೋಮವಾರ 40,052 ಕೊರೊನಾ ಕೇಸ್‌ ದಾಖಲಾಗಿವೆ.

    ಸಾಧಾರಣವಾಗಿ ಚೀನಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುವುದು ಬಹಳ ಅಪರೂಪ. ಆದರೆ ಈಗ ಸರ್ಕಾರದ ಕಠಿಣ ನಿಯಮಕ್ಕೆ ರೋಸಿ ಹೋಗಿ ಜನ ಬೀದಿಗೆ ಇಳಿದಿದ್ದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೂಸ್ಟರ್ ಡೋಸ್ ಪಡೆಯಲು ಜನ ಹಿಂದೇಟು – ಇನ್ಮುಂದೆ ಸಿಗಲ್ಲ ಫ್ರೀ ಲಸಿಕೆ

    ಬೂಸ್ಟರ್ ಡೋಸ್ ಪಡೆಯಲು ಜನ ಹಿಂದೇಟು – ಇನ್ಮುಂದೆ ಸಿಗಲ್ಲ ಫ್ರೀ ಲಸಿಕೆ

    ಬೆಂಗಳೂರು: ಕೊರೊನಾ (Corona) ಮಹಾಮಾರಿಗೆ ರಾಮಬಾಣವಾಗಿದ್ದ ಲಸಿಕೆಯ (Vaccine) ಬಗ್ಗೆ ಅದೇಕೋ ಜನರಿಗೆ ಈಗ ತಾತ್ಸಾರ ಬಂದು ಬಿಟ್ಟಿದೆ. ಮೊದಲೆರಡು ಅಲೆಗಳಲ್ಲಿ ಗಂಟೆಗಟ್ಟಲೇ ಕ್ಯೂ ನಿಂತು ವ್ಯಾಕ್ಸಿನ್ ಪಡೆಯುತ್ತಿದ್ದ ಜನರು ಇದೀಗ ಬೂಸ್ಟರ್ ಡೋಸ್‍ಗೆ (Booster Dose) ನಿರ್ಲಕ್ಷ್ಯ ಮಾಡುತ್ತಿದ್ದಾರೆ.

    ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ (Azadi Ka Amrit Mahotsav) ಅಂಗವಾಗಿ ಸೆಪ್ಟೆಂಬರ್ 30 ರವರೆಗೆ ಎಲ್ಲರಿಗೂ ಉಚಿತವಾಗಿ ಬೂಸ್ಟರ್ ಡೋಸ್ ಸರ್ಕಾರ ನೀಡಿತು. ಆದರೆ, ಜನ ಮಾತ್ರ ನಮಗ್ಯಾಕೆ ಬೂಸ್ಟರ್ ಡೋಸ್ ಅಂತಾ ಕೂತಿದ್ದಾರೆ. ಮಹಾಮಾರಿಗೆ ವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿಯಾಗಲು ಮೂರನೇ ಬೂಸ್ಟರ್ ಡೋಸ್ ಬೇಕು ಅಂತಾ ತಜ್ಞರು ಸಲಹೆ ಕೊಡ್ತಿದ್ರೂ ಈವರೆಗೂ ಕೇವಲ ಶೇ.30ರಷ್ಟು ಮಂದಿ ಮಾತ್ರ ಬೂಸ್ಟರ್ ಪಡೆದಿದ್ದಾರೆ. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಮಯದಲ್ಲಿ ನೀಡಿದ ಉಚಿತ ವ್ಯಾಕ್ಸಿನ್ ಅನ್ನು ಶೇ.10ಕ್ಕಿಂತ ಕಡಿಮೆ ಜನರು ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಗೆದ್ದಿರೋ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್‍ನಂತಹ ಅಮಾಯಕರ ರಕ್ತ ಇದೆ: ಸಿದ್ದರಾಮಯ್ಯ

