Tag: corona virsu

  • ಇಂದು 667 ಪಾಸಿಟಿವ್ – 21 ಸಾವು, 1,674 ರೋಗಿಗಳು ಡಿಸ್ಚಾರ್ಜ್

    ಇಂದು 667 ಪಾಸಿಟಿವ್ – 21 ಸಾವು, 1,674 ರೋಗಿಗಳು ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಕೋವಿಡ್‍ನಿಂದ ಚೇತರಿಸಿಕೊಳ್ಳುತ್ತಿದೆ.

    ಬುಧವಾರ ಒಟ್ಟು 667 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 21 ಜನ ಸೊಂಕಿನಿಂದ ಮೃತಪಟ್ಟಿದ್ದಾರೆ. ಬಾಗಲಕೋಟೆ ಹಾಗೂ ಬೀದರ್ ಜಿಲ್ಲೆಗಳಲ್ಲಿ ಇಂದು ಯಾವುದೇ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಬಂಧನ – ಶಿವಮೊಗ್ಗದಲ್ಲಿ 7 ಡ್ರೋಣ್‍ಗಳ ಕಾರ್ಯಾಚರಣೆ

    ಇಂದು ರಾಜ್ಯದಲ್ಲಿ 1,674 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯ ವರೆಗೆ 38,89,418 ರೋಗಿಗಳು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸದ್ಯ 9,378 ಸಕ್ರಿಯ ಪ್ರಕರಣಗಳು ಇದ್ದು, ಕೋವಿಡ್-19 ಮರಣ ಪ್ರಮಾಣ ಶೇ.3.14 ಇದೆ. ಇದನ್ನೂ ಓದಿ: ಹಿಜಬ್ ಹಾಕಿದಂತೆ ಶಾಲೆಗಳಲ್ಲಿ ಕೇಸರಿ ಹಾಕಿಸುತ್ತೇವೆ, ನಮ್ಮ ಅನ್ನ ತಿಂದು ನಮಗೆ ದ್ರೋಹ: ಬಸವರಾಜ್

    ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ಬಾಗಲಕೋಟೆ 0, ಬಳ್ಳಾರಿ 24, ಬೆಳಗಾವಿ 32, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 368, ಬೀದರ್ 0, ಚಾಮರಾಜನಗರ 5, ಚಿಕ್ಕಬಳ್ಳಾಪುರ 1, ಚಿಕ್ಕಮಗಳುರು 11, ಚಿತ್ರದುರ್ಗ 6, ದಕ್ಷಿಣ ಕನ್ನಡ 18, ದಾವಣಗೆರೆ 4, ಧಾರವಾಡ 6, ಗದಗ 2, ಹಾಸನ 17, ಹಾವೇರಿ 2, ಕಲಬುರಗಿ 10, ಕೊಡಗು 16, ಕೋಲಾರ 4, ಕೊಪ್ಪಳ 1, ಮಂಡ್ಯ 13, ಮೈಸೂರು 28, ರಾಯಚುರು 6, ರಾಮನಗರ 4, ಶಿವಮೊಗ್ಗ 28, ತುಮಕುರು 20, ಉಡುಪಿ 15, ಉತ್ತರ ಕನ್ನಡ 10, ವಿಜಯಪುರ 8 ಹಾಗೂ ಯಾದಗಿರಿ 1 ಕೋವಿಡ್ ಪ್ರಕರಣಗಳು ದಾಖಲಾಗಿವೆ.

  • ರಾಜ್ಯದಲ್ಲಿ ಕೊರೊನಾ ಪ್ರಕರಣದಲ್ಲಿ ಇಳಿಕೆ- 31,198 ಮಂದಿಯಲ್ಲಿ ಸೋಂಕು ಪತ್ತೆ, 50 ಜನ ಸಾವು

    ರಾಜ್ಯದಲ್ಲಿ ಕೊರೊನಾ ಪ್ರಕರಣದಲ್ಲಿ ಇಳಿಕೆ- 31,198 ಮಂದಿಯಲ್ಲಿ ಸೋಂಕು ಪತ್ತೆ, 50 ಜನ ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯತ್ತ ಮುಖಮಾಡಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಇಳಿಕೆ ಆಗ್ತಿದೆ. ರಾಜ್ಯದಲ್ಲಿಂದು 1.49 ಲಕ್ಷ ಟೆಸ್ಟ್ ನಡೆಸಲಾಗಿದ್ದು, 31,198 ಕೇಸ್ ಬಂದಿದೆ. ಬೆಂಗಳೂರಿನಲ್ಲಿ 15,199 ಮಂದಿಗೆ ಸೋಂಕು ತಗುಲಿದೆ.

