Tag: Corona Virus

  • ಹೈ ರಿಸ್ಕ್ ರೋಗಲಕ್ಷಣ ಇರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ: ದಿನೇಶ್ ಗುಂಡೂರಾವ್

    ಹೈ ರಿಸ್ಕ್ ರೋಗಲಕ್ಷಣ ಇರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ: ದಿನೇಶ್ ಗುಂಡೂರಾವ್

    ಬೆಂಗಳೂರು: ಕೋವಿಡ್ (Covid-19) ಪಾಸಿಟಿವ್ ಇರುವವರ ಸಂಪರ್ಕದಲ್ಲಿದ್ದ ಹೈ ರಿಸ್ಕ್ ರೋಗಲಕ್ಷಣ ಹೊಂದಿರುವವರಿಗೆ, ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಲು ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಬೆಂಗಳೂರಿನ (Bengaluru) ವಿಧಾನಸೌಧದಲ್ಲಿ ಇಂದು (ಬುಧವಾರ) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ನೇತೃತ್ವದಲ್ಲಿ ಎರಡನೇ ಬಾರಿ ಕೋವಿಡ್ ಸಚಿವ ಸಂಪುಟ ಉಪ ಸಮಿತಿ ಸಭೆ ಸೇರಿತ್ತು. ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ರವಿ, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ರಾಜ್ಯದ 3 ಕೋಟಿ ಜನರಿಗೆ ಗ್ಯಾರಂಟಿ ಯೋಜನೆ.. ಲೋಕಸಭೆ ಚುನಾವಣೆ ಗೆಲ್ಲಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು: ಡಿಕೆಶಿ

    ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲಿಯೇ ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಟೆಸ್ಟ್‌ಗಳನ್ನ ನಡೆಸಲಾಗ್ತಿದೆ. ಕೋವಿಡ್ ಇಳಿಮುಖ ಕಾಣುವ ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮುಂದುವರಿಸಲಾಗುವುದು. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚು ಬರುತ್ತೆ ಎನ್ನುವ ಕಾರಣಕ್ಕೆ ಟೆಸ್ಟಿಂಗ್ ಕಡಿಮೆ ಮಾಡಿ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನ ಮುಚ್ವಿಡುವ ಕೆಲಸವನ್ನ ಸರ್ಕಾರ ಮಾಡುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿಯೇ ಟೆಸ್ಟಿಂಗ್ ನಡೆಸಿ, ಅಗತ್ಯ ಚಿಕಿತ್ಸೆ ಕೊಡುವುದು ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಪ್ರಸ್ತುತ ಐಸಿಯುನಲ್ಲಿ 19 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇವರ ಮೇಲೆ ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ. ಅಲ್ಲದೇ ಕೋವಿಡ್ ಪಾಸಿಟಿವ್ ಬಂದವರ ಸಂಪರ್ಕದಲ್ಲಿದ್ದವರಲ್ಲಿ ಹೈ ರಿಸ್ಕ್ ರೋಗಲಕ್ಷಣ ಕಂಡುಬಂದರೆ ಕಡ್ಡಾಯವಾಗಿ ಕೋವಿಡ್ ಟೆಸ್ಟಿಂಗ್ ಮಾಡುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸ್ತಬ್ಧಚಿತ್ರ ವಿಷಯದಲ್ಲಿ ಕೇಂದ್ರಕ್ಕೆ ದುರುದ್ದೇಶ ಇಲ್ಲ: ವಿಜಯೇಂದ್ರ

    ಕೋವಿಡ್ ಪಾಸಿಟಿವ್ ಬಂದವರಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಡೆತ್ ಆಡಿಟ್ ಮಾಡಲು ಸೂಚಿಸಲಾಗಿತ್ತು. 26 ಪ್ರಕರಣಗಳಲ್ಲಿ 21 ಜನರ ಡೆತ್ ಆಡಿಟ್ ನಡೆಸಲಾಗಿದ್ದು, ನೈಜವಾಗಿ ಕೋವಿಡ್ ಕಾರಣದಿಂದ 2 ಮಾತ್ರ ಸಾವಿಗೀಡಾಗಿದ್ದಾರೆ. ಉಳಿದವರು ಇತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಆದರೆ ಇವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಜನರು ಆತಂಕಕ್ಕೆ ಈಡಾಗುವ ಅಗತ್ಯವಿಲ್ಲ. ಎಲ್ಲ ರೀತಿಯ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

  • ರಾಜ್ಯದಲ್ಲಿ ಇಂದು 298 ಮಂದಿಗೆ ಕೊರೊನಾ ಪಾಸಿಟಿವ್- ನಾಲ್ವರು ಸಾವು

    ರಾಜ್ಯದಲ್ಲಿ ಇಂದು 298 ಮಂದಿಗೆ ಕೊರೊನಾ ಪಾಸಿಟಿವ್- ನಾಲ್ವರು ಸಾವು

    ಬೆಂಗಳೂರು: ರಾಜ್ಯದಲ್ಲಿ ಇಂದು 298 ಮಂದಿಯಲ್ಲಿ ಕೊರೊನಾ (Corona Virus) ಪಾಸಿಟಿವ್ ಕಾಣಿಸಿಕೊಂಡಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.

    ಬೆಂಗಳೂರು (Bengaluru) ನಗರದಲ್ಲಿ ಇಬ್ಬರು ಹಾಗೂ ಧಾರವಾಡ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಕೊರೊನಾ ವೈರಸ್‍ನಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್‍ನಲ್ಲಿ ವರದಿಯಾಗಿದೆ.

