Tag: Corona Virus

  • ಜ್ವರ, ಕೆಮ್ಮು, ನೆಗಡಿ ಲಕ್ಷಣ ಇರೋ ಮಕ್ಕಳು ಶಾಲೆಗೆ ಹೋಗೋದು ಬೇಡ: ಶಾಲೆಗಳಿಗೆ ಸರ್ಕಾರ ಗೈಡ್‌ಲೈನ್ಸ್‌

    ಜ್ವರ, ಕೆಮ್ಮು, ನೆಗಡಿ ಲಕ್ಷಣ ಇರೋ ಮಕ್ಕಳು ಶಾಲೆಗೆ ಹೋಗೋದು ಬೇಡ: ಶಾಲೆಗಳಿಗೆ ಸರ್ಕಾರ ಗೈಡ್‌ಲೈನ್ಸ್‌

    ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು (Covid-19) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ (Schools) ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

    ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಗೈಡ್‌ಲೈನ್ಸ್‌ ಹೊರಡಿಸಲಾಗಿದೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ, ಚಿಕಿತ್ಸೆ ಕೊರತೆ ಇದ್ರೆ ದೂರು ಕೊಡಿ – ಆರೋಗ್ಯ ಇಲಾಖೆಯಿಂದ ವಾಟ್ಸಪ್‌ ನಂಬರ್‌ ರಿಲೀಸ್‌

    ಶಾಲಾ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಹಾಗೂ ಇತರೆ ಲಕ್ಷಣಗಳು ಕಂಡು ಬಂದಲ್ಲಿ, ಅವರನ್ನು ಶಾಲೆಗೆ ಕಳುಹಿಸದೇ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಹಾಗೂ ಆರೈಕಾ ಕ್ರಮಗಳನ್ನು ಪಾಲಿಸಬೇಕು. ಸದರಿ ಲಕ್ಷಣಗಳು ಸಂಪೂರ್ಣವಾಗಿ ಗುಣಮುಖವಾದ ನಂತರವೇ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಂದು ಸೂಚನೆ ನೀಡಲಾಗಿದೆ.

    ಜ್ವರ, ಕೆಮ್ಮು, ನೆಗಡಿ ಮತ್ತು ಇತರೆ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬಂದಲ್ಲಿ, ಪೋಷಕರಿಗೆ ಮಾಹಿತಿಯನ್ನು ನೀಡಿ, ಅಂತಹ ಮಕ್ಕಳನ್ನು ಸುರಕ್ಷಿತವಾಗಿ ಪೋಷಕರೊಂದಿಗೆ ಮನೆಗೆ ಕಳುಹಿಸುವುದು. ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಹಾಗೂ ಇತರೆ ಲಕ್ಷಣಗಳು ಕಂಡು ಬಂದಲ್ಲಿ, ಅಗತ್ಯ ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಬಾಲಕಿ ಸಾವು ಪ್ರಕರಣ – ಭುಗಿಲೆದ್ದ ಆಕ್ರೋಶ, ತನಿಖೆಗೆ ವೈದ್ಯರ ತಂಡ ರಚನೆ

    ಶಾಲಾ ಅವಧಿಯಲ್ಲಿ ಮುಂಜಾಗೃತಾ ಕ್ರಮಗಳಾದ ಸಾಮಾನ್ಯ ಸ್ವಚ್ಛತೆಯೊಂದಿಗೆ ಪ್ರಮುಖವಾಗಿ ಕೈಗಳ ಸ್ವಚ್ಛತೆ ಮತ್ತು ಕೆಮ್ಮುವಾಗ, ಸೀನುವಾಗ ಎಚ್ಚರ ವಹಿಸಿ Covid-19 Appropirate Behaviour (CAB) ನ ಪಾಲನೆಯನ್ನು ಖಚಿತಪಡಿಸಿಕೊಳ್ಳುವುದು ಎಂದು ತಿಳಿಸಲಾಗಿದೆ.

  • ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೊರೊನಾ ಸೋಂಕು – ಮಂಡ್ಯದಲ್ಲೂ ಮೊದಲ ಕೇಸ್‌ ಪತ್ತೆ

    ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೊರೊನಾ ಸೋಂಕು – ಮಂಡ್ಯದಲ್ಲೂ ಮೊದಲ ಕೇಸ್‌ ಪತ್ತೆ

    – ಬೇರೆ ಆರೋಗ್ಯ ಸಮಸ್ಯೆ ಇದ್ದವರು ಎಚ್ಚರದಿಂದಿರಿ – ದಿನೇಶ್‌ ಗುಂಡೂರಾವ್‌

    ಹುಬ್ಬಳ್ಳಿ/ಧಾರವಾಡ/ಮಂಡ್ಯ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು (Corona Virus) ಪ್ರಕರಣಗಳು ಹೆಚ್ಚಾಗುತ್ತಿವೆ. ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೊರೊನಾ ಕಾಣಿಸಿಕೊಂಡಿದೆ. ಅಲ್ಲದೇ ಮಂಡ್ಯದಲ್ಲೂ (Mandya) ಈ ಬಾರಿ ಮೊದಲ ಸೋಂಕು ಪತ್ತೆಯಾಗಿದೆ.

    ಹುಬ್ಬಳ್ಳಿಯ (Hubballi) ಬೈರಿದೇವರಕೊಪ್ಪ ಗ್ರಾಮದ 11 ತಿಂಗಳ ಮಗುವಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವಿಗೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಹೋದಾಗ ಕೋವಿಡ್‌ ಇರೋದು ಪತ್ತೆಯಾಗಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿರವಾಗಿದೆ ಅಂತ ಧಾರವಾಡ ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಮಂಡ್ಯದಲ್ಲಿ ಮೊದಲ ಕೇಸ್‌ ಪತ್ತೆ:
    ಇನ್ನೂ ಈ ವರ್ಷ ಮಂಡ್ಯದಲ್ಲಿ 60 ವರ್ಷದ ವೃದ್ಧೆಯಲ್ಲಿ ಮೊದಲ ಕೊರೊನಾ ಕೇಸ್‌ ಪತ್ತೆಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಹರಕೆರೆ ಗ್ರಾಮದ ಕಲ್ಯಾಣಮ್ಮ ಎಂಬ ವೃದ್ಧೆಗೆ ಸೋಂಕು ಕಾಣಿಸಿಕೊಂಡಿದೆ. ಗ್ರಾಮದ ನಿವಾಸದಲ್ಲೇ ಇದ್ದ ಕಲ್ಯಾಣಮ್ಮ, ಕಳೆದ 2 ದಿನಗಳಿಂದ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದರು. ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿದ್ದು, ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೇರೆ ಬೇರೆ ಕಾಯಿಲೆ ಇದ್ದವರು ಎಚ್ಚರದಿಂದಿರಿ
    ಕೊರೊನಾ ಸೋಂಕು ಉಲ್ಬಣದ ಕುರಿತು ಮಾತನಾಡಿರುವ ಸಚಿವ ದಿನೇಶ್‌ ಗುಂಡೂರಾವ್‌, ಈ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಏನಿಲ್ಲ ಹಿಂದೆ ಏನು ಸೂಚನೆ ಕೊಟ್ಟಿದ್ದೆವೊ ಅಷ್ಟೆ‌. ಸದ್ಯಕ್ಕೆ ವಿಶೆಷವಾಗಿ ಹೇಳುಂತದ್ದು ಏನೂ ಇಲ್ಲ. ಕೇಂದ್ರ ಸರ್ಕಾರ ಸಹ ಇದು ಅಪಾಯಕಾರಿ ಏನಲ್ಲ ಅಂತ ಮೆಸೇಜ್‌ ಕೊಟ್ಟಿದೆ. ಸಣ್ಣ ಪ್ರಮಾಣದಲ್ಲಿ ತೊಂದರೆ ಆಗಬಹುದೇ ಹೊರತು ಅಪಾಯಕಾರಿ ಅಲ್ಲ ಎಂದು ವಿಶ್ಲೇಷಣೆ ಮಾಡಿದ್ದಾರೆ. ಹಾಗಾಗಿ ಜನ ಆತಂಕಪಡುವ ಅಗತ್ಯವಿಲ್ಲ. ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ಕಾಯಿಲೆ ಇದ್ದಾಗ ಇದು ಸಮಸ್ಯೆ ಆಗಬಹುದು, ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಅಷ್ಟೆ ಅಂತ ಸಲಹೆ ನೀಡಿದ್ದಾರೆ.