    ಮೈಸೂರು, ತುಮಕೂರು, ಹಾಸನ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಒಂದು ಸಾವಿರಕ್ಕಿಂತ ಹೆಚ್ಚು ಪ್ರಕರಣ ನಮೂದಾಗಿವೆ. ಉಳಿದ ಕಡೆ ಸೋಂಕು ಕಡಿಮೆ ಆಗ್ತಾ ಇದೆ. ಆದ್ರೆ ಸಾವಿನ ಪ್ರಮಾಣ ಮಾತ್ರ ಕಡಿಮೆ ಆಗ್ತಿಲ್ಲ.. ಇವತ್ತು 50 ಮಂದಿ ಸೋಂಕಿಗೆ ಬಲಿ ಆಗಿದ್ದಾರೆ. ಬೆಂಗಳೂರು-ಮೈಸೂರಿನಲ್ಲಿ ತಲಾ 8 ಸೋಂಕಿತರು ಸಾವನ್ನಪ್ಪಿದ್ದಾರೆ. ಹಾಸನದಲ್ಲಿ ಐವರು, ದಕ್ಷಿಣ ಕನ್ನಡ ಮತ್ತು ತುಮಕೂರಿನಲ್ಲಿ ತಲಾ ನಾಲ್ವರು ಬಲಿ ಆಗಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

    ಜನವರಿ 25ರಂದು ಏಳು ಮಂದಿ, ಜನವರಿ 26ರಂದು ಆರು ಮಂದಿ, ಜನವರಿ 27ರಂದು ಅಂದ್ರೆ ನಿನ್ನೆ ಒಬ್ಬರು ಸೋಂಕಿಗೆ ಬಲಿ ಆಗಿರುವುದನ್ನು ಇವತ್ತಿನ ಬುಲೆಟಿನ್‍ನಲ್ಲಿ ಉಲ್ಲೇಖಿಸಲಾಗಿದೆ. ಉಳಿದ 36 ಮಂದಿ ಜನವರಿ 9ರಿಂದ ಜನವರಿ 24ರವರೆಗೂ ಸಾವನ್ನಪ್ಪಿದವರಾಗಿದ್ದಾರೆ. ಸಮಾಧಾನದ ಸಂಗತಿ ಅಂದ್ರೆ ಚೇತರಿಸಿಕೊಂಡವರ ಸಂಖ್ಯೆ ಹೊಸ ಕೇಸ್‍ಗಿಂತ ದುಪ್ಪಟ್ಟಿದೆ. ಇಂದು ಬರೋಬ್ಬರಿ 71,092 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಕೇಸ್‍ಗಳ ಸಂಖ್ಯೆ 2.88 ಲಕ್ಷಕ್ಕೆ ಕುಸಿದಿದೆ.

    ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ ಬಾಗಲಕೋಟೆ 187, ಬಳ್ಳಾರಿ 709, ಬೆಳಗಾವಿ 725, ಬೆಂಗಲೂರು ಗ್ರಾಮಾಂತರ 558, ಬೆಂಗಳೂರು ನಗರ 15,199, ಬೀದರ್ 194, ಚಾಮರಾಜನಗರ 618, ಚಿಕ್ಕಬಳ್ಳಾಪುರ 427, ಚಿಕ್ಕಮಗಳೂರು 283, ಚಿತ್ರದುರ್ಗ 192, ದಕ್ಷಿಣ ಕನ್ನಡ 516, ದಾವಣಗೆರೆ 186, ಧಾರವಾಡ 1,500, ಗದಗ 171, ಹಾಸನ 1037, ಹಾವೇರಿ 179, ಕಲಬುರಗಿ 406. ಕೊಡಗು 371, ಕೋಲಾರ 452, ಕೊಪ್ಪಳ 227, ಮಂಡ್ಯ 963, ಮೈಸೂರು 1877, ರಾಯಚೂರು 225, ರಾಮನಗರ 262, ಶಿವಮೊಗ್ಗ 509, ತುಮಕೂರು 1315, ಉಡುಪಿ 818, ಉತ್ತರ ಕನ್ನಡ 760, ವಿಜಯಪುರ 125, ಯಾದಗಿರಿ 207 ಹೊಸ ಪ್ರಕರಣಗಳು ಪತ್ತೆಯಾಗಿವೆ.

