Tag: Corona Virus

  • ಜನರಿಗೆ ಮಾಸ್ಕ್ ಹಾಕಿ ಅನ್ನೋ ಬದಲು ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಲಿ: ಖಾದರ್ ಆಗ್ರಹ

    ಜನರಿಗೆ ಮಾಸ್ಕ್ ಹಾಕಿ ಅನ್ನೋ ಬದಲು ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಲಿ: ಖಾದರ್ ಆಗ್ರಹ

    ಬೆಂಗಳೂರು: ಜನರಿಗೆ ಮಾಸ್ಕ್ (Mask) ಹಾಕಿ ಎನ್ನುವ ಬದಲು ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುವ ಕೆಲಸ ಮಾಡಲಿ. ಆಕ್ಸಿಜನ್ ಪ್ಲಾಂಟ್ ಕ್ವಾಲಿಟಿ ಚೆಕ್ ಮಾಡಿಕೊಳ್ಳಬೇಕು. ಅನುಷ್ಠಾನ ಮಾಡುವಾಗ ದೂರದೃಷ್ಟಿ ಆಲೋಚನೆ ಆಗಬೇಕು. ಗಡಿಬಿಡಿಯಲ್ಲಿ ಸರ್ಕಾರ ಕೆಲಸ ಮಾಡಬಾರದು ಎಂದು ಶಾಸಕ ಯು.ಟಿ.ಖಾದರ್ (U.T Khader) ಸರ್ಕಾರಕ್ಕೆ ಆಗ್ರಹಿಸಿದರು.

    ಸುವರ್ಣಸೌಧ (SuvarnaSoudha) ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವಿಚಾರದಲ್ಲಿ ಜನರ ಮಧ್ಯೆ ಗೊಂದಲ ಸೃಷ್ಟಿ ಮಾಡಬಾರದು. ಜನರಿಗೆ ಆತಂಕ ತರಿಸಬಾರದು. ಮಾಧ್ಯಮಗಳು, ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದೇ ನಿಜ ಎಂದು ತಿಳಿಯಬಾರದು. ಚೈನಾದಲ್ಲಿ ಪರಿಸ್ಥಿತಿ ಏನಾಗಿದೆ ಅಂತ ನೋಡ್ಬೇಕು. ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

    ಭಯದ ವಾತಾವರಣದಲ್ಲಿ ಸಿಲುಕಿಸುವ ಕೆಲಸ ಆಗಬಾರದು. ಯಾವ ದೇಶದಲ್ಲಿ ದೊಡ್ಡ ಅನಾಹುತ ಆಗಿದೆ ಎಂದು ಮಾಹಿತಿ ಬಂದಿಲ್ಲ. ಈ ಸೋಂಕಿನ ತೀವ್ರತೆ, ಸಾವು ಎಷ್ಟು ಆಗುತ್ತೆ ಅನ್ನೋದನ್ನ ಮಾಹಿತಿ ತಿಳಿಸಬೇಕು. ಚಳಿಗಾಲದಲ್ಲಿ ಕೆಲ ಸೋಂಕು ಬಂದು ಹೋಗುತ್ತೆ ಎಂದು ಹೇಳಿದರು.

    ಕೋವಿಡ್ (COVID 19) ಸಂಬಂಧಿಸಿದಂತೆ ಸರ್ಕಾರ ಜನರ ಮಧ್ಯೆ ಗೊಂದಲ ಸೃಷ್ಟಿಸಬಾರದು. ಚೀನಾದಲ್ಲಿ ಆಗಿರುವ ಕೋವಿಡ್ ಬಗ್ಗೆ ನಿಜಾಂಶ ತಿಳಿದುಕೊಳ್ಳಬೇಕು. ಬಿಎಫ್ 7 ಬಗ್ಗೆ ತಳಿಯಿಂದ ಹೇಗೆ ಜಾಗೃತಿ ಆಗಬೇಕು ಎಂದು ಸರ್ಕಾರ ತಿಳಿಸಲಿ. ಯಾವುದೇ ದೇಶದಲ್ಲಿ ದೊಡ್ಡ ಮಟ್ಟದ ಅನಾಹುತದ ಬಗ್ಗೆ ಮಾಹಿತಿ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿರುವ ಮಾಹಿತಿ ಬಗ್ಗೆ ಸರ್ಕಾರ ಸ್ಪಷ್ಟತೆ ಕೊಡಲಿ ಎಂದು ತಿಳಿಸಿದರು.

    ಹಿರಿಯರು ಕಾರ್ಯಕ್ರಮಗಳಿಂದ ದೂರ ಉಳಿಯಿರಿ ಎಂಬ ಸುಧಾಕರ್ (Sudhakar) ಸಲಹೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೇರೆ ಪಕ್ಷದ ಕಾರ್ಯಕ್ರಮ ಅಷ್ಟೇ ಅಲ್ಲ. ನಿಮ್ಮ ಪಕ್ಷದಲ್ಲಿ ಕಾರ್ಯಕ್ರಮ ಮಾಡಿದಾಗಲೂ ಹಿರಿಯರ ಬಗ್ಗೆ ನೋಡಿ. ನಮ್ಮ ಪಕ್ಷ ಅಷ್ಟೇ ಅಲ್ಲ ಬೇರೆ ಪಕ್ಷದ ಹಿರಿಯರ ಬಗ್ಗೆ ಸುಧಾಕರ್ ಆಲೋಚನೆ ಮಾಡಲಿ ಎಂದು ಯು.ಟಿ.ಖಾದರ್ ತಿರುಗೇಟು ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ವೈಕುಂಠ ಏಕಾದಶಿ, ಸಂಕ್ರಾಂತಿಗೂ ಕೊರೊನಾ ಕರಿನೆರಳು – ದೇವಾಲಯಗಳಿಗೆ ಟಫ್ ರೂಲ್ಸ್?

