Tag: Corona Virus

  • KRS ಡ್ಯಾಂ 3 ಅಡಿ ಭರ್ತಿ – 29,552 ಕ್ಯೂಸೆಕ್ ನೀರು ಒಳಹರಿವು

    KRS ಡ್ಯಾಂ 3 ಅಡಿ ಭರ್ತಿ – 29,552 ಕ್ಯೂಸೆಕ್ ನೀರು ಒಳಹರಿವು

    ಮಂಡ್ಯ: ಕೆಲ ದಿನಗಳ ಹಿಂದೆ ಬಣಗುತ್ತಿದ್ದ ಕೆಆರ್‌ಎಸ್ ಡ್ಯಾಂಗೆ (KRS Dam) ಉತ್ತಮ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Basin) ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಳೆದ 12 ಗಂಟೆಗಳ ಅವಧಿಯಲ್ಲಿ ಕೆಆರ್‌ಎಸ್ ಡ್ಯಾಂ 3 ಅಡಿ ಭರ್ತಿಯಾಗಿದ್ದು, ನೀರಿನ ಮಟ್ಟ 95 ಅಡಿಗೆ ಏರಿಕೆಯಾಗಿದೆ. ಅಲ್ಲದೇ ಕಳೆದ 12 ಗಂಟೆಗಳ ಅವಧಿಯಲ್ಲಿ 2 ಟಿಎಂಸಿ ನೀರು ಹರಿದು ಬಂದಿದ್ದು, 19.139 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಇದನ್ನೂ ಓದಿ: ಕಾವೇರಿ ನೀರಿಗೆ ತಮಿಳುನಾಡು ಬೇಡಿಕೆ – ಯಾವ ತಿಂಗಳು ಎಷ್ಟು ನೀರು ಬಿಡಬೇಕು?

    ಇನ್ನೂ ಡ್ಯಾಂನ ಒಳಹರಿವಿನ ಪ್ರಮಾಣದಲ್ಲೂ ಭಾರೀ ಏರಿಕೆ ಕಂಡಿದೆ. ಸದ್ಯ ಡ್ಯಾಂಗೆ 29,552 ಕ್ಯೂಸೆಕ್ ನೀರು ಒಳಹರಿವಿದ್ದು, ಹೊರಹರಿವು 5,297 ಕ್ಯೂಸೆಕ್ ನಷ್ಟಿದೆ. ಇದನ್ನೂ ಓದಿ: ಗುಡ್‌ನ್ಯೂಸ್‌ – 24 ಗಂಟೆಗಳಲ್ಲಿ KRSನಲ್ಲಿ 2.50 ಅಡಿ ನೀರು ಭರ್ತಿ

    ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

    ಗರಿಷ್ಠ ಮಟ್ಟ – 124.80 ಅಡಿಗಳು
    ಇಂದಿನ ಮಟ್ಟ – 95.00 ಅಡಿಗಳು
    ಗರಿಷ್ಠ ಸಾಂದ್ರತೆ – 49.452 ಟಿಎಂಸಿ
    ಇಂದಿನ ಸಾಂದ್ರತೆ – 19.139 ಟಿಎಂಸಿ
    ಒಳ ಹರಿವು – 29,552 ಕ್ಯೂಸೆಕ್
    ಹೊರ ಹರಿವು – 5,297 ಕ್ಯೂಸೆಕ್

    ಆಲಮಟ್ಟಿ ಜಲಾಶಯಷ

    ಗರಿಷ್ಠ ಮಟ್ಟ- 123.081 ಟಿಎಂಸಿ
    ಇಂದಿನ ಮಟ್ಟ – 62.534 ಟಿಎಂಸಿ
    ಒಳ ಹರಿವು – 1,14,445 ಕ್ಯೂಸೆಕ್
    ಹೊರ ಹರಿವು – 6,761 ಕ್ಯೂಸೆಕ್

    ತುಂಗಭದ್ರಾ ಜಲಾಶಯ

    ಗರಿಷ್ಠ ಮಟ್ಟ – 1,633 ಅಡಿಗಳು
    ಇಂದಿನ ಮಟ್ಟ – 1,602.84 ಅಡಿಗಳು
    ಗರಿಷ್ಠ ಟಿಎಂಸಿ – 105.788 ಟಿಎಂಸಿ
    ಇಂದಿನ ಟಿಎಂಸಿ – 25.417 ಟಿಎಂಸಿ
    ಒಳ ಹರಿವು – 47,294 ಕ್ಯೂಸೆಕ್
    ಹೊರ ಹರಿವು – 213 ಕ್ಯೂಸೆಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಂದೇ ದಿನಕ್ಕೆ ದೇಶದಲ್ಲಿ ಮತ್ತೆ ಕೊರೊನಾ ಹೆಚ್ಚಳ – 2 ಸಾವಿರಕ್ಕೂ ಹೆಚ್ಚು ಪ್ರಕರಣ ವರದಿ

    ಒಂದೇ ದಿನಕ್ಕೆ ದೇಶದಲ್ಲಿ ಮತ್ತೆ ಕೊರೊನಾ ಹೆಚ್ಚಳ – 2 ಸಾವಿರಕ್ಕೂ ಹೆಚ್ಚು ಪ್ರಕರಣ ವರದಿ

    ನವದೆಹಲಿ: ದೇಶದಲ್ಲಿ ಕೋವಿಡ್ (Covid-19) ಹೆಮ್ಮಾರಿಯ ಕಾಟ ಮತ್ತೆ ಹೆಚ್ಚುತ್ತಿದೆ. ಕಳೆದ ಕೆಲ ತಿಂಗಳಿಂದ ನಿಯಂತ್ರಣದಲ್ಲೇ ಇದ್ದ ಕೊರೊನಾ ವೈರಸ್ (Corona Virus) ಇದೀಗ ಎಲ್ಲೆಡೆ ವ್ಯಾಪಿಸುತ್ತಿದೆ.