    ಇತ್ತ ದೇಶದಲ್ಲಿ ಕೋವಿಡ್ ಕಡಿಮೆ ಆಗ್ತಾ ಇದೆ. ಸತತ ನಾಲ್ಕನೇ ದಿನವೂ ಮೂರು ಲಕ್ಷದ ಒಳಗೆ ಕೋವಿಡ್ ಕೇಸ್ ವರದಿ ಆಗಿದೆ. ನಿನ್ನೆ 2.51 ಲಕ್ಷ ಮಂದಿಗೆ ಸೋಂಕು ತಗುಲಿದೆ. ಪಾಸಿಟಿವಿಟಿ ರೇಟ್ 15.88ಕ್ಕೆ ಇಳಿದಿದೆ. ಕೇರಳದಲ್ಲಿ ವರದಿ ಆಗ್ತಿರುವ ಪ್ರಕರಣಗಳಲ್ಲಿ ಶೇಕಡಾ 94ರಷ್ಟು ಒಮಿಕ್ರಾನ್ ತಳಿ ಕಂಡುಬಂದಿದೆ. ತಮಿಳುನಾಡು, ಆಂಧ್ರ, ಗುಜರಾತ್, ರಾಜಸ್ಥಾನದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿದೆ. ದೇಶದಲ್ಲಿ ಕೇಸ್ ಕಡಿಮೆಯಾದ್ರೂ ಮರಣಗಳು ಹೆಚ್ಚಿರೋದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ 627 ಮಂದಿ ಬಲಿ ಆಗಿದ್ದಾರೆ. ಇದ್ರಲ್ಲಿ 153 ಸಾವು ಕೇರಳದಲ್ಲಿಯೇ ಸಂಭವಿಸಿವೆ.

    ಹೊಸ ಕೇಸ್‍ಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಿದೆ. ನಿನ್ನೆ 3.47 ಲಕ್ಷ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಕೇಸ್ 21 ಲಕ್ಷಕ್ಕೆ ಇಳಿದಿದೆ. ಇನ್ನು, ಕೋವಿಡ್ ನಿರೋಧಿಸಲು ಮೂಗಿನ ಮೂಲಕ ತೆಗೆದುಕೊಳ್ಳುವ ಕೊವ್ಯಾಕ್ಸಿನ್ ಇಂಟ್ರಾನಾಸಲ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲು ಅಂತಿಮ ಹಂತದ ಪ್ರಯೋಗ ನಡೆಸಲು ಭಾರತ್ ಬಯೋಟೆಕ್‍ಗೆ ಡಿಸಿಜಿಐ ಅನುಮತಿ ನೀಡಿದೆ.

  • ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ – ಒಂದೇ ದಿನ 786 ಕೇಸ್‌, ಜಿಲ್ಲೆಗಳಲ್ಲೂ ಅಬ್ಬರ

    ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ – ಒಂದೇ ದಿನ 786 ಕೇಸ್‌, ಜಿಲ್ಲೆಗಳಲ್ಲೂ ಅಬ್ಬರ

    ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸ್ಫೋಟಗೊಂಡಿದೆ. ಇಂದು ಒಂದೇ ದಿನ 1,275 ಮಂದಿಗೆ ಸೋಂಕು ಬಂದಿದೆ.

    ಬೆಂಗಳೂರು ನಗರದಲ್ಲೇ 786 ಮಂದಿಗೆ ಕೊರೊನಾ ಬಂದಿದ್ದರೆ ದಕ್ಷಿಣ ಕನ್ನಡದಲ್ಲಿ 72, ಕಲಬುರಗಿ 61, ಉಡುಪಿ 42, ಮೈಸೂರು 35 ಮಂದಿಗೆ ಸೋಂಕು ಬಂದಿದೆ.

    ಇಂದು ಆಸ್ಪತ್ರೆಯಿಂದ 479 ಮಂದಿ ಬಿಡುಗಡೆಯಾಗಿದ್ದರೆ 4 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,63,614ಕ್ಕೆ ಏರಿಕೆ ಆಗಿದೆ. ಈ ಪೈಕಿ 9,40,968 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 10,220 ಸಕ್ರಿಯ ಪ್ರಕರಣಗಳಿವೆ.