    ವೈಕುಂಠ ಏಕಾದಶಿ, ಸಂಕ್ರಾಂತಿಗೂ ಕೊರೊನಾ ಕರಿನೆರಳು – ದೇವಾಲಯಗಳಿಗೆ ಟಫ್ ರೂಲ್ಸ್?

    ಬೆಂಗಳೂರು: ಚೀನಾದಲ್ಲಿ ಡೆಡ್ಲಿ ಕೊರೊನಾ (Corona Virus) ರೂಪಾಂತರಿಯ ಅಬ್ಬರ ಜೋರಾಗಿದ್ದು ಚೀನಾ ಅಕ್ಷರಶಃ ನಲುಗಿ ಹೋಗಿದೆ. ಈಗಾಗಲೇ ಭಾರತದಲ್ಲೂ (India) ಚೀನಾದ ಬಿಎಫ್.7 ಉಪತಳಿ (BF7 Variant) ಪತ್ತೆಯಾಗಿದ್ದು, ರಾಜ್ಯದಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ (Government Of Karnataka) ಹಲವು ಕ್ರಮಗಳನ್ನ ಜಾರಿಗೊಳಿಸಿದೆ.

    ಮುಂದಿನ 3 ತಿಂಗಳು ಅಲರ್ಟ್ ಆಗಿರಲು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳನ್ನ ಎಚ್ಚರಿಸಿದ್ದು, ನಮ್ಮ ರಾಜ್ಯವೂ ಸಕಲ ಸಿದ್ಧತೆ ಮಾಡಿಕೊಳ್ತಿದೆ. ಈ ಬಾರಿ ಹೊಸ ವರ್ಷಕ್ಕೆ ಮಾತ್ರವಲ್ಲದೇ ವೈಕುಂಠ ಏಕಾದಶಿ ಸಂಕ್ರಾಂತಿ ಸಂಭ್ರಮದ ಮೇಲೂ ಕೊರೊನಾ ಕರಿನೆರಳು ಆವರಿಸಿದೆ. ಪ್ರತಿ ವಾರವೂ ಕೊರೊನಾ ಮಾರ್ಗಸೂಚಿಗಳ (Covid Guidelines) ಅವಲೋಕನ ಮಾಡಿಕೊಳ್ಳಲಾಗುತ್ತಿದ್ದು, ಕೊಂಚ ಕೇಸ್ ಏರಿಕೆಯಾದ್ರೂ ಮುಂದಿನ 90 ದಿನಗಳಿಗೆ ನಿಯಮಗಳು ನಿರ್ಣಾಯಕವಾಗಲಿದೆ. ಹೀಗಾಗಿ ಆರೋಗ್ಯ ಇಲಾಖೆ (Health Department) ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ‘ಆಪರೇಷನ್ ಡಿ’ ಸಿನಿಮಾ

    ಧಾರ್ಮಿಕ ಕಾರ್ಯಕ್ರಮಗಳ ಮೇಲೂ ನಿಗಾ: ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಮಾತ್ರವಲ್ಲದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಜನ ಸೇರುವುದನ್ನು ಕಡಿವಾಣ ಹಾಕಲು ದೇವಸ್ಥಾನಗಳಿಗೂ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ. ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ಕ್ರಮಗಳು ಏನೇನು ಬರಲಿವೆ?: ವೈಕುಂಠ ಏಕಾದಶಿ ದಿನ ಭಕ್ತರು ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ ನೀಡುವುದು, ದೇವಸ್ಥಾನದ ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸರ್ ಅಳವಡಿಸುವುದು, ಜನಜಂಗುಳಿ ತಡೆಯಲು ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಹಾಗೂ ಸಂಕ್ರಾಂತಿ ಹಬ್ಬಕ್ಕೆ (Sankranti Festival) ಜನಜಂಗುಳಿ ತಡೆಯಲು ಈಗಿನಿಂದಲೇ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ಭೀತಿಗೆ ಶಿಕ್ಷಣ ಇಲಾಖೆ ಅಲರ್ಟ್- ಶಾಲಾ-ಕಾಲೇಜುಗಳಲ್ಲಿ ಕೆಲ ನಿಯಮ ಜಾರಿಗೆ ಚಿಂತನೆ

    ಕೊರೊನಾ ಭೀತಿಗೆ ಶಿಕ್ಷಣ ಇಲಾಖೆ ಅಲರ್ಟ್- ಶಾಲಾ-ಕಾಲೇಜುಗಳಲ್ಲಿ ಕೆಲ ನಿಯಮ ಜಾರಿಗೆ ಚಿಂತನೆ

    ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಕೊರೊನಾ (Corona Virus) ನಿಯಂತ್ರಣಕ್ಕೆ ತಜ್ಞರ ಸಲಹೆಯ ಬೆನ್ನಲ್ಲೇ ಶಿಕ್ಷಣ ಇಲಾಖೆ (Education Department) ಯೂ ಅಲರ್ಟ್ ಆಗಿದೆ. ಶಾಲಾ-ಕಾಲೇಜುಗಳ ಕೊರೊನಾ ಕಂಟ್ರೋಲ್ ಗೆ ನಿಯಮ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿಯೊಂದು ಲಭಿಸಿದೆ.