    ನಿನ್ನೆಯೊಂದೇ ದಿನ ದೇಶದಲ್ಲಿ 2,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಐದು ತಿಂಗಳ ಗರಿಷ್ಠ ಎನ್ನುವುದು ಗಮನಾರ್ಹ. 1.42 ಲಕ್ಷ ಮಂದಿಗೆ ಟೆಸ್ಟ್ ಮಾಡಿದಾಗ 2,151 ಮಂದಿಯಲ್ಲಿ ಸೋಂಕು ಇರುವುದು ಧೃಢಪಟ್ಟಿದೆ. ಇದನ್ನೂ ಓದಿ: ಲಕ್ಷದ್ವೀಪ MP ಅನರ್ಹತೆ ದಿಢೀರ್ ರದ್ದು

    ಸಕ್ರಿಯ ಕೇಸ್‍ಗಳ ಸಂಖ್ಯೆ ಈಗ 12 ಸಾವಿರದ ಗಡಿಯ ಸನಿಹದಲ್ಲಿವೆ. ದಿನವಾಹಿ ಪಾಸಿಟಿವಿಟಿ ರೇಟ್ 1.51ರಷ್ಟಿದೆ. ಕೇರಳ, ಮಹಾರಾಷ್ಟ್ರದಲ್ಲಿ ತಲಾ ಮೂವರು, ಕರ್ನಾಟಕದಲ್ಲಿ ಒಬ್ಬರು ಕೋವಿಡ್‍ಗೆ ಬಲಿ ಆಗಿದ್ದಾರೆ.

    ಕೇವಲ ಒಂದು ದಿನದ ಅವಧಿಯಲ್ಲಿ ದೆಹಲಿಯಲ್ಲಿ 300 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷದ ಆಗಸ್ಟ್‌ ನಂತರ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳು 300ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ವರದಿ ಪ್ರಕಾರ, ಪಾಸಿಟಿವಿಟಿ ದರ ಶೇ.13.89ಕ್ಕೆ ತಲುಪಿದೆ. ಕೋವಿಡ್‌ ಸಂಬಂಧಿ 2 ಸಾವು ಕೂಡ ವರದಿಯಾಗಿದೆ.

  • 134 ದಿನಗಳ ಬಳಿಕ ಕೊರೊನಾ ಕೇಸ್ 10 ಸಾವಿರಕ್ಕೆ ಏರಿಕೆ – ಆಸ್ಪತ್ರೆಗಳಲ್ಲಿ ಹೈ ಅಲರ್ಟ್

    134 ದಿನಗಳ ಬಳಿಕ ಕೊರೊನಾ ಕೇಸ್ 10 ಸಾವಿರಕ್ಕೆ ಏರಿಕೆ – ಆಸ್ಪತ್ರೆಗಳಲ್ಲಿ ಹೈ ಅಲರ್ಟ್

    ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ (Corona Case) ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ (Health Department) ಫುಲ್ ಅಲರ್ಟ್ ಆಗಿದೆ.

    ಕಳೆದ 24 ಗಂಟೆಯಲ್ಲಿ 1,805 ಹೊಸ ಕೋವಿಡ್ ಕೇಸ್ ಪತ್ತೆಯಾಗಿದ್ದು, 6 ಮಂದಿ ಬಲಿಯಾಗಿದ್ದಾರೆ. 134 ದಿನಗಳ ಬಳಿಕ ಇದೇ ಮೊದಲ ಬಾರಿ ಸಕ್ರೀಯ ಕೇಸ್‌ಗಳ ಸಂಖ್ಯೆ 10 ಸಾವಿರ ದಾಟಿದೆ. ಪ್ರತಿದಿನ ಪಾಸಿಟಿವಿಟಿ ಪ್ರಮಾಣ ಶೇ.3.19ಕ್ಕೆ ಹೆಚ್ಚಿದೆ. ಇದನ್ನೂ ಓದಿ: ಕಿಡ್ನಿ ಸೋಂಕು – ನಮೀಬಿಯಾದಿಂದ ತಂದಿದ್ದ 8ರಲ್ಲಿ ಒಂದು ಚಿರತೆ ಸಾವು

    ಇದರಿಂದ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4,47,05,952 ಮಂದಿಗೆ ಸೋಂಕು ತಲುಪಿದ್ದು, ಅವರಲ್ಲಿ 4,41,64,815 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೇ 6 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 5,30,837ಕ್ಕೆ ಏರಿಕೆಯಾಗಿದೆ. 10,300 ಸಕ್ರೀಯ ಸೋಂಕು ಪ್ರಕರಣಗಳಿರುವುದು ಕಂಡುಬಂದಿದೆ.

    ಈ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯದ (Health Ministry) ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ಜೊತೆ ವರ್ಚುವಲ್ ಸಭೆ ನಡೆಸಿ, ಸೋಂಕು ನಿಯಂತ್ರಣಕ್ಕೆ ಹಲವು ಸಲಹೆ ಸೂಚನೆ ನೀಡಿದ್ದಾರೆ. ಮಾಸ್ಕ್ ಧರಿಸಲು ಹಾಗೂ ಟೆಸ್ಟಿಂಗ್ ಹೆಚ್ಚಳ ಮಾಡಲು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ತಿಂಗಳೊಳಗೆ ಸರ್ಕಾರಿ ಬಂಗಲೆ ತೊರೆಯುವಂತೆ ರಾಹುಲ್ ಗಾಂಧಿಗೆ ನೋಟಿಸ್

    ಮುಂದಿನ ತಿಂಗಳ ಮೊದಲ ವಾರ ದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ಮಾಕ್‌ಡ್ರಿಲ್ (ಅಣುಕು ಕಾರ್ಯಾಚರಣೆ) ನಡೆಸಲು ತೀರ್ಮಾನಿಸಿದೆ. ಭಾನುವಾರ ದೆಹಲಿ ಆಸ್ಪತ್ರೆಯಲ್ಲೂ ಮಾರ್ಕ್ ಡ್ರಿಲ್ ನಡೆಸಲಾಗಿದೆ.