    ಇಂದು ಒಟ್ಟು 7,791 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 298 ಮಂದಿಯಲ್ಲಿ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಬೆಂಗಳೂರು ನಗರದಲ್ಲಿ 172 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇಂದು 229 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಅರ್ಜುನ ಪ್ರಶಸ್ತಿ ಪುರಸ್ಕೃತ ಪೊಲೀಸ್‌ ಅಧಿಕಾರಿ ಕೊಲೆ – 48 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪಂಜಾಬ್‌ ಪೊಲೀಸ್‌

    ರಾಜ್ಯದಲ್ಲಿ ಒಟ್ಟು 1,240 ಸಕ್ರೀಯ ಕೇಸ್‍ಗಳಿದ್ದು, 1,168 ಮಂದಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. 72 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 9 ಮಂದಿ ಐಸಿಯುನಲ್ಲಿದ್ದರೆ, ಮೂವರು ಐಸಿಯು ಜೊತೆ ವೆಂಟಿಲೇಟರ್ ಸಪೋರ್ಟ್‍ನಲ್ಲಿದ್ದಾರೆ. ಇನ್ನು 51 ಮಂದಿ ಜನರಲ್ ಬೆಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೆಂಗಳೂರು ಬಿಟ್ಟರೆ ಹಾಸನದಲ್ಲಿ ಅತಿ ಹೆಚ್ಚು 19 ಸಕ್ರೀಯ ಪ್ರಕರಣ ದಾಖಲಾಗಿವೆ. ಮೈಸೂರು 18, ದಕ್ಷಿಣ ಕನ್ನಡ ಹಾಗೂ ಮಂಡ್ಯದಲ್ಲಿ 11 ಸಕ್ರೀಯ ಪ್ರಕರಣಗಳಿವೆ.

  • ರಾಜ್ಯದಲ್ಲಿ 173 ಮಂದಿಗೆ ಕೊರೊನಾ – ಇಬ್ಬರು ಬಲಿ

    ರಾಜ್ಯದಲ್ಲಿ 173 ಮಂದಿಗೆ ಕೊರೊನಾ – ಇಬ್ಬರು ಬಲಿ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು ಇಂದು 173 ಮಂದಿಗೆ ಸೋಂಕು ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

    ರಾಜ್ಯದಲ್ಲಿ ಅತಿ ಹೆಚ್ಚು ಬೆಂಗಳೂರಿನಲ್ಲಿ 82 ಮಂದಿಗೆ ಕೋವಿಡ್‌ ಬಂದಿದ್ದರೆ, ಮೈಸೂರಿನಲ್ಲಿ 16, ದಕ್ಷಿಣ ಕನ್ನಡದಲ್ಲಿ 13 ಮಂದಿಗೆ ಸೋಂಕು ಬಂದಿದೆ. ಇದನ್ನೂ ಓದಿ: Ram Mandir- ರಾಮಮಂದಿರ ಉದ್ಘಾಟನೆಯ ಕೇಂದ್ರಬಿಂದು ಗರ್ಭಗುಡಿ ವಿಶೇಷತೆ ನಿಮಗೆಷ್ಟು ಗೊತ್ತು?

     

    ಸದ್ಯ 702 ಸಕ್ರಿಯ ಪ್ರಕರಣಗಳಿದ್ದು ಮನೆಯಲ್ಲಿ 649 ಮಂದಿ, ಆಸ್ಪತ್ರೆಯಲ್ಲಿ 53 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 12 ಮಂದಿ ಐಸಿಯುನಲ್ಲಿದ್ದರೆ 41 ಮಂದಿ ಜನರಲ್‌ ಬೆಡ್‌ನಲ್ಲಿ ಇದ್ದಾರೆ.

    ಒಟ್ಟು 8,349 ಕೊರೊನಾ ಟೆಸ್ಟ್‌ ಮಾಡಲಾಗಿದೆ. ಇಂದು 37 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ.

  • ರಾಜ್ಯದಲ್ಲಿ ಹೆಚ್ಚಾದ ಕೊರೋನಾ ಸೋಂಕು- ಮಕ್ಕಳಲ್ಲಿ ಹೆಚ್ಚಾದ ಶೀತ, ನೆಗಡಿ, ಕೆಮ್ಮು

    ರಾಜ್ಯದಲ್ಲಿ ಹೆಚ್ಚಾದ ಕೊರೋನಾ ಸೋಂಕು- ಮಕ್ಕಳಲ್ಲಿ ಹೆಚ್ಚಾದ ಶೀತ, ನೆಗಡಿ, ಕೆಮ್ಮು

    – ಕೇರಳದಿಂದ ಬರೋ ವಿದ್ಯಾರ್ಥಿಗಳಿಗೆ ಟೆಸ್ಟಿಂಗ್ ಕಡ್ಡಾಯ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ (Corona Virus) ಆತಂಕ ಮತ್ತೆ ಶುರುವಾಗಿದ್ದು, ಗಡಿಜಿಲ್ಲೆಗಳಿಗೆ ಕೇರಳದ ಭಯ ಕಾಡುತ್ತಿದೆ. ನರ್ಸಿಂಗ್ -ಮೆಡಿಕಲ್ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಖಡಕ್ ಸೂಚನೆ ಕೊಟ್ಟಿದೆ. ಅಯ್ಯಪ್ಪ ವೃತಾಧಾರಿಗಳ ಮೇಲೆ ವೈದ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ. ಮಕ್ಕಳಲ್ಲೂ ಶೀತ, ಜ್ವರ, ಕೆಮ್ಮು ಕಾಣಿಸಿಕೊಳ್ತಿದ್ದು, ಶಾಲೆಗೆ ಗೈರಾಗ್ತಿದ್ದಾರೆ.