    1, 2 ಮತ್ತು 3 ನೇ ಅಲೆಯ ವೇಳೆ ತೆಗೆದುಕೊಂಡಿದ್ದ ಮುಂಜಾಗ್ರತಾ ಕ್ರಮಗಳನ್ನೇ ಮತ್ತೆ ಜಾರಿ ಮಾಡಲು ಶಿಕ್ಷಣ ಇಲಾಖೆಯಿಂದ ಎಲ್ಲಾ ಶಾಲಾ-ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಕೊರೊನಾ ಮಾರ್ಗಸೂಚಿ ಪಾಲನೆ ಮಾನಿಟರ್ ಮಾಡಲು ಬಿಇಓ, ಡಿಡಿಪಿಐ, ಡಿಡಿಪಿಯುಗಳಿಗೆ ಜವಾಬ್ದಾರಿ ವಹಿಸಲಾಗುತ್ತದೆ. ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಕೊರೊನಾ ನಿಯಮ ಪಾಲನೆ ಆಗಬೇಕು ಅಂತ ಸೂಚನೆ ನೀಡಲಾಗುತ್ತೆ.

    ಶಿಕ್ಷಣ ಇಲಾಖೆ ಮಾರ್ಗಸೂಚಿ ಏನು?: ಶಾಲಾ-ಕಾಲೇಜುಗಳ ಆವರಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಕ್ರಮವಹಿಸಬೇಕು. ಅಲ್ಲದೆ ಕಡ್ಡಾಯವಾಗಿ ಸ್ಯಾನಿಟೈಸರ್ (Sanitizer) ಬಳಕೆ ಕೂಡ ಮಾಡಬೇಕು. ಶಾಲಾ-ಕಾಲೇಜುಗಳ ಆವರಣಕ್ಕೆ ಸಾರ್ವಜನಿಕರು, ಪೋಷಕರಿಗೆ ನಿಷೇಧ ಹಾಕಬೇಕು. ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿರಬೇಕು. ಜೊತೆಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬೇಕು.

    ಅಡುಗೆ ಸಿಬ್ಬಂದಿ, ಸಹಾಯಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿರಬೇಕು. ಜೊತೆಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬೇಕು. ಬಿಸಿಯೂಟ ಮಾಡುವಾಗ ಅಡುಗೆ ಸಿಬ್ಬಂದಿ ಶುಚಿತ್ವ ಕಾಪಾಡಲು ಕ್ರಮವಹಿಸಬೇಕು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿಗೆ ಬರೋವಾಗ, ಹೋಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಇದನ್ನೂ ಓದಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪಾಸಿಟಿವ್ ಬಂದ್ರೆ ಕ್ವಾರಂಟೈನ್‌

    ಪ್ರಾರ್ಥನೆ, ಊಟದ ಸಮಯ, ತರಗತಿ ಒಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳು, ಶಿಕ್ಷಕರ ವರ್ಗಗಳಿಗೆ ಶಾಲಾ-ಕಾಲೇಜುಗಳಿಗೆ ಬರಲು ಅವಕಾಶ ಕೊಡಬಾರದು. ಶಾಲಾ-ಕಾಲೇಜುಗಳ ಸೋಂಕು ಕಂಡು ಬಂದರೆ ತರಗತಿಯ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಬೇಕು.

    ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಸಬೇಕು. ಶಾಲಾ-ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶಾಲೆ ಆವರಣ, ಕೊಠಡಿಗಳಲ್ಲಿ ಶುಚಿತ್ವ ಕಾಪಾಡಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ (Vaccine) ಹಾಕಿಸಲು ಶಾಲಾ ಹಂತದಲ್ಲಿ ಕ್ರಮವಹಿಸಬೇಕು.

    Live Tv
    [brid partner=56869869 player=32851 video=960834 autoplay=true]

  • ಚೀನಾದಲ್ಲಿ ಕೋವಿಡ್‌ ಹಾವಳಿ – ಮೊದಲ ಬಾರಿಗೆ ಕೊರೊನಾ ಬಗ್ಗೆ ಜಿನ್‌ಪಿಂಗ್‌ ಮಾತು

    ಚೀನಾದಲ್ಲಿ ಕೋವಿಡ್‌ ಹಾವಳಿ – ಮೊದಲ ಬಾರಿಗೆ ಕೊರೊನಾ ಬಗ್ಗೆ ಜಿನ್‌ಪಿಂಗ್‌ ಮಾತು

    ಬೀಜಿಂಗ್: ಚೀನಾದಲ್ಲಿ (China) ಕೋವಿಡ್‌ (Corona Virus) ಆರ್ಭಟ ಮುಂದುವರಿದಿದೆ. ಭಾರೀ ವಿರೋಧದ ನಡುವೆ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ (Xi Jinping) ಸಾರ್ವಜನಿಕವಾಗಿ ಮಾತನಾಡಿದ್ದಾರೆ.