  • ರಾಜ್ಯದಲ್ಲಿ ಕೋವಿಡ್‌ನಿಂದ ಮೃತರಾದ ಕುಟುಂಬಕ್ಕೆ 446 ಕೋಟಿ ಪರಿಹಾರ ನೀಡಲಾಗಿದೆ: ಆರ್ ಅಶೋಕ್

    ರಾಜ್ಯದಲ್ಲಿ ಕೋವಿಡ್‌ನಿಂದ ಮೃತರಾದ ಕುಟುಂಬಕ್ಕೆ 446 ಕೋಟಿ ಪರಿಹಾರ ನೀಡಲಾಗಿದೆ: ಆರ್ ಅಶೋಕ್

    ಬೆಂಗಳೂರು: ಕೋವಿಡ್‌ನಿಂದ (Covid) ಮೃತಪಟ್ಟ ಕುಟುಂಬಗಳಿಗೆ ಈವರೆಗೂ 446 ಕೋಟಿ ರೂ. ಪರಿಹಾರ (Compensation) ವಿತರಣೆ ಮಾಡಲಾಗಿದ್ದು, ನೈಜತೆ ಆಧರಿಸಿ ಈಗಲೂ ಪರಿಹಾರ ನೀಡಿಕೆ ಮುಂದುವರಿಸಲಾಗಿದೆ. ರಾಜ್ಯ ಸರ್ಕಾರ 1 ಲಕ್ಷ ಕೇಂದ್ರದ 50 ಸಾವಿರ ಸೇರಿ ಒಟ್ಟು 1.5 ಲಕ್ಷ ರೂ. ಗಳನ್ನು ಮೃತರ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ (R Ashok) ಸ್ಪಷ್ಟಪಡಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್‌ನಿಂದ ಮೃತ ಎಂದು ಹೆಲ್ತ್ ಬುಲೆಟಿನ್‌ನಲ್ಲಿಯೇ ಬಂದಿದ್ದರೆ, ಆ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. 1 ಲಕ್ಷ ರೂ. ರಾಜ್ಯ ಸರ್ಕಾರದಿಂದ, 50 ಸಾವಿರ ರೂ. ಕೇಂದ್ರದಿಂದ ಕೊಡಲಾಗಿದೆ ಎಂದರು. ಇದನ್ನೂ ಓದಿ: ನಾನು ಹುಟ್ಟಿರೋದೆ ಮಾಂಸ ತಿನ್ನೋ ಜಾತಿಯಲ್ಲಿ, ಆದ್ರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ: ಸಿ.ಟಿ ರವಿ

    ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ಹೆಸರು ಬಾರದೆ ಇದ್ದು, ನಂತರ ಮೃತರ ಕುಟುಂಬದವರು ಅರ್ಜಿ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುತ್ತದೆ. ಆದರೆ ನೈಜತೆ ಪರಿಶೀಲನೆಗೆ ಸಮಿತಿ ರಚಿಸಲಾಗಿದೆ. ಅಲ್ಲಿ ಕೋವಿಡ್‌ನಿಂದ ಸಾವು ಎಂದು ಖಚಿತವಾದರೆ ಮಾತ್ರ ಪರಿಹಾರ ಕೊಡಲಾಗುತ್ತದೆ. ಈವರೆಗೂ ರಾಜ್ಯದಲ್ಲಿ 446 ಕೋಟಿ ರೂ. ಪರಿಹಾರ ಕೊಡಲಾಗಿದೆ ಎಂದರು.

    ಬೆಂಗಳೂರಿನಲ್ಲಿ ಪರಿಹಾರಕ್ಕೆ 10,137 ಅರ್ಜಿಗಳು ಬಂದಿದ್ದವು. ಈ ಪೈಕಿ 3,450 ಬಿಪಿಎಲ್ ಪ್ರಕರಣಗಳಾಗಿವೆ. ಈಗಲೂ ಪರಿಹಾರ ಕೊಡಲಾಗುತ್ತಿದೆ. ಮೃತರಾದವರ ಕುಟುಂಬದವರಲ್ಲದವರು ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಕೊಡಲು ಸಾಧ್ಯವಿಲ್ಲ. ಇದು ಸರ್ಕಾರದ ಹಣ, ದುರುಪಯೋಗ ತಡೆಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವವರ ಹೆಸರು ಮೃತ ವ್ಯಕ್ತಿಯ ಹೆಸರು ಇರುವ ಬಿಪಿಎಲ್ ಪಡಿತರ ಕಾರ್ಡ್ನಲ್ಲಿ ಇರುವುದು ಕಡ್ಡಾಯ ಎಂದರು. ಇದನ್ನೂ ಓದಿ: ಗ್ರಾಮಗಳ ಆಸ್ತಿ ಸರ್ವೆಗೆ ಡ್ರೋಣ್ ಸರ್ವೆ ಪ್ರಕ್ರಿಯೆ ನಡೆಯುತ್ತಿದೆ: ಅಶೋಕ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಂಬೈನಲ್ಲಿ 2020ರ ಬಳಿಕ ಮೊದಲ ಬಾರಿಗೆ ಶೂನ್ಯ ಕೊರೊನಾ ಕೇಸ್

    ಮುಂಬೈನಲ್ಲಿ 2020ರ ಬಳಿಕ ಮೊದಲ ಬಾರಿಗೆ ಶೂನ್ಯ ಕೊರೊನಾ ಕೇಸ್

    ಮುಂಬೈ: ರಾಜ್ಯದಲ್ಲಿ 2020ರ ಮಾರ್ಚ್‍ನಲ್ಲಿ ಕೊರೊನಾ (Corona) ಕೇಸ್ ದಾಖಲಾದ ಬಳಿಕ ಸುಮಾರು ಎರಡೂವರೆ ವರ್ಷಗಳ ನಂತರ ಶೂನ್ಯ ಪ್ರಕರಣ ದಾಖಲಾಗಿದೆ.

    ಮಂಗಳವಾರ ದೈನಂದಿನ ಪ್ರಕರಣಗಳ ಪೈಕಿ ಮುಂಬೈನಲ್ಲಿ (Mumbai) ಶೂನ್ಯ ಪಾಸಿಟಿವ್ ಕೇಸ್ (Positive Case) ದಾಖಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,772 ಮಂದಿ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು ಆದರೆ ಯಾರಿಗೂ ಕೊರೊನಾ ಪಾಸಿಟಿವ್ ಆಗಿಲ್ಲ. ಈ ಮೂಲಕ 2020ರ ಮಾರ್ಚ್ ಬಳಿಕ ಮೊದಲ ಬಾರಿಗೆ ಶೂನ್ಯ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಹಳಿ ದಾಟುವಾಗ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವು

    ಮುಂಬೈನಲ್ಲಿ ಜನವರಿ ಮೊದಲ ವಾರದಲ್ಲಿ 20,000ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ದಾಖಲಾಗಿತ್ತು. ಸದ್ಯ 23 ಸಕ್ರಿಯ ಪ್ರಕರಣ ಮುಂಬೈನಲ್ಲಿದೆ. ಇದನ್ನೂ ಓದಿ: ದೆಹಲಿ ಮಾದರಿಯಲ್ಲೇ Hit & Run Case: ಬೈಕ್‌ಗೆ ಡಿಕ್ಕಿ ಹೊಡೆದು ಸವಾರನನ್ನು 12 ಕಿಮೀ ಎಳೆದೊಯ್ದ ಕಾರು – ವ್ಯಕ್ತಿ ಸಾವು