  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗರ್ಭಿಣಿಯರೂ ಸೇರಿ 4 ಮಂದಿಗೆ ಕೊರೊನಾ

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗರ್ಭಿಣಿಯರೂ ಸೇರಿ 4 ಮಂದಿಗೆ ಕೊರೊನಾ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಬ್ಬರು ಗರ್ಭಿಣಿಯರು (Pregnant), ಮತ್ತೋರ್ವ ಮಹಿಳೆ ಹಾಗೂ ಪುರಷ ಸೇರಿ 4 ಮಂದಿಗೆ ಕೋವಿಡ್ ಪಾಸಿಟಿವ್ ಧೃಡವಾಗಿದೆ ಅಂತ ಜಿಲ್ಲಾ ಆರೋಗ್ಯಾಧಿಕಾರಿ (Health Officer) ಮಹೇಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ:  ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಜಕಾಲುವೆ ಮೇಲೆ ಅಕ್ರಮವಾಗಿ ಎದ್ದಿರುವ ಬೃಹತ್ ಕಟ್ಟಡ ಯಾರದ್ದು?- ಹೆಚ್‌ಡಿಕೆ ಪ್ರಶ್ನೆ

    ಗೌರಿಬಿದನೂರಿನ‌ ಹಾಗೂ ಬಾಗೇಪಲ್ಲಿಯಲ್ಲಿ ತಲಾ ಒಬ್ಬರು ಗರ್ಭಿಣಿಯರು, ಚಿಂತಾಮಣಿಯಲ್ಲಿ 1 ಪ್ರಕರಣ, ಚಿಕ್ಕಬಳ್ಳಾಪುರ ನಗರದಲ್ಲಿ 1 ಪ್ರಕರಣ ಕಂಡುಬಂದಿದೆ. ಗೌರಿಬಿದನೂರಿನ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ ಮೂವರು ಮನೆಯಲ್ಲೇ ಆರೋಗ್ಯವಾಗಿದ್ದಾರೆ ಅಂತ ಡಿಹೆಚ್‌ಒ (Chikkaballapura DHO) ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಅಪಮಾನ ಮಾಡಿದಾಗ ಶಿವರಾಜ್ ಕುಮಾರ್ ಮಾತಾಡಬೇಕು – ರವಿ ಗಣಿಗ

    ಇನ್ನೂ ಮೋಡ ಮುಚ್ಚಿದ ವಾತವಾರಣ ಇರೋದ್ರಿಂದ ಜ್ವರ, ಕೆಮ್ಮು ನೆಗಡಿ ಸಾಮಾನ್ಯ, ಹಾಗಂತ ಹೆದರುವ ಅಗತ್ಯ ಇಲ್ಲ. ಆದ್ರೆ ಮಾಸ್ಕ್ ಧರಿಸುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಕೆಮ್ಮು, ನೆಗಡಿ, ಜ್ವರ ವಿಪರೀತ ಆದಾಗ ಸ್ವಯಂ ಚಿಕಿತ್ಸೆ ಪಡೆಯದೇ ವೈದ್ಯರನ್ನೇ ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ – ವೈರಲ್‌ ಆಯ್ತು ಅಭಿಮಾನಿಯ ಪೋಸ್ಟರ್‌

  • ಬೆಳಗಾವಿಯಲ್ಲಿ ಕೊರೊನಾಗೆ ಮೊದಲ ಬಲಿ

    ಬೆಳಗಾವಿಯಲ್ಲಿ ಕೊರೊನಾಗೆ ಮೊದಲ ಬಲಿ

    ಬೆಳಗಾವಿ: ಕೊರೊನಾ (Corona) ಮಹಾಮಾರಿಗೆ ಬೆಳಗಾವಿಯಲ್ಲಿ (Belagavi) ಮೊದಲ ಬಲಿಯಾಗಿದೆ. ಇದೀಗ ರಾಜ್ಯದಲ್ಲಿ ಕೋವಿಡ್ ವೈರಸ್‌ನಿಂದ ಇಬ್ಬರು ಮೃತಪಟ್ಟಿದ್ದಾರೆ.

    ಬೆಳಗಾವಿ ತಾಲೂಕಿನ 70 ವರ್ಷದ ರೋಗಿ ಕೊರೊನಾದಿಂದ ಮೃತಪಟ್ಟಿದ್ದಾರೆ. ರೋಗಿಯು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದನ್ನೂ ಓದಿ: ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್ ಎನ್‌ಕೌಂಟರ್

    ರೋಗಿಗೆ ಬುಧವಾರವಷ್ಟೇ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಪಾಸಿಟಿವ್ ಅಂತಾ ಗೊತ್ತಾದ ತಕ್ಷಣವೇ ರೋಗಿಯನ್ನು ಕೋವಿಡ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಇವರು ವಯೋಸಹಜ ಕಾಯಿಲೆಯಿಂದಲೂ ಬಳಲುತ್ತಿದ್ದರು. ತಡರಾತ್ರಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ರೋಗಿಯ ಕುಟುಂಬಸ್ಥರು ಕೋವಿಡ್ ನಿಯಮಾವಳಿಯ ಪ್ರಕಾರ ರಾತ್ರಿಯೇ ಅಂತ್ಯಸಂಸ್ಕಾರ ಮಾಡಿದ್ದಾರೆ.

  • PublicTV Explainer: ಮತ್ತೆ ಕೊರೊನಾ ಆತಂಕ; ಎನ್‌ಬಿ.1.8.1 & ಎಲ್‌ಎಫ್.7 ಉಪತಳಿ ಎಫೆಕ್ಟ್‌ ಏನು?

    PublicTV Explainer: ಮತ್ತೆ ಕೊರೊನಾ ಆತಂಕ; ಎನ್‌ಬಿ.1.8.1 & ಎಲ್‌ಎಫ್.7 ಉಪತಳಿ ಎಫೆಕ್ಟ್‌ ಏನು?

    ನುಕುಲವನ್ನು ಇನ್ನಿಲ್ಲದಂತೆ ಕಾಡಿದ ಮಾರಕ ಕೊರೊನಾ ವೈರಸ್ (Corona Virus) ಮತ್ತೆ ವಕ್ಕರಿಸಿದೆ. ಲಕ್ಷಾಂತರ ಮಂದಿಯನ್ನು ಬಲಿಪಡೆದು ರಣಕೇಕೆ ಹಾಕಿದ್ದ ಕೋವಿಡ್-19 (Covid-19) ಹೊಸ ರೂಪಾಂತರದೊಂದಿಗೆ ಬಂದು ಆತಂಕ ಮೂಡಿಸಿದೆ. 2019ರಲ್ಲಿ ಕೊರೊನಾ ಮೊದಲ ಬಾರಿಗೆ ಕಾಣಿಸಿಕೊಂಡಾಗ ಇಡೀ ಜಗತ್ತು ಸ್ತಬ್ಧಗೊಂಡಿತ್ತು. ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡಿ ಕಾಡುವ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ನಡೆಯಿತು. ಎಲ್ಲಾ ದೇಶಗಳು ಗಡಿ ಬಂದ್ ಮಾಡಿಕೊಂಡರೆ, ಜನರು ಮನೆಯೊಳಗಿದ್ದು ಬಾಗಿಲು ಹಾಕಿಕೊಳ್ಳುವಂತಾಗಿತ್ತು. ಅಪಾರ ಸಾವು-ನೋವು, ಆರ್ಥಿಕ ಬಿಕ್ಕಟ್ಟು ದೇಶಗಳನ್ನು ಕಾಡಿದವು. ಕೊನೆಗೆ ಮಾರಕ ವೈರಸ್ ನಿಯಂತ್ರಣಕ್ಕೆ ಲಸಿಕೆಗಳು ನೆರವಾದವು. ದುಸ್ವಪ್ನದಂತೆ ಕಾಡಿದ ಕೊರೊನಾ ಹೋಯ್ತಪ್ಪ ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೊಂದು ರೂಪದಲ್ಲಿ ಎದುರಾಗಿ ಭೀತಿ ಹುಟ್ಟಿಸಿದೆ.

    ಯಾವುದಿದು ಕೋವಿಡ್ ಹೊಸ ರೂಪಾಂತರಿ? ಇದರ ಲಕ್ಷಣಗಳೇನು? ಎಫೆಕ್ಟ್ ಏನು? ವಿದೇಶಗಳು ಮತ್ತು ಭಾರತದಲ್ಲಿ ಇದರ ಸ್ಥಿತಿ ಈಗ ಹೇಗಿದೆ? ನಿಯಂತ್ರಣ ಹೇಗೆ? ಮುಂಜಾಗ್ರತಾ ಕ್ರಮ ಏನು? ಇದನ್ನೂ ಓದಿ:

    ಕೋವಿಡ್ ಹೊಸ ರೂಪಾಂತರಿ
    NB.1.8.1 ಮತ್ತು LF.7 ಇವು ಕೋವಿಡ್‌ನ ಹೊಸ ರೂಪಾಂತರಿ.

    ಏನಿವು ಉಪತಳಿ?
    ವಿಶ್ವ ಆರೋಗ್ಯ ಸಂಸ್ಥೆಯ ವೈರಸ್ ವಿಕಸನದ ತಾಂತ್ರಿಕ ಸಲಹಾ ತಂಡ, ಎನ್‌ಬಿ.1.8.1 ಮತ್ತು ಎಲ್‌ಎಫ್.7 ಇವು ಓಮಿಕ್ರಾನ್ ಉಪತಳಿಗಳಾಗಿವೆ. ‘ನಿಗಾ ವಹಿಸಬೇಕಾದ ಉಪತಳಿ’ ಎಂದು ತಿಳಿಸಿದೆ. ಇದು ಜೆಎನ್.1ನ ಉಪತಳಿಯಾಗಿದೆ. ವೈರಸ್‌ನ ಗುಣಲಕ್ಷಣಗಳಲ್ಲಿ ಇದು ಗಮನಾರ್ಹ ಬದಲಾವಣೆ ಹೊಂದಿದೆ.