    ನಾವು ಆರೋಗ್ಯ ಅಭಿಯಾನವನ್ನು ಹೆಚ್ಚು ಉದ್ದೇಶಿತ ರೀತಿಯಲ್ಲಿ ಪ್ರಾರಂಭಿಸಬೇಕು. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮುದಾಯದ ರಕ್ಷಣಾ ಮಾರ್ಗವನ್ನು ಬಲಪಡಿಸಬೇಕು. ಜನರ ಜೀವವನ್ನು ಉಳಿಸಲು ಬೇಕಾದ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಕ್ಷಿ ಜಿನ್‌ಪಿಂಗ್‌ ಸಲಹೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕೊರೊನಾ ಆರ್ಭಟ – ಉದ್ಯೋಗ ಕಳ್ಕೊಂಡು ಬೀದಿಗೆ ಬಿದ್ದ 2 ಕೋಟಿ ಯುವಜನರು

    ಕೋವಿಡ್‌ ನಿಯಂತ್ರಣಕ್ಕೆ ಚೀನಾ ಹೊಸ ಸವಾಲನ್ನು ಎದುರಿಸುತ್ತಿದೆ. ದೇಶೀಯವಾಗಿ ಆರೋಗ್ಯ ಅಭಿಯಾನ ಆರಂಭಿಸಬೇಕು. ಸುರಕ್ಷತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

    ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ಚೀನಾದಲ್ಲಿ ವರದಿಯಾಗುತ್ತಿವೆ. ದೇಶದಲ್ಲಿ ಜಾರಿಗೊಳಿಸಿರುವ ಕಠಿಣ ನಿಯಮಗಳನ್ನು ತೆರವುಗೊಳಿಸಿದರೆ ಪ್ರಕರಣಗಳ ಸಂಖ್ಯೆ ವ್ಯಾಪಕಗೊಳ್ಳಬಹುದು. ಮುಂದಿನ ಕೆಲವೇ ತಿಂಗಳಲ್ಲಿ ಒಂದು ಮಿಲಿಯನ್‌ ಜನರು ಸಾವಿಗೀಡಾಬಹುದು ಎಂದು ಅಧ್ಯಯನಗಳು ಅಂದಾಜಿಸಿವೆ. ಇದನ್ನೂ ಓದಿ: ಕೊರೊನಾಗೆ ತತ್ತರಿಸಿದ ಚೀನಾ – ದೈನಂದಿನ ಪ್ರಕರಣಗಳ ಸಂಖ್ಯೆ ಪ್ರಕಟಿಸದಿರಲು ನಿರ್ಧಾರ

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷಾಚರಣೆಗೆ ನ್ಯೂ ರೂಲ್ಸ್- ಮಧ್ಯರಾತ್ರಿ 1 ಗಂಟೆವರೆಗಷ್ಟೇ ಸೆಲಬ್ರೇಷನ್!

    ಹೊಸ ವರ್ಷಾಚರಣೆಗೆ ನ್ಯೂ ರೂಲ್ಸ್- ಮಧ್ಯರಾತ್ರಿ 1 ಗಂಟೆವರೆಗಷ್ಟೇ ಸೆಲಬ್ರೇಷನ್!

    ಬೆಂಗಳೂರು: ಚೀನಾ (China) ದಲ್ಲಿ ದಾಂಗುಡಿ ಇಟ್ಟಿರುವ ಬಿಎಫ್.7 ಆತಂಕದ ಮಧ್ಯೆ ರಾಜ್ಯ ಸರ್ಕಾರ ಕೊರೊನಾ (Corona Virus) ಗೆ ಮೂಗುದಾರ ಹಾಕಲು ಮುಂದಾಗಿದೆ. ರಾಜ್ಯಾದ್ಯಂತ ಮತ್ತೆ ಮಾಸ್ಕ್ (Mask) ಕಡ್ಡಾಯ ರೂಲ್ಸ್ ಜಾರಿ ಮಾಡಲಾಗಿದೆ. ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಮತ್ತೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ.

    ಹೊಸ ವರ್ಷದ ಆಚರಣೆಗೆ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿದ್ದಲ್ಲದೇ ಸಂಭ್ರಮಾಚರಣೆಗೆ ಮಧ್ಯರಾತ್ರಿ 1 ಗಂಟೆವರೆಗೆ ಡೆಡ್‍ಲೈನ್ ನೀಡಲಾಗಿದೆ. ಪಾರ್ಟಿಗಳಲ್ಲಿ ಹಿರಿಯರು, ಮಕ್ಕಳು, ಗರ್ಭಿಣಿಯರು ಭಾಗಿದಂತೆ ಪಾರ್ಟಿ ಆಯೋಜಕರು ನೋಡಿಕೊಳ್ಳಬೇಕು. ಮಧ್ಯರಾತ್ರಿ 1 ಗಂಟೆ ನಂತರ ಎಂಜಿ ರೋಡ್, ಬ್ರಿಗೇಡ್ ರೋಡ್ (Brigade Road) ಸೇರಿದಂತೆ ಇತರೆಡೆ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರಲ್ಲ ಮತ್ತು ಪಬ್, ಹೋಟೆಲ್, ರೆಸ್ಟೋರೆಂಟ್ ಮಧ್ಯರಾತ್ರಿ 1 ಗಂಟೆ ನಂತರ ಬಂದ್ ಮಾಡುವುದು ಕಡ್ಡಾಯವಾಗಿದೆ.