    ಮುಂಬೈನಲ್ಲಿ 2020ರ ಮಾರ್ಚ್ 9 ರಂದು ಮೊದಲ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿತ್ತು. ಆ ಬಳಿಕ ಈವರೆಗೆ 11,55,240 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದೀಗ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಶೂನ್ಯಕ್ಕೆ ತಲುಪಿದೆ. ದೆಹಲಿಯಲ್ಲಿ ಜ.16 ರಂದು ಶೂನ್ಯ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿತ್ತು. ಆ ಬಳಿಕ ಇದೀಗ ಮುಂಬೈನಲ್ಲಿ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸ ವರ್ಷದ ಸಂಭ್ರಮಕ್ಕೆ ಕೌಂಟ್‍ಡೌನ್- ರೂಪಾಂತರಿ ಆತಂಕ ಹಿನ್ನೆಲೆ ಸ್ಟ್ರಿಕ್ಟ್ ರೂಲ್ಸ್

    ಹೊಸ ವರ್ಷದ ಸಂಭ್ರಮಕ್ಕೆ ಕೌಂಟ್‍ಡೌನ್- ರೂಪಾಂತರಿ ಆತಂಕ ಹಿನ್ನೆಲೆ ಸ್ಟ್ರಿಕ್ಟ್ ರೂಲ್ಸ್

    ಬೆಂಗಳೂರು: ಹೊಸ ವರ್ಷದ ಸಂಭ್ರಮೋತ್ಸವ (New Year Celebration) ಕ್ಕೆ ಬೆಂಗಳೂರು ನಗರ ಸಜ್ಜಾಗಿದೆ. ಕೊರೊನಾ (Corona Virus) ದಿಂದ ಲಾಕ್ ಡೌನ್ (Lockdown) ಬಳಿಕ ಬಂದಿರುವ ಹೊಸ ವರ್ಷಕ್ಕೆ ಬ್ರಿಗೇಡ್ ರೋಡ್ (Brigade Road) ಸೇರಿದಂತೆ ಪಾರ್ಟಿ ಸ್ಥಳಗಳು ಝಗಮಗಿಸ್ತಿದ್ದು, ಪೊಲೀಸರು ಇಡೀ ಬೆಂಗಳೂರನ್ನ ಸುಪರ್ದಿಗೆ ಪಡೆದಿದ್ದಾರೆ.

    ಹೊಸ ವರ್ಷಕ್ಕಿದ್ದ ಆತಂಕ ದೂರಾಗಿದ್ದು, ಸೆಲೆಬ್ರೇಷನ್‍ಗೆ ಕೌಂಟ್‍ಡೌನ್ ಶುರುವಾಗಿದೆ. ಇಂದು ಸಂಜೆಯಿಂದಲೇ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಸೇರಿ ಹಲವು ಭಾಗಗಳಲ್ಲಿ ಬಿಗ್ ಸೆಲೆಬ್ರೇಷನ್‍ಗೆ ಯುವ ಸಮೂಹದ ದಂಡೇ ಸೇರುತ್ತೆ. ಸಾವಿರಾರು ಜನ ಬರುವ ನಿರೀಕ್ಷೆ ಹಿನ್ನೆಲೆ, ಪೊಲೀಸ್ ಇಲಾಖೆ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಅದ್ಧೂರಿ ಸಂಭ್ರಮಾಚರಣೆಗೆ ನಮ್ಮ ಬೆಂಗಳೂರು ಸಜ್ಜಾಗಿದ್ದು, ಬ್ರಿಗೇಡ್ ರೋಡ್ ಅಂತೂ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರೂಲ್ಸ್ & ರೆಗ್ಯುಲೇಷನ್ ಬಿಡುಗಡೆ ಮಾಡಿದ್ದು, ಪೊಲೀಸರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: JDS ಜೊತೆ ಒಳ ಮೈತ್ರಿ, ಸಾಫ್ಟ್ ಕಾರ್ನರ್ ಬೇಡ – ಬಿಜೆಪಿ ನಾಯಕರಿಗೆ ಅಮಿತ್ ಶಾ ತಾಕೀತು

    ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ: ಇಂದು ಸಂಜೆಯಿಂದಲೇ ನಗರದಾದ್ಯಂತ 8500 ಪೊಲೀಸರ ನಿಯೋಜನೆ ಮಾಡಲಾಗಿದೆ. ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿ ನಗರದೆಲ್ಲೆಡೆ 4,000 ಸಿಸಿಟಿವಿ (CCTV) ಅಳವಡಿಸಲಾಗಿದೆ. ಮಹಿಳೆಯರು, ಮಕ್ಕಳ ಸುರಕ್ಷತೆಗಾಗಿ ವಾಚ್ ಟವರ್‍ಗಳ ನಿರ್ಮಾಣ ಮಾಡಲಾಗಿದೆ. ರಾತ್ರಿ 9ರ ನಂತ್ರ ಏರ್‌ಪೋರ್ಟ್ ಫ್ಲೈ ಓವರ್ ಹೊರತುಪಡಿಸಿ ಎಲ್ಲಾ ಫ್ಲೈಓವರ್‍ಗಳು ಬಂದ್ ಆಗಲಿದೆ. ರಾತ್ರಿ 9ರ ಬಳಿಕ ನೈಸ್ ರೋಡ್‍ನಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಡ್ರ್ಯಾಗ್ ರೇಸ್, ವ್ಹೀಲಿಂಗ್ ಬಗ್ಗೆ ನಿಗಾ ವಹಿಸಲಾಗಿದೆ.