    ಸಾಂಕ್ರಾಮಿಕ ರೋಗಗಳು ಬಂದ್ರೆ ಹತ್ತು ವರ್ಷಗಳ ಕಾಲ ಕಾಟ ಕೊಡುತ್ತದೆ. ಜನರನ್ನ ಕಾಡಿ ಬಿಡುತ್ತದೆ ಎಂದು ತಜ್ಞರು ಅಂದೇ ಹೇಳಿದ್ರು. ಇದು ಕೊರೋನಾ ವಿಚಾರದಲ್ಲಿ ಸತ್ಯವಾಗುವ ಲಕ್ಷಣಗಳು ಕಾಣುತ್ತಿದೆ. ಕರಾವಳಿ ಜಿಲ್ಲೆ ಉಡುಪಿಗೆ ಪಕ್ಕದ ರಾಜ್ಯ ಕೇರಳ ಕಾಡುತ್ತಿದೆ. ಕೇರಳದಿಂದ ಸಾವಿರಾರು ಜನ ಮೆಡಿಕಲ್, ನಸಿರ್ಂಗ್ ಓದಲು ಉಡುಪಿಗೆ ಬರುತ್ತಾರೆ. ಕ್ರಿಸ್ಮಸ್ ರಜೆ, ಹೊಸ ವರ್ಷದ ರಜೆ ಇರುವುದರಿಂದ ಎಲ್ಲರೂ ಊರಿಗೆ ತೆರಳಿದ್ದಾರೆ. ಕೇರಳದಲ್ಲಿ ಸೋಂಕು ಹೆಚ್ಚಿರುವ ಕಾರಣ ವಾಪಸ್ ಬರುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡಬೇಕಾಗಿದೆ. ಹೇಳಿಕೇಳಿ ಉಡುಪಿ ಪ್ರವಾಸಿ ಜಿಲ್ಲೆ. ದೇವಸ್ಥಾನ, ಬೀಚ್‍ಗೆ ಪ್ರತಿದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ರಜಾದಿನಗಳು ಬಂದ್ರೆ ಕೇಳೋದೆ ಬೇಡ. ಕೃಷ್ಣಮಠಕ್ಕೆ ಪ್ರತಿದಿನ 20ರಿಂದ 30,000 ಜನ ಬರುತ್ತಿದ್ದಾರೆ. ದೇವರ ದರ್ಶನ, ಉತ್ಸವ, ಅನ್ನಪ್ರಸಾದದಲ್ಲಿ ಜನ ಜಂಗಳಿಯೇ ಆಗುತ್ತದೆ. ಅನಾರೋಗ್ಯ ಪೀಡಿತರು ವಯಸ್ಕರು ಕೊರೋನಾದ ಲಕ್ಷಣ ಕಂಡು ಬಂದವರು ಬಹಳಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ವೈದ್ಯಾಧಿಕಾರಿಗಳು ಸೂಚನೆಗಳನ್ನು ಕೊಡುತ್ತಿದ್ದಾರೆ.

    ಮಕ್ಕಳಿಗೆ ಹೆಚ್ಚಾದ ಶೀತ, ನೆಗಡಿ, ಕೆಮ್ಮು: ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಪಾಸಿಟಿವ್ ಕೇಸ್‍ಗಳ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಏರಿಕೆಯಾಗ್ತಿದೆ.. ಈ ನಡುವೆ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮು ಕಾಣಿಸಿಕೊಳ್ಳುತ್ತಿರುವ ಹಿನ್ನಲೆ ಯಳಂದೂರಿನ ಬಳೆ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 15ಕ್ಕೂ ಹೆಚ್ಚು ಮಕ್ಕಳು ಗೈರಾಗಿದ್ದಾರೆ. 3 ದಿನದಿಂದ ಮಕ್ಕಳು ಶಾಲೆಗೆ ಬಾರದೇ ಇದ್ದರಿಂದ ಮನೆಗೆ ತೆರಳಿ ವಿಚಾರಿಸಿದಾಗ ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿರೋದು ಬೆಳಕಿಗೆ ಬಂದಿದೆ. ಈಗಾಗ್ಲೆ ತಜ್ಞ ವೈದ್ಯರು ಹಾಗೂ ಆರೋಗ್ಯ ಇಲಾಖೆ ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನ ಶಾಲೆಗೆ ಕಳಿಸದಿರಿ ಎಂದು ಪೋಷಕರಿಗೆ ಕಿವಿ ಮಾತನ್ನ ಹೇಳಿದ್ದು, ಜೊತೆಗೆ ಶಿಕ್ಷಣ ಇಲಾಖೆ ಸುತ್ತೋಲೆ ಸಹ ಹೊರಡಿಸಿದೆ.‌

    ಧಾರವಾಡದಲ್ಲಿ ಇಬ್ಬರಿಗೆ ಕೋವಿಡ್ ಸೋಂಕು: ಧಾರವಾಡದ (Dharwad) ಇಬ್ಬರಲ್ಲಿ ಕೋವಿಡ್ ವೈರಸ್ ಪತ್ತೆಯಾಗಿದೆ. ಓರ್ವ ವಿದ್ಯಾರ್ಥಿ ಹಾಗೂ ವೃದ್ಧನಲ್ಲಿ ಈ ಸೋಂಕು ದೃಢವಾಗಿದೆ. ಯಾದಗಿರಿ (Yadagiri) ಮೂಲದ ವಿದ್ಯಾರ್ಥಿ ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ದಾಖಲು ಮಾಡಲಾಗಿದೆ. ಹುಬ್ಬಳ್ಳಿ (Hubballi) ಕಿಮ್ಸ್ ನಲ್ಲಿ ಸೋಂಕಿತ ವೃದ್ಧನಿಗೆ ಚಿಕಿತ್ಸೆ ನೀಡಲಾಗುತಿದ್ದು, ಆತ ಹಾವೇರಿ (Haveri) ಜಿಲ್ಲೆಯವರು ಎನ್ನಲಾಗಿದೆ. ಅನಾರೋಗ್ಯದ ಹಿನ್ನೆಲೆ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದ ವೃದ್ಧನಿಗೆ ತಪಾಸಣೆ ವೇಳೆ ಕೊರೊನಾ ಪತ್ತೆಯಾಗಿದ್ದು, ಸದ್ಯ ಜೆಎನ್ 1 ತಪಾಸಣೆಗಾಗಿ ಮಾದರಿ ರವಾನೆ ಮಾಡಲಾಗಿದೆ.

    ಹಾಸನದಲ್ಲೂ (Hassan) ಮಹಾಮಾರಿ ಕಾಟ ಜೋರಾಗಿದೆ. ಈವರೆಗೆ ಜಿಲ್ಲೆಯಲ್ಲಿ 119 ಟೆಸ್ಟಿಂಗ್ ಮಾಡಿಲಾಗಿದೆ ಎಂದು ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್‍ಕುಮಾರ್ ಹೇಳಿದ್ರು. ಸೋಂಕು ಪತ್ತೆಯಾದವರ ಸ್ಯಾಂಪಲ್ ಅನ್ನ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಮಂದಿ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದು, ರೋಗದ ಗುಣಲಕ್ಷಣ ಇರುವವರ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ 9 ಸಕ್ರಿಯ ಪ್ರಕರಣಗಳಿದ್ದು, ಎಲ್ಲರೂ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಕೊರೋನಾ ಹಿನ್ನೆಲೆ ವೃದ್ಧರು, ಮಕ್ಕಳು, ಗರ್ಭಿಣಿಯರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ರು.