    ಉಪತಳಿ ಅಪಾಯಕಾರಿಯೇ?
    ಎನ್‌ಬಿ.1.8.1 ಮತ್ತು ಎಲ್‌ಎಫ್.7 ಅಪಾಯಕಾರಿಯಲ್ಲ. ಆದರೆ, ನಿಗಾ ವಹಿಸಬೇಕಾದ ಉಪತಳಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಸೋಂಕಿನ ತೀವ್ರತೆ ಏನು?
    ಇವು ವೇಗವಾಗಿ ಹರಡುವ ಸೋಂಕಾಗಿವೆ.

    ಸೋಂಕಿನ ಲಕ್ಷಣಗಳೇನು?
    ಗಂಟಲು ನೋವು, ಕೆಮ್ಮು, ಮೂಗಿನಲ್ಲಿ ಸೋರಿಕೆ, ಸೌಮ್ಯ ಜ್ವರ, ವಾಕರಿಕೆ, ಹಸಿವು ಆಗದಿರುವುದು, ಜಠರ ಕರುಳಿನಲ್ಲಿ ಅಸ್ವಸ್ಥತೆ, ತಲೆನೋವು, ತಲೆತಿರುಗುವಿಕೆ, ತೀವ್ರ ಆಯಾಸ, ಸ್ನೇಯು ದೌರ್ಬಲ್ಯ, ನಿದ್ರೆಯಲ್ಲಿ ತೊಂದರೆ ಸೋಂಕಿನ ಲಕ್ಷಗಳಾಗಿವೆ.

    ಜಠರ ಕರುಳಿನ ಸಮಸ್ಯೆ: ಸೋಂಕಿತರಲ್ಲಿ ವಾಕರಿಕೆ, ಹಸಿವಿನ ಸಮಸ್ಯೆ, ಜಠರ ಕರುಳಿನ ತೊಂದರೆ ಇರಲಿದೆ.

    ನರ ಸಂಬಂಧಿತ ತೊಂದರೆ: ತಲೆನೋವು, ತಲೆತಿರುಗುವಿಕೆ ಮತ್ತು ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ.

    ಈ ಸೋಂಕಿಗೆ ಒಳಗಾದವರು ಜ್ವರಕ್ಕೆ ಸಂಬಂಧಿಸಿದ ವಿಶಿಷ್ಟ ಬೆವರು ಅಥವಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಾರೆ. ಹೈಪರ್ಥರ್ಮಿಯಾ ಎಂದು ಕರೆಯಲ್ಪಡುವ ಈ ಸ್ಥಿತಿಯು ದೇಹದ ಥರ್ಮೋರ್ಗ್ಯುಲೇಷನ್ ಕಾರ್ಯವಿಧಾನಗಳಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಕೆಲವರಿಗೆ ತೀವ್ರ ಆಯಾಸ, ಸ್ನಾಯು ದೌರ್ಬಲ್ಯ ಕಂಡುಬರಲಿದೆ. ಇದು ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡಲಿದೆ.

    ಮುನ್ನೆಚ್ಚರಿಕೆ ಕ್ರಮಗಳೇನು?
    ಅಂತರರಾಷ್ಟ್ರೀಯ ಪ್ರಯಾಣ ಕೈಗೊಳ್ಳುವವರು NB.1.8.1 ಮತ್ತು ಎಲ್‌ಎಫ್.7 ಎಚ್ಚರ ವಹಿಸಬೇಕಾಗಿದೆ. ವಿದೇಶಗಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮುಂಜಾಗ್ರತಾ ಕ್ರಮಗಳೊಂದಿಗೆ ಪ್ರಯಾಣ ಬೆಳೆಸುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲದೇ, ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದ ಸ್ಥಳೀಯರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ. ಸದ್ಯ ಸೋಂಕಿಗೆ ಒಳಗಾದವರಲ್ಲಿ ಬಹುಪಾಲು ಮಂದಿ ಯಾವುದೇ ಅಂತರರಾಜ್ಯ, ಅಂತರರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿಲ್ಲ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆರೋಗ್ಯ ಅಧಿಕಾರಿಗಳು ಸೋಂಕು ತಡೆಗಟ್ಟುವ ಕ್ರಮಗಳನ್ನು ಶಿಫಾರಸು ಮಾಡಿದ್ದಾರೆ.
    ವ್ಯಾಕ್ಸಿನೇಷನ್: ತೀವ್ರ ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡಲು, ಯಾವುದೇ ಶಿಫಾರಸು ಮಾಡಲಾದ ಬೂಸ್ಟರ್‌ಗಳನ್ನು ಒಳಗೊಂಡಂತೆ ಲಸಿಕೆಗಳು ಹಾಕಿಸಿಕೊಳ್ಳಿ.
    ಮಾಸ್ಕ್ ಧರಿಸುವುದು: ಜನದಟ್ಟಣೆ ಅಥವಾ ಸುತ್ತುವರಿದ ಸ್ಥಳಗಳಲ್ಲಿ, ಮಾಸ್ಕ್ ಧರಿಸುವುದರಿಂದ ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಬಹುದು.
    ಕೈ ನೈರ್ಮಲ್ಯ: ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ನಿಯಮಿತವಾಗಿ ಸೋಪ್ ಮತ್ತು ನೀರಿನಿಂದ ಕೈ ತೊಳೆಯಿರಿ ಅಥವಾ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸಿ.
    ರೋಗಲಕ್ಷಣಗಳನ್ನು ಮೇಲ್ವಿಚಾರಣೆ ಮಾಡುವುದು: ಮೇಲೆ ತಿಳಿಸಲಾದ ಯಾವುದೇ ಲಕ್ಷಣಗಳ ಬಗ್ಗೆ ಜಾಗರೂಕರಾಗಿರಿ. ಅವು ಕಾಣಿಸಿಕೊಂಡರೆ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
    ಐಸೋಲೇಷನ್: ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ವ್ಯಕ್ತಿಗಳು ಇತರರಿಗೆ ವೈರಸ್ ಹರಡುವುದನ್ನು ತಡೆಯಲು ಸ್ವಯಂ-ಪ್ರತ್ಯೇಕವಾಗಿರಬೇಕು.

    ಆಪಾಯಕಾರಿಯೇ?
    ಓಮಿಕ್ರಾನ್ ರೂಪಾಂತರದ ಉಪ-ವಂಶಾವಳಿಯೂ ಆಗಿದ್ದು, ಮಾರಕವಾಗಿಲ್ಲ. ಹಿಂದಿನ ತಳಿಗಳಿಗಿಂತ ಹೆಚ್ಚು ತೀವ್ರವಾದ ಅನಾರೋಗ್ಯವನ್ನು ಉಂಟುಮಾಡುತ್ತದೆ ಎಂಬುದಕ್ಕೆ ಯಾವುದೇ ಸೂಚನೆಗಳಿಲ್ಲ. ಆದರೆ, ಇದು ಹೆಚ್ಚು ಸಾಂಕ್ರಾಮಿಕವಾಗಬಹುದು. ಆದ್ದರಿಂದ ಬಹುಬೇಗ ಹರಡುತ್ತವೆ.

    ಸೋಂಕುಗಳು ಮೊದಲು ಕಂಡುಬಂದಿದ್ದೆಲ್ಲಿ?
    ಕೋವಿಡ್ ಹೊಸ ಉಪತಳಿಗಳು ಚೀನಾದ ಹಾಂಕಾಂಗ್ ಮತ್ತು ಸಿಂಗಾಪುರದಲ್ಲಿ ಮೊದಲು ಕಾಣಿಸಿಕೊಂಡವು.

    ಭಾರತದಲ್ಲಿ ಕಂಡುಬಂದಿದ್ದೆಲ್ಲಿ?
    ಎನ್‌ಬಿ.1.8.1 ಸೋಂಕು ಏಪ್ರಿಲ್‌ನಲ್ಲಿ ತಮಿಳಿನಾಡಿನಲ್ಲಿ ಮೊದಲು ಕಾಣಿಸಿಕೊಂಡಿತು. ಎಲ್‌ಎಫ್.7 ಸೋಂಕು ಮೇ ತಿಂಗಳಲ್ಲಿ ಗುಜರಾತ್‌ನಲ್ಲಿ ದೃಢಪಟ್ಟಿತು.

    ಹೊಸ ತಳಿಗಳು ಕೇರಳ, ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಮತ್ತು ಹಲವಾರು ಈಶಾನ್ಯ ರಾಜ್ಯಗಳಲ್ಲಿ ವರದಿಯಾಗಿವೆ. ಕೇರಳದಲ್ಲಿ ಪ್ರಸ್ತುತ ಅತಿ ಹೆಚ್ಚು ಪ್ರಕರಣಗಳಿವೆ. ನಂತರ ತಮಿಳುನಾಡು ಮತ್ತು ಮಹಾರಾಷ್ಟ್ರ ಇವೆ. ಮೇ 27ರ ವರದಿ ಪ್ರಕಾರ, ಭಾರತದಲ್ಲಿ ಕೋವಿಡ್ ಸೋಂಕುಗಳ ಸಂಖ್ಯೆ 1010ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಪ್ರಕರಣಗಳ ಸಂಖ್ಯೆ 430 ಕ್ಕೇರಿದೆ.