    ರಾತ್ರಿ 1 ಗಂಟೆಯವರೆಗೆ ಸೆಲೆಬ್ರೇಷನ್‍ಗೆ ಅವಕಾಶ ನೀಡಲಾಗಿದ್ದು, ಇಡೀ ರಾತ್ರಿ ಡ್ರಿಂಕ್ & ಡ್ರೈವ್ ತಪಾಸಣೆ ನಡೆಸಲಾಗುತ್ತಿದೆ. ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆಯಲ್ಲಿ ವಾಹನಗಳ ಓಡಾಟ ಬಂದ್ ಆಗಲಿದೆ. ಇನ್ನು ಪಬ್‍ಗಳಲ್ಲಿ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದ್ದು 2023 ಸ್ವಾಗತಿಸಲು ಇಡೀ ಬೆಂಗಳೂರೇ ಸಜ್ಜಾಗಿದೆ. ಸಿಲಿಕಾನ್ ಸಿಟಿಯ ಪಬ್‍ಗಳು ಗ್ರಾಹಕರನ್ನ ಆಕರ್ಷಿಸುತ್ತಿವೆ. ಕಳೆದೆರಡು ವರ್ಷವೂ ಕೋವಿಡ್ ವರ್ಷಾಚರಣೆಗೆ ಹೊಡೆತ ಕೊಟ್ಟಿತ್ತು. ಈ ಬಾರಿಯೂ ಮತ್ತೆ ಕೊರೋನಾ ಕಾಟ ಶುರುವಾಗಿದ್ರೂ ವ್ಯಾಪಾರ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಪೊಲೀಸ್ ಇಲಾಖೆ ಪಬ್-ಬಾರ್ & ರೆಸ್ಟೊರೆಂಟ್‍ಗಳಿಗೆ ಪ್ರತ್ಯೇಕ ನಿಯಮಗಳನ್ನ ಜಾರಿಗೊಳಿಸಿದೆ.

    ಹೀಗೆ ಪೊಲೀಸ್ ಇಲಾಖೆ ರೂಲ್ಸ್ ರೆಗ್ಯುಲೇಶನ್ ಜಾರಿಗೊಳಿಸಿ ಹೊಸ ವರ್ಷ ಆಚರಿಸಿ ಅಂತಿದೆ. ಪಬ್, ಬಾರ್, ರೆಸ್ಟೋರೆಂಟ್‍ಗಳೂ ಕೊರೋನಾ ನಿಯಮ ಪಾಲಿಸಿ ಹೊಸ ವರ್ಷವನ್ನ ಸ್ವಾಗತಿಸಲು ಸಜ್ಜಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾಗೆ ಇಡೀ ಜಗತ್ತೇ ತತ್ತರಿಸಿದ್ರೆ, ಈ 2 ದೇಶಗಳಲ್ಲಿ ಮಾತ್ರ ಒಂದೇ ಒಂದು ಕೇಸ್‌ ಇಲ್ಲ

    ಕೊರೊನಾಗೆ ಇಡೀ ಜಗತ್ತೇ ತತ್ತರಿಸಿದ್ರೆ, ಈ 2 ದೇಶಗಳಲ್ಲಿ ಮಾತ್ರ ಒಂದೇ ಒಂದು ಕೇಸ್‌ ಇಲ್ಲ

    ನವದೆಹಲಿ: ಚೀನಾದಲ್ಲಿ (China) ಹುಟ್ಟಿದ ಮಾರಕ ಕೊರೊನಾ (Covid-19) ವೈರಸ್‌ನಿಂದಾಗಿ ಇಡೀ ವಿಶ್ವವೇ ಕಂಗೆಟ್ಟಿದೆ. ಈಗ ಮತ್ತೆ ಕೋವಿಡ್‌ 4ನೇ ಅಲೆ ಭೀತಿ ಜಗತ್ತನ್ನು ಕಾಡುತ್ತಿದೆ. ಆದರೆ ಎರಡು ದೇಶಗಳಲ್ಲಿ ಮಾತ್ರ ಒಂದೇ ಒಂದು ಕೋವಿಡ್‌ ಪ್ರಕರಣ ದೃಢಪಟ್ಟಿಲ್ಲ. ಈ ದೇಶಗಳು ಸದ್ಯ ಕೋವಿಡ್‌ ಮುಕ್ತವಾಗಿವೆ.

    ಹೌದು, ತುರ್ಕಮೆನಿಸ್ತಾನ್‌ (Turkmenistan) ಹಾಗೂ ಉತ್ತರ ಕೊರಿಯಾ (North Korea) ದೇಶಗಳು ಮಾತ್ರ ಕೋವಿಡ್‌ ಮುಕ್ತವಾಗಿವೆ. ಈ ದೇಶಗಳು ಜನರು ಕೊರೊನಾ ವೈರಸ್‌ ಭೀತಿಯಿಲ್ಲದೇ ಆರಾಮಾಗಿ ಓಡಾಡಿಕೊಂಡಿದ್ದಾರೆ. ಈ ದೇಶಗಳ ಆರೋಗ್ಯ ಇಲಾಖೆ ನೀಡಿರುವ ವರದಿ ನೋಡಿ ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಅಚ್ಚರಿಗೊಂಡಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಏಕಕಾಲಕ್ಕೆ 120 ಕ್ಷಿಪಣಿಗಳ ದಾಳಿ ನಡೆಸಿದ ರಷ್ಯಾ

    ಡಬ್ಲ್ಯೂಹೆಚ್‌ಒ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ತುರ್ಕಮೆನಿಸ್ತಾನ್‌ ಮತ್ತು ಉತ್ತರ ಕೊರಿಯಾ ದೇಶಗಳು ಕೊರೊನಾ ಮುಕ್ತವಾಗಿರುವ ವಿಚಾರ ಬೆಳಕಿಗೆ ಬಂದಿದೆ. WHO ಪಟ್ಟಿಯು ಎಲ್ಲಾ ದೇಶಗಳನ್ನು ಹೊಂದಿದೆ. ಆಯಾ ಸರ್ಕಾರಗಳು ಬಿಡುಗಡೆ ಮಾಡಿರುವ COVID-19 ಪ್ರಕರಣಗಳ ಸಂಖ್ಯೆಯನ್ನು ಪಟ್ಟಿಯು ಹೊಂದಿದೆ.

    ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ತುರ್ಕಮೆನಿಸ್ತಾನ್ ಕಳಪೆ ಸ್ಥಾನದಲ್ಲಿದೆ. ಅಷ್ಟೇ ಅಲ್ಲ, 2019ರ ಜಾಗತಿಕ ಆರೋಗ್ಯ ಭದ್ರತಾ ಸೂಚ್ಯಂಕದಲ್ಲಿ 195 ದೇಶಗಳ ಪೈಕಿ ತುರ್ಕಮೆನಿಸ್ತಾನ್ 101ನೇ ಸ್ಥಾನದಲ್ಲಿದೆ. ಹೀಗಿದ್ದೂ ಈ ದೇಶದಲ್ಲಿ ಸದ್ಯ ಒಂದು ಕೋವಿಡ್‌ ಪ್ರಕರಣ ಕೂಡ ವರದಿಯಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಭೀಕರ ಹತ್ಯೆ – ಶಿರಚ್ಛೇದಿಸಿ, ಚರ್ಮ ಸುಲಿದ್ರು

    ಉತ್ತರ ಕೊರಿಯಾ ಆಗಸ್ಟ್‌ನಲ್ಲಿ ತನ್ನ ಮೊದಲ ಕೋವಿಡ್ ಪ್ರಕರಣವನ್ನು ದೃಢಪಡಿಸಿತ್ತು. ನಂತರ ಅನಾರೋಗ್ಯಕ್ಕೆ ಒಳಗಾದವರೆಲ್ಲರೂ ಚೇತರಿಸಿಕೊಂಡಿದ್ದಾರೆ. ಅಂದಿನಿಂದ ಈವರೆಗೂ ಈ ದೇಶದಲ್ಲಿ ಕೋವಿಡ್‌ ಪ್ರಕರಣ ವರದಿಯಾಗಿಲ್ಲ.

    Live Tv
    [brid partner=56869869 player=32851 video=960834 autoplay=true]

  • ನ್ಯೂ ಇಯರ್ ಸೆಲಬ್ರೇಷನ್‍ಗೆ ಕೌಂಟ್‍ಡೌನ್ ಶುರು- ಕರಾವಳಿ ತೀರಕ್ಕೆ ಪ್ರವಾಸಿಗರ ದಂಡು

    ನ್ಯೂ ಇಯರ್ ಸೆಲಬ್ರೇಷನ್‍ಗೆ ಕೌಂಟ್‍ಡೌನ್ ಶುರು- ಕರಾವಳಿ ತೀರಕ್ಕೆ ಪ್ರವಾಸಿಗರ ದಂಡು

    ಕಾರವಾರ: ಹೊಸ ವರ್ಷದ ಸಂಭ್ರಮಾಚರಣೆ ಇನ್ನೇನು 3 ದಿನಗಳು ಬಾಕಿಯಿದೆ. ಆದರೆ ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧವಾಗಿರುವ ಗಡಿಜಿಲ್ಲೆ ಉತ್ತರಕನ್ನಡ (Uttarakannada) ಜಿಲ್ಲೆಯ ಕರಾವಳಿ ಭಾಗದಲ್ಲಿ ವಿದೇಶಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇದರಿಂದ ಕರಾವಳಿ ಭಾಗದ ಪ್ರವಾಸಿತಾಣಗಳಲ್ಲಿ ಕೊರೊನಾ (Corona Virus) ಭೀತಿ ಎದುರಾಗಿದೆ.

    ಉತ್ತರ ಕನ್ನಡ ಜಿಲ್ಲೆ ಎಂದಾಕ್ಷಣ ಕಡಲತೀರ, ಪ್ರಕೃತಿ ಸೌಂದರ್ಯ ದೇಶ ವಿದೇಶಿಗರನ್ನು ತನ್ನತ್ತ ಸೆಳೆಯುತ್ತದೆ. ಆದ್ರೆ ಇದೀಗ ಜಿಲ್ಲೆಯ ಜನರಿಗೆ ಪ್ರವಾಸಿಗರೇ ಸಂಕಷ್ಟವಾಗಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸಿಗರ ದಂಡು ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಹರಿದುಬರುತ್ತಿದೆ. ಜೊತೆಗೆ ಗೋವಾ ಗಡಿಯಾದ್ದರಿಂದ ವಿದೇಶಿ ಪ್ರವಾಸಿಗರು ಸಹ ಕಾರವಾರ, ಗೋಕರ್ಣ, ಮುರುಡೇಶ್ವರಕ್ಕೆ ಲಗ್ಗೆ ಇಡುತ್ತಿದ್ದು, ಇದು ಕರಾವಳಿ ಭಾಗದ ಜನರಲ್ಲಿ ಕೊರೊನಾ ಆತಂಕ ಮೂಡಿಸಿದೆ.

    ಇತ್ತ, ಗೋವಾ (Goa) ಕ್ಕೆ ಬರುವ ವಿದೇಶಿ ಪ್ರವಾಸಿಗರು ಕೊರೊನಾದ ಯಾವುದೇ ನಿರ್ಬಂಧವಿಲ್ಲದೇ ಕರ್ನಾಟಕ ಗಡಿ ಪ್ರವೇಶ ಮಾಡ್ತಿದ್ದಾರೆ. ಗಡಿಯಂಚಿನ ಮಾಜಾಳಿಯಲ್ಲಿ ಯಾವುದೇ ತಪಾಸಣೆ ಮಾಡುತ್ತಿಲ್ಲ. ಕೊರೊನಾ ನೆಗೆಟಿವ್ ರಿಪೋರ್ಟ್ ಕೂಡ ಪಡೆಯುತ್ತಿಲ್ಲ. ಇನ್ನು ಗಡಿಯಲ್ಲಿ ಭದ್ರತಾ ಸಿಬ್ಬಂದಿ ಸಹ ಮಾಸ್ಕ್ ಧರಿಸದೇ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಅಸೆಂಬ್ಲಿ ಎಲೆಕ್ಷನ್ ಮೇಲೆ ಬಿಜೆಪಿ ಚಾಣಾಕ್ಯನ ಕಣ್ಣು- ಇಂದಿನಿಂದ ಅಮಿತ್ ಶಾ ರಾಜ್ಯ ಪ್ರವಾಸ

    ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕೋವಿಡ್ ಟೆಸ್ಟ್ (COVID 19 Test) ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೀಗ ಅದನ್ನೂ ಬಂದ್ ಮಾಡಲಾಗಿದೆ. ಇತ್ತ ವ್ಯಾಕ್ಸಿನ್ ಸಂಗ್ರಹಿಸುವ ಪ್ರಿಜ್‍ಗಳು ಬೇಕಾಬಿಟ್ಟಿಯಾಗಿ ಬಿದ್ದಿದೆ. ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು 12 ಬೆಡ್ ಗಳ ಚಿಕಿತ್ಸಾ ಕೊಠಡಿ, ಕ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ 480 ಬೆಡ್‍ಗಳ ಆಕ್ಸಿಜನ್-ವೆಂಟಿಲೇಟರ್ ವ್ಯವಸ್ಥೆಯನ್ನು ಮಾತ್ರ ಮಾಡಿಕೊಳ್ಳಲಾಗಿದೆ.