  • ಪಿಜಿ ಅಸೋಸಿಯೇಷನ್‍ಗಳಿಂದ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

    ಪಿಜಿ ಅಸೋಸಿಯೇಷನ್‍ಗಳಿಂದ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು: ಕೊರೋನಾ (Corona Virus) ಹೆಸರು ಕೇಳಿದ್ರೆ ಸಾಕು ಜನ ಬೆಚ್ಚಿಬೀಳ್ತಾರೆ. ಯಾಕೆಂದ್ರೆ ಅಲೆಗಳ ಮೇಲೆ ಅಲೆಗಳು ಅಂತಾ ಬಂದು ಜನರು ಜೊತೆ ಉದ್ಯಮಗಳು ನೆಲ ಕಚ್ಚಿ ಹೋಗಿದ್ವು. ಹೀಗಾಗಿ ಈ ಬಾರಿ ವೇಷ ಬದಲಿಸಿಕೊಂಡು ಬಂದಿರುವ ಹೊಸ ತಳಿ ಬಗ್ಗೆ ಆತಂಕ ಹೆಚ್ಚು ಮಾಡಿದೆ. ಆರೋಗ್ಯ ಇಲಾಖೆ ರೂಲ್ಸ್ ತರಲಿ ಬಿಡಲಿ ನಮಗೆ ನಾವೇ ರೂಲ್ಸ್ ಮಾಡ್ಕೋತೀವಿ ಅಂತ ಪಿಜಿ ಓನರ್ಸ್ (PG Owners) ಡಿಸೈಡ್ ಮಾಡಿದ್ದಾರೆ.

    ಕೊರೊನಾ ವೈರಸ್‍ನಿಂದ ಪಿಜಿ ಉದ್ಯಮ ಮಾತ್ರ ಸಂಪೂರ್ಣವಾಗಿ ನೆಲಕಚ್ಚಿ ಹೋಗಿತ್ತು. ಕಳೆದ ಕೋವಿಡ್ ಅಟ್ಟಹಾಸಕ್ಕೆ ನಡುಗಿದ್ದ ಪಿಜಿ ಅಸೋಸಿಯೇಷನ್ ಇದೀಗ ಮುಂಜಾಗ್ರತವಾಗಿ ಸಭೆ ನಡೆಸಿ ಹೊರ ರಾಜ್ಯದಿಂದ ಬರುವಂತವರಿಗೆ ಆರ್ಟಿಪಿಸಿಆರ್ ಕಡ್ಡಾಯಗೊಳಿಸಿ, ಸುರಕ್ಷತಾ ಕ್ರಮಗಳ ಮೇಲೆ ಕಣ್ಣಿಟ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದೇವೆ ಎನ್ನುತ್ತಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಇಬ್ಬರು ಬಲಿ – 74 ಪಾಸಿಟಿವ್‌, ಬೆಂಗಳೂರಿನಲ್ಲೇ 57 ಮಂದಿಗೆ ಸೋಂಕು

    ಪಿಜಿ ಅಸೋಸಿಯೇಷನ್‍ನ ಕ್ರಮಗಳೇನು..?: ಕ್ರಿಸ್ಮಸ್ (Christmas) ರಜೆ, ಹೊಸ ವರ್ಷಾಚರಣೆ ಹಿನ್ನಲೆ ಪಿಜಿಯಿಂದ ಊರಿಗೆ ತೆರಳಿದ್ದಾರೆ. ಪಿಜಿಗೆ ಹಿಂದಿರುಗುವಾಗ ಆರೋಗ್ಯದಲ್ಲಿ ಏರುಪೇರಿದ್ರೆ ಕೂಡಲೇ ಆರ್ ಟಿಪಿಸಿಆರ್ ಟೆಸ್ಟ್ (RTPCR Test) ಮಾಡಿಸಬೇಕು. ಆರೋಗ್ಯ ಸಮಸ್ಯೆ ಇದ್ದವರು ಕಡ್ಡಾಯ ಮಾಸ್ಕ್ ಧರಿಸೋದು. ಎಲ್ಲರೂ ಕೋವಿಡ್ ಲಸಿಕೆ ಪಡೆದಿದ್ದಾರಾ ಎಂದು ತಪಾಸಣೆ ಮಾಡುವುದು. 50 ವರ್ಷ ಮೇಲ್ಪಟ್ಟವರಿದ್ರೇ ಬಿಪಿ, ಶುಗರ್ ಇದ್ದವರು ಮಾಸ್ಕ್ ಧರಿಸಬೇಕು.

    ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಪಿಜಿಗಳಿದ್ದು, ಲಕ್ಷಾಂತರ ಮಂದಿ ಪಿಜಿಯಲ್ಲಿರುವುದರಿಂದ ಪಿಜಿ ಮಾಲೀಕರೇ ಮುಂಜಾಗ್ರತೆಗೆ ಮುಂದಾಗಿದ್ದಾರೆ. ಯಾಕಂದ್ರೆ ಕಳೆದ ಬಾರಿಯ ಕೋವಿಡ್‍ಗೆ ಸಾಕಷ್ಟು ಮಂದಿ ದಿಢೀರ್ ಅಂತಾ ಪಿಜಿ ಖಾಲಿ ಮಾಡಿಕೊಂಡು ಹೋಗಿದ್ರು. ಅದೆಷ್ಟೋ ಜನ ಲಗೇಜ್ ಬಿಟ್ಟು ಹೋಗಿದ್ರು. ಅದೆಷ್ಟೋ ಪಿಜಿ ಮಾಲೀಕರು ವರ್ಷದ ಕಾಲ ಬಿಲ್ಡಿಂಗ್‍ಗಳು ಖಾಲಿ ಖಾಲಿಯಾಗಿದ್ದವು. ಹೀಗಾಗಿ ಈಗಿರುವಂತವರನ್ನು ಜಾಗೃತಿಯಾಗಿ ಉಳಿಸಿಕೊಂಡು ಹೋದ್ರೆ ನಮ್ಮ ಉದ್ಯಮಕ್ಕೂ ತೊಂದರೆ ಆಗುವುದಿಲ್ಲ. ಪಿಜಿಯಲ್ಲಿ ವಾಸಿಸುವಂತವರಿಗೂ ತೊಂದರೆ ಆಗುವುದಿಲ್ಲ ಸುರಕ್ಷತೆಯಿಂದ ಇರಬಹುದು ಅಂತಾ ಒಂದಿಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ ಎನ್ನುತ್ತಿದ್ದಾರೆ.