    ಇಲ್ಲಿಯವರೆಗೆ ಒಟ್ಟು 12,407 ಮಂದಿ ಮೃತಪಟ್ಟಿದ್ದಾರೆ. ಐಸಿಯುನಲ್ಲಿ 134 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 86,648 ಕೊರೊನಾ ಟೆಸ್ಟ್‌ ಮಾಡಲಾಗಿದೆ. ಇಂದು ಒಟ್ಟು 1,51,135 ಮಂದಿಗೆ ಲಸಿಕೆ ನೀಡಲಾಗಿದೆ.

    ಬೆಂಗಳೂರಿನಲ್ಲಿ 52, ಕಲಬುರಗಿ 15, ಮಂಡ್ಯ 7 ಸೇರಿದಂತೆ ಒಟ್ಟು ರಾಜ್ಯದಲ್ಲಿ 134 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಸಹೋದ್ಯೋಗಿಯ ಗರ್ಭಿಣಿ ಪತ್ನಿಗೆ ಸಹಾಯ- ಮಗುವಿಗೆ ಮಹಿಳೆಯ ಹೆಸರಿಟ್ಟ ದಂಪತಿ

    ಸಹೋದ್ಯೋಗಿಯ ಗರ್ಭಿಣಿ ಪತ್ನಿಗೆ ಸಹಾಯ- ಮಗುವಿಗೆ ಮಹಿಳೆಯ ಹೆಸರಿಟ್ಟ ದಂಪತಿ

    ತಿರುವನಂತಪುರಂ: ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದ್ದ ಸಹೋದ್ಯೋಗಿಯ ಪತ್ನಿಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡುವ ಮೂಲಕ ಮಹಿಳೆಯೊಬ್ಬಳು ಮಾನವೀಯತೆ ಮೆರೆದಿದ್ದಾರೆ. ಹೆರಿಗೆಯ ನಂತರ ಮಗುವಿಗೆ ಈಕೆಯ ಹೆಸರನ್ನು ಇಡುವ ಮೂಲಕ ಸಹೋದ್ಯೋಗಿ ಪತ್ನಿ ಕೃತಜ್ಞತೆ ಸಲ್ಲಿಸಿದ್ದಾಳೆ.

    ಎಷ್ಟೋ ಜನ ಕೋವಿಡ್-19 ಇರುವ ವ್ಯಕ್ತಿಯನ್ನು ಹತ್ತಿರವು ಸೇರಿಸುವುದಕ್ಕೂ ಹೆದರಿಕೊಳ್ಳುತ್ತಾರೆ ಹಾಗೂ ಅವರಿಂದ ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಾರೆ. ಆದ್ರೆ ಸೋಫಿಯಾ ಎಂಬ ಮಹಿಳೆ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಸಹೋದ್ಯೋಗಿ ಪತ್ನಿಗೆ ಕೋವಿಡ್-19 ಇದೆ ಎಂದು ತಿಳಿದ ಮೇಲೂ ಕೂಡ ಆಕೆಗೆ ಹೆರಿಗೆಯಾಗುವ ತನಕ ಜೊತೆಯಲಿದ್ದು ಸಹಾಯ ಮಾಡಿದ್ದಾಳೆ.

    ಪೋತ್ತರ್ ಕೋಯಿಕುನ್ನು ಸಮೀಪದ ವರಂದರಪಿಳ್ಳಿ ಮೂಲದ ಝುಲ್ಫಿಕರ್ ಅಲಿ ಮತ್ತು ಆತನ ಪತ್ನಿ ಸಫ್ನಾ ಅಯ್ಯಂತೋಲ್‍ನ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ.

    ಪತಿ ಝುಲ್ಫಿಕರ್ ಅಲಿ, ಪತ್ನಿ ಸಪ್ನಾ ಸೇರಿದಂತೆ ಅವರ ನಾಲ್ಕು ಮಕ್ಕಳಿಗೆ ಕೊರೊನಾ ಪಾಸಿಟಿನ್ ಬಂದಿತು. ಸಫ್ನಾ ಕೋವಿಡ್ ಪಾಸಿಟಿವ್ ಬಂದಿದ್ದು, ಆಕೆ ಗರ್ಭಿಣಿಯಾಗಿದ್ದರಿಂದ ಸಪ್ನಾಳನ್ನು ವೈದ್ಯಕೀಯ ಕಾಲೇಜಿನ ಸಿಒವಿಐಡಿ ವಾರ್ಡ್‍ಗೆ ಸ್ಥಳಾಂತರಿಸಲಾಯಿತು. ಸಫ್ನಾಗೆ ಕೋವಿಡ್ ಪಾಸಿಟಿವ್ ಇದ್ದು ಜೊತೆಗೆ ಆಕೆಯ ಹೆರಿಗೆ ಸಮಯವು ಆಗಿತ್ತು. ಈ ವೇಳೆ ಸಫ್ನಾ ಕೊರೊನಾ ಇದ್ದಿದ್ದರಿಂದ ಆಕೆಯ ಸಹಾಯಕ್ಕೆ ಯಾವ ಸಂಬಂಧಿಕರು ಮುಂದಾಗಲಿಲ್ಲ.