    ಬಾರ್ ಪಬ್‍ಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದ್ದು, ಟೇಬಲ್ ಇದ್ದಷ್ಟು ಮಾತ್ರ ಪಾರ್ಟಿಗೆ ಅವಕಾಶ ಕೊಡುವಂತೆ ಸೂಚನೆ ನೀಡಲಾಗಿದೆ. ಡಬಲ್ ಡೋಸ್ ಇಲ್ಲದಿದ್ದರೂ, ಒಳ ಪ್ರವೇಶಕ್ಕೆ ಅನುಮತಿ ನೀಡಬಾರದೆಂದು ಸೂಚಿಸಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಕೊರೊನಾ ಆರ್ಭಟ – ಉದ್ಯೋಗ ಕಳ್ಕೊಂಡು ಬೀದಿಗೆ ಬಿದ್ದ 2 ಕೋಟಿ ಯುವಜನರು

    ಕರ್ನಾಟಕಕ್ಕೆ ಯಾಕೋ ಡಿಸೆಂಬರ್ ಕೊರೊನಾ ಕಂಟಕ ಮಾಸವಾಗಿ ಪರಿಣಮಿಸಿದೆ. 2020, 2021, 2022 ಈ ಮೂರು ವರ್ಷಗಳು ಕೂಡ ವರ್ಷಾಚರಣೆಗೆ ಕೊರೊನಾ ಅಡ್ಡಿ ಆಗಿದೆ. ಈ ವರ್ಷವೂ ಕೊರೊನಾ ಅಬ್ಬರ ಮುಗಿಯಿತು ಅನ್ನೋವಷ್ಟರಲ್ಲಿ ವರ್ಷಾಂತ್ಯಕ್ಕೆ ಮತ್ತೆ ಕೊರೊನಾ ಟೆನ್ಷನ್ ಶುರುವಾಗಿದೆ. ಮುಂದಿನ 2-3 ತಿಂಗಳು ಕೊರೊನಾ ನಿರ್ಣಾಯಕವಾಗಿದ್ದು ಸದ್ಯ ಸರ್ಕಾರದ ರೂಲ್ಸ್ ಪಾಲಿಸುವುದು ಅನಿವಾರ್ಯವಾಗಿದೆ.

    ಕೊರೊನಾಗಾಗಿ ಒಟ್ಟು 50,817 ಬೆಡ್‍ಗಳನ್ನು ಸರ್ಕಾರ ವ್ಯವಸ್ಥೆ ಮಾಡಿದೆ. ಒಟ್ಟಾರೆ ಹೊಸ ವರ್ಷಾಚರಣೆಗೆ ಸಿದ್ಧಗೊಂಡ ಬೆಂಗಳೂರಿಗೆ ಬಿಗ್ ಶಾಕ್ ಎದುರಾಗಿದೆ. ಬೇಕಾಬಿಟ್ಟಿ ಜನರ ಓಡಾಟಕ್ಕೆ ನಿರ್ಬಂಧ ಹೇರಿರೋ ಸರ್ಕಾರ, ಕೊರೊನಾ ಕಂಟ್ರೋಲಿಗೆ ಮುಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚೀನಾದಲ್ಲಿ ಕೊರೊನಾ ಆರ್ಭಟ – ಉದ್ಯೋಗ ಕಳ್ಕೊಂಡು ಬೀದಿಗೆ ಬಿದ್ದ 2 ಕೋಟಿ ಯುವಜನರು

    ಚೀನಾದಲ್ಲಿ ಕೊರೊನಾ ಆರ್ಭಟ – ಉದ್ಯೋಗ ಕಳ್ಕೊಂಡು ಬೀದಿಗೆ ಬಿದ್ದ 2 ಕೋಟಿ ಯುವಜನರು

    ಬೀಜಿಂಗ್: ಚೀನಾದಲ್ಲಿ (China) ಕೊರೊನಾ ವೈರಸ್‌ (Corona Virus) ಯುವಜನರ ಉದ್ಯೋಗಕ್ಕೂ ಪೆಟ್ಟು ಕೊಟ್ಟಿದೆ. ಸದ್ಯ ಚೀನಾದಲ್ಲಿ 2 ಕೋಟಿ ಯುವಜನರು ಕೆಲಸ ಕಳೆದುಕೊಂಡಿದ್ದಾರೆ.

    ಚೀನಾದ ನಗರ ಪ್ರದೇಶದಲ್ಲಿ ಯುವಜನರ ಸಂಖ್ಯೆ 107 ಮಿಲಿಯನ್ ಇದೆ. ದೇಶದಲ್ಲಿ 16ರಿಂದ 24 ವರ್ಷದೊಳಗಿನ ಯುವಸಮುದಾಯ ಉದ್ಯೋಗ ಕಳೆದುಕೊಂಡಿದೆ. ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕರಲ್ಲಿ ಒಂದಾದ Xiaomi ಸಹ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದನ್ನೂ ಓದಿ: ತೈವಾನ್ ಮೇಲೆ ಮತ್ತೆ ಚೀನಾ ಕ್ಯಾತೆ – 71 ಯುದ್ಧ ವಿಮಾನಗಳಿಂದ ತಾಲೀಮು