    ಕಳೆದ ಬಾರಿ ಕೋವಿಡ್ ಅಲೆಗೆ ತತ್ತರಿಸಿ ಹೋಗಿದ್ದ ಪಿಜಿ ಅಸೋಸಿಯೇಷನ್, ಸರ್ಕಾರದ ಗೈಡ್‍ಲೈನ್‍ಗೂ ಮುನ್ನವೇ ಸಭೆ ನಡೆಸಿ ಒಂದಿಷ್ಟು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.. ಅಲ್ಲದೇ ವೇಷ ಬದಲಿಸಿಕೊಂಡು ಬಂದಿರುವ ಈ ವೈರಸ್‍ಗೆ ಪಿಜಿ ಅಸೋಸಿಯೇಷನ್ ಮುಂಜಾಗ್ರತಾಗೊಂಡಿದೆ.

  • ಕೋವಿಡ್ ಬಂದವರಿಗೆ 7 ದಿನ ಕಡ್ಡಾಯ ರಜೆ, ಹೋಮ್ ಐಸೊಲೇಷನ್

    ಕೋವಿಡ್ ಬಂದವರಿಗೆ 7 ದಿನ ಕಡ್ಡಾಯ ರಜೆ, ಹೋಮ್ ಐಸೊಲೇಷನ್

    – ಸೋಂಕಿತರ ಮನೆಗಳಿಗೆ ವೈದ್ಯರಿಂದ ಭೇಟಿ

    ಬೆಂಗಳೂರು: ಕೋವಿಡ್ (Covid) ಸೋಂಕಿತರ ಮನೆಗಳಿಗೆ ಸರ್ಕಾರಿ ವೈದ್ಯರು ಭೇಟಿ ನೀಡಿ ಹೆಚ್ಚಿನ ನಿಗಾ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ನಿಟ್ಟಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನ ಸೌಧದಲ್ಲಿ ಇಂದು ಸಂಪುಟ ಉಪಸಮಿತಿ ಸಭೆ ನಡೆಯಿತು. ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ, ಆರೋಗ್ಯ ಇಲಾಖೆ ಆಯುಕ್ತ ರಂದೀಪ್, Tac ಸಮಿತಿ ಅಧ್ಯಕ್ಷ ಡಾ. ರವಿ ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ರಾಜ್ಯದಲ್ಲಿ ಜೆ.ಎನ್.1 ಉಪತಳಿ, ಹಾಗೂ ಕೋವಿಡ್ ಸೋಂಕಿನ ಕುರಿತು ವಿಸ್ತೃತವಾಗಿ ಸಭೆಯಲ್ಲಿ ಚರ್ಚೆ ನಡೆಸಿದ ಸಂಪುಟ ಉಪಸಮಿತಿ, ಕೋವಿಡ್ ನಿಯಂತ್ರಣ ವಿಚಾರದಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿತು. ಹೊಸ ವರ್ಷಾಚರಣೆಗೆ ಸದ್ಯಕ್ಕೆ ನಿರ್ಬಂಧ ಹೇರುವುದು ಬೇಡ ಎಂಬ ನಿರ್ಧಾರವನ್ನ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಆದರೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಜನರು ಮಾಸ್ಕ್ ಹಾಕಿಕೊಳ್ಳುವಂತೆ ಸಲಹೆ ನೀಡಲು ನಿರ್ಧರಿಸಲಾಯಿತು.‌

    ಕಾಯಿಲೆ ಹೊಂದಿದವರು ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸದ್ಯಕ್ಕೆ 30 ಸಾವಿರ ವ್ಯಾಕ್ಸಿನ್‌ಗಳನ್ನು (Vaccine) ಕೇಂದ್ರ ಸರ್ಕಾರದಿಂದ ಪಡೆದು ರಾಜ್ಯದ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ವಿತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದನ್ನೂ ಓದಿ: ಕೋವಿಡ್‌ ವೇಳೆ 40 ಸಾವಿರ ಕೋಟಿ ಅವ್ಯವಹಾರ, 45 ರೂ. ಮಾಸ್ಕ್‌ಗೆ 485 ರೂ. ಬಿಲ್‌: ಯತ್ನಾಳ್‌ ಬಾಂಬ್‌

    ಸಂಪುಟ ಉಪಸಮಿತಿ ಸಭೆಯ ಹೈಲೆಟ್ಸ್
    * ಮಕ್ಕಳಲ್ಲಿ ವೇಗವಾಗಿ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಜ್ವರ, ನೆಗಡಿ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ (Health Problem) ಇರುವ ಮಕ್ಕಳನ್ನು ಶಾಲೆಗಳಿಗೆ (School) ಕಳುಹಿಸಬಾರದು. ಮನೆಯಲ್ಲೇ ಸೂಕ್ತ ಆರೈಕೆಗೆ ಮಾರ್ಗಸೂಚಿ ಹೊರಡಿಸಲು ನಿರ್ಧಾರ.

    * ಕೋವಿಡ್ ಪಾಸಿಟಿವ್ ಆದವರು ಕಡ್ಡಾಯವಾಗಿ 7 ದಿನ ಹೋಮ್ ಐಸೊಲೇಷನಲ್‌ (Home Isolation) ಇರಬೇಕು. ʻಹೋಮ್ ಐಸೊಲೇಷನ್ʼನಲ್ಲಿ ಇರುವ, ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ 7 ದಿನಗಳ ರಜೆ ಕೊಡಬೇಕು. ಐಸಿಯು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಬಾಧಿತರಿಗೆ ಸಂಪೂರ್ಣ ಗುಣಮುಖರಾಗುವರೆಗೆ ರಜೆ (Holiday) ಕೊಡಿಸುವ ಕುರಿತು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲು ಸಭೆಯಲ್ಲಿ ನಿರ್ಧಾರ.

    * ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ರಚನೆಗೆ ನಿರ್ಧಾರ. ಬೆಂಗಳೂರಿನ ವಿಕ್ಟೋರಿಯಾ, ಮತ್ತು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್.‌ ಐಸಿಯು ಬೆಡ್, ಹಾಗೂ ಐಸೊಲೇಷನ್ ಬೆಡ್ ವ್ಯವಸ್ಥೆ.