    2025ರಲ್ಲಿ ಕರ್ನಾಟಕದಲ್ಲೇ ಮೊದಲ ಬಲಿ
    ಈ ವರ್ಷದಲ್ಲಿ ಕೊರೊನಾ ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಬಲಿಯಾಗಿದೆ. ಕೆಲ ದಿನಗಳ ಹಿಂದಷ್ಟೇ 85 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರಿಗೆ ಇತರೆ ಅನಾರೋಗ್ಯ ಸಮಸ್ಯೆಗಳು ಕೂಡ ಇದ್ದವು ಎಂದು ತಿಳಿದುಬಂದಿದೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 73, ಬೆಂಗಳೂರು ಗ್ರಾಮಾಂತರ 2, ಮೈಸೂರು 3, ವಿಜಯನಗರ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

  • 3 ವರ್ಷಗಳ ಬಳಿಕ ಮತ್ತೆ ವಕ್ಕರಿಸಿದ ಕೊರೊನಾ – ದೇಶದ ಹಲವು ರಾಜ್ಯಗಳಲ್ಲಿ JN1 ಎಂಟ್ರಿ

    3 ವರ್ಷಗಳ ಬಳಿಕ ಮತ್ತೆ ವಕ್ಕರಿಸಿದ ಕೊರೊನಾ – ದೇಶದ ಹಲವು ರಾಜ್ಯಗಳಲ್ಲಿ JN1 ಎಂಟ್ರಿ

    – ದೇಶಾದ್ಯಂತ 398 ಕೇಸ್, ಕೇರಳವೊಂದರಲ್ಲೇ 273 ಪ್ರಕರಣ ದಾಖಲು
    – ಬೆಳಗಾವಿಯಲ್ಲಿ 25 ವರ್ಷದ ಗರ್ಭಿಣಿಗೆ ಸೋಂಕು

    ಬೆಂಗಳೂರು/ನವದೆಹಲಿ: 2020-2022ರ ಅವಧಿಯಲ್ಲಿ ಇಡೀ ಮನುಕುಲವನ್ನೇ ಅಲ್ಲೋಲ ಕಲ್ಲೋಲ ಮಾಡಿ ಮರಣ ಮೃದಂಗ ಬಾರಿಸಿದ್ದ ಕೊರೊನಾ ಸೋಂಕು ಮೂರು ವರ್ಷಗಳ ಮತ್ತೆ ದೇಶಕ್ಕೆ ಕಾಲಿಟ್ಟಿದೆ. ಇಡೀ ವಿಶ್ವವನ್ನೇ ತತ್ತರಿಸುವಂತೆ ಮಾಡಿದ್ದ ಕಣ್ಣಿಗೆ ಕಾಣದ ವೈರಸ್ ಮತ್ತೆ ದಾಂಗುಡಿ ಇಡ್ತಿದೆ. 2022ರಲ್ಲಿ ಕೊನೇದಾಗಿ ಕಾಣಿಸಿಕೊಂಡಿದ್ದ ಒಮಿಕ್ರಾನ್ ತಳಿಯ ಜೆಎನ್.1 ಪ್ರಭೇದ ಹೊಸ ಇನ್ನಿಂಗ್ಸ್ ಶುರು ಮಾಡಿದೆ.

    ಜೆಎನ್1 ಉಪ ತಳಿಗಳಾದ ಎನ್‌ಬಿ.1.8.1 ಮತ್ತು ಎಲ್‌ಎಫ್.7 ತಳಿಗಳ ಕಾಟ ಶುರು ಹಚ್ಚಿಕೊಂಡಿದೆ. ಸಿಂಗಪೂರ್‌, ಹಾಂಕಾಂಗ್, ಥೈಲ್ಯಾಂಡ್‌ ಸೇರಿ ದಕ್ಷಿಣ ಏಷ್ಯಾದಲ್ಲಿ ಕಾಣಿಸಿಕೊಂಡಿರುವ ವೈರಾಣು ಭಾರತಕ್ಕೂ ಎಂಟ್ರಿ ಕೊಟ್ಟಿದೆ. ದೇಶದ ಹಲವು ರಾಜ್ಯಗಳಲ್ಲಿ ನಿಧಾನಗತಿಯಲ್ಲಿ ಏರುತ್ತಿದೆ. ಕರ್ನಾಟಕದಲ್ಲಿ ಒಟ್ಟು 35 ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲೇ 32 ಆ್ಯಕ್ಟಿವ್ ಕೇಸ್ ಇವೆ. 9 ತಿಂಗಳ ಮಗು ಸೇರಿ 3 ಮಕ್ಕಳಿಗೆ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಮತ್ತೆ ಟೆಸ್ಟಿಂಗ್.. ಮಾಸ್ಕ್, ಐಸೋಲೇಷನ್ ಇತರ ಕೋವಿಡ್‌ ನಿಯಮಗಳು ಶುರುವಾಗಿದೆ.

    ದೇಶದಲ್ಲಿ ಕೋವಿಡ್ ಪ್ರಕರಣ ಮತ್ತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಕೂಡ ಅಲರ್ಟ್ ಆಗಿದೆ. ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಸೂಚನೆ ನೀಡಿದೆ. ಸೋಮವಾರದಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜೊತೆಗೆ ಆತಂಕ ಬೇಡ, ಎಚ್ಚರಿಕೆ ಇರಲಿ ಎಂದು ಸಾರ್ವಜನಿಕರಿಗೆ ಅಭಯ ನೀಡಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾಸ್ಕ್ ಧರಿಸಿಯೇ ಜನತಾ ದರ್ಶನ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದೆಲ್ಲೆಡೆ ಮೇ 24ರಿಂದ 28ರವೆರೆಗೆ ಭಾರೀ ಮಳೆ ಎಚ್ಚರಿಕೆ

    ಇದೀಗ ಓಮಿಕ್ರಾನ್‌ ತಳಿಯ ಜೆಎನ್‌1 ಪ್ರಭೇಡ ಕಾಣಿಸಿಕೊಂಡಿದ್ದು, ಎನ್‌ಬಿ.1.8.1 & ಎಲ್‌ಎಫ್.7 ಇದರ ಉಪತಳಿ ಆಗಿದೆ. ಕಳೆದ ಏಪ್ರಿಲ್‌ನಲ್ಲಿ ಎನ್‌ಬಿ.1.8.1 ತಮಿಳುನಾಡಿನಲ್ಲಿ ಪತ್ತೆಯಾಗಿತ್ತು. ಗುಜರಾತ್‌ನಲ್ಲಿ 4 ಎಲ್‌ಎಫ್.7 ಇದೇ ಮೇ ತಿಂಗಳಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಸಾವಿರ ಕೋಟಿ ಲಾಭ ಮಾಡೋ ಉದ್ದೇಶವಿದೆ – ತಮನ್ನಾ ಆಯ್ಕೆಗೆ ಪ್ರಿಯಾಂಕ್‌ ಖರ್ಗೆ ಸಮರ್ಥನೆ

    ಲಕ್ಷಣಗಳೇನು?
    ಜ್ವರ, ನೆಗಡಿ, ಕೆಮ್ಮು, ಆಯಾಸ, ತಲೆನೋವು, ಕೆಲವರಿಗೆ ಉಸಿರಾಟದ ತೊಂದರೆ. ಇದನ್ನೂ ಓದಿ: ವಿಧಾನಸೌಧ ಗೈಡೆಡ್ ಟೂರ್‌ಗೆ ಭಾನುವಾರ ಚಾಲನೆ – ಜೂ.1ರಿಂದ ಸಾರ್ವಜನಿಕರಿಗೆ ಪ್ರವೇಶ, ಶುಲ್ಕ ಪ್ರಕಟ

    ಭಾನುವಾರದಿಂದಲೇ ರಾಜ್ಯದಲ್ಲಿ ಕೊವಿಡ್ ಟೆಸ್ಟ್ ಶುರು:
    ಕೋವಿಡ್‌ ಕಾಣಿಸಿಕೊಂಡ ಹಿನ್ನೆಲೆ ಅಲರ್ಟ್‌ ಆಗಿರುವ ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜು ಜಿಲ್ಲಾಸ್ಪತ್ರೆಗಳಲ್ಲಿ ಭಾನುವಾರದಿಂದಲೇ ಟೆಸ್ಟಿಂಗ್‌ ಶುರು ಮಾಡಲು ಮುಂದಾಗಿದೆ. ಜೊತೆಗೆ 8 RTPCR ಟೆಸ್ಟಿಂಗ್‌ ಲ್ಯಾಬ್‌ ತೆರೆಯಲು ನಿರ್ಧರಿಸಿದೆ. ಜನದಟ್ಟಣೆ ಪ್ರದೇಶದಲ್ಲಿ ಜನರು, ಗರ್ಭಿಣಿಯರು, ಕಾಯಿಲೆ ಇರೋರು ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಐಎಲ್‌ಐ, ಸ್ಯಾರಿ ಲಕ್ಷಣ ಇದ್ದವ್ರು ಸೂಕ್ತ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಿದ್ದು, ಸ್ಯಾನಿಟೈಸರ್‌ ಬಳಸುವಂತೆ ಎಚ್ಚರಿಕೆ ನೀಢಿದೆ. ಇದನ್ನೂ ಓದಿ: 25,000 ರೂ.ಗೆ ಜೀತಕ್ಕಿರಿಸಿದ್ದ ಮಗ ಸಾವು – ರಹಸ್ಯವಾಗಿ ಸಮಾಧಿಯಲ್ಲಿ ಹೂತಿಟ್ಟಿದ್ದ ಮಾಲೀಕ ಅರೆಸ್ಟ್‌