    ಜಿಲ್ಲೆಯಲ್ಲಿ ಈಗಾಗಲೇ ಪ್ರವಾಸೋದ್ಯಮ ಇಲಾಖೆ ಮಾಹಿತಿ ಪ್ರಕಾರ ಅಕ್ಟೋಬರ್ ತಿಂಗಳ ಕೊನೆಯಲ್ಲಿ 4,666 ವಿದೇಶಿ ಪ್ರಜೆಗಳು ಭೇಟಿ ನೀಡಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಹತ್ತು ಪಟ್ಟು ವಿದೇಶಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತು ಕೊರೊನಾ ನಿಯಮ ಜಾರಿಗೆ ಮಾಡದಿದ್ರೆ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಆರ್ಭಟ ಪ್ರಾರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಟೆಸ್ಟಿಂಗ್ ಎಡವಟ್ಟು- ಕೋವಿಡ್ ಟೆಸ್ಟ್ ಮಾಡಿಸದಿದ್ರೂ ಬಂತು ಮೆಸೇಜ್

    ಮತ್ತೆ ಟೆಸ್ಟಿಂಗ್ ಎಡವಟ್ಟು- ಕೋವಿಡ್ ಟೆಸ್ಟ್ ಮಾಡಿಸದಿದ್ರೂ ಬಂತು ಮೆಸೇಜ್

    ಬೆಂಗಳೂರು: ರಾಜ್ಯದಲ್ಲಿ 4ನೇ ಅಲೆ ಆತಂಕದ ಹೊತ್ತಲ್ಲಿ ಬಿಬಿಎಂಪಿ (BBMP) ಹೊಸ ಆಟ ಶುರು ಮಾಡಿದ್ಯಾ ಅನ್ನೋ ಅನುಮಾನ ಹೆಚ್ಚಾಗಿದೆ. ಬಿಎಫ್.7 ಕೊರೊನಾ ದೇಶಕ್ಕೆ ಕಾಲಿಡಬಹುದು ಅನ್ನೋ ಆತಂಕದ ಬೆನ್ನಲ್ಲೇ ಇದೀಗ ಬಿಬಿಎಂಪಿ ಜನರಿಗೆ ಕಿರಿಕಿರಿ ಮಾಡೋಕೆ ಹೊರಟಂತೆ ಕಾಣುತ್ತಿದೆ. ಕೊರೊನಾ ಟೆಸ್ಟ್ (Corona Test) ಮಾಡದಿದ್ದರೂ ಮೊಬೈಲ್‍ಗೆ ಮೆಸೇಜ್‍ಗಳು ಬರೋಕೆ ಶುರುವಾಗಿದೆ. ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೊಬೈಲ್‍ಗೆ ಮೆಸೇಜ್‍ಗಳು ಬರುತ್ತಿರುವುದು ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರಿನ ಪ್ರಜ್ವಲ್ ಎಂಬವರ ಮೊಬೈಲ್‍ಗೆ ಮೆಸೇಜ್‍ವೊಂದು ಬಂದಿದ್ದು, ಕೊರೊನಾ ಟೆಸ್ಟ್ ರಿಪೋರ್ಟ್ ಬರುವವರೆಗೂ ಹೋಂ ಐಸೋಲೇಟ್ ಆಗುವಂತೆ ಸೂಚಿಸಲಾಗಿದೆ. ಆದರೆ ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೆಸೇಜ್ ಬಂದಿದ್ದೇಗೆ…? ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಪ್ರಜ್ವಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಪ್ರತಿನಿಧಿ: ನಿಮಗೇನಾದರೂ ತೊಂದರೆ ಇದ್ಯಾ…?
    ದೂರುದಾರ: ನಾನು ಆಫೀಸ್‍ನಲ್ಲಿದ್ದೇ ಒಂದು ಮೆಸೇಜ್ ಬಂತು. ಅದು ಟೆಸ್ಟ್‍ಗೆ ಕೊಟ್ಟಿರೋ ಮೆಸೇಜ್. ನಾನು ಯಾವುದೇ ಟೆಸ್ಟ್ ಗೆ ಕೊಟ್ಟಿಲ್ಲ. ನಾನು ಆಸ್ಪತ್ರೆಗೆ ಹೋಗಿಲ್ಲ. ಕೋವಿಡ್ ಮೆಸೇಜ್ ಬಂದಿದೆ. ನನಗೆ ಪಾಸಿಟಿವ್ ಅಂತ ಬಂದಿದೆ. ನನ್ನ ಮನೆ ಲಾಕ್‍ಡೌನ್ ಮಾಡಿದ್ರೆ ಇತರರಿಗೂ ತೊಂದರೆ ಆಗುತ್ತೆ. ನಾನು ಆರೋಗ್ಯವಾಗಿದ್ದರೂ, ಮೆಸೇಜ್ ಕ್ರಿಯೆಟ್ ಮಾಡಿ ಸರ್ಕಾರದವರು ದುಡ್ಡು ಮಾಡುತ್ತಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿ

    ಪ್ರತಿನಿಧಿ: ನೀವು ಟೆಸ್ಟ್ ಗೆ ಎಲ್ಲಿಯೂ ಹೋಗಿಯೇ ಇಲ್ವಾ…?
    ದೂರುದಾರ: ಕೋವಿಡ್ (COVID 19) ಸಂದರ್ಭದಲ್ಲಿ ಅಂದರೆ 8 ತಿಂಗಳ ಹಿಂದೆ ಮಾಡಿಸಿದ್ದು, ಅದು ಬಿಟ್ಟರೆ ಮತ್ತೆ ಮಾಡಿಸಿಲ್ಲ. ಹಿಂದೆ ನಾನು ಟೆಸ್ಟ್ ಗೆ ಹೋಗಿದ್ದ ವೇಳೆ ನಂಬರ್ ಇಟ್ಟುಕೊಂಡು ಈಗ ಮೆಸೇಜ್ ಕಳುಹಿಸುವ ಮೂಲಕ ಸ್ಕ್ಯಾಮ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಪ್ರತಿನಿಧಿ: ಓಕೆ…ಓಕೆ…