    * ರಾಜ್ಯದಲ್ಲಿ ಕೋವಿಡ್ 436 ಸಕ್ರಿಯ ಪ್ರಕರಣಗಳಿವೆ. ಹೋಮ್ ಐಸೊಲೇಷನ್ ನಲ್ಲಿರುವ 400 ಕೋವಿಡ್ ಸೋಂಕಿತರ ಮನೆಗಳಿಗೆ ವೈದ್ಯರು ಭೇಟಿ ನೀಡಿ ನಿಗಾ ವಹಿಸಲು ಸೂಚನೆ ನೀಡಲಾಯಿತು. ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ ಕೋವಿಡ್ ರೋಗಲಕ್ಷಣಗಳಿದ್ದರೆ ಕಡ್ಡಾಯವಾಗಿ ಟೆಸ್ಟಿಂಗ್ ನಡೆಸಬೇಕು. ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು.‌

     

    * ಇತರೇ ಕಾಯಿಲೆ ಹೊಂದಿದವರಿಗೆ ಆದ್ಯತೆಯ ಮೇರೆಗೆ ವ್ಯಾಕ್ಸಿನ್ ನೀಡಲು ನಿರ್ಧಾರ. ಕೇಂದ್ರ ಸರ್ಕಾರದಿಂದ 30 ಸಾವಿರ ಲಸಿಕೆ ಪಡೆಯಲು ಸಂಪುಟ ಉಪ ಸಮಿತಿ ನಿರ್ಧಾರ. ಆರೋಗ್ಯ ಸಿಬ್ಬಂದಿಗೆ ಸುರಕ್ಷತೆಯ ದೃಷ್ಟಿಯಿಂದ ಫ್ಲೂ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ.

    * ಹೊಸ ವರ್ಷಾಚರಣೆಗೆ ಸೇರಿದಂತೆ ಯಾವುದೇ ಕಾರ್ಯಕ್ರಮ ಅಥವಾ ಜನರ ಓಡಾಟಕ್ಕೆ ಸದ್ಯ ಯಾವುದೇ ನಿರ್ಬಂಧ ಹೇರುವುದಿಲ್ಲ. ಆದರೆ ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ (Mask) ಧರಿಸಿ ಕೋವಿಡ್ ನಿಯಮಾವಳಿ ಪಾಲನೆ ಮಾಡಲು ಸಾರ್ವಜನಿಕರಲ್ಲಿ ಮನವಿ.

    * ಕೋವಿಡ್ ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡುವ ಎಲ್ಲರನ್ನು ಸಿ.ಟಿ ಸ್ಕ್ಯಾನಿಂಗ್ ಗೆ ಒಳಪಡಿಸುವುದು ನಿಷೇಧ. ಕೋವಿಡ್ ಪಾಸಿಟಿವ್ ಬಂದವರನ್ನ ಮಾತ್ರ ಸಿ.ಟಿ ಸ್ಕ್ಯಾನಿಂಗ್ ಗೆ ಒಳಪಡಿಸಬಹುದು.

    * ಇಂದಿನಿಂದ ಪ್ರತಿ ನಿತ್ಯ 5 ಸಾವಿರ ಕೋವಿಡ್ ಟೆಸ್ಟಿಂಗ್, ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ. ನಾಲ್ಕು ಮೊಬೈಲ್ ಆಕ್ಸಿಜನ್ ಕಂಟೆಂಡರ್‌ ಖರೀದಿಗೆ ಸಭೆಯಲ್ಲಿ ತೀರ್ಮಾನ.

     

  • ರಾಜ್ಯದಲ್ಲಿಂದು 125 ಮಂದಿಗೆ ಕೊರೊನಾ ಸೋಂಕು – ಕೋವಿಡ್‌ಗೆ 3 ಬಲಿ

    ರಾಜ್ಯದಲ್ಲಿಂದು 125 ಮಂದಿಗೆ ಕೊರೊನಾ ಸೋಂಕು – ಕೋವಿಡ್‌ಗೆ 3 ಬಲಿ

    – ರಾಜ್ಯಕ್ಕೂ ಕಾಲಿಟ್ಟ ಜೆಎನ್.1 ಉಪತಳಿ
    – ಕರ್ನಾಟಕದಲ್ಲಿ 34 ಮಂದಿಯಲ್ಲಿ ಹೊಸ ತಳಿ ಸೋಂಕು ಪತ್ತೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳವಾಗಿದೆ. ಇಂದು (ಸೋಮವಾರ) ಒಂದೇ ದಿನ ಕೊರೊನಾ ಹೊಸ ಉಪತಳಿ 34 ಜೆಎನ್.1 ಕೇಸ್‌ಗಳು ಪತ್ತೆಯಾಗಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ. ಕೊರೊನಾ ಸೋಂಕಿನಿAದಾಗಿ ಇಂದು ರಾಜ್ಯದಲ್ಲಿ ಮೂವರು ಬಲಿಯಾಗಿದ್ದಾರೆ.

    ರಾಜ್ಯದಲ್ಲಿಂದು 34 ಜೆಎನ್.1 ಹೊಸ ಉಪತಳಿ ಸೇರಿದಂತೆ 125 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಅಲ್ಲದೇ ಕೋವಿಡ್‌ನಿಂದಾಗಿ ಬೆಂಗಳೂರು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಲ್ಲಿ ತಲಾ ಒಂದು ಸಾವಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 125 ಕ್ಕೆ ಏರಿಕೆಯಾಗಿದೆ.

    ಬೆಂಗಳೂರಿನಲ್ಲೇ ಹೆಚ್ಚು ಅಂದರೆ 94 ಕೊರೊನಾ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಜೆಎನ್.1 ಸೋಂಕು 20 ಕೇಸ್ ದೃಢಪಟ್ಟಿದೆ. ಮೈಸೂರಿನಲ್ಲಿ 4, ಮಂಡ್ಯದಲ್ಲಿ 3, ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರದಲ್ಲಿ ತಲಾ 1 ಹೊಸ ಉಪತಳಿ ಕೇಸ್ ದೃಢಪಟ್ಟಿದೆ.

    ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 3.96% ತಲುಪಿದೆ. ಕೊರೊನಾದಿಂದ ಮೃತಪಟ್ಟ ಮೂವರಿಗೂ ಸಾರಿ ಸಮಸ್ಯೆ ಇತ್ತು. ಸಾವನ್ನಪ್ಪಿದವರಲ್ಲಿ ಉಸಿರಾಟದ ತೊಂದರೆಯೇ ಪ್ರಮುಖ ಗುಣಲಕ್ಷಣವಾಗಿತ್ತು. ಇದರ ಜೊತೆಗೆ ಹೈಪರ್ ಟೆನ್ಶನ್, ಶ್ವಾಸಕೋಶದ ಸೋಂಕು, ಹೃದಯ ಸಂಬAಧಿ ಕಾಯಿಲೆ ಸೇರಿದಂತೆ ಅನ್ಯಕಾಯಿಲೆಯಿಂದ ಬಳಲುತ್ತಿದ್ದರು.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಏರಿಕೆ ಕಂಡಿದೆ. 36 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 36 ರಲ್ಲಿ 7 ಜನರು ಐಸಿಯುವಿನಲ್ಲಿದ್ದಾರೆ. 400 ಜನ ಹೋಮ್ ಐಸೊಲೇಷನ್‌ನಲ್ಲಿದ್ದಾರೆ.

  • ರಾಜ್ಯದಲ್ಲಿಂದು 106 ಕೊರೊನಾ ಪಾಸಿಟಿವ್‌ ಪ್ರಕರಣ ದೃಢ – ಬೆಂಗಳೂರಿನಲ್ಲೇ 95 ಕೇಸ್‌

    ರಾಜ್ಯದಲ್ಲಿಂದು 106 ಕೊರೊನಾ ಪಾಸಿಟಿವ್‌ ಪ್ರಕರಣ ದೃಢ – ಬೆಂಗಳೂರಿನಲ್ಲೇ 95 ಕೇಸ್‌

    ಬೆಂಗಳೂರು: ಕ್ರಿಸ್ಮಸ್‌ ಹಾಗೂ ಹೊಸ ವರ್ಷದ ಹೊತ್ತಲ್ಲೇ ಕೊರೊನಾ ವೈರಸ್‌ (Corona Virus) ಮತ್ತೆ ಭೀತಿ ಹುಟ್ಟಿಸಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 106 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ.

    ಇಂದು (ಭಾನುವಾರ) 33 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ಇಂದು ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 344 ಕ್ಕೆ ಏರಿಕೆಯಾಗಿದೆ. ಪಾಸಿಟಿವಿ ರೇಟ್‌ ಕೂಡ ಏರಿಕೆ ಕಂಡಿದ್ದು, 7.35 % ಆಗಿದೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆ ಮಾಲೀಕನೂ ಆಗಿರುವ ಬಿಜೆಪಿ ಮುಖಂಡನಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು ನಗರದಲ್ಲಿ ದಿನೇ ದಿನೇ ಕೊರೊನಾ (Covid-19) ಕೇಸ್‌ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇಂದು ನಗರದಲ್ಲಿ 95 ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ. ಆ ಮೂಲಕ ದಿನದ ಕೇಸ್‌ ಶತಕದ ಸನಿಹಕ್ಕೆ ತಲುಪಿದೆ.

    ಚಾಮರಾಜನಗರದಲ್ಲಿ 1, ದಕ್ಷಿಣ ಕನ್ನಡದಲ್ಲಿ 2, ಮಂಡ್ಯದಲ್ಲಿ 1, ಮೈಸೂರಿನಲ್ಲಿ 6, ಶಿವಮೊಗ್ಗದಲ್ಲಿ 1 ಪ್ರಕರಣ ವರದಿಯಾಗಿದೆ. ಕೊರೊನಾದಿಂದಾಗಿ ಇಂದು 323 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 21 ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 7 ಮಂದಿ ಐಸಿಯುನಲ್ಲಿದ್ದಾರೆ. ಇದನ್ನೂ ಓದಿ: ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ – ಮಾಸ್ಕ್‌ ಮರೆತ ಜನ

  • ರಾಜ್ಯದಲ್ಲಿ ಮತ್ತೆ ಕೊರೊನಾ ಸ್ಫೋಟ – ಒಂದೇ ದಿನದಲ್ಲಿ 104 ಕೇಸ್‌ ದೃಢ

    ರಾಜ್ಯದಲ್ಲಿ ಮತ್ತೆ ಕೊರೊನಾ ಸ್ಫೋಟ – ಒಂದೇ ದಿನದಲ್ಲಿ 104 ಕೇಸ್‌ ದೃಢ

    – ಖಾಸಗಿ ಆಸ್ಪತ್ರೆ ಮಾಲೀಕನಿಗೆ ಕೊರೊನಾ ಪಾಸಿಟಿವ್‌
    – ಸಿಂಗಾಪುರದಿಂದ ವಾಪಸ್‌ ಆಗಿದ್ದ ವ್ಯಕ್ತಿಗೆ ಕೋವಿಡ್‌

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್-‌19 (Covid-19) ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಇಂದು (ಶನಿವಾರ) ಒಂದೇ ದಿನ 104 ಪಾಸಿಟಿವ್‌ ಕೇಸ್‌ ವರದಿಯಾಗಿವೆ. ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ.

    ಶನಿವಾರ 8 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 271 ಕ್ಕೆ ಏರಿಕೆ ಕಂಡಿದೆ. ಕೊರೊನಾ ಪಾಸಿಟಿವಿಟಿ ದರ 5.93% ಇದೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆ ಮಾಲೀಕನೂ ಆಗಿರುವ ಬಿಜೆಪಿ ಮುಖಂಡನಿಗೆ ಕೊರೊನಾ ಪಾಸಿಟಿವ್

    ಸಿಲಿಕಾನ್‌ ಸಿಟಿ ಬೆಂಗಳೂರು ಕೊರೊನಾ ಹಾಟ್‌ಸ್ಪಾಟ್‌ ಆಗುತ್ತಿದೆ. ನಗರದಲ್ಲಿ ಕೋವಿಡ್‌ ಪ್ರಕರಣ ದಿನೇ ದಿನೇ ಏರಿಕೆ ಕಂಡಿದ್ದು, ಭೀತಿ ಮೂಡಿಸಿದೆ. ಇಂದು ಬೆಂಗಳೂರಿನಲ್ಲಿ 85 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ 2, ದಕ್ಷಿಣ ಕನ್ನಡದಲ್ಲಿ 1, ಮಂಡ್ಯ 1, ಮೈಸೂರು 7, ಶಿವಮೊಗ್ಗ 6, ತುಮಕೂರಿನಲ್ಲಿ 2 ಪ್ರಕರಣಗಳು ದೃಢಪಟ್ಟಿವೆ.