    ಬೆಳಗಾವಿಯಲ್ಲಿ ಗರ್ಭಿಣಿಗೆ ಕೊರೊನಾ:
    ರಾಜ್ಯದ ಬೆಳಗಾವಿ ಜಿಲ್ಲೆಗೂ ಕೊರೊನಾ ಕಾಲಿಟ್ಟಿದ್ದು, 25 ವರ್ಷದ ಗರ್ಭಿಣಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಗರ್ಭಿಣಿಯನ್ನ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ ಅಂತ ಬೆಳಗಾವಿ ಡಿಎಚ್‌ಒ ಡಾ.ಈಶ್ವರ್ ಗಡಾದಿ ಮಾಹಿತಿ ನೀಡಿದ್ದಾರೆ. ಇನ್ನು ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ 10 ಬೆಡ್‌ಗಳ ವಾರ್ಡ್ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರದಿಂದ ಕೋವಿಡ್ ಪರೀಕ್ಷೆ ಆರಂಭಿಸಲು ಮುಂದಾಗಿದ್ದಾರೆ.

    ಕೇರಳದಲ್ಲಿ ಅತಿಹೆಚ್ಚು 273 ಕೇಸ್‌ ಪತ್ತೆ:
    ದಕ್ಷಿಣ ಏಷ್ಯಾದ ದೇಶಗಳಲ್ಲಿ ಕೊರೊನಾ ವೈರಸ್‌ನ ಉಪತಳಿ ಪತ್ತೆಯಾಗಿದ್ದು, ವೈರಾಣು ಭಾರತಕ್ಕೂ ಲಗ್ಗೆ ಇಟ್ಟಿದೆ. ದೇಶಾದ್ಯಂತ 398 ಕೇಸ್ ದಾಖಲಾಗಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಹೆಚ್ಚು ಕೇಸ್ ಪತ್ತೆ ಆಗ್ತಿವೆ. ಪಕ್ಕದ ಕೇರಳದಲ್ಲಿ ಅತಿಹೆಚ್ಚು 273 ಪ್ರಕರಣಗಳು ಪತ್ತೆ ಆಗಿವೆ. ರಾಷ್ಟ್ರ ರಾಜಧಾನಿ ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಅಲರ್ಟ್ ಆಗಿವೆ. ಹೊಸ ವೇರಿಯಂಟ್ ಎದುರಿಸಲು ಮುಂಜಾಗ್ರತಾ ಕ್ರಮ ವಹಿಸಲು ಸಜ್ಜಾಗ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯ ಪರಿಸ್ಥಿತಿ ಮೇಲೆ ನಿಗಾ ಇಟ್ಟಿದೆ. ಆಂಧ್ರಪ್ರದೇಶ, ದೆಹಲಿ ಸರ್ಕಾರ ಆಸ್ಪತ್ರೆಗಳಲ್ಲಿ ಬೆಡ್ ಸಜ್ಜುಗೊಳಿಸುವಂತೆ ಸೂಚಿಸಿದೆ.

  • ಬೆಂಗಳೂರಲ್ಲಿ 9 ತಿಂಗಳ ಮಗು ಸೇರಿ ಮೂರು ಮಕ್ಕಳಿಗೆ ಕೊರೊನಾ ಪಾಸಿಟಿವ್‌

    ಬೆಂಗಳೂರಲ್ಲಿ 9 ತಿಂಗಳ ಮಗು ಸೇರಿ ಮೂರು ಮಕ್ಕಳಿಗೆ ಕೊರೊನಾ ಪಾಸಿಟಿವ್‌

    – ರಾಜ್ಯದಲ್ಲಿ ಮತ್ತೆ ಕೊರೊನಾ ಹಾವಳಿ; ನಾಳೆಯಿಂದಲೇ ಕೋವಿಡ್‌ ಟೆಸ್ಟ್‌ ಆರಂಭ

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೋವಿಡ್‌ (Covid-19) ತೀವ್ರತೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಮೂರು ಮಕ್ಕಳಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

    ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನಾಳೆಯಿಂದಲೇ ಕೋವಿಡ್‌ ಪರೀಕ್ಷೆ ಆರಂಭಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಂಗಳೂರು | ಧಾರಾಕಾರ ಮಳೆಯಿಂದಾಗಿ ಬೆಸ್ಕಾಂಗೆ 3.54 ಕೋಟಿ ನಷ್ಟ

    ರಾಜ್ಯದಲ್ಲಿ ಒಟ್ಟು 35 ಕೊರೊನಾ (Corona Virus) ಪ್ರಕರಣಗಳು. ಆ ಪೈಕಿ ಬೆಂಗಳೂರಿನಲ್ಲೇ 33 ಕೇಸ್‌ಗಳು ವರದಿಯಾಗಿವೆ. ಗರ್ಭಿಣಿಯರು, ಮಕ್ಕಳು, ಹಿರಿಯರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

    ದೇಶಾದ್ಯಂತ 257 ಸಕ್ರಿಯ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಮೂರು ರಾಜ್ಯಗಳು ಒಟ್ಟಾಗಿ 85% ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಇದನ್ನೂ ಓದಿ: ಹೆಬ್ಬಾಳ ಫ್ಲೈಓವರ್‌ ಮೇಲೆ ಸರಣಿ ಅಪಘಾತ – ಚಾಲಕ ದುರ್ಮರಣ

    ಕೇರಳವು 95 ಸಕ್ರಿಯ ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 66 ಮತ್ತು ಮಹಾರಾಷ್ಟ್ರ 56 ಸಕ್ರಿಯ ಪ್ರಕರಣಗಳು ಇವೆ. ದೆಹಲಿ (23), ಪುದುಚೇರಿ (10), ಕರ್ನಾಟಕ (13), ಗುಜರಾತ್ (7), ರಾಜಸ್ಥಾನ (2), ಹರಿಯಾಣ (1), ಸಿಕ್ಕಿಂ (1), ಮತ್ತು ಪಶ್ಚಿಮ ಬಂಗಾಳ (1) ಸೇರಿವೆ.

    ಮೇ 12 ರಿಂದ ಭಾರತದಲ್ಲಿ 164 ಹೊಸ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿದ್ದು, ಸೋಂಕಿತರು ಆಸ್ಪತ್ರೆಗೆ ದಾಖಲಾಗಿಲ್ಲ. ಸಿಂಗಾಪುರ ಮತ್ತು ಹಾಂಕಾಂಗ್‌ನಲ್ಲಿ ಕೊರೊನಾದ ರೂಪಾಂತರಿ ಒಮಿಕ್ರಾನ್ ಜೆಎನ್‌1 ಉಪ ತಳಿಗಳಾದ ಎನ್‌ಬಿ.1.8 ಮತ್ತು ಎಲ್‌ಎಫ್‌.7 ಹಾವಳಿ ಹೆಚ್ಚಾಗಿದೆ.

  • ಒಂದೇ ವಾರದಲ್ಲಿ 25,900 ಕೊರೊನಾ ಪ್ರಕರಣಗಳು ಪತ್ತೆ- ಸಿಂಗಾಪುರದಲ್ಲಿ ಮಾಸ್ಕ್‌ ಕಡ್ಡಾಯ

    ಒಂದೇ ವಾರದಲ್ಲಿ 25,900 ಕೊರೊನಾ ಪ್ರಕರಣಗಳು ಪತ್ತೆ- ಸಿಂಗಾಪುರದಲ್ಲಿ ಮಾಸ್ಕ್‌ ಕಡ್ಡಾಯ

    ಸಿಂಗಾಪುರ: ಇಲ್ಲಿ ಮತ್ತೊಂದು ತೀವ್ರ ಕೋವಿಡ್-19 (COVID-19) ಅಲೆಯಿದ್ದು, ಮೇ 5 ಮತ್ತು 11 ರ ನಡುವೆ ಅಂದರೆ ಒಂದೇ ವಾರದಲ್ಲಿ ಪ್ರಕರಣಗಳ ಸಂಖ್ಯೆ 25,900 ಕ್ಕೆ ಏರಿದೆ. ಈ ಪೈಕಿ 13,700 ಪ್ರಕರಣಗಳು ಮೊದಲ ವಾರದಲ್ಲಿ ದೃಢಪಟ್ಟಿವೆ. ವೈರಸ್ ಹರಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ (Mask) ಧರಿಸುವಂತೆ ಸಿಂಗಾಪುರದ ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಒತ್ತಾಯಿಸಿದ್ದಾರೆ.