    ಅದೇ ಸಮಯಕ್ಕೆ ಅಡ್ವಾ ಸೋಫಿಯಾ ಸಫ್ನಾಳನ್ನು ತಾನು ನೋಡಿಕೊಳ್ಳುವುದಾಗಿ ಝುಲ್ಫಿಕರ್‍ಗೆ ತಿಳಿಸಿದಳು. ಸಫ್ನಾಳನ್ನು ಶಸ್ತ್ರ ಚಿಕಿತ್ಸೆಗೆ ಕರೆದೊಯ್ಯುವ ಮುನ್ನ ಆಸ್ಪತ್ರೆಗೆ ತಲುಪಿ ಸೋಫಿಯಾ ಕೋವಿಡ್ ಪಾಸಿಟಿವ್ ಮಹಿಳೆ ಸಫ್ನಾಳನ್ನು ನೋಡಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸುವ ಮೂಲಕ ಸೋಫಿಯಾ ಸಹಮತ ಪತ್ರವನ್ನು ಆಸ್ಪತ್ರೆಗೆ ನೀಡಿದರು. ಆಕೆಯನ್ನು ನೋಡಿಕೊಳ್ಳಲು ಸೋಫಿಯಾಗೆ ಮಾಸ್ಕ್ ಹೊರತುಪಡಿಸಿ ಬೇರೆ ಯಾವ ಹೆಚ್ಚುವರಿ ರಕ್ಷಣಾತ್ಮಕ ಸಾಧನಗಳನ್ನು ಉಪಯೋಗಿಸಲಿಲ್ಲ.

    ಹೆರಿಗೆಯಾದ ಎರಡು ದಿನಗಳ ಬಳಿಕ ಸಪ್ನಾಗೆ ಕೋವಿಡ್ ನೆಗೆಟಿವ್ ಬಂದಿದೆ. ಸೋಫಿಯಾ ತಾಯಿ ಮತ್ತು ಮಗುವನ್ನು 5 ದಿನಗಳ ಕಾಲ ಜೊತೆಯಲ್ಲಿಯೇ ಇದ್ದು ನೋಡಿಕೊಂಡಿದ್ದಾಳೆ. ನಂತರ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸಫ್ನಾ ಮತ್ತು ಮಗು ಸೋಂಕಿಗೆ ಒಳಗಾಗಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಇತ್ತೀಚೆಗಷ್ಟೇ ಸ್ಥಳೀಯ ಸಂಸ್ಥೆಯ ಚುನಾವಣೆ ಯುಡಿಎಫ್ ಅಭ್ಯರ್ಥಿಯಾಗಿ ಸೋಫಿಯಾ ಸ್ಪರ್ಧಿಸಿದ್ದರು. ಆದರೆ 5 ಮತಗಳಿಂದ ಸೋಲನ್ನು ಅನುಭವಿಸಿದರು.

    ಸಪ್ನಾ ಆಸ್ಪತ್ರೆಗೆ ದಾಖಲಾದ ಪರವಟ್ಟಿ ಮೂಲದ ಫರ್ಹಾದ್ ಎಂಬ ಅಪರಿಚಿತ ಮಹಿಳೆಯೊಬ್ಬಳು ಸಹಾಯ ಮಾಡಿದ್ದಳು. ಹೀಗೆ ಸಂಕಷ್ಟದ ಸಮಯದಲ್ಲಿ ತಮಗೆ ಸಹಾಯ ಮಾಡಿದ ಈ ಇಬ್ಬರು ಮಹಿಳೆಯರ ಹೆಸರನ್ನು ಒಗ್ಗೂಡಿಸಿ ಸಫ್ನಾ ಮತ್ತು ಝುಲ್ಫಿಕರ್ ಯಾವುದೇ ಗೊಂದಲಗಳಿಲ್ಲದೆ ಮಗುವಿಗೆ ‘ಸೋಫಿಯಾ ಫರ್ಹಾದ್’ ಎಂದು ಹೆಸರಿಟ್ಟಿದ್ದಾರೆ.