    ಚೀನಾದಲ್ಲಿ ನಿರುದ್ಯೋಗ ಪ್ರಮಾಣವು ಈ ವರ್ಷ ಗರಿಷ್ಠ ಮಟ್ಟವನ್ನು ತಲುಪಿದೆ. ಮಾರ್ಚ್‌ನಲ್ಲಿ ಶೇ.15.3 ರಿಂದ ಏಪ್ರಿಲ್‌ನಲ್ಲಿ ದಾಖಲೆಯ ಶೇ.18.2 ಏರಿದೆ. ಇದು ಮುಂದಿನ ಕೆಲವು ತಿಂಗಳುಗಳವರೆಗೆ ಮುಂದುವರಿಯಿತು. ಜುಲೈನಲ್ಲಿ ಶೇ.19.9ಕ್ಕೆ ತಲುಪಿತು. ಆಗಸ್ಟ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ.18.7 ಸ್ವಲ್ಪಮಟ್ಟಿಗೆ ಕುಸಿದಿದೆ ಎಂದು ಹಾಂಗ್‌ಕಾಂಗ್‌ ಪೋಸ್ಟ್‌ ತಿಳಿಸಿದೆ.

    ಕೋವಿಡ್‌ನಿಂದಾಗಿ ನಿರುದ್ಯೋಗ ಸಮಸ್ಯೆ ನಿರ್ಮಾಣವಾಗಿದೆ. ಐವರಲ್ಲಿ ಒಬ್ಬರು ಉದ್ಯೋಗದಿಂದ ಹೊರಗುಳಿದಿದ್ದಾರೆ. ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುವುದರಿಂದ ದೇಶವು ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸಲು ಉಕ್ರೇನ್‌ನೊಂದಿಗೆ ಮಾತುಕತೆಗೆ ನಾವು ಸಿದ್ಧ: ಪುಟಿನ್

    ಹಣಕಾಸಿನ ದಾಖಲೆಗಳ ಪ್ರಕಾರ, Xiaomi 2022 ರ ಮೊದಲ ಒಂಭತ್ತು ತಿಂಗಳುಗಳಲ್ಲಿ 1,900 ಉದ್ಯೋಗಿಗಳನ್ನು ವಜಾ ಮಾಡಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಂಪನಿಯು ಸುಮಾರು 35,000 ಉದ್ಯೋಗಿಗಳನ್ನು ಹೊಂದಿತ್ತು. ಅವರಲ್ಲಿ ಹೆಚ್ಚಿನವರು ಚೀನಾದಲ್ಲಿ ನೆಲೆಸಿದ್ದಾರೆ.

    ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ʼಶೂನ್ಯ ಕೋವಿಡ್‌ʼ ಕಠಿಣ ನಿಯಮಗಳಿಂದಾಗಿ ಕಂಪನಿಯ ಒಟ್ಟು ಶೇ.10 ಕುಸಿತ ಕಂಡಿತು.

    Live Tv
    [brid partner=56869869 player=32851 video=960834 autoplay=true]

  • ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ 12 ಮಂದಿಗೆ ಕೊರೊನಾ

    ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ 12 ಮಂದಿಗೆ ಕೊರೊನಾ

    ಬೆಂಗಳೂರು: ಡಿಸೆಂಬರ್‌ ತಿಂಗಳಿನಲ್ಲಿ ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAL) ಆಗಮಿಸಿದ 12 ಮಂದಿಗೆ ಕೊರೊನಾ ಸೋಂಕು (Corona Virus) ದೃಢಪಟ್ಟಿದೆ.

    ಸದ್ಯ 12 ಮಂದಿಯೂ ಆರೋಗ್ಯವಾಗಿದ್ದಾರೆ. ಒಟ್ಟು ನಾಲ್ಕು ಜನ ಅಂತರಾಷ್ಟ್ರೀಯ ಪ್ರಯಾಣಿಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನುಳಿದವರು ಹೋಂ ಐಸೋಲೇಷನ್‌ನಲ್ಲಿದ್ದಾರೆ.  ಇದನ್ನೂ ಓದಿ: ಯಾರೂ ಪ್ಯಾನಿಕ್ ಆಗ್ಬೇಡಿ, ಸದ್ಯಕ್ಕೆ ಯಾವುದೇ ರೀತಿಯ ನಿರ್ಬಂಧ ಇರಲ್ಲ: ಆರ್.ಅಶೋಕ್

    ಹಾಂಕಾಂಗ್, ಅಮೇರಿಕ, ಥಾಯ್ಲೆಂಡ್‌, ಆಸ್ಟ್ರೇಲಿಯಾ, ಸಿಂಗಾಪುರದಿಂದ ಬಂದ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿದೆ. ಇವರಿಗೆ ಬಂದಿರುವ ತಳಿ  ಯಾವುದು ಎಂದು ತಿಳಿಯಲು ಗಂಟಲ ದ್ರವದ ಮಾದರಿಯನ್ನು ಜೀನೋಮ್‌ ಸೀಕ್ವೆನ್ಸ್‌ ಲ್ಯಾಬ್‌ಗೆ ಕಳುಹಿಸಲಾಗಿದೆ.