    ಪ್ರಜ್ವಲ್‍ಗೆ ಟೆಸ್ಟ್ ಓಟಿಪಿ (Corona Test OTP) ಕೂಡ ಬಂದಿಲ್ಲ. ಆದರೂ ಹೋಂ ಐಸೋಲೇಟ್ ಆಗಿ ಅಂತ ಮೆಸೇಜ್ ಬಂದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ದೂರು ಕೊಡೋಕೆ ಕೂಡ ಪ್ರಜ್ವಲ್ ಮುಂದಾಗಿದ್ದಾರೆ. ಅಲ್ಲದೆ ಈ ಕುರಿತು ಸುಳಿವು ಕೂಡ ನೀಡಿದ್ದಾರೆ. ಒಟ್ಟಿನಲ್ಲಿ ಟೆಸ್ಟಿಂಗ್ ಟಾರ್ಗೆಟ್ ರೀಚ್ ಆಗಲು ಬಿಬಿಎಂಪಿ ಸಿಬ್ಬಂದಿ ಕಳ್ಳಾಟ ಆಡುತ್ತಿದ್ದಾರಾ…? ಅನ್ನೋ ಅನುಮಾನ ವ್ಯಕ್ತವಾಗಿದೆ. ಈ ರೀತಿಯಾಗಿದ್ರೆ ಜನರ ಜೀವ ಜೊತೆ ಚೆಲ್ಲಾಟವಾಡುತ್ತಿರೋರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಪೆಷಲ್ ಮಾಸ್ಕ್ ರಿಲೀಸ್ – ಬಾರ್, ಪಬ್‌ಗಳಲ್ಲಿ ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡ್ಬೋದು: ಆರ್.ಅಶೋಕ್

    ಸ್ಪೆಷಲ್ ಮಾಸ್ಕ್ ರಿಲೀಸ್ – ಬಾರ್, ಪಬ್‌ಗಳಲ್ಲಿ ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡ್ಬೋದು: ಆರ್.ಅಶೋಕ್

    ಬೆಳಗಾವಿ: ಬಾರ್ ಹಾಗೂ ಪಬ್‌ಗಳಲ್ಲಿ (Bar And Pub) ಕುಳಿತು ಡ್ರಿಂಕ್ಸ್ (Drinks) ಮಾಡಲು ಮಾರುಕಟ್ಟೆಯಲ್ಲಿ ಈಗಾಗಲೇ ವಿಶೇಷ ಮಾಸ್ಕ್‌ಗಳನ್ನು (Speical Mask) ಬಿಡುಗಡೆ ಮಾಡಲಾಗಿದೆ. ಮಾಲೀಕರು ಅಥವಾ ನಿರ್ವಾಹಕರು ಆ ಮಾಸ್ಕ್‌ಗಳನ್ನು ಪಡೆದು ಬರುವ ಗ್ರಾಹಕರಿಗೆ ನೀಡಬೇಕು. ಇದರಿಂದ ಅವರು ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು ಎಂದು ಸಚಿವ ಆರ್.ಅಶೋಕ್ (R Ashoka) ತಿಳಿಸಿದ್ದಾರೆ.

    ನಗರದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಪಬ್, ಬಾರ್ ಮಾಲೀಕರ ವಿರೋಧದ ಕುರಿತು ಮಾತನಾಡಿದ ಸಚಿವರು, ಬಾರ್, ಪಬ್‌ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಸ್ಪೆಷಲ್ ಮಾಸ್ಕ್ ರಿಲೀಸ್ ಮಾಡಿದ್ದಾರೆ. ಬರುವ ಗ್ರಾಹಕರಿಗೆ ಆ ಮಾಸ್ಕ್ಗಳನ್ನು ನೀಡಬೇಕು. ಇದರಿಂದ ಯಾರಿಗೂ ತೊಂದರೆಯಾಗೋದಿಲ್ಲ. ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 74 ದಿನದ ಸಿಜೆಐ ಅವಧಿಯಲ್ಲಿ ಯುಯು ಲಲಿತ್‌ಗಿದ್ರು 40+ ಸಿಬ್ಬಂದಿ

    ಜನರ ಪ್ರಾಣ ಉಳಿದರೆ ಎಲ್ಲಾ ಸಿಗುತ್ತದೆ. ಜನರ ಪ್ರಾಣಕ್ಕೇ ಕಂಟಕ ಬಂದ್ರೆ ಏನು ಸಿಗುತ್ತದೆ? ನಿಮಗ್ಯಾರಿಗೋ ಬಾರ್ ವ್ಯಾಪಾರ ಆಗಬೇಕು ಅಂತಾ ಜನರ ಪ್ರಾಣ ತೆಗೆಯೋದು ಒಳ್ಳೆಯದಲ್ಲ. ನಾನು ಅವರಲ್ಲಿ ವಿನಂತಿ ಮಾಡ್ತೀನಿ, ದಯಮಾಡಿ ಸಹಕಾರ ನೀಡಬೇಕು ಎಂದು ಕೋರಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ವಿದೇಶಿಯರಿಗೆ ಟಫ್ ರೂಲ್ಸ್ – ಫೈಜರ್ ಲಸಿಕೆ ನೀಡಲು ನಿರ್ಧಾರ

    ಕೋವಿಡ್ (Covid 19) ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿಯ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಕೋವಿಡ್ ಯೂನಿಟ್ಸ್, ಆಕ್ಸಿಜನ್ ಪ್ಲಾಂಟ್, ಐಸಿಯು (ICU) ಘಟಕ ಸೇರಿದಂತೆ ಎಲ್ಲ ಸೌಲಭ್ಯಗಳ ಪರಿಶೀಲನೆ ನಡೆಸಲಾಗಿದೆ. ಅಂತೆಯೇ ರಾಜ್ಯದ ಎಲ್ಲೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಬೇಕು. ಎಲ್ಲಿಯೂ ಸಹ ಆಕ್ಸಿಜನ್, ಅಂಬುಲೆನ್ಸ್ ಹಾಗೂ ಔಷಧಗಳ ಕೊರತೆ ಆಗಬಾರದು ಎಂದು ಸಲಹೆ ನೀಡಿದ್ದಾರೆ.

    ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಮಾತನಾಡಿ, ಏನೋ ಮಾಡಲು ಹೋಗಿ, ಇನ್ನೇನೋ ಆಗೋದು ಬೇಡ. ಎಲ್ಲರೂ ಜಾಗ್ರತೆಯಿಂದ ಇದ್ದು, ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]