    ನಾವು ಕೊರೋನಾ ಅಲೆಯ ಆರಂಭಿಕ ಭಾಗದಲ್ಲಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದ್ದರಿಂದ ಮುಂದಿನ 2 ಅಥವಾ 4 ವಾರಗಳಲ್ಲಿ ಅಲೆಯು ಜಾಸ್ತಿಯಾಗುವ ಸಾಧ್ಯತೆಗಳಿವೆ. ಅಂದರೆ ಜೂನ್ ಮಧ್ಯ ಮತ್ತು ಅಂತ್ಯದ ನಡುವೆ ಕೊರೊನಾ ಪ್ರಕರಂಗಳು ಮತ್ತಷ್ಟು ಏರುವ ಸಂಭವಗಳಿವೆ ಎಂದು ಅವರು ತಿಳಿಸಿದರು.

    ಸಿಂಗಾಪುರದಲ್ಲಿ (Singapore) COVID-19 ಅನ್ನು ಸ್ಥಳೀಯ ರೋಗವೆಂದು ಪರಿಗಣಿಸಲಾಗಿರುವುದರಿಂದ ಹಾಗೂ ಕಡ್ಡಾಯ ನಿಯಮಗಳನ್ನು ಜಾರಿಗೆ ತರುವುದು ಕೊನೆಯ ಉಪಾಯವಾಗಿದೆ. ಇದುವರೆಗೆ ಯಾವುದೇ ನಿರ್ಬಂಧಗಳನ್ನು ಹೇರುವ ಬಗ್ಗೆ ನಿರ್ಧರಿಸಿಲ್ಲ ಎಂದು ಆರೋಗ್ಯ ಸಚಿವರು ಹೇಳಿದರು.

    ಕೋವಿಡ್‌ನೊಂದಿಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಈ ವಾರದಲ್ಲಿ ಕೋವಿಡ್‌ನಿಂದಾಗಿ ಸುಮಾರು 250 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರ 181 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಕರಣಗಳು ದ್ವಿಗುಣಗೊಂಡರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತದೆ. ಇದು ದೇಶದ ಆರೋಗ್ಯ ಕ್ಷೇತ್ರಕ್ಕೆ ಹೊರೆಯಾಗಬಹುದು ಎಂದು ನುಡಿದರು.

    60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು. ಕಳೆದ 12 ತಿಂಗಳುಗಳಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳದಿರುವವರು ಸುರಕ್ಷತಾ ಕ್ರಮದ ಮೊರೆ ಹೋಗುವಂತೆ ಸಚಿವರು ಸೂಚನೆ ನೀಡಿದ್ದಾರೆ.

  • ಅಮೆರಿಕದಲ್ಲಿ ವೇಗವಾಗಿ ಹರಡುತ್ತಿದೆ ಕೊರೊನಾ ರೂಪಾಂತರ FLiRT- ಮಹಾರಾಷ್ಟ್ರದಲ್ಲೂ ಪತ್ತೆ!

    ಅಮೆರಿಕದಲ್ಲಿ ವೇಗವಾಗಿ ಹರಡುತ್ತಿದೆ ಕೊರೊನಾ ರೂಪಾಂತರ FLiRT- ಮಹಾರಾಷ್ಟ್ರದಲ್ಲೂ ಪತ್ತೆ!

    – ಏನಿದು ಹೊಸ ರೋಗ..?, ಲಕ್ಷಣಗಳೇನು..?

    ಕೊರೊನಾ ವೈರಸ್..‌ ಹೆಸರು ಕೇಳಿದರೆನೇ ಭಯ ಶುರುವಾಗುತ್ತೆ. ಯಾಕೆಂದರೆ ಮಹಾಮಾರಿ ಕೊರೊನಾ ವೈರಸ್‌ ರಾಜ್ಯಕ್ಕೆ ಕಾಲಿಟ್ಟಾಗ ಸಾಕಷ್ಟು ಕಷ್ಟಗಳನ್ನು ಜನ ಅನುಭವಿಸಿದ್ದಾರೆ. ಎಲ್ಲಾ ಕಡೆಯೂ ಜನ ಕೋವಿಡ್‌ ನಿಂದ ಸಾವನ್ನಪ್ಪುತ್ತಿದ್ದರು. ಎಲ್ಲಿ ನೋಡಿದರೂ ಕೊರೊನಾ ವೈರಸ್‌ ಎಂಬ ಮಹಾಮಾರಿ ತಾಂಡವವಾಡುತ್ತಿತ್ತು. ಹೀಗಾಗಿ ಕೊರೊನಾ ವೈರಸ್‌ ಎಂದರೆ ಈಗಲೂ ಜನ ಬೆಚ್ಚಿ ಬೀಳುತ್ತಾರೆ. ಅಂದು ಕೋವಿಡ್‌ ನಿಂದ ಅನುಭವಿಸಿದ ನರಕಯಾತನೆ ಈಗಲೂ ಕಣ್ಣ ಮುಂದೆ ಹಾಗೆಯೇ ಇದೆ. ಬಳಿಕ ಕೊರೊನಾ ಲಸಿಕೆ ಬಂತು. ಲಸಿಕೆ ಬಂದ ಬಳಿಕವೂ ಸಾಕಷ್ಟು ಜನ ಯಾತನೆ ಅನುಭವಿಸಿದರು.

    ಇದೀಗ ಕೊರೊನಾ ವೈರಸ್‌ ಎಂಬ ಮಹಾಮಾರಿಯ ಅಧ್ಯಾಯ ಮುಗಿದು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಅನ್ನೋವಷ್ಟರಲ್ಲಿ ಮತ್ತೊಂದು ಆತಂಕ ಶುರುವಾಗಿದೆ. ಕೊರೊನಾ ಕಾಲದಲ್ಲಿ ಕಂಡುಬಂದಿದ್ದ ಒಮಿಕ್ರಾನ್‌ ರೂಪಾಂತರ ಸಾಕಷ್ಟು ಅಪಾಯಕಾರಿಯಾಗಿತ್ತು. ಈ ತಳಿಯಿಂದ ಹತ್ತಾರು ಹೊಸ ತಳಿಗಳು ಹುಟ್ಟಿಕೊಂಡಿದೆ. ಆದರೆ ಈಗ ಇದೇ ತಳಿಯಿಂದ ಮತ್ತೊಂದು ರೂಪಾಂತರ ಹೊರಬಂದಿದೆ.

    FLiRT ಎಂದು ಹೆಸರಿಸಲಾಗಿರುವ ಈ ಉಪತಳಿಯು ಅಮೆರಿಕದಲ್ಲಿ ಪತ್ತೆಯಾಗಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಈ ವಿಭಿನ್ನ ಗುಂಪನ್ನು ತೀವ್ರ ಉಸಿರಾಟದ ಸಿಂಡ್ರೋಮ್‌ ಕೊರೊನಾ ವೈರಸ್‌ 2 (SARS-Cov-2) FLiRT ರೂಪಾಂತರ KP.2 ಎಂದು ಹೆಸರಿಸಲಾಗಿದೆ. ಇದು ಸದ್ಯ ಅಮೆರಿಕದಲ್ಲಿ ವೇಗವಾಗಿ ಹರಡುತ್ತಿದೆ. ಏಪ್ರಿಲ್ 14 ರಿಂದ ಏಪ್ರಿಲ್ 27 ರವರೆಗೆ ಅಮೆರಿಕದಲ್ಲಿ ಸುಮಾರು 25% ನಷ್ಟು COVID-19 ಪ್ರಕರಣಗಳಿಗೆ ಕಾರಣವಾಗಿದೆ.

    ಈ ರೂಪಾಂತರದ ತೀವ್ರತೆ ಹೇಗಿದೆ..?: FLiRT ಹೊಸ ರೂಪಾಂತರಗಳೊಂದಿಗೆ ಒಮಿಕ್ರಾನ್ ವಂಶಾವಳಿಯ ಉಪ-ರೂಪವಾಗಿದೆ. ಈ ರೂಪಂತದಲ್ಲಿ ಕಠಿಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಸೂಚಿಸುವ ಪ್ರಕಾರ, KP.2 ಇತರ ತಳಿಗಳಿಗಿಂತ ಹೆಚ್ಚು ತೀವ್ರವಾದ ಅನಾರೋಗ್ಯವನ್ನು ಉಂಟುಮಾಡುತ್ತದೆ ಎಂದು ಸೂಚಿಸುವ ಯಾವುದೇ ಸೂಚಕಗಳು ಪ್ರಸ್ತುತ ಇಲ್ಲ.