    ಪ್ರಸ್ತುತ ಈಗ ಪ್ರತಿ ದಿನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ  ರ್‍ಯಾಂಡಮ್‌ ಆಗಿ 100-150 ಮಂದಿಗೆ ಕೊರೊನಾ ಟೆಸ್ಟ್‌ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಯಾರೂ ಪ್ಯಾನಿಕ್ ಆಗ್ಬೇಡಿ, ಸದ್ಯಕ್ಕೆ ಯಾವುದೇ ರೀತಿಯ ನಿರ್ಬಂಧ ಇರಲ್ಲ: ಆರ್.ಅಶೋಕ್

    ಯಾರೂ ಪ್ಯಾನಿಕ್ ಆಗ್ಬೇಡಿ, ಸದ್ಯಕ್ಕೆ ಯಾವುದೇ ರೀತಿಯ ನಿರ್ಬಂಧ ಇರಲ್ಲ: ಆರ್.ಅಶೋಕ್

    ಬೆಳಗಾವಿ: ಕೋವಿಡ್ (COVID 19) ನಿಂದ ಯಾರೂ ಕೂಡ ಪ್ಯಾನಿಕ್ ಆಗೋದು ಬೇಡ. ಸದ್ಯಕ್ಕೆ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ. ಜನ ಸಹಕಾರ ನೀಡಿದ್ರೆ ಕೋವಿಡ್ ತಡೆಯಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ (R Ashok) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ನಾನು, ಸುಧಾಕರ್ ಸಭೆ ಮಾಡುತ್ತಿದ್ದೇವೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಭೆ ಮಾಡುತ್ತಿದ್ದೇವೆ. ಯಾರೂ ಕೂಡ ಪ್ಯಾನಿಕ್ ಆಗೋದು ಬೇಡ. ಸದ್ಯಕ್ಕೆ ಯಾವುದೇ ರೀತಿಯ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಭಾರತಕ್ಕೆ ಮರಳಿದ ವ್ಯಕ್ತಿಯಲ್ಲಿ ಚೀನಿ ವೈರಸ್?

     

    ಜನ ಸಹಕಾರ ನೀಡಿದ್ರೆ ಕೋವಿಡ್ ತಡೆಯಬಹುದು. ಮಾಸ್ಕ್ (Mask), ಸ್ಯಾನಿಟೈಸರ್ (Sanitizer) ಮುಖಾಂತರ ಕೋವಿಡ್ ತಡೆಯಬಹುದು. ಅದಕ್ಕೆ ಸಂಬಂಧಿಸಿದಂತೆ ಇಂದು ಸಭೆ ನಡೆಸಲಾಗುತ್ತಿದೆ. ಹೊಸವರ್ಷ ಬರುತ್ತಿದೆ, ಅದಕ್ಕೆ ಸಂಬಂಧಿಸಿದಂತೆ ಸಭೆ ಮಾಡಿ ಮಾರ್ಗಸೂಚಿ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಚೀನಾದಲ್ಲಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು

    ಚೀನಾದಲ್ಲಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು

    ಬೀಜಿಂಗ್‌: ಕೊರೊನಾ ವೈರಸ್‌(Corona Virus) ಸೃಷ್ಟಿಕರ್ತ ಚೀನಾದಲ್ಲಿ(China) ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.

    ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ 24.8 ಕೋಟಿ ಜನರು ಅಥವಾ ಜನಸಂಖ್ಯೆಯ ಸುಮಾರು 18% ರಷ್ಟು ಜನರು ವೈರಸ್‌ಗೆ ತುತ್ತಾಗಿರಬಹುದು ಎಂದು ಚೀನಾದ ಸರ್ಕಾರವೇ ಅಂದಾಜಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.

    ಕಳೆದ ಬುಧವಾರ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಆಂತರಿಕ ಸಭೆ ನಡೆಸಿದ್ದು ಈ ವೇಳೆ ಅಧಿಕಾರಿಗಳು ಈ ಅಂಕಿ ಸಂಖ್ಯೆಯನ್ನು ತಿಳಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ʼಬ್ಲೂಮ್‌ಬರ್ಗ್‌ʼ ವರದಿ ಮಾಡಿದೆ.

    2022ರ ಜನವರಿಯಲ್ಲಿ ವಿಶ್ವಾದ್ಯಂತ ಒಂದೇ ದಿನ 40 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಆದರೆ ಚೀನಾದಲ್ಲಿ ಒಂದೇ ದಿನ ಈ ದಾಖಲೆಗಿಂತ 10 ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ದಾಖಲಾಗಿರುವುದು ಆತಂಕಕಾರಿ ವಿಚಾರವಾಗಿದೆ.

    ಚೀನಾದ ನೈಋತ್ಯ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿರುವ ಸಿಚುವಾನ್ ಪ್ರಾಂತ್ಯದ ಅರ್ಧಕ್ಕಿಂತ ಹೆಚ್ಚು ನಿವಾಸಿಗಳು ಸೋಂಕಿಗೆ ಒಳಗಾಗಿದ್ದಾರೆ. ರೋಗಲಕ್ಷಣವಿಲ್ಲದ ಪ್ರಕರಣಗಳ ದೈನಂದಿನ ಸಂಖ್ಯೆಯನ್ನು ಪ್ರಕಟಿಸುವುದನ್ನು ಚೀನಾ ಸರ್ಕಾರ ನಿಲ್ಲಿಸಿದೆ. ಇದನ್ನೂ ಓದಿ: ನನ್ನ ಗಂಡ ಮೇಕಪ್‌ಗೆ ಹಣ ಕೊಡ್ತಿಲ್ಲ – ಡಿವೋರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ

    ಹೆಚ್ಚಿನ ನಗರಗಳಲ್ಲಿ ಡಿಸೆಂಬರ್ ಮಧ್ಯ ಮತ್ತು ಜನವರಿ ಅಂತ್ಯದ ನಡುವೆ ಪ್ರಕರಣಗಳು ಉತ್ತಂಗಕ್ಕೆ ಏರಲಿದೆ. ಶೆನ್‌ಜೆನ್, ಶಾಂಘೈ ಮತ್ತು ಚಾಂಗ್‌ಕಿಂಗ್ ನಗರಗಳಲ್ಲಿ ಅತಿ ಹೆಚ್ಚು ಸೋಂಕು ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ನಗರ ಪ್ರದೇಶದ ಜನರು ಈಗ ಗ್ರಾಮೀಣ ಭಾಗಕ್ಕೆ ತೆರಳುತ್ತಿರುವುದರಿಂದ ಗ್ರಾಮೀಣ ಭಾಗದಲ್ಲೂ ಸೋಂಕು ಹರಡುವ ಪ್ರಮಾಣ ಹೆಚ್ಚಾಗುತ್ತಿದೆ.

    ಕೊರಿಯರ್‌ ಸರಕುಗಳು ರಾಶಿ ಬಿದ್ದಿದ್ದು, ಆಹಾರವವನ್ನು ತಲುಪಿಸಲು ಹುಡುಗರು ಬರುತ್ತಿಲ್ಲ. ಬೀದಿಗಳು, ಸುರಂಗ ಮಾರ್ಗಗಳು, ವಿಮಾನ ನಿಲ್ದಾಣ, ಶಾಪಿಂಗ್‌ ಮಾಲ್‌ಗಳು ಎಲ್ಲವೂ ಖಾಲಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ

    ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ

    ಬೆಳಗಾವಿ: ಕೋವಿಡ್-19 (Covid 19) ಬಗ್ಗೆ ಜನ ಗಂಭೀರವಾಗಿ ತೆಗೆದುಕೊಳ್ಳದೇ ಇದ್ರೆ, ಸಾವಿನ ಸಂಖ್ಯೆ ತಡೆಯೋಕಾಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆತಂಕಪಟ್ಟಿದ್ದಾರೆ.

    ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಬೆಳಗಾವಿಯಲ್ಲಿಂದು (Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಅನ್ನು ಜನ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಸಾವಿನ ಸಂಖ್ಯೆ ತಡೆಯಲು ಆಗಲ್ಲ. ಯಾರೂ ಆತಂಕ ಪಡಬಾರದು. ಹಾಗೆಯೇ ಉಡಾಫೆ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

    ಈ ಹಿಂದೆ ಪೊಲೀಸ್ ಇಲಾಖೆಯಲ್ಲೂ (Police Department) ಬಹಳ ಜನ ಮೃತಪಟ್ಟರು. ಈ ಬಾರಿ ಕೂಡಾ ಕೋವಿಡ್ ವಿರುದ್ಧ ಹೋರಾಟ ಮಾಡ್ತಾರೆ. ಎಲ್ಲ ರೀತಿಯಲ್ಲೂ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ

    ಪಿಎಸ್‌ಐ (PSI) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಿಎಸ್‌ಐ ಪರೀಕ್ಷೆ ಬರೆದು ಪಾಸ್ ಆದ ವಿದ್ಯಾರ್ಥಿಗಳ (Students) ಮನವಿ ಸ್ವೀಕರಿಸಿದ್ದೇನೆ. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಗೃಹ ಸಚಿವನಾಗಿ ನನಗೆ ನಿರ್ಧಾರ ಹೇಳಲು ಕಷ್ಟ ಆಗುತ್ತೆ. ಸಿಒಡಿ ತನಿಖಾ (COD Investigation) ವರದಿ ಬಂದ ಮೇಲೆ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾವೇ ಚೀನಾದ ವುಹಾನ್‌ಗೆ ಹೋಗಿ ವೈರಸ್ ಬಿಟ್ಟಿದ್ವಾ – ಕಾಂಗ್ರೆಸ್‌ಗೆ ಸುಧಾಕರ್ ಪ್ರಶ್ನೆ

    ಇದೇ ವೇಳೆ ಲವ್ ಜಿಹಾದ್ (Love Jihad) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮತಾಂತರ ನಿಷೇಧ ಕಾಯ್ದೆಯಲ್ಲೇ ಲವ್ ಜಿಹಾದ್‌ಗೆ ಸಂಬಂಧಿಸಿದ ಕಾನೂನು ಅಂಶಗಳು ಅಡಕವಾಗಿದೆ. ಆದ್ದರಿಂದ ಏಕಾಏಕಿ ಯಾರು ಯಾರನ್ನೋ ಮದುವೆಯಾಗಲು ಆಗುವುದಿಲ್ಲ. ಸದ್ಯ ರಾಜ್ಯದಲ್ಲಿ ಎರಡು ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಈಗಿನ ಪರಿಸ್ಥಿತಿಯಲ್ಲಿ ಟಾಸ್ಕ್ ಫೋರ್ಸ್ ಅಗತ್ಯವಿಲ್ಲ. ಏಕೆಂದರೆ ಉತ್ತರ ಪ್ರದೇಶದ ಮಾದರಿ ಬೇರೆ, ನಮ್ಮ ರಾಜ್ಯದ ಮಾದರಿಯೇ ಬೇರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]