    18 ರಿಂದ 59 ವರ್ಷವರೆಗಿನವರಿಗೆ ಜುಲೈ 15ರಿಂದ ಬೂಸ್ಟರ್ ಡೋಸ್ ನೀಡಲಾಗುತ್ತಿದ್ದು, ಇದುವರೆಗೆ 70 ಸಾವಿರ ಜನ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ 75 ದಿನಗಳವರೆಗೆ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತ ನೀಡಲಾಗಿತ್ತು. ಸಾಕಷ್ಟು ಕಡೆಗಳಲ್ಲಿ ಆರೋಗ್ಯ ಇಲಾಖೆಯವರೇ ಮನೆಗಳಿಗೆ ತೆರಳಿ ಲಸಿಕೆ ನೀಡಿದ್ದಾರೆ. ಆದರೆ, ಜನರು ಇದರಿಂದ ತಪ್ಪಿಸಿಕೊಳ್ಳುತ್ತಿದ್ದು, ಮುಂದೆ ಬರುತ್ತಿಲ್ಲ. ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ, ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದ್ದಕ್ಕೆ ಜನರಲ್ಲಿ ಕಾಯಿಲೆ ಬಗ್ಗೆ ಹಿಂದಿದ್ದ ಭಯ ಈಗಿಲ್ಲದಂತಾಗಿದೆ. ಇದನ್ನೂ ಓದಿ: ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿ – ತಂದೆ, ತಾಯಿ, ತಮ್ಮ ಆತ್ಮಹತ್ಯೆ

    ಕೇಂದ್ರ ಸರ್ಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ 18 ವರ್ಷ ಮೇಲ್ಪಟ್ಟರಿಗೆ ಉಚಿತವಾಗಿ ಸೆ.30 ರವರೆಗೆ ಬೂಸ್ಟರ್ ಡೋಸ್ ನೀಡಿತ್ತು. ಜಿಲ್ಲೆಗಳಲ್ಲೂ ಬೇಡಿಕೆಗಿಂತಲೂ ಹೆಚ್ಚು ಲಸಿಕೆಗಳ ದಾಸ್ತಾನು ಇದೆ. ಆದರೆ, ಜನರು ಪಡೆಯುವುದಕ್ಕೆ ಮುಂದೆ ಬರುತ್ತಿಲ್ಲ. ಸಾಮಾಜಿಕ ಮತ್ತು ಕುಟುಂಬದ ಸ್ವಾಸ್ಥ್ಯಕ್ಕಾಗಿ ಬೂಸ್ಟರ್ ಡೋಸ್ ಅತ್ಯಗತ್ಯವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಆದರೆ ಈ ವೇಳೆ ಜನ ಬೂಸ್ಟರ್ ಡೋಸ್ ಪಡೆಯಲು ಹಿಂದೇಟು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಬೂಸ್ಟರ್ ಡೋಸ್ ಪಡೆಯಬೇಕಾದ್ರೆ ಸರ್ಕಾರ ನಿಗದಿ ಮಾಡಿರುವ ಹಣವನ್ನು ಕಟ್ಟಲೇಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ಕೊರೊನಾ

    ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ಕೊರೊನಾ

    ಬೆಂಗಳೂರು: ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಅವರಿಗೆ ಕೊರೊನಾ ಸೋಂಕು (Corona Infection) ದೃಢವಾಗಿದೆ.

    ಇಂದು ನಡೆಸಿದ ಕೊರೊನಾ ಮಾದರಿ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿದೆ. ಆದರೆ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕ ಪಡಬೇಕಿಲ್ಲ ಎಂದು ಆರೋಗ್ಯ ಇಲಾಖೆ (Health Department) ತಿಳಿಸಿದೆ. ಆದ್ದರಿಂದ ಅಕ್ಟೋಬರ್‌ 2ರಂದು ಗಾಂಧಿ ಜಯಂತಿಯಂದು ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸುವುದಿಲ್ಲ. ಇದನ್ನೂ ಓದಿ: PFI ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್‍ನ ಕೆಲವರು ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ: ತೇಜಸ್ವಿ ಸೂರ್ಯ

    ರಾಜ್ಯಪಾಲರು ಇತ್ತೀಚೆಗೆ ಬೆಂಗಳೂರಿನ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನಿನ್ನೆಯೂ ರಾಜ್ಯದ ಹೈಕೋರ್ಟ್ (HighCourt) ಹೆಚ್ಚುವರಿ ನ್ಯಾಯಮೂರ್ತಿ ಆಗಿ ಮೊಹಮ್ಮದ್ ಗೌಸ್ ಶಕುರೆ ಕಮಾಲ್, ರಾಜೇಂದ್ರ ಬಾದಾಮಿಕರ್ ಹಾಗೂ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಸಚಿವ ಗೋವಿಂದ ಕಾರಜೋಳ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]