    FLiRT ನ ಲಕ್ಷಣಗಳು:
    * FLiRT ರೂಪಾಂತರದ ರೋಗಲಕ್ಷಣಗಳು JN.1 ರ ಲಕ್ಷಣಗಳನ್ನು ಹೋಲುತ್ತವೆ.
    * ಜ್ವರ
    * ನಿರಂತರ ಕೆಮ್ಮು
    * ಗಂಟಲು ಕೆರೆತ
    * ಶೀತ
    * ತಲೆನೋವು
    * ಸ್ನಾಯು ನೋವುಗಳು
    * ಉಸಿರಾಟದ ತೊಂದರೆ
    * ಆಯಾಸ
    * ರುಚಿ ಇಲ್ಲದಿರುವುದು
    * ಜಠರಗರುಳಿನ ಸಮಸ್ಯೆಗಳು (ಉದಾಹರಣೆಗೆ ಹೊಟ್ಟೆ ನೋವು, ಸೌಮ್ಯವಾದ ಅತಿಸಾರ, ವಾಂತಿ)

    ರೋಗಲಕ್ಷಣಗಳು ಕೆಲವೊಂದು ವ್ಯಕ್ತಿಗಳಲ್ಲಿ ಬದಲಾಗಬಹುದು ಮತ್ತು ಹೊಸ ರೂಪಾಂತರಗಳೊಂದಿಗೆ ವಿಕಸನಗೊಳ್ಳಬಹುದು ಎಂದು CDC ತಿಳಿಸಿದೆ.

    ಇದು ಹೆಚ್ಚು ಸಾಂಕ್ರಾಮಿಕವಾಗಿದೆಯೇ?: ನಿರ್ದಿಷ್ಟವಾಗಿ KP.2 ಅನ್ನು ಹಿಂದಿನ ಓಮಿಕ್ರಾನ್ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. FLiRT ರೂಪಾಂತರಗಳು ಉಸಿರಾಟದ ಹನಿಗಳ ಮೂಲಕ ಸುಲಭವಾಗಿ ಹರಡಬಹುದು. ಈ ಮೂಲಕ ಎಲ್ಲರಿಗೂ ಅಪಾಯವನ್ನು ಉಂಟುಮಾಡುತ್ತದೆ. ವಿಶೇಷವಾಗಿ ಲಸಿಕೆ ಹಾಕದವರಿಗೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಎಚ್ಚರದಿಂದ ಇರಬೇಕಾಗುತ್ತದೆ.

    ತಡೆಗಟ್ಟುವ ವಿಧಾನ: ತೀವ್ರ ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡಲು ಬೂಸ್ಟರ್‌ಗಳನ್ನು ಒಳಗೊಂಡಂತೆ ಕೋವಿಡ್-19 ಲಸಿಕೆಗಳನ್ನು ತೆಗೆದುಕೊಂಡರೆ ತಡೆಗಟ್ಟಬಹುದು. ಯಾರಲ್ಲಾದರೂ ಕೋವಿಡ್‌ ಲಕ್ಷಣ ಕಾಣಿಸಿಕೊಂಡರೆ ಅಂತವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿ. ಅಲ್ಲದೇ ಮುಂಜಾಗ್ರತಾವಾಗಿ ನೀವು ಒಮ್ಮೆ ಟೆಸ್ಟ್‌ ಮಾಡಿಸಿಕೊಳ್ಳಿ. ಒಂದು ವೇಳೆ ಪಾಸಿಟಿವ್‌ ಕಾಣಿಸಿಕೊಂಡರೆ ಪ್ರತ್ಯೇಕವಾಗಿರಿ ಹಾಗೂ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ. ಇದರಿಂದ ರೋಗ ಹರಡುವುದನ್ನು ತಪ್ಪಿಸಬಹುದು.

    ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಜೊತೆಗೆ ಆಗಾಗ ನಿಮ್ಮ ಕೈ ಕಾಲುಗಳನ್ನು ಸೋಪಿನಿಂದ ಕ್ಲೀನ್‌ ಮಾಡಿಕೊಳ್ಳಿ. ಸ್ಥಳೀಯ ಪ್ರಸರಣ ಮಟ್ಟಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಸಾರ್ವಜನಿಕ ಆರೋಗ್ಯ ಮಾರ್ಗದರ್ಶನವನ್ನು ಅನುಸರಿಸುವುದು FLiRT ರೂಪಾಂತರದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಈ ರೂಪಾಂತರಿ ಯಾರಿಗೆ ಹೆಚ್ಚು ಅಪಾಯಕಾರಿ?: ಮಕ್ಕಳು, ಗರ್ಭಿಣಿಯರು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್‌ನಂತಹ ಕೊಮೊರ್ಬಿಡಿಟಿ ಇರುವವರು ಮತ್ತು ವೃದ್ಧರು ತಮ್ಮ ಯೋಗಕ್ಷೇಮದ ವಿಚಾರದಲ್ಲಿ ಹೆಚ್ಚಿನ ಜಾಗರೂಕರಾಗಿರಬೇಕು.

    ಮಹಾರಾಷ್ಟ್ರದಲ್ಲಿ ಪತ್ತೆ: ಅಮೆರಿಕ, ಆಸ್ಟ್ರೇಲಿಯಾ, ಚಿಲಿ ದೇಶಗಳಲ್ಲಿ ಹೊಸ ಅಲೆಗೆ ಕಾರವಾಗಿರುವ ಒಮಿಕ್ರಾನ್‌ ಕೊರೊನಾ ವೈರಸ್‌ನ ಹೊಸ ಉಪತಳಿ ಫ್ಲಿರ್ಟ್‌ ಇದೀಗ ಮಹಾರಾಷ್ಟ್ರದಲ್ಲಿ ಕೂಡ ಪತ್ತೆಯಾಗಿದೆ. ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಸುಮಾರು 91 ಪ್ರಕರಣಗಳು ಪತ್ತೆಯಾಗಿದೆ.

    ಎಲ್ಲೆಲ್ಲಿ ಎಷ್ಟು ಕೇಸ್‌ ದಾಖಲು: ಪುಣೆಯಲ್ಲಿ 51, ಥಾಣೆ 20, ಅಮರಾವತಿ, ಔರಂಗಬಾದ್‌, ಸೊಲ್ಹಾಪುರದಲ್ಲಿ ತಲಾ 2 ಮತ್ತು ಅಹಮ್ಮದ್‌ ನಗರ, ನಾಸಿಕ್‌, ಲಾಥೋರ್‌, ಸಾಂಗ್ಲಿಯಲ್ಲಿ ತಲಾ ಒಬ್ಬರಲ್ಲಿ ಕೋವಿಡ್‌ ಸೋಂಕಿನ ಉಪತಳಿ ಪತ್ತೆಯಾಗಿದೆ. ಜನವರಿ ತಿಂಗಳಿನಲ್ಲಿ ಅಮೆರಿಕಲ್ಲಿ ಒಮಿಕ್ರಾನ್‌ನ ಮೊದಲ ಪ್ರಕರಣ ಪತ್ತೆಯಾಗಿತ್ತು. ಭಾನುವಾರ ಅಮೆರಿಕದಲ್ಲಿ 1125, ಚಿಲಿಯಲ್ಲಿ 1215, ಹಾಂಕಾಂಗ್‌ನಲ್ಲಿ 696, ಆಸ್ಟ್ರೇಲಿಯಾದಲ್ಲಿ 664 ಪ್ರಕರಣಗಳು ದಾಖಲಾಗಿವೆ.

  • ಕೋವಿಶೀಲ್ಡ್‌ನಿಂದ ಅಡ್ಡಪರಿಣಾಮ- ಏನಿದು TTS ಸಿಂಡ್ರೋಮ್‌?- ಕಾರಣ ಮತ್ತು ಲಕ್ಷಣಗಳೇನು..?

    ಕೋವಿಶೀಲ್ಡ್‌ನಿಂದ ಅಡ್ಡಪರಿಣಾಮ- ಏನಿದು TTS ಸಿಂಡ್ರೋಮ್‌?- ಕಾರಣ ಮತ್ತು ಲಕ್ಷಣಗಳೇನು..?

    – ಐಸಿಎಂಆರ್‌ ಕೊಟ್ಟ ಸ್ಪಷ್ಟನೆ ಏನು..?

    ವಿಶ್ವಾದ್ಯಂತ ಮಹಾಮಾರಿ ಕೊರೊನಾ ವೈರಸ್‌ (Corona Virus) ಜನರನ್ನು ದಂಗುಬಡಿಸಿತ್ತು. ಸಾವಿರಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರೆ ಇನ್ನೂ ಕೆಲವರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ಈ ನಡುವೆ ಕೊರೊನಾವನ್ನು ಹೊಡೆದೋಡಿಸಲು ಚಿಕಿತ್ಸೆಯನ್ನು ಕಂಡುಹಿಡಿಯಲಾಯಿತು. ಅಂತೆಯೇ ಮಹಾಮಾರಿಗೆ ಭಯ ಬಿದ್ದು ಎಲ್ಲರೂ ಕೋವಿಶೀಲ್ಡ್‌ (Covishield) ಹಾಗೂ ಕೋವ್ಯಾಕ್ಸಿನ್‌ ಮೊರೆ ಹೋದರು.