    ಸಿಂಗಾಪುರಕ್ಕೆ ತೆರಳಿದ ವ್ಯಕ್ತಿಗೆ ಕೊರೊನಾ
    ಪ್ರವಾಸಕ್ಕೆಂದು ಸಿಂಗಾಪುರಕ್ಕೆ ತೆರಳಿದ್ದ ಮಂಡ್ಯ ಮೂಲದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಸಿಂಗಾಪುರ ಪ್ರವಾಸ ಮುಗಿಸಿ ಕಳೆದ ಮೂರು ದಿನಗಳ ಹಿಂದೆ ಮಂಡ್ಯಗೆ ವ್ಯಕ್ತಿ ವಾಪಸಾಗಿದ್ದ. ಆತನಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ತೆರಳಿ ವ್ಯಕ್ತಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದ. ಇದೀಗ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ದೃಢಪಟ್ಟಿದೆ. ಇದನ್ನೂ ಓದಿ: ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ – ಮಾಸ್ಕ್‌ ಮರೆತ ಜನ

    ಸೋಂಕಿತ ವ್ಯಕ್ತಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, JN1 ದೃಢತೆಗಾಗಿ ಸೋಮವಾರ ಸೋಂಕಿತನ ಸ್ಯಾಂಪಲ್‌ನ್ನು ಲ್ಯಾ‌ಬ್‌ಗೆ ರವಾನೆ ಮಾಡಲಾಗುವುದು. ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಇದ್ದ ಕುಟುಂಬಸ್ಥರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಅವರನ್ನು ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಚಿಕ್ಕಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಯ ಮಾಲೀಕ ಹಾಗೂ ಬಿಜೆಪಿ ಮುಖಂಡರೊಬ್ಬರಿಗೆ ಕೊರೊನಾ ಪಾಸಿಟಿವ್ (Coron Positive) ಧೃಡವಾಗಿದೆ. ಇತ್ತೀಚೆಗಷ್ಟೇ ದೆಹಲಿ ಹಾಗೂ ತಮಿಳುನಾಡಿಗೆ ಹೋಗಿ ಬಂದಿದ್ದ 69 ವರ್ಷದ ಬಿಜೆಪಿ ಮುಖಂಡನಿಗೆ ಜ್ವರ ಕಾಣಿಸಿಕೊಂಡಿತ್ತು. ಸತತ 5 ದಿನಗಳ ನಿರಂತರ ಜ್ವರ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಇದನ್ನೂ ಓದಿ: PublicTV Explainer: ಹೊಸ ವರ್ಷದ ಹೊತ್ತಲ್ಲೇ ದೇಶಕ್ಕೆ ಕಾಲಿಟ್ಟ ಕೊರೊನಾ ಹೊಸ ತಳಿ; ಏನಿದು ಜೆಎನ್‌.1? ಇದು ಅಪಾಯಕಾರಿಯೇ?

  • ಖಾಸಗಿ ಆಸ್ಪತ್ರೆ ಮಾಲೀಕನೂ ಆಗಿರುವ ಬಿಜೆಪಿ ಮುಖಂಡನಿಗೆ ಕೊರೊನಾ ಪಾಸಿಟಿವ್

    ಖಾಸಗಿ ಆಸ್ಪತ್ರೆ ಮಾಲೀಕನೂ ಆಗಿರುವ ಬಿಜೆಪಿ ಮುಖಂಡನಿಗೆ ಕೊರೊನಾ ಪಾಸಿಟಿವ್

    ಚಿಕ್ಕಬಳ್ಳಾಪುರ: ನಗರದ ಖಾಸಗಿ ಆಸ್ಪತ್ರೆಯ ಮಾಲೀಕ ಹಾಗೂ ಬಿಜೆಪಿ ಮುಖಂಡರೊಬ್ಬರಿಗೆ ಕೊರೊನಾ ಪಾಸಿಟಿವ್ (Coron Positive) ಧೃಡವಾಗಿದೆ.

    ಇತ್ತೀಚೆಗಷ್ಟೇ ದೆಹಲಿ ಹಾಗೂ ತಮಿಳುನಾಡಿಗೆ ಹೋಗಿ ಬಂದಿದ್ದ 69 ವರ್ಷದ ಬಿಜೆಪಿ ಮುಖಂಡನಿಗೆ ಜ್ವರ ಕಾಣಿಸಿಕೊಂಡಿತ್ತು. ಸತತ 5 ದಿನಗಳ ನಿರಂತರ ಜ್ವರ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಗೆ ಮಾಡಿಸಿದ್ದಾರೆ. ಇದನ್ನೂ ಓದಿ: ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಾಫಿಕ್‌ ಜಾಮ್‌ – 3 ಕಿಮೀ ವರೆಗೆ ನಿಂತ ವಾಹನಗಳು; 2 ಗಂಟೆ ಪ್ರಯಾಣಿಕರ ಪರದಾಟ

    ಕೊರೊನಾ ಟೆಸ್ಟ್ ನ ವರದಿ ಇಂದು ಬಂದಿದ್ದು ಪಾಸಿಟಿವ್ ಎಂಬುದು ಧೃಡವಾಗಿದೆ. ಸದ್ಯ ಬಿಜೆಪಿ ಮುಖಂಡ ಹೋಂ ಕ್ವಾರಂಟೈನಲ್ಲಿದ್ದಾರೆ.

    ಹೊಸ ತಳಿ ಜೆಎನ್.1 ಆತಂಕ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲು ಸೂಚನೆ ನೀಡಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಸಲ್ಲಿ ಹಳೆಯ ಆಸ್ಪತ್ರೆಯನ್ನ ಕೋವಿಡ್ 19 ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ಕೋವಿಡ್ ಆಸ್ಪತ್ರೆಗೆ ಮರುಚಾಲನೆ ನೀಡಲು ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಹಳೆಯ ಆಸ್ಪತ್ರೆಯಲ್ಲಿ 130 ಬೆಡ್ ಗಳನ್ನ ಸಿದ್ಧ ಮಾಡಿಕೊಳ್ಳಲಾಗುತ್ತಿದ್ದು, ಆಕ್ಸಿಜನ್ ವ್ಯವಸ್ಥೆ ಹಾಗೂ ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.