    ಹೌದು. ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು. ಭಾರತ ದೇಶದಲ್ಲಿ ಈ ಲಸಿಕೆ ವ್ಯಾಪಕವಾಗಿ ನಿರ್ವಹಿಸಲ್ಪಟ್ಟಿತು. ಅಲ್ಲದೇ ಪ್ರಪಂಚದಾದ್ಯಂತ ದೇಶಗಳು ತಮ್ಮ ನಾಗರಿಕರಿಗೆ ಈ ಲಸಿಕೆಯನ್ನು ನೀಡುವುದನ್ನು ಮುಂದುವರಿಸಿದವು. ಈ ಮಧ್ಯೆ ಅಪರೂಪದ ಅಡ್ಡಪರಿಣಾಮಗಳ ವರದಿಗಳು ಹೊರಹೊಮ್ಮಿವೆ. ಇದನ್ನು ಟಿಟಿಎಸ್‌ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ. ಹಾಗಿದ್ರೆ ಏನಿದು ಟಿಟಿಎಸ್..?‌, ಇದರ ಲಕ್ಷಣಗಳು ಏನೇನು ಎಂಬುದನ್ನು ನೋಡೋಣ. ಜೊತೆಗೆ ಅಡ್ಡಪರಿಣಾಮದ ವಿಚಾರ ಹೊರ ಬೀಳುತ್ತಿದ್ದಂತೆಯೇ ಐಸಿಎಂಆರ್‌ ಸ್ಪಷ್ಟನೆ ಕೂಡ ಕೊಟ್ಟಿದೆ.

    ಏನಿದು TTS ಸಿಂಡ್ರೋಮ್?
    ಟಿಟಿಎಸ್‌ ಅಂದ್ರೆ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್. ರಕ್ತ ಹೆಪ್ಪುಗಟ್ಟುವುದಕ್ಕೆ ಥ್ರಂಬೋಸಿಸ್ ಅಂತಾ ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದಕ್ಕೆ ಥ್ರಂಬೋಸೈಟೋಪೆನಿಯಾ ಅಂತಲೂ ಕರೆಯಲಾಗುತ್ತದೆ. ಒಟ್ಟಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಪ್ಲೇಟ್‌ಲೆಟ್‌ಗಳು (ಪ್ರತಿ ಮೈಕ್ರೋಲೀಟರ್‌ಗೆ 1,50,000 ಕ್ಕಿಂತ ಕಡಿಮೆ) ಕಡಿಮೆಯಾಗುವುದಕ್ಕೆ TTS ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ.

    TTS ಸಿಂಡ್ರೋಮ್, ಲಸಿಕೆ-ಪ್ರೇರಿತ ಇಮ್ಯೂನ್ ಥ್ರಂಬೋಟಿಕ್ ಥ್ರಂಬೋಸೈಟೋಪೆನಿಯಾ (VITT) ಎಂದೂ ಕರೆಯಲ್ಪಡುವ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಯಾಗಿದ್ದು, ಇದು ಕೋವಿಶೀಲ್ಡ್ ಲಸಿಕೆಗೆ ಸಂಬಂಧಿಸಿದೆ. ಇದು ಒಂದು ರೀತಿಯ ಸೆರೆಬ್ರಲ್ ವೆನಸ್ ಸೈನಸ್ ಥ್ರಂಬೋಸಿಸ್ (ಸಿವಿಎಸ್‌ಟಿ) ಆಗಿದ್ದು, ಮೆದುಳಿನ ಸೈನಸ್‌ಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳುತ್ತದೆ. ಮೆದುಳಿನಿಂದ ರಕ್ತವು ಹೊರಹೋಗುವುದನ್ನು ತಡೆಯುತ್ತದೆ. ಇದು ಪ್ಲೇಟ್ಲೆಟ್ ಇಳಿಕೆಗೆ ಕಾರಣವಾಗುತ್ತದೆ ಮತ್ತು ದೇಹದ ವಿವಿಧ ಭಾಗಗಳಲ್ಲಿ ರಕ್ತಸ್ರಾವ ಅಥವಾ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.

    ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, TTS ಸಿಂಡ್ರೋಮ್ ಗಂಭೀರ ಮತ್ತು ಅಪರೂಪದ ಪ್ರತಿಕೂಲ ಘಟನೆಯಾಗಿದ್ದು, ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಕಡಿಮೆ ಸಂಖ್ಯೆಯ ಜನರಲ್ಲಿ ವರದಿಯಾಗಿದೆ. ಈ ಸ್ಥಿತಿಯು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ವರದಿಯಾಗಿದೆ. ಆದಾಗ್ಯೂ ಲಸಿಕೆಯನ್ನು ಪಡೆಯುವ ಪ್ರಯೋಜನಗಳು TTS ಸಿಂಡ್ರೋಮ್‌ಗೆ ಸಂಬಂಧಿಸಿದ ಅಪಾಯಗಳನ್ನು ಮೀರಿಸುತ್ತದೆ.

    ಕಾರಣಗಳೇನು..?
    TTS ಸಿಂಡ್ರೋಮ್‌ ಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಬಳಿಕ ಉಂಟಾದ ಪ್ರತಿಕ್ರಿಯೆಯಿಂದ ಇದೂ ಒಂದು ಕಾರಣ ಎಂದು ನಂಬಲಾಗಿದೆ. ಲಸಿಕೆ ದೇಹವನ್ನು ಪ್ರವೇಶಿಸಿದಾಗ, ಕೊರೊನಾ ವೈರಸ್ ಮೇಲ್ಮೈಯಲ್ಲಿ ಕಂಡುಬರುವ ಸ್ಪೈಕ್ ಪ್ರೋಟೀನ್ ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸಲು ಇದು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಕೆಲವು ವ್ಯಕ್ತಿಗಳ ದೇಹದಲ್ಲಿ ಇದು ಬೇಗನೇ ಸಕ್ರಿಯವಾಗಬಹುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ರಚನೆಗೆ ಕಾರಣವಾಗಬಹುದು.

    ಟಿಟಿಎಸ್ ಸಿಂಡ್ರೋಮ್‌ನ ಲಕ್ಷಣಗಳು:
    * ತೀವ್ರ ಮತ್ತು ನಿರಂತರ ತಲೆನೋವು
    * ಮಂದ ದೃಷ್ಟಿ
    * ಉಸಿರಾಟದ ತೊಂದರೆ
    * ಎದೆ ನೋವು
    * ತೀವ್ರ ಹೊಟ್ಟೆ ನೋವು
    * ತೋಳುಗಳು ಅಥವಾ ಕಾಲುಗಳಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ
    * ರೋಗಗ್ರಸ್ತವಾಗುವಿಕೆ

    ಟಿಟಿಎಸ್ ಸಿಂಡ್ರೋಮ್‌ಗೆ ಚಿಕಿತ್ಸೆ: ಟಿಟಿಎಸ್​​ ಚಿಕಿತ್ಸೆಯು ಬಹು ಹಂತದ ಚಿಕಿತ್ಸೆಯಾಗಿದೆ. ಆಸ್ಪತ್ರೆಗೆ ದಾಖಲೀಕರಣದಿಂದ ಹೆಪ್ಪುಗಟ್ಟುವಿಕೆ ಚಿಕಿತ್ಸೆ ಮೂಲಕ ಭವಿಷ್ಯದಲ್ಲಿ ಉಂಟಾಗುವ ರಕ್ತ ಹೆಪ್ಪುಗಟ್ಟುವಿಕೆ ತಪ್ಪಿಸಬಹುದು. ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ (ಐವಿಐಜಿ) ಮತ್ತು ಪ್ಲಾಸ್ಮಾ ಬದಲಾವಣೆ ಮೂಲಕ ಪ್ಲೆಟ್ಲೇಟ್​​ ಮಟ್ಟವನ್ನು ಸ್ಥಿರಗೊಳಿಸಬಹುದು.

    ICMR ಸ್ಪಷ್ಟನೆ: ಅಡ್ಡಪರಿಣಾಮದ ವಿಚಾರ ಹೊರಬೀಳುತ್ತಿದ್ದಂತೆಯೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟನೆಯನ್ನು ನೀಡಿದೆ. ಕೊರೊನಾ ಲಸಿಕೆ ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳಲ್ಲಿ ಮಾತ್ರ TTS ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮ ಉಂಟಾಗಲಿದೆ. ಮೊದಲ ಡೋಸ್ ಪಡೆದಾಗ ಅಪಾಯವು ಅತ್ಯಧಿಕವಾಗಿರಲಿದೆ. ಆದರೆ ಅದು ಎರಡನೇ ಡೋಸ್‌ಗೆ ಕಡಿಮೆಯಾಗುತ್ತದೆ. ಮೂರನೇ ಡೋಸ್‌ಗೆ ಈ ಅಪಾಯ ಇನ್ನೂ ಕಡಿಮೆಯಾಗಲಿದೆ. ಒಂದು ವೇಳೆ ಅಡ್ಡ ಪರಿಣಾಮ ಸಂಭವಿಸಿದ್ದಲ್ಲಿ ಆರಂಭಿಕ ಎರಡರಿಂದ ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ ಎಂದು ಭಾರತದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ನಿವೃತ್ತ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಹೇಳಿದ್ದಾರೆ‌.